“08 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಬಿಳಿಗಿರಿ ಬೆಟ್ಟದಲ್ಲಿ ಅಪರೂಪದ ಸಸ್ತನಿ ಪತ್ತೆ

1.

ಸುದ್ಧಿಯಲ್ಲಿ ಏಕಿದೆ ?ನಾಗರಹೊಳೆ, ಬಂಡೀಪುರ ಸೇರಿ ವಿವಿಧ ದಟ್ಟ ಕಾನನಗಳ ನಾಡು ಇದೀಗ ಅಪರೂಪದ ಸಸ್ತನಿಯ ಇರುವಿಕೆ ದೃಢಪಟ್ಟಿದೆ.

 • ಸಾಮಾನ್ಯವಾಗಿ ಪಶ್ಚಿಮ ಘಟ್ಟದ ವಿರಾಜಪೇಟೆ ಭಾಗದಲ್ಲಿರುವ ಸೆಂಡಿಲಿ ಕೀರ(ಬ್ರೌನ್‌ ಮಂಗೂಸ್‌ ಅಥವಾ Herpestes fuscus) ಪ್ರಾಣಿ ಇದೀಗ ಬಿಆರ್‌ಟಿ ಹುಲಿ ರಕ್ಷಿತಾರಣ್ಯದಲ್ಲಿ ಪತ್ತೆಯಾಗಿದೆ.
 • ಇದೇ ಮೊದಲ ಬಾರಿಗೆ ಪಶ್ಚಿಮ ಘಟ್ಟದ ಕಾಡುಗಳನ್ನು ಹೊರತು ಪಡಿಸಿ, ಈ ಸಸ್ತನಿ ಕಾಣಸಿಕ್ಕಿದ್ದು, ನೇಚರ್ ಕನ್ಸರ್ವೇಶನ್ ಫೌಂಡೇಶನ್ ಸಂಸ್ಥೆಯ ಸಂಜಯ್ ಗುಬ್ಬಿ ಮತ್ತು ತಂಡ ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಕಾಡುಗಳಲ್ಲಿ ಚಿರತೆ ಅಧ್ಯಯನಕ್ಕಾಗಿ ಕೈಗೊಂಡ ಯೋಜನೆಯಲ್ಲಿ, ಹೊಸ ಪ್ರಾಣಿಯ ಇರುವಿಕೆ ಪತ್ತೆಯಾಗಿದೆ. ಸಂಶೋಧನಾ ತಂಡದ ಕ್ಯಾಮರಾ ಟ್ರಾಪ್‌ನಲ್ಲಿ ಈ ಪ್ರಾಣಿ ಫೋಟೋಗಳು ದಾಖಲಾಗಿವೆ.

ಸೆಂಡಿಲಿ ಕೀರ (ಬ್ರೌನ್‌ ಮಂಗೂಸ್‌)

 • ಮುಂಗುಸಿಯು ಬೂದು ಬಣ್ಣದ ತುಪ್ಪಳ ಹೊಂದಿದ್ದರೆ, ಸೆಂಡಿಲಿ ಕೀರ ಕಂದು ಬಣ್ಣದ ತುಪ್ಪಳದ ಮೇಲೆ ನವುರಾದ ಪಟ್ಟೆ ಹೊಂದಿರುತ್ತವೆ. ಮತ್ತು ಇದರ ಕಾಲು ಕಪ್ಪು ಬಣ್ಣದ್ದಾಗಿರುತ್ತದೆ. ಚೂಪಾದ, ಶಂಕುವಿನಾಕಾರದ ಇದರ ಬಾಲವು ಹತ್ತಿರದ ಸಂಬಂಧದ ಇತರ ಮುಂಗುಸಿ ಪ್ರಭೇದಗಳಿಗಿಂತ ಹೆಚ್ಚು ರೋಮಗಳನ್ನು ಹೊಂದಿರುತ್ತದೆ.
 • ಪಶ್ಚಿಮ ಘಟ್ಟಗಳ ದಕ್ಷಿಣ ಭಾಗ ಮತ್ತು ಶ್ರೀಲಂಕದಲ್ಲಿ ಮಾತ್ರ ಕಂಡುಬರುವುದರಿಂದ ಸೆಂಡಿಲಿ ಕೀರವು ನಿರ್ಬಂಧಿತ ವಿಸ್ತರಣಾ ವ್ಯಾಪ್ತಿಯನ್ನು ಹೊಂದಿದೆ.
 • ದೇಶದಲ್ಲಿ ರಾಜ್ಯದಲ್ಲಿ ಹೊರತುಪಡಿಸಿ, ತಮಿಳು ನಾಡು ಮತ್ತು ಕೇರಳಗಳಲ್ಲಿ ಕಾಣ ಸಿಗುತ್ತದೆ. ಈ ಪ್ರಾಣಿಗಳು ಸಮುದ್ರ ಮಟ್ಟದಿಂದ 450 ಮೀಟರ್‌ನಿಂದ 2 ಸಾವಿರ ಮೀಟರ್ ಎತ್ತರದಲ್ಲಿನ ನಿತ್ಯಹರಿದ್ವರ್ಣ ಕಾಡು, ಶೋಲಾ ಕಾಡು ಮತ್ತು ಬೆಟ್ಟಗಳ ಹುಲ್ಲುಗಾವಲುಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಪ್ರಾಣಿಯು ಸಮುದ್ರಮಟ್ಟದಿಂದ 1249 ಮೀಟರ್ ಎತ್ತರದ ಪ್ರದೇಶದಲ್ಲಿ ದಾಖಲಾಗಿದೆ.
 • ಕೀಟ, ಏಡಿ, ಸಣ್ಣ ಉರಗಗಳು, ಮೂಷಿಕ, ಎರೆಹುಳ, ಪಕ್ಷಿಗಳು ಸೆಂಡಿಲಿ ಕೀರದ ಪ್ರಮುಖ ಆಹಾರಗಳು. ಇವುಗಳು ಹೆಚ್ಚಾಗಿ ರಾತ್ರಿ ವೇಳೆ ಚಟುವಟಿಕೆಯಿಂದಿರುತ್ತವೆ ಎಂದು ನೇಚರ್ ಕನ್ಸರ್ವೇಶನ್ ಫೌಂಡೇಶನ್ ಮಾಹಿತಿ ನೀಡಿದೆ.
 • ಕೀಟನಾಶಕಗಳಿಂದ ಮತ್ತು ಕಳ್ಳಬೇಟೆಯಿಂದ ಸಹ ಇವುಗಳಿಗಿರುವ ಅಪಾಯ ಕಡೆಗಣಿಸುವಂತಿಲ್ಲ. ಇತರ ಜಾತಿಯ ಮುಂಗುಸಿಗಳನ್ನು, ಬಣ್ಣ ಬಳಿಯಲು ಬಳಸುವ ಬ್ರಷ್‌ ತಯಾರಿಕೆಗೆ ವ್ಯಾಪಕವಾಗಿ ಕಳ್ಳ ಬೇಟೆಯಾಗುತ್ತಿವೆ ಎಂದು ಸಂಸ್ಥೆ ಹೇಳಿದೆ.

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ ?ನಾನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 26 ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

 • ನಾಲ್ಕು ವಿಭಾಗಗಳಲ್ಲಿ ತಲಾ ಒಂದೊಂದು ಸ್ತ್ರೀಶಕ್ತಿ ಗುಂಪುಗಳಿಗೆ ಹಾಗೂ ತಾಲೂಕು ಮಟ್ಟದ ಒಂದು ಸ್ತ್ರೀಶಕ್ತಿ ಫೆಡರೇಷನ್‌ಗೆ ಪ್ರಶಸ್ತಿ ನೀಡಲಾಗುತ್ತದೆ.

ಅಡಕೆಗೆ ಕ್ಯಾನ್ಸರ್​ಕಾರಕ ರೆಡ್ ಆಕ್ಸೈಡ್ ಮಿಕ್ಸ್ ದೃಢ

2.

ಸುದ್ಧಿಯಲ್ಲಿ ಏಕಿದೆ ?ಅಡಕೆಗೆ ಕ್ಯಾನ್ಸರ್ ಕಾರಕ ರೆಡ್ ಆಕ್ಸೈಡ್ ಮಿಶ್ರಣ ಮಾಡುತ್ತಿರುವುದು ಆಹಾರ ಸುರಕ್ಷತಾ ಅಧಿಕಾರಿಗಳು ಸಂಗ್ರಹಿಸಿದ ಸ್ಯಾಂಪಲ್​ನ ವರದಿಯಲ್ಲಿ ದೃಢಪಟ್ಟಿದೆ.

 • ಕಡೂರು, ತರೀಕೆರೆ, ಬೀರೂರು ವ್ಯಾಪ್ತಿಯಲ್ಲಿ ಕಳಪೆ ಅಡಕೆಗೆ ರೆಡ್​ಆಕ್ಸೈಡ್ ಬಳಿದು ಗುಣಮಟ್ಟದ ಅಡಕೆಯೊಂದಿಗೆ ಮಿಶ್ರಣ ಮಾಡಿ ಮಾರುವ ಬೃಹತ್ ಜಾಲದ ಕುರಿತು ವರದಿ ಆಗಿತ್ತು.
 • ಎಚ್ಚೆತ್ತ ಆಹಾರ ಸುರಕ್ಷತಾ ಅಧಿಕಾರಿಗಳು ಕಡೂರು ಪಟ್ಟಣದಲ್ಲಿ ಕೆಲ ಅಡಕೆ ವ್ಯಾಪಾರಿಗಳಿಂದ ಸ್ಯಾಂಪಲ್ ಸಂಗ್ರಹಿಸಿ ಮೈಸೂರಿನ ಎಫ್​ಎಸ್​ಎಸ್​ಎಐ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
 • ಪರೀಕ್ಷೆ ನಡೆಸಿದಾಗ ಟಾರ್ಟ್ರೖೆಜೆನ್, ಸನ್​ಸೆಟ್ ಯಲ್ಲೋ, ಕಾರ್​ವೋಸೈನ್, ಬ್ರಿಲಿಯಂಟ್ ಬ್ಲೂ ಎಂಬ ಕ್ಯಾನ್ಸರ್​ಕಾರಕ ರೆಡ್ ಆಕ್ಸೈಡ್ ಸಿಂಥಟಿಕ್ ಬಣ್ಣ ಮಿಶ್ರಣಗೊಂಡಿರುವುದು ಖಚಿತವಾಗಿದೆ.

ದಿನಕ್ಕೆ ಎರಡು ಲೋಡ್

 • ಕಡೂರು, ತರೀಕೆರೆ ತಾಲೂಕಿನ ಕಲಬೆರಕೆ ಅಡಕೆ ತಯಾರಿಕೆಗೆ ನಿತ್ಯ ಎರಡು ಲೋಡ್ ರೆಡ್​ಆಕ್ಸೈಡ್ ಇಲ್ಲಿನ ಹಾರ್ಡ್ ವೇರ್ ಅಂಗಡಿಗಳಿಗೆ ಬರುತ್ತದೆ. ಈ ಪುಡಿಯನ್ನು ಬಿಸಿ ನೀರಿನ ಹಂಡೆಯಲ್ಲಿ ಹಾಕಿ ಕುದಿಸಿ ಅದಕ್ಕೆ ಕಳಪೆ ಅಡಕೆ ಹಾಕಿ ಬಣ್ಣ ಮಿಶ್ರಣ ಮಾಡಲಾಗುತ್ತದೆ. ಒಂದು ಕೆ.ಜಿ. ರೆಡ್​ಆಕ್ಸೈಡ್​ಗೆ 80 ರೂ. ದರ ಇದ್ದು, ಒಂದು ಕ್ವಿಂಟಾಲ್ ಅಡಕೆಗೆ 20-40 ಕೆ.ಜಿ. ಮೆತ್ತಿಕೊಳ್ಳುತ್ತದೆ. ಮಿಶ್ರಣ ಮಾಡಿದ ಅಡಕೆ 300-350 ರೂ.ನಂತೆ ಕೆ.ಜಿ.ಗೆ ಮಾರಾಟ ಮಾಡಲಾಗುತ್ತದೆ. ಒಂದು ಕ್ವಿಂಟಾಲ್​ನಲ್ಲಿ ಬೆರಕೆಯಾದ 80 ರೂ. ಮೌಲ್ಯದ ರೆಡ್​ಆಕ್ಸೈಡ್ ಅಡಕೆಗೂ ಇದೇ ಮೌಲ್ಯ ಲಭಿಸಲಿದೆ.

ಉತ್ತಮ ಅಡಕೆಗೆ ಕಳಪೆ ಹೆಸರು!

 • ವಿಶ್ವದಲ್ಲಿಯೇ ಅತ್ಯಂತ ಉತ್ತಮ ಗುಣಮಟ್ಟದ ಅಡಕೆಗೆ ಕರ್ನಾಟಕ ಹೆಸರುವಾಸಿ. ಅದರಲ್ಲೂ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಅಡಕೆಗೆ ಬೇಡಿಕೆ ಹೆಚ್ಚು.
 • ಆದರೆ, ಬಾಂಗ್ಲಾ, ಅಸ್ಸಾಂ, ಕೇರಳ, ಗೋವಾದಿಂದ ದ್ವಿತೀಯ, ತೃತೀಯ ದರ್ಜೆ ಕಳಪೆ ಅಡಕೆ ತಂದು ವಿಷಪೂರಿತ ಉರುಮಂಜು ಮಿಶ್ರಣ ಮಾಡಲಾಗುತ್ತದೆ. ಬಳಿಕ ಕಾಚು ಬೆರೆಸಿ ಅಡಕೆಗೆ ಹೊಳಪು ಬರುವಂತೆ ಮಾಡಲಾಗುತ್ತದೆ.
 • ಬಣ್ಣ ಹಾಕಿದ ಅಡಕೆಯನ್ನು ರಾಶಿ (ದುಂಡು) ಅಡಕೆಗೆ ಮಿಶ್ರಣ ಮಾಡಲಾಗುತ್ತದೆ. ಇದರಿಂದ ಈ ಭಾಗದ ಅಡಕೆಗೆ ಕೆಟ್ಟ ಹೆಸರು ಬರುವಂತಾಗಿದೆ.

ಶಿರಸಿ ಅಡಕೆಗೆ ಭೌಗೋಳಿಕ ಸನ್ನದು ಗರಿ

 • ಶಿರಸಿ ಅಡಕಗೆ ಭೌಗೋಳಿಕ ಸನ್ನದು (ಜಿಯೋಗ್ರಫಿಕಲ್ ಇಂಡಿಕೇಶನ್) ಲಭ್ಯವಾಗಿದೆ. ‘ಶಿರಸಿ ಸುಪಾರಿ’ ಎಂದು ನೋಂದಣಿಯಾಗಿದ್ದು, ಇಲ್ಲಿನ ಅಡಕೆಗೆ ಹೆಚ್ಚಿನ ಮಹತ್ವ ದೊರಕಲಿದೆ. ಜಿಐನಲ್ಲಿ ಭಾರತದಲ್ಲಿ 325 ಉತ್ಪನ್ನ ಗಳು ನೋಂದಣಿಯಾಗಿದ್ದು, ಅದರಲ್ಲಿ ಕರ್ನಾಟಕದ 39 ಉತ್ಪನ್ನಗಳಿವೆ.

ವೆಸ್ಟರ್ನ್​ ಡಿಸ್ಟರ್ಬೆನ್ಸ್​ (ಡಬ್ಲ್ಯೂಡಿ)

3.

ಸುದ್ಧಿಯಲ್ಲಿ ಏಕಿದೆ ?ದಕ್ಷಿಣ ಭಾರತದಲ್ಲಿ ಈಗಾಗಲೆ ಬೇಸಿಗೆ ಕಾಲಿರಿಸಿದೆ. ಆರಂಭಿಕ ದಿನಗಳಲ್ಲೇ ತೀವ್ರ ಸ್ವರೂಪದ ಬಿಸಿಗಾಳಿ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ, ಈ ವೇಳೆಗೆ ಮಾಗಿ ಚಳಿಯ ಕಾಟ ಕಡಿಮೆಯಾಗಿ, ಬೇಸಿಗೆಯ ಬಿಸಿಲಿನ ಝಳ ಆರಂಭವಾಗಬೇಕಿತ್ತು. ಆದರೂ ಈಗಲೂ ಅಲ್ಲಿ ಮಾಗಿ ಚಳಿ ಮೈನಡುಗಿಸುತ್ತಿದೆ. ಇದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಭಾರತೀಯ ಹವಾಮಾನ ಇಲಾಖೆ ವೆಸ್ಟರ್ನ್​ ಡಿಸ್ಟರ್ಬೆನ್ಸ್​ (ಡಬ್ಲ್ಯೂಡಿ) ಎಂಬ ಉತ್ತರ ನೀಡಿದೆ.

ವೆಸ್ಟರ್ನ್​ ಡಿಸ್ಟರ್ಬೆನ್ಸ್​ (ಡಬ್ಲ್ಯೂಡಿ) ಎಂದರೇನು ?

 • ಡಬ್ಲ್ಯೂಡಿ ಎಂದರೆ ಮಧ್ಯಭಾಗದಲ್ಲಿ ತಂಪಾದ ಗಾಳಿಯನ್ನು ಹೊಂದಿರುವ ಬಿರುಗಾಳಿಯಾಗಿದೆ. ಇದು ಮೆಡಿಟೇರಿಯನ್​ ವಲಯದಲ್ಲಿ ಆರಂಭವಾಗಿ ಉತ್ತರ ಮತ್ತು ವಾಯವ್ಯ ಭಾರತದಲ್ಲಿ ಮಳೆ ಸುರಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಸೇರಿ ಹಿಮಪರ್ವತ ಶ್ರೇಣಿಗಳಲ್ಲಿ ಹಿಮವರ್ಷ ಸುರಿಸುತ್ತವೆ.
 • ಡಿಸೆಂಬರ್​ ತಿಂಗಳಲ್ಲಿ ಮೂರು ಡಬ್ಲ್ಯೂಡಿಗಳು ಉತ್ತರ ಮತ್ತು ವಾಯವ್ಯ ಭಾರತಕ್ಕೆ ಅಪ್ಪಳಿಸುವುದು ವಾಡಿಕೆ. ಆದರೆ, ಈ ಬಾರಿ ಡಿಸೆಂಬರ್​ನಲ್ಲಿ ಕೇವಲ ಒಂದು ಡಬ್ಲ್ಯೂಡಿ ಅಪ್ಪಳಿಸಿದ್ದ, ಇನ್ನೆರಡು ಡಬ್ಲ್ಯೂಡಿಗಳು ಈ ತಿಂಗಳಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ. ಇದರಿಂದಾಗಿ ಬೇಸಿಗೆ ಆರಂಭವಾಗಿದ್ದರೂ ಉತ್ತರ ಮತ್ತು ವಾಯವ್ಯ ಭಾರತದಲ್ಲಿ ಮಳೆ ಹಾಗೂ ಹಿಮಪರ್ವತ ಶ್ರೇಣಿಗಳಲ್ಲಿ ಹಿಮದ ವರ್ಷವಾಗುವ ಸಾಧ್ಯತೆ ಹೆಚ್ಚಾಗಿದೆ.
 • ಇದು ದಕ್ಷಿಣ ಭಾರತದಲ್ಲಿ ಆರಂಭದಲ್ಲೇ ಬೇಸಿಗೆ ಬಿಸಿಲನ್ನು ಬಿರಿಸುಗೊಳಿಸಿದರೆ, ಉತ್ತರ ಭಾರತದಲ್ಲಿ ಚಳಿಗಾಲ ಹೆಚ್ಚುವರಿ ಅವಧಿಗೆ ವಿಸ್ತರಣೆಗೊಳ್ಳಲು ಕಾರಣವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ

ಲೋಕಪಾಲ ಆಯ್ಕೆ ಸಮಿತಿ ಸಭೆ

4.

ಸುದ್ಧಿಯಲ್ಲಿ ಏಕಿದೆ ?ದೇಶದ ಮೊದಲ ಲೋಕಪಾಲರ ಆಯ್ಕೆಗೆ 10 ದಿನದೊಳಗೆ ಪ್ರಧಾನಿ ನೇತೃ ತ್ವದ ಆಯ್ಕೆ ಸಮಿತಿ ಸಭೆಗೆ ದಿನಾಂಕ ನಿಗದಿ ಪಡಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

 • ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಪ್ರತಿಪಕ್ಷ ನಾಯಕ, ಲೋಕಸಭಾ ಅಧ್ಯಕ್ಷ, ಕಾನೂನು ತಜ್ಞ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ಆಯ್ಕೆ ಸಮಿತಿ ಸಭೆಗೆ 10 ದಿನದೊಳಗೆ ದಿನಾಂಕ ನಿಗದಿ ಪಡಿಸಬೇಕು, ಈಗಾಗಲೇ ವಿಳಂಬವಾಗಿದೆ. ಇನ್ನಷ್ಟು ವಿಳಂಬ ಅಸಾಧ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
 • 2014ರಲ್ಲೇ ಲೋಕಪಾಲ ಕಾಯ್ದೆಗೆ ಒಪ್ಪಿಗೆ ದೊರೆತರೂ ಇದುವರೆಗೂ ಲೋಕಪಾಲರ ಆಯ್ಕೆಯಾಗಿಲ್ಲ. ಸದ್ಯಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಯುತ್ತಿದೆ.

ಪಟ್ಟಿ ನೀಡಿದ ಶೋಧನಾ ಸಮಿತಿ:

 • ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಆರ್.ಪಿ.ದೇಸಾಯಿ ನೇತೃತ್ವದ ಸಮಿತಿ ಈಗಾಗಲೇ ಆಯ್ಕೆ ಸಮಿತಿಗೆ ಸಂಭಾವ್ಯರ ಹೆಸರನ್ನು ಶಿಫಾರಸು ಮಾಡಿದೆ. ಈ ಹೆಸರುಗಳನ್ನು ಬಹಿರಂಗಗೊಳಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಅದಕ್ಕೆ ಸುಪ್ರೀಂಕೋರ್ಟ್ ಕೂಡ ಬೆಂಬಲ ಸೂಚಿಸಿದೆ.

ಲೋಕಪಾಲ ಮಸೂದೆ ಎಂದರೇನು?

 • ಭ್ರಷ್ಟಾಚಾರ-ವಿರೋಧಿ ಸಂಸ್ಥೆಯನ್ನು ಸ್ಥಾಪಿಸುವ ಒಂದು ಮಸೂದೆಯನ್ನು 1968 ಮತ್ತು 2011 ರ ನಡುವೆ ಎಂಟು ಬಾರಿ ಎತ್ತಿಹಿಡಿದಿದ್ದರೂ, ಲೋಕಪಾಲ್ ಮತ್ತು ಲೋಕಾಯುಕ್ತ ಮಸೂದೆ 2011, ಲೋಕಪಾಲ್ ಕಾಯಿದೆಗೆ ಪ್ರಸ್ತುತ ರೂಪದಲ್ಲಿ ತಳಹದಿಯಾಗಿದೆ .
 • ಪ್ರಣಬ್ ಮುಖರ್ಜಿ ನೇತೃತ್ವದ ಮಂತ್ರಿಗಳ ಸಮೂಹವು ಈ ಮಸೂದೆಯನ್ನು ಪ್ರಸ್ತಾಪಿಸಿತು, ಇದಕ್ಕೆ ನಿಲುವು ಸಮಿತಿಯು ಗಣನೀಯ ಬದಲಾವಣೆಗಳನ್ನು ಮಾಡಿತು. 2013 ರಲ್ಲಿ ಲೋಕಪಾಲ್ ಮತ್ತು ಲೋಕಾಯುಕ್ತರ ಬಿಲ್ ಎಂದು ಕರೆಯಲ್ಪಡುವ ಪರಿಷ್ಕೃತ ಮಸೂದೆಯು ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಸಮಾಜವಾದಿ ಪಕ್ಷವನ್ನು ಹೊರತುಪಡಿಸಿ, 2013 ರ ಲೋಕಪಾಲ ಆಕ್ಟ್ ರೂಪಿಸಿತು.

ಅದರ ಪ್ರಮುಖ ಲಕ್ಷಣಗಳು ಯಾವುವು?

 • ಈ ಕಾನೂನು ಭ್ರಷ್ಟಾಚಾರ ವಿರೋಧಿ ಆಂಬುಡ್ಸ್ಮನ್ ಅನ್ನು ಲೋಕಪಾಲ್ ಎಂದು ಕೇಂದ್ರ ಮಟ್ಟದಲ್ಲಿ ಮತ್ತು ಲೋಕಾಯುಕ್ತ ಎಂದು ರಾಜ್ಯ ಮಟ್ಟದಲ್ಲಿ ಸ್ಥಾಪಿಸಲು ಅನುವು ಮಾಡಿಕೊಡುತ್ತದೆ. ಲೋಕಪಾಲ್ ಅಧ್ಯಕ್ಷೆ ಮತ್ತು ಗರಿಷ್ಠ ಎಂಟು ಸದಸ್ಯರನ್ನು ಒಳಗೊಂಡಿರುತ್ತದೆ.
 • ಪ್ರಧಾನಮಂತ್ರಿ ಸೇರಿದಂತೆ ಎಲ್ಲ ವಿಭಾಗಗಳ ಸಾರ್ವಜನಿಕ ಸೇವಕರನ್ನು ಲೋಕಪಾಲ್ ಒಳಗೊಳ್ಳಲಿದೆ. ಆದರೆ ಸಶಸ್ತ್ರ ಪಡೆಗಳು ಲೋಕಪಾಲದ ವ್ಯಾಪ್ತಿಯೊಳಗೆ ಬರುವುದಿಲ್ಲ. ಕಾನೂನು ಬಾಕಿ ಉಳಿದಿರುವಾಗಲೇ ಭ್ರಷ್ಟ ವಿಧಾನಗಳಿಂದ ಸ್ವಾಧೀನಪಡಿಸಿಕೊಂಡಿರುವ ಆಸ್ತಿಯ ಲಗತ್ತು ಮತ್ತು ವಶಪಡಿಸಿಕೊಳ್ಳಲು ನಿಬಂಧನೆಗಳನ್ನೂ ಸಹ ಈ ಕಾಯಿದೆ ಒಳಗೊಂಡಿದೆ. ಆಕ್ಟ್ ಆರಂಭವಾದ ಒಂದು ವರ್ಷದಲ್ಲಿ ರಾಜ್ಯಗಳು ಲೋಕಾಯುಕ್ತವನ್ನು ಸ್ಥಾಪಿಸಬೇಕು.
 • ಸಾರ್ವಜನಿಕ ಸೇವಕರು ಅವರ ಆಸ್ತಿ ಮತ್ತು ಹೊಣೆಗಾರಿಕೆಯನ್ನು ಅವರ ಸಂಗಾತಿಯ ಮತ್ತು ಅವಲಂಬಿತ ಮಕ್ಕಳೊಂದಿಗೆ ಘೋಷಿಸಲು ಕಡ್ಡಾಯ ಮಾಡಲಾಗಿದೆ. ವಿಸಿಲ್ಬ್ಲೋವರ್ಗಳಂತೆ ವರ್ತಿಸುವ ಸಾರ್ವಜನಿಕ ಸೇವಕರು ರಕ್ಷಿತರಾಗಿದ್ದಾರೆ ಎಂದು ಆಕ್ಟ್ ಖಚಿತಪಡಿಸುತ್ತದೆ.

ಲೋಕಪಾಲದ ಅಧಿಕಾರಗಳು ಯಾವುವು?

 • ಲೋಕಪಾಲ್ಗೆ ಸೂಪರಿಂಟೆಂಡೆನ್ಸ್ ಅಧಿಕಾರವಿದೆ ಮತ್ತು ತನಿಖಾ ಸಂಸ್ಥೆಗೆ ಸಿಬಿಐ ಸೇರಿದಂತೆ ತನಿಖಾಧಿಕಾರಿ ಅವರನ್ನು ಉಲ್ಲೇಖಿಸಿರುವ ಪ್ರಕರಣಗಳಿಗೆ ನಿರ್ದೇಶನ ನೀಡಲಾಗುತ್ತದೆ.
 • ಆಕ್ಟ್ ಪ್ರಕಾರ, ತನಿಖಾ ಸಂಸ್ಥೆ (ವಿಜಿಲೆನ್ಸ್ ಅಥವಾ ಸಿಬಿಐ ಮುಂತಾದವು) ತನಿಖೆ ಪ್ರಾರಂಭವಾದರೂ ಸಹ, ವ್ಯಕ್ತಿಯ ವಿರುದ್ಧ ಪ್ರೈಮಾ ಫ್ಯಾಸ್ ಪ್ರಕರಣ ಇದ್ದಾಗ ಲೋಕಪಾಲ್ ಯಾವುದೇ ಸಾರ್ವಜನಿಕ ಸೇವಕನನ್ನು ಕರೆಸಿಕೊಳ್ಳಬಹುದು ಅಥವಾ ಪ್ರಶ್ನಿಸಬಹುದು. ಸಿಬಿಐನ ಯಾವುದೇ ಅಧಿಕಾರಿ ಲೋಕಪಾಲರಿಂದ ಉಲ್ಲೇಖಿಸಲ್ಪಡುವ ಪ್ರಕರಣವನ್ನು ತನಿಖೆ ನಡೆಸುತ್ತಿದ್ದರೆ ಲೋಕಪಾಲ್ ಅನುಮತಿಯಿಲ್ಲದೆ ವರ್ಗಾಯಿಸಬಾರದು.
 • ತನಿಖೆ ಆರು ತಿಂಗಳಲ್ಲಿ ಪೂರ್ಣಗೊಳ್ಳಬೇಕು. ಹೇಗಾದರೂ, ಲೋಕಪಾಲ್ ಅಥವಾ ಲೋಕಾಯುಕ್ತರು ಅಂತಹ ವಿಸ್ತರಣೆಗಳ ಅವಶ್ಯಕತೆಗೆ ಕಾರಣಗಳನ್ನು ನೀಡಿ ಬರೆಯುವ ಸಮಯದಲ್ಲಿ ಆರು ತಿಂಗಳ ವಿಸ್ತರಣೆಗಳನ್ನು ಅನುಮತಿಸಬಹುದು
 • ಲೋಕಪಾಲ್ ಉಲ್ಲೇಖಿಸಿದ ಪ್ರಕರಣಗಳಲ್ಲಿ ಪ್ರಯೋಗಗಳನ್ನು ನಡೆಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು.

ಲೋಕಪಾಲರನ್ನು ನೇಮಕ ಮಾಡುವವರು ಯಾರು?

