15th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಚೀನಾ ಗಡಿ ಬಳಿ ಐತಿಹಾಸಿಕ ಲ್ಯಾಂಡಿಂಗ್

 • ಆಯಕಟ್ಟಿನ ಗಡಿ ಭಾಗದಲ್ಲಿ ಕಾರ್ಯತಂತ್ರ ಬಲಿಷ್ಠಗೊಳಿಸುತ್ತಿರುವ ಭಾರತೀಯ ವಾಯುಪಡೆ ಚೀನಾ ಗಡಿಯಿಂದ ಕೇವಲ 30 ಕಿ.ಮೀ. ದೂರದಲ್ಲಿರುವ ಅರುಣಾಚಲ ಪ್ರದೇಶದ ಟ್ಯುಟಿಂಗ್​ನಲ್ಲಿ ಅತಿ ದೊಡ್ಡ ಸರಕು ಸಾಗಣೆ ವಿಮಾನ ಸಿ-17 ಗ್ಲೋಬಲ್​ವಾಸ್ಟರ್ ಅನ್ನು ಇಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
 • ಇದರಿಂದ ತುರ್ತು ಸಂದರ್ಭದಲ್ಲಿ ಸಾಧನ- ಸಲಕರಣೆ, ಸೇನಾ ತುಕಡಿಗಳನ್ನು ತ್ವರಿತವಾಗಿ ಗಡಿಯ ಬಳಿಗೆ ಸಾಗಿಸಲು ಮತ್ತು ಅವಘಡಗಳ ಸಂದರ್ಭದಲ್ಲಿ ವಸ್ತು ಅಥವಾ ವ್ಯಕ್ತಿಗಳನ್ನು ತ್ವರಿತವಾಗಿ ಸಾಗಿಸಲು ಅನುಕೂಲವಾಗಲಿದೆ.
 • 18 ಟನ್ ತೂಕವನ್ನು ಹೊತ್ತುತಂದಿದ್ದ ಈ ವಿಮಾನವನ್ನು ಅಪ್ಪರ್ ಸಿಯಾಂಗ್ ಜಿಲ್ಲೆಯ ಟ್ಯುಟಿಂಗ್ ಅಡ್ವಾನ್ಸ್​ಡ್ ಲ್ಯಾಂಡಿಂಗ್ ಗ್ರೌಂಡ್ (ಎಎಲ್​ಜಿ)ನಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಐಎಎಫ್ ಹರ್ಷ ವ್ಯಕ್ತಪಡಿಸಿದೆ.
 • ಏನಿದು ಸಿ-17 ಗ್ಲೋಬಲ್ ಮಾಸ್ಟರ್?
 • ಸಿ-17 ಗ್ಲೋಬಲ್ ಮಾಸ್ಟರ್ ಅಮೆರಿಕ ನಿರ್ವಿುತ ಸೇನಾ ಬೃಹತ್ ಸರಕು ಸಾಗಣೆ ವಿಮಾನ, ಎರಡು ಪಿಸ್ಟನ್ ಇಂಜಿನ್ ಹೊಂದಿರುವ ಇದನ್ನು ಮೊದಲು ಡೌಗ್ಲಾಸ್ ಸಿ-74 ಗ್ಲೋಬಲ್ ಮಾಸ್ಟರ್ ಮತ್ತು ಡೌಗ್ಲಾಸ್ ಸಿ-124 ಗ್ಲೋಬಲ್ ಮಾಸ್ಟರ್-2 ಎಂದು ಹೆಸರಿಸಲಾಗಿತ್ತು.
 • ಇವು ವಿಶ್ವದಾದ್ಯಂತ 1990ರಿಂದ ಬಳಕೆಯಲ್ಲಿವೆ. ಭಾರತೀಯ ವಾಯುಪಡೆಯು 10 ಸಿ- 17 ವಿಮಾನಗಳನ್ನು ಖರೀದಿಸಲು 2010ರಲ್ಲಿ ಒಪ್ಪಂದ ಮಾಡಿಕೊಂಡಿತು.
 • ಮೊದಲು ವಿಮಾನವು 2013ರಲ್ಲಿ ಭಾರತಕ್ಕೆ ಆಗಮಿಸಿತು. ಸಮುದ್ರ ಮಟ್ಟದಿಂದ 13 ಸಾವಿರ ಅಡಿ ಎತ್ತರ ಪ್ರದೇಶದಲ್ಲೂ ಸುರಕ್ಷಿತವಾಗಿ ಹಾರಾಟ ನಡೆಸುವ ಈ ವಿಮಾನವು ಹಿಮಾಲಯ ಪರ್ವತ ಶ್ರೇಣಿಯಿಂದ ಹಿಡಿದು ಹಿಂದು ಮಹಾಸಾಗರದವರೆಗೆ ಹಾರಾಟ ಮಾಡುವ ಸಾಮರ್ಥ್ಯ ಹೊಂದಿದೆ.
 • ಸೇನಾ ಸಾಮಾನು ಸರಂಜಾಮು ಸಾಗಣೆಯ ಜತೆಗೆ ಕನಿಷ್ಠ ವೈದ್ಯಕೀಯ ನೆರವನ್ನು ಇದು ನೀಡಲಿದೆ.

ವಿಮಾನದ ವಿಶೇಷ

 • 174 ಅಡಿ ಉದ್ದ
 • 170 ಅಡಿ ರೆಕ್ಕೆಗಳ ಅಗಲ
 • 77,500 ಕೆ.ಜಿ ಗರಿಷ್ಠ ತೂಕ ಹೊತ್ತೊಯ್ಯುವ ಸಾಮರ್ಥ್ಯ
 • 65 ಲಕ್ಷ ಕೆ.ಜಿ. ಟೇಕಾಫ್ ಸಂದರ್ಭದಲ್ಲಿ ಒಟ್ಟಾರೆ ತೂಕ
 • 88 ಅಡಿ ಒಳಭಾಗದ ಉದ್ದ
 • 18 ಅಡಿ ಒಳಭಾಗದ ಅಗಲ
 • 4 ಅಡಿ ಒಳಭಾಗದ ಎತ್ತರ

ಪ್ರಾಣಾಂತಿಕ ಕಾಯಿಲೆ ಎಎಲ್‌ಎಸ್

 • ಅಮಿಯೊಟ್ರೊಫಿಕ್ ಲ್ಯಾಟರಲ್ ಸ್ಲಿರಾಸಿಸ್ ಕಾಯಿಲೆಗೆ ತುತ್ತಾದವರು ಐದಾರು ವರ್ಷಗಳ ಒಳಗೆ ಅಸುನೀಗುತ್ತಾರೆ. ಈ ಅವಧಿಯಲ್ಲಿ ಅವರ ಮೆದುಳು ಮಾತ್ರ ಸಕ್ರಿಯವಾಗಿರುತ್ತದೆಯೇ ಹೊರತು ಸಂಪೂರ್ಣ ದೇಹ ನಿಷ್ಕ್ರಿಯಗೊಂಡಿರುತ್ತದೆ.
 • ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಅವರು ಈ ರೋಗದಿಂದ ಬಳಲುತ್ತಿದ್ದರು. ಹಾಕಿಂಗ್ಸ್‌ಗೆ ಯೌವನದಲ್ಲೇ ಈ ಕಾಯಿಲೆ ತಗುಲಿದರೂ, ತಮ್ಮ ಅಸಾಧಾರಣ ಮನೋಬಲದಿಂದಲೇ 76 ವರ್ಷಗಳ ವರೆಗೆ ಬದುಕಿದ್ದರು.
 • ಸ್ಟೀಫನ್‌ ಹಾಕಿಂಗ್‌ ಅವರು ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್‌ (ಅಥವಾ ALS) ಎಂಬ ಅಪರೂಪದ ಕಾಯಿಲೆಗೆ ತುತ್ತಾಗಿದ್ದರು. ಇದು ಒಂದು ಬಗೆಯ ತೀವ್ರತರದ ಸ್ನಾಯುಚಾಲಕ ನರಕೋಶದ ಕಾಯಿಲೆಯಾಗಿದೆ. ಹಾಕಿಂಗ್‌ ಅವರು ಬೆನ್ನುಹುರಿಯ ಸ್ನಾಯು ಕ್ಷೀಣತೆಯ IVನೇ ವಿಧಕ್ಕೆ ತುತ್ತಾಗಿದ್ದಾರೆ ಎಂದು ಹಲವಾರು ನರಸ್ನಾಯು ತಜ್ಞರು ನಂಬಿದ್ದರು.
 • ಹಾಕಿಂಗ್‌ರಿಗೆ ತಗುಲಿದ ಈ ಅನಾರೋಗ್ಯವನ್ನು ALSನ ಒಂದು ವಿಧವೆಂದು ಪರಿಗಣಿಸಿದ್ದು, ಅವರಿಗೆ ತಗುಲಿರುವ ಈ ALS ನಮೂದಿಸಲಾಗಿರುವ ನಿದರ್ಶನಗಳಲ್ಲಿಯೇ ಅತಿ ವಿಶಿಷ್ಟವಾಗಿದೆ.
 • ರೋಗತಪಾಸಣೆ ನಡೆಸಿ ALS ತಗುಲಿರುವುದು ಖಚಿತವಾದ ನಂತರ 10 ವರ್ಷಗಳಿಗೂ ಹೆಚ್ಚು ಕಾಲ ಬದುಕಿ ಉಳಿಯುವುದೇ ಅಪರೂಪವಾಗಿದೆ; ಈ ರೀತಿ ಸುದೀರ್ಘ ಕಾಲ ಬದುಕಿದ ಕಾಲಾವಧಿಗಳೆಂದರೆ 32 ಹಾಗೂ 39 ವರ್ಷಗಳು ಮಾತ್ರ. ಈ ರೀತಿಯ ಸನ್ನಿವೇಶಗಳನ್ನು ಅದೃಷ್ಟವೆಂದೇ ಹೇಳಬಹುದು; ಯಾಕೆಂದರೆ ಈ ರೋಗದ ನಂತರದ ಹಂತಗಳ ಚಿಕಿತ್ಸೆಯಲ್ಲಿ ಸರಿಯಾದ ಪ್ರಗತಿ ಕಂಡುಬಂದಿಲ

20 ಲಕ್ಷ ಕಿ.ಮೀ ‘ಬೆನ್ನು’ಹತ್ತಿ ಹೊರಟ ನಾಸಾ

 • ಕ್ಷುದ್ರಗ್ರಹಗಳು ಬೆಲೆಬಾಳುವ ಖನಿಜಗಳ ಗಣಿ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಭೂಮಿಗೆ ಸಮೀಪದಲ್ಲಿರುವ ಕ್ಷುದ್ರಗ್ರಹ ‘ಬೆನ್ನು’ವಿನ ಬೆನ್ನತ್ತಿದೆ. ಉಕ್ಕು ಮತ್ತು ನಿಕಲ್‌ ಅಂಶ ಇರುವ ಬಗ್ಗೆ ಮಾಹಿತಿ ಪಡೆದಿರುವ ಕಂಪನಿಗಳು ಅಲ್ಲಿಯೂ ಗಣಿಗಾರಿಕೆ ನಡೆಸಬಹುದೇ ಎಂಬ ಚಿಂತನೆಯಲ್ಲಿವೆ.
 • 2016ರಲ್ಲಿ ಫ್ಲೋರಿಡಾದ ಕೇಪ್‌ ಕನವೆರಲ್‌ನಿಂದ ಒಸಿರಿಸ್‌-ರೆಕ್ಸ್‌ ಎಂಬ ಉಪಗ್ರಹವನ್ನು ನಾಸಾ ಬೆನ್ನುವಿನ ಹಿಂದೆ ಛೂ ಬಿಟ್ಟಿತು. ಇದುವರೆಗೆ ಈ ಉಪಗ್ರಹ 130 ಕೋಟಿ ಕಿ.ಮೀ ಕ್ರಮಿಸಿದೆ. ವರ್ಷದಿಂದ ಸೂರ್ಯನನ್ನು ಸುತ್ತುತ್ತಿದ್ದು, ಭೂಮಿಗೆ ಸಮೀಪದಲ್ಲಿರುವ ಕ್ಷುದ್ರಗ್ರಹ ಬೆನ್ನುವಿನ ಬೇಟೆಗೆ ಕಾದಿದೆ.
 • ಮುಂದಿನ ಆಗಸ್ಟ್‌ನಲ್ಲಿ ಒಸಿರಿಸ್‌-ರೆಕ್ಸ್‌ ಬೆನ್ನುವಿನ ಮೊದಲ ಚಿತ್ರವನ್ನು ತೆಗೆಯಲಿದೆ. ಬೆನ್ನುವನ್ನು ಸಮೀಪಿಸಲು 20 ಕೋಟಿ ಕಿ.ಮೀ ಪ್ರಯಾಣವನ್ನು ಆರಂಭಿಸಲಿದ್ದು, ಡಿಸೆಂಬರ್‌ಗೆ ಗುರಿ ಸಾಧಿಸಲಿದೆ. ನಂತರ ಒಂದು ವರ್ಷದ ವರೆಗೆ ಕ್ಷುದ್ರಗ್ರಹವನ್ನು ಸುತ್ತುತ್ತ, ಚಿತ್ರಗಳನ್ನು ಕ್ಲಿಕ್ಕಿಸುತ್ತ, ಮಾಹಿತಿ ಸಂಗ್ರಹಿಸುತ್ತಿರುತ್ತದೆ
 • ಜುಲೈ 2020ಕ್ಕೆ, ಒಸಿರಿಸ್‌-ರೆಕ್ಸ್‌ ಬೆನ್ನುವಿನ ಮೇಲ್ಮೈ ಸಮೀಪಕ್ಕೆ ಹೋಗಿ, ಯಾಂತ್ರಿಕ ಕೈಯನ್ನು ಹೊರ ಚಾಚಿ 3 ಬಗೆಯ ಸ್ಯಾಂಪಲ್‌ಗಳನ್ನು ಸಂಗ್ರಹಿಸುತ್ತದೆ. 4 ವರ್ಷಗಳ ಬಾಹ್ಯಾಕಾಶ ಯಾತ್ರೆ ನಂತರ ಒಸಿರಿಸ್‌-ರೆಕ್ಸ್‌ ಕ್ಷುದ್ರಗ್ರಹದಿಂದ ಸ್ಯಾಂಪಲ್‌ ಸಂಗ್ರಹಕ್ಕೆ ಕೆಲವೇ ಸೆಕೆಂಡುಗಳನ್ನು ವ್ಯಯಿಸುತ್ತದೆ.
 • ಭೂಮಿಯ ಸಮೀಪದ ಕ್ಷುದ್ರಗ್ರಹ
  ಪ್ರತಿ 6 ವರ್ಷಗಳಿಗೆ ಒಂದು ಬಾರಿ ಬೆನ್ನು ಭೂಮಿಯ ಸಮೀಪಕ್ಕೆ ಬರುತ್ತದೆ. ವಿಜ್ಞಾನಿಗಳ ಪ್ರಕಾರ ಇಂತಹ ಕ್ಷುದ್ರಗ್ರಹಗಳು ಶೇ.10ರಷ್ಟು ಉಕ್ಕು ಮತ್ತು ನಿಕಲ್‌ನಿಂದ ಸೃಷ್ಟಿಗೊಂಡಿವೆ.
 • ಆಕಾರ & ರಾಸಾಯನಿಕ ಪ್ರಕ್ರಿಯೆ ಅಧ್ಯಯನ
  ಬೆನ್ನುವಿನ ಮೇಲ್ಮೈನಲ್ಲಿದ್ದಷ್ಟು ಸಮಯ ಉಪಗ್ರಹವು ಕ್ಷುದ್ರಗ್ರಹದ ಆಕಾರ ಮತ್ತು ರಾಸಾಯನಿಕ ಕ್ರಿಯೆಗಳ ಬಗ್ಗೆ ಅಧ್ಯಯನ ನಡೆಸಲಿದೆ. ಬೆನ್ನುವಿನ ಘನವಸ್ತುವಿನ ಸ್ಯಾಂಪಲ್‌ ಮತ್ತು ಇತರ ಮಾಹಿತಿ ಸಂಗ್ರಹಿಸುತ್ತದೆ. ಇದರಿಂದ ವಿಜ್ಞಾನಿಗಳು ಭವಿಷ್ಯದಲ್ಲಿ ಬೆನ್ನು ಭೂಮಿಗೆ ಅಪ್ಪಳಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ.

5 ವರ್ಷಗಳ ನಂತರ ವಾಪಾಸ್

ಮಾರ್ಚ್‌ 2021ಕ್ಕೆ ಒಸಿರಿಸ್‌-ರೆಕ್ಸ್‌ ಭೂಮಿಗೆ ಹಿಂತಿರುಗಲು ಪ್ರಯಾಣ ಆರಂಭಿಸುತ್ತದೆ. 2023 ಸೆಪ್ಟಂಬರ್‌ನಲ್ಲಿ ಭೂಮಿಗೆ ಸಮೀಪಿಸುತ್ತಿದ್ದಂತೆ, ಕ್ಷುದ್ರಗ್ರಹದಿಂದ ಸಂಗ್ರಹಿಸಿದ ಕ್ಯಾಪ್ಸೂಲ್‌ಅನ್ನು ಪ್ಯಾರಾಚೂಟ್‌ ಮೂಲಕ ಭೂಮಿಗೆ ತಲುಪಿಸುತ್ತದೆ.

ಕೋಮುಗಲಭೆ: ಎರಡನೇ ಸ್ಥಾನದಲ್ಲಿ ಕರ್ನಾಟಕ

 • ದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆದ ಕೋಮುಗಲಭೆಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ ಗೃಹಖಾತೆ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅವರು ಲೋಕಸಭೆಗೆ ಮಾಹಿತಿ ನೀಡಿದರು.
 • ಎರಡೂ ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಕೋಮುಗಲಭೆಗಳು ದಾಖಲಾಗಿವೆ.
 • 2017: ಮೊದಲ ಐದು ರಾಜ್ಯಗಳು
 • ಉತ್ತರ ಪ್ರದೇಶ 195
 • ಕರ್ನಾಟಕ 100
 • ರಾಜಸ್ಥಾನ 91
 • ಬಿಹಾರ 85
 • ಮಧ್ಯಪ್ರದೇಶ 60

ಕೋಮುಗಲಭೆಗೆ ಕಾರಣಗಳು:

 • ಧಾರ್ಮಿಕ ಸಂಗತಿ,ಭೂಮಿ, ಆಸ್ತಿ ವ್ಯಾಜ್ಯ, ಲಿಂಗ ಸಂಬಂಧಿ ಅಪರಾಧಗಳು, ಸಾಮಾಜಿಕ ಜಾಲತಾಣ ಸಂಬಂಧಿ ವಿಷಯಗಳು,ಇತರೆ ಕಾರಣಗಳು

ನಾಗರಿಕ ಸೇವೆ: ಬೆಂಗಳೂರಿಗೆ ಕೊನೆಯ ಸ್ಥಾನ

 • ಸ್ಥಳೀಯ ಸಂಸ್ಥೆ ಆಡಳಿತ ಮತ್ತು ನಾಗರಿಕ ಸೇವೆಗೆ ಸಂಬಂಧಿಸಿದಂತೆ ದೇಶದ ಪ್ರಮುಖ 23 ನಗರಗಳಲ್ಲಿಯೇ ರಾಜ್ಯದ ರಾಜಧಾನಿ ಬೆಂಗಳೂರು ಅತ್ಯಂತ ಕಳಪೆ ಸಾಧನೆ ಮಾಡಿರುವ ನಗರವಾಗಿದೆ.
 • ಬೆಂಗಳೂರು ಮೂಲದ ಜನಾಗ್ರಹ ಸಂಸ್ಥೆಯು ಬಿಡುಗಡೆ ಮಾಡಿರುವ ‘ಭಾರತದ ನಗರ ವ್ಯವಸ್ಥೆಯ ವಾರ್ಷಿಕ ಸಮೀಕ್ಷೆ’ಯ (ಎಎಸ್‌ಐಸಿಎಸ್) ಐದನೇ ವರದಿಯ ಪ್ರಕಾರ, ಬೆಂಗಳೂರಿನ ನಾಗರಿಕರಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ ದೊರೆಯುತ್ತಿರುವ ಸೇವೆಯು ತೃಪ್ತಿದಾಯಕವಾಗಿಲ್ಲ.
 • ‘ಉತ್ತಮ ಆಡಳಿತಕ್ಕೆ ಜಾಗತಿಕವಾಗಿ ಹೆಸರಾಗಿರುವ ಲಂಡನ್‌ (10ಕ್ಕೆ 8.8 ಅಂಕ), ನ್ಯೂಯಾರ್ಕ್‌ (8.8 ಅಂಕ) ಮತ್ತು ಜೋಹಾನ್ಸ್‌ಬರ್ಗ್‌ (7.6 ಅಂಕ) ನಗರಗಳು ಅನುಸರಿಸುತ್ತಿರುವ ಮಾನದಂಡವನ್ನು ಆಧಾರವಾಗಿ ಇರಿಸಿಕೊಂಡು, ಆಡಳಿತ ಮತ್ತು ನಾಗರಿಕ ಸೇವೆಗೆ ಸಂಬಂಧಿಸಿದಂತೆ ದೇಶದ 23 ನಗರಗಳ ನಿವಾಸಿಗಳಿಗೆ 89 ಪ್ರಶ್ನೆಗಳನ್ನು ಕೇಳುವ ಮೂಲಕ ಪ್ರತಿ ನಗರಕ್ಕೂ ಅಂಕ ನೀಡಲಾಗಿದೆ
 • 2013ರಿಂದ ಸಂಸ್ಥೆಯು ಸಮೀಕ್ಷೆ ನಡೆಸುತ್ತಿದೆ. ಕಳೆದ ವರ್ಷ ಬಿಡುಗಡೆ ಮಾಡಲಾದ ವರದಿಯಲ್ಲಿ 16ನೇ ಸ್ಥಾನದಲ್ಲಿದ್ದ ಬೆಂಗಳೂರು ನಗರ ಈ ಬಾರಿ 3.0 ಅಂಕ ಗಳಿಸುವ ಮೂಲಕ 23ನೇ ಸ್ಥಾನಕ್ಕೆ ಕುಸಿದಿದೆ. 5.1 ಅಂಕ ಗಳಿಸಿರುವ ಮಹಾರಾಷ್ಟ್ರದ ಪುಣೆ ನಗರವು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ
 • ನಗರ ಯೋಜನೆ ಮತ್ತು ವಿನ್ಯಾಸ ರೂಪಿಸುವಿಕೆ, ಜನಸಂಖ್ಯೆ ಮತ್ತು ಸಂಪನ್ಮೂಲ, ಅಧಿಕಾರ ಮತ್ತು ಕಾನೂನುಬದ್ಧ ರಾಜಕೀಯ ಪ್ರಾತಿನಿಧ್ಯ, ಪಾರದರ್ಶಕತೆ, ಜವಾಬ್ದಾರಿ ಮತ್ತು ಜನರ ಪಾಲ್ಗೊಳ್ಳುವಿಕೆಯ ಅಂಶಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ.
 • ಪಾರದರ್ಶಕತೆ, ಜವಾಬ್ದಾರಿಮತ್ತು ಜನರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಮುಂಬೈ, ಚಂಡೀಗಡ, ಡೆಹ್ರಾಡೂನ್‌, ಪಟ್ನಾ, ಚೆನ್ನೈ ಮತ್ತು ಜೈಪುರ ನಗರಗಳಿಗಿಂತ ಉತ್ತಮ ಸ್ಥಾನದಲ್ಲಿರುವ ಬೆಂಗಳೂರು, ಮಿಕ್ಕ ಅಂಶಗಳಲ್ಲಿ ಎಲ್ಲ ನಗರಗಳಿಗಿಂತಲೂ ಹಿಂದಿದೆ ಎಂದು ಅವರು ಹೇಳಿದರು.
 • ಬೆಂಗಳೂರಿನ ಸ್ಥಳೀಯ ಸಂಸ್ಥೆಯು ಕೇಂದ್ರ ಸರ್ಕಾರದ ಅಮೃತ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಮಾನದಂಡಗಳನ್ನು ಅನುಸರಿಸದೇ ಇರುವುದೂ ಹಿಂದುಳಿಯುವಿಕೆಗೆ ಕಾರಣವಾಗಿದೆ

 • ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಮೂಲಕ ನಗರ ಜೀವನ ಪರಿಸ್ಥಿತಿಗಳನ್ನು ರೂಪಾಂತರಗೊಳಿಸಲು ಸರ್ಕಾರದಿಂದ ಪುನರ್ವಸತಿ ಮತ್ತು ನಗರ ಪರಿವರ್ತನೆಗಾಗಿ ಅಟಲ್ ಮಿಷನ್ (ಎಎಮ್ಆರ್ಯುಟ್) ಸ್ಮಾರ್ಟ್ ನಗರಗಳೊಂದಿಗೆ ಜಂಟಿಯಾಗಿ ಯೋಜನೆ ಮತ್ತು ಪ್ರಾರಂಭಿಸಲಾಯಿತು
 • ಐದು ವರ್ಷಗಳಲ್ಲಿ 500 ನಗರಗಳು ಮತ್ತು ಪಟ್ಟಣಗಳನ್ನು ದಕ್ಷ ನಗರ ಪ್ರದೇಶಗಳಲ್ಲಿ ಪರಿವರ್ತಿಸುವ ಗುರಿಯನ್ನು AMRUT ಹೊಂದಿದೆ.ನಗರಾಭಿವೃದ್ಧಿ ಸಚಿವಾಲಯ ಐನೂರು ನಗರಗಳನ್ನು ರಾಜ್ಯ ಸರ್ಕಾರಗಳ ಸಹಾಯದಿಂದ ಆಯ್ಕೆ ಮಾಡಿತು.
 • ಮಿಷನ್ ಕೆಳಗಿನ ಪ್ರಾಬಲ್ಯ ಪ್ರದೇಶಗಳ ಮೇಲೆ ಕೇಂದ್ರೀಕರಿಸುತ್ತದೆ: (i) ನೀರು ಸರಬರಾಜು, (ii) ಒಳಚರಂಡಿ ಸೌಕರ್ಯಗಳು ಮತ್ತು ಸೆಪ್ಟೇಜ್ ನಿರ್ವಹಣೆ, (iii) ಪ್ರವಾಹವನ್ನು ಕಡಿಮೆ ಮಾಡಲು ಸ್ಟಾರ್ಮ್ ವಾಟರ್ ಡ್ರೈನ್ಸ್, (iv) ಪಾದಚಾರಿ, ಯಾಂತ್ರೀಕೃತ ಮತ್ತು ಸಾರ್ವಜನಿಕ ಸಾರಿಗೆ ಸೌಲಭ್ಯಗಳು, ಪಾರ್ಕಿಂಗ್ ಸ್ಥಳಾವಕಾಶಗಳು , ಮತ್ತು (v) ಹಸಿರು ಸ್ಥಳಗಳು, ಉದ್ಯಾನವನಗಳು ಮತ್ತು ಮನರಂಜನಾ ಕೇಂದ್ರಗಳನ್ನು ವಿಶೇಷವಾಗಿ ಮಕ್ಕಳಿಗೆ, ರಚಿಸುವ ಮತ್ತು ಅಪ್ಗ್ರೇಡ್ ಮಾಡುವ ಮೂಲಕ ನಗರದ ಮಹತ್ವಾಕಾಂಕ್ಷೆಯ ಮೌಲ್ಯವನ್ನು ಹೆಚ್ಚಿಸುವುದು.
 • ಅಮೃತ್ ಯೋಜನೆ ಅಡಿ ಕರ್ನಾಟಕದ ನಗರಗಳು
 • ಬೆಂಗಳೂರು, ಧಾರವಾಡ, ಮಂಗಳೂರು, ಮೈಸೂರು, ಬೆಲಾಗವಿ, ವಿಜಯಪುರ, ಕಲಬುರಗಿ, ದಾವಣಗೆರೆ, ಶಿವಮೊಗ್ಗ, ಬಲ್ಲರಿ, ತುಮಕುರು, ಹೋಸಪೇಟೆ, ರಾಯಚೂರು, ಗದಗ-ಬೆಟೇಗೇರಿ, ಬೀದರ್, ಭದ್ರಾವತಿ, ರಾಬರ್ಟ್ಸೊನ್ಪೇಟ್ ಕೋಲಾರ, ಚಿತ್ರದುರ್ಗ, ಕೋಲಾರ, ಮಂಡ್ಯ, ಚಿಕ್ಕಮಗಳೂರು, ಹಾಸನ, ಬಾಗಲಕೋಟೆ, ಉಡುಪಿ, ರಾಣಬೆನ್ನೂರ್, ಗಂಗಾವತಿ ಮತ್ತು ಬಾದಾಮಿ

1.ಸಿ-17 ಗ್ಲೋಬಲ್ ಮಾಸ್ಟರ್ ಎಂಬುದು

A.ಅಮೇರಿಕಾ ಸೇನಾ ಸರಕು ಸಾಗಣೆ ವಿಮಾನ

B.ಚೀನಾದ ಯುದ್ಧ ವಿಮಾನ

C.ಭಾರತದ ಪ್ರಯಾಣಿಕ ವಿಮಾನ

D.ಯಾವುದು ಅಲ್ಲ

2.ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್ (ಅಥವಾ ALS) ಯಾವುದ್ದಕೆ ಸಂಬಂಧಿಸಿದೆ?

A.ದೊಡ್ಡಕರುಳಿನ ಕಾಯಿಲೆ

B.ನರಕೋಶದ ಕಾಯಿಲೆ

C.ಮೂಳೆಗಳ ಕಾಯಿಲೆ

D.ರಕ್ತದ ಕಾಯಿಲೆ

3.ಬೆನ್ನು ಕ್ಷುದ್ರ ಗ್ರಹದ ಮೇಲೆ ಪತ್ತೆಯಾಗಿರುವ ಖನಿಜಗಳು ಯಾವುವು ?

A.ಕಬ್ಬಿಣದ ಅದಿರು

B.ಸತು ಮತ್ತು ತಾಮ್ರ

C.ಉಕ್ಕು ಮತ್ತು ನಿಕ್ಕಲ್

D.ಮೇಲಿನ ಎಲ್ಲವೂ

4.ಭಾರತದ ನಗರ ವ್ಯವಸ್ಥೆಯ ವಾರ್ಷಿಕ ಸಮೀಕ್ಷೆ’ಯ ವರದಿಯನ್ನು ಯಾವ ಸಂಸ್ಥೆಬಿಡುಗಡೆಗೊಳಿಸಿದೆ ?

A.ಸೆಬಿ

B.ಆರ್.ಬಿ .ಐ

C.ಯಾವುದು ಅಲ್ಲ

D.ಜನಾಗ್ರಹ

5.ರಾಜ್ಯದ ರಾಜ್ಯಪಾಲರು ಹೊರಡಿಸಿದ ಸುಗ್ರೀವಾಜ್ಞೆ ಶಾಸಕಾಂಗದಿಂದ ಅನುಮೋದನೆ ಪಡೆಯದಿದ್ದರೆ ಎಷ್ಟು ಅವಧಿಯವರಗೆ ಜಾರಿಯಲ್ಲಿರುತ್ತದೆ?

A.3 ತಿಂಗಳು

B.1 ತಿಂಗಳು

C.6 ತಿಂಗಳು

D.4 ತಿಂಗಳು

6.ಭಾರತ ಸಂವಿಧಾನದಲ್ಲಿರುವ ರಾಜ್ಯಸಭೆ ಸದಸ್ಯರ ಚುನಾವಣಾ ವಿಧಾನವನ್ನು ಯಾವ ರಾಷ್ಟ್ರದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?

A.ಐರ್ಲೆಂಡ್

B.ದಕ್ಷಿಣ ಆಫ್ರಿಕಾ

C.ಕೆನಡಾ

D.ಜಪಾನ್

7.ಸ್ವತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮ್ಯಾಜಿನಿ ಕ್ಲಬ್’ ಎಂಬ ತೀವ್ರಗಾಮಿ ಸಂಸ್ಥೆಯನ್ನು ಹುಟ್ಟು ಹಾಕಿದವರು ಯಾರು?

A.ಆಲೂರು ವೆಂಕಟರಾಯ, ಗೋವಿಂದರಾವ್ ಯಾಳಗಿ

B.ಗಂಗಾಧರರಾವ್ ದೇಶಪಾಂಡೆ, ಆಲೂರು ವೆಂಕಟರಾಯ

C.ಶ್ರೀನಿವಾಸರಾವ್ ಕೌಜಲಗಿ, ಗೋವಿಂದರಾವ್ ಯಾಳಗಿ

D.ಗಂಗಾಧರರಾವ್ ದೇಶಪಾಂಡೆ, ಗೋವಿಂದರಾವ್ ಯಾಳಗಿ

8.ಆಡಳಿತ ವ್ಯವಸ್ಥೆಯ ಸುಧಾರಣೆಗಾಗಿ ದಳವಾಯಿ ಎಂಬ ಮುಖ್ಯ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ ಮೈಸೂರಿನ ಅರಸ ಯಾರು?

A.ಚಿಕ್ಕ ದೇವರಾಜ ಒಡೆಯರ್

B.ನಾಲ್ವಡಿ ಕೃಷ್ಣರಾಜ ಒಡೆಯರ್

C.ರಾಜ ಒಡೆಯರ್

D.6ನೇ ಚಾಮರಾಜ ಒಡೆಯರ್

9.1969 ರಲ್ಲಿ ಭಾರತದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾದ ಸಂದರ್ಭದಲ್ಲಿ ದೇಶದ ಪ್ರಧಾನಿಯಾಗಿದ್ದವರು ಯಾರು?

A.ಪಿ ವಿ ನರಸಿಂಹರಾವ್

B.ಐ ಕೆ ಗುಜ್ರಾಲ್

C.ಮೊರಾರ್ಜಿ ದೇಸಾಯಿ

D.ಇಂದಿರಾ ಗಾಂಧಿ

10.ಭಾರತದ ಪ್ರಮುಖ ನಗರಗಳಲ್ಲಿ ಒಂದಾದ ವಿಶಾಖಪಟ್ಟಣ ಈ ಕೆಳಗಿನ ಯಾವ ಕೈಗಾರಿಕೆಗೆ ಪ್ರಸಿದ್ಧಿಯಾಗಿದೆ?

A.ರಸಗೊಬ್ಬರ ಕೈಗಾರಿಕೆ

B.ಕಲ್ಲಿದ್ದಲು ಗಣಿ

C.ಹಡಗು ನಿರ್ಮಾಣ ಕೈಗಾರಿಕೆ

D.ಚರ್ಮದ ಸಾಮಗ್ರಿಗಳ ಕೈಗಾರಿಕೆ

 ಉತ್ತರಗಳು

1.A  2.B  3.C  4.D  5.C  6.B  7.D  8.C  9.D 10.C

Related Posts
Download March 2018 Current affairs Magazine- English and Kannada
Dear Aspirants, We have released March 2018 Current Affairs magazine, both in English and Kannada. You can download from the below link. To download English March 2018 Mahithi Monthly- click here  ಮಾರ್ಚ್ 2018 ...
READ MORE
ಸರ್ಕಾರಿ ಬ್ಯಾಂಕ್‌ಗಳ ವಿಲೀನ ದೇಶಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ತರಲು ಹೊರಟಿರುವ  ಸುಧಾರಣಾ ಕ್ರಮಗಳು ಹೊಸ ಚರ್ಚೆ ಹುಟ್ಟು ಹಾಕಿವೆ. ದೊಡ್ಡ ಬ್ಯಾಂಕ್‌ಗಳಲ್ಲಿ ಸಣ್ಣ ಪುಟ್ಟ ಬ್ಯಾಂಕ್‌ಗಳ ವಿಲೀನ ಆಲೋಚನೆಯು ಭಾರತದ ಪಾಲಿಗೆ ಹೊಸದೇನಲ್ಲ. . ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಭಾರತೀಯ ಸ್ಟೇಟ್‌ ...
READ MORE
Mission Indradhanush
Government has launched Mission Indradhanush to immunise kids against 7 vaccine-preventable diseases. Mission Indradhanush depicts 7 colours of the rainbow which aims to cover all those children by 2020 who are ...
READ MORE
Brazil Zika outbreak
Brazil says the number of babies born with microcephaly or abnormally small heads since October has now reached nearly 4,000. The authorities there believe the increase is caused by an outbreak ...
READ MORE
INDIA and FRANCE
France commits €300 million for solar energy French President Francois Hollande  committed €300 million (around $325 million or Rs. 2,200 crore) over the next five years for the global development of solar ...
READ MORE
7th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಕೇರಳದ ಮನವಿ ತಿರಸ್ಕರಿಸಿದ ಕರ್ನಾಟಕ, ತಮಿಳುನಾಡು ಬಂಡೀಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರವನ್ನು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ತೆರವು ಮಾಡುವಂತೆ ಕೋರಿದ್ದ ಕೇರಳದ ಮನವಿಯನ್ನು ಕರ್ನಾಟಕ ಹಾಗೂ ತಮಿಳುನಾಡು ಅಧಿಕಾರಿಗಳು ತಿರಸ್ಕರಿಸಿದ್ದಾರೆ. ‘ರಾತ್ರಿ ಸಂಚಾರ ನಿಷೇಧದಿಂದಾಗಿ ಬೆಂಗಳೂರಿನಿಂದ ಕೇರಳಕ್ಕೆ ಬರುವ ಪ್ರಯಾಣಿಕರಿಗೆ ...
READ MORE
Karnataka-Comprehensive Area Scheme (CSA)
In an effort to help government-run transport entities, the Karnataka State Transport Authority (KSTU) has come out with a Comprehensive Area Scheme (CSA) for the entire state that bans new ...
READ MORE
“1st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪುರಂದರದಾಸರು ಸುದ್ದಿಯಲ್ಲಿ ಏಕಿದ್ದಾರೆ? ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರ ಹುಟ್ಟೂರಿನ ಜಿಜ್ಞಾಸೆಗೆ ಕೊನೆಗೂ ತೆರೆ ಬಿದ್ದಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಪ್ರಾಂತ್ಯವೇ ದಾಸಶ್ರೇಷ್ಠ ಪುರಂದರಾಸರ ಹುಟ್ಟೂರು ಎಂಬ ಖಚಿತ ವರದಿಯನ್ನು ಅಧ್ಯಯನ ಸಮಿತಿ ಸರಕಾರಕ್ಕೆ ಸಲ್ಲಿಸಿದೆ. ಪುರಂದರದಾಸರ ಹುಟ್ಟೂರು ಮಲೆಸೀಮೆ ಎಂಬ ...
READ MORE
Chinkaras
Scientific name: Gazella bennetti About the animal Indian Gazelles are called shy animals as they always act themselves as an alert nature and usually it roams alone in the wild regions. Not very ...
READ MORE
ಕೃಷಿ ಭಾಗ್ಯ
ಮಳೆಯಾಶ್ರಿತ ಪ್ರದೇಶದ ರೈತರ ಜೀವನೋಪಾಯ ಉತ್ತಮಪಡಿಸಲು 'ಕೃಷಿ ಭಾಗ್ಯ' ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಸ್ವಾಭಾವಿಕ ಸಂಪನ್ಮೂಲ ಮಣ್ಣು ಮತ್ತು ನೀರಿನ ಸಂರಕ್ಷಣೆಯೊಂದಿಗೆ ಕೃಷಿ ಉತ್ಪಾದಕತೆ ಮತ್ತು ರೈತರು ಹಾಗೂ ಕೃಷಿ ಕಾರ್ಮಿಕರ ಆದಾಯ ಮಟ್ಟ ಹೆಚ್ಚಿಸುವುದು ಕೃಷಿ ಭಾಗ್ಯ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಮೊದಲ ...
READ MORE
Download March 2018 Current affairs Magazine- English and
ಸರ್ಕಾರಿ ಬ್ಯಾಂಕ್‌ಗಳ ವಿಲೀನ
Mission Indradhanush
Brazil Zika outbreak
INDIA and FRANCE
7th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
Karnataka-Comprehensive Area Scheme (CSA)
“1st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Chinkaras
ಕೃಷಿ ಭಾಗ್ಯ