ಅಂತಾರಾಷ್ಟ್ರೀಯ ಸುದ್ಧಿ – January 2017

ನೇಪಾಳಕ್ಕೆ ಹಣ: ಆರ್‌ಬಿಐ ಒಪ್ಪಿಗೆ

  • ನೇಪಾಳ ರಾಷ್ಟ್ರ ಬ್ಯಾಂಕ್‌ಗೆ (ಎನ್‌ಆರ್‌ಬಿ) 100 ಕೋಟಿ ಮೊತ್ತದಷ್ಟು 100ರ ಮುಖಬೆಲೆಯ ನೋಟುಗಳನ್ನು  ಪೂರೈಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಒಪ್ಪಿಗೆ ಸೂಚಿಸಿದೆ.
  • ನೇಪಾಳದಲ್ಲಿ 100ರ ನೋಟುಗಳ ಕೊರತೆ ಎದುರಾಗಿತ್ತು. ಈ ಸಮಸ್ಯೆ ಪರಿಹರಿಸಲು 100ರ ನೋಟುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಮುಂದಾಗಿತ್ತು.
  • ಭಾರತದಲ್ಲಿ 500 ಹಾಗೂ 1 ಸಾವಿರ ಮುಖಬೆಲೆಯ ನೋಟು ರದ್ದುಪಡಿಸಿದ ಬಳಿಕ ನೇಪಾಳದಲ್ಲಿ ಭಾರತದ ನೋಟು ವಿನಿಮಯ ಮಿತಿಯನ್ನು ಕಡಿಮೆ ಮಾಡಿದೆ.

ಭಾರತ–ಪೋರ್ಚುಗಲ್ ಮಧ್ಯೆ 6 ಒಪ್ಪಂದ

  • ರಕ್ಷಣಾ ಸಹಕಾರ ಸೇರಿದಂತೆ ಆರು ಒಪ್ಪಂದಗಳಿಗೆ ಭಾರತ ಮತ್ತು ಪೋರ್ಚುಗಲ್‌ ಶನಿವಾರ ಸಹಿ ಮಾಡಿವೆ.
  • ಪ್ರಧಾನಿ ನರೇಂದ್ರ ಮೋದಿ ಮತ್ತು ಪೋರ್ಚುಗಲ್ ಪ್ರಧಾನಿ ಆಂಟೊನಿಯೊ ಕೋಸ್ಟ ಅವರ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯ ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೋದಿ ಅವರು ಈ ಬಗ್ಗೆ ಮಾಹಿತಿ ನೀಡಿದರು.
  • ಸಹಕಾರ, ವಾಣಿಜ್ಯ, ಬಂಡವಾಳ ಹೂಡಿಕೆ, ವ್ಯಾವಹಾರಿಕ ಸಹಭಾಗಿತ್ವ, ಮಾಹಿತಿ ತಂತ್ರಜ್ಞಾನ ಮತ್ತು ನವೀಕರಿಸಬಹುದಾದ ಶಕ್ತಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ಎರಡೂ ದೇಶಗಳು ಒಪ್ಪಂದಕ್ಕೆ ಸಹಿ ಮಾಡಿವೆ.
  • ಭಯೋತ್ಪಾದನೆ ನಿಗ್ರಹ, ಮಸೂದ್ ಅಜರ್‌ನನ್ನು ಉಗ್ರರ ಪಟ್ಟಿಗೆ ಸೇರಿಸುವಲ್ಲಿ ಚೀನಾ ಅಡ್ಡಗಾಲು ಹಾಕುತ್ತಿರುವ ಬಗ್ಗೆ ಮಾತುಕತೆ ವೇಳೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.
  • ಭಯೋತ್ಪಾದನೆಯನ್ನು ನಿಗ್ರಹಿಸಲು ಜಾಗತಿಕ ಸಮುದಾಯವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಸಮಿತಿ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕುಎಂದು ಮೋದಿ ಮತ್ತು ಕೋಸ್ಟಾ ಅವರು ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
  • ‘ಭಾರತವು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಗೆ ಸೇರಲು ಬೆಂಬಲ ನೀಡಿದ್ದಕ್ಕಾಗಿ ಹಾಗೂ ಭಾರತ ಪರಮಾಣು ಪೂರೈಕೆದಾರರ ಗುಂಪನ್ನು ಸೇರಲು  ಪೋರ್ಚುಗಲ್ ಬೆಂಬಲ ಸೂಚಿಸಿದೆ