“16 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಎಸ್​ಟಿಪಿ ಕಡ್ಡಾಯ ನಿಯಮ

ಸುದ್ಧಿಯಲ್ಲಿ ಏಕಿದೆ ? ನಗರದ ವಸತಿ ಸಮುಚ್ಚಯಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ (ಎಸ್​ಟಿಪಿ) ಘಟಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ನಿಯಮ ಕಗ್ಗಂಟಾಗಿಯೇ ಮುಂದುವರಿದಿದೆ.

ಸಮಸ್ಯೆಗೆ ಕಾರಣ

 • ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಲ್ಲಿ ಜಲಮಂಡಳಿ ಸೇವೆ ಇಲ್ಲದಿರುವುದರಿಂದ ಆ ಪ್ರದೇಶಗಳಲ್ಲಿ ಎಸ್​ಟಿಪಿ ಕಡ್ಡಾಯದ ನಿಯಮ ಅನ್ವಯಿಸದಿರುವುದು ಒಂದೆಡೆಯಾದರೆ,
 • ನಗರದ ಇತರ ಪ್ರದೇಶಗಳಲ್ಲಿ 2016ರ ಪೂರ್ವದಲ್ಲಿ ನಿರ್ವಣಗೊಂಡಿರುವ ಕಟ್ಟಡಗಳಿಗೂ ನಿಯಮ ಅನ್ವಯಿಸುತ್ತಿಲ್ಲ.
 • ಹಳೆಯ ಕಟ್ಟಡಗಳಿಗೂ ನಿಯಮ ಜಾರಿಗೊಳಿಸಲು ಮಂಡಳಿ ಮುಂದಾಗಿತ್ತಾದರೂ ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ತನ್ನ ಆದೇಶವನ್ನು 3-4 ಬಾರಿ ಬದಲಾಯಿಸಿತ್ತು. ನಂತರದಲ್ಲಿಯೂ ಎಸ್​ಟಿಪಿಗಳ ಕುರಿತಾಗಿ ಸ್ಪಷ್ಟ ನಿಲುವು ತಾಳಲು ಜಲಮಂಡಳಿಗೆ ಸಾಧ್ಯವಾಗಿಲ್ಲ.
 • ಕಾವೇರಿ ಐದನೇ ಹಂತದ ವಿಸ್ತರಣೆ ಬೆಂಗಳೂರಿನ ಪಾಲಿಗೆ ಕೊನೆಯ ಅವಕಾಶವಾಗಿದೆ. ನಂತರದಲ್ಲಿ ನೀರಿನ ಮರುಬಳಕೆ ಮಾಡಿದಲ್ಲಿ ಮಾತ್ರವೇ ರಾಜಧಾನಿ ಜನರಿಗೆ ನೀರು ದೊರೆಯಲಿದೆ. ಹಿನ್ನೆಲೆಯಲ್ಲಿ ಎಸ್ಟಿಪಿಗಳು ಮಹತ್ವ ಪಡೆಯಲಿದ್ದು, ಈ ಕುರಿತಾಗಿ ಸ್ಪಷ್ಟ ನಿಯಮ ಜಾರಿಗೆ ಬರುವುದು ಅಗತ್ಯವಿದೆ.

ನಿಯಮ ಏನಿದೆ?:

 • ಪ್ರಸ್ತುತ 2016ರ ನಂತರ ನಿರ್ವಣಗೊಂಡಿರುವ 50ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ವಸತಿ ಸಮುಚ್ಚಯ ಅಥವಾ 2 ಸಾವಿರ ಚದರ ಅಡಿಗಿಂತ ಮೇಲ್ಪಟ್ಟಿರುವ ಕಟ್ಟಡಗಳಲ್ಲಿ ಎಸ್​ಟಿಪಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
 • ಹಳೆಯದಾಗಿರುವ ಕಟ್ಟಡಗಳಲ್ಲಿ ಎಸ್​ಟಿಪಿ ಅಳವಡಿಕೆ ಕಷ್ಟಕರ ಎಂಬುದನ್ನು ಅಪಾರ್ಟ್​ವೆುಂಟ್ ನಿವಾಸಿಗಳು ಮನದಟ್ಟು ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರ ತಾತ್ಕಾಲಿಕ ವಿನಾಯಿತಿ ನೀಡಿತ್ತಾದರೂ, ನಂತರದಲ್ಲಿ ಯಾವುದೇ ಸ್ಪಷ್ಟ ನಿಲುವು ಕೈಗೊಳ್ಳಲು ಸಾಧ್ಯವಾಗಿಲ್ಲ.
 • ನಗರದಲ್ಲಿ ಪ್ರತಿದಿನ 1,510 ದಶಲಕ್ಷ ಲೀಟರ್ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದ್ದು, ಜಲಮಂಡಳಿಯಿಂದ ನಿರ್ವಿುಸಲಾಗಿರುವ ಸಾರ್ವಜನಿಕ ಎಸ್​ಟಿಪಿಗಳಿಗೆ ಪೂರ್ಣ ಪ್ರಮಾಣದಲ್ಲಿ ತ್ಯಾಜ್ಯ ನೀರು ಹರಿದುಬರುತ್ತಿಲ್ಲ.
 • ಅಲ್ಲದೆ ಈ ಎಸ್​ಟಿಪಿಗಳು ದಿನಕ್ಕೆ ಒಂದು ಸಾವಿರ ದಶಲಕ್ಷ ಲೀಟರ್ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಮಾತ್ರ ಹೊಂದಿವೆ.

ಒಳಚರಂಡಿ ಸಂಸ್ಕರಣಾ  ಪ್ರಕ್ರಿಯೆ

 • ಒಳಚರಂಡಿ ದೊಡ್ಡ ಪ್ರಮಾಣದಲ್ಲಿ ವಿಷಯುಕ್ತವಾಗಿರುವ ಸಾವಯವ ವಸ್ತುಗಳನ್ನು ಒಳಗೊಂಡಿದೆ. ಈ ವಿಷಕಾರಿ ಸಾವಯವ ಪದಾರ್ಥವನ್ನು ತೆಗೆದುಹಾಕಲು ಸೂಕ್ಷ್ಮಜೀವಿಗಳನ್ನು ವ್ಯಾಪಕವಾಗಿ ಚರಂಡಿ ಸಂಸ್ಕರಣ ಘಟಕದಲ್ಲಿ ಬಳಸಲಾಗುತ್ತದೆ. ಚರಂಡಿ ಅಥವಾ ತ್ಯಾಜ್ಯನೀರಿನ ಸಂಸ್ಕರಣ ಘಟಕವು ಎರಡು ಹಂತಗಳನ್ನು ಒಳಗೊಂಡಿದೆ.

ಪ್ರಾಥಮಿಕ ಚಿಕಿತ್ಸೆ

 • ಇದು ಭೌತಿಕ ಪ್ರಕ್ರಿಯೆಗಳ ಮೂಲಕ ತ್ಯಾಜ್ಯನೀರಿನಲ್ಲಿ ದೊಡ್ಡ ಅಥವಾ ಸಣ್ಣ ಗಾತ್ರದ ಘಟಕಗಳನ್ನು ತೆಗೆಯುವುದು ಒಳಗೊಂಡಿರುತ್ತದೆ.

ಜೈವಿಕ ಚಿಕಿತ್ಸೆ:

 • ಏರೋಬಿಕ್ ಸೂಕ್ಷ್ಮಾಣುಜೀವಿಗಳನ್ನು ಕೊಳಚೆನೀರು ಸಂಸ್ಕರಣ ಘಟಕಕ್ಕೆ ಸೇರಿಸಲಾಗುತ್ತದೆ . ಈ ಸೂಕ್ಷ್ಮಜೀವಿಗಳು ಒಳಚರಂಡಿಯ ಜೈವಿಕ ಘಟಕಗಳನ್ನು ಬಳಸಿಕೊಳ್ಳುತ್ತವೆ ಮತ್ತು ವಿಷತ್ವವನ್ನು ಕಡಿಮೆಗೊಳಿಸುತ್ತವೆ. ಇದನ್ನು BOD (ಜೈವಿಕ ಆಮ್ಲಜನಕದ ಬೇಡಿಕೆ) ಮೂಲಕ ಅಳೆಯಬಹುದು.
 • ಜೈವಿಕ ಚಿಕಿತ್ಸೆಯ ನಂತರ, ಕೆಸರನ್ನು ಚಿಕಿತ್ಸೆಯ ಸ್ಥಾವರದಿಂದ ದೊಡ್ಡ ತೊಟ್ಟಿಗೆ ಪಂಪ್ ಮಾಡಲಾಗುತ್ತದೆ. ಈ ದೊಡ್ಡ ತೊಟ್ಟಿಯು ಆಮ್ಲಜನಕರಹಿತ ಬ್ಯಾಕ್ಟೀರಿಯವನ್ನು ಒಳಗೊಂಡಿರುತ್ತದೆ, ಇದು ಕೆಸರಿನ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ. ಜೀರ್ಣಕ್ರಿಯೆಯ ಸಮಯದಲ್ಲಿ, ಜೈವಿಕ ಅನಿಲವನ್ನು ಉತ್ಪಾದಿಸಲಾಗುತ್ತದೆ ಮತ್ತು ಇದನ್ನು ಶಕ್ತಿಯ ಮೂಲವಾಗಿ ಬಳಸಲಾಗುತ್ತದೆ. ಆದ್ದರಿಂದ, ಕೊಳಚೆನೀರಿನ ಸಂಸ್ಕರಣ ಘಟಕ ವಿನ್ಯಾಸ ಮತ್ತು ಕೊಳಚೆನೀರಿನ ನಿರ್ವಹಣೆ ಮಾನವ ಕಲ್ಯಾಣ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಶಕ್ತಿ ಉತ್ಪಾದನೆ

 • ಶಕ್ತಿಯ ಉತ್ಪಾದನೆಯಲ್ಲಿ ತೊಡಗಿರುವ ಸೂಕ್ಷ್ಮಜೀವಿಗಳನ್ನು ಸೂಕ್ಷ್ಮಜೀವಿಯ ಇಂಧನ ಕೋಶಗಳೆಂದು ಕರೆಯಲಾಗುತ್ತದೆ. ಜೈವಿಕ ಅನಿಲ ಮತ್ತು ವಿದ್ಯುತ್ನಂತಹ ವಿವಿಧ ಶಕ್ತಿಯ ಮೂಲಗಳನ್ನು ಉತ್ಪಾದಿಸಲು ಸೂಕ್ಷ್ಮಜೀವಿಯ ಇಂಧನ ಕೋಶಗಳನ್ನು ಬಳಸಲಾಗುತ್ತದೆ.
 • ಜೈವಿಕ ಅನಿಲ ಉತ್ಪಾದನೆಗಾಗಿ ಕೃಷಿ ತ್ಯಾಜ್ಯ, ಗೊಬ್ಬರ, ಮತ್ತು ದೇಶೀಯ ತ್ಯಾಜ್ಯಗಳನ್ನು ಕಚ್ಚಾ ವಸ್ತುಗಳನ್ನಾಗಿ ಬಳಸಲಾಗುತ್ತದೆ. ಜೈವಿಕ ಅನಿಲ ಉತ್ಪಾದನೆಯನ್ನು ದೊಡ್ಡ ಕಾಂಕ್ರೀಟ್ ತೊಟ್ಟಿಯಲ್ಲಿ ಮಾಡಲಾಗುತ್ತದೆ, ಅದನ್ನು ಜೈವಿಕ ಸಸ್ಯ ಎಂದು ಕರೆಯಲಾಗುತ್ತದೆ.
 • ಜೈವಿಕ ಅನಿಲಗಳು (ಬಯೋವಾಸ್ಟ್ಗಳು) ಜೈವಿಕ ಅನಿಲ ಸ್ಥಾವರದಲ್ಲಿ ಸಂಗ್ರಹಿಸಲ್ಪಡುತ್ತವೆ ಮತ್ತು ತಿಳಿ ಕೆಸರುಗಳನ್ನು ನೀಡಲಾಗುತ್ತದೆ . ಜೀವರಾಶಿಗಳು ಸಾವಯವ ವಸ್ತುಗಳಲ್ಲಿ ಸಮೃದ್ಧವಾಗಿವೆ. ಕೆಲವು ಬ್ಯಾಕ್ಟೀರಿಯಾಗಳು ಜೈವಿಕ ಅನಿಲ ಸ್ಥಾವರದಲ್ಲಿ ಆಮ್ಲಜನಕರಹಿತವಾಗಿ ಬೆಳೆಯುತ್ತವೆ.
 • ಈ ಬ್ಯಾಕ್ಟೀರಿಯಾವು ಜೈವಿಕ ದ್ರವ್ಯಗಳನ್ನು ಜೀರ್ಣಿಸಿಕೊಳ್ಳಬಹುದು ಮತ್ತು ಅವುಗಳು ತಿಳಿ ಕೆಸರು ಮತ್ತು ಚರಂಡಿಗಳಲ್ಲಿ ಇರುತ್ತವೆ. ಜೀರ್ಣಕ್ರಿಯೆಯ ಸಮಯದಲ್ಲಿ, ದೊಡ್ಡ ಪ್ರಮಾಣದಲ್ಲಿ ಅನಿಲಗಳ ಮಿಶ್ರಣವನ್ನು ಟ್ಯಾಂಕ್ ಒಳಗೆ ಬಿಡುಗಡೆ ಮಾಡಲಾಗುತ್ತದೆ. ಈ ಅನಿಲಗಳ ಮಿಶ್ರಣವನ್ನು ಜೈವಿಕ ಅನಿಲ ಎಂದು ಕರೆಯಲಾಗುತ್ತದೆ. ಜೈವಿಕ ಅನಿಲವನ್ನು ಪ್ರತ್ಯೇಕ ಕೊಳವೆಯ ಮೂಲಕ ಬಯೋಗಸ್ ಸಸ್ಯದಿಂದ ತೆಗೆಯಲಾಗುತ್ತದೆ

ಬಾಹ್ಯಾಕಾಶದಲ್ಲೂ ಇದೆ ತ್ಯಾಜ್ಯ

ಸುದ್ಧಿಯಲ್ಲಿ ಏಕಿದೆ ?ಇತ್ತೀಚೆಗಷ್ಟೇ ಮಿಷನ್ ಶಕ್ತಿ ಪರೀಕ್ಷೆ ಮೂಲಕ ಉಪಗ್ರಹವನ್ನೇ ಹೊಡೆದುರುಳಿಸಬಲ್ಲ ಸಾಮರ್ಥ್ಯದ ಕ್ಷಿಪಣಿ ತಯಾರಿಸಿರುವ ಭಾರತ ಹೆಮ್ಮೆಯಿಂದ ಬೀಗುತ್ತಿದ್ದರೆ ಅಮೆರಿಕವಂತೂ ಭಾರತದ ಪರೀಕ್ಷೆಯಿಂದ ಉಂಟಾಗಿರುವ ಬಾಹ್ಯಾಕಾಶ ತ್ಯಾಜ್ಯದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೀವ್ರತೆರನಾದ ಸಮಸ್ಯೆಯಾಗಲಿದೆ ಎಂದು ಹೇಳಿದೆ.

 • ಇದಕ್ಕೆ ಭಾರತ ಪ್ರತಿಕ್ರಿಯಿಸಿದ್ದು, ಭೂಮಿಯ ಕೆಳಕಕ್ಷೆಯಲ್ಲಿದ್ದ ಉಪಗ್ರಹವನ್ನು ಹೊಡೆದುರುಳಿಸಿರುವುದರಿಂದ ತ್ಯಾಜ್ಯಗಳು 6 ತಿಂಗಳೊಳಗಾಗಿ ಭೂಮಿಯ ವಾತಾವರಣಕ್ಕೆ ಪ್ರವೇಶಿಸಿ ಉರಿದು ಹೋಗಲಿವೆ ಎಂದಿದೆ.

ನಾಸಾ ಅಸಮಾಧಾನ ಹೊರಹಾಕುತ್ತಿರುವುದೇನಕ್ಕೆ?

 • ಭಾರತ ಮಾರ್ಚ್ 27ರಂದು ‘ಮಿಷನ್ ಶಕ್ತಿ’ ಪರೀಕ್ಷೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಸಾದ ವಿಜ್ಞಾನಿ ಬ್ರಿಡೆನ್​ಸ್ಟೀನ್ ಈ ಪರೀಕ್ಷೆಯಿಂದ ಬಾಹ್ಯಾಕಾಶದಲ್ಲಿ ಉಪಗ್ರಹದ 400 ತುಣುಕುಗಳಿದ್ದು, ಇದರಲ್ಲಿ 60 ತುಣುಕುಗಳು 10 ಸೆಮೀಗಿಂತ ಹೆಚ್ಚಿನ ಗಾತ್ರದ್ದಾಗಿದೆ.
 • ಇವುಗಳಲ್ಲಿ 24 ತುಣುಕುಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದತ್ತ ತೆರಳುತ್ತಿವೆ ಎಂದಿದ್ದರು. ಇದು ಬಾಹ್ಯಾಕಾಶ ಕೇಂದ್ರಕ್ಕೆ ಡಿಕ್ಕಿ ಹೊಡೆದರೆ ಭಾರಿ ಪ್ರಮಾಣದ ನಷ್ಟವಾಗಲಿದೆ ಎಂದು ಹೇಳಿದ್ದರು. ನಾಸಾದ ವಿಜ್ಞಾನಿಗಳು ಹೀಗೆ ಚಿಂತಿತರಾಗಲು ಕಾರಣವೂ ಇಲ್ಲದಿಲ್ಲ.
 • ಬಾಹ್ಯಾಕಾಶದಲ್ಲಿರುವ ಏಕೈಕ ಶಾಶ್ವತ ಲ್ಯಾಬೋರೇಟರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ. ಇದು ಫುಟ್​ಬಾಲ್ ಮೈದಾನಕ್ಕಿಂತ ಸ್ವಲ್ಪ ದೊಡ್ಡದಾಗಿದೆ. 400 ಟನ್ ತೂಕದ ಈ ಕೇಂದ್ರ 400 ಕಿಮೀ ಎತ್ತರದಲ್ಲಿದೆ. ಬಾಹ್ಯಾಕಾಶದ ಪ್ರಯೋಗಗಳಿಗೆ ನೆರವಾಗುವ ಹಲವು ಯಂತ್ರೋಪಕರಣಗಳು ಇಲ್ಲಿದ್ದು, ಎಲ್ಲವೂ ದುಬಾರಿಯದ್ದಾಗಿದೆ. ಒಂದು ಬಾರಿಗೆ ಮೂರರಿಂದ ನಾಲ್ಕು ಗಗನಯಾನಿಗಳು ಇಲ್ಲಿ ಇರಬಹುದಾಗಿದ್ದು, ಬಾಹ್ಯಾಕಾಶ ಪ್ರಯೋಗಗಳನ್ನು ಮಾಡಲು ಇರುವ ಏಕೈಕ ವೇದಿಕೆಯಿದು.

ಸಣ್ಣ ತುಣುಕಿನಿಂದ ಸಮಸ್ಯೆಯೇನು?

 • ಬಾಹ್ಯಾಕಾಶದಲ್ಲಿರುವ ವಾತಾವರಣವನ್ನು ಗಣನೆಗೆ ತೆಗೆದುಕೊಂಡು ನೋಡುವುದಾದರೆ ಇಲ್ಲಿ ತ್ಯಾಜ್ಯ ಯಾವ ಗಾತ್ರದ್ದು, ಎಷ್ಟು ತೂಕದ್ದು ಎನ್ನುವುದು ಮುಖ್ಯ ವಿಷಯವಾಗಿರುವುದಿಲ್ಲ. ಇಲ್ಲಿ ತ್ಯಾಜ್ಯ ಭಾರಿ ವೇಗದಲ್ಲಿ ಸಂಚರಿಸುತ್ತದೆ. ಭಾರತ ಉಪಗ್ರಹ ಹೊಡೆದುರುಳಿಸಿರುವ ಭೂಮಿಯ ಕೆಳಕಕ್ಷೆಯಲ್ಲಿ ತ್ಯಾಜ್ಯಗಳು ಸೆಕೆಂಡಿಗೆ 8 ಮೀಟರ್ ವೇಗದಲ್ಲಿ ಸಂಚರಿಸುತ್ತವೆ.
 • ಅಂದರೆ ಗಂಟೆಗೆ 28,000 ಕಿಮೀ! ಈ ವೇಗದಲ್ಲಿ ಸಂಚರಿಸುವ 100 ಗ್ರಾಂ ತೂಕದ ವಸ್ತು 100 ಕಿಮೀ ವೇಗದಲ್ಲಿ ಸಂಚರಿಸುವ 30 ಕೆಜಿ ತೂಕದ ಕಲ್ಲು ಮಾಡುವಷ್ಟೇ ಹಾನಿ ಮಾಡುತ್ತದೆ. ಹೀಗಾಗಿ ಭಾರತದ ಉಪಗ್ರಹದ ತ್ಯಾಜ್ಯ ಯಾವುದೇ ಉಪಗ್ರಹಕ್ಕೆ ಡಿಕ್ಕಿ ಹೊಡೆದರೂ ಅದರ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಬಲ್ಲದು.

ಈಗಾಗಲೇ ಇರುವ ತ್ಯಾಜ್ಯಗಳಿಂದ ಸಮಸ್ಯೆಯಿಲ್ಲವೇ?

 • ಐಎಸ್​ಎಸ್ ಮತ್ತು ಇತರ ಉಪಗ್ರಹಗಳಿಗೆ ಬಾಹ್ಯಾಕಾಶ ತ್ಯಾಜ್ಯದಿಂದ ನಿರಂತರವಾಗಿ ಸಮಸ್ಯೆಯಾಗುತ್ತಲೇ ಇದೆ. ಈ ತ್ಯಾಜ್ಯಗಳು ಯಾವ ದಾರಿಯಲ್ಲಿ ಸಂಚರಿಸುತ್ತಿವೆ ಎನ್ನುವುದನ್ನು ಆಧರಿಸಿ ಇದರಿಂದ ಆಗುವ ಪರಿಣಾಮದ ತೀವ್ರತೆ ತಿಳಿಯುತ್ತದೆ. ನಾಸಾ ಇದಕ್ಕೆಂದೇ ವಿಶೇಷ ವಿಭಾಗವೊಂದನ್ನು ಹೊಂದಿದ್ದು, ಸದ್ಯ ಇದು 23,000 ತುಣುಕುಗಳ ಬಗ್ಗೆ ನಿಗಾ ಇರಿಸಿದೆ.
 • ಇದು ನಿರಂತರವಾಗಿ ತ್ಯಾಜ್ಯದಿಂದ ಎದುರಾಗುವ ಸಮಸ್ಯೆಗಳ ಪರಿಶೀಲನೆ ನಡೆಸುತ್ತಿರುತ್ತದೆ. ಅಗತ್ಯವಿದ್ದಲ್ಲಿ ಗ್ರೌಂಡ್ ಕಂಟ್ರೋಲ್ ಸ್ಟೇಷನ್ ಕ್ರಮ ಕೈಗೊಳ್ಳುತ್ತದೆ. ಪ್ರತಿದಿನ ಕನಿಷ್ಠ ಮೂರು ಬಾರಿಯಾದರೂ ತ್ಯಾಜ್ಯದ ಸಂಚಾರಪಥವನ್ನು ಗಮನಿಸಲಾಗುತ್ತದೆ.
 • ಅದರಲ್ಲೂ ಪ್ರಮುಖವಾಗಿ ಐಎಸ್​ಎಸ್​ನ ಸುತ್ತಲಿನ 25 ಕಿಮೀ*25 ಕಿಮೀ*4 ಕಿಮೀ(ಎತ್ತರ) ಪ್ರದೇಶವನ್ನು ಪ್ರವೇಶಿಸುವ ತ್ಯಾಜ್ಯದ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತದೆ. ಇದನ್ನು ಆಧರಿಸಿ ನೋಡುವುದಾದರೆ ಭಾರತದ ಉಪಗ್ರಹ ತ್ಯಾಜ್ಯದಿಂದಲೇ ಐಎಸ್​ಎಸ್​ಗೆ ಸಮಸ್ಯೆ ಎನ್ನುವ ಹಾಗಿಲ್ಲ.

ಬಾಹ್ಯಾಕಾಶ ತ್ಯಾಜ್ಯಕ್ಕೆ ಅಮೆರಿಕ ಕೊಡುಗೆಯಿಲ್ಲವೇ?

 • ಬಾಹ್ಯಾಕಾಶ ತ್ಯಾಜ್ಯಕ್ಕೆ ಅಮೆರಿಕ ಕೊಡುಗೆಯೂ ಅಪಾರವೇ. 1980ರ ದಶಕದಿಂದಲೇ ಹಲವು ಬಾರಿ ಈ ಪರೀಕ್ಷೆ ನಡೆಸಿದ್ದ ರಾಷ್ಟ್ರ ಅಮೆರಿಕ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಬಾಹ್ಯಾಕಾಶದಲ್ಲಿ ಉಳಿದುಕೊಂಡಿದೆ.
 • ಆದರೆ ಇತ್ತೀಚಿನ ವರ್ಷಗಳಲ್ಲಿ ಚೀನಾ ಮಾತ್ರವೇ ಆಂಟಿ ಸೆಟಲೈಟ್ ಕ್ಷಿಪಣಿ ಪರೀಕ್ಷೆ ನಡೆಸಿದೆ.
 • 2007ರಲ್ಲಿ ಪೆಂಗ್​ಯುುನ್-1ಸಿ ಪರೀಕ್ಷೆಯಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಬಾಹ್ಯಾಕಾಶದಲ್ಲಿ ಉಳಿದುಕೊಳ್ಳುವಂತಾಗಿದೆ. ಮೂಲಗಳ ಪ್ರಕಾರ, ಇದರಿಂದ 5 ಲಕ್ಷ ಸಣ್ಣ ಮತ್ತು ದೊಡ್ಡ ಗಾತ್ರದ ತ್ಯಾಜ್ಯಗಳು ಬಾಹ್ಯಾಕಾಶದಲ್ಲಿ ಸೃಷ್ಟಿಯಾಗಿದ್ದು, ಇದರಲ್ಲಿ 3,428 ದೊಡ್ಡ ಪ್ರಮಾಣದ ತ್ಯಾಜ್ಯಗಳಾಗಿವೆ. ಅಲ್ಲದೆ ಈ ಪರೀಕ್ಷೆ ಭಾರಿ ಎತ್ತರದಲ್ಲಿ ನಡೆದಿದ್ದರಿಂದ ಇದರ ತ್ಯಾಜ್ಯಗಳು ಬೇಗನೆ ನಾಶವಾಗುವುದೂ ಇಲ್ಲ.
 • 2009ರಲ್ಲಿ ಎರಡು ಗಗನನೌಕೆಗಳ ಡಿಕ್ಕಿಯಿಂದಲೂ ಭಾರಿ ಪ್ರಮಾಣದ ತ್ಯಾಜ್ಯ ಬಾಹ್ಯಾಕಾಶವನ್ನು ಸೇರಿದೆ. ಇದೊಂದು ತೀರಾ ಅಪರೂಪದ ಘಟನೆಯಾಗಿದ್ದು 2009ರ ಫೆಬ್ರವರಿಯಲ್ಲಿ ರಷ್ಯಾದ ಉಪಗ್ರಹ ಕಾಸ್ಮೋಸ್ 2251 ಮತ್ತು ಅಮೆರಿಕ ಕಂಪನಿಯೊಂದರ ಸಂವಹನ ಉಪಗ್ರಹ ಇರಿಡಿಯಂ 33 ನಡುವೆ ಡಿಕ್ಕಿ ಸಂಭವಿಸಿ ಹೆಚ್ಚಿನ ಪ್ರಮಾಣದ ತ್ಯಾಜ್ಯ ಸೃಷ್ಟಿಯಾಗಿತ್ತು.

ವಿಶ್ವದ ಮೊದಲ ಸಶಸ್ತ್ರ ಡ್ರೋನ್ ಬೋಟ್

ಸುದ್ಧಿಯಲ್ಲಿ ಏಕಿದೆ ? ನೀರು ಮತ್ತು ಭೂಮಿ ಎರಡರಲ್ಲೂ ಕಾರ್ಯನಿರ್ವಹಿಸುವ ಉಭಯಚರ ಡ್ರೋನ್ ಬೋಟ್​ನ್ನು ಚೀನಾ ಅಭಿವೃದ್ಧಿಸಿದೆ. ಇದರ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆಸಿದ್ದು, ಇದು ವಿಶ್ವದ ಮೊದಲ ಸಶಸ್ತ್ರ ಡ್ರೋನ್ ಬೋಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 • ಚೀನಾ ಶಿಪ್ಬಿಲ್ಡಿಂಗ್ ಇಂಡಸ್ಟ್ರಿ ಕಾರ್ಪೆರೇಷನ್ (ಸಿಎಸ್ಐಸಿ) ಮಾರ್ಗದರ್ಶನದಲ್ಲಿ ವುಚಾಂಗ್ ಶಿಪ್​ಬಿಲ್ಡಿಂಗ್ ಇಂಡಸ್ಟ್ರಿ ಗ್ರೂಪ್ ಇದನ್ನು ಅಭಿವೃದ್ಧಿ ಪಡಿಸಿದೆ.
 • ‘ಮರೀನ್ ಲಿಜರ್ಡ್’ ಎಂದು ಇದಕ್ಕೆ ಹೆಸರಿಡಲಾಗಿದೆ. ಈ ಡ್ರೋನ್ ಎಲ್ಲ ಪರೀಕ್ಷೆಗಳನ್ನು ಪೂರೈಸಿ ಏಪ್ರಿಲ್ 8ರಂದು ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್​ನ ಕಾರ್ಖಾನೆಯಿಂದ ಹೊರಬಂದಿದೆ
 • ಈ ಡ್ರೋನ್ ಭೂಮಿಯಲ್ಲಿ ಕಾರ್ಯನಿರ್ವಹಿಸುವಾಗ ನಾಲ್ಕು ಘಟಕಗಳನ್ನು ತನ್ನ ಉದರದೊಳಗೆ ಸೇರಿಸಿಕೊಳ್ಳುತ್ತದೆ. ನೀರಿನಲ್ಲಿ ಕಾರ್ಯನಿರ್ವಹಿಸುವಾಗ ಇವು ತೆರೆದುಕೊಳ್ಳಲಿವೆ

