“14 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಎಫ್​ಐಆರ್ ಲೋಪಕ್ಕೆ ಅಧಿಕಾರಿಯೇ ಹೊಣೆ

1.

ಸುದ್ಧಿಯಲ್ಲಿ ಏಕಿದೆ ?ಸಮಾಜಘಾತಕ ಶಕ್ತಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗದೇ ಬಹುಬೇಗ ಬಿಡುಗಡೆ ಹೊಂದುತ್ತಾರೆ ಎಂಬ ಆರೋಪ ಸಾರ್ವಕಾಲಿಕ. ಆದರೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೇ ಇದನ್ನು ಒಪ್ಪಿ ಎಫ್​ಐಆರ್ ದಾಖಲಾತಿಯ ಪದ್ಧತಿಯಲ್ಲೇ ಆಮೂಲಾಗ್ರ ಬದಲಾವಣೆಗೆ ಮುಂದಾಗಿದೆ.

ಯಾವ ಬದಲಾವಣೆಗಳು ?

 • ಇನ್ಮುಂದೆ ಯಾವುದೇ ಅಪರಾಧದ ಕುರಿತು ಠಾಣಾಧಿಕಾರಿ ಕಾಟಾಚಾರಕ್ಕೆ ಎಫ್​ಐಆರ್ ದಾಖಲಿಸುವಂತಿಲ್ಲ. ಬದಲಾಗಿ ಸಬ್ ಇನ್ಸ್ಪೆಕ್ಟರ್ ಮಟ್ಟದ ಅಧಿಕಾರಿಯೇ ಸರ್ಕಾರಿ ಅಭಿಯೋಜಕರನ್ನು ಸಂರ್ಪಸಿ, ಅಪರಾಧದ ಸ್ವರೂಪ ಕುರಿತು ರ್ಚಚಿಸಿಯೇ ಎಫ್​ಐಆರ್​ನಲ್ಲಿ ಸೆಕ್ಷನ್ ದಾಖಲಿಸತಕ್ಕದ್ದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
 • ಕ್ರಿಮಿನಲ್​ಗಳಿಗೆ ವರದಾನ: ರಾಜ್ಯದಲ್ಲಿ ದಿನೇದಿನೆ ಸಮಾಜಘಾತಕ ಶಕ್ತಿಗಳಿಗೆ ನ್ಯಾಯಾಲಯದಲ್ಲಿ ಮೇಲುಗೈ ಆಗುತ್ತಿದೆ. ಪೊಲೀಸರು ಎಫ್​ಐಆರ್ ದಾಖಲಿಸುವಾಗ ಆಗುತ್ತಿರುವ ಲೋಪ, ಸರ್ಕಾರಿ ವಕೀಲರ ಜತೆ ಸಮನ್ವಯ ಕೊರತೆಯಿಂದ ಶಿಕ್ಷೆ ಪ್ರಮಾಣ ಕುಗ್ಗುತ್ತಿರುವುದರಿಂದ ಕ್ರಿಮಿನಲ್​ಗಳು ವಿಜೃಂಭಿಸುತ್ತಿದ್ದಾರೆ. ಅಲ್ಲದೆ ತನಿಖಾಧಿಕಾರಿಗಳು ಖುದ್ದಾಗಿ ತನಿಖೆ ನಿರ್ವಹಿಸದೆ ಠಾಣಾಧಿಕಾರಿಗಳು, ಠಾಣೆ ಬರಹಗಾರರು ಬರೆಯುವ ತನಿಖೆಯ ಕಾಗದಗಳಿಗೆ ತನಿಖಾಧಿಕಾರಿ ಓದದೆ ಸಹಿ ಹಾಕುವ ಪರಿಪಾಠ ಹೆಚ್ಚಾಗಿದೆ. ಇದರಿಂದಲೇ ಕ್ರಿಮಿನಲ್​ಗಳು ಬಹುಬೇಗ ಜಾಮೀನು ಪಡೆಯುತ್ತಾರೆ ಹಾಗೂ ಬಿಡುಗಡೆ ಹೊಂದುತ್ತಾರೆಂದು ಈ ಬದಲಾವಣೆ ತರಲಾಗುತ್ತಿದೆ.

