“10 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ರಾಜ್ಯದಲ್ಲಿ ತಂಬಾಕು ಮಾರಾಟ ಕುಸಿತ

ಸುದ್ಧಿಯಲ್ಲಿ ಏಕಿದೆ ?ರಾಜ್ಯದ ತಂಬಾಕು ಮಾರುಕಟ್ಟೆಯಲ್ಲಿ ಒಟ್ಟು 8.5 ಕೋಟಿ ಕೆ.ಜಿ ತಂಬಾಕು ಮಾರಾಟವಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ 2.1 ಕೋಟಿ ಕೆ.ಜಿ ತಂಬಾಕು ಮಾರಾಟ ಕುಸಿತ ಕಂಡಿದೆ.

 • ಒಟ್ಟು 11 ತಂಬಾಕು ಹರಾಜು ಮಾರುಕಟ್ಟೆಗಳಿದ್ದು , ತಂಬಾಕು ಉತ್ಪಾದನೆಯನ್ನು 10 ಕೋಟಿ ಕೆ.ಜಿಗೆ ನಿಗದಿಗೊಳಿಸಲಾಗಿತ್ತು. ಆದರೆ, 8.5 ಕೋಟಿ ಕೆ.ಜಿ ಉತ್ಪಾದನೆಯಾಗಿದೆ.
 • ಪಿರಿಯಾಪಟ್ಟಣ ತಾಲೂಕಿನ 4 ಮಾರುಕಟ್ಟೆ, ಹುಣಸೂರಿನ 4 ಮಾರುಕಟ್ಟೆಗಳು, ಹಾಸನ ಜಿಲ್ಲೆಯ ರಾಮನಾಥಪುರದ 2 ಮಾರುಕಟ್ಟೆ, ಎಚ್‌.ಡಿ.ಕೋಟೆ 1 ಮಾರುಕಟ್ಟೆಯಲ್ಲಿ ಈ ವರ್ಷದ ತಂಬಾಕು ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಒಟ್ಟು 1,65,452 ಬೇಲ್‌ಗಳು ಮಾರಾಟವಾಗಿವೆ.

ಕುಸಿತಕ್ಕೆ ಕಾರಣ

 • ಅತಿಯಾದ ಮಳೆಯಿಂದ ತಂಬಾಕಿನಲ್ಲಿ ಶೇ.10 ರಷ್ಟು ನಷ್ಟವಾಗಿದ್ದು, ಮರು ನಾಟಿಗೆ ಮಳೆ ಅವಕಾಶ ಕೊಡಲಿಲ್ಲ. ಹೀಗೆ ಒಟ್ಟಾರೆ ಪೋಷಕಾಂಷ ಹೀರಿಕೊಳ್ಳದ ಕಾರಣ ಶೇ.25ರಷ್ಟು ಕಡಿಮೆಯಾಗಿದೆ. ಅಲ್ಲದೆ ಶೀತಾಂಶ ಹೆಚ್ಚಾಗಿದ್ದರಿಂದ ಗುಣಮಟ್ಟ ಕಡಿಮೆಯಾಗಿತ್ತು. ಇದಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕಾಲದಲ್ಲಿ ಆರ್ಡರ್‌ ಸಿಗದ ಕಾರಣ ಸ್ವಲ್ಪ ಮಟ್ಟಿನ ಮಾರುಕಟ್ಟೆ ವ್ಯತ್ಯಯವಾಗಿ ರೈತರಿಗೆ ನಿರೀಕ್ಷೆಯಂತೆ ಬೆಲೆ ದೊರಕಿರಲಿಲ್ಲ.
 • ಕರ್ನಾಟಕಕ್ಕೆ 2019-20 ಸಾಲಿಗೆ 10 ಕೋಟಿ ಕೆಜಿ ತಂಬಾಕು ಬೆಳೆ ಬೆಳೆಯಲು ನಿಗದಿ ಪಡಿಸಲಾಗಿದೆ. ಪ್ರತಿ ಸಿಂಗಲ್‌ ಬ್ಯಾರನ್‌ಗೆ 1750 ಕೆ.ಜಿ. ಮಾರಾಟ ದರ ನಿಗದಿಪಡಿಸಲಾಗಿದೆ.

ತಂಬಾಕು

 • ತಂಬಾಕು ಎಂಬುದು ತಂಬಾಕು ಸಸ್ಯದ ಎಲೆಗಳಿಂದ ತಯಾರಿಸಲ್ಪಟ್ಟ ಒಂದು ಉತ್ಪನ್ನವಾಗಿದೆ. ಸಸ್ಯವು ನಿಕೋಟಿಯಾನಾ ಮತ್ತು ಸೋಲನೇಸಿಯ (ನೈಟ್ಶೇಡ್) ಕುಟುಂಬದ ಭಾಗವಾಗಿದೆ.
 • 70 ಕ್ಕಿಂತ ಹೆಚ್ಚು ತಂಬಾಕುಗಳು ತಿಳಿದಿವೆ, ಮುಖ್ಯ ವಾಣಿಜ್ಯ ಬೆಳೆ ಟೊಬಾಕಮ್. ಹೆಚ್ಚು ಪ್ರಬಲವಾದ N. ರಸ್ಟಿಕಾವನ್ನು ಜಗತ್ತಿನಾದ್ಯಂತ ಬಳಸಲಾಗುತ್ತದೆ.
 • ತಂಬಾಕು ಆಲ್ಕಲಾಯ್ಡ್ ನಿಕೋಟಿನ್ ಅನ್ನು ಹೊಂದಿದೆ, ಇದು ಉತ್ತೇಜಕ ಮತ್ತು ಹಾಮಾಲಾ ಅಲ್ಕಾಲಾಯ್ಡ್ಗಳನ್ನು ಒಳಗೊಂಡಿದೆ. ಒಣಗಿದ ತಂಬಾಕು ಎಲೆಗಳನ್ನು ಮುಖ್ಯವಾಗಿ ಸಿಗರೆಟ್ಗಳು, ಸಿಗಾರ್ಗಳು, ಪೈಪ್ ತಂಬಾಕು, ಮತ್ತು ಶುಚಿಯಾದ ತಂಬಾಕು ಸೇವನೆಯಲ್ಲಿ ಧೂಮಪಾನ ಮಾಡಲು ಬಳಸಲಾಗುತ್ತದೆ. ಅವುಗಳನ್ನು ಸ್ನಫ್, ಚೆವಿಂಗ್ ತಂಬಾಕು, ನಗ್ನ ತಂಬಾಕಿನ ರೀತಿ ಸೇವಿಸಬಹುದು.
 • ಅನೇಕ ರೋಗಗಳಿಗೆ ತಂಬಾಕು ಬಳಕೆ ಅಪಾಯಕಾರಿ ಅಂಶವಾಗಿದೆ; ವಿಶೇಷವಾಗಿ ಹೃದಯ, ಯಕೃತ್ತು, ಮತ್ತು ಶ್ವಾಸಕೋಶಗಳು, ಮತ್ತು ಅನೇಕ ಕ್ಯಾನ್ಸರ್ಗಳ ಮೇಲೆ ಪ್ರಭಾವ ಬೀರುವುದು .

ಪ್ಲಾಸ್ಟಿಕ್‌ ತಂದರೆ ದೇವರ ದರ್ಶನ ಇಲ್ಲ

ಸುದ್ಧಿಯಲ್ಲಿ ಏಕಿದೆ ?ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಮುಕ್ತಿ ಹಾಡಲು ಮುಂದಾಗಿರುವ ಮುಜರಾಯಿ ಇಲಾಖೆ ದೇಗುಲದ ಆವರಣದಲ್ಲಿ ಪ್ಲಾಷ್ಟಿಕ್‌ ಚೀಲ ನಿಷೇಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

 • ಭಕ್ತರು ಹೂವು, ಹಣ್ಣು-ಕಾಯಿ, ಕಡ್ಡಿ, ಕರ್ಪೂರಗಳನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತಂದು ನಂತರ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ. ಇದರಿಂದ ದೇವಾಲಯಗಳ ಆವರಣ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಮಲಿನಗೊಳ್ಳುತ್ತಿವೆ. ಆದ್ದರಿಂದ ಮುಜರಾಯಿ ಇಲಾಖೆಗೆ ಸೇರಿದ ಎಲ್ಲಾ ದೇವಾಲಯಗಳಲ್ಲೂ ಪ್ಲಾಸ್ಟಿಕ್‌ ಚೀಲಗಳ ಸಂಪೂರ್ಣ ನಿಷೇಧಕ್ಕೆ ಸಿದ್ಧತೆ ನಡೆದಿದೆ.
 • ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಸೂಚನೆ ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯ ನಿರ್ವಹಣೆಗೆ ನಿವೃತ್ತ ನ್ಯಾ.ಸುಭಾಷ್‌ ಬಿ. ಅಡಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ರಾಜ್ಯ ಸಮಿತಿಯು ಇತ್ತೀಚೆಗೆ ಕರೆದಿದ್ದ ಸಭೆಯಲ್ಲಿ ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧ ಹಾಗೂ ಸ್ವಯಂ ತ್ಯಾಜ್ಯ ಸಂಸ್ಕರಣೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.

ಹಸಿರು ನ್ಯಾಯಮಂಡಳಿಯ ರಾಜ್ಯ ಸಮಿತಿಯ ಸಲಹೆಗಳೇನು?

 • ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧಿಸಬೇಕು.
 • ದೇವಳದ ಗೇಟ್‌ನಲ್ಲೇ ತಪಾಸಣೆ ನಡೆಸಬೇಕು.
 • ದೇವಾಲಯದ ಆವರಣದಲ್ಲಿ ವ್ಯಾಪಾರಿಗಳು ಪ್ಲಾಸ್ಟಿಕ್‌ ಬಳಸದಂತೆ ಪರಿಶೀಲಿಸಬೇಕು.
 • ಪತ್ರಿಕೆ ಹಾಗೂ ಟಿವಿ ಮಾಧ್ಯಮ ಮತ್ತು ಕರಪತ್ರಗಳ ಮೂಲಕ ಜಾಗೃತಿ ಮೂಡಿಸಬೇಕು.
 • ಸ್ಥಳೀಯ ಸ್ವಸಹಾಯ ಗುಂಪುಗಳಿಂದ ಬಟ್ಟೆ ಬ್ಯಾಗ್‌ಗಳನ್ನು ತಯಾರಿಸಿ ದೇವಾಲಯಗಳಿಂದಲೇ ಕಡಿಮೆ ದರಕ್ಕೆ ವಿತರಿಸಬೇಕು.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ:

 • 2010 ರಲ್ಲಿ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ಆಕ್ಟ್ 2010 ರೊಳಗೆ ಎನ್ಜಿಟಿ ಯನ್ನು ಕೇಂದ್ರ ಸರ್ಕಾರವು ಅಂಗೀಕರಿಸಿತು.
 • ಪರಿಸರ ರಕ್ಷಣೆ, ಕಾಡಿನ ಸಂರಕ್ಷಣೆ ಮತ್ತು ಜನರಿಗೆ ಅಥವಾ ಆಸ್ತಿಗೆ ಹಾನಿಗೊಳಗಾಗಿರುವ ಹಾನಿಗಳಿಗೆ ಪರಿಹಾರವನ್ನು ಕೋರುವುದಕ್ಕಾಗಿ ಪರಿಣಾಮಕಾರಿ ಮತ್ತು ತ್ವರಿತವಾಗಿ ವಿಲೇವಾರಿ ಮಾಡಲು ವಿಶೇಷವಾದ ವೇದಿಕೆಯನ್ನು ಒದಗಿಸುವುದು ಕೇಂದ್ರ ಸರಕಾರದ ಉದ್ದೇಶವಾಗಿತ್ತು.

ಪ್ರಮುಖ ಅಂಶಗಳು

 • ಎನ್ಜಿಟಿ ಯನ್ನು 1908 ರ ಸಂಹಿತೆಯ ಕಾರ್ಯವಿಧಾನದ ಅಡಿಯಲ್ಲಿ ನೀಡಲಾಗಿರುವ ವಿಧಾನದಿಂದ ಬಂಧಿಸಲಾಗಿಲ್ಲ, ಆದರೆ ನೈಸರ್ಗಿಕ ನ್ಯಾಯದ ತತ್ವಗಳಿಂದ ನಿರ್ದೇಶಿಸಲ್ಪಡಬೇಕು.
 • 1872 ರ ಇಂಡಿಯನ್ ಎವಿಡೆನ್ಸ್ ಆಕ್ಟ್ನಲ್ಲಿ ಎನ್ಜಿಟಿಯು ಸಾಕ್ಷಿಗಳ ನಿಯಮಗಳಿಂದ ಕೂಡಿಲ್ಲ .
 • ಎನ್ಜಿಟಿಗೆ ಮುಂಚಿತವಾಗಿ ಸಂರಕ್ಷಣೆ ಗುಂಪುಗಳಿಗೆ ತುಲನಾತ್ಮಕವಾಗಿ ಸತ್ಯ ಮತ್ತು ಸಮಸ್ಯೆಗಳನ್ನು ಪ್ರಸ್ತುತಪಡಿಸಲು ಸುಲಭವಾಗಿರುತ್ತದೆ (ಒಂದು ನ್ಯಾಯಾಲಯಕ್ಕೆ ಸಮೀಪಿಸುವಂತೆ), ಮುಂಚಿತವಾಗಿ ಯೋಜನೆಯೊಂದರಲ್ಲಿ ತಾಂತ್ರಿಕ ನ್ಯೂನತೆಗಳನ್ನು ತೋರಿಸುವುದು ಅಥವಾ ಪರಿಸರ ಹಾನಿಗಳನ್ನು ಕಡಿಮೆಗೊಳಿಸಬಹುದಾದ ಪರ್ಯಾಯಗಳನ್ನು ಪ್ರಸ್ತಾಪಿಸುವುದು ಸೇರಿದಂತೆ ಆರ್ಡರ್ಸ್ / ನಿರ್ಧಾರಗಳು / ಪ್ರಶಸ್ತಿಗಳನ್ನು ನೀಡುವಾಗ  ಪರಿಗಣಿಸದಿರುವುದನ್ನು ಸೇರಿಸಿಕೊಂಡು .
 • ಸಮರ್ಥನೀಯ ಅಭಿವೃದ್ಧಿಯ ತತ್ವಗಳನ್ನು ಎನ್ಜಿಟಿ ಅನ್ವಯಿಸುತ್ತದೆ, ಮುನ್ನೆಚ್ಚರಿಕೆಯ ತತ್ವ ಮತ್ತು ಮಾಲಿನ್ಯ ಮಾಡುವವರು ಪಾವತಿಸುತ್ತಾರೆ ಎಂಬ ತತ್ವಗಳನ್ನು ಅನ್ವಯಿಸುತ್ತದೆ . ಹೇಗಾದರೂ, ಒಂದು ಹಕ್ಕು ತಪ್ಪಾಗಿದೆ ಎಂದರೆ , ಯಾವುದೇ ಮಧ್ಯಂತರ ತಡೆಯಾಜ್ಞೆಯಿಂದಾಗಿ ಕಳೆದುಹೋದ ಪ್ರಯೋಜನಗಳು ಸೇರಿದಂತೆ ವೆಚ್ಚಗಳನ್ನು ಹಸಿರು ನ್ಯಾಯ ಮಂಡಳಿ  ವಿಧಿಸಬಹುದು.

ಸುಧಾರಿತ ಬ್ರಹ್ಮೋಸ್‌ ಕ್ಷಿಪಣಿ

ಸುದ್ಧಿಯಲ್ಲಿ ಏಕಿದೆ ?ಭಾರತದ ಅತ್ಯಂತ ಯಶಸ್ವೀ ಹಾಗೂ ಪ್ರಬಲ ಕ್ಷಿಪಣಿ ಬ್ರಹ್ಮೋಸ್ ಸರಣಿಯ ಸುಧಾರಿತ ಕ್ಷಿಪಣಿ ಶೀಘ್ರ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ

 • ಭಾರತ ಮತ್ತು ರಷ್ಯಾ ಜಂಟಿಯಾಗಿ ತಯಾರಿಸುತ್ತಿರುವ ಸೂಪರ್‌ ಸಾನಿಕ್‌ ಕ್ರೂಸ್‌ ಮಿಸೈಲ್‌ ಬ್ರಹ್ಮೋಸ್‌ ನ ಗುರಿ ಬೇಧನಾ ಸಾಮರ್ಥ್ಯವನ್ನು ಹೆಚ್ಚಿಸಲು ಕ್ಷಿಪಣಿ ತಯಾರಿಕಾ ಕಂಪೆನಿ ಬ್ರಹ್ಮೋಸ್‌ ಏರೋಸ್ಪೇಸ್‌ ಕಂಪೆನಿ ನಿರ್ಧರಿಸಿದೆ

