“12th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಸತ್ಯಾಗ್ರಹದಿಂದ ಸ್ವಚ್ಛಾಗ್ರಹ

 • ಚಂಪಾರಣ್ ಸತ್ಯಾಗ್ರಹಕ್ಕೆ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರ ಹಮ್ಮಿಕೊಂಡಿದ್ದ 1 ವರ್ಷದ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು.
 • ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವನ್ನು ಶ್ಲಾಘಿಸಿದರು.
 • ರಾಜ್ಯ ಸರ್ಕಾರ ಸತ್ಯಾಗ್ರಹ ದಿಂದ ಸಚ್ಛಾಗ್ರಹದತ್ತ ತಿರುಗಿದೆ ಎಂದರು. ಕಳೆದ ಒಂದು ವಾರದ ಅವಧಿಯಲ್ಲಿ 8.5 ಲಕ್ಷ ಶೌಚಗೃಹ ನಿರ್ಮಾಣ ಮಾಡಲಾಗಿದೆ. ಇದು ಸರಳವಾದ ಕಾರ್ಯವಲ್ಲ ಎಂದು ಪ್ರಶಂಸಿಸಿದರು.
 • 20,000 ‘ಸತ್ಯಾಗ್ರಹಿ’ ಸ್ವಚ್ಛತಾ ಅಭಿಯಾನದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 • ಬಿಹಾರದ ಚಂಪಾರಣ್​ನಲ್ಲಿ ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ನಡೆದ ಸತ್ಯಾಗ್ರಹಕ್ಕೆ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2017ರ ಏಪ್ರಿಲ್​ನಲ್ಲಿ ಒಂದು ವರ್ಷದ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು.
 • ಈ ಅಂಗವಾಗಿ 3,000 ಕೋಟಿ ರೂ. ಮೌಲ್ಯದ 11 ಯೋಜನೆಗಳನ್ನು ಆರಂಭಿಸಿತ್ತು.

ಚಂಪಾರಣ್ ಸತ್ಯಾಗ್ರಹ – ಮೊದಲ ಕಾನೂನು ಭಂಗ  ಚಳುವಳಿ(1917)

 • ಬ್ರಿಟಿಷ್ ಆಳ್ವಿಕೆಯಲ್ಲಿ, ಬಿಹಾರದ ಚಂಪಾರಣ್ ಜಿಲ್ಲೆಯಲ್ಲಿ ಅನೇಕ ರೈತರನ್ನು ತಮ್ಮ ಭೂಮಿಯಲ್ಲಿ3/20 ಭಾಗದಲ್ಲಿ  ಇಂಡಿಗೊವನ್ನು ಬೆಳೆಯುವಂತೆ ಒತ್ತಾಯಪಡಿಸಲಾಯಿತು.
 • ಜರ್ಮನರು ಅಗ್ಗದ ಕೃತಕ ಬಣ್ಣವನ್ನು ಕಂಡುಹಿಡಿದಿದ್ದರು, ಆದ್ದರಿಂದ ಇಂಡಿಗೊಗೆ ಬೇಡಿಕೆ ಇಳಿಯಿತು. ಕೆಲವೊಂದು ಬಾಡಿಗೆದಾರರು ಇಂಡಿಗೊವನ್ನು ಬೆಳೆಸಿಕೊಳ್ಳದ ಕಾರಣದಿಂದಾಗಿ ಪ್ರತಿಯಾಗಿ ಹೆಚ್ಚು ಬಾಡಿಗೆ ನೀಡಿದರು.
 • ಆದಾಗ್ಯೂ, ಮೊದಲನೆಯ ಜಾಗತಿಕ ಯುದ್ಧದ ಸಮಯದಲ್ಲಿ ಜರ್ಮನ್ ವರ್ಣವು ಲಭ್ಯವಿಲ್ಲದ ಕಾರಣ ಇಂಡಿಗೊ ಮತ್ತೆ ಲಾಭದಾಯಕವಾಯಿತು. ಆದ್ದರಿಂದ ಅನೇಕ ಬಾಡಿಗೆದಾರರು ಮತ್ತೆ ತಮ್ಮ ಭೂಮಿಯಲ್ಲಿ 3/20ಭಾಗದಲ್ಲಿ ಇಂಡಿಗೋ ಬೆಳೆಯುವಂತೆ ಒತ್ತಾಯಪಡಿಸಲಾಯಿತು.
 • ಇದನ್ನು ಎದುರಿಸಲು, ರಾಜ್ ಕುಮಾರ್ ಶುಕ್ಲಾ ಎಂಬ ಹಣದ ಸಾಲದಾತನು ಗಾಂಧೀಜಿಯವರನ್ನುಭೇಟಿ ಮಾಡಿ   ಚಂಪಾರಣಕ್ಕೆ  ಬಂದು ಸಹಾಯ ಮಾಡುವಂತೆ ವಿನಂತಿಸಿದನು.
 • ಗಾಂಧೀಜಿಯವರು ರಾಜೇಂದ್ರ ಪ್ರಸಾದ್ ,ಮಝಹರ್-ಉಲ್-ಹಕ್ ,ಮಹದೇವ್ ದೇಸಾಯಿ ,ನರಹರಿ ಪಾರೇಖ್ ,ಜೆ.ಬಿ.ಕೃಪಲಾನಿ ಅವರುಗಳನ್ನು ಒಳಗೊಂಡ ತಂಡದೊಂದಿಗೆ ಚಂಪಾರಣಕ್ಕೆ ತೆರಳಿ ಕಾನೂನು ಭಂಗ ಚಳುವಳಿಯನ್ನು ಪ್ರಾರಂಭಿಸಿದರು

ಪಾಕ್-ಬಾಂಗ್ಲಾ ಗಡಿಗೆ ಸ್ಮಾರ್ಟ್ ಬೇಲಿ

 • ಅಕ್ರಮ ನುಸುಳುಕೋರರು, ಮಾದಕ ವಸ್ತು, ನಕಲಿ ನೋಟು ಜಾಲಗಳ ಹಾವಳಿ ತಡೆಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಗಡಿಯನ್ನು ಆಧುನಿಕ ತಂತ್ರಜ್ಞಾನ ಬಳಸಿ ಸಂಪೂರ್ಣವಾಗಿ ಮುಚ್ಚುವ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಸ್ಮಾರ್ಟ್ ಫೆನ್ಸ್ ಪ್ರಯೋಗ ಅಸ್ಸಾಂನಲ್ಲಿ ಜಾರಿಗೊಳಿಸಲಾಗಿದೆ.
 • ಕಾಂಪ್ರಹೆನ್ಸೀವ್ ಇಂಟಗ್ರೇಟೆಡ್ ಬಾರ್ಡರ್ ಮ್ಯಾನೇಜ್​ವೆುಂಟ್ ಸಿಸ್ಟಂ (ಸಿಐಬಿಎಂಎಸ್) ಹೆಸರಿನ ಈ ಪ್ರಾಯೋಗಿಕ ವ್ಯವಸ್ಥೆ ಬ್ರಹ್ಮಪುತ್ರ ನದಿ ತೀರದ ಧುಬ್ರಿಯಲ್ಲಿನ ಗಡಿಭಾಗದ 55 ಕಿ.ಮೀ. ಉದ್ದಕ್ಕೂ ಅಳವಡಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್​ಎಫ್) ಹೇಳಿದೆ.

ಗೋಡೆ, ಬೇಲಿ ನಿರ್ಮಾಣ ಅಸಾಧ್ಯ

 • ಯಾವುದೇ ತಡೆಗೋಡೆ ಅಥವಾ ತಂತಿಬೇಲಿಗಳು ಇಲ್ಲದೆ ಕೇವಲ ತಂತ್ರಜ್ಞಾನ ಆಧಾರಿತ ಕಣ್ಗಾವಲು ಮತ್ತು ಎಚ್ಚರಿಕೆ ಗಂಟೆ ಸಾಧನಗಳನ್ನು ಬಳಸುವ ‘ಸ್ಮಾರ್ಟ್ ಫೆನ್ಸ್’ ವ್ಯವಸ್ಥೆಯನ್ನು ಪರೀಕ್ಷಿಸುತ್ತಿದ್ದೇವೆ. ನದಿ ಹರಿವು ಜೋರಾಗಿರುವ ಪ್ರದೇಶವಾದ್ದರಿಂದ ಗೋಡೆ ಅಥವಾ ತಂತಿ ಬೇಲಿ ನಿರ್ಮಾಣ ಸಾಧ್ಯವಿಲ್ಲ. ಸದ್ಯಕ್ಕೆ ಯೋಧರು ನಿಗದಿತ ವೇಳೆಗೆ ದೋಣಿಗಳಲ್ಲಿ ಗಸ್ತು ತಿರುಗುವ ಮೂಲಕ ನಿಗಾ ವಹಿಸುತ್ತಿದ್ದಾರೆ

ಏನಿದು ಸ್ಮಾರ್ಟ್ ಫೆನ್ಸ್?

 • ಸಾಂಪ್ರದಾಯಿಕ ರೀತಿಯಂತೆ ತಡೆಗೋಡೆಗಳು, ತಂತಿ ಬೇಲಿಗಳನ್ನು ನಿರ್ಮಾಣ ಮಾಡಲು ಆಗದ ಗುಡ್ಡಗಾಡು ಮತ್ತು ನದಿಹರಿವು ಹೆಚ್ಚಿರುವ ಪ್ರದೇಶಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ನಿಗಾ ಇರಿಸುವುದು. ಸಿಸಿ ಕ್ಯಾಮೆರಾ, ಸೆನ್ಸರ್, ಎಂಟು ದಿಕ್ಕುಗಳಲ್ಲಿನ ಚಲನೆ ಗ್ರಹಿಸುವ ವಿಕಿರಣ ಸಾಧನಗಳು, ಅಲಾರಾಂ ವ್ಯವಸ್ಥೆಗಳನ್ನು ಬಳಸಿ ಶತ್ರು ರಾಷ್ಟ್ರದ ಯೋಧರು, ಉಗ್ರರು ಗಡಿ ನುಸುಳದಂತೆ ಕಟ್ಟೆಚ್ಚರ ವಹಿಸುವುದು

ಶ್ರೇಯಸಿಗೆ ಸ್ವರ್ಣ ಪದಕದ ಶ್ರೇಯಸ್ಸು

 • ಮಹಿಳೆಯರ ಡಬಲ್ ಟ್ರಾ್ಯಪ್​ನಲ್ಲಿ ಭಾರತಕ್ಕೆ ಪದಕದ ನಿರೀಕ್ಷೆ ಇತ್ತಾದರೂ ಸ್ವರ್ಣ ಪದಕ ಬೇಟೆ ಮಾತ್ರ ಅನಿರೀಕ್ಷಿತವೆನ್ನಬೇಕು. 2014ರ ಗ್ಲಾಸ್ಗೋ ಗೇಮ್್ಸ ರಜತ ವಿಜೇತೆ ಶ್ರೇಯಸಿ ಸಿಂಗ್ ಗೋಲ್ಡ್ ಕೋಸ್ಟ್​ನಲ್ಲಿ ತಮ್ಮ ಪದಕವನ್ನು ಸ್ವರ್ಣವನ್ನಾಗಿ ಬದಲಾಯಿಸಿಕೊಂಡದ್ದು ವಿಶೇಷ.
 • ಫೈನಲ್​ನಲ್ಲಿ ಅವರು ಆಸ್ಟ್ರೇಲಿಯಾದ ಫೇವರಿಟ್ ಶೂಟರ್ ಎಮ್ಮಾ ಕಾಕ್ಸ್ ಜತೆ 96 ಅಂಕದೊಂದಿಗೆ ಸಮಬಲ ಸಾಧಿಸಿದ್ದರು. ಬಳಿಕ ನಡೆದ ಶೂಟ್​ಆಫ್​ನಲ್ಲಿ 26 ವರ್ಷದ ಶೂಟರ್ ಶ್ರೇಯಸಿ ಎರಡೂ ಗುರಿಗಳನ್ನು ನಿಖರವಾಗಿಟ್ಟರೆ, ಕಾಕ್ಸ್ ಗುರಿ ತಪ್ಪಿದರು.
 • ಸ್ಪರ್ಧೆಯಲ್ಲಿದ್ದ ಮತ್ತೋರ್ವ ಭಾರತೀಯರಾದ ವರ್ಷಾ ವರ್ಮನ್ 86 ಅಂಕದೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಸ್ಕಾಟ್ಲೆಂಡ್​ನ ಲಿಂಡಾ ಪಿಯರ್​ಸನ್ (87) ಕಂಚಿನ ಪದಕ ಗೆದ್ದರು.
 • ದೆಹಲಿ ವಿವಿ ಪದವೀಧರೆ ಶ್ರೇಯಸಿ ಅವರ ತಂದೆ ಮತ್ತು ಅಜ್ಜ ಭಾರತೀಯ ರೈಫಲ್ ಅಸೋಸಿಯೇಷನ್​ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರಿನ್ನು ಟ್ರಾ್ಯಪ್ ವಿಭಾಗದಲ್ಲೂ ಕಣಕ್ಕಿಳಿಯಲಿದ್ದಾರೆ.

ಡಿಫೆನ್ಸ್‌ ಎಕ್ಸ್‌ಪೋಗೆ ಪ್ರಧಾನಿ ಮೋದಿ ಚಾಲನೆ

 • ಚೆನ್ನೈನಲ್ಲಿ 10ನೇ ‘ಡಿಫೆನ್ಸ್‌ ಎಕ್ಸ್‌ಪೋ 2018’ಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ, 500 ಭಾರತೀಯ ಕಂಪನಿಗಳು ಮತ್ತು 150ಕ್ಕೂ ಹೆಚ್ಚು ವಿದೇಶಿ ಕಂಪನಿಗಳು ಎಕ್ಸ್ಪೋದಲ್ಲಿ ಭಾಗವಹಿಸಿವೆ.
 • ಕಳೆದ ಕೆಲವು ವರ್ಷಗಳಿಂದ ಭದ್ರತಾ ವಿಭಾಗಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸುವುದಕ್ಕೆ ಅನುಮತಿ ನೀಡುವುದು, ರಕ್ಷಣಾ ವಸ್ತುಗಳ ರವಾನೆ, ರಕ್ಷಣಾ ರಫ್ತಿಗೆ ಅನುಮತಿ, ವಿದೇಶಿ ನೇರ ಹೂಡಿಕೆ ಹೀಗೆ ನಾನಾ ವಿಭಾಗಗಳಲ್ಲಿ ಉತ್ತಮ ಆರಂಭ ನೀಡಿದ್ದೇವೆ. ‘ಇನ್ನೋವೇಷನ್‌ ಫಾರ್‌ ಡಿಫೆನ್ಸ್‌ ಎಕ್ಸೆಲೆನ್ಸ್‌ ಸ್ಕೀಂ’ಅನ್ನು ಆರಂಭಿಸಿದ್ದೇವೆ. ಇದು ರಾಷ್ಟ್ರಾದ್ಯಂತ ಡಿಫೆನ್ಸ್‌ ಹಬ್‌ಗಳನ್ನು ಹುಟ್ಟುಹಾಕುತ್ತಿದ್ದು, ರಕ್ಷಣಾ ವಿಭಾಗದಲ್ಲಿ ಅದ್ಭುತ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
 • ರಾಷ್ಟ್ರದಲ್ಲಿ ಎರಡು ರಕ್ಷಣಾ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ನಿರ್ಧರಿಸಿದ್ದೇವೆ. ಒಂದು ತಮಿಳುನಾಡಿನಲ್ಲಿ, ಮತ್ತೊಂದು ಉತ್ತರ ಪ್ರದೇಶದಲ್ಲಿ. ಇದರಿಂದ ರಕ್ಷಣಾ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ಸಿಗಲಿದ್ದು, ಆರ್ಥಿಕ ಅಭಿವೃದ್ಧಿ ಮತ್ತು ರಕ್ಷಣಾ ಕೈಗಾರಿಕಾ ಬೆಳವಣಿಗೆಗೆ ಸಹಕಾರಿಯಾಗಿದೆ.

~~~***ದಿನಕ್ಕೊಂದು ಯೋಜನೆ***~~~   

ಪ್ರಧಾನ್ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ  ಅಭಿಯಾನ್ (PMGDISHA)

 •  PMGDISHA ಮಾರ್ಚ್ 2019 ರ ವೇಳೆಗೆ 6 ಕೋಟಿ ಗ್ರಾಮೀಣ ಮನೆಗಳನ್ನು ಡಿಜಿಟಲಿ ಸಾಕ್ಷರನ್ನಾಗಿ ಮಾಡುವ ನಿರೀಕ್ಷೆಯಿದೆ, ಇದು ವಿಶ್ವದಲ್ಲೇ ಅತಿ ದೊಡ್ಡ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವಾಗಿದೆ.
 • ಗ್ರಾಮೀಣ ಪ್ರದೇಶಗಳಲ್ಲಿ ನಾಗರೀಕರಿಗೆ ಡಿಜಿಟಲ್ ಸಾಕ್ಷರತೆಯನ್ನು ನೀಡುವಲ್ಲಿ PMGDISHA ಗುರಿ ಹೊಂದಿದೆ. ಇದು ಮಾಹಿತಿ, ಜ್ಞಾನ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಪ್ರವೇಶವನ್ನು ನೀಡುತ್ತದೆ.
 • ಇದು ಜೀವನೋಪಾಯದ ಉತ್ಪಾದನೆ ಮತ್ತು ಡಿಜಿಟಲ್ ಪಾವತಿಗಳ ಮೂಲಕ ಆರ್ಥಿಕ ಸೇರ್ಪಡೆಗಾಗಿ ಮಾರ್ಗಗಳನ್ನು ಸೃಷ್ಟಿಸುತ್ತದೆ ಮತ್ತು ಡಿಜಿಟಲ್ ವಿಭಾಗವನ್ನು ಸೇತುವೆಗೆ ಸಹಾಯ ಮಾಡುತ್ತದೆ.
 • ಮಾರ್ಚ್ 2019 ರ ವೇಳೆಗೆ ದೇಶದಲ್ಲಿ ಸುಮಾರು 40% ಗ್ರಾಮೀಣ ಮನೆಗಳನ್ನು ತಲುಪಲು ನಿರೀಕ್ಷಿಸಲಾಗಿದೆ. ಇದರ ಅಡಿಯಲ್ಲಿ, ಗ್ರಾಮೀಣ ಪ್ರದೇಶದ ಜನರು ಕಂಪ್ಯೂಟರ್, ಟ್ಯಾಬ್ಲೆಟ್, ಸ್ಮಾರ್ಟ್ಫೋನ್ಗಳು ಇತ್ಯಾದಿಗಳನ್ನು ನಡೆಸಲು ತರಬೇತಿ ನೀಡುತ್ತಾರೆ ಮತ್ತು ಇಂಟರ್ನೆಟ್, ಸರ್ಕಾರಿ ಸೇವೆಗಳು, ಡಿಜಿಟಲ್ ಪಾವತಿಗಳನ್ನು ಕೈಗೊಳ್ಳುವುದು, ಇ-ಮೇಲ್ಗಳನ್ನು ರಚಿಸಿ, ಇತ್ಯಾದಿ.
 • ಎಸ್ಸಿಗಳು / ಎಸ್ಟಿಗಳು, ಅಲ್ಪಸಂಖ್ಯಾತರು, ಬಿಪಿಎಲ್ ಕುಟುಂಬದವರು, ವಿಭಿನ್ನವಾಗಿ-ವಿಂಗಡಿಸಲಾದ (ಧಿವ್ಯಾಂಗ್ಗಳು) ನಂತಹ ಸಮಾಜದ ಅಂಚಿನಲ್ಲಿರುವ ವಿಭಾಗಗಳು ಈ ಯೋಜನೆಯ ಒಂದು ಭಾಗವಾಗುತ್ತವೆ.

ಹಿನ್ನೆಲೆ

 • 71 ನೇ ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗನೈಸೇಶನ್ (ಎನ್ಎಸ್ಎಸ್ಒ) ಶಿಕ್ಷಣ 2014 ರ ಸಮೀಕ್ಷೆಯ ಪ್ರಕಾರ ಒಟ್ಟು 16.85 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ ಕೇವಲ 6% ರಷ್ಟು ಕಂಪ್ಯೂಟರ್ ಇದೆ.
 • ಇದು 15 ಕೋಟಿಗೂ ಹೆಚ್ಚು ಗ್ರಾಮೀಣ ಮನೆಗಳಲ್ಲಿ ಅಂದರೆ 94% ಕಂಪ್ಯೂಟರ್ಗಳಿಲ್ಲ ಎಂದು ತೋರಿಸುತ್ತದೆ. ಇದಲ್ಲದೆ, ಈ ಕುಟುಂಬಗಳು ಗಮನಾರ್ಹವಾಗಿ ಡಿಜಿಟಲ್ ಅನಕ್ಷರಸ್ಥರಾಗಿರಬಹುದು

~~~***ದಿನಕ್ಕೆ ಹತ್ತು ಪ್ರಶ್ನೋತ್ತರಗಳು***~~~

1. ಚಂಪಾರಣ್ ಸತ್ಯಾಗ್ರಹಕ್ಕೆ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ ಯಾವ ರಾಜ್ಯವು ಒಂದು ವರ್ಷದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು?
A. ಬಿಹಾರ
B. ಕೇರಳ
C. ಕರ್ನಾಟಕ
D. ಉತ್ತರ ಪ್ರದೇಶ

2. ಸ್ಮಾರ್ಟ್ ಫೆನ್ಸ್ ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1. ಪಾಕಿಸ್ತಾನ ಮತ್ತು ಚೀನಾ ಗಡಿಯನ್ನು ಆಧುನಿಕ ತಂತ್ರಜ್ಞಾನ ಬಳಸಿ ಸಂಪೂರ್ಣವಾಗಿ ಮುಚ್ಚುವ ಕೇಂದ್ರ ಸರ್ಕಾರದ ಯೋಜನೆಯಾಗಿದೆ
2. ಕಾಂಪ್ರಹೆನ್ಸೀವ್ ಇಂಟಗ್ರೇಟೆಡ್ ಬಾರ್ಡರ್ ಮ್ಯಾನೇಜ್ವೆುಂಟ್ ಸಿಸ್ಟಂ (ಸಿಐಬಿಎಂಎಸ್) ಹೆಸರಿನ ಈ ಪ್ರಾಯೋಗಿಕ ವ್ಯವಸ್ಥೆ ಬ್ರಹ್ಮಪುತ್ರ ನದಿ ತೀರದ ಧುಬ್ರಿಯಲ್ಲಿನ ಗಡಿಭಾಗದ 55 ಕಿ.ಮೀ. ಉದ್ದಕ್ಕೂ ಅಳವಡಿಸಲಾಗಿದೆ
A. ಮೊದಲನೇ ಹೇಳಿಕೆ ಸರಿಯಿದೆ
B. ಮೊದಲನೇ ಹೇಳಿಕೆ ತಪ್ಪಾಗಿದೆ
C. ಎರಡೂ ಹೇಳಿಕೆಗಳು ಸರಿಯಾಗಿದೆ
D. ಎರಡೂ ಹೇಳಿಕೆಗಳು ತಪ್ಪಾಗಿವೆ

3. ೨೦೧೪ ರ ಕಾಮನ್ವೆಲ್ತ್ ಗೇಮ್ಸ್ ಎಲ್ಲಿ ನಡೆಯಿತು ?
A. ಜಪಾನ್
B. ಚೀನಾ
C. ಗ್ಲ್ಯಾಸ್ಗೋ
D. ಭಾರತ

4. ಡಿಫೆನ್ಸ್ ಎಕ್ಸ್ಪೋ ಗೆ ಎಲ್ಲಿ ಚಾಲನೆ ನೀಡಲಾಗಿದೆ ?
A. ಚೆನ್ನೈ
B. ಬೆಂಗಳೂರು
C. ತಿರುವನಂತಪುರ
D. ಯಾವುದು ಅಲ್ಲ

5. ಭಾರತಕ್ಕೆ ಮೊದಲು ಆಗಮಿಸಿದ ವಿದೇಶಿ ವ್ಯಾಪಾರಿಗಳು ಹಾಗು ಕೊನೆಯದಾಗಿ ಬಿಟ್ಟು ಹೋದ ವ್ಯಾಪಾರಿಗಳು ಯಾರು ?
A. ಪೋರ್ಚುಗೀಸ್ ಮತ್ತು ಬ್ರಿಟಿಷರು
B. ಪೋರ್ಚುಗೀಸ್ ಮತ್ತು ಡಚ್ಚರು
C. ಬ್ರಿಟಿಷರು ಮತ್ತು ಡಚ್ಚರು
D. ಪೋರ್ಚುಗೀಸರು

6. ಭಾರತದ ಮೊದಲ ವಿಶ್ವವಿದ್ಯಾಲಯ ಮತ್ತು ಅದರ ಮೊದಲ ಕುಲಪತಿಗಳು ಯಾರಾಗಿದ್ದರು ?
A. ಕೊಲ್ಕತ್ತಾ ,ಲಾರ್ಡ್ ಕ್ಯಾನಿಂಗ್
B. ಬನಾರಸ್,ವಿಲಿಯಂ ಬೆಂಟಿಕ್
C. ಮದ್ರಾಸ್,ಥಾಮಸ್ ಮುನ್ರೋ
D. ಯಾವುದು ಅಲ್ಲ

7. ಕೋಬಾಲ್ಟ್-60ಯನ್ನು ಈ ಕೆಳಗಿನ ಯಾವ ರೋಗದ ಚಿಕಿತ್ಸೆಯಲ್ಲಿ ಬಳಸಲಾಗುವುದು?
A. ಥೈರಾಯಿಡ್
B. ಕ್ಯಾನ್ಸರ್
C. ಏಡ್ಸ್
D. ಮೂತ್ರಪಿಂಡ

8. ಆದುನಿಕ ಜಗತ್ತಿನ ಹಳೆಯ ಸಂವಿಧಾನ ಯಾವುದು ?
A. ಅಮೇರಿಕಾ
B. ಬ್ರಿಟನ್
C. ರಷ್ಯಾ
D. ಭಾರತ

9. ಇಂಡೋನೇಷ್ಯಾದ ರಾಜಧಾನಿ ಯಾವುದು?
A.ಬರ್ಲಿನ್
B. ಜಕಾರ್ತ್
C. ಮನಿಲಾ
D. ರಿಯಾದ್

10. ಹೊಯ್ಸಳರ ಸೇನಾಪದ್ಧತಿಯಲ್ಲಿ ರಾಜನ ಅಂಗರಕ್ಷಕ ಪಡೆಯನ್ನು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು?
A.ಕಾವಲು ಪಡೆ
B.ರಥ ಪಡೆ
C.ಅಶ್ವ ಪಡೆ
D.ಗರುಡ ಪಡೆ

ಉತ್ತರಗಳು :1.A 2.B 3.C 4.A 5.D 6.A 7.B 8.A 9.B 10.D 

Related Posts
Karnataka Current Affairs – KAS/KPSC Exams – 23rd March 2018
Bengaluru tops in waterbodies with chemical pollution This is part of the findings of an analysis by the Central Pollution Control Board for the years 2013-17 More than half of the country’s ...
READ MORE
Karnataka: Govt to provide cash coupons instead of food-grains
Chief Minister Siddaramaiah on Tuesday publicly spiked a proposal of the food and civil supplies department to provide cash coupons to BPL ration cardholders instead of food grains. Speaking after launching ...
READ MORE
PM Narendra Modi Visit to US
Second visit of PM Narendra Modi to USA commenced on 24 September 2015 after his stopover visit to Ireland. The primary agenda: To garner support for ‘Make in India’ ‘Skill India’ and ...
READ MORE
National Current Affairs – UPSC/KAS Exams- 26th December 2018
Centre wants fake news traced Topic: Infrastructure Development IN NEWS:  The government has sought public comments on the proposed amendments to the IT Act that seek to make it mandatory for platforms ...
READ MORE
Karnataka Current Affairs – KAS/KPSC Exams – 26th Jan – 29th Jan 2018
Padma honour for nine from State Nine persons from Karnataka figure on the list of those chosen for the prestigious Padma awards for 2018. Cue sports stalwart Pankaj Advani has been chosen ...
READ MORE
Karnataka Current Affairs – KAS/KPSC Exams – 27th August 2018
Sorghum project being taken up in ARS Hagari The 112-year-old Agricultural Research Station (ARS) in Hagari near Ballari added one more feather to its cap by taking up the All India ...
READ MORE
National Power Tariff Policy
Union Cabinet has approved several amendments to the national power tariff policy with a view to promote renewable energy and improve the ease of doing business for developers in the ...
READ MORE
National Current Affairs- UPSC/KAS Exams – 5th October 2018
Ethics panel debates checks and balances Topic: Indian Polity IN NEWS: Parliamentarians are deliberating on having checks and balances while making their personal information public. More on the topic: In a meeting of the ...
READ MORE
National Current Affairs – UPSC/KAS Exams- 17th January 2019
NREGA gets additional Rs. 6,084 cr Topic: Government Policies IN NEWS: After exhausting 99% of its annual allocation three months ahead of time, the National Rural Employment Guarantee (NREGA) scheme has been ...
READ MORE
ಹೆಣ್ಣುಮಕ್ಕಳ ಸುರಕ್ಷತೆ ಹಾಗೂ ಭವಿಷ್ಯದ ದೃಷ್ಟಿಯಿಂದ ರೂಪಿಸಲಾಗಿರುವ ಯೋಜನೆ. ‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಯ ಒಂದು ಭಾಗ. ಸ್ಮಾಲ್ ಸೇವಿಂಗ್ ಸ್ಕೀಮ್. ಹತ್ತು ವರ್ಷ ವಯಸ್ಸಿನ ಮಿತಿ ದಾಟದ ಬಾಲಕಿಯರಿಗೆ ಈ ಯೋಜನೆ ಅನ್ವಯವಾಗುತ್ತದೆ. ಬಾಲಕಿಯ ಹೆಸರಿನಲ್ಲಿ ಆಕೆಯ ಪಾಲಕರು , ಲೀಗಲ್ ಗಾರ್ಡಿಯನ್ಈ ಖಾತೆ ...
READ MORE
Karnataka Current Affairs – KAS/KPSC Exams – 23rd
Karnataka: Govt to provide cash coupons instead of
PM Narendra Modi Visit to US
National Current Affairs – UPSC/KAS Exams- 26th December
Karnataka Current Affairs – KAS/KPSC Exams – 26th
Karnataka Current Affairs – KAS/KPSC Exams – 27th
National Power Tariff Policy
National Current Affairs- UPSC/KAS Exams – 5th October
National Current Affairs – UPSC/KAS Exams- 17th January
ಸುಕನ್ಯಾ ಸಮೃದ್ಧಿ

Leave a Reply

Your email address will not be published. Required fields are marked *