“04 ಫೆಬ್ರವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಉಪ್ಪು ನೀರು ಸಿಹಿಯಾಗೋ ಕಾಲ

1.

ಸುದ್ಧಿಯಲ್ಲಿ ಏಕಿದೆ ?ಸಮುದ್ರದ ಉಪ್ಪು ನೀರು ಸಿಹಿಯಾಗಿ ಮನೆ ಮನೆಗೆ ತಲುಪುವ ಕಾಲ ಸನ್ನಿಹಿತವಾಗುತ್ತಿದೆ. ಮಂಗಳೂರು ತೈಲಾಗಾರ (ಎಂಆರ್‌ಪಿಎಲ್‌) ಕೈಗೆತ್ತಿಕೊಂಡಿರುವ ಬಹು ನಿರೀಕ್ಷೆಯ ಉಪ್ಪು ನೀರು ಸಂಸ್ಕರಣಾ ಘಟಕ 2020ರ ವೇಳೆಗೆ ಕಾರ್ಯಗತಗೊಳ್ಳುವ ನಿರೀಕ್ಷೆಯಿದ್ದು, ರಾಜ್ಯದಲ್ಲೇ ಪ್ರಥಮ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

 • ನವ ಮಂಗಳೂರು ಬಂದರು(ಎನ್‌ಎಂಪಿಟಿ)ಬಳಿ ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ನೀರನ್ನು ಸಂಸ್ಕರಿಸಿ ಸಿಹಿ ನೀರಾಗಿ ಮಾಡುವ ಈ ಘಟಕ ತಲೆ ಎತ್ತಲಿದೆ. ಇದು ಯಶಸ್ವಿಯಾದರೆ ಮುಂದೆ ಹಲವು ಘಟಕಗಳ ಸ್ಥಾಪನೆಗೆ ಹಾದಿಯಾಗಲಿದೆ.
 • ವಾಟೆಕ್‌ಗೆ ಗುತ್ತಿಗೆ: ಘಟಕ ಸ್ಥಾಪನೆಗೆ ರಾಜ್ಯ ಸರಕಾರ ಗ್ರೀನ್‌ ಸಿಗ್ನಲ್‌ ನೀಡಿದೆ. ಬಹುರಾಷ್ಟ್ರೀಯ ಕಂಪನಿ ವಾಟೆಕ್‌ ವೆಬಾಗ್‌ಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. 2020ರ ಹೊತ್ತಿಗೆ ಘಟಕ ಸಿದ್ಧವಾಗಲಿದೆ.

15 ಎಂಜಿಡಿ

 • ಎಂಆರ್‌ಪಿಎಲ್‌ಗೆ ತನ್ನ ಉತ್ಪಾದನೆ ಮತ್ತು ಇತರ ಬಳಕೆಗೆ 15 ಎಂಜಿಡಿ(ಮಿಲಿಯನ್‌ ಗ್ಯಾಲನ್‌ ಎ ಡೇ) ನೀರಿನ ಅವಶ್ಯಕತೆಯಿದೆ.
 • ಪ್ರಸ್ತುತ ಬಂಟ್ವಾಳ ತಾಲೂಕಿನ ಸರಪಾಡಿ ಡ್ಯಾಮ್‌ನಿಂದ 10 ಎಂಜಿಡಿ ನೀರನ್ನು ಪೂರೈಸಲಾಗುತ್ತಿದೆ. ಉಳಿದ 5 ಎಂಜಿಡಿ ನೀರನ್ನು ಮಂಗಳೂರು ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಮಂಗಳೂರು ಮಹಾನಗರ ಪಾಲಿಕೆ ಸರಬರಾಜು ಮಾಡುತ್ತಿದೆ. ಈ ಪ್ರಮಾಣವನ್ನು ಸಮುದ್ರದ ನೀರಿನ ಪರಿವರ್ತನೆಯಿಂದ ಪಡೆಯುವುದು ಘಟಕದ ಉದ್ದೇಶ.
 • ಎನ್‌ಎಂಪಿಟಿಯಿಂದ ಸುಮಾರು 12 ಕಿಮೀ. ಉದ್ದದ ಪೈಪ್‌ಲೈನ್‌ ಅಳವಡಿಕೆಯೂ ಯೋಜನೆಯಲ್ಲಿ ಸೇರಿದೆ.

ನೀರಿನ ಬರ ಕಲಿಸಿದ ಪಾಠ !

 • ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಎದುರಾದ ನೀರಿನ ಕೊರತೆಯ ಬಿಸಿ ಎಂಆರ್‌ಪಿಎಲ್‌ಗೂ ತಟ್ಟಿತ್ತು.
 • ದಕ್ಷಿಣ ಭಾರತದ ಏಕೈಕ ಯೂರಿಯಾ ಉತ್ಪಾದನೆ ಘಟಕವಾದ ಎಂಸಿಎಫ್‌ ಕೂಡ ನೀರಿಲ್ಲದೆ ತಿಂಗಳ ಕಾಲ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಎಂಆರ್‌ಪಿಎಲ್‌ ತನ್ನದೇ ಆದ ನೀರಿನ ವ್ಯವಸ್ಥೆಯನ್ನು ಹೊಂದಲು ಅಂದೇ ತೀರ್ಮಾನಿಸಿತ್ತು. ಅದರ ಕಾರ್ಯರೂಪವೇ ಸಮುದ್ರದ ಉಪ್ಪು ನೀರು ಸಂಸ್ಕರಣ ಘಟಕ.

ಕೋಲಾರಕ್ಕೂ ಸಮುದ್ರ ನೀರು

 • ಇಡೀ ರಾಜ್ಯದಲ್ಲೇ ಕುಡಿಯುವ ನೀರಿನ ಸಮಸ್ಯೆಯಿರುವ ಕಾರಣ ಸರಕಾರ ಎಂಆರ್‌ಪಿಎಲ್‌ಗೆ ನೀರು ಸಂಸ್ಕರಣಾ ಘಟಕ ಸ್ಥಾಪನೆಗೆ ಒಪ್ಪಿಗೆ ನೀಡಿದೆ.
 • ನಾಗರಿಕರ ಕುಡಿಯುವ ನೀರಿಗೂ ಸಮುದ್ರ ನೀರನ್ನು ಬಳಸುವ ಕುರಿತು ಕೂಡ ಗಂಭೀರ ಚಿಂತನೆ ನಡೆಸಿದೆ.
 • ಎಂಆರ್‌ಪಿಎಲ್‌ನ ಉಪ್ಪು ನೀರು ಸಂಸ್ಕರಣ ಘಟಕದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿ ರಾಜಧಾನಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಪ್ರದೇಶಕ್ಕೂ ಕುಡಿಯಲು ಸಮುದ್ರ ನೀರು ಸರಬರಾಜು ಮಾಡುವ ಕುರಿತು ಸರಕಾರ ಚಿಂತನೆ ನಡೆಸಿದೆ.

ಲಾಭ ಏನು?

 • ಕೇವಲ 400 ಕೋಟಿ ರೂ. ವೆಚ್ಚ
 • ದೊಡ್ಡ ಪ್ರಮಾಣದ ಜಮೀನು ಬೇಕಿಲ್ಲ.
 • ನಿರ್ವಹಣೆ ಬಲು ಸುಲಭ.

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಮ್ಆರ್ಪಿಎಲ್)

 • ಎಂ.ಆರ್.ಪಿ.ಪಿ. ಮಂಗಳೂರಿನ ತೈಲ ಸಂಸ್ಕರಣಾಗಾರವಾಗಿದ್ದು 1988 ರಲ್ಲಿ ಸ್ಥಾಪನೆಯಾದ ಒಎನ್ಜಿಸಿ ನ ಅಂಗಸಂಸ್ಥೆಯಾಗಿದೆ. ಮಂಗಳೂರು ನಗರದ ಕೇಂದ್ರದಿಂದ ಉತ್ತರಕ್ಕೆ ಕ್ಯಾಟಿಪಳ್ಳದಲ್ಲಿ ಈ ಸಂಸ್ಕರಣಾಗಾರವಿದೆ. ಬಾಲ, ಕಲವರ್, ಕುಥೆಟ್ಟರ್, ಕಟಿಪಳ್ಳ, ಮತ್ತು ಆದಿಪಾಡಿ ಐದು ಹಳ್ಳಿಗಳನ್ನು ಸ್ಥಳಾಂತರಿಸಿದ ನಂತರ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಯಿತು.
 • ಶುದ್ಧೀಕರಣವು ವಿವಿಧ API ಗುರುತ್ವಾಕರ್ಷಣೆಯ ಮತ್ತು ಉನ್ನತ ಮಟ್ಟದ ಯಾಂತ್ರೀಕೃತತೆಯ ಮಟ್ಟವನ್ನು ಪ್ರಕ್ರಿಯೆಗೊಳಿಸಲು ಹೆಚ್ಚಿನ ನಮ್ಯತೆ ಹೊಂದಿರುವ ಬಹುಮುಖ ವಿನ್ಯಾಸವನ್ನು ಹೊಂದಿದೆ.
 • MRPL ವರ್ಷಕ್ಕೆ 15 ಮಿಲಿಯನ್ ಮೆಟ್ರಿಕ್ ಟನ್ನುಗಳಷ್ಟು ಸಂಸ್ಕರಿಸುವ ವಿನ್ಯಾಸ ಸಾಮರ್ಥ್ಯ ಹೊಂದಿದೆ ಮತ್ತು ಇದು ಭಾರತದ ಹೈಡ್ರೋಕ್ರಾಕರ್ಗಳು ಪ್ರೀಮಿಯಂ ಡೀಸೆಲ್ (ಹೈ ಸೆಟೇನ್) ಅನ್ನು ಉತ್ಪಾದಿಸುವ ಏಕೈಕ ಸಂಸ್ಕರಣಾಗಾರವಾಗಿದೆ .
 • ಇದು 4,40,000 ಮಿ.ಟಿ / ವಾರ್ಷಿಕ ಸಾಮರ್ಥ್ಯದೊಂದಿಗೆ ಪಾಲಿಪ್ರೊಪಿಲೀನ್ ಘಟಕವನ್ನು ಹೊಂದಿದೆ.
 • ಹೆಚ್ಚಿನ ಆಕ್ಟೇನ್ನ ಏಕೈಕ ಪೆಟ್ರೋಲ್ ಅನ್ನು ಉತ್ಪಾದಿಸುವ ಎರಡು ಸಿಸಿಆರ್ಗಳನ್ನು ಹೊಂದಿರುವ ಭಾರತದಲ್ಲಿ ಇದು ಏಕೈಕ ಸಂಸ್ಕರಣಾಗಾರವಾಗಿದೆ.

ಯಶಸ್ವಿನಿ ಮತ್ತೆ ಜಾರಿ

2.

ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ‘ಯಶಸ್ವಿನಿ’ ಯೋಜನೆಯನ್ನು ಮರು ಜಾರಿ ಮಾಡುವ ತೀರ್ಮಾನವನ್ನು ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ಈ ನಿರ್ಧಾರಕ್ಕೆ ಕಾರಣಗಳು

 • ಆಯುಷ್ಮಾನ್‌ ಭಾರತ್‌ -ಆರೋಗ್ಯ ಕರ್ನಾಟಕ ಸಂಯೋಜಿತ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವಿದೆ.
 • ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್​ದಾರರಿಗಷ್ಟೇ 5 ಲಕ್ಷ ರೂ. ವರೆಗೆ ವಿಮೆ ಇದೆ.
 • ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಕೇವಲ ಶೇ.30 ವಿಮೆ ಇದ್ದು, ಈ ಹಿಂದೆ ಯಶಸ್ವಿನಿ ಯೋಜನೆಯಲ್ಲಿ ಆದಾಯ ಮಿತಿ ನಿರ್ಬಂಧವಿಲ್ಲದೆ ವಿಮೆ ದೊರಕುತ್ತಿತ್ತು.
 • ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಹಿಂದಿನ ಆರ್‌ಎಸ್‌ಬಿವೈ ಕಾರ್ಡ್‌ ಹೊಂದಿದ 62 ಲಕ್ಷ ಕುಟುಂಬಗಳಿಗೆ ಅನ್ವಯವಾಗುವಂತೆ ಶೇ.60 ಅನುದಾನವನ್ನು ಕೇಂದ್ರ ಸರಕಾರ ಭರಿಸುತ್ತಿದ್ದು, ಉಳಿದ ಶೇ.40 ಪಾಲನ್ನು ರಾಜ್ಯ ಭರಿಸುತ್ತಿದೆ.
 • ಆದರೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ -2013ರಡಿ ಸೇರದವರು, ಎಪಿಎಲ್‌ ಕುಟುಂಬಗಳು ಹಾಗೂ ಯಾವುದೇ ಕಾರ್ಡ್‌ ಹೊಂದಿಲ್ಲದವರೂ ಆರೋಗ್ಯ ಕರ್ನಾಟಕ ಯೋಜನೆಯಡಿ ಫಲಾನುಭವಿಗಳಾಗಿದ್ದಾರೆ. ಹೀಗಾಗಿ, ಆಯಷ್ಮಾನ್‌ ಭಾರತ್‌ -ಆರೋಗ್ಯ ಕರ್ನಾಟಕ ಯೋಜನೆ ಹೆಗ್ಗಳಿಕೆ ಕೇಂದ್ರಕ್ಕೆ ಸಿಕ್ಕರೂ, ಆರ್ಥಿಕ ಹೊರೆ ದೊಡ್ಡ ಪ್ರಮಾಣದಲ್ಲಿ ರಾಜ್ಯದ ಮೇಲೆ ಬೀಳುತ್ತಿದೆ.

ಹಿನ್ನಲೆ

 • ರಾಜ್ಯದಲ್ಲಿ ನಾನಾ ಆರೋಗ್ಯ ಯೋಜನೆಗಳನ್ನು ಒಗ್ಗೂಡಿಸಿ ಆರೋಗ್ಯ ಕರ್ನಾಟಕ ಹೆಸರಿನಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯನ್ನು ಕಳೆದ ವರ್ಷದ ಮಾರ್ಚ್‌ 2ರಿಂದ ಜಾರಿ ಮಾಡಲಾಗಿತ್ತು.
 • ಕೇಂದ್ರ ಸರಕಾರವು ಸೆಪ್ಟೆಂಬರ್‌ 25ರಿಂದ ಆಯುಷ್ಮಾನ್‌ ಭಾರತ್‌ ಹೆಸರಿನಲ್ಲಿ ಆರೋಗ್ಯ ಭದ್ರತಾ ಯೋಜನೆ ಜಾರಿಮಾಡಿತು. ಎರಡೂ ಯೋಜನೆಗಳ ಉದ್ದೇಶದಲ್ಲಿ ಏಕರೂಪತೆ ಇದೆ ಎಂಬ ಕಾರಣಕ್ಕೆ ‘ಆಯುಷ್ಮಾನ್‌ ಭಾರತ್‌ -ಆರೋಗ್ಯ ಕರ್ನಾಟಕ’ ಎಂಬ ಸಂಯೋಜಿತ ಯೋಜನೆಯನ್ನು ಕಳೆದ ನವೆಂಬರ್‌ 15ರಿಂದ ರಾಜ್ಯದಲ್ಲಿ ಜಾರಿ ಮಾಡಲಾಗಿದೆ.

ಯಶಸ್ವಿನಿ ವಿಶೇಷ ಏನು?

– ಸಹಕಾರ ಸಂಘಗಳ ಸದಸ್ಯರಿಗೆ ಶಸ್ತ್ರಕ್ರಿಯೆಯೂ ಸೇರಿದಂತೆ ಪ್ರಮುಖ ಚಿಕಿತ್ಸಾ ಸೌಲಭ್ಯ.

– ಇದಕ್ಕೆ ಆದಾಯ ಮಿತಿ ಇಲ್ಲ.

– ರಾಜ್ಯದಲ್ಲಿ 572 ನೆಟ್‌ವರ್ಕ್‌ ಆಸ್ಪತ್ರೆಗಳು

ವಿಶ್ವ ಕ್ಯಾನ್ಸರ್ ಜಾಗೃತಿ ದಿನ

3.

ಸುದ್ಧಿಯಲ್ಲಿ ಏಕಿದೆ ?ಇಂದು ವಿಶ್ವ ಕ್ಯಾನ್ಸರ್ ದಿನ. ಮನುಷ್ಯ ಕುಲದ ಮಾರಕ ರೋಗವಾಗಿ ಪರಿಣಮಿಸಿರುವ ಕ್ಯಾನ್ಸರ್‌ ತಡೆಗೆ ಹಲವು ವರ್ಷಗಳಿಂದ ಮೆಡಿಸಿನ್‌ ಕಂಡುಹಿಡಿಯಲಾಗುತ್ತಿದೆ

 • ಮಾರಣಾಂತಿಕ ಕಾಯಿಲೆ ಎಂದೇ ಹೇಳಲಾಗುವ ಕ್ಯಾನ್ಸರ್ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿರುವುದು ಆತಂಕದ ಸಂಗತಿ.

ಕ್ಯಾನ್ಸರ್ ವಿಧಗಳು

 • ಹಲವಾರು ಬಗೆಯ ಕ್ಯಾನ್ಸರ್​ಗಳಿವೆ. ಸ್ತನ, ಗರ್ಭಕೋಶ, ಬಾಯಿ, ಮಿದುಳು, ಅನ್ನನಾಳ, ರಕ್ತ, ಚರ್ಮ, ಥೈರಾಯ್್ಡ ಕಣ್ಣು, ಮೂತ್ರಕೋಶ, ಅಂಡಾಶಯ, ಕರುಳು, ಮೂಳೆ, ಲಿವರ್… ಹೀಗೆ ಶರೀರದ ಬೇರೆ ಬೇರೆ ಅವಯವಗಳಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು.

ಕ್ಯಾನ್ಸರ್ಗೆ ಕಾರಣಗಳು

 • ಒತ್ತಡದ ಜೀವನ ಶೈಲಿ, ಮದ್ಯ ಹಾಗೂ ಧೂಮಪಾನ, ಬೊಜ್ಜು ಮೊದಲಾದವು ಕ್ಯಾನ್ಸರ್​ಗೆ ಕಾರಣವಾಗಬಹುದು. ಈ ಕಾಯಿಲೆ ಬರದಂತೆ ಮುನ್ನೆಚ್ಚರ ವಹಿಸುವುದು ಉತ್ತಮ ವಿಧಾನ.

ಕ್ಯಾನ್ಸರ್‌ ತಡೆಗೆ ‘ಡೆಂಡ್ರಿಟಿಕ್‌’ ಲಸಿಕೆ

 • ಒಮ್ಮೆ ಕಾಣಿಸಿಕೊಂಡ ಕ್ಯಾನ್ಸರ್‌ ರೋಗ ಮರುಕಳಿಸದಂತೆ ತಡೆಯಲು ಹೊಸ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ವೈದ್ಯ ಲೋಕದಲ್ಲಿ ಹೊಸ ಭರವಸೆ ಮೂಡಿಸಿದೆ.
 • ರೋಗಿಗಳಲ್ಲಿನ ಕ್ಯಾನ್ಸರ್‌ ಕೋಶಗಳನ್ನೇ ಬಳಸಿ ತಯಾರಿಸುವ ಈ ಲಸಿಕೆಗೆ ಡೆಂಡ್ರಿಟಿಕ್‌ ಎಂದು ಹೆಸರು.
 • ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯಲ್ಲಿ ಈ ಲಸಿಕೆಯ ಸಂಶೋಧನೆ ನಡೆದಿದೆ.
 • ರೋಗಿಗಳ ದೇಹದಲ್ಲಿ ಕ್ಯಾನ್ಸರ್‌ ಕೋಶಗಳನ್ನು ಗುರುತಿಸಲು ಸಾಧ್ಯವಿಲ್ಲ. ಹೀಗಾಗಿ ರೋಗಿಗಳ ರಕ್ತದಿಂದ ದುಗ್ಧಕೋಶ (ರಕ್ತದಲ್ಲಿನ ಪ್ರತಿರಕ್ಷಣಾ ಜೀವಕೋಶಗಳು)ಗಳನ್ನು ತೆಗೆದು, ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಅವುಗಳಲ್ಲಿನ ಆರೋಗ್ಯಕರ ಕೋಶಗಳನ್ನು ಪಡೆದು ಲಸಿಕೆ ತಯಾರಿಸಲಾಗುತ್ತದೆ. ನಂತರ ಅದನ್ನು ರೋಗಿಗೆ ಚುಚ್ಚುಮದ್ದಿನ ರೀತಿ ನೀಡಲಾಗುವುದು. ಇದು ದೇಹದಲ್ಲಿನ ಕ್ಯಾನ್ಸರ್‌ ಕೋಶಗಳನ್ನು ಮಾತ್ರ ನಿಷ್ಕ್ರಿಯಗೊಳಿಸಿ ದೇಹ ಹೆಚ್ಚು ಬಳಲದಂತೆ ನೋಡಿಕೊಳ್ಳುತ್ತದೆ.
 • ”ರೋಗಿಗೆ ಮೊದಲ ಹಂತದಲ್ಲಿ ಟೀಸೆಲ್‌‘ (ಇಮ್ಯುನೋ ಥೆರಪಿ) ಚಿಕಿತ್ಸೆ ನೀಡಿ ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜತೆಗೆ ಕ್ಯಾನ್ಸರ್‌ ಕೋಶಗಳು ಕ್ಷೀಣಿಸುವಂತೆ ಮಾಡಲಾಗುತ್ತದೆ. ನಂತರದ ಹಂತದಲ್ಲಿ ‘ಡೆಂಡ್ರಿಟಿಕ್‌’ ಲಸಿಕೆಯನ್ನು ನೀಡಲಾಗುತ್ತದೆ.
 • ಈಗಾಗಲೇ ಕುತ್ತಿಗೆ, ಬಾಯಿ, ನಾಲಿಗೆ ಕ್ಯಾನ್ಸರ್‌ನಿಂದ ಬಳಲುತ್ತಿರುವ 40 ರೋಗಿಗಳಿಗೆ ‘ಟೀಸೆಲ್‌’ ಥೆರಪಿ ನೀಡಲಾಗಿದೆ. ಬಳಿಕ ಅವರಿಗೆ ‘ಡೆಂಡ್ರಿಟಿಕ್‌’ ಲಸಿಕೆ ಕೊಡಲಾಗುತ್ತಿದೆ.
 • ಯಾತನೆ ರಹಿತ ಚಿಕಿತ್ಸೆ: ಕಿಮೊ ಚಿಕಿತ್ಸೆ ಕ್ಯಾನ್ಸರ್‌ ಕೋಶಗಳನ್ನು ಮಾತ್ರವಲ್ಲದೆ, ದೇಹದ ಇತರೆ ಆರೋಗ್ಯಕರ ಕೋಶಗಳನ್ನೂ ನಾಶ ಮಾಡುತ್ತದೆ. ಇದರಿಂದ ರೋಗಿ ಕಿಮೊ ಚಿಕಿತ್ಸೆ ಪಡೆದ ಸಂದರ್ಭದಲ್ಲಿ ತೀವ್ರತರವಾಗಿ ಬಳಲುತ್ತಾನೆ. ವಾಕರಿಕೆ, ವಾಂತಿ, ಅತಿಯಾದ ಮೈಕೈ ನೋವು, ಕೂದಲು ಉದುರುವಿಕೆ ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ. ಆದರೆ, ‘ಡೆಂಡ್ರಿಟಿಕ್‌’ ಲಸಿಕೆಯಿಂದ ರೋಗಿಗೆ ಯಾವುದೇ ರೀತಿಯ ಯಾತನೆ ಇರುವುದಿಲ್ಲ. ಇದು ಕೇವಲ ಕ್ಯಾನ್ಸರ್‌ ಕೋಶಗಳು ಮಾತ್ರ ನಿಷ್ಕ್ರಿಯಗೊಳಿಸುತ್ತದೆ. ಈ ಚಿಕಿತ್ಸೆಯನ್ನು ಹೊರ ರೋಗಿಗಳಾಗಿಯೇ ಪಡೆಯಬಹುದು.

ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧ ಕಂಡುಹಿಡಿದ ಇಸ್ರೇಲ್ ವಿಜ್ಞಾನಿಗಳು

 • ಮನುಕುಲಕ್ಕೆ ಮಾರಕವಾಗಿ ಪರಿಣಮಿಸಿರುವ ಕ್ಯಾನ್ಸರ್‌ಗೆ ಇಸ್ರೇಲ್ ವಿಜ್ಞಾನಿಗಳು ಪರಿಣಾಮಕಾರಿ ಔಷಧ ಕಂಡುಹುಡುಕಿದ್ದಾರೆ.
 • ಮುಟಾಟೊ ಹೆಸರಿನ ಕ್ರಾಂತಿಕಾರಿ ಕ್ಯಾನ್ಸರ್‌ ಚಿಕಿತ್ಸಾ ಔಷಧವನ್ನು ಅಕ್ಸಿಲರೇಟೆಡ್ ಇವೊಲ್ಯೂಶನ್ ಬಯೋಟೆಕ್ನಾಲಜೀಸ್ ಲಿ. ಅಭಿವೃದ್ಧಿಪಡಿಸಿದೆ.
 • ಮುಟಾಟೊ ಎಂದರೆ, ಮಲ್ಟಿ ಟಾರ್ಗೆಟ್ ಟಾಕ್ಸಿನ್. ಅದು ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳು ಮತ್ತು ಕ್ಯಾನ್ಸರ್‌ ಕೋಶಗಳನ್ನು ಮಾತ್ರ ಗುರಿಯಾಗಿಸಿ, ನೇರವಾಗಿ ಅದರ ಮೇಲೆಯೇ ದಾಳಿ ನಡೆಸುತ್ತದೆ.
 • ಉಳಿದಂತೆ ಆರೋಗ್ಯವಂತ ಕೋಶಗಳಿಗೆ ಯಾವುದೇ ಹಾನಿಯೆಸಗುವುದಿಲ್ಲ. ಈಗಾಗಲೇ ಕ್ಯಾನ್ಸರ್‌ಗೆ ಚಿಕಿತ್ಸೆ ಮತ್ತು ಔಷಧಿ ಕುರಿತು ಹಲವು ಕ್ರಮಗಳು ಬಂದಿದ್ದರೂ, ಅವು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ.

ಭಾರತಕ್ಕೆ ಚೀನೂಕ್‌ ಹಸ್ತಾಂತರ

4.

ಸುದ್ಧಿಯಲ್ಲಿ ಏಕಿದೆ ?ಅಮೆರಿಕದ ಬೋಯಿಂಗ್‌ ಸಂಸ್ಥೆ ನಿರ್ಮಿತ ಸೇನಾ ಹೆಲಿಕಾಪ್ಟರ್‌ ಚೀನೂಕ್‌ ಭಾರತಕ್ಕೆ ಅಧಿಕೃತ ಹಸ್ತಾಂತರಗೊಂಡಿದೆ. ಫಿಲಿಡೆಲ್ಪಿಯಾದಲ್ಲಿ ಚೀನೂಕ್‌ ಪ್ರಥಮ ಕಾಪ್ಟರ್‌ನ ಹಸ್ತಾಂತರ ಸಮಾರಂಭ ನಡೆಯಿತು.

 • 2015ರಲ್ಲಿ 22ಎಎಚ್‌-64ಇ ಅಪಾಚೆ ಯುದ್ಧ ಕಾಪ್ಟರ್‌ ಮತ್ತು ಚೀನೂಕ್‌ ಸೇನಾ ಸಾಗಣೆ ಹೆಲಿಕಾಪ್ಟರ್‌ಗಳ ಖರೀದಿಗೆ ಅಮೆರಿಕ ಜತೆ ಭಾರತ ಒಡಂಬಡಿಕೆ ಮಾಡಿಕೊಂಡಿತ್ತು.
 • ಚೀನೂಕ್‌ ಹಸ್ತಾಂತರ ಪ್ರಕ್ರಿಯೆ ಈಗ ಆರಂಭಗೊಂಡಿದ್ದು, ವರ್ಷದೊಳಗೆ ಉಳಿದ ಕಾಪ್ಟರ್‌ಗಳ ಪೂರೈಕೆಯಾಗಲಿದೆ ಎಂದು ಹೇಳಲಾಗಿದೆ. ಇದರ ಸೇರ್ಪಡೆಯೊಂದಿಗೆ ಭಾರತೀಯ ಸೇನಾ ಪಡೆಗೆ ಆಧುನಿಕತೆಯ ಹೊಸ ಬಲ ಪ್ರಾಪ್ತಿಯಾಗಿದೆ ಎಂದು ಸೇನೆ ಹೇಳಿದೆ.
 • ಭಾರತವು ಚೀನೂಕ್‌ ಬಳಸುತ್ತಿರುವ ವಿಶ್ವದ 19ನೇ ರಾಷ್ಟ್ರ ಎನಿಸಿದೆ.

ಚಿನೂಕ್ ಬಗ್ಗೆ

 • ಚಿನೂಕ್ ಬಹು-ಮಿಷನ್, ಹೆವಿ-ಲಿಫ್ಟ್ ಟ್ರಾನ್ಸ್ಪೋರ್ಟ್ ಹೆಲಿಕಾಪ್ಟರ್ ಆಗಿದೆ. ಯುದ್ಧಭೂಮಿಯಲ್ಲಿ ಪಡೆಗಳು, ಫಿರಂಗಿದಳಗಳು, ಯುದ್ಧಸಾಮಗ್ರಿ, ಇಂಧನ, ನೀರು, ತಡೆಗೋಡೆ ವಸ್ತುಗಳು, ಸರಬರಾಜು ಮತ್ತು ಉಪಕರಣಗಳನ್ನು ಸಾಗಿಸುವುದು ಇದರ ಪ್ರಮುಖ ಗುರಿಯಾಗಿದೆ.
 • ಇದರ ದ್ವಿತೀಯ ಕಾರ್ಯಗಳಲ್ಲಿ ವೈದ್ಯಕೀಯ ಸ್ಥಳಾಂತರಿಸುವಿಕೆ, ವಿಪತ್ತು ಪರಿಹಾರ, ಶೋಧನೆ ಮತ್ತು ಪಾರುಗಾಣಿಕಾ, ವಿಮಾನ ಚೇತರಿಕೆ, ಅಗ್ನಿಶಾಮಕ, ಧುಮುಕುಕೊಡೆ ಹನಿಗಳು, ಭಾರಿ ನಿರ್ಮಾಣ ಮತ್ತು ನಾಗರಿಕ ಅಭಿವೃದ್ಧಿ ಸೇರಿವೆ.
Related Posts
“27th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
'ಸ್ವಚ್ಛ ಬೆಂಗಳೂರು' ಸುದ್ಧಿಯಲ್ಲಿ ಏಕಿದೆ ? ಬೆಂಗಳೂರು ನಗರವನ್ನು ಸ್ವಚ್ಛ ಮಾಡಲು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಾಲಾವಧಿ ನಿಗದಿಪಡಿಸಿದೆ. ಆದರೆ ಸ್ವಚ್ಛ ಬೆಂಗಳೂರಿನ ಸವಾಲನ್ನು ಎದುರಿಸಿ ಅದನ್ನು ಸಾಧಿಸುವುದು ಕಷ್ಟ. ಸವಾಲುಗಳೇನು ? ಕಸದಿಂದ ಹಿಡಿದು ಉಗುಳುವವರೆಗೆ, ಸಾರ್ವಜನಿಕ ಶೌಚಾಲಯದಿಂದ ಹಿಡಿದು ...
READ MORE
“02 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹಂಪಿ ಉತ್ಸವ ಸುದ್ಧಿಯಲ್ಲಿ ಏಕಿದೆ ? ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವ ಹಂಪಿ ಉತ್ಸವವು ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದ್ದು, ಸಕಲ ಸಿದ್ಧತೆಯಾಗಿದೆ. ಮಾ.2ರಂದು ಕಲಾ ತಂಡಗಳಿಂದ ಶೋಭಾಯಾತ್ರೆ ಜರುಗಲಿದ್ದು, ಸಿಎಂ ಕುಮಾರಸ್ವಾಮಿ ಉತ್ಸವಕ್ಕೆ ಚಾಲನೆ ನೀಡುವರು. ವಿಶೇಷ ಆಹ್ವಾನಿತರಾಗಿ ನಟ ದರ್ಶನ್, ...
READ MORE
“31st ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಎನ್​ಪಿಎಸ್ ಶೀಘ್ರ ರದ್ದು ಸುದ್ಧಿಯಲ್ಲಿ ಏಕಿದೆ ?ನೂತನ ಪಿಂಚಣಿ ಯೋಜನೆ (ಎನ್​ಪಿಎಸ್) ರದ್ದು ಮಾಡಬೇಕೆಂಬ ನೌಕರರ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ಈ ಸಂಬಂಧ ಶೀಘ್ರ ಕಡತ ಮಂಡಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ. ಹಿನ್ನಲೆ ಸರ್ಕಾರದ ವಿವಿಧ ಇಲಾಖೆಗಳಿಗೆ, ...
READ MORE
“12 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಾಗತಿಕ ರ್ಯಾಂಕಿಂಗ್: ಕುವೆಂಪು ವಿವಿಗೆ 45ನೇ ಸ್ಥಾನ! ಸುದ್ಧಿಯಲ್ಲಿ ಏಕಿದೆ ? ಗುಣಮಟ್ಟದ ಶೈಕ್ಷಣಿಕ ಸಂಶೋಧನೆ, ತರಬೇತಿ, ಸಾಮಾಜಿಕ ಪರಿಣಾಮ, ಅವಿಷ್ಕಾರಗಳು ಈ ಎಲ್ಲವನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾದ ಅಂತರಾಷ್ಟ್ರೀಯ ರ್ಯಾಂಕಿಂಗ್ (ಶ್ರೇಯಾಂಕ) ಪಟ್ಟಿಯಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯ 45ನೇ ಸ್ಥಾನ ಪಡೆದಿದೆ. ಸಿಮಾಗೋ ಸೊಸೈಟಿ ...
READ MORE
“16 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆಯುಷ್ಮಾನ್ ಆರೋಗ್ಯ ಸುದ್ಧಿಯಲ್ಲಿ ಏಕಿದೆ ?ಬಡ ಹಾಗೂ ಮಧ್ಯಮವರ್ಗದ ನಾಗರಿಕರಿಗೆ ಆರೋಗ್ಯ ಸೇವೆಯಲ್ಲಿ ಖಾತ್ರಿ ನೀಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿದ್ದ ಎರಡು ಪ್ರತ್ಯೇಕ ಯೋಜನೆಗಳನ್ನು ವಿಲೀನಗೊಳಿಸುವ ಮೂಲಕ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯನ್ನು ಜಾರಿ ಮಾಡಲಾಗಿದೆ. ಕೋ-ಬ್ರಾ್ಯಂಡಿಂಗ್​ನಲ್ಲಿ ಎರಡೂ ಯೋಜನೆಗಳನ್ನು ...
READ MORE
“21 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆಗೆ ಯೋಜನೆ ಸುದ್ಧಿಯಲ್ಲಿ ಏಕಿದೆ ? ಪದೇಪದೆ ಕಾಡುವ ಚಂಡಮಾರುತ ಸುಳಿಯಿಂದ ಪಾರಾಗಲು ಕೇಂದ್ರ ಸರ್ಕಾರದ ನೇತೃತ್ವದಲ್ಲಿ, ಕರ್ನಾಟಕ ಸೇರಿದಂತೆ ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆ ಯೋಜನೆ ಕೈಗೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಈ ಯೋಜನೆ ಶೇ.75-25 ಕೇಂದ್ರ-ರಾಜ್ಯ ಸಹಕಾರದಲ್ಲಿ ...
READ MORE
“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏರೋ ಇಂಡಿಯಾ ಡ್ರೋನ್ ಒಲಿಂಪಿಕ್ಸ್ ಸುದ್ಧಿಯಲ್ಲಿ ಏಕಿದೆ ?ಏರೋ ಇಂಡಿಯಾ ಇತಿಹಾಸದಲ್ಲಿ ಇದೇ ಮೊದಲ ಬಾರಿ ಡ್ರೋನ್​ಗಳ ಸ್ಪರ್ಧೆ ಏರ್ಪಡಿಸಲಾಗಿದ್ದು, ಅದಕ್ಕೆ ಡ್ರೋನ್ ಒಲಿಂಪಿಕ್ಸ್ ಎಂದು ಹೆಸರಿಡಲಾಗಿದೆ. ವಿಜೇತರಾಗುವವರಿಗೆ ನಗದು ಬಹುಮಾನವನ್ನು ನೀಡಲು ಏರೋ ಇಂಡಿಯಾ ಶೋ ಆಯೋಜಕರು ನಿರ್ಧರಿಸಿದ್ದಾರೆ. ಎರಡು ವಿಭಾಗದಲ್ಲಿ ಸ್ಪರ್ಧೆ: ಡ್ರೋನ್ ...
READ MORE
“12 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷ್ಣರಾಜಸಾಗರ ಅಣೆಕಟ್ಟು ಸುದ್ಧಿಯಲ್ಲಿ ಏಕಿದೆ ?ಮಂಡ್ಯ ರೈತರ ಜೀವನಾಡಿ ಕಾವೇರಿ ನದಿಗೆ ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣಕ್ಕೆ  ಶಂಕುಸ್ಥಾಪನೆ ನೆರವೇರಿಸಿ 107 ವರ್ಷಗಳು ಸಂದಿವೆ. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿ ಫಲವಾಗಿ ಮಂಡ್ಯದ ಕನ್ನಂಬಾಡಿ ಗ್ರಾಮದಲ್ಲಿ ಕೆಆರ್​ಎಸ್ ಜಲಾಶಯ ನಿರ್ಮಾಣವಾಯಿತು. ಅದರ ...
READ MORE
“19 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶೀಘ್ರವೇ ನೋವಿಲ್ಲದ ಚಿಕಿತ್ಸೆ! ಸುದ್ಧಿಯಲ್ಲಿ ಏಕಿದೆ ?ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಕೊನೆಯ ದಿನಗಳನ್ನು ಎಣಿಸುತ್ತಿರುವ ರೋಗಿಗಳಿಗಾಗಿ ನೋವುರಹಿತ ಚಿಕಿತ್ಸಾ ಪದ್ಧತಿ ಜಾರಿಗೆ ತರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ನಡೆಸಿದೆ. ಯೋಜನೆಯ ಉದ್ದೇಶ ಕ್ಯಾನ್ಸರ್, ಏಡ್ಸ್ ಸೇರಿ ಗುಣಪಡಿಸಲಾಗದ ಕಾಯಿಲೆಗೆ ಒಳಪಟ್ಟವರು ಹಾಗೂ ...
READ MORE
“05 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕದಂಬೋತ್ಸವ ಮುಂದೂಡಿಕೆ ಸುದ್ಧಿಯಲ್ಲಿ ಏಕಿದೆ ?ಮಂಗನ ಕಾಯಿಲೆ ಭೀತಿ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ಫೆಬ್ರವರಿ 9 ಮತ್ತು 10ರಂದು ನಡೆಯಬೇಕಿದ್ದ ಕದಂಬೋತ್ಸವನ್ನು ಮುಂದೂಡಲಾಗಿದೆ. ಹಿನ್ನಲೆ ಫೆಬ್ರವರಿ 9 ಮತ್ತು 10ರಂದು ಕದಂಬೋತ್ಸವನ್ನು ನಡೆಸಲು ಜಿಲ್ಲಾಡಳಿತ ಈಗಾಗಲೇ ಅಂತಿಮ ಹಂತದ ಸಿದ್ಧತೆಗಳನ್ನು ...
READ MORE
“27th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“02 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“31st ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“12 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“16 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“21 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“12 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“19 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“05 ಫೆಬ್ರವರಿ 2019 ರ ಕನ್ನಡ ಪ್ರಚಲಿತ

Leave a Reply

Your email address will not be published. Required fields are marked *