 • ಪ್ರಧಾನಿ, ಲೋಕಸಭಾ ಸ್ಪೀಕರ್, ಪ್ರತಿಪಕ್ಷ ನಾಯಕ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ರಾಷ್ಟ್ರಪತಿ ನೇಮಕ ಮಾಡುತ್ತಿರುವ ಶ್ರೇಷ್ಠ ನ್ಯಾಯವಾದಿ ಸೇರಿದಂತೆ ಐದು ಸದಸ್ಯರ ಸಮಿತಿಯು ಲೋಕಪಾಲನ್ನು ಆಯ್ಕೆ ಮಾಡುತ್ತದೆ.

ಹಾಗಾದರೂ  ಇನ್ನೂ ಲೋಕಪಾಲ್ ಏಕೆ ಇಲ್ಲ ?

 • ಪ್ರಸ್ತುತ ಲೋಕಸಭೆಯಲ್ಲಿ ಆಯ್ಕೆ ಸಮಿತಿಯಲ್ಲಿರಲು ವಿರೋಧ ಪಕ್ಷದ ನಾಯಕರು ಇಲ್ಲ. ವಿರೋಧ ಪಕ್ಷವು ಪ್ರತಿಪಕ್ಷದ ಹುದ್ದೆಗೆ ನಾಯಕನಾಗಲು, ಸದರಿ ಸದನದಲ್ಲಿ  ಒಟ್ಟು ಸದಸ್ಯರಲ್ಲಿ ಕನಿಷ್ಠ 10% ನಷ್ಟು ಶಕ್ತಿಯನ್ನು ಹೊಂದಿರಬೇಕು ಮತ್ತು ಈ ಗುರುತು ದಾಟಲು ಯಾವುದೇ ಪಕ್ಷಗಳು ವಿಫಲವಾಗಿವೆ.
 • ಈ ವಿಶಿಷ್ಟ ಪರಿಸ್ಥಿತಿಯು ಅಸ್ತಿತ್ವದಲ್ಲಿರುವ ಲೋಕಪಾಲ್ ಕಾಯಿದೆಗೆ ತಿದ್ದುಪಡಿಗಾಗಿ ವಿರೋಧ ಪಕ್ಷ ನಾಯಕನನ್ನು ದೊಡ್ಡ ಪ್ರತಿಪಕ್ಷ ನಾಯಕನನ್ನಾಗಿ ಬದಲಿಸುವಂತೆ ಕರೆ ನೀಡಿದೆ

ಹೊಸ 20 ರೂಪಾಯಿ ಮೌಲ್ಯದ ನಾಣ್ಯ ಬಿಡುಗಡೆ

5.

ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ 20 ರೂಪಾಯಿ ಮುಖಬೆಲೆಯ ನಾಣ್ಯವನ್ನು ಚಲಾವಣೆಗೆ ಬಿಡುಗಡೆ ಮಾಡಿದೆ.

 • 10 ರೂಪಾಯಿ ಮೌಲ್ಯದ ನಾಣ್ಯಗಳು ನಕಲಿಯಾಗಿದೆ ಎಂಬ ಭೀತಿಯಲ್ಲಿ ಅದನ್ನು ಸ್ವೀಕರಿಸಲು ಸಾರ್ವಜನಿಕರು ಭಯಪಡುತ್ತಿರುವಾಗಲೇ ಕೇಂದ್ರ ಸರ್ಕಾರ 20 ರೂಪಾಯಿ ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡುತ್ತಿದೆ.
 • ಹೊಸ ನಾಣ್ಯದ ಬಿಡುಗಡೆ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ 20 ರೂಪಾಯಿ ನಾಣ್ಯ 12 ತುದಿಗಳನ್ನು ಹೊಂದಿರುವ ಬಹುಭುಜಾಕೃತಿಯ ಆಕಾರವನ್ನು ಹೊಂದಿರುತ್ತದೆ. ಇದರ ಹೊರಭಾಗದ ವ್ಯಾಸ 27 ಮಿ.ಮೀ. ಇರಲಿದೆ. 54 ಗ್ರಾಮ ಭಾರವಿರುವ ಈ ನಾಣ್ಯದ ಶೇ.65 ಭಾಗ ತಾಮ್ರವಾಗಿದ್ದು, ಶೇ.15 ಭಾಗ ಜಿಂಕ್​ ಮತ್ತು ಶೇ.20 ನಿಕಲ್​ ಲೋಹದಿಂದ ಕೂಡಿರುತ್ತದೆ.
 • ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಕಾರ ನಾಣ್ಯದ ಮಧ್ಯಭಾಗ ಶೇ.75 ಭಾಗ ತಾಮ್ರದಿಂದ ಮಾಡಲ್ಪಟ್ಟಿದ್ದರೆ ಶೇ.20 ಭಾಗ ಜಿಂಕ್​ ಅನ್ನು ಒಳಗೊಂಡಿರುತ್ತದೆ. ನಿಕಲ್​ ಶೇ.5 ಭಾಗವಿರುತ್ತದೆ.
 • ಅಂಧರಿಗಾಗಿ ಹೊಸ ನಾಣ್ಯ: ಹೊಸದಾದ 20 ರೂಪಾಯಿ ಮೌಲ್ಯದ ನಾಣ್ಯಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಂಧರಿಗೆ ಅನುಕೂಲವಾಗುವ 1, 2, 5, 10 ಮತ್ತು 20 ರೂಪಾಯಿ ಮೌಲ್ಯದ ಹೊಸ ನಾಣ್ಯಗಳನ್ನೂ ಬಿಡುಗಡೆ ಮಾಡಿದರು. ಅಂಧರಿಗಾಗಿ ಬಿಡುಗಡೆ ಮಾಡಲಾಗಿರುವ ಎಲ್ಲ ನಾಣ್ಯಗಳು ದುಂಡನೆ ಆಕಾರದಲ್ಲಿವೆ.

ಹೊಸ 20 ರೂಪಾಯಿ ನಾಣ್ಯದ ವಿವರ

 • ನಾಣ್ಯದ ಮುಮ್ಮುಖದಲ್ಲಿ ನಾಲ್ಕು ಸಿಂಹಗಳ ರಾಷ್ಟ್ರೀಯ ಲಾಂಛನ, ಅದರಡಿಯಲ್ಲಿ ಸತ್ಯಮೇವ ಜಯತೆ ಎಂಬ ವಾಕ್ಯ ಇರುತ್ತದೆ. ಇದರ ಎಡಭಾಗದಲ್ಲಿ ಭಾರತ ಎಂದು ಹಿಂದಿಯಲ್ಲಿ ಬಲಭಾಗದಲ್ಲಿ ಇಂಡಿಯಾ ಎಂದು ಇಂಗ್ಲಿಷ್​ನಲ್ಲಿ ಬರೆಯಲ್ಪಟ್ಟಿರುತ್ತದೆ.
 • ನಾಣ್ಯದ ಹಿಮ್ಮುಖದಲ್ಲಿ 20 ರೂ. ಅಂಕಿ, ಇದರ ಶಿರೋಭಾಗದಲ್ಲಿ ರೂಪಾಯಿ ಚಿಹ್ನೆ, ಎಡಭಾಗದಲ್ಲಿ ಆಹಾರಧಾನ್ಯಗಳ ಚಿಹ್ನೆ, ಬಲಭಾಗದಲ್ಲಿ ಟ್ವೆಂಟಿ ರುಪೀಸ್​ ಎಂಬ ಇಂಗ್ಲಿಷ್​ ಬರಹ, ಇದರಡಿಯಲ್ಲಿ ನಾಣ್ಯವನ್ನು ಟಂಕಿಸಿದ ವರ್ಷದ ವಿವರಗಳು ಇರಲಿವೆ

ಪರಮಾಣು ಚಾಲಿತ ಸಬ್‌ಮರಿನ್‌

6.

ಸುದ್ಧಿಯಲ್ಲಿ ಏಕಿದೆ ?ಅಮೆರಿಕದ ಸಂಭಾವ್ಯ ದಿಗ್ಬಂಧನಗಳಿಗೆ ತಲೆ ಕೆಡಿಸಿಕೊಳ್ಳದೆ ಭಾರತ ರಷ್ಯಾದ ಜತೆಗೆ 300 ಕೋಟಿ ಡಾಲರ್‌ ಮೌಲ್ಯದ ಮೂರನೆಯ ಪರಮಾಣು ಚಾಲಿತ ಅಕುಲಾ ಕ್ಲಾಸ್‌ ಅಟ್ಯಾಕಿಂಗ್ ಸಬ್‌ಮೆರಿನ್ (ಜಲಾಂತರ್ಗಾಮಿ) ಅನ್ನು ಲೀಸ್ ಆಧಾರದಲ್ಲಿ ಪಡೆಯುವ ಒಪ್ಪಂದಕ್ಕೆ ಸಹಿ ಹಾಕಿದೆ.

 • ಚಕ್ರಾ3 ಎಂದು ಹೆಸರಿಸಲಾದ ಅಕುಲಾ ಕ್ಲಾಸ್-3 ಜಲಾಂತರ್ಗಾಮಿಗಾಗಿ ಎರಡೂ ದೇಶಗಳು ಅಂತರ್‌-ಸರಕಾರಿ ಒಪ್ಪಂದಕ್ಕೆ ಸಹಿ ಹಾಕಿವೆ.
 • ಭಾರತ ಈಗಾಗಲೇ ರಷ್ಯಾದಿಂದ ಇಂತಹ ಎರಡು ಜಲಾಂತರ್ಗಾಮಿಗಳನ್ನು ಪಡೆದಿದೆ.
 • 1988ರಲ್ಲಿ ಮೂರು ವರ್ಷಗಳ ಅವಧಿಯ ಲೀಸ್‌ಗೆ ಮೊದಲ ಐಎನ್‌ಎಸ್‌ ಚಕ್ರಾವನ್ನು ಪಡೆಯಲಾಗಿತ್ತು. ಎರಡನೇ ಜಲಾಂತರ್ಗಾಮಿ ನೌಕೆಯನ್ನು 10 ವರ್ಷಗಳ ಲೀಸ್‌ಗೆ 2012ರಲ್ಲಿ ಪಡೆದುಕೊಳ್ಳಲಾಗಿತ್ತು.
 • ನೂತನವಾಗಿ ಪಡೆಯಲಿರುವ ಚಕ್ರಾ-3 ಜಲಾಂತರ್ಗಾಮಿ ನೌಕೆಯನ್ನು ಐಎನ್‌ಎಸ್‌ ಚಕ್ರಾ-2ರ ಸ್ಥಾನಕ್ಕೆ ನಿಯೋಜಿಸಲಾಗುತ್ತದೆ. ಚಕ್ರಾ-2ರ ಲೀಸ್ ಅವಧಿ 2022ರಕ್ಕೆ ಕೊನೆಗೊಳ್ಳುತ್ತದೆ. ಹಾಗಿದ್ದರೂ ಈಗಿರುವ ಲೀಸ್ ಅವಧಿಯನ್ನು ಇನ್ನೂ 5 ವರ್ಷಗಳಿಗೆ ವಿಸ್ತರಿಸುವ ಬಗ್ಗೆ ಮಾತುಕತೆ ನಡೆದಿದೆ.
 • ನೂತನ ಅಕುಲಾ- ಕ್ಲಾಸ್ ಜಲಾಂತರ್ಗಾಮಿ ಹಲವು ತಿಂಗಳುಗಳ ಕಾಲ ಸಮುದ್ರದಾಳದಲ್ಲಿ ಇರಬಲ್ಲದು. 2025ರ ವೇಳೆಗೆ ಚಕ್ರಾ-3 ಭಾರತದ ನೌಕಾಪಡೆ ಸೇರುವ ನಿರೀಕ್ಷೆಯಿದೆ.
 • 2018ರ ಡಿಸೆಂಬರ್‌ನಲ್ಲಿ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದ್ದ ಪ್ರಸ್ತಾವದನ್ವಯ ನೂತನ ಜಲಾಂತರ್ಗಾಮಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
 • ಅಮೆರಿಕದ ಸಂಭಾವ್ಯ ದಿಗ್ಬಂಧನಗಳ ಹೊರತಾಗಿಯೂ ಭಾರತ ರಷ್ಯಾದ ಜತೆ 550 ಕೋಟಿ ಡಾಲರ್‌ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿತ್ತು.
 • ಅಮೆರಿಕದ ನೂತನ ಕಾಯ್ದೆ ಸಿಎಎಟಿಎಸ್‌ಎ (Countering America’s Adversaries through Sanctions Act) ರಷ್ಯಾದಿಂದ ಶಸ್ತ್ರಾಸ್ತ್ರ ಹಾಗೂ ಇರಾನ್‌ನಿಂದ ತೈಲ ಖರೀದಿಯನ್ನು ನಿರ್ಬಂಧಿಸುತ್ತದೆ. ಹಾಗಿದ್ದರೂ ಭಾರತ ಮತ್ತು ರಷ್ಯಾ ನಡುವಣ ಎಸ್-400 ಡೀಲ್‌ಗೆ ಈ ಕಾಯ್ದೆ ಅಡ್ಡ ಬರುವುದಿಲ್ಲ ಎಂದು ಅಮೆರಿಕದ ರಾಯಭಾರಿ ಸ್ಪಷ್ಟಪಡಿಸಿದ್ದಾರೆ.

ಇಸ್ರೇಲ್‌ ಹೆಲ್ಮೆಟ್‌ ಮೌಂಟೆಡ್‌ ಡಿಸ್‌ಪ್ಲೇ

7.

ಸುದ್ಧಿಯಲ್ಲಿ ಏಕಿದೆ ?ಭಾರತೀಯ ಸೇನೆಯ ಹೆಲಿಕಾಪ್ಟರ್‌ ಪೈಲಟ್‌ಗಳಿಗೆ ಶೀಘ್ರದಲ್ಲೇ ಅತ್ಯಾಧುನಿಕ ಹೆಲ್ಮೆಟ್‌ ಮೌಂಟೆಡ್‌ ಡಿಸ್‌ಪ್ಲೇ ಸಿಸ್ಟಮ್‌‘(ಎಚ್‌ಎಂಡಿಎಸ್‌) ಲಭ್ಯವಾಗಲಿದೆ.

 • ವಿಮಾನ ಹಾರಾಟದ ವೇಳೆ, ಪೈಲಟ್‌ಗಳ ಕಣ್ಣ ಮುಂದೆಯೇ ಸಮಗ್ರ ಮಾಹಿತಿಯನ್ನು ಮೂಡಿಸುವ ಪರದೆ ವ್ಯವಸ್ಥೆ ಇದಾಗಿದೆ.
 • ಇದರೊಂದಿಗೆ ಶರವೇಗದ ಹಾರಾಟದ ವೇಳೆ, ಪೈಲಟ್‌ಗಳು ಬೇರೆಲ್ಲೂ ಕಣ್ಣು ಹಾಯಿಸದೆ ಎಲ್ಲಾ ಬಗೆಯ ಮಾಹಿತಿಯನ್ನು ಪಡೆದು, ನಿರ್ಧಾರ ಕೈಗೊಳ್ಳಲು ಅನುಕೂಲವಾಗಲಿದೆ. ಪೈಲಟ್‌ಗಳು ತಮ್ಮ ಗುರಿಯೆಡೆಗೆ ಗಮನ ಕೇಂದ್ರೀಕರಿಸಲು ಸಹ ಇದರಿಂದ ಅನುಕೂಲವಾಗಲಿದೆ.
 • ಬಿಇಎಲ್‌ ಸಹಯೋಗ: ಬೆಂಗಳೂರು ಮೂಲದ ಭಾರತ್‌ ಎಲೆಕ್ಟ್ರಾನಿP್ಸ ಲಿಮಿಟೆಡ್‌(ಬಿಇಎಲ್‌) ಮತ್ತು ಇಸ್ರೇಲ್‌ನ ಎಲ್ಬಿಟ್‌ ಸಿಸ್ಟಮ್ಸ್‌ ಲಿಮಿಟೆಡ್‌ ನಡುವೆ ತಾಂತ್ರಿಕ ಸಂಬಂಧ ಒಪ್ಪಂದ(ಟಿಸಿಎ) ಏರ್ಪಟ್ಟಿದೆ. ನೌಕಾಪಡೆ ಮತ್ತು ಭೂ ಸೇನೆಯ ಹೆಲಿಕಾಪ್ಟರ್‌ ಪೈಲಟ್‌ಗಳಿಗಾಗಿ ಎಲ್ಬಿಟ್‌ ಸಿಸ್ಟಮ್ಸ್‌ ಲಿಮಿಟೆಡ್‌ ಪರವಾನಗಿ ಅಡಿಯಲ್ಲಿ ‘ಹೆಲ್ಮೆಟ್‌ ಮೌಂಟೆಡ್‌ ಡಿಸ್‌ಪ್ಲೇ ಸಿಸ್ಟಮ್‌/ಹೆಲ್ಮೆಟ್‌ ಪಾಯಿಂಟಿಂಗ್‌ ಸಿಸ್ಟಮ್‌(ವರ್ಷನ್‌ 02)’ ಅನ್ನು ಬಿಇಎಲ್‌ ತಯಾರಿಸಲಿದೆ.
 • ಅಮೆರಿಕದಲ್ಲೂ ಬಳಕೆ: ಈಗಾಗಲೇ ಅಮೆರಿಕ ಸೇನೆಯ ‘ಸಿಎಚ್‌-473ಎಫ್‌’, ಚಿಕೂನ್‌ ಮತ್ತು ‘ಯುಎಚ್‌ 60ಎಲ್‌/ಎಂ/ವಿ’ ಬ್ಲ್ಯಾಕ್‌ ಹಾಕ್‌ ಹೆಲಿಕಾಪ್ಟರ್‌ಗಳಲ್ಲಿ ಪೈಲಟ್‌ಗಳು ಇಂತಹ ಸಾಧನವನ್ನು ಬಳಸುತ್ತಿದ್ದಾರೆ.

ಏನೆಲ್ಲಾ ಇರುತ್ತದೆ?

 • ಹೆಲ್ಮೆಟ್‌ ಮೌಂಟೆಡ್‌ ಡಿಸ್‌ಪ್ಲೇ ಸಿಸ್ಟಂ ಒಂದು ಬಗೆಯ ಕಣ್ಣ ಮುಂದಿನ ಡಿಜಿಟಲ್‌ ಪರದೆ. ನೈಟ್‌ ಫ್ಲೈಯಿಂಗ್‌, ನೈಟ್‌ ವಿಷನ್‌ ಗಾಗಲ್ಸ್‌, ಕಲರ್‌ ಡೇ ನೈಟ್‌ ಡಿಸ್‌ಪ್ಲೇ, 3ಡಿ ಸಿಂಬಾಲಜಿ, ಹೆಡ್‌ ಟ್ರ್ಯಾಕಿಂಗ್‌, ಸೆನ್ಸಾರ್ಸ್‌ ಹಾಗೂ ವೆಪನ್‌ ಕ್ಯೂಯಿಂಗ್‌ನಂತಹಆಧುನಿಕ ವೈಶಿಷ್ಟ್ಯಗಳನ್ನು ಇದು ಒಳಗೊಂಡಿರುತ್ತದೆ.

ಅನುಕೂಲವೇನು?

 • ನೈಟ್‌ ವಿಷನ್‌ ಗಾಗಲ್ಸ್‌ ನೆರವಿಂದ ರಾತ್ರಿವೇಳೆಯೂ ನೋಡಲು ಅವಕಾಶ
 • ಕಡಿಮೆ ವಿಸಿಬಲಿಟಿ ವೇಳೆ ಲ್ಯಾಂಡಿಂಗ್‌ ಮತ್ತು ಟೇಕಾಫ್‌ಗೆ ಅನುಕೂಲ
 • ಕಾಕ್‌ಪಿಟ್‌ನಲ್ಲಿ ಮಾಹಿತಿಗಾಗಿ ಕಂಟ್ರೋಲ್‌ ಪ್ಯಾನಲ್‌ ನೋಡಲು ತಲೆ ತಗ್ಗಿಸುವ ಅಥವಾ ಕಣ್ಣಿನ ದೃಷ್ಟಿಯನ್ನು ಕೆಳಗೆ ಹಾಯಿಸುವ ಅಗತ್ಯ ತಪ್ಪಲಿದೆ.
 • ಕಾಪ್ಟರ್‌ ವೇಗ, ಹಾರುತ್ತಿರುವ ಎತ್ತರ, ಎಂಜಿನ್‌ ಕಾರ್ಯದಶಕ್ಷತೆ, ಎಚ್ಚರಿಕೆ ಸೂಚನೆಗಳು ಮುಂತಾದ ಎಲ್ಲಾ ಮಾಹಿತಿಯನ್ನೂ ಈ ಸಾಧನ ಕಲೆ ಹಾಕುವ ಮೂಲಕ ಪೈಲಟ್‌ಗಳ ತಲೆಬಿಸಿ ತಪ್ಪಿಸುತ್ತದೆ.
 • ಗುರಿಯತ್ತ ಗಮನ ಕೇಂದ್ರೀಕರಿಸಲು ಮತ್ತು ಅಪಾಯದ ವೇಳೆ ಸುರಕ್ಷತೆಗೆ ನೆರವಾಗಲಿದೆ.

                         .

Related Posts
“26 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಬಡವರ ಬಂಧು’ ನಿಯಮಾವಳಿ ಸಡಿಲ ಸುದ್ಧಿಯಲ್ಲಿ ಏಕಿದೆ ?ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ 'ಬಡವರ ಬಂಧು' ಯೋಜನೆ ಅನುಷ್ಠಾನದಲ್ಲಿ ತೊಡಕಾಗಿದ್ದ ಕೆಲ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಯಾವ ನಿಯಮವನ್ನು ಸಡಿಲಿಸಲಾಗಿದೆ ? 'ಯೋಜನೆಯಡಿ ಫಲಾನುಭವಿಗಳ ಆಯ್ಕೆಗೆ ಸ್ಥಳೀಯ ಸಂಸ್ಥೆಗಳ ಗುರುತಿನ ಚೀಟಿ ಹಾಗೂ ರೇಷನ್‌ ಕಾರ್ಡ್‌ ದಾಖಲೆಯಾಗಿ ...
READ MORE
“20 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಚುನಾವಣಾ ಆ್ಯಪ್ ಸುದ್ಧಿಯಲ್ಲಿ ಏಕಿದೆ ?ಮತಗಟ್ಟೆ, ಕ್ಷೇತ್ರದ ವಿವರ, ಮತಗಟ್ಟೆ ಇರುವ ಸ್ಥಳ, ಪಥ ಸೂಚಕ, ತಾವಿರುವ ಪ್ರದೇಶದಿಂದ ಮತಗಟ್ಟೆ ದೂರ ಸೇರಿದಂತೆ ವಿವಿಧ ಮಾಹಿತಿಗಳನ್ನು ಪಡೆಯಲು ಆಪ್​ನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ. ‘ಚುನಾವಣಾ’ ಹೆಸರಿನ ಈ ಆ್ಯಪ್ ಅನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ...
READ MORE
“21 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ರಾಜ್ಯವಾರು ಉತ್ಪಾದನೆಯಲ್ಲಿ ಕರ್ನಾಟಕ ನಂ.1 ಸುದ್ಧಿಯಲ್ಲಿ ಏಕಿದೆ ?ರಾಜ್ಯದ ತಲಾ ನಿವ್ವಳ ಆಂತರಿಕ ಉತ್ಪಾದನೆಯಲ್ಲಿ(ಎನ್‌ಎಸ್‌ಡಿಪಿ) ಕರ್ನಾಟಕವು 2017-18ರಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ರಾಜ್ಯ ಸರಾಸರಿ 1,81,788 ರೂ.ಗಳಷ್ಟು ತಲಾ ನಿವ್ವಳ ಆಂತರಿಕ ಉತ್ಪಾದನೆ ದಾಖಲಿಸಿದೆ. ತೆಲಂಗಾಣ 2ನೇ ಸ್ಥಾನದಲ್ಲಿದ್ದು, 1,81,034 ರೂ., ಮಹಾರಾಷ್ಟ್ರ ...
READ MORE
“15 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದ ಮೆರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌ ರ‍್ಯಾಂಕ್ ಪಟ್ಟಿ  ಸುದ್ಧಿಯಲ್ಲಿ ಏಕಿದೆ ?ಗುಣಮಟ್ಟದ ಜೀವನಕ್ಕೆ ಅತ್ಯುತ್ತಮ ನಗರ ಯಾವುದೆಂದು ತೀರ್ಮಾನಿಸುವ 2019ರ ದ ಮೆರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌ ರ‍್ಯಾಂಕ್ ಪಟ್ಟಿ (21ನೇ ಆವೃತ್ತಿ) ಬಿಡುಗಡೆಯಾಗಿದ್ದು, ಬೆಂಗಳೂರು ಜಾಗತಿಕ ಮಟ್ಟದಲ್ಲಿ 149ನೇ ಸ್ಥಾನ ...
READ MORE
“30 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಚ್‌1ಎನ್‌1 ಮುಂಜಾಗ್ರತೆಗೆ ಸೂಚನೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ವರ್ಷದ ಆರಂಭದಲ್ಲೇ ಎಚ್‌1ಎನ್‌1 ಜ್ವರ ಭೀತಿ ಸೃಷ್ಟಿಸಿರುವುದರಿಂದ ಅಗತ್ಯ ಔಷಧಗಳ ದಾಸ್ತಾನು ಮೂಲಕ ಶಂಕಿತ ರೋಗಿಗಳಿಗೆ 48 ಗಂಟೆಯೊಳಗೆ ಟ್ಯಾಮಿಫ್ಲೂ ಚಿಕಿತ್ಸೆ ಪ್ರಾರಂಭಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಏಕೆ ಈ ಸೂಚನೆ ...
READ MORE
” 01 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಗ್ರಾಮ ವಿಕಾಸ ಯೋಜನೆ ಸುದ್ಧಿಯಲ್ಲಿ ಏಕಿದೆ ?ಸಿದ್ದರಾಮಯ್ಯ ಸರಕಾರದ ಮಹತ್ವಾಕಾಂಕ್ಷಿ 'ಗ್ರಾಮ ವಿಕಾಸ' ಯೋಜನೆಗೆ ಅನುದಾನ ಸ್ಥಗಿತಗೊಳಿಸಿದ್ದು, ಕಾಂಗ್ರೆಸ್‌ ಸಚಿವರ ಆಕ್ರೋಶಕ್ಕೆ ಕಾರಣವಾಗಿದೆ. ಹಿನ್ನಲೆ ಎಚ್‌.ಕೆ.ಪಾಟೀಲ್‌ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ 2015ರ ಗಾಂಧಿ ಜಯಂತಿಯಂದು ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಕಾಂಗ್ರೆಸ್‌ ಸರಕಾರದ 'ಫ್ಲ್ಯಾಗ್‌ಶಿಫ್‌ ಪ್ರೋಗ್ರಾಮ್ಸ್‌ ' ಪಟ್ಟಿಯಲ್ಲಿದ್ದ ...
READ MORE
“11 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಟಾಪ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹಂಪಿ ಸುದ್ಧಿಯಲ್ಲಿ   ಏಕಿದೆ ?ಈ ವರ್ಷ ನೀವು ನೋಡಲೇಬೇಕಾದ ಜಗತ್ತಿನ 52 ಟಾಪ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ರಾಜ್ಯದ ಪಾರಂಪರಿಕ ನಗರಿ ಹಂಪಿ ಟಾಪ್ 2 ಸ್ಥಾನ ಪಡೆದಿದೆ. ದಿ ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ 2019ರ ಟಾಪ್ ...
READ MORE
” 14 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳಗಾವಿ-ಯರಗಟ್ಟಿ ರಸ್ತೆ ಸುದ್ಧಿಯಲ್ಲಿ ಏಕಿದೆ ?ಮೇಲ್ದರ್ಜೆಗೇರಿರುವ ಇಲ್ಲಿನ ಬೆಳಗಾವಿ-ಯರಗಟ್ಟಿ ನಡುವಿನ ರಸ್ತೆ, ಅಪಘಾತ ನಿಯಂತ್ರಿಸುವ ದೇಶದ ಮೊದಲ ಮಾದರಿ ರಸ್ತೆಯಾಗಿ ನಿರ್ಮಾಣಗೊಂಡಿದೆ. ಇದಕ್ಕೆ ಅತ್ಯಧಿಕ ರಾರ‍ಯಂಕ್‌ ನೀಡಿರುವ ವಿಶ್ವಬ್ಯಾಂಕ್‌, ಈ ಮಾದರಿ ರಸ್ತೆಯನ್ನು ಅನುಸರಿಸುವಂತೆ ಇತರ ರಾಜ್ಯಗಳಿಗೂ ಸೂಚನೆ ನೀಡಿದೆ. ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿಯಿಂದ ...
READ MORE
“13 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹೆಸರಿನ ಜತೆ ಭಾರತರತ್ನ, ಪದ್ಮ ಪ್ರಶಸ್ತಿ ಬಳಸುವಂತಿಲ್ಲ! ಸುದ್ಧಿಯಲ್ಲಿ ಏಕಿದೆ ? ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳೆನಿಸಿರುವ ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗಳು ಗೌರವಗಳೇ ಹೊರತು ಬಿರುದುಗಳಲ್ಲ. ಹಾಗಾಗಿ ಹೆಸರಿನ ಜತೆ ಅವುಗಳನ್ನು ಬಳಸುವಂತಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಒಂದು ವೇಳೆ ...
READ MORE
“16 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಿಪಂ ವಾಹನಗಳಲ್ಲಿ ಬಯೋಡೀಸೆಲ್‌ ಬಳಕೆಗೆ ಸೂಚನೆ ಸುದ್ಧಿಯಲ್ಲಿ ಏಕಿದೆ ? ರಾಜ್ಯದಲ್ಲಿ ಜೈವಿಕ ಇಂಧನ ಉತ್ಪಾದನೆ ಮತ್ತು ಬಳಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಸರಕಾರಿ ವಾಹನಗಳಲ್ಲಿ ಬಯೋಡೀಸೆಲ್‌ ಬಳಸುವಂತೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಬಯೋಡೀಸೆಲ್‌ ಬಳಸುವ ಬಗ್ಗೆ ಮಾರ್ಗಸೂಚಿ ಸಹ ...
READ MORE
“26 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“20 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“21 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“30 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 01 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“11 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 14 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“13 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“16 ಫೆಬ್ರವರಿ 2019 ರ ಕನ್ನಡ ಪ್ರಚಲಿತ

Leave a Reply

Your email address will not be published. Required fields are marked *