ಜಾಗತಿಕ ರ್ಯಾಂಕಿಂಗ್: ಕುವೆಂಪು ವಿವಿಗೆ 45ನೇ ಸ್ಥಾನ!
ಸುದ್ಧಿಯಲ್ಲಿ ಏಕಿದೆ ? ಗುಣಮಟ್ಟದ ಶೈಕ್ಷಣಿಕ ಸಂಶೋಧನೆ, ತರಬೇತಿ, ಸಾಮಾಜಿಕ ಪರಿಣಾಮ, ಅವಿಷ್ಕಾರಗಳು ಈ ಎಲ್ಲವನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾದ ಅಂತರಾಷ್ಟ್ರೀಯ ರ್ಯಾಂಕಿಂಗ್ (ಶ್ರೇಯಾಂಕ) ಪಟ್ಟಿಯಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯ 45ನೇ ಸ್ಥಾನ ಪಡೆದಿದೆ.
- ಸಿಮಾಗೋ ಸೊಸೈಟಿ ಎಂಬ ಸಂಸ್ಥೆ ಈ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ.
ಸಿಮಾಗೋ ಸೊಸೈಟಿ ಬಗ್ಗೆ
- ಸಿಮಾಗೋ ಸೊಸೈಟಿ ಅಥವಾ ಸಿಮಾಗೋ ಇನ್ಸ್ಟಿಟ್ಯೂಶನ್ಸ್ ರ್ಯಾಂಕಿಂಗ್ಸ್ ವಿಶ್ವದಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಕೇಂದ್ರಿತ ಸಂಸ್ಥೆಗಳ ಮೌಲ್ಯಮಾಪನ ಮಾಡಬಲ್ಲ ಮೌಲ್ಯಮಾಪನ ಸಂಸ್ಥೆಯಾಗಿದೆ.
- ಶೈಕ್ಷಣಿಕ ಸಂಶೋಧನಾ-ಸಂಬಂಧಿತ ಸಂಸ್ಥೆಗಳ ಒಂದು ಸಂಯೋಜನೆಯು ಈ ಸಂಸ್ಥೆಗಳ ಶ್ರೇಣಿಯನ್ನು ನಿರ್ಧರಿಸಲಿದೆ.ಯಾವುದೇ ಶಿಕ್ಷಣ ಸಂಸ್ಥೆಗಳ ಸಂಶೋಧನಾ ಕಾರ್ಯಕ್ಷಮತೆ, ನಾವೀನ್ಯತೆ ಉತ್ಪನ್ನಗಳು ಮತ್ತು ಸಾಮಾಜಿಕ ಪ್ರಭಾವದ ಆಧಾರದ ಮೇಲೆ ರ್ಯಾಂಕಿಂಗ್ ನಿರ್ಧಾರವಾಗಲಿದೆ.
- 2018ರ ಸಿಮಾಗೋ ಜಾಗತಿಕ ಶ್ರೇಯಾಂಕದ ಪ್ರಕಾರ, ಕುವೆಂಪು ವಿಶ್ವವಿದ್ಯಾನಿಲಯವು ಭಾರತದಲ್ಲಿ 45ನೇ ಸ್ಥಾನ್ಬ ಪಡೆದಿದ್ದರೆ ಏಷ್ಯಾ ಖಂಡದಲ್ಲಿ 220ನೇ ಸ್ಥಾನದಲ್ಲಿದೆ.ಜಾಗತಿಕವಾಗಿ 620ನೇ ರ್ಯಾಂಕ್ ಹೊಂದಿದೆ.
ಉಪ್ಪು ನೀರು ಸಿಹಿ ದಿನ ಸನಿಹ
ಸುದ್ಧಿಯಲ್ಲಿ ಏಕಿದೆ ? ಎಂಆರ್ಪಿಎಲ್ನ ಸಮುದ್ರ ನೀರು ಶುದ್ಧೀಕರಣ ಘಟಕ (ಡಿಸಲೈನೇಶನ್) ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ತಜ್ಞರ ಪರಿಶೀಲನಾ ಸಮಿತಿಯು ಕರಾವಳಿ ನಿಯಂತ್ರಣ ವಲಯ (ಸಿಆರ್ಜಡ್)ದ ಅನುಮೋದನೆ ನೀಡಿದೆ.
- ರಿವರ್ಸ್ ಓಸ್ಮೋಸಿಸ್ ವಿಧಾನದಲ್ಲಿ ಸಮುದ್ರ ನೀರನ್ನು ಶುದ್ಧ ನೀರನ್ನಾಗಿ ಪರಿವರ್ತಿಸುವ ರಾಜ್ಯದ ಮೊದಲ ಘಟಕವಾಗಿರಲಿದೆ.
- ಎಂಆರ್ಪಿಎಲ್ ಈ 70 ಎಂಎಲ್ಡಿ (ಮಿಲಿಯನ್ ಲೀಟರ್ ಪರ್ ಡೇ) ಸಾಮರ್ಥ್ಯದ ಘಟಕಕ್ಕೆ ಅಳವಡಿಸಿರುವ ಪೈಪ್ಲೈನ್ ಕಾಮಗಾರಿ ವೇಳೆ ಹಾಕಲಾದ ತಾತ್ಕಾಲಿಕ ರಚನೆಗಳನ್ನು ಒಂದು ತಿಂಗಳೊಳಗೆ ತೆರವು ಮಾಡುವಂತೆ ಷರತ್ತನ್ನೂ ವಿಧಿಸಿದರು. ಘನತ್ಯಾಜ್ಯವನ್ನು ನಿಯಮಾನುಸಾರವಾಗಿ ಸಂಸ್ಕರಣೆ ಮಾಡಿ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
- ಚೆನ್ನೈ ಮೂಲದ ಮೆಸರ್ಸ್ ವಿ.ಎ.ಟೆಕ್ ವೆಬ್ಯಾಗ್ ಕಂಪನಿಯು 595 ಕೋಟಿ ರೂ. ಮೊತ್ತದ ಈ ಕಾಮಗಾರಿಯ ಗುತ್ತಿಗೆಯನ್ನು ಪಡೆದುಕೊಂಡಿದೆ. ಇದೇ ಕಂಪನಿ ಚೆನ್ನೈ ಮತ್ತಿತರ ಕಡೆಗಳಲ್ಲಿ ಇಂತಹ ಬೃಹತ್ ಸ್ಥಾವರ ನಿರ್ಮಾಣದ ಅನುಭವ ಹೊಂದಿದೆ.
- ತಣ್ಣೀರುಬಾವಿ ಬಳಿಯ 13 ಎಕರೆ ಪ್ರದೇಶದಲ್ಲಿ ಸ್ಥಾವರ ನಿರ್ಮಾಣದ ಸಿದ್ಧತೆ ನಡೆದಿದೆ.
ಪ್ರಯೋಜನಗಳು
- ಎಂಆರ್ಪಿಎಲ್ ಸ್ಥಾವರದ ನಿರ್ವಹಣೆಗೆ ಬೇಕಾದ ಶುದ್ಧ ನೀರಿನ ಅವಲಂಬನೆಯನ್ನು ಈ ಸ್ಥಾವರ ಕಡಿಮೆ ಮಾಡಲಿದೆ.
- ಈ ಮೂಲಕ ನೇತ್ರಾವತಿ ನದಿ ಮೇಲಿನ ಒತ್ತಡ ಕಡಿಮೆಯಾಗಲಿದೆ, ಬೇಸಿಗೆಯಲ್ಲೂ ಯಾವುದೇ ಸಮಸ್ಯೆಯಾಗಲಾರದು.
- ಪ್ರಾರಂಭದಲ್ಲಿ ಈ ಸ್ಥಾವರದ ಸಾಮರ್ಥ್ಯ 30 ಎಂಎಲ್ಡಿ ಆಗಿರುತ್ತದೆ, ಆ ಬಳಿಕ 70 (15 ಎಂಜಿಡಿ- ಮಿಲಿಯನ್ ಗ್ಯಾಲನ್ ಪರ್ ಡೇ)ರ ವರೆಗೂ ವಿಸ್ತರಣೆ ಮಾಡಬಹುದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
- ಸದ್ಯ ಎಂಆರ್ಪಿಎಲ್ 13ರಿಂದ 14 ಎಂಜಿಡಿ ನೀರು ಬಳಕೆ ಮಾಡಿಕೊಳ್ಳುತ್ತಿದ್ದು, ಇದರಲ್ಲಿ 8 ಎಂಜಿಡಿ ನೇತ್ರಾವತಿಯಿಂದ ಸಿಗುತ್ತಿದೆ. 2 ಎಂಜಿಡಿ ತನ್ನ ಪ್ರದೇಶದಲ್ಲಿಯೇ ಸಂಸ್ಕರಿಸಿದ ನೀರಾದರೆ ಉಳಿದ 4 ಎಂಜಿಡಿ ನೀರನ್ನು ತ್ಯಾಜ್ಯಸಂಸ್ಕರಣೆ, ಮಳೆ ನೀರು ಸಂಗ್ರಹದಿಂದ ಪಡೆಯುತ್ತಿದೆ.
ಹಿಮ್ಮುಖ ಪರಾಸರಣ(ರಿವರ್ಸ್ ಓಸ್ಮೋಸಿಸ್)
- ಹಿಮ್ಮುಖ ಪರಾಸರಣ (ಆರ್ಒ) ಅಥವಾ ವಿಪರ್ಯಯ ಪರಾಸರಣ (Reverse Osmosis –RO) ಕುಡಿಯುವ ನೀರಿನಿಂದ ಅಯಾನುಗಳು, ಅಣುಗಳು, ಮತ್ತು ದೊಡ್ಡ ಕಣಗಳನ್ನು ತೆಗೆಯಲು ಅರೆ ಪ್ರವೇಶಸಾಧ್ಯ ಪೊರೆಯನ್ನು ಬಳಸುವ ಒಂದು ಜಲ ಶುದ್ಧೀಕರಣ ತಂತ್ರಜ್ಞಾನ.
- ಹಿಮ್ಮುಖ ಪರಾಸರಣದಲ್ಲಿ, ಪರಾಸರಣ ಒತ್ತಡವನ್ನು ದಾಟಲು ಅನ್ವಯಿಕ ಒತ್ತಡವನ್ನು ಬಳಸಲಾಗುತ್ತದೆ. ಅನ್ವಯಿಕ ಒತ್ತಡ ದ್ರಾವಕದ ರಾಸಾಯನಿಕ ಸಂಭಾವ್ಯತಾ ವ್ಯತ್ಯಾಸಗಳಿಂದ ಚಾಲಿತವಾಗಿರುತ್ತದೆ.
- ನೆನಪಿನಲ್ಲಿಡಬೇಕಾದ ಅಂಶವೆಂದರೆ, ಪರಾಸರಣ ಒತ್ತಡ ಒಂದು ಬಂಧಕ ಗುಣಲಕ್ಷಣವಾದರೆ, ಸಂಭಾವ್ಯತಾ ವ್ಯತ್ಯಾಸ ಒಂದು ಉಷ್ಣಬಲ ನಿಯತಾಂಕ. ಹಿಮ್ಮುಖ ಪರಾಸರಣ ನೀರಿನಿಂದ ಅನೇಕ ಬಗೆಯ ಕರಗಿದ ಮತ್ತು ನೇತಾಡುತ್ತಿರುವ ಕಣಗಳನ್ನು ತೆಗೆಯಬಲ್ಲದು, ಮತ್ತು ಕೈಗಾರಿಕಾ ಪ್ರಕ್ರಿಯೆಗಳು ಹಾಗೂ ಕುಡಿಯುವ ನೀರಿನ ಉತ್ಪಾದನೆ ಎರಡರಲ್ಲೂ ಬಳಸಲ್ಪಡುತ್ತದೆ.
- ಪರಿಣಾಮವೇನೆಂದರೆ ದ್ರಾವಣವನ್ನು ಪೊರೆಯ ಒತ್ತಡದ ಬದಿಯಲ್ಲಿ ಉಳಿಸಿಕೊಳ್ಳಲಾಗುತ್ತದೆ ಮತ್ತು ಶುದ್ಧ ದ್ರಾವಕವನ್ನು ಬೇರೆ ಬದಿಗೆ ಹೋಗಲು ಆಗಗೊಡಲಾಗುತ್ತದೆ. ಈ ಪೊರೆಯು ದೊಡ್ಡ ಅಣುಗಳು ಅಥವಾ ಅಯಾನುಗಳನ್ನು ರಂಧ್ರಗಳ ಮೂಲಕ ಹೋಗಲು ಬಿಡಬಾರದು, ಆದರೆ ದ್ರಾವಣದ ಸಣ್ಣ ಘಟಕಗಳನ್ನು ಮುಕ್ತವಾಗಿ ಹೋಗಲು ಬಿಡಬೇಕು.
ರಾಜ್ಯ ಯುವ ಸಂಸತ್ತು ಪ್ರಶಸ್ತಿ
ಸುದ್ಧಿಯಲ್ಲಿ ಏಕಿದೆ ? ಶ್ರೀ ಶ್ರೀ ಆಯುರ್ವೇದ ಕಾಲೇಜಿನಲ್ಲಿ 2019ರ ರಾಜ್ಯ ಯುವ ಸಂಸತ್ತು ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಶ್ರೀ ಶ್ರೀ ಆಯುರ್ವೇದ ಕಾಲೇಜಿನ ಅಂಜನಾಕ್ಷಿ ಎಂ.ಎಸ್ ಅವರಿಗೆ ರಾಜ್ಯ ಯುವ ಸಂಸತ್ತು ಪ್ರಶಸ್ತಿ ದೊರತಿದೆ, ಮೆಕ್ಯಾನಿಕಲ್ ಎಂಜಿನೀಯರ್ ಜಯಂತ್ ಎನ್ ಆರ್ ಎಂಬವರಿಗೆ 2ನೇ ಸ್ಥಾನ ದೊರಕಿದೆ.
“ನ್ಯಾಷನಲ್ ಯೂತ್ ಪಾರ್ಲಿಮೆಂಟ್ ಫೆಸ್ಟಿವಲ್”
- ಯೂತ್ ಅಫೇರ್ಸ್ ಮತ್ತು ಸ್ಪೋರ್ಟ್ಸ್ ಸಚಿವಾಲಯವು ದೇಶದ ಪ್ರತಿ ಜಿಲ್ಲೆಗೆ ಯುವ ಉತ್ಸವವನ್ನು “ನ್ಯಾಷನಲ್ ಯೂತ್ ಪಾರ್ಲಿಮೆಂಟ್ ಫೆಸ್ಟಿವಲ್” ಎಂದು ಆಚರಿಸಲು ಉದ್ದೇಶಿಸಿದೆ. ಜಿಲ್ಲಾ ಯೂತ್ ಪಾರ್ಲಿಮೆಂಟ್ಗಳನ್ನು ಸಂಘಟಿಸುವುದು ಮತ್ತು ಉತ್ಸವವನ್ನು ಯುವಕರ ಬಳಿಗೆ ತೆಗೆದುಕೊಂಡುಹೋಗುವುದರಿಂದ ದೇಶದ ಹೆಚ್ಚಿನ ಸಂಖ್ಯೆಯ ಯುವಜನರಿಗೆ ಭಾಗವಹಿಸಲು ಅವಕಾಶ ನೀಡುತ್ತದೆ.
- ನ್ಯಾಷನಲ್ ಯೂತ್ ಪಾರ್ಲಿಮೆಂಟ್ ಫೆಸ್ಟಿವಲ್ 2019 ಅನ್ನು “ಹೊಸ ಭಾರತದ ಧ್ವನಿ” ” ಮತ್ತು “ಪರಿಹಾರಗಳನ್ನು ಹುಡುಕಿ ಮತ್ತು ನೀತಿಗೆ ಕೊಡುಗೆ ನೀಡಿ” ಎಂಬ ವಿಷಯದ ಮೇಲೆ ಆಯೋಜಿಸಲಾಗಿದೆ.
- 18-25 ವರ್ಷಗಳ ವಯಸ್ಸಿನ ಯುವಕರನ್ನು ಯುವಜನ ಸಂಸತ್ ಸದಸ್ಯರಲ್ಲಿ ಭಾಗವಹಿಸಲು ಆಹ್ವಾನಿಸಲಾಗುತ್ತದೆ.
- ಈ ವಯಸ್ಸಿನ ಬ್ರಾಕೆಟ್ನಲ್ಲಿ ಮತ ಚಲಾಯಿಸಲು ಅವಕಾಶ ಮಾಡಿಕೊಂಡಿರುವ ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲದ ಯುವಕರ ಧ್ವನಿಯನ್ನು ಕೇಳಲು ಇದನ್ನು ಮಾಡಲಾಗುತ್ತದೆ.
- ನ್ಯಾಷನಲ್ ಯೂತ್ ಪಾರ್ಲಿಮೆಂಟ್ ಫೆಸ್ಟಿವಲ್ ಕೂಡ ಸಾರ್ವಜನಿಕ ಸಮಸ್ಯೆಗಳೊಂದಿಗೆ ತೊಡಗಿಸಿಕೊಳ್ಳಲು ಯುವಕರನ್ನು ಪ್ರೋತ್ಸಾಹಿಸುತ್ತದೆ, ಸಾಮಾನ್ಯ ವ್ಯಕ್ತಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದು, ಅವರ ಅಭಿಪ್ರಾಯವನ್ನು ರೂಪಿಸುತ್ತದೆ ಮತ್ತು ಇವುಗಳನ್ನು ಸ್ಪಷ್ಟವಾಗಿ ಹೇಳುವುದಾಗಿದೆ.
- ಹೊಸ ಭಾರತದ ದೃಷ್ಟಿಗೆ ಸಂಬಂಧಿಸಿದ ಮತ್ತು ಪರಿಣಾಮಕಾರಿ ಧ್ವನಿಗಳು ಇದನ್ನು ತೆಗೆದುಕೊಳ್ಳಲು ನೀತಿ ನಿರ್ಮಾಪಕರು ಮತ್ತು ಕಾರ್ಯಗತಗಾರರಿಗೆ ಲಭ್ಯವಾಗುವಂತೆ ಮಾಡಲು ಮತ್ತು ದಾಖಲಿಸಲ್ಪಡುತ್ತವೆ.
ಅದನ್ನು ಹೇಗೆ ಆಯೋಜಿಸಲಾಗುವುದು?
- ನ್ಯಾಷನಲ್ ಯೂತ್ ಪಾರ್ಲಿಮೆಂಟ್ ಫೆಸ್ಟಿವಲ್ 2019 ಅನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ:
- ಜಿಲ್ಲಾ ಮಟ್ಟದಲ್ಲಿ ಡಿಸ್ಟ್ರಿಕ್ಟ್ ಯೂತ್ ಪಾರ್ಲಿಮೆಂಟ್ (ಡಿವೈಪಿ).
- ರಾಜ್ಯ ಮಟ್ಟದಲ್ಲಿ ರಾಜ್ಯ ಯುವ ಸಂಸತ್ತು (ಎಸ್ವೈಪಿ).
- ನ್ಯಾಷನಲ್ ಯೂತ್ ಪಾರ್ಲಿಮೆಂಟ್ (ಎನ್ವೈಪಿ) ರಾಷ್ಟ್ರೀಯ ಮಟ್ಟದಲ್ಲಿ.
- ಗರಿಷ್ಠ 50 ಸ್ಪೀಕರ್ಗಳು ಡಿಜಿಟಲ್ ಸ್ಕ್ರೀನಿಂಗ್ ಮತ್ತು ವಾಕ್ ಇನ್ ಪ್ರಕ್ರಿಯೆಯಿಂದ 50 ಅತ್ಯುತ್ತಮ ಸ್ಪೀಕರ್ಗಳು, ಪ್ರತಿ ಜಿಲ್ಲೆಯ ಸ್ಕ್ರೀನಿಂಗ್ ಸಮಿತಿಯಿಂದ ಆಯ್ಕೆಯಾದರು, ಜಿಲ್ಲಾ ಯುವ ಸಂಸತ್ ಸದಸ್ಯರು ಭಾಗವಹಿಸುತ್ತಾರೆ. ಪ್ರತಿ ಜಿಲ್ಲಾ ಯುವ ಪಾರ್ಲಿಮೆಂಟ್ನಿಂದ ತೀರ್ಪುಗಾರರ ಆಯ್ಕೆ ಮಾಡುವ ಅತ್ಯುತ್ತಮ ಮೂರು ಭಾಷಿಕರು ರಾಜ್ಯ ಯುವ ಸಂಸತ್ತಿನಲ್ಲಿ ಭಾಗವಹಿಸಿ. ಅಂತೆಯೇ, ಪ್ರತಿ ಯುವ ಯೂತ್ ಪಾರ್ಲಿಮೆಂಟ್ನಿಂದ ಆಯ್ಕೆಯಾದ ಇಬ್ಬರು ಉತ್ತಮ ಭಾಷಣಕಾರರು ರಾಷ್ಟ್ರೀಯ ಯುವ ಸಂಸತ್ತಿನ ಭಾಷಣಕಾರರಾಗಿ ಭಾಗವಹಿಸುತ್ತಾರೆ. ಜಿಲ್ಲಾ ಯುವ ಸಂಸತ್ನಲ್ಲಿ (ಡಿವೈಪಿ) ಪ್ರತಿ ಜಿಲ್ಲೆಯ ಉನ್ನತ ಸ್ಕೋರರ್ ನ್ಯಾಷನಲ್ ಯೂತ್ ಪಾರ್ಲಿಮೆಂಟ್ (ಎನ್ವೈಪಿ) ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ.
- ನ್ಯಾಷನಲ್ ಯೂತ್ ಪಾರ್ಲಿಮೆಂಟ್ನಲ್ಲಿ ಮೂರು ಮಂದಿ ಅತ್ತ್ಯುತ್ತಮ ಮಾತನಾಡುವವರಿಗೆ ಕ್ರಮವಾಗಿ ರೂ. 2 ಲಕ್ಷ, ರೂ. 50 ಲಕ್ಷ ಮತ್ತು ರೂ.ಗಿ 1 ಲಕ್ಷ ರೂ.ಪ್ರಧಾನ ಮಂತ್ರಿಗಳು ನೀಡುತ್ತಾರೆ.
ಪೆಟ್ರೊಟೆಕ್ -2019
ಸುದ್ಧಿಯಲ್ಲಿ ಏಕಿದೆ ? 13ನೇ ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ಸಮ್ಮೇಳನ ಪೆಟ್ರೊಟೆಕ್ 2019ವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ” ಭಾರತ ಇತ್ತೀಚೆಗೆ 6ನೇ ಅತಿ ದೊಡ್ಡ ಎಕಾನಮಿಯಾಗಿ ಹೊರಹೊಮ್ಮಿದೆ. ವರದಿಯೊಂದರ ಪ್ರಕಾರ 2030ಕ್ಕೆ ಭಾರತ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ” ಎಂದರು.
ಪೆಟ್ರೋಟೆಕ್ -2019 ಬಗ್ಗೆ
- ತೈಲ ಮತ್ತು ಅನಿಲ ಉದ್ಯಮದಲ್ಲಿ ವೀಕ್ಷಣೆ ವಿನಿಮಯ ಮತ್ತು ಜ್ಞಾನ, ಪರಿಣತಿ ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಇಂಟರ್ನ್ಯಾಷನಲ್ ಆಯಿಲ್ & ಗ್ಯಾಸ್ ಕಾನ್ಫರೆನ್ಸ್ನ ಪೆಟ್ರೋಟೆಕ್ ಸರಣಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಜ್ಞರ ದ್ವಿವಾರ್ಷಿಕ ವೇದಿಕೆಯಾಗಿದೆ.
- ಕಳೆದ ಎರಡು ದಶಕಗಳಿಂದ ನಡೆಯುತ್ತಿದ್ದು , ಪೆಟ್ರೊಟೆಕ್ -2019 ಎಂಬುದು ಭಾರತೀಯ ಹೈಡ್ರೋಕಾರ್ಬನ್ ಸೆಕ್ಟರ್ನ ಬೆಳೆಯುತ್ತಿರುವ ಪಾಲ್ಗೊಳ್ಳುವಿಕೆಯೊಂದಿಗೆ ಪ್ರಮುಖ ಘಟನೆಯ 13 ನೇ ಆವೃತ್ತಿಯಾಗಿದೆ .
- ಪೆಟ್ರೋಲಿಯಂ ತಂತ್ರಜ್ಞಾನ, ಪರಿಶೋಧನೆ, ಕೊರೆಯುವಿಕೆ, ಉತ್ಪಾದನೆ ಮತ್ತು ಪ್ರಕ್ರಿಯೆ, ಸಂಸ್ಕರಣ, ಪೈಪ್ಲೈನ್ ಸಾಗಣೆ, ಪೆಟ್ರೋಕೆಮಿಕಲ್ಸ್, ನೈಸರ್ಗಿಕ ಅನಿಲ, ಎಲ್ಎನ್ಜಿ, ಪೆಟ್ರೋಲಿಯಂ ವ್ಯಾಪಾರ, ಅರ್ಥಶಾಸ್ತ್ರ, ಕಾನೂನು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ, ಮಾರ್ಕೆಟಿಂಗ್ನಲ್ಲಿ ಬೆಳವಣಿಗೆಯ ಕ್ಷೇತ್ರಗಳನ್ನು ಅನ್ವೇಷಿಸಲು ಈವೆಂಟ್ ಉದ್ದೇಶಿಸಿದೆ.
- ಥೀಮ್: ಇನ್ನೋವೇಶನ್ ಮತ್ತು ಸಹಯೋಗ ಮೂಲಕ ಹೊಸ ಶಕ್ತಿ ಪ್ರಪಂಚ ಅನ್ನು ರೂಪಿಸುವುದು.
ಗಗನಯಾತ್ರಿಗಳಿಗೆ ಭಾಯತೀಯ ವಾಯುಪಡೆಯಿಂದ ತರಬೇತಿ
ಸುದ್ಧಿಯಲ್ಲಿ ಏಕಿದೆ ? ಗಗನಯಾನ್ ಯೋಜನೆಗೆ ಪ್ರಾಥಮಿಕ ಹಂತದಲ್ಲಿ 10 ಬಾಹ್ಯಾಕಾಶಯಾನಿಗಳನ್ನು ಸಜ್ಜುಗೊಳಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ 10 ಜನರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಭಾರತೀಯ ವಾಯುಪಡೆಗೆ (ಐಎಎಫ್) ವಹಿಸಿದೆ.
- ಮೊದಲ ಎರಡು ಹಂತಗಳ ತರಬೇತಿ ಬೆಂಗಳೂರಿನಲ್ಲಿರುವ ಐಎಎಫ್ನ ಬಾಹ್ಯಾಕಾಶ ಔಷಧ ಸಂಸ್ಥೆಯಲ್ಲಿ (ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್-ಐಎಎಂ) ತರಬೇತಿ ಕಾರ್ಯಕ್ರಮ ನಡೆಯಲಿದೆ.
- ಅಂತಿಮ ಘಟ್ಟದ ತರಬೇತಿ ವಿದೇಶದಲ್ಲಿ ಆಯೋಜನೆಗೊಳ್ಳಲಿದೆ. ರಷ್ಯಾ, ಫ್ರಾನ್ಸ್ ಸೇರಿ ಎರಡ್ಮೂರು ರಾಷ್ಟ್ರಗಳ ಹೆಸರು ಚರ್ಚೆಯಲ್ಲಿದೆ.
- ಮೊದಲಿಗೆ 10 ಜನರಿಗೆ ಗಗನಯಾನದ ತರಬೇತಿ ನೀಡಲಾಗುತ್ತದೆ. ಕೊನೆಯಲ್ಲಿ ಇವರ ನಡುವೆ ಮೂವರನ್ನು ಗಗನಯಾನಕ್ಕೆ ಆಯ್ಕೆ ಮಾಡಲಾಗುತ್ತದೆ.
ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ (ಬೆಂಗಳೂರು-IAM) ಬಗ್ಗೆ
- ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗೆ (ಆರ್ಮ್ಡ್ ಫೋರ್ಸಸ್ ಮೆಡಿಕಲ್ ಸರ್ವಿಸಸ್) ಸಂಯೋಜಿತವಾಗಿರುವ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ (ಬೆಂಗಳೂರು-IAM) ಭಾರತದಲ್ಲಿ ಮಾತ್ರವಲ್ಲ, ಆಗ್ನೇಯ ಏಷ್ಯಾದಲ್ಲೇ ಬಾಹ್ಯಾಕಾಶ ಔಷಧಗಳ ಬಗ್ಗೆ ಸಂಶೋಧನೆ ನಡೆಸುವ ಏಕೈಕ ಸಂಸ್ಥೆಯಾಗಿದೆ.
- ಇದು ಬಾಹ್ಯಾಕಾಶ ಔಷಧಗಳ ಸಂಶೋಧನೆ ಜತೆಗೆ ವಾಯುಪಡೆ ಸಿಬ್ಬಂದಿ ಮತ್ತು ಪೈಲಟ್ಗಳಿಗೆ ತರಬೇತಿ ನೀಡುತ್ತದೆ. ಈ ಸಂಸ್ಥೆ ಈ ಮೊದಲು 1980ರ ದಶಕದಲ್ಲಿ ಇಂಡೋ-ಸೋವಿಯತ್ ಬಾಹ್ಯಾಕಾಶ ಮಾನವ ಯಾತ್ರೆಗೆ ವೈದ್ಯಕೀಯ ಬೆಂಬಲ ನೀಡಿತ್ತು.
ಗಗನಯಾನ್ ಬಗ್ಗೆ
- ಬೆಂಗಳೂರಿನ ಇಸ್ರೋ ಪ್ರಧಾನ ಕೇಂದ್ರದಲ್ಲಿ ಮಾನವ ಬಾಹ್ಯಾಕಾಶ ಯಾತ್ರೆ ಕೇಂದ್ರವನ್ನು ಜನವರಿ 30ರಂದು ಉದ್ಘಾಟಿಸಲಾಗಿತ್ತು. ಗಗನಯಾನ ಯೋಜನೆಯ ಸಂಪೂರ್ಣ ಸಿದ್ಧತೆಗಳು ಇಲ್ಲಿ ನಡೆಯಲಿವೆ.
- ‘ಮಾನವ ಜೀವಹಾನಿಯ ಅಪಾಯ ತಡೆಯಲು ಮೊದಲಿಗೆ ಎರಡು ಮಾನವ ರಹಿತ ಯಾತ್ರೆಗಳನ್ನು ಇಸ್ರೋ ಕೈಗೊಳ್ಳಲಿದೆ.
- ಈ ಯಾತ್ರೆಗಳಲ್ಲಿ ಮಾನವನಂತೆಯೇ ಇರುವ ರೋಬೋಟ್ಗಳನ್ನು ಕಳುಹಿಸಲಾಗುತ್ತದೆ. ಮೊದಲ ಮಾನವರಹಿತ (ರೋಬೋಟ್ ಸಹಿತ) ಗಗನಯಾನ 202ರ ಡಿಸೆಂಬರ್ನಲ್ಲಿ ನಡೆಯಲಿದೆ. ಎರಡನೇ ಮಾನವ ರಹಿತ ಪ್ರಯೋಗ 201ರ ಜುಲೈನಲ್ಲಿ ನಡೆಯಲಿದೆ.
- ಅಂತಿಮವಾಗಿ ಮಾನವ ಸಹಿತ ಗಗನಯಾನ 2021ರ ಡಿಸೆಂಬರ್ನಲ್ಲಿ ನಡೆಸಲಾಗುವುದು.
- ಮಧ್ಯಮ ತರಗತಿಯ ಮಾನವ ನಿರ್ಮಿತ ಈ ಅಂತರಿಕ್ಷನೌಕೆ ಇಸ್ರೊದ ಸ್ವಯಂ ನಿರ್ಮಿತವಾಗಿದೆ. ಇದು ಇಬ್ಬರ ತಂಡವೊಂದನ್ನೊಳಗೊಂಡಂತೆ ಸುಮಾರು 3-ಟನ್ ತೂಕದ್ದಾಗಿದೆ.ಇದು ಭೂಮಿ ಸುತ್ತಲೂ ಕಕ್ಷೆಯ 248 ಮೈಲುಗಳು(400ಕಿ.ಮೀ)ಅಕ್ಷಾಂಶದ ಸುತ್ತಲೂ ಏಳುದಿನಗಳ ಕಾಲ ಸುತ್ತುವ ಗುರಿ ಹೊಂದಿತ್ತು. ಈ ತಂಡದ ವಾಹನದ ಅಭಿವೃದ್ಧಿಯೊಂದಿಗೆ ಇಸ್ರೊದ GSLV Mk IIರ ಉಡಾವಣೆಗೆ ಸದ್ಯ ಸಿದ್ದತೆ ಪ್ರಗತಿಯಲ್ಲಿದೆ. ಈ GSLV Mk II ವಿಶೇಷವಾಗಿ ಕ್ರೈಯೊಜನಿಕ್ ಎಂಜಿನ್ ನ ಉನ್ನತೀಕರಣದ ತಾಂತ್ರಿಕತೆಯಾಗಿದೆ.








