“05 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಮತದಾನ ಪದ್ಧತಿ ಹುಟ್ಟಿದ್ದೇ ಮೈಸೂರಲ್ಲಿ !

ಸುದ್ಧಿಯಲ್ಲಿ ಏಕಿದೆ ?ದೇಶದಲ್ಲೇ ಮೊದಲಿಗೆ ಮತದಾನ ವ್ಯವಸ್ಥೆ ಜಾರಿಯಾಗಿದ್ದು ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದ 1951ರಲ್ಲಿ ಅಲ್ಲ. ಅದಕ್ಕೂ 60 ವರ್ಷಗಳ ಮೊದಲೇ ಮೈಸೂರಿನಲ್ಲಿ ಮತದಾನ ನಡೆದಿತ್ತು ! ಆದರೆ ಆಗ ನಡೆದ ಮತದಾನ, ಅಲ್ಲಿನ ಮತದಾರರ ವಿವರ ಮಾತ್ರ ಸ್ವಾರಸ್ಯಕರ.

 • ಮೈಸೂರಿನ ಪೌರಸಭೆ(ಪುರಸಭೆ)ಗೆ ಮೊದಲ ಬಾರಿ 1892ರಲ್ಲಿ ಚುನಾವಣೆ ನಡೆದಾಗ ಮತದಾರರ ಸಂಖ್ಯೆ 250ಮಾತ್ರ.
 • ಮೈಸೂರು ಮಹಾರಾಜರು, ಮಹಾರಾಜ ಕಾಲೇಜು ಪ್ರಾಂಶುಪಾಲರು, ಮರಿಮಲ್ಲಪ್ಪ ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ತೆರಿಗೆದಾರರ ಸಂಘದ ಅಧ್ಯಕ್ಷ ರು, ಅರಮನೆಯ ನಿವಾಸಿಗಳು, ಅಧಿಕಾರಿಗಳು, ಬ್ರಿಟಿಷರು ನೇಮಿಸಿದ್ದ ಜಿಲ್ಲಾಧಿಕಾರಿ ಹಾಗೂ ಆಯ್ದ ಗಣ್ಯರಷ್ಟೇ ಮತದಾನದ ಹಕ್ಕು ಹೊಂದಿದ್ದರು. ಮೈಸೂರು ರಾಜ್ಯಪತ್ರಗಳು ಹಾಗೂ ಕರ್ನಾಟಕ ಗೆಜೆಟಿಯರ್‌ಗಳಲ್ಲಿ ಇಂಥ ಅಪರೂಪದ ಮಾಹಿತಿ ಲಭ್ಯವಿದೆ.
 • ಮೈಸೂರು ಇತಿಹಾಸ ಸಾರುವ ಗೆಜೆಟಿಯರ್‌ ಪ್ರಕಾರ, ನಗರಗಳಿಗೆ ಮೂಲ ಸೌಕರ್ಯ ಹಾಗೂ ನಾಗರಿಕ ಸೇವೆ ಕಲ್ಪಿಸಲು ಎಲ್ಲ ಸಂಸ್ಥಾನಗಳು ಪೌರಸಭೆಗಳನ್ನು ಸ್ಥಾಪಿಸಬೇಕೆಂದು ಬ್ರಿಟಿಷ್‌ ಆಡಳಿತ 1861ರಲ್ಲಿ ಆದೇಶ ಹೊರಡಿಸಿತ್ತು. ಪರಿಣಾಮ, ಮೈಸೂರಿನಲ್ಲಿ 1862ರ ಜುಲೈ 8ರಂದು ಪೌರಸಭೆ ಅಸ್ತಿತ್ವಕ್ಕೆ ಬಂತು. ಅದಾಗಿ 20 ವರ್ಷಗಳ ಬಳಿಕ ಆಡಳಿತ ನಡೆಸುತ್ತಿದ್ದ ಮಹಾರಾಜ ಚಾಮರಾಜ ಒಡೆಯರ್‌ಗೆ ಹೊಸ ಯೋಚನೆ ಬಂತು. ಅವರು ಪೌರಸಭೆಗೆ ತಾವೇ ನೇಮಕ ಮಾಡುವ ಬದಲು, ಗಣ್ಯರ ಮೂಲಕ ಆಯ್ಕೆ ಮಾಡಿಸಿದರೆ ಹೇಗೆ ಎಂದು ಚಿಂತಿಸಿದರು. ಅದೇ ಮತದಾನ ಪದ್ಧತಿ ಚಿಂತನೆಯ ಹುಟ್ಟಿನ ಕ್ಷ ಣ!
 • 1892ರಲ್ಲಿ ಪೌರಸಭೆ ಆಡಳಿತದ ಅನುಕೂಲದ ದೃಷ್ಟಿಯಿಂದ ಮೈಸೂರು ನಗರವನ್ನು ಲಷ್ಕರ್‌, ಮಂಡಿ, ದೇವರಾಜ, ಚಾಮರಾಜ, ಕೃಷ್ಣರಾಜ, ಪೋರ್ಟ್‌ ಮತ್ತು ನಜರ್‌ಬಾದ್‌ ಎಂದು ಏಳು ಮೊಹಲ್ಲಾಗಳನ್ನಾಗಿ ವಿಂಗಡಿಸಿ, ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಮೊದಲಿಗೆ ಚುನಾವಣೆ ನಡೆಸಿದರು. ಹೀಗೆ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆಯೊಂದು ರೂಪುಗೊಂಡಿತು.
 • 1906 ರಲ್ಲಿ ಮೈಸೂರು ಮುನ್ಸಿಪಲ್‌ ರೆಗ್ಯುಲೇಷನ್‌‘ಎಂಬ ಕರಡಿನೊಂದಿಗೆ ಪೌರಸಭೆಗೆ ಶಾಸನಬದ್ಧ ಅಧಿಕಾರ ದೊರೆಯಿತು. ಮೊದಲ ಬಾರಿಗೆ ಮತದಾನಕ್ಕೂ ಅರ್ಹತೆ ನಿಗದಿಯಾಗಿತು. ಮೂರು ವರ್ಷ ಅವಧಿಯ ಪೌರಸಭೆಗೆ 30 ಮಂದಿ ಪುರಪಿತೃಗಳು ಬಂದರು.
 • ಈ ಪೈಕಿ 20ಜನರ ಆಯ್ಕೆಗೆ ಕೆಲವರಿಗಷ್ಟೇ ಅರ್ಹತೆ ಇತ್ತು. ನಗರದ ತೆರಿಗೆದಾರರು, ವಕೀಲರು, ಸರಕಾರಿ ನೌಕರರು, ಪಟೇಲರು, ಶ್ಯಾನುಭೋಗರು, ಪದವೀಧರರು ಮಾತ್ರ ಮತದಾನದ ಹಕ್ಕು ಹೊಂದಿದ್ದರು. ಉಳಿದ 10 ಜನರನ್ನು ಮೀಸಲು ನೀತಿ ಪ್ರಕಾರ ನಾಮ ನಿರ್ದೇಶನ ಮಾಡುವ ವ್ಯವಸ್ಥೆ ಜಾರಿಗೆ ಬಂತು. ಹಾಗಾಗಿ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರು ಕೂಡ ಚುನಾಯಿತ ಪ್ರತಿನಿಧಿಗಳಾದರು.

ಪಾರಂಪರಿಕ ಸಂಪತ್ತು ರಕ್ಷಣೆಗೆ ‘ಐಡಲ್‌ ವಿಂಗ್‌’

ಸುದ್ಧಿಯಲ್ಲಿ ಏಕಿದೆ ?ರಾಜ್ಯದ ಐತಿಹಾಸಿಕ ಮತ್ತು ಪಾರಂಪರಿಕ ಸಂಪತ್ತನ್ನು ಳಿಸುವ ಸಲುವಾಗಿ ಸಿಐಡಿಯಲ್ಲಿ ‘ಐಡಲ್‌ ವಿಂಗ್‌’ ರಚಿಸಿ ಎಂದು ಪುರಾತತ್ವ , ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ರಾಜ್ಯ ಗೃಹ ಇಲಾಖೆಗೆ ಪತ್ರ ಬರೆದಿದೆ.

ಐಡಲ್ ವಿಂಗ್ನ ರಚನೆಯ ಅಗತ್ಯವೇನು ?

 • ಕಳೆದ ಆರು ವರ್ಷಗಳಲ್ಲಿ ರಾಜ್ಯದಲ್ಲಿ ಬೆಲೆಕಟ್ಟಲಾಗದ 30 ಸಂರಕ್ಷಿತ ವಿಗ್ರಹಗಳ ಕಳ್ಳತನ ನಡೆದಿವೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಪೊಲೀಸರು ‘ಸಿ’ ರಿಪೋರ್ಟ್‌ ಹಾಕಿದ್ದಾರೆ. ಕಳುವಾದ ವಿಗ್ರಹಗಳ ಮೌಲ್ಯ ಮತ್ತು ಮಹತ್ವವನ್ನು ಪೊಲೀಸರು ತಿಳಿದುಕೊಳ್ಳುವುದಿರಲಿ , ತನಿಖೆಯಲ್ಲೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ವಿಗ್ರಹ ತಾನೇ ಹೋದರೆ ಹೋಗಲಿ ಎನ್ನುವ ಧೋರಣೆಯಿಂದ ಬಂದ ದೂರುಗಳಿಗೆಲ್ಲಾ ‘ಸಿ’ ರಿಪೋರ್ಟ್‌ ಹಾಕಿ ಮುಗಿಸುತ್ತಿದ್ದಾರೆ ಆರೋಪವಿದೆ. ಆದ್ದರಿಂದ ‘ಐಡಲ್‌ ವಿಂಗ್‌’ ರಚಿಸುವಂತೆ ಒತ್ತಾಯಿಸಲಾಗಿದೆ.

ಐಡಲ್‌ ವಿಂಗ್‌ ಏಕೆ ?

 • ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹತ್ತು ವರ್ಷಗಳ ಹಿಂದೆಯೇ ಅಲ್ಲಿನ ಸಿಐಡಿಯಲ್ಲಿ ‘ಐಡಲ್‌ ವಿಂಗ್‌’ ರಚಿಸಲಾಗಿದೆ. 80ರ ದಶಕದಲ್ಲಿ ಪಂಚಲೋಹದ ವಿಗ್ರಹಗಳು ಮೇಲಿಂದ ಮೇಲೆ ಕಳುವಾಗಿ ವಿದೇಶ ಸೇರುತ್ತಿದ್ದವು. ಇದನ್ನು ನಿಯಂತ್ರಿಸಲು ನೆರೆಯ ರಾಜ್ಯಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅದೇ ಮಾದರಿಯ ಒಂದು ಐಡಲ್‌ ವಿಂಗ್‌ ರಾಜ್ಯ ಪೊಲೀಸ್‌ ಇಲಾಖೆಯಲ್ಲೂ ರಚನೆಯಾಗಬೇಕು ಎಂಬುದು ಪುರಾತತ್ವ ಇಲಾಖೆಯ ಆಶಯವಾಗಿದೆ.

ರಾಜ್ಯ ನಂಬರ್‌ ಒನ್‌

 • ಕಳೆದ ಲೋಕಸಭೆ ಕಲಾಪದ ವೇಳೆ ಪ್ರಶ್ನೆಯೊಂದಕ್ಕೆ ಕೇಂದ್ರ ಸರಕಾರವೇ ಕೊಟ್ಟಿರುವ ಉತ್ತರದ ಪ್ರಕಾರ ಆರ್ಕಿಯಾಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ ವರದಿಯಂತೆ ಪುರಾತತ್ವ ಹಾಗೂ ಪ್ರಾಚೀನ ವಿಗ್ರಹಗಳ ಕಳ್ಳತನದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕಳೆದ ಆರು ವರ್ಷಗಳಲ್ಲಿ 30 ಬೆಲೆ ಕಟ್ಟಲಾಗದ ವಿಗ್ರಹಗಳ ಕಳ್ಳತನ ರಾಜ್ಯದಲ್ಲಿ ನಡೆದಿವೆ ಎನ್ನುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಮುಂದಿನ ದಿನಗಳಲ್ಲಾದರೂ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಅಂತರಾಷ್ಟ್ರೀಯ ಜಾಲದ ಜತೆ ನಂಟು ಹೊಂದಿರುವ ಸ್ಥಳೀಯ ಗ್ಯಾಂಗ್‌ಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ನಿರಂತರ ನಿಗಾ ಇಡಲು ಅನುಕೂಲ ಆಗುವ ಉದ್ದೇಶದಿಂದ ಸಿಐಡಿ ಯಲ್ಲಿರುವ ಆರ್ಥಿಕ ಅಪರಾಧಗಳ ವಿಭಾಗದಲ್ಲೇ ‘ಐಡಲ್‌ ವಿಂಗ್‌’ ರಚಿಸಿ ಎಂದು ಪುರಾತತ್ವ ಇಲಾಖೆ ಪತ್ರದಲ್ಲಿ ವಿನಂತಿಸಿದೆ.

ಪತ್ರದಲ್ಲೇನಿದೆ ?

 • ಪ್ರಾಚ್ಯವಸ್ತು ಇಲಾಖೆ ಅಮೂಲ್ಯವಾದ ಶಿಲ್ಪಗಳು, ಶಿಲಾಶಾಸನಗಳು, ನಾಣ್ಯಗಳು, ತಾಮ್ರಪಟಗಳು, ಕಲಾಕೃತಿಗಳು, ವಿಗ್ರಹಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಿರ್ವಹಿಸುತ್ತಾ ಬಂದಿದೆ. ಇತ್ತೀಚಿಗೆ ರಾಜ್ಯದಲ್ಲಿ ಪುರಾತನ ಶಿಲ್ಪಗಳ ಮತ್ತು ಕಲಾಕೃತಿಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳ ಶೋಧನೆ ಕಾರ್ಯ ಇನ್ನೂ ಪ್ರಗತಿಯಲ್ಲಿವೆ. ಇಂತಹ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ರಾಜ್ಯ ಪೊಲೀಸ್‌ ಇಲಾಖೆಯಲ್ಲೂ ಪ್ರತ್ಯೇಕವಾದ ಶಾಖೆ ತೆರೆಯುವುದು ಸೂಕ್ತವಾಗಿರುತ್ತದೆ.

ಐಡಲ್‌ ವಿಂಗ್‌ ಜವಾಬ್ದಾರಿಗಳೇನು ?

 • 5 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಿಗ್ರಹ, ಕಲಾಕೃತಿಗಳ, ಪುರಾತತ್ವ ಸಂಪತ್ತಿನ ಕಳ್ಳತನ ಪ್ರಕರಣಗಳ ತನಿಖೆ
 • ರಾಜ್ಯ ಸರಕಾರದಿಂದ ಒಪ್ಪಿಸಲಾದ ಇತರೆ ಪುರಾತತ್ವ ಇಲಾಖೆಯ ಪ್ರಕರಣಗಳ ತನಿಖೆ
 • ಜಿಲ್ಲಾ ಮತ್ತು ಇತರೆ ತನಿಖಾ ಸಂಸ್ಥೆಗಳ ಜತೆ ಇಂತಹುದೇ ಪ್ರಕರಣಗಳ ತನಿಖೆ ನಡೆಸುತ್ತಿರುವವರ ಜತೆ ಮಾಹಿತಿ ವಿನಿಮಯ
 • ರಾಜ್ಯ, ಅಂತರರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಇರುವ ಪುರಾತತ್ವ ಸಂಪತ್ತಿನ ಕಳ್ಳತನ ಹಾಗೂ ಮಾರಾಟ ಜಾಲದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಣೆ
 • ಜಾಲಗಳ ಚಲನ-ವಲನಗಳ ಬಗ್ಗೆ ನಿರಂತರ ನಿಗಾ ಇಡುವುದು

ಘಾತಕ ಜಲಾಂತರ್ಗಾಮಿ

ಸುದ್ಧಿಯಲ್ಲಿ ಏಕಿದೆ ?ಚೀನಾ ಮತ್ತು ಪಾಕಿಸ್ತಾನದಿಂದ ಭೂಮಿ, ಜಲ ಹಾಗೂ ವಾಯು ಮಾರ್ಗದ ಸಂಭಾವ್ಯ ದಾಳಿ ತಡೆಯುವ ನಿಟ್ಟಿನಲ್ಲಿ ದೇಶದ ಸೇನಾಶಕ್ತಿ ಬಲವರ್ಧನೆಗೆ ಅನೇಕ ಕ್ರಮಗಳನ್ನು ಕೈಗೊಂಡಿರುವ ಪ್ರಧಾನಿ ಮೋದಿ ಸರಕಾರ ಈಗ ಆರು ಘಾತಕ ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ಮುಂದಾಗಿದೆ.

 • ಪ್ರಾಜೆಕ್ಟ್-75 ಭಾರತ್‌ಯೋಜನೆಯಡಿ 50,000 ಕೋಟಿ ರೂ. ವೆಚ್ಚದಲ್ಲಿ ಆರು ಘಾತಕ ಜಲಾಂತರ್ಗಾಮಿಗಳನ್ನು ನಿರ್ಮಿಸುವ ಮಹತ್ವದ ಗುರಿ ಹೊಂದಲಾಗಿದ್ದು, ಈ ಸಂಬಂಧ ಭಾರತೀಯ ನೌಕಾಪಡೆಯು ಆಸಕ್ತ ಕಂಪನಿಗಳು ಪ್ರಸ್ತಾವನೆ ಸಲ್ಲಿಸಲು (ಎಕ್ಸ್‌ಪ್ರೆಷನ್‌ ಆಫ್‌ ಇಂಟರೆಸ್ಟ್‌) ಜಾಗತಿಕ ಪ್ರಕಟಣೆ ಹೊರಡಿಸಿದೆ.
 • ಜಲಾಂತರ್ಗಾಮಿಗಳನ್ನು ಪತ್ತೆ ಮಾಡುವ ಮತ್ತು ರಕ್ಷ ಣಾ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುವ ಎಂಎಚ್‌-60 ರೋಮಿಯೊಸೀಹಾಕ್‌ 24′ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಒಪ್ಪಿಗೆ ನೀಡಿದ ಬೆನ್ನಲ್ಲೇ ನೌಕಾಪಡೆ ಆರು ಘಾತಕ ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ಮುಂದಾಗಿದೆ.

ಅತ್ಯಾಧುನಿಕವಾಗಿರಲಿವೆ:

 • ಪರಮಾಣು ಇಂಧನ ಚಾಲಿತವಲ್ಲದಿದ್ದರೂ ಸಾಂಪ್ರದಾಯಿಕ ಡೀಸೆಲ್‌-ವಿದ್ಯುತ್‌ ಚಾಲಿತ ಈ ಘಾತಕ ಜಲಾಂತರ್ಗಾಮಿಗಳು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರಲಿವೆ. 500 ಕಿ.ಮೀ ದೂರದ ಗುರಿಯ ಮೇಲೆ ನಿಖರ ದಾಳಿ ನಡೆಸುವ ಸಾಮರ್ಥ್ಯ ಇವು ಹೊಂದಲಿವೆ.
 • ನೀರಿನಿಂದ ಭೂಮಿ ಮೇಲೆ ದಾಳಿ ನಡೆಸಬಲ್ಲ 12 ಲ್ಯಾಂಡ್‌ ಅಟ್ಯಾಕ್‌ ಕ್ರೂಸ್‌ ಮಿಸೈಲ್‌ಗಳನ್ನು ತನ್ನ ಬತ್ತಳಿಕೆಯಲ್ಲಿ ಇರಿಸಿಕೊಳ್ಳಲಿದೆ. ಹಾಗೆಯೇ 18 ಹೆವಿವೇಟ್‌ ಟಾರ್ಪಿಡೊಗಳನ್ನು (ಸಿಗಾರ್‌ ಶೈಲಿಯಲ್ಲಿರುವ ಸ್ಫೋಟಕ ಅಸ್ತ್ರವನ್ನು ಯುದ್ಧನೌಕೆ ಇಲ್ಲವೇ ಜಲಾಂತರ್ಗಾಮಿಯಿಂದ ಪ್ರಯೋಗಿಸಬಹುದಾಗಿದೆ) ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರಲಿದೆ.
 • ಈ ಜಲಾಂತಾರ್ಗಾಮಿಗಳು ಸದ್ಯ ಮುಂಬಯಿನ ಮಜಗಾಂವ್‌ ಡಾಕ್‌ಯಾರ್ಡ್ಸ್ ಲಿಮಿಟೆಡ್‌ ಕಂಪನಿ ನಿರ್ಮಿಸುತ್ತಿರುವ ಸ್ಕಾರ್ಪಿನೆ ದರ್ಜೆಯ ಜಲಾಂತರ್ಗಾಮಿಗಿಂತಲೂ ಶೇಕಡ 50ರಷ್ಟು ದೊಡ್ಡದಿರಲಿವೆ.
 • 500 ಕಿ.ಮೀ.: ಈ ಘಾತಕ ಜಲಾಂತಾರ್ಗಾಮಿಗಳು 500 ಕಿ.ಮೀ ದೂರದ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ‌ ಹೊಂದಲಿವೆ.
 • 50,000 ಕೋಟಿ ರೂಪಾಯಿಗಳನ್ನು ಈ ಯೋಜನೆಗಾಗಿ ಮೀಸಲಿರಿಸಲಾಗಿದೆ.

ಏನಿದು ಪ್ರಾಜೆಕ್ಟ್ 75 ಇಂಡಿಯಾ?

 • ಹಿಂದೂ ಮಹಾಸಾಗರದಲ್ಲಿ ಸ್ವ ಹಿತಾಸಕ್ತಿಯ ಆರ್ಭಟ ತೋರುತ್ತಿರುವ ಚೀನಾ ಹಾಗೂ ಮತ್ತದರ ಮಿತ್ರ ರಾಷ್ಟ್ರ ಪಾಕಿಸ್ತಾನ ತಂಟೆಗೆ ಬಾರದಂತೆ ಸಮುದ್ರ ಗಡಿ ಕಾಯುವ ನಮ್ಮ ನೌಕಾಪಡೆಯನ್ನು ಬಲಶಾಲಿಗೊಳಿಸುವುದು ಈ ಯೋಜನೆಯ ಉದ್ದೇಶ. ಭಾರತದ ಬಳಿ ರಷ್ಯಾ ನಿರ್ಮಿತ ಹಲವು ಶ್ರೇಣಿಯ ಯುದ್ಧನೌಕೆಗಳಿವೆ.
 • ಇವುಗಳ ಜತೆಗೆ ಹೊಸದಾಗಿ 6 ಘಾತಕ ಜಲಾಂತಾರ್ಗಾಮಿಗಳನ್ನು ಹೊಂದುವ ಈ ಮಹತ್ವದ ಯೋಜನೆ ಹೊಂದಲಾಗಿದ್ದು, ಇದಕ್ಕೆ ಶಸ್ತ್ರಾಸ್ತ್ರ ಖರೀದಿ ಸಮಿತಿ ಒಪ್ಪಿಗೆ ನೀಡಿದೆ.

‘ಝಾಯೆದ್ ಮೆಡಲ್’

ಸುದ್ಧಿಯಲ್ಲಿ ಏಕಿದೆ ?ಪ್ರಧಾನಿ ನರೇಂದ್ರ ಮೋದಿ ಅವರ ಸಂಯುಕ್ತ ಅರಬ್‌ ಸಂಸ್ಥಾನದ (ಯುಎಇ) ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಝಾಯೆದ್ ಮೆಡಲ್’ ಗೌರವಕ್ಕೆ ಪಾತ್ರರಾಗಿದ್ದಾರೆ.

 • ಎರಡೂ ದೇಶಗಳ ನಡುವಿನ ಬಾಂಧವ್ಯಕ್ಕೆ ವೃದ್ಧಿಗೆ ಮೋದಿ ವಹಿಸಿದ ಪ್ರಮುಖ ಪಾತ್ರಕ್ಕಾಗಿ ಈ ಅತ್ಯುನ್ನನ ಪುರಸ್ಕಾರ ನೀಡಿರುವುದಾಗಿ ಯುಎಇ ಸರಕಾರ ತಿಳಿಸಿದೆ.
 • ಈ ಅತ್ಯುನ್ನತ ಪುರಸ್ಕಾರವನ್ನು ವಿಶೇಷವಾಗಿ ರಾಜರು, ಅಧ್ಯಕ್ಷರು ಹಾಗೂ ರಾಜ್ಯದ ಮುಖ್ಯಸ್ಥರಿಗೆ ಪ್ರದಾನ ಮಾಡಲಾಗುತ್ತದೆ. ಇಂತಹ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಮೋದಿ ಭಾಜನರಾಗಿರುವುದು ವಿಶೇಷ.
 • ಮೋದಿ-ಯುಎಇ ಸಂಬಂಧ
 • 2015ರಲ್ಲಿ ಮೋದಿ ಅವರು ಯುಎಇಗೆ ಭೇಟಿ ನೀಡಿದ ಬಳಿಕ ಎರಡೂ ದೇಶಗಳ ನಡುವೆ ಸಂಬಂಧ ವೃದ್ಧಿಗೊಂಡಿತ್ತು. 2017ರಲ್ಲಿ ಗಣರಾಜ್ಯೋತ್ಸವ ಪರೇಡ್ ಮುಖ್ಯ ಅತಿಥಿಯಾಗಿ ಯುಎಇ ಯುವರಾಜ ಭೇಟಿ ನೀಡಿದ್ದರು. ಮೋದಿ ಎರಡು ಸಲ ಭೇಟಿ ನೀಡಿರುವ ದೇಶಗಳಲ್ಲಿ ಯುಎಇ ದೇಶ ಸಹ ಒಂದಾಗಿದೆ.
 • ಯುಎಇ ಮೂಲಕ ಭಾರತಕ್ಕೆ ಶೇ.8ರಷ್ಟು ಇಂಧನ ಆಮದಾಗುತ್ತದೆ. ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸುವ ಐದನೇ ಅತಿ ದೊಡ್ಡ ದೇಶ ಯುಎಇ. ಗುರುಗ್ರಾಮದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಂತಾರಾಷ್ಟ್ರೀಯ ಸೌರ ಒಕ್ಕೂಟದಲ್ಲೂ (ಐಎಸ್‍ಎ) ಯುಎಇ ಭಾಗಿಯಾಗಿದೆ.
 • 2018ರ ಭೇಟಿ ವೇಳೆ ಇಂಧನ, ರೈಲ್ವೆ, ಮಾನವ ಸಂಪನ್ಮೂಲ ಮತ್ತು ಹಣಕಾಸು ಸೇವೆಗಳಿಗೆ ಸಂಬಂಧಿಸಿದ ಐದು ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು.
 • ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ಭವವಾದ ಉದ್ವಿಗ್ನ ಸ್ಥಿತಿಯನ್ನು ತಿಳಿಗೊಳಿಸಲು ಯುವರಾಜ ಮೊಹಮ್ಮದ್‌ ಅವರು ಮೋದಿ ಅವರಿಗೆ ಕರೆ ಮಾಡಿದ್ದರು.

ಮೆಡಲ್ ಪಡೆದ ಜಾಗತಿಕ ನಾಯಕರು

# ವ್ಲಾದಿಮಿರ್ ಪುತಿನ್, ರಷ್ಯಾ ಅಧ್ಯಕ್ಷ (2007)

# ಬ್ರಿಟನ್​ನ ರಾಣಿ ಎಲಿಜಬೆತ್(2010)

# ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್, ಸೌದಿ ಅರೇಬಿಯಾದ ದೊರೆ(2016),

# ಕ್ಸಿ ಜಿನ್​ಪಿಂಗ್, ಚೀನಾ ಅಧ್ಯಕ್ಷ (2018)

ಅತೀ ಉದ್ದದ ಸೇತುವೆ

ಸುದ್ಧಿಯಲ್ಲಿ ಏಕಿದೆ ?ಸಿಂಧೂ ನದಿಯ ಲೇಹ್ ನಲ್ಲಿ ಬರೋಬ್ಬರಿ 260 ಅಡಿ ಉದ್ದದ ಕೇಬಲ್ ಸೇತುವೆ ನಿರ್ಮಾಣ ಮಾಡಿ ಭಾರತೀಯ ಯೋಧರು ದಾಖಲೆ ಬರೆದಿದ್ದಾರೆ.

 • ಕೇವಲ 40 ದಿನಗಳಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ.
 • ಇದಕ್ಕೆ ಮೈತ್ರಿ ಸೇತುವೆ ಎಂದು ನಾಮಕರಣ ಮಾಡಲಾಗಿದೆ.
 • ಇದರ ನಿರ್ಮಾಣಕ್ಕಾಗಿ 500 ಟನ್ ಗಳಷ್ಟು ನಿರ್ಮಾಣ ಸಾಮಗ್ರಿ ಬಳಕೆ ಮಾಡಲಾಗಿದೆ.
 • ಇದು ಭಾರತೀಯ ಯೋಧರಿಂದ ನಿರ್ಮಾಣವಾಗಿರುವ ವೈಯಕ್ತಿಕ ದಾಖಲೆಯಾಗಿದೆ.

Related Posts
“26 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಬಡವರ ಬಂಧು’ ನಿಯಮಾವಳಿ ಸಡಿಲ ಸುದ್ಧಿಯಲ್ಲಿ ಏಕಿದೆ ?ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ 'ಬಡವರ ಬಂಧು' ಯೋಜನೆ ಅನುಷ್ಠಾನದಲ್ಲಿ ತೊಡಕಾಗಿದ್ದ ಕೆಲ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಯಾವ ನಿಯಮವನ್ನು ಸಡಿಲಿಸಲಾಗಿದೆ ? 'ಯೋಜನೆಯಡಿ ಫಲಾನುಭವಿಗಳ ಆಯ್ಕೆಗೆ ಸ್ಥಳೀಯ ಸಂಸ್ಥೆಗಳ ಗುರುತಿನ ಚೀಟಿ ಹಾಗೂ ರೇಷನ್‌ ಕಾರ್ಡ್‌ ದಾಖಲೆಯಾಗಿ ...
READ MORE
“05 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಟ್ರಿಣ್​ಟ್ರಿಣ್ ಸುದ್ಧಿಯಲ್ಲಿ ಏಕಿದೆ ?ಪರಿಸರ ಮಾಲಿನ್ಯ ಮತ್ತು ಸಂಚಾರದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ನಗರದಲ್ಲಿ ಟ್ರಿಣ್ ಟ್ರಿಣ್ ಯೋಜನೆ ಜಾರಿಗೊಳಿಸಿದೆ. ಆ ಮೂಲಕ ಸೈಕಲ್ ಸವಾರಿಗೆ ಹೆಚ್ಚಿನ ಒತ್ತು ನೀಡಿ ವಾಹನ ಸಂಚಾರ ಪ್ರಮಾಣ ಕಡಿಮೆ ಮಾಡಲು ...
READ MORE
“10 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಪ್ರಸಾದ ತಯಾರಿಕೆಗೂ ಲೈಸೆನ್ಸ್ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಪ್ರಸಾದ ವಿನಿಯೋಗಿಸುವ 30 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ಆಹಾರ ತಯಾರಿಕಾ ಘಟಕಗಳಿಗೆ ಇನ್ನು ಲೈಸನ್ಸ್ ಕಡ್ಡಾಯವಾಗಲಿದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ 37 ಸಾವಿರ ದೇವಾಲಯಗಳೂ ಸೇರಿ 2 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳಿವೆ. ಈ ಪೈಕಿ ...
READ MORE
3rd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ನೌಕಾ ಪಡೆ ಸಮರಾಭ್ಯಾಸ ಮುಕ್ತಾಯ ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆ ಮೂರು ವಾರಗಳ ಕಾಲ ಕೈಗೊಂಡ ಸಮರಾಭ್ಯಾಸ ಕೊನೆಗೊಂಡಿದೆ. ದೇಶದ ಪಶ್ಚಿಮ ಸಮುದ್ರದಲ್ಲಿರುವ ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸುವ ಕುರಿತು ವ್ಯೂಹ ರಚನೆ ಮತ್ತು ಯುದ್ಧದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಾಚರಣೆ ಯೋಜನೆಗಳ ಬಗ್ಗೆ ನೌಕಾ ಪಡೆ ...
READ MORE
“26 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕರ್ನಾಟಕ ಹೈಕೋರ್ಟ್‌ಗೆ ಹೊಸ ನ್ಯಾಯಮೂರ್ತಿಗಳ ನೇಮಕ   ಸುದ್ಧಿಯಲ್ಲಿ ಏಕಿದೆ ?ಕರ್ನಾಟಕ ಹೈಕೋರ್ಟ್‌ಗೆ 8 ನೂತನ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಸುಪ್ರೀಂಕೋರ್ಟ್‌ನ ಕೊಲಿಜಿಯಂ ನಿರ್ಧರಿಸಿದೆ. ಸಿಜೆಐ ರಂಜನ್‌ ಗೊಗೊಯ್‌ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ವಕೀಲರಾಗಿರುವ ಸವನೂರು ವಿಶ್ವನಾಥ್‌ ಶೆಟ್ಟಿ, ಸಿಂಗಾಪುರಂ ರಾಘವಾಚಾರ್‌ ಕೃಷ್ಣಕುಮಾರ್‌, ...
READ MORE
“15 ಏಪ್ರಿಲ್ 2019 ಕನ್ನಡದ ಪ್ರಚಲಿತ ವಿದ್ಯಮಾನಗಳು”
ಚುನಾವಣೆ ಕ್ಷಿಪ್ರ ಪಡೆಗಳ ಸಮನ್ವಯಕ್ಕೆ ವಿಶೇಷಾಧಿಕಾರಿ ನೇಮಕ ಸುದ್ಧಿಯಲ್ಲಿ ಏಕಿದೆ? ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಿರ ಕಣ್ಗಾವಲು ತಂಡದ (ಎಸ್‌ಎಸ್‌ಟಿ) ಕ್ಷಿಪ್ರ ಕಾರ್ಯ ಪಡೆ (ಫ್ಲೈಯಿಂಗ್ ಸ್ಕ್ವಾಡ್‌)ಯ ಚಟುವಟಿಕೆಗಳ ಉಸ್ತುವಾರಿಗಾಗಿ ಬಿಬಿಎಂಪಿ ವಿಶೇಷಾಧಿಕಾರಿಯನ್ನು ನೇಮಿಸಿದೆ. ವಿಶೇಷ ಅಧಿಕಾರಿ (ಜಾರಿ) ಯಾಗಿ ಸರ್ವೇ, ಸೆಟಲ್‌ಮೆಂಟ್‌ ಮತ್ತು ...
READ MORE
“25th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ವಿಕ್ರಮಾದಿತ್ಯ ಸುದ್ಧಿಯಲ್ಲಿ ಏಕಿದೆ ?ಭಾರತೀಯ ನೌಕಾಪಡೆಯ ಏಕೈಕ ಯುದ್ಧ ವಿಮಾನ ವಾಹಕ ನೌಕೆ ಐಎನ್​ಎಸ್ ವಿಕ್ರಮಾದಿತ್ಯ ಎರಡನೇ ಬಾರಿ ರಿಪೇರಿ ಕಾರ್ಯ ಮುಗಿಸಿ ವಾರದೊಳಗೆ ಕಾರವಾರ ಬಂದರಿಗೆ ವಾಪಸಾಗುತ್ತಿದೆ. ಕೊಚ್ಚಿ ಶಿಪ್​ಯಾರ್ಡ್​ನಿಂದ ನೌಕೆ ಹೊರಟಿದ್ದು, ಅ.30ರೊಳಗೆ ತನ್ನ ಕೇಂದ್ರ ಸ್ಥಾನವಾದ ಕಾರವಾರ ಕದಂಬ ನೌಕಾನೆಲೆ ...
READ MORE
“11 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸೋಷಿಯಲ್‌ ಮಿಡಿಯಾ ಬಳಕೆಗೆ ಕಠಿಣ ನಿರ್ಬಂಧ ಸುದ್ಧಿಯಲ್ಲಿ ಏಕಿದೆ ?ಮತದಾರರ ಮೇಲೆ ಸಾಮಾಜಿಕ ಜಾಲತಾಣಗಳು ಬೀರುವ ಪ್ರಭಾವ ಅರಿತು ಚುನಾವಣಾ ಆಯೋಗ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಷಿಯಲ್‌ ಮಿಡಿಯಾಗಳ ಬಳಕೆ ಕುರಿತು ಹಲವು ಕಠಿಣ ನಿರ್ಬಂಧಗಳನ್ನು ಹೇರಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ...
READ MORE
26th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಪ್ರಸಾದದ ಮೇಲೆ ಎಕ್ಸ್‌ಫೈರಿ ಡೇಟ್‌ ಕಡ್ಡಾಯ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ದೇವಸ್ಥಾನಗಳಲ್ಲಿ ಪ್ಯಾಕ್‌ ಮಾಡಿ ವಿತರಿಸುವ ಪ್ರಸಾದದ ಮೇಲೆ ತಯಾರಿಸಿದ ದಿನ ಹಾಗೂ ಎಷ್ಟು ದಿನಗಳವರೆಗೆ ಮಾತ್ರ ಸೇವಿಸಬಹುದು ಎಂಬ ಮಾಹಿತಿ ನಮೂದಿಸುವುದು ಕಡ್ಡಾಯವಾಗಲಿದೆ. ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದ ನಿಯಮ ...
READ MORE
“18 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ತ್ರಿವೇಣಿಸಂಗಮದಲ್ಲಿ ಕುಂಭಮೇಳ ಸುದ್ಧಿಯಲ್ಲಿ ಏಕಿದೆ ?ದಕ್ಷಿಣದ ಪವಿತ್ರ ನದಿಗಳಾದ ಕಾವೇರಿ, ಕಪಿಲಾ,ಸ್ಪಟಿಕ ಸಂಗಮದ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದ ಶ್ರೀ ಕ್ಷೇತ್ರದಲ್ಲಿ ಮೂರು ದಿನಗಳ 11ನೇ ಕುಂಭಮೇಳಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ದೊರೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಜನರು ಮೊದಲ ದಿನವೇ ತ್ರಿವೇಣಿ ಸಂಗಮದಲ್ಲಿ ...
READ MORE
“26 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“05 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“10 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
3rd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
“26 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ಏಪ್ರಿಲ್ 2019 ಕನ್ನಡದ ಪ್ರಚಲಿತ ವಿದ್ಯಮಾನಗಳು”
“25th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“11 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
26th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
“18 ಫೆಬ್ರವರಿ 2019 ರ ಕನ್ನಡ ಪ್ರಚಲಿತ

Leave a Reply

Your email address will not be published. Required fields are marked *