“07 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಋುಣ ಪರಿಹಾರ ಆಯೋಗ

1.

ಸುದ್ಧಿಯಲ್ಲಿ ಏಕಿದೆ ?ರೈತರು, ಕೂಲಿಕಾರ್ಮಿಕರು ಹಾಗೂ ಕೆಳಸ್ತರದ ಜನರಿಗೆ ಖಾಸಗಿ ಸಾಲದ ಹೊರೆಯಿಂದ ಮುಕ್ತಿ ನೀಡುವ ಉದ್ದೇಶದ ‘ಋುಣ ಪರಿಹಾರ ಕಾಯಿದೆ’ಗೆ ರಾಷ್ಟ್ರಪತಿ ಅಂಕಿತ ಬಾಕಿ ಇರುವ ಬೆನ್ನಲ್ಲೇ, ಕೇರಳ ಮಾದರಿಯಲ್ಲಿ ‘ಋುಣ ಪರಿಹಾರ ಆಯೋಗ’ ರಚನೆಗೆ ರಾಜ್ಯ ಸರಕಾರ ಆಸಕ್ತಿ ತೋರಿದೆ.

 • ಲೇವಾದೇವಿದಾರರ ದುಬಾರಿ ಬಡ್ಡಿ ದರದಿಂದ ಕೆಳವರ್ಗದ ದುಡಿಯುವ ಜನರು ಹಾಗೂ ರೈತರಿಗೆ ರಕ್ಷಣೆ ನೀಡಲು ಕೇರಳ ರಾಜ್ಯದಲ್ಲಿ ಜಾರಿಯಲ್ಲಿರುವ ಋುಣ ಪರಿಹಾರ ಆಯೋಗವನ್ನು ರಾಜ್ಯದಲ್ಲೂ ರಚನೆ ಮಾಡಲು ಉದ್ದೇಶಿಸಲಾಗಿದೆ.

ಕೇರಳದ ಋಣಭಾರ ಪರಿಹಾರ ನಿಯೋಗ:

 • ಇದು ರೈತರು ಪೂರ್ವನಿಯೋಜಿತರಾಗಿದ್ದ ಸಾಲಗಳ ಹಿನ್ನೆಲೆಯಲ್ಲಿ ರೈತ ಆತ್ಮಹತ್ಯೆ ಪ್ರದೇಶದ ಮೇಲೆ ಸ್ಥಾಪಿಸಲ್ಪಟ್ಟಿತು.
 • ಇದು ಕೇರಳ ರಾಜ್ಯ ರೈತರ ಋಣಭಾರ ಪರಿಹಾರ ಆಯೋಗದ ರಚನೆಗೆ ಕಾರಣವಾಯಿತು.
 • ಜನವರಿ 2007 ರಲ್ಲಿ ಕಾನೂನು ಜಾರಿಗೆ ಬಂದಿತು.
 • ಕೇರಳ ಪ್ರಯೋಗವು ದೊಡ್ಡ ರೀತಿಯಲ್ಲಿ ಫಾರ್ಮ್ ಸಾಲದ ಒಂದು ಉತ್ತಮ ಪರ್ಯಾಯವನ್ನು ಒದಗಿಸುತ್ತದೆ
 • ಕೇರಳ ಉಪಕ್ರಮದ ಅಡಿಯಲ್ಲಿ, ಏಳು ಸದಸ್ಯರು ಅಂದರೆ ರೈತರು, ಕಾನೂನು ತಜ್ಞರು, ಕೃಷಿ ಅರ್ಥಶಾಸ್ತ್ರಜ್ಞರು, ರಾಜಕೀಯ ನೇಮಕರು ಮತ್ತು ಇತರರು ಇರುತ್ತಾರೆ . ಇವರು ಗ್ರಾಮದಿಂದ ಗ್ರಾಮಕ್ಕೆ  ಹೋಗುತ್ತಾರೆ, ರೈತರೊಂದಿಗೆ ಮಾತನಾಡುತ್ತಾರೆ
 • ರೈತರಿಗೆ, ತಮ್ಮ ಸಾಲದ ಬಂಡವಾಳವನ್ನು ತೆರೆದು ಪರಿಹಾರವನ್ನು ಕ್ವಾಂಟಮ್ನಲ್ಲಿ ನಿರ್ಧರಿಸುತ್ತಾರೆ.
 • ಕಮಿಷನ್ ಒದಗಿಸಿದ ಪರಿಹಾರವು ಬೇಷರತ್ತಾಗಿರುವುದಿಲ್ಲ,ಅಂದರೆ ಕೆಲವು ಷರತ್ತುಗಳು ಅನ್ವಯಿಸುತ್ತವೆ .ಅವುಗಳೆಂದರೆ ಸಾಲವು ಸಹಕಾರ ಕ್ಷೇತ್ರದಿಂದ ಇರಬೇಕು
 • ಅರ್ಜಿದಾರರು ಸಣ್ಣ ಅಥವಾ ಕನಿಷ್ಠ ರೈತರಾಗಿರಬೇಕು,
 • ಐದು ಎಕರೆಗಳಿಗಿಂತಲೂ ಕಡಿಮೆಯಿರುವ ಒಂದು ಬೆಳೆ ಪ್ರದೇಶವನ್ನು ಗುತ್ತಿಗೆಗೆ ತೆಗೆದುಕೊಂಡವರು ಅಥವಾ ಪಡೆದವರು; ಮತ್ತು ಅರ್ಜಿದಾರರ ವಾರ್ಷಿಕ ಆದಾಯ ₹ 2 ಲಕ್ಷಕ್ಕಿಂತಲೂ ಹೆಚ್ಚಾಗಬಾರದು.
 • ಆಯೋಗವು ಪ್ರತಿ ತಿಂಗಳು ಹಳ್ಳಿಯಲ್ಲಿ ಹಲವಾರು ದಿನಗಳವರೆಗೆ ಇರುತ್ತದೆ
 • ಪರಿಣಾಮ: ಆತ್ಮಹತ್ಯೆಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ

ಮಂಗನ ಕಾಯಿಲೆಗೆ ಶಾಶ್ವತ ಪರಿಹಾರ

2.

ಸುದ್ಧಿಯಲ್ಲಿ ಏಕಿದೆ ?ಮಂಗನ ಕಾಯಿಲೆ ನಿಯಂತ್ರಣ ವಿಚಾರದಲ್ಲಿ ಸರಕಾರ ಎಡವಿಲ್ಲ. ಈ ಕಾಯಿಲೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವುದಕ್ಕಾಗಿ ಸಂಶೋಧನಾ ಕೇಂದ್ರ ತೆರೆಯಲು ರಾಜ್ಯ ಸರಕಾರ ಕಾರ್ಯಾರಂಭ ಮಾಡಿದೆ

 • ರಾಜ್ಯದ 7 ಜಿಲ್ಲೆಗಳು ಹಾಗೂ ನೆರೆಯ ರಾಜ್ಯಗಳಿಗೂ ಅನುಕೂಲವಾಗುವ ರೀತಿಯಲ್ಲಿ ಔಷಧ ಸಂಶೋಧನಾ ಸಂಸ್ಥೆ ನಿರ್ಮಾಣಕ್ಕೆ ರಾಜ್ಯ ಸರಕಾರ ನಿರ್ಧರಿಸಿದೆ.
 • ಈ ಹಿನ್ನೆಲೆಯಲ್ಲಿ ನ್ಯಾಷÜನಲ್‌ ವೈರಾಲಜಿ ಇನ್‌ಸ್ಟಿಟ್ಯೂಟ್‌ ಜತೆಗೆ ಒಡಂಬಡಿಕೆ ಮಾಡಿಕೊಳ್ಳುತ್ತೇವೆ.
 • ಸಂಶೋಧನಾ ಕೇಂದ್ರವನ್ನು ಸಾಗರ ಅಥವಾ ಶಿವಮೊಗ್ಗದಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ, ಮಂಗಗಳಲ್ಲಿ ಕಾಣಿಸಿಕೊಳ್ಳುವ ರೋಗ ಲಕ್ಷಣವನ್ನೂ ಖಚಿತಪಡಿಸಿಕೊಳ್ಳುವುದಕ್ಕೆ ಸಂಶೋಧನಾಲಯದಲ್ಲಿ ವ್ಯವಸ್ಥೆ ಕಲ್ಪಿಸುತ್ತೇವೆ. ಜತೆಗೆ ನಿರಂತರ ಔಷಧ ಉತ್ಪಾದನೆ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತಿ ಐದು ವರ್ಷಕ್ಕೊಮ್ಮೆ ಮಂಗನ ಕಾಯಿಲೆ ನಿಯಂತ್ರಣಕ್ಕೆ ಲಸಿಕೆ ಹಾಕಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ

ಏನಿದು ಮಂಗನಕಾಯಿಲೆ?

 • ಮಂಗಗಳಿಗೆ ಜ್ವರ ಬಂದು ಸತ್ತಾಗ ಆ ಮಂಗಗಳಲ್ಲಿದ್ದ ಉಣ್ಣೆಗಳು ಬಂದು ಮನುಷ್ಯರಿಗೆ ಕಚ್ಚಿದಾಗ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ.
 • ನಾಲ್ಕು ದಶಕಗಳ ಹಿಂದೆ ಮೊದಲಿಗೆ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಬಳಿಕ ತೀರ್ಥಹಳ್ಳಿ ತಾಲೂಕಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಸಾಗರ ತಾಲೂಕಿಗೂ ವ್ಯಾಪಿಸಿದೆ. ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಮಂಗನ ಕಾಯಿಲೆ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಚುಚ್ಚುಮದ್ದು ನೀಡಲಾಗುತ್ತಿತ್ತು.

ಸ್ವಚ್ಛ ಸರ್ವೇಕ್ಷಣೆ

3.

ಸುದ್ಧಿಯಲ್ಲಿ ಏಕಿದೆ ?ದೇಶದ ಅತ್ಯಂತ ಸ್ವಚ್ಛ ನಗರಿ ಎಂಬ ಹಿರಿಮೆಯನ್ನು ಮಧ್ಯಪ್ರದೇಶದ ಇಂದೋರ್‌ ಸತತ ಮೂರನೇ ವರ್ಷವೂ ಉಳಿಸಿಕೊಂಡಿದೆ. ಹಾಗೆಯೇ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ಗೆ ‘ಸ್ವಚ್ಛ ರಾಜಧಾನಿ’ ಪ್ರಶಸ್ತಿ ಸಂದಿದೆ.

 • ಟಾಪ್‌ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಛತ್ತೀಸ್‌ಗಢದ ಅಂಬಿಕಾಪುರಿ ಇದ್ದರೆ, ಮೂರನೇ ಸ್ಥಾನವನ್ನು ಅರಮನೆ ನಗರಿ ಮೈಸೂರು ಪಡೆದುಕೊಂಡಿದೆ.
 • ಜನವರಿ 4ರಿಂದ 31ರವರೆಗೆ ದೇಶಾದ್ಯಂತ 4,237 ನಗರ ಹಾಗೂ ಪಟ್ಟಣಗಳನ್ನು ಸ್ವಚ್ಛತಾ ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು.
 • ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಪ್ರಶಸ್ತಿಗಳನ್ನು ಕೊಡಮಾಡುತ್ತದೆ.
 • ರಾಷ್ಟ್ರ ರಾಜಧಾನಿ ಹೊಸದಿಲ್ಲಿ ನಗರಸಭೆ ಅತ್ಯಂತ ಸ್ವಚ್ಛ ಪುಟ್ಟ ನಗರ ಎಂಬ ಪುರಸ್ಕಾರಕ್ಕೆ ಭಾಜನವಾಗಿದೆ.
 • ಉತ್ತರಾಖಂಡ್‌ನ ಗೌಚಾರ್‌ ನಗರಕ್ಕೆ ಗಂಗಾ ತೀರದ ಉತ್ತಮ ನಗರಿ ಪ್ರಶಸ್ತಿ ಲಭಿಸಿದೆ.
 • ಗುಜರಾತ್‌ನ ಅಹಮದಾಬಾದ್‌ ಅತಿದೊಡ್ಡ ಸ್ವಚ್ಛ ನಗರಿ ಮತ್ತು ಛತ್ತೀಸ್‌ಗಢದ ರಾಯಪುರ ‘ವೇಗವಾಗಿ ಬೆಳೆಯುತ್ತಿರುವ ಮಹಾನಗರಿ’ ಎಂಬ ಗೌರವ ಪಡೆದುಕೊಂಡಿವೆ.

ಸ್ವಚ್ಛ ಸುರ್ವೆಕ್ಷಣದಲ್ಲಿ ಬೆಂಗಳೂರು

 • ದೇಶದ ಸ್ವಚ್ಛ ನಗರಗಳ ಸಮೀಕ್ಷೆಯಲ್ಲಿ ಕಳೆದ ವರ್ಷಕ್ಕಿಂತ ಈ ಸಲ 22 ಸ್ಥಾನ ಮೇಲೆ ಜಿಗಿದಿರುವ ಬಿಬಿಎಂಪಿ 194ನೇ ರ‍್ಯಾಂಕ್ ಪಡೆದುಕೊಳ್ಳುವಲ್ಲಿ ಸಫಲವಾಗಿದೆ.
 • ಆದರೆ, ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್‌) ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಅಧಿಕ ಅಂಕ ಪಡೆಯುವಲ್ಲಿ ಸೋತಿದೆ.
 • ಬೆಂಗಳೂರು ದೇಶದ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ 425 ನಗರಗಳ ಸಾಲಿನಲ್ಲಿತ್ತು. ಸಮೀಕ್ಷೆಯಲ್ಲಿ 5 ಸಾವಿರ ಅಂಕಗಳಲ್ಲಿ ಒಟ್ಟು ಬೆಂಗಳೂರಿಗೆ 81 ಅಂಕಗಳು ಸಿಕ್ಕಿದೆ. ಸ್ವಚ್ಛ ನಗರಗಳ ಮಾನದಂಡದಲ್ಲಿ ಬಯಲು ಬಹಿರ್ದೆಸೆ ತಡೆಯುವುದು ಮತ್ತು ಶೌಚಾಲಯಗಳ ನಿರ್ಮಾಣವು ಪ್ರಮುಖವಾಗಿತ್ತು. ಸ್ಟಾರ್‌ ರೇಟಿಂಗ್‌ ಸೇರಿ ಬಯಲು ಬಹಿರ್ದೆಸೆ ಮುಕ್ತ ವಿಭಾಗಕ್ಕೆ 1250 ಅಂಕಗಳಿದ್ದವು. ಇದರಲ್ಲಿ ನಗರಕ್ಕೆ ಕೇವಲ 25 ಅಂಕಗಳಷ್ಟೇ ದೊರೆತಿವೆ. ಹೀಗಾಗಿ 50ರ ಒಳಗೆ ರ‍್ಯಾಂಕ್ ಪಡೆಯಲು ಸಾಧ್ಯವಾಗಿಲ್ಲ.
 • ಸ್ವಚ್ಛ ಸರ್ವೇಕ್ಷಣಾ –2019 ಪ್ರಶಸ್ತಿಗೆ ಹೊಸದುರ್ಗ ಪುರಸಭೆ ಭಾಜನವಾಗಿದೆ.

ಕಸ ವಿಲೇವಾರಿ

 • ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಪ್ರತಿ ಮನೆಗಳಿಗೆ ಹಸಿ ಹಾಗೂ ಒಣ ಕಸ ವಿಂಗಡನೆ ಮಾಡಲು ಎರಡೆರಡು ಕಸದ ಬುಟ್ಟಿಗಳನ್ನು ನೀಡಲಾಗಿದೆ.
 • ವಾಣಿಜ್ಯ ಮಳಿಗೆಗಳ ಕಸ ಸಂಗ್ರಹಣೆ ಹಾಗೂ ಮಾಂಸದ ಮಾರುಕಟ್ಟೆಯಲ್ಲಿ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ.
 • ಸಂಗ್ರಹವಾಗುವ ಘನ ತ್ಯಾಜ್ಯವನ್ನು ನಿತ್ಯ ಆಟೊಗಳ ಮೂಲಕ ಪೌರ ಕಾರ್ಮಿಕರು ಮೂಲದಲ್ಲಿಯೇ ಬೇರ್ಪಡಿಸಿ ಸಂಗ್ರಹಣೆ ಮಾಡಿಕೊಂಡು ಸರಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಇರುವ ಕಸ ಸಂಗ್ರಹಣಾಗಾರದಲ್ಲಿ ಒಣ, ಹಸಿ ಹಾಗೂ ಪ್ಲಾಸ್ಟಿಕ್‌ ಕಸ ವಿಂಗಡಣೆ ಮಾಡುವ ಮೂಲಕ ಮರು ಬಳಕೆಗೆ ಬರುವ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಬಂಡಲ್‌ ಮಾಡಲಾಗುತ್ತದೆ.

ಜಾಗೃತಿ ಕಾರ್ಯಕ್ರಮ

 • ಪಟ್ಟಣವನ್ನು ಸ್ವಚ್ಛ ನಗರವನ್ನಾಗಿಸಲು ಕಳೆದ ಮೂರ್ನಾಲ್ಕು ವರ್ಷಗಳಿಂದ ನಾನಾ ಸಂಘ ಸಂಸ್ಥೆಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ, ಬೀದಿ ನಾಟಕಗಳನ್ನು ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.
 • ನಿತ್ಯ ಪಟ್ಟಣದ ಸ್ವಚ್ಛತೆಗೆ ಮುಂದಾಗುವ ಪೌರ ಕಾರ್ಮಿಕರಲ್ಲಿ ಉತ್ಸಾಹ ಮೂಡಿಸಲು ವಿದೇಶ ಪ್ರವಾಸ, ಅಧ್ಯಯನ ಪ್ರವಾಸ, ಪ್ರತಿ ತಿಂಗಳು ಆರೋಗ್ಯ ತಪಾಸಣೆ, ರಕ್ಷಾ ಕವಚಗಳನ್ನು ನೀಡಲಾಗಿದೆ.

ಯಾವುದಕ್ಕೆ ಎಷ್ಟು ಅಂಕ?

 • ಈ ಬಾರಿ ಸ್ವಚ್ಛ ಸರ್ವೆಕ್ಷಣೆಗೆ ಸೇವಾ ವಲಯದ ಪ್ರಗತಿ, ಪ್ರಮಾಣೀಕರಣ, ಸ್ಥಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಎಂಬ ನಾಲ್ಕು ವಿಭಾಗಗಳನ್ನು ಮಾಡಲಾಗಿತ್ತು.
 • ಪ್ರತಿ ವಿಭಾಗಕ್ಕೆ 1,250 ಅಂಕಗಳನ್ನು ನಿಗದಿಪಡಿಸಲಾಗಿದೆ. ಪ್ರಥಮ ಸ್ಥಾನ ಪಡೆದ ಇಂದೋರ್ ಸೇವಾ ವಲಯದ ಪ್ರಗತಿಯಲ್ಲಿ 1239, ಪ್ರಮಾಣೀಕರಣ-1050, ಸ್ಥಳ ಪರಿಶೀಲನೆ-1241 ಹಾಗೂ ಸಾರ್ವಜನಿಕರ ಅಭಿಪ್ರಾಯದಲ್ಲಿ 1129 ಅಂಕ ಸೇರಿ 4659 ಅಂಕಗಳನ್ನು ಪಡೆದಿದೆ.
 • ಮೈಸೂರು ಸೇವಾ ವಲಯದ ಪ್ರಗತಿಯಲ್ಲಿ 1195, ಪ್ರಮಾಣೀಕರಣ-1000, ಸ್ಥಳ ಪರಿಶೀಲನೆ-1211 ಹಾಗೂ ಸಾರ್ವಜನಿಕರ ಅಭಿಪ್ರಾಯದಲ್ಲಿ 972 ಅಂಕ ಸೇರಿ 4659 ಅಂಕಗಳನ್ನು ಪಡೆದಿದೆ.

ಬುಡಕಟ್ಟು ಸಮರಕ್ಕೆ ಸಂಚು

ಸುದ್ಧಿಯಲ್ಲಿ ಏಕಿದೆ ?ಪಾಕಿಸ್ತಾನ ಈಗ ಭಾರತದ ವಿರುದ್ಧ ಸೇಡು ಸಾಧಿಸಲು ಮತ್ತೊಂದು ಅಡ್ಡ ಹಾದಿಯನ್ನು ಶೋಧಿಸಿದೆ. ತನ್ನ ಖೈಬರ್‌ ಪಖ್ತುಂಖ್ವಾ ಗುಡ್ಡಗಾಡು ಪ್ರಾಂತದ ಬುಡಕಟ್ಟು ಜನರಿಗೆ ಉಗ್ರ ತರಬೇತಿ ನೀಡಿ ಭಾರತದ ಮೇಲೆ ಮುಖೇಡಿ ಸಮರ ಸಾರಲು ಮುಂದಾಗಿದೆ.

 • ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಸೆರೆ ಹಿಡಿದ ದಿನವೇ ಅಲ್ಲಿನ ಭದ್ರತಾ ಅಧಿಕಾರಿಗಳು, ಖೈಬರ್‌ ಪಖ್ತುಂಖ್ವಾ ಪ್ರಾಂತದ ಪಾಶ್ತುನ್‌ಬುಡಕಟ್ಟು ಸಮುದಾಯದ ಮುಖಂಡರ ಜತೆ ‘ಜಿರ್ಗಾಸ್‌’ (ಸಭೆ) ನಡೆಸಿ, ದಾಳಿ ಕಾರ್ಯತಂತ್ರ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಹಿನ್ನಲೆ

 • ಹಿಂದೆ 1947ರಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ ವಶಪಡಿಸಿಕೊಂಡ ವಿಧಾನವೇ ಇದಕ್ಕೆಲ್ಲ ಪ್ರೇರಣೆ ಎನ್ನಲಾಗಿದೆ. ದೇಶ ವಿಭಜನೆ ನಂತರವೂ ರಾಜ ಹರಿಸಿಂಗ್‌ ಸಿಂಗ್‌ ಜಮ್ಮ-ಕಾಶ್ಮೀರವನ್ನು ಯಾವುದೇ ದೇಶದೊಂದಿಗೆ ಸೇರಿಸಲೊಪ್ಪದೇ ಪ್ರತ್ಯೇಕವಾಗಿ ಉಳಿಸಿಕೊಂಡಿದ್ದರು. ಆಗ ಅದರ ಸ್ವಾಧೀನಕ್ಕೆ ಪಾಕಿಸ್ತಾನ ತನ್ನ ಖೈಬರ್‌ ಪ್ರಾಂತದ ಬುಡಕಟ್ಟು ಜನರನ್ನು ನುಗ್ಗಿಸಿ ಸಾಮೂಹಿಕ ನರಮೇಧ ನಡೆಸಿತ್ತು. ಇದರಿಂದ ದಿಗಿಲುಗೊಂಡ ಹರಿಸಿಂಗ್‌, ಭಾರತದ ಜತೆ ಒಡಂಬಡಿಕೆ ಮಾಡಿಕೊಂಡು ಹಿಂಸಾಚಾರ ತಡೆಗೆ ಮನವಿ ಮಾಡಿದ್ದ. ಆಗ ಭಾರತೀಯ ಸೇನೆ ಬುಡಕಟ್ಟು ಉಗ್ರರನ್ನು ಬಗ್ಗುಬಡಿದು ಕಣಿವೆ ರಾಜ್ಯವನ್ನು ರಕ್ಷಿಸಿತ್ತು.
 • ಹಿಂದಿನ ಆ ಸನ್ನಿವೇಶವನ್ನೇ ಪುನರಾವರ್ತಿಸಿ ಭಾರತವನ್ನು ಕಾಡಲು ಪಾಕಿಸ್ತಾನ ಈಗ ಸಿದ್ಧಗೊಂಡಿದೆ. ಬುಡಕಟ್ಟು ಜನರಿಗೆ ಶಸ್ತ್ರಾಸ್ತ್ರ ಹಾಗೂ ಉಗ್ರ ತರಬೇತಿ ನೆರವು ನೀಡಲೂ ಅಲ್ಲಿನ ಅಧಿಕಾರಿಗಳು ಮುಂದಾಗಿದ್ದಾರೆ.

ಪಶ್ತೂನ್ ಬುಡಕಟ್ಟುಗಳು

 • ಪಶ್ತೂನ್ ಬುಡಕಟ್ಟುಗಳು ಅಥವಾ ಅಫಘಾನ್ ಬುಡಕಟ್ಟು ಜನಾಂಗವು ಪಶ್ತೂನ್ ಜನರ ಬುಡಕಟ್ಟು ಜನಾಂಗವಾಗಿದ್ದು, ಪಾಶ್ಚಾತ್ಯ ಭಾಷೆಯನ್ನು ಬಳಸುವ ಮತ್ತು ಪಶ್ತುನ್ವಾಲಿ ನಡವಳಿಕೆಯನ್ನು ಅನುಸರಿಸುವ ದೊಡ್ಡ ಪೂರ್ವದ ಇರಾನಿನ ಜನಾಂಗೀಯ ಗುಂಪು.
 • ಅವು ಪ್ರಾಥಮಿಕವಾಗಿ ಅಫ್ಘಾನಿಸ್ಥಾನ ಮತ್ತು ಪಾಕಿಸ್ತಾನದಲ್ಲಿ ಕಂಡುಬರುತ್ತವೆ ಮತ್ತು ಪ್ರಪಂಚದ ಅತಿದೊಡ್ಡ ಬುಡಕಟ್ಟು ಸಮಾಜವನ್ನು ರೂಪಿಸುತ್ತವೆ, ಇದರಲ್ಲಿ 49 ಮಿಲಿಯನ್ ಜನರು ಮತ್ತು 350 ಮತ್ತು 400 ಬುಡಕಟ್ಟು ಜನಾಂಗದವರು ಮತ್ತು ಬುಡಕಟ್ಟು ಜನಾಂಗದವರು ಸೇರಿದ್ದಾರೆ.
 • ಅವರು ಸಾಂಪ್ರದಾಯಿಕವಾಗಿ ನಾಲ್ಕು ಬುಡಕಟ್ಟುಗಳ ಒಕ್ಕೂಟಗಳಾಗಿ ವಿಭಜನೆಗೊಂಡಿದ್ದಾರೆ: ಸರ್ಬನಿ ದಿ ಬೆಟನಿ, ದಿ ಘರ್ಗಶಸ್ತಿ ಮತ್ತು ಕಾರ್ಲ್ಯಾನಿ

Related Posts
“29th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಎಕ್ಸ್-ರೇ ಮಾಫಿಯಾ ಸುದ್ಧಿಯಲ್ಲಿ ಏಕಿದೆ ?ವ್ಯಕ್ತಿಯ ದೇಹದೊಳಗಿನ ಸಮಸ್ಯೆ ಅನಾವರಣ ಮಾಡುವ ಎಕ್ಸ್ -ರೇ (ಕ್ಷ-ಕಿರಣ) ಕೇಂದ್ರಗಳಿಗೆ ಕಾನೂನಿನ ಅಂಕುಶ ಇರದ್ದರಿಂದ ರಾಜ್ಯದ ಬಹುತೇಕ ಎಕ್ಸ್-ರೇ ಕೇಂದ್ರಗಳು ಹಣಗಳಿಕೆಯ ಅಡ್ಡವಾಗಿ ಮಾರ್ಪಟ್ಟಿವೆ. ಇನ್ನೊಂದೆಡೆ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಎಕ್ಸ್-ರೇ ತೆಗೆಯಲಾಗುತ್ತಿರುವುದು ಆತಂಕ ...
READ MORE
” 28 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಡಿಎಲ್, ಆರ್​ಸಿ ಡಿಜಿಟಲ್ ದಾಖಲೆ ಪರೀಕ್ಷಿಸಲು ಮಾರ್ಗಸೂಚಿ ಸುದ್ಧಿಯಲ್ಲಿ ಏಕಿದೆ ?ವಾಹನ ಚಾಲಕರು ಸಲ್ಲಿಸುವ ಡಿಜಿಟಲ್ ಮಾದರಿ ದಾಖಲೆಗಳು ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹಲವು ಮಾರ್ಗಸೂಚಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್- ಎಸ್​ಒಪಿ) ರೂಪಿಸಿದೆ. ಎಸ್​ಒಪಿ ...
READ MORE
“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳ್ಳಂದೂರು ಕೆರೆ ಸುದ್ಧಿಯಲ್ಲಿ ಏಕಿದೆ ? ನೊರೆಕಾಟದ ಮೂಲಕ ಸದಾ ಸುದ್ದಿಯಾಗುವ ಬೆಳ್ಳಂದೂರು ಕೆರೆಯಲ್ಲಿ ನೀರಿನ ಪ್ರಮಾಣವೇ ಕಡಿಮೆ ಆಗುತ್ತಿದ್ದು, ಕೆರೆ ಬತ್ತುವ ಆತಂಕ ಸ್ಥಳೀಯರಲ್ಲಿ ತಲೆದೋರಿದೆ. ಆದರೆ, ಈ ಬಗ್ಗೆ ತಜ್ಞರಿಂದ ಹಲವು ವಿಶ್ಲೇಷಣೆಗಳು ವ್ಯಕ್ತವಾಗಿವೆ. ಕೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ...
READ MORE
“30th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ವಾಹನ ಸೌಲಭ್ಯ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿಶೇಷಚೇತನ ಮತದಾರರಿಗೆ ವಾಹನ ವ್ಯವಸ್ಥೆ ಕಲ್ಪಿಸುವುದಕ್ಕೆ ಚುನಾವಣಾ ಆಯೋಗ ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂಥ ಸುಧಾರಣಾ ಕ್ರಮ ...
READ MORE
“22 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಅರಣ್ಯ ನಿವಾಸಿಗರ ತೆರವಿಗೆ ಸುಪ್ರೀಂ ಆದೇಶ ಸುದ್ಧಿಯಲ್ಲಿ ಏಕಿದೆ ? ದೇಶಾದ್ಯಂತ ಕಾಡುಗಳಲ್ಲಿ ವಾಸಿಸುವ ಹತ್ತು ಲಕ್ಷ ಕ್ಕೂ ಹೆಚ್ಚಿನ ಬುಡಕಟ್ಟು ಮತ್ತು ಆದಿವಾಸಿ ಕುಟುಂಬಗಳನ್ನು ಕಾಡಿನಿಂದ ಹೊರಹಾಕಲು ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿದೆ. ಈ ಕುರಿತು ರಾಜ್ಯಗಳು ಸಲ್ಲಿಸಿದ್ದ ಅಫಿಡವಿಟ್‌ ...
READ MORE
” 26 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂಡಸ್ ನದಿ ಯೋಜನೆ ಸುದ್ಧಿಯಲ್ಲಿ ಏಕಿದೆ ? ಇಂಡಸ್ ನದಿ ನೀರು ಹಂಚಿಕೆ ಕುರಿತು ಪಾಕಿಸ್ತಾನದೊಂದಿಗೆ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದದಂತೆ ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ. ನದಿಗೆ ಅಡ್ಡಲಾಗಿ ನಿರ್ವಿುಸುತ್ತಿರುವ ಎರಡು ಅಣೆಕಟ್ಟೆಗಳ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಲು ಸರ್ಕಾರ ...
READ MORE
“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ರಾಷ್ಟ್ರೀಯ ಯುವ ದಿನ ಸುದ್ಧಿಯಲ್ಲಿ ಏಕಿದೆ ?ಸ್ವಾಮಿ ವಿವೇಕಾನಂದರ ಸ್ವರಣಾರ್ಥ ಜ.12ನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. 1984 ರಲ್ಲಿ ಭಾರತ ಸರಕಾರ ದಿನವನ್ನು ರಾಷ್ಟ್ರೀಯ ಯುವ ...
READ MORE
“15 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದ ಮೆರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌ ರ‍್ಯಾಂಕ್ ಪಟ್ಟಿ  ಸುದ್ಧಿಯಲ್ಲಿ ಏಕಿದೆ ?ಗುಣಮಟ್ಟದ ಜೀವನಕ್ಕೆ ಅತ್ಯುತ್ತಮ ನಗರ ಯಾವುದೆಂದು ತೀರ್ಮಾನಿಸುವ 2019ರ ದ ಮೆರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌ ರ‍್ಯಾಂಕ್ ಪಟ್ಟಿ (21ನೇ ಆವೃತ್ತಿ) ಬಿಡುಗಡೆಯಾಗಿದ್ದು, ಬೆಂಗಳೂರು ಜಾಗತಿಕ ಮಟ್ಟದಲ್ಲಿ 149ನೇ ಸ್ಥಾನ ...
READ MORE
“14 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೆಜಿಎಫ್‌ ಗಣಿ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ ಸುದ್ಧಿಯಲ್ಲಿ ಏಕಿದೆ ?ಕೆಜಿಎಫ್‌ನ ಭಾರತ್‌ ಗೋಲ್ಡ್‌ ಮೈನ್ಸ್‌ ಕಂಪನಿ (ಬಿಜಿಎಂಎಲ್‌) ವಶದಲ್ಲಿರುವ ಸುಮಾರು 10 ಸಾವಿರ ಎಕರೆ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ಹಾಗೂ ಟೌನ್‌ಶಿಪ್‌ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಬಯಸಿದೆ. ''ಗಣಿಗಾರಿಕೆ ಸಂಬಂಧಿಸಿದಂತೆ 2015ರಲ್ಲಿ ಕೇಂದ್ರ ಸರ್ಕಾರ ...
READ MORE
“07 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಓಝೋನ್​ ಪದರ ರಂಧ್ರ ಕ್ರಮೇಣ ಕ್ಷೀಣ ಸುದ್ಧಿಯಲ್ಲಿ ಏಕಿದೆ ?ಭೂಮಿಯನ್ನು ಸೂರ್ಯನ ನೇರಳೆ ಕಿರಣಗಳಿಂದ ರಕ್ಷಣೆ ಮಾಡುವ ಓಝೋನ್​ ಪದರ ಸವಕಳಿ ಸುಧಾರಿಸುತ್ತಿದ್ದು ಪದರಕ್ಕೆ ಆಗಿದ್ದ ಹಾನಿ ಕ್ರಮೇಣ ಸರಿಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಹಿನ್ನೆಲೆ ಓಝೋನ್​ ಪದರ 1970ನೇ ಇಸ್ವಿಯಿಂದೀಚೆಗೆ ತೆಳುವಾಗುತ್ತಿದೆ ಎಂದು ...
READ MORE
“29th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
” 28 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“30th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“22 ಫೆಬ್ರವರಿ 2019 ರ ಕನ್ನಡ ಪ್ರಚಲಿತ
” 26 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“14 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“07 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *