” 07 ಫೆಬ್ರವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಲೋಕಪಾಲ ಮುಖ್ಯಸ್ಥರ ನೇಮಕ

 ಸುದ್ಧಿಯಲ್ಲಿ ಏಕಿದೆ ?ಸುಪ್ರೀಂಕೋರ್ಟ್ ಎಚ್ಚರಿಕೆ ಬಳಿಕ ಕೊನೆಗೂ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆ ವರ್ಷದಲ್ಲೇ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲದ ಮುಖ್ಯಸ್ಥರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದೆ.

 • ಲೋಕಪಾಲ ಕಾಯ್ದೆ ಜಾರಿಗೆ ಬಂದ ಸುಮಾರು ಐದು ವರ್ಷಗಳ ಬಳಿಕ ಲೋಕಪಾಲ ಮುಖ್ಯಸ್ಥ ಹಾಗೂ ಎಂಟು ಸದಸ್ಯರ ನೇಮಕಾತಿ ಸಂಬಂಧ ರಚಿತವಾಗಿದ್ದ ಶೋಧ ಸಮಿತಿ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
 • ಸಮಿತಿ ಅಧ್ಯಕ್ಷರೂ ಆಗಿರುವ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಹುದ್ದೆ ಭರ್ತಿಗಾಗಿ ಜಾಹೀರಾತು ನೀಡಿದ್ದಾರೆ.

ಲೋಕಪಾಲರಿಗೆ ದೊರೆಯುವ ಸೌಲಭ್ಯಗಳು .

 • ಲೋಕಪಾಲ ಮುಖ್ಯಸ್ಥರಿಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಸಮನಾದ ವೇತನ ಮತ್ತಿತರ ಭತ್ಯೆಗಳು ದೊರೆಯಲಿವೆ.
 • ಹಾಗೆಯೇ ಸಂಸ್ಥೆಯ ಸದಸ್ಯರಿಗೆ ಸುಪ್ರೀಂ ನ್ಯಾಯಮೂರ್ತಿಗಳಿಗೆ ಸಮನಾದ ವೇತನ ಮತ್ತು ಭತ್ಯೆಗಳು ದೊರೆಯಲಿವೆ .

ಲೋಕಪಾಲ್  ಬಗ್ಗೆ

 • ಲೋಕಪಾಲ್ ಸಾರ್ವಜನಿಕ ಹಿತಾಸಕ್ತಿಯನ್ನು ಪ್ರತಿನಿಧಿಸುವ ಭ್ರಷ್ಟಾಚಾರ ವಿರೋಧಿ ಅಧಿಕಾರ ಸಂಸ್ಥೆ ಅಥವಾ ಓಂಬುಡ್ಸ್ಮನ್.
 • ಓಂಬಡ್ಸ್ಮನ್ನ ಪರಿಕಲ್ಪನೆಯನ್ನು ಸ್ವೀಡನ್ನಿಂದ ಎರವಲು ಪಡೆಯಲಾಗಿದೆ.
 • ಭ್ರಷ್ಟಾಚಾರದ ಪ್ರಕರಣಗಳಲ್ಲಿ ಲೋಕಪಾಲ್ ಎಲ್ಲ ಸಂಸತ್ ಸದಸ್ಯರ ಮತ್ತು ಕೇಂದ್ರ ಸರಕಾರಿ ಉದ್ಯೋಗಿಗಳ ವ್ಯಾಪ್ತಿಯನ್ನು ಹೊಂದಿದೆ.
 • 2011 ರಲ್ಲಿ ಅಣ್ಣಾ ಹಜಾರೆ ನೇತೃತ್ವದ ಜನ ಲೋಕಪಾಲ ಚಳವಳಿಯ ನಂತರ, ಲೋಕಪಾಲ ಮತ್ತು ಲೋಕಾಯುಕ್ತ ಕಾನೂನುಗಳು 2013 ರಲ್ಲಿ ಸಂಸತ್ತಿನಲ್ಲಿನ ತಿದ್ದುಪಡಿಗಳೊಂದಿಗೆ ಅಂಗೀಕರಿಸಲ್ಪಟ್ಟವು.
 • ಲೋಕಪಾಲ ರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರ ಆರೋಪಗಳನ್ನು ತನಿಖೆ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದಾಗ ಲೋಕಾಯುಕ್ತ ರಾಜ್ಯ ಮಟ್ಟದಲ್ಲಿ ಅದೇ ಕಾರ್ಯವನ್ನು ನಿರ್ವಹಿಸುತ್ತಾನೆ.

ಲೋಕಪಾಲ ಆಯ್ಕೆ

 • ಆಯ್ಕೆ ಸಮಿತಿಯ ಮೊದಲ ನಾಲ್ಕು ಸದಸ್ಯರ ಶಿಫಾರಸುಗಳ ಆಧಾರದ ಮೇಲೆ ಪ್ರಧಾನ ಮಂತ್ರಿ ಮುಖ್ಯಸ್ಥರಾಗಿರುವ ಆಯ್ಕೆ ಸಮಿತಿಯಿಂದ ಒಮ್ಮತದ ಮೂಲಕ ಆಯ್ಕೆಯಾಗಬೇಕು.
 • ಆಯ್ಕೆ ಸಮಿತಿಯು ಭಾರತದ ಅಧ್ಯಕ್ಷರಿಂದ ನಾಮನಿರ್ದೇಶನಗೊಂಡ ಪ್ರಖ್ಯಾತ ನ್ಯಾಯವಾದಿ ,ಲೋಕಸಭೆಯ ಸ್ಪೀಕರ್, ಲೋಕಸಭೆಯ ವಿರೋಧ ನಾಯಕ, ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಸಿಜೆಐ ಮತ್ತು ನಾಮನಿರ್ದೇಶನಗೊಂಡ ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ .

ಆಧಾರ್ ಲಿಂಕ್ ಕಡ್ಡಾಯ

ಸುದ್ಧಿಯಲ್ಲಿ ಏಕಿದೆ ?ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪಾನ್ ಸಂಖ್ಯೆಗೆ ಆಧಾರ್ ಜೋಡಣೆ ಕಡ್ಡಾಯ ಎಂದು ಸುಪ್ರೀಂಕೋರ್ಟ್ ಹೇಳಿದೆ.

 • ಈ ಕುರಿತಂತೆ ಐಟಿ ಕಾಯ್ದೆ ಸೆಕ್ಷನ್ 139ಎಎ ಅನ್ವಯ ಸುಪ್ರೀಂಕೋರ್ಟ್ ಹಿಂದೆಯೂ ಸ್ಪಷ್ಟಪಡಿಸಿದೆ ಎಂದು ನ್ಯಾ. ಸಿಕ್ರಿ ನೇತೃತ್ವದ ಪೀಠ ಹೇಳಿದೆ.

ಹಿನ್ನಲೆ

 • ಸೇನ್ ಮತ್ತು ಜಯಶ್ರೀ ಎನ್ನುವವರಿಗೆ 2018-19ನೇ ಸಾಲಿನ ಐಟಿ ರಿಟರ್ನ್ಸ್ ಸಲ್ಲಿಕೆಗೆ ಪಾನ್-ಆಧಾರ್ ಜೋಡಣೆ ಮಾಡದ ಹೊರತಾಗಿಯೂ ದೆಹಲಿ ಹೈಕೋರ್ಟ್ ಅವಕಾಶ ನೀಡಿತ್ತು.
 • ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿತ್ತು. ದೆಹಲಿ ಹೈಕೋರ್ಟ್ ತೀರ್ಪು ನೀಡುವಾಗ ಪಾನ್ -ಆಧಾರ್ ಜೋಡಣೆ ಬಗ್ಗೆ ವಿಚಾರಣೆ ನಡೆಯುತ್ತಿತ್ತು. ಹಾಗಾಗಿ ಆ ರೀತಿ ತೀರ್ಪು ನೀಡಲಾಗಿದೆ. ಆದರೆ ಈಗ ಐಟಿ ರಿಟರ್ನ್ಸ್​ಗೆ ಪಾನ್-ಆಧಾರ್ ಜೋಡಣೆ ಕಡ್ಡಾಯಗೊಂಡಿದೆ ಎಂದು ನ್ಯಾ. ಸಿಕ್ರಿ ಹೇಳಿದ್ದಾರೆ.

ಆಧಾರ್

 • ಆಧಾರ್ ಎಂಬುದು 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದ್ದು, ಅವರ ಜೀವಮಾಪನ ಮತ್ತು ಜನಸಂಖ್ಯಾ ಡೇಟಾವನ್ನು ಆಧರಿಸಿ ಭಾರತದ ನಿವಾಸಿಗಳು ಇದನ್ನು ಪಡೆಯಬಹುದು.
 • ಭಾರತ ಸರ್ಕಾರವು 2009 ರ ಜನವರಿಯಲ್ಲಿ ಸ್ಥಾಪಿತವಾದ ಶಾಸನಬದ್ಧ ಅಧಿಕಾರವಾದ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಈ ಡೇಟಾವನ್ನು ಸಂಗ್ರಹಿಸುತ್ತದೆ.
 • ಆಧಾರ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವಾಲಯದ ವ್ಯಾಪ್ತಿಗೆ ಒಳಪಟ್ಟಂತೆ, ಹಣಕಾಸು ಮತ್ತು ಇತರ ಅನುದಾನಗಳು, ಪ್ರಯೋಜನಗಳು ಮತ್ತು ಸೇವೆಗಳು) ಆಕ್ಟ್, 2016 ರ ಪ್ರಕಾರ ಹಣಕಾಸು ಸಬ್ಸಿಡಿ ಮತ್ತು ಇತರ ಸರ್ಕಾರೀ ಯೋಜನೆಗಳ ಪ್ರಯೋಜನ ಪಡೆಯಲು ಸಹಕರಿಸುತ್ತದೆ.

ರಾಷ್ಟ್ರೀಯ ಕಾಮಧೇನು ಆಯೋಗ ಸ್ಥಾಪನೆ

ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ದೇಸಿ ಗೋವುಗಳ ಸಂರಕ್ಷಣೆ ಉದ್ದೇಶದ ‘ರಾಷ್ಟ್ರೀಯ ಕಾಮಧೇನು ಆಯೋಗ’ ಸ್ಥಾಪನೆಗೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ.

ಆಯೋಗದ ಬಗ್ಗೆ

 • ಈ ಆಯೋಗವು ಪಶು ಸಂಗೋಪನೆ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಪ್ರಸ್ತುತ ಪಶು ತಳಿ ಅಭಿವೃದ್ಧಿಯಲ್ಲಿ ತೊಡಗಿರುವ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸಲಿದೆ.
 • ಆಯೋಗವು ಒಂದು ಉನ್ನತ ಶಕ್ತಿಯ ಶಾಶ್ವತವಾದ ಸಂಸ್ಥೆಯಾಗಿದ್ದು, ನೀತಿಗಳನ್ನು ರೂಪಿಸುತ್ತದೆ ಮತ್ತು ಬೋವೈನ್ ಸಂಪನ್ಮೂಲಗಳ ಸುಸ್ಥಿರ ಆನುವಂಶಿಕ ಅಭಿವೃದ್ಧಿಯ ಸ್ಕೇಲಿಂಗ್ಗಾಗಿ ನಿರ್ದೇಶನಗಳನ್ನು  ಬಿಡುಗಡೆ ಮಾಡುತ್ತದೆ ಮತ್ತು ಹಸುವಿನ ಕಲ್ಯಾಣ ಯೋಜನೆಗಳ ಕಾನೂನು ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ನೋಡಿಕೊಳ್ಳುತ್ತದೆ .
 • ಪ್ರಸ್ತುತ, ಭಾರತದಲ್ಲಿ 33 ತಳಿ ಹಸುಗಳು ಮತ್ತು 16 ಎಮ್ಮೆ ತಳಿಗಳಿವೆ. 2012 ರ ಜಾನುವಾರು ಜನಗಣತಿಯು ದೇಶದ ಒಟ್ಟು ಗೋಜಾತಿಯ  ಜನಸಂಖ್ಯೆಯನ್ನು (ಜಾನುವಾರು, ಎಮ್ಮೆ, ಮಿಥುನ್ ಮತ್ತು ಯಾಕ್) ಸುಮಾರು 300 ದಶಲಕ್ಷ ಇದೆ ಎಂದು ತಿಳಿಸಿದೆ .
 • ಆಯೋಗವು ಕೃಷಿ ವಿಶ್ವವಿದ್ಯಾಲಯ ಅಥವಾ ಹಸು, ಸಾವಯವ ಗೊಬ್ಬರ ಮತ್ತು ಜೈವಿಕ ಅನಿಲದ ತಳಿ ಬೆಳೆಸುವ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಕೇಂದ್ರ / ರಾಜ್ಯ ಸರ್ಕಾರದ ಇಲಾಖೆಗಳು ಅಥವಾ ಸಂಘಟನೆಗಳ ಸಹಯೋಗದೊಂದಿಗೆ ಕೆಲಸ ಮಾಡುತ್ತದೆ.

ಉಪಯೋಗ

 • ಈ ಆಯೋಗದ ರಚನೆಯಿಂದ ಪಶು ಸಂಗೋಪನಾ ವಲಯ ಮತ್ತಷ್ಟು ವಿಸ್ತರಣೆಯಾಗಲಿದ್ದು, ಇದರಿಂದ ಮಹಿಳೆಯರು ಹಾಗೂ ಸಣ್ಣ ರೈತರಿಗೂ ಅನುಕೂಲವಾಗಲಿದೆ.

ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ

ಸುದ್ಧಿಯಲ್ಲಿ ಏಕಿದೆ ?ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದ ಅಂಗವಾಗಿ ಫೆ. 8ರಂದು ರಾಜ್ಯಾದ್ಯಂತ 1ರಿಂದ 19ವರ್ಷದ 2.5 ಕೋಟಿ ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ವಿತರಿಸಲಾಗುತ್ತಿದೆ.

ಉದ್ದೇಶ

 • ಜಂತು ಹುಳು ಸಮಸ್ಯೆಯಿಂದ ಯಾವ ಮಕ್ಕಳು ಬಳಲಬಾರದು ಎಂಬ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯದ 75 ಸಾವಿರ ಖಾಸಗಿ ಹಾಗೂ 65 ಸಾವಿರ ಸರಕಾರಿ ಶಾಲೆಗಳಲ್ಲಿನ 1 ರಿಂದ 19 ವರ್ಷದ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆಗಳನ್ನು ವಿತರಿಸಲಾಗುವುದು.

ಮಾತ್ರೆಗಳ ವಿತರಣೆ ಏಕೆ?

 • ರಕ್ತಹೀನತೆ ಮತ್ತು ಅಪೌಷ್ಠಿಕತೆ ಕಾರಣದಿಂದ ಬಳಲಿದಂತೆ ಕಾಣುವ ಮಕ್ಕಳಲ್ಲಿ ಜಂತು ಹುಳು ಸಾಧ್ಯತೆ ಇರುತ್ತದೆ. ಈ ಸಮಸ್ಯೆ ಇದ್ದವರಿಗೆ ಸೇವಿಸುವ ಆಹಾರದ ಶೇ. 30ರಿಂದ 40ರಷ್ಟು ಭಾಗ ಜಂತು ಹುಳುಗಳ ಪಾಲಾಗುತ್ತದೆ.
 • ಹೀಗಾಗಿ ರಕ್ತಹೀನತೆ, ದೇಹದ ತೂಕ ಹಾಗೂ ನೆನಪಿನ ಶಕ್ತಿ ಕಡಿಮೆಯಾಗುವುದ ಜತೆಗೆ ನಾನಾ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಮಾತ್ರೆಗಳ ವಿತರಣೆ ಅಗತ್ಯವಿದೆ ಎನ್ನುತ್ತಾರೆ ತಜ್ಞರು.
 • ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ರಾಜ್ಯಾದ್ಯಂತ 1ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆ ಹಾಗೂ 2 ರಿಂದ 19 ವರ್ಷದ ವರೆಗಿನ ಮಕ್ಕಳಿಗೆ ಒಂದೊಂದು ಮಾತ್ರೆಗಳನ್ನು ನೀಡಲಾಗುವುದು.
 • ಇವುಗಳ ನಿರ್ವಹಣೆಗಾಗಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಆರೋಗ್ಯಾಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಇವರು ಶಾಲಾ ಕಾಲೇಜುಗಳಿಗೆ ತೆರಳಿ ಮಾತ್ರೆಗಳ ಸಮರ್ಪಕ ವಿತರಣೆ ಕುರಿತು ಪರಿಶೀಲನೆ ನಡೆಸಲಿದ್ದಾರೆ.
 • ಜತೆಗೆ ಮಾತ್ರೆಗಳಿಂದ ಅಡ್ಡಪರಿಣಾಮ ಆದ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ

ನ್ಯಾಷನಲ್ ಜಂತು ಹುಳು ನಿವಾರಣಾ ದಿನ

 • ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನವು 1-19 ವರ್ಷ ವಯಸ್ಸಿನ ಎಲ್ಲಾ ಮಕ್ಕಳಲ್ಲಿ ಕರುಳಿನ ವರ್ಮ್ ಸೋಂಕುಗಳಿಗೆ ಚಿಕಿತ್ಸೆ ನೀಡುವ ಏಕೈಕ ಸ್ಥಿರ ದಿನ ವಿಧಾನವಾಗಿದ್ದು ಪ್ರತಿವರ್ಷ 10 ಫೆಬ್ರುವರಿ ಮತ್ತು 10 ಆಗಸ್ಟ್ನಲ್ಲಿ ನಡೆಯುತ್ತದೆ.

ಪಾಕ್ ಹಜ್ ಸಬ್ಸಿಡಿ ಬಂದ್

ಸುದ್ಧಿಯಲ್ಲಿ ಏಕಿದೆ ?ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾ ಮತ್ತು ಮದೀನಾಕ್ಕೆ ಹಜ್ ಯಾತ್ರೆ ಕೈಗೊಳ್ಳುವವರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಪಾಕಿಸ್ತಾನ ಸರ್ಕಾರ ರದ್ದು ಮಾಡಿದೆ. ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ವಾರ್ಷಿಕವಾಗಿ -ಠಿ;450 ಕೋಟಿ (ಪಾಕ್ ಕರೆನ್ಸಿ) ಉಳಿತಾಯವಾಗಲಿದೆ.

 • ಪಾಕಿಸ್ತಾನದ ಆರ್ಥಿಕ ಸ್ಥಿತಿ ತೀವ್ರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ

ಎಷ್ಟು ಖರ್ಚು ಬರುತ್ತೆ?

 • ಹಜ್ ಯಾತ್ರೆ ಕೈಗೊಳ್ಳಲು ಸರಾಸರಿ 4600 ಡಾಲರ್ (ಸುಮಾರು -ಠಿ; 3 ಲಕ್ಷ) ಖರ್ಚಾಗುತ್ತದೆ. ಸೌದಿಯ ವಿವಿಧ ಭಾಗಗಳಿಂದಲೇ ಹಜ್​ಗೆ ಆಗಮಿ ಸುವ ಯಾತ್ರಿಕರಿಗೆ ಸರಾಸರಿ 1,500 ಡಾಲರ್ (ಸುಮಾರು -ಠಿ; 1 ಲಕ್ಷ) ವೆಚ್ಚವಾಗುತ್ತದೆ.
 • ಇರಾನ್, ಪಾಕಿಸ್ತಾನ, ಬಾಂಗ್ಲಾದೇಶದಿಂದ ಆಗಮಿಸುವ ಯಾತ್ರಿಕರಿಗೆ 3000 ಡಾಲರ್ (-ಠಿ; 2 ಲಕ್ಷ) ಖರ್ಚು ಬರುತ್ತದೆ.

ಭಾರತದಲ್ಲಿ ಸಬ್ಸಿಡಿ ಇತಿಹಾಸ

 • ಭಾರತದಲ್ಲಿ ಕೇಂದ್ರ ಸರ್ಕಾರ ಮುಸ್ಲಿಮರಿಗೆ ಹಜ್ ಯಾತ್ರೆ ಕೈಗೊಳ್ಳಲು ವಿಮಾನ ಪ್ರಯಾಣ ದರದಲ್ಲಿ ಸಬ್ಸಿಡಿ ರೂಪದಲ್ಲಿ ಭಾರಿ ರಿಯಾಯಿತಿ ನೀಡುತ್ತ ಬಂದಿದೆ.
 • ಹಜ್ ಯಾತ್ರೆಗೆ ಸಬ್ಸಿಡಿ ನೀಡುವ ಕ್ರಮ ಆರಂಭವಾಗಿದ್ದು ಬ್ರಿಟಿಷ್ ವಸಾಹತು ಕಾಲದಲ್ಲಿ. ಬ್ರಿಟಿಷ್ ಸರ್ಕಾರ 1932ರಲ್ಲಿ ಪೋರ್ಟ್ ಹಜ್ ಕಮಿಟಿಸ್ ಆಕ್ಟ್ ರೂಪಿಸಿತ್ತು.
 • ಸ್ವಾತಂತ್ರ್ಯದ ಬಳಿಕ ಅಧಿಕಾರಕ್ಕೆ ಬಂದ ಸರ್ಕಾರಗಳು ಈ ನೀತಿಯನ್ನೇ ಮುಂದುವರಿಸಿ ಕೊಂಡು ಹೋದವು. 1954ರಲ್ಲಿ ಮುಂಬೈ-ಜೆಡ್ಡಾ ನಡುವೆ ನೇರ ವಿಮಾನ ಯಾನ ಆರಂಭಿಸಿ, ರಿಯಾಯಿತಿ ದರದಲ್ಲಿ ಹಜ್ ಯಾತ್ರಿಕರ ಪ್ರಯಾಣಕ್ಕೆ ಅವಕಾಶ ಕಲ್ಪಿಸ ಲಾಯಿತು.
 • 2000ನೇ ವರ್ಷದಿಂದ ಈಚೆಗೆ 50 ಕೋಟಿ ಮುಸಲ್ಮಾನರು ಈ ಸಬ್ಸಿಡಿಯ ಲಾಭ ಪಡೆದಿದ್ದಾರೆ. 2008ರಿಂದ ಈವರೆಗೆ ವರ್ಷಕ್ಕೆ ಸರಾಸರಿ 1.20 ಲಕ್ಷ ಯಾತ್ರಿಗಳು ಸಬ್ಸಿಡಿ ಪಡೆದುಕೊಂಡಿದ್ದಾರೆ. ಅಂಕಿಅಂಶಗಳ ಪ್ರಕಾರ ಪ್ರತಿ ಯಾತ್ರಾರ್ಥಿಗೆ ಸರಾಸರಿ -ಠಿ; 73,526 ಸಬ್ಸಿಡಿ ದೊರೆತಿದೆ.

ಬಹುತೇಕ ಇಸ್ಲಾಂ ರಾಷ್ಟ್ರಗಳಲ್ಲಿ ಇಲ್ಲ ಹಜ್ ಸಬ್ಸಿಡಿ ಸೌಲಭ್ಯ

 • ಹಜ್ ಯಾತ್ರಿಗಳು ಅಗತ್ಯ ಆರ್ಥಿಕ ಸಂಪನ್ಮೂಲವನ್ನು ತಮ್ಮ ದುಡಿಮೆಯಿಂದಲೇ ಒದಗಿಸಿಕೊಳ್ಳಬೇಕು. ಧನ ಸಹಾಯ ಪಡೆಯುವುದು ಧರ್ಮಬಾಹಿರ ಎಂದು ಇಸ್ಲಾಂನ ಅನೇಕ ಮೌಲ್ವಿ ಗಳು ಹೇಳಿದ್ದಾರೆ. ಹೀಗಾಗಿ ಜಗತ್ತಿನ ಬಹುತೇಕ ಇಸ್ಲಾಂ ರಾಷ್ಟ್ರಗಳಲ್ಲಿ ಹಜ್ ಸಬ್ಸಿಡಿ ನೀಡುವುದಿಲ್ಲ.

ಭಾರತದಲ್ಲಿ ಹಂತ ಹಂತವಾಗಿ ರದ್ದು

 • ಭಾರತದಲ್ಲಿ ಹಜ್ ಸಬ್ಸಿಡಿ ನಿಲ್ಲಿಸುವಂತೆ ಸುಪ್ರೀಂಕೋರ್ಟ್ 2012 ರಲ್ಲಿ ತೀರ್ಪು ನೀಡಿತ್ತು. ಆದರೆ, ಜಾರಿಯಾಗಿರಲಿಲ್ಲ. ಕಳೆದ ವರ್ಷ ಜನವರಿ ಯಲ್ಲಿ ಕೇಂದ್ರ ಸರ್ಕಾರ ಹಜ್ ಸಬ್ಸಿಡಿಯನ್ನು ಹಂತ ಹಂತವಾಗಿ ರದ್ದು ಮಾಡುವ ನಿರ್ಧಾರ ಕೈಗೊಂಡಿತ್ತು.
 • 2022ಕ್ಕೆ ಸಂಪೂರ್ಣವಾಗಿ ಇದು ಸ್ಥಗಿತಗೊಳ್ಳಲಿದೆ. ಹಜ್ ಸಬ್ಸಿಡಿಗೆ ನೀಡುತ್ತಿದ್ದ ಅನುದಾನವನ್ನು ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಬಲೀಕರಣಕ್ಕೆ ವಿನಿಯೋಗಿಸಲಾಗುವುದು ಎಂದು ಅಲ್ಪಸಂಖ್ಯಾತರ ವ್ಯವಹಾರ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದರು.
 • ಇದರಿಂದ ವಾರ್ಷಿಕ -ಠಿ; 700 ಕೋಟಿಗೂ ಹೆಚ್ಚು ಉಳಿತಾಯವಾಗಲಿದೆ. 2018ರಲ್ಲಿ 75 ಲಕ್ಷ ಜನರು ಹಜ್ ಯಾತ್ರೆ ಕೈಗೊಂಡಿದ್ದರು.

ಹಜ್ ಯಾತ್ರೆ ಪ್ರಮುಖ ಕರ್ತವ್ಯ

 • ಇಸ್ಲಾಂ ಧರ್ಮದಲ್ಲಿ ಪ್ರತಿಯೊಬ್ಬರೂ ನಿಭಾಯಿಸಬೇಕಾದ ಐದು ಪ್ರಮುಖ ಕರ್ತವ್ಯಗಳ ಪೈಕಿ ಹಜ್ ಯಾತ್ರೆ ಕೂಡ ಒಂದು. ಇಸ್ಲಾಂನ ಪ್ರಮುಖ ಸ್ತಂಭಗಳಲ್ಲಿ ಹಜ್ ಯಾತ್ರೆಗೆ ಸ್ಥಾನ ನೀಡಲಾಗಿದೆ.
 • ಪ್ರತಿಯೊಬ್ಬ ಮುಸಲ್ಮಾನ ನಮಾಜ್ ಮತ್ತು ರೋಜಾವನ್ನು ಕಡ್ಡಾಯವಾಗಿ ಕೈಗೊಳ್ಳುವಂತೆಯೇ ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಯನ್ನು ಕೈಗೊಳ್ಳಬೇಕು.
 • ಪ್ರಯಾಣ, ವಸತಿ, ಆಹಾರದ ಖರ್ಚನ್ನು ಯಾತ್ರಿಕರು ಸ್ವಂತವಾಗಿ ಭರಿಸಬೇಕು ಎಂಬ ಉಲ್ಲೇಖ ಕುರಾನ್​ನಲ್ಲಿ ಇದೆ ಎಂಬುದು ಇಸ್ಲಾಂ ಧಾರ್ವಿುಕ ಮುಖಂಡರ ಅಭಿಪ್ರಾಯ.
Related Posts
“25 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಾರುಕಟ್ಟೆ ಖಾತರಿ ಯೋಜನೆ ಸುದ್ಧಿಯಲ್ಲಿ ಏಕಿದೆ ?ಕೃಷಿ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಂದ ರೈತರಿಗಾಗುವ ವಂಚನೆ ತಪ್ಪಿಸುವುದಕ್ಕಾಗಿ ಕೆಲವು ಕೃಷಿ ಉತ್ಪನ್ನಗಳಿಗಷ್ಟೇ ಇರುವ ಕನಿಷ್ಠ ಬೆಂಬಲ ಬೆಲೆಯನ್ನು ವಾಣಿಜ್ಯ ಹಾಗೂ ಸಿರಿಧಾನ್ಯ ಬೆಳೆಗಳಿಗೂ ವಿಸ್ತರಿಸಿ ಮಾರುಕಟ್ಟೆ ಖಾತರಿ ಒದಗಿಸುವ ನಿರ್ಧಾರಕ್ಕೆ ಸರ್ಕಾರ  ಬಂದಿದೆ. ಏಕೆ ಈ ಯೋಜನೆ ...
READ MORE
“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೃಂದಾವನಕ್ಕೆ ಡಿಸ್ನಿಲ್ಯಾಂಡ್‌ ಮಾದರಿ ಲುಕ್‌ ಸುದ್ಧಿಯಲ್ಲಿ ಏಕಿದೆ ?ಕೃಷ್ಣರಾಜಸಾಗರ ಜಲಾಶಯದ ಬೃಂದಾವನ ಉದ್ಯಾನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ 1,200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನೀಲಿನಕ್ಷೆ ಸಿದ್ಧಪಡಿಸಿದೆ. ಈಗಿನ ಪಾರಂಪರಿಕ ತಾಣದ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಬೃಂದಾವನವನ್ನು ವಿಶ್ವದ ಪ್ರವಾಸಿ ತಾಣಗಳಲ್ಲೇ ...
READ MORE
“13 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹೆಸರಿನ ಜತೆ ಭಾರತರತ್ನ, ಪದ್ಮ ಪ್ರಶಸ್ತಿ ಬಳಸುವಂತಿಲ್ಲ! ಸುದ್ಧಿಯಲ್ಲಿ ಏಕಿದೆ ? ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳೆನಿಸಿರುವ ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗಳು ಗೌರವಗಳೇ ಹೊರತು ಬಿರುದುಗಳಲ್ಲ. ಹಾಗಾಗಿ ಹೆಸರಿನ ಜತೆ ಅವುಗಳನ್ನು ಬಳಸುವಂತಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಒಂದು ವೇಳೆ ...
READ MORE
“21 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿದ್ಯುತ್ ಕಡಿತಕ್ಕೆ ಸೋಲಾರ್ ಪರಿಹಾರ ಸುದ್ಧಿಯಲ್ಲಿ ಏಕಿದೆ ?ಬೇಸಗೆ ಬಂದರೆ ಲೋಡ್‌ ಶೆಡ್ಡಿಂಗ್‌ ಜತೆಗೆ ವಿದ್ಯುತ್‌ ಬಿಲ್‌ ಕೂಡ ದುಬಾರಿ. ಇದಕ್ಕೆ ಪರ್ಯಾಯವೆಂದರೆ ನಮ್ಮ ಮನೆಯಲ್ಲಿ ನಾವೇ ವಿದ್ಯುತ್‌ ಉತ್ಪಾದಿಸಿಕೊಳ್ಳುವುದು. ಒಂದು ಬಾರಿಯ ಹೂಡಿಕೆಯಿಂದ ಆಗುವ ಸಾಕಷ್ಟು ಲಾಭವೇ ಸೋಲಾರ್‌ ವಿದ್ಯುತ್‌ನತ್ತ ಹೆಚ್ಚು ...
READ MORE
“26th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಪರಿಸರ ಸೂಕ್ಷ್ಮ ವಲಯ ಸುದ್ಧಿಯಲ್ಲಿ ಏಕಿದೆ ? ಕೊಡಗು ಅತಿವೃಷ್ಠಿ ಹಾನಿಯಿಂದ ಪಾಠ ಕಲಿಯದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯದ ಬಗ್ಗೆ ಹೊರಡಿಸಿರುವ ಅಧಿಸೂಚನೆಯನ್ನು ಮತ್ತೊಮ್ಮೆ ವಿರೋಧಿಸಲು ನಿರ್ಧರಿಸಿದೆ. ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಆಗಿರುವ ತೊಂದರೆಯೇ ಮಳೆ ...
READ MORE
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಸಿವಿಜಿಲ್’ ಮೊಬೈಲ್ ಆಪ್ ಸುದ್ಧಿಯಲ್ಲಿ ಏಕಿದೆ ?ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಚುನಾವಣಾ ಆಯೋಗ ’ ಸಿವಿಜಿಲ್’ ಮೊಬೈಲ್ ಆಪ್ ಹೊರತರುತ್ತಿದೆ. ಆಪ್​ನಲ್ಲಿ ಅಕ್ರಮದ ಫೋಟೋ, ವೀಡಿಯೋ ಅಪ್​ಲೋಡ್ ಮಾಡಿದ 100 ನಿಮಿಷಗಳಲ್ಲಿ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿಯೂ ಲಭಿಸಲಿದೆ. ಹಿನ್ನಲೆ ಕಳೆದ ...
READ MORE
“14 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಅತ್ಯಮೂಲ್ಯ ಖನಿಜ ಪೈರೋಕ್ಲಾಸ್ಟಿಕ್‌ ರಾಕ್ಸ್‌ ಪತ್ತೆ ಸುದ್ಧಿಯಲ್ಲಿ ಏಕಿದೆ ? ಭಾರತದಲ್ಲೇ ಅಪರೂಪವಾಗಿರುವ ಖನಿಜವೊಂದು ಕೋಲಾರ ಗೋಲ್ಡ್‌ ಫೀಲ್ಡ್‌ ಖ್ಯಾತಿಯ ಕೆಜಿಎಫ್‌ ಬಳಿ ಪತ್ತೆಯಾಗಿದ್ದು, ಭಾರತೀಯ ಭೂವಿಜ್ಞಾನ ಇಲಾಖೆಯು ಇದರ ಸಂರಕ್ಷಣೆಗೆ ಮುಂದಾಗಿದೆ. ಕೆಜಿಎಫ್‌ ಬಳಿಯ ಪೆದ್ದಪಲ್ಲಿ ಗ್ರಾಮದಲ್ಲಿ ಈ ಅಪರೂಪದ ಖನಿಜವಿದ್ದು, ಮೇಲ್ನೋಟಕ್ಕೆ ...
READ MORE
“09 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
 ವಾಣಿಜ್ಯ ಸಮರ  ಸುದ್ಧಿಯಲ್ಲಿ ಏಕಿದೆ ?ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಉತ್ತಮಗೊಳ್ಳುತ್ತಿರುವ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ಸಮರ ತೀವ್ರಗೊಳ್ಳುವ ಸಾಧ್ಯತೆ ಇದೆ. ಕಾರಣ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ 2 ಸಾವಿರಕ್ಕೂ ಹೆಚ್ಚು ಉತ್ಪನ್ನಗಳಿಗೆ ನೀಡುತ್ತಿರುವ ಶೂನ್ಯ ತೆರಿಗೆಯನ್ನು ರದ್ದುಗೊಳಿಸುವ ಬಗ್ಗೆ ಅಮೆರಿಕ ...
READ MORE
” 12 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮೈಸೂರು ಲ್ಯಾಂಫ್ಸ್‌ ಕಾರ್ಖಾನೆ ಸ್ಥಗಿತ  ಸುದ್ಧಿಯಲ್ಲಿ ಏಕಿದೆ? ಸರಕಾರಿ ಒಡೆತನದ ಮೈಸೂರು ಲ್ಯಾಂಫ್ಸ್‌ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಬಗ್ಗೆ ವಿವರ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿತು. ಮೈಸೂರು ಲ್ಯಾಂಫ್ಸ್‌ ಕಾರ್ಖಾನೆಯ ಕಾರ್ಮಿಕರ ಒಕ್ಕೂಟ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ಸಿಜೆ ದಿನೇಶ್‌ ಮಹೇಶ್ವರಿ ...
READ MORE
“11 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೈಗಾ ಅಣು ವಿದ್ಯುತ್ ಸ್ಥಾವರ ಸುದ್ಧಿಯಲ್ಲಿ  ಏಕಿದೆ ? ಯಾವುದೇ ತೊಂದರೆ ಇಲ್ಲದೆ ನಿರಂತರವಾಗಿ 941 ದಿನ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಕೈಗಾ ಮೊದಲ ಅಣು ವಿದ್ಯುತ್​ ಘಟಕ ವಿಶ್ವ ದಾಖಲೆ ನಿರ್ಮಿಸಿ ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ...
READ MORE
“25 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“13 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“21 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“26th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“14 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“09 ಫೆಬ್ರವರಿ 2019 ರ ಕನ್ನಡ ಪ್ರಚಲಿತ
” 12 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“11 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *