13th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಭಾರತೀಯ ವಾಸ್ತುಶಿಲ್ಪಿ ಬಿ.ವಿ ದೋಷಿಗೆ ‘ವಾಸ್ತುಶಿಲ್ಪದ ನೊಬೆಲ್‌’

 • ಹೆಸರಾಂತ ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರು ನೊಬೆಲ್‌ಗೆ ಸಮಾನವಾದ ಪ್ರಿಟ್ಝ್‌ಕರ್‌ ಆರ್ಕಿಟೆಕ್ಚರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.
 • ಪುಣೆ ಮೂಲದ ದೋಷಿ (90), ಈ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯರಾಗಿದ್ದಾರೆ. ಈ ಮೊದಲು ಝಹಾ ಹಡಿಡ್‌, ಫ್ರಾಂಕ್‌ ಗೆಹ್ರಿ, ಐಎಂ ಪೆಯ್‌ ಮತ್ತು ಶಿಗೇರು ಬಾನ್‌ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದರು.
 • ‘ಬಾಲಕೃಷ್ಣ ದೋಷಿ ಅವರು ಯಾವುದೇ ಥಳುಕು ಬಳುಕಿನ ಅಥವಾ ಟ್ರಂಡ್‌ ಅನುಸರಿಸದೆ, ಗಂಭೀರವಾದ ವಾಸ್ತುಶಿಲ್ಪವನ್ನು ಸೃಷ್ಟಿಸುತ್ತ ಬಂದಿದ್ದಾರೆ. ಅತ್ಯುತ್ತಮ ಗುಣಮಟ್ಟ, ದೃಢವಾದ ಹೊಣೆಗಾರಿಕೆ ಮತ್ತು ತಮ್ಮ ದೇಶಕ್ಕೆ ಏನಾದರೂ ಕೊಡುಗೆ ನೀಡಲೇಬೇಕೆಂಬ ತುಡಿತ ಅವರದ್ದಾಗಿತ್ತು.
 • ಅವರು ಬರೇ ಕಟ್ಟಡಗಳ ವಿನ್ಯಾಸ ಮಾಡುತ್ತಿರಲಿಲ್ಲ, ಸಂಸ್ಥೆಗಳ ವಿನ್ಯಾಸ ಮಾಡುತ್ತಿದ್ದರು. ಹಲವಾರು ಸರಕಾರಿ ಮತ್ತು ಸಾರ್ವಜನಿಕ ಸೌಲಭ್ಯಗಳ ಕಟ್ಟಡಗಳು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ವಿನ್ಯಾಸಗಳನ್ನು ರಚಿಸಿದ್ದರು’ ಎಂದು ಪ್ರಿಟ್ಝ್‌ಕರ್‌ ಆಯ್ಕೆದಾರರ ಮಂಡಳಿ ಹೇಳಿಕೆ ತಿಳಿಸಿದೆ.

ವಿಶ್ವದ ಅತಿದೊಡ್ಡ ನೀರಿನ ಟ್ಯಾಂಕ್‌ಗೆ ಪುನರುಜ್ಜೀವ

 • ಶತಮಾನ ಕಂಡಿರುವ 90 ಲಕ್ಷ ಗ್ಯಾಲನ್‌ ಸಾಮರ್ಥ್ಯದ ‘ತಲ್ಲಾಹ್‌ ಟ್ಯಾಂಕ್‌’ ಮತ್ತೆ ತನ್ನ ಗತವೈಭವಕ್ಕೆ ಮರಳಲಿದೆ.
 • ವಿಶ್ವ ಅತಿದೊಡ್ಡ ನೀರಿನ ಟ್ಯಾಂಕ್‌ ಎಂದೇ ಖ್ಯಾತಿ ಗಳಿಸಿರುವ ತಲ್ಲಾಹ್‌ ಟ್ಯಾಂಕ್‌ ಅಷ್ಟೇ ಗಟ್ಟಿಮುಟ್ಟಾದ ಟ್ಯಾಂಕ್‌ ಆಗಿತ್ತು. 2ನೇ ವಿಶ್ವಯುದ್ಧ ಮತ್ತು 1934ರಲ್ಲಿ ಬಿಹಾರ, ಬಂಗಾಳದಲ್ಲಿ ಸಂಭವಿಸಿದ ಭಾರಿ ಭೂಕಂಪದ ಪರಿಣಾಮ ಕೇವಲ 14 ಕಡೆ ಸೋರಿಕೆ ಸಂಭವಿಸಿತ್ತು. 10 ಮಹಡಿಗಳಷ್ಟು ಎತ್ತರದಲ್ಲಿರುವ ಟ್ಯಾಂಕ್‌ ಶಾಲೆಯ ಆಟದ ಮೈದಾನದಷ್ಟು ಅಗಲವಿದೆ.
 • ಕೋಲ್ಕತದ ನಿವಾಸಿಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಸುಮಾರು 482 ಎಕರೆ ಪ್ರದೇಶದಲ್ಲಿ ತಲ್ಲಾಹ್‌ ಟ್ಯಾಂಕ್‌ಅನ್ನು ನಿರ್ಮಾಣ ಮಾಡಲಾಯಿತು.
 • ಬಾಬು ಖೆಲಾತ್‌ ಘೋಷ್‌ ಎಂಬುವವರು ಬೃಹತ್‌ ಟ್ಯಾಂಕ್‌ ನಿರ್ಮಾಣಕ್ಕೆ ಜಾಗ ನೀಡಿದ್ದರು. ಹಾಗಾಗಿ ಪಕ್ಕದ ಲೇನ್‌ಗೆ ಖೆಲಾತ್‌ ಬಾಬು ಲೇನ್‌ ಎಂದು ಹೆಸರಿಸಲಾಗಿದೆ. ಬೃಹತ್‌ ಟ್ಯಾಂಕ್‌ ನಿರ್ಮಾಣಕ್ಕೆ ತಗುಲಿದ ವೆಚ್ಚ 11 ಲಕ್ಷ ರೂ
 • 10 ಅಡಿ ಎತ್ತರ, 18 ಅಡಿ ಆಳ, 321 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ಟ್ಯಾಂಕ್‌ನಲ್ಲಿ 4 ಸ್ವತಂತ್ರ ವಿಭಾಗಗಳಿವೆ. ರಿಪೇರಿ, ಸ್ವಚ್ಛತೆ ಹೀಗೆ ಯಾವುದೇ ಸಂದರ್ಭಗಳಲ್ಲಿ ನೀರು ಸರಬರಾಜು ನಿಲ್ಲಿಸದೆ ಕಾರ್ಯಾಚರಿಸಬಹುದಾದ ವ್ಯವಸ್ಥೆಯನ್ನು ಹೊಂದಿದೆ.
 • ಟೈಟಾನಿಕ್‌ ಹಡಗು ನಿರ್ಮಿಸಿದ ಅಧಿಕಾರಿಗಳೇ ತಲ್ಲಾಹ್‌ ಟ್ಯಾಂಕ್‌ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಟೈಟಾನಿಕ್‌ನಲ್ಲಿ ಬಳಕೆ ಮಾಡಿದ ಗುಣಮಟ್ಟದ ಕಬ್ಬಿಣವನ್ನೇ ಬಳಕೆ ಮಾಡಲಾಗಿತ್ತು.
 • ಬ್ರಿಡ್ಜ್‌ ಮತ್ತು ರೂಫ್‌ ಕಂಪನಿ ಟ್ಯಾಂಕ್‌ ಪುನರುಜ್ಜೀವನ ಕಾರ್ಯ ಕೈಗೆತ್ತಿಕೊಂಡಿದೆ.
 • ಪುನರುಜ್ಜೀವನಕ್ಕೆ ಸುಮಾರು 60 ಕೋಟಿ ರೂ. ವ್ಯಯಿಸಲಾಗುತ್ತಿದೆ.

ಅಸ್ಸಾಂನಿಂದ ಮೊದಲ ಇ-ಬಜೆಟ್‌

 • ಅಸ್ಸಾಂನಲ್ಲಿ ರಾಜ್ಯದ ಮೊದಲ ಇ-ಬಜೆಟ್‌ ಅನ್ನು ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಮಂಡಿಸಿದ್ದಾರೆ.
 • ದೇಶದಲ್ಲಿ ಆಂಧ್ರ ಪ್ರದೇಶದ ಬಳಿಕ ಇ-ಬಜೆಟ್‌ ಮಂಡಿಸುತ್ತಿರುವ ಎರಡನೇ ರಾಜ್ಯವೆಂಬ ಹೆಗ್ಗಳಿಕೆಗೆ ಅಸ್ಸಾಂ ಪಾತ್ರವಾಗಿದೆ. ಆಂಧ್ರದ ಇ-ಬಜೆಟ್‌ ಅನ್ನು ಅನ್ಯ ರಾಜ್ಯಗಳವರು ಗಮನಿಸುವ ಆಯ್ಕೆ ಇರಲಿಲ್ಲ.
 • ಆದರೆ, ಅಸ್ಸಾಂನ ಇ-ಬಜೆಟ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ಯಾರು ಬೇಕಾದರೂ ಗಮನಿಸಬಹುದಾಗಿದೆ.
 • ಅಸ್ಸಾಂ ಬಜೆಟ್‌ ಅನ್ನು ಮುದ್ರಣ ಪ್ರತಿ ಮತ್ತು ಡಿಜಿಟಲ್‌ ಎರಡೂ ರೂಪದಲ್ಲಿ ಪ್ರಕಟಿಸಲಾಗಿದೆ. ನಾಗರಿಕ ಸ್ನೇಹಿಯಾಗಿ ಬಜೆಟ್‌ ರೂಪುಗೊಂಡಿದೆ

ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ.7.5ಕ್ಕೆ ಏರಿಕೆ

 • ಹಣದುಬ್ಬರ ಒಂದು ಕಡೆ ತಗ್ಗಿದ್ದರೆ, ಮತ್ತೊಂದು ಕಡೆ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು(ಐಐಪಿ) ಜನವರಿಯಲ್ಲಿ ಶೇ.7.5ರ ಬೆಳವಣಿಗೆ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ.3.5ರ ಬೆಳವಣಿಗೆ ಕಂಡು ಬಂದಿದ್ದು, ಅದಕ್ಕೆ ಹೋಲಿಸಿದರೆ ಇದು ಮಹಾ ಜಿಗಿತ. ಉತ್ಪಾದನೆ, ಮೂಲ ಸರಕುಗಳು ಮತ್ತು ಗ್ರಾಹಕ ಉತ್ಪನ್ನಗಳ ವಲಯದಲ್ಲಿನ ಬೆಳವಣಿಗೆಗಳು ಐಐಪಿ ತ್ವರಿತ ಜಿಗಿತಕ್ಕೆ ನೆರವಾಗಿವೆ.
 • 2017ರ ನವೆಂಬರ್‌ನಲ್ಲಿ ಶೇ.8.8, ಡಿಸೆಂಬರ್‌ನಲ್ಲಿ ಶೇ.7.1ರಷ್ಟು ಬೆಳವಣಿಗೆಯನ್ನು ಐಐಪಿ ದಾಖಲಿಸಿತ್ತು. ಪ್ರಗತಿಯ ಹಾದಿ ಮುಂದುವರಿದಿದ್ದು, ಜನವರಿಯಲ್ಲೂ ಉತ್ತಮ ಸಾಧನೆ ಸಾಧ್ಯವಾಗಿದೆ
 • ಕೇಂದ್ರೀಯ ಅಂಕಿಅಂಶಗಳ ಕಚೇರಿ(ಸಿಎಸ್‌ಒ) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಐಐಪಿ ಏರಿಕೆಯಲ್ಲಿ ಉತ್ಪಾದನಾ ವಲಯದ ಪಾತ್ರ ಹಿರಿದು. ಒಟ್ಟು ಐಐಪಿಯಲ್ಲಿ ಇದರ ಪಾಲು ಶೇ.77.63ರಷ್ಟಿದೆ. 2018ರ ಜನವರಿಯಲ್ಲಿ ಈ ವಲಯ ಶೇ.8.7ರ ಬೆಳವಣಿಗೆ ದಾಖಲಿಸಿದೆ. 2017ರ ಜನವರಿಯಲ್ಲಿ ಕೇವಲ ಶೇ.2.5ರ ಬೆಳವಣಿಗೆ ಮಾತ್ರ ಸಾಧ್ಯವಾಗಿತ್ತು. ಇನ್ನು ಮೂಲ ಸರಕುಗಳ ಉತ್ಪಾದನೆಯ ಪ್ರಗತಿಯು ಕಳೆದ ಜನವರಿಯಲ್ಲಿ ಶೇ.14.6ರಷ್ಟಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ ಶೇ.0.6ರಷ್ಟಿತ್ತು.

