Published on: December 3, 2021

ಕನ್ನಡ ನುಡಿ ಕಲಿಕೆ ಪಟ

ಕನ್ನಡ ನುಡಿ ಕಲಿಕೆ ಪಟ

ಸುದ್ಧಿಯಲ್ಲಿ ಏಕಿದೆ ? ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡೇತರರಿಗೆ ಮತ್ತು ಜಗತ್ತಿನಾದ್ಯಂತ ಎಲ್ಲಿ ಬೇಕಾದರೂ ಭಾಷೆಯನ್ನು ಕಲಿಯಲು ಬಯಸುವವರಿಗೆ ನೆರವಾಗಬಲ್ಲ ‘ಕನ್ನಡ ನುಡಿ ಕಲಿಕೆ ಪಟ’ ಎಂಬ 20 ನಿಮಿಷಗಳ ಮಾಡ್ಯೂಲ್‌ಗಳನ್ನು ಹೊರ ತಂದಿದೆ.

ಮುಖ್ಯಾಂಶಗಳು

  • ಲಿಪ್ಯಂತರಕ್ಕಾಗಿ ಇಂಗ್ಲಿಷ್ ಅನ್ನು ಬಳಸಿ ಭಾಷೆಯನ್ನು ಕಲಿಸಲಾಗುತ್ತದೆ. ಇದರಿಂದ ಜನರು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಉಚ್ಚರಿಸಬಹುದು
  • ಕೆಡಿಎಯು ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್, ಮೈಸೂರಿನ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ 30 ಮಾಡ್ಯೂಲ್‌ಗಳನ್ನು ಶೀಘ್ರದಲ್ಲೇ ಕೆಡಿಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
  • ಕನ್ನಡ ಭಾಷೆಯನ್ನು ಬೆಳೆಸುವ ಉದ್ದೇಶದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಶೇಷ ಅಭಿಯಾನಗಳನ್ನು ರೂಪಿಸಿ ನಡೆಸಿದೆ. ಕನ್ನಡದ ಮೇಲೆ ಆಸಕ್ತಿ ಇರುವ ಅನ್ಯಭಾಷಿಕರಿಗೆ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಉದ್ದೇಶದಿಂದ ಕನ್ನಡ ನುಡಿ ಕಲಿಕೆ ಪಾಠಗಳು ವಿಶೇಷ ಅಭಿಯಾನವನ್ನು ಪ್ರಾಧಿಕಾರ ರೂಪಿಸಿದೆ