ಸುಧಾರಿತ ಬ್ರಹ್ಮೋಸ್ ನ ವಿಶೇಷತೆ

 • ಪ್ರಸ್ತುತ ಬ್ರಹ್ಮೋಸ್‌ ನ ಗರಿಷ್ಠ ವೇಗ 8 ಮ್ಯಾಕ್‌ ಗಳಷ್ಟಾಗಿದ್ದರೆ ಭವಿಷ್ಯದಲ್ಲಿ ಈ ವೇಗವನ್ನು 4.5 ಮ್ಯಾಕ್‌ ಗೆ ಹೆಚ್ಚಿಸಲಾಗುವುದು
 • ಬ್ರಹ್ಮೋಸ್‌ ನ ಪ್ರಸ್ತುತ ಗುರಿ ಸಾಮರ್ಥ್ಯ 400 ಕಿಲೋಮೀಟರ್‌ ಗಳಾಗಿದ್ದು, ಇದನ್ನು 500 ಕಿಲೋಮೀಟರ್‌ ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದರ ಗುರಿ ಬೇಧನಾ ಸಾಮರ್ಥ್ಯದ ಜೊತೆಜೊತೆಗೆ ಹೈಪರ್ ಸೌಂಡ್‌ ವಿಧಾನದ ಮೂಲಕ ಈ ಕ್ಷಿಪಣಿಯ ವೇಗವರ್ಧನೆಗೂ ನಿರ್ಧರಿಸಲಾಗಿದೆ
 • ಈ ನೂತನ ಕ್ಷಿಪಣಿಯನ್ನು ಪ್ರಮುಖವಾಗಿ ಭಾರತೀಯ ವಾಯುಪಡೆಗೆಂದೇ ತಯಾರಿಸಲಾಗುತ್ತಿರುವುದು ವಿಶೇಷ. ಭಾರತೀಯ ವಾಯುಪಡೆಯ ಸುಖೋಯ್‌ 30 ಎಂ.ಕೆ.ಐ. ಹಾಗೂ ತೇಜಸ್‌ ಲಘು ಯುದ್ಧ ವಿಮಾನಗಳಿಗೆ ಹೊಂದಿಕೊಳ್ಳುವ ಮಾದರಿಯಲ್ಲಿ ಈ ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ.
 • ಇದೀಗ ವಾಯುಪಡೆಯ ಬಳಿಯಲ್ಲಿರುವ ಬ್ರಹ್ಮೋಸ್‌ ಕ್ಷಿಪಣಿಯ ತೂಕ 5 ಟನ್‌ ಗಳಾಗಿದ್ದರೆ ಈ ಹೊಸ ತಲೆಮಾರಿನ ಕ್ಷಿಪಣಿ 1.5 ಟನ್‌ ಗಳಷ್ಟು ತೂಕವನ್ನು ಹೊಂದಿರಲಿದೆ
 • ಭಾರತೀಯ ಮೂರೂ ಸಶಸ್ತ್ರ ಪಡೆಗಳಲ್ಲೂ ಬ್ರಹ್ಮೋಸ್‌ ಕ್ಷಿಪಣಿಗಳನ್ನು ಸೇರ್ಪಡೆಗೊಳಿಸಲಾಗಿದೆ.

 ಬ್ರಹ್ಮೋಸ್ನ ಸುಧಾರಣೆಗೆ ಕಾರಣ

 • ಪ್ರಸ್ತುತ ಶತ್ರುಗಳ ದೂರದ ಗುರಿಯನ್ನು ಬೇಧಿಸುವಲ್ಲಿ ಆಧುನಿಕ ಯುದ್ಧ ತಂತ್ರಜ್ಞಾನಕ್ಕೆ ಹೋಲಿಸಿದಲ್ಲಿ ಬ್ರಹ್ಮೋಸ್‌ ನ ಗುರಿ ಬೇಧನಾ ಸಾಮರ್ಥ್ಯ ಕಡಿಮೆಯಿದ್ದು ಇದನ್ನು ಹೆಚ್ಚಿಸುವ ಅನಿವಾರ್ಯತೆ ಇದೆ.
 • ಮುಂದಿನ ತಲೆಮಾರಿನ ಯುದ್ಧತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಬ್ರಹ್ಮೋಸ್‌ ಎನ್‌.ಜಿ. (ನೆಕ್ಸ್ಟ್ ಜನರೇಷನ್‌) ಎಂಬ ಹೊಸ ಮಾದರಿಯ ಕ್ಷಿಪಣಿ ತಯಾರಿ ಯೋಜನೆ ಕಾರ್ಯಗತಗೊಳ್ಳುವ ಹಂತದಲ್ಲಿದೆ

ಯುದ್ದ ವಿಮಾನಗಳ ಅಪ್ ಗ್ರೇಡ್ ಗೂ ಚಿಂತನೆ

 • ಇಷ್ಟು ಮಾತ್ರವಲ್ಲದೇ ಈ ಕ್ಷಿಪಣಿ ತಯಾರುಗೊಂಡ ಬಳಿಕ ಯುದ್ದ ವಿಮಾನಗಳ ಅಪ್ ಗ್ರೇಡ್ ಗೂ ಚಿಂತನೆ ನಡೆಸಲಾಗಿದ್ದು, ಈ ಯೋಜನೆ ಮೂಲಕ ಸುಖೋಯ್‌ ಯುದ್ಧ ವಿಮಾನವೊಂದು ಏಕಕಾಲಕ್ಕೆ ಐದು ಕ್ಷಿಪಣಿಗಳನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯವನ್ನು ಹೊಂದಲಿದೆ.
 • ಮತ್ತು ಇದಕ್ಕಾಗಿ ಸುಖೋಯ್‌ ರಚನೆಯಲ್ಲಿ ಬದಲಾವಣೆಗಳನ್ನು ತರಲು ರಕ್ಷಣಾ ಇಲಾಖೆ ನಿರ್ಧರಿಸಿದೆ. ಪ್ರಸ್ತುತ ಸುಖೋಯ್‌ ಯುದ್ಧ ವಿಮಾನವು ಏಕಕಾಲಕ್ಕೆ ಒಂದು ಕ್ಷಿಪಣಿಯನ್ನು ಮಾತ್ರವೇ ಹೊತ್ತೂಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ

ವಿಶ್ವ ಬ್ಯಾಂಕಿನ ವಲಸೆ ಮತ್ತು ಅಭಿವೃದ್ಧಿ ವರದಿ

ಸುದ್ಧಿಯಲ್ಲಿ ಏಕಿದೆ ?ಭಾರತವು ಅಗ್ರ ವಿದೇಶೀ ಹೂಡಿಕೆದಾರ ರಾಷ್ಟ್ರದ ಸ್ಥಾನಮಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. 2018 ರಲ್ಲಿ 79 ಶತಕೋಟಿ ಡಾಲರ್ ಹಣವನ್ನು ವಿದೇಶಗಳಿಂದ ಬಾರತಕ್ಕೆ ಕಳುಹಿಸಲಾಗಿದೆ. ಈ ಮೂಲಕ ಭಾರತವು ತನ್ನ ದೇಶದ ವಿದೇಶಿ ಹೂಡಿಕೆದಾರರ ಸ್ಥಾನಮಾನವನ್ನು ಉಳಿಸಿಕೊಂಡಿದೆ ಎಂದು ವಿಶ್ವ ಬ್ಯಾಂಕ್ ವರದಿಯಲ್ಲಿ ತಿಳಿಸಿದೆ.

 • ಹಣದ ರವಾನೆ: ಇದು ವಿದೇಶಿ ನೌಕರರು ತಮ್ಮ ತಾಯ್ನಾಡಿನಲ್ಲಿ ವ್ಯಕ್ತಿಗೆ ಅಥವಾ ಕುಟುಂಬಕ್ಕೆ ಹಣ ವರ್ಗಾವಣೆ ಮಾಡುವುದು. ಇದು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅತಿ ದೊಡ್ಡ ಹಣಕಾಸಿನ ಒಳಹರಿವುಗಳಲ್ಲಿ ಒಂದಾಗಿದೆ. ಅನೇಕ ಕುಟುಂಬಗಳಿಗೆ ವಿಶೇಷವಾಗಿ ಅಭಿವೃದ್ಧಿಶೀಲ ಮತ್ತು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಬಡತನವನ್ನು ನಿವಾರಿಸುವಲ್ಲಿ ಇದು ನೇರ ಪ್ರಭಾವ ಬೀರುತ್ತದೆ.

ವರದಿಯಲ್ಲೇನಿದೆ ?

 • ಭಾರತದ ಬಳಿಕ ಈ ಪಟ್ಟಿಯಲ್ಲಿ ಚೀನಾ (67 ಶತಕೋಟಿ ಡಾಲರ್), , ಮೆಕ್ಸಿಕೊ (36 ಶತಕೋಟಿ ಡಾಲರ್), ಫಿಲಿಪೈನ್ಸ್ (34 ಶತಕೋಟಿ ಡಾಲರ್) ಮತ್ತು ಈಜಿಪ್ಟ್ (29 ಶತಕೋಟಿ ಡಾಲರ್). ರಾಷ್ಟ್ರಗಳಿದೆ.
 • ವಿಶ್ವ ಬ್ಯಾಂಕಿನ ವಲಸೆ ಮತ್ತು ಅಭಿವೃದ್ಧಿ ವಿಭಾಗದ ಸಂಕ್ಷಿಪ್ತ ಅಂಕಿ ಅಂಶಗಳ ವರದಿಯ ಆಧಾರದಲ್ಲಿ ಭಾರತವು ಹಣ ಪಾವತಿ ಮಾಡುವಲ್ಲಿ ತನ್ನ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.
 • ಕಳೆದ ಮೂರು ವರ್ಷಗಳಲ್ಲಿ ಭಾರತ ವಿದೇಶಗಳಿಂದ ಪಡೆದ ಹಣದಲ್ಲಿ ಹೆಚ್ಚಳವಾಗುತ್ತಾ ಬಂದಿದೆ 2016 ರಲ್ಲಿ 7 ಶತಕೋಟಿ ಡಾಲರ್ ಹಣ ಹರಿದು ಬಂದರೆ 2017 ರಲ್ಲಿ 65.3 ಶತಕೋಟಿ ಡಾಲರ್ ಹಣ ಬಂದಿತ್ತು.
 • “ಈ ಸಾಲಿನಲ್ಲಿ ಭಾರತಕ್ಕೆ ಶೇ.14ರಷ್ಟು ಹೆಚ್ಚುವರಿ ಹಣ ಹರಿದು ಬಂದಿದೆ.
 • ಇದೇ ವೇಳೆ ಸೌದಿ ಅರೇಬಿಯಾದಲ್ಲಿ ಉಂಟಾದ ಹಣದುಬ್ಬರದ ಕಾರಣ ಪಾಕಿಸ್ತಾನಕ್ಕೆ ಹಣದ ಪೂರೈಕೆ ವ್ಯತ್ಯಯವಾಗಿದೆ.ಏಳು ಶೇ. ದಷ್ಟು ಹಣದ ಹರಿವಿನ ಪ್ರಮಾಣ ಇಳಿದಿದೆ ಎಂದು ಬ್ಯಾಂಕ್ ವರದಿ ಮಾಡಿದೆ

