ರಾಷ್ಟ್ರೀಯ ಸುದ್ಧಿ -January 2017

ಪ್ರವಾಸಿ ಭಾರತೀಯ ದಿವಸ್‌  :ಹೂಡಿಕೆಗೆ ಏಕಗವಾಕ್ಷಿ ಅನುಮತಿ

 • ಪ್ರವಾಸಿ ಭಾರತೀಯ ದಿವಸ್‌ ಕಾರ್ಯಕ್ರಮದ ಮೊದಲ ದಿನ ‘ಯುವ ಪ್ರವಾಸಿ ಭಾರತೀಯ ದಿವಸ್‌’ ಉದ್ಘಾಟಿಸಲಾಯಿತು.
 • ಅನಿವಾಸಿ ಭಾರತೀಯ ಯುವಕರು ದೇಶದ ಸಾಮಾಜಿಕ ಯೋಜನೆಗಳಲ್ಲಿ ಹೂಡಿಕೆಗೆ ಮುಂದಾದರೆ ತಕ್ಷಣವೇ ಏಕಗವಾಕ್ಷಿಯಡಿ ಮಂಜೂರಾತಿ  ನೀಡುವುದಾಗಿ ಕೇಂದ್ರ ಸರ್ಕಾರ ಸೂಚಿಸಿದೆ
 • ಪ್ರವಾಸಿ ದಿವಸ: ನೋಟ
  * 7,100 ಕ್ಕಿಂತಲೂ ಹೆಚ್ಚು ನೋಂದಾಯಿತ ಸದಸ್ಯರು
  * 1,700 ವಿದೇಶಿ ಪ್ರತಿನಿಧಿಗಳು
  * 7 ರಾಷ್ಟ್ರಗಳ ರಾಯಭಾರಿಗಳು
  * 72 ದೇಶಗಳ ಅನಿವಾಸಿ ಭಾರತೀಯರು (ಎನ್‌ಆರ್‌ಐ)
  * ‘ಯು ನೋ ಇಂಡಿಯಾ’ ಯೋಜನೆ ಅಡಿಯಲ್ಲಿ 160 ಪ್ರತಿನಿಧಿಗಳು
  * ಸ್ವಯಂ ಸೇವಾ ಕಾರ್ಯದಲ್ಲಿ 300 ವಿದ್ಯಾರ್ಥಿಗಳು ಮತ್ತು 200 ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು
  * ಹೊರ ದೇಶಗಳಿಂದ ಬಂದವರಲ್ಲಿ  ಬಹುತೇಕರು ಕತಾರ್‌, ಮಲೇಷ್ಯಾ, ಯುಎಇ, ಒಮನ್‌, ಬಹರೇನ್‌ ಮತ್ತು ಅಮೆರಿಕದವರು.

ಕತಾರಿನಲ್ಲಿರುವ ಅನಿವಾಸಿ ಭಾರತೀಯರ ಸಮಸ್ಯೆಗಳು

 • ಎನ್‍ಆರ್‍ಐ ಆನ್‍ಲೈನ್ ವೋಟಿಂಗ್ ಪವರ್ ಇಲ್ಲದಿರುವುದು
 • ದೋಹಾನಿಂದ ಬೆಂಗಳೂರಿಗೆ ಒಂದೇ ಫ್ಲೈಟ್ ಇರುವುದು
 • ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತಿರುವವರಿಗೆ ಯಾವುದೇ ವೃತ್ತಿ ಭದ್ರತೆ ಇಲ್ಲ.

ಪರಿಹಾರಗಳು

 • ಎನ್‍ಆರ್‍ಐಗಳ ಸಮಸ್ಯೆಗಳನ್ನು ಪ್ರತಿನಿಧಿಸಲು ಪ್ರತಿನಿಧಿಯೊಬ್ಬರನ್ನು ಭಾರತೀಯ ರಾಯಭಾರ ಕಚೇರಿ ನೇಮಿಸಬೇಕು, ಅಲ್ಲಿಯೇ ನಾವು ಆಧಾರ್ ಕಾರ್ಡ್, ಐಡಿ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳು (ಡಾಕ್ಯುಮೆಂಟ್ಸ್) ಸಿಗುವಂತಾಗಬೇಕು.
 • ವಿಮಾನ ಶುಲ್ಕ ಕಡಿಮೆ ಮಾಡಬೇಕು. ವಿಮಾನ ಸಂಖ್ಯೆ ಹೆಚ್ಚಿಸಬೇಕು
 • ಶಿಕ್ಷಣ, ಪ್ರವಾಸೋದ್ಯಮ, ರಿಯಲ್ ಎಸ್ಟೇಟ್ ಹೀಗೆ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಬಲ್ಲ ವಿವಿಧ ಶಾಖೆ ಅಥವಾ ಸಂಸ್ಥೆಗಳನ್ನು ಸರ್ಕಾರ ಪ್ರಾರಂಭಿಸಿದರೆ ವಿದೇಶದಲ್ಲಿರುವವರಿಗೆ ಅನುಕೂಲವಾಗಲಿದೆ.

 

ಪ್ರವಾಸಿ ಕೌಶಲ್ ವಿಕಾಸ್ ಯೋಜನಾ

 • ಉದ್ಯೋಗ ಅರಸಿ ವಿದೇಶಕ್ಕೆ ವಲಸೆ ಹೋಗುವವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುವವರನ್ನು ಶಿಕ್ಷಿಸಲಾಗುವುದು. ಹೆಚ್ಚು ಶಿಕ್ಷಣವಿಲ್ಲದ, ವಿದೇಶಕ್ಕೆ ಕೆಲಸಕ್ಕೆ ಹೋಗಬಯಸುವ ಯುವಕರ ಕೌಶಲ್ಯ ವೃದ್ಧಿಗಾಗಿ ಪ್ರವಾಸಿ ಕೌಶಲ್‌ ವಿಕಾಸ್‌ಯೋಜನಾ ಜಾರಿಗೆ ತರಲಾಗುವುದು

ಭಾರತವಾಣಿ ನಿಘಂಟು: 16 ಸಾವಿರ ಡೌನ್‌ಲೋಡ್‌

 • ಕೇಂದ್ರ ಸರ್ಕಾರದ ‘ಭಾರತವಾಣಿ ಯೋಜನೆ’ಯು ರೂಪಿಸಿರುವ ಬಹುಭಾಷಾ ನಿಘಂಟಿನ ಅಪ್ಲಿಕೇಷನ್‌ ಡೌನ್‌ಲೋಡ್‌ 16 ಸಾವಿರ ದಾಟಿದೆ.
 • ಒಂದೇ ವೇದಿಕೆಯಲ್ಲಿ ಕನ್ನಡವೂ ಸೇರಿದಂತೆ 43 ವಿವಿಧ ನಿಘಂಟುಗಳಿದ್ದು, ಬಳಕೆದಾರಸ್ನೇಹಿ ಆಗಿರುವುದು ಪ್ರಸಿದ್ಧಿಗೆ ಕಾರಣವಾಗಿದೆ. ಅಲ್ಲದೆ, ಭಾರತವಾಣಿಯ ವೆಬ್‌ಸೈಟ್‌ನಲ್ಲಿ (english.bharatavani.in) ಈಗ 220 ವಿವಿಧ ನಿಘಂಟುಗಳು ಲಭ್ಯವಿವೆ.
 • 2016ರ ಮೇ 25ರಂದು ಬಿಡುಗಡೆಯಾಗಿರುವ ಭಾರತವಾಣಿ ಯೋಜನೆಯು ಮೊಬೈಲ್‌ ಅಪ್ಲಿಕೇಷನ್‌ ಹಾಗೂ ಕಂಪ್ಯೂಟರ್‌ ಆಧಾರಿತ ವೆಬ್‌ಸೈಟ್‌ ಈಗಾಗಲೇ ಸಾಕಷ್ಟು ಜನಮನ್ನಣೆ ಗಳಿಸಿದೆ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ (ಸಿಐಐಎಲ್‌) ಕಾರ್ಯನಿರ್ವಹಿಸುತ್ತಿರುವ ಈ ಯೋಜನೆಯು ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಪರಿಷತ್ತಿನ ಸಹಯೋಗದಲ್ಲಿ ಮತ್ತಷ್ಟು ನಿಘಂಟು ಸೇವೆ ನೀಡಲು ಮುಂದಾಗಿದೆ.
 • ಭಾರತದ ವಿವಿಧ ಭಾಷೆಗಳ ನಿಘಂಟುಗಳು ಭಾರತವಾಣಿ ಅಪ್ಲಿಕೇಷನ್‌ನಲ್ಲಿ ಒಂದೇ ಕಡೆ ಸಿಗುತ್ತಿವೆ. ಒಟ್ಟು 3 ಲಕ್ಷ ಪದಗಳಿಗೆ ಈಗಾಗಲೇ ಅರ್ಥ ಹಾಗೂ ವ್ಯಾಖ್ಯಾನ ಸಿಗುತ್ತಿದೆ. ಪ್ರತಿದಿನ ಈ ಅಪ್ಲಿಕೇಷನ್ ಪರಿಷ್ಕೃತವಾಗುತ್ತಿದ್ದು (ಅಪ್‌ಡೇಟ್‌) ಪದಗಳ ಸೇರ್ಪಡೆ ಹೆಚ್ಚುತ್ತಲೇ ಇರುವುದು, ಬಳಕೆದಾರರ ಮೆಚ್ಚುಗೆಗೆ ಕಾರಣವಾಗಿದೆ.
 • ಇದರ ಜತೆಗೆ, ಕನ್ನಡ ಸಾಹಿತ್ಯ ಪರಿಷತ್‌ ಒಂದು ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಳಿಸಿದ್ದ ನಿಘಂಟನ್ನು (ಕಸಾಪ ಸಂಕ್ಷಿಪ್ತ ನಿಘಂಟು) ಇದೀಗ ಭಾರತವಾಣಿಗೆ ಸೇರಿಸಲಾಗಿದೆ. ಯಾವುದೇ ಕನ್ನಡ ಪದವನ್ನು ಅಪ್ಲಿಕೇಷನ್‌ನಲ್ಲಿ ಟೈಪ್‌ ಮಾಡಿದರೆ, ಅದರ ಅರ್ಥವು ಕಸಾಪಕನ್ನಡ ಸಾಹಿತ್ಯ ಪರಿಷತ್‌ ನಿಘಂಟಿನಲ್ಲೂ ತೆರೆದುಕೊಳ್ಳುತ್ತಿದೆ.
 • ಕನ್ನಡ ಸಾಹಿತ್ಯ ಪರಿಷತ್‌ ಕನ್ನಡ–ಕನ್ನಡ ನಿಘಂಟು ಶೀಘ್ರವೇ ಭಾರತವಾಣಿಗೆ ಸೇರ್ಪಡೆಯಾಗುತ್ತಿದೆ.
 • ಈ ಬಗ್ಗೆ ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್‌ ಜತೆಗೆ ಒಡಂಬಡಿಕೆ ಆಗಿದೆ. ಒಟ್ಟು 8 ಸಂಪುಟಗಳಲ್ಲಿ ಈ ನಿಘಂಟಿದ್ದು, ಅವಷ್ಟನ್ನೂ ಡಿಜಿಟಲೀಕರಣ ಮಾಡಲಾಗುತ್ತಿದೆ. ಒಟ್ಟಾರೆಯಾಗಿ 20 ಲಕ್ಷ ಪದಗಳು ಈ ನಿಘಂಟಿನ ಮೂಲಕ ಭಾರತವಾಣಿ ಅಪ್ಲಿಕೇಷನ್‌ಗೆ ಸೇರಲಿವೆ. 20 ಸಾವಿರ ಪುಟಗಳ ಈ ಸಂಪುಟಗಳನ್ನು ಡಿಜಿಟಲೀಕರಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ.

ಒಂದೇ ಬಾರಿಗೆ 103 ಉಪಗ್ರಹ ಉಡಾವಣೆ: ಇಸ್ರೊ ಸಿದ್ಧತೆ

 • ಫೆಬ್ರುವರಿ ಮೊದಲ ವಾರದಲ್ಲಿ ಪಿಎಸ್ಎಲ್ವಿಸಿ37 ಉಡಾವಣಾ ವಾಹನದ  ಮೂಲಕ ಒಂದೇ ಬಾರಿ 103 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಿದ್ಧತೆ ಮಾಡಿಕೊಂಡಿದೆ.
 • ಉಡಾವಣೆಯಾಗಲಿರುವ ಉಪಗ್ರಹಗಳಲ್ಲಿ ಹೆಚ್ಚಿನವು ಅಮೆರಿಕ, ಜರ್ಮನಿ, ಇಸ್ರೇಲ್, ನೆದರ್ಲೆಂಡ್ಸ್, ಸ್ವಿಟ್ಜರ್ಲೆಂಡ್ಮತ್ತು ಇನ್ನಿತರ ದೇಶಗಳಿಗೆ ಸೇರಿದವು
 • ಈ ಯೋಜನೆಯಲ್ಲಿ ಭಾರತದ ಕಾರ್ಟೋಸ್ಯಾಟ್‌ 2ಡಿ, ಐಎನ್ಎಸ್1 ಮತ್ತು ಐಎನ್ಎಸ್1ಬಿ ಉಪಗ್ರಹಗಳು ಉಡಾವಣೆಯಾಗಲಿವೆ.
 • ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಈ ಯೋಜನೆಯು ಒಂದು ಮೈಲಿಗಲ್ಲಾಗಲಿದೆ. ಇಸ್ರೊ ಈವರೆಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಉಪಗ್ರಹಗಳ ಉಡಾವಣೆ ಮಾಡಿರಲಿಲ್ಲ. ಕಳೆದ ವರ್ಷ ಇಸ್ರೊ ಒಂದೇ ಬಾರಿಗೆ 22 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.
 • 2018 ರಲ್ಲಿ ಚಂದ್ರಯಾನ2 ಮತ್ತು ಸೂರ್ಯನನ್ನು ಅಧ್ಯಯನ ಮಾಡಲು 2019ರಲ್ಲಿ ಆದಿತ್ಯಾಎಲ್‌1 ಎಂಬ ಉಪಗ್ರಹಗಳ ಉಡಾವಣೆ ಇಸ್ರೊದ ಮುಂದಿನ ಯೋಜನೆಗಳಾಗಿವೆ.
 • ಭಾರತಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟ ಮಂಗಳಯಾನ (ಮಾರ್ಸ್‌ ಆರ್ಬಿಟರ್‌ ಮಿಷನ್‌– ಮಾಮ್‌)ದ ಯಶಸ್ಸಿನ ನಂತರ ಶುಕ್ರ ಮತ್ತು ಗುರು ಗ್ರಹಗಳಿಗೆ ಉಪಗ್ರಹ ಉಡಾವಣೆ ಮಾಡಲು ಇಸ್ರೊ  ಚಿಂತನೆ ನಡೆಸಿದೆ.

ಮುಖ್ಯ ನ್ಯಾಯಮೂರ್ತಿಯಾಗಿ ಖೇಹರ್‌ ಅಧಿಕಾರ ಸ್ವೀಕಾರ

 • ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಜಗದೀಶ್ಸಿಂಗ್ಖೇಹರ್ಅವರು ಭಾರತದ 44ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು.
 • 64 ವರ್ಷದ ಖೇಹರ್‌ ಅವರು ದೇಶದ ನ್ಯಾಯಾಂಗ ವ್ಯವಸ್ಥೆಯ ಸರ್ವೋಚ್ಚ ಹುದ್ದೆಯನ್ನು ಅಲಂಕರಿಸಿದ ಸಿಖ್ಸಮುದಾಯದ ಮೊದಲ ವ್ಯಕ್ತಿ.

ಧಾರವಾಡ ಐಐಟಿ ನಿರ್ದೇಶಕರಾಗಿ ಪಿ.ಶೇಷು

 • ಧಾರವಾಡದಲ್ಲಿ ಕಳೆದ ವರ್ಷ ಆರಂಭವಾಗಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯೂ ಸೇರಿದಂತೆ ರಾಷ್ಟ್ರದ ಐದು ಐಐಟಿಗಳ ನಿರ್ದೇಶಕರ ನೇಮಕಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಒಪ್ಪಿಗೆ ದೊರೆತಿದೆ.
 • ಧಾರವಾಡ ಐಐಟಿ ನಿರ್ದೇಶಕರನ್ನಾಗಿ ಪ್ರೊ.ಪಿ.ಶೇಷು ಅವರನ್ನು ನೇಮಕ ಮಾಡಲಾಗಿದೆ. ಇವರು ಮುಂಬೈನ ಐಐಟಿಯ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
 • ಧಾರವಾಡ, ತಿರುಪತಿ, ಪಾಲಕ್ಕಾಡ್‌, ಭಿಲಾಯಿದುರ್ಗ ಮತ್ತು ಗೋವಾದ ಐಐಟಿಗಳ ನೂತನ ನಿರ್ದೇಶಕರ ಪಟ್ಟಿಯನ್ನು ಸಿದ್ಧಪಡಿಸಿದ್ದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಾಷ್ಟ್ರಪತಿಗಳ  ಅಂಕಿತಕ್ಕೆ ಕಳುಹಿಸಿತ್ತು.

ಬ್ರಿಟಿಷರ ಹಿಂಸೆಯಿಂದ ನೇತಾಜಿ ಸಾವು!

 • ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರು ವಿಮಾನ ಅಪಘಾತದಲ್ಲಿ ಸತ್ತಿಲ್ಲ. ಅವರು ಹಿಂದಿನ ಸೋವಿಯತ್ ಒಕ್ಕೂಟದ ಜೈಲೊಂದರಲ್ಲಿ ಬ್ರಿಟಿಷರ ಹಿಂಸೆ ತಾಳಲಾರದೆ ಮೃತಪಟ್ಟರು’ ಎಂದು ಹೊಸ ಪುಸ್ತಕವೊಂದರಲ್ಲಿ ಹೇಳಲಾಗಿದೆ.download
 • ವಿಮಾನ ಅಪಘಾತದಲ್ಲಿ ಅವರು ಸತ್ತಿರಲಿಲ್ಲ. ಆದರೆ ಬೋಸ್‌ ಅವರು ಸೋವಿಯತ್ ಒಕ್ಕೂಟಕ್ಕೆ ಹೋಗಲು ಅನುಕೂಲ ಮಾಡಿಕೊಡಲು ಜಪಾನಿನ ಗುಪ್ತಚರ ಸಂಸ್ಥೆಗಳು ವಿಮಾನ ಅಪಘಾತದ ಸುದ್ದಿ ಹಬ್ಬಿಸಿದವು’ ಎಂದು ಕೃತಿಕಾರ ಮೇಜರ್ ಜನರಲ್ (ನಿವೃತ್ತ) ಜಿ.ಡಿ. ಬಕ್ಷಿ ಹೇಳಿಕೊಂಡಿದ್ದಾರೆ.
 • ಜಪಾನಿನಲ್ಲಿ ಅಂದಿನ ಸೋವಿಯತ್ ಒಕ್ಕೂಟದ ರಾಯಭಾರಿ ಆಗಿದ್ದ ಜೇಕಬ್ ಮಲಿಕ್ ಅವರ ಸಹಾಯ ಪಡೆದಿದ್ದ ಬೋಸ್‌, ಸೈಬೀರಿಯಾದಲ್ಲಿ ಆಜಾದ್ ಹಿಂದ್ ಸರ್ಕಾರ ರಾಯಭಾರ ಕಚೇರಿ ತೆರೆದಿದ್ದರು ಎಂದು ಬಕ್ಷಿ ಹೇಳಿದ್ದಾರೆ.
 • ನೇತಾಜಿ ಅವರು 1945ರ ಆಗಸ್ಟ್‌ 18ರಂದು ವಿಮಾನ ಅಪಘಾತದಲ್ಲಿ ಸತ್ತಿಲ್ಲ ಎಂಬುದಕ್ಕೆ ತಮ್ಮ ಬಳಿ ಅಲ್ಲಗಳೆಯಲು ಸಾಧ್ಯವಾಗದಂತಹ ಆಧಾರ ಇದೆ ಎಂದು ಬಕ್ಷಿ ಹೇಳಿದ್ದಾರೆ.
 • ‘ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಬಾಂಬರ್‌ಗಳ ದಾಳಿ ತಪ್ಪಿಸಿಕೊಳ್ಳಲು ಸೋವಿಯತ್ ಸರ್ಕಾರವು ತನ್ನ ನೆಲೆಯನ್ನು ಸೈಬೀರಿಯಾಕ್ಕೆ ಸ್ಥಳಾಂತರ ಮಾಡಿತ್ತು. ಜಪಾನ್‌ನಿಂದ ತಪ್ಪಿಸಿಕೊಂಡ ಬೋಸ್‌ ಅಲ್ಲಿಗೆ ಹೋಗಿದ್ದರು. ಸೈಬೀರಿಯಾದಿಂದ ಮೂರು ಬಾರಿ ರೇಡಿಯೊ ಪ್ರಸಾರ ಮಾಡಿದ್ದರು. ಬೋಸ್‌ ತಪ್ಪಿಸಿಕೊಂಡದ್ದು ಬ್ರಿಟಿಷರಿಗೆ ಆಗ ಗೊತ್ತಾಯಿತು’ ಎಂದು ಪುಸ್ತಕದಲ್ಲಿ ಹೇಳಲಾಗಿದೆ.
 • ‘ಇದಾದ ನಂತರ ಬ್ರಿಟಿಷರು, ಬೋಸ್‌ ಅವರ ವಿಚಾರಣೆ ನಡೆಸಲು ತಮಗೆ ಅವಕಾಶ ಕೊಡಬೇಕು ಎಂದು ಸೋವಿಯತ್‌ ಅಧಿಕಾರಿಗಳಲ್ಲಿ ಕೇಳಿದರು. ವಿಚಾರಣೆಯಲ್ಲಿ ಹಿಂಸೆ ತಾಳಲಾರದೆ ಬೋಸ್‌ ಮರಣಹೊಂದಿದರು’ ಎಂದು ಪುಸ್ತಕ ಹೇಳುತ್ತದೆ.

ಜಿಡಿಪಿ ಶೇ 7.1ರಷ್ಟಕ್ಕೆ ಕುಸಿತ

 • ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ1ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ.
 • 2015–16ರಲ್ಲಿ ಜಿಡಿಪಿ ಶೇ 7.6ರಷ್ಟಿತ್ತು.
 • ತಯಾರಿಕೆ, ಗಣಿಗಾರಿಕೆ ಮತ್ತು ಕಟ್ಟಡ ನಿರ್ಮಾಣ ರಂಗದಲ್ಲಿನ ಮಂದಗತಿಯ ಪ್ರಗತಿ ಕಾರಣಕ್ಕೆ ಜಿಡಿಪಿ ವೃದ್ಧಿ ದರ ಕಡಿಮೆಯಾಗಲಿರುವುದು ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ದೃಢಪಟ್ಟಿದೆ.
 • ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಒ) ಸಿದ್ಧಪಡಿಸಿರುವ ಈ ವೃದ್ಧಿ ದರದ ಅಂದಾಜು, ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾಡಿರುವ ಅಂದಾಜಿನ ಮಟ್ಟದಲ್ಲಿಯೇ ಇದೆ.
 • ಈ ಬಾರಿ ಮುಂಚಿತವಾಗಿಯೇ ಸಾಮಾನ್ಯ ಬಜೆಟ್‌ ಮಂಡಿಸಲಾಗುತ್ತಿರುವುದರಿಂದ ಪೂರ್ವಸಿದ್ಧತೆ ಮಾಡಿಕೊಳ್ಳಲು ನೆರವಾಗಲು ಒಂದು ತಿಂಗಳ ಮೊದಲೇ ಈ ವಿವರ ಪ್ರಕಟಿಸಲಾಗಿದೆ.
 • ನವೆಂಬರ್‌ ತಿಂಗಳ ಅಂಕಿಅಂಶಗಳೂ ಲಭ್ಯ ಇವೆ. ಆದರೆ, ನೋಟುಗಳ ರದ್ದತಿ ಕಾರಣಕ್ಕೆ ಈ ಅಂಕಿ ಅಂಶಗಳಲ್ಲಿ ತೀವ್ರ ಏರಿಳಿತ ಕಂಡು ಬಂದಿದೆ. ಹೀಗಾಗಿ  ಜಿಡಿಪಿ ಅಂದಾಜು ಮಾಡಲು ಈ ವಿವರಗಳನ್ನು ಪ್ರಜ್ಞಾಪೂರ್ವಕವಾಗಿ ಪರಿಗಣಿಸಿಲ್ಲ
 • 2016–17ನೇ ಸಾಲಿನ ರಾಷ್ಟ್ರೀಯ ವರಮಾನಕ್ಕೆ ಸಂಬಂಧಿಸಿದ ಈ ಮೊದಲ ಮುಂಗಡ ಅಂದಾಜಿನಲ್ಲಿ, ನೋಟು ರದ್ದತಿಯ ಪರಿಣಾಮ ಪ್ರತಿಫಲನಗೊಂಡಿಲ್ಲ. ಅಕ್ಟೋಬರ್‌ ತಿಂಗಳವರೆಗಿನ ವಿವಿಧ ವಲಯಗಳ ಅಂಕಿಅಂಶಗಳನ್ನಷ್ಟೇ ಆಧರಿಸಿದೆ.
 • ನೋಟು ರದ್ದತಿಯು ಸರಕು– ಸೇವೆಗಳ ಬಳಕೆ, ಉದ್ಯೋಗ ಮತ್ತಿತರ ವಲಯಗಳಲ್ಲಿ ಪ್ರತಿಕೂಲ ಪರಿಣಾಮ ಬೀರಿ ಆರ್ಥಿಕ ವೃದ್ಧಿ ದರವನ್ನು ಇನ್ನಷ್ಟು ತಗ್ಗಿಸುವ ಸಾಧ್ಯತೆ ಇದೆ.
 • 2011–12ನೇ ಸಾಲಿನ ಸ್ಥಿರ ಬೆಲೆ ಆಧರಿಸಿದ, 2016–17ನೇ ಸಾಲಿನ ಜಿಡಿಪಿಯು  121.55 ಲಕ್ಷ ಕೋಟಿಗಳಷ್ಟಾಗಲಿದೆ.
 • 2016ರ ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಿದ್ದ 2015-16ರ ಸಾಲಿನ ತಾತ್ಪೂರ್ತಿಕ ಅಂದಾಜು 50 ಲಕ್ಷ ಕೋಟಿಗಳಷ್ಟಿತ್ತು.

ನೋಟು ರದ್ದು ಪರಿಣಾಮ

 • ಉಪಭೋಗ ಮತ್ತು ಉತ್ಪಾದನೆ ಮೇಲೆ ನೋಟು ರದ್ದತಿ ಬೀರಿರುವ ಪ್ರಭಾವದಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ7ರಷ್ಟಾಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಸಂಶೋಧನಾ ವಿಭಾಗವು (ಎಸ್‌ಬಿಐ ರಿಸರ್ಚ್‌) ಅಂದಾಜಿಸಿದೆ.
  ನೋಟು ರದ್ದತಿ ಕಸರತ್ತಿನ ವಾಸ್ತವಿಕ ಅಂದಾಜು ಮಾಡುವುದು ಸದ್ಯಕ್ಕೆ ಸುಲಭವಾಗಿಲ್ಲ.
 • 3 ಮತ್ತು 4 ತ್ರೈಮಾಸಿಕಗಳಲ್ಲಿ ಖಂಡಿತವಾಗಿಯೂ ಶೇ 6ಕ್ಕಿಂತ ಕಡಿಮೆಯಾಗಲಿದೆ. ನಂತರದ ದಿನಗಳಲ್ಲಿ ಕ್ರಮೇಣ ಏರಿಕೆ ಕಾಣಲಿದೆ ಎಂದು ಅಭಿಪ್ರಾಯಪಡಲಾಗಿದೆ.

ಮಾಹಿತಿಯ ಗೌಪ್ಯತೆ :ಆಧಾರ್‌ಗಾಗಿ ಖಾಸಗಿಯವರಿಂದ ಮಾಹಿತಿ ಸಂಗ್ರಹ ಒಳ್ಳೆಯದಲ್ಲ: ‘ಸುಪ್ರೀಂ’

 • ಆಧಾರ್‌ ಸಂಖ್ಯೆ ನೀಡುವುದಕ್ಕಾಗಿ ಖಾಸಗಿ ಸಂಸ್ಥೆಗಳು ಮಾಹಿತಿ ಸಂಗ್ರಹಿಸುವುದು ಒಳ್ಳೆಯದಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
 • ಆಧಾರ್‌ ಯೋಜನೆ ಬಗೆಗಿನ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸಾಂವಿಧಾನಿಕ ಪೀಠವು ಈ ಹಿಂದೆಯೇ ಮಧ್ಯಂತರ ಆದೇಶ ನೀಡಿದೆ. ಅಂತಿಮ ತೀರ್ಪು ಬರುವವರೆಗೆ ಆಧಾರ್‌ ಸಂಖ್ಯೆಯನ್ನು ಕಡ್ಡಾಯ ಮಾಡುವಂತಿಲ್ಲ, ಅಲ್ಲಿವರೆಗೆ ಅದು ಸ್ವಯಂಪ್ರೇರಿತ ಮಾತ್ರ ಎಂದು ಮಧ್ಯಂತರ ಆದೇಶದಲ್ಲಿ ಸ್ಪಷ್ಟಪಡಿಸಿದೆ.