“17 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಆರೋಗ್ಯ ಇಲಾಖೆಯ ವಾಟ್ಸ್‌ಆ್ಯಪ್‌ ಪ್ಲಾನ್‌

1.

ಸುದ್ಧಿಯಲ್ಲಿ ಏಕಿದೆ ?ಮಗುವಿನ ಜನನಕ್ಕೆ ನೆರವಾಗುವ ಉದ್ದೇಶದಿಂದ ಸುರಕ್ಷಿತ ಗರ್ಭದಿಂದ ಸಂತಸದ ಕೈಗಳಿಗೆ ಎಂಬ ಘೋಷ ವಾಕ್ಯದೊಂದಿಗೆ ವಿನೂತನ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ ಆಯೋಜಿಸಿದೆ

 • ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ವೈದ್ಯರು ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸಂಕಷ್ಟ ಸಂದರ್ಭದಲ್ಲಿ ಸ್ಪಂದಿಸುವ ಯೋಜನೆಯನ್ನು ಆರೋಗ್ಯ ಇಲಾಖೆ ಹಮ್ಮಿಕೊಂಡಿದೆ.
 • ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸುವುದು ಮತ್ತು ಸಂಕಷ್ಟದಲ್ಲಿ ಸ್ಪಂದಿಸುವುದು ಇದರ ವಿಶೇಷ. ಆರೋಗ್ಯ ಇಲಾಖೆಯ ಹೊಸ ಪ್ರಯತ್ನದಲ್ಲಿ ತಾಯಿ-ಮಗು ಬದುಕಿದ ಮೂರು ಪ್ರಕರಣಗಳು ವರದಿಯಾಗಿದೆ.

ಏನಿದು ವಾಟ್ಸ್‌ ಆ್ಯಪ್‌ ಗ್ರೂಪ್‌?

 • ಆರೋಗ್ಯ ಇಲಾಖೆಯು ಮಕ್ಕಳ ವಿಭಾಗ, ಸ್ತ್ರೀ ಆರೋಗ್ಯ ವಿಭಾಗದ ಸಿಬ್ಬಂದಿ, ವೈದ್ಯರು, ಅಂಗನವಾಡಿ ಕಾರ‍್ಯಕರ್ತೆಯರನ್ನು ಒಳಗೊಂಡ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ರಚಿಸಲಾಗಿದೆ. ಗರ್ಭ ಧರಿಸಿದ ದಿನದಿಂದ ಹೆರಿಗೆ ಹಾಗೂ ನಂತರದ ಕೆಲ ಕಾಲ ತಾಯಿ ಮತ್ತು ಮಗುವಿನ ಆರೋಗ್ಯದ ನಿರಂತರ ನಿಗಾ ಇರಿಸಲಾಗುತ್ತದೆ.
 • ಗರ್ಭಿಣಿಯರು ತಾಯಿ ಕಾರ್ಡ್‌, ನಿರಂತರವಾಗಿ ಆರೋಗ್ಯ ತಪಾಸಣೆಗಳ ಕುರಿತು ಆರೋಗ್ಯ ಸಿಬ್ಬಂದಿ ತಮ್ಮ ಮೇಲಾಧಿಕಾರಿಗಳಿಗೆ ವಾಟ್ಸ್‌ ಆ್ಯಪ್‌ ಮೂಲಕ ಮಾಹಿತಿ ರವಾನಿಸುತ್ತಿರುತ್ತಾರೆ. ಆರೋಗ್ಯಾಧಿಕಾರಿಗಳು ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ಮೇಲ್ವಿಚಾರಣೆ ಮಾಡಲಿದ್ದಾರೆ. ತುರ್ತು ಸಂದರ್ಭಗಳಲ್ಲಿ ಸ್ವತಃ ಹಾಜರಿರುತ್ತಾರೆ. ರಕ್ತ ಸಂಗ್ರಹ, ಶಸ್ತ್ರ ಚಿಕಿತ್ಸಕರ ಲಭ್ಯತೆ ಸೇರಿದಂತೆ ಅಗತ್ಯ ಮಾಹಿತಿ ವಾಟ್ಸ್‌ ಆ್ಯಪ್‌ ಗ್ರೂಪ್‌ನಿಂದ ದೊರೆಯಲಿದೆ.

ಯಾರ್ಯಾರಿದ್ದಾರೆ ?

 • ಗ್ರೂಪ್‌ನಲ್ಲಿ ಆರ್‌ಸಿಎಚ್‌ (ಸಂತಾನೋತ್ಪತ್ತಿ ಮತ್ತು ಮಗು ಆರೋಗ್ಯ ಸಂರಕ್ಷಣಾಧಿಕಾರಿ), ಶಸ್ತ್ರ ಚಿಕಿತ್ಸಕರು, ಹೆರಿಗೆ ತಜ್ಞರು, ವಿವಿಧ ತಜ್ಞ ವೈದ್ಯರು, ಆಶಾ ಕಾರ್ಯಕರ್ತರು, ಆಂಬ್ಯುಲೆನ್ಸ್‌ ಚಾಲಕರು ಸೇರಿದಂತೆ ಇತರೆ ಆರೋಗ್ಯ ಸಿಬ್ಬಂದಿ, ವಾಣಿ ವಿಲಾಸ್‌ ಸೇರಿದಂತೆ ಹತ್ತಿರದ ಸುತ್ತಮುತ್ತಲಿನ ವೈದ್ಯಕೀಯ ಸಂಸ್ಥೆಗಳ ಸಂಪರ್ಕವನ್ನು ಒಳಗೊಂಡಿದೆ.

ಎಚ್‌ಐವಿ ಸೋಂಕಿತರಿಗೆ ಚಿಕಿತ್ಸೆ: ರಾಜ್ಯಕ್ಕೆ ಪ್ರಶಸ್ತಿ

2.

ಸುದ್ಧಿಯಲ್ಲಿ ಏಕಿದೆ ?ಎಚ್‌ಐವಿ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ಹಾಗೂ ಆರೈಕೆ ವಿಚಾರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಕರ್ನಾಟಕಕ್ಕೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿದೆ.

 • ಒಡಿಶಾದ ಭುವನೇಶ್ವರದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಸುರೇಶ್‌ ಶಾಸ್ತ್ರಿಯವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
 • ಆವಿಷ್ಕಾರ ಹಾಗೂ ರಾಜ್ಯಗಳು ಕೈಗೊಂಡ ಉಪಕ್ರಮ ವಿಭಾಗದಲ್ಲಿ ಕರ್ನಾಟಕಕ್ಕೆ ಈ ಪ್ರಶಸ್ತಿ ದಕ್ಕಿದೆ.
 • ಕೆಲ ವರ್ಷಗಳಿಂದ ರಾಜ್ಯ ಸರಕಾರ ಎಚ್‌ಐವಿ ಪೀಡತರಿಗೆ ಎಆರ್‌ಟಿ ಕೇಂದ್ರ ಸ್ಥಾಪಿಸಿ ಚಿಕಿತ್ಸೆಯನ್ನು ಒದಗಿಸಿದೆ.
 • ಈ ಕೇಂದ್ರಗಳಲ್ಲಿ ನುರಿತ ವೈದ್ಯರು ಹಾಗೂ ವೈದ್ಯ ಸಿಬ್ಬಂದಿ ಸೋಂಕಿತರಿಗೆ ಬೇಕಿರುವ ಎಲ್ಲಾ ಚಿಕಿತ್ಸೆ ನೀಡುತ್ತಿದೆ.
 • ಸದ್ಯ ರಾಜ್ಯ ಏಡ್ಸ್‌ ನಿಯಂತ್ರಣ ಸೊಸೈಟಿ(ಕೆಎಸ್‌ಎಸಿಎಸ್‌)ನಲ್ಲಿ 3 ಲಕ್ಷ ಸೋಂಕಿತರು ಹೆಸರು ನೋಂದಾಯಿಸಿಕೊಂಡಿದ್ದು, 1.7 ಲಕ್ಷ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾ.ಶಾಸ್ತ್ರಿ ತಿಳಿಸಿದ್ದಾರೆ.

ವಾರ್ಷಿಕ ಶೈಕ್ಷಣಿಕ ವರದಿ -2018 (ಎಎಸ್ಇಆರ್)

3.

ಸುದ್ಧಿಯಲ್ಲಿ ಏಕಿದೆ ?ಕಳೆದ ಕೆಲವು ವರ್ಷಗಳಿಂದ ಕಲಿಕೆಯಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ ಎಂದು ಪ್ರಥಮ್ ಎಂಬ ಸ್ವಯಂ ಸೇವಾ ಸಂಸ್ಥೆಯೊಂದು ಬಿಡುಗಡೆ ಮಾಡಿರುವ ವಾರ್ಷಿಕ ಶೈಕ್ಷಣಿಕ ವರದಿ -2018 (ಎಎಸ್ಇಆರ್) ತಿಳಿಸುತ್ತದೆ.

ವರದಿಯಲ್ಲಿ ಏನಿದೆ ?

 • 8ನೇ ತರಗತಿಯಲ್ಲಿರುವ 56% ವಿದ್ಯಾರ್ಥಿಗಳಿಗೆ 3 ಅಂಕಿಯ ಸಂಖ್ಯೆಯನ್ನು ಏಕ-ಅಂಕಿಯಿಂದ ವಿಂಗಡಿಸಲು ಕೂಡ ಬರುವುದಿಲ್ಲ.
 • 5ನೇ ವರ್ಗದ 72% ವಿದ್ಯಾರ್ಥಿಗಳಿಗೆ ಭಾಗಾಕಾರದ ಜ್ಞಾನವೇ ಇಲ್ಲ. ಮೂರನೇ ತರಗತಿಯಲ್ಲಿ ಓದುತ್ತಿರುವ 70% ವಿದ್ಯಾರ್ಥಿಗಳಿಗೆ ವ್ಯವಕಲನದ ಜ್ಞಾನವಿಲ್ಲ.
 • 2008 ರಲ್ಲಿ, 5ನೇ ತರಗತಿಯಲ್ಲಿ ಓದುತ್ತಿದ್ದ 37% ವಿದ್ಯಾರ್ಥಿಗಳು ಬೇಸಿಕ್ ಗಣಿತ ಮಾಡುವ ಸಾಮರ್ಥ್ಯ ಹೊಂದಿದ್ದರು. ಈಗ, ಆ ಸಂಖ್ಯೆ 28% ಗಿಂತ ಕಡಿಮೆಯಿದೆ. ಸ್ವಲ್ಪ ಸಮಾಧಾನದ ಸಂಗತಿ ಎಂದರೆ ಕಳೆದ ಕೆಲ ವರ್ಷಗಳಿಂದ ಈ ಪರಿಸ್ಥಿತಿ ಸುಧಾರಿಸುತ್ತಿದ್ದು 2016 ರಲ್ಲಿ ಈ ಸಂಖ್ಯೆ 26% ಇದೆ.
 • ರಾಷ್ಟ್ರ ಮಟ್ಟದಲ್ಲಿ ಹೇಳುವುದಾರೆ ಓದುವ ಮೂಲಭೂತ ಕೌಶಲ್ಯವಿಲ್ಲದೆ ನಾಲ್ಕು ಮಕ್ಕಳಲ್ಲಿ ಒಬ್ಬರು 8ನೇ ತರಗತಿಯಲ್ಲಿ ಶಾಲೆ ಬಿಡುತ್ತಿದ್ದಾರೆ.
 • 2008 ರಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ 8% ವಿದ್ಯಾರ್ಥಿಗಳು ಕ್ಲಾಸ್ II-ಮಟ್ಟದ ಪಠ್ಯಗಳನ್ನು ಓದುವ ಸಾಮರ್ಥ್ಯ ಹೊಂದಿದ್ದರೆ, 2018 ರಲ್ಲಿ ಆ ಸಂಖ್ಯೆ 72.8% ಕ್ಕೆ ಇಳಿದಿದೆ.
 • ಮೂಲ ಅಂಕಗಣಿತ ಜ್ಞಾನದಲ್ಲಿ ಹುಡುಗರಿಗಿಂತ ಹುಡುಗಿಯರು ಹಿಂದಿದ್ದಾರೆ.
 • 50% ಹುಡುಗರು ಭಾಗಾಕಾರವನ್ನು ಮಾಡುವ ಸಾಮರ್ಥ್ಯ ಹೊಂದಿದ್ದರೆ, ಹುಡುಗಿಯರಲ್ಲಿ ಆ ಸಂಖ್ಯೆ 44%. ಆದರೆ ಹಿಮಾಚಲ, ಪಂಜಾಬ್, ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹುಡುಗಿಯರು ಈ ವಿಷಯದಲ್ಲಿ ಉತ್ತಮ ಸಾಮರ್ಥ್ಯ ಹೊಂದಿದ್ದಾರೆ.
 • 28 ರಾಜ್ಯಗಳ 596 ಗ್ರಾಮೀಣ ಜಿಲ್ಲೆಗಳಿಂದ ಈ ಡೇಟಾವನ್ನು ಸಂಗ್ರಹಿಸಲಾಗಿದ್ದು , 3.5 ಲಕ್ಷ ಮನೆಗಳ ಮತ್ತು 3 ರಿಂದ 16 ವರ್ಷ ವಯಸ್ಸಿನ 5 ಲಕ್ಷ ಮಕ್ಕಳನ್ನು ಈ ಸಮೀಕ್ಷೆ ಒಳಗೊಂಡಿತ್ತು.

ಕೇಂದ್ರದ ಮೆಗಾ ಪ್ರಾಜೆಕ್ಟ್ಗೆ ಇನ್ಫಿ ಸಾರಥ್ಯ

4.

ಸುದ್ಧಿಯಲ್ಲಿ ಏಕಿದೆ ?ಆದಾಯ ತೆರಿಗೆ ಮರು ಪಾವತಿ(ಐಟಿಆರ್) ಪ್ರಕ್ರಿಯೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದ್ದು, ಐಟಿ ದಿಗ್ಗಜ ಇನ್ಪೋಸಿಸ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ.

ಏನಿದು ಯೋಜನೆ?:

 • ಕ್ಷಿಪ್ರ ಗತಿಯ ಐಟಿ ರಿಟರ್ನ್ಸ್‌ ಸಲ್ಲಿಕೆ ವ್ಯವಸ್ಥೆಯನ್ನು ರೂಪಿಸಲು ಕೇಂದ್ರ ಸರಕಾರ 4,241 ಕೋಟಿ ರೂ. ಯೋಜನೆಯನ್ನು ರೂಪಿಸಿದ್ದು, ಇದರ ಹೊಣೆಯನ್ನು ಇನ್ಫೋಸಿಸ್‌ಗೆ ವಹಿಸಲಾಗಿದೆ.
 • ಸಮಗ್ರ ಇ-ಫೈಲಿಂಗ್‌ ಮತ್ತು ಕೇಂದ್ರೀಕೃತ ಸಂಸ್ಕರಣಾ ಕೇಂದ್ರ 0′ ಎಂಬ ಯೋಜನೆಯು 18 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಮೂರು ತಿಂಗಳ ಪರೀಕ್ಷಾ ಅವಧಿಯ ಬಳಿಕ ಜಾರಿಗೆ ಬರಲಿದೆ.
 • ಕನಿಷ್ಠ ಬಿಡ್‌ ಸಲ್ಲಿಸಿದ ಇನ್ಫೋಸಿಸ್‌ನ್ನು ಈ ಪ್ರಾಜೆಕ್ಟ್ಗೆ ಆಯ್ಕೆ ಮಾಡಲಾಗಿದೆ.
 • ಈಗಿರುವ ವ್ಯವಸ್ಥೆಯೂ ಉತ್ತಮವಾಗಿದೆ. ಆದರೆ, ಹೊಸ ಪ್ರಾಜೆಕ್ಟ್ ಇನ್ನಷ್ಟು ತೆರಿಗೆದಾರರ ಸ್ನೇಹಿಯಾಗಿದ್ದು, ಕೇವಲ ಒಂದು ದಿನದಲ್ಲಿ ಐಟಿ ರಿಟರ್ನ್ಸ್‌ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲಿದೆ

ಪ್ರಯೋಜನಗಳು

 • ಹೊಸ ಪ್ರಾಜೆಕ್ಟ್ನಿಂದ ವೇಗದ ರಿಟರ್ನ್ಸ್‌, ರಿಫಂಡ್‌ ಜತೆಗೆ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಕಾಯಲು ಸುಲಭವಾಗಲಿದೆ.
 • ಕೇಂದ್ರ ಸರಕಾರ ರೂಪಿಸಿರುವ ಈ ಯೋಜನೆ ಜಾರಿಗೆ ಬಂದರೆ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಪ್ರಕ್ರಿಯೆಗೆ ಕೇವಲ 24 ಗಂಟೆಗಳು ಸಾಕು ಮತ್ತು ರೀಫಂಡ್‌ ಕೂಡಾ ತ್ವರಿತ ಗತಿಯಲ್ಲಿ ಸಿಗಲಿದೆ. ಪ್ರಸಕ್ತ ರಿಟರ್ನ್ಸ್‌ ಪ್ರಕ್ರಿಯೆಗೆ ಸರಾಸರಿ 63 ದಿನಗಳು ಬೇಕು.

ಕೃತಕ ಬುದ್ಧಿಮತ್ತೆ ಲ್ಯಾಬ್

5.

ಸುದ್ಧಿಯಲ್ಲಿ ಏಕಿದೆ ?ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ(ಎಐ) ಮುಂಚೂಣಿ ಸ್ಥಾನವನ್ನು ಆಕ್ರಮಿಸುತ್ತಿರುವ ಸೂಚನೆಗಳ ನಡುವೆಯೇ ದೇಶದ 10 ವಿವಿಗಳಲ್ಲಿ ಸದ್ಯವೇ ಎಐ ಲ್ಯಾಬ್‌ಗಳು ಸ್ಥಾಪನೆಯಾಗಲಿವೆ.

 • ತಂತ್ರಜ್ಞಾನ ದಿಗ್ಗಜ ಮೈಕ್ರೊಸಾಫ್ಟ್‌ ಇಂಡಿಯಾ 10 ವಿವಿಗಳಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಪ್ರಯೋಗಾಲಯ ಸ್ಥಾಪಿಸಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕಂಪನಿ ಉದ್ದೇಶಿಸಿದೆ.
 • ಮುಂದಿನ 3 ವರ್ಷಗಳಲ್ಲಿ 10,000 ಡೆವಲಪರ್‌ಗಳ ತಂತ್ರಜ್ಞಾನ ಕೌಶಲ್ಯ ವೃದ್ಧಿಗೂ ನಿರ್ಧರಿಸಿದೆ.
 • ಭಾರತದಲ್ಲಿ ಸರಕಾರಿ ಹಾಗೂ ಖಾಸಗಿ ವಲಯದ 700ಕ್ಕೂ ಹೆಚ್ಚು ಸಂಸ್ಥೆಗಳು ತನ್ನ ಎಐ ತಂತ್ರಜ್ಞಾನ ಬಳಸುತ್ತಿವೆ. ಇವುಗಳಲ್ಲಿ ಶೇ.60ರಷ್ಟು ಬೃಹತ್‌ ಉದ್ದಿಮೆಗಳು ಎಂದು ಮೈಕ್ರೋಸಾಫ್ಟ್‌ ಹೇಳಿದೆ.

ಲ್ಯಾಬ್ನಿಂದಾಗುವ  ಪ್ರಯೋಜನಗಳು

 • ಲ್ಯಾಬ್‌ ಸ್ಥಾಪನೆಯಿಂದ ವಿದ್ಯಾರ್ಥಿಗಳಿಗೆ ಕ್ಲೌಡ್‌ ಕಂಪ್ಯೂಟಿಂಗ್‌, ಹಬ್‌, ಡೇಟಾ ಸೈನ್ಸ್‌, ಎಐ ಮತ್ತು ಐಒಟಿಯಲ್ಲಿ ಕೌಶಲ್ಯ ವೃದ್ಧಿಗೆ ಸಹಕಾರಿಯಾಗಲಿದೆ

ಗೇಮ್‌ ಚೇಂಜರ್‌

 • ಎಐ ಈಗಾಗಲೇ ದೇಶದ ಉದ್ಯಮ ವಲಯದ ಸ್ವರೂಪವನ್ನೇ ಬದಲಿಸಿದೆ.
 • ಹೊಸ ಲ್ಯಾಬ್‌ಗಳಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಕಲಿಕೆ ಅವಕಾಶ ಲಭ್ಯ
 • ಉದ್ದಿಮೆ, ಶಿಕ್ಷಣ, ಆರೋಗ್ಯ, ಕೌಶಲ್ಯ, ಕೃಷಿ ಕ್ಷೇತ್ರಕ್ಕೆ ಭಾರಿ ಅನುಕೂಲ

ಕೇಂದ್ರೀಯ ವಿವಿ ಸ್ಥಾಪನೆ

ಸುದ್ಧಿಯಲ್ಲಿ ಏಕಿದೆ ?ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ 3,600 ಕೋಟಿ ರೂ.ವೆಚ್ಚದಲ್ಲಿ13 ಕೇಂದ್ರೀಯ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

 • ಕೇಂದ್ರೀಯ ವಿವಿ ಕಾಯಿದೆ 2009 ಅಡಿಯಲ್ಲಿ ಕರ್ನಾಟಕ, ಕೇರಳ, ತ.ನಾಡು, ಒಡಿಶಾ, ಪಂಜಾಬ್‌, ರಾಜಸ್ಥಾನ, ಜಾರ್ಖಂಡ್‌, ಹಿಮಾಚಲ ಪ್ರದೇಶದಲ್ಲಿ ತಲಾ ಒಂದೊಂದು ಮತ್ತು ಜಮ್ಮು ಕಾಶ್ಮೀರದಲ್ಲಿ ಎರಡು ವಿವಿಗಳು ತಲೆ ಎತ್ತಲಿವೆ.

ಪರಿಣಾಮ:

 • ಇದು ಉನ್ನತ ಶಿಕ್ಷಣದ ಪ್ರವೇಶವನ್ನು ಹೆಚ್ಚಿಸುತ್ತದೆ ಮತ್ತು ಇತರ ವಿಶ್ವವಿದ್ಯಾನಿಲಯಗಳಿಗೆ ಅನುಕರಿಸಲು ಅನುಕರಣೀಯ ಮಾನದಂಡಗಳನ್ನು ರೂಪಿಸುತ್ತದೆ.
 • ಇದು ಶೈಕ್ಷಣಿಕ ಸೌಲಭ್ಯಗಳಲ್ಲಿ ಪ್ರಾದೇಶಿಕ ಅಸಮತೋಲನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Related Posts
“02 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಹಿತ್ಯ ಸಮ್ಮೇಳನಕ್ಕೆ ಪೇಢಾನಗರಿ ಸಜ್ಜು ಸುದ್ಧಿಯಲ್ಲಿ ಏಕಿದೆ ?ಧಾರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ 1957ರ ನಂತರ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಆತಿಥ್ಯ ವಹಿಸಿಕೊಂಡಿರುವ ಧಾರವಾಡದಲ್ಲೀಗ ಕನ್ನಡ ಜಾತ್ರೆಯ ವಾತಾವರಣ ನಿರ್ವಣವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಈವರೆಗೆ 1918ರಲ್ಲಿ ಆರ್. ...
READ MORE
“08 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಲೆಕ್ಟ್ರಿಕ್ ಬಸ್ ಯೋಜನೆ ಸುದ್ಧಿಯಲ್ಲಿ ಏಕಿದೆ ?ಕೇಂದ್ರದ ಫಾಸ್ಟರ್ ಅಡಾಪ್ಷನ್ ಆಂಡ್ ಮಾನ್ಯುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (ಫೇಮ್ ಅನುದಾನದಲ್ಲಿ ಗುತ್ತಿಗೆ ಆಧಾರದಡಿ 150 ಎಲೆಕ್ಟ್ರಿಕ್ ಬಸ್​ಗಳನ್ನು ಬಿಎಂಟಿಸಿ ಹೊಂದಲಿದೆ. ಕಳೆದ ಸರ್ಕಾರದ ಅವಧಿಯಲ್ಲಿ ನಿಗಮ ಕರೆದಿದ್ದ ಟೆಂಡರ್​ನಲ್ಲಿ ಹೈದರಾಬಾದ್ ಮೂಲದ ಒಲೆಕ್ಟ್ರಾ ...
READ MORE
“3rd ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆಫ್‌ಲೈನ್‌ ಟೂಲ್‌ಗಳ ಅಭಿವೃದ್ಧಿ  ಸುದ್ಧಿಯಲ್ಲಿ ಏಕಿದೆ?ನಾಗರಿಕರ ಖಾಸಗಿತನದ ಉಲ್ಲಂಘನೆ, ಡೇಟಾ ಕದಿಯುವಿಕೆ ಮತ್ತು ಕಣ್ಗಾವಲು ಆತಂಕಗಳ ನಿವಾರಣೆ ಯತ್ನವಾಗಿ ಕೇಂದ್ರ ಸರಕಾರ ಇದೀಗ ಆಫ್‌ಲೈನ್ ಆಧಾರ್‌ ದೃಢೀಕರಣ ಟೂಲ್‌ಗಳ ಅಭಿವೃದ್ಧಿಗೆ ಮುಂದಾಗಿದೆ. ಕ್ಯೂಆರ್‌ ಕೋಡ್‌ಗಳು ಮತ್ತು ಬಯೋ ಮೆಟ್ರಿಕ್‌ ಅಥವಾ ಯುಐಡಿಎಐ ಸರ್ವರ್‌ಗಳ ಮಾಹಿತಿ ಹಂಚಿಕೊಳ್ಳದೆ ...
READ MORE
 ವರದಿಯಲ್ಲಿ ಏನಿದೆ? ಪರಿಶಿಷ್ಟ ಜಾತಿಯಲ್ಲೂ ತೀರಾ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸೌಲಭ್ಯ ಸಿಗುತ್ತಿಲ್ಲ; ಕೆಲವೇ ಜಾತಿಗಳು ಮಾತ್ರ ಈ ಸೌಲಭ್ಯ ಪಡೆಯುತ್ತಿವೆ ಎಂಬ ದೂರು ಕೇಳಿ ಬಂದಿದ್ದರಿಂದ 2005ರ ಸೆಪ್ಟೆಂಬರ್‌ನಲ್ಲಿ  ಸದಾಶಿವ ಆಯೋಗ ರಚಿಸಲಾಗಿತ್ತು. ಆಯೋಗವು 2012ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಪರಿಶಿಷ್ಟ ಜಾತಿಯ ವರಿಗೆ ...
READ MORE
ಕಷ್ಠಕರ ಪರಿಸ್ಥತಿಯಲ್ಲಿರುವ ಮಹಿಳೆಯರಿಗಾಗಿ ಯೋಜನೆ ಇದು ಕೇಂದ್ರ ವಲಯದ ಯೋಜನೆಯಾಗಿದ್ದು ಕಷ್ಠಕರ ಪರಿಸ್ಥಿತಿಯಲ್ಲಿರುವ ಅಂದರೆ ಪರಿತ್ಯಕ್ತೆಯರು, ವಿಧವೆಯರು , ಜೈಲಿನಿಂದ ಬಿಡುಗಡೆ ಹೊಂದಿದ ಮಹಿಳಾ ಖೈದಿಗಳು ಮತ್ತು ಕುಟುಂಬದ ಸಹಾಯವಿಲ್ಲದವರು, ಪ್ರಕೃತಿ ವಿಕೋಪಕ್ಕೆ ಸಿಕ್ಕಿ ಒಬ್ಬಂಟಿಗರಾದ ಮಹಿಳೆಯರು , ಅನೈತಿಕ ಸಾಗಣೆಗೆ ಒಳಗಾಗಿ ...
READ MORE
“31 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಡ್ಜ್​ಗಳ ಕೊರತೆ ಪಟ್ಟಿಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಸುದ್ಧಿಯಲ್ಲಿ ಏಕಿದೆ ? ನ್ಯಾಯಾಧೀಶರ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳು 2, 3ನೇ ಸ್ಥಾನದಲ್ಲಿವೆ. ಕರ್ನಾಟಕ 7ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 1,188 ಹುದ್ದೆಗಳು ...
READ MORE
“10th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸೂರ್ಯಯಾನಕ್ಕೆ ನಾಸಾ ಸಜ್ಜು ಈವರೆಗೆ ಅಸಾಧ್ಯವಾಗಿದ್ದ ಇಂತಹ ಸಾಹಸಕ್ಕೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕೈ ಹಾಕಿದೆ. ಮನುಕುಲದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಸೂರ್ಯಯಾನಕ್ಕೆ ಸಜ್ಜಾಗಿರುವ ನಾಸಾ, ಜು.31ರಂದು ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್​ನಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆಗೊಳಿಸಲಿದೆ. ಪಾರ್ಕರ್ ಸೋಲಾರ್ ...
READ MORE
“30th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಶಬರಿಮಲೆ ಪ್ರಸಾದಕ್ಕೆ ಸಿಎಫ್‌ಟಿಆರ್‌ಐ ಮಾರ್ಗಸೂಚಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನೀಡುವ ಪ್ರಸಾದವನ್ನು ಇನ್ನಷ್ಟು ರುಚಿಕರ ಮತ್ತು ಸ್ವಾದಿಷ್ಟವಾಗಿ ಭಕ್ತರಿಗೆ ದೊರಕಿಸಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದ್ದು, ಇದಕ್ಕಾಗಿ ಮೇ 16ರಂದು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ(ಸಿಎಫ್‌ಟಿಆರ್‌ಐ) ಜತೆ ಒಪ್ಪಂದ ಮಾಡಿಕೊಳ್ಳಲಿದೆ. ಅಪ್ಪಂ ...
READ MORE
24th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ ) ಸುದ್ಧಿಯಲ್ಲಿ ಏಕಿದೆ? ಬೇರೆ ಬೇರೆ ಯುನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್ (ಯುಪಿಐ) ಐಡಿಯನ್ನು ಬಳಸಿಕೊಂಡು ತಮ್ಮದೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಆಗಸ್ಟ್ 1ರಿಂದ ತಡೆ ಬೀಳಲಿದೆ. ವರ್ಗಾವಣೆಯಾದ ತಕ್ಷಣದಲ್ಲೆ ಹಣ ಪಡೆಯುವ ವ್ಯವಸ್ಥೆಯಾದ ಯುಪಿಐ ಐಡಿ ದುರ್ಬಳಕೆ ತಡೆಯಲು ...
READ MORE
” 17 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷಿ ಕ್ರಾಂತಿಗೆ ಹೊಸ ನೀತಿ ಸುದ್ಧಿಯಲ್ಲಿ ಏಕಿದೆ ?ಬರಗಾಲ, ಬೆಳೆ ಸಾಲದಂತಹ ಸರಣಿ ಸಂಕಷ್ಟಗಳಿಗೆ ಸಿಲುಕಿ ಕೃಷಿ ಮೇಲೆ ವೈರಾಗ್ಯ ಹೊಂದುತ್ತಿರುವ ರೈತರಲ್ಲಿ ಆತ್ಮವಿಶ್ವಾಸ ಬಿತ್ತಿ, ಬದುಕು ಕಟ್ಟಲು ನೆರವಾಗುವ ಉದ್ದೇಶದಿಂದ ಹೊಸ ಕೃಷಿ ನೀತಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರ ಬೆಳೆಗೆ ...
READ MORE
“02 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“08 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“3rd ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸದಾಶಿವ ಆಯೋಗ ವರದಿ
ಸ್ವಾಧಾರ
“31 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“10th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“30th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
24th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
” 17 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *