“11 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಸೋಷಿಯಲ್‌ ಮಿಡಿಯಾ ಬಳಕೆಗೆ ಕಠಿಣ ನಿರ್ಬಂಧ

1.

ಸುದ್ಧಿಯಲ್ಲಿ ಏಕಿದೆ ?ಮತದಾರರ ಮೇಲೆ ಸಾಮಾಜಿಕ ಜಾಲತಾಣಗಳು ಬೀರುವ ಪ್ರಭಾವ ಅರಿತು ಚುನಾವಣಾ ಆಯೋಗ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಷಿಯಲ್‌ ಮಿಡಿಯಾಗಳ ಬಳಕೆ ಕುರಿತು ಹಲವು ಕಠಿಣ ನಿರ್ಬಂಧಗಳನ್ನು ಹೇರಿದೆ.

 • ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಸೋಷಿಯಲ್‌ ಮಿಡಿಯಾಗಳಲ್ಲಿ ಅವರು ಹೊಂದಿರುವ ಖಾತೆಗಳ ವಿವರ ಸಲ್ಲಿಸುವುದನ್ನು ಆಯೋಗ ಕಡ್ಡಾಯಗೊಳಿಸಿದೆ. ಒಂದೊಮ್ಮೆ ಈ ವಿವರ ಸಲ್ಲಿಸದ ನಾಮಪತ್ರಗಳು ತಿರಸ್ಕೃತಗೊಳ್ಳಲಿವೆ ಎಂದು ಎಚ್ಚರಿಸಿದೆ.
 • ಸೋಷಿಯಲ್‌ ಮಿಡಿಯಾಗಳಲ್ಲಿ ಪ್ರಸಾರಗೊಳ್ಳುವ/ಪ್ರಕಟಗೊಳ್ಳುವ ‘ರಾಜಕೀಯ ಜಾಹೀರಾತು’ಗಳ ಪೂರ್ಣ ಪ್ರಮಾಣೀಕರಣ ಪಡೆಯುವುದು ಅಗತ್ಯವಾಗಲಿದೆ.
 • ವಿವಿಧ ಪಕ್ಷಗಳಿಂದ ಹರಿದು ಬರಲಿರುವ ಇಂತಹ ‘ರಾಜಕೀಯ ಜಾಹೀರಾತು’ಗಳ ಮೇಲೆ ಸದಾ ಒಂದು ಕಣ್ಣಿಟ್ಟು, ಅವುಗಳನ್ನು ಪರಿಶೀಲಿಸುವಂತೆ ಆಯೋಗವು ಗೂಗಲ್‌, ಫೇಸ್‌ಬುಕ್‌, ಟ್ವಿಟರ್‌ ಮತ್ತು ಯುಟ್ಯೂಬ್‌ಗಳಿಗೆ ಸೂಚಿಸಿದೆ. ಇಂತಹ ಆ್ಯಡ್‌ಗಳ ಕುರಿತು ಕುಂದು-ಕೊರತೆಗಳ ಪರಿಶೀಲನೆಗೆಂದೇ ವಿಶೇಷ ಅಧಿಕಾರಿಯನ್ನು ನೇಮಿಸಲಾಗಿದೆ.
 • ವಿಶೇಷ ಸಮಿತಿ ರಚನೆ: ಚುನಾವಣಾ ಆಯೋಗವು ‘ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿ’ಯನ್ನು (ಎಂಸಿಎಂಸಿ) ರಚಿಸಿದ್ದು, ಗೂಗಲ್‌, ಫೇಸ್‌ಬುಕ್‌, ಟ್ವಿಟರ್‌ ಮತ್ತು ಯುಟ್ಯೂಬ್‌ಗಳು ರಾಜಕೀಯ ಜಾಹಿರಾತು ಪ್ರಕಟಿಸುವ ಮುನ್ನ, ಈ ಸಮಿತಿಯಿಂದ ಪ್ರಮಾಣೀಕರಣ ಪಡೆಯಬೇಕು.
 • ರಾಜ್ಯ, ಜಿಲ್ಲಾ ಮಟ್ಟದಲ್ಲೂ ಸದಸ್ಯರು: ಸಾಮಾಜಿಕ ಜಾಲತಾಣದಲ್ಲಿ ಪಳಗಿರುವ ತಜ್ಞರು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಈ ಸಮಿತಿಯ ಸದಸ್ಯರಾಗಿರುತ್ತರೆ. ಎಲ್ಲಾ ರಾಜ್ಯಗಳೂ ಮತ್ತು ಜಿಲ್ಲೆಗಳಲ್ಲಿ ನಿಯೋಜನೆಗೊಂಡಿರುವ ಈ ಸಮಿತಿಯ ಸದಸ್ಯರು ಕಾಸಿಗಾಗಿ ಸುದ್ದಿ ಮತ್ತು ಇತರೆ ಮಾಧ್ಯಮ ನೀತಿಗಳ ಉಲ್ಲಂಘನೆ ಪ್ರಕರಣಗಳನ್ನು ನೋಡಿಕೊಳ್ಳಲಿದ್ದಾರೆ.
 • ಐಟಿ ಬಳಕೆ: ಚುನಾವಣೆ ವೇಳೆ ಅಕ್ರಮಗಳನ್ನು ತಡೆಯಲು ಮಾಹಿತಿ ತಂತ್ರಜ್ಞಾನ ಇಲಾಖೆಯ ಪೂರ್ಣ ನೆರವು ಪಡೆಯಲಾಗುವುದು. ದ್ವೇಷ ಭಾಷಣವೂ ಸೇರಿದಂತೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವಂತಹ ವಸ್ತು-ವಿಷಯಗಳು ಪ್ರಸಾರಗೊಳ್ಳದಂತೆ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಲಿಖಿತ ಆಶ್ವಾಸನೆ ಕೊಟ್ಟಿವೆ ಎಂದರು.
 • ಇಂಟರ್‌ನೆಟ್‌ ಮತ್ತು ಮೊಬೈಲ್‌ ಅಸೋಸಿಯೇಷನ್‌ ನೆರವು: ಸಾಮಾಜಿಕ ಜಾಲತಾಣಗಳ ಹೊರತಾಗಿ ಇತರೆ ವೆಬ್‌ಸೈಟ್‌ ಅಥವಾ ಆನ್‌ಲೈನ್‌ ವೇದಿಕೆಗಳ ದುರ್ಬಳಕೆಯನ್ನು ತಡೆಯಲು ಇಂಟರ್‌ನೆಟ್‌ ಮತ್ತು ಮೊಬೈಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಸಂಘಟನೆಯು ವಿಶೇಷ ನೀತಿಗಳನ್ನು ರೂಪಿಸುತ್ತಿದೆ. ಚುನಾವಣಾ ಆಯೋಗದ ಜತೆ ಸಮಾಲೋಜನೆಯೊಂದಿಗೆ ಈ ನಿಯಮಗಳನ್ನು ರೂಪಿಸಲಾಗುತ್ತಿದೆ. ಇದರಿಂದ ಸಾಮಾಜಿಕ ಜಾಲತಾಣಗಳ ಹೊರತಾಗಿ ಇತರೆ ವೆಬ್‌ತಾಣ ಅಥವಾ ವೇದಿಕೆಗಳ ಬಳಕೆ ಮೇಲೂ ನಿರ್ಬಂಧ ಬೀಳಲಿದೆ.
 • ಸಿ-ವಿಜಿಲ್‌ ಆ್ಯಪ್‌: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ/ಅಕ್ರಮಗಳನ್ನು ನಡೆಸುವ ಪ್ರಕರಣಗಳು ಬೆಳಕಿಗೆ ಬಂದಲ್ಲಿ ಜನರೇ ಸಿ-ವಿಜಿಲ್‌ ಆ್ಯಪ್‌ ಮೂಲಕ ಆಯೋಗದ ಗಮನಕ್ಕೆ ತರಬಹುದಾಗಿದೆ. ಇದರಿಂದ ಅಕ್ರಮಗಳನ್ನು ತಡೆಯುದು ಸುಲಭವಾಗಲಿದೆ

Cvigil ಅಪ್ಲಿಕೇಶನ್ ಬಗ್ಗೆ

 • ಚುನಾವಣೆ ಆಯೋಗದ ನೀತಿ ಸಂಹಿತೆಯ ಯಾವುದೇ ಉಲ್ಲಂಘನೆಯನ್ನು ವರದಿ ಮಾಡಲು ನಾಗರಿಕರಿಗೆ ಜುಲೈ 3, 2018 ರಂದು ಚುನಾವಣಾ ಆಯುಕ್ತರು ಸುನಿಲ್ ಅರೋರಾ ಮತ್ತು ಅಶೋಕ್ ಲವಾಸಾ ಅವರೊಂದಿಗೆ ಮುಖ್ಯ ಚುನಾವಣಾ ಆಯುಕ್ತ ಒ.ಪಿ ರಾವತ್ ಅವರು ಆಂಡ್ರಾಯ್ಡ್ ಆಧಾರಿತ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು.
 • ಅಧಿಕಾರಿಗಳು ದುಷ್ಪರಿಣಾಮದ ಪುರಾವೆಗಳನ್ನು ಹಂಚಿಕೊಳ್ಳಲು ಮತದಾರರಿಗೆ ಸಹಾಯ ಮಾಡುತ್ತದೆ.

ಸಿವಿಜಿಲ್ ಅಪ್ಲಿಕೇಶನ್ನ ಮುಖ್ಯಾಂಶಗಳು

 • ಚುನಾವಣೆ ಘೋಷಣೆಗೊಳ್ಳುವಲ್ಲಿ ಮಾತ್ರ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ.
 • ಚುನಾವಣಾ ಘೋಷಣೆಯ ದಿನಾಂಕದಿಂದ ಜಾರಿಗೆ ಬರುವ ಮತ್ತು ಚುನಾವಣೆ ನಂತರ ಒಂದು ದಿನದ ತನಕ ನಡೆಯುವ ಮಾದರಿ ಮಾದರಿ ಸಂಹಿತೆ (ಎಮ್ಸಿಸಿ) ಉಲ್ಲಂಘನೆಯನ್ನು ವರದಿ ಮಾಡುವಂತೆ ಚುನಾವಣಾ-ವ್ಯಾಪ್ತಿಯ ರಾಜ್ಯದಲ್ಲಿ ಯಾರಾದರೂ ಸಿವಿಐಜಿಐಎಲ್ ಅನುಮತಿಸುತ್ತದೆ.
 • ಕಳುಹಿಸುವವರ ಗುರುತನ್ನು ಬಹಿರಂಗಪಡಿಸದೆ ಭೌಗೋಳಿಕ-ಟ್ಯಾಗ್ ಮಾಡಲಾದ ಛಾಯಾಗ್ರಹಣ ಮತ್ತು ವೀಡಿಯೋ ಸಾಕ್ಷ್ಯಗಳನ್ನು ಹಂಚಿಕೊಳ್ಳಲು ಮೊಬೈಲ್ ಅಪ್ಲಿಕೇಶನ್ ಸುಲಭವಾಗುತ್ತದೆ.
 • ಜಾಗೃತ ನಾಗರಿಕನು ಚಿತ್ರವನ್ನು ಕ್ಲಿಕ್ ಮಾಡಿ ಅಥವಾ ಮಾದರಿ ಕೋಡ್ನ ಉಲ್ಲಂಘನೆಗಳ ದೃಶ್ಯದ ಎರಡು ನಿಮಿಷಗಳ ಅವಧಿಯ ವೀಡಿಯೊವನ್ನು ದಾಖಲಿಸಬೇಕಾಗುತ್ತದೆ. ಫೋಟೋ ಅಥವಾ ವೀಡಿಯೊವನ್ನು ನಂತರ ಅಪ್ಲಿಕೇಶನ್ನಲ್ಲಿ ಅಪ್ಲೋಡ್ ಮಾಡಬೇಕು.
 • ಮತದಾರರು ಪುರಾವೆಗಳನ್ನು ಹಂಚಿಕೊಂಡ ನಂತರ, ಅಪ್ಲೋಡ್ ಮಾಡಲಾದ ಮಾಹಿತಿಯನ್ನು ನಿಯಂತ್ರಣ ಕೋಣೆಗೆ ವರ್ಗಾಯಿಸಲಾಗುವುದು, ಅಲ್ಲಿ ಒಂದು ಜಾಗತಿಕ ಮಾಹಿತಿ ವ್ಯವಸ್ಥೆಯಲ್ಲಿ ನಕ್ಷೆ ಮಾಡಲಾದ ಕ್ಷೇತ್ರ ಘಟಕಗಳು ಅಥವಾ ಫ್ಲೈಯಿಂಗ್ ಸ್ಕ್ವಾಡ್ಗಳನ್ನು ತಕ್ಷಣವೇ ಎಚ್ಚರಿಸಲಾಗುತ್ತದೆ.
 • ಪ್ರತಿಯೊಂದು ಕ್ಷೇತ್ರದಲ್ಲಿ ಘಟಕವು ‘CVIGIL ಡಿಸ್ಪ್ಯಾಚರ್’ ​​ಎಂಬ GIS- ಆಧಾರಿತ ಮೊಬೈಲ್ ಅಪ್ಲಿಕೇಶನ್ ಅನ್ನು ಹೊಂದಿರುತ್ತದೆ, ಇದು ನ್ಯಾವಿಗೇಷನ್ ತಂತ್ರಜ್ಞಾನದ ಮೂಲಕ ನೇರವಾಗಿ ಸ್ಥಳವನ್ನು ತಲುಪಲು ಮತ್ತು ಕ್ರಮವನ್ನು ತೆಗೆದುಕೊಳ್ಳಲು ಘಟಕವನ್ನು ಅನುಮತಿಸುತ್ತದೆ.
 • ದೂರುದಾರನಿಗೆ ಅನಾಮಧೇಯತೆಯನ್ನು ಆಯ್ಕೆ ಮಾಡದಿದ್ದಲ್ಲಿ, ಒಬ್ಬ ವ್ಯಕ್ತಿ 100 ನಿಮಿಷಗಳಲ್ಲಿ ಕ್ರಮ ತೆಗೆದುಕೊಳ್ಳುವ ವರದಿಯನ್ನು ಪಡೆಯುತ್ತಾನೆ.
 • ಅಪ್ಲಿಕೇಶನ್ ದುರ್ಬಳಕೆಯನ್ನು ತಡೆಯಲು ಅಂತರ್ಗತ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ನೀತಿ ಉಲ್ಲಂಘನೆಗಳ ಮಾದರಿ ಕೋಡ್ ಬಗ್ಗೆ ಮಾತ್ರ ದೂರುಗಳನ್ನು ಸ್ವೀಕರಿಸುತ್ತದೆ. ಚಿತ್ರ ಅಥವಾ ವೀಡಿಯೊವನ್ನು ಕ್ಲಿಕ್ ಮಾಡಿದ ನಂತರ ಬಳಕೆದಾರರು ಘಟನೆಯನ್ನು ವರದಿ ಮಾಡಲು 5 ನಿಮಿಷಗಳನ್ನು ಪಡೆಯುತ್ತಾರೆ.
 • ಯಾವುದೇ ದುರುಪಯೋಗವನ್ನು ತಡೆಗಟ್ಟಲು, ಪೂರ್ವ-ದಾಖಲಿತ ಅಥವಾ ಹಳೆಯ ಚಿತ್ರಗಳನ್ನು ಮತ್ತು ವೀಡಿಯೊಗಳ ಅಪ್ಲೋಡ್ ಮಾಡುವುದನ್ನು ಅಪ್ಲಿಕೇಶನ್ ಅನುಮತಿಸುವುದಿಲ್ಲ.
 • ಚುನಾವಣೆಗಿಂತ ಮುಂಚಿತವಾಗಿ ವರದಿ ಮಾಡಲಾದ ದುಷ್ಕೃತ್ಯಗಳ ವಿರುದ್ಧ ಪರಿಣಾಮಕಾರಿ ಕ್ರಮಕ್ಕಾಗಿ ಅಪ್ಲಿಕೇಶನ್ಗಳ ಅತ್ಯುತ್ತಮ ನಿರ್ವಹಣೆಗಾಗಿ ECI ಯ ಅಧಿಕಾರಿಗಳನ್ನು ತರಬೇತಿ ನೀಡಲಾಗುತ್ತದೆ.
 • ಅಪ್ಲಿಕೇಶನ್ಗೆ ಕ್ಯಾಮರಾ, ಉತ್ತಮ ಅಂತರ್ಜಾಲ ಸಂಪರ್ಕ ಮತ್ತು ಜಿಪಿಎಸ್ ಪ್ರವೇಶವನ್ನು ಹೊಂದಿದ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಅಗತ್ಯವಿದೆ.
 • 2018 ರಲ್ಲಿ ಛತ್ತೀಸ್ಗಢ, ಮಧ್ಯಪ್ರದೇಶ, ಮಿಜೋರಾಂ ಮತ್ತು ರಾಜಸ್ತಾನದ ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಸಾರ್ವತ್ರಿಕ ಬಳಕೆಗೆ ಈ ಅಪ್ಲಿಕೇಶನ್ ಲಭ್ಯವಾಗಲಿದೆ.

ಅಯೋಧ್ಯೆ: ಸುಪ್ರೀಂ ಕೋರ್ಟ್‌ನಿಂದ ತ್ರಿಸದಸ್ಯ ಸಂಧಾನ ಸಮಿತಿ ನೇಮಕ

2.

ಸುದ್ಧಿಯಲ್ಲಿ ಏಕಿದೆ ?ಅಯೋಧ್ಯೆಯ ರಾಮಜನ್ಮಭೂಮಿ ಭೂ ವಿವಾದ ಬಗೆಹರಿಸಲು ಮಧ್ಯಸ್ಥಿಕೆಯೇ ಉತ್ತಮ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

 • ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ನ್ಯಾಯಾಧೀಶರ ಸಂವಿಧಾನ ಪೀಠ ಈ ತೀರ್ಪು ನೀಡಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ವಿವಾದ ಬಗೆಹರಿಸಲು ಮೂವರು ಸದಸ್ಯರ ಸಂಧಾನಕಾರರ ಸಮಿತಿಯನ್ನು ನೇಮಿಸಿದೆ.
 • ಆರ್ಟ್‌ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್‌ ಗುರೂಜಿ, ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಕಲೀಫುಲ್ಲಾ, ವಕೀಲ ಶ್ರೀರಾಮ್ ಪಂಚು ಈ ಸಮಿತಿಯ ಸದಸ್ಯರಾಗಿದ್ದಾರೆ.
 • ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಲು ಕಾನೂನಿನ ಯಾವುದೇ ತೊಡಕಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ತಿಳಿಸಿದರು. ಜಸ್ಟಿಸ್‌ ಎಸ್‌.ಎ ಬಾಬ್ಡೆ, ಡಿ.ವೈ ಚಂದ್ರಚೂಡ್‌, ಅಶೋಕ್ ಭೂಷಣ್‌, ಎಸ್‌. ಅಬ್ದುಲ್ ನಜೀರ್‌ ಸಂವಿಧಾನದ ಪೀಠದ ಸದಸ್ಯರಾಗಿದ್ದಾರೆ

ಸಂಧಾನಕಾರರ ಆಯ್ಕೆ ಹೇಗೆ?

 • ಸಂಧಾನಕಾರರನ್ನು ಆಯ್ಕೆ ಮಾಡಿದ್ದು ಸುಪ್ರೀಂಕೋರ್ಟ್‌ ಆದರೂ ಹೆಸರುಗಳನ್ನು ಸೂಚಿಸಿದ್ದು ಜಾಗದ ವಿವಾದದ ದಾವಾದಾರರು. ಇಸ್ಲಾಮಿಕ್‌ ಸುನ್ನಿ ವಕ್ಫ್ ಮಂಡಳಿ ಮತ್ತು ನಿರ್ಮೋಹಿ ಅಖಾಡ, ಉತ್ತರ ಪ್ರದೇಶ ಸರಕಾರ ಸಂಧಾನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಲ್ಲದೆ ಸಂಧಾನಕಾರರ ಹೆಸರು ಸೂಚಿಸಿದ್ದವು.
 • ಹಿಂದೂ ಮಹಾಸಭಾ ಮತ್ತು ಇತರ ಹಿಂದೂ ಸಂಘಟನೆಗಳು ಸಂಧಾನಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಹೆಸರು ಸೂಚಿಸಿದ್ದವು. ಅವರು ಸೂಚಿಸಿದ ಹೆಸರುಗಳಲ್ಲಿ ಆಯ್ದು ಸಂಧಾನಕಾರರ ನೇಮಕ ಮಾಡಲಾಗಿದೆ.

ಏನಿದು ಮಧ್ಯಸ್ಥಿಕೆ ಪ್ರಕ್ರಿಯೆ?

 • ಕೋರ್ಟ್​ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿನ ವಾದಿ, ಪ್ರತಿವಾದಿಗಳ ಮಧ್ಯೆ ರಾಜಿ ಸಂಧಾನ
 • ಸಂಧಾನ ಪ್ರಕ್ರಿಯೆ ಸಾಧ್ಯವಿದ್ದಲ್ಲಿ ನ್ಯಾಯಾಲಯದಿಂದ ಮಧ್ಯಸ್ಥಿಕೆ ಕೇಂದ್ರಕ್ಕೆ ಅರ್ಜಿ ವರ್ಗಾವಣೆ
 • ಉಭಯ ಪಕ್ಷಗಳ ನಡುವೆ ಸಂಧಾನ ಮಾಡಿಸಿ ಪರಿಹಾರ ಸೂತ್ರ ಮುಂದಿಡಬಹುದು
 • ಮಧ್ಯಸ್ಥಿಕೆ ಕಾಯ್ದೆ ಪ್ರಕಾರ ಸಮಿತಿಗೆ 60 ದಿನಗಳ ಅವಕಾಶ
 • ಸಂಧಾನ ವಿಫಲವಾದರೆ ಅರ್ಜಿ ಮತ್ತೆ ಕೋರ್ಟ್​ಗೆ
 • ಯಶಸ್ವಿಯಾದರೆ ಉಭಯ ಪಕ್ಷಗಳು ಒಪ್ಪಂದ ಮಾಡಿಕೊಂಡು, ಕೋರ್ಟ್ ನಲ್ಲಿ ಅಂತಿಮ ಮುದ್ರೆ

ಫೈಜಾಬಾದ್‌ ಸಂಧಾನ ಕೇಂದ್ರ

 • ಅಯೋಧ್ಯೆಯಿಂದ 7 ಕಿ.ಮೀ. ದೂರದ ಫೈಜಾಬಾದ್‌ನಲ್ಲಿ ಸಂಧಾನ ಪ್ರಕ್ರಿಯೆ. ಎಲ್ಲ ಮೂಲ ಸೌಲಭ್ಯ ಒದಗಿಸಲು ಉತ್ತರ ಪ್ರದೇಶ ಸರಕಾರ ಸಮ್ಮತಿ.
 • ಗುಪ್ತವಾಗಿ ಸಂಧಾನ ನಡೆಯಬೇಕು. ಪ್ರಕ್ರಿಯೆಯ ಯಾವುದೇ ವಿವರವನ್ನು ಮಾಧ್ಯಮಗಳಿಗೆ ನೀಡಬಾರದು.
 • ಸಂಧಾನ ಸಮಿತಿ ಮೇ 15ರಂದು ನೀಡುವ ವರದಿ ಆಧರಿಸಿ ಸುಪ್ರೀಂಕೋರ್ಟ್‌ ಮುಂದಿನ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಲಿದೆ.
 • ಸಂಧಾನ ಸಮಿತಿ ಬಯಸಿದರೆ ದಾವಾದಾರರು ಸೂಚಿಸಿರುವ ಹೆಸರುಗಳಲ್ಲಿ ಇತರರನ್ನೂ ಸೇರಿಸಿಕೊಳ್ಳಲು ಅವಕಾಶವಿದೆ.
 • ಇನ್ನು ಒಂದು ವಾರದೊಳಗೆ ಸಂಧಾನ ಪ್ರಕ್ರಿಯೆ ಆರಂಭಿಸಿ 8 ವಾರಗಳಲ್ಲಿ ಪೂರ್ಣಗೊಳಿಸುವಂತೆ ಕೋರ್ಟ್ ಆದೇಶ ನೀಡಿದೆ.
 • ಇದೇ ವೇಳೆ, ಸಂಧಾನ ಪ್ರಕ್ರಿಯೆಯ ಮಾತುಕತೆಗಳನ್ನು ಮಾಧ್ಯಮಗಳು ವರದಿ ಮಾಡುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.

ಕಾಲಮಿತಿಯಲ್ಲಿ ಮುಗಿಸುವುದು ಸಾಧ್ಯವೇ?

 • ಮಧ್ಯಸ್ಥಿಕೆ ನಿಯಮದ ಪ್ರಕಾರ 8 ವಾರ ಅಥವಾ 60 ದಿನಗಳಲ್ಲಿ ಪ್ರಕ್ರಿಯೆ ಮುಗಿಸಬೇಕು. ಒಂದೊಮ್ಮೆ ಸಮಿತಿಯ ಅವಧಿ ಹೆಚ್ಚಿಸಬೇಕಿದ್ದರೆ ಅದಕ್ಕೆ ಕೋರ್ಟ್ ಅನುಮತಿ ಅಗತ್ಯ. ಆದರೆ ಸುಪ್ರೀಂಕೋರ್ಟ್ ನಿಗದಿಪಡಿಸಿರುವ 60 ದಿನಗಳಲ್ಲಿ ಸಂಧಾನದ ನಿಟ್ಟಿನಲ್ಲಿ ಸಣ್ಣಪುಟ್ಟ ಯಶಸ್ಸು ಆಗಿದ್ದರೆ ಅವಧಿ ವಿಸ್ತರಣೆ ಕೋರಲು ಅವಕಾಶವಿದೆ. ಆಗ ಮತ್ತೆ 60 ದಿನಗಳ ಕಾಲ ಅವಕಾಶ ನೀಡಲಾಗುತ್ತದೆ.

ವಿಫಲವಾದರೆ ಮುಂದಿನ ದಾರಿ ಏನು?

 • ಯಾವುದೇ ಸಂಧಾನ ಪ್ರಕ್ರಿಯೆಯಲ್ಲಿ ಅರ್ಜಿದಾರರು ಅಥವಾ ಪ್ರತಿವಾದಿಗಳ ಮೇಲೆ ಸಂಧಾನಕಾರರು ಒತ್ತಡ ಹೇರಲು ಸಾಧ್ಯವಿಲ್ಲ. ಹಾಗೆಯೇ ಕಾನೂನು ಪ್ರಕಾರ ಏಕಪಕ್ಷೀಯ ಆದೇಶ ನೀಡಲೂ ಸಾಧ್ಯವಿಲ್ಲ. ಕೋರ್ಟ್​ಗೆ ಇರುವ ಕಾನೂನು ಸವಲತ್ತು ಈ ಮಧ್ಯಸ್ಥಿಕೆ ಕೇಂದ್ರಕ್ಕೆ ಇರುವುದಿಲ್ಲ.
 • ಉಭಯ ಪಕ್ಷಗಳಿಗೆ ಮನವರಿಕೆ ಮಾಡಿ ಸಂಧಾನ ಪ್ರಕ್ರಿಯೆ ನಡೆಸಬಹುದು. ಹೀಗಾಗಿ ಸಂಧಾನ ಪ್ರಕ್ರಿಯೆ ವಿಫಲವಾದರೆ ಅರ್ಜಿ ಮತ್ತೆ ನ್ಯಾಯಾಲಯಕ್ಕೆ ಬರಲಿದೆ.

ಯಶಸ್ವಿಯಾದರೆ ಏನು?

 • ಉಭಯ ಪಕ್ಷಗಳು ಸಂಧಾನ ಪ್ರಕ್ರಿಯೆಗೆ ಒಪ್ಪಿಕೊಂಡರೆ ಸಮಿತಿಯೇ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಿದೆ. ಇದನ್ನು ಆಧರಿಸಿ ಕೋರ್ಟ್ ಅಂತಿಮ ಆದೇಶ ನೀಡುತ್ತದೆ. ಸಂಧಾನ ಪ್ರಕ್ರಿಯೆಯ ಫಲಿತಾಂಶದ ವಿರುದ್ಧ ಮೇಲ್ಮನವಿ ಅಥವಾ ಕಾನೂನು ಹೋರಾಟ ನಡೆಸಲು ಅವಕಾಶವಿರುವುದಿಲ್ಲ.

ಅಲಹಾಬಾದ್‌ ಹೈಕೋರ್ಟ್‌ ತೀರ್ಪೇನು?

 • 2010ರ ಸೆಪ್ಟೆಂಬರ್‌ 30ರಂದು ಅಲಹಾಬಾದ್‌ ಹೈಕೋರ್ಟ್‌ ವಿವಾದಿತ 77 ಎಕರೆ ಭೂಮಿಯನ್ನು ಮೂರು ಭಾಗಗಳಾಗಿ ಮಾಡಿ ಸಮಾನವಾಗಿ ಹಂಚಬೇಕು ಎಂದು ತಿಳಿಸಿತ್ತು.
 • ಮೊದಲ ಭಾಗ: ಹಿಂದೂ ಮಹಾಸಭಾ ಪ್ರತಿನಿಧಿಸುವ ರಾಮಲಲ್ಲಾಗೆ. ಇಲ್ಲಿ ಮಂದಿರ ನಿರ್ಮಿಸಬಹುದು.
 • 2ನೇ ಭಾಗ: ಹಿಂದೂ ಧಾರ್ಮಿಕ ಸಂಘಟನೆ ನಿರ್ಮೋಹಿ ಅಖಾಡಕ್ಕೆ
 • 3ನೇ ಭಾಗ: ಇಸ್ಲಾಮಿಕ್‌ ಸುನ್ನಿ ವಕ್ಫ್ ಮಂಡಳಿಗೆ

ಯುವಜನತೆಗಾಗಿ ಸೈಬರ್ ಕೈಪಿಡಿ

3.

ಸುದ್ಧಿಯಲ್ಲಿ ಏಕಿದೆ ?ಜಾಗತಿಕ ಪೀಡುಗಾಗಿರುವ ಸೈಬರ್ ಅಪರಾಧಗಳ ಕುರಿತು ವಿದ್ಯಾರ್ಥಿ ಜೀವನದಿಂದಲೇ ಜಾಗೃತಿ ಮೂಡಿಸಲು ರಾಜ್ಯ ಪೊಲೀಸ್ ಇಲಾಖೆ ‘ಸೈಬರ್ ಸುರಕ್ಷತಾ ಕೈಪಿಡಿ’ ಸಿದ್ಧಪಡಿಸಿದೆ.

 • ರಾಜ್ಯ ಪೊಲೀಸ್ ಸಂಶೋಧನಾ ಘಟಕದಿಂದ ಸುರಕ್ಷತಾ ಕೈಪಿಡಿ ತಯಾರಿಸಲಾಗಿದೆ. ಮಕ್ಕಳು ಮತ್ತು ಯುವಕ-ಯುವತಿಯರ ಭವಿಷ್ಯದ ಮೇಲೆ ಪರಿಣಾಮ ಬೀರುವ ಆನ್​ಲೈನ್ ಬೆದರಿಕೆ, ಅಪರಾಧ, ಸೈಬರ್ ಪೀಡನೆ, ಆನ್​ಲೈನ್ ಆಟಗಳು, ಇಮೇಲ್ ವಂಚನೆ, ಡೇಟಾ ಹ್ಯಾಕ್, ಸಾಮಾಜಿಕ ಜಾಲತಾಣಗಳ ಖಾತೆಗಳ ಸುರಕ್ಷತೆ ಕುರಿತು ಮಾಹಿತಿ ನೀಡಲಾಗಿದೆ.

ಏಕೆ  ಈ ಕೈಪಿಡಿ ?

 • ಮಾಹಿತಿ ಮತ್ತು ತಂತ್ರಜ್ಞಾನ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಸಂವಹನ, ಸ್ನೇಹಿತರ ಹುಡುಕಾಟ, ವ್ಯಾಪಾರ ವಹಿವಾಟು, ಆಟ ಇತ್ಯಾದಿಗಳಿಗೆ ಐಟಿ-ಬಿಟಿಯನ್ನೇ ಜೋತು ಬೀಳಲಾಗಿದೆ.
 • ಟ್ವಿಟರ್, ಫೇಸ್​ಬುಕ್, ಇನ್​ಸ್ಟಾಗ್ರಾಮ್ಲ್ಲಿ ಮಕ್ಕಳ ಮೇಲೆ ದಾಳಿ ನಡೆಸಲಾಗುತ್ತಿದೆ. ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ವರದಿ ಪ್ರಕಾರ 2017ರಲ್ಲಿ ದೇಶದಲ್ಲಿ 53 ಸಾವಿರ ಸೈಬರ್ ಅಪರಾಧಗಳು ಜರುಗಿವೆ.
 • ಹ್ಯಾಕರ್​ಗಳು ಮಾಲ್​ವೇರ್, ವೈರಸ್ ಅಥವಾ ಟ್ರೋಜರ್​ಗಳ ಮೂಲಕ ಕಂಪ್ಯೂಟರ್, ಮೊಬೈಲ್​ಗಳ ಮೇಲೆ ದಾಳಿ ನಡೆಸಿ ವೈಯಕ್ತಿಕ ಮತ್ತು ರಹಸ್ಯ ಮಾಹಿತಿ ಕದಿಯುತ್ತಾರೆ. ಇ-ಮೇಲ್ ಮೋಸ, ವೈಸರ್ ಇರುವ ಅಪ್ಲಿಕೇಷನ್ ಕಳುಹಿಸುವುದು, ವೈಯಕ್ತಿಕ ಮಾಹಿತಿ ಕದ್ದು ಕಿರುಕುಳ ನೀಡುವುದು, ಡೆಡ್ಲಿ ಗೇಮ್ ಮೂಲಕ ಯುವ ಸಮುದಾಯದ ಜೀವಕ್ಕೆ ಆಪತ್ತು ಇರುವ ಕೆಲಸ ಮಾಡುತ್ತಾರೆ.
 • ಆನ್​ಲೈನ್ ಆಟಗಳ ಗೀಳಿಗೆ ಒಳಗಾದ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆನ್​ಲೈನ್ ಆಟಗಳು ಇತರ ರನ್ನು ಪೀಡಿಸುವ ಆಟಗಳಾಗಿವೆ. ಸೈಬರ್ ಖದೀಮರು, ಚಿಕ್ಕ ಮಕ್ಕಳಂತೆ ವರ್ತಿಸಿ ಸಲಹೆ ಸೂಚನೆ ಕೊಟ್ಟು ನಂಬಿಕೆಗಳಿಸಿ ವೈಯಕ್ತಿಕ ಮಾಹಿತಿ ಪಡೆದು ಬ್ಯಾಂಕ್ ವಿವರ ಸಂಗ್ರಹಿಸಿ ಕೋಟ್ಯಂತರ ರೂ. ಮೋಸ ಮಾಡುತ್ತಾರೆ.

ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ವಿತರಣೆ

 • ಅಪರಾಧಿಗಳನ್ನು ಪತ್ತೆಹಚ್ಚುವ ಮೊದಲು ಅಪರಾಧ ನಡೆಯದಂತೆ ಅರಿವು ಮೂಡಿಸುವುದು ಒಳಿತು. ಅದಕ್ಕಾಗಿ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸೈಬರ್ ಸುರಕ್ಷತಾ ಕೈಪಿಡಿ ತಯಾರಿಸಿದ್ದು, ಪೊಲೀಸ್ ಠಾಣೆಗಳಿಗೆ ಮತ್ತು ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಅಪರಾಧಗಳ ಪತ್ತೆ ಹೇಗೆ?

 • ವೈಯಕ್ತಿಕ ಮಾಹಿತಿ, ಅಶ್ಲೀಲ ಚಿತ್ರ ಪಡೆದು ಪೀಡಿಸುವ ಸೈಬರ್ ಅಪರಾಧಿಗಳನ್ನು ಪತ್ತೆಹಚ್ಚಬಹುದು. ಮೊದಲು ಕಂಪ್ಯೂಟರ್ ಅಥವಾ ಮೊಬೈಲ್​ನಲ್ಲಿ ಸ್ಕ್ರೀನ್​ಶಾಟ್ ತೆಗೆದುಕೊಳ್ಳಬೇಕು. ಆರೋಪಿಗಳು ಸಾಮಾನ್ಯವಾಗಿ ಸ್ನೇಹಿತರು, ಪರಿಚಿತರು ಹೆಚ್ಚಾಗಿ ಇರುತ್ತಾರೆ.
 • ಪಾಲಕರು, ಶಿಕ್ಷಕರು, ಹಿರಿಯರ ಸಹಾಯದಿಂದ ಪತ್ತೆಹಚ್ಚಿ ಸ್ಥಳೀಯ ಠಾಣೆಗೆ ದೂರು ನೀಡಿ. ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಅನ್ವಯ ಎಲೆಕ್ಟ್ರಾನಿಕ್ ಯಂತ್ರಗಳಲ್ಲಿ ವ್ಯಕ್ತಿಯ ಅಶ್ಲೀಲ, ಲೈಂಗಿಕ ಚಿತ್ರ, ವಿಡಿಯೋ ಮತ್ತು ಮಕ್ಕಳ ಸಂಬಂಧ ಅಶ್ಲೀಲ ಚಿತ್ರಗಳನ್ನು ಸಂಗ್ರಹಿಸುವುದು, ಹಂಚಿಕೊಳ್ಳುವುದು ಶಿಕ್ಷಾರ್ಹವಾಗಿದೆ.

ಇ-ಬಸ್ ಖರೀದಿಗೆ ನಿರ್ಧಾರ

4.

ಸುದ್ಧಿಯಲ್ಲಿ ಏಕಿದೆ ?ರಾಜಧಾನಿಯಿಂದ ಮೈಸೂರು, ಕೋಲಾರ ಹಾಗೂ ತುಮಕೂರು ನಡುವೆ ಎಲೆಕ್ಟ್ರಿಕ್ ಬಸ್ (ಇ-ಬಸ್) ಕಾರ್ಯಾಚರಣೆಗೆ ಕೆಎಸ್​ಆರ್​ಟಿಸಿ ರೂಪುರೇಷೆ ಸಿದ್ಧಪಡಿಸಿದ್ದು, ಸಬ್ಸಿಡಿ ಕೋರಿ ಕೇಂದ್ರಕ್ಕೆ ಶೀಘ್ರ ಹೊಸ ಪ್ರಸ್ತಾವನೆ ಸಲ್ಲಿಸಲಿದೆ.

 • ಒಮ್ಮೆ ಚಾರ್ಜ್ ಮಾಡಿದರೆ ಅಂತರ್ ನಗರ ಸಂಚರಿಸಲು ಸಾಮರ್ಥ್ಯ ಹೊಂದಿದ (250-300 ಕಿ.ಮೀ.) ಬಸ್ ಖರೀದಿಗೆ ಕೆಎಸ್​ಆರ್​ಟಿಸಿ ಆಸಕ್ತಿ ಹೊಂದಿದೆ.
 • ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ 2015 ಏಪ್ರಿಲ್​ನಲ್ಲಿ ಫಾಸ್ಟರ್ ಅಡಾಪ್ಷನ್ ಆಂಡ್ ಮಾನ್ಯುಫಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ ಇನ್ ಇಂಡಿಯಾ (ಫೇಮ್ ಯೋಜನೆ ಮೊದಲ ಹಂತಕ್ಕೆ ಚಾಲನೆ ನೀಡಿತ್ತು.
 • ಕೇಂದ್ರ ಸಚಿವ ಸಂಪುಟ ವಾರದ ಹಿಂದಷ್ಟೇ ಫೇಮ್ 2ನೇ ಹಂತಕ್ಕೆ (2019-2022)ಒಪ್ಪಿಗೆ ನೀಡಿದ್ದು, 10 ಸಾವಿರ ಕೋಟಿ ರೂ.ಮೀಸಲಿರಿಸಲಾಗಿದೆ. 2019 ಏ.1ರಿಂದ ಜಾರಿಯಾಗುವ ಫೇಮ್ 2 ಯೋಜನೆಯಡಿ 7 ಸಾವಿರ ಇ-ಬಸ್​ಗೆ ಸಬ್ಸಿಡಿ ನೀಡಲು ಕೇಂದ್ರ ನಿರ್ಧರಿಸಿದೆ.

ಏಳು ಸಾವಿರ ಇ-ಬಸ್​ಗಳಿಗೆ ಸಬ್ಸಿಡಿ

 • ಫೇಮ್ 2ನೇ ಹಂತದಲ್ಲಿ 10 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, 5 ಲಕ್ಷ ಇ-ರಿಕ್ಷಾ, 55 ಸಾವಿರ ಇ-ಕಾರು ಹಾಗೂ 7 ಸಾವಿರ ಇ-ಬಸ್​ಗೆ ಸಬ್ಸಿಡಿ ನೀಡುವ ಗುರಿಯನ್ನು ಕೇಂದ್ರ ಹೊಂದಿದೆ.
 • ವಾಣಿಜ್ಯ ಉದ್ದೇಶಕ್ಕಾಗಿ ಅಥವಾ ಬಾಡಿಗೆಗೆ ಬಳಸುವ ಇ-ರಿಕ್ಷಾ ಹಾಗೂ ಇ-ಕಾರುಗಳಿಗೆ ಸಬ್ಸಿಡಿ ಹಾಗೂ ಖಾಸಗಿಯಾಗಿ ಬಳಸುವ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಸಬ್ಸಿಡಿ ದೊರೆಯಲಿದೆ.
 • ಅತ್ಯಾಧುನಿಕ ತಂತ್ರಜ್ಞಾನ ಪ್ರೋತ್ಸಾಹಿಸುವ ಉದ್ದೇಶದಿಂದ ಲೀಥಿಯಂ ಐಯಾನ್ ಬ್ಯಾಟರಿ ಅಥವಾ ನೂತನ ತಂತ್ರಜ್ಞಾನದ ಬ್ಯಾಟರಿ ಇರುವ ಎಲೆಕ್ಟ್ರಿಕ್ ವಾಹನಗಳಿಗಷ್ಟೇ ಸಬ್ಸಿಡಿ ನೀಡಲಾಗುವುದು ಎಂದು ಕೇಂದ್ರ ಷರತ್ತು ವಿಧಿಸಿದೆ.

ಹೆದ್ದಾರಿಯಲ್ಲಿ ಚಾರ್ಜಿಂಗ್ ಘಟಕ

 • ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ಜತೆಗೆ ಪ್ರಮುಖ ಮೆಟ್ರೋ ನಗರಗಳಲ್ಲಿ 2,700ಕ್ಕೂ ಅಧಿಕ ಚಾರ್ಜಿಂಗ್ ಘಟಕ ನಿರ್ವಣಕ್ಕೆ ಫೇಮ್ ಯೋಜನೆಯಡಿ ಅನುದಾನ ದೊರೆಯಲಿದೆ. ದೇಶದ ಪ್ರಮುಖ ನಗರಗಳನ್ನು ಸಂರ್ಪಸುವ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಪೆಟ್ರೋಲ್ ಬಂಕ್ ಮಾದರಿಯಲ್ಲಿ ವಿದ್ಯುತ್ ಮರುಪೂರಣ ಘಟಕ ನಿರ್ವಣವಾಗಲಿದ್ದು, ಪ್ರತಿ 25 ಕಿ.ಮೀ.ಗೆ ಚಾರ್ಜಿಂಗ್ ಘಟಕ ನಿರ್ವಣವಾಗಲಿದೆ.
 • ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಹಯೋಗದಲ್ಲಿ ಬೆಸ್ಕಾಂ ಮೈಸೂರು ಹೆದ್ದಾರಿಯಲ್ಲಿ ಕೆಂಗೇರಿಯಿಂದ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆವರೆಗೆ 18 ಚಾರ್ಜಿಂಗ್ ಘಟಕ ಸ್ಥಾಪಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
 • ಕೆಎಸ್​ಆರ್​ಟಿಸಿಯೂ ಈ ಮಾರ್ಗದಲ್ಲಿ ಇ-ಬಸ್ ಕಾರ್ಯಾಚರಣೆಗೆ ಸಿದ್ಧತೆ ನಡೆಸಿರುವುದರಿಂದ ತುರ್ತು ಸಂದರ್ಭದಲ್ಲಿ ಸಹಕಾರಿಯಾಗಲಿವೆ.

ಫೇಮ್ ಇಂಡಿಯಾ ಯೋಜನೆ ಏನು?

 • ಫೇಮ್ ಇಂಡಿಯಾ (ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ನ ವೇಗದ ಅಡಾಪ್ಷನ್ ಮತ್ತು ತಯಾರಿಕೆ) 2015 ರಲ್ಲಿ ಹೆವಿ ಇಂಡಸ್ಟ್ರೀಸ್ ಮತ್ತು ಪಬ್ಲಿಕ್ ಎಂಟರ್ಪ್ರೈಸಸ್ ಸಚಿವಾಲಯವು ಯೋಜನೆಯನ್ನು ಪ್ರಾರಂಭಿಸಿತು. ಇದು ಎಲೆಕ್ಟ್ರಿಕ್ ವಾಹನಗಳು ಮತ್ತು ಹೈಬ್ರಿಡ್ ವಾಹನಗಳು ಸೇರಿದಂತೆ ಪರಿಸರ ಸ್ನೇಹಿ ವಾಹನಗಳ ಉತ್ಪಾದನೆ ಮತ್ತು ಉತ್ತೇಜನವನ್ನು ಉತ್ತೇಜಿಸಲು ಪ್ರಾರಂಭಿಸಿತು.
 • ಫೇಮ್ ಇಂಡಿಯಾ ನ್ಯಾಷನಲ್ ಇಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಪ್ಲ್ಯಾನ್ನ ಒಂದು ಭಾಗವಾಗಿದೆ. ಸಬ್ಸಿಡಿಗಳನ್ನು ಒದಗಿಸುವುದರ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಪ್ರೋತ್ಸಾಹಿಸುವುದು ಫೇಮ್ನ ಮುಖ್ಯ ಉದ್ದೇಶವಾಗಿದೆ. ಹೆಚ್ಚಿನ ವಿಭಾಗಗಳಲ್ಲಿ ವಾಹನಗಳು – ದ್ವಿಚಕ್ರ ವಾಹನಗಳು, ಮೂರು ಚಕ್ರ ವಾಹನಗಳು, ವಿದ್ಯುತ್ ಮತ್ತು ಹೈಬ್ರಿಡ್ ಕಾರುಗಳು ಮತ್ತು ವಿದ್ಯುತ್ ಬಸ್ಸುಗಳು ಈ ಯೋಜನೆಯ ಸಬ್ಸಿಡಿ ಲಾಭವನ್ನು ಪಡೆದುಕೊಂಡವು.
 • ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಟೆಕ್ನಾಲಜೀಸ್ ಮೈಲ್ಡ್ ಹೈಬ್ರಿಡ್, ಸ್ಟ್ರಾಂಗ್ ಹೈಬ್ರಿಡ್, ಪ್ಲಗ್ ಇನ್ ಹೈಬ್ರಿಡ್ ಮತ್ತು ಬ್ಯಾಟರಿ ಇಲೆಕ್ಟ್ರಿಕ್ ವೆಹಿಕಲ್ಸ್ ಅನ್ನು ಈ ಯೋಜನೆಯು ಒಳಗೊಳ್ಳುತ್ತದೆ.
 • ಫೇಮ್ ನಾಲ್ಕು ಕ್ಷೇತ್ರಗಳಲ್ಲಿ ಕೇಂದ್ರೀಕರಿಸುತ್ತದೆ ಅಂದರೆ ತಂತ್ರಜ್ಞಾನ ಅಭಿವೃದ್ಧಿ, ಬೇಡಿಕೆ ಸೃಷ್ಟಿ, ಪೈಲಟ್ ಯೋಜನೆಗಳು ಮತ್ತು ಚಾರ್ಜಿಂಗ್ ಮೂಲಸೌಕರ್ಯ.

ಕಾಶಿ ವಿಶ್ವನಾಥ ಮಂದಿರ ಕಾರಿಡಾರ್‌

5.

ಸುದ್ಧಿಯಲ್ಲಿ ಏಕಿದೆ ?ಉತ್ತರಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ಟೆಂಪಲ್ ಕಾರಿಡಾರ್‌ಗೆ ಶಿಲಾನ್ಯಾಸ ನೆರವೇರಿಸಿದರು.

 • ಕಾಶಿ ವಿಶ್ವನಾಥ ಧಾಮದ ಕಡೆ ಸಾಗುವ ಮಾರ್ಗವನ್ನು ಮತ್ತಷ್ಟು ಅಗಲಗೊಳಿಸುವ ಹಾಗೂ ಸುಂದರಗೊಳಿಸುವ ಯೋಜನೆ ಇದಾಗಿದೆ.

ಪ್ರಾಜೆಕ್ಟ್ ಬಗ್ಗೆ

 • ಉದ್ದೇಶಿತ 50 ಅಡಿ ಕಾರಿಡಾರ್ ನೇರವಾಗಿ ಗಂಗಾ ನ ಮನಿಕರ್ನಿಕ ಮತ್ತು ಲಲಿತ ಘಾಟ್ ಅನ್ನು ಕಾಶಿ ವಿಶ್ವನಾಥ್ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಸಂಪರ್ಕಿಸುತ್ತದೆ.
 • ಕಾರಿಡಾರ್ನಲ್ಲಿ, ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಹೊಸದಾಗಿ ನಿರ್ಮಿಸಲಾದ ವಸ್ತುಸಂಗ್ರಹಾಲಯವನ್ನು ನೋಡುತ್ತಾರೆ ಮತ್ತು ವಾರಣಾಸಿಯ ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿಯನ್ನು ಚಿತ್ರಿಸುತ್ತಾರೆ.
 • ಹವನ ಮತ್ತು ಯಜ್ಞ ಮುಂತಾದ ಧಾರ್ಮಿಕ ಕಾರ್ಯಗಳಿಗಾಗಿ ಹೊಸ ಯಜ್ಞಗಳು ಪ್ರಸ್ತಾಪಿಸಲಾಗಿದೆ.
 • ಈ ಯೋಜನೆಯು ಪುರೋಹಿತರು, ಸ್ವಯಂಸೇವಕರು ಮತ್ತು ಯಾತ್ರಾರ್ಥಿಗಳು ಮತ್ತು ವಿಚಾರಣಾ ಕೇಂದ್ರದೊಂದಿಗೆ ನಗರ ಮತ್ತು ಅದರ ಇತರ ಆಕರ್ಷಣೆಗಳ ಮತ್ತು ಸೌಕರ್ಯಗಳ ಬಗ್ಗೆ ಪ್ರವಾಸಿಗರಿಗೆ ಸಹಾಯ ಮಾಡಲು ವಸತಿ ಸ್ಥಳವನ್ನು ಕೂಡಾ ಒಳಗೊಂಡಿದೆ.
 • ಕೂಟಗಳು, ಸಭೆಗಳು ಮತ್ತು ದೇವಾಲಯದ ಕಾರ್ಯಚಟುವಟಿಕೆಗಳಿಗಾಗಿ ಭಾರಿ ಸಭಾಂಗಣ. ಪ್ರವಾಸಿಗರು ಮತ್ತು ಯಾತ್ರಿಕರಿಗೆ ಸುವಾಸನೆಯ ಬನಾರಾಸಿ ಮತ್ತು ಅವಧಿ ಭಕ್ಷ್ಯಗಳನ್ನು ಪೂರೈಸಲು ಫುಡ್ ಸ್ಟ್ರೀಟ್ ತೆರೆಯಲಾಗುತ್ತದೆ

5ಜಿ ಇಂಟರ್‌ನೆಟ್‌ ಒದಗಿಸುವ ಡ್ರೋನ್‌ ಪರೀಕ್ಷೆ

6.

ಸುದ್ಧಿಯಲ್ಲಿ ಏಕಿದೆ ?ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸೌರಶಕ್ತಿಯಿಂದ ಕಾರ್ಯಚರಿಸುವ, 5ಜಿ ಇಂಟರ್‌ನೆಟ್‌ ಒದಗಿಸುವ ಡ್ರೋನ್‌ ಪರೀಕ್ಷೆಗೆ ಮುಂದಾಗಿದೆ.

 • ಜಪಾನ್‌ ಮೂಲದ ಸಾಫ್ಟ್‌ಬ್ಯಾಂಕ್‌ ಮತ್ತು ಅಮೆರಿಕದ ಏರೋ ಸ್ಪೇಸ್‌ ಕಂಪನಿ ಏರೋವಿರಾನ್ಮೆಂಟ್‌ ಜತೆಯಾಗಿ ಹಾಕ್‌ 30′ ಎಂಬ ವಿಸ್ಮಯಕಾರಿ ಡ್ರೋನ್‌ಅನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಸೌರಶಕ್ತಿಯಿಂದ ಕೆಲಸ ಮಾಡುತ್ತದೆ. ಗಾಳಿಯಲ್ಲಿ ತೇಲುತ್ತ 5ಜಿ ಇಂಟರ್‌ನೆಟ್‌ ಸೇವೆಯನ್ನು ಒದಗಿಸುತ್ತದೆ.
 • ‘ಹಾಕ್‌ 30’ ಡ್ರೋನ್‌ನಲ್ಲಿ 10 ಇಲೆಕ್ಟ್ರಿಕ್‌ ಇಂಜಿನ್‌ಗಳಿದ್ದು, ಸುಮಾರು 20 ಕಿ.ಮೀ. ಎತ್ತರದಿಂದ ಸೇವೆ ನೀಡುತ್ತದೆ.
 • ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಜತೆಗೆ ಉಭಯ ಕಂಪನಿಗಳು ಒಡಂಬಡಿಕೆ ಮಾಡಿಕೊಂಡಿದ್ದವು. ಅದರಂತೆ ಮುಂದಿನ ವಾರ ಕ್ಯಾಲಿಫೋರ್ನಿಯಾದ ಆಮ್‌ಸ್ಟ್ರಾಂಗ್‌ ಫ್ಲೈಟ್‌ ರೀಸರ್ಚ್‌ ಸೆಂಟರ್‌ನಲ್ಲಿ ಡ್ರೋನ್‌ ಪರೀಕ್ಷೆ ನಡೆಯಲಿದೆ.
 • ಮುಂದಿನ ಮೂರು ತಿಂಗಳ ವರೆಗೆ 3 ಕಿ.ಮೀ. ಎತ್ತರದಿಂದ ಇಂಟರ್‌ನೆಟ್‌ ಸೇವೆ ಒದಗಿಸಬಲ್ಲ ಪರೀಕ್ಷೆಗಳನ್ನು ನಡೆಸಲು ಅವಕಾಶ ಒದಗಿಸಲಾಗಿದೆ.
 • ಈ ಪ್ರಯೋಗ ಯಶಸ್ವಿಯಾದರೆ, ಅತ್ಯಂತ ಶೀಘ್ರದಲ್ಲೇ 5ಜಿ ಸೇವೆ ಲಭ್ಯವಾಗಲಿದೆ. ಕೇಬಲ್‌ಗಳ ಹಾವಳಿ ತಪ್ಪಲಿದೆ. ಇಂತಹ ಡ್ರೋನ್‌ ಅಭಿವೃದ್ಧಿ ಪಡಿಸುತ್ತಿರುವುದು ಏರೋವಿರಾನ್ಮೆಂಟ್‌ ಸಂಸ್ಥೆ ಮಾತ್ರವಲ್ಲ. ಬೋಯಿಂಗ್‌ ಸಂಸ್ಥೆ ಒಡಿಸಿಸ್‌, ಏರ್‌ಬಸ್‌ ಸಂಸ್ಥೆ ಜೆಫೈರ್‌ ಎಂಬ 5ಜಿ ಸೇವೆ ನೀಡಬಲ್ಲ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುತ್ತಿವೆ.

Related Posts
“07 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಓಝೋನ್​ ಪದರ ರಂಧ್ರ ಕ್ರಮೇಣ ಕ್ಷೀಣ ಸುದ್ಧಿಯಲ್ಲಿ ಏಕಿದೆ ?ಭೂಮಿಯನ್ನು ಸೂರ್ಯನ ನೇರಳೆ ಕಿರಣಗಳಿಂದ ರಕ್ಷಣೆ ಮಾಡುವ ಓಝೋನ್​ ಪದರ ಸವಕಳಿ ಸುಧಾರಿಸುತ್ತಿದ್ದು ಪದರಕ್ಕೆ ಆಗಿದ್ದ ಹಾನಿ ಕ್ರಮೇಣ ಸರಿಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಹಿನ್ನೆಲೆ ಓಝೋನ್​ ಪದರ 1970ನೇ ಇಸ್ವಿಯಿಂದೀಚೆಗೆ ತೆಳುವಾಗುತ್ತಿದೆ ಎಂದು ...
READ MORE
“20 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಚುನಾವಣಾ ಆ್ಯಪ್ ಸುದ್ಧಿಯಲ್ಲಿ ಏಕಿದೆ ?ಮತಗಟ್ಟೆ, ಕ್ಷೇತ್ರದ ವಿವರ, ಮತಗಟ್ಟೆ ಇರುವ ಸ್ಥಳ, ಪಥ ಸೂಚಕ, ತಾವಿರುವ ಪ್ರದೇಶದಿಂದ ಮತಗಟ್ಟೆ ದೂರ ಸೇರಿದಂತೆ ವಿವಿಧ ಮಾಹಿತಿಗಳನ್ನು ಪಡೆಯಲು ಆಪ್​ನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ. ‘ಚುನಾವಣಾ’ ಹೆಸರಿನ ಈ ಆ್ಯಪ್ ಅನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ...
READ MORE
” 20 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂದಿರಾ ಕ್ಯಾಂಟೀನ್​ಗೆ ಬಯೋಗ್ಯಾಸ್ ಸುದ್ಧಿಯಲ್ಲಿ ಏಕಿದೆ ?ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಪೋರ್ಟೆಬಲ್ ಜೈವಿಕ ಅನಿಲ (ಬಯೋಗ್ಯಾಸ್) ಉತ್ಪಾದನಾ ಘಟಕ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ. ಅದರಿಂದ ಉತ್ಪಾದನೆಯಾಗುವ ಗ್ಯಾಸ್ ಇಂದಿರಾ ಕ್ಯಾಂಟೀನ್​ಗಳಿಗೆ ಪೂರೈಕೆ ಮಾಡುವ ನೂತನ ಪ್ರಯೋಗಕ್ಕೆ ಪಾಲಿಕೆ ...
READ MORE
“10 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಪ್ರಸಾದ ತಯಾರಿಕೆಗೂ ಲೈಸೆನ್ಸ್ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಪ್ರಸಾದ ವಿನಿಯೋಗಿಸುವ 30 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ಆಹಾರ ತಯಾರಿಕಾ ಘಟಕಗಳಿಗೆ ಇನ್ನು ಲೈಸನ್ಸ್ ಕಡ್ಡಾಯವಾಗಲಿದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ 37 ಸಾವಿರ ದೇವಾಲಯಗಳೂ ಸೇರಿ 2 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳಿವೆ. ಈ ಪೈಕಿ ...
READ MORE
“22 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಸಾರಯುಕ್ತ ಅಕ್ಕಿ ಸುದ್ಧಿಯಲ್ಲಿ ಏಕಿದೆ ?ಬಿಸಿಯೂಟ ಯೋಜನೆಯನ್ವಯ ರಾಜ್ಯದ 4 ಜಿಲ್ಲೆಗಳ ಒಟ್ಟು 5 ಘಟಕಗಳಲ್ಲಿ ಸಾರವರ್ಧಿತ ಅಕ್ಕಿ ಬಳಸುವ ಸಂಬಂಧ 2017-18ನೇ ಸಾಲಿನ ಬಜೆಟ್​ನಲ್ಲಿ ಘೊಷಿಸಿರುವ ಕಾರ್ಯಕ್ರಮ ಜಿಲ್ಲೆಯಲ್ಲಿ ಇನ್ನೂ ಕಾರ್ಯರೂಪಕ್ಕೆ ಬಾರದೆ ವಿಳಂಬವಾಗಿದೆ. ಸಾರಯುಕ್ತ ಅಕ್ಕಿ ಬಳಕೆಗೆ ಕಾರಣ ಇದು ತೀವ್ರ ತರಹದ ...
READ MORE
“18 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ತ್ರಿವೇಣಿಸಂಗಮದಲ್ಲಿ ಕುಂಭಮೇಳ ಸುದ್ಧಿಯಲ್ಲಿ ಏಕಿದೆ ?ದಕ್ಷಿಣದ ಪವಿತ್ರ ನದಿಗಳಾದ ಕಾವೇರಿ, ಕಪಿಲಾ,ಸ್ಪಟಿಕ ಸಂಗಮದ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದ ಶ್ರೀ ಕ್ಷೇತ್ರದಲ್ಲಿ ಮೂರು ದಿನಗಳ 11ನೇ ಕುಂಭಮೇಳಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ದೊರೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಜನರು ಮೊದಲ ದಿನವೇ ತ್ರಿವೇಣಿ ಸಂಗಮದಲ್ಲಿ ...
READ MORE
“01 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
Aids: ಎಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಎಚ್‌ಐವಿ/ಏಡ್ಸ್‌ ಸೋಂಕಿತರ ಸಂಖ್ಯೆ ಶೇ. 25ರಷ್ಟು ಕುಸಿದಿದ್ದು, ಆ ಮೂಲಕ ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ 8 ರಿಂದ 9ನೇ ಸ್ಥಾನಕ್ಕೆ ಇಳಿದಿದೆ. ರಾಜ್ಯದಲ್ಲಿ ಶೇ.38 ಲಕ್ಷ ಎಚ್‌ಐವಿ ಸೋಂಕಿತರಿದ್ದಾರೆ. ...
READ MORE
“29 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದಕ್ಷಿಣದಲ್ಲಿ ಕುಸಿಯುತ್ತಿದೆ ಲಿಂಗ ಅನುಪಾತ ಪ್ರಮಾಣ ಸುದ್ಧಿಯಲ್ಲಿ ಏಕಿದೆ ?ಉತ್ತರ ಭಾರತದ ಬದಲಿಗೆ ದಕ್ಷಿಣದಲ್ಲಿ ಲಿಂಗಾನುಪಾತ ವ್ಯತ್ಯಾಸ ಹೆಚ್ಚುತ್ತಿದೆ. ಆಶ್ಚರ್ಯಕರ ಬೆಳವಣಿಗೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಗೋವಾಗಳಲ್ಲಿ ಜನಿಸುತ್ತಿರುವ ಶಿಶುಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ತೀವ್ರ ಕುಸಿತ ಕಂಡಿದೆ. ಅಭಿವೃದ್ಧಿ ಪಥದಲ್ಲಿ ಮುಂದಿರುವ ಈ ...
READ MORE
“31st ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಎನ್​ಪಿಎಸ್ ಶೀಘ್ರ ರದ್ದು ಸುದ್ಧಿಯಲ್ಲಿ ಏಕಿದೆ ?ನೂತನ ಪಿಂಚಣಿ ಯೋಜನೆ (ಎನ್​ಪಿಎಸ್) ರದ್ದು ಮಾಡಬೇಕೆಂಬ ನೌಕರರ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ಈ ಸಂಬಂಧ ಶೀಘ್ರ ಕಡತ ಮಂಡಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ. ಹಿನ್ನಲೆ ಸರ್ಕಾರದ ವಿವಿಧ ಇಲಾಖೆಗಳಿಗೆ, ...
READ MORE
“30 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಚ್‌1ಎನ್‌1 ಮುಂಜಾಗ್ರತೆಗೆ ಸೂಚನೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ವರ್ಷದ ಆರಂಭದಲ್ಲೇ ಎಚ್‌1ಎನ್‌1 ಜ್ವರ ಭೀತಿ ಸೃಷ್ಟಿಸಿರುವುದರಿಂದ ಅಗತ್ಯ ಔಷಧಗಳ ದಾಸ್ತಾನು ಮೂಲಕ ಶಂಕಿತ ರೋಗಿಗಳಿಗೆ 48 ಗಂಟೆಯೊಳಗೆ ಟ್ಯಾಮಿಫ್ಲೂ ಚಿಕಿತ್ಸೆ ಪ್ರಾರಂಭಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಏಕೆ ಈ ಸೂಚನೆ ...
READ MORE
“07 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“20 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 20 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“10 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“22 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“18 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“01 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“29 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“31st ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“30 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *