“14th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ರಾಜ್ಯ ಯೋಜನಾ ಆಯೋಗ

 • ಸುದ್ದಿಯಲ್ಲಿ ಏಕಿದೆ? ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ಅವರನ್ನು ರಾಜ್ಯ ಯೋಜನಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
 • ರಾಜ್ಯ ಯೋಜನಾ ಮಂಡಳಿಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿರುತ್ತಾರೆ.

ರಾಜ್ಯ ಯೋಜನಾ ಆಯೋಗದ ಕಾರ್ಯಗಳು

 • ಸಂಪನ್ಮೂಲಗಳ ಮೌಲ್ಯಮಾಪನ ಮತ್ತು ರಾಜ್ಯದ ಒಟ್ಟಾರೆ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸುವುದು, ಯೋಜನೆ ಅನುಷ್ಠಾನದ ಪ್ರಗತಿಯ ಮೇಲ್ವಿಚಾರಣೆ ಯೋಜನಾ ಆಯೋಗದ ಪ್ರಮುಖ ಕಾರ್ಯಗಳಾಗಿವೆ

ಅಪಾಚೆ ಯುದ್ಧ ಹೆಲಿಕಾಪ್ಟರ್

 • ಸುದ್ದಿಯಲ್ಲಿ ಏಕಿದೆ? ಭಾರತೀಯ ಸೇನೆಗೆ 9,300 ಡಾಲರ್‌ ಮೌಲ್ಯದ 6 ಎಎಚ್‌-64ಇ ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳ ಮಾರಾಟಕ್ಕೆ ಅಮೆರಿಕ ಸರಕಾರ ಅನುಮೋದನೆ ನೀಡಿದೆ. 
 • ಬೋಯಿಂಗ್ ಮತ್ತು ಭಾರತೀಯ ಪಾಲುದಾರ ಸಂಸ್ಥೆ ಟಾಟಾ ಜಂಟಿಯಾಗಿ ಭಾರತದಲ್ಲಿರುವ ಸ್ಥಾವರದಲ್ಲಿ ಅಪಾಚೆಯ ಸೂಕ್ಷ್ಮ ಬಿಡಿಭಾಗಗಳನ್ನು ಉತ್ಪಾದಿಸಲು ಆರಂಭಿಸಿವೆ.
 • ಆದರೆ ಅಮೆರಿಕ ಸರಕಾರ ನೀಡಿದ ಅನುಮೋದನೆಯಿಂದ ಅಮೆರಿಕದ ಕಂಪನಿಗಳು ಸಿದ್ಧಪಡಿಸಿದ ಉತ್ಪನ್ನಗಳನ್ನೇ ನೇರವಾಗಿ ಮಾರಾಟ ಮಾಡುವ ಸಾಧ್ಯತೆಯೂ ಇದೆ.
 • ಲಾಕ್‌ಹೀಡ್‌ ಮಾರ್ಟಿನ್‌, ಜನರಲ್‌ ಎಲೆಕ್ಟ್ರಿಕ್‌ ಮತ್ತು ರೇಥಿಯಾನ್ ಕಂಪನಿಗಳು ಅಮೆರಿಕದ ಶಸ್ತ್ರಾಸ್ತ್ರಗಳು, ವೈಮಾನಿಕ ವಾಹನಗಳು ಮತ್ತು ಎಂಜಿನಿಯರಿಂಗ್‌ ಉತ್ಪಾದನೆಯ ದೈತ್ಯರಾಗಿವೆ.

ಅಪಾಚೆ ಹೆಲಿಕ್ಯಾಪ್ಟರ್ ಬಗ್ಗೆ ಒಂದಿಷ್ಟು ಮಾಹಿತಿ

 • ವಿಶ್ವದ ಅತ್ಯಾಧುನಿಕ ಹೆಲಿಕಾಪ್ಟರ್ಗಳ ಪೈಕಿ ಒಂದೆನಿಸಿಕೊಂಡಿರುವ ಎಎಚ್ -64 ಅಪಾಚೆ ಯುಎಸ್ ಸೇನೆಯಿಂದ ಇತರ ದೇಶಗಳ ಸಶಸ್ತ್ರ ಪಡೆಗಳಲ್ಲೂ ಸಹ ಬಳಸಲ್ಪಡುತ್ತದೆ.
 • ಅಪಾಚೆ ಗಾರ್ಡಿಯನ್ ಎಂದೂ ಕರೆಯಲಾಗುತ್ತದೆ, ಇದು ಬಹು-ಪಾತ್ರದ ಯುದ್ಧ ಹೆಲಿಕಾಪ್ಟರ್ ಆಗಿದ್ದು, ಯಾವುದೇ ಹವಾಮಾನ ಮತ್ತು ರಾತ್ರಿಯೂ ಸೇರಿದಂತೆ ಯಾವುದೇ ಸಮಯದಲ್ಲೂ ಸರಾಗವಾಗಿ ಕಾರ್ಯ ನಿರ್ವಹಿಸಬಹುದು.
 • ಚಾಪರ್ ಅನ್ನು ಪ್ರಾಥಮಿಕವಾಗಿ ನೆಲ ಪಡೆಗಳಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ ಮತ್ತು ಶತ್ರು ಟ್ಯಾಂಕರ್ಗಳನ್ನು ನಾಶಮಾಡಲು ಬಂದಾಗ ‘ಮಾರಕ’ ಎಂದು ಹೇಳಲಾಗುತ್ತದೆ.
 • ಅಪಾಚೆ 64-ಎ ನಾಲ್ಕು-ಬ್ಲೇಡ್, ಅವಳಿ ಆರೋಹಿತವಾದ ಸಂವೇದಕ ಸೂಟ್ನೊಂದಿಗಿನ ಅವಳಿ-ಟರ್ಬೊಸ್ಯಾಫ್ಟ್ ಹೆಲಿಕಾಪ್ಟರ್, ಇದು ಗುರಿಯನ್ನು ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ಸರಳಗೊಳಿಸುತ್ತದೆ.
 • ಲೇಸರ್, ಅತಿಗೆಂಪು ಮತ್ತು ಇತರ ವ್ಯವಸ್ಥೆಗಳು ಹೆಲಿಕಾಪ್ಟರ್ಗೆ ಗುರಿಗಳನ್ನು ಪತ್ತೆಹಚ್ಚಲು, ಟ್ರ್ಯಾಕ್ ಮಾಡುವ ಮತ್ತು ಆಕ್ರಮಣ ಮಾಡುವ ಸಾಮರ್ಥ್ಯವನ್ನು ಮಾಡುತ್ತದೆ. ಇದು ಲೇಸರ್-ನಿರ್ದೇಶಿತ ನಿಖರವಾದ ಹೆಲ್ಫೈರ್ ಕ್ಷಿಪಣಿಗಳು, 70 ಮಿಮೀ ರಾಕೆಟ್ಗಳು, ಮತ್ತು 1,200 ಹೆಚ್ಚು-ಸ್ಫೋಟಕ, ದ್ವಿ-ಉದ್ದೇಶಿತ ಯುದ್ಧಸಾಮಗ್ರಿ ಸುತ್ತುಗಳವರೆಗೆ 30mm ಸ್ವಯಂಚಾಲಿತ ಫಿರಂಗಿಗಳ ಸಂಯೋಜನೆಯನ್ನು ಸಹ ಹೊಂದಿದೆ.
 • ದಾಳಿಯ ಹೆಲಿಕಾಪ್ಟರ್ ಗಂಟೆಗೆ 284 ಕಿ.ಮೀ. ವೇಗವನ್ನು ಹೊಂದಿದೆ. 15.24 ಅಡಿ ಎತ್ತರ ಮತ್ತು 17.15 ಅಡಿಗಳಷ್ಟು ವಿಂಗ್ನೊಂದಿಗೆ, ಹೆಲಿಕಾಪ್ಟರ್ಗೆ 150 ಕ್ಕೂ ಹೆಚ್ಚು ಗಂಟುಗಳ ಹಾರಾಟದ ವೇಗವಿದೆ.
 • ಯುದ್ಧದ ಬದುಕುಳಿಯುವಿಕೆಯನ್ನು ಸುಧಾರಿಸಲು ಇದು ಪ್ರಮುಖ ವ್ಯವಸ್ಥೆಗಳ ಪುನರುಜ್ಜೀವನವನ್ನು ಸಹ ಹೊಂದಿದೆ.
 • AH-64E ಅಪಾಚೆಗೆ ಮಾನವರಹಿತ ವೈಮಾನಿಕ ವಾಹನಗಳನ್ನು ನಿಯಂತ್ರಿಸುವ ಸಾಮರ್ಥ್ಯವಿದೆ. ಚಾಪರ್ನಲ್ಲಿನ ಸ್ವಯಂ-ಸೀಲಿಂಗ್ ಇಂಧನ ವ್ಯವಸ್ಥೆಯು ಇಂಧನ ನಷ್ಟದಿಂದ ಅದನ್ನು ರಕ್ಷಿಸುತ್ತದೆ, ಯುದ್ಧದ ಸಂದರ್ಭದಲ್ಲಿ ಇದು ಸೂಕ್ತವಾಗಿದೆ. ಅದರ ತಯಾರಕ ಬೋಯಿಂಗ್ನ ಪ್ರಕಾರ, AH 64 60 ಸೆಕೆಂಡುಗಳಿಗಿಂತಲೂ ಕಡಿಮೆ ಅವಧಿಯಲ್ಲಿ 128 ಗುರಿಗಳನ್ನು ವರ್ಗೀಕರಿಸುವ ಮತ್ತು ಆದ್ಯತೆಯ ಸಾಮರ್ಥ್ಯವನ್ನು ಹೊಂದಿದೆ.
 • ಅಮೆರಿಕಾವು ಅಪಾಚೆಯ ಪ್ರಾಥಮಿಕ ನಿರ್ವಾಹಕವಾಗಿದೆ. ಗ್ರೀಸ್, ಜಪಾನ್, ಇಸ್ರೇಲ್, ನೆದರ್ಲ್ಯಾಂಡ್ಸ್, ಸಿಂಗಪೂರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮೊದಲಾದ ದೇಶಗಳಲ್ಲಿ ಚಾಪರ್ ಕಾರ್ಯನಿರ್ವಹಿಸುತ್ತದೆ.

ವಿಶ್ವ ರಕ್ತದಾನಿಗಳ ದಿನ

 • ಸುದ್ದಿಯಲ್ಲಿ ಏಕಿದೆ? ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಜೂನ್‌ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ.
 • ಪ್ರತಿ ವರ್ಷವೂ ಒಂದೊಂದು ಥೀಮ್‌ ಇಟ್ಟುಕೊಂಡು ಆಚರಿಸಲಾಗುತ್ತದೆ. ಈ ಬಾರಿ ‘ಇತರರಿಗಾಗಿ ಬದುಕಿ, ರಕ್ತ ನೀಡಿ, ಜೀವವನ್ನೇ ಹಂಚಿಕೊಳ್ಳಿ’ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ.

ಈ ದಿನವನ್ನು ಆಚರಿಸಲು ಕಾರಣಗಳು:

 • ಅಪಘಾತ, ಕ್ಯಾನ್ಸರ್‌, ಹೃದಯಸಂಬಂಧಿ ಸಮಸ್ಯೆಗಳು, ಹೆರಿಗೆ ಸಂಬಂಧಿ ಚಿಕಿತ್ಸೆಯ ವೇಳೆ ವ್ಯಾಪಕವಾಗಿ ರಕ್ತ ಬೇಕಾಗುತ್ತದೆ.
 • ಆದರೆ, ಭಾರತವೂ ಸೇರಿದಂತೆ ಇಡೀ ವಿಶ್ವದಾದ್ಯಂತ ಬೇಡಿಕೆಗೆ ತಕ್ಕಂತೆ ರಕ್ತದ ಪೂರೈಕೆಯಿಲ್ಲ. ಹೀಗಾಗಿ ಬದುಕುವ ಎಲ್ಲ ಅವಕಾಶಗಳಿದ್ದರೂ ಎಷ್ಟೋ ಜೀವಗಳು ರಕ್ತದ ಕೊರತೆಯಿಂದಾಗಿ ಆಸ್ಪತ್ರೆಗಳಲ್ಲಿಅಸು ನೀಗಿವೆ.
 • ಉದ್ದೇಶಗಳು: ಈ ದಿನದ ಮೂಲಕ ರಕ್ತ ದಾನಿಗಳಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ. ಜತಗೆ, ಅಗತ್ಯವಿರುವ ರೋಗಿಗಳಿಗೆ ನಿರಂತರ ರಕ್ತದಾನ, ಅದರ ಸುರಕ್ಷತೆ ಮತ್ತು ಎಲ್ಲೆಡೆ ರಕ್ತ ಲಭ್ಯತೆ ಇರುವಂತೆ ನೋಡಿಕೊಳ್ಳವುದು. ರಕ್ತದಾನ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ದೇಶವಾಗಿದೆ.

ಈ ವರ್ಷದ ವಿಶೇಷತೆಗಳು

 • ಈ ವರ್ಷದ ದಿನಾಚರಣೆಯಲ್ಲಿ, ರಕ್ತದಾನದ ಮೂಲಕ ಮತ್ತೊಬ್ಬರಿಗೆ ಜೀವ ನೀಡಿದವರನ್ನು ಗುರುತಿಸುವುದು, ನಿಯಮಿತ ರಕ್ತದಾನಕ್ಕೆ ಪ್ರಚೋದಿಸುವುದು, ರಕ್ತದಾನಕ್ಕೆ ಮುಂದಾಗದ ಯುವಕರಿಗೆ ರಕ್ತದಾನದಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಅಂಶ ತಿಳಿಸಿ ಹೇಳುವುದು ಈ 2018ರ ದಿನಾಚರಣೆಯ ವಿಶೇಷತೆಗಳಾಗಿವೆ.

14ರಂದೇ ಯಾಕೆ ಆಚರಣೆ? 

 • ವಿಶ್ವ ಆರೋಗ್ಯ ಸಂಸ್ಥೆಯು ರಕ್ತದಾನ ಕುರಿತು ಜನರಲ್ಲಿಜಾಗೃತಿ ಮೂಡಿಸುವ ನಿಟ್ಟಿನಲ್ಲಿಪ್ರತಿ ವರ್ಷ ಜೂನ್‌ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ.
 • ಇದಲ್ಲದೆ, ಆಸ್ಟ್ರಿಯಾ ವೈದ್ಯ ಕಾರ್ಲ್ ಲ್ಯಾಂಡ್‌ಸ್ಟೇನರ್‌ ಅವರು ಮಾನವನ ರಕ್ತದ ಮೊದಲ ಮೂರು ಗ್ರೂಪ್‌ಗ್ಳನ್ನು ಸಂಶೋಧಿಸಿದರು. ಈ ಹಿನ್ನೆಲೆಯಲ್ಲೂ ಅವರ ಜನ್ಮದಿನವಾದ ಜೂನ್‌ 14 ಅನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.
 • ಭಾರತದಲ್ಲಿಅಕ್ಟೋಬರ್‌ 1ಅನ್ನು ಪ್ರತಿ ವರ್ಷ ರಾಷ್ಟ್ರೀಯ ರಕ್ತದಾನ ದಿನವನ್ನಾಗಿ ಆಚರಿಸಲಾಗುತ್ತದೆ.

ರಕ್ತದಾನದ ಉಪಯೋಗಗಳು 

 • ದಾನಿಗಳು ಒಮ್ಮೆ ರಕ್ತ ದಾನ ಮಾಡಿದರೆ ಮುಂದಿನ ಮೂರು ತಿಂಗಳವರೆಗೆ ದಾನ ಮಾಡಬಾರದು.
 • ರಕ್ತದಾನ ಮಾಡುವುದರಿಂದ ದೇಹದಲ್ಲಿಹೊಸ ರಕ್ತ ಉತ್ಪತ್ತಿ ಆಗುತ್ತದೆ. ಅಲ್ಲದೆ ಉತ್ತಮ ಆರೋಗ್ಯ ಹೊಂದಬಹುದು.
 • ಇದರಿಂದ ದಾನಿಯ ಕಾರ್ಯತತ್ಪರತೆ ಹಾಗೂ ಜ್ಞಾಪಕಶಕ್ತಿ ಹೆಚ್ಚುತ್ತದೆ.
 • ದೇಹದಲ್ಲಿಕೊಬ್ಬಿನ ಅಂಶ ಕಡಿಮೆ ಮಾಡುವ ಮೂಲಕ ಹೃದಯಾಘಾತ ಆಗುವುದನ್ನು ಶೇ.80ರಷ್ಟು ಕಡಿಮೆ ಮಾಡುತ್ತದೆ.
 • ರಕ್ತದ ಒತ್ತಡ, ಮಧುಮೇಹದಂತಹ ರೋಗಗಳನ್ನು ತಡೆಯಲು ಕೂಡ ರಕ್ತದಾನ ಸಹಕಾರಿ.
 • 48 ಗಂಟೆಗಳಲ್ಲಿಅಷ್ಟೇ ಪ್ರಮಾಣದ ರಕ್ತ ಉತ್ಪತ್ತಿಯಾಗುತ್ತದೆ ಹಾಗೂ ಒಂದೆಡರು ವಾರಗಳಲ್ಲಿರಕ್ತದಲ್ಲಿನ ಎಲ್ಲ ಅಗತ್ಯ ಅಂಶಗಳು ಸೇರ್ಪಡೆಯಾಗುತ್ತವೆ.

ರಕ್ತ ಮತ್ತು ಅದರ ಬಗ್ಗೆ 

 • ನಮ್ಮ ದೇಹದ ನಾಳಗಳಲ್ಲಿಹರಿಯುವ ಕೆಂಪು ರೂಪದ ದ್ರವ ಪದಾರ್ಥ ಇದು.
 • ರಕ್ತವು ನಮ್ಮ ದೇಹದ ಸಂಪರ್ಕ ಸಾಧನದ ರೀತಿ ಕೆಲಸ ಮಾಡುತ್ತದೆ.
 •  ರಕ್ತದ ಮೂಲಕ ಆಮ್ಲಜನಕ ಎಲ್ಲ ಭಾಗಗಳಿಗೂ ಪೂರೈಕೆಯಾಗುತ್ತದೆ.
 • ಅಷ್ಟೇ ಅಲ್ಲದೆ, ದೇಹಕ್ಕೆ ಯಾವುದೇ ರೀತಿಯ ಸೋಂಕು ತಟ್ಟದ ರೀತಿಯಲ್ಲಿನಿರೋಧಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.
 • ದೇಹದ ತೂಕದಲ್ಲಿರಕ್ತದ ಪ್ರಮಾಣ ಶೇ.7ರಷ್ಟಿರುತ್ತದೆ.
 • ರಕ್ತದಲ್ಲಿನಾಲ್ಕು ಘಟಕಗಳಿರುತ್ತವೆ. ಅವು: ಕೆಂಪು ರಕ್ತ ಕಣ, ಪ್ಲೆಟ್‌ಲೆಟ್ಸ್‌, ಪ್ಲಾಸ್ಮಾ ಮತ್ತು ಕ್ರಯೋಪ್ರೆಸಿಪಿಟೆಟ್‌.
 • ದಾನಿಗಳು ಇಡೀ ರಕ್ತವನ್ನು ದಾನ ಮಾಡಬಹುದು. ಇಲ್ಲವೇ, ರಕ್ತದ ಯಾವುದಾದರೂ ಘಟಕಗಳನ್ನು ಕೂಡ ನೀಡಬಹುದು.
 • ಪ್ಲೇಟ್‌ಲೆಟ್ಸ್‌ಗಳನ್ನು ಪಡೆದ ಐದು ದಿನಗಳೊಳಗೆ ಬಳಕೆ ಮಾಡಿಕೊಳ್ಳಬೇಕು.
 • ಆರೋಗ್ಯವಂಥ ಎಲುಬಗಳ ಅಸ್ಥಿಮಜ್ಜೆಯಿಂದ ರಕ್ತದ ಕಣಗಳು ಉತ್ಪಾದನೆಯಾಗುತ್ತವೆ.
 •  ನಾಲ್ಕು ಮುಖ್ಯ ರಕ್ತದ ಗುಂಪು: ಎ, ಬಿ, ಎಬಿ ಮತ್ತು ಒ
 •  ದಾನವಾಗಿ ಪಡೆದ ರಕ್ತದ ಬಾಳಿಕೆ ಅವಧಿ 35ರಿಂದ 42 ದಿನ

ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ

 • ಸುದ್ದಿಯಲ್ಲಿ ಏಕಿದೆ? ವಿಶ್ವದ ಅತಿದೊಡ್ಡ ದೇಶ ರಷ್ಯಾದಲ್ಲಿ ಫುಟ್​ಬಾಲ್ ಉತ್ಸವ. ಚೊಚ್ಚಲ ಬಾರಿಗೆ ಫಿಫಾ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿಕೊಂಡಿರುವ ರಷ್ಯಾ ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲು ಸಜ್ಜಾಗಿದೆ.
 • 32 ತಂಡಗಳ ಹಣಾಹಣಿ: 32 ದೇಶಗಳ ತಂಡಗಳು ತಮ್ಮ ಪರಾಕ್ರಮವನ್ನು ಇಲ್ಲಿ ಒರೆಗೆ ಹಚ್ಚಲಿವೆ. ಹೋದ ಬಾರಿಯ ಚಾಂಪಿಯನ್ ಜರ್ಮನಿ ಪ್ರಶಸ್ತಿಯನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಹೋರಾಟಕ್ಕಿಳಿಯಲಿದೆ. ಆತಿಥೇಯ ತಂಡ ರಷ್ಯಾ ಕೂಡ ಹೆಜ್ಜೆಗುರುತು ಮೂಡಿಸಲು ಹಾತೋರೆಯುತ್ತಿದೆ.
 • ಒಟ್ಟು ಏಳು ಬಾರಿ ಫೈನಲ್ ಪ್ರವೇಶಿಸಿದ ಮತ್ತು ಐದು ಬಾರಿಯ ಚಾಂಪಿಯನ್‌ ಬ್ರೆಜಿಲ್‌, ಎಂಟು ಬಾರಿ ಫೈನಲ್‌ನಲ್ಲಿ ಆಡಿ ನಾಲ್ಕು ಸಲ ಪ್ರಶಸ್ತಿಗೆ ಮುತ್ತಿಕ್ಕಿದ ಜರ್ಮನಿ, ತಲಾ ಎರಡು ಬಾರಿ ಚಾಂಪಿಯನ್ ಆದ ಅರ್ಜೆಂಟೀನಾ ಮತ್ತು ಉರುಗ್ವೆ ತಂಡಗಳ ಜೊತೆ ಒಂದೊಂದು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಫ್ರಾನ್ಸ್, ಇಂಗ್ಲೆಂಡ್ ಮತ್ತು ಸ್ಪೇನ್ ತಂಡಗಳು ಈ ಬಾರಿಯೂ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿವೆ.
 • ನಾಲ್ಕು ಪ್ರಶಸ್ತಿ ಗೆದ್ದು ಎರಡು ಬಾರಿ ರನ್ನರ್ ಅಪ್‌ ಆಗಿದ್ದ ಇಟಲಿ ಈ ಬಾರಿ ಟೂರ್ನಿಯಲ್ಲಿ ಆಡಲು ಅರ್ಹತೆ ಗಳಿಸಿಲ್ಲ.

ಫಿಫಾ ವಿಶ್ವಕಪ್‌ ಟ್ರೋಫಿಯ ವಿಶೇಷತೆಗಳು

 • 1974ರ ವಿಶ್ವಕಪ್‌ ಗೆದ್ದ ತಂಡಕ್ಕೆ ಮೊದಲ ಬಾರಿಗೆ ಈ ಟ್ರೋಫಿಯನ್ನು ನೀಡಲಾಯಿತು. ಇಟಲಿಯ ಕಲಾವಿದ ಸಿಲ್ವಿಯೊ ಗಜ್ಜಾನಿಗಾ ಅವರು ಈ ಟ್ರೋಫಿಯನ್ನು ವಿನ್ಯಾಸ ಮಾಡಿದ್ದಾರೆ.
 • ಇಟಲಿಯ ಜಿಡಿಇ ಬರ್ಟೊನಿ ಕಂಪನಿಯು 18 ಕ್ಯಾರಟ್‌ ಚಿನ್ನದಿಂದ ಇದನ್ನು ತಯಾರಿಸಿದೆ. ಇಬ್ಬರು ಭೂಮಿಯನ್ನು ಎತ್ತಿಹಿಡಿದಿರುವಂತೆ ಈ ಟ್ರೋಫಿಯ ವಿನ್ಯಾಸವಿದೆ.
 • ವಿಶ್ವಕಪ್‌ ಗೆದ್ದ ರಾಷ್ಟ್ರಗಳ ಹೆಸರನ್ನು ಈ ಟ್ರೋಫಿಯ ಕೆಳಗೆ ನಮೂದಿಸಲಾಗುತ್ತದೆ.

ಜಬಾವಿಕ ಎಂದರೆ ಗೋಲು ಗಳಿಸುವವ

 • ರಷ್ಯಾದಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್‌ನ ಅಧಿಕೃತ ಲಾಂಛನದ ಹೆಸರು ‘ಜಬಾವಿಕ’. ರಷ್ಯನ್ ಭಾಷೆಯಲ್ಲಿ ಜಬಾವಿಕ ಎಂದರೆ ‘ಗೋಲು ಗಳಿಸುವವ’.
 • ಅಧಿಕೃತ ಲಾಂಛನವನ್ನು ಆಯ್ಕೆ ಮಾಡಲು ಜನರಿಗೆ ಮತ ಹಾಕಲು ಕೇಳಲಾಗಿತ್ತು. ಜಬಾವಿಕ ಹೆಸರಿನ ತೋಳದ ಆಕೃತಿಯ ಪರವಾಗಿ ಫಿಫಾದ ಅಧಿಕೃತ ವೆಬ್‌ಸೈಟ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ರಷಿಯನ್ನರು ಮತ ಚಲಾಯಿಸಿದ್ದರು.
 • ಈ ಲಾಂಛನವು ಟೂರ್ನಿಗೆ ಉತ್ತೇಜನ ನೀಡುವುದಷ್ಟೇ ಅಲ್ಲದೇ, ಫುಟ್‌ಬಾಲ್‌ ಕ್ರೀಡೆಗೆ ಸಂಬಂಧಿಸಿದಂತೆ ರಷ್ಯಾದ ರಾಯಭಾರಿಯಾಗಿಯೂ ಕೆಲಸ ಮಾಡುತ್ತದೆ.
Related Posts
Karnataka Current Affairs – KAS / KPSC Exams – 24th June 2017
Forest dept to take up seed ball dispersal in big afforestation drive The Forest department has decided to rope in citizens in a big way in afforestation to take up seed ...
READ MORE
Four new farm pests found in Karnataka
Four new plant-eating insects that may turn out to be a potential threat to agriculture in several states have been found in Karnataka. These pests, reported for the first time in ...
READ MORE
Belagavi administration to encourage use of mud idols The district administration will initiate strict measures to discourage the use of Ganesh idols made from Plaster of Paris. Instead, it will encourage ...
READ MORE
Karanth’s house being restored
  Restoration of the 80-year-old house in which Jnanpith Award winner K. Shivaram Karanth spent most of his life has begun at Balavana in Puttur, 90 km from Mangaluru. The work is ...
READ MORE
Oxycontin pills. oxycodone hydrochloride. prescription only pain medication. (Photo by Lawrence K. Ho/Los Angeles Times via Getty Images)
In order to ensure that there is no shortage of drugs in State-run health centres and that procurement is directly proportionate to requirement, the Department of Health and Family Welfare ...
READ MORE
National Current Affairs – UPSC/KAS Exams- 27th July 2018
Changing  the name of the State Why in news? The West Bengal Assembly passed a resolution to change the name of the State as ‘Bangla’ in three languages — Bengali, English and ...
READ MORE
2005ರ ಅಕ್ಟೋಬರ್ 12ರಂದು ಜಾರಿ ಜನಸಾಮಾನ್ಯರೂ ಆಡಳಿತ ವ್ಯವಸ್ಥೆಯ ಮಾಹಿತಿ ಪಡೆಯಲು ಅನುವಾಗುವ ಮಾಹಿತಿ ಹಕ್ಕು ಕಾಯ್ದೆ. ಮಾಹಿತಿ ಹಕ್ಕು ಕಾಯ್ದೆ ಎಂದರೇನು? ನಾಗರಿಕರು ಮಾಹಿತಿ ಬಯಸಿ ಸಲ್ಲಿಸಿದ ಅರ್ಜಿಯನ್ನು ಪರೀಕ್ಷಿಸಿ, ಅದಕ್ಕೆ ಸಂಬಂಧಪಟ್ಟ ಸೂಕ್ತ ಮಾಹಿತಿಯನ್ನು ನಿಗದಿತ ಅವಧಿಯೊಳಗೆ ನೀಡುವುದು; ಆ ಮೂಲಕ ಆಡಳಿತ ವ್ಯವಹಾರದಲ್ಲಿ ...
READ MORE
OLYMPUS DIGITAL CAMERA
Chief Minister Siddaramaiah on Thursday urged Union Finance Minister Arun Jaitley to grant Rs 500 crore for organising the Mahamasthakabhisheka at Shravanabelagola in Hassan district in February next year. The state ...
READ MORE
Karnataka Current Affairs – KAS/KPSC Exams – 2nd Oct 2017
Green nod to Karnataka's Rs 1,561-cr Harohalli industrial park The Centre has given its green light to the combined development of Harohalli industrial zone in Ramnagara district of Karnataka entailing an ...
READ MORE
Karnataka Current Affairs – KAS/KPSC Exams – 3rd March 2018
Sudhir Saraf elected as new mayor for Hubballi Sudhir Saraf and Menaka Hurali of the BJP have been elected the mayor and deputy mayor of Hubballi-Dharwad City Corporation. In the elections held ...
READ MORE
Karnataka Current Affairs – KAS / KPSC Exams
Four new farm pests found in Karnataka
Karnataka Current Affairs – KAS/KPSC Exams- 21st August
Karanth’s house being restored
New Software to Track Supply – Demand of
National Current Affairs – UPSC/KAS Exams- 27th July
ಮಾಹಿತಿ ಹಕ್ಕು ಕಾಯ್ದೆ(ಆರ್​ಟಿಐ)
CM seeks Rs 500 crore from Centre for
Karnataka Current Affairs – KAS/KPSC Exams – 2nd
Karnataka Current Affairs – KAS/KPSC Exams – 3rd