“10 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಜಾನಪದ ಅಕಾಡೆಮಿ ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಜಾನಪದ ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ರಾಜ್ಯದ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಲಾಗಿದ್ದು, ಡಿ. 27ರಂದು ಬೀದರ್​ನ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಪ್ರಶಸ್ತಿ ಏನನ್ನು ಒಳಗೊಂಡಿದೆ?

 • ಗೌರವ ಪ್ರಶಸ್ತಿ 25 ಸಾವಿರ ರೂ. ನಗದು, ತಜ್ಞ ಪ್ರಶಸ್ತಿ 50 ಸಾವಿರ ರೂ. ನಗದು, ಸ್ಮರಣಿಕೆ ಒಳಗೊಂಡಿದೆ.

ತಜ್ಞರ ಪ್ರಶಸ್ತಿ

 • ಡಾ.ಜೀ.ಶಂ.ಪ. ತಜ್ಞ ಪ್ರಶಸ್ತಿಗೆ ದಾವಣಗೆರೆ ಜಿಲ್ಲೆಯ ಡಾ.ಮಲ್ಲಿಕಾರ್ಜುನ ಕಲಮರಳಿ ಹಾಗೂ ಡಾ.ಬಿ.ಎಸ್. ಗದ್ದಗೀಮಠ ತಜ್ಞ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಪಾಲ್ತಾಡಿ ರಾಮಕೃಷ್ಣ ಆಚಾರ್ ಆಯ್ಕೆಯಾಗಿದ್ದಾರೆ.

ರೈಲುಗಳಲ್ಲಿ ನೀರಿನ ಕೊರತೆ ನಿವಾರಣೆಗೆ ಹೊಸ ತಂತ್ರಜ್ಞಾನ

2.

ಸುದ್ಧಿಯಲ್ಲಿ ಏಕಿದೆ ? ಸ್ವಚ್ಛ ಭಾರತಯೋಜನೆಯಡಿ ದೇಶದ ರೈಲು ನಿಲ್ದಾಣಗಳ ಪರಿಸರದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆಯಾದರೂ ಕೋಚ್‌ಗಳ ಟಾಯ್ಲೆಟ್‌ಗಳಲ್ಲಿ ನೀರಿನ ಸಮಸ್ಯೆ ಎದುರಿಸುವ ಕುರಿತು ಪ್ರಯಾಣಿಕರ ದೂರುಗಳು ಮಾತ್ರ ತಗ್ಗಿಲ್ಲ.

ಯಾವ ತಂತ್ರಜ್ಞಾನ?

 • ಅತ್ಯಾಧುನಿಕ ಹೈ ಪ್ರೆಷರ್‌ ಪಂಪ್‌ಗಳನ್ನು ಬಳಸಿ ಆರು ಇಂಚುಗಳ ಪೈಪುಗಳ ಮೂಲಕ ಬೋಗಿಗಳ ನೀರಿನ ಟ್ಯಾಂಕ್‌ಗಳಿಗೆ ಕೇವಲ ಐದು ನಿಮಿಷದಲ್ಲಿ ಭರ್ತಿ ಮಾಡುವುದು ಯೋಜನೆಯ ವಿಶೇಷತೆಯಾಗಿದೆ.

ಉಪಯೋಗಗಳು

 • ಅತಿ ದೂರ ಪ್ರಯಾಣ ಅವಧಿಯ ರೈಲುಗಳಲ್ಲಿ ಪ್ರತಿ 300 ಕಿ.ಮೀಗೆನೀರು ಭರ್ತಿ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ.
 • ಇಲ್ಲಿ ಎಲ್ಲವೂ ಕಂಪ್ಯೂಟರ್‌ ಚಾಲಿತ ಎಸ್‌ಸಿಎಡಿಎ (ಸೂಪರ್‌ವೈಸರಿ ಕಂಟ್ರೋಲ್‌ ಅಂಡ್‌ ಡೇಟಾ ಅಕ್ವಿಸಿಜಷನ್‌) ವ್ಯವಸ್ಥೆಯ ಮೂಲಕ ನಡೆಯಲಿದೆ.
 • ಕಾರ್ಯಾಚರಣೆಯಲ್ಲಿರುವ ಹಾಲಿ ರೈಲುಗಳ ಬೋಗಿಗಳಲ್ಲಿ ಪ್ರತಿ ವಾಟರ್‌ ಟ್ಯಾಂಕ್‌ನ ಸಂಗ್ರಹ ಸಾಮರ್ಥ್ಯ‌ 1,800 ಲೀಟರ್‌ ಇದೆ. ರೈಲ್ವೆ ಇಲಾಖೆ ಬಳಿ ಇರುವ ಸದ್ಯದ ತಂತ್ರಜ್ಞಾನದಲ್ಲಿ ಸಾಮಾನ್ಯವಾಗಿ 24 ಬೋಗಿಗಳಿರುವ ರೈಲುಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸಲು ಕನಿಷ್ಠ 20 ನಿಮಿಷವಾಗುತ್ತದೆ.
 • ಎಸ್‌ಸಿಎಡಿಎ ತಂತ್ರಜ್ಞಾನದಲ್ಲಿ ನೀರು ತುಂಬಿಸುವ ಅವಧಿ ಕೇವಲ 5 ನಿಮಿಷಗಳಿಗೆ ಇಳಿಯಲಿದೆ.
  ಈ ಹಿಂದೆ 20 ನಿಮಿಷ ತಗುಲುತ್ತಿದ್ದ ಹಿನ್ನೆಲೆಯಲ್ಲಿ ಸಮಯದ ಅಭಾವದಿಂದ ನೀರಿನ ಟ್ಯಾಂಕ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಲಾಗುತ್ತಿರಲಿಲ್ಲ. ಆದರೆ ಹೊಸ ತಂತ್ರಜ್ಞಾನದಲ್ಲಿ ಪ್ರತಿ 300 ಕಿಲೋಮೀಟರ್‌ಗೆ ಟ್ಯಾಂಕ್‌ಗಳು ಭರ್ತಿಯಾಗಲಿವೆ. ಇದರಿಂದ ಪ್ರಯಾಣದ ಅವಧಿಯಲ್ಲಿ ಟಾಯ್ಲೆಟ್‌ಗಳಲ್ಲಿ ನೀರಿಲ್ಲದೇ ಪ್ರಯಾಣಿಕರು ಕಿರಿಕಿರಿ ಅನುಭವಿಸುವುದು ತಪ್ಪಲಿದೆ.

ಸ್ವಚ್ ಭಾರತ್ ಅಭಿಯಾನ್ (SBA)

 • ಭಾರತದ ನಗರಗಳು, ಪಟ್ಟಣಗಳು ​​ಮತ್ತು ಗ್ರಾಮೀಣ ಪ್ರದೇಶಗಳ ಬೀದಿಗಳು, ರಸ್ತೆಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ 2014 ರಿಂದ 2019 ರವರೆಗೂ ಭಾರತದಲ್ಲಿ ಸ್ವಾಚ್ ಭಾರತ್ ಅಭಿಯಾನ್ (SBA) ಅಥವಾ ಸ್ವಚ್ ಭಾರತ್ ಮಿಷನ್ (SBM) ರಾಷ್ಟ್ರವ್ಯಾಪಿ ಪ್ರಚಾರವಾಗಿದೆ.
 • ಅಭಿಯಾನದ ಅಧಿಕೃತ ಹೆಸರು ಹಿಂದಿದಲ್ಲಿದೆ ಮತ್ತು ಇಂಗ್ಲಿಷ್ನಲ್ಲಿ ‘ಕ್ಲೀನ್ ಇಂಡಿಯಾ ಮಿಷನ್’ ಎಂದು ಭಾಷಾಂತರಿಸಿದೆ.
 • ಸ್ವಚ್ ಭಾರತ್ನ ಉದ್ದೇಶಗಳು ಮನೆ ಮಾಲೀಕತ್ವದ ಮತ್ತು ಸಮುದಾಯ-ಮಾಲೀಕತ್ವದ ಶೌಚಾಲಯಗಳ ನಿರ್ಮಾಣದ ಮೂಲಕ ತೆರೆದ ಮಲವಿಸರ್ಜನೆ ತೆಗೆದುಹಾಕುವಿಕೆಯನ್ನು ಒಳಗೊಂಡಿವೆ ಮತ್ತು ಟಾಯ್ಲೆಟ್ ಬಳಕೆಯ ಮೇಲ್ವಿಚಾರಣೆಯ ಜವಾಬ್ದಾರಿಯುತ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ.
 • ಭಾರತ ಸರ್ಕಾರವು ನಡೆಸುತ್ತಿರುವ ಈ ಯೋಜನೆಯು ಗ್ರಾಮೀಣ ಭಾರತದ 90 ದಶಲಕ್ಷ ಶೌಚಾಲಯಗಳನ್ನು ಯೋಜಿತ ವೆಚ್ಚದಲ್ಲಿ ನಿರ್ಮಿಸುವ ಮೂಲಕ ಮಹಾತ್ಮಾ ಗಾಂಧಿಯವರ 150 ನೇ ವಾರ್ಷಿಕೋತ್ಸವದ ಅಕ್ಟೋಬರ್ 2, 2019 ರ ಹೊತ್ತಿಗೆ “ಓಪನ್-ಡೆಫೆಕೇಷನ್ ಫ್ರೀ” (ಓಡಿಎಫ್) ಭಾರತವನ್ನು ಸಾಧಿಸುವ ಗುರಿ ಹೊಂದಿದೆ. 96 ಲಕ್ಷ ಕೋಟಿ ರೂಪಾಯಿ (ಯುಎಸ್ $ 30 ಬಿಲಿಯನ್). 2015 ರಲ್ಲಿ ಯುಎನ್ ಸ್ಥಾಪಿಸಿದ ಸಸ್ಟೈನಬಲ್ ಡೆವಲಪ್ಮೆಂಟ್ ಗೋಲ್ 6 (ಎಸ್ಡಿಜಿ 6) ಅನ್ನು ಭಾರತಕ್ಕೆ ಸಹಾ ಕೊಡುಗೆ ನೀಡುತ್ತದೆ.

ಮೊದಲ ಕೃತಕ ಹಾರ್ಟ್ ವಾಲ್ವ್

3.

ಸುದ್ಧಿಯಲ್ಲಿ ಏಕಿದೆ ? ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆ ಅನ್ವಯ ಇದೇ ಮೊದಲ ಬಾರಿಗೆ ದೇಶೀಯವಾಗಿ ‘ಕೃತಕ ಅಯೋಟಿಕ್ ವಾಲ್ವ್’ ತಯಾರಿಸಲಾಗಿದೆ.

 • ಓಪನ್ ಹಾರ್ಟ್ ವಾಲ್ವ್ (ಹೃದಯ ಕವಾಟ) ಬದಲಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಲು ಶಕ್ತರಾಗಿರದ ಮತ್ತು ಶಸ್ತ್ರಚಿಕಿತ್ಸೆಯಿಂದ ಜೀವಕ್ಕೆ ಅಪಾಯ ವಾಗುವ ಆತಂಕದಲ್ಲಿರುವ ಜನರಿಗೆ ಇದರಿಂದ ಅನುಕೂಲವಾಗಲಿದೆ. ‘ಮೈ ವಾಲ್’ ಹೆಸರಿನಲ್ಲಿ ಕೃತಕ ವಾಲ್ವ್ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.
 • ಓಪನ್ ಹಾರ್ಟ್​ಗೆ ಪರ್ಯಾಯ: ‘ಅನೇಕ ಕಾರಣಗಳಿಂದಾಗಿ ಜನರು ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಹಿಂಜರಿಯುತ್ತಾರೆ. ಅಂಥವರಿಗೆ ದೇಶೀಯ ನಿರ್ವಿುತ ವಾಲ್ವ್ ನೆರವಾಗಲಿದೆ.
 • ಟ್ರಾನ್ಸ್ ಕ್ಯಾಥರರ್ ಅಯೋಟಿಕ್ ಹಾರ್ಟ್ ವಾಲ್ವ್ ರೀಪ್ಲೇಸ್​ವೆುಂಟ್ (ಟಿಎವಿಆರ್) ಮೂಲಕ ಮೈವಾಲ್ ಅಳವಡಿಸಲಾಗುತ್ತದೆ’
 • ಶಸ್ತ್ರಚಿಕಿತ್ಸೆ ರಹಿತವಾಗಿ ಕೃತಕ ವಾಲ್ವ್ ಅಳವಡಿಕೆ ವಿಧಾನ ದೇಶದಲ್ಲೇ ಬಹುದೊಡ್ಡ ಸಂಶೋಧನೆಯಾಗಿದೆ.
 • “ಮೈವಾಲ್” ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಮಾರಲ್ಪಡಲ್ಪಡುವ ಟ್ರಾನ್ಸ್ಕ್ಯಾಥೆಟರ್ ಆರೆಟಿಕ್ ಹಾರ್ಟ್ ವಾಲ್ವ್ ರಿಪ್ಲೇಸ್ಮೆಂಟ್ (TAVR), ಇದು ರೋಗಿಗಳ ರೋಗ ಕವಾಟದೊಳಗೆ ಕೃತಕ ಕವಾಟವನ್ನು ತೊಡೆಯೆಲುಬಿನ ಅಪಧಮನಿ ಮೂಲಕ ಸೇರಿಸಲಾದ ಕ್ಯಾತಿಟರ್ ಮೂಲಕ ಕಡಿಮೆ ಆಕ್ರಮಣಶೀಲ ವಿಧಾನವಾಗಿದೆ. ತೊಡೆಸಂದು ರಲ್ಲಿ ಅಪಧಮನಿ).
 • ಮೆರಿಲ್ ಈ ಚಿಕಿತ್ಸೆಯನ್ನು ದೇಶದಲ್ಲಿ ವಾಣಿಜ್ಯಿಕವಾಗಿ ಲಭ್ಯವಾಗುವ ಮೊದಲ ಭಾರತೀಯ ಕಂಪನಿಯಾಗಿದೆ.ಈ ತಂತ್ರಜ್ಞಾನದ ವಾಣಿಜ್ಯೀಕರಣದ ಮೂಲಕ, ಮೆರಿಲ್ ಶೀಘ್ರದಲ್ಲೇ ಮುಂದಿನ ಪೀಳಿಗೆಯ ಚಿಕಿತ್ಸೆ ವಿಧಾನವನ್ನು ದೇಶದಾದ್ಯಂತದ ಸಾವಿರಾರು ರೋಗಿಗಳಿಗೆ ಮತ್ತು ಜಾಗತಿಕವಾಗಿ ಲಭ್ಯವಾಗಲಿದೆ.

ಕೃತಕ ಹೃದಯ ಕವಾಟ

 • ಕೃತಕ ಹೃದಯ ಕವಾಟವನ್ನು ಕವಾಟದ ಹೃದಯ ಕಾಯಿಲೆ ಹೊಂದಿರುವ ರೋಗಿಯ ಹೃದಯದಲ್ಲಿ ಅಳವಡಿಸಲಾಗಿರುವ ಒಂದು ಸಾಧನವಾಗಿದೆ. ನಾಲ್ಕು ಹೃದಯ ಕವಾಟಗಳು ಅಸಮರ್ಪಕ ಕಾರ್ಯಗಳಲ್ಲಿ ಒಂದಾಗಿದ್ದರೆ, ನೈಸರ್ಗಿಕ ಕವಾಟವನ್ನು ಕೃತಕ ಕವಾಟವನ್ನು ಬದಲಿಸಲು ವೈದ್ಯಕೀಯ ಆಯ್ಕೆ ಇರಬಹುದು. ಇದಕ್ಕೆ ಮುಕ್ತ-ಹೃದಯ ಶಸ್ತ್ರಚಿಕಿತ್ಸೆ ಬೇಕು.
 • ಮಾನವನ ಹೃದಯದ ಸಾಮಾನ್ಯ ಶಾರೀರಿಕ ಕ್ರಿಯೆಗಳಿಗೆ ಕವಾಟಗಳು ಅವಿಭಾಜ್ಯವಾಗಿವೆ. ನೈಸರ್ಗಿಕ ಹೃದಯ ಕವಾಟಗಳು ಹೃದಯದ ಒಂದು ಕೋಣೆಯಿಂದ ಇನ್ನೊಂದಕ್ಕೆ ಕವಾಟದ ರಚನೆಯ ಮೂಲಕ ಏಕಶಿಕ್ಷಕ ರಕ್ತದ ಹರಿವನ್ನು ಉಂಟುಮಾಡುವ ಕ್ರಿಯಾತ್ಮಕ ಅವಶ್ಯಕತೆಗಳನ್ನು ನಿರ್ವಹಿಸುವ ಸ್ವರೂಪಗಳಿಗೆ ವಿಕಸನಗೊಂಡಿವೆ. ನೈಸರ್ಗಿಕ ಹೃದಯ ಕವಾಟಗಳು ವೈವಿಧ್ಯಮಯ ರೋಗಲಕ್ಷಣದ ಕಾರಣಗಳಿಗಾಗಿ ನಿಷ್ಕ್ರಿಯವಾಗಿ ಪರಿಣಮಿಸುತ್ತವೆ. ಕೆಲವು ಕಾಯಿಲೆಗಳು ನೈಸರ್ಗಿಕ ಹೃದಯದ ಕವಾಟವನ್ನು ಹೃದಯ ಕವಾಟದ ಪ್ರೋಸ್ಥೆಸಿಸ್ನೊಂದಿಗೆ ಸಂಪೂರ್ಣವಾಗಿ ಶಸ್ತ್ರಚಿಕಿತ್ಸೆಯ ಬದಲಿಯಾಗಿ ಮಾಡಬೇಕಾಗುತ್ತದೆ

ಹೈಸೆಕ್ಯುರಿಟಿ ನಂಬರ್ ಪ್ಲೇಟ್ ಕಡ್ಡಾಯ

4.

ಸುದ್ಧಿಯಲ್ಲಿ ಏಕಿದೆ ? 2019 ಏ.1ರಿಂದ ಉತ್ಪಾದನೆಯಾಗುವ ಎಲ್ಲ ವಾಹನಗಳಿಗೆ ಉತ್ಪಾದಕರೇ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ಸ್ (ಎಚ್​ಎಸ್​ಆರ್​ಪಿ) ನೀಡುವುದು ಕಡ್ಡಾಯ.

ಉದ್ದೇಶ

 • ದುಷ್ಕೃತ್ಯಕ್ಕೆ ನಕಲಿ ನಂಬರ್ ಪ್ಲೇಟ್ ಬಳಕೆ ಮತ್ತು ಎಚ್​ಎಸ್​ಆರ್​ಪಿ ಹೆಸರಿನಲ್ಲಿ ನಂಬರ್ ಪ್ಲೇಟ್ ದಂಧೆಗೆ ಕಡಿವಾಣ ಹಾಕುವುದು ಇದರ ಉದ್ದೇಶ.
 • ಎಚ್​ಎಸ್​ಆರ್​ಪಿ ಕಡ್ಡಾಯ ಕುರಿತು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ(ಮಾರ್ತ್)ಅಧಿಸೂಚನೆ ಪ್ರಕಟಿಸಿದೆ.

ಅಧಿಸೂಚನೆಯಲ್ಲಿ ಏನಿದೆ ?

 • ‘2019 ಏ.1 ಮತ್ತು ನಂತರದಲ್ಲಿ ಉತ್ಪಾದನೆಯಾಗುವ ಎಲ್ಲ ವಾಹನಗಳಿಗೆ ಮೂರನೇ ರಿಜಿಸ್ಟ್ರೇಷನ್ ಮಾರ್ಕ್ ಸಹಿತ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್​ಗಳನ್ನು ವಾಹನ ಉತ್ಪಾದಕರೇ ನೀಡಬೇಕು.
 • ಡೀಲರ್​ಗಳು ವಾಹನ ಮಾರಾಟದ ಸಂದರ್ಭ ಪ್ಲೇಟ್​ಗಳಲ್ಲಿ ನೋಂದಣಿ ಸಂಖ್ಯೆ ನಮೂದಿಸಿ ವಾಹನಗಳಿಗೆ ಅಳವಡಿಸಬೇಕು.
 • ಹಳೇ ವಾಹನಗಳಿಗೆ ಎಚ್​ಎಸ್​ಆರ್​ಪಿ ಹಾಕಬೇಕಿದ್ದಲ್ಲಿ ವಾಹನ ಉತ್ಪಾದಕರಿಂದಲೇ ಡೀಲರ್​ಗಳು ಪ್ಲೇಟ್ ಪಡೆದು ಅಳವಡಿಸಬೇಕು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
 • ಎಚ್​ಎಸ್​ಆರ್​ಪಿ ಕರಡು ಅಧಿಸೂಚನೆಯಲ್ಲಿ ಹಳೇ ನಂಬರ್​ಪ್ಲೇಟ್​ಗಳನ್ನು ಡೀಲರ್ ವಶಕ್ಕೆ ಪಡೆದ ಬಳಿಕವಷ್ಟೇ ಹೊಸ ಎಚ್​ಎಸ್​ಆರ್​ಪಿ ನೀಡಬೇಕು ಎಂದು ಸೂಚಿಸಲಾಗಿತ್ತು.
 • ಕಾಯ್ದೆ ಅನ್ವಯ ವಾಹನ ಉತ್ಪಾದಕರು ಅಥವಾ ಎಚ್​ಎಸ್​ಆರ್​ಪಿ ತಯಾರಕರು ನವದೆಹಲಿಯ ಕೇಂದ್ರ ರಸ್ತೆ ಸಂಶೋಧನೆ ಸಂಸ್ಥೆ ಅಥವಾ ಕೇಂದ್ರ ಮೋಟಾರು ವಾಹನ ಕಾಯ್ದೆ 1989 ನಿಯಮ 126ರಡಿ ಅಧಿಕೃತವಾಗಿ ಗುರುತಿಸಲ್ಪಟ್ಟ ಪರೀಕ್ಷಾ ಕೇಂದ್ರಗಳಿಂದ ಎಚ್​ಎಚ್​ಆರ್​ಪಿ ತಯಾರಿಕೆ ಒಪ್ಪಿಗೆ ಪಡೆಯಲೇಬೇಕು.
 • ವಾಹನ ಉತ್ಪಾದಕರು ತಾವೇ ಎಚ್​ಎಸ್​ಆರ್​ಪಿ ತಯಾರಿಸಬಹುದು ಅಥವಾ ಒಪ್ಪಿಗೆ ಪಡೆದ ತಯಾರಕರಿಂದ ಖರೀದಿಸಬಹುದು ಎಂದು ಸೂಚಿಸಲಾಗಿತ್ತು.

ರಾಜ್ಯದಲ್ಲೂ ಅನುಷ್ಠಾನಕ್ಕೆ ಪ್ರಯತ್ನ

 • ಕರ್ನಾಟಕದಲ್ಲಿ 2008ರಲ್ಲಿ ಎಚ್​ಎಸ್​ಆರ್​ಪಿ ಅನುಷ್ಠಾನಗೊಳಿಸಲು ಸಾರಿಗೆ ಇಲಾಖೆ ಟೆಂಡರ್ ಆಹ್ವಾನಿಸಿತ್ತು. ಮೊದಲ ಟೆಂಡರ್​ನಲ್ಲಿ ಭಾಗವಹಿಸಿದ್ದ ಕಂಪನಿ ಅಧಿಕ ಬೆಲೆ ಸೂಚಿಸಿದ್ದರಿಂದ ಟೆಂಡರ್ ರದ್ದಾಗಿತ್ತು. ಎರಡನೇ ಬಾರಿ ಟೆಂಡರ್ ಕರೆದಿದ್ದಾಗ ಟೆಂಡರ್ ಪಡೆದ ಕಂಪನಿ ಕಪು್ಪಪಟ್ಟಿಗೆ ಸೇರಿದ್ದರಿಂದ ಈ ವಿಚಾರ ಕೋರ್ಟ್ ಮೆಟ್ಟಲೇರಿತ್ತು. ಪ್ರಸ್ತುತ ಯೋಜನೆ ಅನುಷ್ಠಾನದ ಕಡತ ಸಾರಿಗೆ ಇಲಾಖೆಯಲ್ಲಿ ಅಂತಿಮ ಹಂತದಲ್ಲಿದ್ದು, ಇದೇ ಸಂದರ್ಭದಲ್ಲೇ ಕೇಂದ್ರ ಹೊಸ ಕರಡು ನೀತಿ ಪ್ರಕಟಿಸಿದೆ.

ಮಾನಸಿಕ ಆರೋಗ್ಯ ಮಸೂದೆ ಶೀಘ್ರ ಮಂಡನೆ

5.

ಸುದ್ಧಿಯಲ್ಲಿ ಏಕಿದೆ ? ಆರೋಗ್ಯ ಕ್ಷೇತ್ರದ ತಂತ್ರಜ್ಞರು, ರೇಡಿಯೋಲಾಜಿಸ್ಟ್ ಗಳಿಗೆ ಅನುಕೂಲವಾಗಲಿರುವ ‘ರಾಷ್ಟ್ರೀಯ ಮಾನಸಿಕ ಆರೋಗ್ಯ ಮಸೂದೆ-2018’ ಅನ್ನು ಶೀಘ್ರ ಸಂಸತ್​ನಲ್ಲಿ ಮಂಡಿಸಿ ಅನುಮೋದನೆ ಪಡೆಯುವುದಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಭರವಸೆ ನೀಡಿದ್ದಾರೆ.

 • ಈಗಾಗಲೇ ಲೋಕಸಭೆಯಲ್ಲಿ ಅಂಗೀಕೃತಗೊಂಡಿರುವ ಮಾನಸಿಕ ಆರೋಗ್ಯ ಮಸೂದೆಯನ್ನು ರಾಜ್ಯಸಭೆಗೆ ಕಳುಹಿಸಿಕೊಡಲಾಗಿದೆ. ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸಭೆಯಲ್ಲೂ ಮಸೂದೆ ಅಂಗೀಕಾರವಾಗುವ ನಿರೀಕ್ಷೆಯಿದೆ. ಅಲ್ಲಿ ಮಸೂದೆ ಪಾಸಾದರೆ, ಕಾಯ್ದೆ ಜಾರಿಗೆ ತರಲಾಗುವುದು
 • ರೇಡಿಯಾಲಜಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆದಿದ್ದು, ವ್ಯಕ್ತಿಯ ದೇಹದಲ್ಲಿರುವ ಕಾಯಿಲೆಯನ್ನು ನಿಖರವಾಗಿ ಕಂಡುಹಿಡಿಯುವಂಥ ಉನ್ನತ ತಂತ್ರಜ್ಞಾನ ಈಗ ಲಭ್ಯವಿದೆ. ಆದರೆ, ರೇಡಿಯೋಗ್ರಾಫರ್​ಗಳು ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಶೀಘ್ರ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು

ಚಿಕಿತ್ಸೆ ಕೊಂಚ ದುಬಾರಿ

 • ಪ್ರಸ್ತುತ ದಿನಗಳಲ್ಲಿ ರೇಡಿಯಾಲಜಿ ಇಲ್ಲದೆ ಯಾವ ಕಾಯಿಲೆಗಳಿಗೂ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದೆ. ಭಾರತದಲ್ಲಿ ರೇಡಿಯಾಲಜಿಯ ಯಾವುದೇ ಉಪಕರಣಗಳನ್ನು ತಯಾರಿಸಲಾಗದ ಕಾರಣ, ಎಲ್ಲವನ್ನೂ ವಿದೇಶದಿಂದಲೇ ಆಮದು ಮಾಡಿಕೊಳ್ಳಬೇಕಿದೆ. ಆದ್ದರಿಂದ ಈ ಚಿಕಿತ್ಸೆ ದುಬಾರಿಯಾಗಿದೆ.

ಮಾನಸಿಕ ಆರೋಗ್ಯ ನೀತಿ

 • ಮಾನಸಿಕ ಆರೋಗ್ಯವು ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತ ಸಾಮರ್ಥ್ಯವನ್ನು ಅರಿತುಕೊಳ್ಳುವ ಯೋಗಕ್ಷೇಮದ ಸ್ಥಿತಿಯೆಂದು ವ್ಯಾಖ್ಯಾನಿಸಲಾಗಿದೆ, ಇದು ಜೀವನದ ಸಾಮಾನ್ಯ ಒತ್ತಡವನ್ನು ನಿಭಾಯಿಸಬಲ್ಲದು, ಪರಿಣಾಮಕಾರಿಯಾಗಿ ಮತ್ತು ಫಲಪ್ರದವಾಗಿ ಕಾರ್ಯನಿರ್ವಹಿಸಬಲ್ಲದು, ಮತ್ತು ಅವಳ ಅಥವಾ ಅವನ ಸಮುದಾಯಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ.
 • ರಾಷ್ಟ್ರೀಯ ಮಾನಸಿಕ ಆರೋಗ್ಯ ನೀತಿ ಈಕ್ವಿಟಿ ಮೌಲ್ಯಗಳು ಮತ್ತು ತತ್ವಗಳ ಆಧಾರದ ಮೇಲೆ, ನ್ಯಾಯ, ಸಂಯೋಜಿತ ಮತ್ತು ಪುರಾವೆ ಆಧಾರಿತ ಆರೈಕೆ, ಗುಣಮಟ್ಟ, ಭಾಗವಹಿಸುವಿಕೆ ಮತ್ತು ಮಾನಸಿಕ ಆರೋಗ್ಯಕ್ಕೆ ಸಮಗ್ರ ವಿಧಾನವನ್ನು ಆಧರಿಸಿದೆ.
 • ದುರ್ಬಲ ಗುಂಪುಗಳ ಸಮಗ್ರ ಪಟ್ಟಿ, ಇದರಲ್ಲಿ ಬಡವರು (“ನಕಾರಾತ್ಮಕ ವಿಷಕಾರಿ ಚಕ್ರ” ದಲ್ಲಿ ಮಾನಸಿಕ ಅಸ್ವಸ್ಥತೆಗಳೊಂದಿಗೆ ಸಂಬಂಧ ಹೊಂದಿರುವವರು), ನಿರಾಶ್ರಿತರು (ಯಾರು “ಕಾಳಜಿ ಮತ್ತು ಬೆಂಬಲಕ್ಕಾಗಿ ಯಾವುದೇ ನಿಬಂಧನೆಯನ್ನು ಹೊಂದಿಲ್ಲ”), ವ್ಯಕ್ತಿಗಳು ರಕ್ಷಣಾ ಸಂಸ್ಥೆಗಳಲ್ಲಿ (” ಯಾರು “ವೈಯಕ್ತಿಕ ಸ್ವಾತಂತ್ರ್ಯದ ಅಭಾವ” ಎದುರಿಸುತ್ತಾರೆ), ಅನಾಥರು, ಮಕ್ಕಳು, ಹಿರಿಯರು ಮತ್ತು ತುರ್ತುಸ್ಥಿತಿಗಳಿಂದ ಪೀಡಿತರು ಮತ್ತು ವಿವಿಧ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು.

ಅದರ ಗುರಿಗಳು ಮತ್ತು ಉದ್ದೇಶಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ

 • ವ್ಯಕ್ತಿಯ ಜೀವಿತಾವಧಿಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ತೊಂದರೆ, ದೌರ್ಬಲ್ಯ, ಹೊರಗಿಡುವಿಕೆ, ರೋಗನಿರೋಧಕತೆ ಮತ್ತು ಅಕಾಲಿಕ ಮರಣಗಳನ್ನು ಕಡಿಮೆ ಮಾಡಲು,
 • ದೇಶದಲ್ಲಿ ಮಾನಸಿಕ ಆರೋಗ್ಯದ ಗ್ರಹಿಕೆಯನ್ನು ಹೆಚ್ಚಿಸಲು,
 • ಮಾನಸಿಕ ಆರೋಗ್ಯ ರಕ್ಷಣೆಗೆ ಸಾರ್ವತ್ರಿಕ ಪ್ರವೇಶವನ್ನು ಒದಗಿಸುವುದು,
 • ದುರ್ಬಲ ಗುಂಪುಗಳಿಗೆ ಮಾನಸಿಕ ಆರೋಗ್ಯ ಸೇವೆಗಳಿಗೆ ಪ್ರವೇಶವನ್ನು ಹೆಚ್ಚಿಸಲು,
 • ಅಪಾಯವನ್ನು ಕಡಿಮೆ ಮಾಡಲು ಮತ್ತು ಆತ್ಮಹತ್ಯೆ ಮತ್ತು ಆತ್ಮಹತ್ಯಾ ಪ್ರಯತ್ನವನ್ನು ಕಡಿಮೆ ಮಾಡಲು,
 • ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳ ಹಾನಿಯಿಂದ ಹಕ್ಕುಗಳು ಮತ್ತು ರಕ್ಷಣೆಗಾಗಿ ಗೌರವವನ್ನು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಕಳಂಕವನ್ನು ಕಡಿಮೆ ಮಾಡಲು
 • ಮಾನಸಿಕ ಆರೋಗ್ಯಕ್ಕಾಗಿ ನುರಿತ ಮಾನವ ಸಂಪನ್ಮೂಲಗಳ ಲಭ್ಯತೆ ಮತ್ತು ವಿತರಣೆಯನ್ನು ಹೆಚ್ಚಿಸಲು.

ಬೆಳಗುತ್ತಿರುವ ಭಾರತ

6.

ಸುದ್ಧಿಯಲ್ಲಿ ಏಕಿದೆ ? ದೇಶದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುದೀಕರಣ ಸೌಲಭ್ಯ ಶರವೇಗದಲ್ಲಿದ್ದು, ಪ್ರತಿ ವಾರಕ್ಕೆ ಸರಾಸರಿ 7 ಲಕ್ಷ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುತ್ತಿದೆ

 • ಹಗಲಿರುಳೆನ್ನದೆ ವಿದ್ಯುತ್‌ ಸಂಪರ್ಕ ಜಾಲ ವಿಸ್ತರಣೆಯ ಕೆಲಸಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಡಿಸೆಂಬರ್‌ 31ರ ವೇಳೆಗೆ ಪ್ರತಿ ಮನೆಗೂ ವಿದ್ಯುತ್‌ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ.
 • ವಿದ್ಯುತ್‌ಗೆ ಬೇಡಿಕೆ ಗಣನೀಯವಾಗಿ ವೃದ್ಧಿಸಿದ್ದು, ವಿದ್ಯುತ್‌ ಘಟಕಗಳಿಗೆ ಇದು ಶುಭ ಸುದ್ದಿಯಾಗಿದೆ.
 • ಕೋಟ್ಯಂತರ ಮನೆಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸುವುದರಿಂದ ಬಳಕೆಯೂ ಹೆಚ್ಚಲಿದ್ದು, ಬೇಡಿಕೆ ಸೃಷ್ಟಿಯಾಗಲಿದೆ. ಕಳೆದ ಕೆಲ ತಿಂಗಳುಗಳಿಂದಲೇ ವಿದ್ಯುತ್‌ ಬಳಕೆ ವೃದ್ಧಿಸಿದೆ

ಸೋಲಾರ್‌ ಛಾವಣಿ ಅಳವಡಿಕೆ ಹೆಚ್ಚಳ

 • ಅಂತಾರಾಷ್ಟ್ರೀಯ ಇಂಧನ ಏಜೆನ್ಸಿ (ಐಇಎ) ಪ್ರಕಾರ, ಪ್ರತಿಯೊಂದು ಗ್ರಾಮಕ್ಕೂ ವಿದ್ಯುತ್‌ ಸಂಪರ್ಕ ಕಲ್ಪಿಸುವ ಭಾರತದ ನಡೆ, ಈ ವರ್ಷ ಜಗತ್ತಿನ ಶ್ರೇಷ್ಠ ಯಶೋಗಾಥೆಗಳಲ್ಲೊಂದು. 15 ರಾಜ್ಯಗಳು ಸಂಪೂರ್ಣ ವಿದ್ಯುದೀಕರಣ ಹೊಂದಿವೆ.
 • 8 ರಾಜ್ಯಗಳು ಪೂರ್ಣಗೊಳಿಸುವ ಹಂತದಲ್ಲಿವೆ. ಮಹಾರಾಷ್ಟ್ರ, ಅರುಣಾಚಲಪ್ರದೇಶ, ಛತ್ತೀಸ್‌ಗಢದಲ್ಲಿ ಸಣ್ಣ ಸಂಖ್ಯೆಯಲ್ಲಿನ ಮನೆಗಳಿಗೆ ಮಾತ್ರ ವಿದ್ಯುತ್‌ ಸಂಪರ್ಕ ಬಾಕಿ ಇದ್ದು, ಯಾವುದೇ ದಿನ ಪೂರ್ಣವಾಗಲಿದೆ. ಡಿಸೆಂಬರ್‌ 31ರೊಳಗೆ ಎಲ್ಲ ಮನೆಗಳಿಗೆ ವಿದ್ಯುತ್‌ ಕಲ್ಪಿಸುವ ಗುರಿ ಮುಟ್ಟುವ ವಿಶ್ವಾಸ ಇದೆ.

‘ಮೆಹ್ರಾಮ್‌’ ಇಲ್ಲದೇ ಮುಸ್ಲಿಂ ಮಹಿಳೆಯರಿಗೆ ಹಜ್‌ ಯಾತ್ರೆ ಅವಕಾಶ

ಸುದ್ಧಿಯಲ್ಲಿ ಏಕಿದೆ ? ಮುಂದಿನ ವರ್ಷ ‘ಮೆಹ್ರಾಮ್‌'(ಪುರುಷ ಒಡನಾಡಿ) ಇಲ್ಲದೇ ದೊಡ್ಡ ಸಂಖ್ಯೆಯ ಮುಸ್ಲಿಂ ಮಹಿಳೆಯರು ಹಜ್‌ಗೆ ತೆರಳಲಿದ್ದಾರೆ

 • 2019ರಲ್ಲಿ ಹಜ್‌ ಯಾತ್ರೆ ಕೈಗೊಳ್ಳಲು ಇದುವರೆಗೂ 2,23,000ಕ್ಕೂ ಹೆಚ್ಚು ಅರ್ಜಿಗಳು ಸಂದಾಯವಾಗಿವೆ. ಇವರಲ್ಲಿ ಶೇ.47ರಷ್ಟು ಮಹಿಳೆಯರೇ ಇದ್ದಾರೆ. ಪುರುಷ ಜತೆಗಾರರು ಇಲ್ಲದೇ ಹಜ್‌ ಯಾತ್ರೆಗಾಗಿ 2,000ಕ್ಕೂ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಹಿನ್ನಲೆ

 • 2018ರಲ್ಲಿ ಮೆಹ್ರಾಮ್‌ ಇಲ್ಲದೇ ಮಹಿಳಾ ಯಾತ್ರಿಕರು ಹಜ್‌ ಪ್ರವಾಸ ಕೈಗೊಳ್ಳಲು ಇದ್ದ ನಿಷೇಧವನ್ನು ಮೊದಲ ಬಾರಿಗೆ ಕೇಂದ್ರ ಸರಕಾರ ತೆಗೆದುಹಾಕಿತು. ಈ ಕಾರಣದಿಂದ 1,300 ಮಹಿಳೆಯರು ಮೆಹ್ರಾಮ್‌ ಇಲ್ಲದೇ ಹಜ್‌ ಯಾತ್ರೆ ಕೈಗೊಂಡರು.
 • ಈ ರೀತಿಯ ಮಹಿಳೆಯರಿಗೆ ಲಾಟರಿ ವ್ಯವಸ್ಥೆಯಿಂದ ವಿನಾಯಿತಿ ನೀಡಲಾಗಿದೆ. ಭಾರತೀಯ ಮಹಿಳಾ ಹಜ್‌ ಯಾತ್ರಿಗಳ ಸಹಾಯಕ್ಕಾಗಿ 100ಕ್ಕೂ ಹೆಚ್ಚು ಮಹಿಳಾ ಹಜ್‌ ಸಂಘಟಕರು ಮತ್ತು ಹಜ್‌ ಸಹಾಯಕರನ್ನು ನಿಯೋಜಿಸಲಾಗಿದೆ.

ಬಿ.ಪಿ-ಶುಗರ್‌ ಮೀಟರ್‌, ನೆಬ್ಯುಲೈಸರ್‌ ಇನ್ನು ಮುಂದೆ ಔಷಧವೆಂದು ಪರಿಗಣನೆ

8.

ಸುದ್ಧಿಯಲ್ಲಿ ಏಕಿದೆ ? ರೋಗ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಬಳಸುವ ಸಾಮಾನ್ಯ ವೈದ್ಯಕೀಯ ಉಪಕರಣಗಳಾದ ರಕ್ತದೊತ್ತಡ ಮಾಪಕ (ಬಿ.ಪಿ ಮಾನಿಟರ್‌), ಮಧುಮೇಹ ಮಾಪಕ ( ಗ್ಲ್ಯೂಕೊಮೀಟರ್‌), ದೇಹದ ಉಷ್ಣತೆ ಮಾಪಕ (ಡಿಜಿಟಲ್‌ ಥರ್ಮೋಮೀಟರ್‌) ಹಾಗೂ ನೆಬ್ಯುಲೈಸರ್‌ಗಳನ್ನು(ಶ್ವಾಸಕೋಶಕ್ಕೆ ಔಷಧ ಪೂರೈಕೆಗೆ ಬಳಸುವ ಸಾಧನ) ಇನ್ನು ಮುಂದೆ ಔಷಧಗಳು ಎಂದು ಪರಿಗಣಿಸಲಾಗುವುದು.

 • ನಾಲ್ಕು ಪ್ರಮುಖ ವೈದ್ಯಕೀಯ ಉಪಕರಣಗಳನ್ನು ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆ, 1940′ ವ್ಯಾಪ್ತಿಗೆ ಸೇರಿಸಿ ಸರಕಾರ ಆದೇಶ ಹೊರಡಿಸಿದೆ. ಇದಕ್ಕೂ ಮುನ್ನ ಔಷಧ ತಾಂತ್ರಿಕ ಸಲಹಾ ಸಮಿತಿ‘ (ಡಿಟಿಎಬಿ) ನೆಬ್ಯುಲೈಸರ್‌, ಬಿಪಿ ಮೀಟರ್‌, ಗ್ಲ್ಯೂಕೊಮೀಟರ್‌ ಹಾಗೂ ಥರ್ಮೋಮೀಟರ್‌ಗಳನ್ನು ಔಷಧದ ವ್ಯಾಪ್ತಿಗೆ ತರುವ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು.
 • 27ಕ್ಕೆ ಏರಿಕೆಯಾದ ಉಪಕರಣಗಳ ಸಂಖ್ಯೆ: ಪ್ರಸ್ತುತ 23 ವೈದ್ಯಕೀಯ ಉಪಕರಣಗಳನ್ನು ಭಾರತದ ಔಷಧ ನಿಯಂತ್ರಣ ಸಂಸ್ಥೆಯು ಗುಣಮಟ್ಟ ಪರೀಕ್ಷೆ ಹಾಗೂ ನಿಯಂತ್ರಣಕ್ಕೆ ಒಳಪಡಿಸುತ್ತಿದೆ.
 • ಇನ್ನೂ ನಾಲ್ಕು ಉಪಕರಣಗಳ ಸೇರ್ಪಡೆಯೊಂದಿಗೆ ಈ ಸಂಖ್ಯೆ 2020ರ ವೇಳೆಗೆ 27ಕ್ಕೆ ಏರಿಕೆಯಾಗಲಿದೆ. ಇತರೆ ಎಲ್ಲಾ ವೈದ್ಯಕೀಯ ಉಪಕರಣಗಳನ್ನು ಸರಕಾರದ ವತಿಯಿಂದ ಗುಣಮಟ್ಟ ಪರೀಕ್ಷೆ ಅಥವಾ ಪ್ರಾಯೋಗಿಕ ಪರೀಕ್ಷೆ ಇಲ್ಲದೆಯೇ ಮಾರಾಟ ಮಾಡಲಾಗುತ್ತಿದೆ.

ಪರಿಶೀಲನೆಯಲ್ಲಿ ಎಂಟು ಉಪಕರಣಗಳು

 • ಇನ್ನೂ ಹಲವು ವೈದ್ಯಕೀಯ ಉಪಕರಣಗಳನ್ನು ಒಟ್ಟು 8 ವಿಭಾಗಗಳ ಅಡಿಯಲ್ಲಿ ‘ಔಷಧ ಮತ್ತು ಸೌಂದರ್ಯವರ್ಧಕ’ ಕಾಯಿದೆ ವ್ಯಾಪ್ತಿಗೆ ತರುವ ಪ್ರಸ್ತಾವನೆಯನ್ನು ಆರೋಗ್ಯ ಸಚಿವಾಲಯ ಮುಂದಿಟ್ಟಿದೆ.
 • ಕಸಿ ಮಾಡಬಹುದಾದ ವೈದ್ಯಕೀಯ ಉಪಕರಣಗಳು, ಎಂಆರ್‌ಐ ಸಾಧನ, ಸಿಟಿ ಸ್ಕ್ಯಾ‌ನ್‌ ಸಾಧನ, ಡಯಾಲಿಸಿಸ್‌ ಮಷಿನ್‌ಗಳು, ಎಕ್ಸ್‌ರೇ ಮಷಿನ್‌ಗಳು. ಪಿಇಟಿ ಸಾಧನ, ಡಿಫೈಬ್ರಿಲೇಟರ್‌ (ಎಲೆಕ್ಟ್ರಿಕ್‌ ಶಾಕ್‌ ಮೂಲಕ ನಿಂತುಹೋದ ಹೃದಯ ಬಡಿತಕ್ಕೆ ಮರುಚಾಲನೆ ನೀಡುವ ಸಾಧನ) ಹಾಗೂ ಮೂಳೆ ಮಜ್ಜೆ ಕೋಶ ವಿಭಜಕಗಳು- ಹೀಗೆ ಎಂಟು ವಿಭಾಗಗಳ ಅಡಿಯಲ್ಲಿ ವೈದ್ಯಕೀಯ ಸಾಧನಗಳನ್ನು ಕಾಯಿದೆ ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿದೆ.
 • ಇದಕ್ಕೆ ಅಂಗೀಕಾರ ದೊರೆತಲ್ಲಿ, ಇವುಗಳ ಉತ್ಪಾದನೆ ಮತ್ತು ಆಮದಿಗೂ ಸರಕಾರದಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಲಿದೆ.

ಅನುಕೂಲವೇನು?

 • ವೈದ್ಯಕೀಯ ಉಪಕರಣಗಳ ಗುಣಮಟ್ಟ, ಉತ್ಪಾದನೆ ಹಾಗೂ ಆಮದಿನ ಮೇಲೆ ಸರಕಾರ ನಿಗಾ ಇಡಲು ಸಾಧ್ಯವಾಗಲಿದೆ.
 • ಇವುಗಳ ಉತ್ಪಾದನೆ ಮತ್ತು ಆಮದಿಗೆ ಪರವಾನಗಿ ಪಡೆಯುವುದು ಕಡ್ಡಾಯವಾಗಲಿದೆ.
 • ಜನವರಿ 1, 2020ರಿಂದ ‘ಭಾರತೀಯ ಔಷಧ ನಿಯಂತ್ರಣ ಸಂಸ್ಥೆ’ಯು ಈ ನಾಲ್ಕು ಸಾಧನಗಳ ಉತ್ಪಾದನೆ ಮತ್ತು ಆಮದನ್ನು ನಿಯಂತ್ರಿಸಲಿದೆ.

ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್, 1940

 • ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್, 1940 ಭಾರತದ ಸಂಸತ್ತಿನ ಆಮದು, ಉತ್ಪಾದನೆ ಮತ್ತು ವಿತರಣೆಯನ್ನು ನಿಯಂತ್ರಿಸುವ ಒಂದು ಕಾಯಿದೆ. ಈ ಕಾಯಿದೆಯ ಪ್ರಾಥಮಿಕ ಉದ್ದೇಶವೆಂದರೆ ಭಾರತದಲ್ಲಿ ಮಾರಾಟವಾಗುವ ಔಷಧಿ ಮತ್ತು ಸೌಂದರ್ಯವರ್ಧಕಗಳೆಂದರೆ ಸುರಕ್ಷಿತ, ಪರಿಣಾಮಕಾರಿ ಮತ್ತು ರಾಜ್ಯದ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿರುತ್ತವೆ.
 • ಸಂಬಂಧಿಸಿದ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮಗಳು, 1945 ನಿರ್ದಿಷ್ಟ ವೇಳಾಪಟ್ಟಿಯ ಅಡಿಯಲ್ಲಿ ಔಷಧಿಗಳ ವರ್ಗೀಕರಣಕ್ಕೆ ನಿಬಂಧನೆಗಳನ್ನು ಒಳಗೊಂಡಿದೆ ಮತ್ತು ಪ್ರತಿ ವೇಳಾಪಟ್ಟಿಗಳ ಸಂಗ್ರಹಣೆ, ಮಾರಾಟ, ಪ್ರದರ್ಶನ ಮತ್ತು ಪ್ರಿಸ್ಕ್ರಿಪ್ಷನ್ಗಾಗಿ ಮಾರ್ಗದರ್ಶನಗಳು ಇವೆ

ಮೆಕ್ಸಿಕೊದ ವೆನೆಸ್ಸಾ ಪೋನ್ಸೆ ಡೆ ಲಿಯಾನ್​ ಭುವನ ಸುಂದರಿ

9.

ಸುದ್ಧಿಯಲ್ಲಿ ಏಕಿದೆ ? 2018ರ ವಿಶ್ವ ಸುಂದರಿಯಾಗಿ ಮೆಕ್ಸಿಕೋದ ವೆನೆಸ್ಸಾ ಪೋನ್ಸ್‌ ಡೆ ಲಿಯಾನ್‌ ಆಯ್ಕೆಯಾಗಿದ್ದು, 2017ರ ವಿನ್ನರ್‌ ಭಾರತದ ಮಾನುಷಿ ಚಿಲ್ಲರ್‌ ಅವರು ಕಿರೀಟವನ್ನು ತೊಡಿಸಿದ್ದಾರೆ.

 • ಥಾಯ್ಲೆಂಡ್‌ನ ನಿಕೊಲೆನ್‌ ಪಿಚಪಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರೆ, ಬೆಲಾರಸ್‌, ಜಮೈಕಾ ಮ್ತತು ಉಗಾಂಡದ ಸ್ಪರ್ಧಿಗಳು ಟಾಪ್‌ ಐದರಲ್ಲಿ ಸ್ಥಾನ ಪಡೆದಿದ್ದಾರೆ.
 • ಚೀನಾದ ಸಾನ್ಯಾದಲ್ಲಿ ಇಂದು ನಡೆದ 2018ರ ವಿಶ್ವಸುಂದರಿ ಸ್ಪರ್ಧೆಯಲ್ಲಿ ಮೆಕ್ಸಿಕೋದ 26 ವರ್ಷದ ವೆನೆಸ್ಸಾ ಪೋನ್ಸ್​ ಡೆ ಲಿಯಾನ್​ ಅವರು 68ನೇ ವಿಶ್ವದ ಸುಂದರಿ ಪಟ್ಟವನ್ನು ಅಲಂಕರಿಸಿದರು.
 • ಫೆಮಿನಾ ಮಿಸ್‌ ಇಂಡಿಯಾ 2018ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ತಮಿಳುನಾಡಿನ ಅನುಕೀರ್ತಿ ವಾಸ್‌ ಅವರು ಸ್ಪರ್ಧೆಯ ಅಗ್ರ 12ರ ಪಟ್ಟಿಯಲ್ಲೂ ಕೂಡ ಗುರುತಿಸಿಕೊಳ್ಳುವಲ್ಲಿ ವಿಫಲರಾಗಿ 30ನೇ ಸ್ಥಾನಕ್ಕೆ ತೃಪ್ತಿಪಟ್ಟರು.

Related Posts
“15th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಂಬಳ ಸುದ್ಧಿಯಲ್ಲಿ ಏಕಿದೆ ? ಕಂಬಳ ಹಾಗೂ ಇತರೆ ಗೂಳಿ ಮತ್ತು ಎತ್ತಿನ ಗಾಡಿ ಸ್ಪರ್ಧೆಗಳಿಗೆ ಅನುಮತಿ ನೀಡಿದ್ದ ರಾಜ್ಯ ವಿಧಾನ ಮಂಡಲ ಅಂಗೀಕರಿಸಿದ್ದ ಪ್ರಾಣಿ ಹಿಂಸೆ (ಕರ್ನಾಟಕ ತಿದ್ದುಪಡಿ) ತಡೆ ಕಾಯ್ದೆ - 2017ಕ್ಕೆ ಪೆಟಾ ಮತ್ತೆ ತಗಾದೆ ತೆಗೆದಿದೆ. ರಾಜ್ಯ ...
READ MORE
“30th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ವಾಹನ ಸೌಲಭ್ಯ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿಶೇಷಚೇತನ ಮತದಾರರಿಗೆ ವಾಹನ ವ್ಯವಸ್ಥೆ ಕಲ್ಪಿಸುವುದಕ್ಕೆ ಚುನಾವಣಾ ಆಯೋಗ ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂಥ ಸುಧಾರಣಾ ಕ್ರಮ ...
READ MORE
“8th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಭಾರತ್‌ ನೆಟ್ ಯೋಜನೆ  ಸುದ್ದಿಯಲ್ಲಿ ಏಕಿದೆ? ಭಾರತ್‌ ನೆಟ್ ಯೋಜನೆ ಅಡಿ ದೇಶದ 2.3 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ 5 ಲಕ್ಷ ವೈಫೈ ಹಾಟ್‌ಸ್ಪಾಟ್‌ಗಳ ಅಳವಡಿಕೆಗೆ ದೂರಸಂಪರ್ಕ ಸಚಿವಾಲಯವು ಟೆಂಡರ್ ಕರೆದಿದೆ. ಒಂದು ವೈಫೈಗೆ ₹ 1.5 ಲಕ್ಷ ಮೊತ್ತ ನಿಗದಿ ಮಾಡಲಾಗಿದೆ. 1,000 ...
READ MORE
27th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಮ್ಯಾಗ್ಸೆಸೆ ಪುರಸ್ಕಾರ  ಸುದ್ಧಿಯಲ್ಲಿ ಏಕಿದೆ? ‘ಏಷ್ಯಾದ ನೊಬೆಲ್ ’ ಎಂದೇ ಖ್ಯಾತಿ ಗಳಿಸಿರುವ ರಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಈ ಬಾರಿ ಇಬ್ಬರು ಭಾರತೀಯರು ಭಾಜನರಾಗಿದ್ದಾರೆ. ಸೋನಂ ವಾಂಗ್​ಚುಕ್ ಮತ್ತು ಡಾ. ಭರತ್ ವಟವಾನಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಆಗಸ್ಟ್ 31ರಂದು ಫಿಲಿಪ್ಪೀನ್ಸ್ ನಲ್ಲಿ ನಡೆಯುವ ...
READ MORE
“21 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂದಿರಾ ಯೋಜನೆಗೆ ಚಾಲನೆ ಸುದ್ಧಿಯಲ್ಲಿ ಏಕಿದೆ ? 'ಇಂದಿರಾ ಯೋಜನೆ'ಗೆ ಸಚಿವೆ ಡಾ. ಜಯಮಾಲಾ ಚಾಲನೆ ನೀಡಿದರು. ಏನಿದು ಇಂದಿರಾ ಯೋಜನೆ ? ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುವ ಮೇಲ್ವಿಚಾರಕರಿಗೆ ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ಬಡ್ಡಿ ರಹಿತ ಸಾಲ ನೀಡುವ ಯೋಜನೆಯೇ ...
READ MORE
” 05 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಈರುಳ್ಳಿ-ಬೆಳ್ಳುಳ್ಳಿಗೆ ಪರ್ಯಾಯ ಪೌಷ್ಠಿಕಾಂಶ ಬಳಕೆ ಸುದ್ಧಿಯಲ್ಲಿ ಏಕಿದೆ ?ಶಾಲಾ ಮಕ್ಕಳಿಗೆ ಪೂರೈಸುವ ಬಿಸಿಯೂಟದಲ್ಲಿ ಈರುಳ್ಳಿ-ಬೆಳ್ಳುಳ್ಳಿಗೆ ಪರ್ಯಾಯವಾಗಿ ಪೌಷ್ಠಿಕಾಂಶವಿರುವ ಇತರ ತರಕಾರಿಗಳನ್ನು ಬಳಸುವ ಆಹಾರ ಗುಣಮಟ್ಟದ ಬಗ್ಗೆ ಇಸ್ಕಾನ್‌ ಸಂಸ್ಥೆಯ 'ಅಕ್ಷಯ ಪಾತ್ರೆ' ಪ್ರತಿಷ್ಠಾನ ದೃಢೀಕೃತ ಪ್ರಮಾಣ ಪತ್ರ ನೀಡಿದಲ್ಲಿ ಅದಕ್ಕೆ ಆಯೋಗದ ಅಭ್ಯಂತರವಿಲ್ಲ ...
READ MORE
“23rd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಿಶನ್‌ಗಂಗಾ ಸುದ್ದಿಯಲ್ಲಿ ಏಕಿದೆ? ಕಾಶ್ಮೀರದಲ್ಲಿ ಕಿಶನ್‌ಗಂಗಾ ಜಲವಿದ್ಯುತ್‌ ಯೋಜನೆ ಉದ್ಘಾಟಿಸುವ ಮೂಲಕ ಭಾರತವು ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಪಾಕಿಸ್ತಾನವು ವಿಶ್ವಬ್ಯಾಂಕ್‌ಗೆ ದೂರು ಸಲ್ಲಿಸಿದೆ. ಪಾಕಿಸ್ತಾನಕ್ಕೆ ಹರಿಯುವ ನದಿಗೆ ಅಡ್ಡಲಾಗಿ ಕಟ್ಟುವ ಅಣೆಕಟ್ಟೆಯಿಂದಾಗಿ ನೀರಿನ ಹರಿವಿಗೆ ಅಡ್ಡಿಯಾಗುತ್ತದೆ ಎಂಬ ಪಾಕಿಸ್ತಾನದ ಪ್ರತಿಭಟನೆ ನಡುವೆಯೇ ...
READ MORE
“24 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿಶ್ವದ ಸುರಕ್ಷಿತ ನಗರ ಪಟ್ಟಿ ಸುದ್ಧಿಯಲ್ಲಿ ಏಕಿದೆ ?ಅಮೆರಿಕ ಮೂಲದ ಟ್ರಿಬ್ಯೂನ್ ಪತ್ರಿಕೆಯ ಸೋದರ ಸಂಸ್ಥೆ ‘ದಿ ಡೇಲಿ ಮೇಲ್’ ನಡೆಸಿದ ವಿಶ್ವದ ಸುರಕ್ಷಿತ ನಗರಗಳ ಸಮೀಕ್ಷೆಯಲ್ಲಿ ಭಾರತದಿಂದ ಮಂಗಳೂರು ಮಾತ್ರವೇ ಸ್ಥಾನ ಪಡೆದುಕೊಂಡಿದೆ. 1ರಿಂದ 100ರ ವರೆಗೆ ಅಂಕೆಯ ಸ್ಕೇಲ್​ನಲ್ಲಿ ಗರಿಷ್ಠ ಅಂಕ ಗಳಿಸಿದ ...
READ MORE
31st ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ ಸುದ್ದಿಯಲ್ಲಿ ಏಕಿದೆ? ಬಹು ನಿರೀಕ್ಷಿತ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ನ (ಎನ್‌ಆರ್‌ಸಿ) ಅಂತಿಮ ಕರಡು ಪ್ರಕಟವಾಗಿದ್ದು, ಅಸ್ಸಾಂನ 40 ಲಕ್ಷ ಮಂದಿ ಭಾರತೀಯ ಪ್ರಜೆಗಳೆಂದು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ರಾಜ್ಯದ ಒಟ್ಟು 29 ಕೋಟಿ ಜನಸಂಖ್ಯೆಯ ಪೈಕಿ 2.9 ಕೋಟಿ ಜನರ ಹೆಸರುಗಳು ...
READ MORE
“11 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಟಾಪ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹಂಪಿ ಸುದ್ಧಿಯಲ್ಲಿ   ಏಕಿದೆ ?ಈ ವರ್ಷ ನೀವು ನೋಡಲೇಬೇಕಾದ ಜಗತ್ತಿನ 52 ಟಾಪ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ರಾಜ್ಯದ ಪಾರಂಪರಿಕ ನಗರಿ ಹಂಪಿ ಟಾಪ್ 2 ಸ್ಥಾನ ಪಡೆದಿದೆ. ದಿ ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ 2019ರ ಟಾಪ್ ...
READ MORE
“15th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“30th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“8th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
27th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
“21 ಫೆಬ್ರವರಿ 2019 ರ ಕನ್ನಡ ಪ್ರಚಲಿತ
” 05 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“23rd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
“24 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
31st ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
“11 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

2 thoughts on ““10 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು””

Leave a Reply

Your email address will not be published. Required fields are marked *