ಅಂಚೆಯಣ್ಣನಿಂದ ಇನ್ಮುಂದೆ ಬ್ಯಾಂಕಿಂಗ್‌ ಸೇವೆ

 • ಏಪ್ರಿಲ್‌ನಿಂದ ದೇಶದ 650 ಜಿಲ್ಲೆಗಳಲ್ಲಿ ‘ಇಂಡಿಯಾ ಪೋಸ್ಟ್‌ ಪೇಮೆಂಟ್‌’ ಬ್ಯಾಂಕ್‌ ಕಾರ್ಯಾರಂಭ.
 • ಮೈಸೂರು ನಗರದ ಇಟ್ಟಿಗೆಗೂಡಿನಲ್ಲಿರುವ ಅಂಚೆ ಇಲಾಖೆಯ ಕಚೇರಿಯ ಕಟ್ಟಡದಲ್ಲಿ ಈ ಬ್ಯಾಂಕ್‌ ಆರಂಭಿಸಲು ಸಿದ್ಧತೆ ನಡೆದಿದ್ದು, ಪ್ರತ್ಯೇಕ ಸಿಬ್ಬಂದಿ ಕೂಡ ನಿಯೋಜನೆಗೊಂಡಿದೆ. ಮೈಸೂರು ಜಿಲ್ಲೆಯಲ್ಲಿರುವ 1.55 ಲಕ್ಷ ಅಂಚೆ ಕಚೇರಿಗಳು ಈ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕಿನಡಿ ಸ್ಥಳೀಯವಾಗಿ ಕಾರ್ಯ ನಿರ್ವಹಿಸಲಿದ್ದು, ಅಂಚೆ ಕಚೇರಿಗಳ ಪೋಸ್ಟ್‌ಮ್ಯಾನ್‌ಗಳು, ಬ್ಯಾಂಕ್‌ ಮತ್ತು ಗ್ರಾಹಕರ ನಡುವೆ ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.
 • ಸಾಮಾನ್ಯವಾಗಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದಿರುವ ಗ್ರಾಹಕರು, ಹಣವನ್ನು ಅಂಚೆ ಕಚೇರಿಯಲ್ಲೇ ಪಾವತಿ ಮಾಡಲು ಅವಕಾಶವಿದೆ. ಈಗ ಹೊಸ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಗ್ರಾಹಕರು ಮನೆ ಬಾಗಿಲಿನಲ್ಲಿಯೇ ಹಣ ಪಡೆಯುವ, ಪಾವತಿಸುವ ಸೇವೆ ಪಡೆಯಬಹುದು.
 • ಕಾರ್ಯ ನಿರ್ವಹಣೆ ಹೇಗೆ?: ಈ ಬ್ಯಾಂಕಿನಲ್ಲಿ ಆಧಾರ್‌ ಗುರುತಿನ ಚೀಟಿ ಮತ್ತು ಬೆರಳು ಮುದ್ರೆ ನೀಡಿ ಖಾತೆ ಮಾಡಿಸುವ ಗ್ರಾಹಕರಿಗೆ, ಪ್ರತ್ಯೇಕವಾಗಿ ಖಾತೆ ಸಂಖ್ಯೆ ಮತ್ತು ಐಎಫ್‌ಸಿ ಕೋಡ್‌ ನೀಡಲಾಗುವುದು. ಜತೆಗೆ ಕ್ಯೂಆರ್‌ ಕಾರ್ಡ್‌(ಕ್ವಿಕ್‌ ರೆಸ್ಪಾನ್ಸ್‌ ಕೋಡ್‌) ನೀಡಲಾಗುತ್ತದೆ.
 • ಸಂವಹನ ನಡೆಸಲು ಪ್ರತ್ಯೇಕವಾಗಿ ಗ್ರಾಹಕ ಸಹಾಯವಾಣಿ ನಂಬರ್‌ ನೀಡಲಾಗುತ್ತದೆ. ಜತೆಗೆ ಮೊಬೈಲ್‌ ಮೂಲಕ ಸಂದೇಶ ಕಳುಹಿಸಬೇಕು. ಹೀಗೆ ಗ್ರಾಹಕರು ಕಳುಹಿಸಿದ ಸಂದೇಶ, ಇಟ್ಟಿಗೆ ಗೂಡಿನಲ್ಲಿರುವ ಬ್ಯಾಂಕ್‌ ಕಚೇರಿಗೆ ತಲುಪಲಿದ್ದು, ಅಲ್ಲಿಂದ ಸಂದೇಶ, ಗ್ರಾಹಕ ವಾಸಿಸುವ ಅಂಚೆ ಕಚೇರಿ ವ್ಯಾಪ್ತಿಗೆ ತಲುಪಲಿದೆ. ಅಲ್ಲಿನ ಪೋಸ್ಟ್‌ಮ್ಯಾನ್‌ಗಳು ಗ್ರಾಹಕರ ಬಳಿಗೆ ತೆರಳಿ ಸೇವೆ ನೀಡುತ್ತಾರೆ.
 • ಚಾಲ್ತಿ ಖಾತೆ ತೆರೆಯಬಹುದು: ಈ ಬ್ಯಾಂಕಿನಲ್ಲಿ ಜನ ಸಾಮಾನ್ಯರು ಝೀರೋ ಬ್ಯಾಲೆನ್ಸ್‌ನಲ್ಲಿ ಖಾತೆ ತೆರೆಯಲು ಅವಕಾಶವಿದ್ದರೆ, ವರ್ತಕರು 2500 ರೂ. ಸಲ್ಲಿಸಿ ಚಾಲ್ತಿ ಖಾತೆ ತೆರೆಯಬಹುದು, ತಾವು ಸಂಪಾದಿಸಿದ ಹಣವನ್ನು ಬ್ಯಾಂಕಿಗೆ ಕಟ್ಟಲು ಅಥವಾ ಡ್ರಾ ಮಾಡಲು ಅಂಚೆ ಕಚೇರಿಗೆ ಹೋಗಬೇಕೆಂಬುದು ಇಲ್ಲ. ಕೇವಲ ಸಂದೇಶ ನೀಡಿದರೆ ಸಾಕು, ಅಂಚೆಯಣ್ಣನೇ ಖುದ್ದಾಗಿ ಅಂಗಡಿಗೆ ಬಂದು ಹಣ ಕಟ್ಟಿಸಿಕೊಳ್ಳುವ ಅಥವಾ ಹಣ ನೀಡುವ ಕೆಲಸ ಮಾಡುತ್ತಾನೆ

ಪಾವತಿ ಬ್ಯಾಂಕುಗಳು (payment banks)

 • ಹಣಕಾಸು ಸೇರ್ಪಡೆಗೆ ಮತ್ತಷ್ಟು ನೆರವಾಗುವಂತೆ ದೇಶಾದ್ಯಂತ ಪಾವತಿಗಳು ಬ್ಯಾಂಕ್ ಅನ್ನು ಸರ್ಕಾರ ಉತ್ತೇಜಿಸುತ್ತದೆ.
 • ವಾಣಿಜ್ಯ ಬ್ಯಾಂಕಿನಿಂದ ಪಾವತಿಗಳು ಬ್ಯಾಂಕ್ ಹೇಗೆ ಭಿನ್ನವಾಗಿದೆ?
 • ಸಣ್ಣದಾದ ಉಳಿತಾಯ ಖಾತೆಗಳು ಮತ್ತು ವಲಸೆ ಕಾರ್ಮಿಕ ಕಾರ್ಯಪಡೆ, ಕಡಿಮೆ ಆದಾಯದ ಮನೆಗಳು, ಸಣ್ಣ ವ್ಯಾಪಾರಗಳು ಮತ್ತು ಇತರ ಅಸಂಘಟಿತ ವಲಯ ಘಟಕಗಳಿಗೆ ಪಾವತಿಗಳನ್ನು / ರವಾನೆ ಸೇವೆಗಳನ್ನು ಒದಗಿಸುವ ಮೂಲಕ ಹಣಕಾಸಿನ ಸೇರ್ಪಡೆ ಮಾಡುವುದು ಮುಖ್ಯವಾಗಿದೆ.
 • ಭಾರತೀಯ ರಿಸರ್ವ್ ಬ್ಯಾಂಕ್ ನೀಡುತ್ತಿರುವ ಎರಡು ಬಗೆಯ ಬ್ಯಾಂಕಿಂಗ್ ಪರವಾನಗಿಗಳಿವೆ – ಸಾರ್ವತ್ರಿಕ ಬ್ಯಾಂಕ್ ಪರವಾನಗಿ ಮತ್ತು ವಿಭಿನ್ನ ಬ್ಯಾಂಕ್ ಪರವಾನಗಿ.
 • ವಾಣಿಜ್ಯ ಬ್ಯಾಂಕ್ ಒದಗಿಸುವ ಎಲ್ಲ ಸೇವೆಗಳನ್ನು ನೀಡಲು ಸಾಧ್ಯವಿಲ್ಲವಾದ್ದರಿಂದ ಪಾವತಿಗಳು ಬ್ಯಾಂಕ್ ವಿಭಿನ್ನ ಬ್ಯಾಂಕ್ ಪರವಾನಗಿಯ ಅಡಿಯಲ್ಲಿ ಬರುತ್ತದೆ.
 • ನಿರ್ದಿಷ್ಟವಾಗಿ ಹೇಳುವುದಾದರೆ, ಪಾವತಿ ಬ್ಯಾಂಕ್ ಅನ್ನು ಸಾಲವಾಗಿ ನೀಡಲಾಗುವುದಿಲ್ಲ.
 • ಇದು ಪ್ರತಿ ಖಾತೆಗೆ ರೂ .1 ಲಕ್ಷ ವರೆಗೆ ಠೇವಣಿಗಳನ್ನು ತೆಗೆದುಕೊಳ್ಳಬಹುದು ಮತ್ತು ಡೆಬಿಟ್ ಕಾರ್ಡ್ಗಳನ್ನು ನೀಡಬಹುದು ಆದರೆ ಕ್ರೆಡಿಟ್ ಕಾರ್ಡ್ಗಳನ್ನು  ನೀಡಲು ಸಾಧ್ಯವಿಲ್ಲ.
 • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಐಸಿಐಸಿಐ ಬ್ಯಾಂಕ್ನಂತಹ ಭಾರತದ ವಾಣಿಜ್ಯ ಬ್ಯಾಂಕುಗಳು ಅಂತಹ ನಿರ್ಬಂಧಗಳನ್ನು ಹೊಂದಿಲ್ಲ.

ಇತರ ಕಾರ್ಯಗಳನ್ನು ಪಾವತಿ ಬ್ಯಾಂಕ್ ಮಾಡಬಹುದು?

 • ಪಾವತಿಸುವ ಬ್ಯಾಂಕ್ ಮತ್ತೊಂದು ಬ್ಯಾಂಕ್ನ ವ್ಯವಹಾರ ವರದಿಗಾರನಾಗಿ (BC) ಕಾರ್ಯನಿರ್ವಹಿಸುತ್ತದೆ.
 • ಮ್ಯೂಚುಯಲ್ ಫಂಡ್ ಘಟಕಗಳು ಮತ್ತು ವಿಮಾ ಉತ್ಪನ್ನಗಳಂತಹ ಸರಳ ಹಣಕಾಸಿನ ಉತ್ಪನ್ನಗಳನ್ನು ಅವರು ವಿತರಿಸಬಹುದು.

ಎಷ್ಟು ಪಾವತಿಗಳು ಬ್ಯಾಂಕುಗಳು ಕಾರ್ಯಾಚರಣೆಗಳನ್ನು ಆರಂಭಿಸಿದೆ?

 • ಪಾವತಿಸುವ ಬ್ಯಾಂಕ್ ತೆರೆಯಲು ತತ್ತ್ವ ಪರವಾನಗಿ ಪಡೆದ 11 ಘಟಕಗಳಲ್ಲಿ, 7 ಘಟಕಗಳು ಅಂತಿಮ ಪರವಾನಗಿ ಪಡೆದುಕೊಂಡವು.
 • ನಾಲ್ಕು ಪಾವತಿ ಬ್ಯಾಂಕುಗಳು ಕಾರ್ಯಾಚರಣೆಗಳನ್ನು ಪ್ರಾರಂಭಿಸಿವೆ – ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್, ಇಂಡಿಯಾ ಪೋಸ್ಟ್ ಪಾವತಿಗಳು ಬ್ಯಾಂಕ್, ಪೇಟಂ ಪೇಮೆಂಟ್ಸ್ ಬ್ಯಾಂಕ್ ಮತ್ತು ಫಿನೋ ಪೇಮೆಂಟ್ಸ್ ಬ್ಯಾಂಕ್.
 • 100 ಕೋಟಿ ರೂಪಾಯಿಗಳಿಗೆ ಪಾವತಿ ಬ್ಯಾಂಕ್ಗೆ ಕನಿಷ್ಟ ಪಾವತಿಸಿದ ಷೇರು ಬಂಡವಾಳವನ್ನು ಆರ್ಬಿಐ ಕಡ್ಡಾಯಗೊಳಿಸಿದೆ.

ಪಾವತಿಸುವ ಬ್ಯಾಂಕ್ ಅದರ ನಿಕ್ಷೇಪಗಳನ್ನು ಎಲ್ಲಿ ನಿಯೋಜಿಸಬಹುದು?

 • ನಗದು ರಿಸರ್ವ್ ಅನುಪಾತವನ್ನು (ಸಿಆರ್ಆರ್) ನಿರ್ವಹಿಸುವುದರ ಹೊರತಾಗಿ, ಈ ಘಟಕಗಳು ಶಾಸನಬದ್ಧ ಲಿಕ್ವಿಡಿಟಿ ಅನುಪಾತದಲ್ಲಿ (ಎಸ್ಎಲ್ಆರ್) ಕನಿಷ್ಟ 75% ರಷ್ಟು ಬೇಡಿಕೆಯ ಡಿಪಾಸಿಟ್ ಬ್ಯಾಲೆನ್ಸ್ಗಳನ್ನು ಹೂಡಿಕೆ ಮಾಡಬೇಕು – ಅರ್ಹ ಸರ್ಕಾರಿ ಸೆಕ್ಯೂರಿಟಿಗಳು ಅಥವಾ ಖಜಾನೆಯ ಬಿಲ್ಲುಗಳು.
 • ಮಸೂದೆಗಳು ಒಂದು ವರ್ಷದ ವರೆಗಿನ ಮುಕ್ತಾಯದೊಂದಿಗೆ ಇರಬೇಕು ಮತ್ತು ಪ್ರಸ್ತುತ ವಾಣಿಜ್ಯ ಮತ್ತು ಸಮಯ / ಸ್ಥಿರ ಠೇವಣಿಗಳಲ್ಲಿ 25% ರಷ್ಟು ಇತರ ವಾಣಿಜ್ಯ ಬ್ಯಾಂಕುಗಳೊಂದಿಗೆ ಕಾರ್ಯಾಚರಣೆ ಉದ್ದೇಶಗಳಿಗಾಗಿ ಮತ್ತು ದ್ರವ್ಯ ನಿರ್ವಹಣೆಗಾಗಿ ಹಿಡಿದಿರಬೇಕು.

ಪಾವತಿಸುವ ಬ್ಯಾಂಕ್ ಅನ್ನು ಹೊಂದಿಸಲು ಎಲ್ಲರೂ ಅರ್ಹರಾಗಿದ್ದಾರೆ?

 • ಬ್ಯಾಂಕ್ ಬ್ಯಾಂಕ್ ಪರವಾನಗಿಗೆ ಅರ್ಜಿ ಸಲ್ಲಿಸಲು ಆರ್ಬಿಐ ಬ್ಯಾಂಕ್-ಅಲ್ಲದ ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ (ಪಿಪಿಐ) ವಿತರಕರು, ವ್ಯಕ್ತಿಗಳು ಮತ್ತು ವೃತ್ತಿಪರರು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್ಬಿಎಫ್ಸಿಗಳು), ಸಾಂಸ್ಥಿಕ ವ್ಯವಹಾರದ ವರದಿಗಾರರಿಗೆ (ಬಿ.ಸಿ.ಗಳು) ಅನುಮತಿ ನೀಡುತ್ತದೆ.
 • ಅಸ್ತಿತ್ವದಲ್ಲಿರುವ ವಾಣಿಜ್ಯ ಬ್ಯಾಂಕಿನೊಂದಿಗೆ ಪ್ರವರ್ತಕರಿಂದ ಜಂಟಿ ಉದ್ಯಮವನ್ನು ಸ್ಥಾಪಿಸುವುದು ಸಹ ಅನುಮತಿಸಲಾಗಿದೆ.

 

1.ಈ ಕೆಳಗಿನವರುಗಳಲ್ಲಿ ಯಾರು ವಾಸ್ತುಶಿಲ್ಪದ ನೊಬೆಲ್ ಪುರಸ್ಕಾರಕ್ಕೆ (ಪ್ರಿಟ್ಝ್ಕರ್ ಆರ್ಕಿಟೆಕ್ಚರ್ ಪ್ರಶಸ್ತಿಗೆ) ಭಾಜನರಾಗಿದ್ದಾರೆ?

1.ಝಹಾ ಹಡಿಡ್‌

2.ಫ್ರಾಂಕ್‌ ಗೆಹ್ರಿ

3.ಐಎಂ ಪೆಯ್‌

4. ಶಿಗೇರು ಬಾನ್‌

5.ಬಾಲಕೃಷ್ಣ ದೋಷಿ

A)1,2,3

B).2,3,4

C).1,3,4

D).1,2,3,4,5

2.ವಿಶ್ವದ ಅತಿದೊಡ್ಡ ‘ತಲ್ಲಾಹ್‌ ಟ್ಯಾಂಕ್‌’ ಎಲ್ಲಿದೆ ?

A)ಕೊಲ್ಕತ್ತಾ

B)ಒಡಿಶಾ

C)ಮಧ್ಯಪ್ರದೇಶ

D)ಜಾರ್ಖಂಡ್

3.ಮೊದಲ ಈ-ಬಜೆಟನ್ನು ಮಂಡಿಸಿದ ರಾಜ್ಯ ಯಾವುದು ?

A)ಅಸ್ಸಾಂ

B).ಆಂಧ್ರ ಪ್ರದೇಶ

C)ತೆಲಂಗಾಣ

D)ಕರ್ನಾಟಕ

4.ಮೊದಲ ಪೇಮೆಂಟ್ ಬ್ಯಾಂಕ್ ಯಾವುದು ?

A)ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್

B)ಇಂಡಿಯಾ ಪೋಸ್ಟ್ ಪಾವತಿಗಳು ಬ್ಯಾಂಕ್

C)ಪೆಟಿಎಂ ಪೇಮೆಂಟ್ಸ್ ಬ್ಯಾಂಕ್

D)ಫಿನೋ ಪೇಮೆಂಟ್ಸ್ ಬ್ಯಾಂಕ್.

5.ಪಾವತಿ ಬ್ಯಾಂಕು ಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಹಾಗೂ ಸರಿಯಾದ ಆಯ್ಕೆಯನ್ನು ಗುರುತಿಸಿ

1.ಇದು ಪ್ರತಿ ಖಾತೆಗೆ ರೂ .1 ಲಕ್ಷ ವರೆಗೆ ಠೇವಣಿಗಳನ್ನು ತೆಗೆದುಕೊಳ್ಳಬಹುದು

2.ಡೆಬಿಟ್ ಕಾರ್ಡ್ಗಳನ್ನು ನೀಡಬಹುದು

3.ಕ್ರೆಡಿಟ್ ಕಾರ್ಡ್ಗಳನ್ನು ನೀಡಲು ಸಾಧ್ಯವಿಲ್ಲ

A)1 & 2

B)2& 3

C)1,2,3

D)ಯಾವುದು ಅಲ್ಲ

6.ಕೆಳಗಿನ ಯಾವ ರೀತಿಯ ಅಪರಾಧಗಳಿಗೆ 1970 ರ ದಶಕದಲ್ಲಿ COFEPOSA ಜಾರಿಗೊಳಿಸಲಾಗಿದೆ?

A)ಭಯೋತ್ಪಾದನೆ ಚಟುವಟಿಕೆಗಳು

B)ಧಾರ್ಮಿಕ ಅಪರಾಧಗಳು

C)ಆರ್ಥಿಕ ಅಪರಾಧಗಳು

D)ಅಂತರರಾಷ್ಟ್ರೀಯ ಅಪರಾಧಗಳು

7.ಈ ಯಾವ ರಾಜ್ಯವು ಮ್ಯಾನ್ಮಾರ್ ಜೊತೆಗಿನ ಗಡಿಯನ್ನು ಹಂಚಿಕೊಳ್ಳುವುದಿಲ್ಲ?

A)ಅಸ್ಸಾಂ

B)ಅರುಣಾಚಲ ಪ್ರದೇಶ

C)ನಾಗಾಲ್ಯಾಂಡ್

D)ಮಣಿಪುರ

8.ಸ್ವದೇಶಿ ಚಳವಳಿಯ ಸಂದರ್ಭದಲ್ಲಿ ಭಾರತದ ವೈಸ್ರಾಯ್ ಯಾರು?

A.ಲಾರ್ಡ್ ಕರ್ಜನ್

B.ಲಾರ್ಡ್ ಇರ್ವಿನ್

C.ಲಾರ್ಡ್ ವಿಲ್ಲಿಂಗ್ಡನ್

D.ಲಾರ್ಡ್ ಲಾನ್ಸ್ಡೌನ್

9.ಸ್ವದೇಶಿ ಚಳವಳಿಯ ಸಂದರ್ಭದಲ್ಲಿ ಕಲ್ಕತ್ತಾದಲ್ಲಿನ ಅನುಶಿಲನ್ ಸಮಿತಿಯ ಸ್ಥಾಪಕರು ಯಾರು?

A.ಪ್ರೋಮೋಥಾ ಮಿಟರ್

B.ಬರಿಂದ್ರಕುಮಾರ್ ಘೋಷ್

C.ಜತೀಂದ್ರನಾಥ್ ಬ್ಯಾನರ್ಜಿ

D.ಮೇಲಿನ ಎಲ್ಲಾ

10.ಗ್ರಾಹಕ ಬೆಲೆ ಸೂಚ್ಯಂಕವನ್ನು (ಸಿಪಿಐ) ಯಾರು ವಿತರಿಸುತ್ತಾರೆ?

A)ಅಂಕಿಅಂಶ ಮತ್ತು ಕಾರ್ಯಸೂಚಿಯ ಸಚಿವಾಲಯ

B)ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

C)ಹಣಕಾಸು ಸಚಿವಾಲಯ

D)ಮೇಲಿರುವ ಯಾವುದೂ ಇಲ್ಲ

ಉತ್ತರಗಳು

1.D 2.A 3.B 4.A 5.C 6.C 7.A 8.A 9.D 10.A

Related Posts
11th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಆರೋಗ್ಯ ಕರ್ನಾಟಕದಲ್ಲಿ ಯಶಸ್ವಿನಿ ಸುದ್ದಿಯಲ್ಲಿ ಏಕಿದೆ? ಬಡರೋಗಿಗಳ ಪಾಲಿನ ಆಶಾಕಿರಣವಾಗಿರುವ ಯಶಸ್ವಿನಿ ಯೋಜನೆ ಕೊನೆಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ವಿಲೀನವಾಗಿದೆ. ಇದರಿಂದಾಗಿ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳಲ್ಲಿಯೇ ಯಶಸ್ವಿನಿ ಯೋಜನೆಯಲ್ಲಿ ಪಡೆಯುತ್ತಿದ್ದ ಎಲ್ಲ ವೈದ್ಯಕೀಯ ಸೇವೆಗಳನ್ನು ಪಡೆಯಬಹುದಾಗಿದೆ. ಒಂದೇ ಸೂರಲ್ಲಿ ಚಿಕಿತ್ಸೆ: ರಾಜ್ಯದಲ್ಲಿ ...
READ MORE
“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕಬ್ಬನ್‌ ಪಾರ್ಕ್‌ಗೆ ಏರ್‌ ಕ್ಲೀನರ್‌ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ರಾಜಧಾನಿಯಲ್ಲೂ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಈ ನಡುವೆ, ಅತಿ ಹೆಚ್ಚು ಜನರು ವಾಯು ಸೇವನೆಗೆ ಆಗಮಿಸುವ ಕಬ್ಬನ್‌ ಪಾರ್ಕ್‌ನಲ್ಲೂ ವಾಯು ಮಾಲಿನ್ಯ ಹೆಚ್ಚಿರುವುದನ್ನು ಮನಗಂಡು ಅಲ್ಲಿ ಗಾಳಿಯ ಶುದ್ಧೀಕರಣಕ್ಕೆ ಯಂತ್ರವನ್ನು ...
READ MORE
In this May 25, 2011 photograph, Sharan Pinto installs a solar panel on the rooftop of a house in Nada, a village near the southwest Indian port of Mangalore, India. Across India, thousands of homes are receiving their first light through small companies and aid programs that are bypassing the central electricity grid to deliver solar panels to the rural poor. Those customers could provide the human energy that advocates of solar power have been looking for to fuel a boom in the next decade. (AP Photo/Rafiq Maqbool)
ಭೂಮಿಯ ಮೇಲ್ಮೈ ಮೇಲೆ ಬೀಳುವ ಸೌರಶಕ್ತಿಯು ಪ್ರಾಥಮಿಕವಾಗಿ ಭೌಗೋಳಿಕ ನೆಲೆ, ಭೂಮಿ-ಸೂರ್ಯನ ಚಲನೆ, ಭೂಮಿಯ ಪರಿಭ್ರಮಣ ರೇಖೆಯ ಓರೆ ಮತ್ತು ತೇಲುವ ಕಣಗಳಿಂದಾಗಿ ವಾತಾವರಣವು ಸೌರಶಕ್ತಿಯನ್ನು ಕುಂದಿಸುವ ಕ್ರಿಯೆ (Attenuation) ಮುಂತಾದ ಅಂಶಗಳನ್ನು ಅವಲಂಬಿಸಿರುತ್ತದೆ ಒಂದು ಪ್ರದೇಶದ ಸೌರ ಸಂಪನ್ಮೂಲ ಸಾಮರ್ಥ್ಯ ಅಥವಾ ...
READ MORE
30th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಝುಗಮಗಿಸುತ್ತಿದೆ ನಮ್ಮ ಕರ್ನಾಟಕ! ಸುದ್ಧಿಯಲ್ಲಿ ಏಕಿದೆ? ದೇಶದಲ್ಲೇ ಅತಿಹೆಚ್ಚು ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಕಳೆದ ಒಂದು ವರ್ಷದಲ್ಲಿ 3 ಗಿಗಾ ವಾಟ್ ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸುವ ಮೂಲಕ ತಮಿಳುನಾಡನ್ನು ಹಿಂದಿಕ್ಕಿದೆ. ಯುರೋಪಿಯನ್ ರಾಷ್ಟ್ರಗಳಾದ ಹಾಲೆಂಡ್ ಹಾಗೂ ಡೆನ್ಮಾರ್ಕ್​ನ ಒಟ್ಟಾರೆ ...
READ MORE
“19 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಿರಿಧಾನ್ಯದ ತಿನಿಸುಗಳು  ಸುದ್ಧಿಯಲ್ಲಿ ಏಕಿದೆ ?ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯವು ಭಾರತದ ಸೇನೆಯ ಗಡಿಯಲ್ಲಿರುವ ಯೋಧರಿಗೆ ಸಿರಿಧಾನ್ಯ ತಿನಿಸುಗಳನ್ನು ಪೂರೈಸಲು ಸಿದ್ಧತೆ ನಡೆಸಿದೆ. 20 ಬಗೆಯ ಸಿರಿಧಾನ್ಯ ತಿನಿಸುಗಳನ್ನು ತಯಾರಿಸಲಾಗಿದ್ದು, ಶೀಘ್ರದಲ್ಲೇ ರವಾನೆಯಾಗಲಿವೆ. ಅಕ್ಕಿ, ಗೋಧಿ ಮೊದಲಾದ ಧಾನ್ಯಗಳಿಂದ ಸಂಸ್ಥೆಯು ಹಲವಾರು ತಿನಿಸುಗಳನ್ನು ...
READ MORE
9th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಖಾಸಗಿ ಶಾಲೆಯಲ್ಲಿ ಕನ್ನಡ: ವರದಿಗೆ ಸೂಚನೆ ಐಸಿಎಸ್‌ಇ, ಸಿಬಿಎಸ್‌ಇ ಸೇರಿದಂತೆ ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲಿ ಒಂದರಿಂದ 10ನೇ ತರಗತಿವರೆಗೆ ಕನ್ನಡವನ್ನು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಬೋಧನೆ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತೊಮ್ಮೆ ಸುತ್ತೋಲೆ ಹೊರಡಿಸಿದೆ. ಕನ್ನಡ ...
READ MORE
2005ರ ಅಕ್ಟೋಬರ್ 12ರಂದು ಜಾರಿ ಜನಸಾಮಾನ್ಯರೂ ಆಡಳಿತ ವ್ಯವಸ್ಥೆಯ ಮಾಹಿತಿ ಪಡೆಯಲು ಅನುವಾಗುವ ಮಾಹಿತಿ ಹಕ್ಕು ಕಾಯ್ದೆ. ಮಾಹಿತಿ ಹಕ್ಕು ಕಾಯ್ದೆ ಎಂದರೇನು? ನಾಗರಿಕರು ಮಾಹಿತಿ ಬಯಸಿ ಸಲ್ಲಿಸಿದ ಅರ್ಜಿಯನ್ನು ಪರೀಕ್ಷಿಸಿ, ಅದಕ್ಕೆ ಸಂಬಂಧಪಟ್ಟ ಸೂಕ್ತ ಮಾಹಿತಿಯನ್ನು ನಿಗದಿತ ಅವಧಿಯೊಳಗೆ ನೀಡುವುದು; ಆ ಮೂಲಕ ಆಡಳಿತ ವ್ಯವಹಾರದಲ್ಲಿ ...
READ MORE
“14th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಚುನಾವಣೆ ಕುರಿತ ಗೀತೆ ಬಿಡುಗಡೆ ಮತದಾನದ ಕುರಿತು ಜನ ಜಾಗೃತಿ ಮೂಡಿಸಲು ಸಿದ್ಧಪಡಿಸಿರುವ ಕರ್ನಾಟಕ ಚುನಾವಣಾ ಗೀತೆಯನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ಬಿಡುಗಡೆ ಮಾಡಿದರು. ರಾಜ್ಯದಲ್ಲ ಮೊಟ್ಟಮೊದಲ ಬಾರಿಗೆ ಚುನಾವಣೆಗೆಂದೆ ಗೀತೆ ರೂಪಿಸಲಾಗಿದೆ. ಈ ಗೀತೆ ಮತದಾನದ ಅರಿವು ಮೂಡಿಸಲು ಜನಸಮುದಾಯವನ್ನು ಮುಟ್ಟಲಿದೆ. ಈ ಗೀತೆ ...
READ MORE
“12 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷ್ಣರಾಜಸಾಗರ ಅಣೆಕಟ್ಟು ಸುದ್ಧಿಯಲ್ಲಿ ಏಕಿದೆ ?ಮಂಡ್ಯ ರೈತರ ಜೀವನಾಡಿ ಕಾವೇರಿ ನದಿಗೆ ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣಕ್ಕೆ  ಶಂಕುಸ್ಥಾಪನೆ ನೆರವೇರಿಸಿ 107 ವರ್ಷಗಳು ಸಂದಿವೆ. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿ ಫಲವಾಗಿ ಮಂಡ್ಯದ ಕನ್ನಂಬಾಡಿ ಗ್ರಾಮದಲ್ಲಿ ಕೆಆರ್​ಎಸ್ ಜಲಾಶಯ ನಿರ್ಮಾಣವಾಯಿತು. ಅದರ ...
READ MORE
“14th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಾಸಯೋಗ್ಯ ನಗರಗಳ ಪಟ್ಟಿ ಸುದ್ದಿಯಲ್ಲಿ ಏಕಿದೆ? ನಗರ ಯೋಜನೆ ಮತ್ತು ನಿರ್ವಹಣೆಗೆ ಉತ್ತೇಜಿಸುವ ಸಲುವಾಗಿ ಹಾಗೂ ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದ ಜೀವನ ನಿರ್ವಹಣೆ ಗುಣಮಟ್ಟವನ್ನು ನಗರಗಳು ಅಳವಡಿಸಿಕೊಳ್ಳಲಿ ಎಂಬ ಉದ್ದೇಶದಿಂದ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ‘ವಾಸಯೋಗ್ಯ ಸೂಚ್ಯಂಕ’ ಬಿಡುಗಡೆ ...
READ MORE
11th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸೌರ ಶಕ್ತಿ ಯ ಬಗ್ಗೆ ನೋಟ
30th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
“19 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
9th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮಾಹಿತಿ ಹಕ್ಕು ಕಾಯ್ದೆ(ಆರ್​ಟಿಐ)
“14th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“12 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“14th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *