“16th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ರೈಲ್ವೆ: ದೂರು ನೀಡಲು ‘ಮದದ್’

 • ರೈಲು ಪ್ರಯಾಣಿಕರು ಇನ್ನುಮುಂದೆ ತಮ್ಮ ದೂರುಗಳನ್ನು ದಾಖಲಿಸಲು ಟ್ವಿಟರ್, ಫೇಸ್‌ಬುಕ್, ಸಹಾಯವಾಣಿ ಇವುಗಳನ್ನು ಬಳಸುವ ಅವಶ್ಯವಿಲ್ಲ. ದೂರು, ಅಹವಾಲುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ‘ಪ್ರಯಾಣದ ವೇಳೆ ನೆರವಿಗೆ ಮೊಬೈಲ್ ಆ್ಯಪ್’ (ಮದದ್=ಸಹಾಯ) ಎಂಬ ಹೆಸರಿನ  ಮೊಬೈಲ್ ಆ್ಯಪ್ ಅನ್ನು ಈ ತಿಂಗಳ ಅಂತ್ಯದಲ್ಲಿ ರೈಲ್ವೆ ಇಲಾಖೆಯು ಬಿಡುಗಡೆಗೊಳಿಸಲಿದೆ.
 • ಆಹಾರದ ಗುಣಮಟ್ಟ, ಶೌಚಾಲಯ ಕೊಳಕಾಗಿರುವುದು ಮುಂತಾದ ಯಾವುದೇ ವಿಷಯದ ಕುರಿತು ಪ್ರಯಾಣಿಕರು ಈ ಆ್ಯಪ್‌ ಮೂಲಕ ದೂರು ದಾಖಲಿಸಬಹುದು. ತುರ್ತು ಸೇವೆಗಳಿಗೂ ಮನವಿ ಸಲ್ಲಿಸಬಹುದು.
 • ‘ಮದದ್’ನಲ್ಲಿ ದಾಖಲಿಸಿದ ದೂರು ನೇರವಾಗಿ ಆಯಾ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುತ್ತದೆ. ಕೈಗೊಳ್ಳಲಾದ ಕ್ರಮಗಳ ಕುರಿತು ಆನ್‌ಲೈನ್‌ನಲ್ಲಿ ಮಾಹಿತಿ ದೊರಕಲಿದೆ. ಈ ಮೂಲಕ ಅಹವಾಲು ಸಲ್ಲಿಸುವುದು ಮತ್ತು ಅವುಗಳನ್ನು ಪರಿಹರಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುತ್ತದೆ.
 • ದಾಖಲಾದ ದೂರು ಯಾವ ಹಂತದಲ್ಲಿದೆ ಹಾಗೂ ಕ್ರಮ ಕೈಗೊಳ್ಳಲಾಗಿದೆಯೇ ಎನ್ನುವುದನ್ನು ಸಹ ಪ್ರಯಾಣಿಕರು ತಿಳಿದುಕೊಳ್ಳಬಹುದು.

ಪಾರದರ್ಶಕತೆ ಪ್ರೋತ್ಸಾಹಿಸಲು ಕ್ರಮ

 • ಪ್ರತಿ ತಿಂಗಳು ದಾಖಲಾದ ದೂರುಗಳು ಹಾಗೂ ಅವುಗಳನ್ನು ಇತ್ಯರ್ಥಗೊಳಿಸಿದ ಮಾಹಿತಿ ಆ್ಯಪ್‌ನಲ್ಲಿ ಲಭ್ಯವಿರಲಿದೆ. ತ್ವರಿತವಾಗಿ ದೂರುಗಳು ಪರಿಹಾರವಾದ ಆಧಾರದ ಮೇಲೆ, ಮೊದಲ ಹಾಗೂ ಕೊನೆಯ ಐದು ಸ್ಥಾನಗಳಲ್ಲಿರುವ ರೈಲ್ವೆ ನಿಲ್ದಾಣಗಳು, ಪ್ರತಿ ವಲಯದ ರಾಜಧಾನಿ, ಶತಾಬ್ದಿ ರೈಲುಗಳ ಮಾಹಿತಿ ನೀಡಲಾಗುವುದು.
 • ಈ ಮೂಲಕ, ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಕಾಪಾಡಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ

ವಿಎಚ್‌ಪಿ ಅಂತರರಾಷ್ಟ್ರೀಯ ಅಧ್ಯಕ್ಷರ ಆಯ್ಕೆ

 • ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಅಂತರರಾಷ್ಟ್ರೀಯ ಅಧ್ಯಕ್ಷರಾಗಿ ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ವಿ.ಎಸ್. ಕೊಕ್ಜೆ ಆಯ್ಕೆಯಾಗಿದ್ದಾರೆ.
 • ಇಲ್ಲಿ ನಡೆದ ಚುನಾವಣೆಯಲ್ಲಿ ಕೊಕ್ಜೆ ಅವರು ಒಟ್ಟು 192 ಪ್ರತಿನಿಧಿಗಳಲ್ಲಿ 131 ಪ್ರತಿನಿಧಿಗಳ ಮತಗಳನ್ನು ಪಡೆದು ಹಾಲಿ ಅಧ್ಯಕ್ಷ ರಾಘವ ರೆಡ್ಡಿ ಅವರನ್ನು ಸೋಲಿಸಿದರು.
 • ಐದು ದಶಕಗಳಲ್ಲಿ ಇದೇ ಮೊದಲ ಬಾರಿ ಚುನಾವಣೆ ನಡೆದಿದೆ. ಅಧ್ಯಕ್ಷರ ಆಯ್ಕೆಗೆ ಸದಸ್ಯರಲ್ಲಿ ಒಮ್ಮತ ಮೂಡದ ಕಾರಣ ಈ ಚುನಾವಣೆ ನಡೆಯಿತು.

ಅಳಿಯ, ಸೊಸೆಗೆ ಹಿರಿ ಹೊಣೆ

 • ವಯೋವೃದ್ಧ ಪಾಲಕರ ಪಾಲನೆ ಹಾಗೂ ರಕ್ಷಣೆ ಜವಾಬ್ದಾರಿಯನ್ನು ಮಕ್ಕಳು, ಮೊಮ್ಮಕ್ಕಳ ಜತೆಗೆ ಅಳಿಯ ಹಾಗೂ ಸೊಸೆಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
 • ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪಾಲಕರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ, ಕಲ್ಯಾಣ ತಿದ್ದುಪಡಿ ಕಾಯ್ದೆ-2018ನ್ನು ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ.
 • ತಿದ್ದುಪಡಿ ಕಾಯ್ದೆಯ ಮೂಲಕ ವೃದ್ಧಾಶ್ರಮ ಹಾಗೂ ಮನೆಯಲ್ಲಿ ಹಿರಿಯ ನಾಗರಿಕರಿಗೆ ಇನ್ನಷ್ಟು ಕಾನೂನಾತ್ಮಕ ನೆರವು ನೀಡಲಾಗುತ್ತದೆ.
 • 2007ರಲ್ಲಿ ರಚನೆಯಾದ ಕಾಯ್ದೆಯಲ್ಲಿ ಹಿರಿಯ ನಾಗರಿಕರ ಪಾಲನಾ ಉಸ್ತುವಾರಿಯು ಮಕ್ಕಳಿಗೆ ಸೀಮಿತವಾಗಿತ್ತು. ಮಕ್ಕಳು ಎನ್ನುವುದನ್ನು ಮಗ, ಮಗಳು, ಮೊಮ್ಮಕ್ಕಳು ಎಂದು ವ್ಯಾಖ್ಯಾನಿಸಲಾಗಿತ್ತು.
 • ಆದರೆ ಈಗ ಅದನ್ನು ತಿದ್ದುಪಡಿ ಮಾಡಿ ಅಳಿಯ, ಸೊಸೆ ಹಾಗೂ ಪೋಷಕರು ಎಂದು ಕೂಡ ಸೇರಿಸಲಾಗಿದೆ. ಮಕ್ಕಳಿರದಿದ್ದರೆ ಪೋಷಣೆಯ ಜವಾಬ್ದಾರಿ ಹೊಂದಿರುವರು ಕಾನೂನು ವ್ಯಾಪ್ತಿಗೆ ಬರುತ್ತಾರೆ.
 • ಈ ಸಂಬಂಧದ ತಿದ್ದುಪಡಿ ಕಾಯ್ದೆಯ ಕರಡು ಪ್ರತಿಯನ್ನು ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಅಂತಿಮಗೊಳಿಸಿದೆ. ನೂತನ ತಿದ್ದುಪಡಿ ಪ್ರಕಾರ ಹಿರಿಯ ನಾಗರಿಕರನ್ನು ಪಾಲನೆ ಮಾಡಲು ವಿಫಲವಾಗುವ ಸಂಬಂಧಪಟ್ಟ ಪೋಷಕರನ್ನು 6 ತಿಂಗಳವರೆಗೆ ಜೈಲಿಗೆ ಕಳುಹಿಸಲು ಕೂಡ ಅವಕಾಶ ಕಲ್ಪಿಸಲಾಗಿದೆ.
 • ಹಿರಿಯರ ಸಂಖ್ಯೆ ವೃದ್ಧಿ: ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ 1.98 ಕೋಟಿ ಹಿರಿಯ ನಾಗರಿಕರಿದ್ದರು. 2011ರ ಜನಗಣತಿ ಪ್ರಕಾರ ಇದು 10.38 ಕೋಟಿ ತಲುಪಿದೆ. ಅಂದಾಜಿನ ಪ್ರಕಾರ 2021ಕ್ಕೆ ಈ ಸಂಖ್ಯೆ 14.30 ಕೋಟಿ ತಲುಪುವ ನಿರೀಕ್ಷೆಯಿದೆ.
 • ಹೀಗಾಗಿ ಹಿರಿಯ ನಾಗರಿಕರ ಪಾಲನೆಯು ಪ್ರಮುಖ ಸಾಮಾಜಿಕ ವಿಚಾರವಾಗಲಿದೆ ಎನ್ನುವ ಕಾರಣಕ್ಕೆ ಸರ್ಕಾರ ಈ ಕಠಿಣ ತಿದ್ದುಪಡಿಗೆ ಮುಂದಾಗಿದೆ.

ವೃದ್ಧಾಶ್ರಮಗಳಿಗೆ ರೇಟಿಂಗ್

 • ಭಾರತದಲ್ಲಿಯೂ ವೃದ್ಧಾಶ್ರಮಗಳ ಸಂಖ್ಯೆ ವೃದ್ಧಿಯಾಗುತ್ತಿದೆ. ಆದರೆ ಇವುಗಳಿಗೆ ಯಾವುದೇ ರೇಟಿಂಗ್ ನೀಡಲಾಗುತ್ತಿಲ್ಲ. ಗುಣಮಟ್ಟದ ಕಾರಣಕ್ಕಾಗಿ ಕಾಯ್ದೆ ವ್ಯಾಪ್ತಿಗೆ ರೇಟಿಂಗ್ ತರಲಾಗಿದ್ದು, ಪ್ರತಿ ವರ್ಷವೂ ಕ್ವಾಲಿಟಿ ಕಂಟ್ರೋಲ್ ಆಫ್ ಇಂಡಿಯಾದಂತಹ ಸಂಸ್ಥೆಗಳು ರೇಟಿಂಗ್ ನೀಡಲಿವೆ. ಈ ವ್ಯವಸ್ಥೆಯು ವೃದ್ಧಾಶ್ರಮದ ಜತೆಗೆ ಡೇ ಕೇರ್​ಗಳಿಗೂ ಅನ್ವಯವಾಗುತ್ತವೆ.

ಆಯುಷ್ಮಾನ್ ಆರೋಗ್ಯ ಯೋಜನೆಗೆ ಚಾಲನೆ

 • ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಮೊದಲ ಆರೋಗ್ಯ ಕೇಂದ್ರವನ್ನು ಛತ್ತೀಸ್​ಗಢದ ಬಿಜಾಪುರದಲ್ಲಿ ಉದ್ಘಾಟಿಸಿದ್ದಾರೆ.
 • ಆಯುಷ್ಮಾನ್ ಭಾರತ ಯೋಜನೆಯಲ್ಲಿ ಉಚಿತ ಆರೋಗ್ಯ ವಿಮೆ, ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ ಹಾಗೂ ಜನೌಷಧಿ ಕೇಂದ್ರಗಳು ಸೇರಿವೆ. ಇದರ ಮೊದಲ ಭಾಗವಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದರು.
 • 2022ರ ವೇಳೆಗೆ ದೇಶಾದ್ಯಂತ ಸುಮಾರು 1.50 ಲಕ್ಷ ಆರೋಗ್ಯ ಕೇಂದ್ರಗಳು ಆರಂಭವಾಗಲಿವೆ. ಈ ಕೇಂದ್ರಗಳಲ್ಲಿ ರಕ್ತ ತಪಾಸಣೆ, ಮಧುಮೇಹ-ರಕ್ತದೊತ್ತಡ, ಕ್ಯಾನ್ಸರ್ ಚಿಕಿತ್ಸೆ ಹಾಗೂ ಹಿರಿಯ ನಾಗರಿಕರಿಗೆ ಬರುವ ರೋಗಗಳ ತಪಾಸಣೆ ಮಾಡುವ ಸವಲತ್ತುಗಳಿರಲಿವೆ.
 • ವಿಮಾ ಯೋಜನೆಗೆ ಸಂಬಂಧಿಸಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಹಾಗೂ ಇತರ ಅಂಶಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಶೀಘ್ರವೇ ವಿಮಾ ಯೋಜನೆಗೂ ಚಾಲನೆ ಸಿಗುವ ಸಾಧ್ಯತೆಯಿದೆ.

ಮೋದಿ ತ್ರಿರಾಷ್ಟ್ರ ಪ್ರವಾಸ

 • ವಿದೇಶಗಳೊಂದಿಗಿನ ಬಾಂಧವ್ಯ ವೃದ್ಧಿ ಆಶಯದ ಮುಂದುವರಿದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಸ್ವೀಡನ್, ಬ್ರಿಟನ್ ಮತ್ತು ಜರ್ಮನಿ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಸ್ವೀಡನ್​ಗೆ ತೆರಳಿ 17ರಂದು ಸ್ಟಾಕ್​ಹೋಮ್ಲ್ಲಿ ನಡೆಯುವ ಚೊಚ್ಚಲ ಭಾರತ-ನಾರ್ಡಿಕ್ ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ.
 • 1988ರ ಬಳಿಕ ಸ್ಟಾಕ್​ಹೋಮ್ೆ ಇದೇ ಮೊದಲ ಬಾರಿ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿದ್ದು, ನಾರ್ವೆ, ಫಿನ್​ಲ್ಯಾಂಡ್ , ಡೆನ್ಮಾರ್ಕ್ ಮತ್ತು ಐಸ್​ಲ್ಯಾಂಡ್​ನ ಗಣ್ಯರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
 • ಐರೋಪ್ಯ ಒಕ್ಕೂಟದ ಆಚೆಗೆ ಸಭೆ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನೇತೃತ್ವದಲ್ಲಿ ಇದೇ ಮಾದರಿ ನಾರ್ಡಿಕ್ ರಾಷ್ಟ್ರಗಳ ಸಭೆ ನಡೆದಿತ್ತು. ದೇಶಗಳ ಮುಖ್ಯಸ್ಥರು ಮತ್ತು ಸರ್ಕಾರಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಅದರ ಬಳಿಕ ಇದೇ ಮೊದಲ ಬಾರಿಗೆ ನಾರ್ಡಿಕ್ ರಾಷ್ಟ್ರಗಳ ಪ್ರಧಾನಿ ಅಥವಾ ಅಧ್ಯಕ್ಷರ ಮಟ್ಟದ ಶೃಂಗವೊಂದು ಆಯೋಜನೆಯಾಗಿದೆ.
 • ಐರೋಪ್ಯ ಒಕ್ಕೂಟದ ಬೆಂಬಲಿಗ ರಾಷ್ಟ್ರವಾದ ಭಾರತದ ಆಹ್ವಾನ ಮೇರೆಗೆ ನಾರ್ಡಿಕ್ ರಾಷ್ಟ್ರಗಳ ಪ್ರಮುಖರು ಶೃಂಗಕ್ಕೆ ಸಮ್ಮತಿಸಿರುವುದು ವಿಶೇಷ.
 • ಸ್ನೇಹಬಂಧ: ಭಾರತದಲ್ಲಿನ ಆರ್ಥಿಕ ಬೆಳವಣಿಗೆ ಮೇಲೆ ವಿಶ್ವಾಸವಿಟ್ಟು ಕಳೆದ ವರ್ಷ 275 ವಿವಿಧ ಭಾರತೀಯ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿದೆ.

ಶೃಂಗದ ಅಜೆಂಡಾ ಏನು?

 • ಎರಡು ದಿನಗಳ ಶೃಂಗಸಭೆಯಲ್ಲಿ ಆರು ದೇಶಗಳ ಪ್ರಮುಖರು ಪಾಲ್ಗೊಳ್ಳುತ್ತಿದ್ದು, ಪರಿಸರ ಮತ್ತು ವಾತಾವರಣ, ವ್ಯಾಪಾರ ಮತ್ತು ಹೂಡಿಕೆ, ಸಹಕಾರ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ರ್ಚಚಿಸಲಿದ್ದಾರೆ

ಕಾಮನ್​ವೆಲ್ತ್​ ಗೇಮ್ಸ್​ಗೆ ತೆರೆ: ಭಾರತದ ಮುಡಿಗೇರಿದವು 66 ಪದಕಗಳು

 • ಈ ಸಾಲಿನ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತದ ಕ್ರೀಡಾಪಟುಗಳು ಒಟ್ಟು 66 ಪದಕಗಳನ್ನು ಗೆದ್ದಿದ್ದು, ಅವುಗಳಲ್ಲಿ 26 ಚಿನ್ನ, 20 ಬೆಳ್ಳಿ ಹಾಗೂ 20 ಕಂಚು ಪದಕಗಳು ಭಾರತದ ಮುಡಿಗೇರಿವೆ.
 • ಟೇಬಲ್​ ಟೆನ್ನಿಸ್​ನ ಮನಿಕಾ ಬಾತ್ರಾ ನಾಲ್ಕು ಪದಕಗಳನ್ನು ಪಡೆಯುವ ಮೂಲಕ ಭರವಸೆಯ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
  80 ಚಿನ್ನದ ಪದಕ ಗಳಿಸುವ ಮೂಲಕ ಆಸ್ಟ್ರೇಲಿಯಾ ಮೊದಲನೇ ಸ್ಥಾನ ಪಡೆದಿದ್ದರೆ, 45 ಚಿನ್ನ ಗೆದ್ದು ಇಂಗ್ಲೆಂಡ್‌ ಎರಡನೇ ಸ್ಥಾನದಲ್ಲಿದೆ.
 • ಇನ್ನು ನಾಲ್ಕು ಹಾಗೂ ಐದನೇ ಸ್ಥಾನದಲ್ಲಿ ಕ್ರಮವಾಗಿ ಕೆನಡಾ ಹಾಗೂ ನ್ಯೂಜಿಲೆಂಡ್‌ ಸ್ಥಾನ ಪಡೆದಿದೆ.
 • ಕಳೆದ ಬಾರಿಯ 2014ರ ಗ್ಲಾಸ್ಗೊ ಕಾಮನ್​ವೆಲ್ತ್​ ಕೂಟದಲ್ಲಿ ಒಟ್ಟು 15 ಚಿನ್ನ. 30 ಬೆಳ್ಳಿ ಮತ್ತು 19 ಕಂಚಿನ ಪದಕ ಸೇರಿ ಒಟ್ಟು 64 ಪದಕ ಗಳಿಸಿದ್ದ ಭಾರತ ಪದಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿತ್ತು. ಈ ಬಾರಿ ಹೆಚ್ಚು ಚಿನ್ನದ ಪದಕ ಗಳಿಸಿ ಮೂರನೇ ಸ್ಥಾನಕ್ಕೆ ಏರಿದೆ.
 • ಮೇರಿ ಕೋಮ್ ಭಾರತದ ಧ್ವಜಧಾರಿ: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಬಾಕ್ಸರ್ ಮೇರಿ ಕೋಮ್ ಸ್ವರ್ಣ ಗೆಲ್ಲುವ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದಾರೆ. 35 ವರ್ಷದ ಮೇರಿ ಕೋಮ್ ಸ್ಪರ್ಧೆ ಮಾಡುವ ಕೊನೆಯ ಕಾಮನ್​ವೆಲ್ತ್​ ಇದಾಗಿದ್ದು, ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗುವ ಗೌರವ ಪಡೆದುಕೊಂಡಿದ್ದಾರೆ.

ಬರ್ವಿುಂಗ್​ಹ್ಯಾಂಗೆ ಧ್ವಜ

 • ಪ್ರಿನ್ಸ್ ಎಡ್ವರ್ಡ್ 21ನೇ ಆವೃತ್ತಿಯ ಗೇಮ್್ಸ ಮುಕ್ತಾಯಗೊಂಡಿದೆ ಎಂದು ಘೋಷಣೆ ಮಾಡುವ ಮುನ್ನ ಗೋಲ್ಡ್​ಕೋಸ್ಟ್ ನಗರದ ಮೇಯರ್, ಇಂಗ್ಲೆಂಡ್​ನ ಬರ್ವಿುಂಗ್​ಹ್ಯಾಂ ನಗರದ ಮೇಯರ್​ಗೆ ಕಾಮನ್ವೆಲ್ತ್ ಗೇಮ್ಸ್​ನ ಧ್ವಜ ಹಸ್ತಾಂತರ ಮಾಡಿದರು. ಅದರೊಂದಿಗೆ 2022ರ ಗೇಮ್ಸ್​ನ ಕೌಂಟ್​ಡೌನ್ ಕೂಡ ಆರಂಭಗೊಂಡಿತು.

~~~***ದಿನಕ್ಕೊಂದು ಯೋಜನೆ***~~~

ಪ್ರಧಾನ್ ಮಂತ್ರಿ ಉಜ್ಜ್ವಲಾ ಯೋಜನೆ

 • ಪ್ರಧಾನ್ ಮಂತ್ರಿ ಉಜ್ಜ್ವಲಾ ಯೋಜನೆಯು ಬಡತನ ರೇಖೆ (ಬಿಪಿಎಲ್) ಕುಟುಂಬಗಳ  ಮಹಿಳೆಯರಿಗೆ ಎಲ್ಪಿಜಿ ಸಂಪರ್ಕಗಳನ್ನು ಒದಗಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಒಂದು ಯೋಜನೆಯಾಗಿದೆ
 • ಪ್ರಧಾನಿ ನರೇಂದ್ರ ಮೋದಿ 2016 ಮೇ ತಿಂಗಳಲ್ಲಿ PMUY ಯನ್ನು ಸ್ವಚ್ ಇಂದನ್, ಬೆಹ್ತಾರ್ ಜೀವನ್ ಅವರ ಟ್ಯಾಗ್ನೊಂದಿಗೆ ಪ್ರಾರಂಭಿಸಿದರು. ಬಿಪಿಎಲ್ ಮನೆಗಳ ಮಹಿಳೆಯರಿಗೆ ಎಲ್ಪಿಜಿ (ಅಡುಗೆ ಅನಿಲ) ಸಂಪರ್ಕವನ್ನು ಉಚಿತವಾಗಿ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.
 • ಇದರ ಮೂಲಕ, ಠೇವಣಿ-ಮುಕ್ತ ಹೊಸ ಸಂಪರ್ಕವನ್ನು ಪಡೆಯಲು ಫಲಾನುಭವಿಗಳಿಗೆ ಹಣ ಸಹಾಯವನ್ನು ನೀಡಲಾಗುತ್ತದೆ
 • ಈ ಯೋಜನೆಯು ಮಹಿಳೆಯರಿಗೆ ಅಧಿಕಾರ ನೀಡುವ ಮತ್ತು ಅವರ ಆರೋಗ್ಯವನ್ನು ರಕ್ಷಿಸಲು ಅಶುದ್ಧ ಅಡುಗೆ ಇಂಧನಗಳ ಆಧಾರದ ಮೇಲೆ ಅಥವಾ ಅಡುಗೆ ಅನಿಲವನ್ನು ಸ್ವಚ್ಛಗೊಳಿಸಲು ಪಳೆಯುಳಿಕೆ ಇಂಧನಗಳ ಆಧಾರದ ಮೇಲೆ ಅವುಗಳನ್ನು ಸಾಂಪ್ರದಾಯಿಕವಾಗಿ ಬದಲಿಸುವ ಉದ್ದೇಶವನ್ನು ಹೊಂದಿದೆ. ಇದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಜಾರಿಗೆ ತಂದ ಮೊದಲ ಸಾಮಾಜಿಕ ಕಲ್ಯಾಣ ಯೋಜನೆಯಾಗಿದೆ.

ಟಾರ್ಗೆಟ್ ಫಲಾನುಭವಿಗಳು(UJJWALA PLUS)

 • ಈ ಯೋಜನೆಯಡಿಯಲ್ಲಿ ಕೆಳಗಿನ ವರ್ಗಗಳನ್ನು ಒಳಗೊಳ್ಳಲು ಸರ್ಕಾರ ನಿರ್ಧರಿಸಿದೆ: –
 • ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಎಂಐ) (ಗ್ರಾಮೀಣ) ನ ಎಲ್ಸಿ ಎಸ್ಸಿ / ಎಟಿಎಸ್ ಕುಟುಂಬದ ಫಲಾನುಭವಿಗಳು
 • ಅಂತ್ಯೋದಯ ಅನ್ನ ಯೋಜನೆ (ಎಎಇ)
 • ಅರಣ್ಯ ನಿವಾಸಿಗಳು
 • ಹೆಚ್ಚಿನ ಹಿಂದುಳಿದ ವರ್ಗಗಳು (MBC)
 • ಟೀ ಮತ್ತು ಎಕ್ಸ್-ಟೀ ಗಾರ್ಡನ್ ಬುಡಕಟ್ಟು ಜನಾಂಗ
 • ದ್ವೀಪಗಳಲ್ಲಿ ವಾಸಿಸುವ ಜನರು
 • ನದಿ ದ್ವೀಪಗಳಲ್ಲಿ ವಾಸಿಸುವ ಜನರು
 • PMUY ಅನುಷ್ಠಾನದಲ್ಲಿ ಎದುರಾದ ಪ್ರಾಯೋಗಿಕ ತೊಂದರೆಗಳನ್ನು ಈ ಕ್ರಮವು ಪರಿಹರಿಸುತ್ತದೆ, ಅವುಗಳೆಂದರೆ, ಸಾಮಾಜಿಕ ಆರ್ಥಿಕ ಜಾತಿ ಸಮೀಕ್ಷೆ (SECC) ಪಟ್ಟಿಯಿಂದ ಹೊರಬರುವ ನಿಜವಾದ ಬಡ ಕುಟುಂಬಗಳನ್ನು ಗುರಿಪಡಿಸುತ್ತದೆ

1. ಮದದ್ ಎಂಬ ರೈಲ್ವೆ ಮೊಬೈಲ್ ಆಪ್ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾಗಿರುವುದನ್ನು ಗುರುತಿಸಿ .
1.‘ಮದದ್’ನಲ್ಲಿ ದಾಖಲಿಸಿದ ದೂರು ನೇರವಾಗಿ ಆಯಾ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುತ್ತದೆ
2.ಕೈಗೊಳ್ಳಲಾದ ಕ್ರಮಗಳ ಕುರಿತು ಆನ್ಲೈನ್ನಲ್ಲಿ ಮಾಹಿತಿ ದೊರಕಲಿದೆ.
A. ಮೊದಲನೇ ಹೇಳಿಕೆ ಸರಿಯಾಗಿದೆ
B. ಎರಡನೇ ಹೇಳಿಕೆ ತಪ್ಪಾಗಿದೆ
C. ಎರಡೂ ಹೇಳಿಕೆಗಳು ಸರಿಯಾಗಿವೆ
D. ಎರಡೂ ಹೇಳಿಕೆಗಳು ತಪ್ಪಾಗಿವೆ

2. ವಿಶ್ವ ಹಿಂದೂ ಪರಿಷತ್ನ (ವಿಎಚ್ಪಿ) ಅಂತರರಾಷ್ಟ್ರೀಯ ಅಧ್ಯಕ್ಷರಾಗಿ ಯಾವ ರಾಜ್ಯದ ಮಾಜಿ ರಾಜ್ಯಪಾಲರು ಆಯ್ಕೆಯಾಗಿದ್ದಾರೆ ?
A. ಉತ್ತರಾಖಂಡ್
B. ಹಿಮಾಚಲ ಪ್ರದೇಶ
C. ಉತ್ತರಪ್ರದೇಶ
D. ಬಿಹಾರ

3. ಕೇಂದ್ರ ಸರ್ಕಾರವು ಪಾಲಕರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ, ಕಲ್ಯಾಣ ತಿದ್ದುಪಡಿ ಕಾಯ್ದೆ-2007 ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ತಪ್ಪಾಗಿರುವ ಹೇಳಿಕೆಯನ್ನು ಗುರುತಿಸಿ
1. 2007ರಲ್ಲಿ ರಚನೆಯಾದ ಕಾಯ್ದೆಯಲ್ಲಿ ಹಿರಿಯ ನಾಗರಿಕರ ಪಾಲನಾ ಉಸ್ತುವಾರಿಯು ಮಕ್ಕಳಿಗೆ ಸೀಮಿತವಾಗಿತ್ತು.
2. ಮಕ್ಕಳು ಎನ್ನುವುದನ್ನು ಮಗ, ಮಗಳು, ಸೊಸೆ ,ಅಳಿಯ ,ಮೊಮ್ಮಕ್ಕಳು ಎಂದು ವ್ಯಾಖ್ಯಾನಿಸಲಾಗಿತ್ತು.
A. ಮೊದಲನೇ ಹೇಳಿಕೆ ಸರಿಯಾಗಿದೆ
B. ಎರಡನೇ ಹೇಳಿಕೆ ತಪ್ಪಾಗಿದೆ
C. ಎರಡೂ ಹೇಳಿಕೆಗಳು ಸರಿಯಾಗಿವೆ
D. ಎರಡೂ ಹೇಳಿಕೆಗಳು ತಪ್ಪಾಗಿವೆ

4. ಆಯುಷ್ಮಾನ್ ಭಾರತ ಯೋಜನೆಯಲ್ಲಿ ಯಾವೆಲ್ಲ ಸೇವೆಗಳನ್ನು ಸೇರಿಸಲಾಗಿದೆ ?
A.ಉಚಿತ ಆರೋಗ್ಯ ವಿಮೆ
B.ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ
C. ಜನೌಷಧಿ ಕೇಂದ್ರಗಳು
D. ಮೇಲಿನ ಎಲ್ಲವು

5. ನಾರ್ಡಿಕ್ ದೇಶಗಳೆಂದು ಯಾವ ದೇಶಗಳನ್ನು ಕರೆಯುತ್ತೇವೆ ?
A. ಡೆನ್ಮಾರ್ಕ್ ,ಫಿನ್ಲ್ಯಾಂಡ್
B. ಐಸ್ ಲ್ಯಾಂಡ್ ,ನಾರ್ವೆ ,ಸ್ವೀಡನ್
C. 1 ಮತ್ತು 2
D. ಯಾವುದು ಅಲ್ಲ

6. ಕಾಮನ್ವೆಲ್ತ್ ಆಟಗಳಲ್ಲಿ ಭಾರತ ಯಾವ ಕ್ರೀಡೆಯಲ್ಲಿ ಅತಿ ಹೆಚ್ಚು ಸ್ವರ್ಣ ಪದಕಗಳಿಸಿದೆ ?
A. ಶೂಟಿಂಗ್
B. ಕುಸ್ತಿ
C. ಬಾಕ್ಸಿಂಗ್
D. ಬ್ಯಾಡ್ಮಿಂಟನ್

7. 2022 ರ ಕಾಮನ್ವೆಲ್ತ್ ಗೇಮ್ಸ್ ಎಲ್ಲಿ ನಡೆಯಲಿದೆ ?
A. ಟೋಕಿಯೋ
B. ಬರ್ಮಿನ್ಗ್ ಹ್ಯಾಮ್
C. ಕೆನಡಾ
D. ಆಸ್ಟ್ರೇಲಿಯಾ

8. ಪ್ರಧಾನ್ ಮಂತ್ರಿ ಉಜ್ಜ್ವಲಾ ಯೋಜನೆಯ ಫಲಾನುಭವಿಗಳನ್ನು ಗುರುತಿಸಿ ?
1. ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಎಂಐ) (ಗ್ರಾಮೀಣ) ನ ಎಲ್ಸಿ ಎಸ್ಸಿ / ಎಟಿಎಸ್ ಕುಟುಂಬದ ಫಲಾನುಭವಿಗಳು
2. ಅಂತ್ಯೋದಯ ಅನ್ನ ಯೋಜನೆ (ಎಎಇ)
3. ಅರಣ್ಯ ನಿವಾಸಿಗಳು
4. ಹೆಚ್ಚಿನ ಹಿಂದುಳಿದ ವರ್ಗಗಳು (MBC)
5. ಟೀ ಮತ್ತು ಎಕ್ಸ್-ಟೀ ಗಾರ್ಡನ್ ಬುಡಕಟ್ಟು ಜನಾಂಗ
A. 1,2 & 3
B. 1,3,&5
C. 2,4
D. 1,2,3,4,5

9. ಭಾರತದ ಮೊದಲ ಕೀಟ ಮ್ಯೂಸಿಯಂ ಯಾವ ರಾಜ್ಯದಲ್ಲಿ ತೆರೆಯಿತು?
A. ಕೇರಳ
B. ತಮಿಳುನಾಡು
C. ಅಸ್ಸಾಂ
D. ಒಡಿಶಾ

10. ದೆಹಲಿಯಲ್ಲಿ 2018 ಸರಸ್ ಆಜೀವಿಕಾ ಮೇಳವನ್ನು ಕೇಂದ್ರ ಸಚಿವಾಲಯ ಪ್ರಾರಂಭಿಸಿದೆ?
A. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
B. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
C. ಗ್ರಾಮೀಣಾಭಿವೃದ್ಧಿ ಸಚಿವಾಲಯ
D. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ

ಉತ್ತರಗಳು: 1.C 2.B 3.B 4.D 5.C 6.A 7.B 8.D 9.B10.C 

Related Posts
“11th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸರ್ದಾರ್‌ ಪಟೇಲ್‌ ಪ್ರತಿಮೆ ಸುದ್ಧಿಯಲ್ಲಿ ಏಕಿದೆ ?ಭಾರತದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭ ಬಾಯಿ ಪಟೇಲ್‌ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್‌ 31ಕ್ಕೆ ಅನಾವರಣಗೊಳಿಸಲಿದ್ದಾರೆ. ವಿಶ್ವದ ಅತಿ ಎತ್ತರದ ಪ್ರತಿಮೆ ಎನ್ನಲಾದ ಸರ್ದಾರ್‌ ಪಟೇಲ್‌ ಪ್ರತಿಮೆಯು 182 ಮೀಟರ್‌ ...
READ MORE
Visvesvaraya Technological University (VTU) will train construction workers workingin its poat graduate campus. They will be trained in six basic skills related to their work by the varsity, which has been ...
READ MORE
As per Registrar General of India, Sample Registration System (SRS) 2013, the Infant Mortality Rate (IMR) is 40 per 1000 live births. the Neonatal Mortality Rate (NMR) is 28 per 1000 live ...
READ MORE
Programmes to control Non communicable diseases National Programme for Prevention and Control of Cancer, Diabetes, Cardiovascular Diseases and Stroke (NPCDCS)- which is implemented for interventions up to District level under the National Health ...
READ MORE
Karnataka Current Affairs – KPSC/KAS Exams- 19th September 2018
Steps sought to conserve Kappatagudda hills The Natural Committee for the Protection of Natural Resources (NCPNR) has urged the State government to initiate immediate steps to preserve and conserve the biodiversity-rich ...
READ MORE
Karnataka Current Affairs – KAS/KPSC Exams – 22nd Dec 2017
India International Coffee Festival to be held from January 16 After a gap of four years, Bengaluru will host the seventh edition of India International Coffee Festival (IICF) in January 2018. This ...
READ MORE
“23rd & 24th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಬೆಳುವಾಯಿ ಚಿಟ್ಟೆ ಪಾರ್ಕ್ ಸುದ್ದಿಯಲ್ಲಿ ಏಕಿದೆ? ಮೂಡುಬಿದಿರೆ ಸಮೀಪದ ಬೆಳುವಾಯಿಯಲ್ಲಿರುವ ಸಮ್ಮಿಲನ್ ಶೆಟ್ಟಿ ಅವರ ಚಿಟ್ಟೆ ಪಾರ್ಕ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆದಿದೆ. ಗ್ರಾಮೀಣ ಭಾಗದಲ್ಲಿ ಸ್ಥಾಪನೆಯಾಗಿರುವ ಚಿಟ್ಟೆಪಾರ್ಕ್ ಈಗ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ. ಬೆಳುವಾಯಿ ಗ್ರಾಮದಲ್ಲಿ ಸಮ್ಮಿಲನ್ ಶೆಟ್ಟಿ ನಿರ್ವಿುಸಿದ ...
READ MORE
28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಡೋಕ್ಲಾಂ ಬಿಕ್ಕಟ್ಟು ಸುದ್ಧಿಯಲ್ಲಿ ಏಕಿದೆ? ಸಿಕ್ಕಿಂ ಗಡಿಯ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸದ್ದಿಲ್ಲದೇ ಕಾರ್ಯಚಟುವಟಿಕೆ ಚುರುಕುಗೊಳಿಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಅಮೆರಿಕದ ಅಧಿಕಾರಿಯೊಬ್ಬರು ನೀಡಿದ್ದಾರೆ. ದೇಶದ ಉತ್ತರ ಭಾಗದಲ್ಲಿನ ಅತಿಕ್ರಮಣ ವಿರುದ್ಧ ಕಠಿಣ ನಿಲುವು ಪ್ರದರ್ಶಿಸುತ್ತಿರುವ ಭಾರತ, ಡೋಕ್ಲಾಂ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ...
READ MORE
“9th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆರೋಗ್ಯವಾಣಿ ಸುದ್ದಿಯಲ್ಲಿ ಏಕಿದೆ ?  ರಾಜ್ಯ ಸರಕಾರ ಜಾರಿಗೆ ತಂದಿರುವ ಆರೋಗ್ಯವಾಣಿ 104 ಕಾರ್ಯ ಯೋಜನೆಗೆ ಮನಸೋತ ಕೇಂದ್ರ ಸರಕಾರ, ಅದನ್ನು ರಾಷ್ಟ್ರಮಟ್ಟದಲ್ಲಿ ‘ಆರೋಗ್ಯವಾಣಿ 1104’ ಮೂಲಕ ಪರಿಚಯಿಸಿ ಒಂದೇ ಸೂರಿನಡಿ ತುರ್ತು ಆರೋಗ್ಯ ಮಾಹಿತಿ ನೀಡಲು ಮುಂದಾಗಿದೆ. ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ...
READ MORE
National Current Affairs – UPSC/KAS Exams- 14th September 2018
Right to be forgotten Why in news? Justice BN Srikrishna Committee’s draft Personal Data Protection Bill 2018 is introducing a new right — the right to be forgotten, to remove very old, ...
READ MORE
“11th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
VTU to train construction workers
Infant Mortality- Status
Non communicable diseases
Karnataka Current Affairs – KPSC/KAS Exams- 19th September
Karnataka Current Affairs – KAS/KPSC Exams – 22nd
“23rd & 24th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
“9th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
National Current Affairs – UPSC/KAS Exams- 14th September

Leave a Reply

Your email address will not be published. Required fields are marked *