ಡ್ರೋನ್ ಬೋಟ್ ವಿಶೇಷ

 • 1,200 ಕಿ.ಮೀ. ಗರಿಷ್ಠ ದೂರವರೆಗೆ ಕಾರ್ಯಾಚರಣೆ
 • ಸ್ಯಾಟಲೈಟ್​ ಮೂಲಕ ಡ್ರೋನ್ ನಿಯಂತ್ರಣ* 12 ಮೀಟರ್ ಉದ್ದ
 • ಡೀಸೆಲ್ ಚಾಲಿತ
 • ನೀರಲ್ಲಿ ಗರಿಷ್ಠ ವೇಗ ಗಂಟೆಗೆ 50 ನಾಟಿಕಲ್ ಮೈಲಿ (6 ಕಿ.ಮೀ.)
 • ಭೂಮಿ ಮೇಲೆ ಗರಿಷ್ಠ ವೇಗ ಗಂಟೆಗೆ 20 ಕಿ.ಮೀ.
 • ಎಲೆಕ್ಟ್ರೊ-ಆಪ್ಟಿಕಲ್ ಮತ್ತು ರೇಡಾರ್ ವ್ಯವಸ್ಥೆ
 • ಎರಡು ಮಷಿನ್ ಗನ್, ಕ್ಷಿಪಣಿ ನಿರೋಧಕ ವರ್ಟಿಕಲ್ ಲಾಚಿಂಗ್ ಸಿಸ್ಟಂ

‘ನಿರ್ಭಯ್‌’ ಕ್ಷಿಪಣಿ

ಸುದ್ಧಿಯಲ್ಲಿ ಏಕಿದೆ ? ಸ್ವದೇಶಿ ನಿರ್ಮಿತ ದೂರಗಾಮಿ ‘ನಿರ್ಭಯ್‌’ ಸಬ್‌ ಸಾನಿಕ್‌ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಒಡಿಶಾ ಕಡಲ ತೀರದಲ್ಲಿ ಸೋಮವಾರ ಯಶಸ್ವಿಯಾಗಿ ನಡೆಸಿದೆ.

 • ಡಿಆರ್‌ಡಿಒ ಅಧೀನಕ್ಕೆ ಒಳಪಟ್ಟಿರುವ ಬೆಂಗಳೂರಿನ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್(ಎಡಿಎ) ಲ್ಯಾಬ್ ಇದನ್ನು ಅಭಿವೃದ್ಧಿಪಡಿಸಿದೆ.
 • ಸಾಂಪ್ರದಾಯಿಕ ಸ್ಪೋಟಕ ಮತ್ತು ಅಣ್ವಸ್ತ್ರಗಳನ್ನು ಹೊತ್ತೊಯ್ಯುಲು ಅನುಕೂಲ ವಾಗುವಂತೆ ನಿರ್ಭಯ್ ಕ್ಷಿಪಣಿಯನ್ನು ವಿನ್ಯಾಸ ಮಾಡಲಾಗಿದೆ. ಸೇನೆಯ ಮೂರೂ ಪಡೆಗಳು ಇದನ್ನು ಬಳಸಬಹುದಾಗಿದೆ. ಭೂಸೇನೆ ಬಳಸುವ ಕ್ಷಿಪಣಿಯಲ್ಲಿ 300 ಕೆ.ಜಿ. ಸಿಡಿತಲೆ ಸ್ಪೋಟಕ ಹೊತ್ತೊಯ್ಯಬಹುದಾಗಿದೆ.
 • ಬಹುವಿಧದ ಗುರಿಗಳನ್ನು ಭೇದಿಸುವ ಇದು, 0.6ರಿಂದ 7 ಮ್ಯಾಕ್ ವೇಗದಲ್ಲಿ (1 ಮ್ಯಾಕ್ ಎಂದರೆ ಗಂಟೆಗೆ 1234.8 ಕಿ.ಮೀ.) ಸಂಚರಿಸುತ್ತದೆ. ರಾಕೆಟ್​ಗಳಲ್ಲಿ ಬಳಸುವ ಘನ ವೇಗವರ್ಧಕಗಳನ್ನು ಈ ಕ್ಷಿಪಣಿಯಲ್ಲಿ ಬಳಸಲಾಗಿದೆ. ನಿರ್ದಿಷ್ಟ ಹಂತದ ಎತ್ತರಕ್ಕೆ ಹೋದ ನಂತರ ಕ್ಷಿಪಣಿಯ ಟಬೋಫ್ಯಾನ್ ಇಂಜಿನ್ ಚಾಲನೆಗೊಂಡು ಮುಂದಿನ ನೋದಕ ಶಕ್ತಿಯನ್ನು ಒದಗಿಸುತ್ತದೆ
 • 42 ನಿಮಿಷ 23 ಸೆಕೆಂಡುಗಳಲ್ಲಿ ನಿಗದಿತ ಗುರಿ ತಲುಪಿ ನಂತರ ಸಮುದ್ರದಲ್ಲಿ ಉರಿದುಬಿತ್ತು ಎಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ.
 • ಕ್ಷಿಪಣಿಯ ಚಲನೆಯ ವೇಗ ಮತ್ತು ಅದರ ತಾಂತ್ರಿಕ ವ್ಯವಸ್ಥೆಯನ್ನು ಕರಾರುವಕ್ಕಾಗಿ ಅಳೆದ ವಿಜ್ಞಾನಿಗಳ ತಂಡ ಇದೊಂದು ಯಶಸ್ವಿ ಉಡಾವಣೆ ಎಂದು ಹೇಳಿದೆ. ಕಾರ್ಯಾಚರಣೆ ವೇಳೆ ನಿಯಂತ್ರಣ ಕೇಂದ್ರದಲ್ಲಿ ಅಳವಡಿಸಿದ್ದ ರೇಡಾರ್‌ಗಳ ಮೂಲಕ ಅದರ ಚಲನೆಯ ಗತಿ ಮತ್ತಿತರ ಪರಿಭ್ರಮಣ ವ್ಯವಸ್ಥೆ ಮೇಲೆ ನಿಗಾ ಇರಿಸಲಾಗಿತ್ತು.

ಕ್ಷಿಪಣಿ ವಿಶೇಷಗಳು…

 • ನಿರ್ಭಯ್ ಕ್ಷಿಪಣಿಯಲ್ಲಿ ರೇಡಿಯೊ ಆಲ್ಟಿಮೀಟರ್
 • ಎಂಇಎಂಎಸ್ ಆಧಾರಿತ ನ್ಯಾವಿಗೇಷನ್ ವ್ಯವಸ್ಥೆ
 • ಇದನ್ನು ನಿಯಂತ್ರಿಸುವ ರಿಂಗ್ ಲೇಸರ್ ಭ್ರಮಣ ದರ್ಶಕ (ಆರ್​ಎಲ್​ಜಿ)
 • ಜಿಪಿಎಸ್ ವ್ಯವಸ್ಥೆ
 • 1,500 ಕೆ.ಜಿ. ತೂಕ , 52 ಮೀಟರ್ ಅಗಲ
 • ರೆಕ್ಕಗಳ ಅಗಲ 7 ಮೀಟರ್
 • 24 ವಿಧದ ಸಿಡಿತಲೆಗಳನ್ನು ಕೊಂಡೊಯ್ಯಬಲ್ಲದು
 • ಶತ್ರು ದೇಶಗಳ ರೇಡಾರ್​ಗಳ ನಿಗಾಕ್ಕೆ ಸಿಗದಂತೆ 100 ಮೀಟರ್​ನಿಂದ ನಾಲ್ಕು ಕಿ.ಮೀ. ಎತ್ತರದವರೆಗೂ ಹಾರಬಲ್ಲದು ಸರ್ವಋತುಗಳಲ್ಲೂ ಬಳಕೆ ಯೋಗ್ಯ ಶ್ಬ್ರರೀಹ್ಮೋಸ್ ಕ್ಷಿಪಣಿಯ ಸುಧಾರಿತ ಮಾದರಿ ‘ನಿರ್ಭಯ್’

ಎಲ್ಲ ವ್ಯವಸ್ಥೆಗಳಿಂದಲೂ ಉಡಾವಣೆ

 • ರಿಂಗ್ ಲೇಸರ್ ಗೈರೋಸ್ಕೋಪ್ ನಿರ್ದೇಶಿತ ನ್ಯಾವಿಗೇಷನ್‌ ವ್ಯವಸ್ಥೆ ಹೊಂದಿರುವ ಕ್ಷಿಪಣಿಯನ್ನು ನೆಲ-ಜಲ-ವಾಯು ಹೀಗೆ ಎಲ್ಲ ಬಗೆಯ ಉಡಾವಣಾ ವ್ಯವಸ್ಥೆಗಳಿಂದಲೂ ಹಾರಿಸಬಹುದಾಗಿದೆ.

Related Posts
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉದ್ಯೋಗ ಖಾತ್ರಿ ಹೆಚ್ಚಳ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಉದ್ಭವಿಸಿರುವ ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಕಾಯ್ದೆಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ 100 ದಿನಗಳ ಉದ್ಯೋಗವನ್ನು 150ಕ್ಕೆ ವಿಸ್ತರಿಸಲಾಗಿದ್ದು, ಈ ವರ್ಷ ಮಾನವ ದಿನಗಳ ಸೃಜನೆ ಗುರಿಯನ್ನು 8.5 ಕೋಟಿ ಯಿಂದ 10 ...
READ MORE
“19 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಗಂಗಾ ಕಲ್ಯಾಣ  ಸುದ್ಧಿಯಲ್ಲಿ ಏಕಿದೆ ? ಪರಿಶಿಷ್ಟ ಜಾತಿ (ಎಸ್ಸಿ) ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಅಂಬೇಡ್ಕರ್ ನಿಗಮದ ಮೂಲಕ ಜಾರಿಗೆ ತಂದಿರುವ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಡುವ ಗಂಗಾ ಕಲ್ಯಾಣ ಯೋಜನೆ ಅನ್ನದಾತರ ಬದಲು ಅಧಿಕಾರಿಗಳು, ಬೋರ್​ವೆಲ್ ಏಜೆನ್ಸಿದಾರರ ಆರ್ಥಿಕ ಕಲ್ಯಾಣಕ್ಕೆ ದಾರಿ ...
READ MORE
“11 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೈಗಾ ಅಣು ವಿದ್ಯುತ್ ಸ್ಥಾವರ ಸುದ್ಧಿಯಲ್ಲಿ  ಏಕಿದೆ ? ಯಾವುದೇ ತೊಂದರೆ ಇಲ್ಲದೆ ನಿರಂತರವಾಗಿ 941 ದಿನ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಕೈಗಾ ಮೊದಲ ಅಣು ವಿದ್ಯುತ್​ ಘಟಕ ವಿಶ್ವ ದಾಖಲೆ ನಿರ್ಮಿಸಿ ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ...
READ MORE
“29 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿಶ್ವ ಕನ್ನಡ ಸಮ್ಮೇಳನ ಸುದ್ಧಿಯಲ್ಲಿ ಏಕಿದೆ ? ನಾವಿಕ ಸಂಸ್ಥೆಯು ಅಮೆರಿಕದ ಓಹಾಯೋ ರಾಜ್ಯದಲ್ಲಿ ಆ. 30 ರಿಂದ ಸೆ. 1ರವರೆಗೆ '5ನೇ ವಿಶ್ವ ಕನ್ನಡ ಸಮ್ಮೇಳನ' ಆಯೋಜಿಸಿದೆ. ಕನ್ನಡದ ಸೊಗಡನ್ನು ಈ ಉತ್ಸವದಲ್ಲಿ ಬಿಂಬಿಸಲಾಗುವುದು.ಕನ್ನಡದ ನಾಟಕಗಳು,ಕವಿ ಗೋಷ್ಠಿಗಳು, ಕನ್ನಡ ಗೀತಗಾಯನ,ಸಂಗೀತ ಸಂಜೆ,ಸ್ವಾತಂತ್ರ್ಯದ ...
READ MORE
” 17 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷಿ ಕ್ರಾಂತಿಗೆ ಹೊಸ ನೀತಿ ಸುದ್ಧಿಯಲ್ಲಿ ಏಕಿದೆ ?ಬರಗಾಲ, ಬೆಳೆ ಸಾಲದಂತಹ ಸರಣಿ ಸಂಕಷ್ಟಗಳಿಗೆ ಸಿಲುಕಿ ಕೃಷಿ ಮೇಲೆ ವೈರಾಗ್ಯ ಹೊಂದುತ್ತಿರುವ ರೈತರಲ್ಲಿ ಆತ್ಮವಿಶ್ವಾಸ ಬಿತ್ತಿ, ಬದುಕು ಕಟ್ಟಲು ನೆರವಾಗುವ ಉದ್ದೇಶದಿಂದ ಹೊಸ ಕೃಷಿ ನೀತಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರ ಬೆಳೆಗೆ ...
READ MORE
26th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಪ್ರಸಾದದ ಮೇಲೆ ಎಕ್ಸ್‌ಫೈರಿ ಡೇಟ್‌ ಕಡ್ಡಾಯ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ದೇವಸ್ಥಾನಗಳಲ್ಲಿ ಪ್ಯಾಕ್‌ ಮಾಡಿ ವಿತರಿಸುವ ಪ್ರಸಾದದ ಮೇಲೆ ತಯಾರಿಸಿದ ದಿನ ಹಾಗೂ ಎಷ್ಟು ದಿನಗಳವರೆಗೆ ಮಾತ್ರ ಸೇವಿಸಬಹುದು ಎಂಬ ಮಾಹಿತಿ ನಮೂದಿಸುವುದು ಕಡ್ಡಾಯವಾಗಲಿದೆ. ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದ ನಿಯಮ ...
READ MORE
” 07 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಲೋಕಪಾಲ ಮುಖ್ಯಸ್ಥರ ನೇಮಕ  ಸುದ್ಧಿಯಲ್ಲಿ ಏಕಿದೆ ?ಸುಪ್ರೀಂಕೋರ್ಟ್ ಎಚ್ಚರಿಕೆ ಬಳಿಕ ಕೊನೆಗೂ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆ ವರ್ಷದಲ್ಲೇ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲದ ಮುಖ್ಯಸ್ಥರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದೆ. ಲೋಕಪಾಲ ಕಾಯ್ದೆ ಜಾರಿಗೆ ಬಂದ ಸುಮಾರು ಐದು ವರ್ಷಗಳ ಬಳಿಕ ...
READ MORE
“24th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
‘ಶಾಲಾ -ಸಂಪರ್ಕ ಸೇತು’ ಯೋಜನೆ ಸುದ್ಧಿಯಲ್ಲಿ ಏಕಿದೆ ? ಮಲೆನಾಡು, ಕರಾವಳಿ ಭಾಗದ ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲಿ ವಾಸಿಸುವ ಜನರು ವಿಶೇಷವಾಗಿ ಶಾಲಾ ಮಕ್ಕಳು ಮಳೆಗಾಲದಲ್ಲಿ ಅಪಾಯಕಾರಿ ತೋಡು, ಹಳ್ಳ -ಕೊಳ್ಳ ದಾಟುವ ಪ್ರಯಾಸವನ್ನು ಶಾಶ್ವತವಾಗಿ ಪರಿಹರಿಸಲು 'ಶಾಲಾ -ಸಂಪರ್ಕ ಸೇತು' ಎಂಬ ...
READ MORE
“14 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೆಜಿಎಫ್‌ ಗಣಿ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ ಸುದ್ಧಿಯಲ್ಲಿ ಏಕಿದೆ ?ಕೆಜಿಎಫ್‌ನ ಭಾರತ್‌ ಗೋಲ್ಡ್‌ ಮೈನ್ಸ್‌ ಕಂಪನಿ (ಬಿಜಿಎಂಎಲ್‌) ವಶದಲ್ಲಿರುವ ಸುಮಾರು 10 ಸಾವಿರ ಎಕರೆ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ಹಾಗೂ ಟೌನ್‌ಶಿಪ್‌ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಬಯಸಿದೆ. ''ಗಣಿಗಾರಿಕೆ ಸಂಬಂಧಿಸಿದಂತೆ 2015ರಲ್ಲಿ ಕೇಂದ್ರ ಸರ್ಕಾರ ...
READ MORE
“03 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಲೆನಾಡಿನಲ್ಲಿ ಮಂಗನಕಾಯಿಲೆ: ಸುದ್ಧಿಯಲ್ಲಿ ಏಕಿದೆ ?ಮಹಾಮಾರಿ ಮಂಗನಕಾಯಿಲೆಗೆ ನಾಲ್ವರು ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಸಿಗೆಯಲ್ಲಿ ತೀರ್ಥಹಳ್ಳಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಂಗನ ಕಾಯಿಲೆ ಈ ಬಾರಿ ಬೇಸಿಗೆಗೂ ಮುಂಚೆ ಕಾಣಿಸಿಕೊಂಡಿದೆ. ಜತೆಗೆ ಸಾಗರಕ್ಕೂ ವ್ಯಾಪಿಸಿದೆ. ಮಂಗನಕಾಯಿಲೆ ಹರಡದಂತೆ ಪ್ರತಿವರ್ಷ ಲಸಿಕೆ ಹಾಕಲಾಗುತ್ತಿತ್ತು. ಆದರೆ ...
READ MORE
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“19 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“11 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“29 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 17 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
26th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
” 07 ಫೆಬ್ರವರಿ 2019 ರ ಕನ್ನಡ
“24th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“14 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“03 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *