ರಾಜ್ಯ ಸುದ್ಧಿ – January 2017

ಪ್ರವಾಸಿ ಭಾರತೀಯ ದಿವಸ್ ಕರ್ನಾಟಕದಲ್ಲಿ ವಿಶೇಷತೆಗಳು

ಬಿ.ಟಿ ನವೋದ್ಯಮಗಳತ್ತ ಚಿತ್ತ

 • ಅಮೆರಿಕ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನ ಕೆಲವು ಉದ್ಯಮಿಗಳು ಜೈವಿಕ ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳಲ್ಲಿ (ಸ್ಟಾರ್ಟ್‌ ಅಪ್‌) ಬಂಡವಾಳ ಹೂಡಲು  ಆಸಕ್ತಿ  ತೋರಿದ್ದಾರೆ.
 • ಎಲೆಕ್ಟ್ರಾನಿಕ್ಸ್‌ ಸಿಟಿಯ ಬೆಂಗಳೂರು ಹೆಲಿಕ್ಸ್‌ ಬಯೋಟೆಕ್ನಾಲಜಿ ಪಾರ್ಕ್‌ನಲ್ಲಿರುವ  ಬೆಂಗಳೂರು ಬಯೋ ಇನೊವೇಷನ್‌ ಸೆಂಟರ್‌ನಲ್ಲಿ (ಬಿಬಿಸಿ)  ನಡೆಯುತ್ತಿರುವ ಸಂಶೋಧನಾ ಚಟುವಟಿಕೆ ವಿದೇಶಿ ಉದ್ಯಮಿಗಳ ಗಮನ ಸೆಳೆಯಿತು.
 • ಈ ಉದ್ಯಮಿಗಳ ತಂಡ ಎಲೆಕ್ಟ್ರಾನಿಕ್ಸ್ ಸಿಟಿ ಕೈಗಾರಿಕಾ  ಟೌನ್‌ಷಿಪ್‌ ಪ್ರದೇಶ (ಎಲ್ಸಿಟಾ) ಹಾಗೂ   ಇನ್ಫೊಸಿಸ್‌  ಕ್ಯಾಂಪಸ್‌ಗೂ ಭೇಟಿ ನೀಡಿತು. ನಾರ್ತ್‌ ವೆಸ್ಟ್‌ ಆಸಿಯಾನ್‌ ಬಿಜಿನೆಸ್‌ ಅಸೋಸಿಯೇಷನ್‌ (ಎನ್‌ಡಬ್ಲ್ಯುಎಬಿಎ) ವ್ಯವಸ್ಥಾಪಕ ನಿರ್ದೇಶಕ ರಿಡ್ವಾನ್‌ ಅಸ್ಮಲ್‌, ಅಮೆರಿಕನ್‌ ಸೊಸೈಟಿ ಆಫ್‌ ಎಂಜಿನಿಯರ್ಸ್‌ ಆಫ್ ಇಂಡಿಯನ್‌ ಒರಿಜಿನ್‌ (ಎಎಸ್‌ಇಐ) ಸಂಸ್ಥಾಪಕ ಹರಿ ಬಿ. ಬಿಂಡಾಲ್‌, ಆಸಿಯಾನ್‌ ಬ್ಯುಸಿನೆಸ್‌ ಕನೆಕ್ಷನ್ಸ್‌ನ ಪ್ರೊ.ಅಮ್ಮರ್‌ ಮಿರ್ಜಾ, ಉದ್ಯಮಿಗಳಾದ ಮಾರ್ಟಿನ್‌ ವೆನ್ನಿಂಗ್‌, ಶ್ಯಾರನ್‌ ಜಂಡು ಸೇರಿದಂತೆ 13 ಉದ್ಯಮಿಗಳು ತಂಡದಲ್ಲಿದ್ದರು.
 • ಏರೋಸ್ಪೇಸ್‌ ಪಾರ್ಕ್‌ಗೆ ಭೇಟಿ: ದೇವನಹಳ್ಳಿ ಸಮೀಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೈಟೆಕ್‌ ಏರೋಸ್ಪೇಸ್‌ ಪಾರ್ಕ್‌ಗೆ ಭೇಟಿ ನೀಡಿದ  ಉದ್ಯಮಿಗಳ ಇನ್ನೊಂದು ತಂಡ  ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆಯಿತು.
 • ಬಿಐಇಸಿ ಆವರಣ 40,000 ಚದರ ಮೀಟರ್‌ ಇದ್ದು, ಇಲ್ಲಿ ಮೂರು ದಿನಗಳ ಕಾಲ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಅನಿವಾಸಿ ಭಾರತೀಯರಿಗಾಗಿ ಪಿಬಿಡಿ 2017 ವಿಶೇಷ ಆ್ಯಪ್ ಬಿಡುಗಡೆ ಮಾಡಲಾಗಿದೆ. ಗೂಗಲ್ ಪ್ಲೇ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ನಲ್ಲಿ ಆ್ಯಪ್ ಲಭ್ಯವಿದೆ

ಅನಿವಾಸಿ ಕನ್ನಡಿಗರಿಗೆ

 • ಅನಿವಾಸಿ ಕನ್ನಡಿಗರಿಗೆ (ಎನ್‌ಆರ್‌ಕೆ) ಅಧಿಕೃತ ಗುರುತಿನ ಚೀಟಿಯಾಗಿ ‘ಅನಿವಾಸಿ ಕನ್ನಡಿಗ  ಕಾರ್ಡ್‌’ ವಿತರಣೆ.  ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಮಟ್ಟದಲ್ಲಿ ಅನಿವಾಸಿ ಭಾರತೀಯ ಸಮಿತಿ, ಜಿಲ್ಲಾ ಮಟ್ಟದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ.
 • ಎನ್‌ಆರ್‌ಕೆ ಮತ್ತು ರಾಜ್ಯದ ವಿವಿಧ ಸಂಘಟನೆಗಳೊಂದಿಗೆ ಸಂಪರ್ಕ ಕಲ್ಪಿಸುವ ಜಾಲತಾಣ ಸೃಷ್ಟಿ.
 • ಎನ್‌ಆರ್‌ಕೆಗಳಿಗೆ ಅಪಘಾತ ಸಂಭವಿಸಿದರೆ  2 ಲಕ್ಷಗಳವರೆಗೆ ವಿಮಾ ಸೌಲಭ್ಯ.
 • ಕರ್ನಾಟಕ ಮತ್ತು ಎನ್‌ಆರ್‌ಕೆಗಳೊಂದಿಗೆ  ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಆಯೋಜನೆ. ಅವರಿಗಾಗಿ ವಿಶೇಷ ಪ್ರವಾಸ ಏರ್ಪಡಿಸುವುದು.
 • ತಾಯ್ನಾಡಿನಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇರುವ ಎನ್‌ಆರ್‌ಕೆಗಳಿಗೆ ಉತ್ತೇಜನ ನೀಡಲು ‘ನಮ್ಮ ಊರು, ನಮ್ಮ ನಾಡು’ ಯೋಜನೆ ಆರಂಭ.
 •  ವಿಶ್ವದೆಲ್ಲೆಡೆ ಕನ್ನಡ ಕೂಟ ಆರಂಭಿಸಲು ಪ್ರೋತ್ಸಾಹ.  ಕನ್ನಡ ಭಾಷೆ ಮತ್ತು ಸಂಸ್ಕೃತಿ ರಕ್ಷಿಸಲು ಉತ್ತೇಜನ ನೀಡುವುದು.
 • ಉತ್ತಮ ಸಾಧನೆ ಮಾಡಿದ ಒಬ್ಬ ಅನಿವಾಸಿ ಕನ್ನಡಿಗನಿಗೆ ಪ್ರತಿ ವರ್ಷ ಪ್ರವಾಸಿ ಭಾರತ್‌ ದಿವಸ್‌ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ‘ವರ್ಷದ ಅನಿವಾಸಿ ಕನ್ನಡಿಗ ಪ್ರಶಸ್ತಿ’ ಪ್ರದಾನ.
 • ಸಾಗರೋತ್ತರ  ದೇಶಗಳಲ್ಲಿ ಕನ್ನಡಿಗರು  ಉದ್ಯೋಗ ಪಡೆಯಲು  ಪ್ರೋತ್ಸಾಹ. ವಿದೇಶದಲ್ಲಿ  ಉನ್ನತ ಶಿಕ್ಷಣಕ್ಕೆ, ಉದ್ಯೋಗಕ್ಕೆ ತೆರಳುವವರಿಗೆ ಪೂರ್ವಭಾವಿ ಮಾರ್ಗದರ್ಶನ.
 • ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ  ಕಾನೂನು ವಿವಾದ, ವಾಣಿಜ್ಯ ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ಕಾನೂನು ಸಲಹೆಗಾರರು ಮತ್ತು ವಕೀಲರ ಮೂಲಕ ನೆರವು ನೀಡುವುದು.
 • ಅನಿವಾಸಿ ಕನ್ನಡಿಗರು ವಿದೇಶದಲ್ಲಿ ಮೃತರಾದರೆ, ಸ್ವದೇಶಕ್ಕೆ ಮೃತ ದೇಹ ಸಾಗಿಸಲು ವಿಮಾನ ವೆಚ್ಚವನ್ನು ಸರ್ಕಾರದಿಂದ ಭರಿಸುವುದು.

ಏಳು ವಿಜ್ಞಾನಿಗಳಿಗೆ ಇನ್ಫೊಸಿಸ್‌ ವಿಜ್ಞಾನ ಪ್ರಶಸ್ತಿ

 • ವಿಜ್ಞಾನ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದವರನ್ನು ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರ ಕೆಲಸಗಳು ಭೌಗೋಳಿಕ ಎಲ್ಲೆಗಳನ್ನು ದಾಟಿ ಮಾನವ ಕುಲದ ಸರ್ವಾಂಗೀಣ ಕಲ್ಯಾಣಕ್ಕೆ ಸಹಕಾರಿಯಾಗಿವೆ
 • ಪ್ರಶಸ್ತಿ 65 ಲಕ್ಷ ನಗದು, ಚಿನ್ನದ ಪದಕ ಮತ್ತು ಪ್ರಮಾಣಫಲಕವನ್ನು ಒಳಗೊಂಡಿದೆ.

ಚಮ್ಮಾರರಿಗೆ ಮನೆ ನಿರ್ಮಾಣಕ್ಕಾಗಿ  3.5 ಲಕ್ಷ

 • ಚಮ್ಮಾರ ವೃತ್ತಿ ಮಾಡುವ ಮಾದಿಗರು, ಮೋಚಿಗರು, ಸಮಗಾರರಂತಹ ಸಮುದಾಯದವರಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ  3.5 ಲಕ್ಷ ಆರ್ಥಿಕ ನೆರವು ನೀಡಾಗುತ್ತದೆ.
 • ‘ಡಾ.ಬಾಬು ಜಗಜೀವನ್‌ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಈ ಸಮುದಾಯದವರಿಗೆ ಮನೆ ನಿರ್ಮಾಣಕ್ಕಾಗಿ 2 ಲಕ್ಷ ನೀಡಲಾಗುತ್ತಿತ್ತು. ಇನ್ನು ಮುಂದೆ ಅಂಬೇಡ್ಕರ್ ವಸತಿ ಯೋಜನೆಯಡಿ ರಾಜೀವ್‌ಗಾಂಧಿ ವಸತಿ ನಿಗಮದಿಂದ ₹1.50 ಲಕ್ಷ ಸೇರಿಸಿ,  5 ಲಕ್ಷ ಹಣವನ್ನು ಮನೆ ನಿರ್ಮಾಣಕ್ಕಾಗಿ ನೀಡಲಾಗುತ್ತದೆ.
 • ಚಮ್ಮಾರರ ಆರ್ಥಿಕ ಸ್ಥಿತಿಯನ್ನು ಉನ್ನತಿಗೊಳಿಸುವುದಕ್ಕಾಗಿ ಈ ನೂತನ ಯೋಜನೆ ರೂಪಿಸಲಾಗಿದೆ.
 • ಚಪ್ಪಲಿ ತಯಾರಿಸಲು ಚಮ್ಮಾರರಿಗೆ ಸರ್ಕಾರದಿಂದ ಉಚಿತವಾಗಿ ಶೆಡ್‌ ನಿರ್ಮಿಸಿಕೊಡಲಾಗುತ್ತಿದೆ. ಜತೆಗೆ 5ಸಾವಿರ ಬಂಡವಾಳ ಹಾಗೂ ಚಮ್ಮಾರಿಕೆಗೆ ಬೇಕಾದ ಪರಿಕರಗಳನ್ನು ಕೊಡಿಸಲಾಗುತ್ತಿದೆ.

ಪ್ರಾದೇಶಿಕ ಪಕ್ಷ ಉಗಮಕ್ಕೆ ಸಕಾಲ

 • 60–70 ರ ದಶಕದಲ್ಲಿ ಪ್ರಾದೇಶಿಕ ಪಕ್ಷಗಳ ಯುಗ ಆರಂಭವಾಗಿತ್ತು.
 • ಸಾರ್ವಜನಿಕರ ಒತ್ತಡ ಸ್ಫೋಟದಿಂದ ಪರ್ಯಾಯ ಶಕ್ತಿ ಉಗಮವಾಗಬೇಕು. ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯ ಇದೆ
 • ಪ್ರಾದೇಶಿಕ ಶಕ್ತಿಗಳು ಕಾಲಕಾಲಕ್ಕೆ ಜನರನ್ನು ಎಚ್ಚರಿಸುವ ದಾರಿದೀಪವಾಗಬೇಕು. ಚಿಂತನೆ ಮತ್ತು ವಿಚಾರಗಳನ್ನು ಮಂಡಿಸುವಾಗ ಚೌಕಟ್ಟಿಗೆ ಕಟ್ಟುಬೀಳದೆ ಜನರ ಮುಂದೆ ಮುಕ್ತ ಸಂವಾದ ನಡೆಸಬೇಕು
 • ದಿನಕಳೆದಂತೆ ಆ ಪಕ್ಷಗಳ ಬಗೆಗಿನ ನಂಬಿಕೆ ಜನರಿಂದ ದೂರವಾದವು.

ಕಾರಣಗಳು:

 • ಭ್ರಷ್ಟಾಚಾರ
 • ಕಳಪೆ ಆಡಳಿತ
 • ಮಾನವೀಯ ಮೌಲ್ಯಗಳ ತುಳಿತ
 • ಕುಟುಂಬ ರಾಜಕಾರಣದಿಂದ ಪ್ರಾದೇಶಿಕ ಪಕ್ಷಗಳು ನೆಲಕಚ್ಚಿದವು.

ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ಶಕ್ತಿ ರೂಪುಗೊಳ್ಳಲು ಕಾಲ ಸನ್ನಿಹಿತವಾಗಿದೆ.

 • ನೆಲ, ಜಲ, ಭಾಷೆ, ಬದುಕಿನ ಅಸ್ತಿತ್ವ ಕಾಪಾಡಲು ಪರ್ಯಾಯ ರಾಜಕೀಯ ಪಕ್ಷ ರಚನೆ ಅತ್ಯವಶ್ಯ. ಪರ್ಯಾಯ ಎಂಬುದು ಅಧಿಕಾರ ಹೊರತಾದ ಚಿಂತನೆಯಾಗಬೇಕು. ರಾಜಕೀಯ ವ್ಯವಸ್ಥೆಗೆ ಎಚ್ಚರಿಕೆ ನೀಡುವ ಸಾಧನವಾಗಬೇಕು. ಸಮಾಜ ವಿರೋಧಿ ನೀತಿ ವಿರುದ್ಧ ಧ್ವನಿ ಮೊಳಗಿಸುವ ಸಾಧನವಾಗಬೇಕು.

ಹಕ್ಕಿ ಜ್ವರ: ಆತಂಕದಲ್ಲಿ ಸರ್ಕಾರ

 • ವಿದೇಶಗಳಿಂದ ವಲಸೆ ಬಂದ ಪಕ್ಷಿಗಳಲ್ಲಿ ಅಪಾಯಕಾರಿ ‘ಹಕ್ಕಿ ಜ್ವರ’(ಎಚ್‌5ಎನ್‌8) ಸೋಂಕು ಪತ್ತೆಯಾಗಿರುವುದು ರಾಜ್ಯ ಸರ್ಕಾರವನ್ನು ತೀವ್ರ ಆತಂಕಕ್ಕೀಡು ಮಾಡಿದೆ.
 • ಬೀದರ್‌ ಮತ್ತು ಬಳ್ಳಾರಿಯಲ್ಲಿ ಆರು ತಿಂಗಳ ಅಂತರದಲ್ಲಿ ಕಾಣಿಸಿಕೊಂಡಿದ್ದ ಹಕ್ಕಿ ಜ್ವರವನ್ನು ನಿಯಂತ್ರಿಸುವಲ್ಲಿ ಸರ್ಕಾರ ಯಶಸ್ವಿಯಾಗಿತ್ತು. ಈ ಎರಡೂ ಫಾರಂಗಳಲ್ಲಿನ ಕೋಳಿಗಳನ್ನು ನಾಶಪಡಿಸಲಾಗಿತ್ತು.
 • ಮೈಸೂರು ಮೃಗಾಲಯಕ್ಕೆ ವಲಸೆ ಬಂದು ಸತ್ತುಬಿದ್ದ ವೈಲ್ಡ್‌ಗೂಸ್‌ ಮತ್ತು ಪೆಲಿಕಾನ್‌ ಹಕ್ಕಿಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ಮೃಗಾಲಯದಲ್ಲಿ ಅಪರೂಪದ ವಿವಿಧ ಜಾತಿಯ 800ಕ್ಕೂ ಹೆಚ್ಚು ಹಕ್ಕಿಗಳಿರುವುದು ಕಳವಳಕ್ಕೆ ಕಾರಣ.
 • ಕೇಂದ್ರ ಸರ್ಕಾರದ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕಾ ಇಲಾಖೆ (ಡಿಎಡಿಎಫ್) ಹೊರಡಿಸಿದ ‘ಪರಿಷ್ಕೃತ ಹಕ್ಕಿ ಜ್ವರ ನಿಯಂತ್ರಣ ಕ್ರಿಯಾ ಯೋಜನೆ–2015’ರ ಮಾರ್ಗಸೂಚಿ ಪ್ರಕಾರ, ಹಕ್ಕಿ ಜ್ವರ ಕಾಣಿಸಿಕೊಂಡರೂ ಮೃಗಾಲಯದ ಹಕ್ಕಿಗಳನ್ನು ನಾಶಪಡಿಸಲು ಅವಕಾಶ ಇಲ್ಲ.
 • ವಲಸೆ ಪಕ್ಷಿಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಮೈಸೂರಿನ ರಂಗನತಿಟ್ಟು, ಮದ್ದೂರು ಬಳಿಯ ಕೊಕ್ಕರೆ ಬೆಳ್ಳೂರು, ಶಿವಮೊಗ್ಗದ ಮಂಡಗದ್ದೆ ಸೇರಿದಂತೆ ಎಲ್ಲ ಪಕ್ಷಿಧಾಮಗಳಲ್ಲಿ ತೀವ್ರ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.

ಮೈಸೂರು ಮೃಗಾಲಯ: ಹಕ್ಕಿಜ್ವರ ನಿಯಂತ್ರಣಕ್ಕೆ ತುರ್ತು ಕ್ರಮ

 • ಚಾಮರಾಜೇಂದ್ರ ಮೃಗಾಲಯದಲ್ಲಿ ‘ಹಕ್ಕಿಜ್ವರ’ (ಎಚ್‌5ಎನ್‌8 ವೈರಾಣು) ಭೀತಿ ಆವರಿಸಿರುವ ಕಾರಣ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ವಿಕ್ರಾನ್‌–ಎಸ್ (Vicron-s) ಎಂಬ ಔಷಧಿ ಸಿಂಪಡಣೆ ಮಾಡುತ್ತಿದ್ದು, ಸಿಬ್ಬಂದಿಗೂ ಟ್ಯಾಮಿಫ್ಲೂ ಮಾತ್ರೆ ನೀಡಲಾಗಿದೆ.
 • ವಲಸೆ ಪಕ್ಷಿಗಳಾದ ಕೊಕ್ಕರೆ ಮತ್ತು ಬಾತುಕೋಳಿಗಳು ಹಕ್ಕಿಜ್ವರದಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮೃಗಾಲಯವನ್ನು ಒಂದು ತಿಂಗಳು ಬಂದ್‌ ಮಾಡಿ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
 • ಹಕ್ಕಿ ಜ್ವರದಲ್ಲಿ ಅನೇಕ ವಿಧಗಳಿವೆ. ಬೀದರ್‌ನಲ್ಲಿ ಎಚ್‌5ಎನ್‌1 ಕಾಣಿಸಿಕೊಂಡಿತ್ತು. ಇದು ಮನುಷ್ಯರಿಗೆ ಹೆಚ್ಚು ಅಪಾಯಕಾರಿ. ಆದರೆ, ಬಳ್ಳಾರಿ ಮತ್ತು ಮೈಸೂರಿನಲ್ಲಿ ಎಚ್‌5ಎನ್‌8 ಕಾಣಿಸಿಕೊಂಡಿದೆ.
 • ವಿದೇಶಗಳಿಂದ ವಲಸೆ ಬಂದ ಹಕ್ಕಿಗಳ ದೇಹದಲ್ಲಿದ್ದ ಸೋಂಕು ಮೈಸೂರಿನ ವಾತಾವರಣದಲ್ಲಿ ಉಲ್ಬಣಗೊಂಡಿರುವ ಸಾಧ್ಯತೆಯೂ ಇದೆ.
 • ಹಕ್ಕಿಜ್ವರ ಮನುಷ್ಯರಿಗೆ ತಗಲುವ ಸಾಧ್ಯತೆ ಇಲ್ಲ. ಆದರೆ, ವೈರಾಣುಗಳು ಚಪ್ಪಲಿ, ವಾಹನಗಳ ಟಯರ್‌ಗೆ ಅಂಟಿಕೊಂಡು ಹರಡುವ ಸಾಧ್ಯತೆ ಇರುತ್ತದೆ.
 • ಹಕ್ಕಿಜ್ವರ ಹರಡಿರುವುದು ಕೇರಳದಿಂದ ವಲಸೆ ಬಂದ ಹಕ್ಕಿಗಳಿಗೆ ಮಾತ್ರ. ಆಹಾರ ಅರಸಿ ಕೊಕ್ಕರೆ ಹಾಗೂ ಬಾತುಕೋಳಿಗಳು ಇತ್ತ ಬಂದಿವೆ. ಕೆರೆ, ನೀರಿನ ತೊಟ್ಟಿಗಳ ಸುತ್ತ ಇವು ಹಾಕಿದ ಹಿಕ್ಕಿಯಿಂದ ವೈರಾಣು ಹರಡುತ್ತಿದೆ. ಈ ವೈರಾಣು ಅಂಟಿಕೊಂಡರೆ 5ರಿಂದ 15ದಿನದ ನಂತರವೇ ಗೊತ್ತಾಗುತ್ತದೆ. ರೋಗ ಪತ್ತೆಯಾದ ಎರಡೇ ದಿನಕ್ಕೆ ಹಕ್ಕಿ ಸಾಯುವ ಸಾಧ್ಯತೆ ಹೆಚ್ಚು

3ನೇ ‘ಹಕ್ಕಿ ಹಬ್ಬ’

 • ಹೊಸಪೇಟೆ ತಾಲ್ಲೂಕಿನ ಕಮಲಾಪುರ ಬಳಿಯ ನಿಸರ್ಗಧಾಮದಲ್ಲಿ ಎರಡು ದಿನ ‘ಕರ್ನಾಟಕ ಹಕ್ಕಿ ಹಬ್ಬ’ ನಡೆಯಲಿದೆ.
 • ದೇಶದ ವಿವಿಧೆಡೆಯ 300ಕ್ಕೂ ಹೆಚ್ಚು ಪಕ್ಷಿ ತಜ್ಞರು, ಛಾಯಾ ಗ್ರಾಹಕರು, ಪಕ್ಷಿ ಸಂಶೋಧಕರು ಭಾಗವಹಿಸಲಿದ್ದಾರೆ.
 • ನೂರಕ್ಕೂ ಹೆಚ್ಚು ಅಪರೂಪದ ಪಕ್ಷಿಗಳ ಛಾಯಾಚಿತ್ರ ಪ್ರದರ್ಶನ, ಸಂವಾದ ನಡೆಯಲಿದೆ.
 • ಹಂಪಿ, ದರೋಜಿ ಕರಡಿಧಾಮ, ಹಂಪಿ ಕನ್ನಡ ವಿಶ್ವ ವಿದ್ಯಾಲಯ ಮತ್ತು ಕಮಲಾಪುರ ಕೆರೆ ಬಳಿ ಪಕ್ಷಿ ವೀಕ್ಷಣೆ ಕಾರ್ಯ ಕ್ರಮವಿದ್ದು, ಹಕ್ಕಿಗಳಿಗೆ ಸಂಬಂಧಿ ಸಿದ ಚಲನಚಿತ್ರ ಪ್ರದರ್ಶನ ನಡೆಯಲಿದೆ.

ಎಸ್.ಜಿ.ವಾಸುದೇವ್‌ಗೆ ಸುವರ್ಣಗೌರವ ಫೆಲೋಷಿಪ್‌

 • ಕರ್ನಾಟಕ ಲಲಿತಕಲಾ ಅಕಾಡೆಮಿಯ 2016ನೇ ಸಾಲಿನ ಸುವರ್ಣ ಗೌರವ ಫೆಲೋಷಿಪ್‌ಗೆ ಹಿರಿಯ ಕಲಾವಿದ ಎಸ್.ಜಿ.ವಾಸುದೇವ ಅವರನ್ನು ಆಯ್ಕೆ ಮಾಡಲಾಗಿದೆ.
 • ‘ಫೆಲೋಷಿಪ್‌ 2 ಲಕ್ಷ ಗೌರವಧನ ಒಳಗೊಂಡಿದೆ. ಗೌರವಕ್ಕೆ ಪಾತ್ರರಾದವರು ತಮ್ಮ ರಚನೆಯ ಅತ್ಯುತ್ತಮ ಕಲಾಕೃತಿಯೊಂದನ್ನು ಅಕಾಡೆಮಿಗೆ ಕೊಡುಗೆಯಾಗಿ ನೀಡುವರು.
 • ಸಂಶೋಧನಾ ಫೆಲೋಷಿಪ್: 2016–17ನೇ ಸಾಲಿನ ಅಕಾಡೆಮಿಯ ಸಂಶೋಧನಾ ಫೆಲೋಷಿಪ್‌ಗೆ 22 ಜನ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ದೃಶ್ಯಕಲೆ, ಕಲಾ ಶಿಕ್ಷಣ, ಗ್ರಾಫಿಕ್ಸ್‌ ಕಲೆಗಳಲ್ಲಿ ಪರಿಣಿತಿ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಸೇರಿದ್ದಾರೆ. ಸಂಶೋಧನೆಗಾಗಿ ಕಲಾವಿದರಿಗೆ ಮೂರು ಕಂತುಗಳಲ್ಲಿ 1 ಲಕ್ಷ ನೀಡಲಾಗುತ್ತಿದೆ

ಕಲಾ ಸಂಚಾರ ಯೋಜನೆ

 • ಅಕಾಡೆಮಿ ‘ಸುವರ್ಣ ಕಲಾ ಸಂಚಾರ ಯೋಜನೆ’ ರೂಪಿಸಿದೆ.
 • ಇದರಲ್ಲಿ ನಾಲ್ವರು ಯುವ ಕಲಾವಿದರಿರುವ ತಂಡಕ್ಕೆ 1 ಲಕ್ಷ ಅನುದಾನ ನೀಡಲಾಗುತ್ತದೆ.
 • ಅವರು ಅಜಂತಾ, ಎಲ್ಲೋರ, ಬೇಲೂರು, ಹಳೇಬೀಡು, ಹಂಪಿ ಸೇರಿದಂತೆ ದಕ್ಷಿಣ ಭಾರತದ ಕಲಾ ದೇಗುಲಗಳಿಗೆ ಪ್ರವಾಸ ಮಾಡಿ ಚಿತ್ರಕಲಾಕೃತಿಗಳನ್ನು ರಚಿಸಿ ಅಕಾಡೆಮಿಗೆ ನೀಡಬೇಕು.