“14 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಅತ್ಯಮೂಲ್ಯ ಖನಿಜ ಪೈರೋಕ್ಲಾಸ್ಟಿಕ್‌ ರಾಕ್ಸ್‌ ಪತ್ತೆ

1.

ಸುದ್ಧಿಯಲ್ಲಿ ಏಕಿದೆ ? ಭಾರತದಲ್ಲೇ ಅಪರೂಪವಾಗಿರುವ ಖನಿಜವೊಂದು ಕೋಲಾರ ಗೋಲ್ಡ್‌ ಫೀಲ್ಡ್‌ ಖ್ಯಾತಿಯ ಕೆಜಿಎಫ್‌ ಬಳಿ ಪತ್ತೆಯಾಗಿದ್ದು, ಭಾರತೀಯ ಭೂವಿಜ್ಞಾನ ಇಲಾಖೆಯು ಇದರ ಸಂರಕ್ಷಣೆಗೆ ಮುಂದಾಗಿದೆ.

 • ಕೆಜಿಎಫ್‌ ಬಳಿಯ ಪೆದ್ದಪಲ್ಲಿ ಗ್ರಾಮದಲ್ಲಿ ಈ ಅಪರೂಪದ ಖನಿಜವಿದ್ದು, ಮೇಲ್ನೋಟಕ್ಕೆ ಬಂಡೆಯಂತೆ ಕಂಡುಬಂದಿದೆ. ಇದನ್ನು ಪೈರೋಕ್ಲಾಸ್ಟಿಕ್‌ ರಾಕ್ಸ್‌ ಎಂದು ಕರೆಯಲಾಗುತ್ತದೆ. ರಾಜ್ಯದ ಸುಮಾರು ಆರು ಕಡೆ ಇಂತಹ ವಿಶಿಷ್ಟ ಖನಿಜದ ಜಾಗಗಳಿದ್ದು ಪೆದ್ದಪಲ್ಲಿ ಬಳಿಯ ಈ ‘ಪೈರೋಕ್ಲಾಸ್ಟಿಕ್‌ ರಾಕ್ಸ್‌’ ಇವೆಲ್ಲಕ್ಕೂ ವಿಭಿನ್ನವಾಗಿದೆ.
 • ಸುಮಾರು 2500 ವರ್ಷಗಳ ಹಿಂದೆ ಜ್ವಾಲಾಮುಖಿ ಸ್ಫೋಟಗೊಂಡಾಗ ಭೂಮಿಯಿಂದ ಹೊರಬಂದಿರುವ ಲಾವಾರಸ ಕೆಲದಿನಗಳ ಬಳಿಕ ಘನರೂಪ ಪಡೆದು ಬಂಡೆಯಂತೆ ಪರಿವರ್ತನೆಯಾಗಿದೆ. ಇಂಥ ಪುರಾತನವಾದ ಖನಿಜವು ಕಾಣಸಿಗುವುದೇ ಬಹಳ ವಿರಳ ಎಂದು ಭೂವಿಜ್ಞಾನಿಗಳು ಹೇಳಿದ್ದಾರೆ. ಹೀಗಾಗಿ ಕೇಂದ್ರ ಭೂವಿಜ್ಞಾನ ಇಲಾಖೆ ತನ್ನ ಸ್ವಾಧೀನಕ್ಕೆ ಪಡೆದು, ಸಂರಕ್ಷಿಸುವ ಸಲುವಾಗಿ ಜಿಲ್ಲಾಡಳಿತ ಮೂಲಕ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ಸ್ಮಾರಕಕ್ಕೆ ಚಾಲನೆ

 • ಪೆದ್ದಪಲ್ಲಿಯಲ್ಲಿನ ಈ ಖನಿಜದ ಸ್ಥಳವನ್ನು ಸ್ಮಾರಕವನ್ನಾಗಿಸುವ ಕಾರ್ಯ ಸಾಗಿದೆ. ಸ್ಥಳದಲ್ಲಿ ನ್ಯಾಷನಲ್‌ ಜಿಯೋಲಾಜಿಲ್‌ ಮಾನ್ಯುಮೆಂಟ್‌(ರಾಷ್ಟ್ರೀಯ ಭೂ ವಿಜ್ಞಾನ ಸ್ಮಾರಕ) ಎಂಬ ನಾಮಫಲಕ ಅಳವಡಿಸಲಾಗಿದ್ದು, ಆದರಲ್ಲಿ ‘ಅಪರೂಪದ ಈ ಪೈರೋಕ್ಲಾಸ್ಟಿಕ್‌ ರಾಕ್ಸ್‌’ ಅನ್ನು ಭಾರತೀಯ ಭೂವಿಜ್ಞಾನ ಇಲಾಖೆ ನಿರ್ವಹಣೆ ಮಾಡಲಿದೆ ಎಂದು ನಮೂದಿಸಲಾಗಿದೆ. ಈ ಖನಿಜವು ಭೂ ವಿಜ್ಞಾನಿಗಳ ಕಣ್ಣಿಗೆ ಸುಮಾರು ಮೂರು ವರ್ಷದ ಹಿಂದೆಯೆ ಬಿದ್ದಿತ್ತು. ಇಲ್ಲಿ ಸಂಶೋಧನೆ, ಭೇಟಿ ನೀಡುವವರಿಗೆ ಕುಡಿವ ನೀರು ಮತ್ತಿತರ ಮೂಲಸೌಲಭ್ಯ ವ್ಯವಸ್ಥೆಗೂ ಚಿಂತನೆ ನಡೆದಿದೆ.

ಪೈರೊಕ್ಲಾಸ್ಟಿಕ್ ಬಂಡೆಗಳು

 • ಅಗ್ನಿಪರ್ವತ ವಸ್ತುಗಳ ಸಂಪೂರ್ಣ ಅಥವಾ ಪ್ರಾಥಮಿಕವಾಗಿ ಸಂಯೋಜನೆಗೊಂಡ ಬಂಡೆಗಳ ಬಂಡೆಗಳು ಪೈರೊಕ್ಲ್ಯಾಸ್ಟಿಕ್ಸ್. ಜ್ವಾಲಾಮುಖಿಯ ವಸ್ತುಗಳನ್ನು ಗಾಳಿ ಅಥವಾ ನೀರಿನಿಂದ ಯಾಂತ್ರಿಕ ಕ್ರಿಯೆಯ ಮೂಲಕ ರವಾನೆ ಮಾಡಲಾಗುವುದು ಮತ್ತು ಪುನಃ ಕೆಲಸ ಮಾಡಲಾಗುವುದು, ಈ ಕಲ್ಲುಗಳನ್ನು ಜ್ವಾಲಾಮುಖಿಯಾಗಿ ಕರೆಯಲಾಗುತ್ತದೆ. ಸಾಮಾನ್ಯವಾಗಿ ಪ್ಲೀನಿಯನ್ ಅಥವಾ ಕ್ರ್ಯಾಕಟೊನ್ ಉಗುಳುವಿಕೆಯ ಶೈಲಿಗಳು, ಅಥವಾ ಫೊಟೊಮ್ಯಾಗ್ಮ್ಯಾಟಿಕ್ ಸ್ಫೋಟಗಳು-ಪೈರೋಕ್ಲಾಸ್ಟಿಕ್ ಠೇವಣಿಗಳಂತಹ ಅಗ್ನಿಪರ್ವತ ಚಟುವಟಿಕೆಯೊಂದಿಗೆ ಸಾಮಾನ್ಯವಾಗಿ ಸಂಬಂಧಿಸಿರುವ ವಾಯುಗಾಮಿ ಬೂದಿ, ಲ್ಯಾಪಿಲ್ಲಿ ಮತ್ತು ಬಾಂಬುಗಳು ಅಥವಾ ಬ್ಲಾಕ್ಗಳಿಂದ ಜ್ವಾಲಾಮುಖಿಯಿಂದ ಹೊರಹಾಕಲ್ಪಡುತ್ತದೆ,

ಫಸಲ್‌ ಬಿಮಾ ಯೋಜನೆ:

2.

