“08 ಫೆಬ್ರವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ವಿರಾಗಿಯ ಮಹಾಮಜ್ಜನಕ್ಕೆ ಧರ್ಮಸ್ಥಳ ಸಜ್ಜು

1.

ಸುದ್ಧಿಯಲ್ಲಿ ಏಕಿದೆ ? ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಈ ಶತಮಾನದ ಎರಡನೇ ಮಹಾಮಜ್ಜನಕ್ಕೆ ಸಿದ್ಧವಾಗಿದ್ದು, ಧಾರ್ವಿುಕ ಕಾರ್ಯಕ್ರಮಗಳು ಮೇಳೈಸಲಿವೆ.

 • ರತ್ನಗಿರಿ ಬೆಟ್ಟದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಸಕಲ ರೀತಿಯಲ್ಲೂ ಸಜ್ಜುಗೊಂಡಿರುವ ಕ್ಷೇತ್ರ ಅಲಂಕಾರಗೊಂಡು ಅಯೋಧ್ಯಾ ನಗರದ ರೂಪ ತಳೆದಿದೆ.
 • ಪಂಚಮಹಾವೈಭವ: ಬಾಹುಬಲಿ ಜೀವನ ದರ್ಶನ ಮಾಡಿಸುವ ಪಂಚಮಹಾವೈಭವ ಫೆ.11ರಿಂದ 15ರ ತನಕ ನಡೆಯಲಿದೆ. ಇದಕ್ಕಾಗಿ ಭರತನ ಅರಮನೆಯ ದರ್ಬಾರ್ ಹಾಲ್ ಸಜ್ಜಾಗಿದ್ದು, ತರಬೇತಿ ಪಡೆದ 300 ಕಲಾವಿದರು ಸಿದ್ಧರಾಗಿದ್ದಾರೆ.

16ರಿಂದ 18 ಮಹಾಮಸ್ತಕಾಭಿಷೇಕ

 • ಮಹಾಮಸ್ತಕಾಭಿಷೇಕ ಪ್ರಯುಕ್ತ ಫೆ.8ರಿಂದ 15ರ ತನಕ ವಿವಿಧ ಧಾರ್ವಿುಕ ಕಾರ್ಯಕ್ರಮಗಳು, ಅನುಷ್ಠಾನಗಳು ನಡೆಯಲಿವೆ.
 • ಫೆ.9ರಂದು ಬಾಹುಬಲಿಗೆ ಅಭಿಷೇಕಗಳು ಆರಂಭಗೊಳ್ಳಲಿವೆ. ಅಂದು 24 ಕಲಶಗಳಿಂದ ಬಾಹುಬಲಿ ಪಾದಾಭಿಷೇಕ ನಡೆಯಲಿದೆ. 10ರಂದು 54 ಕಲಶ, 11ರಂದು 108 ಕಲಶ, 12ರಿಂದ 15ರವರೆಗೆ 216 ಕಲಶಗಳಿಂದ ಬಾಹುಬಲಿ ಪಾದಾಭಿಷೇಕ ನೆರವೇರುತ್ತದೆ.
 • ಫೆ.16, 17, 18ರಂದು ಮೂರು ದಿನ ಬಾಹುಬಲಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಈ ಅಪೂರ್ವ ಕ್ಷಣಗಳಿಗೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ. ಇದೇ ಸಂದರ್ಭ ರಾಷ್ಟ್ರದ ಗಣ್ಯರ ಭೇಟಿಯೂ ನಡೆಯಲಿದೆ.

ಬಾಹುಬಲಿ ಮೂರ್ತಿ ,ಧರ್ಮಸ್ಥಳ

 • ದೇವಸ್ಥಾನ ಪಟ್ಟಣವಾದ ಧರ್ಮಸ್ಥಳದ ಮಂಜುನಾಥ ದೇವಸ್ಥಾನದಿಂದ ಒಂದು ಕಿಲೋಮೀಟರು ದೂರದಲ್ಲಿ ಸುಂದರವಾದ ದಾರಿ ಇದೆ. ಇಲ್ಲಿ 39 ಅಡಿ ಎತ್ತರದಲ್ಲಿ ಬಾಹುಬಲಿಯ ಭವ್ಯವಾದ ದೇವಾಲಯವಾಗಿದೆ. ಇದನ್ನು 1973 ರಲ್ಲಿ ಪ್ರಸಿದ್ಧ ಶಿಲ್ಪಿ ರಂಜಲಾ ಗೋಪಾಲ್ಕೃಷ್ಣ ಶೆಣೈ ಅವರು ಶ್ರೀ ರತ್ನಾವರ್ಮ ಹೆಗ್ಡೆ ಅವರ ನೇತೃತ್ವದಲ್ಲಿ ಕೆತ್ತಿದರು.
 • 1982 ರ ಫೆಬ್ರವರಿಯಲ್ಲಿ ರತ್ನಾಗಿರಿ ಬೆಟ್ಟದ ಮೇಲೆ ಡಾ. ವೀರೇಂದ್ರ ಹೆಗ್ಡೆ ಅವರು ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು.
 • 1982, 1995 ಮತ್ತು 2007 ರಲ್ಲಿ ಮೂರು ಬಾರಿ ಬಾಹುಬಲಿಯ ಮಹಮ್ಮತಕಾಭಿಷೇಕವನ್ನು ನಡೆಸಲಾಗಿದೆ. ಇದು ಅನೇಕ ಜೈನ ಸನ್ಯಾಸಿಗಳನ್ನು ಮತ್ತು ದೇಶದಾದ್ಯಂತ ಮತ್ತು ಅದಕ್ಕಿಂತಲೂ ಹೆಚ್ಚಿನ ಜನರನ್ನು ಒಟ್ಟುಗೂಡಿಸುವ ಒಂದು ಅದ್ಭುತ ಪ್ರದರ್ಶನವಾಗಿದೆ.
 • ಶ್ರೀ ಬಾಹುಬಲಿಯ ಏಕಶಿಲೆಯ ಕಲ್ಲಿನ ಶಿಲ್ಪವು ರಕ್ಷಣೆಯನ್ನು, ಸ್ವಯಂ ನಿಯಂತ್ರಣವನ್ನು ಮತ್ತು ಅಹಂನ ಅಧೀನವನ್ನು ಮೋಕ್ಷದ ಕಡೆಗೆ ಮೊದಲ ಹೆಜ್ಜೆ ಎಂದು ಸೂಚಿಸುತ್ತದೆ. ಬಾಹುಬಲಿಯ ದಿಗಂಬರ ರೂಪವು ಆಸೆಗಳನ್ನು ಮತ್ತು ಅವಶ್ಯಕತೆಗಳ ಮೇಲೆ ಸಂಪೂರ್ಣ ವಿಜಯವನ್ನು ಪ್ರತಿನಿಧಿಸುತ್ತದೆ, ಇದು ದೈವತ್ವದ ಕಡೆಗೆ ಆಧ್ಯಾತ್ಮಿಕ ಆರೋಹಣವನ್ನು ನಿರ್ಮಿಸುತ್ತದೆ.

‘ಗುಮ್ಮಟೆ’ ಜಾನಪದ ಕಲೆ ಸಂರಕ್ಷಣೆ

2.

ಸುದ್ಧಿಯಲ್ಲಿ ಏಕಿದೆ ? ಕೊಂಕಣಿ ಸಮುದಾಯದ ಪ್ರಾಚೀನ ಕಲೆ ‘ಗುಮ್ಮಟೆ’ ಕೂಡ ಕಣ್ಮರೆಯಾಗಿದೆ. ಈ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಹಂಪನಕಟ್ಟೆ ಮಿಲಾಗ್ರಿಸ್ ಕಾಲೇಜು ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ‘ಗುಮ್ಮಟೆ’ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿದೆ.

ಏನಿದು ‘ಗುಮ್ಮಟೆ’?:

 • ಮಣ್ಣಿನ ಮಡಕೆ ಹಾಗೂ ಚರ್ಮ ಉಪಯೋಗಿಸಿ ತಯಾರಿಸುವ ಸಂಗೀತ ಪರಿಕರ.
 • ಕೊಂಕಣಿ ಸಮುದಾಯದವರು ಹೆಚ್ಚು ಇದನ್ನು ಉಪಯೋಗಿಸುತ್ತಿದ್ದರು. ಮನೋರಂಜನೆಗಾಗಿ ಹಾಗೂ ಜಾನಪದ ಸಂಸ್ಕೃತಿಯ ಭಾಗವಾಗಿ ಗುಮ್ಮಟೆ ನುಡಿಸುತ್ತಿದ್ದರು.
 • ಧಾರ್ಮಿಕ ಉತ್ಸವಗಳಲ್ಲೂ ಬಳಕೆ ಮಾಡುತ್ತಿದ್ದರು.

ಈ ಕೋರ್ಸಿನ ಅವಶ್ಯಕತೆಯೇನು ?

 • ಗುಮ್ಮಟೆ’ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ನೆಲ ಕಚ್ಚಿದೆ.
 • ಉತ್ತರ ಕರ್ನಾಟಕದ ಕೆಲವು ಕಡೆ ಕುಡುಬಿ ಸಮುದಾಯದಲ್ಲಿ ಚಾಲ್ತಿಯಲ್ಲಿದೆ. ಈಗಿನ ಯುವಕರಿಗೆ ‘ಗುಮ್ಮಟೆ’ ಪರಿಚಯವೇ ಇಲ್ಲದಂತಾಗಿದೆ.
 • ನಮ್ಮ ನೆಲದ, ಸಂಸ್ಕೃತಿಯ ಭಾಗವಾಗಿರುವ ಇಂತಹ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ಇದಾಗಿದೆ.
 • ಪುತ್ತೂರು, ಬಂಟ್ವಾಳ, ಕಾಸರಗೋಡು ಮೊದಲಾದ ಕಡೆಯ ವಿದ್ಯಾರ್ಥಿಗಳು ಕೋರ್ಸ್‌ಗೆ ಸೇರಿದ್ದು, ಅವರ ಊರಿನಲ್ಲಿ ‘ಗುಮ್ಮಟೆ’ ಕಲೆಯನ್ನು ಪ್ರಚುರಪಡಿಸಲು ಈ ಮೂಲಕ ಸಾಧ್ಯವಾಗಲಿದೆ.
 • ಪ್ರಸಿದ್ಧ ‘ಗುಮ್ಮಟೆ’ ವಾದಕರಾಗಿದ್ದ ಜೋಕಿಂ ಪಿರೇರಾ ಅವರ ಪುತ್ರ ಬಿಜೈಯ ಜೋಯೆಲ್ ಪಿರೇರಾ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

3.

ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಸಾಹಿತ್ಯ ಅಕಾಡೆಮಿಯು 2018ನೇ ಸಾಲಿನ ಗೌರವ ಪ್ರಶಸ್ತಿಗೆ ಸಾಹಿತಿ ಡಾ. ಎಚ್‌. ಎಸ್‌. ವೆಂಕಟೇಶ ಮೂರ್ತಿ, ಡಾ. ಬಿ.ಎ. ವಿವೇಕ ರೈ, ದೇಶಾಂಶ ಹುಡುಗಿ, ಸಾಯಿಸುತೆ, ಪ್ರೊ. ಎ. ಕೆ. ಹಂಪಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.

 • ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ಫಲಕವನ್ನು ಒಳಗೊಂಡಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

 • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಸಾಹಿತ್ಯ ಕೃತಿಗಳಿಗೆ ಮತ್ತು ಕನ್ನಡ ಸಾಹಿತ್ಯಕ್ಕೆ ಬರಹಗಾರನ ಸಂಪೂರ್ಣ ಕೊಡುಗೆಗಾಗಿ ನೀಡುವ ವಾರ್ಷಿಕ ಸಾಹಿತ್ಯ ಪ್ರಶಸ್ತಿ. ಕವಿತೆ, ಕಾದಂಬರಿ, ಕಿರುಚಿತ್ರ, ವಿಮರ್ಶೆ, ಪ್ರಯಾಣ ಬರವಣಿಗೆ, ಭಾಷಾಂತರ, ಮಕ್ಕಳ ಬರವಣಿಗೆ ಮುಂತಾದ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಪ್ರತ್ಯೇಕ ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ.
 • 1983 ರಲ್ಲಿ ಸ್ಥಾಪಿತವಾದ ಇದು ಕನ್ನಡದಲ್ಲಿನ ಕೆಲವು ಶ್ರೇಷ್ಠ ಬರಹಗಾರರಿಗೆ ನೀಡಲ್ಪಟ್ಟಿದೆ.

‘ದೇಶಿ ಏರ್‌ಫೋರ್ಸ್‌ ಒನ್’ 

4.

ಸುದ್ಧಿಯಲ್ಲಿ ಏಕಿದೆ ? ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ದೂರದ ಪ್ರಯಾಣಕ್ಕೆ ಭಾರತದ ದೇಶಿ ಏರ್‌ಫೋರ್ಸ್‌ ಒನ್ ಸಿದ್ಧಗೊಳ್ಳುತ್ತಿದೆ.

ದೇಶೀ ಏರ್ಫೋರ್ಸ್ ಒನ್ ನ ವಿಶೇಷತೆ

 • ಎರಡು ನೂತನ ಬೋಯಿಂಗ್‌ 777 ವಿಮಾನಗಳಿಗೆ ವಿಶ್ವದರ್ಜೆಯ ಅತ್ಯಾಧುನಿಕ ಭದ್ರತಾ ಸಲಕರಣೆಗಳ ಜೋಡಣೆ ನಡೆಯುತ್ತಿದೆ.
 • ಕ್ಷಿಪಣಿ ಮುನ್ನೆಚ್ಚರಿಕೆ ಮತ್ತು ಪ್ರತಿಸ್ಪಂದನಾ ವ್ಯವಸ್ಥೆ ಹಾಗೂ ಎನ್‌ಕ್ರಿಪ್ಟ್‌ (ಗೂಢಲಿಪೀಕರಣ) ಮಾಡಲಾದ ಸಂವಹನ ವ್ಯವಸ್ಥೆಗಳನ್ನು ಇದು ಹೊಂದಿರುತ್ತದೆ.
 • ಈ ವಿಮಾನಗಳಿಗೆ ಏರ್‌ ಇಂಡಿಯಾ ಒನ್ಅಥವಾ ಇಂಡಿಯನ್‌ ಏರ್‌ ಫೋರ್ಸ್‌ ಒನ್‌ ಎಂದು ಹೆಸರಿಡುವ ಸಾಧ್ಯತೆಯಿದೆ.
 • ಅಮೆರಿಕದ ಅಧ್ಯಕ್ಷ ಹಾರಾಡುವ ಕಚೇರಿಯಂತೆಯೇ ಇದೂ ಇರಲಿದೆ.
 • ಭಾರತದ ಕೋರಿಕೆಯಂತೆ ಅಮೆರಿಕದ ವಿದೇಶಾಂಗ ಇಲಾಖೆ 2 ಬಿ777 ಲಾರ್ಜ್‌ ಇನ್‌ಫ್ರಾ ರೆಡ್‌ ಕೌಂಟರ್‌ಮೆಶರ್ಸ್ ಹಾಗೂ ಸೆಲ್ಫ್‌ ಪ್ರೊಟೆಕ್ಷನ್‌ ಸೂಟ್ಸ್ ಗಳನ್ನು ಅಂದಾಜು 19 ಕೋಟಿ ಡಾಲರ್ ಬೆಲೆಗೆ ಮಾರಾಟ ಮಾಡಲು ಒಪ್ಪಿದೆ.

ಭಾರತ ಅಮೇರಿಕಾ ಸಂಬಂಧ ಮೇಲಿನ ಪರಿಣಾಮ

 • ಈ ಪ್ರಸ್ತಾವಿತ ಮಾರಾಟದಿಂದ ಅಮೆರಿಕದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತೆ ನೀತಿ ಅಮೆರಿಕ-ಭಾರತ ವ್ಯೂಹಾತ್ಮಕ ಬಾಂಧವ್ಯಗಳ ಬಲವರ್ಧನೆಗೆ ನೆರವಾಗುತ್ತದೆ.
 • ಇಂಡೋ-ಪೆಸಿಫಿಕ್ ಮತ್ತು ದಕ್ಷಿಣ ಏಷ್ಯಾ ವಲಯದಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಮತ್ತು ಆರ್ಥಿಕ ಪ್ರಗತಿಗೆ ಇದರಿಂದ ನೆರವಾಗುತ್ತದೆ’ ಎಂದು ಅಮೆರಿಕದ ಭದ್ರತೆ ರಕ್ಷಣಾ ಸಹಕಾರ ಏಜೆನ್ಸಿ (ಡಿಎಸ್‌ಸಿಎ) ತಿಳಿಸಿದೆ.

ಆಯುಷ್ಮಾನ್ ಮಾಹಿತಿ

5.

ಸುದ್ಧಿಯಲ್ಲಿ ಏಕಿದೆ ? ಆಯುಷ್ಮಾನ್ ಭಾರತ್ ಯೋಜನೆಯ ಮಾಹಿತಿ ಇನ್ನು ಮುಂದೆ ಬೆರಳ ತುದಿಯಲ್ಲೇ ಲಭಿಸಲಿದ್ದು, ಯೋಜನೆಯಡಿ ನೋಂದಾಯಿತ ಹತ್ತಿರದ ಆಸ್ಪತ್ರೆಯನ್ನೂ ಸುಲಭವಾಗಿ ಪತ್ತೆ ಮಾಡಬಹುದು.

 • ಫಲಾನುಭವಿಗಳು ಇನ್ನಷ್ಟು ಸುಲಭವಾಗಿ ಯೋಜನೆಯ ಲಾಭ ಪಡೆಯಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ‘ಆಯುಷ್ಮಾನ್ ಭಾರತ್’ ಮೊಬೈಲ್ ಆಪ್ ಪರಿಚಯಿಸಿದೆ.
 • ಯೋಜನೆಯ ಸಂಪೂರ್ಣ ವಿವರ ಆಪ್​ನಲ್ಲಿದ್ದು, ಸಂದೇಹ ಪರಿಹರಿಸಿಕೊಳ್ಳಲು ಸಹಾಯವಾಣಿಗೆ ಕರೆ ಮಾಡುವ ಅವಕಾಶ ನೀಡಲಾಗಿದೆ.
 • ಹತ್ತಿರದ ಆಸ್ಪತ್ರೆ ಪತ್ತೆ: ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಈ ಆಪ್ ಪೂರಕವಾಗಿದ್ದು, ಹತ್ತಿರದ ಆಸ್ಪತ್ರೆಗಳು ಎಂಬ ಆಯ್ಕೆ ಮೇಲೆ ಕ್ಲಿಕ್ಕಿಸಿದಲ್ಲಿ ವ್ಯಕ್ತಿ ಇದ್ದ ಸ್ಥಳದ ಸುತ್ತಮುತ್ತ ಆಯುಷ್ಮಾನ್ ಭಾರತ್ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳ ವಿವರಗಳು ಕಾಣಿಸಿಕೊಳ್ಳುತ್ತವೆ.
 • ಈಗಾಗಲೇ ಯೋಜನೆಯಲ್ಲಿ ರಾಜ್ಯದ 1,22,822 (ಜ.31ರ ವರೆಗೆ) ಮಂದಿ ವಿವಿಧ ಚಿಕಿತ್ಸೆ ಪಡೆದಿದ್ದಾರೆ. ಇದೀಗ ನೂತನ ಆಪ್​ನಿಂದ ಯೋಜನೆಯ ಲಾಭ ಇನ್ನಷ್ಟು ಸುಲಭವಾಗಿ ಪಡೆಯಬಹುದು.
 • ಆಯುಷ್ಮಾನ್ ಭಾರತ್ ಯೋಜನೆಯ ವಿಶೇಷತೆ, ಫಲಾನುಭವಿಗಳ ಅರ್ಹತೆ, ಲಭ್ಯ ಚಿಕಿತ್ಸೆಗಳು, ಆರೋಗ್ಯ ಕಾರ್ಡ್ ಒಳಗೊಂಡಂತೆ ಎಲ್ಲ ಮಾಹಿತಿಗಳು ಆಪ್​ನಲ್ಲಿ ಸಿಗಲಿವೆ.

ಗೊಂದಲ ನಿವಾರಣೆ

 • ಬಹುತೇಕರಿಗೆ ತಾವು ಆಯುಷ್ಮಾನ್ ಭಾರತ್ ಯೋಜನೆ ಫಲಾನುಭವಿಗಳು ಹೌದೋ-ಅಲ್ಲವೋ ಎಂಬ ಗೊಂದಲ ವಿದೆ. ಅಂಥವರು ಆಯುಷ್ಮಾನ್ ಭಾರತ್ ಮೊಬೈಲ್ ಆಪ್​ನಲ್ಲಿ ‘ಅರ್ಹತೆ ಪರೀಕ್ಷಿಸಿಕೊಳ್ಳಿ’ ಎಂಬ ಆಯ್ಕೆ ಕ್ಲಿಕ್ ಮಾಡಿ ಲಾಗ್ ಇನ್ ಆಗಿ ಅಗತ್ಯ ಮಾಹಿತಿ ಒದಗಿಸಿದರೆ ಯೋಜನೆ ಅನ್ವಯಿಸುತ್ತದೋ ಇಲ್ಲವೋ ಎಂಬುದು ಖಚಿತವಾಗಲಿದೆ.

ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (PM JAY)

 • ಪ್ರಧಾನ್ ಮಂತ್ರಿ – ಜನ ಆರೋಗ್ಯ ಯೋಜನೆ (PM JAY) ಆಯುಷ್ಮಾನ್ ಭಾರತ್ ಅಡಿಯಲ್ಲಿರುವ ಸರ್ಕಾರದ ಒಂದು ಯೋಜನೆಯಾಗಿದ್ದು, ದುರ್ಬಲ ಆಸ್ಪತ್ರೆ ಸಂಚಿಕೆಗಳಿಂದ ಉಂಟಾಗುವ ಕಳಪೆ ಮತ್ತು ದುರ್ಬಲ ಗುಂಪುಗಳ ಮೇಲೆ ಹಣಕಾಸಿನ ಹೊರೆ ಕಡಿಮೆ ಮಾಡಲು ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳಿಗೆ ಅವರ ಪ್ರವೇಶವನ್ನು ಕಲ್ಪಿಸಲಾಗಿದೆ ಎಂದು ಖಚಿತಪಡಿಸುತ್ತದೆ.
 • ಇತ್ತೀಚಿನ ಸಾಮಾಜಿಕ-ಆರ್ಥಿಕ ಜಾತಿ ಗಣತಿ (ಎಸ್ಸಿಸಿ) ಡೇಟಾ (ಸುಮಾರು 50 ಕೋಟಿ ಫಲಾನುಭವಿಗಳು) ಪ್ರಕಾರ ಪಿಎಮ್-ಜೆ ಯೋಜನೆಯಡಿಯಲ್ಲಿ 74 ಕೋಟಿ ಬಡ, ವಂಚಿತ ಗ್ರಾಮೀಣ ಕುಟುಂಬಗಳು ಮತ್ತು ನಗರ ಪ್ರದೇಶದ ಕಾರ್ಮಿಕರ ಕುಟುಂಬದವರನ್ನು ಗುರುತಿಸಲಾಗಿದೆ.
 • ಉಚಿತವಾಗಿ ಪ್ರತಿ ಕುಟುಂಬಕ್ಕೆ ಐದು ಲಕ್ಷ ರು. ಆರೋಗ್ಯ ಪ್ರಯೋಜನ ಕವರ್ನಲ್ಲಿ ಶಸ್ತ್ರಚಿಕಿತ್ಸೆ, ವೈದ್ಯಕೀಯ ಮತ್ತುದಿನದ ಆರೈಕೆ ಚಿಕಿತ್ಸೆಗಳು, ಔಷಧಿಗಳ ವೆಚ್ಚ ಮತ್ತು ರೋಗನಿರ್ಣಯವನ್ನು ಒಳಗೊಂಡಿರುವ 1,350 ಕ್ಕೂ ಹೆಚ್ಚಿನ ವೈದ್ಯಕೀಯ ಪ್ಯಾಕೇಜುಗಳನ್ನು ಒಳಗೊಂಡಿದೆ.
 • PM-JAY ಯುನಿವರ್ಸಲ್ ಹೆಲ್ತ್ ಕವರೇಜ್ (ಯುಹೆಚ್ಸಿ) ಮತ್ತು ಸಸ್ಟೈನಬಲ್ ಡೆವಲಪ್ಮೆಂಟ್ ಗೋಲ್ 3 ಸಾಧನೆಯತ್ತ ಭಾರತದ ಪ್ರಗತಿಯನ್ನು ವೇಗಗೊಳಿಸಲು ಯತ್ನಿಸುತ್ತದೆ. ಇದು ಆರೋಗ್ಯಕರ ಜೀವನವನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಎಲ್ಲಾ ವಯಸ್ಸಿನವರಿಗೆ ಯೋಗಕ್ಷೇಮವನ್ನು ಉತ್ತೇಜಿಸಲು ಕರೆ ನೀಡುತ್ತದೆ.

ಸಾಲ ಕೊಂಚ ಅಗ್ಗ?

6.

ಸುದ್ಧಿಯಲ್ಲಿ ಏಕಿದೆ ? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ 25 ಮೂಲಾಂಶ ರೆಪೋ ದರ ಕಡಿತಗೊಳಿಸುವ ಮೂಲಕ ಸಾಲದ ಹೊರೆಯನ್ನು ಕೊಂಚ ಇಳಿಸಲು ದಾರಿ ಮಾಡಿಕೊಟ್ಟಿದೆ.

 • ಬರೋಬ್ಬರಿ ಒಂದೂವರೆ ವರ್ಷಗಳ ಬಳಿಕ ಮೊದಲ ಬಾರಿ ರೆಪೋ ದರದಲ್ಲಿ ಇಳಿಕೆಯಾಗಿದೆ. ಇದರೊಂದಿಗೆ ಹಾಲಿ ರೆಪೋ ದರ ಶೇ.6 ಹಾಗೂ ರಿವರ್ಸ್ ರೆಪೋ ದರ ಶೇ.75ರಷ್ಟು ಕಡಿತಗೊಂಡಂತಾಗಿದೆ.
 • ಆರ್​ಬಿಐ ನೂತನ ನಿಯಮಗಳ ಪ್ರಕಾರ ರೆಪೋ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ. ಬ್ಯಾಂಕ್​ಗಳು ಈ ಬದಲಾವಣೆಯನ್ನು ತಮ್ಮ ಗ್ರಾಹಕರಿಗೆ ನೀಡಬೇಕಾಗುತ್ತದೆ.
 • ಹಾಲಿ ಬದಲಾವಣೆಯಿಂದ ದರ ಏರಿಕೆ ಮೇಲೆ ಇನ್ನಷ್ಟು ನಿಯಂತ್ರಣ ಬೀಳಲಿದ್ದು, ಹಣದುಬ್ಬರ ಕಡಿಮೆಯಾಗಲಿದೆ ಎಂದು ಆರ್​ಬಿಐ ಅಭಿಪ್ರಾಯಪಟ್ಟಿದೆ.

ಭದ್ರತಾ ರಹಿತ ಸಾಲ ಮಿತಿ ಏರಿಕೆ

 • ರೈತರಿಗೆ ಬಜೆಟ್​ನಲ್ಲಿ ಪ್ರೋತ್ಸಾಹ ಧನ ನೀಡಿಕೆ ಹಾಗೂ ಒಟ್ಟಾರೆ ಸಾಲದ ಪ್ರಮಾಣದ ಏರಿಕೆಗೆ ಕೇಂದ್ರ ನಿರ್ಧರಿಸಿತ್ತು. ಈಗ ಭದ್ರತೆ ರಹಿತವಾಗಿ 5 ಲಕ್ಷ ರೂ.ವರೆಗೆ ಕೃಷಿ ಸಾಲ ನೀಡಲು ಆರ್​ಬಿಐ ಅವಕಾಶ ನೀಡಿದೆ. ಈ ಹಿಂದೆ 1 ಲಕ್ಷ ರೂ.ವರೆಗೆ ಭದ್ರತೆ ರಹಿತವಾಗಿ ಸಾಲ ನೀಡಬಹುದಿತ್ತು.

ಜಿಡಿಪಿ ಏರಿಕೆ ಭವಿಷ್ಯ

 • 2019-20ನೇ ಆರ್ಥಿಕ ಸಾಲಿನಲ್ಲಿ ಭಾರತದ ಜಿಡಿಪಿ ಶೇ.4 ಇರಲಿದೆ. ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಶೇ.7.2-7.4 ಇರಲಿದೆ ಎಂದು ಆರ್​ಬಿಐ ಹೇಳಿದೆ. ಹೀಗಾಗಿ ಚೀನಾಕ್ಕಿಂತಲೂ ವೇಗವಾಗಿ ಭಾರತದ ಜಿಡಿಪಿ ಬೆಳೆಯುತ್ತಿದೆ ಎನ್ನುವ ವಿಶ್ವಬ್ಯಾಂಕ್ ಹಾಗೂ ಐಎಂಎಫ್ ವರದಿಗೆ ಆರ್​ಬಿಐ ಮುನ್ನೋಟ ಕೂಡ ಧ್ವನಿಗೂಡಿಸಿದೆ.

ಆರ್​ಬಿಐ ಮುನ್ನೋಟ

 • ಚಿಲ್ಲರೆ ಹಣದುಬ್ಬರ: ಶೇ.8, ಗ್ರಾಹಕರ ಹಣದುಬ್ಬರ: ಶೇ.3.2
 • ಸಾಲಮಿತಿ ಏರಿಕೆಯಿಂದ ಕೃಷಿ ವಲಯದ ಮೇಲೆ ಧನಾತ್ಮಕ ಪರಿಣಾಮ
 • ಖಾಸಗಿ ಹೂಡಿಕೆ ಹಾಗೂ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು
 • ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು
 • ಫೆಬ್ರವರಿ ಅಂತ್ಯದೊಳಗೆ ಎನ್​ಬಿಎಫ್​ಸಿ ಕುರಿತು 1ಮಾರ್ಗಸೂಚಿ
 • ಎನ್​ಬಿಎಫ್​ಸಿಗಳ ಸಾಲ ನೀಡಿಕೆ ವ್ಯವಸ್ಥೆ ಸರಳೀಕರಣ
 • ಆಮದು ಪ್ರಮಾಣ ಇಳಿಕೆ ಹಾಗೂ ರಫ್ತು ಪ್ರಮಾಣ ಸಮಾನವಾಗಿರುವುದು ಆಶಾದಾಯಕ
Related Posts
“04 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
'ಶ್ರೇಯಸ್‌' ಯೋಜನೆ ಸುದ್ಧಿಯಲ್ಲಿ ಏಕಿದೆ ? ಬಹು ನಿರೀಕ್ಷಿತ 'ಶ್ರೇಯಸ್‌' ಯೋಜನೆ ಜುಲೈನಿಂದ ಜಾರಿಗೆ ಬರಲಿದೆ.ಇದೇ ಮೊದಲ ಬಾರಿಗೆ ತಾಂತ್ರಿಕೇತರ ಪದವೀಧರರಿಗೆ ಜಾರಿಗೊಳಿಸಿರುವ ಅಪ್ರೆಂಟಿಸ್‌ಷಿಪ್‌ ಯೋಜನೆ ಇದಾಗಿದ್ದು, 5 ಲಕ್ಷ ವಿದ್ಯಾರ್ಥಿಗಳಿಗೆ ಆರು ತಿಂಗಳ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ 6,000 ರೂ. ...
READ MORE
“18 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆಯುಷ್ಮಾನ್​ಗೆ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ ಸುದ್ಧಿಯಲ್ಲಿ ಏಕಿದೆ ?ವಿಶ್ವದಲ್ಲೇ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ಎಬಿ-ಎಆರ್​ಕೆ) ಯೋಜನೆಯಲ್ಲಿ ಹೆಸರು ನೋಂದಾ ಯಿಸಲು ಖಾಸಗಿ ಆಸ್ಪತ್ರೆಗಳು ನಿರಾಸಕ್ತಿ ತೋರಿರುವ ಸಂಗತಿ ಬೆಳಕಿಗೆ ಬಂದಿದೆ. ರಾಜ್ಯದಲ್ಲಿರುವ 26 ಸಾವಿರ ಖಾಸಗಿ ಆಸ್ಪತ್ರೆಗಳ ಪೈಕಿ ...
READ MORE
14 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ನಕಲಿ ಹೂಡಿಕೆ ಸ್ಕೀಮ್‌ಗಳ ನಿಷೇಧಕ್ಕೆ ವಿಧೇಯಕ ಮಂಡನೆ ಸುದ್ಧಿಯಲ್ಲಿ ಏಕಿದೆ ? ನಕಲಿ ಹೂಡಿಕೆ ಯೋಜನೆಗಳನ್ನು ನಿಷೇಧಿಸುವ ಹಾಗೂ ಇಂಥ ಯೋಜನೆಗಳಲ್ಲಿ ವಂಚಿತರಾಗಿರುವ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಸಂಬಂಧಿಸಿದ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಅನಿಯಂತ್ರಿತ ಠೇವಣಿ ಸಂಗ್ರಹ ಸ್ಕೀಮ್‌ಗಳ ನಿಷೇಧ ವಿಧೇಯಕವನ್ನು ಹಣಕಾಸು ಸಚಿವ ಪಿಯೂಷ್‌ ...
READ MORE
“12 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಚುನಾವಣಾ ಬಾಂಡ್‌ ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಸರಕಾರದ ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿದ್ದ ಜನಹಿತಾಸಕ್ತಿ ಅರ್ಜಿಯ ಕುರಿತ ತೀರ್ಪುನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ರಾಜಕೀಯ ಪಕ್ಷಗಳಿಗೆ ಆರ್ಥಿಕ ನೆರವು ನೀಡುವ ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವವನ್ನು ಪ್ರಸ್ನಿಸಿ ಸರ್ಕಾರರೇತರ ಸಂಸ್ಥೆಯೊಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಚುನಾವಣಾ ...
READ MORE
“26 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶ್ರೀಗಂಧ ಮಂಡಳಿ ರಚನೆ ಸುದ್ಧಿಯಲ್ಲಿ ಏಕಿದೆ ?ಕರ್ನಾಟಕ ಶ್ರೀಗಂಧ ಮಂಡಳಿ ರಚನೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ಸೊಸೈಟಿ ಆಪ್ ಇಂಡಿಯಾ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀಗಂಧದ ಪ್ರಸ್ತುತ ಸ್ಥಿತಿಗತಿ ಮತ್ತು ...
READ MORE
“21 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಂಗಳೂರು, ಹಾಸನಕ್ಕೂ ಕರಾವಳಿ ಕಂಬಳ ಖದರ್ ಸುದ್ಧಿಯಲ್ಲಿ ಏಕಿದೆ ?ಕರಾವಳಿ ಮಣ್ಣಿನ ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ಇಲ್ಲಿಗಷ್ಟೇ ಸೀಮಿತವಾಗದೆ ರಾಜ್ಯದ ಇತರ ಕಡೆಗಳಲ್ಲೂ ಜನಪ್ರಿಯಗೊಳಿಸಲು ಕಂಬಳ ಅಕಾಡೆಮಿ ಮುಂದಾಗಿದೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿನ ದೊಡ್ಡಾಲದಮರ ಬಳಿ ಕರಾವಳಿ ಮೂಲದ ಉದ್ಯಮಿಯೊಬ್ಬರಿಗೆ ಸೇರಿದ 10 ಎಕರೆ ಪ್ರದೇಶದಲ್ಲಿ ...
READ MORE
“24 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕ್ಷ-ಕಿರಣ ಸುರಕ್ಷತಾ ನಿರ್ದೇಶನಾಲಯ ಸ್ಥಾಪನೆ ಸುದ್ಧಿಯಲ್ಲಿ ಏಕಿದೆ ? ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸ್​ರೇ ಕೇಂದ್ರಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಕ್ಷ-ಕಿರಣ ಸುರಕ್ಷತಾ ನಿರ್ದೇಶನಾಲಯ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಮುಂಬೈನ ಆಟೊಮಿಕ್ ಎನರ್ಜಿ ರೆಗ್ಯೂ ಲೇಟರಿ ಬೋರ್ಡ್ (ಎಇಆರ್​ಬಿ) ಜತೆಗೆ ...
READ MORE
“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕಬ್ಬನ್‌ ಪಾರ್ಕ್‌ಗೆ ಏರ್‌ ಕ್ಲೀನರ್‌ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ರಾಜಧಾನಿಯಲ್ಲೂ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಈ ನಡುವೆ, ಅತಿ ಹೆಚ್ಚು ಜನರು ವಾಯು ಸೇವನೆಗೆ ಆಗಮಿಸುವ ಕಬ್ಬನ್‌ ಪಾರ್ಕ್‌ನಲ್ಲೂ ವಾಯು ಮಾಲಿನ್ಯ ಹೆಚ್ಚಿರುವುದನ್ನು ಮನಗಂಡು ಅಲ್ಲಿ ಗಾಳಿಯ ಶುದ್ಧೀಕರಣಕ್ಕೆ ಯಂತ್ರವನ್ನು ...
READ MORE
“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೃಂದಾವನಕ್ಕೆ ಡಿಸ್ನಿಲ್ಯಾಂಡ್‌ ಮಾದರಿ ಲುಕ್‌ ಸುದ್ಧಿಯಲ್ಲಿ ಏಕಿದೆ ?ಕೃಷ್ಣರಾಜಸಾಗರ ಜಲಾಶಯದ ಬೃಂದಾವನ ಉದ್ಯಾನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ 1,200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನೀಲಿನಕ್ಷೆ ಸಿದ್ಧಪಡಿಸಿದೆ. ಈಗಿನ ಪಾರಂಪರಿಕ ತಾಣದ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಬೃಂದಾವನವನ್ನು ವಿಶ್ವದ ಪ್ರವಾಸಿ ತಾಣಗಳಲ್ಲೇ ...
READ MORE
“25 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
2025ರ ವೇಳಗೆ ಭಾರತ ಕ್ಷಯರೋಗ ಮುಕ್ತ ಸುದ್ಧಿಯಲ್ಲಿ ಏಕಿದೆ ?2025ರ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಿಶ್ವದಲ್ಲಿ ...
READ MORE
“04 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“18 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
14 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“12 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“26 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“21 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“24 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“25 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

One thought on ““08 ಫೆಬ್ರವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು””

Leave a Reply

Your email address will not be published. Required fields are marked *