“15 ಫೆಬ್ರವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಸಾಂಪ್ರದಾಯಿಕ ಕುಶಲತೆ ಸಂರಕ್ಷಣೆಗೆ ಬದ್ಧ

1.

ಸುದ್ಧಿಯಲ್ಲಿ ಏಕಿದೆ ? ರಾಜ್ಯದ ಸಾಂಪ್ರದಾಯಿಕ ಕುಶಲತೆಯನ್ನು ಸಂರಕ್ಷಿಸಲು ಭೌಗೋಳಿಕ ಗುರುತುಗಳ ನೀತಿ ಪೂರಕವಾಗಿ ಕಾರ್ಯನಿರ್ವಹಿಸಲಿದೆ.

 • ಎಫ್‌ಕೆಸಿಸಿ ಆಶ್ರಯದಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಮ್ಮಿಕೊಂಡಿದದ ಕರಡು ಭೌಗೋಳಿಕ ಗುರುತುಗಳ ನೀತಿ ಕುರಿತಾದ ಪಾಲುದಾರರ ಸಮಾವೇಶವನ್ನು ಉದ್ಘಾಟಿಸಿದರು.
 • 2018-19ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿರುವಂತೆ ಭೌಗೋಳಿಕ ಗುರುತುಗಳ ಕುರಿತು ಕರಡನ್ನು ತಯಾರಿಸಲಾಗಿದೆ.
 • ಇದರನ್ವಯ ಸರಕಾರ ರಾಜ್ಯದ ನಾನಾ ಭಾಗಗಳಲ್ಲಿ ಚಾಲ್ತಿಯಲ್ಲರುವ ನಾನಾ ಉತ್ಪನ್ನಗಳ ಸಾಂಪ್ರದಾಯಿಕತೆ ಹಾಗೂ ಸ್ಥಳೀಯ ಮಹತ್ವಕ್ಕೆ ಒತ್ತು ನೀಡಲಿದೆ.
 • ನೀತಿಗೆ ಸ್ಪಷ್ಟ ರೂಪ ನೀಡಿದ ಬಳಿಕ ಭೌಗೋಳಿಕ ಗುರುತಿಗೆ ಮೌಲ್ಯ ಸಿಗಲಿದೆ.
 • ಭೌಗೋಳಿಕ ಗುರುತುಗಳ ನೋಂದಣಿಯಲ್ಲಿ ಕರ್ನಾಟಕವು ಉತ್ತಮ ಸಾಧನೆ ಮಾಡಿದೆ.

326 ಉತ್ಪನ್ನಕ್ಕೆ ಭೌಗೋಳಿಕ ಗುರುತು ಪ್ರಾಪ್ತಿ

 • ದೇಶದಲ್ಲಿ ಈವರೆಗೆ 326 ಉತ್ಪನ್ನಗಳಿಗೆ ಭೌಗೋಳಿಕ ಮಾನ್ಯತೆ ದೊರೆತಿದೆ. ಈ ಪೈಕಿ ಕರ್ನಾಟಕ ಅತ್ಯಧಿಕ(41) ಸಂಖ್ಯೆಯಲ್ಲಿ ಉತ್ಪನ್ನಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಸಫಲವಾಗಿದೆ.

ಭಾರತದಲ್ಲಿ ಭೌಗೋಳಿಕ ಸೂಚನೆಗಳು

 • ಒಂದು ಭೌಗೋಳಿಕ ಸೂಚನೆಯನ್ನು ನಿರ್ದಿಷ್ಟ ಭೌಗೋಳಿಕ ಮೂಲವನ್ನು ಹೊಂದಿರುವ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ ಮತ್ತು ಆ ಮೂಲದಿಂದಾಗಿ ಗುಣಗಳು ಅಥವಾ ಖ್ಯಾತಿಯನ್ನು ಹೊಂದಿರುತ್ತವೆ.ಅಂತಹ ಹೆಸರು ಗುಣಮಟ್ಟ ಮತ್ತು ವಿಶಿಷ್ಟತೆಯ ಭರವಸೆಗಳನ್ನು ನೀಡುತ್ತದೆ.
 • ಈ ಟ್ಯಾಗ್ ಅನ್ನು 10 ವರ್ಷಗಳ ಅವಧಿಯವರೆಗೆ ಮಾನ್ಯವಾಗಿದೆ ಮತ್ತು , ಅದನ್ನು ನಂತರ ನವೀಕರಿಸಬಹುದಾಗಿದೆ.
 • ಇತ್ತೀಚೆಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಭಾರತ ಭೌಗೋಳಿಕ ಸೂಚನೆಗಳು (ಜಿಐ) ಗಾಗಿ ಲೋಗೊ ಮತ್ತು ಅಡಿಬರಹವನ್ನು ಬಿಡುಗಡೆಗೊಳಿಸಿದ್ದಾರೆ.
 • ಭಾರತದಲ್ಲಿ ಜಿಐ ಟ್ಯಾಗ್ ಅನ್ನು2004 ರಲ್ಲಿ ಪಡೆದ ಮೊದಲ ಉತ್ಪನ್ನವೆಂದರೆ ಡಾರ್ಜಿಲಿಂಗ್ ಚಹಾ .
 • ಗೂಡ್ಸ್ (ಜಿ.ಜಿ. ಆಕ್ಟ್) ಗೂಡ್ಸ್ ಭೌಗೋಳಿಕ ಸೂಚನೆಗಳು ಭಾರತದಲ್ಲಿ ಜಿಐ ರಕ್ಷಣೆಯ ಒಂದು ಸೂಯಿ ಜೆನೆರಿಸ್ ಆಕ್ಟ್ ಆಗಿದೆ.
 • ವಿಶ್ವ ವಾಣಿಜ್ಯ ಸಂಘಟನೆಯ (WTO) ಸದಸ್ಯರಾಗಿರುವ ಭಾರತ, ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳ ಒಪ್ಪಂದಕ್ಕೆ ಅನುಸಾರವಾಗಿ ಆಕ್ಟ್ ಅನ್ನು ಜಾರಿಗೊಳಿಸಿತು.
 • ಟ್ರಿಪ್ಸ್ ಒಪ್ಪಂದದ ಮೂಲಕ ಭೌಗೋಳಿಕ ಸೂಚನೆಗಳು ರಕ್ಷಣೆ ನೀಡಲಾಗುತ್ತದೆ.
 • ಇನ್ಕ್ರೆಡಿಬಲ್ ಇಂಡಿಯಾದ ಅಮೂಲ್ಯ ಖಜಾನೆಗಳು “ಜಿ ಐ ಯ ಟ್ಯಾಗ್ಲೈನ್ ​​ಆಗಿದೆ

ದಾಂಡೇಲಿ ಹಾರ್ನ್‌ಬಿಲ್‌ ಹಕ್ಕಿಗಳ ಹಬ್ಬ

2.

ಸುದ್ಧಿಯಲ್ಲಿ ಏಕಿದೆ ? ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪ್ರವಾಸೋದ್ಯಮ ನಗರವಾಗಿ ಬೆಳೆಯುತ್ತಿದೆ. ಅದರ ಭಾಗವಾಗಿ ಸಚಿವ ಆರ್‌.ವಿ.ದೇಶಪಾಂಡೆಯವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಯವರು ನಗರದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಹಾರ್ನಬಿಲ್‌ ಹಬ್ಬವನ್ನು ಆಚರಿಸಲು ಕಳೆದ ವರ್ಷದಿಂದ ಆರಂಭಿಸಿದ್ದಾರೆ.

ಹಾರ್ನ್ಬಿಲ್ ಬಗ್ಗೆ

 • ಹಾರ್ನಬಿಲ್‌ ಹಕ್ಕಿ ಪ್ಲ್ಯಾಗ್‌-ಶೀಪ್‌ ಪ್ರಭೇದಗಳಲ್ಲಿ ಒಂದು.
 • ಈ ಪ್ರಭೇದದ ಪಕ್ಷಿಗಳು ಪರಿಸರಕ್ಕೆ ಹಾಗೂ ಮಾನವನ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವದನ್ನು ತಡೆಗಟ್ಟುತ್ತವೆ.
 • ಈ ಹಕ್ಕಿಗಳು ವಿಷಕಾರಿಯಾದ ಕಾಸರಕಾ ಬೀಜವನ್ನು ತಿಂದು ಜೀರ್ಣಿಸಿಕೊಳ್ಳುತ್ತವೆ.
 • ಇವುಗಳ ಜೀವನ ಅತೀ ಸರಳ ಮತ್ತು ವಿಶೇಷ. ಹೆಣ್ಣು ಹಾರ್ನಬಿಲ್‌ ಮರಿ ಮಾಡುವ ಮುಂಚೆ ಮರದ ಪೊದರಿನಲ್ಲಿ ತನ್ನ ಮೈಮೇಲಿನ ಎಲ್ಲ ರೆಕ್ಕೆಪುಕ್ಕಗಳನ್ನು ಕಳಚಿ ಸಂತತಿಗೆ ಮುಂದಾಗುತ್ತದೆ.
 • ಈ ಸಂದರ್ಭದಲ್ಲಿ ಅದಕ್ಕೆ ಹಾಗೂ ಮರಿಗಳಿಗೆ ಆಹಾರವನ್ನು ಕುಟುಂಬದ ಗಂಡು ಹಾರ್ನಬಿಲ್‌ ಪೂರೈಸುತ್ತದೆ. ಗಂಡು ಹಾರ್ನಬಿಲ್‌ ಆಹಾರ ಅರಸುತ್ತ ಮೈಲಿಗಟ್ಟಲೆ ದೂರ ಹೋಗಿ ಬರುತ್ತದೆ.
 • ಗಂಡು ಹಾರ್ನಬಿಲ್‌ ಆಹಾರ ತಂದರೆ ಮಾತ್ರ ಗೂಡಿನಲ್ಲಿ ಇರುವ ತಾಯಿ ಹಾರ್ನಬಿಲ್‌ ಮತ್ತು ಮರಿಗಳಿಗೆ ಆಹಾರ. ಇಲ್ಲದೆ ಇದ್ದಲ್ಲಿ ಅವು ಆಹಾರವಿಲ್ಲದೆ ಜೀವ ಕಳೆದುಕೊಳ್ಳುವುದು ಖಚಿತ. ಹಾಗಾಗಿ ಹಕ್ಕಿ ತಜ್ಞರು ಹೇಳುವಂತೆ ಒಂದು ಹಾರ್ನಬಿಲ್‌ನ್ನು ಸಾಯಿಸಿದರೆ ಅದರ ಕುಟುಂಬವನ್ನೆ ಸಾಯಿಸಿದಂತಾಗುತ್ತದೆ.

ದಾಂಡೇಲಿ ಸಂರಕ್ಷಿತ ಪ್ರದೇಶ:

 • ದಾಂಡೇಲಿಯ ಅರಣ್ಯ ಪ್ರದೇಶದ ಭಾಗವನ್ನು ಹಾರ್ನಬಿಲ್‌ ಸಂರಕ್ಷಿತ ಪ್ರದೇಶ ಎಂದು ಕರೆಯಲಾಗುತ್ತದೆ.
 • ಅನ್ಶಿ ರಾಷ್ಟ್ರೀಯ ಉದ್ಯಾನವನದೊಂದಿಗೆ ಈ ಅಭಯಾರಣ್ಯವನ್ನು ಅನ್ಷಿ ದಂಡೇಲಿ ಟೈಗರ್ ರಿಸರ್ವ್ ಭಾಗವಾಗಿ 2006 ರಲ್ಲಿ ಘೋಷಿಸಲಾಯಿತು.
 • ಕರ್ನಾಟಕ ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಾಜೆಕ್ಟ್ ಎಲಿಫೆಂಟ್ ಅಡಿಯಲ್ಲಿ ದಾಂಡೇಲಿ ಎಲಿಫೆಂಟ್ ರಿಸರ್ವ್ ಅನ್ನು 4 ಜೂನ್ 2015 ರಂದು ಸೂಚಿಸಿದೆ.ಇದು ಮೈಸೂರು ಎಲಿಫೆಂಟ್ ರಿಸರ್ವ್ ನಂತರ ಕರ್ನಾಟಕದ ಎರಡನೇ ಆನೆ ಮೀಸಲುಪ್ರದೇಶವಾಗಿದೆ, ಇದನ್ನು 2002 ರಲ್ಲಿ ಘೋಷಿಸಲಾಯಿತು.
 • ದಾಂಡೇಲಿ ವನ್ಯಜೀವಿ ಧಾಮವು ಪಕ್ಷಿವೀಕ್ಷಕರ ಸ್ವರ್ಗವಾಗಿದೆ, ಇದು ಸುಮಾರು 200 ಪ್ರಭೇದಗಳ ಪಕ್ಷಿಗಳನ್ನು ಹೊಂದಿದೆ, ಇದು ಮಹಾನ್ ಹಾರ್ನ್ಬಿಲ್ ಮತ್ತು ಮಲಬಾರ್ ಪೀಡ್ ಹಾರ್ನ್ಬಿಲ್ಗೆ ಪ್ರಸಿದ್ಧವಾಗಿದೆ.
 • ತಪ್ಪಿಸಿಕೊಳ್ಳುವ ಕಪ್ಪು ಪ್ಯಾಂಥರ್ನ ಗೋಚರತೆ ಬಗ್ಗೆ ಆಗಾಗ್ಗೆ ವರದಿ ಮಾಡುವ  ಇದು ಭಾರತದಲ್ಲಿನ ಏಕೈಕ ಹುಲಿ ಮೀಸಲು ಪ್ರದೇಶವಾಗಿದೆ.  ಇಂಡಿಯನ್ ಪಂಗೋಲಿನ್, ದೈತ್ಯ ಮಲಬಾರ್ ಅಳಿಲು, ಧೋಲ್, ಭಾರತೀಯ ನರಿ ಮತ್ತು ಮಂಟ್ಜಾಕ್ (ಬಾರ್ಕಿಂಗ್ ಜಿಂಕೆ) ಗಳನ್ನು ಕೂಡಾ ಇಲ್ಲಿ ಕಂಡುಬರುತ್ತವೆ .

ಏರೋ ಇಂಡಿಯಾ ಪ್ರದರ್ಶನದಲ್ಲಿ ಎಚ್‌ಎಎಲ್‌ ಮುಂಚೂಣಿ

3.

ಸುದ್ಧಿಯಲ್ಲಿ ಏಕಿದೆ ? ಏರೋ ಇಂಡಿಯಾ-2019 ಆಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸುವ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಎಂದಿನಂತೆ ಈ ವರ್ಷವೂ ಮಿಲಿಟರಿ ಮತ್ತು ವೈಮಾನಿಕ ಕ್ಷೇತ್ರಗಳ ಉತ್ಪನ್ನಗಳ ಪ್ರದರ್ಶನದಲ್ಲಿ ಮುಂಚೂಣಿಯಲ್ಲಿರಲಿದೆ.

 • ದೇಶಿಯವಾಗಿ ನಿರ್ಮಾಣವಾಗಿರುವ ಎಲ್‌ಸಿಎ ತೇಜಸ್‌, ಲಘು ತರಬೇತಿ ವಿಮಾನ ಎಚ್‌ಟಿಟಿ-40, ದೇಶಿಯವಾಗಿ ಮೇಲ್ದರ್ಜೆಗೆ ಏರಿಸಲ್ಪಟ್ಟಿರುವ ಮೊದಲ ಹಾಕ್‌ ಎಂಕೆ132 ವಿಮಾನ (ಹಾಕ್‌-ಐ), ನಾಗರೀಕ ವಿಮಾನ ಸರಣಿಯ ಡಾರ್ನಿಯರ್‌ 228, ಸುಧಾರಿತ ಲಘು ಹೆಲಿಕಾಪ್ಟರ್‌ ರುದ್ರ, ಲಘು ಬಳಕೆ ಹೆಲಿಕಾಪ್ಟರ್‌ (ಎಲ್‌ಯುಎಚ್‌), ಲಘು ಯುದ್ಧ ಹೆಲಿಕಾಪ್ಟರ್‌ (ಎಲ್‌ಸಿಎಚ್‌) ಏರೋ ಇಂಡಿಯಾದಲ್ಲಿ ಹಾರಾಟ ನಡೆಸಲಿವೆ.
 • ಇದೇ ವೇಳೆ ಸೂರ್ಯ ಕಿರಣ್‌ ಮತ್ತು ಎಎಲ್‌ಎಚ್‌ ಧ್ರುವ ಏರೋಬ್ಯಾಟಿಕ್‌ ತಂಡಗಳು ಎಂದಿನಂತೆ ವಿಶೇಷ ಪ್ರದರ್ಶನ ನೀಡಲಿವೆ.
 • ಇದೇ ವೇಳೆ ಎಲ್‌ಯುಎಚ್‌ ಪಿಟಿ-1, ಎಲ್‌ಸಿಎಚ್‌ ಟಿಡಿ-2, ಎಎಲ್‌ಎಚ್‌ (ಸುಧಾರಿತ ಲಘು ಹೆಲಿಕಾಪ್ಟರ್‌) ರುದ್ರ ಮತ್ತು ವೈದ್ಯಕೀಯ ತೀವ್ರ ನಿಗಾ ವ್ಯವಸ್ಥೆ ಇರುವ ಆ್ಯಂಬುಲೆನ್ಸ್‌ ಹೆಲಿಕ್ಯಾಪ್ಟರ್‌ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ನೌಕಾಪಡೆ ಬಳಕೆಗಾಗಿ ಬಾಲ ಮತ್ತು ಮುಖ್ಯರೆಕ್ಕೆಗಳನ್ನು ಮಡಚಬಲ್ಲ ಹೆಲಿಕಾಪ್ಟರ್‌ (ಅಭಿವೃದ್ಧಿ ಹಂತದಲ್ಲಿದೆ) ಪ್ರಮುಖ ಆಕರ್ಷಣೆಯಾಗಲಿದೆ.
 • ಮೊದಲ ಬಾರಿ ಸೂಪರ್‌ಸಾನಿಕ್‌ ಒಮ್ನಿ ರೋಲ್‌ ಟ್ರೇನರ್‌ ಏರ್‌ಕ್ರಾಫ್ಟ್‌ (ಸ್ಪೋರ್ಟ್‌) ಸಿಮ್ಯುಲೇಟರ್‌ ಅನ್ನು ಎಚ್‌ಎಎಲ್‌ ಪೆವಿಲಿಯನ್‌ನಲ್ಲಿ ಇರಿಸಲಾಗುತ್ತಿದೆ. ನಾಲ್ಕನೇ ತಲೆಮಾರಿನ ಸಾಮರ್ಥ್ಯದ ಯುದ್ಧವಿಮಾನಗಳ ತರಬೇತಿಗಾಗಿ ಈ ಸಿಮ್ಯುಲೇಟರ್‌ ಬಳಕೆ ಮಾಡಲಾಗುತ್ತದೆ. ದೇಶೀಯವಾಗಿ ಅಭಿವೃದ್ಧಿಪಡಿಸಲು ಸ್ಪೋರ್ಟ್‌ಅನ್ನು ಶೀಘ್ರದಲ್ಲೇ ಬಳಕೆಗೆ ಲಾಂಚ್‌ ಮಾಡುವುದಾಗಿ ಎಚ್‌ಎಎಲ್‌ ಹೇಳಿದೆ.
 • ಜಾಗ್ವಾರ್‌ ಸಿಮ್ಯುಲೇಟರ್‌: ವಿಮಾನ ಹಾರಾಟದ ನೈಜ ಅನುಭವ (ವರ್ಚು್ಯವಲ್‌) ನೀಡುವ ಹೋಲೋಗ್ರಾಫಿಕ್‌ ರೂಮ್‌ ಮತ್ತು ಜಾಗ್ವಾರ್‌ ವಿಮಾನದ ಸಿಮ್ಯುಲೇಟರ್‌ ಇರಲಿದೆ.
 • ಡ್ರೋನ್‌ ಹಾರಾಟ ನಿಷೇಧ: ಏರೋ ಇಂಡಿಯಾ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯಲ್ಲಿ ಫೆ.20ರಿಂದ ಫೆ.24ರವರೆಗೆ (5 ದಿನ) ಡ್ರೋನ್‌, ಯುಎವಿ (ಮಾನವರಹಿತ ವಾಯು ವಾಹನ) ಸೇರಿ ಎಲ್ಲ ರೀತಿಯ ಹಾರಾಡುವ ನೌಕೆಗಳ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
 • ಬಿಇಎಂಎಲ್‌ನಿಂದ ಪ್ರದರ್ಶನ: ಏರೋ ಇಂಡಿಯಾದಲ್ಲಿ ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ (ಬಿಇಎಂಎಲ್‌) ದೊಡ್ಡ ಪ್ರಮಾಣದಲ್ಲಿ ಪಾಲ್ಗೊಳ್ಳುತ್ತಿದ್ದು, ಮೇಕ್‌ ಇನ್‌ ಇಂಡಿಯಾ ಉಪಕ್ರಮದ ಭಾಗವಾಗಿ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಹಲವು ತಂತ್ರಜ್ಞಾನ ಸೂಕ್ಷ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿದೆ.
 • ಮಿಲಿಟರಿ, ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಯೂಆರ್‌ಎಸ್‌ಎಎಂ, ಬಾಂಬ್‌ ಪೆಲ್ಲೆಟ್‌ಗಳು, ನಿಲ್ದಾಣದಲ್ಲಿ ವಿಮಾನಗಳನ್ನು ಸಾಗಿಸುವ ಟ್ರ್ಯಾಕ್ಟರ್‌, ಕ್ಷಿಪಣಿ ಉಡಾವಣೆಗೆ ಬಳಕೆಯಾಗುವ ವಾಹನಗಳು ಸೇರಿದಂತೆ ಇನ್ನಿತರ ಪ್ರಮುಖ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕನ್ನಡಿಗರಿಗೆ ನೌಕ್ರಿ ಖಾತ್ರಿ

4.

ಸುದ್ಧಿಯಲ್ಲಿ ಏಕಿದೆ ? ಖಾಸಗಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ಸಿಗಬೇಕೆಂಬ ಸರೋಜಿನಿ ಮಹಿಷಿ ವರದಿಗೆ ಕಾನೂನಿನ ಬಲ ನೀಡಲು ಸರ್ಕಾರ ತೀರ್ಮಾನಿಸಿದೆ.

 • ಹೀಗಾಗಿ ಇನ್ಮುಂದೆ ರಾಜ್ಯದ ಖಾಸಗಿ ವಲಯದಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆ ‘ಲಭ್ಯವಿದ್ದಲ್ಲಿ’ ಕನ್ನಡಿಗರಿಗೆ ಮೀಸಲಾಗಲಿದೆ. ಈ ಹುದ್ದೆಗಳನ್ನು ಕನ್ನಡಿಗರಿಗೇ ಪೂರ್ಣ ಪ್ರಮಾಣದಲ್ಲಿ ಮೀಸಲು ಗೊಳಿಸಬೇಕೆಂಬ ಸರ್ಕಾರದ ಪ್ರಯತ್ನಕ್ಕೆ ಪೂರ್ಣ ಸಮ್ಮತಿ ಸಿಗದ ಕಾರಣ, ಲಭ್ಯವಿದ್ದಲ್ಲಿ ‘ಆದ್ಯತೆ’ ಎಂಬ ನಿರ್ಧಾರ ಸೀಮಿತಗೊಂಡಿದೆ.
 • ಸಂಪುಟ ಸಭೆಯಲ್ಲಿ ಈ ಕುರಿತಂತೆ ತೀರ್ಮಾನ ಕೈಗೊಳ್ಳಲಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಈ ವಿಚಾರದಲ್ಲಿ ಪ್ರಯತ್ನಗಳು ಆರಂಭವಾಗಿತ್ತು. 2017ರ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿತ್ತು.
 • ಮೀಸಲು ಹೇಗೆ?: ಸರ್ಕಾರದಿಂದ ಪ್ರೋತ್ಸಾಹಧನ, ತೆರಿಗೆ, ಕಂದಾಯ, ವಿದ್ಯುತ್ ದರ ರಿಯಾಯಿತಿ, ಪಾಲಿಸಿ ಇನ್ಸೆಂಟಿವ್ ಪಡೆದುಕೊಳ್ಳುವ ಕಂಪನಿಗಳು ಹುದ್ದೆ ಲಭ್ಯವಿದ್ದಲ್ಲಿ ಕನ್ನಡಿಗರಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ‘ಸಿ’ ಮತ್ತು ‘ಡಿ’ ದರ್ಜೆ ಕೆಲಸ ನೀಡಬೇಕಾಗುತ್ತದೆ.
 • ಒಂದು ವೇಳೆ ಹುದ್ದೆ ಇದ್ದರೂ ಅರ್ಜಿದಾರರು ಅವಕಾಶ ವಂಚಿತರಾದರೆ, ಅಂಥವರು ಡಿಸಿ ನೇತೃತ್ವದ ಸಮಿತಿಗೆ ದೂರುಕೊಡಬಹುದು.
 • ಸಮಿತಿ ನಿರ್ದೇಶನ ಪಾಲಿಸದೇ ಇದ್ದರೆ ಸೌಲಭ್ಯ ನಿಲ್ಲಿಸಲು ಸರ್ಕಾರಕ್ಕೆ ಶಿಫಾರಸು ಮಾಡಲು ಅವಕಾಶವಿರುತ್ತದೆ. ಅಂಗವಿಕಲರಿಗೆ ಶೇ.5 ಮೀಸಲು ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಕಾರಣಕ್ಕಾಗಿ ಕರ್ನಾಟಕ ಔದ್ಯೋಗಿಕ ಕೈಗಾರಿಕೆ ಉದ್ಯೋಗಗಳ ನಿಯಮಾವಳಿಗಳ ನಿಯಮಗಳು, 2018ಕ್ಕೆ ಸಂಪುಟ ಅನುಮೋದನೆ ನೀಡಿದೆ.

ಸರೋಜಿನಿ ಮಹಿಷಿ ವರದಿ

 • 1983ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗೆದ್ದಾಗ ಸರಕಾರದ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಶ್ರೀಮತಿ ಸರೋಜಿನಿ ಮಹಷಿಯವರಿಗೆ ಕೇಳಿಕೊಂಡಿತ್ತು.
 • ಮಹಿಷಿಯವರು ನೀಡಿದ ವರದಿಯು ಸರೋಜಿನಿ ಮಹಿಷಿ ವರದಿ ಎಂದು ಖ್ಯಾತವಾಗಿದೆ. ಕರ್ನಾಟಕದಲ್ಲಿ ನ್ಯಾಯವಾಗಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂಬುದ್ದನ್ನು ಪ್ರತಿಪಾದಿಸುವ ಆ ವರದಿ ಇಂದಿಗೂ ಕೂಡ ಕನ್ನಡ ಮತ್ತು ಕರ್ನಾಟಕಪರ ಹೋರಾಟಗಳಿಗೆ ಆಧಾರವಾಗಿದೆ.

ವರದಿಯ ಪ್ರಮುಖ ಲಕ್ಷಣಗಳು

 • ಸಮಿತಿಯು 1983 ರಲ್ಲಿ ರಚನೆಯಾಯಿತು, 13.6.1984 ರಂದು ಮಧ್ಯಂತರ ವರದಿಯನ್ನು ಸಲ್ಲಿಸಿತು ಮತ್ತು 12.1986 ರಂದು ಅಂತಿಮ ವರದಿ ಮತ್ತು 58 ಶಿಫಾರಸುಗಳನ್ನು ಮಾಡಿದೆ.
 • ಈ ಶಿಫಾರಸುಗಳಲ್ಲಿ, ಕರ್ನಾಟಕ ಸರ್ಕಾರವು ಅನುಷ್ಠಾನಕ್ಕೆ 45 ಶಿಫಾರಸುಗಳನ್ನು ಸ್ವೀಕರಿಸಿದೆ.
 • ಕೆಲವು ಶಿಫಾರಸುಗಳು: ಎಲ್ಲಾ ರಾಜ್ಯ ಸರ್ಕಾರ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯ ಘಟಕಗಳಲ್ಲಿ ಕನ್ನಡಿಗರಿಗೆ 100 ಶೇ. ಮೀಸಲಾತಿ.
 • ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರಕಾರದ ಇಲಾಖೆಗಳು ಮತ್ತು ಪಿಎಸ್ಯುಗಳಲ್ಲಿ ಗುಂಪು ಸಿ ಮತ್ತು ಗುಂಪಿನ ಡಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ.
 • ಗುಂಪಿನ ‘ಬಿ’ ಮತ್ತು ಗ್ರೂಪ್ ‘ಎ’ ಉದ್ಯೋಗಗಳಿಗಾಗಿ ಕನ್ನಡಿಗರಿಗೆ ಕನಿಷ್ಟ 80 ಶೇಕಡಾ ಮತ್ತು 65 ಮೀಸಲಾತಿ, ಕೇಂದ್ರ ಸರ್ಕಾರಿ ಘಟಕಗಳು ಮತ್ತು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಎಸ್ಯುಗಳಲ್ಲಿ ಕ್ರಮವಾಗಿ. ರಾಜ್ಯದ ಎಲ್ಲ ಕೈಗಾರಿಕಾ ಘಟಕಗಳಲ್ಲಿನ ಎಲ್ಲಾ ಸಿಬ್ಬಂದಿ ಅಧಿಕಾರಿಗಳು ಒಂದು ಕನ್ನಡಿಗನಾಗಿ ಇರಬೇಕು. ಸ್ಥಳೀಯ ಜನರನ್ನು ಆದ್ಯತೆಯಾಗಿ ನೇಮಿಸಬೇಕು.

ಪಾಕಿಸ್ತಾನದ ‘ಪರಮಾಪ್ತ ರಾಷ್ಟ್ರ’ ಮಾನ್ಯತೆ ಕಿತ್ತೆಸೆದ ಭಾರತ

ಸುದ್ಧಿಯಲ್ಲಿ ಏಕಿದೆ ? ಪುಲ್ವಾಮಾದಲ್ಲಿ ದೇಶ ಕಾಯುವ ಯೋಧರ ಮೇಲೆ ಪಾಕ್ ಉಗ್ರರು ದಾಳಿ ಮಾಡಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನಕ್ಕೆ 1996ರಲ್ಲಿ ನೀಡಲಾಗಿದ್ದ ಪರಮಾಪ್ತ ರಾಷ್ಟ್ರ ಎಂಬ ಮಾನ್ಯತೆಯನ್ನು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್ ಪಡೆದಿದೆ.

 • 1996ರಲ್ಲಿ ಭಾರತವು ಪಾಕಿಸ್ತಾನಕ್ಕೆ ಅತ್ಯಾಪ್ತ ರಾಷ್ಟ್ರವೆಂಬ ಸ್ಥಾನ ಮಾನ ನೀಡಿತ್ತಾದರೂ, ಅದು ಎಂದಿಗೂ ಈ ಸ್ಥಾನಮಾನವನ್ನು ಸದುಪಯೋಗಪಡಿಸಿಕೊಂಡಿಲ್ಲ.

ಪರಮಾಪ್ತ ರಾಷ್ಟ್ರಎಂದರೇನು?

 • ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) ಶುಲ್ಕ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಸಾಮಾನ್ಯ ಒಪ್ಪಂದದ (ಗ್ಯಾಟ್) ಅಡಿಯಲ್ಲಿ ಈ ಸ್ಥಾನಮಾನ ನೀಡಲಾಗುತ್ತದೆ. ಈ ಒಪ್ಪಂದದಡಿಯಲ್ಲಿ, ಪರಸ್ಪರ ವ್ಯಾಪಾರ ಅಭಿವೃದ್ಧಿಯ ದೃಷ್ಟಿಯಿಂದ ಉಭಯ ರಾಷ್ಟ್ರಗಳ ನಡುವಿನ ಸೀಮಾ ಸುಂಕ ಕಡಿಮೆ ಇರುತ್ತಿತ್ತು.

ಇದರಿಂದಾಗುವ  ಪರಿಣಾಮ ಏನು ?

 • ಈಗ ಈ ಸ್ಥಾನಮಾನವನ್ನು ಹಿಂತೆಗೆದುಕೊಂಡ ಪರಿಣಾಮ, ಪಾಕಿಸ್ತಾನದಿಂದ ಬರುವ ಯಾವುದೇ ಸರಕುಗಳಿಗೆ ಹೆಚ್ಚಿನ ಸೀಮಾ ಸುಂಕ ವಿಧಿಸಬಹುದಾಗಿದ್ದು, ಇದು ಅಲ್ಲಿನ ಆರ್ಥಿಕತೆಗೆ ಹೊಡೆತ ನೀಡಲಿದೆ.
 • ಭಾರತವು ಮುಖ್ಯವಾಗಿ ಹತ್ತಿ, ಡೈ, ರಾಸಾಯನಿಕಗಳು, ತರಕಾರಿ, ಕಬ್ಬಿಣ ಮತ್ತು ಉಕ್ಕು ಮುಂತಾದವನ್ನು ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದರೆ, ಹಣ್ಣುಗಳು, ಸಿಮೆಂಟ್, ಚರ್ಮ, ರಾಸಾಯನಿಕಗಳು ಮತ್ತು ಸಂಬಾರ ಪದಾರ್ಥಗಳನ್ನು ಅಲ್ಲಿಂದ ಆಮದು ಮಾಡಿಕೊಳ್ಳುತ್ತಿತ್ತು.

ಕೃತಕ ಎಲೆಗಳ ಅಭಿವೃದ್ಧಿ

6.

ಸುದ್ಧಿಯಲ್ಲಿ ಏಕಿದೆ ? ತಾಯಿ ನೆಲದ ಪ್ರಮುಖ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸಾಮಾನ್ಯ ಸಸ್ಯಗಳಿಂದ ವೇಗವಾಗಿ ಇಂಗಾಲದ ಡೈಆಕ್ಸೈಡ್‌ಅನ್ನು ಹೀರಿಕೊಳ್ಳುವ ಕೃತಕ ಎಲೆಗಳನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿ ಮಾಡಿದ್ದಾರೆ. ಚಿಕಾಗೋನಲ್ಲಿರುವ ಯೂನಿವರ್ಸಿಟಿ ಆಫ್‌ ಇಲ್ಲಿನಾಯ್ಸ್‌ (ಯುಐಸಿ)ನ ಸಂಶೋಧಕರು ಕೃತಕ ಸಸ್ಯವನ್ನು ಅಭಿವೃದ್ಧಿ ಪಡಿಸಿದ್ದಾರೆ.

ದ್ಯುತಿ ಸಂಶ್ಲೇಷಣಾ ಕ್ರಿಯೆ

 • ಸಸ್ಯಗಳು ನೈಸರ್ಗಿಕವಾಗಿ ಗಾಳಿಯನ್ನು ಶುದ್ಧೀಕರಿಸುತ್ತವೆ. ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್‌ಅನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಈ ಪ್ರಕ್ರಿಯೆಯನ್ನು ಫೋಟೋಸಿಂಥಸಿಸ್‌ ಎಂದು ವೈಜ್ಞಾನಿಕವಾಗಿ ಕರೆಯಲಾಗುತ್ತದೆ. ಕನ್ನಡದಲ್ಲಿ ದ್ಯುತಿ ಸಂಶ್ಲೇಷಣಾ ಕ್ರಿಯೆ ಎನ್ನಲಾಗುತ್ತದೆ. ಅಶ್ವತ್ಥಮರದ ಎಲೆಗಳು ಅತಿಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತವೆ.

ಸಂಶೋಧನೆಗೆ ಕಾರಣ

 • ವಾತಾವರಣದಲ್ಲಿ ಇಂಗಾಲ ಹೆಚ್ಚಾಗಲು ಪ್ರಮುಖ ಕಾರಣ ಸಸ್ಯಗಳ ನಾಶ. ನಗರೀಕರಣ ಹೆಚ್ಚಾದಂತೆ ಸಸ್ಯಕುಲವನ್ನು ಮನುಷ್ಯ ನಾಶ ಮಾಡುತ್ತಿರುವ ಪರಿಣಾಮ ಉತ್ಪತ್ತಿಯಾಗುತ್ತಿರುವ ಇಂಗಾಲವನ್ನು ನಿರ್ಮೂಲನೆಗೊಳಿಸುವ ಪ್ರಮಾಣದ ಸಸ್ಯಗಳ ಕೊರತೆಯನ್ನು ಭೂಮಿ ಎದುರಿಸುತ್ತಿದೆ.

ಸಂಶೋಧನೆಯ ವಿಶೇಷತೆ

 • ನೈಜ ಸಸ್ಯಗಳಂತೆ ಕಂಡುಬರುವ ಕೃತಕ ಸಸ್ಯವು ಕಾರ್ಬನ್‌ ಡೈಆಕ್ಸೈಡ್‌ಅನ್ನು ಆಮ್ಲಜನಕವಾಗಿ ಪರಿವರ್ತನೆ ಮಾಡುತ್ತದೆ. ಸಾಮಾನ್ಯ ಸಸ್ಯಗಳಿಗಿಂತ 10 ಪಟ್ಟು ಹೆಚ್ಚು ವೇಗವಾಗಿ ಎಂಬುದು ಸಂಶೋಧನೆಯ ಹೈಲೈಟ್‌ ಆಗಿದೆ.
 • ಪ್ರಸ್ತುತ ವಿಜ್ಞಾನಿಗಳು ಸಾಧ್ಯಸಾಧ್ಯತೆ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ ಕೃತಕ ಸಸ್ಯ ಸೃಷ್ಟಿಗೆ ಸಿದ್ಧರಾಗಿದ್ದಾರೆ. ಕಂಟೈನರ್‌ಗಳಲ್ಲಿ ಪ್ರಯೋಗಾತ್ಮಕ ಪರೀಕ್ಷೆಗಳನ್ನು ನಡೆಸಿದ್ದಾರೆ. ಗಾಳಿಯಲ್ಲಿರುವ ಕಾರ್ಬನ್‌ ಡಾಆಕ್ಸೈಡ್‌ಅನ್ನು ನಿರ್ಮೂಲನೆಗೊಳಿಸುತ್ತದೆ.

ಸಂಶೋಧನೆ ಏನು ?

 • ವಿಜ್ಞಾನಿಗಳ ತಂಡ ಕೃತಕ ಎಲೆಯನ್ನು ನೀರು ತುಂಬಿದ ಕ್ಯಾಪ್ಸೂಲ್‌ ಒಳಗೆ ಅಳವಡಿಸಿದ್ದಾರೆ. ಕ್ಯಾಪ್ಸೂಲ್‌ ಅತ್ಯಂತ ಸೂಕ್ಷ್ಮ ತೂತುಗಳಿರುವ ಮೆಬ್ರೇನ್‌ನಿಂದ ಮಾಡಿದ್ದಾಗಿತ್ತು. ಸೂರ್ಯನ ಕಿರಣಗಳು ಬಿದ್ದಾಗ ನಿಧಾನವಾಗಿ ನೀರು ಆವಿಯಾಗುತ್ತ ಹೋಗುತ್ತದೆ. ಅತಿಸೂಕ್ಷ್ಮ ರಂಧ್ರಗಳ ಮೂಲಕ ಆವಿಯಾದ ನೀರು ಹೊರಗೆ ಹೋಗುತ್ತದೆ. ಈ ಪ್ರಕ್ರಿಯೆ ವೇಳೆ ಸುತ್ತಲಿನ ಇಂಗಾಲದ ಡೈಆಕ್ಸೈಡ್‌ಅನ್ನು ಸೂಕ್ಷ್ಮ ರಂಧ್ರಗಳು ಸೆಳೆಯುತ್ತವೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
 • ಇಂಗಾಲದ ಡೈಆಕ್ಸೈಡ್‌ಅನ್ನು ಕೃತಕ ಎಲೆ ಮೋನಾಕ್ಸೈಡ್‌ ಮತ್ತು ಆಮ್ಲಜನಕವನ್ನಾಗಿ ಪರಿವರ್ತನೆ ಮಾಡುತ್ತದೆ. ಹೀಗೆ ಉತ್ಪತ್ತಿಯಾದ ಆಮ್ಲಜನಕವನ್ನು ಹೊರಗೆ ಬಿಡಬಹುದು ಅಥವಾ ಸಂಗ್ರಹಿಸಿಡಬಹುದು. ಅಥವಾ ಅಪಾಯಕಾರಿ ಅನಿಲವನ್ನು ಬೇರ್ಪಡಿಸಿ ಮೆಥನಾಲ್‌ನಂತಹ ಸಂಶ್ಲೇಷಿತ ಇಂಧನವನ್ನು ಉತ್ಪತ್ತಿ ಮಾಡಬಹುದು ಎಂದು ಪ್ರಯೋಗದ ಬಗ್ಗೆ ವಿಜ್ಞಾನಿಗಳು ವಿವರಣೆ ನೀಡಿದ್ದಾರೆ.
 • ವಿಜ್ಞಾನಿಗಳ ಪ್ರಕಾರ ಇಂತಹ 360 ಕೃತಕ ಎಲೆಗಳಿಂದ ಪ್ರತಿದಿನ ಅರ್ಧ ಟನ್‌ ಕಾರ್ಬನ್‌ ಮೋನಾಕ್ಸೈಡ್‌ ಉತ್ಪತ್ತಿ ಮಾಡಬಹುದು. 500 ಚದರ ಮೀಟರ್‌ ಪ್ರದೇಶದಲ್ಲಿ ಒಂದು ದಿನದಲ್ಲಿ ವಾತಾವರಣದಲ್ಲಿರುವ ಕಾರ್ಬನ್‌ ಡೈಆಕ್ಸೈಡ್‌ ಪ್ರಮಾಣವನ್ನು ಇಳಿಕೆ ಮಾಡಬಹುದು ಎಂದಿದ್ದಾರೆ.

 

Related Posts
“15 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದ ಮೆರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌ ರ‍್ಯಾಂಕ್ ಪಟ್ಟಿ  ಸುದ್ಧಿಯಲ್ಲಿ ಏಕಿದೆ ?ಗುಣಮಟ್ಟದ ಜೀವನಕ್ಕೆ ಅತ್ಯುತ್ತಮ ನಗರ ಯಾವುದೆಂದು ತೀರ್ಮಾನಿಸುವ 2019ರ ದ ಮೆರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌ ರ‍್ಯಾಂಕ್ ಪಟ್ಟಿ (21ನೇ ಆವೃತ್ತಿ) ಬಿಡುಗಡೆಯಾಗಿದ್ದು, ಬೆಂಗಳೂರು ಜಾಗತಿಕ ಮಟ್ಟದಲ್ಲಿ 149ನೇ ಸ್ಥಾನ ...
READ MORE
“26th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಪರಿಸರ ಸೂಕ್ಷ್ಮ ವಲಯ ಸುದ್ಧಿಯಲ್ಲಿ ಏಕಿದೆ ? ಕೊಡಗು ಅತಿವೃಷ್ಠಿ ಹಾನಿಯಿಂದ ಪಾಠ ಕಲಿಯದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯದ ಬಗ್ಗೆ ಹೊರಡಿಸಿರುವ ಅಧಿಸೂಚನೆಯನ್ನು ಮತ್ತೊಮ್ಮೆ ವಿರೋಧಿಸಲು ನಿರ್ಧರಿಸಿದೆ. ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಆಗಿರುವ ತೊಂದರೆಯೇ ಮಳೆ ...
READ MORE
“10 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಪ್ರಸಾದ ತಯಾರಿಕೆಗೂ ಲೈಸೆನ್ಸ್ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಪ್ರಸಾದ ವಿನಿಯೋಗಿಸುವ 30 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ಆಹಾರ ತಯಾರಿಕಾ ಘಟಕಗಳಿಗೆ ಇನ್ನು ಲೈಸನ್ಸ್ ಕಡ್ಡಾಯವಾಗಲಿದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ 37 ಸಾವಿರ ದೇವಾಲಯಗಳೂ ಸೇರಿ 2 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳಿವೆ. ಈ ಪೈಕಿ ...
READ MORE
“03 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಲೆನಾಡಿನಲ್ಲಿ ಮಂಗನಕಾಯಿಲೆ: ಸುದ್ಧಿಯಲ್ಲಿ ಏಕಿದೆ ?ಮಹಾಮಾರಿ ಮಂಗನಕಾಯಿಲೆಗೆ ನಾಲ್ವರು ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಸಿಗೆಯಲ್ಲಿ ತೀರ್ಥಹಳ್ಳಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಂಗನ ಕಾಯಿಲೆ ಈ ಬಾರಿ ಬೇಸಿಗೆಗೂ ಮುಂಚೆ ಕಾಣಿಸಿಕೊಂಡಿದೆ. ಜತೆಗೆ ಸಾಗರಕ್ಕೂ ವ್ಯಾಪಿಸಿದೆ. ಮಂಗನಕಾಯಿಲೆ ಹರಡದಂತೆ ಪ್ರತಿವರ್ಷ ಲಸಿಕೆ ಹಾಕಲಾಗುತ್ತಿತ್ತು. ಆದರೆ ...
READ MORE
” 08 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎನ್​ಪಿಎಸ್ ಸುದ್ಧಿಯಲ್ಲಿ ಏಕಿದೆ ?ಎನ್​ಪಿಎಸ್ (ಹೊಸ ಪಿಂಚಣಿ ಯೋಜನೆ) ರದ್ದತಿ ವಿಚಾರ ಕೇಂದ್ರ ಸರ್ಕಾರದ ಮಟ್ಟದಲ್ಲಿ ಬಾಕಿ ಇರುವಂತೆಯೇ, ಆ ನೌಕರರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಕೆಲವೊಂದು ಸೌಲಭ್ಯ ನೀಡಲು ಸಮ್ಮತಿಸಿದೆ. ಎನ್​ಪಿಎಸ್ ರದ್ದತಿಗಾಗಿ ಹೋರಾಟ ನಡೆಸುತ್ತಿರುವ ನೌಕರರು, ಅದರ ಜತೆಗೆ ಬೇರೆ ...
READ MORE
“30 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಚ್‌1ಎನ್‌1 ಮುಂಜಾಗ್ರತೆಗೆ ಸೂಚನೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ವರ್ಷದ ಆರಂಭದಲ್ಲೇ ಎಚ್‌1ಎನ್‌1 ಜ್ವರ ಭೀತಿ ಸೃಷ್ಟಿಸಿರುವುದರಿಂದ ಅಗತ್ಯ ಔಷಧಗಳ ದಾಸ್ತಾನು ಮೂಲಕ ಶಂಕಿತ ರೋಗಿಗಳಿಗೆ 48 ಗಂಟೆಯೊಳಗೆ ಟ್ಯಾಮಿಫ್ಲೂ ಚಿಕಿತ್ಸೆ ಪ್ರಾರಂಭಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಏಕೆ ಈ ಸೂಚನೆ ...
READ MORE
“29th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಎಕ್ಸ್-ರೇ ಮಾಫಿಯಾ ಸುದ್ಧಿಯಲ್ಲಿ ಏಕಿದೆ ?ವ್ಯಕ್ತಿಯ ದೇಹದೊಳಗಿನ ಸಮಸ್ಯೆ ಅನಾವರಣ ಮಾಡುವ ಎಕ್ಸ್ -ರೇ (ಕ್ಷ-ಕಿರಣ) ಕೇಂದ್ರಗಳಿಗೆ ಕಾನೂನಿನ ಅಂಕುಶ ಇರದ್ದರಿಂದ ರಾಜ್ಯದ ಬಹುತೇಕ ಎಕ್ಸ್-ರೇ ಕೇಂದ್ರಗಳು ಹಣಗಳಿಕೆಯ ಅಡ್ಡವಾಗಿ ಮಾರ್ಪಟ್ಟಿವೆ. ಇನ್ನೊಂದೆಡೆ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಎಕ್ಸ್-ರೇ ತೆಗೆಯಲಾಗುತ್ತಿರುವುದು ಆತಂಕ ...
READ MORE
“5 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳೆ ದರ್ಶಕ ಆ್ಯಪ್ ಸುದ್ಧಿಯಲ್ಲಿ ಏಕಿದೆ ? ರಾಜ್ಯ ಸರ್ಕಾರದ ಬೆಳೆ ದರ್ಶಕ ಆ್ಯಪ್ ಇದೀಗ ರೈತಸ್ನೇಹಿಯಾಗಿದ್ದು, ಅಂಗೈಯಲ್ಲೇ ಜಮೀನು ಹಾಗೂ ಬೆಳೆ ಸಮೀಕ್ಷೆ ಮಾಹಿತಿ ಲಭಿಸಲಿದೆ. ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆ 'ಬೆಳೆ ದರ್ಶಕ್' ಆಪ್ ಅನ್ನು ಪರಿಚಯಿಸಿದ್ದು, ಈ 'ಬೆಳೆ ದರ್ಶಕ್' ...
READ MORE
“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೃಂದಾವನಕ್ಕೆ ಡಿಸ್ನಿಲ್ಯಾಂಡ್‌ ಮಾದರಿ ಲುಕ್‌ ಸುದ್ಧಿಯಲ್ಲಿ ಏಕಿದೆ ?ಕೃಷ್ಣರಾಜಸಾಗರ ಜಲಾಶಯದ ಬೃಂದಾವನ ಉದ್ಯಾನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ 1,200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನೀಲಿನಕ್ಷೆ ಸಿದ್ಧಪಡಿಸಿದೆ. ಈಗಿನ ಪಾರಂಪರಿಕ ತಾಣದ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಬೃಂದಾವನವನ್ನು ವಿಶ್ವದ ಪ್ರವಾಸಿ ತಾಣಗಳಲ್ಲೇ ...
READ MORE
” 17 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷಿ ಕ್ರಾಂತಿಗೆ ಹೊಸ ನೀತಿ ಸುದ್ಧಿಯಲ್ಲಿ ಏಕಿದೆ ?ಬರಗಾಲ, ಬೆಳೆ ಸಾಲದಂತಹ ಸರಣಿ ಸಂಕಷ್ಟಗಳಿಗೆ ಸಿಲುಕಿ ಕೃಷಿ ಮೇಲೆ ವೈರಾಗ್ಯ ಹೊಂದುತ್ತಿರುವ ರೈತರಲ್ಲಿ ಆತ್ಮವಿಶ್ವಾಸ ಬಿತ್ತಿ, ಬದುಕು ಕಟ್ಟಲು ನೆರವಾಗುವ ಉದ್ದೇಶದಿಂದ ಹೊಸ ಕೃಷಿ ನೀತಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರ ಬೆಳೆಗೆ ...
READ MORE
“15 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“26th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“10 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“03 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 08 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“30 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“29th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“5 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 17 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *