“15 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ದೇಶದ ಮೊದಲ ರೈಲ್ವೆ ವಿವಿ 

1.

ಸುದ್ಧಿಯಲ್ಲಿ ಏಕಿದೆ ?ಗುಜರಾತ್​ನ ವಡೋದರಾದಲ್ಲಿ ಸ್ಥಾಪಿತವಾಗಿರುವ ‘ದಿ ನ್ಯಾಷನಲ್ ರೈಲ್ ಆಂಡ್ ಟ್ರಾನ್ಸ್ ಪೋರ್ಟೆಷನ್ ಇನ್​ಸ್ಟಿಟ್ಯೂಟ್ (ಎನ್​ಆರ್​ಟಿಐ)’ಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ಗುಜರಾತ್ ಸಿಎಂ ವಿಜಯ್ ರೂಪಾಣಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

 • ರೈಲ್ವೆ ಇಲಾಖೆಯೇ ಆರಂಭಿಸಿರುವ ದೇಶದ ಮೊದಲ ಮತ್ತು ಜಾಗತಿಕ ಮಟ್ಟದಲ್ಲಿ ಮೂರನೇ ವಿಶ್ವವಿದ್ಯಾಲಯ ಇದಾಗಿದೆ.
 • ರಷ್ಯಾ ಮತ್ತು ಚೀನಾಗಳಲ್ಲಿ ಇಂತಹ ವಿಶ್ವವಿದ್ಯಾಲಯವಿದೆ.

ಯಾವ ಕೋರ್ಸ್?

 • ಎನ್​ಆರ್​ಟಿಐನಲ್ಲಿ ಬಿಎಸ್ಸಿ (ಟ್ರಾನ್ಸ್ ಪೋರ್ಟೆಷನ್ ಟೆಕ್ನಾಲಜಿ), ಬಿಬಿಎ (ಟ್ರಾನ್ಸ್​ಪೋರ್ಟೆಷನ್ ಮ್ಯಾನೇಜ್​ವೆುಂಟ್) ಕೋರ್ಸ್​ಗಳು ಕಳೆದ ಸೆಪ್ಟೆಂಬರ್​ನಿಂದಲೇ ಆರಂಭವಾಗಿವೆ.
 • ಮೊದಲ ತಂಡದಲ್ಲಿ 103 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು ಕೊಂಡಿದ್ದಾರೆ. ಬಿಎಸ್ಸಿ ಕೋರ್ಸ್​ಗೆ 62 ಮತ್ತು ಬಿಬಿಎಗೆ 41 ಮಂದಿ ಸೇರಿದ್ದಾರೆ. 20 ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಜ್ಞಾನಪೀಠ ಪುರಸ್ಕಾರ

2.

ಸುದ್ಧಿಯಲ್ಲಿ ಏಕಿದೆ ?ಇಂಗ್ಲಿಷ್‌ ಭಾಷೆಯ ಖ್ಯಾತ ಕಾದಂಬರಿಕಾರ, ಪದ್ಮಶ್ರೀ ಪುರಸ್ಕೃತ ಅಮಿತಾವ್ ಘೋಷ್ ಈ ಬಾರಿಯ ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

 • ಸಾಹಿತ್ಯಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಯನ್ನು ಪರಿಗಣಿಸಿದ ಜ್ಞಾನಪೀಠ ಪ್ರಶಸ್ತಿ ಸಮಿತಿ, ಶುಕ್ರವಾರ ಅವಿರೋಧವಾಗಿ 62 ವರ್ಷದ ಲೇಖಕ ಘೋಷ್ ಅವರನ್ನು 54ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಿದೆ.
 • ದಿ ಶಾಡೋ ಲೈನ್ಸ್​, ದಿ ಗ್ಲಾಸ್​ ಪ್ಯಾಲೇಸ್​, ದಿ ಹಂಗ್ರಿ ಟೈಡ್​, ದಿ ಸರ್ಕಲ್ ಆಫ್ ರೀಸನ್, ದಿ ಕಲ್ಕತ್ತಾ ಕ್ರೋಮೋಸೋಮ್, ಫ್ಲಡ್​ ಅಂಡ್​ ಫೈರ್​, ರಿವರ್ ಆಫ್ ಸ್ಮೋಕ್ ಮುಂತಾದ ಖ್ಯಾತ ಕಾದಂಬರಿಗಳನ್ನು ಅಮಿತಾವ್ ಘೋಷ್ ರಚಿಸಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಬಗ್ಗೆ

 • ಜ್ಞಾನಪೀಠ ಪ್ರಶಸ್ತಿಯನ್ನು 1961 ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿಯ ಮೂಲಕ, ಭಾರತೀಯ ಜ್ಞಾನಪೀಠ ಪ್ರಶಸ್ತಿಯನ್ನು ಭಾರತದ ಸಂವಿಧಾನದ ಶೆಡ್ಯೂಲ್  ಎಂಟರಲ್ಲಿ  ಉಲ್ಲೇಖಿಸಿರುವ 22 ಭಾರತೀಯ ಭಾಷೆಗಳ ಪಟ್ಟಿಯಲ್ಲಿ ಬರೆಯುವ ಭಾರತೀಯ ಸಾಹಿತಿಗಳನ್ನು ಆಯ್ಕೆ  ಮಾಡಲಾಗುತ್ತದೆ .
 • ವಿಜೇತರು ದೇವತೆ ಸರಸ್ವತಿಯ ಕಂಚಿನ ಪ್ರತಿಕೃತಿಯನ್ನು ,ನಗದು ಬಹುಮಾನ, ಮತ್ತು ಒಂದು ಉಲ್ಲೇಖ   ಪಡೆಯುತ್ತಾರೆ. ಪ್ರಖ್ಯಾತ ಮಲಯಾಳಂ  ಬರಹಗಾರ ಜಿ.ಎಸ್.ಕುರುಪ್ ಜ್ಞಾನಪೀಠ ಪ್ರಶಸ್ತಿಯ ಮೊದಲ ವಿಜೇತರಾಗಿದ್ದರು.

ನೇಪಾಳದಲ್ಲಿ ಭಾರತದ ನೋಟುಗಳನಿಷೇಧ

3.

ಸುದ್ಧಿಯಲ್ಲಿ ಏಕಿದೆ ?ನೇಪಾಳ ಸರ್ಕಾರ ಭಾರತದ 2 ಸಾವಿರ ರೂ., 500 ರೂ., ಮತ್ತು 200 ರೂ. ನೋಟುಗಳ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

 • 100 ರೂ. ಮುಖಬೆಲೆಯ ನೋಟುಗಳಿಗೆ ಮಾತ್ರವೇ ಮಾನ್ಯತೆ ನೀಡಲು ನಿರ್ಧರಿಸಲಾಗಿದೆ.

ಅನಾನುಕೂಲಗಳು

 • ಇದರಿಂದ ನೇಪಾಳಕ್ಕೆ ಪ್ರವಾಸಕ್ಕೆ ತೆರಳುವ ಬಹುತೇಕ ಭಾರತೀಯರಿಗೆ ತೀವ್ರ ಅನನುಕೂಲವಾಗಲಿದೆ.
 • ಭಾರತದಲ್ಲಿ ದಿನಗೂಲಿ ಅಥವಾ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನೇಪಾಳ ಮೂಲದ ಕಾರ್ವಿುಕರಿಗೂ ಈ ಕ್ರಮದಿಂದ ತುಂಬಾ ತೊಂದರೆಯಾಗಲಿದೆ.
 • ಬಹುತೇಕ ಕಾರ್ವಿುಕರು ಪಡೆಯುವ ಸಂಬಳ 10 ರಿಂದ 20 ಸಾವಿರ ರೂ. ಒಳಗೆ ಇರುತ್ತದೆ. ಇಂಥವರು ನೇಪಾಳದಲ್ಲಿರುವ ಕುಟುಂಬಕ್ಕೆ ಸಂಬಂಧಿಕರ ಮೂಲಕ ಅಥವಾ ಇತರ ಪರಿಚಿತರ ಮೂಲಕ ಆದಾಯದ ಸ್ವಲ್ಪ ಭಾಗವನ್ನು ಕಳುಹಿಸುತ್ತಿದ್ದರು.

ಯಾಕೆ ಈ ಕ್ರಮ?

 • ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ನೇಪಾಳ ಸರ್ಕಾರ ‘ನೇಪಾಳಕ್ಕೆ ಭೇಟಿ ನೀಡಿ ವರ್ಷ-2020’ ಎಂಬ ಬೃಹತ್ ಕಾರ್ಯಕ್ರಮ ರೂಪಿಸಿದೆ. ಇದಕ್ಕಾಗಿ ಭಾರತ ದಿಂದ ಕನಿಷ್ಠ 20 ಲಕ್ಷ ಜನರು ತೆರಳುವ ನಿರೀಕ್ಷೆಯಿದೆ. ಅಧಿಕ ಮೊತ್ತದ ಭಾರತೀಯ ನಗದು ನಿಷೇಧದಿಂದ ಸ್ಥಳೀಯ ನಗದು ‘ನೇಪಾಳೀಸ್ ರೂಪಾಯಿ’ ಬಳಸುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇದರಿಂದ ಸ್ಥಳೀಯ ನಗದು ಚೇತರಿಸಿಕೊಳ್ಳುತ್ತದೆ. ಜತೆಗೆ ಭಾರತದ ನಗದು ನಕಲಿ ರೂಪದಲ್ಲಿ ಚಲಾವಣೆಯಾಗುವುದಕ್ಕೂ ನಿರ್ಬಂಧ ಹಾಕಬಹುದು ಎಂದು ನೇಪಾಳ ಸರ್ಕಾರ ಚಿಂತಿಸಿದೆ.

ನೇಪಾಳಿ ರೂಪಾಯಿ

 • ನೇಪಾಳದ ರೂಪಾಯಿ ಫೆಡರಲ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ನೇಪಾಳದ ಅಧಿಕೃತ ಕರೆನ್ಸಿಯಾಗಿದೆ. ನೇಪಾಳಿ ರೂಪಾಯಿ 100 ಪೈಸಾಗಳಾಗಿ ಉಪವಿಭಾಗವಾಗಿದೆ.
 • ಕರೆನ್ಸಿಗಳ ವಿತರಣೆಯನ್ನು ನೇಪಾಳದ ಕೇಂದ್ರ ಬ್ಯಾಂಕ್ ನೇಪಾಳ ರಾಷ್ಟ್ರ  ಬ್ಯಾಂಕ್ ನಿಯಂತ್ರಿಸುತ್ತದೆ. ನೇಪಾಳದ ಮೊಹಾರ್ಗೆ ದರ 2: 1 ರ ಬದಲಾಗಿ ನೇಪಾಳ ರೂಪಾಯಿ 1932 ರಲ್ಲಿ ಪರಿಚಯಿಸಲ್ಪಟ್ಟಿತು.

ಐರ್ಲೆಂಡ್‌: ಗರ್ಭಪಾತ ಕಾನೂನುಬದ್ಧ

4.

ಸುದ್ಧಿಯಲ್ಲಿ ಏಕಿದೆ ?ಕ್ರಿಶ್ಚಿಯನ್‌ ಕ್ಯಾಥೋಲಿಕ್‌ ಪಂಥದವರೇ ಹೆಚ್ಚಿರುವ ಐರ್ಲೆಂಡ್‌ ಇದೇ ಮೊದಲ ಬಾರಿಗೆ ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಮಹತ್ವದ ವಿಧೇಯಕವನ್ನು ಅಂಗೀಕರಿಸಿ, ಐತಿಹಾಸಿಕ ಸುಧಾರಣೆಗೆ ಸಾಕ್ಷಿಯಾಗಿದೆ.

ಹಿನ್ನಲೆ

 • ಗರ್ಭಪಾತಕ್ಕೆ ನಿರಾಕರಿಸಿದ್ದರಿಂದ ಮೃತಪಟ್ಟ ಕರ್ನಾಟಕ ಮೂಲದ ದಂತ ವೈದ್ಯೆ ಸವಿತಾ ಹಾಲಪ್ಪನವರ್‌ ಸಾವಿನ ಪ್ರಕರಣದ ಬೆನ್ನಲ್ಲೇ ಶುರುವಾದ ಜನಾಂದೋಲನ ಸರಕಾರ ಈ ಸುಧಾರಣೆ ಕೈಗೊಳ್ಳುವಂತೆ ಮಾಡಿದೆ.
 • ಕ್ಯಾಥೋಲಿಕ್‌ ಪಂಥದವರಿಗೆ ಗರ್ಭಪಾತ ಒಂದು ಮಹಾಪಾಪ. ಈ ಹಿನ್ನೆಲೆಯಲ್ಲಿ ಐರ್ಲೆಂಡ್‌ನಲ್ಲಿ ಗರ್ಭಪಾತಕ್ಕೆ ನಿಷೇಧವಿತ್ತು.
 • 2012ರಲ್ಲಿ 31 ವರ್ಷದ ದಂತ ವೈದ್ಯೆ, ಗರ್ಭಿಣಿ ಸವಿತಾ ಹಾಲಪ್ಪನವರ್‌ ತಮಗೆ ಚಿಕಿತ್ಸೆ ನೀಡುತ್ತಿದ್ದ ಗಾಲ್ವೆ ಆಸ್ಪತ್ರೆಯ ವೈದ್ಯರಲ್ಲಿ ಗರ್ಭಪಾತ ಮಾಡಿ ತಮ್ಮ ಜೀವ ಉಳಿಸುವಂತೆ ಮನವಿ ಮಾಡಿಕೊಂಡಿದ್ದರು. ತಾಯಿಯ ಜೀವಕ್ಕೆ ಅಪಾಯವಿದ್ದರೂ ನಿಷೇಧದ ಕಾರಣದಿಂದ ವೈದ್ಯರು ಗರ್ಭಪಾತ ಮಾಡಲೊಪ್ಪಲಿಲ್ಲ. ಪರಿಣಾಮ ರಕ್ತದಲ್ಲಿ ವಿಷ ಸೇರಿಕೊಂಡು ಅವರು ಮೃತಪಟ್ಟರು.
 • ಈ ಘಟನೆಯ ಬಳಿಕ ಐರ್ಲೆಂಡ್‌ನಲ್ಲಿ ಗರ್ಭಪಾತ ಕಾನೂನುಬದ್ಧ ಗೊಳಿಸಬೇಕೆಂಬ ಆಗ್ರಹ ತೀವ್ರಗೊಂಡು ಪ್ರತಿಭಟನೆ ಜನಾಂದೋಲನದ ರೂಪ ಪಡೆಯಿತು. ಅದರ ಪರಿಣಾಮ ಈಗ ಐರ್ಲೆಂಡ್‌ ಸಂಸತ್ತು ಗರ್ಭಪಾತಕ್ಕೆ ಅವಕಾಶ ಒದಗಿಸುವ ದಿ ರೆಗ್ಯೂಲೇಷನ್‌ ಆಫ್‌ ಟರ್ಮಿನೇಷನ್‌ ಆಫ್‌ ಪ್ರೆಗ್ನೆನ್ಸಿ ವಿಧೇಯಕವನ್ನು ಅಂಗೀಕರಿಸಿದೆ.

ವಿಧೇಯಕದಲ್ಲಿ ಏನಿದೆ?

 • ದಿ ರೆಗ್ಯೂಲೇಷನ್‌ ಆಫ್‌ ಟರ್ಮಿನೇಷನ್‌ ಆಫ್‌ ಪ್ರೆಗ್ನೆನ್ಸಿಬಿಲ್‌ನಲ್ಲಿ 12ನೇ ವಾರದವರೆಗಿನ ಗರ್ಭಿಣಿಯರಿಗೆ ಪ್ರತಿಕೂಲ ಸನ್ನಿವೇಶದಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
 • ಬೆಳವಣಿಗೆ ಕುಂಠಿತಗೊಂಡ ಭ್ರೂಣ ಅಥವಾ ತಾಯಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಂದರ್ಭಗಳಲ್ಲಿ ಗರ್ಭಪಾತ ಮಾಡಬಹುದಾಗಿದೆ.
Related Posts
“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಲಮನ್ನಾ ಮೊತ್ತ ತೀರಿಸಿ ಸುದ್ಧಿಯಲ್ಲಿ ಏಕಿದೆ ?ರೈತರ ಕೃಷಿ ಸಾಲಮನ್ನಾ ಮಾಡುತ್ತಿರುವ ರಾಜ್ಯ ಸರ್ಕಾರಗಳು ನಿಗದಿತ ಅವಧಿಯಲ್ಲಿ ಬ್ಯಾಂಕ್​ಗಳಿಗೆ ಹಣ ಭರಿಸಬೇಕು ಎಂದು ನಬಾರ್ಡ್ ಸೂಚಿಸಿದೆ. ಉದ್ದೇಶ ರಾಜ್ಯ ಸರ್ಕಾರಗಳು ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡದೆ ಸಾಲಮನ್ನಾ ಮಾಡುತ್ತಿವೆ ಎಂಬ ಆರೋಪದ ಮಧ್ಯೆಯೇ ನಬಾರ್ಡ್ ಈ ...
READ MORE
“23 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದೇಸಿ ಬೋಫೋರ್ಸ್‌ ಫಿರಂಗಿ  ಸುದ್ಧಿಯಲ್ಲಿ ಏಕಿದೆ ?ದೇಸಿ ನಿರ್ಮಿತ ಮೊದಲ ಬೋಫೋರ್ಸ್‌ ಫಿರಂಗಿಗಳು ಇದೇ 26ರಂದು ಸೇನೆಗೆ ಸೇರ್ಪಡೆಯಾಗಲಿವೆ ಎಂದು ಸೇನಾ ಮೂಲಗಳು ಹೇಳಿವೆ. ಮೂಲ ಬೋಫೋರ್ಸ್‌ ಫಿರಂಗಿಯ ತಂತ್ರಜ್ಞಾನವನ್ನೇ ಉನ್ನತೀಕರಿಸಿ ಶೇಕಡ 81ರಷ್ಟು ದೇಸಿ ಉತ್ಪನ್ನ ಬಳಸಿ ಅಭಿವೃದ್ಧಿಪಡಿಸಿದ 155 ಎಂಎಂ/45 ...
READ MORE
“27 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏಪ್ರಿಲ್‌ಗೆ ಕರ್ನಾಟಕ ಪೂರ್ತಿ ಉಜ್ವಲ! ಸುದ್ಧಿಯಲ್ಲಿ ಏಕಿದೆ ? ರಾಜ್ಯದಲ್ಲಿ ವಿಸ್ತರಿತ ಪ್ರಧಾನಮಂತ್ರಿ ಉಜ್ವಲ ಯೋಜನೆ-2(ಇಪಿಎಂಯುವೈ) ಅಡಿ ಹೊಸದಾಗಿ ಐದು ಲಕ್ಷ ಬಡ ಕುಟುಂಬಗಳಿಗೆ ಅನಿಲ ಸಂಪರ್ಕ ಕಲ್ಪಿಸಲು ಭಾರತೀಯ ತೈಲ ನಿಗಮ ಮುಂದಾಗಿದೆ. 2019ರ ಜ.1ರಿಂದ ಉಜ್ವಲ-2ರ ಯೋಜನೆಗೆ ಚಾಲನೆ ಸಿಗಲಿದೆ. ಸದ್ಯ ...
READ MORE
“02 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಅಂಕ ನೀಡಿಕೆ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮತಗಟ್ಟೆಗಳಿಗೆ ತಮ್ಮ ಪೋಷಕರನ್ನು ಕರೆದುಕೊಂಡು ಹೋಗಿ ಮತದಾನ ಮಾಡಿಸಿದ ವಿದ್ಯಾರ್ಥಿಗಳಿಗೆ "ಶೈಕ್ಷಣಿಕ ಯೋಜನೆ (ಪ್ರಾಜೆಕ್ಟ್) ವಿಷಯಕ್ಕೆ ತಲಾ ಎರಡು ಹೆಚ್ಚುವರಿ ಅಂಕ ಹಾಗೂ ವಿಶೇಷ ಬಹುಮಾನಗಳನ್ನು ನೀಡಲು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ...
READ MORE
” 05 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಈರುಳ್ಳಿ-ಬೆಳ್ಳುಳ್ಳಿಗೆ ಪರ್ಯಾಯ ಪೌಷ್ಠಿಕಾಂಶ ಬಳಕೆ ಸುದ್ಧಿಯಲ್ಲಿ ಏಕಿದೆ ?ಶಾಲಾ ಮಕ್ಕಳಿಗೆ ಪೂರೈಸುವ ಬಿಸಿಯೂಟದಲ್ಲಿ ಈರುಳ್ಳಿ-ಬೆಳ್ಳುಳ್ಳಿಗೆ ಪರ್ಯಾಯವಾಗಿ ಪೌಷ್ಠಿಕಾಂಶವಿರುವ ಇತರ ತರಕಾರಿಗಳನ್ನು ಬಳಸುವ ಆಹಾರ ಗುಣಮಟ್ಟದ ಬಗ್ಗೆ ಇಸ್ಕಾನ್‌ ಸಂಸ್ಥೆಯ 'ಅಕ್ಷಯ ಪಾತ್ರೆ' ಪ್ರತಿಷ್ಠಾನ ದೃಢೀಕೃತ ಪ್ರಮಾಣ ಪತ್ರ ನೀಡಿದಲ್ಲಿ ಅದಕ್ಕೆ ಆಯೋಗದ ಅಭ್ಯಂತರವಿಲ್ಲ ...
READ MORE
“13 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ತರಕಾರಿ ಬೀಜಗಳ ಕಿಟ್‌ ವಿತರಣೆ ಸುದ್ಧಿಯಲ್ಲಿ ಏಕಿದೆ ?ರಾಜ್ಯಾದ್ಯಂತ ರೈತರಿಗೆ ತರಕಾರಿ ಬೆಳೆಯಲು ನಾನಾ ತರಕಾರಿ ಬೀಜಗಳಿಗೆ ಸಹಾಯಧನವಾಗಿ ಪ್ರತಿ ಎಕರೆಗೆ 2,000 ರೂ. ನೀಡುವ 'ತರಕಾರಿ ಬೀಜಗಳ ಕಿಟ್‌ ವಿತರಣೆ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಅಧಿಕೃತ ಚಾಲನೆ ನೀಡಿದೆ. ಪ್ರತಿ ಎಕರೆಯಲ್ಲಿ ತರಕಾರಿ ...
READ MORE
“16 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಸ್​ಟಿಪಿ ಕಡ್ಡಾಯ ನಿಯಮ ಸುದ್ಧಿಯಲ್ಲಿ ಏಕಿದೆ ? ನಗರದ ವಸತಿ ಸಮುಚ್ಚಯಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ (ಎಸ್​ಟಿಪಿ) ಘಟಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ನಿಯಮ ಕಗ್ಗಂಟಾಗಿಯೇ ಮುಂದುವರಿದಿದೆ. ಸಮಸ್ಯೆಗೆ ಕಾರಣ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಲ್ಲಿ ಜಲಮಂಡಳಿ ಸೇವೆ ಇಲ್ಲದಿರುವುದರಿಂದ ಆ ಪ್ರದೇಶಗಳಲ್ಲಿ ಎಸ್​ಟಿಪಿ ಕಡ್ಡಾಯದ ...
READ MORE
“10 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಾನಪದ ಅಕಾಡೆಮಿ ಪ್ರಶಸ್ತಿ ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಜಾನಪದ ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ರಾಜ್ಯದ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಲಾಗಿದ್ದು, ಡಿ. 27ರಂದು ಬೀದರ್​ನ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ...
READ MORE
“22 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೊಯ್ನಾದಿಂದ ಕುಡಿಯುವ ನೀರು ಸುದ್ಧಿಯಲ್ಲಿ ಏಕಿದೆ ?ಬರಗಾಲ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಗತ್ಯಕ್ಕಾಗಿ ತಕ್ಷ ಣ ಕೊಯ್ನಾ ಹಾಗೂ ಉಜ್ಜನಿ ಜಲಾಶಯದಿಂದ ನೀರು ಹರಿಸುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ನೆರೆಯ ಮಹಾರಾಷ್ಟ್ರ ಸಿಎಂಗೆ ...
READ MORE
04th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಸ್ವಚ್ಛ ಸರ್ವೆಕ್ಷಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಸುದ್ಧಿಯಲ್ಲಿ ಏಕಿದೆ?ಸ್ವಚ್ಛ ಸರ್ವೆಕ್ಷಣ ಅಭಿಯಾನದಲ್ಲಿ ಬೆಂಗಳೂರಿಗೆ ಉತ್ತಮ ಸ್ಥಾನ ದೊರಕಿಸಿಕೊಡಲು ಬಿಬಿಎಂಪಿ ಈ ಬಾರಿ ಹಲವು ಕ್ರಮ ಕೈಗೊಳ್ಳುತ್ತಿದೆ. ಪ್ರಮುಖವಾಗಿ ಅಭಿಯಾನದಲ್ಲಿ ಬೆಂಗಳೂರಿನ ಸ್ವಚ್ಛತೆ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಮಾಡಲು ಸಾಮಾಜಿಕ ಜಾಲತಾಣ, ಎಫ್​ಎಂ ...
READ MORE
“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“23 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“27 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“02 ಏಪ್ರಿಲ್ 2019 ರ ಕನ್ನಡ ಪ್ರಚಲಿತ
” 05 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“13 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“16 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“10 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“22 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
04th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು

Leave a Reply

Your email address will not be published. Required fields are marked *