ಫ್​ಐಆರ್ ದಾಖಲಾತಿ ಹೇಗೆ?:

 • ಇನ್ನು ಮುಂದೆ ಎಫ್​ಐಆರ್ ದಾಖಲಿಸಬೇಕಾದಾಗ ಅನುಸರಿಸಬೇಕಾದ ನಿಯಮಗಳನ್ನು ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಘೋರ ಹಾಗೂ ಸೂಕ್ಷ್ಮ ಪ್ರಕರಣಗಳನ್ನು ಹೊತ್ತು ನೊಂದವರು ಪೊಲೀಸ್ ಠಾಣೆಗೆ ಬಂದಾಗ ಪೊಲೀಸ್ ಠಾಣಾಧಿಕಾರಿಗಳು ಮೊದಲು ಮೇಲಧಿಕಾರಿಗಳನ್ನು ಹಾಗೂ ಸಂಬಂಧಪಟ್ಟ ಸರ್ಕಾರಿ ಅಭಿಯೋಜಕರನ್ನು ಸಂರ್ಪಸಿ ಪ್ರಕರಣದ ಬಗ್ಗೆ ರ್ಚಚಿಸಿ ದೂರಿನಲ್ಲಿರುವ ಅಂಶಗಳಿಗೆ ಅನುಗುಣವಾಗಿ ಕಲಂ ಹಾಗೂ ಸೆಕ್ಷನ್​ಗಳನ್ನು ಅಳವಡಿಸಿ, ಎಫ್​ಐಆರ್ ದಾಖಲಿಸತಕ್ಕದ್ದು ಎಂದು ನಿಯಮ ಅಳವಡಿಸಲಾಗಿದೆ.
 • ಪ್ರಕರಣಗಳ ತನಿಖೆ ಹಂತದಲ್ಲಿ ತನಿಖಾಧಿಕಾರಿಗಳು ಪ್ರತಿ ತಿಂಗಳು ಪ್ರಕರಣದ ಕಡತಗಳೊಂದಿಗೆ ಸರ್ಕಾರಿ ಅಭಿಯೋಜಕರನ್ನು ಸಂರ್ಪಸಿ ಅಲ್ಲಿಯವರೆಗೆ ಕೈಗೊಂಡಿರುವ ತನಿಖೆಯ ಬಗ್ಗೆ ರ್ಚಚಿಸಿ, ಸೂಕ್ತ ಮಾರ್ಗದರ್ಶನ ಪಡೆದು ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.
 • ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ 15 ದಿನಗಳ ಪೂರ್ವದಲ್ಲಿ ಕಡ್ಡಾಯವಾಗಿ ಸರ್ಕಾರಿ ಅಭಿಯೋಜಕರನ್ನು ಭೇಟಿ ಮಾಡಿ, ದೋಷಾರೋಪಣೆ ಪಟ್ಟಿಯನ್ನು ಪರಿಶೀಲನೆಗೆ ಒಳಪಡಿಸತಕ್ಕದ್ದು.

ಬಾಂಬ್​ ನಿರೋಧಕ ಕಾಂಕ್ರಿಟ್​ ಶೆಲ್ಟರ್​

2.

ಸುದ್ಧಿಯಲ್ಲಿ ಏಕಿದೆ ?ಯುದ್ಧದ ಸಂದರ್ಭದಲ್ಲಿ ಶತ್ರುಪಡೆಯ ಬಾಂಬ್​ ಮತ್ತು ಮಿಸೈಲ್​ ದಾಳಿಯಿಂದ ಯುದ್ಧ ವಿಮಾನಗಳನ್ನು ರಕ್ಷಿಸಿಕೊಳ್ಳಲು ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ 110 ಕಾಂಕ್ರಿಟ್​ ಶೆಲ್ಟರ್​ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಹಿನ್ನೆಲೆ

 • ಪಾಕ್​ ಆಕ್ರಮಿತ ಕಾಶ್ಮೀರದ ಬಾಲಾಕೋಟ್​ನಲ್ಲಿ ಜೈಷ್​ ಉಗ್ರರ ಕ್ಯಾಂಪ್​ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ನಂತರ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧದ ಕಾರ್ಮೋಡ ಕವಿದಿತ್ತು.
 • ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯದಿಂದ ಯುದ್ಧವಿಮಾನಗಳನ್ನು ರಕ್ಷಿಸಿಕೊಳ್ಳಲು ಕೇಂದ್ರ ಸರ್ಕಾರ 5000 ಕೋಟಿ ರೂ. ವೆಚ್ಚದಲ್ಲಿ ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿರುವ ಏರ್​ಬೇಸ್​ಗಳಲ್ಲಿ 110 ಬಾಂಬ್​ ನಿರೋಧಕ ಕಾಂಕ್ರಿಟ್​ ಶೆಲ್ಟರ್​ ಅಥವಾ ಬ್ಲಾಸ್ಟ್​ ಪೆನ್​ಗಳನ್ನು ನಿರ್ಮಿಸಲು ಮುಂದಾಗಿದೆ.

ಪ್ರಯೋಜನ

 • ಈ ಶೆಲ್ಟರ್​ಗಳಲ್ಲಿ ಸುಖೋಯ್​ 30 ಎಂಕೆಐ ಸೇರಿದಂತೆ ವಾಯುಪಡೆಯ ಅತ್ಯಂತ ಪ್ರಮುಖ ವಿಮಾನಗಳನ್ನು ಗಡಿ ಭಾಗದಲ್ಲಿ ಇರಿಸಬಹುದಾಗಿದೆ. ಪ್ರಸ್ತುತ ಪ್ರಮುಖ ಯುದ್ಧ ವಿಮಾನಗಳನ್ನು ಗಡಿಯಿಂದ ದೂರದ ಪ್ರದೇಶದಲ್ಲಿ ಇರಿಸಲಾಗುತ್ತಿದೆ. ಆದರೆ ಈ ಶೆಲ್ಟರ್​ಗಳ ನಿರ್ಮಾಣದಿಂದ ಗಡಿಯಲ್ಲಿ ಪ್ರಮುಖ ವಿಮಾನಗಳನ್ನು ಇರಿಸಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
 • 1965ರ ಯುದ್ಧದ ಸಂದರ್ಭದಲ್ಲಿ ಏರ್​ಬೇಸ್​ನಲ್ಲಿ ಹೊರಗೆ ನಿಲ್ಲಿಸಿದ್ದ ಹಲವು ವಿಮಾನಗಳು ಶತ್ರು ವಿಮಾನದ ಬಾಂಬ್​ ದಾಳಿಗೆ ನಾಶವಾಗಿದ್ದವು. ಆ ನಂತರ ಯುದ್ಧ ವಿಮಾನಗಳನ್ನು ಸುರಕ್ಷಿತವಾಗಿರಿಸಲು ಕಾಂಕ್ರಿಟ್​ನ ಶೆಲ್ಟರ್​ಗಳನ್ನು ನಿರ್ಮಿಸಲಾಗಿದೆ.

ಭಾರತದಲ್ಲಿ 6 ಅಮೆರಿಕನ್ ಪರಮಾಣು ಸ್ಥಾವರಗಳ ನಿರ್ಮಾಣ

3.

ಸುದ್ಧಿಯಲ್ಲಿ ಏಕಿದೆ ?ವಾಣಿಜ್ಯಾತ್ಮಕವಾಗಿ ಭಾರತದೊಂದಿಗೆ ಅಸಹಾಕಾರ ಹೊಂದಿರುವ ಟ್ರಂಪ್ ಆಡಳಿತ ಇದೀಗ ಮಹತ್ವದ ನಡೆಯೊಂದರಲ್ಲಿ ಬೃಹತ್ ಪ್ರಮಾಣದಲ್ಲಿ ಭಾರತಕ್ಕೆ ಪರಮಾಣು ಇಂಧನ ಮಾರಾಟಕ್ಕೆ ಹಾಕಿದ್ದು, ಪರಿಣಾಮ ಭಾರತದಲ್ಲಿ ಬರೊಬ್ಬರಿ 6 ಅಮೆರಿಕನ್ ಪರಮಾಣು ಸ್ಥಾವರ ನಿರ್ಮಾಣ ಸಂಬಂಧ ಒಪ್ಪಂದಳಿಗೆ ಸಹಿ ಹಾಕಿದೆ.

 • ಭದ್ರತೆ ಮತ್ತು ನಾಗರಿಕ ಪರಮಾಣು ಸಹಕಾರ ಒಪ್ಪಂದ ಅಡಿಯಲ್ಲಿ ಭಾರತ ಮತ್ತು ಅಮೆರಿಕ 6 ಅಮೆರಿಕನ್ ಪರಮಾಣು ಸ್ಥಾವರ ನಿರ್ಮಾಣಕ್ಕೆ ಸಹಿ ಹಾಕಿದ್ದು, ಈ ಬಗ್ಗೆ ಉಭಯ ದೇಶಗಳು ಜಂಟಿ ಹೇಳಿಕೆ ನೀಡಿವೆ.
 • ಇನ್ನು ತನ್ನ ಪರಮಾಣು ಇಂಧನ ಸಾಮರ್ಥ್ಯವನ್ನು 2024ರ ವೇಳೆಗೆ ತ್ರಿಗುಣಗೊಳಿಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಆಸ್ಟ್ರೇಲಿಯಾ ಮತ್ತು ಅಮೆರಿಕದೊಂದಿಗೆ ನಿರಂತರ ಚರ್ಚೆ ನಡೆಸುತ್ತಿದೆ.
 • ಕಳೆದ ಅಕ್ಟೋಬರ್ ನಲ್ಲಿ ಭಾರತ ಮತ್ತು ರಷ್ಯಾ ಕೂಡ ಪರಸ್ಪರ ಒಪ್ಪಂದ ಮಾಡಿಕೊಂಡು, ಭಾರತದಲ್ಲಿ 6 ಪರಮಾಣು ಸ್ಥಾವರ ನಿರ್ಮಾಣ ಸಂಬಂಧ ಸಹಿ ಹಾಕಿದ್ದವು.

ಪರಮಾಣು ಸಹಕಾರ ಇತಿಹಾಸ

 • ಮಹಾರಾಷ್ಟ್ರದ ತರಾಪುರ್ನಲ್ಲಿರುವ ಟರಾಪುರ್ ಅಟಾಮಿಕ್ ಪವರ್ ಸ್ಟೇಷನ್ (ಟಿ.ಎ.ಪಿ.ಎಸ್) ನಲ್ಲಿ 210 ಮೆವ್ಯಾಗಳ ಎರಡು ಕುದಿಯುವ ನೀರಿನ ರಿಯಾಕ್ಟರ್ (ಬಿಡಬ್ಲ್ಯುಆರ್) ಘಟಕಗಳನ್ನು ನಿರ್ಮಿಸಲು ಯುಎಸ್ಎ ಸಹಾಯ ಮಾಡಿದೆ. ಆದಾಗ್ಯೂ, 1974 ರಲ್ಲಿ ಭಾರತದ ಮೊದಲ ಪರಮಾಣು ಸ್ಫೋಟವನ್ನು ಸ್ಫೋಟಿಸಿದ ನಂತರ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ತಮ್ಮ ಸಹಾಯವನ್ನು ಕೊನೆಗೊಳಿಸಿತು.
 • ಅಣ್ವಸ್ತ್ರಗಳ ಶಾಂತಿಯುತ ಬಳಕೆಗಳಲ್ಲಿ ಸಹಕಾರವನ್ನು ಉತ್ತೇಜಿಸಲು ಪರಮಾಣು ಶಸ್ತ್ರಾಸ್ತ್ರಗಳ ಮತ್ತು ಶಸ್ತ್ರಾಸ್ತ್ರ ತಂತ್ರಜ್ಞಾನದ ಹರಡುವಿಕೆ ತಡೆಗಟ್ಟಲು ಪರಮಾಣು ಶಸ್ತ್ರಾಸ್ತ್ರಗಳ ವಿರೋಧಿ ಶಸ್ತ್ರಾಸ್ತ್ರಗಳ (NPT) ಒಪ್ಪಂದವು ಲಂಗರು ಹಾಕಲ್ಪಟ್ಟಿತು ಮತ್ತು ಪರಮಾಣು ನಿರಸ್ತ್ರೀಕರಣ ಮತ್ತು ಸಾಮಾನ್ಯ ಮತ್ತು ಸಂಪೂರ್ಣ ನಿರಸ್ತ್ರೀಕರಣ. ವಿವಾದಾತ್ಮಕ ಚಿಕಿತ್ಸೆ ಮತ್ತು ಅನ್ಯಾಯದ ಆಧಾರದ ಮೇಲೆ ಒಪ್ಪಂದಕ್ಕೆ ಸಹಿ ಹಾಕಲು ಭಾರತ ನಿರಾಕರಿಸಿತು.
 • 1998 ರ ಪೊಕಾರಾನ್ ಪರಮಾಣು ಪರೀಕ್ಷೆ ನಂತರ ಭಾರತಕ್ಕೆ ಯುಎಸ್ಎ ಮತ್ತು ಮೈತ್ರಿಕೂಟಗಳಲ್ಲಿ ನಿರ್ಬಂಧಗಳನ್ನು ವಿಧಿಸಿದೆ. ಆದರೆ ಭಾರತ ಪಶ್ಚಿಮದಲ್ಲಿ ತನ್ನ ರಾಜತಂತ್ರವನ್ನು ಮುಂದುವರೆಸಿತು ಮತ್ತು ಸ್ವತಂತ್ರವಾಗಿ ಪ್ರಸರಣ ಮಾರ್ಗದರ್ಶಿ ಸೂತ್ರಗಳಿಗೆ ಅಂಟಿಕೊಂಡಿತು.

ವಿಶ್ವ ಕಿಡ್ನಿ ದಿನಾಚರಣೆ  2019

4.

ಸುದ್ಧಿಯಲ್ಲಿ ಏಕಿದೆ ?ವಿಶ್ವ ಕಿಡ್ನಿ ದಿನ  2019 ಮಾರ್ಚ್ 14 ರಂದು ನಡೆಯಲಿದೆ.

 • ವಿಶ್ವ ಕಿಡ್ನಿ ದಿನ 2019 ರ ವಿಷಯವೆಂದರೆ ಎಲ್ಲೆಡೆ ಪ್ರತಿಯೊಬ್ಬರಿಗೂ ಕಿಡ್ನಿ ಆರೋಗ್ಯ.
 • ಈ ಥೀಮ್ ಮೂತ್ರಪಿಂಡ ಕಾಯಿಲೆಯ ತಡೆಗಟ್ಟುವಿಕೆ ಮತ್ತು ಆರಂಭಿಕ ಚಿಕಿತ್ಸೆಗಾಗಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು (UHC) ಒತ್ತಿಹೇಳುತ್ತದೆ.
 • ರಾಜ್ಯದಲ್ಲಿ ಅಂಗಾಂಗಗಳ ಬೇಡಿಕೆಯಲ್ಲಿ ‘ಕಿಡ್ನಿ’ ಮುಂಚೂಣಿಯಲ್ಲಿದ್ದು, ಪ್ರಸ್ತುತ ರಾಜ್ಯದಲ್ಲಿ 2,662 ಮಂದಿ ಕಿಡ್ನಿ ಕಸಿಗಾಗಿ ಕಾಯುತ್ತಿದ್ದಾರೆ. ಅಂಗಾಂಗ ದಾನಕ್ಕಾಗಿ ಮೂರು ಸಾವಿರ ಮಂದಿ ಹೆಸರು ನೋಂದಾಯಿಸಿದ್ದಾರೆ. ಆದರೆ ಕಿಡ್ನಿ ಸೇರಿದಂತೆ ನಾನಾ ಅಂಗಾಂಗಗಳ ಕಸಿಗಾಗಿ ಕಾಯುತ್ತಿರುವವರ ಒಟ್ಟು ಸಂಖ್ಯೆ 3,613, ಅದರಲ್ಲಿ ಶೇ. 70ಕ್ಕೂ ಹೆಚ್ಚು ಮಂದಿ ಕಿಡ್ನಿಗಾಗಿ ಸರತಿಯಲ್ಲಿದ್ದಾರೆ.
 • ಬದಲಾದ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದೇ ಇದಕ್ಕೆ ಕಾರಣ. ಇದರ ಪರಿಣಾಮ ಕಿಡ್ನಿ ವೈಫಲ್ಯತೆ. ಹೀಗಾಗಿ ಕಿಡ್ನಿಗೆ ಬೇಡಿಕೆ ಹೆಚ್ಚಿದ್ದು, ಕಿಡ್ನಿಗಾಗಿ 2015ರಲ್ಲಿ 317 ಮಂದಿ ಹೆಸರು ನೋಂದಾಯಿಸಿದ್ದರೆ, 2018ರಲ್ಲಿ ಬೇಡಿಕೆ 722ಕ್ಕೆ ಹೆಚ್ಚಿದ್ದು, 2019ರಲ್ಲಿ ಕೇವಲ ಮೂರು ತಿಂಗಳಲ್ಲಿ 129 ಮಂದಿ ಹೆಸರು ನೊಂದಾಯಿಸಿದ್ದಾರೆ.

ಕಾರಣಗಳೇನು?:

 • ಮಧುಮೇಹ, ಅಧಿಧಿಕ ರಕ್ತದ ಒತ್ತಡ, ನೋವು ನಿವಾರಕ ಮಾತ್ರೆಗಳ ಅತಿಯಾದ ಸೇವನೆ, ವಂಶವಾಹಿನಿ ಹೀಗೆ ನಾನಾ ಕಾರಣಗಳಿಂದ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳಲಿದ್ದು, ಶೇ. 20ರಷ್ಟು ಪ್ರಕರಣಗಳಲ್ಲಿ ಕಾರಣವೇ ತಿಳಿಯುವುದಿಲ್ಲ. ಕಿಡ್ನಿ ಸಮಸ್ಯೆಯಲ್ಲಿ ಕಿಡ್ನಿ ಸ್ಟೋನ್‌, ಕಿಡ್ನಿ ಸೋಂಕು, ಕಿಡ್ನಿ ಕ್ಯಾನ್ಸರ್‌, ರಕ್ತನಾಳದ ತೊಂದರೆ, ಕಿಡ್ನಿಯಲ್ಲಿ ನೀರುಗುಳ್ಳೆ ಸೇರಿದಂತೆ ಹಲವು ಬಗೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.ಆರಂಭದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಕಿಡ್ನಿ ವೈಫಲವಾಗಿ ಕಿಡ್ನಿ ಕಸಿ ಅನಿವಾರ್ಯವಾಗುತ್ತದೆ ಎನ್ನುತ್ತಾರೆ ತಜ್ಞರು.

ರೋಗ ಲಕ್ಷಣಗಳು:

 • ಅತಿಯಾದ ಆಯಾಸ, ಕಾಲುಗಳಲ್ಲಿ ಊತ (ಮೊಣಕಾಲು) ನಡೆಯಲು ಆಗದಿರುವುದು, ವಾಕರಿಕೆ, ಮೂತ್ರ ವಿಜರ್ಸನೆಯಲ್ಲಿ ಏರುಪೇರು, ಉರಿ ಮೂತ್ರ, ಜ್ವರ ಬಂದಾಗ ಸೊಂಟದಲ್ಲಿ ನೋವು ಕಾಣಿಸಿಕೊಳ್ಳುವುದು, ಸಮಸ್ಯೆ ಹೆಚ್ಚಾದರೆ ಉಸಿರಾಟದ ತೊಂದರೆ, ಕಿಬ್ಬೊಟ್ಟೆಯಲ್ಲಿ ನೋವು ಇವು ಕಿಡ್ನಿ ಸಮಸ್ಯೆಯ ಲಕ್ಷಣಗಳು.

ವಿಶ್ವ ಕಿಡ್ನಿ ದಿನ ಬಗ್ಗೆ

 • ಡಬ್ಲುಕೆಡಿ ಇಂಟರ್ನ್ಯಾಷನಲ್ ಸೊಸೈಟಿ ಆಫ್ ನೆಫ್ರಾಲಜಿ (ಐಎಸ್ಎನ್) ಮತ್ತು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಕಿಡ್ನಿ ಫೌಂಡೇಶನ್ಸ್ (ಐಎಫ್ಕೆಎಫ್) ಜಂಟಿ ಉಪಕ್ರಮವಾಗಿದೆ.
 • ಈ ದಿನವು ಮೂತ್ರಪಿಂಡಗಳ ಪ್ರಾಮುಖ್ಯತೆಯನ್ನು ಕೇಂದ್ರೀಕರಿಸುವ ಮೂಲಕ ಜಾಗತಿಕ ಆರೋಗ್ಯ ಜಾಗೃತಿ ಪ್ರಚಾರವಾಗಿದೆ.
 • ವಿಶ್ವದಾದ್ಯಂತ ಮೂತ್ರಪಿಂಡ ಕಾಯಿಲೆಯ ಆವರ್ತನ ಮತ್ತು ಪ್ರಭಾವ ಮತ್ತು ಅದರ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ದಿನವನ್ನು ಪ್ರಾರಂಭಿಸಲಾಯಿತು.

ನೆಫ್ರಾಲಜಿ ಇಂಟರ್ನ್ಯಾಷನಲ್ ಸೊಸೈಟಿ (ಐಎಸ್ಎನ್)

 • ಐಎಸ್ಎನ್ ಮೂತ್ರಪಿಂಡದ ರೋಗಗಳ ರೋಗನಿರ್ಣಯ, ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯನ್ನು ಮುಂದುವರೆಸಲು ಮೀಸಲಿಡಲಾದ ಒಂದು ಲಾಭದಾಯಕವಲ್ಲದ  ಸಂಸ್ಥೆಯಾಗಿದೆ .
 • 2010 ರಲ್ಲಿ 50 ನೇ ವಾರ್ಷಿಕೋತ್ಸವವನ್ನು ಆಚರಿಸಿದ್ದ ಸಂಸ್ಥೆಯು ಜಗತ್ತಿನಾದ್ಯಂತ 126 ದೇಶಗಳಲ್ಲಿ ಸಕ್ರಿಯವಾಗಿದೆ.

ಅಂತರರಾಷ್ಟ್ರೀಯ ಒಕ್ಕೂಟ ಕಿಡ್ನಿ ಫೌಂಡೇಶನ್ಸ್ (IFKF)

 • ಐಎಫ್ಕೆಎಫ್, ನಾಟ್-ಫಾರ್-ಪ್ರಾಫಿಟ್ ಫೆಡರೇಶನ್ ಅನ್ನು 1999 ರಲ್ಲಿ ಸ್ಥಾಪಿಸಲಾಯಿತು.
 • ಪ್ರಸ್ತುತ, 41 ಕ್ಕೂ ಹೆಚ್ಚು ದೇಶಗಳಲ್ಲಿ 63 ಕಿಡ್ನಿ ಫೌಂಡೇಶನ್ಸ್ ಮತ್ತು ರೋಗಿಯ ಗುಂಪುಗಳ ಸದಸ್ಯತ್ವ ಹೊಂದಿದೆ.
 • ಮೂತ್ರಪಿಂಡ ಕಾಯಿಲೆ ಹೊಂದಿರುವ ವ್ಯಕ್ತಿಗಳ ಆರೋಗ್ಯ, ಯೋಗಕ್ಷೇಮ ಮತ್ತು ಗುಣಮಟ್ಟವನ್ನು ಸುಧಾರಿಸಲು ಅಡಿಪಾಯ ಪ್ರಯತ್ನಿಸುತ್ತದೆ

Related Posts
“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೃಂದಾವನಕ್ಕೆ ಡಿಸ್ನಿಲ್ಯಾಂಡ್‌ ಮಾದರಿ ಲುಕ್‌ ಸುದ್ಧಿಯಲ್ಲಿ ಏಕಿದೆ ?ಕೃಷ್ಣರಾಜಸಾಗರ ಜಲಾಶಯದ ಬೃಂದಾವನ ಉದ್ಯಾನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ 1,200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನೀಲಿನಕ್ಷೆ ಸಿದ್ಧಪಡಿಸಿದೆ. ಈಗಿನ ಪಾರಂಪರಿಕ ತಾಣದ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಬೃಂದಾವನವನ್ನು ವಿಶ್ವದ ಪ್ರವಾಸಿ ತಾಣಗಳಲ್ಲೇ ...
READ MORE
” 13 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆನ್​ಲೈನಲ್ಲೇ ಆಯುಷ್ಮಾನ್ ಶಿಫಾರಸು! ಸುದ್ಧಿಯಲ್ಲಿ ಏಕಿದೆ ? ಯಶಸ್ವಿನಿ ಯೋಜನೆ ಕೈಬಿಟ್ಟು ಆರೋಗ್ಯ ಕರ್ನಾಟಕ ರೂಪಿಸಿದ್ದ ಸರ್ಕಾರ ಬಡವರಿಗೆ ಆರೋಗ್ಯ ಕಾರ್ಡ್ ಒದಗಿಸಲು ವ್ಯವಸ್ಥಿತ ಜಾಲ ಸೃಷ್ಟಿಸಿದೆ. ಜತೆಗೆ ಈ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗಳಿಂದ ಪಡೆಯಬೇಕಾದ ಶಿಫಾರಸನ್ನು ...
READ MORE
” 05 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಈರುಳ್ಳಿ-ಬೆಳ್ಳುಳ್ಳಿಗೆ ಪರ್ಯಾಯ ಪೌಷ್ಠಿಕಾಂಶ ಬಳಕೆ ಸುದ್ಧಿಯಲ್ಲಿ ಏಕಿದೆ ?ಶಾಲಾ ಮಕ್ಕಳಿಗೆ ಪೂರೈಸುವ ಬಿಸಿಯೂಟದಲ್ಲಿ ಈರುಳ್ಳಿ-ಬೆಳ್ಳುಳ್ಳಿಗೆ ಪರ್ಯಾಯವಾಗಿ ಪೌಷ್ಠಿಕಾಂಶವಿರುವ ಇತರ ತರಕಾರಿಗಳನ್ನು ಬಳಸುವ ಆಹಾರ ಗುಣಮಟ್ಟದ ಬಗ್ಗೆ ಇಸ್ಕಾನ್‌ ಸಂಸ್ಥೆಯ 'ಅಕ್ಷಯ ಪಾತ್ರೆ' ಪ್ರತಿಷ್ಠಾನ ದೃಢೀಕೃತ ಪ್ರಮಾಣ ಪತ್ರ ನೀಡಿದಲ್ಲಿ ಅದಕ್ಕೆ ಆಯೋಗದ ಅಭ್ಯಂತರವಿಲ್ಲ ...
READ MORE
“25 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಾರುಕಟ್ಟೆ ಖಾತರಿ ಯೋಜನೆ ಸುದ್ಧಿಯಲ್ಲಿ ಏಕಿದೆ ?ಕೃಷಿ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಂದ ರೈತರಿಗಾಗುವ ವಂಚನೆ ತಪ್ಪಿಸುವುದಕ್ಕಾಗಿ ಕೆಲವು ಕೃಷಿ ಉತ್ಪನ್ನಗಳಿಗಷ್ಟೇ ಇರುವ ಕನಿಷ್ಠ ಬೆಂಬಲ ಬೆಲೆಯನ್ನು ವಾಣಿಜ್ಯ ಹಾಗೂ ಸಿರಿಧಾನ್ಯ ಬೆಳೆಗಳಿಗೂ ವಿಸ್ತರಿಸಿ ಮಾರುಕಟ್ಟೆ ಖಾತರಿ ಒದಗಿಸುವ ನಿರ್ಧಾರಕ್ಕೆ ಸರ್ಕಾರ  ಬಂದಿದೆ. ಏಕೆ ಈ ಯೋಜನೆ ...
READ MORE
“04 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸೇನೆಗೆ ಮಣಿಪಾಲದ ಬೈನಾಕ್ಯೂಲರ್ ಸುದ್ಧಿಯಲ್ಲಿ ಏಕಿದೆ ?ದೇಶದಲ್ಲಿ ಶತಮಾನದ ಹಿಂದಿನ ತಂತ್ರಜ್ಞಾನ ಹೊಂದಿರುವ ಟೆಲಿಸ್ಕೋಪ್ ಮತ್ತು ಬೈನಾಕ್ಯುಲರ್ ಬಳಸಲಾಗುತ್ತಿದೆ. ಅತ್ಯಾಧುನಿಕ ಬೈನಾಕ್ಯುಲರ್ ಬೇಕಾದರೆ ಲಕ್ಷಾಂತರ ರೂ. ವ್ಯಯಿಸಬೇಕಿದ್ದರಿಂದ ಸಂಶೋಧನೆ ಮತ್ತು ಸೈನಿಕ ಕಾರ್ಯಾಚರಣೆಗೆ ತೊಡಕಾಗಿದೆ. ಹೀಗಾಗಿ ಮಣಿಪಾಲದ ಇಂಜಿನಿಯರೊಬ್ಬರು ಕಡಿಮೆ ವೆಚ್ಚದ, ಉತ್ತಮ ...
READ MORE
“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶಾಲೆಗೆ ಬನ್ನಿ ಶನಿವಾರ ಶೀಘ್ರ ಪುನಾರಂಭ ಸುದ್ಧಿಯಲ್ಲಿ ಏಕಿದೆ ?ಮೂಲೆಗುಂಪಾಗಿದ್ದ ಶಿಕ್ಷಣ ಇಲಾಖೆಯ ಜನಪ್ರಿಯ ಯೋಜನೆ ‘ಶಾಲೆಗೆ ಬನ್ನಿ ಶನಿವಾರ- ಕಲಿಯಲು ನೀಡಿ ಸಹಕಾರ’ ಮತ್ತೆ ಆರಂಭವಾಗಲಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಪಾಠ-ಪ್ರವಚನ ಮಾಡಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ...
READ MORE
“17 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆರೋಗ್ಯ ಇಲಾಖೆಯ ವಾಟ್ಸ್‌ಆ್ಯಪ್‌ ಪ್ಲಾನ್‌ ಸುದ್ಧಿಯಲ್ಲಿ ಏಕಿದೆ ?ಮಗುವಿನ ಜನನಕ್ಕೆ ನೆರವಾಗುವ ಉದ್ದೇಶದಿಂದ 'ಸುರಕ್ಷಿತ ಗರ್ಭದಿಂದ ಸಂತಸದ ಕೈಗಳಿಗೆ' ಎಂಬ ಘೋಷ ವಾಕ್ಯದೊಂದಿಗೆ ವಿನೂತನ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ ಆಯೋಜಿಸಿದೆ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ವೈದ್ಯರು ಗರ್ಭಿಣಿಯರು ...
READ MORE
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷಿ ಆದಾಯ ಹೆಚ್ಚಳಕ್ಕೆ ಯೋಜನೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕೃಷಿ ಭೂಮಿ ಸದ್ಬಳಕೆ ಜತೆಗೆ ಅನ್ನದಾತರ ಆದಾಯವನ್ನೂ ಹೆಚ್ಚಿಸುವ ಉದ್ದೇಶದಿಂದ ಮೂರು ಹೊಸ ಕಾಯ್ದೆಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ರೂಪಿಸಿದ್ದ ಮಾದರಿ ಕಾಯ್ದೆಗಳು ಇದಕ್ಕೆ ಆಧಾರವಾಗಿರುವುದು ವಿಶೇಷ. ಉದ್ದೇಶ ಕೃಷಿ ಭೂಮಿ ಗುತ್ತಿಗೆ ...
READ MORE
“21 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂದಿರಾ ಯೋಜನೆಗೆ ಚಾಲನೆ ಸುದ್ಧಿಯಲ್ಲಿ ಏಕಿದೆ ? 'ಇಂದಿರಾ ಯೋಜನೆ'ಗೆ ಸಚಿವೆ ಡಾ. ಜಯಮಾಲಾ ಚಾಲನೆ ನೀಡಿದರು. ಏನಿದು ಇಂದಿರಾ ಯೋಜನೆ ? ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುವ ಮೇಲ್ವಿಚಾರಕರಿಗೆ ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ಬಡ್ಡಿ ರಹಿತ ಸಾಲ ನೀಡುವ ಯೋಜನೆಯೇ ...
READ MORE
” 08 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎನ್​ಪಿಎಸ್ ಸುದ್ಧಿಯಲ್ಲಿ ಏಕಿದೆ ?ಎನ್​ಪಿಎಸ್ (ಹೊಸ ಪಿಂಚಣಿ ಯೋಜನೆ) ರದ್ದತಿ ವಿಚಾರ ಕೇಂದ್ರ ಸರ್ಕಾರದ ಮಟ್ಟದಲ್ಲಿ ಬಾಕಿ ಇರುವಂತೆಯೇ, ಆ ನೌಕರರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಕೆಲವೊಂದು ಸೌಲಭ್ಯ ನೀಡಲು ಸಮ್ಮತಿಸಿದೆ. ಎನ್​ಪಿಎಸ್ ರದ್ದತಿಗಾಗಿ ಹೋರಾಟ ನಡೆಸುತ್ತಿರುವ ನೌಕರರು, ಅದರ ಜತೆಗೆ ಬೇರೆ ...
READ MORE
“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 13 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 05 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“25 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“04 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“17 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“21 ಫೆಬ್ರವರಿ 2019 ರ ಕನ್ನಡ ಪ್ರಚಲಿತ
” 08 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *