“14th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಚುನಾವಣೆ ಕುರಿತ ಗೀತೆ ಬಿಡುಗಡೆ

 • ಮತದಾನದ ಕುರಿತು ಜನ ಜಾಗೃತಿ ಮೂಡಿಸಲು ಸಿದ್ಧಪಡಿಸಿರುವ ಕರ್ನಾಟಕ ಚುನಾವಣಾ ಗೀತೆಯನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ಬಿಡುಗಡೆ ಮಾಡಿದರು.
 • ರಾಜ್ಯದಲ್ಲ ಮೊಟ್ಟಮೊದಲ ಬಾರಿಗೆ ಚುನಾವಣೆಗೆಂದೆ ಗೀತೆ ರೂಪಿಸಲಾಗಿದೆ. ಈ ಗೀತೆ ಮತದಾನದ ಅರಿವು ಮೂಡಿಸಲು ಜನಸಮುದಾಯವನ್ನು ಮುಟ್ಟಲಿದೆ.
 • ಈ ಗೀತೆ ನೈತಿಕ ಮತದಾನ ಹಾಗೂ ಹೆಚ್ಚು ಜನರು ಮತದಾನ ಮಾಡುವಂತೆ ಉತ್ತೇಜಿಸಲಿದೆ ಎಂದು ಸಂಜೀವ್​ಕುಮಾರ್ ಹೇಳಿದರು.
 • ಈ ಚುನಾವಣಾ ಗೀತೆ ಆಯೋಗದ ವಸ್ತು- ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆಗಳನ್ನು ಪ್ರತಿಪಾದಿಸುತ್ತದೆ. ರೇಡಿಯೊ, ಟಿವಿ, ಚಲನಚಿತ್ರಗಳು ಮತ್ತು ಇತರೆ ಮಾಧ್ಯಮಗಳಲ್ಲಿ ಪ್ರಸಾರವಾಗಲಿದೆ ಎಂದರು.
 • ಭಿಕ್ಷುಕರಿಗೂ ಅವಕಾಶ: ಈ ಬಾರಿ ಭಿಕ್ಷುಕರು, ಲೈಂಗಿಕ ಅಲ್ಪಸಂಖ್ಯಾತ ರಿಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಅವಕಾಶ ಹಾಗೂ ಪ್ರೋತ್ಸಾಹ ನೀಡಲಾಗುತ್ತದೆ.
 • ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗೀತೆ ರಚನೆಕಾರ ಯೋಗರಾಜ್ ಭಟ್, ‘ನಮ್ಮ ತಂಡ ಮೀಡಿಯಾ ಕನೆಕ್ಟ್’ ಸಹಯೋಗ ದಲ್ಲಿ ಕರ್ನಾಟಕದ ನೈಜ ಸ್ಪೂರ್ತಿಯನ್ನು ಈ ಗೀತೆಯಲ್ಲಿ ತಂದಿದ್ದೇವೆ.
 • ಇದರಲ್ಲಿ ಸಂದೇಶ ಸ್ಪಷ್ಟವಾಗಿದ್ದು, ಪ್ರತಿಯೊಬ್ಬರೂ ಹೊರಬಂದು ಮತದಾನ ಏಕೆ ಮಾಡಬೇಕೆಂದು ಹೇಳುತ್ತದೆ.
 • ನಾಡಿನ ವಿಭಿನ್ನತೆ ಚಿತ್ರಣ
 • ಚುನಾವಣಾ ಗೀತೆಯನ್ನು ಚಿತ್ರ ನಿರ್ದೇಶಕ ಯೋಗರಾಜ್ ಭಟ್ ರಚಿಸಿ, ನಿರ್ದೇಶಿಸಿದ್ದಾರೆ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ಗಾಯಕ ವಿಜಯ್ಪ್ರಕಾಶ್ ಮತ್ತು ತಂಡ ಹಾಡಿದೆ. ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಿದ್ದಾರೆ.
 • ಈ ಗೀತೆ ರಾಜ್ಯದ ಎಲ್ಲೆಡೆ ಚಿತ್ರೀಕರಣಗೊಂಡಿದ್ದು, ರಾಜ್ಯದ ವಿಭಿನ್ನತೆಯನ್ನು ಬಿಂಬಿಸಲಿದೆ. ವಿಧಾನಸೌಧದಲ್ಲೂ ಈ ಗೀತೆಗಾಗಿ ಚಿತ್ರೀಕರಣ ನಡೆಸಲಾಗಿದೆ. 150ಕ್ಕೂ ಹೆಚ್ಚು ಮಂದಿ ಕಲಾವಿದರು ಈ ಗೀತೆಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಏಕಕಾಲ ಚುನಾವಣೆಗೆ ಮೊದಲ ಹೆಜ್ಜೆ

 • ಒಂದೇ ಬಾರಿಗೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ನಡೆಸುವ ಮಹತ್ವಾಕಾಂಕ್ಷೆ ಯೋಜನೆ ಕೈಗೆತ್ತಿಕೊಂಡಿರುವ ಕೇಂದ್ರ ಸರ್ಕಾರ ಈಗ ಮತ್ತೊಂದು ಮಹತ್ವದ ಹೆಜ್ಜೆ ಮುಂದಿಟ್ಟಿದೆ.
 • ಎಲ್ಲ ವಿಧಾನಸಭೆಗಳು ಹಾಗೂ ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಸಂವಿಧಾನ ತಿದ್ದುಪಡಿ ಆಗಬೇಕು. ಆದರೆ ಸಂವಿಧಾನ ತಿದ್ದುಪಡಿ ಮಾಡದೇ ಎರಡು ಪರ್ಯಾಯ ಮಾರ್ಗಗಳ ಮೂಲಕ ಏಕಕಾಲ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ.
 • ಕೆಲ ರಾಜ್ಯಗಳಲ್ಲಿ ಸರ್ಕಾರದ ಅಧಿಕಾರಾವಧಿ 2019ರ ಜನವರಿಗೆ ಅಂತ್ಯವಾಗಲಿದೆ. ಇಂಥ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಮೂಲಕ ಅಲ್ಲಿನ ಚುನಾವಣೆಗಳನ್ನು ಮುಂದೂಡುವ ಕುರಿತು ಕೇಂದ್ರ ಸರ್ಕಾರ ಪರಾಮರ್ಶೆ ನಡೆಸುತ್ತಿದೆ.
 • ಮುಂದಿನ ವರ್ಷ ಏಪ್ರಿಲ್- ಮೇ ವೇಳೆಗೆ ಲೋಕಸಭೆ ಚುನಾವಣೆ ಜತೆಗೇ ಈ ರಾಜ್ಯಗಳ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.
 • ಮುಂದಿನ ಲೋಕಸಭೆ ಚುನಾವಣೆ ಜತೆಗೆ ಎಷ್ಟು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಸಬಹುದು? ಇದಕ್ಕೆ ಉಂಟಾಗುವ ಕಾನೂನಾತ್ಮಕ ತೊಡಕುಗಳೇನು? ಇವುಗಳ ಪರಿಹಾರ ಕುರಿತು ಕೇಂದ್ರ ಸರ್ಕಾರದ ಉನ್ನತ ಮಟ್ಟದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಕಾನೂನು ಸಚಿವಾಲಯ, ನೀತಿ ಆಯೋಗ, ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಸಭೆಗಳನ್ನು ನಡೆಸುತ್ತಿದ್ದಾರೆ.
 • ಸಾಧ್ಯವಿರುವ ಎಲ್ಲ ಆಯ್ಕೆಗಳ ಕುರಿತು ವಿಸõತವಾಗಿ ಅಧ್ಯಯನ ಮಾಡಲಾಗುತ್ತಿದೆ ಎಂದು ಕೆಲ ಮಾಧ್ಯಗಳು ಉನ್ನತಾಧಿಕಾರಿಗಳ ಮಾಹಿತಿ ಆಧರಿಸಿ ವರದಿ ಮಾಡಿವೆ.
 • ರಾಷ್ಟ್ರಪತಿ ಆಳ್ವಿಕೆ: ಛತ್ತೀಸ್​ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಮುಂದಿನ ವರ್ಷ ಜನವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಚುನಾವಣೆ ಘೋಷಣೆಯಾಗುವ ಕೆಲ ದಿನ ಮುನ್ನವೇ ರಾಷ್ಟ್ರಪತಿ ಆಳ್ವಿಕೆ ಘೋಷಿಸಿದರೆ ಚುನಾವಣೆ ಮುಂದೂಡಬಹುದು.
 • ಅಂದರೆ 2019ರ ಏಪ್ರಿಲ್ ವೇಳೆಗೆ ನಡೆಯುವ ಸಾರ್ವತ್ರಿಕ ಚುನಾವಣೆ ಜತೆಗೇ ಈ ಮೂರು ರಾಜ್ಯಗಳ ಚುನಾವಣೆ ನಡೆಸಬಹುದು ಎಂಬುದು ಹಲವರ ಲೆಕ್ಕಾಚಾರ.
 • ದೇಶದ ಹಿತಾಸಕ್ತಿಯಿಂದ, ‘ಒಂದು ದೇಶ ಒಂದು ಚುನಾವಣೆ’ಯಂಥ ಮಹತ್ವದ ಯೋಜನೆ ಜಾರಿಗಾಗಿ ಹಲವು ರಾಜ್ಯಗಳಲ್ಲಿ ಏಕಕಾಲ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಅವಧಿಪೂರ್ವ ಚುನಾವಣೆ

 • ಸಿಕ್ಕಿಂ ಸರ್ಕಾರದ ಅವಧಿ 2019 ಮೇನಲ್ಲಿ ಪೂರ್ಣಗೊಳ್ಳಲಿದೆ. ಅಲ್ಲಿನ ಸರ್ಕಾರದ ಮನವೊಲಿಸಿ ಲೋಕಸಭೆ ಚುನಾವಣೆ ಜತೆಗೇ ಅವಧಿಪೂರ್ವ ಚುನಾವಣೆ ನಡೆಸುವ ಸಾಧ್ಯತೆ ಇದೆ. ಇದೇ ರೀತಿ ಮುಂದಿನ ವರ್ಷ ಜೂನ್​ನಲ್ಲಿ ಚುನಾವಣೆ ನಡೆಯಲಿರುವ ಅರುಣಾಚಲ ಪ್ರದೇಶ, ಒಡಿಶಾ, ಆಂದ್ರಪ್ರದೇಶ, ತೆಲಂಗಾಣ ರಾಜ್ಯಗಳ ಜತೆ ಮಾತುಕತೆ ನಡೆಸಿ, ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಲು ಈ ರಾಜ್ಯಗಳು ಒಪ್ಪಿದರೆ ಸಾರ್ವತ್ರಿಕ ಚುನಾವಣೆ ಜತೆಗೆ ಈ ರಾಜ್ಯಗಳ ಚುನಾವಣೆ ನಡೆಸಬಹುದು.
 • ಒಂದು ವೇಳೆ ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಮಹಾರಾಷ್ಟ್ರ, ಹರಿಯಾಣ ಸರ್ಕಾರ ಒಪ್ಪಿದರೆ ಆರು ತಿಂಗಳು ಮೊದಲೇ ಸರ್ಕಾರ ಅಂತ್ಯಗೊಳಿಸಿ, 2019 ಏಪ್ರಿಲ್ ವೇಳೆ ವಿಧಾನಸಭೆ ಚುನಾವಣೆ ನಡೆಸಬಹುದು. ಈ ಯೋಜನೆ ಯಶಸ್ವಿಯಾದರೆ ಒಟ್ಟು 11 ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಬಹುದು.

ಮತ್ತೊಂದು ಮಾರ್ಗ

 • ಏಕಕಾಲ ಚುನಾವಣೆ ಬಗ್ಗೆ ಮತ್ತೊಂದು ಸೂತ್ರವೂ ಚರ್ಚೆಯಾಗುತ್ತಿದೆ. ಲೋಕಸಭಾ ಚುನಾವಣೆಯನ್ನು ಇದೇ ವರ್ಷದ ಕೊನೆಯಲ್ಲಿ ನಡೆಸಿದರೆ, ಮಿಜೋರಾಂ, ರಾಜಸ್ಥಾನ, ಛತ್ತೀಸ್​ಗಢ, ಮಧ್ಯಪ್ರದೇಶ ಚುನಾವಣೆಯನ್ನು ಜತೆಗೇ ನಡೆಸಬಹುದು.
 • ಆದರೆ ಸಿಕ್ಕಿಂ, ಆಂಧ್ರಪ್ರದೇಶ, ತೆಲಂಗಾಣ, ಅರುಣಾಚಲ ಪ್ರದೇಶ, ಒಡಿಶಾ, ಹರಿಯಾಣ, ಮಹಾರಾಷ್ಟ್ರಗಳಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಬೇಕಾಗುತ್ತದೆ.
 • ಆದರೆ ಇಲ್ಲಿನ ಸರ್ಕಾರಗಳು 6ರಿಂದ 11 ತಿಂಗಳು ಮೊದಲೇ ಅಧಿಕಾರ ತ್ಯಜಿಸಬೇಕಾಗುತ್ತದೆ. ಹೀಗಾಗಿ ಅವಧಿಪೂರ್ವ ಚುನಾವಣೆಗೆ ಈ ರಾಜ್ಯಗಳು ಒಪು್ಪವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಶ್ರೀದೇವಿಗೆ ಅತ್ಯುತ್ತಮ ನಟಿ, ಕನ್ನಡದ ಹೆಬ್ಬೆಟ್ ರಾಮಕ್ಕಗೆ ರಾಷ್ಟ್ರ ಪ್ರಶಸ್ತಿ

 • ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ನೀಡುವ 2017ರ ಸಾಲಿನ ಪ್ರತಿಷ್ಠಿತ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡಕ್ಕೆ ಎರಡು ವಿಭಾಗದಲ್ಲಿ ಪ್ರಶಸ್ತಿಯ ಗರಿ ಮುಡಿಗೇರಿದೆ. ಎನ್.ಆರ್. ನಂಜುಂಡೇಗೌಡ ನಿರ್ದೇಶನದ, ತಾರಾ ಅಭಿನಯದ ‘ಹೆಬ್ಬೆಟ್ ರಾಮಕ್ಕ’ ಪ್ರಾದೇಶಿಕ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಗಿಟ್ಟಿಸಿಕೊಂಡರೆ, ಕೂಡ್ಲು ರಾಮಕೃಷ್ಣ ನಿರ್ದೇಶನದ ‘ಮಾರ್ಚ್-22’ ಚಿತ್ರದ ‘ಮುತ್ತು ರತ್ನ..’ ಹಾಡಿನ ಸಾಹಿತ್ಯಕ್ಕಾಗಿ ಜೆ.ಎಂ. ಪ್ರಹ್ಲಾದ್​ಗೆ ‘ಅತ್ಯುತ್ತಮ ಗೀತ ಸಾಹಿತ್ಯ’ ಪ್ರಶಸ್ತಿ ದೊರಕಿದೆ.
 • ಅತ್ಯುತ್ತಮ ನಟಿ ಪ್ರಶಸ್ತಿ ಶ್ರೀದೇವಿಗೆ ಒಲಿದರೆ, ಬಂಗಾಳಿಯ ‘ನಗರ್ಕೀರ್ತನ್’ ಚಿತ್ರದಲ್ಲಿನ ನಟನೆಗಾಗಿ ರಿದ್ಧಿಸೇನ್​ಗೆ ಅತ್ಯುತ್ತಮ ನಟ ಅವಾರ್ಡ್ ದಕ್ಕಿದೆ. ‘ನ್ಯೂಟನ್’ ಚಿತ್ರಕ್ಕೆ ಅತ್ಯುತ್ತಮ ಹಿಂದಿ ಚಿತ್ರ ಪ್ರಶಸ್ತಿ ಲಭಿಸಿದೆ.
 • ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ವಿನೋದ್ ಖನ್ನಾ (ಮರಣೋತ್ತರ)
 • ಅತ್ಯುತ್ತಮ ನಟಿ: ಶ್ರೀದೇವಿ (ಚಿತ್ರ: ಮಾಮ್ (ಮರಣೋತ್ತರ)
 • ಅತ್ಯುತ್ತಮ ಆಕ್ಷನ್ ಚಿತ್ರ: ಬಾಹುಬಲಿ 2
 • ಅತ್ಯುತ್ತಮ ಕನ್ನಡ ಚಿತ್ರ: ಹೆಬ್ಬೆಟ್ ರಾಮಕ್ಕ
 • ಅತ್ಯುತ್ತಮ ಗೀತ ಸಾಹಿತ್ಯ: ಜೆ.ಎಂ. ಪ್ರಹ್ಲಾದ್ (ಕನ್ನಡ ಚಿತ್ರ: ಮಾರ್ಚ್ 22)
 • ಅತ್ಯುತ್ತಮ ತುಳು ಚಿತ್ರ: ಪಡ್ಡಾಯಿ

~~~***ದಿನಕ್ಕೊಂದು ಯೋಜನೆ***~~~

ಪ್ರಧಾನ್ ಮಂತ್ರಿ ಊರ್ಜ ಗಂಗಾ ಯೋಜನೆ

 • ಭಾರತದ ಪೂರ್ವ ಭಾಗಗಳಿಗೆ ಲಭ್ಯವಿರುವ ಶುದ್ಧ ಮತ್ತು ಪರಿಸರ ಸ್ನೇಹಿ ಇಂಧನವನ್ನು (ನೈಸರ್ಗಿಕ ಅನಿಲ) ಮಾಡಲು, ರೂ 5176 ಕೋಟಿಗಳ ಬಂಡವಾಳದ ಅನುದಾನವನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ (ಅಂದಾಜು ರೂ. 12,940 ಕೋಟಿ ರೂಪಾಯಿ) ಗೈಲ್ಗೆ 2655 ಕಿ.ಮೀ ಉದ್ದದ ಜಗ್ದಿಶ್ಪುರ್-ಹಲ್ದಿಯಾ / ಬೋಕಾರೊ-ಧಮ್ರಾ ಗ್ಯಾಸ್ ಪೈಪ್ಲೈನ್ (ಜೆಹೆಚ್ಬಿಡಿಪಿಎಲ್) ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.
 • ಈ ಸಮಯದಲ್ಲಿ ಈಸ್ಟ್ ಇಂಡಿಯಾದ “ಪ್ರಧಾನ್ ಮಂತ್ರಿ ಉರ್ಜಾ ಗಂಗಾ” ಎಂದು ಕರೆಯಲ್ಪಡುತ್ತದೆ.
 • ಈ ಪೈಪ್ಲೈನ್ ​​ನೈಸರ್ಗಿಕ ಅನಿಲವನ್ನು ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಕೈಗಾರಿಕಾ, ವಾಣಿಜ್ಯ, ದೇಶೀಯ ಮತ್ತು ಸಾರಿಗೆ ವಲಯಗಳಿಗೆ ಸಾಗಿಸುತ್ತದೆ.

ಪ್ರಮುಖ ಅಂಶಗಳು

 • ರಾಜ್ಯ-ನಿರ್ವಹಣೆಯ ಅನಿಲ ಬಳಕೆಯ GAIL ಯೋಜನೆಯು ಈ ಯೋಜನೆಯನ್ನು ಜಾರಿಗೊಳಿಸುತ್ತದೆ. ಇದು 2018 ರೊಳಗೆ ಜಗ್ದಿಶ್ಪುರ್ (ಯುಪಿ) ಅನ್ನು ಹಲ್ದಿಯಾ (ಪಶ್ಚಿಮ ಬಂಗಾಳ) ಗೆ ಸಂಪರ್ಕಿಸುವ 2,050-ಕಿಲೋಮೀಟರ್ ಪೈಪ್ಲೈನ್ ​​ಅನ್ನು ಹಾಕಿದೆ ಎಂದು ಸೂಚಿಸುತ್ತದೆ.
 • ವಾರಣಾಸಿಯ ದೃಷ್ಟಿಕೋನದಿಂದ, 50,000 ಮನೆಗಳು ಮತ್ತು 20,000 ವಾಹನಗಳು ಶುದ್ಧ ಮತ್ತು ಅಗ್ಗದ ಇಂಧನ PNG ದೊರೆಯುತ್ತವೆ ಮತ್ತು ಕ್ರಮವಾಗಿ ಸಿಎನ್ಜಿ ಗ್ಯಾಸ್.
 • ಈ ಯೋಜನೆಯು ಭಾರತದ ಪೂರ್ವ ಭಾಗದ ಸಾಮೂಹಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪ್ರಮುಖ ಹೆಜ್ಜೆಯೆಂದು ಪರಿಗಣಿಸಲಾಗಿದೆ. ಇದರಡಿಯಲ್ಲಿ 20 ಲಕ್ಷ ಕುಟುಂಬಗಳು PNG ಸಂಪರ್ಕಗಳನ್ನು ಪಡೆಯಲಿವೆ.
 • ಉರ್ಜಾ ಗಂಗಾ ಯೋಜನೆಯು ಅಸ್ತಿತ್ವದಲ್ಲಿರುವ ಗೈಲ್ನ ಟ್ರೇನ್ ಕೊಳವೆಗಳ ಜಾಲವನ್ನು ಸುಮಾರು 25,000 ಕಿ.ಮೀ ಉದ್ದದ 11,000 ಕಿ.ಮೀ ಉದ್ದವನ್ನು ಹೆಚ್ಚಿಸುತ್ತದೆ.
 • ಇದಲ್ಲದೆ 2540 ಕಿ.ಮೀ ಉದ್ದದ ಜಗ್ದಿಶ್ಪುರ್-ಹಲ್ದಿಯಾ ಮತ್ತು ಬೋಕಾರೊ-ಧಮ್ರಾ ನ್ಯಾಚುರಲ್ ಗ್ಯಾಸ್ ಪೈಪ್ಲೈನ್ ​​ಯೋಜನೆಯಡಿ ಈ ಯೋಜನೆಯಡಿ 2018 ಮತ್ತು 2020 ರ ನಡುವೆ ಪೂರ್ಣಗೊಳ್ಳಲಿದೆ.
 • ಏಳು ಈಸ್ಟ್ ಇಂಡಿಯಾ ನಗರಗಳು ವಾರಣಾಸಿ, ಜಮ್ಶೆಡ್ಪುರ, ಪಾಟ್ನಾ, ರಾಂಚಿ, ಕೊಲ್ಕತ್ತಾ, ಭುವನೇಶ್ವರ್, ಕಟಕ್ – ಈ ನೆಟ್ವರ್ಕ್ ಅಭಿವೃದ್ಧಿಯ ಪ್ರಮುಖ ಫಲಾನುಭವಿಯೆನಿಸುತ್ತದೆ.
 • ಜೊತೆಗೆ, ಧಮ್ರಾದಲ್ಲಿ ಎಲ್ಎನ್ಜಿ ಟರ್ಮಿನಲ್ ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಪೂರ್ವದ ರಾಜ್ಯಗಳ ಕೈಗಾರಿಕಾ ಅಭಿವೃದ್ಧಿಗಾಗಿ ಶುದ್ಧ ಇಂಧನವನ್ನು ಒದಗಿಸುತ್ತದೆ.
 • ಈ 5 ರಾಜ್ಯಗಳಲ್ಲಿ 25 ಕೈಗಾರಿಕಾ ಸಮೂಹಗಳನ್ನು ಅನಿಲವನ್ನು ಈ ಪೈಪ್ಲೈನ್ನಿಂದ ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ, 40 ಜಿಲ್ಲೆಗಳು ಮತ್ತು 2600 ಗ್ರಾಮಗಳು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತವೆ.
 • ಬಿಹಾರದಲ್ಲಿನ ಬಾರೂನಿ, ಉತ್ತರದಲ್ಲಿ ಗೋರಖ್ಪುರ, ಜಾರ್ಖಂಡ್ನ ಸಿಂಧಿ ಮತ್ತು ಪಶ್ಚಿಮ ಬಂಗಾಳದ ದುರ್ಗಾಪೂರ್ನಲ್ಲಿ ಅನಿಲವನ್ನು ಸರಬರಾಜು ಮಾಡುವುದರ ಮೂಲಕ ಅಪ್ರಚಲಿತ ರಸಗೊಬ್ಬರ ಸಸ್ಯಗಳ ಪುನರುಜ್ಜೀವನಕ್ಕೆ ಸಹ ಇದು ನೆರವಾಗುತ್ತದೆ.

ದಿನಕ್ಕೆ ಹತ್ತು ಪ್ರಶ್ನೋತ್ತರಗಳು

1. ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಯಾರಾಗಿದ್ದರು ?
A. ಸಿ.ರಾಜಗೋಪಾಲಚಾರಿ
B. ರಾಜೇಂದ್ರ ಪ್ರಸಾದ್
C. ಗಾಂಧೀಜಿ
D. ಸರ್ದಾರ್ ಪಟೇಲ್

2. ಏಪ್ರಿಲ್ ೧೪ ಸಂವಿಧಾನ ಶಿಲ್ಪಿಯ ಜನ್ಮ ದಿನ.ಸಂವಿಧಾನ ಶಿಲ್ಪಿ ಎಂದು ಈ ಕೆಳಗಿನ ಯಾರನ್ನು ಕರೆಯಲಾಗುತ್ತದೆ ?
A. ಎಂ.ಎನ್.ರಾಯ್
B. ಬಿ.ಆರ್.ಅಂಬೇಡ್ಕರ್
C. ಜವಾಹರಲಾಲ್ ನೆಹರು
D. ಯಾರು ಅಲ್ಲ

3. ಕನಸಿನ ಗೋಪುರಗಳ ನಗರ’ ಎಂಬ ಅನ್ವರ್ಥಕ ನಾಮವನ್ನು ಹೊಂದಿರುವ ಸ್ಥಳ ಯಾವುದು?
A. ನ್ಯೂಯಾರ್ಕ
B. ರೋಮ್
C. ಅಕ್ಸ ಫರ್ಡ್
D. ಪ್ಯಾರಿಸ್

4. ಭಾರತದಲ್ಲಿ ರೂಢಿಯಲ್ಲಿರುವ ಪ್ರಮುಖ ವ್ಯವಸಾಯದ ವಿಧನಗಳೆಂದರೆ
A. ಪ್ರಾಚೀನಕಾಲದ ಜೀವನಾಧಾರ ಬೇಸಾಯ
B. ವಾಣಿಜ್ಯ ಬೇಸಾಯ
C. ಮಿಶ್ರ ಬೇಸಾಯ
D. ತೋಟಗಾರಿಕೆ

5. ಚುಟುಕು ಬ್ರಹ್ಮ’ ಎಂದು ಹೆಸರುವಾಸಿಯಾಗಿದ್ದವರು ಯಾರು?
A). ದಿನಕರ ದೇಸಾಯಿ
B). ಜಿ.ಎಸ್.ಅಮೂರ
C). ಕಯ್ಯಾರಕಿಞ್ಞಣ್ಣ ರೈ
D). ಸುನಂದಮ್ಮ

6. ಕರ್ನಾಟಕ ಸಂಗೀತ ಪಿತಾಮಹ’ ಎಂದು ಯಾರನ್ನು ಕರೆಯುತ್ತಾರೆ?
A). ಕನಕದಾಸ
B). ವಾದಿರಾಜ
C). ಬಸವಣ್ಣ
D). ಪುರಂದರ ದಾಸ

7. ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದವಾ ಉಗ್ರ ಸಂಘಟನೆಯ ರಾಜಕೀಯ ಪಕ್ಷ ಮಿಲ್ಲಿ ಮುಸ್ಲಿಂ ಲೀಗ್ ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಮದು ಕೆಳಗಿನ ಯಾವ ರಾಷ್ಟ್ರ ಘೋಷಿಸಿದೆ?
A. ಪಾಕಿಸ್ತಾನ
B. ರಷ್ಯಾ
C. ಭಾರತ
D. ಅಮೇರಿಕಾ

8. ಅನುವಂಶಿಕವಾಗಿ ಅಥವಾ ನರಗಳ ದೋಷದಿಂದ ಬರುವ ಆಟಿಸಂ ಕಾಯಿಲೆ ಕುರಿತು ಜಾಗೃತಿ ಮೂಡಿಸಲು ಹಾಗೂ ಪೂರ್ವ ಗ್ರಹಗಳು ನಿವಾರಣೆಯಾಗಬೇಕು ಎಂಬ ಉದ್ದೇಶದಿಂದ ವಿಶ್ವಸಂಸ್ಥೆಯು ಕೆಳಗಿನ ಯಾವ ದಿನಾಂಕವನ್ನು ‘ವರ್ಲ್ಡ್ ಆಟಿಸಂ ಡೇ’ ದಿನ ಎಂದು ಘೋಷಿಸಿದೆ?
A. ಏಪ್ರಿಲ್ 1
B. ಏಪ್ರಿಲ್ 2
C.ಏಪ್ರೀಲ್ 24
D. ಮೇ 5

9. ಅಮೇರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಎಕ್ಸೊಪ್ಲಾನೆಟ್ ಸರ್ವೆ ಸ್ಯಾಟಲೈಟ್ ಎಂಬ ಬಾಹ್ಯಾಕಾಶ ನೌಕೆಯನ್ನು ಏಪ್ರಿಲ್ 16 ರಂದು ಉಡಾವಣೆ ಮಾಡಲಿದೆ. ಈ ನೌಕೆಯ ಉಪಯೋಗ ಏನು?

1. ಭೂಮಿಯ ಮೇಲೆ ಶುದ್ಧ ನೀರನ್ನು ಹುಡುಕುವುದು

2. ಭೂಮಿಯಲ್ಲಿ ಇರುವ ಖನಿಜ ನಿಕ್ಷೇಪ ಶೋಧಿಸಲು

3. ಭೂಮಿ ಮೇಲಿನ ವಾತಾವರಣ ಶೋಧಿಸಲು

4. ಅನ್ಯಗ್ರಹ ಪತ್ತೆ ಹಚ್ಚಲು

10. ದೇಶದಲ್ಲಿ ಏಪ್ರಿಲ್ 1 ರಿಂದ ಎಷ್ಟು ರೂ. ಗಿಂತ ಹೆಚ್ಚು ಮೌಲ್ಯದ ಅಂತಾರಾಜ್ಯ ಸರಕು ಸಾಗಣೆಗೆ ಇ-ವೇ ಬಿಲ್ ಕಡ್ಡಾಯವಾಗುತ್ತದೆ?

1. ರೂ. 10,000
2. ರೂ. 20,000
3. ರೂ. 30,000
4. ರೂ. 50,000

ಉತ್ತರಗಳು:1.A 2.B 3.C 4.A 5.A 6.D 7.D 8.B 9.D 10.D 

Related Posts
National Current Affairs – UPSC/KAS Exams- 7th August 2018
Scheduled Tribes (Prevention of Atrocities) Amendment Bill, 2018 Why in news? The Lok Sabha on Monday passed the Scheduled Castes and Scheduled Tribes (Prevention of Atrocities) Amendment Bill, 2018, to bypass the ...
READ MORE
2005ರ ಅಕ್ಟೋಬರ್ 12ರಂದು ಜಾರಿ ಜನಸಾಮಾನ್ಯರೂ ಆಡಳಿತ ವ್ಯವಸ್ಥೆಯ ಮಾಹಿತಿ ಪಡೆಯಲು ಅನುವಾಗುವ ಮಾಹಿತಿ ಹಕ್ಕು ಕಾಯ್ದೆ. ಮಾಹಿತಿ ಹಕ್ಕು ಕಾಯ್ದೆ ಎಂದರೇನು? ನಾಗರಿಕರು ಮಾಹಿತಿ ಬಯಸಿ ಸಲ್ಲಿಸಿದ ಅರ್ಜಿಯನ್ನು ಪರೀಕ್ಷಿಸಿ, ಅದಕ್ಕೆ ಸಂಬಂಧಪಟ್ಟ ಸೂಕ್ತ ಮಾಹಿತಿಯನ್ನು ನಿಗದಿತ ಅವಧಿಯೊಳಗೆ ನೀಡುವುದು; ಆ ಮೂಲಕ ಆಡಳಿತ ವ್ಯವಹಾರದಲ್ಲಿ ...
READ MORE
Sericulture farmers in Karnataka, India’s leading raw silk producing State, are disappointed over the Union Budget’s failure to increase the customs duty on import of raw silk. The customs duty on ...
READ MORE
National Current Affairs – UPSC/KAS Exams- 19th March 2019
Japan to make crater on asteroid Topic: Science and Technology In News: Japan’s space agency said that its Hayabusa2 spacecraft will drop an explosive on an asteroid to make a crater and ...
READ MORE
Karnataka Current affairs – KAS / KPSC Exams 2nd May 2017
Water situation in Udupi deteriorates The drinking water problem in the city is worsening with the water levels at the Baje Dam on the Swarna at Baje village, from where water ...
READ MORE
Four-day World Congress on Disaster Management concluded on Sunday with the unanimous adoption of ‘Visakhapatnam Declaration’ calling for a comprehensive action plan for a disaster-resilient society The declaration was drafted after ...
READ MORE
Karnataka Current Affairs – KAS/KPSC Exams – 20th Dec 2017
First State-owned wayside amenity centre to come up in Chittapur soon The first government-owned roadside multi-amenity centre to cater the basic needs of tourists and travellers is going to be established ...
READ MORE
Reforming criminals Judgement was given in a majority judgment of the five-judge Constitution Bench led by Chief Justice of India H.L. Dattu observed in the Rajiv Gandhi killers’ remission case. They noted that ...
READ MORE
“3rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಡ್ರೋನ್‌ ಬಳಕೆ ಸುದ್ದಿಯಲ್ಲಿ ಏಕಿದೆ? ನಗರದ ವಾಹನ ದಟ್ಟಣೆಯನ್ನು ಸರಾಗಗೊಳಿಸಲು ಡ್ರೋನ್‌ ಮೂಲಕ ಮಾಹಿತಿ ಸಂಗ್ರಹಿಸಿ, ನೂತನ ವ್ಯವಸ್ಥೆ ಅಳವಡಿಸಿಕೊಳ್ಳಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಕಾರಣವೇನು? ಪ್ರಮುಖ ಜಂಕ್ಷನ್‌, ವೃತ್ತ ಹಾಗೂ ವಾಹನ ನಿಬಿಡ ಸ್ಥಳಗಳಲ್ಲಿನ ದಟ್ಟಣೆ ಹೆಚ್ಚುತ್ತಿರುವ ಕಾರಣ ಸಮಸ್ಯೆ ಉಂಟಾಗುತ್ತಿದೆ. ಸಿಗ್ನಲ್‌ ...
READ MORE
Akrama-Sakrama online process to start after a week (Karnataka Updates)
Citizens can apply online for regularisation of their properties under the Akrama-Sakrama scheme may have to wait at least a week as the Bruhat Bengaluru Mahanagara Palike (BBMP) is yet to ...
READ MORE
National Current Affairs – UPSC/KAS Exams- 7th August
ಮಾಹಿತಿ ಹಕ್ಕು ಕಾಯ್ದೆ(ಆರ್​ಟಿಐ)
Sericulture farmers in state disappointed with the budget
National Current Affairs – UPSC/KAS Exams- 19th March
Karnataka Current affairs – KAS / KPSC Exams
Visakhapatnam Declaration
Karnataka Current Affairs – KAS/KPSC Exams – 20th
SC judgement : Remission of sentences
“3rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Akrama-Sakrama online process to start after a week

Leave a Reply

Your email address will not be published. Required fields are marked *