“15 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ದ ಮೆರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌ ರ‍್ಯಾಂಕ್ ಪಟ್ಟಿ 

21..

ಸುದ್ಧಿಯಲ್ಲಿ ಏಕಿದೆ ?ಗುಣಮಟ್ಟದ ಜೀವನಕ್ಕೆ ಅತ್ಯುತ್ತಮ ನಗರ ಯಾವುದೆಂದು ತೀರ್ಮಾನಿಸುವ 2019ರ ದ ಮೆರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌ ರ‍್ಯಾಂಕ್ ಪಟ್ಟಿ (21ನೇ ಆವೃತ್ತಿ) ಬಿಡುಗಡೆಯಾಗಿದ್ದು, ಬೆಂಗಳೂರು ಜಾಗತಿಕ ಮಟ್ಟದಲ್ಲಿ 149ನೇ ಸ್ಥಾನ ಮತ್ತು ಭಾರತದಲ್ಲಿ 2ನೇ ಸ್ಥಾನವನ್ನು ಪಡೆದಿದೆ.

 • ವಿಶ್ವದಾದ್ಯಂತ 231 ನಗರಗಳಲ್ಲಿ ನಡೆಸಿದ ಅಧ್ಯಯನದ ಫಲವಾಗಿರುವ ಈ ವರದಿಗೆ ಜಾಗತಿಕ ಮಾನ್ಯತೆ ಇದ್ದು, ಆಸ್ಟ್ರಿಯಾದ ವಿಯೆನ್ನಾ ಮೊದಲ ಸ್ಥಾನದಲ್ಲಿದೆ.
 • ಭಾರತದ ನಗರಗಳ ಪೈಕಿ ಹೈದರಾಬಾದ್‌ ಮತ್ತು ಪುಣೆ ಜಾಗತಿಕವಾಗಿ ಜಂಟಿಯಾಗಿ 142 ರ‍್ಯಾಂಕ್ ಪಡೆದು ದೇಶದಲ್ಲಿ ಮೊದಲ ಸ್ಥಾನ ಪಡೆದಿವೆ. 2018ರ ಸೆಪ್ಟೆಂಬರ್‌ನಿಂದ ನವೆಂಬರ್‌ ನಡುವೆ ಈ ಸಮೀಕ್ಷೆ ನಡೆದಿದೆ. ದೇಶದ 7 ನಗರಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
 • ಬೆಂಗಳೂರು ನಗರವು ಶಿಕ್ಷಣ, ವೈದ್ಯಕೀಯ ಸವಲತ್ತುಗಳು, ವಸತಿ, ಮನೋರಂಜನೆ, ಆರ್ಥಿಕ ಸ್ಥಿತಿಗಳಲ್ಲಿ ಉನ್ನತ ಮಟ್ಟದಲ್ಲಿದ್ದು, ಉತ್ತಮ ಪರಿಸರವನ್ನೂ ಹೊಂದಿರುವುದು ರಾರ‍ಯಂಕಿಂಗ್‌ ಪಡೆಯಲು ಅನುಕೂಲವಾಗಿದೆ.

ಭಾರತದ ಟಾಪ್‌ 7 ನಗರ

 • ಹೈದರಾಬಾದ್‌ ,ಪುಣೆ ,ಬೆಂಗಳೂರು ,ಚೆನ್ನೈ ,ಮುಂಬಯಿ, ಕೋಲ್ಕೊತಾ ,ದಿಲ್ಲಿ ,

ಪರಿಗಣಿಸುವ ಅಂಶಗಳು

 • ಸಾಮಾಜಿಕ-ಸಾಂಸ್ಕೃತಿ ಪರಿಸರ ,ಶಾಲೆಗಳು ಮತ್ತು ಶಿಕ್ಷಣ , ವೈದ್ಯಕೀಯ ಮತ್ತು ಆರೋಗ್ಯ ,ಮನೋರಂಜನೆ , ವಸತಿ, ಸಾರ್ವಜನಿಕ ಸಾರಿಗೆ ,ಆರ್ಥಿಕ, ನೈಸರ್ಗಿಕ ಪರಿಸರ ,ರಾಜಕೀಯ, ಸಾಮಾಜಿಕ ವಾತಾವರಣ

ವೈಯಕ್ತಿಕ ಭದ್ರತೆ: 4ನೇ ಸ್ಥಾನ

 • ವೈಯಕ್ತಿಕ ಭದ್ರತೆಯಲ್ಲಿ ದೇಶದಲ್ಲಿ ಬೆಂಗಳೂರಿಗೆ 3ನೇ ಸ್ಥಾನವಿದೆ. ಚೆನ್ನೈ, ಪುಣೆ, ಹೈದರಾಬಾದ್‌ ಮೊದಲ ಮೂರು ಸ್ಥಾನಗಳಲ್ಲಿವೆ.
 • 2011ರಲ್ಲಿ ದೇಶದಲ್ಲೇ ನಂ.1 ಪಟ್ಟ ಪಡೆದಿದ್ದ ಬೆಂಗಳೂರು, ಕಳೆದ ವರ್ಷವೂ 2ನೇ ಸ್ಥಾನದಲ್ಲಿತ್ತು.
 • 231 ರಾಷ್ಟ್ರಗಳ ಪೈಕಿ ಇರಾಕ್‌ನ ಬಾಗ್ದಾದ್‌ ಕೊನೆಯ ಸ್ಥಾನದಲ್ಲಿದ್ದರೆ, ಕರಾಚಿ 201ನೇ ಸ್ಥಾನದಲ್ಲಿದೆ.

ವಿಶ್ವದ ಟಾಪ್‌ 10 ನಗರಗಳು

 1. ವಿಯೆನ್ನಾ ಆಸ್ಟ್ರಿಯಾ 2. ಜ್ಯೂರಿಚ್‌ ಸ್ವಿಜರ್ಲೆಂಡ್‌ 3. ವ್ಯಾಂಕೋವರ್‌ ಕೆನಡಾ 4. ಮ್ಯೂನಿಚ್‌ ಜರ್ಮನಿ
 2. ಆಕ್ಲೆಂಡ್‌ ನ್ಯೂಜಿಲ್ಯಾಂಡ್‌ 6. ಡಸ್ಸೆಲ್‌ಡಾರ್ಫ್‌ ಜರ್ಮನಿ 7. ಫ್ರಾಂಕ್‌ಫರ್ಟ್‌ ಜರ್ಮನಿ 8. ಕೋಪನ್‌ಹೇಗನ್‌ ಡೆನ್ಮಾರ್ಕ್‌
 3. ಜಿನೇವಾ ಸ್ವಿಜರ್ಲೆಂಡ್‌ 10. ಬಾಸೆಲ್‌ ಸ್ವಿಜರ್ಲೆಂಡ್‌

ಐಡಬ್ಲ್ಯೂಜಿ ಗ್ಲೋಬರ್​ ವರ್ಕ್​ಸ್ಪೇಸ್​ ಸಮೀಕ್ಷೆ

22.

ಸುದ್ಧಿಯಲ್ಲಿ ಏಕಿದೆ ?ಐಡಬ್ಲ್ಯೂಜಿ ಗ್ಲೋಬರ್​ ವರ್ಕ್​ಸ್ಪೇಸ್​ ಸಮೀಕ್ಷೆ ವರದಿ ಪ್ರಕಾರ ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಶೇ. 61 ರಷ್ಟು ಕೆಲಸಗಾರರು ತಮ್ಮ ಕೆಲಸದ ವೇಳೆಯೊಂದಿಗೆ ಆಫೀಸ್​ಗೆ ಬಂದು ಹೋಗುವ ಸಮಯವನ್ನೂ ಸೇರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಶೇ. 41ರಷ್ಟು ಕೆಲಸಗಾರರು ಆಫೀಸ್​ಗೆ ಹೋಗುವುದು ಮತ್ತು ವಾಪಸ್​ಬರುವುದು ಕೆಲಸದ ಭಾಗವಾಗಿದ್ದು, ಈ ಪ್ರಯಾಣದ ಅವಧಿಯನ್ನು ನಾವು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದಾರೆ.

 • ಮೈಂಡ್ಮೆಟ್ರೆ ರಿಸರ್ಚ್ ಸಮೀಕ್ಷೆಯನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿದೆ ಮತ್ತು ಈ ಮಾದರಿಯು ಹಿರಿಯ ವ್ಯವಸ್ಥಾಪಕರು ಮತ್ತು ಮಾಲೀಕರಿಂದ ಹೆಚ್ಚು ವಿವಿಧ ಪ್ರತಿನಿಧಿಗಳನ್ನು ಹೊಂದಿದೆ, ಜಗತ್ತಿನಾದ್ಯಂತದ ವ್ಯವಹಾರಗಳಲ್ಲಿ ವಿವಿಧ ಕೈಗಾರಿಕೆಗಳು ವ್ಯಾಪಿಸಿವೆ.
 • ಐಡಬ್ಲ್ಯೂಜಿ ಗ್ಲೋಬರ್​ ವರ್ಕ್​ಸ್ಪೇಸ್​ 80 ದೇಶಗಳಲ್ಲಿ 15 ಸಾವಿರ ಜನರನ್ನು ಸಮೀಕ್ಷೆಗೆ ಒಳಪಡಿಸಿ ವರದಿಯನ್ನು ಸಿದ್ಧಪಡಿಸಿದೆ.
 • ಭಾರತೀಯರಂತೆ ವಿಶ್ವಮಟ್ಟದಲ್ಲೂ ಶೇ. 42 ರಷ್ಟು ಜನರು ಆಫೀಸ್​ಗೆ ತೆರಳುವ ಪ್ರಯಾಣದ ಅವಧಿಯನ್ನು ಕೆಲಸದ ಸಮಯದೊಂದಿಗೆ ಸೇರಿಸಬೇಕು. ಏಕೆಂದರೆ ಅದು ನಮ್ಮ ಫ್ರೀ ಟ್ರೈ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
 • ಪ್ರಯಾಣದ ಅವಧಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಕೆಲಸಗಾರರಿಗೆ ತಮ್ಮ ಇಚ್ಛೆಯ ಕೆಲಸದ ಸಮಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಿವೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಹಲವು ವಾರದಲ್ಲಿ ಕನಿಷ್ಠ 2-3 ದಿನ ಆಫೀಸ್​ನಿಂದ ಹೊರಗೆ ಕೆಲಸ ಮಾಡಲು ಇಚ್ಛಿಸುವುದಾಗಿ ತಿಳಿಸಿದ್ದರು

ಕ್ಷಿಪಣಿ ಪರೀಕ್ಷೆ ಯಶಸ್ವಿ

23.

ಸುದ್ಧಿಯಲ್ಲಿ ಏಕಿದೆ ?ಯುದ್ಧ ಟ್ಯಾಂಕ್‌ಗಳನ್ನು ಹೊಡೆದುರುಳಿಸಬಲ್ಲ ಸ್ವದೇಶಿ ನಿರ್ಮಿತ ಪೊರ್ಟೆಬಲ್‌ ಆ್ಯಂಟಿ-ಟ್ಯಾಂಕ್‌ ಗೈಡೆಡ್‌ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ರಾಜಸ್ಥಾನದ ಪೋಖ್ರಣ್‌ನಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

ಕ್ಷಿಪ್ಪಣಿ ವಿಶೇಷತೆಗಳು

 • ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ ಈ ಕ್ಷಿಪಣಿಯನ್ನು ಯೋಧರು ಬೇಕಾದ ಕಡೆ ಒಯ್ದು, ತಮ್ಮ ಭುಜದ ಮೇಲೆ ಇರಿಸಿಕೊಂಡು ಫೈರ್‌ ಮಾಡುವ ಮೂಲಕ ಯುದ್ಧ ಟ್ಯಾಂಕ್‌ಗಳನ್ನು ಹೊಡೆದುರುಳಿಸಬಹುದಾಗಿದೆ.
 • 5 ಕಿಲೋಮೀಟರ್‌ನಷ್ಟು ದೂರದ ಗುರಿಯನ್ನು ಹೊಡೆದುರುಳಿಸಬಲ್ಲದು.
 • ಇಂಟಿಗ್ರೇಟೆಡ್‌ ಎವಿಯೋನಿಕ್ಸ್‌ ವ್ಯವಸ್ಥೆ ಹಾಗೂ ಅಲ್ಟ್ರಾ ಮಾರ್ಡನ್‌ ಇಮೇಜಿಂಗ್‌ ಇನ್ಫ್ರಾರೆಡ್‌ ರೇಡಾರ್‌ಗಳನ್ನು ಹೊಂದಿದೆ.
 • ಇನ್ನೂ ಒಂದಷ್ಟು ಪರೀಕ್ಷೆಗಳ ಬಳಿಕ 2021ರಿಂದ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಆರಂಭಗೊಳ್ಳಲಿದೆ.

Related Posts
“15 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಂಪ್ರದಾಯಿಕ ಕುಶಲತೆ ಸಂರಕ್ಷಣೆಗೆ ಬದ್ಧ ಸುದ್ಧಿಯಲ್ಲಿ ಏಕಿದೆ ? ರಾಜ್ಯದ ಸಾಂಪ್ರದಾಯಿಕ ಕುಶಲತೆಯನ್ನು ಸಂರಕ್ಷಿಸಲು ಭೌಗೋಳಿಕ ಗುರುತುಗಳ ನೀತಿ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಎಫ್‌ಕೆಸಿಸಿ ಆಶ್ರಯದಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಮ್ಮಿಕೊಂಡಿದದ 'ಕರಡು ಭೌಗೋಳಿಕ ಗುರುತುಗಳ ನೀತಿ' ಕುರಿತಾದ ಪಾಲುದಾರರ ಸಮಾವೇಶವನ್ನು ಉದ್ಘಾಟಿಸಿದರು. 2018-19ನೇ ಸಾಲಿನ ...
READ MORE
“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಲಮನ್ನಾ ಮೊತ್ತ ತೀರಿಸಿ ಸುದ್ಧಿಯಲ್ಲಿ ಏಕಿದೆ ?ರೈತರ ಕೃಷಿ ಸಾಲಮನ್ನಾ ಮಾಡುತ್ತಿರುವ ರಾಜ್ಯ ಸರ್ಕಾರಗಳು ನಿಗದಿತ ಅವಧಿಯಲ್ಲಿ ಬ್ಯಾಂಕ್​ಗಳಿಗೆ ಹಣ ಭರಿಸಬೇಕು ಎಂದು ನಬಾರ್ಡ್ ಸೂಚಿಸಿದೆ. ಉದ್ದೇಶ ರಾಜ್ಯ ಸರ್ಕಾರಗಳು ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡದೆ ಸಾಲಮನ್ನಾ ಮಾಡುತ್ತಿವೆ ಎಂಬ ಆರೋಪದ ಮಧ್ಯೆಯೇ ನಬಾರ್ಡ್ ಈ ...
READ MORE
“04 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸೇನೆಗೆ ಮಣಿಪಾಲದ ಬೈನಾಕ್ಯೂಲರ್ ಸುದ್ಧಿಯಲ್ಲಿ ಏಕಿದೆ ?ದೇಶದಲ್ಲಿ ಶತಮಾನದ ಹಿಂದಿನ ತಂತ್ರಜ್ಞಾನ ಹೊಂದಿರುವ ಟೆಲಿಸ್ಕೋಪ್ ಮತ್ತು ಬೈನಾಕ್ಯುಲರ್ ಬಳಸಲಾಗುತ್ತಿದೆ. ಅತ್ಯಾಧುನಿಕ ಬೈನಾಕ್ಯುಲರ್ ಬೇಕಾದರೆ ಲಕ್ಷಾಂತರ ರೂ. ವ್ಯಯಿಸಬೇಕಿದ್ದರಿಂದ ಸಂಶೋಧನೆ ಮತ್ತು ಸೈನಿಕ ಕಾರ್ಯಾಚರಣೆಗೆ ತೊಡಕಾಗಿದೆ. ಹೀಗಾಗಿ ಮಣಿಪಾಲದ ಇಂಜಿನಿಯರೊಬ್ಬರು ಕಡಿಮೆ ವೆಚ್ಚದ, ಉತ್ತಮ ...
READ MORE
” 28 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಡಿಎಲ್, ಆರ್​ಸಿ ಡಿಜಿಟಲ್ ದಾಖಲೆ ಪರೀಕ್ಷಿಸಲು ಮಾರ್ಗಸೂಚಿ ಸುದ್ಧಿಯಲ್ಲಿ ಏಕಿದೆ ?ವಾಹನ ಚಾಲಕರು ಸಲ್ಲಿಸುವ ಡಿಜಿಟಲ್ ಮಾದರಿ ದಾಖಲೆಗಳು ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹಲವು ಮಾರ್ಗಸೂಚಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್- ಎಸ್​ಒಪಿ) ರೂಪಿಸಿದೆ. ಎಸ್​ಒಪಿ ...
READ MORE
” 07 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಲೋಕಪಾಲ ಮುಖ್ಯಸ್ಥರ ನೇಮಕ  ಸುದ್ಧಿಯಲ್ಲಿ ಏಕಿದೆ ?ಸುಪ್ರೀಂಕೋರ್ಟ್ ಎಚ್ಚರಿಕೆ ಬಳಿಕ ಕೊನೆಗೂ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆ ವರ್ಷದಲ್ಲೇ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲದ ಮುಖ್ಯಸ್ಥರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದೆ. ಲೋಕಪಾಲ ಕಾಯ್ದೆ ಜಾರಿಗೆ ಬಂದ ಸುಮಾರು ಐದು ವರ್ಷಗಳ ಬಳಿಕ ...
READ MORE
“10 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಾನಪದ ಅಕಾಡೆಮಿ ಪ್ರಶಸ್ತಿ ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಜಾನಪದ ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ರಾಜ್ಯದ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಲಾಗಿದ್ದು, ಡಿ. 27ರಂದು ಬೀದರ್​ನ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ...
READ MORE
” 23 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮನೆಮನೆಗೂ ಅನಿಲ ಭಾಗ್ಯ ಸುದ್ಧಿಯಲ್ಲಿ ಏಕಿದೆ ? ದೇಶದ 129 ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ವ್ಯವಸ್ಥೆ(ಸಿಜಿಡಿ) ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಕೊಳವೆಗಳ ಮೂಲಕ ನೈಸರ್ಗಿಕ ಅನಿಲ (ಸಿಎನ್‌ಜಿ) ವನ್ನು ಮನೆಮನೆಗೂ ತಲುಪಿಸುವ ಯೋಜನೆ ಇದು. ನಗರ ಅನಿಲ ...
READ MORE
“19 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಮೈಸೂರು ದಸರಾ ಸುದ್ಧಿಯಲ್ಲಿ ಏಕಿದೆ ?ದಶಕಗಳ ಇತಿಹಾಸವಿರುವ ಮೈಸೂರು ದಸರಾ ಸದಾ ಸುಂದರ. ನಾಡಹಬ್ಬದ ಆಚರಣೆಯ ಬಗೆ ಬದಲಾಗುತ್ತ ಬಂದಿದೆ. ಮೈಸೂರು ದಸರಾ ಕರ್ನಾಟಕದ ನಡಹಬ್ಬ (ರಾಜ್ಯ ಉತ್ಸವ) ಆಗಿದೆ. ಇದು ನವರಾತ್ರಿ (ನವ-ರಾತ್ರಿ ಎಂದರೆ ಒಂಭತ್ತು-ರಾತ್ರಿಗಳು) ಮತ್ತು ವಿಜಯದಶಮಿ ಎಂಬ ಕೊನೆಯ ದಿನದಿಂದ ಆರಂಭಗೊಂಡು ...
READ MORE
26th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಪ್ರಸಾದದ ಮೇಲೆ ಎಕ್ಸ್‌ಫೈರಿ ಡೇಟ್‌ ಕಡ್ಡಾಯ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ದೇವಸ್ಥಾನಗಳಲ್ಲಿ ಪ್ಯಾಕ್‌ ಮಾಡಿ ವಿತರಿಸುವ ಪ್ರಸಾದದ ಮೇಲೆ ತಯಾರಿಸಿದ ದಿನ ಹಾಗೂ ಎಷ್ಟು ದಿನಗಳವರೆಗೆ ಮಾತ್ರ ಸೇವಿಸಬಹುದು ಎಂಬ ಮಾಹಿತಿ ನಮೂದಿಸುವುದು ಕಡ್ಡಾಯವಾಗಲಿದೆ. ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದ ನಿಯಮ ...
READ MORE
“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕಬ್ಬನ್‌ ಪಾರ್ಕ್‌ಗೆ ಏರ್‌ ಕ್ಲೀನರ್‌ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ರಾಜಧಾನಿಯಲ್ಲೂ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಈ ನಡುವೆ, ಅತಿ ಹೆಚ್ಚು ಜನರು ವಾಯು ಸೇವನೆಗೆ ಆಗಮಿಸುವ ಕಬ್ಬನ್‌ ಪಾರ್ಕ್‌ನಲ್ಲೂ ವಾಯು ಮಾಲಿನ್ಯ ಹೆಚ್ಚಿರುವುದನ್ನು ಮನಗಂಡು ಅಲ್ಲಿ ಗಾಳಿಯ ಶುದ್ಧೀಕರಣಕ್ಕೆ ಯಂತ್ರವನ್ನು ...
READ MORE
“15 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“04 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 28 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 07 ಫೆಬ್ರವರಿ 2019 ರ ಕನ್ನಡ
“10 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 23 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“19 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
26th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *