ಸರ್ಕಾರಿ ಬ್ಯಾಂಕ್‌ಗಳ ವಿಲೀನ

ಸರ್ಕಾರಿ ಬ್ಯಾಂಕ್‌ಗಳ ವಿಲೀನ

 • ದೇಶಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ತರಲು ಹೊರಟಿರುವ  ಸುಧಾರಣಾ ಕ್ರಮಗಳು ಹೊಸ ಚರ್ಚೆ ಹುಟ್ಟು ಹಾಕಿವೆ.

 • ದೊಡ್ಡ ಬ್ಯಾಂಕ್‌ಗಳಲ್ಲಿ ಸಣ್ಣ ಪುಟ್ಟ ಬ್ಯಾಂಕ್‌ಗಳ ವಿಲೀನ ಆಲೋಚನೆಯು ಭಾರತದ ಪಾಲಿಗೆ ಹೊಸದೇನಲ್ಲ. . ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ (ಎಸ್‌ಬಿಐ) ಐದು ಸಹವರ್ತಿ ಬ್ಯಾಂಕ್‌ಗಳ ವಿಲೀನ ವಿಚಾರ ಪ್ರಸ್ತಾಪವಾಗಿದೆ. ಈಗಾಗಲೇ ಎರಡು ಸಹವರ್ತಿ ಬ್ಯಾಂಕುಗಳನ್ನು ಎಸ್‌ಬಿಐ ವಿಲೀನ ಮಾಡಿಕೊಂಡಿದೆ. ಈಗ ಉಳಿದ 5 ಬ್ಯಾಂಕ್‌ಗಳ ವಿಲೀನ ಮತ್ತು ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಮಹಿಳಾ ಕೇಂದ್ರಿತ ಭಾರತೀಯ ಮಹಿಳಾ ಬ್ಯಾಂಕ್‌ನ ಸ್ವಾಧೀನಕ್ಕೂ ಮುಂದಾಗಿದೆ. ಸಹವರ್ತಿ ಬ್ಯಾಂಕ್‌ಗಳ ಆಡಳಿತ ಮಂಡಳಿಗಳೂ ವಿಲೀನ ಪರ ನಿರ್ಧಾರ ಕೈಗೊಂಡಿರುವುದು ಸರ್ಕಾರದ  ಉದ್ದೇಶ ಸುಲಭಗೊಳಿಸಲಿದೆ.
 • ಈ ಆಲೋಚನೆ ವಿರೋಧಿಸಿ ಅಖಿಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಸಂಘದ 50 ಸಾವಿರದಷ್ಟು ನೌಕರರು ಶುಕ್ರವಾರ ಮುಷ್ಕರವನ್ನೂ ಆಚರಿಸಿ, ತಮ್ಮ  ವಿರೋಧ ದಾಖಲಿಸಿದ್ದಾರೆ.
 • ಆದರೆ, ದೇಶಿ ಆರ್ಥಿಕತೆಗೆ ಈ ವಿಲೀನದಿಂದ ಆಗುವ ಪ್ರಯೋಜನಗಳೇನು ಎನ್ನುವುದು ಸ್ಪಷ್ಟವಾಗದಿರುವಾಗ ಈ ನಿಟ್ಟಿನಲ್ಲಿ ಅವಸರದ ತೀರ್ಮಾನಕ್ಕೆ ಬರುವುದು ಸರಿಯಲ್ಲ

ಪ್ರಯೋಜನಗಳೇನು?

 • ವಿಲೀನದ ನಂತರ ಲಾಭದಾಯಕವಲ್ಲದ ಬ್ಯಾಂಕ್‌ ಶಾಖೆಗಳನ್ನು ಮುಚ್ಚುವುದರಿಂದ ಕಾರ್ಯಾಚರಣೆ ವೆಚ್ಚ ಕಡಿಮೆಯಾಗಲಿದೆ.
 • ದೇಶಿ– ವಿದೇಶಿ ಬ್ಯಾಂಕ್‌ ಖಾತೆ ಮತ್ತು ನಗದನ್ನು (ಟ್ರೆಜರಿ) ಹೆಚ್ಚು ದಕ್ಷತೆಯಿಂದ ನಿರ್ವಹಿಸಲು ಸಾಧ್ಯವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
 • ಎಸ್‌ಬಿಐ, ಜಾಗತಿಕ ಮಟ್ಟದಲ್ಲಿಯೂ  ಅತಿದೊಡ್ಡ ಬ್ಯಾಂಕ್‌ ಆಗಿಯೂ ಬೆಳೆಯಲಿದೆ. ಅದರ ಹಣಕಾಸು ಸಾಮರ್ಥ್ಯವು ಸದ್ಯದ ₹ 28 ಲಕ್ಷ ಕೋಟಿಗಳಿಂದ ₹ 37 ಲಕ್ಷ ಕೋಟಿಗಳಿಗೆ ಏರಿಕೆಯಾಗಲಿದೆ.
 • ಕಾರ್ಪೊರೇಟ್‌ ಮತ್ತು ಮೂಲ ಸೌಕರ್ಯ ವಲಯಕ್ಕೆ ದೊಡ್ಡ ಮೊತ್ತದ ಸಾಲ ವಿತರಿಸಲು ಸಾಧ್ಯವಾಗಲಿದೆ.  ದೇಶಿ ಉದ್ದಿಮೆ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ತಮ್ಮ ವಹಿವಾಟು ವಿಸ್ತರಿಸುತ್ತಿರುವ ಸದ್ಯದ ಸಂದರ್ಭದಲ್ಲಿ ಇಂತಹ ದೊಡ್ಡ ಮೊತ್ತದ ಸಾಲದ ಅಗತ್ಯವೂ ತುಂಬ ಇದೆ.

ಸಮಸ್ಯೆಗಳೇನು?

