14 ಫೆಬ್ರವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು

ನಕಲಿ ಹೂಡಿಕೆ ಸ್ಕೀಮ್‌ಗಳ ನಿಷೇಧಕ್ಕೆ ವಿಧೇಯಕ ಮಂಡನೆ

ಸುದ್ಧಿಯಲ್ಲಿ ಏಕಿದೆ ? ನಕಲಿ ಹೂಡಿಕೆ ಯೋಜನೆಗಳನ್ನು ನಿಷೇಧಿಸುವ ಹಾಗೂ ಇಂಥ ಯೋಜನೆಗಳಲ್ಲಿ ವಂಚಿತರಾಗಿರುವ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಸಂಬಂಧಿಸಿದ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.

 • ಅನಿಯಂತ್ರಿತ ಠೇವಣಿ ಸಂಗ್ರಹ ಸ್ಕೀಮ್‌ಗಳ ನಿಷೇಧ ವಿಧೇಯಕವನ್ನು ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಮಂಡಿಸಿದರು. ಲೋಕಸಭೆಯ ಅನುಮೋದನೆಯ ಬಳಿಕ ರಾಜ್ಯಸಭೆಯ ಅನುಮೋದನೆಗೆ ವಿಧೇಯಕ ಪಡೆಯುವ ನಿರೀಕ್ಷೆ ಇದೆ.

ಏಕೆ ಈ ವಿದೇಯಕ ?

 • ನಕಲಿ ಯೋಜನೆಗಳನ್ನು ದೂರವಿಡಲು ಈಗ ಚಾಲ್ತಿಯಲ್ಲಿರುವ ಕಾನೂನುಗಳ ನ್ಯೂನತೆಗಳನ್ನು ಹೊಸ ವಿಧೇಯಕ ನಿವಾರಿಸಿದ್ದು, ಸಣ್ಣ ಹೂಡಿಕೆದಾರರ ಹಿತರಕ್ಷಣೆಗೆ ಸಹಕಾರಿಯಾಗಿದೆ.
 • ನಕಲಿ ಹೂಡಿಕೆ ಸ್ಕೀಮ್‌ಗಳಲ್ಲಿ ಹಣ ತೊಡಗಿಸಿ ವಂಚಿತರಾದವರಿಗೆ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಕೂಡ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
 • ಅನೇಕ ವಂಚಕರು ಬಡವರು, ಜನ ಸಾಮಾನ್ಯರು, ಮಧ್ಯಮ ವರ್ಗದ ಜನರಿಂದ ಠೇವಣಿಗಳನ್ನು ಸಂಗ್ರಹಿಸಿ ಕೊನೆಗೆ ವಂಚಿಸಿದ ನಿದರ್ಶನಗಳು ಸಾಕಷ್ಟಿವೆ.
 • ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಶಾರದಾ ಚಿಟ್‌ ಫಂಡ್‌ ಹಗರಣ ಅಂಥ ದೊಡ್ಡ ಹಗರಣಗಳಲ್ಲೊಂದು.

ಪಿಎಂ-ಕಿಸಾನ್‌ ಯೋಜನೆ

2

ಸುದ್ಧಿಯಲ್ಲಿ ಏಕಿದೆ ?ಪಿಎಂ-ಕಿಸಾನ್‌ ಯೋಜನೆಯ ಎರಡು ಕಂತುಗಳು ಅಂದರೆ, 4,000 ರೂ.ಗಳನ್ನು ಲೋಕಸಭೆ ಚುನಾವಣೆಯೊಳಗೆ ರೈತರ ಖಾತೆಗೆ ಪಾವತಿಸಲು ಕೇಂದ್ರ ಸರಕಾರ ಸಜ್ಜಾಗುತ್ತಿದೆ.

ಏನಿದು ಪಿಎಂ-ಕಿಸಾನ್‌ ಯೋಜನೆ ?

 • ರೈತರಿಗೆ ವರ್ಷಕ್ಕೆ 6,000 ರೂ.ಗಳ ನೇರ ನಗದು ಒದಗಿಸುವ ಪಿಎಂ-ಕಿಸಾನ್‌ ಯೋಜನೆಯನ್ನು ಮಧ್ಯಂತರ ಬಜೆಟ್‌ನಲ್ಲಿ ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಪ್ರಕಟಿಸಿದ್ದರು.
 • ಕಳೆದ ಡಿಸೆಂಬರ್‌ನಿಂದ ಅದು ಪೂರ್ವಾನ್ವಯವಾಗಲಿದ್ದು, ಮೊದಲ ಕಂತಾಗಿ 2,000 ರೂ. ಅನ್ನು ಮಾರ್ಚ್‌ನಲ್ಲಿ ವಿತರಣೆ ಮಾಡುವುದಾಗಿ ಗೋಯಲ್‌ ಹೇಳಿದ್ದರು. ಏತನ್ಮಧ್ಯೆ, ಲೋಕಸಭೆ ಚುನಾವಣೆಗೂ ಮುನ್ನವೇ ಎರಡು ಕಂತುಗಳನ್ನು ವಿತರಿಸುವ ಯತ್ನಗಳೂ ನಡೆದಿವೆ.
 • 2 ಹೆಕ್ಟೇರ್‌ ತನಕ ಜಮೀನ್‌ ಹೊಂದಿದ ಕಿರು ರೈತರಿಗೆ ಯೋಜನೆ ಅನ್ವಯವಾಗಲಿದ್ದು, ಸುಮಾರು 12 ಕೋಟಿ ರೈತರಿಗೆ ಇದರ ಲಾಭ ದೊರೆಯಲಿದೆ. ಅರ್ಹ ರೈತರ ಗುರ್ತಿಸಲು ರಾಜ್ಯಗಳಿಗೆ ಕೇಂದ್ರವು ಈಗಾಗಲೇ ಸೂಚಿಸಿದ್ದು, ಫಲಾನುಭವಿಗಳ ಆರಂಭಿಕ ಪಟ್ಟಿ ಸದ್ಯದಲ್ಲಿಯೇ ಸಿದ್ಧವಾಗಲಿದೆ.
 • ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್‌ ಮತ್ತು ಮಹಾರಾಷ್ಟ್ರ ರಾಜ್ಯಗಳು ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಿದ್ದು, ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವುದು ಸುಲಭವಾಗಲಿದೆ.
 • ಇನ್ನು ಪಿಎಂ-ಕಿಸಾನ್‌ ಮಾದರಿಯದೇ ಯೋಜನೆಗಳನ್ನು ತೆಲಂಗಾಣ, ಒಡಿಶಾ ಮತ್ತು ಜಾರ್ಖಂಡ್‌ ರಾಜ್ಯಗಳೂ ಜಾರಿಗೊಳಿಸಿದ್ದು ಈ ಸಂಬಂಧಿ ಡೇಟಾ ಈಗಾಗಲೇ ಸಿದ್ಧವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯಾರಿಗೆ ಅನ್ವಯಿಸುವುದಿಲ್ಲ ?

 • ಸಂವಿಧಾನಾತ್ಮಕ ಹುದ್ದೆ ಹೊಂದಿದವರು, ಸೇವೆಯಲ್ಲಿರುವ ಮತ್ತು ನಿವೃತ್ತರಾಗಿರುವ ಸರಕಾರಿ ಅಧಿಕಾರಿಗಳು, ಪಿಎಸ್‌ಯುಗಳಲ್ಲಿ ಸೇವೆ ಸಲ್ಲಿಸಿ ತಿಂಗಳಿಗೆ 10,000 ರೂ. ಗಿಂತಲೂ ಹೆಚ್ಚಿನ ಪಿಂಚಣಿ ಪಡೆಯುವ ನಿವೃತ್ತರು, ಆದಾಯ ತೆರಿಗೆ ಪಾವತಿಸುವವರು, ಎಂಜಿನಿಯರ್‌, ವಕೀಲರನ್ನು ಹಾಗೂ ಇಂಥವರನ್ನು ಸದಸ್ಯರನ್ನಾಗಿ ಹೊಂದಿದ ಕುಟುಂಬಗಳನ್ನು ಯೋಜನೆಯಿಂದ ಹೊರಗಿಡಲಾಗಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
 • 2019ರ ಫೆ.1ರೊಳಗೆ ಭೂ ದಾಖಲೆಗಳಲ್ಲಿ ಹೆಸರಿರುವ ಕಿರು ರೈತರು ಯೋಜನೆಗೆ ಅರ್ಹರು.

ನೂತನ 50 ಪೌಂಡ್‌ ನೋಟಿನಲ್ಲಿ ಜಗದೀಶ್‌ ಚಂದ್ರ ಬೋಸ್‌ ಚಿತ್ರ

3

ಸುದ್ಧಿಯಲ್ಲಿ ಏಕಿದೆ ?ಇಂಗ್ಲೆಂಡ್‌ನಲ್ಲಿ 50 ಪೌಂಡ್‌ ಮುಖಬೆಲೆಯ ನೋಟಿನ ಮೇಲೆ ಸರ್‌ ಜಗದೀಶ್‌ ಚಂದ್ರ ಬೋಸ್‌ ಚಿತ್ರ ಅಳವಡಿಸುವ ಬಗ್ಗೆ ನಾಮನಿರ್ದೇಶನಗಳು ಈಗಲೂ ಕೇಳಿ ಬರುತ್ತಿವೆ.

 • ಶೀಘ್ರದಲ್ಲೇ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ತನ್ನ ನೂತನ 50 ಪೌಂಡ್‌ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ನೋಟಿನ ಮೇಲೆ ಖ್ಯಾತ ನಾಮರ ಚಿತ್ರ ಅಳವಡಿಸುವ ಬಗ್ಗೆ ನಾಮ ನಿರ್ದೇಶನಕ್ಕೆ ಆಹ್ವಾನಿಸಲಾಗಿತ್ತು.
 • ವಿಶ್ವಾದ್ಯಂತ ಜನವರಿ 13ರಂದು ವಿಶ್ವ ರೇಡಿಯೋ ದಿನ ಆಚರಿಸಲಾಯಿತು. ಈ ಸಂದರ್ಭ ರೇಡಿಯೋ ಜನಕ ಸರ್‌ ಜಗದೀಶ್‌ ಚಂದ್ರ ಬೋಸ್‌ ಅವರ ಚಿತ್ರವನ್ನು 50 ಪೌಂಡ್‌ ಮುಖಬೆಲೆಯ ನೋಟಿನ ಮೇಲೆ ಅಳವಡಿಸುವಂತೆ ನಾಮನಿರ್ದೇಶನಗಳು ಬಂದಿವೆ.
 • ಇದುವರೆಗೆ ಸುಮಾರು 2,27,299 ನಾಮನಿರ್ದೇಶನಗಳು ಬಂದಿದ್ದು, ಇದೀಗ 989 ಹೆಸರುಗಳನ್ನು ಪರಿಗಣಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತೀಯ ವಿಜ್ಞಾನಿ ಜೆಸಿ ಬೋಸ್‌ ಹೆಸರು ಸೇರ್ಪಡೆಗೊಂಡಿದೆ.

ಜೆಸಿ ಬೋಸ್‌ ಹೆಸರು ಏಕೆ?

 • ಭಾರತದ ವಿಜ್ಞಾನಿ ಜಗದೀಶ್‌ ಚೆಂದ್ರ ಬೋಸ್‌ ಅವರ ಹೆಸರು ದೊಡ್ಡ ಧ್ವನಿಯಲ್ಲಿ ಕೇಳಿ ಬರುತ್ತಿರುವುದೇಕೆ ಗೊತ್ತೆ? ವೈಫೈ ತಂತ್ರಜ್ಞಾನಕ್ಕೆ ಬೋಸ್‌ ನೀಡಿದ ಕೊಡುಗೆ!
 • ರೇಡಿಯೋ ಅನ್ವೇಷಣೆ ಆಗದಿದ್ದರೆ ವೈಫೈ ತಂತ್ರಜ್ಞಾನದ ಅನ್ವೇಷಣೆಯೇ ಆಗುತ್ತಿರಲಿಲ್ಲ. ಆದರೆ ರೇಡಿಯೋ ಕಂಡು ಹಿಡಿದಿದ್ದು ಮಾರ್ಕೋನಿ ಅಲ್ಲವೇ? ಎಂಬ ಪ್ರಶ್ನೆ ಕೇಳಿ ಬರುವುದೂ ಸಹಜ. ರೇಡಿಯೋ ಕಂಡು ಹಿಡಿದಿದ್ದು ಗುಗ್ಲಿಮೊ ಮಾರ್ಕೊನಿ. ಆದರೆ ಜಗದೀಶ್‌ ಚಂದ್ರ ಬೋಸ್‌ ಅವರ ಸಹಾಯವಿಲ್ಲದೆ ರೇಡಿಯೋ ಕಂಡು ಹಿಡಿಯಲು ಸಾಧ್ಯವಿರಲಿಲ್ಲ. ರೇಡಿಯೋ ಅನ್ವೇಷಣೆಗೆ ಬೋಸ್‌ ಅಭೂತಪೂರ್ವ ಕೊಡುಗೆ ಬಗ್ಗೆ ಮಾರ್ಕೊನಿ ತನ್ನ ಬರಹದಲ್ಲಿ ಉಲ್ಲೇಖಿಸಿದ್ದಾರೆ.
 • ಇಲೆಕ್ಟ್ರೋಮ್ಯಾಗ್ನೆಟಿಕ್‌ ವೇವ್‌ ಅಂದರೆ ವಿದ್ಯುತ್ಕಾಂತೀಯ ತರಂಗ ಸಂವಹನ. ಇದನ್ನು ಮೊದಲು ಕಂಡು ಹಿಡಿದಿದ್ದು ಜೆಸಿ ಬೋಸ್‌.
 • ಆದರೆ ಟೆಲಿಗ್ರಫಿ ವಾಣಿಜ್ಯೀಕರಣದ ಬಗ್ಗೆ ಬೋಸ್‌ ಆಸಕ್ತರಾಗಿರಲಿಲ್ಲ. ಬೇರೆಯವರಿಗೆ ಬಳಕೆ ಮಾಡುವಂತೆ ಉತ್ತೇಜನ ನೀಡುವಲ್ಲು ನಿರುತ್ಸಾಹರಾಗಿದ್ದರು. 1896ರಲ್ಲಿ ಇಟಲಿ ವಿಜ್ಞಾನಿ ಮಾರ್ಕೊನಿ ಅವರನ್ನು ಬೋಸ್‌ ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಮಾರ್ಕೊನಿ ತಂತಿರಹಿತ ಸಂವಹನ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಬೋಸ್‌ ಅವರ ಜ್ಞಾನದಿಂದ ತನ್ನ ಸಂಶೋಧನೆಗೆ ಹೇಗೆ ಸಹಕಾರಿಯಾಯಿತು ಎಂಬುದನ್ನು ಮಾರ್ಕೊನಿ ಬರೆದುಕೊಂಡಿದ್ದಾರೆ.
 • ವಿದ್ಯುತ್ಕಾಂತೀಯ ತರಂಗವನ್ನು ಪಡೆಯುವ ಘನ ಸ್ಥಿತಿಯ ಡಯೋಡ್‌ನ ಪೇಟೆಂಟ್‌ ಬೋಸ್‌ ಅವರದ್ದಾಗಬೇಕಿತ್ತು. ಸಾಮಾನ್ಯ ಮೈಕ್ರೊವೇವ್‌ ಕಾಂಪೊನೆಂಟ್‌ಗಳನ್ನು ಪತ್ತೆ ಮಾಡಿದ್ದು ಬೋಸ್‌.
 • ಸಸ್ಯಶಾಸ್ತ್ರಕ್ಕೆ ಬೋಸ್‌ ಕೊಡುಗೆ ಅಪಾರ. ಬೋಸ್‌ ಕಂಡುಹಿಡಿದ ಕ್ರೆಸ್ಕೋಗ್ರಾಫ್‌ ಸಸ್ಯ ವಿಜ್ಞಾನಿಗಳಿಗೆ ಸಸ್ಯಗಳ ಬಗ್ಗೆ ಸಂಶೋಧನೆ ಪರಿಣಾಮಕಾರಿ ಸಾಧನವಾಗಿದೆ.

ಮೊಬೈಲ್ ಇ-ತ್ಯಾಜ್ಯಗಳಿಂದ ಟೋಕಿಯೋ ಒಲಿಂಪಿಕ್ಸ್ ಮೆಡಲ್ ತಯಾರಿ

4

ಸುದ್ಧಿಯಲ್ಲಿ ಏಕಿದೆ ?ಮುಂಬರುವ 2020 ಒಲಿಂಪಿಕ್ಸ್‌ಗೆ ಜಪಾನ್‌ನ ಟೋಕಿಯೋ ನಗರ ಆತಿಥ್ಯ ವಹಿಸುತ್ತಿದೆ. ನವ ನವೀನ ತಂತ್ರಗಾರಿಕೆ ಅವಿಷ್ಕಾರದಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಜಪಾನ್, ಇದೀಗ ಮೊಬೈಲ್ ಇ-ತ್ಯಾಜ್ಯಗಳಿಂದ ಟೋಕಿಯೋ ಕ್ರೀಡಾಕೂಟದ ಮೆಡಲ್‌ಗಳನ್ನು ತಯಾರಿಸಲು ಸಜ್ಜಾಗುತ್ತಿದೆ.

 • ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ ಪ್ರಶಸ್ತಿ ವಿಜೇತರ ಮೆಡಲ್‌ಗಳನ್ನು ಶೇಕಡಾ 100ರಷ್ಟು ಎಲೆಕ್ಟ್ರಾನಿಕ್ಸ್ ತ್ಯಾಜ್ಯಗಳಿಂದ ತಯಾರಿಸಲಾಗುವುದು.
 • ಪ್ರಮುಖವಾಗಿಯೂ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಡಿಜಿಟಲ್ ಕ್ಯಾಮೆರಾ ಮುಂತಾದ ಇ-ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡಲಾಗುವುದು.
 • ನಿಮ್ಮ ಮಾಹಿತಿಗಾಗಿ, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಶೇಕಡಾ 30ರಷ್ಟು ಮರುಬಳಕೆಯ ವಸ್ತುಗಳಿಂದ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತಯಾರಿಸಲಾಗಿತ್ತು.
 • ಟೋಕಿಯೋ ಒಲಿಂಪಿಕ್ಸ್ ಗೇಮ್ಸ್ ಸಮಿತಿಯು ಎರಡು ವರ್ಷಗಳ ಹಿಂದೆಯೇ 2017 ಎಪ್ರಿಲ್‌ನಲ್ಲಿ ಮೆಡಲ್ ಪ್ರೊಜೆಕ್ಟ್ ರೂಪಿಸಿತ್ತು. ಅಲ್ಲದೆ ಜಪಾನ್ ನಗರಪಾಲಿಕೆಯು ಈಗಾಗಲೇ 47,488 ಟನ್ ಇ-ತ್ಯಾಜ್ಯಗಳನ್ನು ಸಂಗ್ರಹಿಸಿದೆ. ಈ ಪೈಕಿ 07 ದಶಲಕ್ಷ ಬಳಕೆ ಮಾಡಿದ ಮೊಬೈಲ್ ಫೋನ್‌ಗಳನ್ನು ಹೊಂದಿದೆ.

ಆಪರ್ಚುನಿಟಿ ರೋವರ್‌

5

ಸುದ್ಧಿಯಲ್ಲಿ ಏಕಿದೆ ?ಆಪರ್ಚುನಿಟಿ ರೋವರ್‌ ತನ್ನ 15 ವರ್ಷಗಳ ಪಯಣವನ್ನು ಅಂತ್ಯಗೊಳಿಸಿದ್ದು, ಚಂಡಮಾರುತಕ್ಕೆ ಬಲಿಯಾಗಿದೆ ಎನ್ನಲಾಗುತ್ತಿತ್ತು. ಈಗ ಆಪರ್ಚುನಿಟಿ ರೋವರ್‌ಗೆ ಫೆಬ್ರವರಿ 13,2019 ರಂದು ನಾಸಾ ಅಧಿಕೃತವಾಗಿ ಗುಡ್‌ ಬೈ ಹೇಳಿದೆ.

ಹಿನ್ನಲೆ

 • ನಾಸಾದ ಮಹತ್ವಾಕಾಂಕ್ಷಿ ಆಪರ್ಚುನಿಟಿ ರೋವರ್ 14 ವರ್ಷಗಳ ಕಾಲ ಮಂಗಳನ ಅಂಗಳನಲ್ಲಿ ಅನ್ವೇಷಣೆ ಮಾಡಿತ್ತು.
 • ಅಲ್ಲದೆ, ಮಂಗಳ ಗ್ರಹದಲ್ಲಿ ಒಮ್ಮೆ ನೀರು ಹರಿದಿತ್ತು ಎಂಬುದನ್ನು ಸಹ ಸ್ಪಷ್ಟಪಡಿಸಿತ್ತು.
 • ಜನವರಿ 2004ರಲ್ಲಿ ಮಂಗಳನ ಅಂಗಳಕ್ಕೆ ಕಾಲಿಟ್ಟಿದ್ದ ನಾಸಾದ ಆಪರ್ಚುನಿಟಿ ರೋವರ್ ರೋಬೋಟ್ ಕಳೆದ ವರ್ಷ ಜೂನ್‌ನಿಂದ ಸಂಪರ್ಕ ಕಳೆದುಕೊಂಡಿತ್ತು.
 • ಬ್ಯಾಟರಿಗಳನ್ನು ರೀಚಾರ್ಜ್‌ ಮಾಡಿಕೊಳ್ಳಲು ಸಾಧ್ಯವಾಗದೆ ಆಪರ್ಚುನಿಟಿ ಭೂಮಿಯಿಂದ ಹೋಗಿರುವ ನೂರಾರು ಸಂದೇಶಗಳಿಗೆ ಉತ್ತರ ನೀಡಿರಲಿಲ್ಲ.
 • ಇದುವರೆಗೆ ಮಂಗಳ ಗ್ರಹದಿಂದ ಆಪರ್ಚುನಿಟಿ 2,17,594 ಫೋಟೋಗಳನ್ನು ಆಪರ್ಚುನಿಟಿ ಕಳಿಸಿದ್ದು, ಇದನ್ನೆಲ್ಲ ಅಂತರ್ಜಾಲದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಿದೆ.
 • 2018ನೇ ವರ್ಷದ ಜೂ.10ರ ಅನಂತರ ಆಪರ್ಚುನಿಟಿ ರೋವರ್ ನಾಸಾದೊಂದಿಗೆ ಸಂಪರ್ಕ ಸಾಧಿಸಿಲ್ಲ ಎಂದು ಹೇಳಲಾಗಿದ್ದು, ಧೂಳಿನ ಚಂಡಮಾರುತದಿಂದಾಗಿ ಹಾಳಾಗಿದೆ ಎನ್ನಲಾಗಿದೆ. ಸೌರ ಫ‌ಲಕದ ಮೇಲೆ ಧೂಳು ಕುಳಿತು ಬೆಳಕಿನ ಕಿರಣವನ್ನು ಅಡ್ಡಿಪಡಿಸುತ್ತಿರಬಹುದು, ಇದರಿಂದಾಗಿ ರೋವರ್ ಹಾನಿಗೀಡಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದರು.
Related Posts
“5th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
ರತ್ನಖಚಿತ ಸಿಂಹಾಸನ ಸುದ್ಧಿಯಲ್ಲಿ ಏಕಿದೆ ?ಪಾರಂಪರಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರೆಯ ಸಂಭ್ರಮ ಕಳೆಗಟ್ಟಲಾರಂಭಿಸಿದ್ದು, ಅರಮನೆಯಲ್ಲಿ ಧಾರ್ವಿುಕ ವಿಧಾನಗಳಂತೆ ಸಾವಿರಾರು ವರ್ಷಗಳ ಇತಿಹಾಸವಿರುವ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯವೂ ನೆರವೇರಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಸಿಂಹಾಸನದಲ್ಲಿ ವಿರಾಜಮಾನರಾಗಿ ಖಾಸಗಿ ದರ್ಬಾರ್ ...
READ MORE
“24th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
‘ಶಾಲಾ -ಸಂಪರ್ಕ ಸೇತು’ ಯೋಜನೆ ಸುದ್ಧಿಯಲ್ಲಿ ಏಕಿದೆ ? ಮಲೆನಾಡು, ಕರಾವಳಿ ಭಾಗದ ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲಿ ವಾಸಿಸುವ ಜನರು ವಿಶೇಷವಾಗಿ ಶಾಲಾ ಮಕ್ಕಳು ಮಳೆಗಾಲದಲ್ಲಿ ಅಪಾಯಕಾರಿ ತೋಡು, ಹಳ್ಳ -ಕೊಳ್ಳ ದಾಟುವ ಪ್ರಯಾಸವನ್ನು ಶಾಶ್ವತವಾಗಿ ಪರಿಹರಿಸಲು 'ಶಾಲಾ -ಸಂಪರ್ಕ ಸೇತು' ಎಂಬ ...
READ MORE
“30th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಫ್ಯೂಚರ್ ಟ್ರೇಡಿಂಗ್ ಸುದ್ದಿಯಲ್ಲಿ ಏಕಿದೆ? ಪೆಟ್ರೋಲ್ ಹಾಗೂ ಡೀಸೆಲನ್ನು ಫ್ಯೂಚರ್ ಟ್ರೇಡಿಂಗ್ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಿನ್ನಲೆ: ಪೆಟ್ರೋಲ್, ಡೀಸೆಲ್ ಬೆಲೆ ದಿನೇದಿನೆ ಏರುತ್ತಿರುವ ಕಾರಣ ಪೆಟ್ರೋಲಿಯಂ ಕಂಪನಿಗಳ ಹಿತ ಕಾಯುವುದರ ಜತೆಗೆ ಜನರಿಗೂ ಕೊಂಚ ನಿಟ್ಟುಸಿರು ಬಿಡುವಂತಹ ಈ ಪ್ರಸ್ತಾವನೆಯನ್ನು ...
READ MORE
“09 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
 ವಾಣಿಜ್ಯ ಸಮರ  ಸುದ್ಧಿಯಲ್ಲಿ ಏಕಿದೆ ?ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಉತ್ತಮಗೊಳ್ಳುತ್ತಿರುವ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ಸಮರ ತೀವ್ರಗೊಳ್ಳುವ ಸಾಧ್ಯತೆ ಇದೆ. ಕಾರಣ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ 2 ಸಾವಿರಕ್ಕೂ ಹೆಚ್ಚು ಉತ್ಪನ್ನಗಳಿಗೆ ನೀಡುತ್ತಿರುವ ಶೂನ್ಯ ತೆರಿಗೆಯನ್ನು ರದ್ದುಗೊಳಿಸುವ ಬಗ್ಗೆ ಅಮೆರಿಕ ...
READ MORE
“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏರೋ ಇಂಡಿಯಾ ಡ್ರೋನ್ ಒಲಿಂಪಿಕ್ಸ್ ಸುದ್ಧಿಯಲ್ಲಿ ಏಕಿದೆ ?ಏರೋ ಇಂಡಿಯಾ ಇತಿಹಾಸದಲ್ಲಿ ಇದೇ ಮೊದಲ ಬಾರಿ ಡ್ರೋನ್​ಗಳ ಸ್ಪರ್ಧೆ ಏರ್ಪಡಿಸಲಾಗಿದ್ದು, ಅದಕ್ಕೆ ಡ್ರೋನ್ ಒಲಿಂಪಿಕ್ಸ್ ಎಂದು ಹೆಸರಿಡಲಾಗಿದೆ. ವಿಜೇತರಾಗುವವರಿಗೆ ನಗದು ಬಹುಮಾನವನ್ನು ನೀಡಲು ಏರೋ ಇಂಡಿಯಾ ಶೋ ಆಯೋಜಕರು ನಿರ್ಧರಿಸಿದ್ದಾರೆ. ಎರಡು ವಿಭಾಗದಲ್ಲಿ ಸ್ಪರ್ಧೆ: ಡ್ರೋನ್ ...
READ MORE
ರಾಜೀವ ಗಾಂದಿ ಪ್ರಾಯಪೂರ್ವ ಬಾಲಕಿಯರ ಸಬಲೀಕರಣ ಯೋಜನೆ - ಸಬಲಾ: ಜೀವನದಲ್ಲಿ ಕಿಶೋರಾವಸ್ಥೆಯು ಮಾನಸಿಕ, ಬೌದ್ಧಿಕ, ಭಾವನಾತ್ಮಕ ಬೆಳವಣಿಗೆಗೆ ಸಂಬಂದಿಸಿದಂತೆ ಒಂದು ಪ್ರಮುಖ ಅವದಿಯಾಗಿದೆ.  ಹೆಚ್ಚಿನ ರೀತಿಯಲ್ಲಿ ಸೌಲಭ್ಯ ಒದಗಿಸುವುದಕ್ಕಾಗಿ  ಹೊಸ ಚಿಂತನೆಯ ರೂಪದಲ್ಲಿ ಕಿಶೋರಿ ಶಕ್ತಿ ಯೋಜನೆ ಹಾಗು ಪ್ರಾಯಪೂರ್ವ ಬಾಲಕಿಯರಿಗೆ ...
READ MORE
“19th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸಫಾರಿ ಭಾಗ್ಯ ಸುದ್ದಿಯಲ್ಲಿ ಏಕಿದೆ ?ಹಂಪಿ ನೋಡಲು ಬರುವ ಪ್ರವಾಸಿಗರಿಗೆ ಕೆಲವೇ ದಿನಗಳಲ್ಲಿ ಹುಲಿ ಮತ್ತು ಸಿಂಹಗಳನ್ನು ಸಮೀಪದಿಂದ ನೋಡುವ ಭಾಗ್ಯ ಸಿಗಲಿದೆ. ಹಂಪಿ ಬಳಿ ಇರುವ ಅಟಲ್‌ ಬಿಹಾರಿ ಜಿಯೋಲಾಜಿಕಲ್‌ ಪಾರ್ಕ್‌ನಲ್ಲಿ ಹುಲಿ ಮತ್ತು ಸಿಂಹ ಸಫಾರಿ ಕೇಂದ್ರ ನವೆಂಬರ್‌ನಿಂದ ಆರಂಭವಾಗಲಿದೆ. ಈಗಾಗಲೇ ಬೆಂಗಳೂರಿನ ...
READ MORE
“20tht ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಿಶೇಷ ಕೋರ್ಟ್‌ ಸ್ಥಾಪನೆ ಸುದ್ಧಿಯಲ್ಲಿ ಏಕಿದೆ ?ವಾಣಿಜ್ಯ ವ್ಯವಹಾರ ಸಂಬಂಧಿ ಪ್ರಕರಣಗಳ ನಿರ್ವಹಣೆಗೆ ಹೊಸದಾಗಿ ಮೂರು ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ರಾಜ್ಯ ಸರಕಾರ ಮಂಜೂರಾತಿ ನೀಡಿದೆ. ರಾಜ್ಯದಲ್ಲಿ 'ಈಜಿ ಆಫ್‌ ಡೂಯಿಂಗ್‌ ಬ್ಯುಸಿನೆಸ್‌' ಯೋಜನೆ ಅನುಷ್ಠಾನ ಉದ್ದೇಶದಿಂದ ಮೂರು ವಾಣಿಜ್ಯಾತ್ಮಕ ನ್ಯಾಯಾಲಯಗಳ ಸ್ಥಾಪನೆಗೆ ಮಂಜೂರಾತಿ ...
READ MORE
5th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಚುನಾವಣಾ ಸಿಬ್ಬಂದಿ ಮೇಲೆ ‘ಲೈಫ್’ ಕಣ್ಗಾವಲು ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕರ್ತವ್ಯದಲ್ಲಿರುವ ಸೆಕ್ಟರ್ ಮತ್ತು ಫ್ಲೈಯಿಂಗ್ ಅಧಿಕಾರಿಗಳ ಮೇಲೆ ನಿಗಾ ಇಡಲು ‘ಲೈಫ್‌– 360’ ಎಂಬ ಆ್ಯಪ್‌ ಸಿದ್ಧಗೊಳಿಸಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯೋಗ. ಹುಣಸೂರು ಉಪವಿಭಾಗಾಧಿಕಾರಿ ಕೆ.ನಿತೀಶ್‌, ಪ್ರಭಾರಿ ...
READ MORE
“21 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂದಿರಾ ಯೋಜನೆಗೆ ಚಾಲನೆ ಸುದ್ಧಿಯಲ್ಲಿ ಏಕಿದೆ ? 'ಇಂದಿರಾ ಯೋಜನೆ'ಗೆ ಸಚಿವೆ ಡಾ. ಜಯಮಾಲಾ ಚಾಲನೆ ನೀಡಿದರು. ಏನಿದು ಇಂದಿರಾ ಯೋಜನೆ ? ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುವ ಮೇಲ್ವಿಚಾರಕರಿಗೆ ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ಬಡ್ಡಿ ರಹಿತ ಸಾಲ ನೀಡುವ ಯೋಜನೆಯೇ ...
READ MORE
“5th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
“24th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“30th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
“09 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಬಲಾ
“19th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“20tht ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
5th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“21 ಫೆಬ್ರವರಿ 2019 ರ ಕನ್ನಡ ಪ್ರಚಲಿತ

Leave a Reply

Your email address will not be published. Required fields are marked *