“11th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಬಾನ್ಕುಳಿಯಲ್ಲಿ ಸಹಸ್ರ ಗೋವುಗಳ ಗೋಸ್ವರ್ಗ

 • ದೇಶದಲ್ಲೇ ಇದೇ ಮೊದಲ ಬಾರಿಗೆ ಹೊಸ ಪರಿಕಲ್ಪನೆಯಲ್ಲಿ ಗೋಪಾಲನೆಗೆ ಶ್ರೀರಾಮಚಂದ್ರಾಪುರ ಮಠ ಯೋಜನೆ ರೂಪಿಸಿದೆ.
 • ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಬಾನ್ಕುಳಿ ಮಠದ ಆವರಣದಲ್ಲಿ ಗೋಸ್ವರ್ಗ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಮೇ 2ರಂದು ಯೋಜನೆ ಧಾರ್ವಿುಕ ವಿಧಿ ವಿಧಾನಗಳ ಮೂಲಕ ಉದ್ಘಾಟನೆ ಗೊಳ್ಳಲಿದೆ ಎಂದು ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.
 • 100 ಎಕರೆ ಪ್ರದೇಶದಲ್ಲಿ 1.5 ಲಕ್ಷ ಚದರಡಿ ಜಾಗದಲ್ಲಿ ಗೋಸ್ವರ್ಗ ನಿರ್ವಿುಸಲಾಗುತ್ತದೆ. ಅಂದಾಜು 7 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಮೇ 27ರಂದು ಸಾರ್ವಜನಿಕ ಲೋಕಾರ್ಪಣಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
 • ಗೋವುಗಳಿಗೆ ಸ್ವತಂತ್ರ: ಗೋಸ್ವರ್ಗ ಸಂಪೂರ್ಣ ಗೋಸೌಖ್ಯ ಕೇಂದ್ರವಾಗಲಿದೆ. ಗೋವುಗಳನ್ನು ಸ್ವತಂತ್ರವಾಗಿ ಬಿಡಲಾಗುತ್ತದೆ. ಬೇಕಾದ ಆಹಾರವನ್ನು ಬೇಕಾದಾಗ ಪಡೆಯುವ ವ್ಯವಸ್ಥೆ ಗೋಸ್ವರ್ಗದಲ್ಲಿರಲಿದೆ.
 • ಗೋವುಗಳನ್ನು ಪಾಲನೆ ಮಾಡುವುದು ಕಷ್ಟವಾಗುವ ಕುಟುಂಬಕ್ಕೂ ಈ ಗೋಸ್ವರ್ಗ ನೆರವಾಗಲಿದೆ. ಎಲ್ಲ ರೀತಿಯ ಆಧುನಿಕ ವ್ಯವಸ್ಥೆಗಳು ಗೋಸ್ವರ್ಗದಲ್ಲಿದ್ದು, ಯಂತ್ರೋಪಕರಣ, ಸಿಸಿಟಿವಿ, ಭದ್ರತಾ ಸಿಬ್ಬಂದಿಗಳಿರಲಿದ್ದಾರೆ.
 • ಗೋಸ್ವರ್ಗ ನಿರ್ವಣಕ್ಕೆ ಸರ್ಕಾರದಿಂದ ಯಾವುದೇ ಸಹಾಯ ಕೇಳಿಲ್ಲ. ಮಠ ಹಾಗೂ ದಾನಿಗಳ ನೆರವಿನಿಂದ ಗೋಸ್ವರ್ಗ ನಿರ್ವಣವಾಗುತ್ತಿದ್ದು, ಮಠದ ಭೂಮಿಯಲ್ಲೇ ಯೋಜನೆ ಅನುಷ್ಠಾನವಾಗುತ್ತಿದೆ ಎಂದು ಹೇಳಿದರು.

ಹಣಕಾಸು ಆಯೋಗದ ತೆರಿಗೆ ಹಂಚಿಕೆ ಸೂತ್ರಕ್ಕೆ ದಕ್ಷಿಣ ರಾಜ್ಯಗಳ ವಿರೋಧ

 • ಕೇಂದ್ರದ ತೆರಿಗೆ ವರಮಾನ ಹಂಚಿಕೆಗೆ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿರುವ ನಿಯಮಗಳಿಗೆ ದಕ್ಷಿಣ ಭಾರತದ ಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿರೋಧ ವ್ಯಕ್ತಪಡಿಸಿವೆ.ಈ ಹೋರಾಟವನ್ನು ಮುಂದುವರಿಸಲು ಮತ್ತು ಇದಕ್ಕೆ ಇನ್ನಷ್ಟು ರಾಜ್ಯಗಳ ಬೆಂಬಲ ಕ್ರೋಡೀಕರಿಸಲು ನಿರ್ಧರಿಸಿವೆ.
 • ಕೇರಳದ ಆತಿಥ್ಯದಲ್ಲಿ ತಿರುವನಂತಪುರದಲ್ಲಿ ನಡೆದ ಸಭೆಯಲ್ಲಿ ಪುದುಚೇರಿ ಮುಖ್ಯಮತ್ರಿ ವಿ.ನಾರಾಯಣಸ್ವಾಮಿ, ಆಂಧ್ರಪ್ರದೇಶ ಹಣಕಾಸು ಸಚಿವ ಯನಮಲ ರಾಮಕೃಷ್ಣುಡು ಮತ್ತು ಕರ್ನಾಟಕದ ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಭಾಗವಹಿಸಿದ್ದರು.
 • ತೆರಿಗೆ ವರಮಾನ ಹಂಚಿಕೆಯ ಪ್ರಸ್ತಾವಿತ ಸೂತ್ರವು ತಾರತಮ್ಯದಿಂದ ಕೂಡಿದೆ ಎಂಬುದರ ವಿರುದ್ಧದ ಮೊದಲ ನಡೆ ಇದಾಗಿತ್ತು.
 • ಕೇಂದ್ರದ ನೀತಿಯ ವಿರುದ್ಧ ಹೋರಾಟ ಮುಂದುವರಿಸುವುದಕ್ಕಾಗಿ ಏಪ್ರಿಲ್‌ ಕೊನೆ ಅಥವಾ ಮೇ ಮೊದಲ ವಾರದಲ್ಲಿ ವಿಶಾಖಪಟ್ಟಣದಲ್ಲಿ ಎರಡನೇ ಸಭೆ ನಡೆಸಲು ನಿರ್ಧರಿಸಲಾಗಿದೆ.
 • ಪ್ರಸ್ತಾವಿತ ಸೂತ್ರದ ವಿರುದ್ಧದ ಈ ಸಭೆಯಲ್ಲಿ ಮನವಿ ಪತ್ರವನ್ನು ಸಿದ್ಧಪಡಿಸಲಾಗುವುದು. ಅದನ್ನು ರಾಷ್ಟ್ರಪತಿಗೆ ಸಲ್ಲಿಸಲಾಗುವುದು.
 • ತೆರಿಗೆ ಹಂಚಿಕೆಗೆ ಹೊಸ ಸೂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ಒಕ್ಕೂಟ ವ್ಯವಸ್ಥೆಯನ್ನೇ ಏರುಪೇರಾಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಥಾಮಸ್‌ ಅವರು ಆರೋಪಿಸಿದ್ದಾರೆ.

ಮುಖ್ಯ ನಿರ್ಣಯಗಳು

 • ತೆರಿಗೆ ಹಂಚಿಕೆಗೆ 1971ರ ಜನಗಣತಿ ದತ್ತಾಂಶದ ಬದಲಿಗೆ 2011ರ ಜನಗಣತಿ ಮಾಹಿತಿಯನ್ನು ಆಧಾರವಾಗಿ ಇರಿಸಿಕೊಳ್ಳುವುದರಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಜನ ಸಂಖ್ಯಾ ನಿಯಂತ್ರಣದಲ್ಲಿ ಸಾಧಿಸಿದ ಯಶಸ್ಸಿಗೆ ಶಿಕ್ಷೆ ನೀಡಿದಂತಾಗುತ್ತದೆ.
 • ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಆಧಾರದಲ್ಲಿ ಹೆಚ್ಚು ಅನುದಾನ ನೀಡಿಕೆಯ ನಿಯಮವು ಒಪ್ಪತಕ್ಕದ್ದಲ್ಲ. ಇದು ರಾಜ್ಯಗಳನ್ನು ‘ವೈಭವೀಕೃತ ನಗರಪಾಲಿಕೆಗಳ’ ಮಟ್ಟಕ್ಕೆ ಇಳಿಸುತ್ತದೆ.
 • ಈ ಹೋರಾಟವು ಉತ್ತರ ಭಾರತದ ವಿರುದ್ಧ ಅಲ್ಲ. ಹಾಗೆಯೇ ಇದು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ವಿರುದ್ಧ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಆಂದೋಲನವೂ ಅಲ್ಲ. ಉತ್ತರದ ರಾಜ್ಯಗಳು, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳೂ ಕೈಜೋಡಿಸಬಹುದು.
 • ರಾಷ್ಟ್ರೀಯ ಕುಟುಂಬ ಕಲ್ಯಾಣ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರಿಂದ ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬಂದಿದೆ. ಒಂದು ವೇಳೆ 2011ರ ಜನಗಣತಿಯನ್ನು ಅನುದಾನ ಹಂಚಿಕೆಗೆ ಮಾನದಂಡವಾಗಿ ಪರಿಗಣಿಸಿದರೆ ದಕ್ಷಿಣದ ರಾಜ್ಯಗಳಿಗೆ ದೊರೆಯುವ ಅನುದಾನ ಸಹಜವಾಗಿ ಕಡಿಮೆಯಾಗಲಿದೆ ಎಂದು ವಿಶ್ಲೇಷಿಸಿದರು.

ಶೂಟರ್ ಹೀನಾ ಸಿಧು ಸ್ವರ್ಣ ಸಾಧನೆ

 • ಗೋಲ್ಡ್​ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಹೀನಾ ಸಿಧು ಪಾತ್ರರಾಗಿದ್ದಾರೆ. ಭಾನುವಾರವಷ್ಟೇ 10 ಮೀ. ಏರ್​ಪಿಸ್ತೂಲ್​ನಲ್ಲಿ ರಜತ ಜಯಿಸಿದ್ದ ಹೀನಾ, 25 ಮೀಟರ್ ಪಿಸ್ತೂಲ್ ಶೂಟಿಂಗ್​ನಲ್ಲಿ ಅಗ್ರಸ್ಥಾನದೊಂದಿಗೆ ಚಿನ್ನ ಮುಡಿಗೇರಿಸಿಕೊಂಡರು.
 • 28 ವರ್ಷದ ಹೀನಾಗೆ ಕಾಮನ್ವೆಲ್ತ್ ಗೇಮ್್ಸ ವೈಯಕ್ತಿಕ ವಿಭಾಗದಲ್ಲಿ ಇದು ಚೊಚ್ಚಲ ಸ್ವರ್ಣ ಪದಕವಾಗಿದೆ. 2010ರ ದೆಹಲಿ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಅವರು ತಂಡ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದರು.
 • ಅವರಿಗೆ ಕಾಮನ್ವೆಲ್ತ್ ಇತಿಹಾಸದ ಒಟ್ಟಾರೆ 4ನೇ ಪದಕ ಇದಾಗಿದೆ. ಪದಕ ಹೋರಾಟದಲ್ಲಿ ಹೀನಾ 2 ಬಾರಿ ‘ಪರ್ಫೆಕ್ಟ್ 5’ ಅಂಕ ಪಡೆದು 38 ಅಂಕ ಸಂಪಾದಿಸಿ ಚಿನ್ನಕ್ಕೆ ಮುತ್ತಿಕ್ಕಿದರು.
 • ಆಸ್ಟ್ರೇಲಿಯಾದ ಎಲಿನಾ ಗ್ಯಾಲಿಬೊವಿಚ್(35 ಅಂಕ) ಕೇವಲ 3 ಅಂಕಗಳ ಹಿನ್ನಡೆಯಿಂದ ಬೆಳ್ಳಿಗೆ ತೃಪ್ತಿಪಟ್ಟರು. ಮಲೇಷ್ಯಾದ ಸಜಾನಾ ಅಜಾರಿ(26) ಕಂಚು ಪದಕ ಗೆದ್ದರು.

12 ಸಾವಿರ ಎಚ್​ಪಿ ಎಲೆಕ್ಟ್ರಿಕಲ್ ಇಂಜಿನ್

 • ಮೇಕ್ ಇನ್ ಇಂಡಿಯಾ ಯೋಜನೆಯಡಿ ಬಿಹಾರದ ಮಾಧೆಪುರಾದಲ್ಲಿ 12 ಸಾವಿರ ಅಶ್ವಶಕ್ತಿ (ಎಚ್​ಪಿ) ಸಾಮರ್ಥ್ಯದ ವಿದ್ಯುತ್ ಚಾಲಿತ ರೈಲ್ವೆ ಇಂಜಿನ್ ತಯಾರಿಕಾ ಕಾರ್ಖಾನೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
 • ಭಾರತದಲ್ಲೇ ಅತ್ಯಂತ ಗರಿಷ್ಠ ಬಲದ್ದಾಗಿರುವ ‘ಪ್ರಿಮಾ’ (ವ್ಯಾಗ್- 12) ಇಂಜಿನ್​ಗಳನ್ನು ಫ್ರಾನ್ಸ್​ನ ಆಲ್​ಸ್ಟಮ್ ಕಂಪನಿಯ ಸಹಯೋಗದಲ್ಲಿ ತಯಾರಿಸಲಾಗುತ್ತಿದ್ದು, ರೈಲ್ವೆ ಇಲಾಖೆ ಶೇ. 24 ಮತ್ತು ವಿದೇಶಿ ಕಂಪನಿ ಶೇ. 76 ಹೂಡಿಕೆ ಮಾಡುತ್ತಿವೆ.
 • ಒಟ್ಟಾರೆ 800 ಇಂಜಿನ್​ಗಳು ಸಿದ್ಧಗೊಳ್ಳಲಿದ್ದು, ಮೊದಲ ಐದು ಇಂಜಿನ್​ಗಳು ಫ್ರಾನ್ಸ್​ನಿಂದ ಪೂರೈಕೆ ಆಗಲಿದೆ. ಹೀಗೆ ಆಮದಾದ ಮೊದಲ ಇಂಜಿನ್​ನ ವಾಣಿಜ್ಯ ಬಳಕೆಗೂ ಪ್ರಧಾನಿ ಹಸಿರು ನಿಶಾನೆ ತೋರಿದ್ದಾರೆ. ಇದೇ ಆರ್ಥಿಕ ವರ್ಷದಲ್ಲಿ ಉಳಿದ ನಾಲ್ಕು ಇಂಜಿನ್​ಗಳು ಚಾಲನೆಗೊಳ್ಳಲಿವೆ.
 • ಇನ್ನೊಂದೆಡೆ, ಕಟಿಹಾರ್- ಹಳೆಯ ದೆಹಲಿ ರೈಲು, ಮತ್ತು ಮುಜಾಫರಪುರ- ಸಗೌಲಿ ಹಾಗೂ ಸಗೌಲಿ- ವಾಲ್ಮೀಕಿನಗರ್ ಮಾರ್ಗದ ದ್ವಿಪಥ ಹಳಿ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಅವರು ನೆರವೇರಿಸಿದರು.

ಬಾಹ್ಯಾಕಾಶ ಸೇರಲಿರುವ ‘ನ್ಯಾವ್ಐಸಿ’ಯ 8ನೇ ಉಪಗ್ರಹ

 • ನ್ಯಾವ್ಐಸಿ’ ಪಥದರ್ಶಕ ಉಪಗ್ರಹ ಸಮೂಹದ ಭಾಗವಾಗಿ ಎಂಟನೇ ಉಪಗ್ರಹದ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಿದ್ಧವಾಗಿದೆ.
 • ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ–ಸಿ41/ಐಆರ್‌ಎನ್‌ಎಸ್ಎಸ್–1ಐ ಉಡಾವಣೆ ನಡೆಯಲಿದೆ. ಇದು ಐಆರ್‌ಎನ್‌ಎಸ್ಎಸ್–1ಎ ಉಪಗ್ರಹಕ್ಕೆ ಪರ್ಯಾಯವಾಗುವ ನಿರೀಕ್ಷೆ ಇದೆ.
 • ಐಆರ್‌ಎನ್‌ಎಸ್ಎಸ್–1ಎ ಈವರೆಗೆ ಉಡಾವಣೆ ಮಾಡಲಾದ ಏಳು ಉಪಗ್ರಹಗಳ ಪೈಕಿ ಮೊದಲನೆಯದ್ದು. ರೂಬಿಡಿಯಂ ಪರಮಾಣು ಗಡಿಯಾರ ನಿಷ್ಕ್ರಿಯಗೊಂಡ ಕಾರಣ ಈ ಉಪಗ್ರಹ ಕಾರ್ಯನಿರ್ವಹಿಸಲು ವಿಫಲವಾಗಿದೆ. ಈಗ ಪರ್ಯಾಯ ಉಪಗ್ರಹ ಉಡಾವಣೆಯ ಎರಡನೇ ಪ್ರಯತ್ನ ನಡೆಯಲಿದೆ.
 • ಕಳೆದ ಆಗಸ್ಟ್‌ನಲ್ಲಿ ಉಡಾವಣೆ ಮಾಡಲಾಗಿದ್ದ ಮೊದಲ ಪರ್ಯಾಯ ಉಪಗ್ರಹ ‘ಐಆರ್‌ಎನ್‌ಎಸ್ಎಸ್–1ಎಚ್’ದಿಂದ ಉಷ್ಣ ನಿರೋಧಕ ಕವಚವು ಕಳಚಿಕೊಳ್ಳದ ಕಾರಣ ಆ ಪ್ರಯತ್ನ ಸಫಲವಾಗಿರಲಿಲ್ಲ.

~~~***ದಿನಕ್ಕೊಂದು ಯೋಜನೆ***~~~

ಪರ್ಯಟನ  ಪರ್ವ್

 • ಪ್ರವಾಸೋದ್ಯಮ ಸಚಿವಾಲಯದ ಇತರ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳು ಸಹಯೋಗದೊಂದಿಗೆ ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ತೋರಿಸಲು ಮತ್ತು ‘ಎಲ್ಲರಿಗೂ ಪ್ರವಾಸೋದ್ಯಮ’ ತತ್ವವನ್ನು ಬಲಪಡಿಸಲು ‘ಪರ್ಯಟನ ಪರ್ವ್’  ಪ್ರಾರಂಭಿಸಿದೆ. ಇದರ ಉದ್ದೇಶವೆಂದರೆ ಪ್ರವಾಸೋದ್ಯಮದ ಪ್ರಯೋಜನಗಳ ಮೇಲೆ ಕೇಂದ್ರೀಕರಿಸುವುದು.
 • ಹುಮಾಯೂನ್ ಸಮಾಧಿಯಲ್ಲಿ ಇದನ್ನು ಉದ್ಘಾಟಿಸಲಾಯಿತು ಮತ್ತು 5 ನೇ ಮತ್ತು 25 ನೇ ಅಕ್ಟೋಬರ್ 2017 ರಿಂದ ದೇಶದಾದ್ಯಂತ ನಡೆಯಲಿದೆ. ಈ ಅವಧಿಯಲ್ಲಿ, ಪ್ರವಾಸೋದ್ಯಮ ಸಚಿವಾಲಯವು ಪ್ರಾರಂಭಿಸಿದ ‘ಅಡೋಪ್ ಎ ಹೆರಿಟೇಜ್’ ಯೋಜನೆಯನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗುವುದು

ಪರ್ಯಟನ  ಪರ್ವದ ಘಟಕಗಳು

 • ದೇಖೋ ಅಪ್ನಾ ದೇಶ್: ಇದು ಭಾರತೀಯರನ್ನು ತಮ್ಮದೇ ದೇಶಕ್ಕೆ ಭೇಟಿ ನೀಡಲು ಪ್ರೋತ್ಸಾಹಿಸುತ್ತದೆ. ಇದು ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಗೆ ಪ್ರಯಾಣ ಬೆಳೆಸಲು ಉತ್ತೇಜಿಸಲು ಪ್ರಯಾಣಿಕರ ನೋಟದ ಮೂಲಕ ಭಾರತದ ಕಥೆಗಳು, ಘಟನೆಯಲ್ಲಿ ಭೇಟಿ ನೀಡಿದ ವೀಡಿಯೊ, ಛಾಯಾಚಿತ್ರ ಮತ್ತು ಬ್ಲಾಗ್ ಸ್ಪರ್ಧೆಗಳು ಒಳಗೊಂಡಿರುತ್ತದೆ.
 • ಎಲ್ಲರಿಗೂ ಪ್ರವಾಸೋದ್ಯಮ : ಇದು ದೇಶದ ಎಲ್ಲ ರಾಜ್ಯಗಳಾದ್ಯಂತ ಪ್ರವಾಸೋದ್ಯಮ ಕಾರ್ಯಕ್ರಮಗಳನ್ನು ಉತ್ತೇಜಿಸುತ್ತದೆ. ಇವುಗಳು ಪ್ರಧಾನವಾಗಿ ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ಪೀಪಲ್ಸ್ ಘಟನೆಗಳಾಗಿರುತ್ತವೆ.
 • ಈ ಸ್ಥಳದಲ್ಲಿನ ಚಟುವಟಿಕೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ, ಸಂಗೀತ, ರಂಗಮಂದಿರ, ಪ್ರವಾಸೋದ್ಯಮ ಪ್ರದರ್ಶನಗಳು ಸಂಸ್ಕೃತಿ, ತಿನಿಸು ಮತ್ತು ಕರಕುಶಲ ಮತ್ತು ಕೈಮಗ್ಗಗಳನ್ನು ಪ್ರದರ್ಶಿಸುತ್ತದೆ.
 • ಪ್ರವಾಸೋದ್ಯಮ ಮತ್ತು ಆಡಳಿತ: ಪ್ರವಾಸೋದ್ಯಮ ವಲಯದಲ್ಲಿನ ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮದಲ್ಲಿನ ಇನ್ನೋವೇಷನ್ ಮುಂತಾದ ವಿವಿಧ ವಿಷಯಗಳ ಮೇಲೆ ಮಧ್ಯಸ್ಥಗಾರರ ಜೊತೆ ಸಂವಾದಾತ್ಮಕ ಸಮಾವೇಶಗಳು ಮತ್ತು ಕಾರ್ಯಾಗಾರಗಳನ್ನು ಇದು ಹೊಂದಿರುತ್ತದೆ. ಸ್ಥಾಪಿತ ಸ್ಥಳಗಳಿಗೆ ಸಮೀಪವಿರುವ ಸ್ಥಳಗಳಲ್ಲಿ ಟ್ಯಾಕ್ಸಿ ಆಪರೇಷನ್ ಮತ್ತು ಡೆವಲಪಿಂಗ್ ಗ್ರಾಮೀಣ ಪ್ರವಾಸೋದ್ಯಮಕ್ಕಾಗಿ ಸೇವೆ ಒದಗಿಸುವವರಿಗೆ ಮಾಜಿ ಸೈನಿಕರನ್ನು ನೇಮಕ ಮಾಡಲಾಗುತ್ತದೆ  .
 • ಸಾಗರೋತ್ತರ ಮಾರುಕಟ್ಟೆಗಳಲ್ಲಿ, ಭಾರತೀಯ ಮಿಷನ್ನರ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತಕ್ಕೆ ಭೇಟಿ ನೀಡಲು ಜನರನ್ನು ಪ್ರೋತ್ಸಾಹಿಸಲು ವ್ಯಾಪಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

1. ಸಂವಿಧಾನದ ಎಷ್ಟನೇ ಅನುಚ್ಚೇದವು ಹಣಕಾಸು ಆಯೋಗದ ಬಗ್ಗೆ ಹೇಳುತ್ತದೆ ?
A.280 ಅನುಚ್ಚೇದ
B. 282 ಅನುಚ್ಚೇದ
C.285 ಅನುಚ್ಚೇದ
D. ಯಾವುದು ಅಲ್ಲ

2. 15 ನೇ ಹಣಕಾಸು ಆಯೋಗದ ಅಧ್ಯಕ್ಷರು ಯಾರು ?
A. ವೈ.ವಿ.ರೆಡ್ಡಿ
B.ಎನ್.ಕೆ. ಸಿಂಗ್
C.ಓಂ ಪ್ರಕಾಶ್ ರಾವತ್
D.ಯಾರು ಅಲ್ಲ

3. ಹೀನ ಸಿಧು ಯಾವ ವಿಭಾಗದಲ್ಲಿ ಸ್ವರ್ಣ ಪದಕ ಗಳಿಸಿದ್ದಾರೆ ?
A. 10 ಮೀಟರ್ ಪಿಸ್ತೂಲ್ ಶೂಟಿಂಗ್
B.25 ಮೀಟರ್ ಪಿಸ್ತೂಲ್ ಶೂಟಿಂಗ್
C. 30 ಮೀಟರ್ ಪಿಸ್ತೂಲ್ ಶೂಟಿಂಗ್
D. 35 ಮೀಟರ್ ಪಿಸ್ತೂಲ್ ಶೂಟಿಂಗ್

4. NAVIC ಪಥದರ್ಶಕ ಉಪಗ್ರಹವು ಯಾವ ಉಪಗ್ರಹಕ್ಕೆ ಪರ್ಯಾಯವಾಗಿ ಉಡಾವಣೆಗೊಳ್ಳುತ್ತಿದೆ ?
A.ಐಆರ್ಎನ್ಎಸ್ಎಸ್–1A
B. ಐಆರ್ಎನ್ಎಸ್ಎಸ್–1B
C. ಐಆರ್ಎನ್ಎಸ್ಎಸ್–C
D. ಐಆರ್ಎನ್ಎಸ್ಎಸ್–D

5. ಪರ್ಯಟನ ಪರ್ವದ ಘಟಕಗಳು ಯಾವುವು ?
A. ದೇಖೋ ಅಪ್ನಾ ದೇಶ್
B. ಎಲ್ಲರಿಗೂ ಪ್ರವಾಸೋದ್ಯಮ
C. ಪ್ರವಾಸೋದ್ಯಮ ಮತ್ತು ಆಡಳಿತ
D. ಮೇಲಿನ ಎಲ್ಲವೂ

6. ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಖಂಡಗಳನ್ನು ಬೇರ್ಪಡಿಸುವ ಕಾಲುವೆ ಯಾವುದು?
A.ಪನಾಮ ಕಾಲುವೆ
B.ಅಟ್ಲಾಂಟ ಕಾಲುವೆ
C.ಸೂಯಜ್ ಕಾಲುವೆ
D.ಪೆಸಿಪಿಕ್ ಕಾಲುವೆ

7. ಜೂನ್ ತಿಂಗಳಿನಲ್ಲಿ ಪ್ರಾರಂಭವಾಗುವ ಮುಂಗಾರು ಮಳೆಯನ್ನು ಯಾವ ಹೆಸರಿನಿಂದ ಕರೆಯುತ್ತಾರೆ?
A.ಈಶಾನ್ಯ ಮಾನ್ಸೂನ್
B.ವಾಯವ್ಯ ಮಾನ್ಸೂನ್
C.ನೈಋತ್ಯ ಮಾನ್ಸೂನ್
D.ಆಗ್ನೇಯ ಮಾನ್ಸೂನ್

8. ಕೆಳಗಿನ ಯಾವ ರಾಜ್ಯ ರಾಷ್ಟ್ರದಲ್ಲೇ ಮೊದಲ ಬಾರಿಗೆ ತನ್ನ ರಾಜ್ಯದಲ್ಲಿರುವ ಅನಾಥ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 1 ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ?
A. ತಮಿಳುನಾಡು
B.ಕೇರಳ
C.ಮಹಾರಾಷ್ಟ್ರ
D.ಮಧ್ಯಪ್ರದೇಶ

9. ಇತ್ತೀಚೆಗೆ ನಿಧನರಾದ ವಿನ್ನಿ ಮಂಡೇಲಾ ಅವರು ಈ ಕೆಳಗಿನ ಯಾವ ರಾಷ್ಟ್ರದವರು?
A. ಆಸ್ಟ್ರೇಲಿಯಾ
B.ದಕ್ಷಿಣ ಆಫ್ರಿಕಾ
C. ನೇಪಾಳ
D. ಅಮೇರಿಕ

10. ಕಡ್ಕನಾಥ್ ಕೋಳಿಗೆ ಚೆನ್ನೈ ಮೂಲದ ಭಾರತದ ಪ್ರಾದೇಶಿಕ ಗುರುತು ಹಾಗೂ ಬೌದ್ಧಿಕ ಆಸ್ತಿ ನೋಂದಣಿ ಸಂಸ್ಥೆಯು ಪ್ರಾದೇಶಿಕ ಗುರುತು ಪಟ್ಟಿ ನೀಡಿದೆ. ಕಡ್ಕನಾಥ್ ಕೋಳಿ ಕೆಳಗಿನ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?
A. ಉತ್ತರ ಪ್ರದೇಶ
B.ಮಧ್ಯಪ್ರದೇಶ
C. ಮಹಾರಾಷ್ಟ್ರ
D. ಪಶ್ಚಿಮ ಬಂಗಾಳ

ಉತ್ತರಗಳು:1 .A 2.B 3.B 4.A 5.D 6.A 7.C 8.C 9.B 10. B 

Related Posts
Poly house farming
Polyhouse farming/ shelter farming is an alternative new technique in agriculture gaining foothold in rural India. In Karnataka Polyhouse farming a part of Krishi bhagya programme of GOK It reduces dependency on rainfall and ...
READ MORE
The incidents of cross-border firing have shown a sharp decline after the border guarding forces of the two countries decided to “pick up the phone before picking up the gun”, ...
READ MORE
Rural Development-Multi Village Scheme Project & Swachha Bharat Mission
Drinking water supply schemes under Rajiv Gandhi National Drinking Water Mission have been formulated in rural areas with surface water as source to tackle water quality problem. Habitations affected by chemical ...
READ MORE
The 14th Indo-Asean summit and the East Asia forum.
Why in News: Prime Minister Narendra Modi arrived in Vientiane, Laos on Wednesday to attend two important meetings – the 14th Indo-Asean summit and the East Asia forum. Here is what you ...
READ MORE
The Supreme Court expressed alarm at the apparent lack of concern shown by the government’s delay in filing a response to a PIL petition against the practice of dedicating girls ...
READ MORE
National Current Affairs – UPSC/KAS Exams- 3rd October 2018
PM inaugurates first Assembly of the International Solar Alliance Topic: GS-2 Bilateral, regional and global groupings and agreements involving India and/or affecting India's interests   IN NEWS: The Prime Minister, Shri ...
READ MORE
Karnataka Current Affairs – KAS/KPSC Exams- 29th August 2018
Nationalised banks agree to govt. proposal Over 23 lakh farming families having loan accounts in nationalised banks are set to benefit from the State government’s loan waiver scheme, as Chief Minister ...
READ MORE
  The written exam has 2 papers. Both papers are cumpulsory Paper 1 Time-1 hour 30 min Maximum marks -50 The paper contains the following Essay writing – In not more than 600 words ------for 20 ...
READ MORE
“3rd ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆಫ್‌ಲೈನ್‌ ಟೂಲ್‌ಗಳ ಅಭಿವೃದ್ಧಿ  ಸುದ್ಧಿಯಲ್ಲಿ ಏಕಿದೆ?ನಾಗರಿಕರ ಖಾಸಗಿತನದ ಉಲ್ಲಂಘನೆ, ಡೇಟಾ ಕದಿಯುವಿಕೆ ಮತ್ತು ಕಣ್ಗಾವಲು ಆತಂಕಗಳ ನಿವಾರಣೆ ಯತ್ನವಾಗಿ ಕೇಂದ್ರ ಸರಕಾರ ಇದೀಗ ಆಫ್‌ಲೈನ್ ಆಧಾರ್‌ ದೃಢೀಕರಣ ಟೂಲ್‌ಗಳ ಅಭಿವೃದ್ಧಿಗೆ ಮುಂದಾಗಿದೆ. ಕ್ಯೂಆರ್‌ ಕೋಡ್‌ಗಳು ಮತ್ತು ಬಯೋ ಮೆಟ್ರಿಕ್‌ ಅಥವಾ ಯುಐಡಿಎಐ ಸರ್ವರ್‌ಗಳ ಮಾಹಿತಿ ಹಂಚಿಕೊಳ್ಳದೆ ...
READ MORE
Science & Tech: Silicon identified as ‘missing element’ in Earth’s core
Silicon likely makes up a significant proportion of the Earth’s core after iron and nickel, say scientists who claim to have identified the ‘missing element’ in the deep interiors of ...
READ MORE
Poly house farming
DG-level talks with Pak bears fruit
Rural Development-Multi Village Scheme Project & Swachha Bharat
The 14th Indo-Asean summit and the East Asia
Devadasis practice in Karnataka
National Current Affairs – UPSC/KAS Exams- 3rd October
Karnataka Current Affairs – KAS/KPSC Exams- 29th August
PSI written exam
“3rd ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Science & Tech: Silicon identified as ‘missing element’

Leave a Reply

Your email address will not be published. Required fields are marked *