11th – 12th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ನೌಕಾನೆಲೆ ಬಳಸಿಕೊಳ್ಳಲು ಒಪ್ಪಿಗೆ

 • ರಕ್ಷಣೆ ಮತ್ತು ಪರಮಾಣು ಶಕ್ತಿ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಭಾರತ ಮತ್ತು ಫ್ರಾನ್ಸ್‌ 14 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ.
 • ಯುದ್ಧನೌಕೆಗಳಿಗೆ ನೌಕಾನೆಲೆಗಳನ್ನು ಮುಕ್ತವಾಗಿ ಬಳಸಿಕೊಳ್ಳಲು ಎರಡೂ ರಾಷ್ಟ್ರಗಳು ಒಪ್ಪಿಗೆ ಸೂಚಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.
 • ಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಸೇನಾ ಪ್ರಾಬಲ್ಯ ಮತ್ತು ನೆಲೆ ವಿಸ್ತರಣೆ ಗಮನದಲ್ಲಿಟ್ಟುಕೊಂಡು ಭಾರತ ಮತ್ತು ಫ್ರಾನ್ಸ್‌ ಈ ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ವಿಶ್ಲೇಷಿಸಲಾಗಿದೆ.

ಭಯೋತ್ಪಾದನೆ ವಿರುದ್ಧ ಜಂಟಿ ಸಮರ

 • ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರೋನ್‌ ಮತ್ತು ಪ್ರಧಾನಿ ಮೋದಿ ಸಮ್ಮುಖದಲ್ಲಿ ಎರಡೂ ರಾಷ್ಟ್ರಗಳ ನಿಯೋಗಗಳು, ಬಾಹ್ಯಾಕಾಶ, ಪರಿಸರ, ರೈಲ್ವೆ, ನಗರಾಭಿವೃದ್ಧಿ, ಶಿಕ್ಷಣ ಕ್ಷೇತ್ರಗಳ ಒಪ್ಪಂದಗಳಿಗೆ ಅಂಕಿತ ಹಾಕಿದವು.
 • ಮುಂಬರುವ ದಿನಗಳಲ್ಲಿ ಹಿಂದೂ ಮಹಾಸಾಗರ ಪ್ರದೇಶವು ಜಾಗತಿಕ ಶಾಂತಿ, ಸ್ಥಿರತೆ, ಸಾಮರಸ್ಯ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಈ ನಾಯಕರು ಆಶಯ ವ್ಯಕ್ತಪಡಿಸಿದರು.
 • ದಕ್ಷಿಣ ಚೀನಾ ಸಾಗರದಲ್ಲಿ ಹೆಚ್ಚಿರುವ ಚೀನಾ ಸೇನೆಯ ಚಟುವಟಿಕೆಗಳ ಹಿನ್ನೆಲೆಯಲ್ಲಿ ಭಾರತ–ಫ್ರಾನ್ಸ್‌ ರಕ್ಷಣಾ ಒಪ್ಪಂದ ಭಾರಿ ಮಹತ್ವ ಪಡೆದುಕೊಂಡಿದೆ.

ಘನ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ

 • ಆನೇಕಲ್‌ ತಾಲ್ಲೂಕಿನ ಚಿಕ್ಕನಾಗಮಂಗಲ ಬಳಿ ಘನತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಇಲ್ಲಿ ಫ್ರಾನ್ಸ್‌ ಮೂಲದ 3ವೇಸ್ಟ್‌ ಸ್ಯಾಸ್‌ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿತು.
 • ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ಅವರೊಂದಿಗೆ ಭಾರತಕ್ಕೆ ಭೇಟಿ ನೀಡಿರುವ ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್‌ ಯೇಸ್ ಲೀ ಡ್ರೇನ್‌ ಅವರ ಸಮ್ಮುಖದಲ್ಲಿ ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ, 3ವೇಸ್ಟ್‌ ಸ್ಯಾಸ್‌ ಕಂಪನಿ ಜೊತೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಹಾಗೂ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಓ) ರಾಬರ್ಟ್‌ ಫಿಲಿಪ್‌ ಸಹಿ ಹಾಕಿದರು.
 • ಒಪ್ಪಂದದ ಪ್ರಕಾರ ಅಂದಾಜು₹ 2,500 ಕೋಟಿ ವೆಚ್ಚದ ಘಟಕವನ್ನು 3 ವೇಸ್ಟ್‌ ಸ್ಯಾಸ್‌ ಕಂಪನಿಯೇ ಸ್ಥಾಪಿಸಲಿದ್ದು, ಬಿಬಿಎಂಪಿ ಹಣಕಾಸಿನ ನೆರವು ನೀಡುವುದಿಲ್ಲ. ಆದರೆ, ವಿದ್ಯುತ್‌ ಉತ್ಪಾದನೆಗಾಗಿ ನಿತ್ಯವೂ ಅಂದಾಜು 500 ಟನ್‌ ಘನ ತ್ಯಾಜ್ಯವನ್ನು ಕಂಪನಿಗೆ ಪೂರೈಸುವ ಹೊಣೆಗಾರಿಕೆ ಹೊಂದಲಿದೆ. ಅಲ್ಲದೆ, ವಿದ್ಯುತ್‌ ಉತ್ಪಾದಿಸುವ ಹಕ್ಕುಸ್ವಾಮ್ಯವನ್ನು ಕಂಪನಿಯೇ ಹೊಂದಲಿದೆ.
 • ತಕ್ಷಣದಿಂದಲೇ ಘಟಕ ನಿರ್ಮಾಣದ ಕಾಮಗಾರಿ ಆರಂಭಿಸಲು ಕಂಪನಿಯು ಒಪ್ಪಿಗೆ ಸೂಚಿಸಿದ್ದು, ಮುಂದಿನ ಏಳು ತಿಂಗಳೊಳಗೆ ವಿದ್ಯುತ್‌ ಉತ್ಪಾದನೆ ಆರಂಭಿಸಲಾಗುವುದು

ಅಂತರ್ ರಾಜ್ಯ ಇ-ವೇ ಬಿಲ್

 • ರಾಜ್ಯದೊಳಗಿನ ಇ-ವೇ ಬಿಲ್ ವ್ಯವಸ್ಥೆಯನ್ನು ಏ.1ರಿಂದ ಹಂತ ಹಂತವಾಗಿ ಜಾರಿಗೊಳಿಸುವುದಕ್ಕೆ ರಾಜ್ಯಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ಸಮಿತಿ ಶಿಫಾರಸು ಮಾಡಿದೆ.
 • ಸಮಿತಿಯ 26ನೇ ಸಭೆ ನಡೆದಿದ್ದು, ರಾಜ್ಯದೊಳಗೆ ಸರಕು ಸಾಗಣೆಗೆ ಅನುಕೂಲವಾಗುವಂತೆ ಇ-ವೇ ಬಿಲ್ ವ್ಯವಸ್ಥೆ ಜಾರಿಗೊಳಿಸುವ ಪ್ರಕ್ರಿಯೆ ಜೂನ್ 1ರೊಳಗೆ ಪೂರ್ಣಗೊಳಿಸುವ ನಿರ್ಣಯ ತೆಗೆದುಕೊಂಡಿದೆ.
 • ಅದೇ ರೀತಿ, ನಿಯಮಗಳಲ್ಲಿ ಆಗಬೇಕಾಗಿರುವ ಪರಿಷ್ಕರಣೆಗಳನ್ನು ಅನುಮೋದಿಸಿ ಶಿಫಾರಸು ಮಾಡಿದೆ.
 • ಸರಕು ಮೌಲ್ಯ 50,000 ರೂ. ಕ್ಕಿಂತ ಹೆಚ್ಚಿದ್ದರೆ ಮಾತ್ರವೇ ಇ-ವೇ ಬಿಲ್ ಸಿದ್ಧಪಡಿಸಬೇಕು. ಅದಕ್ಕಿಂತ ಕಡಿಮೆ ಮೌಲ್ಯದ ಸರಕುಗಳಿಗೆ ಇ-ವೇ ಬಿಲ್ ಅಗತ್ಯ ವಿಲ್ಲ.
 • ನಿಯಮ 138ರ ಉಪ ನಿಯಮ(7) ವಿವರ ಗಳನ್ನು ಹಿಂದಿನ ದಿನಾಂಕದಡಿ ಅಧಿಸೂಚನೆ ಹೊರಡಿಸಬಹುದು. ಆದ್ದರಿಂದ, ಒಬ್ಬ ಸಾಗಣೆದಾರ 50,000 ರೂ. ಮೇಲ್ಪಟ್ಟ ಮೌಲ್ಯದ ಸರಕು ಸಾಗಿಸುತ್ತಿದ್ದರೂ, ವ್ಯಕ್ತಿಗತ ಸರಕು ಮೌಲ್ಯ 50,000 ರೂ. ಒಳಗಿದ್ದಾಗ ಅದಕ್ಕೆ ಇ-ವೇ ಬಿಲ್ ಮಾಡಿಸಬೇಕಾದ್ದಿಲ್ಲ.
 • ಇ-ವೇ ಬಿಲ್ ಮಾಡಿಸಬೇಕಾದ ಸಂದರ್ಭದಲ್ಲಿ ರವಾನಿಸುವ ಸರಕುಗಳ ಒಟ್ಟು ಮೌಲ್ಯದಿಂದ ವಿನಾಯಿತಿ ಪಡೆದ ಮೌಲ್ಯದ ಸರಕುಗಳನ್ನು ಸೇರಿಸುವ ಅವಶ್ಯಕತೆ ಇಲ್ಲ.
 • ಸಾರ್ವಜನಿಕ ಸಾರಿಗೆಗಳಲ್ಲಿ ಸರಕು ಸಾಗಿಸುವಾಗ ಇ-ವೇ ಬಿಲ್ ಮಾಡಿಸಬೇಕಾದ್ದು ಅದನ್ನು ಕಳುಹಿಸುವವನ ಅಥವಾ ಸ್ವೀಕರಿಸುವವನ ಹೊಣೆಗಾರಿಕೆಯಾಗಿರುತ್ತದೆ.
 • ಸರಕುಗಳನ್ನು ನಿಗದಿತ ವ್ಯಕ್ತಿ/ಕಂಪನಿಯ ವಿಳಾಸಕ್ಕೆ ಸರಕುಗಳನ್ನು ಪೂರೈಸುವುದಿಲ್ಲವಾದ್ದರಿಂದ ಭಾರತೀಯ ರೈಲ್ವೆಗೆ ಇ-ವೇ ಬಿಲ್ ವ್ಯವಸ್ಥೆಯಲ್ಲಿ ವಿನಾಯಿತಿ ನೀಡಲಾಗಿದೆ.
 • ಯಾವುದೇ ಸರಕುಗಳ ಇ-ವೇ ಬಿಲ್​ನ ಸ್ವೀಕೃತಿ ಅಥವಾ ತಿರಸ್ಕಾರದ ಬಗ್ಗೆ ಮಾಹಿತಿ ನೀಡಲು ಸಂಬಂಧಪಟ್ಟ ಸಾಗಣೆದಾರರಿಗೆ ಇ-ವೇ ಬಿಲ್​ನ ಕಾಲಾವಧಿ ಅಥವಾ 72 ಗಂಟೆ ಕಾಲಾವಕಾಶದಲ್ಲಿ ಯಾವುದು ಕನಿಷ್ಠವೋ ಅಷ್ಟು ಸಮಯಾವಕಾಶ ಲಭ್ಯವಿರುತ್ತದೆ.
 • ಜಾಬ್ ವರ್ಕ್​ಗೆ ಸಂಬಂಧಿಸಿದ ಸರಕು ಸಾಗಣೆಯಾದರೆ, ನೋಂದಾಯಿತ ಜಾಬ್ ವರ್ಕರ್ ಕೂಡ ಇ-ವೇ ಬಿಲ್ ಮಾಡಿಸಬೇಕು.
 • ಸರಕು ರವಾನೆದಾರ ಸಾಗಣೆದಾರ, ಕೊರಿಯರ್ ಏಜೆನ್ಸಿ ಮತ್ತು ಇ-ಕಾಮರ್ಸ್ ಆಪರೇಟರ್​ಗಳಿಗೆ ಇ-ವೇ ಬಿಲ್​ನ ಪಾರ್ಟ್ ‘ಎ’ಯನ್ನು ತನ್ನ ಪರವಾಗಿ ಭರ್ತಿ ಮಾಡಲು ಅಧಿಕಾರ ನೀಡಬಹುದು.
 • ಸರಕು ರವಾನೆದಾರರಿರುವ ಸ್ಥಳದಿಂದ ಸಾಗಣೆದಾರರಿರುವ ಸ್ಥಳ 50 ಕಿ.ಮೀ. ವ್ಯಾಪ್ತಿಯೊಳಗಿದ್ದರೆ(ಈ ಹಿಂದೆ ಇದ್ದುದು 10 ಕಿ.ಮೀ. ವ್ಯಾಪ್ತಿ) ಇ-ವೇ ಬಿಲ್​ನ ಪಾರ್ಟ್ ಬಿ ತುಂಬ ಬೇಕಾದ್ದಿಲ್ಲ. ಅವರು ಇ-ವೇ ಬಿಲ್​ನ ಪಾರ್ಟ್ ಎ ಮಾತ್ರ ಮಾಡಿಸಿದರೆ ಸಾಕು.
 • ಓವರ್ ಡೈಮೆನ್ಶನಲ್ ಕಾರ್ಗೆಗಳ ಇ-ವೇ ಬಿಲ್​ಗಷ್ಟೇ ಹೆಚ್ಚುವರಿ ಕಾಲಾವಧಿ ಲಭ್ಯ.
 • ಇ-ವೇ ಬಿಲ್​ಗೆ ನಿಗದಿಯಾಗಿರುವ ಕಾಲಾವಧಿಯೊಳಗೆ ಸರಕುಗಳನ್ನು ಸಾಗಿಸಲಾಗದೇ ಹೋದರೆ, ಸಾಗಣೆದಾರರು ಅದರ ಕಾಲಾವಧಿಯನ್ನು ವಿಸ್ತರಿಸಲು ಕೋರಿಕೊಳ್ಳಬಹುದು. ಅನಿವಾರ್ಯ ಸಂದರ್ಭ ಮತ್ತು ತುರ್ತು ಪರಿಸ್ಥಿತಿಯಲ್ಲಷ್ಟೇ ಇದಕ್ಕೆ ಅವಕಾಶ.
 • ಒಮ್ಮೆ ಸರಕು ಸಾಗಣೆ ವಾಹನ ಪ್ರಮಾಣೀಕರಿಸಲ್ಪಟ್ಟರೆ, ಆ ಸರಕಿಗೆ ಸಂಬಂಧಿಸಿದ ಇ-ವೇ ಬಿಲ್ಲನ್ನು ಮತ್ತೊಮ್ಮೆ ಬೇರೆ ಯಾವುದೇ ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಶೀಲಿಸುವುದೇ ಇಲ್ಲ. ಎಲ್ಲ ಕಡೆಗೂ ಅದೇ ಮಾಹಿತಿ ಲಭ್ಯವಿರುತ್ತದೆ.
 • ರೈಲ್ವೆ, ವಿಮಾನ, ಹಡಗುಗಳ ಮೂಲಕ ಸರಕು ಸಾಗಿಸುವುದಾದಲ್ಲಿ, ಇ-ವೇ ಬಿಲ್ಲನ್ನು ಅವುಗಳ ಸಾಗಣೆ ಆರಂಭವಾದ ಬಳಿಕ ಮಾಡಿಸಬಹುದಾಗಿದೆ.

ದರ್ಪಣ್ ಯೋಜನೆ

 • ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು, ಸೇವೆಗಳಿಗೆ ಮೌಲ್ಯವನ್ನು ಸೇರಿಸುವುದು ಮತ್ತು ಬ್ಯಾಂಕಿತ ಜನಸಂಖ್ಯೆಯ ಆರ್ಥಿಕ ಸೇರ್ಪಡೆ ಸಾಧಿಸಲು ಕೇಂದ್ರ ಸರ್ಕಾರದ ಕಮ್ಯುನಿಕೇಷನ್ಸ್ ದರ್ಪಣ್ (ಎ ನ್ಯೂ ಇಂಡಿಯಾಕ್ಕಾಗಿ ಗ್ರಾಮೀಣ ಪೋಸ್ಟ್ ಆಫೀಸ್ ಡಿಜಿಟಲ್ ಅಡ್ವಾನ್ಸ್ಮೆಂಟ್) ಅನ್ನು ಪ್ರಾರಂಭಿಸಿದೆ.
 • ದರ್ಪಣ್ ಎನ್ನುವುದು ಅನ್-ಬ್ಯಾಂಕಿನ ಗ್ರಾಮೀಣ ಜನಸಂಖ್ಯೆಯ ಆರ್ಥಿಕ ಸೇರ್ಪಡೆ ಅರಿತುಕೊಳ್ಳುವ ಉದ್ದೇಶದಿಂದ ಮಾಹಿತಿ ತಂತ್ರಜ್ಞಾನ (ಐಟಿ) ಆಧುನೀಕರಣ ಯೋಜನೆಯಾಗಿದೆ. ಇದು ಖಾತೆದಾರರಿಗೆ ಕೋರ್ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತದೆ.

ದರ್ಪಣ್ ಯೋಜನೆ

 • ಯೋಜನೆಯು ಪ್ರತಿ ಶಾಖೆಯ ಪೋಸ್ಟ್ ಮಾಸ್ಟರ್ ಗೆ (ಬಿಪಿಎಂ) ಕಡಿಮೆ ವಿದ್ಯುತ್ ತಂತ್ರಜ್ಞಾನದ ಪರಿಹಾರವನ್ನು ಒದಗಿಸಲು ಉದ್ದೇಶಿಸಿದೆ. ಇದು ಸೇವಾ ವಿತರಣೆಯನ್ನು ಸುಧಾರಿಸಲು ಸುಮಾರು 1.29 ಲಕ್ಷ ಶಾಖೆಯ ಅಂಚೆ ಕಚೇರಿಗಳನ್ನು (ಬೊಸ್) ಅನುವು ಮಾಡಿಕೊಡುತ್ತದೆ.
 • ಇದು ಪೋಸ್ಟ್ಗಳ ಇಲಾಖೆಯ (ಡಿಒಪಿ) ಗ್ರಾಮೀಣ ವ್ಯಾಪ್ತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಎಲ್ಲಾ ಹಣಕಾಸಿನ ಪಾವತಿ, ಉಳಿತಾಯ ಖಾತೆಗಳು, ಗ್ರಾಮೀಣ ಅಂಚೆ ಲೈಫ್ ಇನ್ಶುರೆನ್ಸ್ ಮತ್ತು ನಗದು ಪ್ರಮಾಣಪತ್ರಗಳ ಸಂಚಾರವನ್ನು ಹೆಚ್ಚಿಸಲು ಬ್ರಾಂಚ್ ಪೋಸ್ಟ್ ಆಫೀಸಗಳನ್ನುಸಕ್ರಿಯಗೊಳಿಸುತ್ತದೆ.
 • ಸ್ವಯಂಚಾಲಿತ ಬುಕಿಂಗ್ ಮತ್ತು ಜವಾಬ್ದಾರಿಯುತ ಲೇಖನಗಳ ವಿತರಣೆಯನ್ನು ಅನುಮತಿಸುವ ಮೂಲಕ ಮೇಲ್ ಕಾರ್ಯಾಚರಣೆ ಪ್ರಕ್ರಿಯೆಗಳನ್ನು ಸುಧಾರಿಸಲು ಸಹ ಇದು ಗುರಿ ಹೊಂದಿದೆ.
 • ಇದು ರಿಟೇಲ್ ಪೋಸ್ಟ್ ವ್ಯವಹಾರವನ್ನು ಬಳಸಿಕೊಂಡು ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಮೂರನೇ ವ್ಯಕ್ತಿಯ ಅರ್ಜಿಗಳನ್ನು ಒದಗಿಸುತ್ತದೆ ಮತ್ತು MGNREGS ನಂತಹ ಸಾಮಾಜಿಕ ಭದ್ರತೆ ಯೋಜನೆಗಳಿಗೆ ವಿತರಣೆಗಳನ್ನು ಮಾಡುತ್ತದೆ. ಯೋಜನೆಯು ರೂ. 1400 ಕೋಟಿ ಮತ್ತು ಮಾರ್ಚ್, 2018 ರೊಳಗೆ ಪೂರ್ಣಗೊಳ್ಳಲಿದೆ.

ರಂಗನತಿಟ್ಟಿನಲ್ಲಿ ಬಾನಾಡಿಗಳ ಎಣಿಕೆ

 • ಮೈಸೂರು ವನ್ಯಜೀವಿ ವಿಭಾಗ, ಮೈಸೂರು ನೇಚರ್‌ ಬರ್ಡ್ಸ್ ವಾಚರ್ಸ್‌ ಮತ್ತು ಬೆಂಗಳೂರು ಪಕ್ಷಿ ವೀಕ್ಷಕರ ತಂಡ ಮುಂಜಾನೆ 6 ಗಂಟೆಯಿಂದ 10ರ ವರೆಗೆ ಪಕ್ಷಿಧಾಮದ ವಿವಿಧೆಡೆ ಪಕ್ಷಿಗಳ ಗಣತಿ ನಡೆಸಿತು. 75 ಮಂದಿ 14 ತಂಡಗಳಲ್ಲಿ ಪಕ್ಷಿಗಳ ಗಣತಿ ಕಾರ್ಯ ನಡೆಸಿದರು.
 • ದೋಣಿಗಳ ಮೂಲಕ ಸಂಚಾರ ಮಾಡುತ್ತ ಬೈನಾಕ್ಯುಲರ್‌ ಮತ್ತು ಕ್ಯಾಮೆರಾಗಳನ್ನು ಬಳಸಿ ಪಕ್ಷಿಗಳ ಚಲನವಲನವನ್ನು ದಾಖಲಿಸಿದರು. ಹಕ್ಕಿಗಳು ಗೂಡು ಕಟ್ಟುತ್ತಿರುವುದು, ಮೊಟ್ಟೆ ಇಟ್ಟಿರುವುದು, ಮರಿಗಳಿಗೆ ಆಹಾರ ಉಣಿಸುವ ವಿವಿಧ ಹಂತದ ದೃಶ್ಯಗಳನ್ನು ಪಕ್ಷಿ ತಜ್ಞರು ದಾಖಲಿಸಿದರು.
 • ‘ರಂಗನತಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಪಕ್ಷಿಗಳ ಗಣತಿ ನಡೆದಿದೆ. ಇಲ್ಲಿ 8 ದೊಡ್ಡ ದ್ವೀಪಗಳು ಸೇರಿ ಒಟ್ಟು 25 ದ್ವೀಪಗಳಿವೆ. ಈ ದ್ವೀಪಗಳಿಗೆ ತೆರಳಿದ ತಜ್ಞರ ತಂಡ ಸನಿಹದಿಂದ ಪಕ್ಷಿಗಳ ವೀಕ್ಷಣೆ ಮಾಡಿ ಮಾಹಿತಿ ಸಂಗ್ರಹಿಸಿದೆ. ಇನ್ನು ಒಂದು ವಾರದಲ್ಲಿ ಪಕ್ಷಿಗಳ ಅಂದಾಜು ಸಂಖ್ಯೆ, ಅವುಗಳ ಜೀವನಕ್ರಮದ ಬಗ್ಗೆ ನಿಖರ ಮಾಹಿತಿ ಸಿಗಲಿದೆ’ ಎಂದು ಚಂದ್ರಶೇಖರ್‌ ತಿಳಿಸಿದರು.
 • ರಂಗನತಿಟ್ಟಿನಲ್ಲಿ ಸದ್ಯ ಪೆಲಿಕಾನ್‌, ಸ್ಪೂನ್‌ಬಿಲ್‌, ಓಪನ್‌ಬಿಲ್‌, ಪೇಂಟೆಡ್‌ ಸ್ಟಾರ್ಕ್, ಕಾರ್ಮೊರೆಂಟ್‌, ನೈಟ್‌ ಹೆರಾನ್‌, ರಿವರ್‌ಟರ್ನ್‌, ಸ್ಟೋನ್ ಫ್ಲವರ್‌ ಜಾತಿಯ ಪಕ್ಷಿಗಳಿವೆ. ಕಾಡು ಹುಣಸೆ, ನೀರಂಜಿ, ಹೊಂಗೆ, ಮುಳ್ಳಿ, ಮತ್ತಿ ಮರಗಳ ಮೇಲೆ ತಾವು ಮಾಡಿಕೊಂಡಿವೆ.
 • ‘ಪೆಲಿಕಾನ್‌ಗಳು ಈಗಾಗಲೇ ಮರಿ ಮಾಡಿದ್ದು, ಮರಿಗಳ ಲಾಲನೆ ಪಾಲನೆಯಲ್ಲಿ ತೊಡಗಿವೆ. ಪೇಂಟೆಡ್‌ ಸ್ಟಾರ್ಕ್‌, ಓಪನ್‌ಬಿಲ್‌ ಪಕ್ಷಿಗಳು ಗೂಡು ಕಟ್ಟಲು ಶುರು ಮಾಡಿವೆ. ಒಂದೂವರೆ ಸಾವಿರ ಪೆಲಿಕಾನ್‌ಗಳು ಸೇರಿ ಪಕ್ಷಿಧಾಮದಲ್ಲಿ 4ರಿಂದ 5 ಸಾವಿರ ಪಕ್ಷಿಗಳಿವೆ.
 • ಏಪ್ರಿಲ್‌ ಮೊದಲ ವಾರ ಐಬಿಸ್‌ ಜಾತಿಯ ಪಕ್ಷಿಗಳು ಸಹಸ್ರ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿಳಿಯಲಿವೆ’ ಎಂದು ಪಕ್ಷಿಧಾಮದ ಅಧಿಕಾರಿಗಳು ತಿಳಿಸಿದ್ದಾರೆ.

ಹಕ್ಕಿ ಗಣತಿಯ ಉದ್ದೇಶ

 • ‘ಪಕ್ಷಿ ಸಂಕುಲದ ಉಳಿವಿಗಾಗಿ ಶ್ರಮಿಸುತ್ತಿರುವ ರಾಮ್‌ಸರ್‌ (RAMSAR) ಕನ್ವೆನ್ಷನ್‌ ಸೈಟ್‌ ಪಟ್ಟಿಗೆ ರಂಗನತಿಟ್ಟು ಪಕ್ಷಿಧಾಮವನ್ನು ಸೇರಿಸಲು ಹಕ್ಕಿ ಗಣತಿ ಸಹಕಾರಿಯಾಗಲಿದೆ. ಪಕ್ಷಿಗಳ ಆವಾಸ ಸ್ಥಾನ ವಿಸ್ತಾರಗೊಳಿಸಲು, ಪಕ್ಷಿಧಾಮಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ಪಸರಿಸಲು ಹಾಗೂ ಪಕ್ಷಿಗಳ ವರ್ಗೀಕರಣ ಮತ್ತು ಅವುಗಳ ಅಧ್ಯಯನಕ್ಕೆ ಅನುಕೂಲವಾಗಲಿದೆ. ಈ ಗಂಪಿಗೆ ಸೇರಿದರೆ ಹೆಚ್ಚಿನ ಅನುದಾನ ಕೂಡ ಸಿಗಲಿದೆ’

110 ಮೀಟರ್‌ ಎತ್ತರದಲ್ಲಿ ಹಾರಾಡಲಿದೆ ತ್ರಿವರ್ಣ ಧ್ವಜ

 • ಬೆಳಗಾವಿಯ ಕೋಟೆ ಕೆರೆ ದಂಡೆಯಲ್ಲಿ ಸ್ಥಾಪಿಸಲಾಗಿರುವ 110 ಮೀಟರ್‌ ಎತ್ತರದ ಶಾಶ್ವತ ಧ್ವಜಸ್ತಂಭದಲ್ಲಿರಾಷ್ಟ್ರಧ್ವಜವನ್ನು ಅಧಿಕೃತವಾಗಿ ಹಾರಿಸಲಾಗುವುದು’
 • ‘ವಾಘಾ ಗಡಿಯಲ್ಲಿ 105 ಮೀಟರ್‌ ಎತ್ತರದ, ಪುಣೆಯಲ್ಲಿ 107 ಮೀಟರ್‌ ಎತ್ತರದ ಸ್ತಂಭವಿದೆ. ಹೀಗಾಗಿ, ಬೆಳಗಾವಿಯದ್ದು ದೇಶದಲ್ಲಿಯೇ ಅತಿ ಎತ್ತರದ ಧ್ವಜಸ್ತಂಭವಾಗಿದೆ.
 • ಇಲ್ಲಿ 120 ಅಡಿ ಉದ್ದ ಹಾಗೂ 80 ಅಡಿ ಅಗಲದ ರಾಷ್ಟ್ರಧ್ವಜ ವರ್ಷದ ಎಲ್ಲ ದಿನಗಳಲ್ಲೂ ಹಾರಾಡಲಿದೆ.
 • ಬುಡಾ ಹಾಗೂ ಪಾಲಿಕೆ ಸಹಯೋಗದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದ್ದು, ₹62 ಕೋಟಿ ವೆಚ್ಚ ಮಾಡಲಾಗಿದೆ.
 • ‘ದಾಖಲೆ ಮುರಿಯಬೇಕು ಎನ್ನುವ ಉದ್ದೇಶದಿಂದ ಸ್ತಂಭ ಸ್ಥಾಪಿಸಿಲ್ಲ. ಜನರಲ್ಲಿ ದೇಶಪ್ರೇಮದ ಭಾವನೆ ಜಾಗೃತಗೊಳಿಸಬೇಕು ಎಂಬ ಆಶಯದಿಂದ ಕೈಗೊಳ್ಳಲಾಗಿದೆ. ಸ್ತಂಭದ ಕೆಳಗೆ ಅಳವಡಿಸಿರುವ ಮೋಟರ್‌ ಸಹಾಯದಿಂದ ಧ್ವಜವನ್ನು ಏರಿಸಲಾಗುವುದು ಮತ್ತು ಇಳಿಸಲಾಗುವುದು (ಎಲೆಕ್ಟ್ರೊ ಮೆಕ್ಯಾನಿಕಲ್ ಆಪರೇಷನ್‌).
 • ಸ್ತಂಭದ ತೂಕ ಒಟ್ಟು 36 ಟನ್‌ಗಳಿಷ್ಟಿದ್ದರೆ, ಬಾವುಟದ ಬಟ್ಟೆಯ ತೂಕ 500 ಕೆ.ಜಿ.ಗಳಷ್ಟಿದೆ. ಬಜಾಜ್‌ ಕಂಪನಿಯವರು ಡೇನಿಯರ್‌ ಪಾಲಿಸ್ಟರ್‌ ಬಟ್ಟೆ ಬಳಸಿ ಸಿದ್ಧಪಡಿಸಿಕೊಟ್ಟಿದ್ದಾರೆ’.
 • ‘ರಾತ್ರಿ ವೇಳೆ ಬಾವುಟದ ಮೇಲೆ ವಿದ್ಯುದ್ದೀಪದ ಬೆಳಕು ಬೀಳುವಂತೆ, ಸ್ತಂಭದ ಎರಡೂ ಬದಿಯಲ್ಲಿ ಕಂಬಗಳನ್ನು ಅಳವಡಿಸಲಾಗಿದೆ. ರಾತ್ರಿ ವೇಳೆಯೂ ಬಾವುಟ ಆಕರ್ಷಣೀಯವಾಗಿ ಕಾಣಿಸಬೇಕು ಎನ್ನುವುದು ಇದರ ಉದ್ದೇಶ. ಸ್ತಂಭ ಸ್ಥಾಪನೆ ಸಂಬಂಧ ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮತಿ ಪಡೆಯಲಾಗಿದೆ’.

ಸೌರಶಕ್ತಿ ಕ್ರಾಂತಿಗೆ ಪಣ

 • ಜಗತ್ತಿನಾದ್ಯಂತ ಸೌರಶಕ್ತಿ ಕ್ರಾಂತಿಗೆ ಭಾರತ ಪಣ ತೊಟ್ಟಿದೆ. 15 ದೇಶಗಳಲ್ಲಿ ಸುಮಾರು ₹9,000 ಕೋಟಿ ಮೊತ್ತದ ಯೋಜನೆಗಳನ್ನು ಆರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
 • ಅಂತರರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟದ (ಐಎಸ್‌ಎ) ಮೊದಲ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಸೌರಶಕ್ತಿ ತಂತ್ರಜ್ಞಾನ ವಿಸ್ತರಣೆಗೆ ಸುಲಭ ಮತ್ತು ಸರಳವಾಗಿ ಹಣಕಾಸು ದೊರೆಯಬೇಕಾದ ಅಗತ್ಯ ಇದೆ ಎಂದರು.
 • ಸೌರಶಕ್ತಿಯನ್ನು ಬಳಸಿಕೊಳ್ಳುವ ಅವಕಾಶ ಸಮೃದ್ಧವಾಗಿರುವ 121 ದೇಶಗಳ ಜಾಗತಿಕ ವೇದಿಕೆ ರೂಪಿಸಬೇಕು ಎಂದು ಮೂರು ವರ್ಷಗಳ ಹಿಂದೆ ಮೋದಿ ಕರೆ ಕೊಟ್ಟಿದ್ದರು. ಸೌರಶಕ್ತಿಯು ಎಲ್ಲ ದೇಶಗಳಿಗೂ ಎಟಕುವಂತಾಗಲು ಹತ್ತು ಅಂಶಗಳ ಕ್ರಿಯಾ ಯೋಜನೆಯನ್ನು ಅವರು ಸಮಾವೇಶದಲ್ಲಿ ಬಿಡಿಸಿಟ್ಟರು.
 • ಭಾರತದ ಅನುದಾನದ 15 ಯೋಜನೆಗಳಲ್ಲಿ ಎರಡು ಏಷ್ಯಾದಲ್ಲಿ ಮತ್ತು ಉಳಿದವು ಆಫ್ರಿಕಾ ಖಂಡದಲ್ಲಿ ಅನುಷ್ಠಾನಗೊಳ್ಳಲಿವೆ. ಮಾಲಿ, ನೈಜೀರಿಯಾ, ರುವಾಂಡ ಮತ್ತು ತಾಂಜಾನಿಯಾ ದೇಶಗಳು ಆಫ್ರಿಕಾ ಖಂಡದ ಫಲಾನುಭವಿಗಳಾಗಲಿವೆ.
 • 2030ರ ಹೊತ್ತಿಗೆ ಜಗತ್ತಿನ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು 1,000 ಗಿಗಾವಾಟ್‌ಗೆ (ಒಂದು ಗಿಗಾವಾಟ್‌ ಎಂದರೆ ನೂರು ಕೋಟಿ ವಾಟ್‌) ಏರಿಸುವುದು ಮತ್ತು ಇದಕ್ಕಾಗಿ ಒಂದು ಲಕ್ಷ ಕೋಟಿ ಡಾಲರ್‌ (ಸುಮಾರು ₹65 ಲಕ್ಷ ಕೋಟಿ) ಹೂಡಿಕೆ ಮಾಡುವುದು ಐಎಸ್‌ಎ ಗುರಿಯಾಗಿದೆ.

ಐಎಸ್​ಎ ಎಂದರೆ..

 • ಸೌರಶಕ್ತಿ ಬಳಕೆ ಉತ್ತೇಜಿಸುವುದಕ್ಕಾಗಿ ಸ್ಥಾಪಿತವಾಗಿರುವ ಸೌರ ಸಂಪತ್ತು ಹೇರಳವಾಗಿರುವ ರಾಷ್ಟ್ರಗಳ ಒಕ್ಕೂಟವೇ ಇಂಟರ್​ನ್ಯಾಷನಲ್ ಸೋಲಾರ್ ಅಲಯನ್ಸ್ ಭಾರತ ಮತ್ತು ಫ್ರಾನ್ಸ್ ಇದರ ಸಂಸ್ಥಾಪಕ ಸದಸ್ಯ ರಾಷ್ಟ್ರಗಳು.
 • 2015ರ ನವೆಂಬರ್ 30ರಂದು ಪ್ಯಾರಿಸ್​ನಲ್ಲಿ ಏರ್ಪಟ್ಟ ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಶೃಂಗದಲ್ಲಿ ಚಿಗುರೊಡೆದ ಚಿಂತನೆಯೇ ಐಎಸ್​ಎ. ಬಹುತೇಕ ಸದಸ್ಯರಾಷ್ಟ್ರಗಳು ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಯುರೋಪ್ ಒಕ್ಕೂಟದವು. ಪಾಕಿಸ್ತಾನ ಇನ್ನೂ ಇದರ ಸದಸ್ಯ ರಾಷ್ಟ್ರವಾಗಿಲ್ಲ.
 • ಇದರ ಕೇಂದ್ರ ಕಚೇರಿ ಹರಿಯಾಣದ ಗುರುಗ್ರಾಮದಲ್ಲಿದೆ.

ಕ್ರಿಯಾಯೋಜನೆಯ ಪ್ರಮುಖ ಅಂಶಗಳು

 • ಎಲ್ಲ ದೇಶಗಳಿಗೂ ಕಡಿಮೆ ವೆಚ್ಚದಲ್ಲಿ ಸೌರ ತಂತ್ರಜ್ಞಾನ
 • ಸೌರ ವಿದ್ಯುತ್ತನ್ನು ಪರಸ್ಪರ ಹಂಚಿಕೊಳ್ಳುವುದು
 • ಸೌರ ವಿದ್ಯುತ್ ಯೋಜನೆಗಳಿಗೆ ಹಣಕಾಸು ನೆರವು ನೀಡಲು ನಿಯಮ ರೂಪಿಸುವುದು
 • ನಿಯಮ, ನಿಬಂಧನೆ ಮತ್ತು ಗುಣಮಟ್ಟಕ್ಕೆ ಚೌಕಟ್ಟು ರೂಪಿಸುವುದು
 • ಬ್ಯಾಂಕ್ ನೆರವಿನ ಯೋಜನೆಗಳಿಗೆ ಸಮಾಲೋಚನಾ ಸಹಕಾರ ಒದಗಿಸುವುದು
 • ಗುಣಮಟ್ಟ ಕಾಪಾಡಲು ಕೇಂದ್ರಗಳ ಜಾಲ ರೂಪಿಸುವುದು
 • ಸೌರ ತಂತ್ರಜ್ಞಾನ ಯೋಜನೆ ಜಾರಿಗೊಳಿಸುವುದು
 • ಸೌರ ಶಕ್ತಿ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸ ಆರಂಭಿಸುವುದು
 • ಸದಸ್ಯ ರಾಷ್ಟ್ರಗಳಿಗೆ 500 ಹಂತದ ತರಬೇತಿ ಒದಗಿಸುವುದು
 • ಐಎಸ್​ಎಯ ಸಚಿವಾಲಯವನ್ನು ಬಲಪಡಿಸುವುದು ಮತ್ತು ವೃತ್ತಿಪರತೆಯನ್ನು ರೂಢಿಸುವುದು.

ಭಾರತದ ಪಾತ್ರವೇನು?

 • ಐಎಸ್​ಎಯ ಸಂಚಿತ ನಿಧಿ ರೂಪಿಸುವುದಕ್ಕಾಗಿ ಭಾರತ ಸರ್ಕಾರ 2.7 ಕೋಟಿ ಡಾಲರ್ ನೀಡಿದೆ. ಇದರ ಕೇಂದ್ರ ಕಚೇರಿಯನ್ನು ಹರಿಯಾಣದ ಗುರುಗ್ರಾಮದಲ್ಲಿ ಸ್ಥಾಪಿಸಿದೆ. 2016-17ರಿಂದ 2020-21ರ ಅವಧಿಯ ನಡುವೆ ಇಲ್ಲಿ ಮೂಲಸೌಕರ್ಯ ಒದಗಿಸುವುದಕ್ಕೆ ಮತ್ತು ಆವರ್ತನ ವೆಚ್ಚಕ್ಕೆ ಅದನ್ನು ಬಳಸಿಕೊಳ್ಳಲಿದೆ. ಅದೇ ರೀತಿ, ಭಾರತೀಯ ಸೌರಶಕ್ತಿ ನಿಗಮ(ಎಸ್​ಇಸಿಐ), ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ(ಐಆರ್​ಇಡಿಎ) ಕೂಡ ಐಎಸ್​ಎ ಸಂಚಿತ ನಿಧಿಗೆ ತಲಾ 10 ಲಕ್ಷ ಡಾಲರ್ ಪಾವತಿಸಿವೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಅಭಿವೃದ್ಧಿ ಪಾಲುದಾರಿಕೆ ಆಡಳಿತ ಕಾರ್ಯಕ್ರಮದ ಮೂಲಕ 1.5-2 ಶತಕೋಟಿ ಡಾಲರ್ ಸಾಲದ ರೂಪದಲ್ಲಿ ಆಫ್ರಿಕನ್ ರಾಷ್ಟ್ರಗಳಿಗೆ ಒದಗಿಸಲು ಮುಂದಾಗಿದೆ.

ನೇಕಾರರ ನೆರವಿಗೆ ‘ನೂಲು ಬ್ಯಾಂಕ್‌

 • ನೇಕಾರರಿಗೆ ನೂಲಿನ ಕೊರತೆ ಆಗುವುದನ್ನು ತಪ್ಪಿಸಲು ರಾಜ್ಯದಲ್ಲಿ ‘ನೂಲು ಬ್ಯಾಂಕ್’ ಸ್ಥಾಪಿಸಲಾಗುವುದು ಎಂದು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಹೇಳಿದರು.
 • ‘ಐ–ಪವರ್‌ ಟೆಕ್ಸ್‌ ಇಂಡಿಯಾ’ ಆನ್‌ಲೈನ್‌ ಪೋರ್ಟಲ್‌ ಮತ್ತು ಮೊಬೈಲ್‌ ಆ್ಯಪ್‌ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನೂಲು ಬ್ಯಾಂಕ್‌ ಸ್ಥಾಪನೆಗೆ ₹ 5 ಕೋಟಿ ನೀಡಲಾಗುವುದು. ಅಗತ್ಯವಿದ್ದರೆ ಒಂದಕ್ಕಿಂತ ಹೆಚ್ಚು ‘ನೂಲು ಬ್ಯಾಂಕ್‌’ಗಳನ್ನು ಸ್ಥಾಪಿಸಲು ಸಿದ್ಧವಿರುವುದಾಗಿ ಅವರು ಭರವಸೆ ನೀಡಿದರು.
 • ನೇಕಾರಿಕೆಯಲ್ಲಿ ತೊಡಗಿರುವ ಬಡ ಕುಟುಂಬಗಳ ಯುವಕ– ಯುವತಿಯರು ದೂರ ಶಿಕ್ಷಣದ ಮೂಲಕ ಉನ್ನತ ಶಿಕ್ಷಣ ಪಡೆಯಲು ನೆರವು ನೀಡಲಾಗು ವುದು. ಇದಕ್ಕೆ ತಗಲುವ ಒಟ್ಟು ವೆಚ್ಚದಲ್ಲಿ ಶೇ 75ರಷ್ಟನ್ನು ಕೇಂದ್ರ ಸರ್ಕಾರವೇ ಭರಿಸಲಿದೆ
 • ವಿದ್ಯುತ್‌ ಮಗ್ಗಗಳನ್ನು ಮೇಲ್ದರ್ಜೆಗೇರಿಸಲು ₹20,000 ನೆರವು ನೀಡಲಾಗುವುದು. ಸೌರ ವಿದ್ಯುತ್‌ ಅಳವಡಿಸಲು ಶೇ 50 ರಷ್ಟು ಸಹಾಯಧನ ನೀಡಲಾಗು ವುದು. ಮುದ್ರಾ ಯೋಜನೆಯಡಿ ಶೇ4 ಬಡ್ಡಿ ದರದಲ್ಲಿ ಉದ್ಯಮ ಸ್ಥಾಪಿಸಲು ಸಾಲ ನೀಡಲಾಗುವುದು ಎಂದರು.

ಚೀನಾ: ಜೀವಿತಾವಧಿವರೆಗೂ ಕ್ಸಿ ಅಧ್ಯಕ್ಷ

 • ಕ್ಸಿ ಜಿನ್‌ಪಿಂಗ್ ಅವರು ತಮ್ಮ ಜೀವಿತಾವಧಿಯವರೆಗೂ ಚೀನಾದ ಅಧ್ಯಕ್ಷರಾಗಿ ಮುಂದುವರಿಯುವ ಮಹತ್ವದ ತಿದ್ದುಪಡಿ ಮಸೂದೆಗೆ ಇಲ್ಲಿನ ಸಂಸತ್ತು ಅಂಗೀಕಾರ ನೀಡಿದೆ. ಈ ಮೂಲಕ ಅಧ್ಯಕ್ಷರಾಗುವವರಿಗೆ ಇದ್ದ ಎರಡು ಅವಧಿಯ ನಿರ್ಬಂಧ ಕೊನೆಗೊಂಡಿದೆ.
 • ಇತ್ತೀಚಿನ ದಿನಗಳಲ್ಲಿ ಚೀನಾದ ಅತ್ಯಂತ ಪ್ರಭಾವಶಾಲಿ ನಾಯಕ ಎಂದೇ ಗುರುತಿಸಿಕೊಂಡಿರುವ ಕ್ಸಿ (64) ಅವರು ತಮ್ಮ ಎರಡನೇ ಅವಧಿಯನ್ನು ಇದೇ ತಿಂಗಳಲ್ಲಿ ಆರಂಭಿಸಬೇಕಿತ್ತು.
 • ಆಡಳಿ‌ತಾರೂಢ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಮುಖ್ಯಸ್ಥರೂ ಆಗಿರುವ ಕ್ಸಿ, ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮಾವೊ ಜೆಡಾಂಗ್ ಬಳಿಕ ಜೀವಿತಾವಧಿ ಅಧಿಕಾರ ಪಡೆಯುತ್ತಿರುವ ಎರಡನೇ ಅಧ್ಯಕ್ಷರಾಗಿದ್ದಾರೆ.
 • ಸಿಪಿಸಿ ಕಳುಹಿಸುವ ಪ್ರಸ್ತಾವಗಳನ್ನು ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಸಂಸತ್ತು) ಇದುವರೆಗೂ ಯಥಾವತ್ತಾಗಿ ಅನುಮೋದಿಸುತ್ತಾ ಬಂದಿದ್ದು, ರಬ್ಬರ್‌ಸ್ಟ್ಯಾಂಪ್‌ ರೀತಿ ಕೆಲಸ ಮಾಡುತ್ತಿದೆ.
 • ಉಪಾಧ್ಯಕ್ಷರ ಆಯ್ಕೆ ಮೇಲೆಯೂ ಇದ್ದ ನಿರ್ಬಂಧವನ್ನು ಇದೇ ಕಾಯ್ದೆಯು ರದ್ದುಗೊಳಿಸಿದೆ. ಕ್ಸಿ ಅವರ ಆಪ್ತ ವಾಂಗ್ ಕ್ವಿಶಾಂಗ್ (69) ಅವರು ಉಪಾಧ್ಯಕ್ಷರಾಗಿ ತಮ್ಮ ಜೀವಿತಾವಧಿವರೆಗೂ ಇರಲಿದ್ದಾರೆ.
 • 2013ರಲ್ಲಿ ಕ್ಸಿ ಆರಂಭಿಸಿದ್ದ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಮುನ್ನಡೆಸಿದವರು ಇವರೇ.
 • 1954ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಸಂವಿಧಾನ ಜಾರಿಗೆ ಬಂದಿತ್ತು.
 • 1982ರಿಂದ  ಜಾರಿಯಲ್ಲಿರುವ ಪ್ರಸ್ತುತ ಸಂವಿಧಾನಕ್ಕೆ ನಾಲ್ಕು ಬಾರಿ (1988, 1993, 1999 ಮತ್ತು 2004) ತಿದ್ದುಪಡಿ ತರಲಾಗಿದೆ.

ಭಾರತದ ಮೇಲೆ ಏನು ಪರಿಣಾಮ?

 • ಚೀನಾ ಸಶಸ್ತ್ರಪಡೆಗಳ ಮುಖ್ಯಸ್ಥರೂ ಆಗಿರುವ ಕ್ಸಿ, ಆಧುನಿಕ ಯುದ್ಧಗಳನ್ನು ಗೆಲ್ಲುವ ಸಾಮರ್ಥ್ಯ ಪಡೆಯುವ ನಿಟ್ಟಿನಲ್ಲಿ ಚೀನಾ ಸೇನೆಯ ಆಧುನೀಕರಣಕ್ಕೆ ಮುಂದಾಗಿದ್ದಾರೆ. ಇದು ನೆರೆಯ ದೇಶಗಳಲ್ಲಿ ಕಳವಳಕ್ಕೆ ಕಾರಣವಾಗಿದೆ. ದೋಕಲಾ ವಿಚಾರದ ಹಿನ್ನೆಲೆಯಲ್ಲಿ, ಜಿನ್‌ಪಿಂಗ್‌ಗೆ ಸಿಕ್ಕಿರುವ ಜೀವತಾವಧಿ ಅಧಿಕಾರವು ಭಾರತದ ಮೇಲೆ ಮಹತ್ವದ ಪರಿಣಾಮ ಬೀರಲಿದೆ.
 • ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಹಾದುಹೋಗುವ ಪಾಕಿಸ್ತಾನ–ಚೀನಾ ಆರ್ಥಿಕ ಕಾರಿಡಾರ್ ನಿರ್ಮಾಣ, ಭಾರತದ ನೆರೆ ದೇಶಗಳಾದ ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್‌ಗೆ ಸಂಪರ್ಕ ಕಲ್ಪಿಸುವ ಕಾಮಗಾರಿಗಳಿಗೆ ಚೀನಾ ಕೋಟ್ಯಂತರ ರೂಪಾಯಿ ಸುರಿಯುತ್ತಿದೆ. ಇವುಗಳ ಮೂಲಕ ಭಾರತದ ವಿರುದ್ಧ ಚೀನಾ ಕಾರ್ಯತಂತ್ರ ರೂಪಿಸುತ್ತಿದೆ ಎಂಬ ಆರೋಪ ಇದೆ.

ರಾಷ್ಟ್ರೀಯ ಹಸಿರು ಹೆದ್ದಾರಿ ಮಿಷನ್

 • ರಾಷ್ಟ್ರೀಯ ಹಸಿರು ಹೆದ್ದಾರಿಗಳ ಮಿಷನ್ (ಎನ್ಜಿಹೆಮ್ಎಂ) ಯನ್ನು ಕೇಂದ್ರ ಸರ್ಕಾರವು ಪ್ರಾರಂಭಿಸಿದೆ.
 • ರಾಷ್ಟ್ರೀಯ ಹಸಿರು ಹೆದ್ದಾರಿಗಳ ಮಿಷನ್ ಬಗ್ಗೆ
 • ಪರಿಸರ ಸ್ನೇಹಿ ಮತ್ತು ಹಸಿರು ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ಸಮಗ್ರ ದೃಷ್ಟಿಕೋನವನ್ನು ಒದಗಿಸಲು ಗ್ರೀನ್ ಹೈವೇ ಪಾಲಿಸಿ, 2015 ರ ಅಡಿಯಲ್ಲಿ NGHM ಅನ್ನು ಪ್ರಾರಂಭಿಸಲಾಯಿತು.
 • 100,000 ಕಿ.ಮೀ ಹೆದ್ದಾರಿಗಳ ಉದ್ದಕ್ಕೂ ಹಸಿರು ಮೇಲಾವರಣವನ್ನು ಒದಗಿಸುವ ಉದ್ದೇಶದಿಂದ ಮಿಷನ್ 1 ದಶಲಕ್ಷ ಯುವಕರಿಗೆ ಉದ್ಯೋಗವನ್ನು ಕಲ್ಪಿಸುತ್ತದೆ.
 • ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಹಸಿರು ಕಾರಿಡಾರ್ ಅನ್ನು ಬೆಳೆಸಲು ನಿಗಮಗಳು, ಸಾರ್ವಜನಿಕ ವಲಯ ಘಟಕಗಳು, ಸರ್ಕಾರಿ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳಿಗೆ ಮಧ್ಯಮ, ಅವೆನ್ಯೂ ಮತ್ತು ಹತ್ತಿರದ ಹತ್ತಿರದ ಭೂಮಿ ಪ್ಯಾಚ್ಗಳಲ್ಲಿ ತೋಟಗಾರಿಕೆ ಮತ್ತು ಮೈತ್ರಿ ಚಟುವಟಿಕೆಗಳ ಮೂಲಕ ತೊಡಗಿಸಿಕೊಳ್ಳಲು ಇದನ್ನು ಪ್ರಾರಂಭಿಸಲಾಗಿದೆ.
 • ಉದ್ದೇಶಕ್ಕಾಗಿ ಹಣವನ್ನು ಗ್ರೀನ್ ಫಂಡ್ ಕಾರ್ಪಸ್ ಪಡೆಯುತ್ತದೆ, ಇದು ತೋಟದ ಉದ್ದೇಶಕ್ಕಾಗಿ ಮೀಸಲಿಟ್ಟ ಒಟ್ಟು ಯೋಜನೆಯ ವೆಚ್ಚದಲ್ಲಿ 1% ಆಗಿದೆ.
 • ಸಂಭಾವ್ಯತೆ: ರಾಷ್ಟ್ರೀಯ ಹೆದ್ದಾರಿಗಳಾದ್ಯಂತ ಅರಣ್ಯನಾಶ ಸುಮಾರು 12 ಲಕ್ಷ ಮೆಟ್ರಿಕ್ ಟನ್ ಕಾರ್ಬನ್ ಅನ್ನು ವಾರ್ಷಿಕವಾಗಿ ವಶಪಡಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.
 • ಇದು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಕೃಷಿಯ ಮತ್ತು ಗ್ರಾಮೀಣ ಆರ್ಥಿಕತೆಗೆ ಆಟದ ಬದಲಾಯಿಸುವವನಾಗಿರಬಹುದು.
 • ಭವಿಷ್ಯದಲ್ಲಿ, ಈ ಮಿಷನ್ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದೆ.
 • ‘ ಗ್ರೀನ್ ಹೆದ್ದಾರಿ ಅಡಾಪ್ಟ್’ ಕಾರ್ಯಕ್ರಮ , ಕಿಸಾನ್ ಹರಿತ್ ರಾಜ್ಮಾರ್ಗ್ ಯೋಜಾನ ಮತ್ತು ನ್ಯಾಷನಲ್ ಗ್ರೀನ್ ಹೈವೇ  ಮಿಷನ್ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು .
 • ಕಿಸಾನ್ ಹರಿತ್ ರಾಜ್ಮಾರ್ಗ್ ಯೋಜನ್ : ಹೆದ್ದಾರಿಗಳ ಅಸ್ತಿತ್ವದಲ್ಲಿರುವ ‘ರೈಟ್ ಆಫ್ ವೇ’ ಅನ್ನು ಮೀರಿ ಹಸಿರು ಬೆಲ್ಟ್ ವಿಸ್ತರಿಸುವ ಪೈಲಟ್ ಯೋಜನೆಯಾಗಿದೆ. ಇದು ರೈತರನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತದೆ ಮತ್ತು ಸಮೀಪದ ಸಮುದಾಯಗಳಿಗೆ ಪರ್ಯಾಯ ಜೀವನಾಧಾರ ಆಯ್ಕೆಯನ್ನು ಒದಗಿಸುತ್ತದೆ.

1.ಕರ್ನಾಟಕದ ಪಕ್ಷಿ ಕಾಶಿ ಎಂದು ಯಾವುದನ್ನು ಕರೆಯುತ್ತಾರೆ ?

A)ರಂಗನತಿಟ್ಟು

B)ಮಂಡಗದ್ದೆ

C)ಕೊಕ್ಕರೆ ಬೆಳ್ಳೂರು

D)ಬಂಡೀಪುರ

2.ರಾಂಸರ್ ಕಾನ್ವೆಂಷನ್ ಯಾವುದ್ದಕೆ ಸಂಬಂಧಪಟ್ಟಿದೆ ?

A)ಓಜೋನ್ ಪದರ ಕಾಪಾಡಲು

B)ಹಸಿರುಮನೆ ಅನಿಲ ಕಡಿಮೆಮಾಡಲು

C)ತೇವ ಪ್ರದೇಶದ ಸಂರಕ್ಷಣೆಗೆ

D)ಮೇಲಿನ ಎಲ್ಲವೂ

3.ದೇಶದ ಅತ್ಯಂತ ಎತ್ತರದ ಧ್ವಜ ಸ್ತಂಭ ಎಲ್ಲಿದೆ ?

A)ವಾಘಾ ಗಡಿ

B)ಪೂನಾ

C)ಬೆಂಗಳೂರು

D)ಬೆಳಗಾವಿ

4.ಅಂತರ್ರಾಷ್ಟ್ರೀಯ ಸೌರ ಶಕ್ತಿ ಮೈತ್ರಿಕೂಟ ವನ್ನು ಯಾವ ಘೋಷಣೆಯಾ ಪ್ರಕಾರ ಪ್ರಾರಂಭಿಸಲಾಯಿತು?

A)ಪ್ಯಾರಿಸ್ ಒಪ್ಪಂದ

B)ಕ್ಯೋಟೋ ಪ್ರೋಟೋಕಾಲ್

C)ಮಾಂಟ್ರಿಯಲ್ ಪ್ರೋಟೋಕಾಲ್

D)ಬಾಲಿ ಒಪ್ಪಂದ

5.ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಆಯ್ಕೆಯನ್ನು ಮಾಡಿರಿ

A)ಭಾರತದ ರಾಷ್ಟ್ರಪತಿಗಳು ಕೇವಲ ೨ ಬಾರಿ ಆಯ್ಕೆಗೊಳ್ಳಬಹುದು

B)ಅಮೆರಿಕಾದ ರಾಷ್ಟ್ರಪತಿಗಳು ಎಷ್ಟು ಬಾರಿಯಾದರೂ ಆಯ್ಕೆಗೊಳ್ಳಬಹುದು

C)೧ ಮತ್ತು ೨ ಸರಿಯಾಗಿದೆ

D)ಯಾವ ಹೇಳಿಕೆಗಳು ಸರಿ ಇಲ್ಲ

6.ಕೇಂದ್ರ ಬಜೆಟ್ ಮಂಡಿಸಿದ ಏಕೈಕ ಮಹಿಳೆ ಯಾರು ?

A)ಇಂದಿರಾ ಗಾಂಧಿ

B)ಮಮತಾ ಬ್ಯಾನರ್ಜಿ

C)ಉಮಾ ಭಾರತಿ

D)ಸೋನಿಯಾ ಗಾಂಧಿ

7.ಸಾಗರ ಶಾಖ ಶಕ್ತಿಯನ್ನು ಉಪಯೋಸಿಕೊಂಡ ಮೊದಲ ರಾಜ್ಯ

A)ತಮಿಳು ನಾಡು

B)ಉತ್ತರಪ್ರದೇಶ

C)ಆಂಧ್ರ ಪ್ರದೇಶ

D)ಕರ್ನಾಟಕ

8.ಹರ್ಷ ಚರಿತವನ್ನು ರಚಿಸಿದವರು ಯಾರು?

A) ಹರ್ಷ

B) ಕಾಳಿದಾಸ

C) ಬಾಣಭಟ್ಟ

D) ಕಲ್ಹಣ

9.ಯಾವ ಪತ್ರಿಕೆಯನ್ನು ಅನಿ ಬೆಸೆಂಟ್ ರವರು ಪ್ರಾಂರಬಿಸಿದರು

A.ದ ಹಿಂದೂ

B.ಇಂಡಿಯನ್ ಪ್ರೀಮಿಯರ್

C.ನ್ಯೂ ಇಂಡಿಯಾ

D.ವಿಜಯ ಕರ್ನಾಟಕ

10.ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯನ್ನು ಹೆರಾಲ್ಡ್ ಡ್ಯೂಮರ್ ಮಾದರಿಯ ಪಂಚವಾರ್ಷಿಕ ಯೋಜನೆ ಎ ನ್ನುವರು?

A)4ನೇ ಪಂಚವಾರ್ಷಿಕ ಯೋಜನೆ

B)3ನೇ ಪಂಚವಾರ್ಷಿಕ ಯೋಜನೆ

C)2ನೇ ಪಂಚವಾರ್ಷಿಕ ಯೋಜನೆ

D)1ನೇ ಪಂಚವಾರ್ಷಿಕ ಯೋಜನೆ

ಉತ್ತರಗಳು

1.A 2.C 3.D  4.A  5.D  6.A  7.A  8.C  9. C  10.D

 

Related Posts
2nd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ
ಮಹಿಳಾ ಮತದಾರರ ಲಿಂಗಾನುಪಾತ ಹೆಚ್ಚಳ ಮತದಾರರ ಪಟ್ಟಿಯಲ್ಲಿ ಲಿಂಗಾನುಪಾತದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. 2013 ರ ಚುನಾವಣೆಯಲ್ಲಿ 1,000 ಪುರುಷರಿಗೆ 958 ಇದ್ದ ಮಹಿಳೆಯರ ಸಂಖ್ಯೆ ಈ ಚುನಾವಣೆ ವೇಳೆ 974ಕ್ಕೆ ಏರಿಕೆಯಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ತಿಳಿಸಿದ್ದಾರೆ. ಏ.14ಕ್ಕೆ ಮುಕ್ತಾಯವಾದ ಮತದಾರರ ನೋಂದಣಿ ...
READ MORE
Karnataka Current Affairs – KAS/KPSC Exams – 15th – 16th Nov 2017
RERA: Only 69 projects registered in Hubballi-Dharwad and Belagavi areas The progress achieved as far as registration under the Real Estate (Regulation and Development) Act 2016 is concerned is abysmally low ...
READ MORE
The Rajya Sabha cleared the Juvenile Justice (Amendment) Bill, 2015 The bill lowers the age of a legally defined juvenile from 18 to 16 in the case of heinous crimes.. The Bill ...
READ MORE
12th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಅಣ್ಣಾ ಕ್ಯಾಂಟೀನ್ ಸುದ್ಧಿಯಲ್ಲಿ ಏಕಿದೆ? ಕರ್ನಾಟಕದ ಇಂದಿರಾ ಕ್ಯಾಂಟೀನ್​ ಮಾದರಿಯಲ್ಲೇ ನಾಗರಿಕರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸುವ ಅಣ್ಣಾ ಕ್ಯಾಂಟೀನ್​ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್​. ಚಂದ್ರಬಾಬು ನಾಯ್ಡು ಅವರು ಚಾಲನೆ ನೀಡಿದ್ದಾರೆ. ನೂತನವಾಗಿ ಉದ್ಘಾಟನೆಯಾಗಿರುವ ಈ ಕ್ಯಾಂಟೀನ್​ಗಳಲ್ಲಿ ಐದು ರೂಪಾಯಿಗಳಿಗೆ ಉಪಹಾರ ಮತ್ತು ...
READ MORE
Karnataka Current Affairs – KAS / KPSC Exams – 18th May 2017
Report on promotions for SC/ST communities accepted The State Cabinet on 17th May accepted a government committee report on a case related to the Supreme Court quashing of reservation for SC ...
READ MORE
The Supreme Court expressed alarm at the apparent lack of concern shown by the government’s delay in filing a response to a PIL petition against the practice of dedicating girls ...
READ MORE
“25th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಖಾಸಗಿ ವನ್ಯಜೀವಿ ಧಾಮ ಸುದ್ದಿಯಲ್ಲಿ ಏಕಿದೆ?  ರಾಜ್ಯದ ಸಂರಕ್ಷಿತ ಅರಣ್ಯಗಳ ಪಕ್ಕದಲ್ಲೇ ಖಾಸಗಿ ವನ್ಯಜೀವಿಧಾಮಗಳ ಸ್ಥಾಪನೆಗೆ ಅನುವು ಮಾಡಿಕೊಡಲು ಅರಣ್ಯ ಇಲಾಖೆ ಮುಂದಾಗಿದೆ. ಈ ನಡೆಗೆ ವನ್ಯಜೀವಿ ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಆಕ್ಷೇಪವೇಕೆ ? ಸಂರಕ್ಷಿತ ಅರಣ್ಯಗಳ ಪಕ್ಕದಲ್ಲೇ ಸಾಕಷ್ಟು ರೆಸಾರ್ಟ್‌ಗಳು ತಲೆ ಎತ್ತಿವೆ. ...
READ MORE
TADF is a new scheme to facilitate acquisition of Clean, Green & Energy Efficient Technologies, in form of Technology / Customised Products / Specialised Services / Patents / Industrial Design ...
READ MORE
Karnataka Current Affairs – KAS / KPSC Exams – 10th May 2017
150 acres of wetlands that can be preserved identified With advice from a retired professor and Indian Institute of Science researchers, the Karnataka Lake Conservation and Development Authority (KLCDA) has identified ...
READ MORE
National Current Affairs – UPSC/KAS Exams- 3rd December 2018
India to host G20 summit in 2022 Topic: International Relations IN NEWS: For the first time, India will host the annual G20 summit in 2022, when the country celebrates its 75th anniversary ...
READ MORE
2nd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ
Karnataka Current Affairs – KAS/KPSC Exams – 15th
Juvenile Justice (Amendment) Bill, 2015
12th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
Karnataka Current Affairs – KAS / KPSC
Devadasis practice in Karnataka
“25th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Technology Acquisition and Development Fund
Karnataka Current Affairs – KAS / KPSC Exams
National Current Affairs – UPSC/KAS Exams- 3rd December

Leave a Reply

Your email address will not be published. Required fields are marked *