“18 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

‘ಸಾಕ್ಷಿಗಳ ರಕ್ಷಣಾ ಯೋಜನೆ’ ಜಾರಿಗೆ ಸುಪ್ರೀಂ ಆದೇಶ

ಸುದ್ಧಿಯಲ್ಲಿ ಏಕಿದೆ ?ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯ ಸುಧಾರಣೆಗೆ ಒಂದೂವರೆ ದಶಕದ ಹಿಂದೆ ಕರ್ನಾಟಕದ ನ್ಯಾ.ವಿ.ಎಸ್‌.ಮಳೀಮಠ್‌ ಸಲ್ಲಿಸಿದ್ದ ವರದಿಯ ಪ್ರಮುಖ ಅಂಶವಾದ ಸಾಕ್ಷಿಗಳ ರಕ್ಷಣಾ ಯೋಜನೆ ದೇಶಾದ್ಯಂತ ಜಾರಿಯಾಗುತ್ತಿದೆ.

 • ಸುಪ್ರೀಂಕೋರ್ಟ್‌ ಇತ್ತೀಚೆಗೆ ಸಾಕ್ಷಿಗಳ ರಕ್ಷಣಾ ಯೋಜನೆ ಕುರಿತು ಕೇಂದ್ರ ಸರಕಾರ ಸಲ್ಲಿಸಿದ್ದ ಅಂತಿಮ ಕರಡನ್ನು ಅನುಮೋದಿಸಿದೆ. ಅಲ್ಲದೆ, ಸಂಸತ್‌ ಈ ಬಗ್ಗೆ ಕಾಯಿದೆ ರೂಪಿಸಿ ಅನುಷ್ಠಾನಗೊಳಿಸುವವರೆಗೆ ಕಾಯದೆ ರಾಜ್ಯಗಳು ಕೂಡಲೇ ಅದನ್ನು ಜಾರಿಗೊಳಿಸಬೇಕೆಂದು ಆದೇಶಿಸಿದೆ.

ಪ್ರಯೋಜನಗಳು  

 • ಈ ಕಾಯಿದೆಯಿಂದಾಗಿ ಅಪರಾಧ ಪ್ರಕರಣಗಳಲ್ಲಿ ಸಾಕ್ಷ್ಯ ಹೇಳಲು ಹೆದರಬೇಕಾಗಿಲ್ಲ.
 • ಬೆದರಿಕೆಗೆ ಮಣಿದು ಪ್ರತಿಕೂಲ ಸಾಕ್ಷ್ಯ ನುಡಿಯುವ ಅಗತ್ಯವಿಲ್ಲ.
 • ಪ್ರತ್ಯಕ್ಷವಾಗಿ ಕಂಡದ್ದನ್ನು ಧೈರ್ಯವಾಗಿ ಹೇಳಬಹುದು.
 • ಸಾಕ್ಷಿದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರಕಾರಗಳದ್ದಾಗಿದೆ.
 • ಸಾಕ್ಷಿಗಳಿಗೆ ರಕ್ಷಣೆ ಜತೆಗೆ ಆರ್ಥಿಕ ನೆರವೂ ನೀಡಬೇಕಿದೆ.

ಮಳೀಮಠ್‌ ವರದಿ ಹಿನ್ನೆಲೆ:

 • 2000ರಲ್ಲಿ ಆಗಿನ ಎನ್‌ಡಿಎ ಸರಕಾರ ಕ್ರಿಮಿನಲ್‌ ನ್ಯಾಯ ವ್ಯವಸ್ಥೆ ಸುಧಾರಣೆಗಾಗಿ ಕೇರಳ ಹೈಕೋರ್ಟ್‌ನ ಸಿಜೆ ಆಗಿದ್ದ ಕರ್ನಾಟಕದ ನ್ಯಾಯಮೂರ್ತಿ ವಿ.ಎಸ್‌.ಮಳೀಮಠ್‌ ನೇತೃತ್ವದ ಸಮಿತಿ ರಚನೆ ಮಾಡಿತ್ತು. ಅದು 2003ರಲ್ಲಿ 20 ಪ್ರಮುಖ ಅಂಶಗಳ ಬಗ್ಗೆ 158 ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಅಂದಿನ ಉಪ ಪ್ರಧಾನಿ ಹಾಗೂ ಗೃಹ ಸಚಿವ ಎಲ್‌.ಕೆ.ಅಡ್ವಾಣಿ ಅವರಿಗೆ ನೀಡಿತ್ತು.
 • ಸಮಿತಿ ಒಟ್ಟಾರೆ, ಪ್ರಸ್ತುತ ನ್ಯಾಯದಾನ ವ್ಯವಸ್ಥೆ ಅರೋಪಿಗಳ ಪರವಾಗಿದೆ. ಅಪರಾಧ ಪ್ರಕರಣಗಳ ಸಂತ್ರಸ್ತರಿಗೆ ನ್ಯಾಯ ದೊರಕಿಸುವುದಕ್ಕೆ ಆದ್ಯತೆ ಇಲ್ಲ ಎಂದು ಹೇಳಿತ್ತು.
 • ಭಾರತೀಯ ದಂಡ ಸಂಹಿತೆ (ಐಪಿಸಿ)ಕಾಯಿದೆ ಸೆಕ್ಷನ್‌ 195 ಪ್ರಕಾರ, ಸಾಕ್ಷಿಗಳು ತಮ್ಮ ರಕ್ಷಣೆಗೆ ಸಂಬಂಧಿಸಿದ ಅಧಿಕಾರಿಗಳಿಂದ ನೆರವು ಪಡೆದುಕೊಳ್ಳಲು ಅವಕಾಶವಿದೆ. ಆದರೆ ಅದರಲ್ಲಿ ಯಾವ್ಯಾವ ರೀತಿಯ ಸಹಾಯ, ಏನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದ್ದರಿಂದ ಬಲಿಷ್ಠವಾದ ಸಾಕ್ಷಿಗಳ ರಕ್ಷಣಾ ವ್ಯವಸ್ಥೆ ರೂಪಿಸುವ ಅಗತ್ಯವಿದ್ದು, ನ್ಯಾಯಾಧೀಶರೇ ವಿಚಾರಣೆ ವೇಳೆ ಸಾಕ್ಷ್ಯಗಳ ಪರ ನಿಲ್ಲಬೇಕಾಗಿದೆ. ಅವರನ್ನು ಗೌರವಯುತವಾಗಿ ನಡೆಸಿಕೊಂಡು ಭತ್ಯೆಯನ್ನೂ ನೀಡಬೇಕು. ಅಮೆರಿಕ ಮಾದರಿಯಲ್ಲಿ ಪ್ರತ್ಯೇಕ ಸಾಕ್ಷಿಗಳ ರಕ್ಷಣಾ ಕಾನೂನು ರೂಪಿಸಬೇಕು’ ಎಂದು ಶಿಫಾರಸು ಮಾಡಿತ್ತು.
 • ಕಾನೂನು ಆಯೋಗವೂ ತನ್ನ 198ನೇ ವರದಿಯಲ್ಲಿ ಇದೇ ಅಭಿಪ್ರಾಯವನ್ನು ಪ್ರತಿಪಾದಿಸಿತ್ತು.
 • ನಾನಾ ಕಾರಣಗಳಿಂದಾಗಿ ಮಳೀಮಠ್‌ ವರದಿಯ ಶಿಫಾರಸು ಜಾರಿಗೊಂಡಿರಲಿಲ್ಲ.ಆದರೆ, ಆಸಾರಾಂ ಬಾಪು ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ಕೆಲವು ಸಂತ್ರಸ್ತರು ಸಾಕ್ಷಿ ನುಡಿಯಲು ರಕ್ಷಣೆ ಕೋರಿ ಸಲ್ಲಿಸಿದ್ದ ಪಿಐಎಲ್‌ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌, ಕೇಂದ್ರ ಸರಕಾರದ ನಿಲುವು ಕೇಳಿತ್ತು. ಈಗ ಕೇಂದ್ರ ಸರಕಾರ ಸಾಕ್ಷಿಗಳ ರಕ್ಷಣಾ ಯೋಜನೆ ರೂಪಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ.

ಎಲ್ಲೆಲ್ಲಿ ಸಾಕ್ಷಿಗಳ ರಕ್ಷಣಾ ವ್ಯವಸ್ಥೆ ಇದೆ ?

 • ಅಮೆರಿಕ, ಬ್ರಿಟನ್‌, ಚೀನಾ, ಇಟಲಿ, ಕೆನಡಾ, ಹಾಂಕಾಂಗ್‌, ಐರ್ಲೆಂಡ್‌

ಸಾಕ್ಷಿಗಳ ರಕ್ಷಣಾ ಕ್ರಮಗಳೇನು?

 • ವಿಚಾರಣೆ ವೇಳೆ ಸಾಕ್ಷಿ ಹಾಗೂ ಆರೋಪಿಗಳು ಮುಖಾಮುಖಿಯಾಗದಂತೆ ನೋಡಿಕೊಳ್ಳುವುದು.
 • ಸಾಕ್ಷಿಗಳ ದೂರವಾಣಿ ಕರೆ ಮತ್ತು ಇ-ಮೇಲ್‌ಗಳ ಮೇಲೆ ನಿಗಾ
 • ಸಾಕ್ಷಿದಾರರ ಮನೆಗಳಲ್ಲಿ ಸಿಸಿಟಿವಿ ಅಳವಡಿಕೆ
 • ಸಾಕ್ಷಿಗಳ ವಿವರದ ಗೌಪ್ಯತೆ
 • ಸಾಕ್ಷಿಗಳಿಗೆ ತುರ್ತು ಸಂಪರ್ಕಕ್ಕೆ ವ್ಯವಸ್ಥೆ
 • ಸಾಕ್ಷಿಗಳ ಮನೆಗಳ ಸುತ್ತ ನಿರಂತರ ಗಸ್ತು ವ್ಯವಸ್ಥೆ
 • ಇನ್‌ ಕ್ಯಾಮೆರಾ ಮೂಲಕ ಸಾಕ್ಷಿಗಳ ವಿಚಾರಣೆ
 • ಸಾಕ್ಷಿಗಳಿಗೆ ಹಣಕಾಸಿನ ನೆರವು ಅಥವಾ ಸಹಾಯ
 • ಅಗತ್ಯಬಿದ್ದರೆ ಸುರಕ್ಷಿತ ಸ್ಥಳಕ್ಕೆ ಸಾಕ್ಷಿಗಳ ತಾತ್ಕಾಲಿಕ ಸ್ಥಳಾಂತರ

ಮೂರು ಕೆಟಗರಿ ರಕ್ಷಣೆ

 • ಸಾಕ್ಷಿಗಳ ರಕ್ಷಣಾ ಯೋಜನೆ ಯಲ್ಲಿ ಅಪಾಯದ ಗ್ರಹಿಕೆ ಆಧರಿಸಿ ರಕ್ಷಣೆಗೆ ಎ.ಬಿ.ಸಿ ಎಂದು ಮೂರು ಕೆಟಗರಿಗಳನ್ನು ಮಾಡಲಾಗಿದೆ.
 • ಸಾಕ್ಷಿಗಳು ಅರ್ಜಿ ಸಲ್ಲಿಸಿದ ನಂತರ ಅದನ್ನು ಪರಿಶೀಲಿಸಿದ ಬಳಿಕ, ಹಿರಿಯ ಪೊಲೀಸ್‌ ಅಧಿಕಾರಿಗಳು ಆಯಾ ಪ್ರದೇಶದ ಎಸಿಪಿ/ಡಿಸಿಪಿಗಳಿಂದ ವರದ ತರಿಸಿಕೊಂಡು ಯಾವ ಕೆಟಗರಿ ಅಡಿ ರಕ್ಷಣೆ ನೀಡಬೇಕೆಂದು ತೀರ್ಮಾನಿಸುತ್ತಾರೆ.

ಮೆಥೆನಾಲ್‌ ಅಡುಗೆ ಒಲೆ ಉತ್ಪಾದನಾ ಘಟಕ

ಸುದ್ಧಿಯಲ್ಲಿ ಏಕಿದೆ ?ಸ್ವಚ್ಛ ಇಂಧನವನ್ನು ಪ್ರೋತ್ಸಾಹಿಸುವ ಹಾಗೂ ತೈಲ ಆಮದು ವೆಚ್ಚವನ್ನು ಇಳಿಸುವ ಉದ್ದೇಶದಿಂದ ಮೆಥೆನಾಲ್‌ ಅನ್ನು ಅಡುಗೆ ಹಾಗೂ ಸಾರಿಗೆ ಇಂಧನವಾಗಿ ಜನಪ್ರಿಯಗೊಳಿಸಲು ನೀತಿ ಆಯೋಗ ಮುಂದಾಗಿದೆ.

 • ಬೆಂಗಳೂರು ಹಾಗೂ ಅಸ್ಸಾಂನಲ್ಲಿ ಮೆಥೆನಾಲ್‌ ಅಡುಗೆ ಒಲೆಗಳನ್ನು ಉತ್ಪಾದಿಸುವ ಘಟಕಗಳೂ ಅಸ್ತಿತ್ವಕ್ಕೆ ಬರಲಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ ಸಾರಸ್ವತ್‌ ತಿಳಿಸಿದ್ದಾರೆ. ವಾಣಿಜ್ಯ ಬಳಕೆಗೆ ದೊಡ್ಡ ಸ್ಟೌವ್‌ಗಳೂ ಉತ್ಪಾದನೆಯಾಗಲಿವೆ. ಸ್ವಿಡನ್‌ ಮೂಲದ ತಂತ್ರಜ್ಞಾನದಲ್ಲಿ ಈ ಒಲೆಗಳ ನಿರ್ಮಾಣವಾಗಲಿದೆ.
 • ಉತ್ತರಪ್ರದೇಶದಲ್ಲಿ 20,000 ಹಾಗೂ ಅಸ್ಸಾಂನಲ್ಲಿ 50,000 ಮೆಥೆನಾಲ್‌ ಅಡುಗೆ ಒಲೆಗಳನ್ನು ವಿತರಿಸಲು ಆಯಾ ರಾಜ್ಯ ಸರಕಾರಗಳ ಜತೆಗೆ ನೀತಿ ಆಯೋಗ ಮಾತುಕತೆ ನಡೆಸಿದೆ. ಮಹಾರಾಷ್ಟ್ರ ಸರಕಾರದ ಜತೆಗೂ ಮಾತುಕತೆ ನಡೆಯಲಿದೆ.
 • ಅಸ್ಸಾಂ ಪೆಟ್ರೋ ಕಾಂಪ್ಲೆಕ್ಸ್‌ನಲ್ಲಿ ಈಗಾಗಲೇ 500 ಮನೆಗಳಿಗೆ ಪ್ರಾಯೋಗಿಕವಾಗಿ ಮೆಥೆನಾಲ್‌ ಅಡುಗೆ ಒಲೆಗಳನ್ನು ವಿತರಿಸಲಾಗಿದೆ.

ಏನಿದು ಮೆಥೆನಾಲ್‌?

 • ಅಡುಗೆ ಉದ್ದೇಶಕ್ಕೆ ಬಳಕೆಯಾಗಲಿರುವ ಮೆಥೆನಾಲ್‌, ಸ್ವಚ್ಛ ಮತ್ತು ಬಣ್ಣ ರಹಿತ ದ್ರವ ವಸ್ತು.
 • ನೈಸರ್ಗಿಕ ಅನಿಲ, ಕಲ್ಲಿದ್ದಲು ಮತ್ತು ನವೀಕರಸಬಹುದಾದ ಮೂಲಗಳ ಹಲವು ಉತ್ಪನ್ನಗಳಿಂದ ಮೆಥೆನಾಲ್‌ ಉತ್ಪಾದಿಸಬಹುದು. ಇದನ್ನು ವುಡ್‌ ಆಲ್ಕೊಹಾಲ್‌ ಎಂದೂ ಕರೆಯುತ್ತಾರೆ.
 • ಕಬ್ಬು, ಗೋಧಿ, ಜೋಳ ಇತ್ಯಾದಿ ಕೊಳೆಯುವ ನಾನಾ ಸಸ್ಯ ಜನ್ಯ ವಸ್ತುಗಳಿಂದ ಮೆಥೆನಾಲ್‌ ಉತ್ಪಾದಿಸಬಹುದು.
 • ಪೆಟ್ರೋಲ್‌ ಜತೆ ಶೇ.15ರಷ್ಟು ಮೆಥೆನಾಲ್‌ ಮಿಶ್ರಣಕ್ಕೆ ಭಾರತ ಸಿದ್ಧವಾಗಿದೆ. ಪ್ರಯಾಣಿಕರ ವಾಹನಗಳಿಗೆ ಮೆಥೆನಾಲ್‌ ಮಿಶ್ರಿತ ಪೆಟ್ರೋಲ್‌ ಬಳಕೆ ಕಡ್ಡಾಯಗೊಳಿಸುವ ಬಗ್ಗೆ ನೀತಿ ಆಯೋಗ ಶೀಘ್ರ ಸಂಪುಟ ಟಿಪ್ಪಣಿ ರಚಿಸಲಿದೆ. ಇದರಿಂದ ಪೆಟ್ರೋಲ್‌ ದರದಲ್ಲಿ ಲೀಟರ್‌ಗೆ 3-4 ರೂ. ಇಳಿಕೆಯಾಗಲಿದೆ.

ಉತ್ತರ ಪ್ರದೇಶದಲ್ಲಿ ಇತರ ಹಿಂದುಳಿದ ಜಾತಿಗಳಿಗೆ (ಓಬಿಸಿ) ಒಳ ಮೀಸಲು

ಸುದ್ಧಿಯಲ್ಲಿ ಏಕಿದೆ ?ಇತರ ಹಿಂದುಳಿದ ಜಾತಿಗಳಿಗೆ ನಿಗದಿಯಾಗಿರುವ ಒಟ್ಟಾರೆ ಶೇ 27ರ ಮೀಸಲಾತಿಯನ್ನು ಸೂಕ್ತವಾಗಿ ಹಂಚಲು ಉತ್ತರ ಪ್ರದೇಶದ ಸರಕಾರ ರಚಿಸಿದ ನಾಲ್ವರು ಸದಸ್ಯರ ಸಾಮಾಜಿಕ ನ್ಯಾಯ ಸಮಿತಿ ತನ್ನ ವರದಿ ಸಿದ್ಧಪಡಿಸಿದ್ದು, ಅದರಂತೆ ಯಾದವರು ಮತ್ತು ಕುರ್ಮಿಗಳಿಗೆ ಶೇ 7ರ ಮೀಸಲು ನಿಗದಿಯಾಗುವ ಸಾಧ್ಯತೆಯಿದೆ.

 • ನ್ಯಾಯಮೂರ್ತಿ ರಾಘವೇಂದ್ರ ಕುಮಾರ್ ಅಧ್ಯಕ್ಷತೆಯ ಸಮಿತಿ ಓಬಿಸಿಗಳನ್ನು 79 ಉಪ ಜಾತಿಗಳಾಗಿ ವರ್ಗೀಕರಿಸಿದೆ.
 • ಲೋಧ್‌, ಕುಶ್ವಾಹ ಮತ್ತು ತೇಲಿ ಸೇರಿದಂತೆ ಅತ್ಯಂತ ಹಿಂದುಳಿದ ಜಾತಿಗಳಿಗೆ ಹೆಚ್ಚಿನ ಲಾಭ ದೊರೆಯುವಂತಾಗಲು ಶೇ 11ರ ಮೀಸಲು ಒದಗಿಸಲು ಉತ್ತರ ಪ್ರದೇಶ ಸರಕಾರ ಉದ್ದೇಶಿಸಿದೆ.
 • 400 ಪುಟಗಳ ಈ ವರದಿಯಲ್ಲಿ ಅತ್ಯಂತ ಹಿಂದುಳಿದ ಜಾತಿಗಳಿಗೆ ಅವರ ಜನಸಂಖ್ಯೆಯ ಅರ್ಧದಷ್ಟು ಮಂದಿಗೆ ಉದ್ಯೋಗದಲ್ಲಿ ಮೀಸಲು ಸೌಲಭ್ಯ ಸಿಗಬೇಕು ಎಂದು ಶಿಫಾರಸು ಮಾಡಿದೆ. ಉದಯೋನ್ಮುಖ ಮಧ್ಯಮ ವರ್ಗ ಎಂದು (ಉಪ ವರ್ಗೀಕರಣ) ವರ್ಗೀಕರಿಸಿರುವ ಕೆಲವು ಉಪ ಜಾತಿಗಳನ್ನೂ ವರದಿಯಲ್ಲಿ ಸೇರಿಸಲಾಗಿದೆ.
 • ರಾಜ್‌ಭರ್‌, ಘೋಸಿ ಮತ್ತು ಖುರೇಶಿ (ಮುಸ್ಲಿಮರ ಪಂಗಡ) ಗಳಿಗೆ ಶೇ 9ರ ಮೀಸಲು ಒದಗಿಸುವ ಪ್ರಸ್ತಾಪವಿದೆ. ಈ ಸಮುದಾಯದವರು ಬಹುತೇಕ ಕ್ಲಾಸ್‌-3 ಅಥವಾ ಕ್ಲಾಸ್‌-4 ವರ್ಗದ ಉದ್ಯೋಗಗಳನ್ನು ಮಾಡುತ್ತಾರೆ ಅಥವಾ ನಿರುದ್ಯೋಗಿಗಳಾಗಿಯೇ ಇದ್ದಾರೆ ಎಂದು ವರದಿ ಹೇಳಿದೆ.

‘ಸಮಗ್ರ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್‌’ ಯೋಜನೆ 2019-20

ಸುದ್ಧಿಯಲ್ಲಿ ಏಕಿದೆ ?ಮಾನವ ಸಂಪನ್ಮೂಲ ಇಲಾಖೆ, ಕಾರ್ಮಿಕ ಮತ್ತು ಕೌಶಲಾಭಿವೃದ್ಧಿ ಇಲಾಖೆಗಳ ಜಂಟಿ ಸಹಯೋಗದಲ್ಲಿ ‘ಸಮಗ್ರ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್‌’ ಯೋಜನೆ 2019-20ರ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿದೆ.

ಯೋಜನೆ ಯಾರಿಗೆ ಅನ್ವಯಿಸಲಿದೆ ?

 • ಮೊದಲ ವರ್ಷ 10 ಲಕ್ಷಕ್ಕೂ ಅಧಿಕ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ತರಬೇತಿಯ ಜತೆಗೆ ಸರಕಾರದಿಂದ ಸ್ಟೈಪೆಂಡ್‌ನ ಶೇ.25 ಪಾಲು, ಅಂದರೆ ಪ್ರತಿ ತಿಂಗಳು 1,500 ರೂ. ತನಕ ದೊರೆಯಲಿದೆ.
 • 6ರಿಂದ 10 ತಿಂಗಳ ಈ ಮೆಗಾ ಅಪ್ರೆಂಟಿಸ್‌ಶಿಪ್‌ ಖಾಸಗಿ ಮತ್ತು ಸರಕಾರಿ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೂ ದೊರೆಯಲಿದೆ.
 • ಮುಂದಿನ ಹಂತದಲ್ಲಿ ಡಿಗ್ರಿ ಮುಗಿಸಿ ಹೊರ ಬರುವ 80 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೂ ಇದು ವಿಸ್ತರಣೆಯಾಗಲಿದೆ.
 • ಮಾನವಿಕ ಮತ್ತು ಇತರ ತಾಂತ್ರಿಕೇತರ ಕೋರ್ಸ್‌ಗಳನ್ನು ಕಲಿಯುತ್ತಿರುವ, ಪದವಿಯ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳಿಗೆ ಆದ್ಯತೆ ಸಿಗಲಿದೆ.

ಏಕೆ ಈ ಯೋಜನೆ ?

 • ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳಿಗೆ ಕಾರ್ಪೊರೇಟ್‌ ವಲಯದಲ್ಲಿ ಉದ್ಯೋಗಕ್ಕೆ ಸೇರುವುದು ಕಷ್ಟವಲ್ಲ. ಆದರೆ ಮಾನವಿಕ ಇತ್ಯಾದಿ ತಾಂತ್ರಿಕೇತರ ವಿಷಯಗಳಿಗೂ ಉದ್ದಿಮೆಗಳಿಗೂ ಸಂಬಂಧ ಕಡಿಮೆ. ಹೀಗಾಗಿ ನಿರುದ್ಯೋಗಿಗಳಲ್ಲಿ ಹೆಚ್ಚಿನವರೂ ತಾಂತ್ರಿಕೇತರ ಕೋರ್ಸ್‌ ಓದಿದವರು. ಇವರಲ್ಲಿ ಕೆಲವರು ಮಾತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಮುಂದಿನ ಹಂತದ ವ್ಯಾಸಂಗ ನಿರತರಾಗುತ್ತಾರೆ. ಆದ್ದರಿಂದ ಕರಿಯರ್‌ ಕೌನ್ಸೆಲಿಂಗ್‌ ಮತ್ತು ಸೂಕ್ತ ಅಪ್ರೆಂಟಿಸ್‌ಶಿಪ್‌ ನೀಡಲು ಸರಕಾರ ತೀರ್ಮಾನಿಸಿದೆ.
 • ವಿದ್ಯಾರ್ಥಿಗಳಿಗೆ ಕಾರ್ಪೊರೇಟ್‌ ವಲಯದ ಸಂಪರ್ಕ, ಉದ್ಯೋಗಾವಕಾಶ ಕಲ್ಪಿಸಲು ಇದು ಸಹಾಯಕವಾಗಲಿದೆ. ಸ್ಟೈಫಂಡ್‌ನ ಶೇ.25ರಷ್ಟು ಮೊತ್ತವನ್ನು ಸರಕಾರವೇ ಭರಿಸಲಿರುವುದರಿಂದ, ಉದ್ಯೋಗದಾತರಿಗೂ ಹೆಚ್ಚು ಮಂದಿಯನ್ನು ಅಪ್ರೆಂಟಿಸ್‌ಶಿಪ್‌ ತರಬೇತಿಗೆ ಸೇರಿಸಿಕೊಳ್ಳಲು ಉತ್ತೇಜನ ಸಿಗಲಿದೆ.
 • ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳು, ಕೌಶಲಾಭಿವೃದ್ಧಿ ಕೇಂದ್ರಗಳು ಹಾಗೂ ಬೃಹತ್‌ ಕಾರ್ಪೊರೇಟ್‌ ವಲಯ ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಲಿದೆ. ಇದರಿಂದಾಗಿ ತರಬೇತಿಯ ಗುಣಮಟ್ಟ ವೃದ್ಧಿಸಲಿದೆ.

ಎಲ್ಲ ವರ್ಗದ ಬಡವರಿಗೆ  ಉಚಿತ ಅಡುಗೆ ಅನಿಲ ಸಂಪರ್ಕ

ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಇನ್ಮುಂದೆ ಎಲ್ಲಾ ವರ್ಗದ ಬಡ ಕುಟುಂಬಗಳಿಗೂ ಉಚಿತ ಅಡುಗೆ ಅನಿಲ (ಎಲ್​ಪಿಜಿ) ಸಂಪರ್ಕ ಸಿಗಲಿದೆ.

 • 2011 ರ ಸಮಾಜೋ ಆರ್ಥಿಕ ಜಾತಿ ಜನಗಣತಿ (SECC) ಆಧಾರದ ಮೇಲೆ ಸಂಪರ್ಕಗಳನ್ನು ನೀಡಲಾಗುತ್ತಿತ್ತು.
 • ನಂತರ ಪ್ರಧಾನಮಂತ್ರಿ ಆವಾಜ್‌ ಯೋಜನೆ ಮತ್ತು ಅಂತ್ಯೋದಯ ಯೋಜನೆಯ ಫಲಾನುಭವಿಗಳಾದ ಎಸ್‌ಸಿ, ಎಸ್‌ಟಿ, ಅರಣ್ಯ ನಿವಾಸಿಗಳು, ಅತ್ಯಂತ ಹಿಂದುಳಿದ ವರ್ಗಗಳು, ದ್ವೀಪ ನಿವಾಸಿಗಳು, ಅಲೆಮಾರಿ ಬುಡಕಟ್ಟು ಜನಾಂಗ, ಚಹಾ ಎಸ್ಟೇಟ್‌ಗಳ ಬಡವರಿಗೆ ಯೋಜನೆಯನ್ನು ವಿಸ್ತರಿಸಲಾಗಿತ್ತು.
 • ಇದೀಗ ಎಲ್ಲ ವರ್ಗದ ಕಡು ಬಡವರಿಗೂ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಎಲ್‌ಪಿಜಿ ಸಿಲಿಂಡರ್‌ ಸಂಪರ್ಕ ಲಭ್ಯವಾಗಲಿದೆ.
 • ಯೋಜನೆಯಡಿ ಪ್ರತಿ ಬಡಕುಟುಂಬಕ್ಕೆ ಉಚಿತ ಎಲ್​ಪಿಜಿ ಸಂಪರ್ಕ ಒದಗಿಸುವ ಸರ್ಕಾರಿ ಸ್ವಾಮ್ಯದ ಇಂಧನ ವ್ಯಾಪಾರಿಗಳಿಗೆ ಸರ್ಕಾರವು 1,600 ರೂ. ಸಬ್ಸಿಡಿ ನೀಡಲಿದೆ. ಈ ಸಬ್ಸಿಡಿಯು ಸಿಲಿಂಡರ್‌ ಭದ್ರತೆ ಶುಲ್ಕ ಮತ್ತು ಇತರೆ ಶುಲ್ಕಗಳನ್ನು ಒಳಗೊಂಡಿರುತ್ತದೆ.
 • 2016ರ ಮೇ 1ರಂದು ಪಿಎಂಯುವೈ ಅನ್ನು ಜಾರಿಗೆ ತಂದು ಮೂಲಭೂತವಾಗಿ ಹೊಗೆ ರಹಿತ ಅಡುಗೆ ಮನೆ ಪರಿಕಲ್ಪನೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳಾ ಸದಸ್ಯರಿಗೆ ಎಲ್​ಪಿಜಿ ಸಂಪರ್ಕ ಕಲ್ಪಿಸಲಾಗುತ್ತಿತ್ತು.

ಪಿಎಸಿಗೆ ರಫೇಲ್ ಕರಡು ವರದಿ ಸಲ್ಲಿಸಿದ ಸಿಎಜಿ

ಸುದ್ಧಿಯಲ್ಲಿ ಏಕಿದೆ ?ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿ ಮಹಾಲೇಖಪಾಲರ (ಸಿಎಜಿ) ವರದಿ ಕುರಿತು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಉಲ್ಲೇಖವಾಗಿರುವ ಹಿನ್ನೆಲೆ ನಡುವೆಯೇ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ (ಪಿಎಸಿ) ಸಿಎಜಿ ವರದಿಯ ಕರಡು ಪ್ರತಿ ಸಲ್ಲಿಕೆಯಾಗಿದೆ.

 • ರಫೇಲ್ ಖರೀದಿ ವಿರುದ್ಧದ ತನಿಖೆಯನ್ನು ಸುಪ್ರೀಂಕೋರ್ಟ್ ನಿರಾಕರಿಸಿ, ಸಿಎಜಿ ವರದಿ ಬಗ್ಗೆ ತಪ್ಪಾಗಿ ಉಲ್ಲೇಖಿಸಿತ್ತು. ಇದು ಸಾಕಷ್ಟು ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಈಗ ನಿಯಮದ ಪ್ರಕಾರ ಸಿದ್ಧಗೊಂಡಿರುವ ಕರಡು ವರದಿ ಪ್ರತಿಯನ್ನು ಪಿಎಸಿ ಎದುರು ಇರಿಸಲಾಗಿದೆ. ವರದಿಯನ್ನು ಲೆಕ್ಕಪತ್ರ ಸಮಿತಿ ಪರಿಶೀಲಿಸಿದ ಬಳಿಕ ಅಂತಿಮ ವರದಿ ತಯಾರಾಗಲಿದೆ. ಜನವರಿ ಕೊನೆಗೆ ಅಂತಿಮ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ.

ಸಾರ್ವಜನಿಕ ಖಾತೆಗಳ ಸಮಿತಿ

 • ಪಬ್ಲಿಕ್ ಅಕೌಂಟ್ಸ್ ಕಮಿಟಿ (ಪಿಎಸಿ) ಭಾರತದ ಸರ್ಕಾರದ ಆದಾಯ ಮತ್ತು ವೆಚ್ಚದ ಲೆಕ್ಕ ಪರಿಶೋಧನೆ ಮಾಡುವ ಸಂಸತ್ತಿನ ಆಯ್ದ ಸದಸ್ಯರ ಸಮಿತಿಯಾಗಿದೆ.
 • ಪಿಎಸಿ ಪ್ರತಿವರ್ಷವೂ 22 ಸದಸ್ಯರಿಗಿಂತ ಹೆಚ್ಚಲ್ಲದ ಸದಸ್ಯರ ಸಮಿತಿಯಾಗಿದೆ , ಅದರಲ್ಲಿ 15 ಮಂದಿ ಲೋಕಸಭೆಯಿಂದ, ಸಂಸತ್ತಿನ ಕೆಳಮನೆ ಮತ್ತು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಿಂದ 7 ಮಂದಿ ಆಯ್ಕೆಯಾಗುತ್ತಾರೆ .
 • ಸದಸ್ಯರ ಕಚೇರಿಯ ಅಧಿಕಾರವು ಒಂದು ವರ್ಷವಾಗಿರುತ್ತದೆ .
 • ಅಧ್ಯಕ್ಷರನ್ನು ಲೋಕಸಭೆಯ ಸ್ಪೀಕರ್ ನೇಮಕ ಮಾಡುತ್ತಾರೆ. 1967 ರಿಂದ, ಸಮಿತಿಯ ಅಧ್ಯಕ್ಷರು ವಿರೋಧ ಪಕ್ಷದಿಂದ ಆಯ್ಕೆಯಾಗುತ್ತಾರೆ.
 • ಹಿಂದೆ , ಇದನ್ನು ಆಡಳಿತ ಪಕ್ಷದ ಸದಸ್ಯ ನೇತೃತ್ವವಹಿಸುತ್ತಿದ್ದರು . ಸಂಸತ್ತಿನಲ್ಲಿ ಇಡಲ್ಪಟ್ಟ ನಂತರ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ನ ಆಡಿಟ್ ವರದಿಯನ್ನು ಪರೀಕ್ಷಿಸುವುದು ಮುಖ್ಯ ಉದ್ದೇಶವಾಗಿದೆ. ತನಿಖೆಯ ಸಂದರ್ಭದಲ್ಲಿ ಸಿಎಜಿ ಸಮಿತಿಗೆ ಸಹಾಯ ಮಾಡುತ್ತದೆ. 22 ಸದಸ್ಯರ ಪೈಕಿ ಯಾರು  ಸರ್ಕಾರದಲ್ಲಿ ಸಚಿವರಾಗಿರುವುದಿಲ್ಲ.

ಪಿಎಸಿ ಪಾತ್ರ ಏನು?

 • ಸಾರ್ವಜನಿಕ ಹಣವನ್ನು ಬಳಸುವುದಕ್ಕಾಗಿ ಕಾರ್ಯನಿರ್ವಾಹಕನನ್ನು ಹಿಡಿದಿಟ್ಟುಕೊಳ್ಳುವುದು ಪಾರ್ಲಿಮೆಂಟ್ಸ್ ಪಬ್ಲಿಕ್ ಅಕೌಂಟ್ಸ್ ಕಮಿಟಿಯ (ಪಿಎಸಿ) ಪ್ರಮುಖ ಪಾತ್ರವಾಗಿದೆ,ಇದನ್ನು “ಎಲ್ಲಾ ಸಂಸತ್ತಿನ ಸಮಿತಿಗಳ ತಾಯಿ”ಎಂದು ಕರೆಯುತ್ತಾರೆ .
 • ಎಲ್ಲಾ ಹೌಸ್ ಪ್ಯಾನೆಲ್ಗಳಲ್ಲಿ ಇದು ಅತ್ಯಂತ ಹಳೆಯದಾಗಿದೆ, ಮತ್ತು ಅದರ ಕೆಲಸವು ಸರ್ಕಾರದ ಖರ್ಚು ಮತ್ತು ಕಾರ್ಯಕ್ಷಮತೆಯ ಬಗ್ಗೆ ಜಾಗೃತಿ ಮೂಡಿಸುವುದು, ಅದಕ್ಷತೆಗಳು, ವ್ಯರ್ಥ ವೆಚ್ಚಗಳು ಮತ್ತು ನೀತಿಗಳ ಅನುಷ್ಠಾನದಲ್ಲಿ ಅಸಡ್ಡೆ ಮತ್ತು ಬೆಳಕಿಗೆ ತರಲು ಸಂಸತ್ತು ಅನುಮೋದಿಸಿದ ಕಾರ್ಯಕ್ರಮಗಳು ಮತ್ತು ನೀತಿಯ ಪರಿಣಾಮಕಾರಿ, ವೇಗದ ಮತ್ತು ಆರ್ಥಿಕ ಅನುಷ್ಠಾನಕ್ಕೆ ಆಡಳಿತವನ್ನು ಸುಗಮಗೊಳಿಸಲು ಶಿಫಾರಸುಗಳನ್ನು ಮಾಡುವುದು .

ವಾಯುಪಡೆ ವಿಮಾನಕ್ಕೆ ಮೊದಲ ಬಾರಿ ಜೀವಿಕ ಇಂಧನ ಬಳಕೆ

ಸುದ್ಧಿಯಲ್ಲಿ ಏಕಿದೆ ?ಭಾರತೀಯ ವಾಯು ಪಡೆಯು ಜೆಟ್‌ ಇಂಧನಕ್ಕೆ 10% ಜೈವಿಕ ಇಂಧನ ಬೆರೆಸಿ ಹಾರಾಟ ನಡೆಸುವ ಪ್ರಯೋಗದಲ್ಲಿ ಯಶಸ್ವಿಯಾಗಿದೆ.

 • ಭಾರತದಲ್ಲಿ ನಡೆದ ಇಂತಹ ಮೊಟ್ಟ ಮೊದಲ ಪ್ರಯೋಗ ಇದಾಗಿದೆ.
 • ರಷ್ಯಾ ತಯಾರಿತ ಎನ್‌-32 ಪ್ರಯಾಣಿಕ ವಿಮಾನಕ್ಕೆ ಎಟಿಎಫ್‌ (ಏವಿಯೇಷನ್‌ ಟರ್ಬೈನ್‌ ಫ್ಯೂಲ್‌) ಜತೆ ಜತ್ರೋಪದಿಂದ ತಯಾರಿಸಲಾದ ಬಯೋ-ಜೆಟ್‌ ಇಂಧನವನ್ನು 10% ಬೆರೆಸಿ ಹಾರಾಟ ನಡೆಸಲಾಯಿತು.
 • ಚಂಡೀಗಢ ವಾಯುನೆಲೆಯಲ್ಲಿ ಈ ಪ್ರಯೋಗಾರ್ಥ ಪರೀಕ್ಷೆಯನ್ನು ನಡೆಸಲಾಗಿದೆ.
 • ಇದಕ್ಕೂ ಮೊದಲು ಇದೇ ಸಂಯೋಜನೆಯ ಇಂಧನವನ್ನು ಬಳಸಿ, ವಿಮಾನವನ್ನು ರನ್‌ವೇನಲ್ಲಿ ಚಾಲನೆ ಮಾಡಿ ಪರೀಕ್ಷಿಸಲಾಗಿತ್ತು. ವಾಯುಪಡೆ ಮತ್ತು ಡಿಆರ್‌ಡಿವೊ ಜಂಟಿಯಾಗಿ ಈ ಯೋಜನೆ ಕೈಗೆತ್ತಿಕೊಂಡಿವೆ.
 • ಈ ಯೋಜನೆ ಯಶಸ್ವಿಯಾದರೆ ಸುಖೋಯ್-30ಎಂಕೆಐ ಮತ್ತು ಮಿಗ್-29 ಯುದ್ಧವಿಮಾನದಲ್ಲೂ ಏರ್‌ಫೋರ್ಸ್ ಬಯೋ ಜೆಟ್ ಡೀಸೆಲ್ ಬಳಸಲಿದೆ.
 • ಜನವರಿ 26ರ ಗಣರಾಜ್ಯೋತ್ಸವದಂದು ನಡೆಯಲಿರುವ ವೈಮಾನಿಕ ಕಸರತ್ತಿನಲ್ಲಿ ಬಯೋ ಜೆಟ್‌ ಇಂಧನ ಬಳಸಿದ ವಿಮಾನವನ್ನು ಹಾರಿಸಲು ವಾಯುಪಡೆ ಉದ್ದೇಶಿಸಿದೆ.

ಮಾಲ್ಡೀವ್ಸ್​ಗೆ 1.4 ಬಿಲಿಯನ್ ಡಾಲರ್​ ನೆರವು

ಸುದ್ಧಿಯಲ್ಲಿ ಏಕಿದೆ ?ದ್ವೀಪರಾಷ್ಟ್ರ ಮಾಲ್ಡೀವ್ಸ್​ಗೆ 1.4 ಬಿಲಿಯನ್ ಡಾಲರ್​​ ಆರ್ಥಿಕ ನೆರವು ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.

 • ಎರಡೂ ದೇಶಗಳ ನಾಯಕರು, ವೀಸಾ ಸೌಕರ್ಯ ಸೇರಿ ಒಟ್ಟು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದರು.
 • ಮಾಲ್ಡೀವ್ಸ್​ ಅಧ್ಯಕ್ಷ ಹಾಗೂ ಪ್ರಧಾನಿ ಮೋದಿಯವರ ಎರಡನೇ ಭೇಟಿ ಇದಾಗಿದ್ದು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
 • ಭಾರತ ಮಾಲ್ಡೀವ್ಸ್​ ಜತೆ ಉತ್ತಮ ವ್ಯಾಪಾರ ಸಂಬಂಧ ಹೊಂದಲು ಬಯಸುತ್ತದೆ ಎಂದು ಹೇಳಿರುವ ಪ್ರಧಾನಿ ಮೋದಿ, ಭಾರತದ ಕಂಪನಿಗಳಿಗೆ ದ್ವೀಪರಾಷ್ಟ್ರದಲ್ಲಿ ಉದ್ಯಮ ಪ್ರಾರಂಭಕ್ಕೆ ಹಲವು ಅವಕಾಶಗಳಿವೆ.
 • ಈ ಹಿಂದಿನ ಅಧ್ಯಕ್ಷ ಯಮೀನ್​ ಅವರು ಸಹಿ ಹಾಕಿದ್ದ ಚೀನಾ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದದಿಂದ ನಿಧಾನವಾಗಿ ಸೋಲಿಹ್​ ನೇತೃತ್ವದ ಹೊಸ ಸರ್ಕಾರ ಹೊರಬರಲಿದೆ ಎಂದು ಮಾಜಿ ಅಧ್ಯಕ್ಷ ಮೊಹಮ್ಮದ್​ ನಶೀದ್(2002-2008) ಹೇಳಿದ್ದರು.
 • ಹಿಂದು ಮಹಾಸಾಗರದಲ್ಲಿ ಚೀನಾದ ಚಟುವಟಿಕೆಗಳನ್ನು ಉಲ್ಲೇಖಿಸಿ, ಹಿಂದು ಮಹಾಸಾಗರ ಪ್ರದೇಶದಲ್ಲಿ ಸಹಕಾರ ಹೆಚ್ಚಿಸಲು ಎರಡೂ ದೇಶಗಳವರು ಒಟ್ಟಾಗಿ ಕೆಲಸ ಮಾಡುತ್ತೇವೆ. ನಮ್ಮ ದೇಶಗಳಿಗೆ ಹಾನಿಯಾಗುವ ಯಾವುದೇ ಚಟುವಟಿಕೆಗಳು ಅಲ್ಲಿ ನಡೆಯಲು ಬಿಡುವುದಿಲ್ಲ.
 • ಹಿಂದು ಮಹಾಸಾಗರ ಪ್ರದೇಶದಲ್ಲಿ ಗಸ್ತು ಮತ್ತು ವೈಮಾನಿಕ ಕಣ್ಗಾವಲು ಮೂಲಕ ಹೆಚ್ಚಿನ ಭದ್ರತೆ ಒದಗಿಸಲು ಎರಡೂ ದೇಶಗಳು ಒಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ.
 • ಸ್ಥಳೀಯ ಕರೆನ್ಸಿಯಲ್ಲಿ ವಹಿವಾಟು : ಆರ್ಥಿಕ ನೆರವಿನ ಜತೆಗೆ ಮಾಲ್ದೀವ್ಸ್್ಸ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ಸುಧಾರಣೆಗೆ ಸಾಲ ನೀಡಲು ಕೂಡ ದ್ವಿಪಕ್ಷೀಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಉಭಯ ದೇಶಗಳು ಸ್ಥಳೀಯ ಕರೆನ್ಸಿ ಮೂಲಕ ವಾಣಿಜ್ಯ ವಹಿವಾಟು ನಡೆಸಲು ಕೂಡ ನಿರ್ಧರಿಸಿವೆ. ಸಾಲ ಹಾಗೂ ಆರ್ಥಿಕ ನೆರವು ಕೂಡ ಸ್ಥಳೀಯ ಕರೆನ್ಸಿ ಮೂಲಕವೇ ನಡೆಯಲಿದೆ.
 • ಚೀನಾ ಪ್ರಾಬಲ್ಯ ತಂತ್ರ: ವಿಮಾನ ನಿಲ್ದಾಣ, ಬಂದರು ನಿರ್ಮಾಣ ಹಾಗೂ ವಸತಿ ಯೋಜನೆಗಳಿಗೆ ಚೀನಾ ಸರ್ಕಾರ 10ರಿಂದ 20 ಸಾವಿರ ಕೋಟಿ ರೂ. ಸಾಲ ನೀಡಿತ್ತು. ಈ ಮೂಲಕ ಮಾಲ್ದೀವ್ಸ್​ನಲ್ಲಿ ಭಾರತದ ಪ್ರಭಾವ ಕುಗ್ಗಿಸಿ, ಬಂದರಿನಲ್ಲಿ ಚೀನಾ ಸೇನಾನೆಲೆ ನಿರ್ವಣಕ್ಕೆ ಯೋಜನೆ ರೂಪಿಸಲಾಗಿತ್ತು.

ಒಪ್ಪಂದಗಳೇನು?

 • ವೀಸಾ ನಿಯಮ ಸಡಿಲಿಕೆ
 • ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ವಿನಿಮಯ
 • ಕೃಷಿ ಉದ್ಯಮಕ್ಕೆ ಸಹಕಾರ
 • ಸಂವಹನ, ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಸಹಕಾರ
 • ಮಾನವ ಸಂಪನ್ಮೂಲ ಅಭಿವೃದ್ಧಿ, ಪ್ರವಾಸೋದ್ಯಮ, ಶಿಕ್ಷಣ ಸೇರಿ ಇತರ ಕ್ಷೇತ್ರಗಳಲ್ಲಿ ಸಹಕಾರ

Related Posts
3rd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ನೌಕಾ ಪಡೆ ಸಮರಾಭ್ಯಾಸ ಮುಕ್ತಾಯ ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆ ಮೂರು ವಾರಗಳ ಕಾಲ ಕೈಗೊಂಡ ಸಮರಾಭ್ಯಾಸ ಕೊನೆಗೊಂಡಿದೆ. ದೇಶದ ಪಶ್ಚಿಮ ಸಮುದ್ರದಲ್ಲಿರುವ ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸುವ ಕುರಿತು ವ್ಯೂಹ ರಚನೆ ಮತ್ತು ಯುದ್ಧದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಾಚರಣೆ ಯೋಜನೆಗಳ ಬಗ್ಗೆ ನೌಕಾ ಪಡೆ ...
READ MORE
“13 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ತರಕಾರಿ ಬೀಜಗಳ ಕಿಟ್‌ ವಿತರಣೆ ಸುದ್ಧಿಯಲ್ಲಿ ಏಕಿದೆ ?ರಾಜ್ಯಾದ್ಯಂತ ರೈತರಿಗೆ ತರಕಾರಿ ಬೆಳೆಯಲು ನಾನಾ ತರಕಾರಿ ಬೀಜಗಳಿಗೆ ಸಹಾಯಧನವಾಗಿ ಪ್ರತಿ ಎಕರೆಗೆ 2,000 ರೂ. ನೀಡುವ 'ತರಕಾರಿ ಬೀಜಗಳ ಕಿಟ್‌ ವಿತರಣೆ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಅಧಿಕೃತ ಚಾಲನೆ ನೀಡಿದೆ. ಪ್ರತಿ ಎಕರೆಯಲ್ಲಿ ತರಕಾರಿ ...
READ MORE
“25 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಾರುಕಟ್ಟೆ ಖಾತರಿ ಯೋಜನೆ ಸುದ್ಧಿಯಲ್ಲಿ ಏಕಿದೆ ?ಕೃಷಿ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಂದ ರೈತರಿಗಾಗುವ ವಂಚನೆ ತಪ್ಪಿಸುವುದಕ್ಕಾಗಿ ಕೆಲವು ಕೃಷಿ ಉತ್ಪನ್ನಗಳಿಗಷ್ಟೇ ಇರುವ ಕನಿಷ್ಠ ಬೆಂಬಲ ಬೆಲೆಯನ್ನು ವಾಣಿಜ್ಯ ಹಾಗೂ ಸಿರಿಧಾನ್ಯ ಬೆಳೆಗಳಿಗೂ ವಿಸ್ತರಿಸಿ ಮಾರುಕಟ್ಟೆ ಖಾತರಿ ಒದಗಿಸುವ ನಿರ್ಧಾರಕ್ಕೆ ಸರ್ಕಾರ  ಬಂದಿದೆ. ಏಕೆ ಈ ಯೋಜನೆ ...
READ MORE
“29th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಎಕ್ಸ್-ರೇ ಮಾಫಿಯಾ ಸುದ್ಧಿಯಲ್ಲಿ ಏಕಿದೆ ?ವ್ಯಕ್ತಿಯ ದೇಹದೊಳಗಿನ ಸಮಸ್ಯೆ ಅನಾವರಣ ಮಾಡುವ ಎಕ್ಸ್ -ರೇ (ಕ್ಷ-ಕಿರಣ) ಕೇಂದ್ರಗಳಿಗೆ ಕಾನೂನಿನ ಅಂಕುಶ ಇರದ್ದರಿಂದ ರಾಜ್ಯದ ಬಹುತೇಕ ಎಕ್ಸ್-ರೇ ಕೇಂದ್ರಗಳು ಹಣಗಳಿಕೆಯ ಅಡ್ಡವಾಗಿ ಮಾರ್ಪಟ್ಟಿವೆ. ಇನ್ನೊಂದೆಡೆ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಎಕ್ಸ್-ರೇ ತೆಗೆಯಲಾಗುತ್ತಿರುವುದು ಆತಂಕ ...
READ MORE
“29 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿಶ್ವ ಕನ್ನಡ ಸಮ್ಮೇಳನ ಸುದ್ಧಿಯಲ್ಲಿ ಏಕಿದೆ ? ನಾವಿಕ ಸಂಸ್ಥೆಯು ಅಮೆರಿಕದ ಓಹಾಯೋ ರಾಜ್ಯದಲ್ಲಿ ಆ. 30 ರಿಂದ ಸೆ. 1ರವರೆಗೆ '5ನೇ ವಿಶ್ವ ಕನ್ನಡ ಸಮ್ಮೇಳನ' ಆಯೋಜಿಸಿದೆ. ಕನ್ನಡದ ಸೊಗಡನ್ನು ಈ ಉತ್ಸವದಲ್ಲಿ ಬಿಂಬಿಸಲಾಗುವುದು.ಕನ್ನಡದ ನಾಟಕಗಳು,ಕವಿ ಗೋಷ್ಠಿಗಳು, ಕನ್ನಡ ಗೀತಗಾಯನ,ಸಂಗೀತ ಸಂಜೆ,ಸ್ವಾತಂತ್ರ್ಯದ ...
READ MORE
“17 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆರೋಗ್ಯ ಇಲಾಖೆಯ ವಾಟ್ಸ್‌ಆ್ಯಪ್‌ ಪ್ಲಾನ್‌ ಸುದ್ಧಿಯಲ್ಲಿ ಏಕಿದೆ ?ಮಗುವಿನ ಜನನಕ್ಕೆ ನೆರವಾಗುವ ಉದ್ದೇಶದಿಂದ 'ಸುರಕ್ಷಿತ ಗರ್ಭದಿಂದ ಸಂತಸದ ಕೈಗಳಿಗೆ' ಎಂಬ ಘೋಷ ವಾಕ್ಯದೊಂದಿಗೆ ವಿನೂತನ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ ಆಯೋಜಿಸಿದೆ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ವೈದ್ಯರು ಗರ್ಭಿಣಿಯರು ...
READ MORE
“25th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ವಿಕ್ರಮಾದಿತ್ಯ ಸುದ್ಧಿಯಲ್ಲಿ ಏಕಿದೆ ?ಭಾರತೀಯ ನೌಕಾಪಡೆಯ ಏಕೈಕ ಯುದ್ಧ ವಿಮಾನ ವಾಹಕ ನೌಕೆ ಐಎನ್​ಎಸ್ ವಿಕ್ರಮಾದಿತ್ಯ ಎರಡನೇ ಬಾರಿ ರಿಪೇರಿ ಕಾರ್ಯ ಮುಗಿಸಿ ವಾರದೊಳಗೆ ಕಾರವಾರ ಬಂದರಿಗೆ ವಾಪಸಾಗುತ್ತಿದೆ. ಕೊಚ್ಚಿ ಶಿಪ್​ಯಾರ್ಡ್​ನಿಂದ ನೌಕೆ ಹೊರಟಿದ್ದು, ಅ.30ರೊಳಗೆ ತನ್ನ ಕೇಂದ್ರ ಸ್ಥಾನವಾದ ಕಾರವಾರ ಕದಂಬ ನೌಕಾನೆಲೆ ...
READ MORE
“15 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಂಪ್ರದಾಯಿಕ ಕುಶಲತೆ ಸಂರಕ್ಷಣೆಗೆ ಬದ್ಧ ಸುದ್ಧಿಯಲ್ಲಿ ಏಕಿದೆ ? ರಾಜ್ಯದ ಸಾಂಪ್ರದಾಯಿಕ ಕುಶಲತೆಯನ್ನು ಸಂರಕ್ಷಿಸಲು ಭೌಗೋಳಿಕ ಗುರುತುಗಳ ನೀತಿ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಎಫ್‌ಕೆಸಿಸಿ ಆಶ್ರಯದಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಮ್ಮಿಕೊಂಡಿದದ 'ಕರಡು ಭೌಗೋಳಿಕ ಗುರುತುಗಳ ನೀತಿ' ಕುರಿತಾದ ಪಾಲುದಾರರ ಸಮಾವೇಶವನ್ನು ಉದ್ಘಾಟಿಸಿದರು. 2018-19ನೇ ಸಾಲಿನ ...
READ MORE
“08 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೆಸಿ ವ್ಯಾಲಿ ಯೋಜನೆ ಸುದ್ಧಿಯಲ್ಲಿ ಏಕಿದೆ ?ಬರಪೀಡಿತ ಜಿಲ್ಲೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಬೆಂಗಳೂರಿನಿಂದ ಕಲುಷಿತ ನೀರನ್ನು ಶುದ್ದೀಕರಿಸಿ ಒದಗಿಸುವ ಕೆಸಿ ವ್ಯಾಲಿ ಯೋಜನೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಪ್ರಕರಣ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ಮುಂದುವರಿಸಬೇಕು. ಹೈಕೋರ್ಟ್ ವಿಚಾರಣೆ ಮುಗಿಯುವವರೆಗೆ ...
READ MORE
“31st ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಎನ್​ಪಿಎಸ್ ಶೀಘ್ರ ರದ್ದು ಸುದ್ಧಿಯಲ್ಲಿ ಏಕಿದೆ ?ನೂತನ ಪಿಂಚಣಿ ಯೋಜನೆ (ಎನ್​ಪಿಎಸ್) ರದ್ದು ಮಾಡಬೇಕೆಂಬ ನೌಕರರ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ಈ ಸಂಬಂಧ ಶೀಘ್ರ ಕಡತ ಮಂಡಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ. ಹಿನ್ನಲೆ ಸರ್ಕಾರದ ವಿವಿಧ ಇಲಾಖೆಗಳಿಗೆ, ...
READ MORE
3rd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
“13 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“25 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“29th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“29 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“17 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“25th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“15 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“08 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“31st ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *