ಸೂರ್ಯಯಾನಕ್ಕೆ ನಾಸಾ ಸಜ್ಜು
- ಈವರೆಗೆ ಅಸಾಧ್ಯವಾಗಿದ್ದ ಇಂತಹ ಸಾಹಸಕ್ಕೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕೈ ಹಾಕಿದೆ. ಮನುಕುಲದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಸೂರ್ಯಯಾನಕ್ಕೆ ಸಜ್ಜಾಗಿರುವ ನಾಸಾ, ಜು.31ರಂದು ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್ನಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆಗೊಳಿಸಲಿದೆ.
- ಪಾರ್ಕರ್ ಸೋಲಾರ್ ಪ್ರೋಬ್ ಗಗನನೌಕೆ ಸೂರ್ಯನ ಅಂಗಳಕ್ಕೆ ತಲುಪಲಿದ್ದು, ಈಗಾಗಲೇ ರಾಕೆಟ್ ಮತ್ತು ಉಪಗ್ರಹ ಉಪಕರಣಗಳನ್ನು ಅಮೆರಿಕದ ಏರ್ಫೋರ್ಸ್ ನೆಲೆಯಿಂದ ಫ್ಲೋರಿಡಾಗೆ ತರಲಾಗಿದೆ.
- ಅಲ್ಲಿ ವಿವಿಧ ಮಾದರಿಯ ಪರಿಶೀಲನೆ ಮತ್ತು ಪರೀಕ್ಷೆ ನಡೆಯುತ್ತಿದೆ. ಅಂತಿಮ ಹಂತದ ಜೋಡಣೆ ಕಾರ್ಯ ನಡೆಯಬೇಕಿದೆ.
- ಏನಿದು ಯೋಜನೆ?: ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ಅಧ್ಯಯನಕ್ಕೆ ತೆರಳುತ್ತಿರುವ ಮೊದಲ ಬಾಹ್ಯಾಕಾಶ ನೌಕೆ ಮತ್ತು ಉಪಗ್ರಹ. ಸೂರ್ಯನ ಮೇಲ್ಮೈ ಕವಚದ ಅಧ್ಯಯನ, ಸೂರ್ಯನಲ್ಲಿನ ವಾತಾವರಣ, ಕೊರೊನಾದ ಸಮೀಪದ ಮತ್ತು ಹೊರಮೈನ ಅಧ್ಯಯನ ನಡೆಸಲಿದೆ. ಈವರೆಗೆ ಮನುಷ್ಯ ತಯಾರಿಸಿರುವ ಯಾವುದೇ ಬಾಹ್ಯಾಕಾಶ ಅಧ್ಯಯನ ವಸ್ತುವಿಗಿಂತ ಸಮೀಪದ ಅಂತರದಲ್ಲಿ ಸೌರಮಂಡಲದ ಪ್ರಭಾವಲಯದಲ್ಲಿ ಈ ನೌಕೆ ಕಾರ್ಯನಿರ್ವಹಿಸಲಿದೆ.
- 7 ವರ್ಷ ಅಧ್ಯಯನ: ಸೂರ್ಯನ ಅತಿ ಹೆಚ್ಚಿನ ಶಾಖ ಮತ್ತು ವಿಕಿರಣವನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಪಾರ್ಕರ್ ಸೋಲಾರ್ ಪ್ರೋಬ್ಗಿದೆ. ಉಡಾವಣೆಗೆ ಮುನ್ನ ಬಾಹ್ಯಾಕಾಶ ನೌಕೆಯನ್ನು ಹಲವು ಹಂತದಲ್ಲಿ ತಾಪಮಾನ ಮತ್ತು ವಿಕಿರಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
- ಸೂರ್ಯ ಶಾಖ ತಡೆದುಕೊಳ್ಳುವ ಥರ್ಮಲ್ ಪ್ರೊಟೆಕ್ಷನ್ ಸಿಸ್ಟಂ (ಟಿಪಿಎಸ್) ಅಥವಾ ಹೀಟ್ ಶೀಲ್ಡ್ ಅಳವಡಿಸುವುದು ಪ್ರಮುಖ ಹಂತ. ಟಿಪಿಎಸ್ ಅಳವಡಿಕೆಯಿಂದ ಸೂರ್ಯನ ಪ್ರಭಾವಲಯದ ಅತ್ಯಂತ ಗರಿಷ್ಠ ತಾಪವನ್ನು ತಡೆದುಕೊಳ್ಳಲಿದೆ.
- 7 ವರ್ಷದ ಯೋಜನೆ ಇದಾಗಿದ್ದು, ಸೂರ್ಯನ ಬಗೆಗಿನ ಹಲವು ಕುತೂಹಲ, ವೈವಿಧ್ಯ, ಹೊರವಾತಾವರಣಕ್ಕೆ ಸೂಕ್ತ ಉತ್ತರ ದೊರೆಯುವ ನಿರೀಕ್ಷೆ ವಿಜ್ಞಾನ ವಲಯದ್ದು.
2019-20ಕ್ಕೆ ಇಸ್ರೋ ಯಾನ
- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕೂಡ ಸೂರ್ಯನ ಅಧ್ಯಯನಕ್ಕೆ ಆದಿತ್ಯ-1 ಎಂಬ ಯೋಜನೆ ರೂಪಿಸಿದೆ. 400 ಕೆ.ಜಿ.ಯ ಉಪಗ್ರಹವನ್ನು ಉಡಾಯಿಸುವ ಯೋಜನೆ ಇದಾಗಿದೆ. ಆದಿತ್ಯ- ಎಲ್1 ಪರಿಷ್ಕೃತ ಆವೃತ್ತಿಯಲ್ಲಿ ಯೋಜನೆಯನ್ನು ಕಾರ್ಯಗತ ಗೊಳಿಸುವಲ್ಲಿ ಇಸ್ರೋ ಶ್ರಮಿಸುತ್ತಿದೆ.
- ಆದಿತ್ಯ- ಎಲ್1 ಉಪಗ್ರಹವನ್ನು ಭೂಮಿಯಿಂದ 15 ಲಕ್ಷ ಕಿ.ಮೀ. ದೂರದ ಎಲ್1ನ ಹಾಲೊ ಆರ್ಬಿಟ್ನ ಸಮೀಪದಲ್ಲಿ ಕಕ್ಷೆಗೆ ಸೇರಿಸಲಾಗುತ್ತದೆ. ಈ ಉಪಗ್ರಹ ಹೆಚ್ಚುವರಿ ಆರು ಪೇಲೋಡ್ಗಳನ್ನು ಹೊತ್ತೊಯ್ಯಲಿದೆ. ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರದ ಒಪ್ಪಿಗೆ ದೊರೆತಿದ್ದು, 2019-2020ರ ಅವಧಿಯಲ್ಲಿ ಶ್ರೀಹರಿಕೋಟದಿಂದ ಪಿಎಸ್ಎಲ್ವಿ- ಎಕ್ಸ್ಎಲ್ ಮೂಲಕ ಉಡಾಯಿಸಲು ನಿರ್ಧರಿಸಲಾಗಿದೆ.
- ಈ ಉಪಗ್ರಹ ಸೋಲಾರ್ ಕೊರೊನಾ, ಸೂರ್ಯನ ವಿವಿಧ ಮಾದರಿಯ ಚಿತ್ರಣ (ಸಾಮಾನ್ಯ ಮತ್ತು ಎಕ್ಸ್ರೇ), ವರ್ಣಮಾಪಕದ ಅಧ್ಯಯನ ನಡೆಸಲಿದೆ.
ಅಂಚೆ ಖಾತೆಗಳ ಮೂಲಕವೂ ಇನ್ನು ಡಿಜಿಟಲ್ ವ್ಯವಹಾರ
- ಮೇ ತಿಂಗಳ ಬಳಿಕ ಅಂಚೆ ಉಳಿತಾಯ ಖಾತೆಯಿಂದ ಯಾವುದೇ ಬ್ಯಾಂಕ್ನ ಖಾತೆಗೆ ಹಣ ವರ್ಗಾಯಿಸಬಹುದು, ಬ್ಯಾಂಕ್ನಿಂದ ಅಂಚೆ ಖಾತೆಗೂ ದುಡ್ಡು ಹಾಕಬಹುದು! ಡಿಜಿಟಲ್ ವ್ಯವಹಾರಕ್ಕೆ ಬ್ಯಾಂಕೇ ಬೇಕಿಲ್ಲ. ಯಾಕೆಂದರೆ, ದೇಶದ 34 ಕೋಟಿ ಅಂಚೆ ಉಳಿತಾಯ ಖಾತೆಗಳೂ ಮುಂದಿನ ತಿಂಗಳಿನಿಂದ ಪೂರ್ಣ ಪ್ರಮಾಣದ ಡಿಜಿಟಲ್ ಬ್ಯಾಂಕಿಂಗ್ ಸೇವೆಗೆ ಒಳಪಡಲಿವೆ.
- ಕೇಂದ್ರ ಹಣಕಾಸು ಸಚಿವಾಲಯ ಅಂಚೆ ಇಲಾಖೆಯ ಎಲ್ಲ ಉಳಿತಾಯ ಖಾತೆಗಳನ್ನು ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ (ಐಪಿಪಿಬಿ)ಗೆ ಲಿಂಕ್ ಮಾಡಲು ಸಮ್ಮತಿ ನೀಡಿದೆ. ಹೀಗೆ ಲಿಂಕ್ ಆದರೆ ಅಂಚೆ ಖಾತೆ ಹೊಂದಿರುವವರು ತಮ್ಮ ಖಾತೆಯಿಂದ ಯಾವುದೇ ಅಂಚೆ ಖಾತೆ ಅಥವಾ ಯಾವುದೇ ಬ್ಯಾಂಕ್ಗಳಿಗೆ ಹಣ ವರ್ಗಾವಣೆ ಮಾಡಬಹುದು.
- 34 ಕೋಟಿ ಖಾತೆದಾರರಿಗೆ ಅನುಕೂಲ: 34 ಕೋಟಿ ಅಂಚೆ ಉಳಿತಾಯ ಖಾತೆಗಳ ಪೈಕಿ 17 ಕೋಟಿ ಸಾಮಾನ್ಯ ಉಳಿತಾಯ ಖಾತೆಗಳಾದರೆ ಉಳಿದವರು ತಿಂಗಳ ವರಮಾನ ಯೋಜನೆ ಮತ್ತು ಆರ್ಡಿ ಖಾತೆಗಳಾಗಿದ್ದು, ಎಲ್ಲರಿಗೂ ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯ ದೊರೆಯಲಿದೆ.
- ಕೋರ್ ಬ್ಯಾಂಕಿಂಗ್ ಇದೆ: ಅಂಚೆ ಇಲಾಖೆಯಲ್ಲಿ ಈಗಾಗಲೇ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇದೆ. ಆದರೆ ಇದು ಅಂಚೆ ಕಚೇರಿ ಉಳಿತಾಯ ಬ್ಯಾಂಕ್ (ಪಿಒಎಸ್ಬಿ) ಖಾತೆಗಳ ಒಳಗಿನ ವ್ಯವಹಾರಕ್ಕೆ ಸೀಮಿತವಾಗಿದೆ
- ಬ್ಯಾಂಕ್ಗಳಲ್ಲಿ ಡಿಜಿಟಲ್ ವ್ಯವಹಾರಕ್ಕೆ ಅವಕಾಶ ನೀಡುವ ಐಪಿಪಿಬಿಯನ್ನು ರಿಸರ್ವ್ ಬ್ಯಾಂಕ್ ನೋಡಿಕೊಳ್ಳುತ್ತದೆ. ಅಂಚೆ ಇಲಾಖೆ ಸೇವೆಗಳು ಹಣಕಾಸು ಇಲಾಖೆಯಡಿ ಬರುತ್ತವೆ. ಒಮ್ಮೆ ಅಂಚೆ ಖಾತೆದಾರರು ಐಪಿಪಿಬಿ ಗ್ರಾಹಕರಾಗಿ ಬದಲಾದರೆ ಅವರೂ ಬ್ಯಾಂಕಿಂಗ್ನಂತೆಯೇ ನೆಫ್ಟ್, ಆರ್ಟಿಜಿಎಸ್ ಮತ್ತು ಇತರ ಹಣ ವರ್ಗಾವಣೆ ಸೇವೆಗಳನ್ನು ಪಡೆಯುತ್ತಾರೆ. ಅಂದರೆ ಅಂಚೆ ಇಲಾಖೆ ಕೂಡಾ ಬ್ಯಾಂಕ್ನಂತೆಯೇ ಕಾರ್ಯ ನಿರ್ವಹಿಸುತ್ತದೆ.
ಅನುಕೂಲಗಳೇನು?
- 34 ಕೋಟಿ ಉಳಿತಾಯ ಖಾತೆದಾರರಿಗೆ ಡಿಜಿಟಲ್ ವ್ಯವಹಾರ ಅವಕಾಶ
- ಎಲ್ಲ 1.55 ಲಕ್ಷ ಅಂಚೆ ಕಚೇರಿಗಳಿಗೆ ಐಪಿಪಿಬಿ ಲಿಂಕ್: ಗ್ರಾಮೀಣ ಭಾಗದಲ್ಲೂ ಸೌಲಭ್ಯ
- ನೆಫ್ಟ್, ಆರ್ಟಿಜಿಎಸ್, ಇತರ ಹಣ ವರ್ಗಾವಣೆ ಸೇವೆ ಅಂಚೆ ಖಾತೆಗೂ ಲಭ್ಯ
- ಮುಂದಿನ ದಿನಗಳಲ್ಲಿ ಆ್ಯಪ್ ಮೂಲಕ ಪಾವತಿಗೂ ಅನುಕೂಲ ಸಿಗಲಿದೆ
ಬೃಹತ್ ಬ್ಯಾಂಕ್ ನೆಟ್ವರ್ಕ್:
- ದೇಶದ ಎಲ್ಲ 1.55 ಲಕ್ಷ ಅಂಚೆ ಕಚೇರಿಗಳನ್ನು ಐಪಿಪಿಬಿಗೆ ಲಿಂಕ್ ಮಾಡಲಾಗುತ್ತಿದ್ದು, ಈ ಜಾಲ ದೇಶದ ಅತಿದೊಡ್ಡ ಬ್ಯಾಂಕಿಂಗ್ ನೆಟ್ ವರ್ಕ್ ಆಗಲಿದೆ.
ಖಾತೆದಾರರಿಗೆ ಐಚ್ಛಿಕ:
- ಬ್ಯಾಂಕ್ನಂತೆಯೇ ಇಲ್ಲೂ ಐಪಿಪಿಬಿ ಸೌಲಭ್ಯ ಪಡೆಯುವುದು ಐಚ್ಛಿಕ. ಗ್ರಾಹಕರು ಬಯಸಿದರೆ ಅವರ ಖಾತೆಯನ್ನು ಐಪಿಪಿಬಿ ಖಾತೆಗೆ ಲಿಂಕ್ ಮಾಡಲಾಗುತ್ತದೆ.
ಹೇಗೆ ಕೆಲಸ ಮಾಡುತ್ತದೆ?
- ಈ ತಿಂಗಳಲ್ಲಿ ದೇಶದಲ್ಲಿ 650 ಐಪಿಪಿಬಿ ಶಾಖೆಗಳು ಕಾರ್ಯಾರಂಭ ಮಾಡಲಿವೆ. ಈ ಶಾಖೆಗಳಿಂದ ಜಿಲ್ಲಾ ಮಟ್ಟದ ಸಣ್ಣ ಅಂಚೆ ಕಚೇರಿಗಳಿಗೆ ಸಂಪರ್ಕ ದೊರೆಯಲಿದೆ. ದೇಶದಲ್ಲಿರುವ 1.55 ಲಕ್ಷ ಅಂಚೆ ಕಚೇರಿಗಳ ಪೈಕಿ 1.3 ಲಕ್ಷ ಗಾಮೀಣ ಭಾಗದಲ್ಲಿದ್ದು ಅಲ್ಲಿಗೂ ಸಂಪರ್ಕ ಸಿಗಲಿದೆ.
- ಸೆಪ್ಟೆಂಬರ್ ಬಳಿಕ ಎಲ್ಲಾ ಖಾತೆದಾರರಿಗೆ ಐಪಿಪಿಬಿ ಖಾತೆ ಸೇರ್ಪಡೆ ಆಯ್ಕೆ ನೀಡಲಾಗುತ್ತದೆ. ಸುಕನ್ಯಾ ಸಮೃದ್ಧಿ, ಆರ್ಡಿ, ಸ್ಪೀಡ್ ಪೋಸ್ಟ್ಗಳಿಗೂ ಇದರಿಂದಲೇ ಹಣ ಸಂದಾಯ ಮಾಡುವ ಅವಕಾಶವಿರುತ್ತದೆ.
- ಮುಂದಿನ ಹಂತದಲ್ಲಿ ಆ್ಯಪ್ಗಳ ಮೂಲಕ ದಿನಸಿ ಅಂಗಡಿ ಪಾವತಿ, ಟಿಕೆಟ್ಗೆ ಹಣ ನೀಡುವ ಸೌಲಭ್ಯಗಳು ದೊರೆಯಲಿವೆ.
ಖಾಸಗಿ ಉದ್ಯಮಕ್ಕೆ ಯುದ್ಧ ಕ್ಷಿಪಣಿ ನಾಗ್ ತಂತ್ರಜ್ಞಾನ :ಭಾರತ ಸಿದ್ಧ
- ರಕ್ಷಣಾ ವಲಯವನ್ನು ಖಾಸಗೀಕರಣಗೊಳಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ, ಮಹತ್ವದ ಯುದ್ದ ಕ್ಷಿಪಣಿ ನಾಗ್ ತಂತ್ರಜ್ಞಾನ ಇದೇ ಮೊದಲ ಬಾರಿಗೆ ಖಾಸಗಿ ಉದ್ಯಮಕ್ಕೆ ವರ್ಗಾವಣೆಗೊಳ್ಳಲು ಸಿದ್ಧವಾಗಿದೆ.
- ನಾಗ್ ಮತ್ತು ನಾಗ್ ಮಿಸೈಲ್ ಕ್ಯಾರಿಯರ್ (ನಮಿಕಾ)ದ ತಂತ್ರಜ್ಞಾನ ವರ್ಗಾವಣೆ ಅಥವಾ ವಿನಿಮಯ(ಟಿಒಟಿ)ಕ್ಕೆ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಈಗಾಗಲೇ ಆರಂಭಿಕ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಆದರೆ ಸಾರ್ವಜನಿಕ ವಲಯದ ಉದ್ದಿಮೆಯಾದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್)ಅನ್ನು ಸಂಪೂರ್ಣವಾಗಿ ಈ ಸ್ಪರ್ಧೆಯಿಂದ ಹೊರಗಿಡಲಾಗಿದೆ.
- ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿದಂತೆ ಸಂಸ್ಥೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ
- ನಾಲ್ಕು ಕಿಲೋಮೀಟರ್ ದೂರ ಕ್ರಮಿಸುವ ಸರ್ವಋುತುವಿನ ನಾಗ್ ಕ್ಷಿಪಣಿ,’ಫೈರ್ ಆ್ಯಂಡ್ ಫರ್ಗೆಟ್’ ಅಸ್ತ್ರವಾಗಿ ಬಳಕೆ ಮಾಡಬಹುದು. ನಮಿಕಾ ಶಸ್ತ್ರಗಳನ್ನು ಉಡಾಯಿಸುವ ಉಪಕರಣವಾಗಿಯೂ ಉಪಯೋಗಿಸಬಹುದು.
- ಪ್ರಸ್ತುತ ಭಾರತೀಯ ಉದ್ಯಮ ತನ್ನ ಪೂರ್ಣ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ. ಹಲವು ಪ್ರಸ್ತಾವಗಳು ಬಂದಿವೆ, ಹಲವು ಆಯ್ಕೆಗಳ ಬಗ್ಗೆ ಇನ್ನೂ ಸಮಾಲೋಚನೆ ನಡೆಯುತ್ತಿದೆ
- ಭಾರತೀಯ ರಕ್ಷಣಾ ಉತ್ಪಾದಕರ ಸೊಸೈಟಿ(ಎಸ್ಐಡಿಎಂ), ರಕ್ಷಣಾ ಸಚಿವಾಲಯದಿಂದ ಬದ್ಧತೆ ವ್ಯಕ್ತವಾದರೆ ಉದ್ಯಮ ಎಷ್ಟು ಬೇಕಾದರೂ ಕ್ಷಿಪಣಿ ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ.
ಕ್ಯುಆರ್ ಕೋಡ್ನಲ್ಲಿ ಫೋಟೊ ಸಹಿತ ಮಾಹಿತಿ
- ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ಇ–ಆಧಾರ್ಗೆ ಡಿಜಿಟಲ್ ಸಹಿ ಹೊಂದಿರುವ ಹೆಚ್ಚು ಸುರಕ್ಷಿತವಾದ ಕ್ಯುಆರ್ ಕೋಡ್ ರೂಪಿಸಿದೆ. ಇದರಲ್ಲಿ ಆಧಾರ್ದಾರರ ಮಾಹಿತಿಯ ಜತೆಗೆ ಫೋಟೊ ಕೂಡ ಇರುತ್ತದೆ. ಇದನ್ನು ಬಳಸಿಕೊಂಡು ಆಫ್ಲೈನ್ (ಅಂತರ್ಜಾಲ ಸಂಪರ್ಕ ಇಲ್ಲದೆ) ದೃಢೀಕರಣ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ.
- ಇ–ಆಧಾರ್ನಲ್ಲಿ ಮೊದಲಿನಿಂದಲೂ ಕ್ಯುಆರ್ ಕೋಡ್ ಇತ್ತು. ಈಗ, ಡಿಜಿಟಲ್ ಸಹಿ ಮತ್ತು ಫೋಟೊ ಇರುವ ಕ್ಯುಆರ್ ಕೋಡ್ ಪರಿಚಯಿಸಲಾಗಿದೆ.
- ಕ್ಯುಆರ್ ಕೋಡ್ ಎಂಬುದು ಒಂದು ರೀತಿಯ ಸಂಕೇತ ವ್ಯವಸ್ಥೆಯಾಗಿದ್ದು, ಅದರಲ್ಲಿ ಅಡಕವಾಗಿರುವ ಮಾಹಿತಿಯನ್ನು ಉಪಕರಣಗಳ ಮೂಲಕ ಮಾತ್ರ ಓದುವುದಕ್ಕೆ ಸಾಧ್ಯ.
- ಇ–ಆಧಾರ್ ಎಂಬುದು ಆಧಾರ್ನ ವಿದ್ಯುನ್ಮಾನ ಅವತರಣಿಕೆಯಾಗಿದ್ದು ಅದನ್ನು ಯುಐಡಿಎಐ ಜಾಲತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
- ಡಿಜಿಟಲ್ ಸಹಿ ಹೊಂದಿರುವ ಕ್ಯುಆರ್ ಕೋಡ್ ಅತ್ಯಂತ ಸರಳವಾದ ವ್ಯವಸ್ಥೆ. ಇದನ್ನು ಬಳಸಿಕೊಂಡು ಆಧಾರ್ ಹೊಂದಿರುವ ವ್ಯಕ್ತಿಯ ಗುರುತನ್ನು ಅಂತರ್ಜಾಲ ಸಂಪರ್ಕ ಇಲ್ಲದೆಯೂ ದೃಢೀಕರಿಸುವುದಕ್ಕೆ ಸಾಧ್ಯ
- ಆಧಾರ್ ದೃಢೀಕರಣ ಸಮಸ್ಯೆಯಿಂದಾಗಿ ವಿವಿಧ ಸೌಲಭ್ಯಗಳನ್ನು ನಿರಾಕರಿಸಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಈಗ ಅಂತರ್ಜಾಲ ಇಲ್ಲದೆಯೂ ಗುರುತು ದೃಢೀಕರಣ ಸಾಧ್ಯವಾಗುವುದರಿಂದ ಸೌಲಭ್ಯ ನಿರಾಕರಣೆ ಪ್ರಶ್ನೆ ಎದುರಾಗದು ಎಂದು ಯುಐಡಿಎಐ ಮೂಲಗಳು ತಿಳಿಸಿವೆ.
ಕಾಮನ್ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನ್ನಿಸ್ ನಲ್ಲಿ ಭಾರತಕ್ಕೆ ಚಿನ್ನ
- ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯರ ಪದಕ ಬೇಟೆ ಮುಂದುವರಿದಿದ್ದು ಐದನೇ ದಿನ ಪುರುಷರ ವಿಭಾಗದ ಟೇಬಲ್ ಟೆನ್ನಿಸ್ನಲ್ಲಿ ಚಿನ್ನ ಸಿಕ್ಕಿದ್ದು, ಜತೆಗೆ ಬ್ಯಾಡ್ಮಿಂಟನ್ನಲ್ಲಿ ಸೈನಾ,ಶೂಟಿಂಗ್ನಲ್ಲಿ ಜಿತು ರೈ ಚಿನ್ನದ ಪದಕ ಗಳಿಸಿದ್ದಾರೆ.
- ಶರತ್ ಕಮಲ್, ಸತೀಯಾನ್ ಜಿ, ಹರ್ಮೀತ್ ದೇಸಾಯಿ, ಸನಿಲ್ ಶೆಟ್ಟಿ ಮತ್ತು ಅಮಲ್ರಾಜ್ ಆಂಥೋನಿ ಅವರನ್ನು ಒಳಗೊಂಡ ಭಾರತದ ತಂಡ ಫೈನಲ್ನಲ್ಲಿ ನೈಜೀರಿಯಾವನ್ನು 3-0 ಅಂತರದಲ್ಲಿ ಸೋಲಿಸಿ ಚಿನ್ನವನ್ನು ಗಳಿಸಿದ್ದಾರೆ.
- ಅನುಭವಿ ಆಟಗಾರ್ತಿ ಸೈನಾ ನೇಹವಾಲ್ ಆಕ್ರಮಣಕಾರಿ ಆಟವಾಡಿ ಮಲೇಷ್ಯಾ ವಿರುದ್ಧ ಜಯಗಳಿಸುವ ಮೂಲಕ ಭಾರತಕ್ಕೆ ಚಿನ್ನದ ಪದಕ ಸಂಪಾದಿಸಿಕೊಟ್ಟಿದ್ದಾರೆ.
ಜಿತು ರೈ ಅವರು ಶೂಟಿಂಗ್ನಲ್ಲಿ ಎರಡನೇ ಬಾರಿಗೆ ಚಿನ್ನದ ಪದಕ ವಿಜೇತರಾದರು. - 1 ಸ್ಕೋರ್ ಮಾಡುವ ಮೂಲಕ ಶೂಟರ್ ಓಂ ಮಿಥರ್ವಾಲ್ ಟಿ ಅವರ ದಾಖಲೆಯನ್ನು ಹಿಂದಿಕ್ಕಿ ಹೊಸ ಸಿಡಬ್ಲ್ಯೂಜಿ ದಾಖಲೆ ಸೃಷ್ಟಿಸಿದರು.
‘ಬಸವ ಶ್ರೀ’ ಪ್ರಶಸ್ತಿ
- ಮುರುಘಾಮಠದ 2017 ನೇ ಸಾಲಿನ ಬಸವ ಶ್ರೀ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಪ್ರಕೃತಿ ಸಂರಕ್ಷಕ ಕಾಮೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
- ಏಪ್ರಿಲ್ 15ರಂದು ಮುರುಘಾಮಠದ ಅಲ್ಲಮಪ್ರಭು ಸಭಾಂಗಣದಲ್ಲಿ ವಿಶಿಷ್ಟ ರೀತಿಯಲ್ಲಿ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು
- ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ.
- ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕುಂದನಿ ಬೆಟ್ಟದ ತಪ್ಪಲಲ್ಲಿ ಪಶು–ಪಕ್ಷಿಗಳಿಗಾಗಿ ಕೆರೆ ಕಟ್ಟಿರುವ ಕಾಮೇಗೌಡ ಅವರು ಪ್ರಕೃತಿ ಸಂರಕ್ಷಕ ಎಂದೇ ಪ್ರಖ್ಯಾತರಾಗಿದ್ದಾರೆ. ಬಿಸಿಲಿನ ಬೇಗೆಯಿಂದ ತತ್ತರಿಸುವ ಜೀವರಾಶಿಗಳಿಗೆ ಜೀವಜಲ ನೀಡುವ ಮಹಾಂತರಾಗಿದ್ದಾರೆ. ಬಸವಣ್ಣನವರ ಕಾಯಕ ತತ್ವ ಪಾಲನೆಯಲ್ಲಿ ತೊಡಗಿರುವ ಕಾಮೇಗೌಡರನ್ನು ಬಸವಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
~~~***ದಿನಕ್ಕೊಂದು ಯೋಜನೆ***~~~
ಸಂಕಲ್ಪ್ ಮತ್ತು ಸ್ಟ್ರೈವ್ ಯೋಜನೆಗಳು (SANKALP & STRIVE Programmes)
- 2017 ರ ಅಕ್ಟೋಬರ್ 11 ರಂದು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಎರಡು ವಿಶ್ವ ಬ್ಯಾಂಕ್ ಬೆಂಬಲಿತ ಯೋಜನೆಗಳಾದ ಸ್ಕಿಲ್ಸ್ ಅಕ್ವಿಸಿಶನ್ ಮತ್ತು ಜ್ಞಾನ ಜಾಗೃತಿ ಜೀವನಶೈಲಿ ಪ್ರಚಾರಕ್ಕಾಗಿ (SANKALP) ಮತ್ತು ಕೌಶಲ್ಯ ಭಾರತ ಮಿಷನ್ ಹೆಚ್ಚಿಸಲು ಕೈಗಾರಿಕಾ ಮೌಲ್ಯ ವರ್ಧನೆಗೆ (STRIVE) ಸಾಮರ್ಥ್ಯವನ್ನು ಬಲಪಡಿಸಿದೆ.
STRIVE ಯೋಜನೆಯ ಮುಖ್ಯಾಂಶಗಳು
- ಎಸ್.ಎಂ.ಇಗಳು, ವ್ಯವಹಾರ ಸಂಘಟನೆಗಳು ಮತ್ತು ಉದ್ಯಮ ಕ್ಲಸ್ಟರ್ಗಳನ್ನು ಒಳಗೊಂಡಂತೆ ಶಿಷ್ಯವೃತ್ತಿಯೂ ಸೇರಿದಂತೆ ಒಟ್ಟು ಕಾರ್ಯಕ್ಷಮತೆಯನ್ನು ಸುಧಾರಿಸಲು STRIVE ಯೋಜನೆಯು ಐಟಿಐಗಳನ್ನು ಉತ್ತೇಜಿಸುತ್ತದೆ.
- ರಾಜ್ಯ ಕೌಶಲ್ಯ ಅಭಿವೃದ್ಧಿ ಮಿಷನ್ಗಳು (ಎಸ್ಎಸ್ಡಿಎಂಎಸ್), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್ಎಸ್ಡಿಸಿ), ಸೆಕ್ಟರ್ ಕೌಶಲ್ಯ ಕೌನ್ಸಿಲ್ಗಳು, ಐಟಿಐಗಳು ಮತ್ತು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಏಜೆನ್ಸಿ (ಎನ್ಎಸ್ಡಿಎ) ಇತ್ಯಾದಿಗಳನ್ನು ಬಲಪಡಿಸುವ ಮೂಲಕ ಗುಣಮಟ್ಟದ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ಇದು ದೃಢವಾದ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುತ್ತದೆ.
- ಕೌಶಲ್ಯ ಅಭಿವೃದ್ಧಿ ಯೋಜನೆಗಳಾದ್ಯಂತ ನ್ಯಾಷನಲ್ ಕ್ವಾಲಿಟಿ ಅಶ್ಯೂರೆನ್ಸ್ ಫ್ರೇಮ್ವರ್ಕ್ (ಎನ್ ಕ್ಯೂಎಫ್ಎಫ್) ಸೇರಿದಂತೆ ನ್ಯಾಷನಲ್ ಸ್ಕಿಲ್ಸ್ ಕ್ವಾಲಿಫಿಕೇಷನ್ ಫ್ರೇಮ್ವರ್ಕ್ (ಎನ್ಎಸ್ಕ್ಯೂಎಫ್) ಸಾರ್ವತ್ರಿಕೀಕರಣವನ್ನು ಇದು ಬೆಂಬಲಿಸುತ್ತದೆ.
- ಇದು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಷನ್ 2015 ಮತ್ತು ಅದರ ಹಲವಾರು ಉಪ ಕಾರ್ಯಾಚರಣೆಗಳಿಗೆ ಅಗತ್ಯವಿರುವ ತಳ್ಳುವಿಕೆಯನ್ನು ಒದಗಿಸುತ್ತದೆ.
- ಇದು ಭಾರತದಲ್ಲಿ ಮೇಕಪ್ ಮತ್ತು ಸ್ವಚಾತಾ ಅಭಿಯಾನದಂತಹ ಪ್ರಮುಖ ಸರ್ಕಾರದ ಕಾರ್ಯಕ್ರಮಗಳಿಗೆ ಸರಿಹೊಂದಿದೆ.
SANKALP ಯೋಜನೆಗಳ ಮುಖ್ಯಾಂಶಗಳು
- ಸ್ವಯಂ ಸಮರ್ಥನೀಯ ಮಾದರಿಗಳೊಂದಿಗೆ ತರಬೇತುದಾರರು ಮತ್ತು ಅಸ್ಸೆಸ್ಸರ್ಗಳ ಅಕಾಡೆಮಿಗಳನ್ನು ಸ್ಥಾಪಿಸುವ SANKALP ಕಲ್ಪನೆಗಳು. ಆದ್ಯತೆ ಕ್ಷೇತ್ರಗಳಲ್ಲಿ ಅಂತಹ 50 ಕ್ಕೂ ಹೆಚ್ಚಿನ ಅಕಾಡೆಮಿಗಳನ್ನು ಸ್ಥಾಪಿಸಬೇಕು.
- ಉದ್ದ ಮತ್ತು ಅಲ್ಪಾವಧಿಯ VET ಎರಡರಲ್ಲಿ ತರಬೇತುದಾರರಿಗೆ ತರಬೇತಿಯನ್ನು ನೀಡುವಂತೆ ಅದು ಲಾಭದಾಯಕ ಸಂಸ್ಥೆಗಳನ್ನಾಗಿಸುತ್ತದೆ, ಇದರಿಂದಾಗಿ ಒಗ್ಗೂಡಿಸುವಿಕೆಯನ್ನು ತರುತ್ತದೆ. ಹೆಚ್ಚುವರಿ ತರಬೇತುದಾರ ಅಕಾಡೆಮಿಗಳನ್ನು ಸಹ ಸ್ಥಾಪಿಸಲಾಗುವುದು.
- ಕೌಶಲ್ಯ ಯೋಜನೆಯಲ್ಲಿ ಗ್ರೇಟೆರ್ ವಿಕೇಂದ್ರೀಕರಣವನ್ನು ರಾಜ್ಯ ಮಟ್ಟದಲ್ಲಿ ಸಾಂಸ್ಥಿಕ ಬಲಪಡಿಸುವಿಕೆಯಿಂದ ಖಾತರಿಪಡಿಸಲಾಗುವುದು. ಇದರಲ್ಲಿ ಎಸ್ಎಸ್ಡಿಎಂಗಳು ಸ್ಥಾಪನೆ ಮತ್ತು ರಾಜ್ಯ ಮತ್ತು ಜಿಲ್ಲೆಯ ಜಿಲ್ಲೆಯ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು (ಡಿಎಸ್ಡಿಪಿ / ಎಸ್ಎಸ್ಡಿಪಿ) ಬರಲು ಅವಕಾಶ ಕಲ್ಪಿಸುತ್ತದೆ.
- ಮಹಿಳೆಯರು, ಪರಿಶಿಷ್ಟ ಜಾತಿಗಳು (ಎಸ್ಸಿಗಳು), ಪರಿಶಿಷ್ಟ ಬುಡಕಟ್ಟುಗಳು (ಎಸ್ಟಿಗಳು) ಮತ್ತು ಅಸಾಮರ್ಥ್ಯ ವ್ಯಕ್ತಿಗಳು (ಪಿಡಬ್ಲ್ಯುಡಿ) ಒಳಗೊಂಡಂತೆ ಕೆಳಮಟ್ಟದ ಮತ್ತು ಅಂಚಿನಲ್ಲಿರುವ ಸಮುದಾಯಗಳನ್ನು ಸೇರಿಸಿಕೊಳ್ಳುವಲ್ಲಿ ಇದು ಗುರಿಯನ್ನು ಹೊಂದಿದೆ.
- ಇದು ವ್ಯಾಪಾರದ ಸೂಚ್ಯಂಕವನ್ನು ಸುಲಭವಾಗಿಸುವಲ್ಲಿ ದೇಶದ ಏರಿಕೆಗೆ ಬೆಂಬಲ ನೀಡುವ ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ.
1. ಸೂರ್ಯನ ಅಧ್ಯಯನಕ್ಕೆ ನಾಸಾ ಯಾವ ಗಗನ ನೌಕೆಯನ್ನು ಕಳುಹಿಸುತ್ತಿದೆ ?
A. ಆದಿತ್ಯ
B. ಪಾರ್ಕರ್ ಸೋಲಾರ್ ಪ್ರೋಬ್
C. ರೊಸೆಟ್ಟಾ
D. ಟಿಯಗೋಂಗ್
2. ಬ್ಯಾಂಕ್ಗಳಲ್ಲಿ ಡಿಜಿಟಲ್ ವ್ಯವಹಾರಕ್ಕೆ ಅವಕಾಶ ನೀಡುವ ಐಪಿಪಿಬಿಯನ್ನು ಯಾವ ಸಂಸ್ಥೆ ನೋಡಿಕೊಳ್ಳುತ್ತದೆ
A. ರಿಸೆರ್ವ್ ಬ್ಯಾಂಕ್ ಆಫ್ ಇಂಡಿಯಾ
B. ಹಣ ಕಾಸು ಸಚಿವಾಲಯ
C. 1 ಮತ್ತು 2
D. ಯಾವುದು ಅಲ್ಲ
3. ನಾಗ್ ಯುದ್ಧ ಕ್ಷಿಪ್ಪಣಿಯ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1.ನಾಗ್ ಕ್ಷಿಪಣಿ 10 ಕಿಲೋಮೀಟರ್ ದೂರ ಕ್ರಮಿಸುವ ಸರ್ವಋುತುವಿನ ಕ್ಷಿಪಣಿ
2. ನಾಗ್ ಕ್ಷಿಪಣಿ,’ಫೈರ್ ಆ್ಯಂಡ್ ಫರ್ಗೆಟ್’ ಅಸ್ತ್ರವಾಗಿ ಬಳಕೆ ಮಾಡಬಹುದು
A. ಎರಡು ಹೇಳಿಕೆಗಳು ಸರಿಯಾಗಿವೆ
B. ಮೊದಲನೇ ಹೇಳಿಕೆ ತಪ್ಪಾಗಿದೆ
C. ಎರಡನೇ ಹೇಳಿಕೆ ತಪ್ಪಾಗಿದೆ
D. ಎರಡೂ ಹೇಳಿಕೆಗಳು ತಪ್ಪಾಗಿವೆ
4. ಬಸವಶ್ರೀ ಪ್ರಶಸ್ತಿಯನ್ನು ಯಾರು ಕೊಡುತ್ತಾರೆ ?
A. ಕರ್ನಾಟಕ ಸರ್ಕಾರ
B. ಕೇಂದ್ರ ಸರ್ಕಾರ
C.ಮುರುಘಾ ಮಠ
D.ಯಾರು ಅಲ್ಲ
5. ರಾಕೆಟ್ ಉಡಾವಣೆ ಪ್ರಕ್ರಿಯೆಯು ನ್ಯೂಟನ್ ಚಲನೆಯ ಎಷ್ಟನೇ ನಿಯಮವನ್ನು ಆದರಿಸಿದೆ?
A . ಎರಡನೇ ನಿಯಮ
B. ಮೂರನೆಯ ನಿಯಮ
C. ಮೊದಲನೆ ನಿಯಮ
D. ಯಾವುದು ಅಲ್ಲ
6. ವಿಶ್ವ ಸಾಮಾಜಿಕ ಉದ್ಯಮ ಪ್ರಶಸ್ತಿಯನ್ನು ಕೆಳಗಿನ ಯಾವ ಸಂಸ್ಥೆ ಪಡೆದಿದೆ?
A. ಸೆಲ್ಕೋ
B. ಬಿಹೆಚ್ಇಎಲ್
C. ಹೆಚ್ಎಎಲ್
D. ಮೇಲಿನ ಯಾವುದೂ ಅಲ್ಲ
7. ಸುಲಭ್ಯ ಪ್ರವಾಸೋದ್ಯಮ ಎಂಬ ಅಂತಾರಾಷ್ಟ್ರೀಯ ಸಮ್ಮೇಳನ ಕೆಳಗಿನ ಯಾವ ರಾಷ್ಟ್ರದಲ್ಲಿ ನಡೆಯಿತು?
A. ನೇಪಾಳ
B. ರಷ್ಯಾ
C. ಇಸ್ರೇಲ್
D. ಭಾರತ
8. ದೇಶದಲ್ಲಿ ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಪಟ್ಟಿ ಹೊಂದಿರುವ ಏಕೈಕ ರಾಜ್ಯ ಯಾವುದು?
A. ಕರ್ನಾಟಕ
B. ಅರುಣಾಚಲ ಪ್ರದೇಶ
C. ಅಸ್ಸಾಂ
D. ಮೇಲಿನ ಯಾವುದೂ ಅಲ್ಲ
9. ಸ್ವಚ್ಛ ಭಾರತ್ ಅಭಿಯಾನದ ಬಳಿಕ ಇದೇ ಮೊದಲ ಬಾರಿಗೆ ದೇಶದ ವಿಮಾನ ನಿಲ್ದಾಣಗಳಲ್ಲಿ ನಡೆಸಲಾದ ಸ್ವಚ್ಛತಾ ಸಮೀಕ್ಷೆಯಲ್ಲಿ ಕೆಳಗಿನ ಯಾವ ವಿಮಾನ ನಿಲ್ದಾಣ, ಸಣ್ಣ ವಿಮಾನ ನಿಲ್ದಾಣಗಳ ಕೆಟಗರಿಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ?
A. ಬೆಂಗಳೂರು ವಿಮಾನ ನಿಲ್ದಾಣ
B. ಮಂಗಳೂರು ವಿಮಾನ ನಿಲ್ದಾಣ
C. ಹೈದ್ರಾಬಾದ್ ವಿಮಾನ ನಿಲ್ದಾಣ
D. ಮೇಲಿನ ಯಾವುದೂ ಅಲ್ಲ
10. ಕೇಂದ್ರ ಸರ್ಕಾರ ನೀಡುವ ಕಾಯಕಲ್ಪ ಪ್ರಶಸ್ತಿಯನ್ನು ಕೆಳಗಿನ ಯಾರಿಗೆ ನೀಡಲಾಗುತ್ತದೆ?
A. ಉತ್ತಮ ಸೇವೆ ನೀಡುವ ಆಸ್ಪತ್ರೆಗಳು
B. ಅಂಗವಿಕಲರಿಗೆ
C. ಶಿಕ್ಷಕರಿಗೆ
D. ಮೇಲಿನ ಯಾವುದೂ ಅಲ್ಲ
ಉತ್ತರಗಳು: 1.B 2.A 3.B 4.C 5.B 6.A 7.A 8.C 9. B 10.A








