“19th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

110 ಲಕ್ಷ ಟನ್ದಾಟಿದ ಆಹಾರ ಧಾನ್ಯ

 • ಸತತ ಬರಗಾಲದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ಕಳೆದ ಮುಂಗಾರು ಅವಧಿಯಲ್ಲಿ ಬಿದ್ದ ಹೆಚ್ಚುವರಿ ಮಳೆ ಬಂಪರ್‌ ಇಳುವರಿಗೆ ಕಾರಣವಾಗಿದ್ದು, 2017-18ರಲ್ಲಿ 110 ಲಕ್ಷ ಟನ್‌ ಆಹಾರ ಧಾನ್ಯಗಳ ಉತ್ಪಾದನೆಯಾಗಿದೆ.
 • ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮು ಸೇರಿ ಮೂರು ಅವಧಿಗಳಲ್ಲಿ ಬೆಳೆಯಲಾದ ಬೆಳೆ ಉತ್ಪನ್ನ ಆಧರಿಸಿ ಆಹಾರ ಉತ್ಪಾದನೆಯ ಮಾಹಿತಿ ಕಲೆ ಹಾಕಲಾಗಿದೆ. ಕಳೆದ ಮಾ.31ಕ್ಕೆ ಆರ್ಥಿಕ ವರ್ಷ ಕೊನೆಗೊಂಡರೂ ಬೆಳೆ ಇಳುವರಿ ಲೆಕ್ಕಾಚಾರ ಏಪ್ರಿಲ್‌ ತಿಂಗಳಲ್ಲೇ ನಡೆಯುವುದು ವಾಡಿಕೆ. ಕೃಷಿ ಇಲಾಖೆಯ ಅಂಕಿ-ಅಂಶಗಳನ್ನು ಆಧರಿಸಿ ಯೋಜನೆ ಇಲಾಖೆ ಆಹಾರ ಉತ್ಪಾದನೆಯ ನಿಖರ ಮಾಹಿತಿಯನ್ನು ಲೆಕ್ಕಾಚಾರ ಮಾಡಿದೆ.
 • ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಕೃಷಿಗೆ ಲಭ್ಯವಿದ್ದ ಜಮೀನಿನ ಪೈಕಿ 112 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಮುಂಗಾರು ಅವಧಿಯಲ್ಲೇ ಶೇ.70ರಷ್ಟು ಬಿತ್ತನೆ ಪೂರ್ಣಗೊಂಡು ರೈತರಲ್ಲಿ ಸಂತಸ ಮೂಡಿತ್ತು.
 • ಆ ಸಮಯದಲ್ಲಿ ವಾಡಿಕೆಗಿಂತ ಬಿದ್ದ ಅಧಿಕ ಮಳೆಯಿಂದ ಏಕದಳ ಹಾಗೂ ದ್ವಿದಳ ಧಾನ್ಯ ಬೆಳೆಗಳಲ್ಲಿ ಇಳುವರಿ ಹೆಚ್ಚಾಗಿದೆ. ಇದರಿಂದ ಕೃಷಿ ಇಲಾಖೆ ಅಂದಾಜಿಸಿದ್ದಂತೆ 110 ಲಕ್ಷ ಟನ್‌ ಆಹಾರ ಉತ್ಪಾದನೆ ಸಾಧ್ಯವಾಗಿದೆ.

ಚಾರ್ಧಾಮ್ ಯಾತ್ರೆ ಆರಂಭ

 • ಹಿಂದುಗಳ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಗಂಗೋತ್ರಿ ಮತ್ತು ಯಮುನೋತ್ರಿಯಲ್ಲಿ ದೇವಾಲಯಗಳ ಬಾಗಿಲು ತೆರೆಯುವ ಮೂಲಕ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಈ ಮೂಲಕ ಪ್ರಸಿದ್ಧ ಚಾರ್‌ಧಾಮ್ ಯಾತ್ರೆಗೆ ಅಕ್ಷಯ ತೃತೀಯ ಹಬ್ಬದ ದಿನ ಚಾಲನೆ ಸಿಕ್ಕಿದೆ.
 • ಚಳಿಗಾಲದ ಪ್ರಯುಕ್ತ ಸುಮಾರು 6 ತಿಂಗಳ ಕಾಲ ಮುಚ್ಚಲ್ಪಟ್ಟಿದ್ದ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ ಬಾಗಿಲನ್ನು ತೆರೆಯಲಾಯಿತು. ಯಮುನೋತ್ರಿ ದೇವಸ್ಥಾನ ಮಂಡಳಿ ಮುಖ್ಯಸ್ಥ ಕೇದಾರ್ ರಾವತ್ ಮತ್ತು ಗಂಗೋತ್ರಿ ದೇವಸ್ಥಾನ ಮಂಡಳಿ ಮುಖ್ಯಸ್ಥ ಗೋಪಾಲ್ ರಾವತ್ ಧಾರ್ಮಿಕ ಸಮಾರಂಭದಲ್ಲಿ ಉಪಸ್ಥಿತರಿದ್ದರು.
 • ಸಂಪ್ರದಾಯದಂತೆ ಮಂಗಳವಾರವೇ ಮುಖಾ ಗ್ರಾಮದಿಂದ ಗಂಗಾ ಮಾತೆಯ ಪಲ್ಲಕ್ಕಿಯನ್ನು ಭೈರವ್ ಘಾಟಿ ಮೂಲಕ ಗಂಗೋತ್ರಿಗೆ ತರಲಾಗಿತ್ತು. ಇನ್ನೊಂದೆಡೆ ಖರ್ಸಾಲಿಯಿಂದ ಹೊರಟ ಯಮುನಾ ಮಾತೆ ಪಲ್ಲಕ್ಕಿಯನ್ನು ಯಮುನೋತ್ರಿಯಲ್ಲಿ ಭಕ್ತರು ಆರತಿ ಮಾಡಿ ಬರಮಾಡಿಕೊಂಡರು.
 • ಚಾರ್‌ಧಾಮ್ ಯಾತ್ರೆಯ ಮತ್ತೆರಡು ಕ್ಷೇತ್ರಗಳಾದ ಕೇದಾರನಾಥ ಮತ್ತು ಬದ್ರಿನಾಥ ಮಂದಿರಗಳ ಬಾಗಿಲನ್ನು ಕ್ರಮವಾಗಿ ಏಪ್ರಿಲ್ 29 ಮತ್ತು 30ರಂದು ತೆರೆದು ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.

ಐಟಿ ಇಲಾಖೆಯಲ್ಲಿ ಆಪರೇಷನ್​ ಡ್ರೆಸ್‌ ಕೋಡ್ ಜಾರಿ

 • ಆಪರೇಷನ್ ಡ್ರೆಸ್‌ ಕೋಡ್ ಹೆಸರಿನಲ್ಲಿ ಆದಾಯ ತೆರಿಗೆ ಇಲಾಖೆ ವಸ್ತ್ರ ಸಂಹಿತೆಯನ್ನು ಬುಧವಾರದಿಂದಲೇ ಜಾರಿ ಮಾಡಿದ್ದು, ಸಭ್ಯ ಉಡುಪು ಧರಿಸಿ ಕಚೇರಿಗೆ ಬರುವಂತೆ ನೌಕರರಿಗೆ ಸೂಚಿಸಿದೆ.
 • ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸದ ಸ್ಥಳದಲ್ಲಿ ಸ್ವಚ್ಛ ಮತ್ತು ಔಪಚಾರಿಕ ಉಡುಗೆಗಳನ್ನು ತೊಡಬೇಕು ಎಂದು ಪ್ರಧಾನ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
 • ಬಹಳಷ್ಟು ಮಂದಿ, ಅತಿ ಮುಖ್ಯವಾಗಿ ಯುವ ಸಿಬ್ಬಂದಿ ಕಚೇರಿಗಳಿಗೆ ಮನೆಯಲ್ಲಿ ಧರಿಸುವ ಸಾಧಾರಣ ರೀತಿಯ ಉಡುಪು ಧರಿಸಿ ಬರುತ್ತಿರುವುದು ಗಮನಕ್ಕೆ ಬಂದಿದೆ. ಇಂಥ ಬಟ್ಟೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
 • ಒಂದು ವೇಳೆ ಆದೇಶ ಪಾಲಿಸದಿದ್ದಲ್ಲಿ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಮತ್ತೆ ಮನೆಗೆ ಕಳುಹಿಸಿ ಸಭ್ಯ ಉಡುಪಗಳನ್ನು ಧರಿಸಿ ಕಚೇರಿಗೆ ಹಿಂದಿರುಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ

~~~***ದಿನಕ್ಕೊಂದು ಯೋಜನೆ***~~~

ಪೋಷಣೆ ಅಭಿಯಾನ

 • ಭಾರತದ ಪೌಷ್ಟಿಕಾಂಶ ಸವಾಲುಗಳ ಬಗ್ಗೆ ರಾಷ್ಟ್ರೀಯ ಮಂಡಳಿಯ ಮೊದಲ ಸಭೆ ನವ ದೆಹಲಿಯಲ್ಲಿ ನಡೆಯಿತು. ಎನ್ಐಟಿಐ ಆಯೋಗ್ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್, ಸಿಇಒ ಅಮಿತಾಭ್ ಕಾಂತ್ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಸಚಿವಾಲಯಗಳ ಪ್ರತಿನಿಧಿಗಳ ಭಾಗವಹಿಸಿದ್ದರು
 • ಪೋಷಣ್  ಅಭಿಯಾನವನ್ನು   ಮಾರ್ಚ್ 2018 ರಲ್ಲಿ ರಾಜಸ್ಥಾನದ ಜುನ್ಜುನುನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು .
 • ಇದು ಗರ್ಭಿಣಿ ಮಹಿಳೆಯರು, ತಾಯಂದಿರು ಮತ್ತು ಮಕ್ಕಳಿಗೆ ಸಮಗ್ರ ಬೆಳವಣಿಗೆ ಮತ್ತು ಸಾಕಷ್ಟು ಪೋಷಣೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ.
 • ವಿವಿಧ ಪೌಷ್ಠಿಕಾಂಶ ಸಂಬಂಧಿತ ಯೋಜನೆಗಳ ಒಗ್ಗೂಡಿಸುವಿಕೆಯನ್ನು ಖಾತ್ರಿಪಡಿಸುವ ಮೂಲಕ ಪೋಷಣೆ ಮತ್ತು ಇತರ ಸಂಬಂಧಿತ ಸಮಸ್ಯೆಗಳ ಮಟ್ಟವನ್ನು ಕಡಿಮೆ ಮಾಡಲು ಇದು ಗುರಿಯನ್ನು ಹೊಂದಿದೆ.
 • ಇದು ಕುಂಠಿತಗೊಳಿಸುವಿಕೆ, ಕಡಿಮೆ ಪೌಷ್ಟಿಕತೆ, ರಕ್ತಹೀನತೆ (ಕಿರಿಯ ಮಕ್ಕಳಲ್ಲಿ, ಹೆಂಗಸರು ಮತ್ತು ಹದಿಹರೆಯದ ಬಾಲಕಿಯರಲ್ಲಿ) ಮತ್ತು ಕಡಿಮೆ ಜನನ ಪ್ರಮಾಣವನ್ನು ಗುರಿಯಾಗಿಸುತ್ತದೆ.
 • ಇದು ಅಂತಹ ಎಲ್ಲಾ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಪರಿಶೀಲಿಸುತ್ತದೆ ಮತ್ತು ಲಭ್ಯವಾಗುವಲ್ಲೆಲ್ಲ ಲೈನ್ ಸಚಿವಾಲಯಗಳ ಅಸ್ತಿತ್ವದಲ್ಲಿರುವ ರಚನಾತ್ಮಕ ವ್ಯವಸ್ಥೆಗಳನ್ನು ಬಳಸಿಕೊಳ್ಳುತ್ತದೆ.

 

1. ಕರ್ನಾಟಕ ರಾಜ್ಯದಲ್ಲಿ ಯಾವ ಅವಧಿಯಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತದೆ ?
A. ಮುಂಗಾರು
B. ಹಿಂಗಾರು
C. ಬೇಸಿಗೆ ಹಂಗಾಮು
D. ಮೇಲಿನ ಎಲ್ಲವು

2. ಚಾರ್ ಧಾಮ್ ಯಾತ್ರೆ ಯಾವೆಲ್ಲ ಸ್ಥಳಗಳನ್ನು ಒಳಗೊಂಡಿದೆ ?
A. ಗಂಗೋತ್ರಿ ,ಯಮುನೋತ್ರಿ
B. ಕೇದಾರನಾಥ್ ,ಬದ್ರಿನಾಥ್
C. 1 ಮತ್ತು 2
D. ಯಾವುದು ಅಲ್ಲ

3. ಪೋಷಣಾ ಅಭಿಯಾನದ ಅಡಿಯಲ್ಲಿ ರಾಷ್ಟ್ರೀಯ ಮಂಡಳಿಯ ಮೊದಲ ಸಭೆ ಎಲ್ಲಿ ನಡೆಯಿತು ?
A. ಬೆಂಗಳೂರು
B. ನವ ದೆಹಲಿ
C. ಕೊಲ್ಕತ್ತಾ
D. ಸೂರತ್

4. “ಭಾರತದಲ್ಲಿ ಓದಿ ” ಕಾರ್ಯಕ್ರಮದ ಉದ್ದೇಶಗಳೇನು ?
1. ವಿದೇಶಿ ವಿದ್ಯಾರ್ಥಿಗಳು ಓದಿಗಾಗಿ ಭಾರತವನ್ನು ಆಯ್ಕೆಮಾಡಿಕೊಳ್ಳುವಂತೆ ಪ್ರೋತ್ಸಹಿಸುವುದು .
2. ಭಾರತದ ಮಾರುಕಟ್ಟೆಯಲ್ಲಿ ಜಾಗತಿಕ ಶಿಕ್ಷಣ ರಫ್ಟನ್ನು ದುಪಟ್ಟುಗೊಳಿಸುವುದು
3. ಜಾಗತೀಕಮಟ್ಟದಲ್ಲಿ ಭಾರತದ ಶೈಕ್ಷಣಿಕ ಸಂಸ್ಥೆಗಳ ರಾಂಕನ್ನು ಹೆಚ್ಚಿಸುವುದು
A. 1 ಮತ್ತು 2
B. 1 ಮತ್ತು 3
C. 2 ಮತ್ತು 3
D. 1,2 ಮತ್ತು 3

5. ಚಂದ್ರನ ಮೇಲ್ಮೈ ಅಂಗಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ದೇಶಗಳು ಯಾವುವು ?
A. ಅಮೇರಿಕಾ
B. ಚೀನಾ
C. ರಷ್ಯಾ
D. ಮೇಲಿನ ಎಲ್ಲವು

6. ರಕ್ಷಣಾ ಯೋಜನಾ ಸಮಿತಿಯು ಯಾರನ್ನು ಒಳಗೊಂಡಿದೆ ?
1. ಸಿಬ್ಬಂಧಿ ಸಮಿತಿಯ ಮುಖ್ಯಸ್ಥರು
2.ರಕ್ಷಣಾ ಕಾರ್ಯದರ್ಶಿ
3.ವಿದೇಶಿ ಕಾರ್ಯದರ್ಶಿ
4.ಹಣಕಾಸು ಕಾರ್ಯದರ್ಶಿ
A. 1,2 ,4
B.1,2,3
C. 2,3,4
D.1,2,3,4

7. IMF ನ ವಿಶ್ವ ಆರ್ಥಿಕ ಮೇಲ್ನೋಟ ವರದಿಯ ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆಯೆಷ್ಟು ?
A. 7.8%
B. 7.5%
C.7.4%
D.7.3%

8. 2018 ರ ಪ್ರವಾಸಿ ದ್ವೀಪಗಳ ಹಬ್ಬವನ್ನು ಯಾವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಾರಂಭಿಸಲಾಯಿತು ?
A. ಗುಜರಾತ್
B. ದಮನ್ ಮತ್ತು ದಿಯೂ
C. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
D. ಲಕ್ಷದ್ವೀಪ

9. ತಿಲಾಯ ಆಣೆಕಟ್ಟು ಯಾವ ರಾಜ್ಯದಲ್ಲಿದೆ ?
A. ಪಂಜಾಬ್
B. ಜಮ್ಮು ಕಾಶ್ಮೀರ
C. ಜಾರ್ಖಂಡ್
D. ಹಿಮಾಚಲ್ ಪ್ರದೇಶ

10. ಸೌದಿ ಅರೇಬಿಯಾ ಮೂಲದ ಇಸ್ಲಾಮಿಕ್ ಡೆವಲಪ್‌ಮೆಂಟ್‌ ಬ್ಯಾಂಕ್ ಭಾರತದ ಯಾವ ರಾಜ್ಯದಲ್ಲಿ ಮೊದಲ ಶಾಖೆಯನ್ನು ತೆರೆಯಲಿದೆ?
a) ಕರ್ನಾಟಕ
b) ಗುಜರಾತ್
c) ಉತ್ತರ ಪ್ರದೇಶ
d) ಕೇರಳ

ಉತ್ತರಗಳು:1.D 2.C 3.B 4.D 5.D 6.D 7.A 8.C 9.C 10.B 

Related Posts
Karnataka Current Affairs – KAS / KPSC Exams 30th April 2017
Karnataka: Drought hits production With major mango producing districts stricken by drought, domestic mango production, and subsequently the export of the fruit, is seeing a huge hit this year. The production of mangoes ...
READ MORE
Karnataka Current Affairs – KAS/KPSC Exams- 22nd Nov 2017
Bengaluru will join Delhi in rolling out BS-6 emission norms A steady rise in air pollution has prompted Karnataka State Pollution Control Board and other stakeholders to implement Bharat Stage-6 emission ...
READ MORE
Gavel and scales
Towards restorative criminal justice Purpose for which crminal justice was set up : securing life and property. Issues with the way criminal justice is designed and administered today No deterrance- because of the ...
READ MORE
Karnataka Current Affairs – KAS/KPSC Exams – 27th August 2018
Sorghum project being taken up in ARS Hagari The 112-year-old Agricultural Research Station (ARS) in Hagari near Ballari added one more feather to its cap by taking up the All India ...
READ MORE
National Current Affairs – UPSC/KAS Exams- 14th January 2019
Technology centres for MSMEs Topic: Indian Economy IN NEWS: The Ministry of Micro, Small and Medium Enterprises (MSME) will develop 20 technology centres, along with extension centres across the country in another ...
READ MORE
National Current Affairs – UPSC/KAS Exams- 8th October 2018
ISRO & ROSCOSMOS to work together for first Indian manned mission Topic: Awareness in the fields of IT, Space, Computers, robotics, nano-technology, bio-technology IN NEWS: At end of delegation level talks between ...
READ MORE
Karnataka Current Affairs – KAS/KPSC Exams – 5th Nov’17
Cauvery tribunal's term extended by six months The Centre has given a six-month extension to the Cauvery Water Disputes Tribunal (CWDT), which is looking into the dispute between Karnataka and Tamil ...
READ MORE
2nd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ಸಮುದ್ರದಲ್ಲಿ ಪತನ ಟಿಯಾಂಗಾಂಗ್ -1 ಹೆಸರಿನ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ಪೆಸಿಫಿಕ್​ ಸಾಗರದಲ್ಲಿ ಪತನಗೊಂಡಿದೆ ಎಂದು ಚೀನಾದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ದೃಢಪಡಿಸಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಾತ್ವಾಕಾಂಕ್ಷೆ ಹೊಂದಿರುವ ಚೀನಾ, ಬಾಹ್ಯಾಕಾಶದ ಪ್ರಯೋಗಗಳಿಗೆ ಬಳಸಿಕೊಳ್ಳಲು 2011ರಲ್ಲಿ ಟಿಯಾಂಗಾಂಗ್​-1 ಅನ್ನು ಕಕ್ಷೆಗೆ ...
READ MORE
Karnataka Current Affairs – KAS/KPSC Exams – 3rd Dec 2017
After canteens, state govt launches Indira Clinic After the launch of Indira Canteens in the city, the government has launched the Indira Transit Clinic to cater to the medical needs of ...
READ MORE
National Current Affairs – UPSC/KAS Exams- 22nd November 2018
Manipur Sangai Festival Topic: Art and Culture IN NEWS: The annual Sangai Festival was celebrated in northeastern state of Manipur. It is grandest festival of state named after state animal, Sangai, ...
READ MORE
Karnataka Current Affairs – KAS / KPSC Exams
Karnataka Current Affairs – KAS/KPSC Exams- 22nd Nov
Towards restorative criminal justice
Karnataka Current Affairs – KAS/KPSC Exams – 27th
National Current Affairs – UPSC/KAS Exams- 14th January
National Current Affairs – UPSC/KAS Exams- 8th October
Karnataka Current Affairs – KAS/KPSC Exams – 5th
2nd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ
Karnataka Current Affairs – KAS/KPSC Exams – 3rd
National Current Affairs – UPSC/KAS Exams- 22nd November

Leave a Reply

Your email address will not be published. Required fields are marked *