“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಶಾಲೆಗೆ ಬನ್ನಿ ಶನಿವಾರ ಶೀಘ್ರ ಪುನಾರಂಭ

1.

ಸುದ್ಧಿಯಲ್ಲಿ ಏಕಿದೆ ?ಮೂಲೆಗುಂಪಾಗಿದ್ದ ಶಿಕ್ಷಣ ಇಲಾಖೆಯ ಜನಪ್ರಿಯ ಯೋಜನೆ ‘ಶಾಲೆಗೆ ಬನ್ನಿ ಶನಿವಾರ- ಕಲಿಯಲು ನೀಡಿ ಸಹಕಾರ’ ಮತ್ತೆ ಆರಂಭವಾಗಲಿದೆ.

 • ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಪಾಠ-ಪ್ರವಚನ ಮಾಡಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್​ಇಆರ್​ಟಿ) ಜಾರಿಗೆ ತಂದಿದ್ದ ‘ಶಾಲೆಗೆ ಬನ್ನಿ ಶನಿವಾರ- ಕಲಿಯಲು ನೀಡಿ ಸಹಕಾರ’ ಅನುಷ್ಠಾನವಾದ ಕೆಲವೇ ತಿಂಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿತ್ತು.
 • ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಯೋಜನೆಯ ಮರು ಚಾಲನೆ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದೆ.
 • ಈ ಯೋಜನೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲು ಶಿಕ್ಷಣ ಇಲಾಖೆ ಚಿಂತಿಸುತ್ತಿದೆ. ಆನ್​ಲೈನ್​ನಲ್ಲೇ ನೋಂದಾಯಿಸಿಕೊಳ್ಳಲು ಮತ್ತೆ ಪಾಠ ಮಾಡಬೇಕಿರುವ ಶಾಲೆ ಮತ್ತು ಸಮಯವನ್ನು ಸಂಪನ್ಮೂಲ ವ್ಯಕ್ತಿಗಳಿಗೆ ತಲುಪಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಇದರಿಂದಾಗಿ ಸಂಪನ್ಮೂಲ ವ್ಯಕ್ತಿಗಳು ನೇರವಾಗಿ ಶಾಲೆಗೆ ಹೋಗಿ ಬೋಧನೆ ಆರಂಭಿಸಬಹುದಾಗಿದೆ.
 • 2016ರಲ್ಲಿ ಅಂದಿನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಯೋಜನೆಗೆ ಚಾಲನೆ ನೀಡಿದ್ದರು.

ಯೋಜನೆಯ ಹಿನ್ನಡೆಗೆ ಕಾರಣಗಳು

 • ಮುಖ್ಯೋಪಾಧ್ಯಾಯರು ಹೊರಗಿನ ಸಂಪನ್ಮೂಲ ವ್ಯಕ್ತಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳಲು ಅವಕಾಶ ನೀಡದೇ ನಿರಾಕರಿಸುವುದು, ಅನವಶ್ಯಕ ಮಾಹಿತಿ ಕೇಳುತ್ತಿದ್ದರಿಂದ ಬಹುತೇಕರು ನಿರಾಸಕ್ತಿ ತೋರಿದ್ದರು.
 • ಈ ಯೋಜನೆಯ ಪರಿಕಲ್ಪನೆ ಹೊಂದಿದ್ದ ಅಂದಿನ ಡಿಎಸ್​ಇಆರ್​ಟಿ ನಿರ್ದೇಶಕ ಎಸ್. ಜಯಕುಮಾರ್ ಆ ಹುದ್ದೆಯಿಂದ ವರ್ಗಾವಣೆಗೊಂಡಿದ್ದರಿಂದ ಆನಂತರ ಈ ಯೋಜನೆ ನಿರ್ವಹಣೆ ಹೊಣೆಯನ್ನು ಹೊತ್ತುಕೊಳ್ಳಲು ಯಾರು ಮುಂದೆ ಬರಲಿಲ್ಲ. ಹೀಗಾಗಿ ಆರಂಭವಾದ ಒಂದು ವರ್ಷದಲ್ಲೇ ಯೋಜನೆ ಮೂಲೆಗುಂಪು ಸೇರಿತು.

ಟೆಕ್ಕಿಗಳಿಂದ ತರಗತಿ

 • ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಟೆಕ್ಕಿಗಳಿಗೆ ವಾರಾಂತ್ಯ ರಜೆ ಇರುವುದರಿಂದ ಇದನ್ನು ಮಕ್ಕಳಿಗಾಗಿ ಉಪಯೋಗಿಸಲು ಡಿಎಸ್​ಇಆರ್​ಟಿ ‘ಶಾಲೆಗೆ ಬನ್ನಿ ಶನಿವಾರ- ಕಲಿಯಲು ನೀಡಿ ಸಹಕಾರ’ ಯೋಜನೆ ರೂಪಿಸಿತ್ತು.

ಯೋಜನೆಯ ಉದ್ದೇಶ

 • ಕಲಿತ ಶಾಲೆಗಳಿಗೆ ಏನಾದರೂ ಸೇವೆ ಮಾಡಬೇಕೆಂಬ ಅದರಲ್ಲೂ ತಾವು ಕಲಿತಿರುವ ವಿಷಯದಲ್ಲಿ ತಮ್ಮ ಹುಟ್ಟೂರಿನ ಅಥವಾ ಸಮೀಪದ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಿದ್ಯಾದಾನ ಮಾಡಬೇಕೆಂಬ ಹಂಬಲವನ್ನು ಈಡೇರಿಸುವ ಮೂಲಕ ಮಕ್ಕಳ ಜ್ಞಾನಾರ್ಜನೆಗೆ ಅವಕಾಶ ಕಲ್ಪಿಸಿಕೊಡುವುದು ಈ ಯೋಜನೆ ಉದ್ದೇಶವಾಗಿತ್ತು.
 • ಪಠ್ಯಪುಸ್ತಕದ ವಿಷಯವನ್ನೇ ಬೋಧಿಸಬೇಕೆಂದೇನಿಲ್ಲ. ಮಕ್ಕಳ ಕಲಿಕೆಗೆ ಪ್ರೇರೇಪಿಸಲು, ಮಕ್ಕಳಲ್ಲಿ ಆಸಕ್ತಿ, ಆತ್ಮ ವಿಶ್ವಾಸ ಹೆಚ್ಚಸಲು ಸಹಾಯ ಮಾಡಬಹುದಾಗಿದೆ. ಯೋಜನೆ ಅನುಷ್ಠಾನ ಮಾಡಿದ ಕೆಲವೇ ತಿಂಗಳಲ್ಲಿ ನೂರಾರು ಜನರು ತಮ್ಮ ಹೆಸರು ನೋಂದಾಯಿಸಿಕೊಂಡು ಪಾಠ ಮಾಡಿದ್ದರು.

ಚಿನ್ನದ ಬಾಂಡ್ ಯೋಜನೆ

2.

ಸುದ್ಧಿಯಲ್ಲಿ ಏಕಿದೆ ?ಸರ್ಕಾರದ ಮಹತ್ವಾಕಾಂಕ್ಷಿ ಚಿನ್ನದ ಬಾಂಡ್ ಯೋಜನೆಯ ಐದನೇ ಆವೃತ್ತಿ  2018-19ರ ಸರಣಿಯನ್ನು ಇದೇ ಜನವರಿ 14ರಿಂದ ಪ್ರಾರಂಭಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಸಾರ್ವಭೌಮ ಗೋಲ್ಡ್ ಬಾಂಡ್ ಯೋಜನೆ ಏನು?

 • ಭಾರತೀಯರು ಚಿನ್ನದ ಅತಿ ದೊಡ್ಡ ಖರೀದಿದಾರರಾಗಿದ್ದಾರೆ ಮತ್ತು ಚಿನ್ನವನ್ನು ಬಳಕೆ ಮತ್ತು ಹೂಡಿಕೆಗಾಗಿ ಖರೀದಿಸುತ್ತಾರೆ. ಚಿನ್ನವು  ಅನುತ್ಪಾದಕ ಸ್ವತ್ತು ಎಂದು ಪರಿಗಣಿಸಲ್ಪಟ್ಟಿದೆ, ಆದಾಗ್ಯೂ, ಹೂಡಿಕೆಗಾಗಿ ಭೌತಿಕ ಚಿನ್ನದ ಬೇಡಿಕೆಯನ್ನು ನಿವಾರಿಸಲು,  ಸರ್ಕಾರ 2015 ರಲ್ಲಿ SGB ಯನ್ನು ಪರಿಚಯಿಸಿತು.
 • ಯೋಜನೆಯ ಅಡಿಯಲ್ಲಿ, ಪ್ರತಿ ಬಂಧವು ಒಂದು ಗ್ರಾಂ ಚಿನ್ನಕ್ಕೆ ಸಮಾನವಾಗಿದೆ. ಕನಿಷ್ಟ ಹೂಡಿಕೆಯನ್ನು 1 ಗ್ರಾಂನಲ್ಲಿ ಇಡಲಾಗುತ್ತದೆ ಮತ್ತು ಗರಿಷ್ಠ ಬಂಡವಾಳ ಹೂಡಿಕೆಯು ಪ್ರತಿ ವರ್ಷಕ್ಕೆ 4 ಕೆಜಿ ವರೆಗೆ ಇರುತ್ತದೆ. ಚಂದಾದಾರಿಕೆಯ ಅವಧಿಯ ಹಿಂದಿನ ವಾರದ ಕೊನೆಯ ಮೂರು ವ್ಯವಹಾರ ದಿನಗಳಲ್ಲಿ 999 ಶುದ್ಧತೆಯ ಚಿನ್ನಕ್ಕಾಗಿ ಮುಚ್ಚುವ ಬೆಲೆಯ ಆಧಾರದ ಮೇಲೆ ಬಂಧದ ಬೆಲೆ ಭಾರತೀಯ ರೂಪಾಯಿಗಳಲ್ಲಿ ನಿಗದಿಪಡಿಸಲಾಗಿದೆ.
 • ಚಿನ್ನದ ಮೌಲ್ಯದಲ್ಲಿ ಹೆಚ್ಚುವರಿಯಾಗಿ, ಯೋಜನೆಯು ವರ್ಷಕ್ಕೆ 5% ನಷ್ಟು ಬಡ್ಡಿಯನ್ನು ನೀಡುತ್ತದೆ. ಹೂಡಿಕೆಯ ದಿನಾಂಕದಿಂದ ಎಂಟು ವರ್ಷಗಳ ಲಾಕ್-ಇನ್ ಅವಧಿ ಇದೆ ಎಂಬುದು  ನೆನಪಿಡಬೇಕಾದ ಅಂಶ , ಆದರೆ ಠೇವಣಿ  ದಿನಾಂಕದ ಐದನೇ ವರ್ಷದಿಂದ ಬಡ್ಡಿಯ ಪಾವತಿಯ ದಿನಾಂಕದಂದು ಪೂರ್ವ-ಪ್ರೌಢ ವಿಮೋಚನೆಯನ್ನು ಮಾಡಬಹುದು.
 • ಬಾಂಡುಗಳ ಮೇಲೆ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತಿದ್ದರೂ, ಮುಕ್ತಾಯದ ಸಮಯದಲ್ಲಿ ಮಾಡಿದ ಬಂಡವಾಳ ಲಾಭಗಳು ತೆರಿಗೆಯಿಂದ ವಿನಾಯಿತಿ ಪಡೆದಿರುತ್ತವೆ. ಪೂರ್ವ-ಪ್ರೌಢ ಹಿಂಪಡೆಯುವಿಕೆ ಮಾಡಿದರೆ ಹೂಡಿಕೆದಾರರು ದೀರ್ಘಕಾಲೀನ ಬಂಡವಾಳ ಲಾಭಗಳನ್ನು ಲೆಕ್ಕ ಹಾಕಿದಾಗ ಸೂಚ್ಯಂಕದ ಪ್ರಯೋಜನಗಳನ್ನು ತೆಗೆದುಕೊಳ್ಳಬಹುದು.

ಬ್ರೆಕ್ಸಿಟ್​ ಒಪ್ಪಂದಕ್ಕೆ ಬ್ರಿಟನ್​ ಸಂಸತ್​ನಲ್ಲಿ ಸೋಲು

3.

ಸುದ್ಧಿಯಲ್ಲಿ ಏಕಿದೆ ?ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್​ ಪ್ರಧಾನ ಮಂತ್ರಿ ಥೆರೇಸಾ ಮೇ ಮಾಡಿಕೊಂಡಿದ್ದ ಬ್ರೆಕ್ಸಿಟ್​ ಒಪ್ಪಂದಕ್ಕೆ ಬ್ರಿಟನ್​ ಸಂಸತ್ತಿನಲ್ಲಿ ಸೋಲಾಗಿದೆ.

 • ಸಂಸತ್​ನಲ್ಲಿ ಬ್ರೆಕ್ಸಿಟ್​ ಒಪ್ಪಂದದ ಕುರಿತಾದ ವಿಧೇಯಕವನ್ನು ಮಂಗಳವಾರ ಮತಕ್ಕೆ ಹಾಕಲಾಗಿತ್ತು. ಮತ ಪ್ರಕ್ರಿಯೆಯಲ್ಲಿ ಒಪ್ಪಂದ ಪರ 202 ಸಂಸದರ ಮತ ಚಲಾಯಿಸಿದರೆ ವಿರುದ್ಧವಾಗಿ 432 ಮತಗಳು ಚಲಾವಣೆಯಾಗಿವೆ. ಈ ಮೂಲಕ ವಿಧೇಯಕ ಸರ್ವಾನುಮತದಿಂದ ತಿರಸ್ಕೃತವಾಗಿದೆ.

ಹಿನ್ನೆಲೆ

 • ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ ತೀರ್ಮಾನವನ್ನು ಕಳೆದ ವರ್ಷ ಮಾರ್ಚ್‌ 29ರಂದು ತೆಗೆದುಕೊಳ್ಳಲಾಗಿದೆ. ಈ ಕುರಿತಾದ ವಿಧೇಯಕ ಸಂಸತ್‌ನ ಅನುಮೋದನೆಗೆ ಒಂದು ವರ್ಷ ಕಾಲಾವಕಾಶವಿರುತ್ತದೆ. ಹಾಗಾಗಿ ಇದರ ಅನುಮೋದನೆಗೆ ಇನ್ನೂ ಎರಡು ತಿಂಗಳು ಅವಕಾಶವಿದೆ. ಕಳೆದ ಡಿಸೆಂಬರ್‌ನಲ್ಲಿಯೇ ಈ ವಿಧೇಯಕವನ್ನು ಮತಕ್ಕೆ ಹಾಕಬೇಕಿತ್ತು. ಆದರೆ ಪ್ರತಿಪಕ್ಷಗಳ ನಡೆಯಿಂದಾಗಿ ಸೋಲಾಗುವ ಭೀತಿಯಿಂದ ಮೇ ಅದನ್ನು ಮುಂದಕ್ಕೆ ಹಾಕಿದ್ದರು.

ಏನಿದು ಬ್ರೆಕ್ಸಿಟ್?

 • 28 ದೇಶಗಳು ಸೇರಿ ರಚಿಸಿಕೊಂಡಿರುವ ರಾಜಕೀಯ ಮತ್ತು ಆರ್ಥಿಕ ಸಂಘಟನೆಯೇ ಐರೋಪ್ಯ ಒಕ್ಕೂಟ. ಇದಕ್ಕೆ ಬ್ರಿಟನ್ 1973ರಲ್ಲಿ ಸೇರ್ಪಡೆಯಾಯಿತು.
 • 1980 ಮತ್ತು 90ರ ದಶಕದಿಂದಲೇ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಕೂಗು ಬ್ರಿಟನ್​ನಲ್ಲಿ ಕೇಳಿಬಂದಿತ್ತು.
 • ಬ್ರೆಕ್ಸಿಟ್ ಹೆಸರಿನ ಆಂದೋಲನಗಳು ನಡೆದವು. 2015ರ ಚುನಾವಣೆಯಲ್ಲಿ ಈ ಆಗ್ರಹವನ್ನು ಡೇವಿಡ್ ಕ್ಯಾಮರನ್ ಚುನಾವಣಾ ಪ್ರಣಾಳಿಕೆಯಲ್ಲೂ ಸೇರಿಸಿದರು. ಆಶ್ವಾಸನೆಯಂತೆ 2016ರ ನವೆಂಬರ್ 23ರಂದು ಜನಮತ ಗಣನೆ ನಡೆದು ಶೇ. 52 ಮಂದಿ ಬ್ರೆಕ್ಸಿಟ್ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದರಿಂದ ಬ್ರೆಕ್ಸಿಟ್​ಗೆ ವಿರುದ್ಧ ನಿಲುವು ಹೊಂದಿದ್ದ ಪ್ರಧಾನಿ ಡೇವಿಡ್ ಕ್ಯಾಮರಾನ್​ಗೆ ಮುಖಭಂಗವಾಗಿ ಅವರು ರಾಜೀನಾಮೆ ನೀಡುವಂತಾಯಿತು. ನಂತರ ಥೆರೇಸಾ ಮೇ ಪ್ರಧಾನಿಯಾದರು.

ಮೇ ಮುಂದಿನ ಆಯ್ಕೆ ಏನು?

 • ಸಂಸತ್‌ ಅಂಗೀಕಾರ ಪಡೆಯಲು ಇನ್ನೂ ಎರಡು ತಿಂಗಳು ಕಾಲಾವಕಾಶ ಇರುವುದರಿಂದ ಪುನಃ ವಿಧೇಯಕ ಮಂಡನೆ
 • ಸೋಲು ಒಪ್ಪಿಕೊಂಡು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದು
 • ಒಪ್ಪಂದದ ಅನುಷ್ಠಾನವನ್ನು ಮುಂದೂಡುವುದು
 • ಐರೋಪ್ಯ ಒಕ್ಕೂಟದಲ್ಲಿಯೇ ಉಳಿಯುವುದು

ಚಂದ್ರನ ಮೇಲೆ ಮೊಳಕೆಯೊಡೆದ ಚೀನಾ ಗಿಡ

4.

ಸುದ್ಧಿಯಲ್ಲಿ ಏಕಿದೆ ?ಚಂದ್ರನ ಮೇಲೆ ಮೊದಲ ಬಾರಿಗೆ ಚೀನಾದ ಗಿಡವೊಂದು ಮೊಳಕೆಯೊಡೆದಿದೆ!

ಹಿನ್ನೆಲೆ

 • ಕಳೆದ ಜ.3ರಂದು ಭೂಮಿಗೆ ಗೋಚರಿಸಿದ ಚಂದ್ರನ ಮತ್ತೊಂದು ಭಾಗದ ಮೇಲೆ ಚೀನಾದ ಚ್ಯಾಂಗ್ ಇ-4 ಬಾಹ್ಯಾಕಾಶ ನೌಕೆ ಇಳಿದಿತ್ತು. ಇದೇ ಸಂದರ್ಭದಲ್ಲಿ ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ಅಲ್ಲಿ ಬೀಜವನ್ನು ಹೂತಿದ್ದರು. ಈಗ ಅದು ಮೊಳಕೆ ಒಡೆದಿದ್ದು, ಇದರ ಚಿತ್ರವನ್ನು ಚೀನಾ ಬಾಹ್ಯಾಕಾಶ ಸಂಸ್ಥೆ ಪ್ರಕಟಿಸಿದೆ.
 • ಈ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಗಿಡ ಮೊಳಕೆ ಒಡೆದಿತ್ತು. ಆದರೆ ಇದೇ ಮೊದಲ ಬಾರಿಗೆ ಚಂದ್ರನ ಮೇಲ್ಮೈನಲ್ಲಿ ಗಿಡ ಬೆಳೆಯುತ್ತಿರುವುದು ಸಾಧನೆಯಾಗಿದೆ.
 • ಇದರೊಂದಿಗೆ ಕಳೆದೊಂದು ವಾರದಲ್ಲಿ ಚೀನಾ ಬಾಹ್ಯಾಕಾಶ ವಿಜ್ಞಾನಿಗಳು ಎರಡು ಯಶಸ್ಸಿನ ಶಿಖರ ಏರಿದಂತಾಗಿದೆ. ಭೂಮಿಯ ವಿರುದ್ಧ ದಿಕ್ಕಿನ ಚಂದ್ರನ ಮೇಲ್ಮೈ ಮೇಲೆ ನೌಕೆ ಇಳಿಸಿದ್ದು ಹಾಗೂ ಈಗ ಗಿಡ ಮೊಳಕೆ ಒಡೆದಿರುವುದು ಬಾಹ್ಯಾಕಾಶ ವಿಜ್ಞಾನದಲ್ಲಿ ಮಹತ್ತರ ಮೈಲಿಗಲ್ಲಾಗಿದೆ.
 • ಚೀನಾದ ವಿಶ್ವವಿದ್ಯಾಲಯದ ಸಂಶೋಧಕರು ರೂಪಿಸಿರುವ ಸುಮಾರು 18 ಸೆ.ಮೀ. ಅಗಲವಾದ ಕಂಟೇನರ್​ನಲ್ಲಿ ಈ ಪ್ರಯೋಗ ಮಾಡಲಾಗಿದೆ. ಆದರೆ ಅಲ್ಲಿ ಉಷ್ಣಾಂಶ ನಿಯಂತ್ರಣ ಮಾಡುವುದು ದೊಡ್ಡ ಸಾಹಸವಾಗಲಿದೆ. ಈ ಪ್ರಯೋಗದಿಂದ ಚಂದ್ರನ ವಾತಾವರಣದಲ್ಲಿ ಯಾವುದೇ ಮಾಲಿನ್ಯವಾಗಲಾರದು. ಭವಿಷ್ಯದಲ್ಲಿ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವೇ ಎನ್ನುವ ಸಂಶೋಧನೆಗೆ ಇದು ಸಹಕಾರಿಯಾಗಲಿದೆ ಎಂದು ಚೀನಾ ವಿಜ್ಞಾನಿಗಳು ಹೇಳಿದ್ದಾರೆ.

ಯಾವ್ಯಾವ ಬೀಜ ಬಿತ್ತನೆ?

 • ಮಣ್ಣು, ಸೂಕ್ಷಾ್ಮಣು ಜೀವಿ ಹಾಗೂ ದುಂಬಿಗಳ ಮೊಟ್ಟೆಯ ಮಿಶ್ರಣ ಇರುವ ಹತ್ತಿ, ಆಲೂಗಡ್ಡೆ.

ಪ್ರಯೋಜನ ಏನು?

# ಬಾಹ್ಯಾಕಾಶ ಸಂಶೋಧನೆಗೆ ನೌಕೆ ಜತೆಗೆ ತೆರಳುವ ವಿಜ್ಞಾನಿಗಳು ಆಹಾರ ಕೊಂಡೊಯ್ಯುವ ಅಗತ್ಯವಿಲ್ಲ.

# ಚಂದ್ರನ ಪರಿಸರದಲ್ಲೇ ವಿಜ್ಞಾನಿಗಳು ತಮಗೆ ಅಗತ್ಯವಿರುವ ಆಹಾರ ಬೆಳೆದುಕೊಳ್ಳಬಹುದಾಗಿದೆ.

# ಆಹಾರ ಲಭ್ಯತೆ ಕಾರಣದಿಂದ ಸಂಶೋಧನಾ ಅವಧಿ ದೀರ್ಘವಾಗಲು ಅವಕಾಶ.

# ಮಾನವ ಸಹಿತ ಚಂದ್ರಯಾನ ಹಾಗೂ ಖಾಸಗಿ ಚಂದ್ರಯಾನಕ್ಕೆ ಇನ್ನಷ್ಟು ಸವಲತ್ತು.

Related Posts
“02 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಅಂಕ ನೀಡಿಕೆ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮತಗಟ್ಟೆಗಳಿಗೆ ತಮ್ಮ ಪೋಷಕರನ್ನು ಕರೆದುಕೊಂಡು ಹೋಗಿ ಮತದಾನ ಮಾಡಿಸಿದ ವಿದ್ಯಾರ್ಥಿಗಳಿಗೆ "ಶೈಕ್ಷಣಿಕ ಯೋಜನೆ (ಪ್ರಾಜೆಕ್ಟ್) ವಿಷಯಕ್ಕೆ ತಲಾ ಎರಡು ಹೆಚ್ಚುವರಿ ಅಂಕ ಹಾಗೂ ವಿಶೇಷ ಬಹುಮಾನಗಳನ್ನು ನೀಡಲು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ...
READ MORE
“19 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಿರಿಧಾನ್ಯದ ತಿನಿಸುಗಳು  ಸುದ್ಧಿಯಲ್ಲಿ ಏಕಿದೆ ?ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯವು ಭಾರತದ ಸೇನೆಯ ಗಡಿಯಲ್ಲಿರುವ ಯೋಧರಿಗೆ ಸಿರಿಧಾನ್ಯ ತಿನಿಸುಗಳನ್ನು ಪೂರೈಸಲು ಸಿದ್ಧತೆ ನಡೆಸಿದೆ. 20 ಬಗೆಯ ಸಿರಿಧಾನ್ಯ ತಿನಿಸುಗಳನ್ನು ತಯಾರಿಸಲಾಗಿದ್ದು, ಶೀಘ್ರದಲ್ಲೇ ರವಾನೆಯಾಗಲಿವೆ. ಅಕ್ಕಿ, ಗೋಧಿ ಮೊದಲಾದ ಧಾನ್ಯಗಳಿಂದ ಸಂಸ್ಥೆಯು ಹಲವಾರು ತಿನಿಸುಗಳನ್ನು ...
READ MORE
“04 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉಪ್ಪು ನೀರು ಸಿಹಿಯಾಗೋ ಕಾಲ ಸುದ್ಧಿಯಲ್ಲಿ ಏಕಿದೆ ?ಸಮುದ್ರದ ಉಪ್ಪು ನೀರು ಸಿಹಿಯಾಗಿ ಮನೆ ಮನೆಗೆ ತಲುಪುವ ಕಾಲ ಸನ್ನಿಹಿತವಾಗುತ್ತಿದೆ. ಮಂಗಳೂರು ತೈಲಾಗಾರ (ಎಂಆರ್‌ಪಿಎಲ್‌) ಕೈಗೆತ್ತಿಕೊಂಡಿರುವ ಬಹು ನಿರೀಕ್ಷೆಯ ಉಪ್ಪು ನೀರು ಸಂಸ್ಕರಣಾ ಘಟಕ 2020ರ ವೇಳೆಗೆ ಕಾರ್ಯಗತಗೊಳ್ಳುವ ನಿರೀಕ್ಷೆಯಿದ್ದು, ರಾಜ್ಯದಲ್ಲೇ ಪ್ರಥಮ ...
READ MORE
” 07 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಲೋಕಪಾಲ ಮುಖ್ಯಸ್ಥರ ನೇಮಕ  ಸುದ್ಧಿಯಲ್ಲಿ ಏಕಿದೆ ?ಸುಪ್ರೀಂಕೋರ್ಟ್ ಎಚ್ಚರಿಕೆ ಬಳಿಕ ಕೊನೆಗೂ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆ ವರ್ಷದಲ್ಲೇ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲದ ಮುಖ್ಯಸ್ಥರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದೆ. ಲೋಕಪಾಲ ಕಾಯ್ದೆ ಜಾರಿಗೆ ಬಂದ ಸುಮಾರು ಐದು ವರ್ಷಗಳ ಬಳಿಕ ...
READ MORE
“27 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಐದು ಹೊಸ ತಾಲೂಕು ಸುದ್ಧಿಯಲ್ಲಿ ಏಕಿದೆ ? ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದ ಹಾರೋಹಳ್ಳಿ, ಚೇಳೂರು, ತೇರದಾಳ ಹಾಗೂ ಕಳಸಾ ಹೊಸ ತಾಲೂಕುಗಳ ಹೊರತಾಗಿ ಮತ್ತೆ ಐದು ಪಟ್ಟಣಗಳಿಗೆ ತಾಲೂಕುಗಳ ಪಟ್ಟ ನೀಡಲಾಗಿದೆ. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ...
READ MORE
26th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಪ್ರಸಾದದ ಮೇಲೆ ಎಕ್ಸ್‌ಫೈರಿ ಡೇಟ್‌ ಕಡ್ಡಾಯ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ದೇವಸ್ಥಾನಗಳಲ್ಲಿ ಪ್ಯಾಕ್‌ ಮಾಡಿ ವಿತರಿಸುವ ಪ್ರಸಾದದ ಮೇಲೆ ತಯಾರಿಸಿದ ದಿನ ಹಾಗೂ ಎಷ್ಟು ದಿನಗಳವರೆಗೆ ಮಾತ್ರ ಸೇವಿಸಬಹುದು ಎಂಬ ಮಾಹಿತಿ ನಮೂದಿಸುವುದು ಕಡ್ಡಾಯವಾಗಲಿದೆ. ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದ ನಿಯಮ ...
READ MORE
“10 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಾನಪದ ಅಕಾಡೆಮಿ ಪ್ರಶಸ್ತಿ ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಜಾನಪದ ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ರಾಜ್ಯದ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಲಾಗಿದ್ದು, ಡಿ. 27ರಂದು ಬೀದರ್​ನ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ...
READ MORE
“30th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ವಾಹನ ಸೌಲಭ್ಯ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿಶೇಷಚೇತನ ಮತದಾರರಿಗೆ ವಾಹನ ವ್ಯವಸ್ಥೆ ಕಲ್ಪಿಸುವುದಕ್ಕೆ ಚುನಾವಣಾ ಆಯೋಗ ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂಥ ಸುಧಾರಣಾ ಕ್ರಮ ...
READ MORE
“24 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿಮಾನ ಪತ್ತೆಗೆ ಉಪ್ಪಿನ ಉಪಾಯ ಸುದ್ಧಿಯಲ್ಲಿ ಏಕಿದೆ ? ತಾಂತ್ರಿಕ ದೋಷಗಳಿಂದ ಪತನಗೊಂಡು ಸಮುದ್ರಕ್ಕೆ ಬೀಳುವ ವಿಮಾನಗಳನ್ನು ಪತ್ತೆ ಮಾಡಲು ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್​ಆರ್​ಎಲ್) ‘ಉಪ್ಪಿನ ಉಪಾಯ’ ಕಂಡುಕೊಂಡಿದೆ. ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಯೋಧರು, ಅಂತರಿಕ್ಷಯಾನಿಗಳಿಗೆ ಆಹಾರ ಸಿದ್ಧಪಡಿಸುವಲ್ಲಿ (ಡಿಎಫ್​ಆರ್​ಎಲ್) ...
READ MORE
” 26 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂಡಸ್ ನದಿ ಯೋಜನೆ ಸುದ್ಧಿಯಲ್ಲಿ ಏಕಿದೆ ? ಇಂಡಸ್ ನದಿ ನೀರು ಹಂಚಿಕೆ ಕುರಿತು ಪಾಕಿಸ್ತಾನದೊಂದಿಗೆ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದದಂತೆ ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ. ನದಿಗೆ ಅಡ್ಡಲಾಗಿ ನಿರ್ವಿುಸುತ್ತಿರುವ ಎರಡು ಅಣೆಕಟ್ಟೆಗಳ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಲು ಸರ್ಕಾರ ...
READ MORE
“02 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“19 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“04 ಫೆಬ್ರವರಿ 2019 ರ ಕನ್ನಡ ಪ್ರಚಲಿತ
” 07 ಫೆಬ್ರವರಿ 2019 ರ ಕನ್ನಡ
“27 ಫೆಬ್ರವರಿ 2019 ರ ಕನ್ನಡ ಪ್ರಚಲಿತ
26th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
“10 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“30th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“24 ಫೆಬ್ರವರಿ 2019 ರ ಕನ್ನಡ ಪ್ರಚಲಿತ
” 26 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

One thought on ““16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು””

Leave a Reply

Your email address will not be published. Required fields are marked *