16th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಜಿಎಸ್​ಟಿ ಸಂಕೀರ್ಣ

 • ಕಳೆದ ವರ್ಷ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬಂದಿರುವ ಸರಕು ಹಾಗೂ ಸೇವಾ ತೆರಿಗೆ (ಜಿಎಸ್​ಟಿ) ವಿಶ್ವದಲ್ಲೇ ಅತೀ ಸಂಕೀರ್ಣ ಹಾಗೂ ಎರಡನೇ ಅತಿ ಹೆಚ್ಚು ತೆೆರಿಗೆ ದರ ಹೊಂದಿರುವ ವ್ಯವಸ್ಥೆಯಾಗಿದೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
 • ವಿಶ್ವದ 49 ದೇಶಗಳು ಒಂದೇ ಜಿಎಸ್​ಟಿ ದರ (ಸಿಂಗಲ್ ಸ್ಲ್ಯಾಬ್)ಹೊಂದಿವೆ. 28 ದೇಶಗಳು ಎರಡು ವಿಧದ ಜಿಎಸ್​ಟಿ ದರ ನಿಗದಿ ಮಾಡಿವೆ.
 • ಪಾಕಿಸ್ತಾನ, ಘಾನಾ, ಲಕ್ಸೆಂಬರ್ಗ್ ಹಾಗೂ ಭಾರತ ಮಾತ್ರ 4 ಹಾಗೂ ಅದಕ್ಕಿಂತ ಹೆಚ್ಚಿನ ಸ್ಲ್ಯಾಬ್​ಗಳನ್ನು ಹೊಂದಿವೆ. ಪ್ರಸ್ತುತ ಭಾರತದಲ್ಲಿ ಶೇಕಡ 0, 5, 12, 18 ಹಾಗೂ 28 ತೆರಿಗೆ ದರಗಳಿವೆ. ಮುಂದಿನ ದಿನಗಳಲ್ಲಿ ಎರಡೇ ಹಂತದ ತೆರಿಗೆ ಸ್ಲ್ಯಾಬ್ ನಿಗದಿ ಮಾಡಲಾಗುವುದು
 • ಭಾರತದ ಅಭಿವೃದ್ಧಿ ಕುರಿತು ವಿಶ್ವಬ್ಯಾಂಕ್ ದ್ವೈವಾರ್ಷಿಕ ವರದಿ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಜಿಎಸ್​ಟಿ ಜಾರಿಯಾಗಿರುವ ಕಾರಣ ಆರಂಭಿಕ ದಿನಗಳಲ್ಲಿ ಸಾಕಷ್ಟು ಅಡೆತಡೆ ಉಂಟಾಗಿದೆ. ಸ್ಥಳೀಯ ಸರ್ಕಾರಗಳು ವಿಧಿಸುವ ತೆರಿಗೆ ಕುರಿತು ಸ್ಪಷ್ಟತೆಯಿಲ್ಲ. ಶೇ. 28 ಅಥವಾ ಅದಕ್ಕಿಂತಲೂ ಹೆಚ್ಚಿನ ಸುಂಕ ವಿಧಿಸುವ ಅಧಿಕಾರವನ್ನು ತಮಿಳುನಾಡು ಸರ್ಕಾರಕ್ಕೆ ನೀಡಲಾಗಿದೆ.
 • ಜಿಎಸ್​ಟಿ ಜಾರಿಯಿಂದ ಉಂಟಾಗುವ ನಷ್ಟ ತುಂಬಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಮೊಟಾರು ವಾಹನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಕಂಪನಿಗಳ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಹೇಳಲಾಗಿದೆ.

ವರದಿಯಲ್ಲಿ ನೀಡಲಾದ ಸಲಹೆಗಳು

 1. ತೆರಿಗೆ ಹೊರೆ ಕಡಿಮೆ ಮಾಡುವುದು
 2. ಸ್ಲ್ಯಾಬ್​ಗಳು, ಸ್ಥಳೀಯ ತೆರಿಗೆಗಳ ಸಂಖ್ಯೆ ಇಳಿಸುವುದು
 3. ತೆರಿಗೆ ವಿನಾಯಿತಿಗಳನ್ನು ಮಿತಿಗೊಳಿಸುವುದು
 4. ಸರಳ ಕಾನೂನು ಪ್ರಕ್ರಿಯೆ ರೂಪಿಸುವುದು
 5. ತೆರಿಗೆದಾರರು, ಕಂಪನಿಗಳು, ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಆಂದೋಲನ ಕೈಗೊಳ್ಳುವುದು.

ಭಾರತದ ರಫ್ತು ಸಬ್ಸಿಡಿಯಿಂದ ಅಮೆರಿಕ ಹಿತಾಸಕ್ತಿಗೆ ಧಕ್ಕೆ

 • ಭಾರತದ ರಫ್ತು ಸಹಾಯಧನದ ನೀತಿಯಿಂದಾಗಿ ಅಮೆರಿಕದ ಕಾರ್ವಿುಕರ ಹಿತಾಸಕ್ತಿಗೆ ಧಕ್ಕೆಯುಂಟಾಗುತ್ತಿದೆ. ಇದರಿಂದಾಗಿ ವಾಣಿಜ್ಯ ವಹಿವಾಟಿನಲ್ಲಿ ಅಸಮತೋಲನ ಉಂಟಾಗುತ್ತಿದೆ ಎಂದು ವಿಶ್ವ ವಾಣಿಜ್ಯ ಸಂಸ್ಥೆಗೆ (ಡಬ್ಲ್ಯೂಟಿಒ) ಅಮೆರಿಕ ವಾಣಿಜ್ಯ ಪ್ರತಿನಿಧಿ (ಯುಎಸ್​ಟಿಆರ್) ರಾಬರ್ಟ್ ಇ ಲೈಟಜರ್ ದೂರಿದ್ದಾರೆ.
 • ಭಾರತ ಸರ್ಕಾರದ ಸರಕು ರಫ್ತು ಯೋಜನೆ, ರಫ್ತು ಆಧಾರಿತ ಕೈಗಾರಿಕೆಗಳ ಯೋಜನೆ ಮತ್ತು ಎಲೆಕ್ಟ್ರಾನಿಕ್ಸ್, ಹಾರ್ಡ್​ವೇರ್ ತಂತ್ರಜ್ಞಾನ ಪಾರ್ಕ್​ಗಳ ಯೋಜನೆಗಳು ಮತ್ತು ರಫ್ತುದಾರರಿಗಾಗಿ ಸುಂಕರಹಿತ ಆಮದು ನೀತಿಗಳು ಅಮೆರಿಕದ ಕಾರ್ವಿುಕರ ಹಿತಾ ಸಕ್ತಿಗೆ ಮಾರಕವಾಗಿ ಪರಿಣಮಿಸಿದೆ.
 • ಈ ಯೋಜನೆಗಳಿಂದಾಗಿ ಭಾರತದ ವಾಣಿಜ್ಯೋದ್ಯಮಿಗಳು ಕಡಿಮೆ ಬೆಲೆಗೆ ಸರಕು ಮಾರಾಟ ಮಾಡುತ್ತಿರುವುದರಿಂದ, ಭಾರತದ ವಿವಿಧ ಕಂಪನಿಗಳಿಗೆ ವಾರ್ಷಿಕವಾಗಿ ಅಂದಾಜು 45,496 ಕೋಟಿ ರೂ. ಲಾಭವಾ ಗುತ್ತಿದೆ. ಆದರೆ, ಅವುಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಾಗದ ರೀತಿ ಅಮೆರಿಕದಲ್ಲಿ ವಾಣಿಜ್ಯಾತ್ಮಕ ಅಸಮತೋಲನ ಉಂಟಾಗಿದೆ ಎಂದು ಅವರು ವಿವರಿ ಸಿದ್ದಾರೆ.
 • ಈ ವಾಣಿಜ್ಯಾತ್ಮಕ ಅಸಮತೋಲನ ನಿವಾರಣೆಗಾಗಿ ಯುಎಸ್​ಟಿಆರ್ ವಾಣಿಜ್ಯ ಪಾಲುದಾರರನ್ನು ಹೊಣೆಯಾಗಿಸಿ, ಸಾದೃಶ ತೆರಿಗೆ ವಿಧಿಸುವುದು ಹಾಗೂ ಡಬ್ಲ್ಯೂಟಿಒ ವೇದಿಕೆ ಸೇರಿ ಅಮೆರಿಕದ ವಾಣಿಜ್ಯ ಒಪ್ಪಂದದನ್ವಯ ಅಮೆರಿಕದ ಹಕ್ಕುಗಳನ್ನು ಪ್ರತಿಪಾದಿಸಲು ಮುಂದಾಗಲಿದೆ ಎಂದು ತಿಳಿಸಿದರು.

ದೂರಿಗೆ ಕಾರಣವೇನು?

 • ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳಿಗೆ ರಫ್ತು ಸಹಾಯಧನ ನೀಡಲು ಅಮೆರಿಕ ನಿರ್ದಿಷ್ಟ ಆರ್ಥಿಕ ಸಾಮರ್ಥ್ಯದ ಮಾನದಂಡವನ್ನು ಹೊಂದಿದೆ. ಈ ಮಾನದಂಡದೊಳಗೆ ಇರುವವರೆಗೂ ಅಂತಹ ರಾಷ್ಟ್ರಗಳಿಗೆ ರಫ್ತು ಸಹಾಯಧನ ನೀಡಲು ಅವಕಾಶವಿದೆ. ಇದನ್ನು ಮೀರಿದರೆ, ರಫ್ತು ಸಹಾಯಧನ ಸ್ಥಗಿತಗೊಳಿಸುವುದು ಅನಿವಾರ್ಯವಾಗುತ್ತದೆ. ಭಾರತ, 2015ರಲ್ಲೇ ಈ ಮಾನದಂಡವನ್ನು ಮೀರಿ ಬೆಳೆದಿದೆ. ರಫ್ತು ಸಹಾಯಧನ ಸ್ಥಗಿತಗೊಳಿಸುವ ಬದಲು, ಅದನ್ನು ಮುಂದುವರಿಸಿದೆ.
 • ಭಾರತ 2015ರಲ್ಲಿ ಸರಕು ರಫ್ತು ಸಹಾಯಧನ ಯೋಜನೆಯ ಲಾಭಕ್ಕೆ ಒಳಪಡುವ ಸರಕುಗಳ ಸಂಖ್ಯೆಯನ್ನು 8 ಸಾವಿರಕ್ಕೆ ಹೆಚ್ಚಿಸಿತು. ವಿಶೇಷ ವಿತ್ತ ವಲಯಗಳು 2016ರಲ್ಲಿ ಭಾರತದ ಒಟ್ಟು ರಫ್ತು ಪ್ರಮಾಣದ ಶೇ.30 ಭಾಗದ ರಫ್ತನ್ನು (ಅಂದಾಜು 5,32,877 ಕೋಟಿ ರೂ.) ಅಮೆರಿಕಕ್ಕೆ ಮಾಡಿವೆ.

ಭಾರತೀಯರಿಗಿಂತ ಪಾಕಿಸ್ತಾನಿಯರು ಸಂತೋಷವಾಗಿದ್ದಾರೆ: ವಿಶ್ವಸಂಸ್ಥೆ ವರದಿ

 • ಜಗತ್ತಿನ ಅತ್ಯಂತ ಸಂತೋಷವಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕಿಂತಲ್ಲೂ ಪಾಕಿಸ್ತಾನ ಮುಂದಿದೆ ಎಂದು ವಿಶ್ವಸಂಸ್ಥೆಯ ಸಂತುಷ್ಟ ವರದಿ ತಿಳಿಸಿದೆ. ಭಾರತೀಯರಿಗಿಂತ ಪಾಕಿಸ್ತಾನಿಯರು ತುಂಬಾ ಖುಷಿಯಾಗಿರುತ್ತಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
 • 2017ರಲ್ಲಿ ಭಾರತ ನಾಲ್ಕು ಸ್ಥಾನಗಳಲ್ಲಿ ಕುಸಿದ್ದರೆ 2018ರಲ್ಲಿ 11 ಸ್ಥಾನಗಳಲ್ಲಿ ಕುಸಿತ ಕಂಡಿದೆ. ವಾರ್ಷಿಕ ವರದಿಯಲ್ಲಿ ಒಟ್ಟು 156 ದೇಶಗಳಲ್ಲಿ ಭಾರತದ ರ್‍ಯಾಂಕಿಂಗ್ 133 ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.
 • 2017ರ ರ್‍ಯಾಂಕಿಂಗ್‌ನಲ್ಲೂ ಭಾರತಕ್ಕಿಂತಲೂ ಖುಷಿಯಾಗಿರುವ ದೇಶಗಳಪಟ್ಟಿಯಲ್ಲಿ ಉಗ್ರ ಹಣೆಪಟ್ಟಿ ಹೊತ್ತಿರುವ ಪಾಕಿಸ್ತಾನ ಮುಂದಿತ್ತು. 2018ರಲ್ಲಿ ಪಾಕಿಸ್ತಾನದ ಶ್ರೇಯಾಂಕ ಇನ್ನಷ್ಟು ಹೆಚ್ಚಿರುವುದು ಗಮನಾರ್ಹ.
 • ಕೇವಲ ಪಾಕಿಸ್ತಾನವಷ್ಟೇ ಅಲ್ಲ ಭಾರತದ ನೆರೆ ರಾಷ್ಟ್ರಗಳ ಸಾಮಾಜಿಕ ಮತ್ತು ಆರ್ಥಿಕವಾಗಿ ಚೆನ್ನಾಗಿಲ್ಲದಿದ್ದರೂ ತುಂಬಾ ಸಂತೋಷವಾಗಿರುವುದು ವಿಶೇಷ. ಬಾಂಗ್ಲಾದೇಶ, ಭೂತಾನ್, ನೇಪಾಳ ಮತ್ತು ಶ್ರೀಲಂಕಾ ಎಲ್ಲವೂ ಭಾರತಕ್ಕಿಂತ ಸಂತೋಷವಾಗಿವೆ. ಕಮುನಿಸ್ಟ್ ಮುಷ್ಟಿಯಲ್ಲಿರುವ ಚೀನಾ ಸಹ ಭಾರತಕ್ಕಿಂತ ಸಂತೋಷವಾಗಿದೆ ಎಂದಿದೆ ವರದಿ.
 • ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಅತ್ಯಂತ ಸಂತೋಷವಾಗಿರುವ 156 ದೇಶಗಳ ಪಟ್ಟಿಯಲ್ಲಿ ಫಿನ್‌ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಅಲ್ಲಿನ ಜನರ ಆಯಸ್ಸು, ಸಾಮಾಜಿಕ ಬೆಂಬಲ ಮತ್ತು ಭ್ರಷ್ಟಾಚಾರದಂತಹ ಅಂಶಗಳ ಆಧಾರವಾಗಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಭೂಭರ್ತಿಗೆ ಮಲೇಷ್ಯಾ ಮಾದರಿ

 • ತ್ಯಾಜ್ಯ ಸಮಸ್ಯೆ ನಿವಾರಣೆಗೆ ಸಾಕಷ್ಟು ಕಸರತ್ತು ಪಡುತ್ತಿರುವ ಬಿಬಿಎಂಪಿ, ಈಗಾಗಲೇ ಹಲವು ಪ್ರಯೋಗಗಳನ್ನು ಮಾಡಿದೆ. ಅದರಂತೆ, ಇದೀಗ ವಿದೇಶಗಳಲ್ಲಿ ಮಿಶ್ರತ್ಯಾಜ್ಯ ವಿಲೇವಾರಿ ಘಟಕಗಳ ಕಾರ್ಯದ ಬಗ್ಗೆ ಅರಿಯಲು ಮುಂದಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಮಲೇಷ್ಯಾ ಸುತ್ತಿ ಬಂದಿದ್ದಾರೆ.
 • ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಿಸುವ ಸಲುವಾಗಿ 7 ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಅದರಲ್ಲೀಗ 2-3 ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಕಲ್ಲು ಕ್ವಾರಿಗಳಲ್ಲಿ ಮಿಶ್ರತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಆದರೆ, ಆ ಕಲ್ಲು ಕ್ವಾರಿಗಳಲ್ಲಿ ತ್ಯಾಜ್ಯ ವಿಲೇವಾರಿಯಿಂದಾಗಿ ಸುತ್ತಲಿನ ಗ್ರಾಮಗಳಿಗೆ ದುರ್ವಾಸನೆ ಸೂಸುತ್ತಿದ್ದು, ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
 • ಹೀಗಾಗಿ ವಿದೇಶಗಳಲ್ಲಿನ ಲ್ಯಾಂಡ್​ಫಿಲ್​ಗಳ ನಿರ್ವಹಣೆ ಅಧ್ಯಯನ ಸಂಬಂಧಿಸಿದಂತೆ ಕಳೆದ ಕೆಲ ದಿನಗಳ ಹಿಂದೆ ಪಾಲಿಕೆ ಅಧಿಕಾರಿಗಳು ಮಲೇಷ್ಯಾಕ್ಕೆ ತೆರಳಿ ಅಲ್ಲಿನ ವ್ಯವಸ್ಥೆ ಅಧ್ಯಯನ ನಡೆಸಿದ್ದಾರೆ.
 • ಉತ್ತಮ ವ್ಯವಸ್ಥೆಗಳ ಅಧ್ಯಯನ: ಬಿಬಿಎಂಪಿ ಹಿರಿಯ ಅಧಿಕಾರಿಗಳು ನಿರ್ಧರಿಸಿದಂತೆ ವಿಶ್ವದ ಪ್ರಮುಖ ದೇಶಗಳಲ್ಲಿನ ತ್ಯಾಜ್ಯ ನಿರ್ವಹಣೆ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ಅದರಲ್ಲೂ ಪ್ರಮುಖವಾಗಿ ಮಿಶ್ರತ್ಯಾಜ್ಯ ವಿಲೇವಾರಿ ಘಟಕಗಳಲ್ಲಿನ ವ್ಯವಸ್ಥೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲಿದ್ದಾರೆ. ಒಂದು ವೇಳೆ ಬೆಂಗಳೂರಿಗೆ ಹೊಂದಿಕೆಯಾದರೆ ಅಂತಹ ವ್ಯವಸ್ಥೆಯನ್ನು ಇಲ್ಲಿಯೂ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.
 • ಅಲ್ಲಿನ ವ್ಯವಸ್ಥೆ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಲಾಗಿದ್ದು, ಪ್ರಮುಖವಾಗಿ ತ್ಯಾಜ್ಯದಿಂದ ಉತ್ಪತ್ತಿಯಾಗುವ ಮಿಥೇನ್, ಲಿಚೆಟ್ ಬಳಕೆ, ಮಿಶ್ರತ್ಯಾಜ್ಯದಿಂದ ಹೊರಹೊಮ್ಮುವ ದುರ್ವಾಸನೆ ತಡೆಗೆ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದ್ದಾರೆ.

***~~~ದಿನಕೊಂದು ಯೋಜನೆಯ ವಿವರಣೆ~~~***

ಪ್ರಧಾನ್ ಮಂತ್ರಿ ಫಾಸಲ್ ಬಿಮಾ ಯೋಜನೆ

 • ಹೊಸ ಬೆಳೆ ವಿಮೆ ಯೋಜನೆ ಒಂದು ರಾಷ್ಟ್ರಕ್ಕೆ ಒಂದು ಯೋಜನೆ ವಿಷಯವಾಗಿದೆ. ಎಲ್ಲಾ ಹಿಂದಿನ ಯೋಜನೆಗಳ ಅತ್ಯುತ್ತಮ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ ಮತ್ತು ಅದೇ ಸಮಯದಲ್ಲಿ, ಹಿಂದಿನ ಎಲ್ಲಾ ನ್ಯೂನತೆಗಳು / ದೌರ್ಬಲ್ಯಗಳನ್ನು ತೆಗೆದುಹಾಕಲಾಗಿದೆ.
 • PMFBY ಅಸ್ತಿತ್ವದಲ್ಲಿರುವ ಎರಡು ಯೋಜನೆಗಳು ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಮತ್ತು ಮಾರ್ಪಡಿಸಿದ NAIS ಅನ್ನು ಬದಲಿಸುತ್ತದೆ.

ಉದ್ದೇಶಗಳು

 • ನೈಸರ್ಗಿಕ ವಿಕೋಪಗಳು, ಕ್ರಿಮಿಕೀಟಗಳು ಮತ್ತು ರೋಗಗಳ ಪರಿಣಾಮವಾಗಿ ಯಾವುದೇ ಸೂಚಿಸಲಾದ ಬೆಳೆ ವಿಫಲವಾದಾಗ ರೈತರಿಗೆ ವಿಮಾ ರಕ್ಷಣೆಯನ್ನು ಮತ್ತು ಹಣಕಾಸಿನ ಬೆಂಬಲವನ್ನು ಒದಗಿಸಲು.
 • ಕೃಷಿಯಲ್ಲಿ ತಮ್ಮ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ರೈತರ ಆದಾಯವನ್ನು ಸ್ಥಿರಗೊಳಿಸಲು.
 • ನವೀನ ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಉತ್ತೇಜಿಸಲು.
 • ಕೃಷಿ ಕ್ಷೇತ್ರಕ್ಕೆ ಕ್ರೆಡಿಟ್ ಹರಿವು ಖಚಿತಪಡಿಸಿಕೊಳ್ಳಲು.

ಯೋಜನೆಯ ಮುಖ್ಯಾಂಶಗಳು

 • ಎಲ್ಲಾ ಖರಿಫ್ ಬೆಳೆಗಳಿಗೆ ರೈತರು ಪಾವತಿಸಬೇಕಾದ ಕೇವಲ 2% ಏಕರೂಪದ ಪ್ರೀಮಿಯಂ ಮತ್ತು ಎಲ್ಲಾ ರಬೀ ಬೆಳೆಗಳಿಗೆ 1.5% ನಷ್ಟು ಇರುತ್ತದೆ. ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳ ಸಂದರ್ಭದಲ್ಲಿ, ರೈತರು ಪಾವತಿಸಬೇಕಾದ ಪ್ರೀಮಿಯಂ 5% ಮಾತ್ರ.
 • ರೈತರು ಪಾವತಿಸಬೇಕಾದ ಪ್ರೀಮಿಯಂ ದರಗಳು ತುಂಬಾ ಕಡಿಮೆ ಮತ್ತು ಸಮತೋಲನ ಪ್ರೀಮಿಯಂ ಅನ್ನು ನೈಸರ್ಗಿಕ ವಿಕೋಪಗಳ ಕಾರಣದಿಂದಾಗಿ ರೈತರಿಗೆ ಪೂರ್ಣ ವಿಮೆ ಮೊತ್ತವನ್ನು ಒದಗಿಸಲು ಸರ್ಕಾರವು ಪಾವತಿಸಬೇಕಾಗುತ್ತದೆ.
 • ಸರ್ಕಾರದ ಸಬ್ಸಿಡಿಯಲ್ಲಿ ಯಾವುದೇ ಮಿತಿ ಇಲ್ಲ. ಸಮತೋಲನ ಪ್ರೀಮಿಯಂ 90% ಆಗಿದ್ದರೂ ಸಹ, ಅದು ಸರ್ಕಾರದಿಂದ ಹೊಂದುತ್ತದೆ.
 • ಮುಂಚಿನ, ಪ್ರೀಮಿಯಂ ದರವನ್ನು ಕಾಪಾಡುವ ಒಂದು ಅವಕಾಶವಿತ್ತು, ಇದು ರೈತರಿಗೆ ಪಾವತಿಸಲ್ಪಟ್ಟಿರುವ ಕಡಿಮೆ ಹಕ್ಕುಗಳಿಗೆ ಕಾರಣವಾಯಿತು. ಪ್ರೀಮಿಯಂ ಸಬ್ಸಿಡಿಯಲ್ಲಿ ಸರಕಾರವನ್ನು ಮಿತಿಗೊಳಿಸಲು ಈ ಕ್ಯಾಪಿಂಗ್ ಮಾಡಲಾಗುತ್ತಿತ್ತು.
 • ಈ ಕ್ಯಾಪಿಂಗ್ ಅನ್ನು ಈಗ ತೆಗೆದುಹಾಕಲಾಗಿದೆ ಮತ್ತು ಯಾವುದೇ ಕಡಿತವಿಲ್ಲದೆಯೇ ರೈತರಿಗೆ ಸಂಪೂರ್ಣ ಮೊತ್ತದ ವಿಮೆ ಮಾಡಲಾಗುವುದು.
 • ತಂತ್ರಜ್ಞಾನದ ಬಳಕೆಯನ್ನು ಮಹತ್ತರವಾಗಿ ಪ್ರೋತ್ಸಾಹಿಸಲಾಗುತ್ತದೆ. ರೈತರಿಗೆ ಕ್ಲೈಮ್ ಪಾವತಿಸುವ ವಿಳಂಬವನ್ನು ಕಡಿಮೆ ಮಾಡಲು ಬೆಳೆ ಕತ್ತರಿಸುವಿಕೆಯ ದತ್ತಾಂಶವನ್ನು ಸೆರೆಹಿಡಿಯಲು ಮತ್ತು ಅಪ್ಲೋಡ್ ಮಾಡಲು ಸ್ಮಾರ್ಟ್ ಫೋನ್ಗಳನ್ನು ಬಳಸಲಾಗುತ್ತದೆ. ಬೆಳೆ ಕಡಿತ ಪ್ರಯೋಗಗಳನ್ನು ಕಡಿಮೆ ಮಾಡಲು ದೂರಸ್ಥ ಸಂವೇದನೆಯನ್ನು ಬಳಸಲಾಗುತ್ತದೆ.
 • PMFBY ಎನ್ನುವುದು NAIS / MNAIS ನ ಬದಲಿ ಯೋಜನೆಯಾಗಿದೆ, ಯೋಜನೆಯ ಅನುಷ್ಠಾನದಲ್ಲಿ ಒಳಗೊಂಡಿರುವ ಎಲ್ಲಾ ಸೇವೆಗಳ ಸೇವಾ ತೆರಿಗೆ ಹೊಣೆಗಾರಿಕೆಯಿಂದ ವಿನಾಯಿತಿ ಇರುತ್ತದೆ. ವಿಮೆ ಪ್ರೀಮಿಯಂನಲ್ಲಿ ರೈತರಿಗೆ 75-80 ಶೇ. ಸಬ್ಸಿಡಿಯನ್ನು ಹೊಸ ಯೋಜನೆಯು ಖಚಿತಪಡಿಸುತ್ತದೆ ಎಂದು ಅಂದಾಜಿಸಲಾಗಿದೆ.

1.ಈ ಕೆಳಗಿನ ಯಾವ ದೇಶ/ದೇಶಗಳು ಜಿ.ಎಸ್.ಟಿ ಅಡಿಯಲ್ಲಿ ೪ ಅಥವಾ ಹೆಚ್ಚು ಸ್ಲಾಬ್ ಗಳನ್ನುಹೊಂದಿದೆ ?

A)ಪಾಕಿಸ್ತಾನ

B)ಘಾನಾ

C)ಲಕ್ಸೆಂಬರ್ಗ್ ಹಾಗೂ ಭಾರತ

D)ಮೇಲಿನ ಎಲ್ಲವು

2. ವಿಶ್ವ ಹ್ಯಾಪಿನೆಸ್ ವರದಿಯನ್ನು ಯಾವ ಸಂಸ್ಥೆ ನೀಡುತ್ತದೆ ?

A)ವಿಶ್ವ ಸಂಸ್ಥೆ

B)ವಿಶ್ವ ಬ್ಯಾಂಕ್

C)ವಿಶ್ವ ಆರ್ಥಿಕ ಸಂಸ್ಥೆ

D)ವಿಶ್ವ ಆರೋಗ್ಯ ಸಂಸ್ಥೆ

3.ಬ್ಲ್ಯಾಕ್ ಹೋಲ್ ಮತ್ತು ಬಿಂಗ್ ಬ್ಯಾಂಗ್ ಸಿದ್ಧಾಂತದ ಬಗ್ಗೆ ವಿವರಿಸಿದ್ದ ಮಹಾನ್ ವಿಜ್ಞಾನಿ ಇತ್ತೀಚೆಗೆ ನಿಧನರಾದರು?

A)ಪ್ರೊ. ಯಶ್ಪಾಲ್

B)ಪ್ರೊ. ಸ್ಟೀಫನ್ ಹಾಕಿಂಗ್

C)ಡಾ. ಆಲ್ಬರ್ಟ್ ಸ್ಟೀವ್

D)ಡಾ. ಮಾರ್ಕ್ ಮ್ಯಾಥ್ಯೂಸ್

4.ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಿಂದ ಪಾಠಗಳನ್ನು ತೆಗೆದುಕೊಳ್ಳುವಾಗ, ಆರ್ಬಿಐ ಇತ್ತೀಚೆಗೆ ಯಾವ ಬ್ಯಾಂಕ್ ಸೌಲಭ್ಯವನ್ನು ನಿಷೇಧಿಸಿತು?

A)MOD

B)COP

C)MoU

D)LOU

5.ನಗರಗಳ ನಿರ್ಮಾಪಕ ಎಂದು ಕರೆಯಿಸಿಕೊಂಡ ದೆಹಲಿಯ ಸುಲ್ತಾನ ಯಾರು ?

A)ಕುತುಬ್ ಉದ್ ದೀನ್ ಐಬಕ್

B)ಸಿಕಂದರ ಲೋಧಿ

C)ಅಲ್ಲಾವುದ್ದೀನ್ ಖಿಲ್ಜಿ

Dಫಿರೋಜ ಷಾ ತುಘಲಕ್

6.ವೇದ ಮಾರ್ಗ ಸ್ಥಾಪನಾಚಾರ್ಯ ಎಂಬ ಬಿರುದು ಯಾರು ಹೊಂದಿದ್ದರು?

A)ಹರಿಹರ

B)1ನೇ ಬುಕ್ಕರಾಯ

C)1ನೇ ದೇವರಾಯ

D)2ನೇ ಹರಿಹರ

7.ಭಾರತದ ಪಾಲಿ೯ಮೆಂಟಿನ ಕೆಳಮನೆಯಾದ ಲೋಕಸಭೆಯ ಅಧಿಕಾರಾವಧಿ—–

A)5ವಷ೯

B)6ವಷ೯

C)4ವಷ೯

D)7ವಷ೯

8.ಭಾರತದ ಸಂವಿಧಾನದಲ್ಲಿ ಚುನಾವಣಾ ಆಯೋಗದ ಬಗ್ಗೆ ಪ್ರಸ್ತಾಪಿಸಿರುವ ವಿಧಿ

A)15 ನೇ  ಭಾಗದ 324 ರಿಂದ 329 ನೇ ವಿಧಿ

B)16 ನೇ ಭಾಗದ 320 ರಿಂದ 321ನೇ ವಿಧಿ

C)17 ನೇ ಭಾಗದ 321ರಿಂದ 324 ನೇ ವಿಧಿ

D)ಯಾವುದು ಅಲ್ಲಾ

9.ಭಾರತದ ಯಾವ ಸರೋವರವು ವಿಶ್ವದ ಇರಾವಡ್ಡಿ ಡಾಲ್ಫಿನ್ಗಳ ಅತಿ ದೊಡ್ಡ ಆವಾಸಸ್ಥಾನವೆಂದು ಕಂಡುಬಂದಿದೆ?

A)ಡಾಲ್ ಸರೋವರ

B)ಚಿಲ್ಕ ಸರೋವರ

C)ವಯುಲರ್ ಲೇಕ್

D)ಪುಲಿಕಾಟ್ ಸರೋವರ

10.ಈ ಕೆಳಗಿನ ರಾಷ್ಟ್ರೀಯ ಉದ್ಯಾನವನಗಳು ಹಾಗೂ ಅವುಗಳಿರುವ ರಾಜ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗಿಲ್ಲ?

A)ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ – ಉತ್ತರಾಖಂಡ್

B)ದುದ್ವಾ ರಾಷ್ಟ್ರೀಯ ಉದ್ಯಾನವನ – ಉತ್ತರ ಪ್ರದೇಶ

C)ಹಜಾರಿಬಾಗ್ ರಾಷ್ಟ್ರೀಯ ಉದ್ಯಾನವನ – ಜಾರ್ಖಂಡ್

D)ಕಾಜಿರಂಗ ರಾಷ್ಟ್ರೀಯ ಉದ್ಯಾನವನ – ಮಧ್ಯಪ್ರದೇಶ

ಉತ್ತರಗಳು

 1. D 2.A 3.B 4.D 5.D 6.A 7.A 8.A 9.B 10.D
Related Posts
Introduction ∗ Cogeneration is the use of a heat engine or a power station to simultaneously generate both electricity and useful heat. ∗ Co-generation is defined as the combined generation of electric ...
READ MORE
Ganga Task Force deployed Ganga Gram Yojana launched As a major initiative towards fast track implementation of Namami Gange Programme the first company of Ganga Task force Battalion was deployed at ...
READ MORE
Karnataka Current Affairs – KAS/KPSC Exams – 1st Jan 2019
BBMP declares all wards as ‘Open Defecation Free’ The Bruhat Bengaluru Mahanagara Palike (BBMP) has issued a public notice declaring areas under its jurisdiction as ‘Open Defecation Free’. The notice has ...
READ MORE
National Current Affairs – UPSC/KAS Exams- 25th September 2018
Female circumcision issue goes to Constitution Bench  Why in news? The Supreme Court referred to a five-judge Constitution Bench petitions seeking a declaration that the practice of female circumcision or ‘khafz,’ prevalent ...
READ MORE
After Jallakattu, Karnataka wakes up for “Kambala”
What is Kambala? Kambala is an annual festival celebrated in the Dakshina Kannada district of Karnataka. The festival involves the traditional buffalo race, a popular and unique sport among the farming ...
READ MORE
What are the underlying causes? El Nino The El Niño is a weather phenomenon resulting in warmer than expected ocean temperatures in the central and eastern parts of the tropical belt of ...
READ MORE
Karnataka Current Affairs – KAS / KPSC Exams – 06th Aug
NAAC revises accreditation process The National Assessment and Accreditation Council, the autonomous body which accredits higher education institutions (HEIs) in India, has come out with a revised accreditation framework designed to ...
READ MORE
“16th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
2022ಕ್ಕೆ ಮಾನವ ಸಹಿತ ಬಾಹ್ಯಾಕಾಶ ಯಾನ ಸುದ್ದಿಯಲ್ಲಿ ಏಕಿದೆ? ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಎಂದಿಗೂ ಮುಂದಿರುತ್ತದೆ. 2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಳ್ಳುತ್ತದೆ. ಸಾಧ್ಯವಾದರೆ ಅದಕ್ಕಿಂತಲೂ ಮೊದಲೇ ಭಾರತ ಪುತ್ರ ಅಥವಾ ಪುತ್ರಿಯನ್ನು ಅಂತರಿಕ್ಷ ಯಾತ್ರೆಗ ಕಳುಹಿಸಲಾಗುತ್ತದೆ ಎಂದು ಮೋದಿ ...
READ MORE
National Current Affairs – UPSC/KAS Exams- 19th September 2018
UN Report: A child under 15 dies every 5 seconds around the world Why in news? According to the new mortality estimates released by UNICEF, the World Health Organization (WHO), the United ...
READ MORE
Drones and UAVs to be used to resurvey lands in State The government has decided to resurvey lands and properties in the State by employing state-of-the-art technologies, including drones and unmanned ...
READ MORE
COGENERATION PROJECT
Implementation Of Namami Gange programme
Karnataka Current Affairs – KAS/KPSC Exams – 1st
National Current Affairs – UPSC/KAS Exams- 25th September
After Jallakattu, Karnataka wakes up for “Kambala”
Chennai floods explained
Karnataka Current Affairs – KAS / KPSC Exams
“16th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
National Current Affairs – UPSC/KAS Exams- 19th September
Karnataka Current Affairs – KAS/KPSC Exams – 1st

Leave a Reply

Your email address will not be published. Required fields are marked *