ಸುದ್ಧಿಯಲ್ಲಿ ಏಕಿದೆ ? ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯು ರಾಜ್ಯದಲ್ಲಿ ನಿರಂತರ ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಕೈಹಿಡಿಯದ ಕಾರಣ ಮುಂದಿನ ಮುಂಗಾರು ಹಂಗಾಮಿನಿಂದ ಪ್ರತ್ಯೇಕ ಬೆಳೆ ವಿಮಾ ಯೋಜನೆ ಆರಂಭಿಸಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ.

ಈ ಚಿಂತನೆಗೆ ಕಾರಣಗಳು

 • ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಪಾಲು ಭರಿಸುವ ಸದ್ಯದ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ ವಿಮಾ ಕಂಪನಿಗಳ ಪರವಾಗಿದ್ದು, ವಿಮಾ ಕಂಪನಿ ಮತ್ತು ಕೃಷಿ ಅಧಿಕಾರಿಗಳು ಷಾಮೀಲಾಗಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ದೂರುಗಳು ಸಾರ್ವತ್ರಿಕವಾಗಿವೆ.
 • ವಿಮಾ ಕಂಪನಿ ಆಯ್ಕೆ, ನಿಯಮಾವಳಿ ರಚನೆ ಅಧಿಕಾರ ಕೇಂದ್ರ ಸರಕಾರಕ್ಕಿದ್ದು, ಅನುಷ್ಠಾನ ಮಾತ್ರ ರಾಜ್ಯ ಸರಕಾರದ್ದಾಗಿದೆ. ಇಷ್ಟಾದರೂ, ಯೋಜನೆಯಿಂದ ರೈತ ಸಮುದಾಯಕ್ಕೂ ಅನುಕೂಲವಾಗುತ್ತಿಲ್ಲ.
 • ನಷ್ಟ ಪರಿಹಾರಕ್ಕೆ ನಿಯಮಾವಳಿ ತೊಡಕುಗಳು ರೈತ ಹಿತಾಸಕ್ತಿಗೆ ವಿರುದ್ಧವಾಗಿವೆ. ಹೀಗಾಗಿ, ರಾಜ್ಯ ಸರಕಾರದ ಪೂರ್ಣ ಉಸ್ತುವಾರಿಯಲ್ಲಿ ಪ್ರತ್ಯೇಕ ಬೆಳೆ ವಿಮಾ ಯೋಜನೆ ಆರಂಭಿಸಲು ಉದ್ದೇಶಿಸಲಾಗಿದೆ.
 • ರಾಜ್ಯದಲ್ಲಿ ಬೆಳೆ ವಿಮೆ ಕಂತು ಪಾವತಿಸುವ ರೈತರ ಸಂಖ್ಯೆಯಲ್ಲೂ ಇಳಿಕೆಯಾಗುತ್ತಿರುವುದರಿಂದ ಪ್ರತ್ಯೇಕ ಯೋಜನೆ ಜಾರಿಗೆ ಪ್ರಯತ್ನ ಆರಂಭಿಸಲಾಗಿದೆ.

ಹೊಸ ಮಾದರಿ ಅಧ್ಯಯನ

 • ಬಿಹಾರದಲ್ಲಿ ಪ್ರಾರಂಭಿಸಿರುವ ಪ್ರತ್ಯೇಕ ಬೆಳೆ ವಿಮೆ ಯೋಜನೆಯ ಮಾದರಿ ಅಧ್ಯಯನಕ್ಕೆ ರಾಜ್ಯ ಸರಕಾರ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳ ತಂಡ ಕಳಿಸಿ ಕೊಟ್ಟಿದೆ. ಅಧ್ಯಯನ ವರದಿ ಬಂದ ಮೇಲೆ ರಾಜ್ಯ ಸರಕಾರವೇ ಹೊಸ ವಿಮಾ ಕಂಪನಿ ಆರಂಭಿಸುವ ಚಿಂತನೆಯಿದೆ.

ನಿಯಮಾವಳಿ ತೊಡಕು

 • ವಿಮೆ ಮಾಡಿಸಿದ ರೈತರ ಬೆಳೆ ನಷ್ಟವಾದರೆ 48 ತಾಸಿನೊಳಗೆ ಈ ಬಗ್ಗೆ ಸಂಬಂಧಿತ ವಿಮಾ ಕಂಪನಿಗೆ ಮಾಹಿತಿ ಒದಗಿಸುವುದು ಕಡ್ಡಾಯ. ಬಹುತೇಕ ಪ್ರಕರಣಗಳಲ್ಲಿ ಈ ಷರತ್ತು ಪಾಲನೆಯಾಗದ ಕಾರಣ ಪರಿಹಾರದ ಬೇಡಿಕೆಯೇ ತಿರಸ್ಕೃತಗೊಳ್ಳುತ್ತದೆ.

ಪ್ರಧಾನ್ ಮಂತ್ರಿ ಫಾಸಲ್ ಬಿಮಾ ಯೋಜನೆ

 • ಹೊಸ ಬೆಳೆ ವಿಮೆ ಯೋಜನೆ ಒಂದು ರಾಷ್ಟ್ರಕ್ಕೆ ಒಂದು ಯೋಜನೆ ವಿಷಯವಾಗಿದೆ. ಎಲ್ಲಾ ಹಿಂದಿನ ಸ್ಕೀಮ್ಗಳ ಅತ್ಯುತ್ತಮ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ ಮತ್ತು ಅದೇ ಸಮಯದಲ್ಲಿ, ಹಿಂದಿನ ಎಲ್ಲಾ ನ್ಯೂನತೆಗಳು / ದೌರ್ಬಲ್ಯಗಳನ್ನು ತೆಗೆದುಹಾಕಲಾಗಿದೆ. PMFBY ಅಸ್ತಿತ್ವದಲ್ಲಿರುವ ಎರಡು ಯೋಜನೆಗಳು ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಮತ್ತು ಮಾರ್ಪಡಿಸಿದ NAIS ಅನ್ನು ಬದಲಿಸುತ್ತದೆ.

ಉದ್ದೇಶಗಳು

 • ನೈಸರ್ಗಿಕ ವಿಕೋಪಗಳು, ಕ್ರಿಮಿಕೀಟಗಳು ಮತ್ತು ರೋಗಗಳ ಪರಿಣಾಮವಾಗಿ ಯಾವುದೇ ಸೂಚಿಸಲಾದ ಬೆಳೆ ವಿಫಲವಾದಾಗ ರೈತರಿಗೆ ವಿಮಾ ರಕ್ಷಣೆಯನ್ನು ಮತ್ತು ಹಣಕಾಸಿನ ಬೆಂಬಲವನ್ನು ಒದಗಿಸಲು.
 • ಕೃಷಿಯಲ್ಲಿ ತಮ್ಮ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ರೈತರ ಆದಾಯವನ್ನು ಸ್ಥಿರಗೊಳಿಸಲು.
 • ನವೀನ ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಉತ್ತೇಜಿಸಲು.
 • ಕೃಷಿ ಕ್ಷೇತ್ರಕ್ಕೆ ಕ್ರೆಡಿಟ್ ಹರಿವು ಖಚಿತಪಡಿಸಿಕೊಳ್ಳಲು

ಯೋಜನೆಯ ಮುಖ್ಯಾಂಶಗಳು

 • ಎಲ್ಲಾ ಖರಿಫ್ ಬೆಳೆಗಳಿಗೆ ರೈತರು ಪಾವತಿಸಬೇಕಾದ ಕೇವಲ 2% ಏಕರೂಪದ ಪ್ರೀಮಿಯಂ ಮತ್ತು ಎಲ್ಲಾ ರಬೀ ಬೆಳೆಗಳಿಗೆ 5% ನಷ್ಟು ಇರುತ್ತದೆ.
 • ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳ ಸಂದರ್ಭದಲ್ಲಿ, ರೈತರು ಪಾವತಿಸಬೇಕಾದ ಪ್ರೀಮಿಯಂ 5% ಮಾತ್ರ.
 • ರೈತರು ಪಾವತಿಸಬೇಕಾದ ಪ್ರೀಮಿಯಂ ದರಗಳು ತುಂಬಾ ಕಡಿಮೆ ಮತ್ತು ಸಮತೋಲನ ಪ್ರೀಮಿಯಂ ಅನ್ನು ನೈಸರ್ಗಿಕ ವಿಕೋಪಗಳ ಕಾರಣದಿಂದಾಗಿ ರೈತರಿಗೆ ಪೂರ್ಣ ವಿಮೆ ಮೊತ್ತವನ್ನು ಒದಗಿಸಲು ಸರ್ಕಾರವು ಪಾವತಿಸಬೇಕಾಗುತ್ತದೆ.
 • ಸರ್ಕಾರದ ಸಬ್ಸಿಡಿಯಲ್ಲಿ ಯಾವುದೇ ಮಿತಿ ಇಲ್ಲ. ಸಮತೋಲನ ಪ್ರೀಮಿಯಂ 90% ಆಗಿದ್ದರೂ ಸಹ, ಅದು ಸರ್ಕಾರದಿಂದ ಹೊಂದುತ್ತದೆ.
 • ತಂತ್ರಜ್ಞಾನದ ಬಳಕೆಯನ್ನು ಮಹತ್ತರವಾಗಿ ಪ್ರೋತ್ಸಾಹಿಸಲಾಗುತ್ತದೆ. ರೈತರಿಗೆ ಕ್ಲೈಮ್ ಪಾವತಿಸುವ ವಿಳಂಬವನ್ನು ಕಡಿಮೆ ಮಾಡಲು ಬೆಳೆ ಕತ್ತರಿಸುವಿಕೆಯ ದತ್ತಾಂಶವನ್ನು ಸೆರೆಹಿಡಿಯಲು ಮತ್ತು ಅಪ್ಲೋಡ್ ಮಾಡಲು ಸ್ಮಾರ್ಟ್ ಫೋನ್ಗಳನ್ನು ಬಳಸಲಾಗುತ್ತದೆ.
 • ಬೆಳೆ ಕಡಿತ ಪ್ರಯೋಗಗಳನ್ನು ಕಡಿಮೆ ಮಾಡಲು ದೂರಸ್ಥ ಸಂವೇದನೆಯನ್ನು ಬಳಸಲಾಗುತ್ತದೆ.
 • PMFBY ಎನ್ನುವುದು NAIS / MNAIS ನ ಬದಲಿ ಯೋಜನೆಯಾಗಿದೆ, ಯೋಜನೆಯ ಅನುಷ್ಠಾನದಲ್ಲಿ ಒಳಗೊಂಡಿರುವ ಎಲ್ಲಾ ಸೇವೆಗಳ ಸೇವಾ ತೆರಿಗೆ ಹೊಣೆಗಾರಿಕೆಯಿಂದ ವಿನಾಯಿತಿ ಇರುತ್ತದೆ. ವಿಮೆ ಪ್ರೀಮಿಯಂನಲ್ಲಿ ರೈತರಿಗೆ 75-80 ಶೇ. ಸಬ್ಸಿಡಿಯನ್ನು ಹೊಸ ಯೋಜನೆಯು ಖಚಿತಪಡಿಸುತ್ತದೆ ಎಂದು ಅಂದಾಜಿಸಲಾಗಿದೆ.

ಜಾನುವಾರು ಗಣತಿ

3.

ಸುದ್ಧಿಯಲ್ಲಿ ಏಕಿದೆ ? ದೇಶಾದ್ಯಂತ ಕಳೆದ ಅಕ್ಟೋಬರ್ 1ರಿಂದ ಏಕಕಾಲಕ್ಕೆ 20ನೇ ಜಾನುವಾರು ಗಣತಿ ಆರಂಭವಾಗಿತ್ತಾದರೂ ವಿಳಂಬದ ಹಿನ್ನೆಲೆಯಲ್ಲಿ ಡಿಸೆಂಬರ್​ನಿಂದ ಜನವರಿ ಅಂತ್ಯಕ್ಕೆ ಅವಧಿ ವಿಸ್ತರಿಸಲಾಗಿದೆ. ಆದರೆ, ಗಣತಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದತ್ತ ಚಿತ್ರದುರ್ಗ ದಾಪುಗಾಲಿಟ್ಟಿದೆ.

 • ಇದೇ ಮೊದಲ ಬಾರಿ ಗಣತಿದಾರರರಿಗೆ ಟ್ಯಾಬ್ ಒದಗಿಸಿದ್ದು, ಹೊಸದಿಲ್ಲಿಯ ಏಕೀಕೃತ ಸರ್ವರ್​ಗೆ ನಿತ್ಯವೂ ಕನಿಷ್ಠ 50 ಮನೆಗಳ ದನ-ಕರು, ಎಮ್ಮೆ, ಕುರಿ, ಕೋಳಿ ಮೊದಲಾದ ಪ್ರಾಣಿಪಕ್ಷಿಗಳ ಸಂಖ್ಯೆ ಅಪ್​ಲೋಡ್ ಮಾಡಬೇಕು.
 • ಇದಕ್ಕೆಂದು ರಾಷ್ಟ್ರೀಯ ಮಟ್ಟದಲ್ಲಿ ಸಿದ್ಧಪಡಿಸಿದ್ದ ಎಪಿಕೆ ಸಾಫ್ಟ್​ವೇರ್​ನ 0, 2.1, 2.2 ವರ್ಶನ್ ಜತೆಗೆ ಈಗ ಗಣತಿ ಕಾರ್ಯ ಚುರುಕಗೊಳಿಸಲು 3.1 ವರ್ಶನ್ ಬಿಡುಗಡೆಯಾಗಿದೆ.

ಜಾನುವಾರು ಗಣತಿ

 • ಪ್ರತಿ 5 ವರ್ಷಗಳಿಗೊಮ್ಮೆ ದೇಶಾದ್ಯಂತ ಜಾನುವಾರು ಗಣತಿ ನಡೆಯುತ್ತದೆ. 2012ರ ನಂತರ 2017ರಲ್ಲಿ ನಡೆಯಬೇಕಿದ್ದ ಗಣತಿ ಕಾರ್ಯ ಒಂದು ವರ್ಷ ವಿಳಂಬವಾಗಿತ್ತು. ಹಿಂದಿನ ಗಣತಿ ವೇಳೆ ಗಣತಿದಾರರು 120 ಕಾಲಂ ಭರ್ತಿ ಮಾಡಬೇಕಾಗಿತ್ತು. ಈಗ ಕರಾರುವಾಕ್ ಮಾಹಿತಿ ಸಂಗ್ರಹಕ್ಕಾಗಿ ಗಣತಿದಾರರಿಗೆ ಟ್ಯಾಬ್, ಪವರ್ ಬ್ಯಾಂಕ್ ಒದಗಿಸಲಾಗಿದೆ.
 • ದೇಶದಲ್ಲೇ ಮೊದಲು?: ದೇಶದ ವಿವಿಧ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡಾ 77 ಪ್ರಗತಿಯಾಗಿದೆ. ಜಿಲ್ಲೆಯ 1055 ಗ್ರಾಮಗಳಲ್ಲಿ 806 ಹಾಗೂ ನಗರದ 159 ವಾರ್ಡ್​ಗಳ ಪೈಕಿ 115 ವಾರ್ಡ್​ಗಳಲ್ಲಿ ಗಣತಿ ಪೂರ್ಣಗೊಳಿಸಲಾಗಿದೆ. ದೃಢೀಕರಣ ಬಳಿಕ ಜಿಲ್ಲೆಯ 112 ಬೇಚರಾಕ್ ಗ್ರಾಮಗಳಲ್ಲೂ ಗಣತಿ ನಡೆಯಲಿದೆ. ಇದೇ ಜ.7ರೊಳಗೆ ಗಣತಿ ಪೂರ್ಣಗೊಂಡರೆ ಚಿತ್ರದುರ್ಗಕ್ಕೆ ದೇಶದಲ್ಲೇ ಮೊದಲ ಸ್ಥಾನ ಲಭಿಸುವ ವಿಶ್ವಾಸವಿದೆ

ರಾಜ್ಯದಲ್ಲಿ 95.16 ಲಕ್ಷ ದನ

 • 2012ರ ಗಣತಿಯಂತೆ ರಾಜ್ಯದಲ್ಲಿ 16 ಲಕ್ಷ ದನ, 34.79 ಲಕ್ಷ ಎಮ್ಮೆ, 95.83 ಲಕ್ಷ ಕುರಿ, 47.96 ಲಕ್ಷ ಮೇಕೆಗಳಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹಸು, ದನ ಎಮ್ಮೆ, ಕುರಿ ಕೋಳಿ, ಹಂದಿ ಇತ್ಯಾದಿ ಪ್ರಾಣಿಪಕ್ಷಿಗಳ ಸಂಖ್ಯೆ 16.42 ಲಕ್ಷ ಇದೆ.

ಜಗತ್ತಿನ ಅತಿದೊಡ್ಡ ಸೋಲಾರ್‌ ಪ್ಲಾಂಟ್

4.

ಸುದ್ಧಿಯಲ್ಲಿ ಏಕಿದೆ ? ಲಡಾಖ್‌ನ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗುತ್ತಿದ್ದು, ಶೀಘ್ರದಲ್ಲೇ ಜಗತ್ತಿನ ಅತಿದೊಡ್ಡ ಸೋಲಾರ್ ಪ್ಲಾಂಟ್ ನಿರ್ಮಾಣವಾಗಲಿದೆ.

ಸ್ಥಾಪನೆಗೆ ಕಾರಣಗಳು

 • ನೈಸರ್ಗಿಕ ಸೌಂದರ್ಯದ ಲಡಾಖ್‌ಗೆ ಪರಿಸರ ಮಾಲಿನ್ಯದಿಂದ ಪರಿಣಾಮವಾಗುತ್ತಿದ್ದು, ಅದನ್ನು ತಪ್ಪಿಸುವ ಜತೆಗೆ, ಅಲ್ಲಿನ ಅಭಿವೃದ್ಧಿಗೂ ಸೋಲಾರ್ ಪ್ಲಾಂಟ್ ನೆರವಾಗುತ್ತದೆ.

ಎಲ್ಲಿದೆ?

 • ಕಾರ್ಗಿಲ್‌ನಿಂದ ದಕ್ಷಿಣಕ್ಕೆ 200 ಕಿಮೀ. ದೂರದಲ್ಲಿ ಬೃಹತ್ ಸೋಲಾರ್ ಪ್ಲಾಂಟ್ ಸ್ಥಾಪನೆಯಾಗುತ್ತಿದ್ದು, ವರ್ಷದಲ್ಲಿ 12,750 ಟನ್ ಕಾರ್ಬನ್ ಮಾಲಿನ್ಯವನ್ನು ತಪ್ಪಿಸುತ್ತದೆ. ಜನರು ಡೀಸೆಲ್ ಜನರೇಟರ್ ಮೇಲೆ ಅವಲಂಬಿತವಾಗಿದ್ದು, ಲಡಾಖ್‌ನ ಸೋಲಾರ್ ಪ್ಲಾಂಟ್ 5000 ಮೆಗಾವ್ಯಾಟ್ ಸೋಲಾರ್ ಎನರ್ಜಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.
 • ಪ್ರಸ್ತುತ ಚೀನಾದ ಡಾಟೊಂಗ್ ಸೋಲಾರ್ ಪ್ಲಾಂಟ್ 3,000 ಮೆಗಾವ್ಯಾಟ್ ಸೋಲಾರ್ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದರೂ, 1,000 ಮೆಗಾವ್ಯಾಟ್ ಸೋಲಾರ್ ಎನರ್ಜಿ ನಿರ್ಮಿಸುತ್ತದೆ.
 • ಸೋಲಾರ್ ಎನರ್ಜಿ ಕಾರ್ಪೋರೇಶನ್ ಆಫ್ ಇಂಡಿಯಾ ಲಡಾಖ್‌ನಲ್ಲಿ ಸೋಲಾರ್ ಪ್ಲ್ಯಾಂಟ್ ನಿರ್ಮಾಣ ಮಾಡುತ್ತಿದ್ದು, 45,000 ಕೋಟಿ ರೂ. ಹೂಡಿಕೆ ಮಾಡಿದ್ದು, 2023ಕ್ಕೆ ಪೂರ್ತಿಯಾಗಲಿದೆ.

ಡಿಸ್‌ಕನೆಕ್ಟ್ ಕಾಯ್ದೆ 

5.

ಸುದ್ಧಿಯಲ್ಲಿ ಏಕಿದೆ ? ಲೋಕಸಭೆಯಲ್ಲಿ ಇತ್ತೀಚೆಗೆ ಎನ್‌ಸಿಪಿ ಸಂಸದೆ ಸುಪ್ರೀಯಾ ಸುಳೆ ಮಂಡಿಸಿದ ರೈಟ್ ಟು ಡಿಸ್‌ಕನೆಕ್ಟ್ ಬಿಲ್ ಕಾಯ್ದೆಯಾಗಿ ಜಾರಿಯಾದರೆ, ದೇಶದಲ್ಲೂ ಡಿಸ್‌ಕನೆಕ್ಟ್ ಪಾಲಿಸಿ ಬರಲಿದೆ.

ಬಿಲ್ನ ವಿವರಗಳು

 • ಅದರ ಪ್ರಕಾರ, ಕೆಲಸದ ಅವಧಿ ಮುಗಿದ ಬಳಿಕ, ಮನೆಯಲ್ಲಿ ಬಾಸ್‌ ಕರೆ, ಇ ಮೇಲ್‌ಗೆ ಉತ್ತರಿಸದೇ ಇರುವ ಸ್ವಾತಂತ್ರ್ಯ ದೊರೆಯಲಿದೆ.

ಅನುಕೂಲಗಳು

 • ಇದರಿಂದ ವೃತ್ತಿಜೀವನ ಮತ್ತು ಖಾಸಗಿ ಜೀವನದ ನಡುವೆ ಅಂತರ ಕಾಯ್ದುಕೊಳ್ಳಲು, ವೃತ್ತಿಜೀವನದ ಒತ್ತಡದಿಂದ ವಿರಾಮ ಪಡೆಯಲು ಸಾಧ್ಯವಾಗುತ್ತದೆ.
 • ಒಂದು ಕಂಪನಿಯಲ್ಲಿ 10ಕ್ಕೂ ಅಧಿಕ ಉದ್ಯೋಗಿಗಳಿದ್ದು, ಅವರು ಉದ್ಯೋಗಿಗಳ ಕಲ್ಯಾಣ ಸಮಿತಿ ರಚಿಸಿಕೊಂಡಿದ್ದರೆ, ಈ ಕಾಯ್ದೆ ಪ್ರಯೋಜನಕಾರಿ.
 • ಕೆಲಸದ ಒತ್ತಡ ಮತ್ತು ಕಿರಿಕಿರಿಯ ಜೀವನ ನಡೆಸುತ್ತಿರುವ ಉದ್ಯೋಗಿಗಳಿಗೆ ನೆಮ್ಮದಿ ಮತ್ತು ವೈಯಕ್ತಿಕ ಜೀವನ ನಡೆಸಲು ಅನುಕೂಲವಾಗುವಂತೆ ಈ ನಿಯಮ ಜಾರಿಯಾದರೆ ಪ್ರಯೋಜನವಾಗುತ್ತದೆ.

ಜಾಗತಿಕ ಉದಾಹರಣೆಗಳು

 • ಈಗಾಗಲೇ ಫ್ರಾನ್ಸ್, ಸ್ಪೇನ್, ಜರ್ಮನಿ ಮತ್ತು ಅಮೆರಿಕದ ಕೆಲ ಕಂಪನಿಗಳಲ್ಲಿ ಈ ನಿಯಮ ಜಾರಿಯಲ್ಲಿದೆ.
 • ಅಲ್ಲಿ ಉದ್ಯೋಗಿಗಳಿಗೆ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಮಧ್ಯೆ ಸಮಾನಾಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಜತೆಗೆ ಹಬ್ಬ, ರಜೆಯ ದಿನದಲ್ಲೂ ಈ ನಿಯಮ ಅನ್ವಯಿಸುತ್ತದೆ.

ಎನ್‌ಪಿಎ ಹೆಚ್ಚಿಸುತ್ತಿರುವ ಮುದ್ರಾ: ಆರ್‌ಬಿಐ ಎಚ್ಚರಿಕೆ

ಸುದ್ಧಿಯಲ್ಲಿ ಏಕಿದೆ ? ವಸೂಲಾಗದ ಸಾಲಗಳ(ಎನ್‌ಪಿಎ) ಗಾತ್ರ ಹೆಚ್ಚುತ್ತಿದ್ದು ಬ್ಯಾಂಕ್‌ಗಳು ತತ್ತರಿಸಿವೆ. ಈ ಎನ್‌ಪಿಎ ಗಾತ್ರವನ್ನು ಮುದ್ರಾ ಯೋಜನೆ ಇನ್ನಷ್ಟು ಹಿಗ್ಗಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಎಚ್ಚರಿಸಿದೆ.

 • ಸಣ್ಣ ಕೈಗಾರಿಕೆಗಳು ಸೇರಿದಂತೆ ಸ್ವಯಂ ಉದ್ಯಮ ಆರಂಭಿಸಲು ನೆರವಾಗಲು ಕೇಂದ್ರ ಸರಕಾರ ಆರಂಭಿಸಿದ್ದ ಮಹತ್ವಾಕಾಂಕ್ಷೆಯ ಮುದ್ರಾ ಸಾಲ ಯೋಜನೆಯು ಬ್ಯಾಂಕ್‌ಗಳಿಗೆ ಭಾರವಾಗುತ್ತಿದೆ. ಈ ಯೋಜನೆಯಡಿ ವಸೂಲಾಗದ ಸಾಲಗಳ ಮೊತ್ತ 11,000 ಕೋಟಿ ರೂ. ಮುಟ್ಟಿದೆ ಎಂದು ಆರ್‌ಬಿಐ ಹೇಳಿದೆ.
 • ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಮುದ್ರಾ ಯೋಜನೆಯ ಸಾಲವು ಬ್ಯಾಂಕಿಂಗ್‌ ವಲಯದಲ್ಲಿ ಬೃಹತ್‌ ಪ್ರಮಾಣದಲ್ಲಿ ಬೆಳೆಯಲಿದೆ ಎಂದು ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಮುದ್ರಾ ಯೋಜನೆಯ ವಾರ್ಷಿಕ ವರದಿ ಪ್ರಕಾರ, 2017-18ರಲ್ಲಿ 46 ಲಕ್ಷ ಕೋಟಿ ರೂ. ಸಾಲವನ್ನು ವಿತರಣೆ ಮಾಡಲಾಗಿದೆ. ಇದರ ಪೈಕಿ ಶೇ.40ರಷ್ಟನ್ನು ಮಹಿಳಾ ಉದ್ಯಮಿಗಳಿಗೆ, ಶೇ.33ರಷ್ಟನ್ನು ಸೋಷಿಯಲ್‌ ಕ್ಯಾಟಗರಿಗಳಿಗೆ ನೀಡಲಾಗಿದೆ. 4.81 ಕೋಟಿಗೂ ಅಧಿಕ ಸಣ್ಣ ಉದ್ಯಮಿಗಳಿಗೆ ಲಾಭವಾಗಿದೆ.
 • 2015ರ ಏಪ್ರಿಲ್‌ನಲ್ಲಿ ಈ ಯೋಜನೆ ಆರಂಭಗೊಂಡಿತ್ತು. 10 ಲಕ್ಷ ರೂ. ತನಕ ಅತಿ ಸಣ್ಣ ಮತ್ತು ಸಣ್ಣ ಉದ್ಯಮಿಗಳಿಗೆ ಸಾಲ ನೀಡಲಾಗುತ್ತದೆ. ಸಾಲಗಳ ವಾಪಸಾತಿಯಲ್ಲಿ ನಿರೀಕ್ಷಿತ ಬೆಳವಣಿಗೆ ಕಂಡು ಬಂದಿಲ್ಲ. ಹೀಗಾಗಿ ಎನ್‌ಪಿಎಯಾಗಿ ಮುದ್ರಾ ಸಾಲದ ಮೊತ್ತವು ಬೆಳೆಯುತ್ತಿದೆ.

ಪ್ರಧಾನ್ ಮಂತ್ರಿ  ಮುದ್ರ ಯೋಜನೆ

 • 2015 ರಲ್ಲಿ ಬಿಡುಗಡೆಯಾದ ಪ್ರಧಾನ್ ಮಂತ್ರಿ ಮುದ್ರ ಯೋಜನಾ (ಪಿಎಂಎಂವೈ) 10 ಲಕ್ಷದವರೆಗಿನ ಸಾಲವನ್ನು ಕಾರ್ಪೋರೆತರೇತರ, ಕೃಷಿ-ಅಲ್ಲದ ಸಣ್ಣ / ಮೈಕ್ರೋ ಉದ್ಯಮಗಳಿಗೆ ನೀಡಲಿದೆ. ವಾಣಿಜ್ಯ ಬ್ಯಾಂಕುಗಳು, ಆರ್ಆರ್ಬಿಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಎಂಎಫ್ಐಗಳು ಮತ್ತು ಎನ್ಬಿಎಫ್ಸಿಗಳ ಮೂಲಕ ಸಾಲಗಳನ್ನು ಒದಗಿಸಲಾಗುತ್ತದೆ. ಮುದ್ರ ಸಾಲಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗಿದೆ:
 • ಶಿಶು 50,000 ರೂ.
 • ಕಿಶೋರ್ ಅಡಿಯಲ್ಲಿ 50,001 ರಿಂದ ರೂ 5 ಲಕ್ಷದವರೆಗಿನ ಸಾಲಕ್ಕೆ.
 • ತರುಣ್ ಅಡಿಯಲ್ಲಿ 5,00,001 ಮತ್ತು 10 ಲಕ್ಷ ರೂ.
 • ವರ್ಗಗಳು ಫಲಾನುಭವಿಯ ಮೈಕ್ರೊನಿಟ್ / ಉದ್ಯಮಿಗಳ ಬೆಳವಣಿಗೆ / ಅಭಿವೃದ್ಧಿ ಮತ್ತು ಹಣಕಾಸಿನ ಅವಶ್ಯಕತೆಗಳ ಹಂತವನ್ನು ಸೂಚಿಸುತ್ತವೆ ಮತ್ತು ಮುಂದಿನ ಹಂತದ ಪದವಿ / ಬೆಳವಣಿಗೆಗೆ ಒಂದು ಉಲ್ಲೇಖ ಬಿಂದುವನ್ನು ಒದಗಿಸುತ್ತದೆ.

ಗಡಿ ರಕ್ಷಣೆಗೆ ರೋಡಿಸಂ

7.

ಸುದ್ಧಿಯಲ್ಲಿ ಏಕಿದೆ ? ಜಮ್ಮು ಮತ್ತು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗಿನ 4000 ಕಿ.ಮೀ. ಉದ್ದದ ಚೀನಾ ಗಡಿಯಲ್ಲಿ ಗಡಿಗೆ ಸಮಾಂತರವಾಗಿ ಮತ್ತು ಅದಕ್ಕೆ ಸಂಪರ್ಕ ಕಲ್ಪಿಸುವ 44 ವ್ಯೂಹಾತ್ಮಕ ರಸ್ತೆಗಳನ್ನು ನಿರ್ಮಿಸಲು ಕೇಂದ್ರೀಯ ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ರಸ್ತೆ ನಿರ್ಮಾಣಕ್ಕೆ ಕಾರಣಗಳು

 • ಚೀನಾ ತನ್ನ ಗಡಿ ಭಾಗದಲ್ಲಿ ಕ್ಷಿಪ್ರ ಗತಿಯಲ್ಲಿ ರಸ್ತೆ ನಿರ್ಮಾಣ ಮತ್ತು ಸೇನಾ ಜಮಾವಣೆಗೆ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ. ಇದೇ ವಿವಾದ ಕಳೆದ ವರ್ಷ ಡೋಕ್ಲಾಂ ಗಡಿ ಸಂಘರ್ಷಕ್ಕೆ ಕಾರಣವಾಗಿತ್ತು. ಅಂತಿಮವಾಗಿ ಸಂಧಾನ ನಡೆದು ಚೀನೀ ಪಡೆಗಳು ಹಿಂದೆ ಸರಿದಿದ್ದವು ಮತ್ತು ರಸ್ತೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು.

ರಸ್ತೆ ನಿರ್ಮಾಣದ ಉದ್ದೇಶ

 • ಗಡಿಯುದ್ದಕ್ಕೂ ಚೀನಾದ ಸೇನಾ ಚಟುವಟಿಕೆ ಮೇಲೆ ನಿಗಾ
 • ತುರ್ತು ಸಂದರ್ಭದಲ್ಲಿ ಏಕಕಾಲದಲ್ಲಿ ಎಲ್ಲ ಕಡೆಯಿಂದ ಗಡಿಗೆ ಸೇನೆ ರವಾನಿಸಲು ಅನುಕೂಲ
 • ಸಂಪರ್ಕ ರಹಿತ ಪ್ರದೇಶಗಳ ಮೂಲಕ ನಡೆಯುವ ಆಕ್ರಮಣಕ್ಕೆ ಪ್ರತ್ಯುತ್ತರ

ಪಾಕ್‌ ಗಡಿಭಾಗದಲ್ಲೂ ರಸ್ತೆ

 • ಚೀನಾ ಗಡಿಯೊಂದಿಗೆ ಪಾಕಿಸ್ತಾನದ ಗಡಿ ಭಾಗದಲ್ಲೂ ರಸ್ತೆ ಸಂಪರ್ಕ ಬಲಗೊಳಿಸಲು 5400 ಕೋಟಿ ರೂ. ಇಡಲಾಗಿದೆ.
 • ರಾಜಸ್ಥಾನ ಮತ್ತು ಪಂಜಾಬ್‌ನ ಗಡಿಯಲ್ಲಿ 2100 ಕಿ.ಮೀ. ಉದ್ದದ ಗಡಿ ಸಮಾಂತರ ಮತ್ತು ಪಾಶ್ರ್ವ ಸಂಪರ್ಕ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ. ಗಡಿಯ ಉದ್ದಕ್ಕೂ 752 ಕಿ.ಮೀ. ಮತ್ತು ಅದಕ್ಕೆ ಪಾಶ್ರ್ವ ಸಂಪರ್ಕ ಕಲ್ಪಿಸುವ 1427 ಕಿ.ಮೀ. ರಸ್ತೆ ನಿರ್ಮಾಣದ ಉದ್ದೇಶವಿದೆ.

ವ್ಯೂಹಾತ್ಮಕ ರಸ್ತೆ ಹೇಗೆ?

 • ಚೀನಾ ಮತ್ತು ಭಾರತದ ಗಡಿ ಅತ್ಯಂತ ಕಡಿದಾದ ಪ್ರದೇಶಗಳಲ್ಲಿ ಹಾದು ಹೋಗುತ್ತದೆ. ಇಲ್ಲಿ ಸಾರ್ವಕಾಲಿಕ ಸೇನೆ ನಿಯೋಜನೆಯೂ ಕಷ್ಟ. ಹಾಗಾಗಿ ಚೀನಾದ ಅತಿಕ್ರಮಣ ಮತ್ತು ನಿರ್ಮಾಣ ಕಾಮಗಾರಿಗಳು ಕೆಲವೊಮ್ಮೆ ತಡವಾಗಿ ಬೆಳಕಿಗೆ ಬರುತ್ತದೆ. ತಿಳಿದ ಬಳಿಕವೂ ಸೇನೆ ನಿಯೋಜನೆಗೆ ವಿಳಂಬವಾಗುತ್ತದೆ. ಹೀಗಾಗಿ, ಗಡಿಯುದ್ದಕ್ಕೂ ಆಯ ಕಟ್ಟಿನ ಪ್ರದೇಶಗಳಲ್ಲಿ ಸೇನಾ ವಾಹನಗಳ ಸಂಚಾರಕ್ಕೆ ಸೂಕ್ತವಾದ ರಸ್ತೆ ನಿರ್ಮಾಣ ಮತ್ತು ಅದಕ್ಕೆ ಸ್ಥಳೀಯ ಪ್ರಮುಖ ಪ್ರದೇಶಗಳಿಂದ ಸಂಪರ್ಕ ಕಲ್ಪಿಸುವುದು ವ್ಯೂಹಾತ್ಮಕ ರಸ್ತೆ ಸಂಪರ್ಕದ ಕಲ್ಪನೆಯಾಗಿದೆ.

ಚೀನಾ ಜತೆಗಿನ ಗಡಿ ಪ್ರದೇಶ

 • ಜ-ಕಾಶ್ಮೀರ 1954 ಕಿ.ಮೀ, ಉತ್ತರಾಖಂಡ 463 ಕಿ.ಮೀ, ಹಿಮಾಚಲ 345 ಕಿ.ಮೀ, ಸಿಕ್ಕಿಂ 220 ಕಿ.ಮೀ, ಅರುಣಾಚಲ 1080 ಕಿ.ಮೀ.

ಪಾಕ್‌ ಜತೆಗಿನ ಗಡಿ ಪ್ರದೇಶ

 • ಜ-ಕಾಶ್ಮೀರ 1225 ಕಿ.ಮೀ, ರಾಜಸ್ಥಾನ 1037 ಕಿ.ಮೀ, ಗುಜರಾತ್‌ 508 ಕಿ.ಮೀ, ಪಂಜಾಬ್‌ 553 ಕಿ.ಮೀ.

ಆಫ್ರಿಕಾದ ರವಾಂಡದಲ್ಲಿ ಫೇರ್‌ನೆಸ್ ಕ್ರೀಂಗೆ ನಿಷೇಧ

ಸುದ್ಧಿಯಲ್ಲಿ ಏಕಿದೆ ? ಪೂರ್ವ ಆಫ್ರಿಕಾದ ರವಾಂಡದಲ್ಲಿ ಅಲ್ಲಿನ ಸರಕಾರ ಎಲ್ಲ ರೀತಿಯ ಫೇರ್‌ನೆಸ್‌ ಕ್ರೀಂ, ಬ್ಲೀಚಿಂಗ್ ಕ್ರೀಂ ಮತ್ತು ಚರ್ಮಕ್ಕೆ ಬಿಳುಪು ತರುವ ಕ್ರೀಂಗಳನ್ನು ನಿಷೇಧಿಸಿದೆ.

 • ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅನಾವಶ್ಯಕ ಖರ್ಚು ತರುತ್ತದೆ ಎಂಬ ಕಾರಣಕ್ಕೆ ನಿಷೇಧ ಜಾರಿಮಾಡಿದ್ದು, ದೇಶದೆಲ್ಲೆಡೆ ವಿಶೇಷ ಜಾಗೃತಿ ಆಂದೋಲನ ಕೈಗೊಳ್ಳಲಿದೆ.
 • ರವಾಂಡದ ಆರೋಗ್ಯ ಸಚಿವಾಲಯ, ಆಹಾರ ಮತ್ತು ಔಷಧ ಪ್ರಾಧಿಕಾರ ಮತ್ತು ರವಾಂಡ ಸ್ಟ್ಯಾಂಡರ್ಡ್ಸ್‌ ಮಂಡಳಿ ಜಂಟಿಯಾಗಿ ಕಾಸ್ಮೆಟಿಕ್, ತ್ವಚೆ ಬಿಳಿಯಾಗಿಸುವ ಮತ್ತು ಮುಖದ ಅಂದ ಹೆಚ್ಚಿಸುವ ಫೇರ್‌ನೆಸ್ ಕ್ರೀಂ ವಿರುದ್ಧ ಸಮರ ಸಾರಿವೆ.
 • ಜತೆಗೆ ಈಗಾಗಲೇ ರವಾಂಡದ ಪೊಲೀಸ್ ಕ್ರೀಂ ನಿಯಂತ್ರಣಕ್ಕೆ ಮುಂದಾಗಿದ್ದು, 5000ಕ್ಕೂ ಅಧಿಕ ನಿಷೇಧಿತ ಬ್ಲೀಚಿಂಗ್ ಉತ್ಪನ್ನಗಳನ್ನು ವಶಕ್ಕೆ ಪಡೆದಿವೆ.

ಭಾರತ ಏನು ಕಲಿಯಬೇಕು?

 • ರವಾಂಡದಲ್ಲಿ ಸೌಂದರ್ಯವರ್ಧಕ ಉತ್ಪನ್ನಗಳಿಗೆ ನಿಷೇಧ ಹೇರಿರುವುದನ್ನು ಗಮನಿಸಿದರೆ, ಭಾರತ ಕಲಿಯಬೇಕಿರುವುದು ಬಹಳಷ್ಟಿದೆ. ದೇಶದಲ್ಲಿ 450 ಮಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಫೇರ್‌ನೆಸ್ ಕ್ರೀಂ ಮಾರುಕಟ್ಟೆಯಿದೆ. ದೇಶದಲ್ಲಿ ತ್ವಚೆಯನ್ನು ಬಿಳಿಯಾಗಿಸುವ ಕ್ರೀಂಗಳ ಮಾರಾಟ ಅತಿಹೆಚ್ಚಿನ ಪ್ರಮಾಣದಲ್ಲಿದೆ.

ಚಾಂಗ್‌-4

9.

ಸುದ್ಧಿಯಲ್ಲಿ ಏಕಿದೆ ? ಚಂದ್ರನ ಮತ್ತೊಂದು ಭಾಗದ ಶೋಧನೆ ನಡೆಸುತ್ತಿರುವ ಚೀನಾದ ಚಾಂಗ್‌-4 ಆಕಾಶ ನೌಕೆಯು, ರಾತ್ರಿ ವೇಳೆ ಚಂದ್ರನಲ್ಲಿನ ತಾಪಮಾನ ಅಳೆಯಲಿದೆ ಎಂದು ಚೀನಾ ವಿಜ್ಞಾನಿಗಳು ಭಾನುವಾರ ತಿಳಿಸಿದ್ದಾರೆ.

 • ಮೊದಲ ಬಾರಿಗೆ ಯಾರೂ ಕಾಣದ ಚಂದ್ರನ ಮತ್ತೊಂದು ಭಾಗದಲ್ಲಿ ಜನವರಿ 3ರಂದು ನೌಕೆ ಇಳಿಸುವ ಮೂಲಕ ಚೀನಾ ಐತಿಹಾಸಿಕ ಸಾಧನೆ ಮಾಡಿದೆ. ಈ ನೌಕೆಯು ಬೆಳಗ್ಗೆ ಮತ್ತು ರಾತ್ರಿ ವೇಳೆ ಚಂದ್ರನ ಉಷ್ಣಾಂಶ ದಾಖಲು ಮಾಡಿ, ಭೂಮಿಗೆ ಮಾಹಿತಿ ಕಳುಹಿಸಲಿದೆ.
 • ಚಂದ್ರನಲ್ಲಿ ಒಂದು ದಿನ ಭೂಮಿಯಲ್ಲಿ 14 ದಿನಗಳಿಗೆ ಸಮವಾಗಿರುತ್ತದೆ. ಇದೇ ರೀತಿ ಚಂದ್ರನಲ್ಲಿ ರಾತ್ರಿಯೂ ಇಷ್ಟೇ ದಿನಗಳಿಗೆ ಸಮವಾಗಿರುತ್ತದೆ. ಚಂದ್ರನ ಉಷ್ಣಾಂಶದಲ್ಲಿ ಬೆಳಗ್ಗೆ ಮತ್ತು ರಾತ್ರಿ ನಡುವೆ ಅಗಾಧ ಬದಲಾವಣೆ ಇರುತ್ತದೆ.
 • ಚಂದ್ರನ ಮೇಲೆ ಬೆಳಗಿನ ಹೊತ್ತು ಗರಿಷ್ಠ 127 ಡಿಗ್ರಿ ಸೆಲ್ಸಿಯಸ್‌ ಮತ್ತು ರಾತ್ರಿ ಹೊತ್ತು ಗರಿಷ್ಠ ಮೈನಸ್‌ 183 ಡಿಗ್ರಿ ಸೆಲ್ಸಿಯಸ್‌ ಇರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದರೆ.
 • ಚೀನೀ ಚಂದ್ರ ದೇವತೆ ಹೆಸರಿನಲ್ಲಿ ನೌಕೆಗೆ ಚಾಂಗ್‌-4 ಎಂದು ಹೆಸರಿಡಲಾಗಿದೆ. ಕಳೆದ ಹತ್ತು ದಿನಗಳ ಹಿಂದೆ ನೌಕೆಯು ಚಂದ್ರನ ಮತ್ತೊಂದು ಮುಖಕ್ಕೆ ಬೆಳಕು ಚೆಲ್ಲಿ ಅತ್ಯಂತ ಸನಿಹದ ಚಿತ್ರಗಳನ್ನು ಕಳುಹಿಸಿದೆ. ಈ ಆಕಾಶ ನೌಕೆಯನ್ನು ಡಿಸೆಂಬರ್‌ 8ರಂದು ಕ್ಸಿಚಾಂಗ್‌ ಉಪಗ್ರಹ ಉಡಾವಣಾ ಕೇಂದ್ರದಿಂದ ಹಾರಿಬಿಡಲಾಗಿತ್ತು.

Related Posts
“03 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಂಎಚ್​ 60 ಸೀಹಾಕ್​ ಹೆಲಿಕಾಪ್ಟರ್ ಸುದ್ಧಿಯಲ್ಲಿ ಏಕಿದೆ ?ನೌಕಾಪಡೆಯ ಬಲ ಹೆಚ್ಚಿಸಿಕೊಳ್ಳಲು ಭಾರತಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ‘ಬಹುಪಯೋಗಿ ಎಂಎಚ್​ 60 ರೋಮಿಯೋ ಸೀಹಾಕ್​ ‘ ಹೆಲಿಕಾಪ್ಟರ್​ಗಳ ಮಾರಾಟಕ್ಕೆ ಅಮೆರಿಕ ಸಮ್ಮತಿಸಿದೆ. 2.4 ಶತಕೋಟಿ ಅಮೆರಿಕನ್ ಡಾಲರ್​ ಮೊತ್ತದಲ್ಲಿ 24 ಸೀಹಾಕ್​ ಹೆಲಿಕಾಪ್ಟರ್​ಗಳನ್ನು ಅದು ...
READ MORE
“29 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಪೋಕ್ಸೋ ಕಾಯ್ದೆಗೆ ತಿದ್ದುಪಡಿ ಸುದ್ಧಿಯಲ್ಲಿ ಏಕಿದೆ ? ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಕಠಿಣ ನಿಲುವು ಕೈಗೊಂಡಿರುವ ಕೇಂದ್ರ ಸರ್ಕಾರ, ಕಾಮಾಂಧರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಲು ಅವಕಾಶವಾಗುವಂತೆ ಪೋಕ್ಸೋ ಕಾಯ್ದೆಗೆ ತಿದ್ದುಪಡಿ ತರುವ ಮಹತ್ವದ ತೀರ್ಮಾನ ಕೈಗೊಂಡಿದೆ. 2012ರಲ್ಲಿ ಜಾರಿಗೆ ಬಂದ ...
READ MORE
“27 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏಪ್ರಿಲ್‌ಗೆ ಕರ್ನಾಟಕ ಪೂರ್ತಿ ಉಜ್ವಲ! ಸುದ್ಧಿಯಲ್ಲಿ ಏಕಿದೆ ? ರಾಜ್ಯದಲ್ಲಿ ವಿಸ್ತರಿತ ಪ್ರಧಾನಮಂತ್ರಿ ಉಜ್ವಲ ಯೋಜನೆ-2(ಇಪಿಎಂಯುವೈ) ಅಡಿ ಹೊಸದಾಗಿ ಐದು ಲಕ್ಷ ಬಡ ಕುಟುಂಬಗಳಿಗೆ ಅನಿಲ ಸಂಪರ್ಕ ಕಲ್ಪಿಸಲು ಭಾರತೀಯ ತೈಲ ನಿಗಮ ಮುಂದಾಗಿದೆ. 2019ರ ಜ.1ರಿಂದ ಉಜ್ವಲ-2ರ ಯೋಜನೆಗೆ ಚಾಲನೆ ಸಿಗಲಿದೆ. ಸದ್ಯ ...
READ MORE
“30th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ವಾಹನ ಸೌಲಭ್ಯ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿಶೇಷಚೇತನ ಮತದಾರರಿಗೆ ವಾಹನ ವ್ಯವಸ್ಥೆ ಕಲ್ಪಿಸುವುದಕ್ಕೆ ಚುನಾವಣಾ ಆಯೋಗ ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂಥ ಸುಧಾರಣಾ ಕ್ರಮ ...
READ MORE
“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಲಮನ್ನಾ ಮೊತ್ತ ತೀರಿಸಿ ಸುದ್ಧಿಯಲ್ಲಿ ಏಕಿದೆ ?ರೈತರ ಕೃಷಿ ಸಾಲಮನ್ನಾ ಮಾಡುತ್ತಿರುವ ರಾಜ್ಯ ಸರ್ಕಾರಗಳು ನಿಗದಿತ ಅವಧಿಯಲ್ಲಿ ಬ್ಯಾಂಕ್​ಗಳಿಗೆ ಹಣ ಭರಿಸಬೇಕು ಎಂದು ನಬಾರ್ಡ್ ಸೂಚಿಸಿದೆ. ಉದ್ದೇಶ ರಾಜ್ಯ ಸರ್ಕಾರಗಳು ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡದೆ ಸಾಲಮನ್ನಾ ಮಾಡುತ್ತಿವೆ ಎಂಬ ಆರೋಪದ ಮಧ್ಯೆಯೇ ನಬಾರ್ಡ್ ಈ ...
READ MORE
14 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ನಕಲಿ ಹೂಡಿಕೆ ಸ್ಕೀಮ್‌ಗಳ ನಿಷೇಧಕ್ಕೆ ವಿಧೇಯಕ ಮಂಡನೆ ಸುದ್ಧಿಯಲ್ಲಿ ಏಕಿದೆ ? ನಕಲಿ ಹೂಡಿಕೆ ಯೋಜನೆಗಳನ್ನು ನಿಷೇಧಿಸುವ ಹಾಗೂ ಇಂಥ ಯೋಜನೆಗಳಲ್ಲಿ ವಂಚಿತರಾಗಿರುವ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಸಂಬಂಧಿಸಿದ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಅನಿಯಂತ್ರಿತ ಠೇವಣಿ ಸಂಗ್ರಹ ಸ್ಕೀಮ್‌ಗಳ ನಿಷೇಧ ವಿಧೇಯಕವನ್ನು ಹಣಕಾಸು ಸಚಿವ ಪಿಯೂಷ್‌ ...
READ MORE
“08 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬಿಳಿಗಿರಿ ಬೆಟ್ಟದಲ್ಲಿ ಅಪರೂಪದ ಸಸ್ತನಿ ಪತ್ತೆ ಸುದ್ಧಿಯಲ್ಲಿ ಏಕಿದೆ ?ನಾಗರಹೊಳೆ, ಬಂಡೀಪುರ ಸೇರಿ ವಿವಿಧ ದಟ್ಟ ಕಾನನಗಳ ನಾಡು ಇದೀಗ ಅಪರೂಪದ ಸಸ್ತನಿಯ ಇರುವಿಕೆ ದೃಢಪಟ್ಟಿದೆ. ಸಾಮಾನ್ಯವಾಗಿ ಪಶ್ಚಿಮ ಘಟ್ಟದ ವಿರಾಜಪೇಟೆ ಭಾಗದಲ್ಲಿರುವ ಸೆಂಡಿಲಿ ಕೀರ(ಬ್ರೌನ್‌ ಮಂಗೂಸ್‌ ಅಥವಾ Herpestes fuscus) ಪ್ರಾಣಿ ಇದೀಗ ...
READ MORE
“10 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಾನಪದ ಅಕಾಡೆಮಿ ಪ್ರಶಸ್ತಿ ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಜಾನಪದ ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ರಾಜ್ಯದ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಲಾಗಿದ್ದು, ಡಿ. 27ರಂದು ಬೀದರ್​ನ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ...
READ MORE
“22 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಎಸ್​ಎ ಇಳಿಕೆಯಿಲ್ಲ ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಸೇರಿ ಪಶ್ಚಿಮಘಟ್ಟಗಳ ಸೂಕ್ಷ್ಮ ಪರಿಸರ ವಲಯ(ಇಎಸ್​ಎ)ದ ಪ್ರಮಾಣವನ್ನು ಇಳಿಕೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹಿನ್ನಲೆ ಕೇಂದ್ರ ಪರಿಸರ ಇಲಾಖೆಯು ಇತ್ತೀಚೆಗೆ ನಾಲ್ಕನೇ ಬಾರಿ ಕರಡು ಅಧಿಸೂಚನೆ ಹೊರಡಿಸಿತ್ತು. ಆ ಪ್ರಕಾರ ಕರ್ನಾಟಕ, ಕೇರಳ, ಗೋವಾ, ...
READ MORE
“08 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೆಸಿ ವ್ಯಾಲಿ ಯೋಜನೆ ಸುದ್ಧಿಯಲ್ಲಿ ಏಕಿದೆ ?ಬರಪೀಡಿತ ಜಿಲ್ಲೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಬೆಂಗಳೂರಿನಿಂದ ಕಲುಷಿತ ನೀರನ್ನು ಶುದ್ದೀಕರಿಸಿ ಒದಗಿಸುವ ಕೆಸಿ ವ್ಯಾಲಿ ಯೋಜನೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಪ್ರಕರಣ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ಮುಂದುವರಿಸಬೇಕು. ಹೈಕೋರ್ಟ್ ವಿಚಾರಣೆ ಮುಗಿಯುವವರೆಗೆ ...
READ MORE
“03 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“29 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“27 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“30th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
14 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“08 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“10 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“22 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“08 ಏಪ್ರಿಲ್ 2019 ರ ಕನ್ನಡ ಪ್ರಚಲಿತ

Leave a Reply

Your email address will not be published. Required fields are marked *