ಜೈವಿಕ ಇಂಧನ

 • ಜೈವಿಕ ಇಂಧನವು ಜೈವಿಕ ಮೂಲಗಳಿಂದ ಅಂದರೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಮೂಲಗಳಿಂದ ಉತ್ಪಾದನೆಯಾಗುವ ಇಂಧನ. .
 • ಕಚ್ಚಾ ತೈಲಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ರಾಷ್ಟ್ರದ ಇಂಧನ ಸಮಸ್ಯೆ ಬಗೆಹರಿಸಬಲ್ಲ ಏಕೈಕ ಆಶಾಕಿರಣವಾಗಿದೆ.biofuel

ಜೈವಿಕ ಡೀಸೆಲ್

 • ಜೈವಿಕ ಡೀಸೆಲ್ ಅನ್ನು ಸಸ್ಯಜನ್ಯ ಎಣ್ಣೆ ಅಥವಾ ಪ್ರಾಣಿಜನ್ಯ ಕೊಬ್ಬಿನಿಂದ ಉತ್ಪಾದಿಸಲಾಗುತ್ತದೆ. ಜೈವಿಕ ಡೀಸೆಲ್ ದೀರ್ಘ ಸರಪಳಿ ಕೊಬ್ಬಿನ ಆಮ್ಲದಿಂದ (Long Chain fatty acid) ಉತ್ಪತ್ತಿಯಾದ ಮೋನೊ ಅಲ್ಕೈಲ್ ಎಸ್ಟರ್ (Mono Alkyl Ester).
 • ಎಣ್ಣೆ ಅಥವಾ ಕೊಬ್ಬನ್ನು ಮೆಥನಾಲ್ ಅಥವಾ ಎಥನಾಲ್ ಜೊತೆ ಸೇರಿಸಿ NaOH/KOH ಎಂಬ ಪ್ರತ್ಯಾಮ್ಲ ಪ್ರಚೋದಕದೊಂದಿಗೆ ಟ್ರಾನ್ಸ್‌ಎಸ್ಟರಿಫಿಕೇಷನ್ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ಜೈವಿಕ ಡೀಸಲ್ ತಯಾರಿಸಲಾಗುತ್ತದೆ.
 • ಇದನ್ನು ನೇರವಾಗಿ ಅಥವಾ ಡೀಸೆಲ್ ಜೊತೆ ವಿವಿಧ ಪ್ರಮಾಣದಲ್ಲಿ ಮಿಶ್ರಣಮಾಡಿ ಉಪಯೋಗಿಸಬಹುದು.

ಜೈವಿಕ ಎಥೆನಾಲ

 • ಜೈವಿಕ ಎಥೆನಾಲನ್ನು ಕಬ್ಬು, ಸಿಹಿಜೋಳ, ಗೋವಿನಜೋಳ ಮುಂತಾದ ಶರ್ಕಾರಾಂಶಗಳಿಂದ ಉತ್ಪಾದಿಸಲಾಗುತ್ತದೆ.
 • ಕೃಷಿ ತ್ಯಾಜ್ಯಗಳಾದ ಕಬ್ಬಿನ ಸಿಪ್ಪೆ, ಹುಲ್ಲು ಮೊದಲಾದವುಗಳಲ್ಲಿರುವ ಸೆಲ್ಯುಲೋಸ್ ಎಂಬ ಸಂಯುಕ್ತ ಶರ್ಕರಾಂಶದಿಂದಲೂ ಎಥೆನಾಲ್ ಅನ್ನು ಉತ್ಪಾದಿಸಬಹುದಾಗಿದೆ. ಜೊತೆಗೆ, ಅನುಪಯುಕ್ತ ಹಣ್ಣುಗಳನ್ನು ಕೂಡ ಉಪಯೋಗಿಸಿ ಎಥೆನಾಲ್ ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ.
 • ಮೊದಲಿಗೆ ಸಂಯುಕ್ತಗಳನ್ನು ಸರಳ ಸಕ್ಕರೆಯನ್ನಾಗಿ ಪರಿವರ್ತಿಸಲಾಗುತ್ತದೆ. ನಂತರ ಇದನ್ನು ಸೂಕ್ಷ್ಮಜೀವಿಗಳನ್ನು ಬಳಸಿ ಹುದುಗಿಸಲಾಗುತ್ತದೆ. ಹೀಗೆ ಬರುವ ಎಥನಾಲ್ ಅನ್ನು ಭಟ್ಟಿಇಳಿಸುವಿಕೆಯ ಮುಖಾಂತರ ಜೈವಿಕ ಎಥೆನಾಲ್ ಅನ್ನು ಪಡೆಯಬಹುದು.
 • ಜೈವಿಕ ಎಥೆನಾಲನ್ನು ಸಾಮಾನ್ಯವಾಗಿ ಇ 100 ಅಂದರೆ ಶೇ.100 ರಷ್ಟು ಎಥೆನಾಲ್, ಇ 85 ಅಂದರೆ ಶೇ.85 ರಷ್ಟು ಎಥೆನಾಲನ್ನು ಶೇ.15 ರ ಗ್ಯಾಸೋಲಿನ್ ಮಿಶ್ರಣದೊಂದಿಗೆ ಉಪಯೋಗಿಸುವುದು.  ಶೇ.10 ರಷ್ಟು ಎಥೆನಾಲನ್ನು ಶೇ.90 ರಷ್ಟು ಗ್ಯಾಸೋಲಿನ್ ಮಿಶ್ರಣದೊಂದಿಗೆ ಗ್ಯಾಸೋಹಾಲ್ ಎಂಬ ಹೆಸರಿನಿಂದ ವಿವಿಧೆಡೆ ಉಪಯೋಗದಲ್ಲಿದೆ.

jaivika2

ಜೈವಿಕ ಇಂಧನದ ಅನುಕೂಲತೆಗಳು

 • ಜೈವಿಕ ಇಂಧನದ ಕಾರ್ಯಕ್ರಮ ಹಲವಾರು ಉದ್ಯೋಗ ಅವಕಾಶಗಳನ್ನು ಒದಗಿಸುವುದರ ಜೊತೆಗೆ, ರೈತರು, ಕೃಷಿ ಕಾರ್ಮಿಕರು ಬಿಡುವಿನ ವೇಳೆಯಲ್ಲಿ ಬೀಜ ಸಂಗ್ರಹಣೆ ಮತ್ತು ಮಾರಾಟದಿಂದ ಅಧಿಕ ಆರ್ಥಿಕ ಲಾಭ ಗಳಿಸಬಹುದು.
 • ಹಲವು ಸಂಶೋಧನೆಗಳಿಂದ ಜೈವಿಕ ಇಂಧನ ಪೆಟ್ರೋಲಿಯಂ ಇಂಧನಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಆಕ್ಸೈಡ್‌ಗಳನ್ನು ವಾತಾವರಣಕ್ಕೆ ಬಿಡುತ್ತದೆ ಎಂದು ಕಂಡುಬಂದಿದೆ.
 • ಪೆಟ್ರೋಲಿಯಂ ಇಂಧನ ವಾತಾವರಣಕ್ಕೆ ಕಾರ್ಬನ್ ಡೈಆಕ್ಸೈಡ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸುತ್ತಾ ಹೋಗುತ್ತದೆ. ಆದರೆ, ಜೈವಿಕ ಇಂಧನ ಸಸ್ಯಗಳು ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್‌ನ ಕೆಲವು ಭಾಗವನ್ನು ತಾವೇ ಪುನ: ಬಳಸಿಕೊಳ್ಳುತ್ತವೆ.
 • ಜೈವಿಕ ಇಂಧನವು ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನ.
 • ಇಂಜಿನ್ ಮಾರ್ಪಾಟಿನ ಅಗತ್ಯವಿಲ್ಲ.
 • ಜೈವಿಕ ಇಂಧನದಲ್ಲಿ ಗಂಧಕದ ಪ್ರಮಾಣ ಅತ್ಯಂತ ಕಡಿಮೆ.
 • ಸುರಕ್ಷಿತ ನಿರ್ವಹಣೆ, ಸಂಗ್ರಹಣೆ ಮತ್ತು ಸಾಗಾಣಿಕೆ.
 • ಇಂಜಿನ್‌ನ ಕಾರ್ಯಕ್ಷಮತೆ ಹೆಚ್ಚಿಸಿ, ಇಂಜಿನ್‌ನ ಬಾಳಿಕೆಯನ್ನು ಹೆಚ್ಚಿಸುತ್ತದೆ.
 • ಹೈಡ್ರೋಕಾರ್ಬನ್, ಸುಡದ ಇಂಗಾಲದ ಕಣಗಳ ಉಗುಳುವಿಕೆಯಲ್ಲಿ ಇಳಿಮುಖ.
 • ಜೈವಿಕ ಇಂಧನದ ಮರಗಳನ್ನು ಬೆಳೆಯುವುದರಿಂದ  ಮಣ್ಣಿನ ಸವಕಳಿಯನ್ನು ತಡೆಯಬಹುದು ಮತ್ತು ಮಣ್ಣಿನ ತೇವಾಂಶ ಕಾಪಾಡುವುದರೊಂದಿಗೆ ಆ ಪ್ರದೇಶವನ್ನು ನಿತ್ಯ ಹಸಿರಾಗಿರಿಸಬಹುದು

ಕರ್ನಾಟಕದಲ್ಲಿ ಜೈವಿಕ ಇಂಧನ ಹಿನ್ನೆಲೆ

 • ಕರ್ನಾಟಕ ರಾಜ್ಯದಲ್ಲಿ ಜೈವಿಕ ಇಂಧನ ಕುರಿತ ಅಧ್ಯಯನವು ಸುಮಾರು ಎರಡು ದಶಕಗಳ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆಯ ಸೂತ್ರ ವಿಭಾಗದಿಂದ(Sustainable Transformation of Rural Area SuTRA) ಪ್ರಾರಂಭವಾಗಿತ್ತು.
 • ಕೇಂದ್ರ ಸರ್ಕಾರದ ಯೋಜನಾ ಆಯೋಗದ ಡಾ|| ದೀನಾನಾಥ್ ತಿವಾರಿ ಅವರ ನೇತೃತ್ವದಲ್ಲಿ ರೂಪಿಸಿದ ಜೈವಿಕ ಇಂಧನ ಕಾರ್ಯಕ್ರಮದ ಮೂಲಕ ಕೇಂದ್ರ ಸರ್ಕಾರದಲ್ಲಿ ಈ ಕುರಿತು ಅಧ್ಯಯನ ಪ್ರಾರಂಭವಾಯಿತು.
 • ಜೊತೆಗೇ ಬಯೋ ಡಿಸೇಲ್ ಮಿಷನ್ ಎಂಬ ಕಾರ್ಯಕ್ರಮವೂ ಪ್ರಾರಂಭವಾಯಿತು.
 • ಹೀಗೆ ಕರ್ನಾಟಕದಲ್ಲಿ ಕೈಗೊಂಡ ಜೈವಿಕ ಇಂಧನದ ಅಧ್ಯಯನ ರಾಷ್ಟ್ರದ ಜೈವಿಕ ಇಂಧನ ನೀತಿ ರೂಪಿಸುವಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ ಎನ್ನುವಲ್ಲಿ ಸಂದೇಹವಿಲ್ಲ.
 • ರಾಜ್ಯದ ‘ಮಿಲೆನಿಯಮ್ ಬಯೋಟೆಕ್ ಪಾಲಿಸಿ 2001′ ರಲ್ಲಿ ಜೈವಿಕ ಇಂಧನ (ಬಯೋ ಎಥನಾಲ್) ಒಳಗೊಂಡಿರುವುದು ರಾಷ್ಟ್ರದಲ್ಲಿ ಅಧಿಕೃತವಾಗಿ ಜೈವಿಕ ಇಂಧನ ಕುರಿತು ಸರ್ಕಾರದಿಂದ ಪ್ರಕಟಿಸಿದ ಪ್ರಥಮ ದಾಖಲೆಯಾಗಿದೆ.

 

Related Posts
India is home to the largest child population in the world, with almost 42 per cent of the total population under eighteen years of age One of the issues marring this ...
READ MORE
India’s solar mission – Aditya
Aditya, India’s first dedicated scientific mission to study the sun is likely to get a go-ahead from the Prime Minister’s Office (PMO) Its is a joint venture between ISRO and physicists ...
READ MORE
Migratory birds from Eurasian countries are flocking to the southern parts of the State for their annual winter sojourn. Their numbers are set to peak in the coming weeks. The arrival of migratory ...
READ MORE
“18th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಬಡವರ ಬಂಧು ಯೋಜನೆ ಸುದ್ಧಿಯಲ್ಲಿ ಏಕಿದೆ ?ಮೀಟರ್ ಬಡ್ಡಿ ದಂಧೆಕೋರರಿಂದ ಬೀದಿ ಬದಿ ವ್ಯಾಪಾರಿ ಗಳನ್ನು ರಕ್ಷಿಸಲು ಸರ್ಕಾರ ರೂಪಿಸುತ್ತಿರುವ ಬಡವರ ಬಂಧು ಯೋಜನೆಯನ್ನು ಏಕಕಾಲಕ್ಕೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಬೆಂಗಳೂರು, ಮೈಸೂರು, ಬೀದರ್, ಹಾಸನ, ಹುಬ್ಬಳ್ಳಿಯಲ್ಲಿ ಮಾತ್ರ ಪ್ರಾಯೋಗಿಕವಾಗಿ ...
READ MORE
The Corruption Perceptions Index (CPI) for 2015
Denmark the least corrupt country, India at 76th position India has climbed nine points to rank 76th in this year’s global corruption index topped by Denmark, with watchdog Transparency International calling ...
READ MORE
Free Current Affairs Class
Register Here: http://nammakpsc.com/wp/sunday-manthan/ Time: 2PM to 5PM VENUE: BANGALORE SCHOOL OF CIVIL SERVICES, NEAR HEBBAL POLICE STATION, HEBBAL, BANGALORE. CONTACT: 9886151564/42103963
READ MORE
IT-based malaria control initiative
In a first-of-its-kind initiative, the Mangaluru City Corporation in Karnataka will officially unveil its IT-based initiative to track and control malaria cases on October 17. The initiative would be through software ...
READ MORE
ಇನ್ಮುಂದೆ ‘ಕಾಮಗಾರಿ ನಿಷೇಧ’ ವಲಯ ಹಸಿರು ಪ್ರದೇಶ ರಕ್ಷಿಸುವ ಸಲುವಾಗಿ ಶ್ರೀನಗರ – ಜಮ್ಮು ನಡುವಿನ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳನ್ನು ‘ಕಾಮಗಾರಿ ನಿಷೇಧ ವಲಯ’ (ನಿರ್ಮಾಣ ರಹಿತ ವಲಯ) ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಘೋಷಣೆ ಮಾಡಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ...
READ MORE
23rd ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಬ್ಲಡ್‌ ಮೂನ್‌ ಸುದ್ಧಿಯಲ್ಲಿ ಏಕಿದೆ?ದೀರ್ಘಾವಧಿಯದ್ದು ಎನ್ನಲಾಗುತ್ತಿರುವ ಚಂದ್ರಗ್ರಹಣವು ಜು.27 ರ ಮಧ್ಯರಾತ್ರಿ ನಡೆಯಲಿದೆ. ವಿಶೇಷವೆಂದರೆ, ಇದೇ ಸಮಯದಲ್ಲಿ ಮಂಗಳ ಗ್ರಹವು ಚಂದ್ರನ ಸಮೀಪ ಬರಲಿದೆ. ವಿಶೇಷತೆಯೇನು? ಸಾಮಾನ್ಯವಾಗಿ ಚಂದ್ರಗ್ರಹಣ ಮೂರರಿಂದ ನಾಲ್ಕು ಗಂಟೆಗಳ ಅವಧಿಯದ್ದಾಗಿರುತ್ತದೆ. ಹಿಂದಿನ ಚಂದ್ರಗ್ರಹಣಗಳಿಗೆ ಹೋಲಿಸಿದರೆ ಈ ಬಾರಿಯ ಚಂದ್ರಗ್ರಹಣ ಸ್ವಲ್ಪ ಹೆಚ್ಚು ...
READ MORE
Answer the following questions in about 150 words each:  What is precision farming? What are its benefits? Write a short note on the uses of stem cells in treatment What is traditional medicine? ...
READ MORE
Protection of Children from Sexual Offences
India’s solar mission – Aditya
Migratory birds in Karnataka
“18th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
The Corruption Perceptions Index (CPI) for 2015
Free Current Affairs Class
IT-based malaria control initiative
4th – 5th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
23rd ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
Advancement and Modern Trends in Natural sciences, Life

One thought on “ಜೈವಿಕ ಇಂಧನ”

Leave a Reply

Your email address will not be published. Required fields are marked *