ವಿದೇಶಿ ಹೂಡಿಕೆ ಹೆಚ್ಚಳಕ್ಕೆ ಕಾರಣ

 • ಕೇರಳದ ಪ್ರವಾಹ ವಿಪತ್ತಿನ ಹಿನ್ನೆಲೆಯಲ್ಲಿ ಅನೇಕ ವಲಸಿಗರು ತಮ್ಮ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಇಡಿದ್ದು ಈ ಹೆಚ್ಚಳಕ್ಕೆ ಕಾರಣವಾಗಿದೆ.
Related Posts
” 07 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಾತೃಪೂರ್ಣ ಯೋಜನೆ  ಸುದ್ಧಿಯಲ್ಲಿ ಏಕಿದೆ ? ಪೌಷ್ಟಿಕ ಆಹಾರ ಒದಗಿಸಿ ತಾಯಿ, ಮಗುವಿನ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ರಾಜ್ಯದಲ್ಲಿ ಆರಂಭಗೊಂಡ ‘ಮಾತೃಪೂರ್ಣ’ ಯೋಜನೆ ಪೂರ್ಣ ಫಲ ನೀಡುವಲ್ಲಿ ವಿಫಲವಾಗಿದೆ. ವಿಫಲವಾಗಲು ಕಾರಣ ರಾಜ್ಯದಲ್ಲಿ 61 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಅಂದಾಜು 25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ...
READ MORE
“17th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
ಹೊಸ ಲೋಗೋ ಸುದ್ಧಿಯಲ್ಲಿ ಏಕಿದೆ ?2019ರ ಫೆಬ್ರವರಿಯಲ್ಲಿ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2019ಗೆ ಹೊಸ ಲೋಗೋ ಬಿಡುಗಡೆಯಾಗಿದೆ. ರಾಷ್ಟ್ರ ಧ್ವಜದ ಮೂರು ಬಣ್ಣಗಳು, ಅಶೋಕ ಚಕ್ರವೂ ಇರುವ ಹೊಸ ಲೋಗೋವನ್ನು ಕ್ಷಣಾ ಇಲಾಖೆ ಅನಾವರಣಗೊಳಿಸಿದ್ದ, ದಿ ರನ್‌ ವೇ ಟು ಎ ...
READ MORE
“26 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಬಡವರ ಬಂಧು’ ನಿಯಮಾವಳಿ ಸಡಿಲ ಸುದ್ಧಿಯಲ್ಲಿ ಏಕಿದೆ ?ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ 'ಬಡವರ ಬಂಧು' ಯೋಜನೆ ಅನುಷ್ಠಾನದಲ್ಲಿ ತೊಡಕಾಗಿದ್ದ ಕೆಲ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಯಾವ ನಿಯಮವನ್ನು ಸಡಿಲಿಸಲಾಗಿದೆ ? 'ಯೋಜನೆಯಡಿ ಫಲಾನುಭವಿಗಳ ಆಯ್ಕೆಗೆ ಸ್ಥಳೀಯ ಸಂಸ್ಥೆಗಳ ಗುರುತಿನ ಚೀಟಿ ಹಾಗೂ ರೇಷನ್‌ ಕಾರ್ಡ್‌ ದಾಖಲೆಯಾಗಿ ...
READ MORE
“05 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕದಂಬೋತ್ಸವ ಮುಂದೂಡಿಕೆ ಸುದ್ಧಿಯಲ್ಲಿ ಏಕಿದೆ ?ಮಂಗನ ಕಾಯಿಲೆ ಭೀತಿ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ಫೆಬ್ರವರಿ 9 ಮತ್ತು 10ರಂದು ನಡೆಯಬೇಕಿದ್ದ ಕದಂಬೋತ್ಸವನ್ನು ಮುಂದೂಡಲಾಗಿದೆ. ಹಿನ್ನಲೆ ಫೆಬ್ರವರಿ 9 ಮತ್ತು 10ರಂದು ಕದಂಬೋತ್ಸವನ್ನು ನಡೆಸಲು ಜಿಲ್ಲಾಡಳಿತ ಈಗಾಗಲೇ ಅಂತಿಮ ಹಂತದ ಸಿದ್ಧತೆಗಳನ್ನು ...
READ MORE
“01 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬಾಲ ಕಾರ್ಮಿಕ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಇಳಿಕೆ ಸುದ್ಧಿಯಲ್ಲಿ ಏಕಿದೆ ?ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವ್ಯಾಪಕ ಕ್ರಮ ಕೈಗೊಳ್ಳುತ್ತಿರುವುದರ ಪರಿಣಾಮ, ಹೆಚ್ಚಿನ ಪ್ರಮಾಣದಲ್ಲಿ ಬಾಲ ಕಾರ್ಮಿಕರನ್ನು ರಕ್ಷಿಸಲಾಗುತ್ತಿದೆ. ಆದರೆ ನಾನಾ ಕಾರಣಗಳಿಂದ ಆ ಪ್ರಕರಣಗಳಲ್ಲಿ ವಿಚಾರಣೆ ...
READ MORE
“10 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಪ್ರಸಾದ ತಯಾರಿಕೆಗೂ ಲೈಸೆನ್ಸ್ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಪ್ರಸಾದ ವಿನಿಯೋಗಿಸುವ 30 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ಆಹಾರ ತಯಾರಿಕಾ ಘಟಕಗಳಿಗೆ ಇನ್ನು ಲೈಸನ್ಸ್ ಕಡ್ಡಾಯವಾಗಲಿದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ 37 ಸಾವಿರ ದೇವಾಲಯಗಳೂ ಸೇರಿ 2 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳಿವೆ. ಈ ಪೈಕಿ ...
READ MORE
“01 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
Aids: ಎಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಎಚ್‌ಐವಿ/ಏಡ್ಸ್‌ ಸೋಂಕಿತರ ಸಂಖ್ಯೆ ಶೇ. 25ರಷ್ಟು ಕುಸಿದಿದ್ದು, ಆ ಮೂಲಕ ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ 8 ರಿಂದ 9ನೇ ಸ್ಥಾನಕ್ಕೆ ಇಳಿದಿದೆ. ರಾಜ್ಯದಲ್ಲಿ ಶೇ.38 ಲಕ್ಷ ಎಚ್‌ಐವಿ ಸೋಂಕಿತರಿದ್ದಾರೆ. ...
READ MORE
“09 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದೇಶದ ಅತ್ಯುತ್ತಮ ವಿವಿ: ಸುದ್ಧಿಯಲ್ಲಿ ಏಕಿದೆ ? ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿದ ಉನ್ನತ ಶಿಕ್ಷಣ ಸಂಸ್ಥೆಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಬೆಂಗಳೂರಿನ ಮೂರು ಸಂಸ್ಥೆಗಳು ಸ್ಥಾನ ಪಡೆದಿವೆ. ಉನ್ನತ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಎರಡನೇ ...
READ MORE
“22 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಅರಣ್ಯ ನಿವಾಸಿಗರ ತೆರವಿಗೆ ಸುಪ್ರೀಂ ಆದೇಶ ಸುದ್ಧಿಯಲ್ಲಿ ಏಕಿದೆ ? ದೇಶಾದ್ಯಂತ ಕಾಡುಗಳಲ್ಲಿ ವಾಸಿಸುವ ಹತ್ತು ಲಕ್ಷ ಕ್ಕೂ ಹೆಚ್ಚಿನ ಬುಡಕಟ್ಟು ಮತ್ತು ಆದಿವಾಸಿ ಕುಟುಂಬಗಳನ್ನು ಕಾಡಿನಿಂದ ಹೊರಹಾಕಲು ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿದೆ. ಈ ಕುರಿತು ರಾಜ್ಯಗಳು ಸಲ್ಲಿಸಿದ್ದ ಅಫಿಡವಿಟ್‌ ...
READ MORE
“11 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕರ್ನಾಟಕ ಹೈಕೋರ್ಟ್‌ ಸಿಜೆ ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬಾಂಬೆ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರನ್ನು ನೇಮಕ ಮಾಡಲು ಸುಪ್ರೀಂಕೋರ್ಟ್‌ ಕೊಲಿಜಿಯಂ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಕೊಲಿಜಿಯಂ ಸಭೆಯಲ್ಲಿ ...
READ MORE
” 07 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“17th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
“26 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“05 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“01 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“10 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“01 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“09 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“22 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“11 ಏಪ್ರಿಲ್ 2019 ರ ಕನ್ನಡ ಪ್ರಚಲಿತ

Leave a Reply

Your email address will not be published. Required fields are marked *