“03 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಎಂಎಚ್​ 60 ಸೀಹಾಕ್​ ಹೆಲಿಕಾಪ್ಟರ್

ಸುದ್ಧಿಯಲ್ಲಿ ಏಕಿದೆ ?ನೌಕಾಪಡೆಯ ಬಲ ಹೆಚ್ಚಿಸಿಕೊಳ್ಳಲು ಭಾರತಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ‘ಬಹುಪಯೋಗಿ ಎಂಎಚ್​ 60 ರೋಮಿಯೋ ಸೀಹಾಕ್​ ‘ ಹೆಲಿಕಾಪ್ಟರ್​ಗಳ ಮಾರಾಟಕ್ಕೆ ಅಮೆರಿಕ ಸಮ್ಮತಿಸಿದೆ. 2.4 ಶತಕೋಟಿ ಅಮೆರಿಕನ್ ಡಾಲರ್​ ಮೊತ್ತದಲ್ಲಿ 24 ಸೀಹಾಕ್​ ಹೆಲಿಕಾಪ್ಟರ್​ಗಳನ್ನು ಅದು ಮಾರಾಟ ಮಾಡುತ್ತಿದೆ.

 • ಜಲಾಂತರ್ಗಾಮಿ ನಿರೋಧಕ ಹಂಟರ್​ ಹೆಲಿಕಾಪ್ಟರ್​ಗಳಾಗಿರುವ ರೋಮಿಯೋ ಸೀಹಾಕ್​ ಹೆಲಿಕಾಪ್ಟರ್​ಗಳ ಖರೀದಿಗೆ ಭಾರತ ಅಂದಾಜು 10 ವರ್ಷಗಳಿಗಿಂತ ಹೆಚ್ಚು ಸಮಯದಿಂದ ಪ್ರಯತ್ನಿಸುತ್ತಿತ್ತು.
 • ಶತ್ರುಗಳ ಯುದ್ಧನೌಕೆಗಳನ್ನು ಪುಡಿಗಟ್ಟಲು, ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಈ ಹೆಲಿಕಾಪ್ಟರ್​ಗಳು ಸಹಕರಿಸುತ್ತವೆ. ಇದುವರೆಗೂ ಈ ಕಾರ್ಯಕ್ಕಾಗಿ ಭಾರತ ಬ್ರಿಟಿಷ್​ ನಿರ್ಮಿತ ಸೀ ಕಿಂಗ್​ ಹೆಲಿಕಾಪ್ಟರ್​ಗಳನ್ನು ಬಳಸುತ್ತಿದೆ.
 • ಸಾಗರ ತಳದಲ್ಲಿರುವ ಸಬ್‌ ಮೆರೀನ್‌ ಗಳನ್ನು ಗುರುತಿಸಿ ಅವುಗಳನ್ನು ಹೊಡೆದುರುಳಿಸುವ ಸಾಮರ್ಥ್ಯ, ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ಹಾಗೂ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳುವ ಸಾಮರ್ಥ್ಯ ಈ ‘ರೋಮಿಯೋ’ ಹೆಲಿಕಾಫ್ಟರ್‌ ಗಳಿದೆ.
 • ಅಮೆರಿಕಾದ ಪ್ರತಿಷ್ಠಿತ ಶಸ್ತ್ರಾಸ್ತ್ರ ತಯಾರಿ ಮತ್ತು ಮಾರಾಟ ಸಂಸ್ಥೆ ಲಾಕ್‌ ಹೀಡ್‌ ಮಾರ್ಟಿನ್‌ ಸಂಸ್ಥೆ ಈ ಅತ್ಯಾಧುನಿಕ ಹೆಲಿಕಾಪ್ಟರ್ ಗಳನ್ನು ನಿರ್ಮಾಣ ಮಾಡುತ್ತಿದ್ದು, ಶೀಘ್ರ ಈ ಕಾಪ್ಟರ್ ಗಳು ಭಾರತದ ಬತ್ತಳಿಕೆ ಸೇರಲಿವೆ.
 • ಪ್ರಸ್ತುತ ಭಾರತೀಯ ನೌಕಾಪಡೆಯಲ್ಲಿರುವ ಇಂಗ್ಲೆಡ್‌ ನ ಹಳೆಯ ಮಾದರಿ ಹೆಲಿಕಾಫ್ಟರ್‌ ಗಳಿಗೆ ಬದಲಿಯಾಗಿ ಈ ಎಂಹೆಚ್ 60 ಹೆಲಿಕಾಪ್ಟರ್ ಗಳು ಕಾರ್ಯನಿರ್ವಹಿಸಲಿವೆ.
 • ಎಲ್ಲಾ ಮಾದರಿಯ ಯುದ್ಧನೌಕೆಗಳಿಂದ ಕಾರ್ಯಾಚರಿಸಬಹುದಾದ ಸಾಮರ್ಥ್ಯವನ್ನು ಹೊಂದಿರುವ ಈ ಹೆಲಿಕಾಫ್ಟರ್‌ ಗಳು ಸದ್ಯ ಲಭ್ಯವಿರುವ ನೌಕಾ ಹೆಲಿಕಾಫ್ಟರ್‌ ಗಳಲ್ಲೇ ಅತ್ಯಂತ ಆಧುನಿಕ ಮಾದರಿಯವುಗಳಾಗಿವೆ ಎಂದು ರಕ್ಷಣಾ ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
 • ಭವಿಷ್ಯದಲ್ಲಿ ಇವುಗಳ ಸೇರ್ಪಡೆಯಿಂದಾಗಿ ಭಾರತೀಯ ನೌಕಾದಳದ ಸಾಮರ್ಥ್ಯ ಇನ್ನೂ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಭಾರತದ ಜಲಪ್ರದೇಶವನ್ನು ಬಲಪಡಿಸಲು ಹಾಗೂ ಇತ್ತೀಚಿನ ದಿನಗಳಲ್ಲಿ ಜಲಮಾರ್ಗಗಳಿಂದಲೂ ದೇಶದ ಸಾರ್ವಭೌಮತೆಗೆ ಅಪಾಯ ಒದಗುವ ಸಾಧ್ಯತೆಗಳಿರುವುದರಿಂದ ನೌಕಾಪಡೆಗೆ ಈ ರಿತಿಯ ಸುಸಜ್ಜಿತ ಹೆಲಿಕಾಫ್ಟರ್‌ ಗಳ ಅಗತ್ಯ ಒದಗಿಬಂದಿತ್ತು.

