“11th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

ಇ-ವಾಹನ ನೀತಿ

 • ಸುದ್ದಿಯಲ್ಲಿ ಏಕಿದೆ? ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ವಯೋಮಿತಿಯನ್ನು 16 ವರ್ಷಕ್ಕೆ ಇಳಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದೆ. ದೇಶದಲ್ಲಿ ಇ-ವಾಹನಗಳ ಬಳಕೆ ಹೆಚ್ಚಿಸುವ ಉದ್ದೇಶ ದಿಂದ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ.
 • ಇ-ವಾಹನ ನೀತಿಯ ಮಹತ್ವ: ಇ-ವಾಹನಗಳಿಗೆ ಪರವಾನಗಿ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. ಇದರಿಂದ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಇ-ವಾಹನಗಳು ಲಗ್ಗೆ ಇಡಲಿವೆ. ಇ-ಬಸ್, ಇ-ರಿಕ್ಷಾ, ಇ-ಸ್ಕೂಟರ್ ಹಾಗೂ ಇ-ಟ್ಯಾಕ್ಸಿಗಳಿಗೆ ಈ ವಿನಾಯಿತಿ ದೊರೆಯಲಿದೆ. ಇನ್ನೊಂದೆಡೆ ಸಾರ್ವಜನಿಕ ಸಾರಿಗೆ ಹಾಗೂ ಟ್ಯಾಕ್ಸಿಗಳಲ್ಲಿಯೂ ಇ-ವಾಹನ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ನಿರ್ಧರಿಸಿದೆ. ಟ್ಯಾಕ್ಸಿಗಳಿಗೆ ಕೇಂದ್ರವೇ ಆರ್ಥಿಕ ಉತ್ತೇಜನ ನೀಡಲಿದ್ದು, ಸಾರ್ವಜನಿಕ ಸಾರಿಗೆಗಳು ಕ್ರಮೇಣ ಇ-ವಾಹನಕ್ಕೆ ವರ್ಗಾವಣೆಯಾಗುವುದು ಕಡ್ಡಾಯ ಮಾಡಲಾಗುತ್ತಿದೆ.

ಹಸಿರು ನಂಬರ್ ಪ್ಲೇಟ್

 • ದೇಶದಲ್ಲಿ ಈಗ ಸದ್ಯ 6 ರೂಪದ ನೋಂದಣಿ ಫಲಕಗಳಿವೆ. ಬಿಳಿ ಫಲಕದ ಖಾಸಗಿ ವಾಹನ, ಹಳದಿ ಫಲಕದ ವಾಣಿಜ್ಯ ವಾಹನ, ಕಪ್ಪು ಫಲಕದ ಬಾಡಿಗೆ ವಾಹನ, ನೀಲಿ ಫಲಕದ ರಾಯಭಾರ ಕಚೇರಿ ವಾಹನ, ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಕೆಂಪು ಫಲಕದ ವಾಹನ ಹಾಗೂ ಸೇನಾ ವಾಹನಗಳ ಪ್ರತ್ಯೇಕ ಫಲಕದ ವ್ಯವಸ್ಥೆಯಿದೆ. ಇನ್ನು ಮುಂದೆ ಇ-ವಾಹನಗಳಿಗೆ ಹಸಿರು ಬಣ್ಣದ ಪ್ರತ್ಯೇಕ ಫಲಕವಿರಲಿದೆ. ಫಲಕದಲ್ಲಿ ಬಿಳಿ ಬಣ್ಣದ ಅಕ್ಷರವಿರಲಿದೆ.

ಹೆಲ್ಮೆಟ್​ಗೆ ಬಿಐಎಸ್​ಪ್ರಮಾಣಪತ್ರ ಕಡ್ಡಾಯ

 • ದ್ವಿಚಕ್ರ ವಾಹನ ಸವಾರರ ಹೆಲ್ಮೆಟ್ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬದಲಿಸಿದ್ದು, ಬಿಐಎಸ್(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣಪತ್ರ ಕಡ್ಡಾಯ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ ಮಾರುಕಟ್ಟೆಯಲ್ಲಿ ಬಿಐಎಸ್ ಪ್ರಮಾಣಪತ್ರವಿಲ್ಲದ ಹೆಲ್ಮೆಟ್ ಮಾರಾಟ ಮಾಡುವಂತಿಲ್ಲ.
 • ಹಾಗೆಯೇ ಆ ಹೆಲ್ಮೆಟ್ ಮೇಲೆ ಕಡ್ಡಾಯವಾಗಿ ದ್ವಿಚಕ್ರ ವಾಹನದ ಚಿತ್ರ ಅಥವಾ ಅಕ್ಷರ ರೂಪವಿರಬೇಕು. ಏತನ್ಮಧ್ಯೆ ಹೆಲ್ಮೆಟ್​ಗಳ ಕನಿಷ್ಠ ತೂಕವನ್ನು 300 ಗ್ರಾಂಗೆ ಇಳಿಸಲು ಕೂಡ ಕೇಂದ್ರ ಸಮ್ಮತಿಸಿದೆ.

ಕಾರಣ: ರಸ್ತೆ ಅಪಘಾತದಲ್ಲಿನ ಸಾವುಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಠಿಣ ನಿಯಮಕ್ಕೆ ಮುಂದಾಗಿದೆ.

 • ಈ ತೂಕವೇ ಸಾಕಷ್ಟು ವಾಹನ ಸವಾರರಿಗೆ ಕಿರಿಕಿರಿ ಮಾಡಿತ್ತು. ಕಡಿಮೆ ತೂಕದ ಕಳಪೆ ಹೆಲ್ಮೆಟ್ ಮಾರಾಟ ನಿಯಂತ್ರಣಕ್ಕೆ ಕೇಂದ್ರವು ಈ ನಿಯಮ ಜಾರಿಗೆ ತಂದಿದೆ.

ಬೋಗಿಬೆಲ್ ಸೇತುವೆ

 • ಏನಿದು? ಭಾರತದ ಅತಿ ಉದ್ದವಾದ ರೈಲ್ವೆ ಮತ್ತು ರಸ್ತೆ ಮಾರ್ಗವನ್ನೊಳಗೊಂಡ ಸೇತುವೆ. ಈ ವರ್ಷದ ಅಕ್ಟೋಬರ್​ನಲ್ಲಿ ಉದ್ಘಾಟನೆಗೊಳ್ಳಲಿದ್ದು ಪ್ರಧಾನಿ ಮೋದಿಯವರು ಲೋಕಾರ್ಪಣೆಗೊಳಿಸುವರು.
 • ಎಲ್ಲಿ ನಿರ್ಮಿಸಲಾಗಿದೆ ? ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಿರುವ ಸುಮಾರು 4.94 ಕಿ.ಮೀ. ಉದ್ದದ ಸೇತುವೆ ಆಸ್ಸಾಂ ದಕ್ಷಿಣದಲ್ಲಿರುವ ಉತ್ತರದಲ್ಲಿನ ಡಿಬ್ರುಗಡ್​ಗೆ ಸಂಪರ್ಕ ಕಲ್ಪಿಸುವ ಜತೆ ಚೀನಾ ಗಡಿಯಲ್ಲಿನ ರಕ್ಷಣಾ ವ್ಯವಸ್ಥೆಗೆ ಪೂರಕವಾಗಿದೆ. ಹಾಗೇ ರೈಲ್ವೆ, ರಸ್ತೆ ಮಾರ್ಗದ ಪ್ರಯಾಣಿಕರ ಸಮಯವನ್ನೂ ಉಳಿತಾಯ ಮಾಡುತ್ತದೆ.
 • ಡಬಲ್​ ಡೆಕ್ಕರ್​ ಸೇತುವೆಯಾಗಿದ್ದು ಮೇಲ್ಭಾಗದಲ್ಲಿ ಮೂರು ಪಥದ ರಸ್ತೆ ಮಾರ್ಗ ನಿರ್ಮಿಸಲಾಗಿದೆ. ಕೆಳಗೆ ಎರಡು ರೈಲ್ವೆ ಹಳಿ ಇದೆ.
 • ಸೇತುವೆಯ ಮಹತ್ವ: ನದಿಯ ಮೇಲೆ ಸೇತುವೆ ನಿರ್ಮಾಣ ಮಾಡಿದ್ದರಿಂದ ದೆಹಲಿ ಹಾಗೂ ಡಿಬ್ರುಘರ್​ನ ನಡುವಿನ ಅಂತರ ಸುಮಾರು 155 ಕಿ.ಮೀ. ಕಡಿಮೆಯಾಗುವುದಲ್ಲದೆ ಪ್ರಯಾಣದ ಸಮಯ ಮೂರು ಗಂಟೆಯಷ್ಟನ್ನು ಉಳಿತಾಯ ಮಾಡಬಹುದು. ಈ ಸೇತುವೆಯ ರಸ್ತೆ ಮಾರ್ಗ ದೇಶದ ಸೈನ್ಯಕ್ಕೆ ತುಂಬ ಅನುಕೂಲವಾಗಲಿದೆ. ನದಿಯನ್ನು ಬೋಟ್​ನಲ್ಲಿ ದಾಟಲು ಒಂದು ತಾಸು ಬೇಕಾಗಿತ್ತು. ಈಗ ರಸ್ತೆ ಮೂಲಕ ಐದು ನಿಮಿಷದಲ್ಲಿ ಸಾಗಬಹುದು

ಅಣ್ವಸ್ತ್ರ ಒಪ್ಪಂದ

 • ಒಪ್ಪಂದಕ್ಕೆ ಒಳಪಟ್ಟಿದ್ದ ದೇಶಗಳು: ಇರಾನ್ ಮತ್ತು ಅಮೇರಿಕಾ
 • ಸುದ್ದಿಯಲ್ಲಿ ಏಕಿದೆ ? ಇರಾನ್ ಜತೆಗಿನ ಪರಮಾಣು ಒಪ್ಪಂದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರೀಕ್ಷೆಯಂತೆ ರದ್ದುಪಡಿಸಿದ್ದಾರೆ. ಈ ಒಪ್ಪಂದದಿಂದ ಅಮೆರಿಕ ಹೊರಬಂದಿದೆ ಎಂದು ಅವರು ಘೋಷಿಸಿದ್ದಾರೆ.

ಏನಿದು ಪರಮಾಣು ಒಪ್ಪಂದ?

 • ಇರಾನ್ ಪರಮಾಣು ಪರೀಕ್ಷೆಗಳ ಮೇಲೆ 2012ರಲ್ಲಿ ಅಮೆರಿಕ, ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟ ನಿರ್ಬಂಧ ಹೇರಿತ್ತು. ತೈಲ ಆದಾಯದಲ್ಲಿ ಇರಾನ್​ಗೆ 4 ವರ್ಷದಲ್ಲಿ 10.76 ಲಕ್ಷ ಕೋಟಿ ರೂ. ನಷ್ಟ ಉಂಟಾಗಿತ್ತು. 2015ರಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ, ರಷ್ಯಾ ಮತ್ತು ಜರ್ಮನಿ (ಪಿ5+1)ಜತೆಗೆ ಇರಾನ್ ಪರಮಾಣು ಶಸ್ತ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿಯಂತ್ರಿಸುವ ಒಪ್ಪಂದಕ್ಕೆ ಸಹಿ ಹಾಕಿತು. ಪರಿಹಾರವಾಗಿ ಹಣದ ನೆರವು ನೀಡುವಂತೆ ಇರಾನ್ ಷರತ್ತು ಹಾಕಿತ್ತು.

ಪರಮಾಣು ಒಪ್ಪಂದ ರದ್ದು ಪಡಿಸಲು ಕಾರಣ :

  1. ಮಧ್ಯಪೂರ್ವ ರಾಷ್ಟ್ರಗಳಲ್ಲಿ ಪ್ರಾಯೋಜಿತ ಭಯೋತ್ಪಾದನೆ ಮತ್ತು ಪರಮಾಣು ಪರೀಕ್ಷೆಗಳಿಗೆ ಕಡಿವಾಣ ಹಾಕಲು.
  2. ಇರಾನಿನ ಅಣ್ವಸ್ತ್ರ ಅಭಿವೃದ್ಧಿಯನ್ನು ನಿಯಂತ್ರಿಸಲು

ವಿಶ್ವದ ಮೇಲೆ ಪರಿಣಾಮ

 • ಇರಾನ್ ಮೇಲೆ ಮತ್ತೆ ಆರ್ಥಿಕ ನಿರ್ಬಂಧ. ಅಂತಾ ರಾಷ್ಟ್ರೀಯ ಕಂಪನಿಗಳು ಇರಾನ್​ನಿಂದ ತೈಲ ಖರೀದಿಸದಂತೆ ಒತ್ತಡ.
 • ಅಮೆರಿಕದ ನಡೆಯಿಂದ ಕೆರಳುವ ಇರಾನ್ ಪರಮಾಣು ಶಸ್ತ್ರಗಳ ಅಭಿವೃದ್ಧಿಯನ್ನು ಮತ್ತಷ್ಟು ಹೆಚಿಸುವ ಸಾಧ್ಯತೆ. ಅಮೆರಿಕ ದ್ವೇಷಿಸುವ ರಾಷ್ಟ್ರಗಳಿಂದ ಇರಾನ್​ಗೆ ನೆರವು. ಯುದ್ಧದ ಭೀತಿ

ಭಾರತದ ಮೇಲೆ ಪರಿಣಾಮವೇನು ?

 • ಇರಾನ್‌-ಅಮೆರಿಕದ ನಡುವಿನ ಹೊಸ ಬಿಕ್ಕಟ್ಟು ಗಲ್ಫ್‌ ರಾಷ್ಟ್ರಗಳಿಂದ ಭಾರತದ ತೈಲ ಆಮದಿನ ಮೇಲೆ ಪರಿಣಾಮ ಬೀರಬಹುದು, ಜತೆಗೆ ಛಹಬರ್‌ ಬಂದರು ಯೋಜನೆಗೂ ಇದರಿಂದ ತೊಡಕಾಗಬಹುದು

~~~***ದಿನಕ್ಕೊಂದು ಯೋಜನೆ***~~~

ದಿವ್ಯಾಂಗ್ ಸಾರಥಿ

 • ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಡಿವ್ಯಾಂಗ್ ಸಾರಥಿ ಯನ್ನು ಪ್ರಾರಂಭಿಸಿದೆ-…

ಪ್ರಮುಖ ಅಂಶಗಳು

 • ಈ ಅಪ್ಲಿಕೇಶನ್ 2015 ರ ಡಿಸೆಂಬರ್ನಲ್ಲಿ ದಿವ್ಯಂಗ ಜನರು ಸುಲಭವಾಗಿ ಪ್ರವೇಶಿಸಲು ಪ್ರಾರಂಭಿಸಿದ ಭಾರತದ ಅಭಿಯಾನದ (ಸುಗಮ್ಯ  ಭಾರತ್ ಅಭಿಯಾನ್) ಐಸಿಟಿ ಘಟಕದ ಅವಿಭಾಜ್ಯ ಅಂಗವಾಗಿದೆ.
 • ಈ ಮೊಬೈಲ್ ಅಪ್ಲಿಕೇಶನ್ನಿಂದ ಯೋಜನೆಗಳು, ವಿದ್ಯಾರ್ಥಿzವೇತನಗಳು, ಕಾನೂನುಗಳು, ಸಾಂಸ್ಥಿಕ ಬೆಂಬಲ ವ್ಯವಸ್ಥೆಗಳು ಮತ್ತು ಎಲ್ಲಾ ವಿವರಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಅವರಿಗೆ ಸುಲಭವಾಗಿ ಮತ್ತು ಅನುಕೂಲಕರ ಮಾಹಿತಿ ನೀಡುವ ಮೂಲಕ ‘ದಿವ್ಯಂಗ ಜನರಿಗೆ ‘ ಅಧಿಕಾರ ನೀಡಲು ಈ ಮೊಬೈಲ್ ಅಪ್ಲಿಕೇಶನ್ ಬದ್ಧವಾಗಿದೆ
 • ಈ ಮೊಬೈಲ್ ಅಪ್ಲಿಕೇಶನ್ ಅದರ ವಿವಿಧ ಕಾರ್ಯಗಳು, ನಿಯಮಗಳು, ನಿಯಮಗಳು ಮತ್ತು ಮಾರ್ಗದರ್ಶನಗಳು, ಯೋಜನೆಗಳು, ವಿವಿಧ ಹೊರಗಿನ ಸಂಸ್ಥೆಗಳ ಕುರಿತಾದ ಮಾಹಿತಿಯನ್ನೂ ಒಳಗೊಂಡಂತೆ, ಅಸಮರ್ಥತೆ ಹೊಂದಿರುವ ವ್ಯಕ್ತಿಗಳ ಸಬಲೀಕರಣ ಇಲಾಖೆ (DEPWD), ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಸಂಬಂಧಿಸಿದ ಎಲ್ಲಾ ಸೂಕ್ತ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಉದ್ಯೋಗ ಅವಕಾಶಗಳು, ಮತ್ತು ಅಂಗವಿಕಲ ಮಾರುಕಟ್ಟೆಯನ್ನು ಸುಲಭವಾಗಿ ಪ್ರವೇಶಿಸಬಹುದು.
 • 2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ 2.68 ಕೋಟಿ ದಿವ್ಯಾಂಗರ ಜನಸಂಖ್ಯೆ ಇದೆ, ಇದು ಜನಸಂಖ್ಯೆಯ 2.2% ಕ್ಕಿಂತ ಹೆಚ್ಚಾಗಿದೆ. ಮೊಬೈಲ್ ಅಪ್ಲಿಕೇಶನ್ ‘ದಿವ್ಯಾಂಗ  ಸಾರಥಿ’ ಯುನಿವರ್ಸಲ್ ಪ್ರವೇಶಕ್ಕಾಗಿ ಯುನಿಆರ್ಸಿಪಿಡಿ ತತ್ವಗಳನ್ನು ಮತ್ತು 2016 ವಿಕಲಾಂಗ ಕಾಯ್ದೆಯ ವ್ಯಕ್ತಿಗಳ ಹಕ್ಕುಗಳ ನಿಬಂಧನೆಗಳನ್ನು ಅನುಸರಿಸುತ್ತದೆ. ಎಲ್ಲಾ ಮಾಹಿತಿಗಳನ್ನು ಪ್ರವೇಶ ರೂಪದಲ್ಲಿ ಲಭ್ಯವಾಗುವಂತೆ ಆಕ್ಟ್ ಆದೇಶಿಸುತ್ತದೆ.
 • ಮೊಬೈಲ್ ಅಪ್ಲಿಕೇಶನ್ ‘ದಿವ್ಯಾಂಗ್ ಸಾರಥಿ’ನ ವಿಶಿಷ್ಟ ಲಕ್ಷಣಗಳು ಲಿಖಿತ ಮಾಹಿತಿಯನ್ನು ಆಡಿಯೊ ಫೈಲ್ ಆಗಿ ಮಾರ್ಪಡಿಸುವ ಆಡಿಯೊ ಟಿಪ್ಪಣಿಗಳು (ಪಠ್ಯದಿಂದ ಧ್ವನಿ ಪರಿವರ್ತನೆ ಸಾಫ್ಟ್ವೇರ್) ಮತ್ತು ಸರಿಹೊಂದಿಸಬಹುದಾದ ಫಾಂಟ್ ಗಾತ್ರವನ್ನು ಹೊಂದಿದ್ದು, ಬಳಕೆದಾರನ ಅಗತ್ಯತೆ.
 • ದ್ವಿಭಾಷಾ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಕಾರಣ ಮೊಬೈಲ್ ಅಪ್ಲಿಕೇಶನ್ ನಿಸ್ಸಂಶಯವಾಗಿ ವ್ಯಾಪಕ ಪ್ರಭಾವವನ್ನು ಹೊಂದಿರುತ್ತದೆ, ಮಾಹಿತಿ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಲಭ್ಯವಿದೆ. ಇಂಟರ್ನೆಟ್ ಪ್ರವೇಶವನ್ನು ಹೊಂದಿರಬಹುದಾದ ಅಥವಾ ಯಾವುದೇ ಬಳಕೆದಾರ ಸ್ಮಾರ್ಟ್ಫೋನ್ ಬಳಕೆದಾರರಿಂದ ಅದನ್ನು ಪ್ರವೇಶಿಸಬಹುದು.
 • ಗೂಗಲ್ ಪ್ಲೇಸ್ಟೋರ್ನಲ್ಲಿ ಡೌನ್ಲೋಡ್ ಮಾಡಲು ಮೊಬೈಲ್ ಅಪ್ಲಿಕೇಶನ್ ಲಭ್ಯವಿರುತ್ತದೆ.

ಸುಗಮ್ಯ ಭಾರತ್ ಅಭಿಯಾನ್

 • ವಿಕಲಾಂಗ ವ್ಯಕ್ತಿಗಳು ಸಾರ್ವತ್ರಿಕ ಪ್ರವೇಶವನ್ನು, ಅಭಿವೃದ್ಧಿಗೆ ಸಮನಾದ ಅವಕಾಶ, ಸ್ವತಂತ್ರ ಜೀವನ ಮತ್ತು ಜೀವನದ ಎಲ್ಲ ಅಂಶಗಳನ್ನೂ ಒಳಗೊಳ್ಳುವ ಸಮಾಜದಲ್ಲಿ ಪಾಲ್ಗೊಳ್ಳುವಿಕೆಯನ್ನು ಸಕ್ರಿಯಗೊಳಿಸಲು ಗುರಿಪಡಿಸುತ್ತಾರೆ.
 • ಅಭಿಯಾನದ ಮೂಲಕ ಟಾರ್ಗೆಟ್ ಸೆಟ್: A1, A & B ವಿಭಾಗಗಳ ಎಲ್ಲಾ ರೈಲ್ವೆ ನಿಲ್ದಾಣಗಳನ್ನು ಮತ್ತು ಜುಲೈ 2016 ರ ಹೊತ್ತಿಗೆ ಅಂಗವಿಕಲರಿಗೆ ಸಂಪೂರ್ಣವಾಗಿ ಪ್ರವೇಶಿಸಬಹುದಾದ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ತಯಾರಿಸುವುದನ್ನು ಕಲ್ಪಿಸುತ್ತದೆ.
 • ಮಾರ್ಚ್ 2018 ರೊಳಗೆ ಅಂಗವಿಕಲರಿಗೆ ಸಂಪೂರ್ಣ ಪ್ರವೇಶಿಸಬಹುದಾದ ವಾಹನ ನೌಕೆಗಳಲ್ಲಿ ಕನಿಷ್ಠ 10% ಸರ್ಕಾರಿ ಸ್ವಾಮ್ಯದ  ಸಾರ್ವಜನಿಕ ಸಾರಿಗೆ ವಾಹನ ಗಳನ್ನು ಪರಿವರ್ತಿಸಲು ಪ್ರಯತ್ನಿಸುತ್ತದೆ

 

Related Posts
National Current Affairs – UPSC/KAS Exams- 16th January 2019
District mineral foundation Topic: Economy IN NEWS: The Odisha government is planning to move its district mineral foundations (DMF) to its steel and mines department from the planning and convergence department. The plan ...
READ MORE
Karnataka Current Affairs – KAS/KPSC Exams- 10th September 2018
HOPCOMS to set up a vegetarian restaurant on Bengaluru-Mysuru Road To cash in on the growing demand for farm-fresh and naturally ripened fruits and vegetables, the Horticultural Producers’ Co-operative Marketing and ...
READ MORE
PSLV-C31 launches IRNSS-1E
PSLV-C31 successfully put into orbit IRNSS-1E, the fifth satellite of the Indian Regional Navigation Satellite System (IRNSS) after its succesful launch from the Satish Dhawan Space Centre (SDSC), SHAR, Sriharikota PSLV-C31 ...
READ MORE
Karnataka Current Affairs – KAS-KPSC Exams – 9th – 10th Feb 2018
Karnataka HC gets five more judges The Karnataka High Court will get five new additional judges. The President appointed Dixit Krishna Shripad, Shankar Ganapathi Pandit, Ramakrishna Devdas, Bhotanhosur Mallikarjuna Shyam Prasad and ...
READ MORE
National Current AFfairs – UPSC/KAS Exams – 6th November 2018
Government invites bid for Phase III of regional connectivity The ministry of civil aviation has opened bids for the third phase of the Regional Connectivity Scheme (RCS). In the third round ...
READ MORE
Karnataka Current Affairs – KAS/KPSC Exams – 5th March 2018
62,381 more voters on Mysuru’s revised electoral list As many as 62,381 voters have been included in Mysuru district in the special summary revision of voters held till February 28. D. Randeep, ...
READ MORE
Karnataka Current Affairs – KAS/KPSC Exams – 29th October 2018
Air quality takes a hit during Dasara The air quality in Mysuru had reached ‘harmful’ levels during the Dasara celebrations in the city. The PM10 (Particulate Matter 10 Micrometers) value had reached ...
READ MORE
BWSSB – Existing Water Supply System Scenario & Vision Document Up-To 2050
Till the year 1896, unfiltered water was supplied to Bengaluru city in the Kalyani system from a number of tanks such as Dharmambudhi, Sampangi, Ulsoor, Sankey etc., supplemented by local ...
READ MORE
Karnataka Current Affairs – KAS/KPSC Exams-28th December 2018
Hampi voted as top Asian travel destination A panel consisting of five of the world’s top travel influencers and bloggers has voted Hampi as one of the top emerging Asian travel ...
READ MORE
Karnataka: Boeing in talks with govt to set up manufacturing facility
In a development that gives a big boost to the aviation industry in Karnataka, aerospace major Boeing is holding talks with the state government on setting up a new aircraft ...
READ MORE
National Current Affairs – UPSC/KAS Exams- 16th January
Karnataka Current Affairs – KAS/KPSC Exams- 10th September
PSLV-C31 launches IRNSS-1E
Karnataka Current Affairs – KAS-KPSC Exams – 9th
National Current AFfairs – UPSC/KAS Exams – 6th
Karnataka Current Affairs – KAS/KPSC Exams – 5th
Karnataka Current Affairs – KAS/KPSC Exams – 29th
BWSSB – Existing Water Supply System Scenario &
Karnataka Current Affairs – KAS/KPSC Exams-28th December 2018
Karnataka: Boeing in talks with govt to set

Leave a Reply

Your email address will not be published. Required fields are marked *