 • ವಸೂಲಾಗದ ಸಾಲದ ಪ್ರಕರಣಗಳನ್ನು ನಿಭಾಯಿಸುವಲ್ಲಿ ಈಗ ಹರಿಸಬೇಕಾಗಿರುವ ಗಮನಕ್ಕೆ ಧಕ್ಕೆಯಾಗುತ್ತದೆ. ಉದ್ಯೋಗಿಗಳ ಮಧ್ಯೆ ಕೆಲಸದ  ಹಂಚಿಕೆ, ಹೊಸ ಸವಾಲು ಸೃಷ್ಟಿಸಲಿದೆ.
 • ನೌಕರರಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಡಲಿದೆ.
 • 2008ರಲ್ಲಿ ಅಮೆರಿಕದಲ್ಲಿ ಘಟಿಸಿದ ಹಣಕಾಸು ಬಿಕ್ಕಟ್ಟು, ಜಾಗತಿಕ ಅರ್ಥ ವ್ಯವಸ್ಥೆಗೇ ಬೆದರಿಕೆ ಒಡ್ಡಿತ್ತು. ಇದಕ್ಕೆ  ಅಲ್ಲಿನ ಅತಿ ದೊಡ್ಡ  ಬ್ಯಾಂಕಿಂಗ್‌ ವ್ಯವಸ್ಥೆ ಕುಸಿದಿದ್ದೇ ಕಾರಣವಾಗಿತ್ತು. ಎಸ್‌ಬಿಐ ಕೂಡ ಇಂತಹ ವೈಫಲ್ಯ ಕಾಣಬಹುದಾದ ಸಾಧ್ಯತೆ ಇರುವ ಅತಿ ದೊಡ್ಡ ಬ್ಯಾಂಕ್‌ ಆಗಿ ಬೆಳೆಯಬೇಕೆ ಎಂಬ ಬಗ್ಗೆ ಪ್ರಶ್ನೆಗಳಿವೆ.
 • ದೇಶಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಶೇ 70ರಷ್ಟು ಪಾಲು ಹೊಂದಿದ್ದರೂ, ಇದುವರೆಗೂ ಬ್ಯಾಂಕಿಂಗ್‌ ಸೌಲಭ್ಯವು ಎಲ್ಲರಿಗೂ ಸಮಾನವಾಗಿ ದೊರೆತಿಲ್ಲ. ಬ್ಯಾಂಕ್‌ ಶಾಖೆಗಳ ವಿಸ್ತರಣೆಗೆ ಈಗಲೂ ವಿಪುಲ ಅವಕಾಶಗಳಿವೆ. ಎಲ್ಲರಿಗೂ ಬ್ಯಾಂಕಿಂಗ್‌ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ (ಆರ್ಥಿಕ ಸೇರ್ಪಡೆ) ನಾವು ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾಗಿದೆ. ಇದೇ ಕಾರಣಕ್ಕೆ ಪೇಮೆಂಟ್ಸ್‌ ಬ್ಯಾಂಕ್‌ಗಳೂ ಅಸ್ತಿತ್ವಕ್ಕೆ ಬರುತ್ತಿರುವಾಗ ಬ್ಯಾಂಕ್‌ಗಳ ವಿಲೀನ ಚಿಂತನೆಗೆ ಕಾಲ ಇನ್ನೂ ಪಕ್ವವಾಗಿಲ್ಲ.
 • ದುರ್ಬಲ ಬ್ಯಾಂಕ್‌ಗಳನ್ನು ಬಲಿಷ್ಠ ಬ್ಯಾಂಕ್‌ನಲ್ಲಿ ವಿಲೀನಗೊಳಿಸುವುದರಿಂದ  ಆರ್ಥಿಕತೆಯಲ್ಲಿ ಹೊಸ ಸಮಸ್ಯೆ ಸೃಷ್ಟಿಯಾಗಲಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣ ಅಗಾಧವಾಗಿ ಬೆಳೆದು ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿರುವಾಗ, ಜನರ ಗಮನ ಬೇರೆಡೆ ಸೆಳೆಯಲು ವಿಲೀನ ಚಿಂತನೆ ತೇಲಿ ಬಿಡಲಾಗಿದೆ ಎನ್ನುವ ಆರೋಪಗಳಿಗೆ ಈ ಚಿಂತನೆ ಪಕ್ಕಾಗುವುದು ಬೇಡ.  ಇಂತಹ  ಪ್ರಕ್ರಿಯೆಯಲ್ಲಿ ಮೈಯೆಲ್ಲ ಕಣ್ಣಾಗಿರಬೇಕು’ ಎಂದು ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ನೀಡಿರುವ ಎಚ್ಚರಿಕೆಯನ್ನು ವಿಲೀನ ಪ್ರಕ್ರಿಯೆ ಬೆಂಬಲಿಸುವವರು ನಿರ್ಲಕ್ಷಿಸದಿದ್ದರೆ ಸಾಕು.

(ಸಂಗ್ರಹ ಮೂಲ : ಪ್ರಜಾವಾಣಿ)

Related Posts
After a dismal 2015 of mass refugee flows, war and catastrophe, leading U.N. agencies and their partners announced that they are seeking over $20 billion in funding next year — ...
READ MORE
Karnataka Current Affairs – KAS/KPSC Exams – 26th March 2018
ಚಿಪ್ಕೋ ಚಳುವಳಿಯ 45ನೇ ವಾಷಿಕೋತ್ಸವಕ್ಕೆ ಗೂಗಲ್​ ಡೂಡಲ್​ ಗೌರವ ಅರಣ್ಯ ನಾಶದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಿಪ್ಕೋ ಚಳುವಳಿಯ 45 ವಾರ್ಷಿಕೋತ್ಸವದ ಸಂದರ್ಭದಲ್ಲಿ ಗೂಗಲ್​ ಸಂಸ್ಥೆ ವಿಶಿಷ್ಟವಾದ ಡೂಡಲ್​ ಮೂಲಕ ಚಳುವಳಿಯನ್ನು ನೆನಪಿಸಿಕೊಂಡಿದೆ. ಅಣೆಕಟ್ಟು, ಕಾರ್ಖಾನೆಗಳು ಮತ್ತು ರಸ್ತೆಗಳಿಗಾಗಿ ದೊಡ್ಡ ...
READ MORE
11th – 12th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ನೌಕಾನೆಲೆ ಬಳಸಿಕೊಳ್ಳಲು ಒಪ್ಪಿಗೆ ರಕ್ಷಣೆ ಮತ್ತು ಪರಮಾಣು ಶಕ್ತಿ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಭಾರತ ಮತ್ತು ಫ್ರಾನ್ಸ್‌ 14 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ. ಯುದ್ಧನೌಕೆಗಳಿಗೆ ನೌಕಾನೆಲೆಗಳನ್ನು ಮುಕ್ತವಾಗಿ ಬಳಸಿಕೊಳ್ಳಲು ಎರಡೂ ರಾಷ್ಟ್ರಗಳು ಒಪ್ಪಿಗೆ ಸೂಚಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಸೇನಾ ಪ್ರಾಬಲ್ಯ ...
READ MORE
Govt. to hike housing subsidy for beedi workers & miners Ministry for Labour and Employment has proposed a nearly four-fold increase in the housing subsidy for beedi workers and miners employed ...
READ MORE
“3rd ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆಫ್‌ಲೈನ್‌ ಟೂಲ್‌ಗಳ ಅಭಿವೃದ್ಧಿ  ಸುದ್ಧಿಯಲ್ಲಿ ಏಕಿದೆ?ನಾಗರಿಕರ ಖಾಸಗಿತನದ ಉಲ್ಲಂಘನೆ, ಡೇಟಾ ಕದಿಯುವಿಕೆ ಮತ್ತು ಕಣ್ಗಾವಲು ಆತಂಕಗಳ ನಿವಾರಣೆ ಯತ್ನವಾಗಿ ಕೇಂದ್ರ ಸರಕಾರ ಇದೀಗ ಆಫ್‌ಲೈನ್ ಆಧಾರ್‌ ದೃಢೀಕರಣ ಟೂಲ್‌ಗಳ ಅಭಿವೃದ್ಧಿಗೆ ಮುಂದಾಗಿದೆ. ಕ್ಯೂಆರ್‌ ಕೋಡ್‌ಗಳು ಮತ್ತು ಬಯೋ ಮೆಟ್ರಿಕ್‌ ಅಥವಾ ಯುಐಡಿಎಐ ಸರ್ವರ್‌ಗಳ ಮಾಹಿತಿ ಹಂಚಿಕೊಳ್ಳದೆ ...
READ MORE
 As per Agriculture Census 2010-11, Total number of operational holdings were estimated as 138.35 million. The total operated area was 159.59 million hectare. The average size of the holding has been estimated as ...
READ MORE
Programmes to control Non communicable diseases National Programme for Prevention and Control of Cancer, Diabetes, Cardiovascular Diseases and Stroke (NPCDCS)- which is implemented for interventions up to District level under the National Health ...
READ MORE
Child Abduction Bill, 2016
Draft Civil Aspects of International Child Abduction Bill, 2016 Background There are several legal issues confronting the issue of transnational inter-spousal child removal. It is unfortunate that when a child is abducted ...
READ MORE
Bangalore IAS Academy - SBI-CLERK-2019-Notification
READ MORE
International solar alliance – All you need to know
ISA has been envisioned as a specialized platform and will contribute towards the common goal of increasing utilization and promotion of solar energy and solar applications in its member countries. The ...
READ MORE
UN agencies appeal for humanitarian funding
Karnataka Current Affairs – KAS/KPSC Exams – 26th
11th – 12th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
Revised Integrated Housing Scheme of 2007
“3rd ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Highlights of Agriculture Census 2010-11
Non communicable diseases
Child Abduction Bill, 2016
SBI CLERK 2019 – NOTIFICATION
International solar alliance – All you need to

Leave a Reply

Your email address will not be published. Required fields are marked *