ಖಾಸಗಿ ನೌಕರರಿಗೂ ಭರ್ಜರಿ ಪಿಂಚಣಿ

ಸುದ್ಧಿಯಲ್ಲಿ ಏಕಿದೆ ?ಖಾಸಗಿ ವಲಯದ ನೌಕರರಿಗೂ ದೊಡ್ಡ ಮೊತ್ತದ ಪಿಂಚಣಿ ಸಿಗುವಂತಾಗಬೇಕು ಎಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕಾರ್ವಿುಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್​ಒ) ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ವಜಾ ಮಾಡಿದೆ.

 • ಕೇರಳ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಈ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲವಾದ ಕಾರಣ ಇದನ್ನು ವಜಾ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಕೇರಳದ ಮನವಿಗೆ ಕಾರಣವೇನು ?

 • ಕಾರ್ವಿುಕರ ಪಿಂಚಣಿ ಮೊತ್ತ ಏರಿಕೆಯಾದರೆ ಇಪಿಎಫ್​ಒ ಮೂಲಧನ (ಕಾರ್ಪಸ್) ಕರಗುತ್ತದೆ. ಜತೆಗೆ ಕಾರ್ವಿುಕರಿಂದ ಸಂಗ್ರಹಿಸುವ ಹೆಚ್ಚುವರಿ ಚಂದಾ ಮೊತ್ತವು ನೌಕರರ ಪಿಂಚಣಿ ಯೋಜನೆಗೆೆ (ಇಪಿಎಸ್) ಸೇರುತ್ತದೆ ಹೊರತು ಭವಿಷ್ಯ ನಿಧಿ (ಪಿಎಫ್) ಖಾತೆಗೆ ಬರುವುದಿಲ್ಲ ಎಂಬ ಕಾರಣಕ್ಕೆ ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಇಪಿಎಫ್​ಒ ಮೇಲ್ಮನವಿ ಸಲ್ಲಿಸಿತ್ತು.

ಇಪಿಎಸ್ ಹೇಳುವುದೇನು?:

 • 1995ರ ಇಪಿಎಸ್ ಕಾಯ್ದೆ ಅನ್ವಯ ಉದ್ಯೋಗದಾತ ಸಂಸ್ಥೆಗಳು ಪಿಎಫ್​ಗೆ ನೀಡುವ ವಂತಿಗೆ ಮೊತ್ತದಲ್ಲಿ ಶೇ. 33ರಷ್ಟು ಹಣ (ಗರಿಷ್ಠ ವಾರ್ಷಿಕ ವಂತಿಗೆ -ಠಿ; 6,500 ಅಥವಾ ತಿಂಗಳಿಗೆ – ರೂ: 541) ಇಪಿಎಸ್ ಸೇರುತ್ತಿತ್ತು. 2014ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದ ಸರ್ಕಾರ, ಮಿತಿಯನ್ನು ವಾರ್ಷಿಕ -ರೂ: 15 ಸಾವಿರ ಅಥವಾ ಮಾಸಿಕ ರೂ: 1,250ಕ್ಕೆ ಹೆಚ್ಚಳ ಮಾಡಿತು.
 • ಒಂದು ವೇಳೆ ಕಾರ್ವಿುಕರು ತಮ್ಮ ಪೂರ್ಣ ವೇತನಕ್ಕೆ ಪಿಂಚಣಿ ಪಡೆಯಲು ಬಯಸಿದರೆ, ಆಗ ಅವರಿಗೆ ನೀಡುವ ಪಿಂಚಣಿ ಮೊತ್ತವನ್ನು ಸೇವಾವಧಿಯ ಕಡೆಯ ಐದು ವರ್ಷಗಳ ಸರಾಸರಿ ವೇತನಕ್ಕೆ ಅನುಗುಣವಾಗಿ ಲೆಕ್ಕಹಾಕಬೇಕು ಎಂಬ ಅಂಶವನ್ನೂ ಸರ್ಕಾರ ತಿದ್ದುಪಡಿಯಲ್ಲಿ ಸೇರಿಸಿತ್ತು.
 • ಇದರಿಂದ ಅನೇಕ ನೌಕರರಿಗೆ ಪಿಂಚಣಿ ಮೊತ್ತ ಕಡಿಮೆಯಾಯಿತು. ಅನೇಕರು ಕೋರ್ಟ್ ಮೆಟ್ಟಿಲೇರಿದರು. ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಐದು ವರ್ಷಗಳ ಸರಾಸರಿ ವೇತನ ಲೆಕ್ಕಹಾಕುವ ಪದ್ಧತಿ ರದ್ದು ಮಾಡಿತು. ಮೊದಲಿನಂತೆ ಕಾರ್ವಿುಕರ ಸೇವಾವಧಿಯ ಕಡೆಯ ಒಂದು ವರ್ಷದ ವೇತನ ಸರಾಸರಿ ಲೆಕ್ಕಾಚಾರದಂತೆ ಪಿಂಚಣಿ ನಿಗದಿ ಮಾಡಲು ಸೂಚಿಸಿತು.
 • 2016ರ ಅಕ್ಟೋಬರ್​ನಲ್ಲಿ ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್, ಪಿಎಫ್ ವಂತಿಗೆ ಪ್ರಮಾಣ ಪೂರ್ಣ ವೇತನಕ್ಕೆ (ವಿವಿಧ ಭತ್ಯೆಗಳನ್ನು ಸೇರಿಸಿ) ಅನುಗುಣವಾಗಿರಬೇಕೆ ಹೊರತು, ಮೂಲವೇತನದ ಲೆಕ್ಕಾಚಾರದಲ್ಲಿ ಅಲ್ಲ ಎಂದಿತು. ಇದರಿಂದ ನಿವೃತ್ತರಾದ ಕಾರ್ವಿುಕರಿಗೆ ಬಹಳ ಅನುಕೂಲವಾಯಿತು. ರೂ. 2,372 ಪಿಂಚಣಿ ಪಡೆಯುತ್ತಿದ್ದವರು, -ರೂ. 30,592 ಪಿಂಚಣಿ ಪಡೆಯುವಂತಾಯಿತು.

ಹೈಕೋರ್ಟ್ ತೀರ್ಪು ಏನು?

 • ಪಿಂಚಣಿ ಯೋಜನೆಗೆ ಕಡಿತ ಮಾಡುವ ವಾರ್ಷಿಕ ಮೊತ್ತವನ್ನು ಗರಿಷ್ಠ -ಠಿ; 15 ಸಾವಿರಕ್ಕೆ ಮಿತಿಗೊಳಿಸಬಾರದು. ಇದು ಕಾರ್ವಿುಕರ ಪೂರ್ಣ ವೇತನಕ್ಕೆ ಅನ್ವಯವಾಗಬೇಕು.
 • ಹೀಗಾಗಿ ನಿವೃತ್ತರಾದ ಕಾರ್ವಿುಕರಿಗೆ, ಅವರು ನಿವೃತ್ತಿಗೂ ಮುನ್ನ ಪಡೆಯುತ್ತಿದ್ದ ಸಂಪೂರ್ಣ ವೇತನ ಆಧರಿಸಿ ಪಿಂಚಣಿ ನೀಡುವಂತೆ ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು. ಇಂಥದ್ದೇ ತೀರ್ಪನ್ನು ರಾಜಸ್ಥಾನ, ಆಂಧ್ರಪ್ರದೇಶ, ಮದ್ರಾಸ್ ಹೈಕೋರ್ಟ್​ಗಳು ವಿವಿಧ ಪ್ರಕರಣಗಳಲ್ಲಿ ನೀಡಿವೆ.

ಕಾರ್ವಿುಕರಿಗೆ ಅನುಕೂಲ

 • 2014ರ ಸೆ.1ರ ನಂತರ ಉದ್ಯೋಗಕ್ಕೆ ಸೇರಿದ ನೌಕರರಿಗೂ ಹೊಸ ಪಿಂಚಣಿ ಅನ್ವಯವಾಗಲಿದೆ. ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹಾಗೂ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ, ಸಂಜೀವ್ ಖನ್ನಾ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ನೀಡಿರುವ ಈ ತೀರ್ಪಿನಿಂದ ಭವಿಷ್ಯ ನಿಧಿ ಚಂದಾದಾರರಾದ ವಿವಿಧ ಖಾಸಗಿ ವಲಯಗಳ ಲಕ್ಷಾಂತರ ಉದ್ಯೋಗಿಗಳಿಗೆ ಲಾಭವಾಗಲಿದೆ.

ಪ್ರನಾಳ ಶಿಶುವಿಗೆ ಕ್ಯಾನ್ಸರ್ ಅಪಾಯ ಹೆಚ್ಚು

ಸುದ್ಧಿಯಲ್ಲಿ ಏಕಿದೆ ?ಐವಿಎಫ್‌ ಸಹಾಯದಿಂದ ಹುಟ್ಟಿದ ಮಕ್ಕಳಿಗೆ ಕ್ಯಾನ್ಸರ್ ತಗುಲುವ ಅಪಾಯ ಹೆಚ್ಚು ಎಂದು ಅಧ್ಯಯನವೊಂದರಲ್ಲಿ ಬಹಿರಂಗಗೊಂಡಿದೆ.

ವರದಿಯಲ್ಲೇನಿದೆ ?

 • ಐವಿಎಫ್‌ನಿಂದ ಸಕ್ರಿಯಗೊಳಿಸಲ್ಪಟ್ಟ ಗರ್ಭಧಾರಣೆಗಳು ಆಗಾಗ್ಗೆ ಹೆಚ್ಚು ತೊಂದರೆಗಳನ್ನು ಹೊಂದಿರುತ್ತವೆ.
 • ಒಂದು ಮಗು ( ಪ್ರನಾಳ ಶಿಶು) ಹುಟ್ಟಿದರೂ ಸಹ ಮಗು 9 ತಿಂಗಳಿಗಿಂತ ಮೊದಲೇ ಹುಟ್ಟುವುದು ಹಾಗೂ ಕಡಿಮೆ ತೂಕದ ಮಗು ಹುಟ್ಟುವ ಪ್ರಮಾಣ ಹೆಚ್ಚಾಗಿದೆ.
 • 2,75,686 ಪ್ರನಾಳ ಶಿಶು ಹಾಗೂ 22,66,847 ನೈಸರ್ಗಿಕವಾಗಿ ಗರ್ಭ ಧರಿಸಿದ ಮಕ್ಕಳನ್ನು ಪರೀಕ್ಷೆಗೊಳಪಡಿಸಿದ ಅಮೆರಿಕದ ಮಿನ್ನೆಸೋಟಾ ವಿವಿಯ ವಿಜ್ಞಾನಿಗಳು ಯಾವ ಮಕ್ಕಳಲ್ಲಿ ಹೆಚ್ಚು ಕ್ಯಾನ್ಸರ್ ಸಂಭವಿಸುವ ಅಪಾಯ ಹೆಚ್ಚಿರುತ್ತದೆಂದು ಅಧ್ಯಯನ ಮಾಡಿದೆ.
 • ಜಾಮಾ ಪಿಡಿಯಾಟ್ರಿಕ್ಸ್‌ ಎಂಬ ಜರ್ನಲ್‌ನಲ್ಲಿ ಈ ವರದಿ ಪ್ರಕಟಿಸಿದ ವಿವಿ ಐವಿಎಫ್‌ ಮೂಲಕ ಹುಟ್ಟಿದ ಮಕ್ಕಳಿಗೆ ಶೇ. 17 ರಷ್ಟು ಕ್ಯಾನ್ಸರ್ ತಗುಲುವ ಅಪಾಯ ಹೆಚ್ಚು ಎಂದು ವರದಿ ಮಾಡಿದೆ.
 • ಆದರೆ, ಇತರೆ ನಿರ್ದಿಷ್ಟ ಕ್ಯಾನ್ಸರ್‌ಗಳ ಪ್ರಮಾಣದಲ್ಲಿ ಪ್ರನಾಳ ಶಿಶು ಹಾಗೂ ನೈಸರ್ಗಿಕವಾಗಿ ಗರ್ಭ ಧರಿಸಿದ ಮಕ್ಕಳಿಗೂ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಅಲ್ಲದೆ, ಐವಿಎಫ್‌ನ ನಿರ್ದಿಷ್ಟ ಚಿಕಿತ್ಸಾ ವಿಧಾನಗಳಿಗೂ ಬಾಲ್ಯದಲ್ಲಿ ಬರುವ ಕ್ಯಾನ್ಸರ್‌ಗೂ ಯಾವುದೇ ಸಂಬಂಧವಿದೆಯಾ ಎಂಬುದೂ ಸಹ ತಿಳಿದುಬಂದಿಲ್ಲ.

IVF ಎಂದರೇನು?

 • ಇನ್ ವಿಟ್ರೊ ಫರ್ಟಿಲೈಸೇಷನ್ ಎನ್ನುವುದು ಸಾಮಾನ್ಯವಾಗಿ ಐವಿಎಫ್ ಎಂದು ಕರೆಯಲ್ಪಡುವ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ಎಆರ್ಟಿ).
 • ಐವಿಎಫ್ ಎನ್ನುವುದು ಮಹಿಳಾ ಅಂಡಾಶಯದಿಂದ ಮೊಟ್ಟೆಯನ್ನು ತೆಗೆದು ಪ್ರಯೋಗಾಲಯದಲ್ಲಿ ಪುರುಷರ ವೀರ್ಯದೊಂದಿಗೆ ಸೇರಿಸಿ ಫಲವತ್ತಾಗಿಸಲ್ಪಡುತ್ತದೆ, ನಂತರ ಅದು ಮಹಿಳೆಯ ಬೆಳವಣಿಗೆಗೆ ಒಳಪಡುವ ಗರ್ಭಕೋಶದಲ್ಲಿ ಅಳವಡಿಸಲ್ಪಡುತ್ತದೆ.

ಐವಿಎಫ್ಗಾಗಿ ಭಾರತದಲ್ಲಿರುವ ಕಾನೂನು

ರೋಗಸಿ (ನಿಯಂತ್ರಣ) ಬಿಲ್, 2016 : ಮುಖ್ಯಾಂಶಗಳು

 • ಸರೊಗಸಿ ಒಂದು ವ್ಯವಸ್ಥೆಯಾಗಿದ್ದು, ಉದ್ದೇಶಿತ ದಂಪತಿಗಳು ತಮ್ಮ ಮಗುವನ್ನುಪಡೆಯಲು ಬಾಡಿಗೆ ತಾಯಿಯನ್ನು ನೇಮಿಸಿಕೊಳ್ಳುತ್ತಾರೆ .
 • ಉದ್ದೇಶಪೂರ್ವಕ ದಂಪತಿಗಳು ಭಾರತೀಯ ನಾಗರಿಕರಾಗಿರಬೇಕು ಮತ್ತು ಕನಿಷ್ಟ ಪಕ್ಷ ಐದು ವರ್ಷಗಳ ಕಾಲ ವಿವಾಹಿತರಾಗಿರಬೇಕು . ಬಾಡಿಗೆ ತಾಯಿ ಆ ದಂಪತಿಗಳಿಗೆ ನಿಕಟ ಸಂಬಂಧಿಯಾಗಬೇಕು ಮತ್ತು ಆ ತಾಯಿಯು ಮದುವೆಯಾಗಿ  ಸ್ವಂತ ಮಗುವನ್ನು ಹೊಂದಿರಬೇಕು .
 • ಸೂಕ್ತವಾದ ವೈದ್ಯಕೀಯ ಖರ್ಚುಗಳನ್ನು ಹೊರತುಪಡಿಸಿ ಯಾವುದೇ ಪಾವತಿಗಳನ್ನು ಬಾಡಿಗೆ ತಾಯಿಗೆ ನೀಡಲಾಗುವುದಿಲ್ಲ. ಬಾಡಿಗೆ ಮಗುವನ್ನು ಉದ್ದೇಶಿತ ಜೋಡಿಯ ಜೈವಿಕ ಮಗು ಎಂದು ಪರಿಗಣಿಸಲಾಗುತ್ತದೆ.
 • ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ದೇಶಿತ ದಂಪತಿಗಳಿಗೆ ಮತ್ತು ಅರ್ಹ ತಾಯಿಗೆ ಅರ್ಹತೆಯ ಪ್ರಮಾಣಪತ್ರಗಳನ್ನು ನೀಡಲು ಸೂಕ್ತ ಅಧಿಕಾರಿಗಳನ್ನು ನೇಮಿಸುತ್ತದೆ. ಈ ಅಧಿಕಾರಿಗಳು ಸರೊಗಸಿ ಕ್ಲಿನಿಕ್ಗಳನ್ನು ನಿಯಂತ್ರಿಸುತ್ತಾರೆ.
 • ಶುಲ್ಕಕ್ಕಾಗಿ ಸರೊಗಸಿಗೆ ಪಾಲನೆ, ಬಾಡಿಗೆ ತಾಯಿಯನ್ನು ಜಾಹೀರಾತು ಮಾಡಿ ಅಥವಾ ಬಳಸಿಕೊಳ್ಳುವುದು 10 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು 10 ಲಕ್ಷ ರೂದಂಡವನ್ನು ವಿಧಿಸಲಾಗುತ್ತದೆ.

ಪಾಕ್ ಎಫ್ಎಟಿಎಫ್ ಕಪ್ಪು ಪಟ್ಟಿಗೆ ಸೇರುವ ಸಾಧ್ಯತೆ

ಸುದ್ಧಿಯಲ್ಲಿ ಏಕಿದೆ ?ಭಾರತದ ಲಾಬಿಯಿಂದಾಗಿ ಪಾಕಿಸ್ತಾನ ಹಣಕಾಸು ಕಾರ್ಯ ಪಡೆ(ಎಫ್ಎಟಿಎಫ್) ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ ಎಂದು ಪಾಕ್‌ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಶಿ ಅವರು  ಆತಂಕ ವ್ಯಕ್ತಪಡಿಸಿದ್ದಾರೆ.

ಹಣಕಾಸು ಕಾರ್ಯಪಡೆಯ ಪಟ್ಟಿಗೆ ಸೇರಿದರೆ ಆಗುವ ಪರಿಣಾಮ

 • ಒಂದು ವೇಳೆ ಎಫ್ಎಟಿಎಫ್ ಕಪ್ಪು ಪಟ್ಟಿಗೆ ಸೇರಿದರೆ ಪಾಕಿಸ್ಥಾನ ವರ್ಷಕ್ಕೆ 10 ಶತಕೋಟಿ ಅಮೆರಿಕನ್‌ ಡಾಲರ್‌ ನಷ್ಟ ಅನುಭವಿಸಬೇಕಾದೀತು
 • ಪಾಕಿಸ್ಥಾನ ಎಫ್ಎಟಿಎಫ್ ಗ್ರೇ ಲಿಸ್ಟ್‌ ನಲ್ಲೇ ಉಳಿದುಕೊಂಡರೂ ವರ್ಷಕ್ಕೆ 10 ಶತಕೋಟಿ ಡಾಲರ್‌ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಖುರೇಶಿ ಎಚ್ಚರಿಸಿದ್ದಾರೆ.

ಹಿನ್ನಲೆ

 • ಕಳೆದ ವರ್ಷ ಜೂನ್ನಲ್ಲಿ ಪ್ಯಾರಿಸ್ ಎಫ್ಎಟಿಎಫ್ ಪಾಕಿಸ್ಥಾನವನ್ನು ಗ್ರೇ ಲಿಸ್ಟ್ ಗೆ ಹಾಕಿತ್ತು. ಹೀಗೆ ಮಾಡುವುದರ ಅರ್ಥವೇನೆಂದರೆ ಪಟ್ಟಿಗೆ ಸೇರಿಸಲಾಗಿರುವ ದೇಶದಲ್ಲಿನ ಕಾನೂನುಗಳು ಅಕ್ರಮ ಹಣ ಮತ್ತು ಭಯೋತ್ಪಾದನೆಗೆ ಹಣ ಒದಗಿಸುವ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವಲ್ಲಿ ದುರ್ಬಲವಾಗಿವೆ ಎಂಬುದೇ ಆಗಿದೆ.
 • ಪಾಕಿಸ್ಥಾನವನ್ನು ಗ್ರೇ ಲಿಸ್ಟ್‌ ನಿಂದ ಮುಕ್ತಗೊಳಿಸುವ ಸಲುವಾಗಿ ಇತ್ತೀಚೆಗೆ ಪಾಕಿಸ್ಥಾನಕ್ಕೆ ಭೇಟಿ ನೀಡಿದ್ದ ಎಫ್ಎಟಿಎಫ್ ನ ಪರಿಣತರ ತಂಡ, ಪಾಕ್‌ ಸರ್ಕಾರ ಹಣಕಾಸು ಅಕ್ರಮ ವರ್ಗಾವಣೆ (ಹವಾಲಾ) ಅಪರಾಧಗಳನ್ನು ತಡೆಯುವಲ್ಲಿ ಜಾಗತಿಕ ಮಟ್ಟಕ್ಕೆ ಅನುಗುಣವಾದ ಕ್ರಮಗಳನ್ನು ತೆಗೆದುಕೊಂಡಿದೆಯೇ ಎಂಬುದರ ಪರಾಮರ್ಶೆ ನಡೆಸಿತ್ತು. ಆದರೆ ಫ‌ಲಿತಾಂಶ ನಕಾರಾತ್ಮಕವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF)

 • ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ಎನ್ನುವುದು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸಮಗ್ರತೆಗೆ ಹಣದ ಲಾಂಡರಿಂಗ್, ಭಯೋತ್ಪಾದಕ ಹಣಕಾಸು ಮತ್ತು ಇತರ ಸಂಬಂಧಿತ ಬೆದರಿಕೆಗಳನ್ನು ಎದುರಿಸಲು ಕಾನೂನು, ನಿಯಂತ್ರಕ ಮತ್ತು ಕಾರ್ಯಾಚರಣೆಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಸ್ಥಾಪಿಸಲು ಸ್ಥಾಪಿಸಲಾದ ಅಂತರ-ಸರ್ಕಾರಿ ಸಂಸ್ಥೆಯಾಗಿದೆ.
 • ಇದನ್ನು 1989 ರಲ್ಲಿ ಪ್ಯಾರಿಸ್ನಲ್ಲಿ ನಡೆದ ಜಿ 7 ಶೃಂಗಸಭೆಯಿಂದ ರಚಿಸಲಾಯಿತು. FATF ನಿಜವಾಗಿಯೂ ಈ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಶಾಸನ ಮತ್ತು ನಿಯಂತ್ರಕ ಸುಧಾರಣೆಗಳನ್ನು ತರಲು ಸರ್ಕಾರಗಳೊಂದಿಗೆ ಕಾರ್ಯನಿರ್ವಹಿಸುವ ನೀತಿ-ರಚಿಸುವ ಅಂಗವಾಗಿದೆ.

ದಿವಾಳಿತನದ ಪ್ರಕ್ರಿಯೆ

ಸುದ್ಧಿಯಲ್ಲಿ ಏಕಿದೆ ?ದಿನಕ್ಕೆ 2 ಸಾವಿರ ಕೋಟಿ ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ಸಾಲಕ್ಕೆ  ದಿವಾಳಿತನದ ಪ್ರಕ್ರಿಯೆಗಳ ಆದೇಶ ಹೊರಡಿಸಬೇಕೆಂಬ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸುತ್ತೋಲೆ ಕಾನೂನು ಮತ್ತು ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಅದನ್ನು ತಳ್ಳಿ ಹಾಕಿದೆ.

 • ಆರ್ ಬಿಐ ಸುತ್ತೋಲೆ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ಕೈಗಾರಿಕೆ, ವಿದ್ಯುತ್, ರಸಗೊಬ್ಬರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಪ್ರತಿನಿಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ರೊಹಿಂಟನ್ ಫಾಲಿ ನಾರಿಮನ್ ಅವರನ್ನೊಳಗೊಂಡ ನ್ಯಾಯಪೀಠ, ಆರ್ ಬಿಐಯ ಸುತ್ತೋಲೆ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ಘೋಷಿಸಿದ್ದಾರೆ.

ಹಿನ್ನಲೆ

 • ಆರ್ ಬಿಐಯ ಸುತ್ತೋಲೆಯನ್ನು ಪ್ರಶ್ನಿಸಿ ಕಳೆದ ವರ್ಷ ಫೆಬ್ರವರಿ 12ರಂದು ಈ ವಲಯಗಳ ಮುಖ್ಯಸ್ಥರು ಕೋರ್ಟ್ ಮೊರೆ ಹೋಗಿದ್ದರು.
 • ಪೂರ್ವ-ದಿವಾಳಿತನ ಮತ್ತು ದಿವಾಳಿತನ ಸಂಹಿತೆ (IBC) ಹಂತದಲ್ಲಿ ವಾಣಿಜ್ಯ ಸಂಸ್ಥೆಯೊಂದು ದಿನಕ್ಕೆ 2 ಸಾವಿರ ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಮೊತ್ತದ ಸಾಲಕ್ಕೆ ಅವಧಿ ಮುಗಿದ ಒಂದು ದಿನದ ನಂತರವೂ ಕೂಡ ಬಡ್ಡಿ ಪಾವತಿಸದಿದ್ದರೆ ಅವುಗಳನ್ನು ವಸೂಲಿ ಮಾಡಲು ಆರ್ ಬಿಐ ಕ್ರಮ ತೆಗೆದುಕೊಳ್ಳಬಹುದೆಂದು ಸುತ್ತೋಲೆಯಲ್ಲಿ ಆದೇಶ ಹೊರಡಿಸಲಾಗಿತ್ತು.
 • ಸುತ್ತೋಲೆ ಅಸಾಂವಿಧಾನಿಕ ಎಂದು ನ್ಯಾ. ಆರ್.ಎಫ್.ನಾರಿಮನ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
 • ಬ್ಯಾಂಕ್​ಗಳ ಅನುತ್ಪಾದಕ ಆಸ್ತಿ (ಎನ್​ಪಿಎ) ಹೊರೆ ತಗ್ಗಿಸುವ ದೃಷ್ಟಿಯಿಂದ 2018ರ ಫೆ. 12ರಂದು ಆರ್​ಬಿಐ ಈ ಸುತ್ತೋಲೆ ಹೊರಡಿಸಿತ್ತು. -ರೂ. 2 ಸಾವಿರ ಕೋಟಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತದ ಸಾಲ ಮರುಪಾವತಿ ಆಗದ ಸಂದರ್ಭದಲ್ಲಿ ಅಂಥ ಖಾತೆಗಳ ಬಗ್ಗೆ 180 ದಿನದೊಳಗೆ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಯೋಜನೆಯನ್ನು ಬ್ಯಾಂಕ್​ಗಳು ಸಿದ್ಧಪಡಿಸಬಹುದು. ಈ ಅವಧಿಯೊಳಗೆ ಸಾಲ ಮರುಪಾವತಿಯಾಗದಿದ್ದರೆ ಕಂಪನಿಯನ್ನು ದಿವಾಳಿ ಎಂದು ಘೋಷಿಸುವಂತೆ ಕೋರಿ ಕೋರ್ಟ್​ಗೆ ಮೊರೆ ಹೋಗಬಹುದು.
 • ಈ 180 ದಿನದ ಗಡುವನ್ನು ಮೀರಿ ಒಂದು ದಿನ ಸಾಲ ಉಳಿಸಿಕೊಂಡಿದ್ದರೂ ಕಂಪನಿಗಳ ವಿರುದ್ಧ ದಿವಾಳಿತನ ಕಾಯ್ದೆ ಅನ್ವಯ ಕ್ರಮ ಜರುಗಿಸಬಹುದು ಎಂದು ಆರ್​ಬಿಐ ಸುತ್ತೋಲೆ ಸೂಚಿಸಿತ್ತು.

 

 

 

 

 

Related Posts
“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳ್ಳಂದೂರು ಕೆರೆ ಸುದ್ಧಿಯಲ್ಲಿ ಏಕಿದೆ ? ನೊರೆಕಾಟದ ಮೂಲಕ ಸದಾ ಸುದ್ದಿಯಾಗುವ ಬೆಳ್ಳಂದೂರು ಕೆರೆಯಲ್ಲಿ ನೀರಿನ ಪ್ರಮಾಣವೇ ಕಡಿಮೆ ಆಗುತ್ತಿದ್ದು, ಕೆರೆ ಬತ್ತುವ ಆತಂಕ ಸ್ಥಳೀಯರಲ್ಲಿ ತಲೆದೋರಿದೆ. ಆದರೆ, ಈ ಬಗ್ಗೆ ತಜ್ಞರಿಂದ ಹಲವು ವಿಶ್ಲೇಷಣೆಗಳು ವ್ಯಕ್ತವಾಗಿವೆ. ಕೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ...
READ MORE
“10 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ರಾಜ್ಯದಲ್ಲಿ ತಂಬಾಕು ಮಾರಾಟ ಕುಸಿತ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ತಂಬಾಕು ಮಾರುಕಟ್ಟೆಯಲ್ಲಿ ಒಟ್ಟು 8.5 ಕೋಟಿ ಕೆ.ಜಿ ತಂಬಾಕು ಮಾರಾಟವಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ 2.1 ಕೋಟಿ ಕೆ.ಜಿ ತಂಬಾಕು ಮಾರಾಟ ಕುಸಿತ ಕಂಡಿದೆ. ಒಟ್ಟು 11 ತಂಬಾಕು ಹರಾಜು ಮಾರುಕಟ್ಟೆಗಳಿದ್ದು , ...
READ MORE
“15 ಏಪ್ರಿಲ್ 2019 ಕನ್ನಡದ ಪ್ರಚಲಿತ ವಿದ್ಯಮಾನಗಳು”
ಚುನಾವಣೆ ಕ್ಷಿಪ್ರ ಪಡೆಗಳ ಸಮನ್ವಯಕ್ಕೆ ವಿಶೇಷಾಧಿಕಾರಿ ನೇಮಕ ಸುದ್ಧಿಯಲ್ಲಿ ಏಕಿದೆ? ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಿರ ಕಣ್ಗಾವಲು ತಂಡದ (ಎಸ್‌ಎಸ್‌ಟಿ) ಕ್ಷಿಪ್ರ ಕಾರ್ಯ ಪಡೆ (ಫ್ಲೈಯಿಂಗ್ ಸ್ಕ್ವಾಡ್‌)ಯ ಚಟುವಟಿಕೆಗಳ ಉಸ್ತುವಾರಿಗಾಗಿ ಬಿಬಿಎಂಪಿ ವಿಶೇಷಾಧಿಕಾರಿಯನ್ನು ನೇಮಿಸಿದೆ. ವಿಶೇಷ ಅಧಿಕಾರಿ (ಜಾರಿ) ಯಾಗಿ ಸರ್ವೇ, ಸೆಟಲ್‌ಮೆಂಟ್‌ ಮತ್ತು ...
READ MORE
“21 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆಗೆ ಯೋಜನೆ ಸುದ್ಧಿಯಲ್ಲಿ ಏಕಿದೆ ? ಪದೇಪದೆ ಕಾಡುವ ಚಂಡಮಾರುತ ಸುಳಿಯಿಂದ ಪಾರಾಗಲು ಕೇಂದ್ರ ಸರ್ಕಾರದ ನೇತೃತ್ವದಲ್ಲಿ, ಕರ್ನಾಟಕ ಸೇರಿದಂತೆ ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆ ಯೋಜನೆ ಕೈಗೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಈ ಯೋಜನೆ ಶೇ.75-25 ಕೇಂದ್ರ-ರಾಜ್ಯ ಸಹಕಾರದಲ್ಲಿ ...
READ MORE
“20 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಚುನಾವಣಾ ಆ್ಯಪ್ ಸುದ್ಧಿಯಲ್ಲಿ ಏಕಿದೆ ?ಮತಗಟ್ಟೆ, ಕ್ಷೇತ್ರದ ವಿವರ, ಮತಗಟ್ಟೆ ಇರುವ ಸ್ಥಳ, ಪಥ ಸೂಚಕ, ತಾವಿರುವ ಪ್ರದೇಶದಿಂದ ಮತಗಟ್ಟೆ ದೂರ ಸೇರಿದಂತೆ ವಿವಿಧ ಮಾಹಿತಿಗಳನ್ನು ಪಡೆಯಲು ಆಪ್​ನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ. ‘ಚುನಾವಣಾ’ ಹೆಸರಿನ ಈ ಆ್ಯಪ್ ಅನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ...
READ MORE
“25 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ರಾಷ್ಟ್ರೀಯ ಯುದ್ಧ ಸ್ಮಾರಕ ಸಿದ್ಧ ಸುದ್ಧಿಯಲ್ಲಿ ಏಕಿದೆ ?ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರನ್ನು ಗೌರವದಿಂದ ಸ್ಮರಿಸುವುದು ನಮ್ಮ ಕರ್ತವ್ಯ. ಹೀಗಾಗಿ ಇಂಡಿಯಾ ಗೇಟ್ ಬಳಿ ನಿರ್ವಿುಸಲಾಗಿರುವ ಸ್ಮಾರಕವನ್ನು ದೇಶಕ್ಕೆ ಅರ್ಪಿಸಲಾಗುವುದು. ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಬೇಕು ಎಂದು ದಶಕಗಳಿಂದ ಒತ್ತಾಯಿಸಲಾಗುತ್ತಿತ್ತು. ಎನ್​ಡಿಎ ಸರ್ಕಾರ ಅಧಿಕಾರಕ್ಕೆ ...
READ MORE
“18 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
ತಲಕಾವೇರಿಯಲ್ಲಿ ತೀರ್ಥೋದ್ಭವ ಸುದ್ಧಿಯಲ್ಲಿ ಏಕಿದೆ ?ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಕಂಡು ಭಕ್ತರು ಪುಳಕಿತರಾದರು. ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಉಕ್ಕುವುದನ್ನು ಕಂಡು ಹಾಗೂ ಪುರೋಹಿತರು ತೀರ್ಥವನ್ನು ಚೆಲ್ಲಿದ ನಂತರ ಭಕ್ತರು ಸಂತೃಪ್ತಗೊಂಡರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಈ ಅಭೂತಪೂರ್ವ ...
READ MORE
“18 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಸಾಕ್ಷಿಗಳ ರಕ್ಷಣಾ ಯೋಜನೆ’ ಜಾರಿಗೆ ಸುಪ್ರೀಂ ಆದೇಶ ಸುದ್ಧಿಯಲ್ಲಿ ಏಕಿದೆ ?ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯ ಸುಧಾರಣೆಗೆ ಒಂದೂವರೆ ದಶಕದ ಹಿಂದೆ ಕರ್ನಾಟಕದ ನ್ಯಾ.ವಿ.ಎಸ್‌.ಮಳೀಮಠ್‌ ಸಲ್ಲಿಸಿದ್ದ ವರದಿಯ ಪ್ರಮುಖ ಅಂಶವಾದ 'ಸಾಕ್ಷಿಗಳ ರಕ್ಷಣಾ ಯೋಜನೆ' ದೇಶಾದ್ಯಂತ ಜಾರಿಯಾಗುತ್ತಿದೆ. ಸುಪ್ರೀಂಕೋರ್ಟ್‌ ಇತ್ತೀಚೆಗೆ ಸಾಕ್ಷಿಗಳ ರಕ್ಷಣಾ ಯೋಜನೆ ಕುರಿತು ...
READ MORE
” 01 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಪ್ಯಾನಿಕ್ ಬಟನ್ ಕಡ್ಡಾಯ ಸುದ್ಧಿಯಲ್ಲಿ ಏಕಿದೆ ?ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ನೋಂದಣಿ ಆಗುವ ಎಲ್ಲ ಪಬ್ಲಿಕ್/ ಪ್ಯಾಸೆಂಜರ್ ವಾಹನ ಹಾಗೂ ರಾಷ್ಟ್ರೀಯ ರಹದಾರಿ ಹೊಂದಿರುವ ವಾಣಿಜ್ಯ ವಾಹನಗಳಲ್ಲಿ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಯುನಿಟ್ (ವಿಎಲ್​ಟಿ)ಮತ್ತು ತುರ್ತು ಸಂದೇಶ(ಪ್ಯಾನಿಕ್)ಬಟನ್ ಅಳವಡಿಕೆ ಕಡ್ಡಾಯವಾಲಿಗದೆ. ಹಿನ್ನಲೆ ನಿರ್ಭಯಾ ಪ್ರಕರಣ ...
READ MORE
“01 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
Aids: ಎಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಎಚ್‌ಐವಿ/ಏಡ್ಸ್‌ ಸೋಂಕಿತರ ಸಂಖ್ಯೆ ಶೇ. 25ರಷ್ಟು ಕುಸಿದಿದ್ದು, ಆ ಮೂಲಕ ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ 8 ರಿಂದ 9ನೇ ಸ್ಥಾನಕ್ಕೆ ಇಳಿದಿದೆ. ರಾಜ್ಯದಲ್ಲಿ ಶೇ.38 ಲಕ್ಷ ಎಚ್‌ಐವಿ ಸೋಂಕಿತರಿದ್ದಾರೆ. ...
READ MORE
“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“10 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“15 ಏಪ್ರಿಲ್ 2019 ಕನ್ನಡದ ಪ್ರಚಲಿತ ವಿದ್ಯಮಾನಗಳು”
“21 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“20 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“25 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“18 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
“18 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 01 ಜನವರಿ 2019 ರ ಕನ್ನಡ ಪ್ರಚಲಿತ
“01 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *