1st ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಪೌರತ್ವ ಪಡೆದ ವಿಶ್ವದ ಮೊದಲ ರೋಬೊ ಮನದಾಳ

 • ಪೌರತ್ವ ಪಡೆದಿರುವ ವಿಶ್ವದ ಮೊದಲ ರೋಬೊ ಸೋಫಿಯಾಗೆ ನಟ ಶಾರುಕ್‌ ಖಾನ್‌ ಎಂದರೆ ಬಹಳ ಇಷ್ಟವಂತೆ.
 • ಇಲ್ಲಿ ನಡೆಯುತ್ತಿರುವ ವಿಶ್ವ ಮಾಹಿತಿ ತಂತ್ರಜ್ಞಾನ ಸಮ್ಮೇಳನದಲ್ಲಿ ನಡೆದ ಸಂವಾದದ ವೇಳೆ ತಾನು ಶಾರುಕ್‌ನ ಬಹು ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಳು.
 • ಹಾಂಕಾಂಗ್‌ನಲ್ಲಿ ರೂಪಿಸಲಾದ ಈ ರೋಬೋ ಸೌದಿ ಅರೇಬಿಯ ಪ್ರಜೆ.
 • ಕೃತಕ ಬುದ್ಧಿಮತ್ತೆ ಹೊಂದಿರುವ ಸೋಫಿಯಾ ಮಾತನಾಡುತ್ತಾ, ‘ಎಲ್ಲರನ್ನೂ ಪ್ರೀತಿಸುವ ಜಗತ್ತು ನಿರ್ಮಾಣ ಆಗಬೇಕು ಎನ್ನುವುದು ನನ್ನ ಮಹದಾಸೆ. ವಿಶ್ವದ ಅನೇಕ ದೇಶಗಳನ್ನು ನಾನು ಸುತ್ತಿದ್ದೇನೆ. ಎಲ್ಲಕ್ಕಿಂತ ನನಗೆ ತುಂಬಾ ಇಷ್ಟವಾದದ್ದು ಹಾಂಕಾಂಗ್‌. ಏಕೆಂದರೆ ನಾನು ಅಲ್ಲಿಯೇ ಹುಟ್ಟಿದ್ದೇನೆ. ಅಲ್ಲಿ ನನ್ನ ರೋಬೋಟಿಕ್‌ ಕುಟುಂಬ ಇದೆ’ ಎಂದಳು.
 • ಭಾರತದ ಜನಸಂಖ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಆಕೆ, ’ಈ ಬಗ್ಗೆ ನನ್ನ ಭಾವನೆಯನ್ನು ಅಭಿವ್ಯಕ್ತಗೊಳಿಸಲು ದೈಹಿಕ ಭಾವನೆಗಳನ್ನು ಹೊಂದುವ ಅವಶ್ಯಕತೆ ಇದೆ. ಆದರೆ ನಾನು ನನ್ನ ರೋಬೋಟಿಕ್‌ ಶಕ್ತಿಯನ್ನು ಬಳಸಿ ಇಲ್ಲಿಯ ಮಹಿಳೆಯರ ಹಕ್ಕುಗಳಿಗಾಗಿ ಶ್ರಮಿಸುತ್ತೇನೆ’ ಎಂದು ಉತ್ತರಿಸಿದಳು.

ಕಾಮನ್‌ವೆಲ್ತ್‌ ಯುವ ಪ್ರಶಸ್ತಿ ಅಂತಿಮ ಹಂತಕ್ಕೆ ಇಬ್ಬರು ಭಾರತೀಯರ ಆಯ್ಕೆ

 • ಲಿಂಗ ಸಮಾನತೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇಬ್ಬರು ಭಾರತೀಯರು ಕಾಮನ್‌ವೆಲ್ತ್‌ ಯುವ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಅಂತಿಮ ಹಂತದಲ್ಲಿ 20 ಮಂದಿ ಇದ್ದಾರೆ.
 • ಸಮುದಾಯದಲ್ಲಿ ಹೊಸ ರೀತಿಯ ಯೋಜನೆಗಳನ್ನು ಕಾರ್ಯಗತಗೊಳಿಸಿ, ಮಹತ್ವದ ಬದಲಾವಣೆಗೆ ಕಾರಣರಾದ ಯುವಜನತೆಯನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಕಾಮನ್‌ವೆಲ್ತ್ ಯುವ ಕಾರ್ಯಕ್ರಮದ 400 ಅಭ್ಯರ್ಥಿಗಳ ಪೈಕಿ ಇವರು ಆಯ್ಕೆಯಾಗಿದ್ದಾರೆ.

ದೆಹಲಿಯ ಹೈಯ್ಯ ಸಂಘಟನೆಯ ಹಿರಿಯ ಕಾರ್ಯತಂತ್ರ ತಜ್ಞೆ ಮೃಣಾಲಿನಿ ದಯಾಳ್ ಹಾಗೂ ಇವನ್ ಕಾರ್ಗೊ ಸಂಸ್ಥೆಯ ಸ್ಥಾಪಕ ಯೋಗೇಶ್ ಕುಮಾರ್ ಅವರು ಈ ಪಟ್ಟಿಯಲ್ಲಿದ್ದಾರೆ

ರುಸ್ತುಂ–2’ ಪರೀಕ್ಷಾರ್ಥ ಉಡಾವಣೆ ಯಶಸ್ವಿ

 • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಚಳ್ಳಕೆರೆಯಲ್ಲಿ ನಡೆಸಿದ ‘ರುಸ್ತುಂ–2’ ಡ್ರೋನ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.
 • ಇದು ಭೂಮಿಯಿಂದ ಮಧ್ಯಮ ಎತ್ತರಕ್ಕೆ ಹಾರುವ, ದೀರ್ಘ ಬಾಳಿಕೆಯ ಸಾಮರ್ಥ್ಯ ಹೊಂದಿರುವ ಮಾನವರಹಿತ ವೈಮಾನಿಕ ವಾಹನ (ಯುಎವಿ).
 • ಈ ಯುಎವಿ ಯೋಜನೆಯ ಮೊತ್ತ ₹1,500 ಕೋಟಿಯಾಗಿದ್ದು, ಸೇನೆ, ವಾಯುಪ

  ಡೆ ಮತ್ತು ನೌಕಾಪಡೆಯ ಅಗತ್ಯಗಳಿಗೆ ಅನುಗುಣವಾಗಿ ಇದನ್ನು ಕೈಗೆತ್ತಿ ಕೊಳ್ಳಲಾಗಿದೆ.

 • ಅಮೆರಿಕ ಸೇನೆಯಲ್ಲಿರುವ ಕಣ್ಗಾವಲು ಮತ್ತು ಶತ್ರು ನೆಲೆಗಳನ್ನು ಪತ್ತೆ ಹಚ್ಚುವ ಡ್ರೋನ್‌ಗಳ ಕಾರ್ಯಾಚರಣೆ ಅಧ್ಯಯನ ನಡೆಸಿ ‘ರುಸ್ತುಂ–2’ ಅಭಿವೃದ್ಧಿಪಡಿಸಲಾಗಿದೆ. ಇದು ಸತತ 24 ಗಂಟೆ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನೂ ಹೊಂದಿದೆ.
 • ‘ಇದು ಬಳಸಲು ಅನುಕೂಲ ಆಗುವ ವಿನ್ಯಾಸ, ಹೆಚ್ಚು ಶಕ್ತಿಶಾಲಿ ಎಂಜಿನ್ ಹೊಂದಿರುವ ಮೊದಲ ಡ್ರೋನ್‌’ ಎಂದು ಡಿಆರ್‌ಡಿಒ ಪ್ರಕಟಣೆ ತಿಳಿಸಿದೆ.

ಏಕಾಂಗಿಯಾಗಿ ಯುದ್ಧವಿಮಾನ ಚಲಾಯಿಸಿದ ಮೊದಲ ಮಹಿಳೆ

 • ಮಿಗ್–21 ಯುದ್ಧವಿಮಾನವನ್ನು ಏಕಾಂಗಿಯಾಗಿ ಚಲಾಯಿಸಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಅವನಿ ಚತುರ್ವೇದಿ ಪಾತ್ರರಾಗಿದ್ದಾರೆ.
 • ಅವನಿ ಅವರು ಗುಜರಾತ್‌ನ ಜಾಮ್‌ನಗರ ತರಬೇತಿ ಕೇಂದ್ರದಲ್ಲಿ ಸುಮಾರು 30 ನಿಮಿಷ ಯುದ್ಧವಿಮಾನ ಚಲಾಯಿಸಿದರು ಎಂದು ವಾಯುಪಡೆ ತಿಳಿಸಿದೆ. ಅವನಿ ಮಧ್ಯಪ್ರದೇಶದ ರೇವ ಜಿಲ್ಲೆಯವರು.

ದಾಂಡೇಲಿಯಲ್ಲಿ ದೇಶದ ಮೊದಲ ‘ಕೆನೋಪಿ ವಾಕ್’

 • ಮರದಲ್ಲಿ ನಿರ್ಮಿಸಲಾಗಿರುವ ದೇಶದ ಮೊದಲ ಕೆನೋಪಿ ವಾಕ್’, ದಾಂಡೇಲಿ ಸಮೀಪದ ಕುವೇಶಿಯಲ್ಲಿ ಲೋಕಾರ್ಪಣೆಯಾಗಲಿದೆ.
 • ಈ ರೀತಿಯ ನಡಿಗೆಗೆ ಪ್ರಸಿದ್ಧವಾಗಿರುವ ಮಲೇಷ್ಯಾಕ್ಕೆ ತೆರಳಿ ಅಧ್ಯಯನ ಮಾಡಿದ ಮೈಸೂರಿನ ಭರತ್ ಮತ್ತು ಅಲೀಂ ಎಂಬುವವರು, ಒಂದೂವರೆ ವರ್ಷಗಳ ಅವಧಿಯಲ್ಲಿ ‌ಇದನ್ನು ನಿರ್ಮಿಸಿದ್ದಾರೆ. ಸ್ಥಳೀಯವಾಗಿ ದೊರೆಯುವ ಸಾಮಗ್ರಿಯನ್ನೇ ಬಳಸಿರುವುದು ವಿಶೇಷ.
 • ರಾಜ್ಯ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳ ಸಹಯೋಗದಲ್ಲಿ ಇದನ್ನು ನಿರ್ಮಿಸಲಾಗಿದೆ.

ಕೆನೋಪಿ ವಾಕ್ ಎಂದರೇನು?

 • ಮೊದಲಿಗೆ ಸಮಾನ ಎತ್ತರದ, ಗಟ್ಟಿಮುಟ್ಟಾದ ಮರಗಳನ್ನು ಗುರುತಿಸಿ ಅವುಗಳಿಗೆ ಅಲ್ಯೂಮಿನಿಯಂ ಚೌಕಟ್ಟು ಜೋಡಿಸಲಾಗುತ್ತದೆ.
 • ನಂತರ ಅವುಗಳ ನಡುವೆ ತೂಗುಸೇತುವೆ ಮಾದರಿಯಲ್ಲಿ ದಾರಿ ನಿರ್ಮಾಣ ಮಾಡಲಾಗುತ್ತದೆ. ಇದರ ಮೇಲೆ ನಡೆದುಕೊಂಡು ಹೋಗುತ್ತಾ ಕಾಡಿನ ಸೊಬಗು ಸವಿಯುವುದೇ ‘ಕೆನೋಪಿ ವಾಕ್’.

ರಾಜ್ಯಶಾಸ್ತ್ರ ತ್ರಿಭಾಷಾ ಪದಕೋಶ ಸಿದ್ಧ

 • ಭಾರತದ ಮೊಟ್ಟಮೊದಲ ರಾಜ್ಯಶಾಸ್ತ್ರ ತ್ರಿಭಾಷಾ ಪದಕೋಶಮೈಸೂರು ವಿಶ್ವವಿದ್ಯಾಲಯದಲ್ಲಿ ಸಿದ್ಧವಾಗಿದೆ.
 • ರಾಜ್ಯಶಾಸ್ತ್ರದ 4,500 ಪದಗಳಿಗೆ ಇಂಗ್ಲಿಷ್‌–ಹಿಂದಿ–ಕನ್ನಡದಲ್ಲಿ ಅರ್ಥವಿವರಣೆ ಇರುವುದು ಈ ನಿಘಂಟಿನ ವಿಶೇಷ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಸಹಯೋಗದಲ್ಲಿ ಮೈಸೂರು ವಿ.ವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗವು ಹೊರತರುತ್ತಿದೆ.

ಪಿಲಿಕುಳದಲ್ಲಿ ದೇಶದ ಪ್ರಥಮ 3ಡಿ ತಾರಾಲಯ

 • ದೇಶದಲ್ಲೇ ಪ್ರಥಮ ಹಾಗೂ ಜಗತ್ತಿನ 21ನೇ 3 ಡಿ ತಾರಾಲಯ ಪಿಲಿಕುಳದಲ್ಲಿ ಸಜ್ಜಾಗಿದ್ದು, ಪ್ರಥಮ ಪ್ರದರ್ಶನ ನಡೆಯಿತು.
 • ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ₹ 34 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ವಾಮಿ ವಿವೇಕಾನಂದ ಹೆಸರಿನ ಈ ತಾರಾಲಯ ಮಾರ್ಚ್‌ 1ರಂದು ಉದ್ಘಾಟನೆಗೊಳ್ಳಲಿದೆ.
 • ‘18 ಮೀಟರ್ ವ್ಯಾಸ ಹೊಂದಿರುವ ಆಧುನಿಕ ತಂತ್ರಜ್ಞಾನದ ನ್ಯಾನೋ ಸೀಮ್ ಡೋಮ್‌ ಅನ್ನು ಬಳಸಿ ನಿರ್ಮಿಸಲಾಗಿದೆ. 15 ಡಿಗ್ರಿ ಕೋನದಲ್ಲಿ ಇರಿಸಲಾಗಿರುವ ಈ ಗುಮ್ಮಟದೊಳಗೆ ಅಪ್ಟೊ ಮೆಕ್ಯಾನಿಕಲ್ ಮತ್ತು 8ಕೆ ಡಿಜಿಟಲ್ ಸಿಸ್ಟಂಗಳನ್ನು ಬಳಸಲಾಗಿದೆ’
 • 3ಡಿ ಕನ್ನಡಕ ಬಳಸಿ ನೋಡುವ ಈ ತಾರಾಲಯದಲ್ಲಿ 25 ನಿಮಿಷಗಳ ಒಂದು ಪ್ರದರ್ಶನ ಇರುತ್ತದೆ. ರಜಾ ದಿನಗಳಲ್ಲಿ ಹಲವು ಪ್ರದರ್ಶನಗಳು ಇಲ್ಲಿ ಇರಲಿದ್ದು, ಇದು ಮಂಗಳೂರಿನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮತ್ತೊಂದು ಕೊಡುಗೆ.
 • ಮಾನವನ ಹುಟ್ಟು, ಬೆಳವಣಿಗೆ, ನಕ್ಷತ್ರಗಳು, ಗ್ರಹಗಳು, ಸಾಗರಗಳನ್ನು ಹತ್ತಿರದಿಂದ ವೀಕ್ಷಿಸಿದ ಅನುಭವವನ್ನು ಈ ತಾರಾಲಯ ನಮಗೆ ನೀಡುತ್ತದೆ. ಮಂಗನಿಂದ ಮಾನವನ ವಿಕಾಸವಾಗಿದ್ದು, ಸೂರ್ಯನ ಪ್ರಖರತೆ, ಗ್ರಹಗಳ ಬಗೆಗಿನ ವಿವರ, ಆಮ್ಲಜನಕ, ಜಲಜನಕ, ಇಂಗಾಲಗಳು ಹೇಗೆ ತಮ್ಮ ಪ್ರಭಾವ ಬೀರುತ್ತವೆ

ಬೆಂಗಳೂರು ಸಂಸ್ಥೆಗೆ ಬರಲಿದೆ ಸೂಪರ್‌ ಕಂಪ್ಯೂಟರ್‌

 • ಸಂಶೋಧನೆ ಆಧರಿತ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿರುವ ಬೆಂಗಳೂರಿನ ಜವಾಹರಲಾಲ್‌ ನೆಹರೂ ಸೆಂಟರ್‌ ಫಾರ್‌ ಅಡ್ವಾನ್ಸ್‌ಡ್‌ ಸೈಂಟಿಫಿಕ್‌ ರಿಸರ್ಚ್‌(ಜೆಎನ್‌ಸಿಎಆರ್‌) ಸಂಸ್ಥೆಗೆ ವರ್ಷಾಂತ್ಯದ ವೇಳೆಗೆ 650 ಟೆರಾಫ್ಲಾಪ್‌ ಸಾಮರ್ಥ್ಯದ ಸೂಪರ್‌ ಕಂಪ್ಯೂಟರ್‌ ಬರಲಿದೆ.
 • ರಾಷ್ಟ್ರೀಯ ಸೂಪರ್‌ ಕಂಪ್ಯೂಟರ್‌ ಮಿಷನ್‌ ಮೊದಲ ಹಂತದ ಯೋಜನೆಯ ಅಡಿ ದೇಶದ ಆರು ಪ್ರತಿಷ್ಠಿತ ಸಂಸ್ಥೆಗಳಿಗೆ ಸೂಪರ್‌ ಕಂಪ್ಯೂಟರ್‌ ನೀಡಲಾಗುತ್ತಿದೆ.

ಸೂಪರ್‌ಕಂಪ್ಯೂಟರ್

ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಹೆಗ್ಗಳಿಕೆ ಈ ಬಗೆಯ ಕಂಪ್ಯೂಟರುಗಳದು. ಇವು ಅತ್ಯಂತ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಪ್ರಮಾಣದ ಲೆಕ್ಕಾಚಾರಗಳನ್ನು ಕೈಗೊಳ್ಳಬಲ್ಲವು. ಅತ್ಯಂತ ಕ್ಲಿಷ್ಟ ಲೆಕ್ಕಾಚಾರಗಳನ್ನು ಬಳಸುವ ಹವಾಮಾನ ಮುನ್ಸೂಚನೆ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಇವನ್ನು ಬಳಸಲಾಗುತ್ತದೆ.

ಚೀನಾ ಹಿಂದಿಕ್ಕಿದ ಭಾರತ

 • ನೋಟು ಅಮಾನ್ಯೀಕರಣ, ಜಿಎಸ್​ಟಿ ಜಾರಿಯಿಂದಾಗಿ ಸ್ವಲ್ಪ ಕಳೆಗುಂದಿದ್ದ ಭಾರತದ ಆರ್ಥಿಕತೆ ಮತ್ತೆ ಚೇತರಿಕೆ ಹಾದಿ ಹಿಡಿದಿದೆ.
 • ತ್ವರಿತ ಬೆಳವಣಿಗೆಯ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಪೂರಕವಾಗಿ ಭಾರತದ ಜಿಡಿಪಿ ಬೆಳವಣಿಗೆ ದರ 2ನೇ ತ್ರೖೆಮಾಸಿಕ (ಜುಲೈ-ಸೆಪ್ಟೆಂಬರ್)ದಲ್ಲಿದ್ದ ಶೇಕಡ 6.3ರಿಂದ 3ನೇ ತ್ರೖೆಮಾಸಿಕ (ಅಕ್ಟೋಬರ್-ಡಿಸೆಂಬರ್)ದಲ್ಲಿ ಶೇಕಡ 7.2ಕ್ಕೆ ಏರಿಕೆಯಾಗಿದೆ.
 • ಈ ಮೂಲಕ ಚೀನಾವನ್ನು ಹಿಂದಿಕ್ಕಿ ಅರ್ಥ ವ್ಯವಸ್ಥೆಯ ಕುರಿತು ಧನಾತ್ಮಕ ನಿರೀಕ್ಷೆಗಳು ಗರಿಗೆದರುವಂತೆ ಮಾಡಿದೆ. ಪರಿಣಾಮ, 2017-18ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಈಗಿರುವ ನಿರೀಕ್ಷಿತ ಶೇಕಡ 6.6 ಮೀರಬಹುದೆಂದು ಅಂದಾಜಿಸಲಾಗಿದೆ.
 • ಕೇಂದ್ರೀಯ ಸಾಂಖ್ಯಿಕ ಕಚೇರಿ(ಸಿಎಸ್​ಒ) ಬಿಡುಗಡೆ ಮಾಡಿರುವ ಮೂರನೇ ತ್ರೖೆಮಾಸಿಕದ ದತ್ತಾಂಶ ಪ್ರಕಾರ, ಭಾರತದ ಅರ್ಥ ವ್ಯವಸ್ಥೆಯಲ್ಲಿ ಹೂಡಿಕೆ ಮತ್ತು ಖರ್ಚು ಮಾಡುವ ಸಾಮರ್ಥ್ಯ ಹೆಚ್ಚಾಗಲಿದ್ದು, ಆರ್ಥಿಕತೆ ಇನ್ನಷ್ಟು ಸುಧಾರಿಸುವ ಲಕ್ಷಣ ಗೋಚರಿಸಿವೆ.
 • ಆರೋಗ್ಯವಂತ ಅರ್ಥ ವ್ಯವಸ್ಥೆ:ಕೇಂದ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿದ ದತ್ತಾಂಶ ಕಳೆದ ಮೂರು ತ್ರೖೆಮಾಸಿಕಗಳ ವಾಸ್ತವಿಕ ದತ್ತಾಂಶವನ್ನು ಆಧರಿಸಿದ್ದಾಗಿದೆ. ಹೀಗಾಗಿ ಇದು ದೇಶದ ಅರ್ಥ ವ್ಯವಸ್ಥೆ ಆರೋಗ್ಯದ ಸ್ಥಿತಿಗತಿ ಉತ್ತಮವಾಗಿರುವ ಚಿತ್ರಣವನ್ನೇ ನೀಡಿದೆ.
 • ಒಟ್ಟು ಮೌಲ್ಯ ವರ್ಧನೆ(ಜಿವಿಎ) ಲೆಕ್ಕಾಚಾರವನ್ನು ಮಾಡುವಾಗ ಸಿಎಸ್​ಒ, ನಿವ್ವಳ ತೆರಿಗೆಯಿಂದ ಜಿಡಿಪಿಯನ್ನು ಕಳೆಯಲಾಗುತ್ತದೆ. ಅರ್ಥವ್ಯವಸ್ಥೆಯಲ್ಲಿನ ಸರಕು ಮತ್ತು ಸೇವೆಗಳ ಉತ್ಪಾದನೆಯ ಮೌಲ್ಯಗಳ ಸರಾಸರಿ ಲೆಕ್ಕ ಹಾಕುವಾಗ ಜಿವಿಎ ಹೆಚ್ಚು ವಾಸ್ತವಿಕ ಮಾನದಂಡವಾಗಿರುತ್ತದೆ.

ಇದು ಕಾರಣ…

 • ಉತ್ಪಾದನಾ ಕ್ಷೇತ್ರದ ಜಿಡಿಪಿ 3ನೇ ತ್ರೖೆಮಾಸಿಕದಲ್ಲಿ ಶೇಕಡ 8.1 ತಲುಪಿದ್ದು, ವಾರ್ಷಿಕ ಜಿಡಿಪಿ ಈಗ ಅಂದಾಜಿಸಿರುವ ಶೇಕಡ 5.1 ದಾಟಿ ಮುನ್ನಡೆಯುವ ನಿರೀಕ್ಷೆ ಇದೆ. ಜಿಎಸ್​ಟಿ ಅನುಷ್ಠಾನಕ್ಕೆ ಎದುರಾದ ಆರಂಭಿಕ ಅಡ್ಡಿ ಆತಂಕದ ಕಾರಣಕ್ಕೆ ಕಾರ್ಖಾನೆ ಮತ್ತು ಸೇವಾ ವಲಯದ ಸಂಸ್ಥೆಗಳ ಉತ್ಪಾದಕತೆಯಲ್ಲಿ ಹಿನ್ನಡೆ ಉಂಟಾಗಿತ್ತು. ಈಗ ಆ ಲೋಪದೋಷ ಸರಿಪಡಿಸಿಕೊಂಡಿರುವ ಫಲಿತಾಂಶ ಜಿಡಿಪಿ ಬೆಳವಣಿಗೆಯಲ್ಲಿ ದಾಖಲಾಗಿದೆ.
 • ವ್ಯವಹಾರ ತಂತ್ರದ ಭಾಗವಾಗಿ ಜೂನ್​ನಲ್ಲಿ ಉತ್ಪಾದನೆ ಕಡಿತಗೊಳಿಸಿದ್ದ ಕಂಪನಿಗಳು, ನಂತರದ ತಿಂಗಳುಗಳಲ್ಲಿ ಮತ್ತೆ ಸಹಜವಾಗಿ ಕಾರ್ಯನಿರ್ವಹಿಸಲಾರಂಭಿಸಿವೆ.
 • ಸರ್ಕಾರದ ಕಂದಾಯ ವೆಚ್ಚ(ಬಡ್ಡಿ ರಹಿತ ಪಾವತಿ) ಹಿಂದಿನ ವರ್ಷ ಶೇಕಡ 12 ಇದ್ದುದು, ಶೇಕಡ 24ಕ್ಕೆ ಏರಿಕೆಯಾಗಿದೆ.
 • ಕೃಷಿಯೇತರ ಕ್ಷೇತ್ರಗಳಲ್ಲಿ ಉತ್ತಮ ಹೂಡಿಕೆಯ ಕಾರಣದಿಂದ ಸುಧಾರಣೆಯ ಲಕ್ಷಣಗಳು ಕಂಡುಬಂದಿದ್ದು, ಸಾರ್ವಜನಿಕ ಆಡಳಿತ ಮತ್ತು ಸಾಲದ ಬೆಳವಣಿಗೆಯ ಸೂಚ್ಯಂಕಗಳು ಕೂಡ ಧನಾತ್ಮಕವಾಗಿರುವುದು.
 • ಕೃಷಿ ಕ್ಷೇತ್ರದ ಜಿಡಿಪಿ ಮೂರನೇ ತ್ರೖೆಮಾಸಿಕ(ಅಕ್ಟೋಬರ್-ಡಿಸೆಂಬರ್)ದಲ್ಲಿ ಶೇಕಡ 4.1 ತಲುಪಿದೆ. ಈ ಹಣಕಾಸು ವರ್ಷ ಇದು ಶೇಕಡ 3 ತಲುಪುವ ನಿರೀಕ್ಷೆ ಇದೆ. ಕೃಷಿ ಕ್ಷೇತ್ರದಲ್ಲಿ ಹವಾಮಾನ ವೈಪರೀತ್ಯದ ಪರಿಣಾಮ ಹೆಚ್ಚೇನೂ ಧನಾತ್ಮಕ ಬದಲಾವಣೆ ಇಲ್ಲ.

 ಸಾಧನೆಗೆ ಅನುಗುಣವಾಗಿ ರಾಜ್ಯಗಳಿಗೆ ಬಹುಮಾನ

 • ಯೋಜನಾ ಆಯೋಗ ರದ್ದುಗೊಂಡ ನಂತರದಲ್ಲಿ ಇದೇ ಮೊದಲ ಬಾರಿಗೆ ಆಯೋಗವೊಂದು, ಜನಪ್ರಿಯತೆಯ ಕ್ರಮ ಅಥವಾ ನೀತಿಗೆ ವ್ಯಾಖ್ಯಾನ ನೀಡಲು ಮುಂದಾಗಿದೆ.
 • ಎನ್.ಕೆ.ಸಿಂಗ್ ನೇತೃತ್ವದ 15ನೇ ವಿತ್ತ ಆಯೋಗಕ್ಕೆ ಇಂಥದ್ದೊಂದು ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರ ನೀಡಿದ್ದು, ಅದು ರಾಜ್ಯಗಳ ಸಾಧನೆಗೆ ಅನುಗುಣವಾಗಿ ಬಹುಮಾನ ನೀಡಬೇಕು ಎಂದು ಶಿಫಾರಸು ಮಾಡಿದೆ.
 • ಈ ಆಯೋಗ ಹಿಂದೆ, ಯೋಜನೆ ಮತ್ತು ಯೋಜನೇತರ ವೆಚ್ಚಗಳ ವ್ಯವಸ್ಥೆಗೆ ವ್ಯಾಖ್ಯಾನ ನೀಡಿ ಅದನ್ನು ರದ್ದುಗೊಳಿಸುವಂತೆ ಸೂಚಿಸಿತ್ತು. ಹಾಗೆಯೇ, ಜಿಎಸ್​ಟಿ ಜಾರಿಗೊಳಿಸಲು ಶಿಫಾರಸು ಕೂಡ ಮಾಡಿತ್ತು.
 • ರಾಜ್ಯಗಳ ಸಾಧನೆಗೆ ಮಾನದಂಡ
 • ತೆರಿಗೆ ಜಾಲ ವಿಸ್ತರಣೆಗೆ ಯಾವ್ಯಾವ ರಾಜ್ಯಗಳು ಏನೇನು ಕ್ರಮಗಳನ್ನು ತೆಗೆದುಕೊಂಡಿವೆ?
 • ಜನಸಂಖ್ಯೆ ಬೆಳವಣಿಗೆ ನಿಯಂತ್ರಣ
 • ಉದ್ಯಮ ಸರಳೀಕರಣ ನೀತಿಗೆ ಉತ್ತೇಜನ
 • ನೇರ ಪ್ರಯೋಜನ ವರ್ಗಾವಣೆ(ಡಿಬಿಟಿ) ಅಳವಡಿಸಿ ಹಣ ಉಳಿಸಿದ್ದರ ಪ್ರಮಾಣ
 • ಜನಪ್ರಿಯ ಯೋಜನೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾಗುವ ಹೊರೆ ತಪ್ಪಿಸುವ ಅಥವಾ ನಿಯಂತ್ರಿಸುವ ಕ್ರಮ

 

 1. ಕೆಳಗಿನವುಗಳಲ್ಲಿ ಯಾವುದು ಆಪರೇಷನ್ ಗ್ರೀನ್ ಧ್ಯೇಯಕ್ಕೆ ಸಂಬಂಧಿಸಿದೆ?

ಎ. ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಗಳ ಉತ್ಪಾದನೆ

ಬಿ. ಟೊಮೆಟೊ, ಮೆಣಸಿನಕಾಯಿ ಮತ್ತು ಆಲೂಗಡ್ಡೆಗಳ ಉತ್ಪಾದನೆ

ಸಿ. ಪದಾರ್ಥಗಳು, ಈರುಳ್ಳಿ ಮತ್ತು ಆಲೂಗಡ್ಡೆ ಉತ್ಪಾದನೆ

ಡಿ. ಟೊಮೆಟೊ, ದ್ವಿದಳ ಧಾನ್ಯ ಮತ್ತು ಅಕ್ಕಿ ಉತ್ಪಾದನೆ


 

 1. ಕೆಳಗನ ಯಾವ ನೀತಿಯು (ಯೋಜನೆ) 5 ಲಕ್ಷ ಎಕರೆಗಳನ್ನು ಸಾವಯವ ಬೇಸಾಯದಲ್ಲಿ ತರುತ್ತದೆ?

ಎ. ಶ್ಯಾಮ ಪ್ರಸಾದ್ ಮುಖರ್ಜಿ ರೂರ್ಬಾನ್ ಮಿಷನ್

ಬಿ. ಪ್ರರಂಪರಾಗತ್  ಕೃಷಿ ವಿಕಾಸ್ ಯೋಜನೆ

ಸಿ. ಪ್ರಧಾನ್ ಮಂತ್ರ ಕೃಷಿ ಸಿಂಚಾಯಿ ಯೋಜನೆ

ಡಿ. ಪ್ರದಾನ ಮಂತ್ರಿ ಫಾಸಲ್ ಬಿಮಾ ಯೋಜನೆ


 

3) 2018-19ರ ಅವಧಿಯಲ್ಲಿ ಅರುಣ್ ಜೇಟ್ಲಿಯ ಬಜೆಟ್ ಭಾಷಣದ ಪ್ರಕಾರ, ಯಾವ ಆಧಾರದ ಮೇಲೆ ಭಾರತ ಮೂರನೇ ಸ್ಥಾನದಲ್ಲಿದೆ?

ಎ ಪವರ್ ಪ್ಯಾರಿಟಿ ಖರೀದಿ (PPP)

ಬಿ. ಒಟ್ಟು ದೇಶೀಯ ಉತ್ಪನ್ನ (GDP)

ಸಿ. ಕೃಷಿ ಮುನ್ನೆಚ್ಚರಿಕೆ

ಡಿ. ವಿದೇಶಿ ನೇರ ಹೂಡಿಕೆ (FDI)


4) PRI ಗಳ ಆಡಳಿತ ಸಾಮರ್ಥ್ಯಗಳನ್ನು ಹೆಚ್ಚಿಸಲು ಕೆಳಗಿನ ಯಾವ ಹೊಸ ಪುನರ್ರಚನಾ ಯೋಜನೆಯನ್ನು ಪ್ರಾರಂಭಿಸಲಾಯಿತು?

ಎ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಷನ್

ಬಿ.PM. ಕೌಶಲ್ ವಿಕಾಸ್ ಯೋಜನೆ

ಸಿ. ಸ್ವಚ ಭಾರತ್ ಅಭಿಯಾನ್

ಡಿ. ರಾಷ್ಟ್ರೀಯ ಗ್ರಾಮ್ ಸ್ವರಾಜ್ ಅಭಿಯಾನ್


5) ಸ್ವತಂತ್ರ ಭಾರತದ ಮೊದಲ ಹಣಕಾಸು ಮಂತ್ರಿ ಯಾರು?

ಎ ಷಣ್ಮುಗನ್  ಚೆಟ್ಟಿ

ಬಿ. ಜಾನ್ ಮಥಾಯ್

ಸಿ. ಸಿ. ದೇಶ್ ಮುಖ

ಡಿ. ಲಿಖತ್ ಅಲಿ ಖಾನ್


6)ಕೆಳಗಿನ ಯಾವ ಯೋಜನೆಗಳ ಅಡಿಯಲ್ಲಿ 300 ರೂರ್ಬನ್ ಕ್ಲಸ್ಟರ್ಗಳನ್ನು ಸ್ಥಾಪಿಸಬೇಕೆಂದು ಯಾವ ಆಯೋಗ ಹೇಳಿದೆ?

ಎ. ಶ್ಯಾಮ ಪ್ರಸಾದ್ ಮುಖರ್ಜಿ ಮಿಷನ್

ಬಿ. ಪ್ರಧಾನ್ ಮಂತ್ರಿ ಆವಾಸ್ ಯೋಜನೆ

ಇ. ಇಂದಿರಾ ಆವಾಸ್ ಯೋಜನೆ

ಡಿ. ನಿರ್ಮಾಯ ಯೋಜನೆ


7) ಸರಿಯಾದ ಕ್ರಮದಲ್ಲಿ ಬಜೆಟ್ ಅನ್ನು ಜಾರಿಗೆ ತರಲು ಕೆಳಗಿನ ಹಂತಗಳನ್ನು ಜೋಡಿಸಿ

 1. ಸಾಮಾನ್ಯ ಚರ್ಚೆ
 2. ಮೀಸಲಾತಿ ಮಸೂದೆ

III. ಹಣಕಾಸು ಮಸೂದೆ

 1. ಅನುದಾನಕ್ಕಾಗಿ ಬೇಡಿಕೆಗಳ ಮತದಾನ
 2. ಶಾಸಕಾಂಗಕ್ಕೆ ಪ್ರಸ್ತುತಿ
 3. I, II, III, IV, V B. V, I, II, III
 4. V, I, IV, III, II D. V, I, III, IV, II

8)’ಬಜೆಟ್’ ಎಂಬ ಪದವನ್ನು ಭಾರತದ ಸಂವಿಧಾನದ ಯಾವ ವಿಧಿಯಲ್ಲಿ ಉಲ್ಲೇಖಿಸಲಾಗಿದೆ

ಎ 266

ಬಿ112

ಸಿ 265

ಡಿ. ಯಾವುದೂ ಇಲ್ಲ


9)ಭಾರತದ ಸಂವಿಧಾನದಲ್ಲಿ ಈ ಕೆಳಗಿನ ಪದಗಳಲ್ಲಿ ಯಾವುದು ದೊರೆಯುವುದಿಲ್ಲ?

ಎ] ಅಟಾರ್ನಿ ಜನರಲ್

ಬಿ] ಕಂಟ್ರೋಲರ್ ಮತ್ತು ಆಡಿಟರ್ ಜನರಲ್

ಸಿ] ಬಜೆಟ್

ಡಿ] ಕ್ಯಾಬಿನೆಟ್


10) ಮುಂದಿನ 3 ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಕೌಶಲ್ಯದ ಉದ್ದೇಶ ಯಾವುದು?

ಎ. ಸ್ಟಾರ್ಟ್ಅಪ್, ಸ್ಟ್ಯಾಂಡ್ಅಪ್

ಬಿ.PM ಕೌಶಲ್ ವಿಕಾಸ್ ಯೋಜನೆ

ಸಿ. MNRGE

ಡಿ. ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನಾ


ಉತ್ತರಗಳು

1)A   2)B  3)A  4)D  5) A  6) A  7) B.  V, I, II, III   8) D   9) C  10) B

Related Posts
KPSC/KAS EXAMINATION SCHEDULE – 2017 (TENTATIVE)
Here is the link for the PDF format: schedule-for-the-year-2017
READ MORE
Karnataka Issues: Environmental Challenges
Sustainable urban development is not a choice but a necessity. If cities are to meet the needs of their citizens (United Nations 2007). Some of the most critical problems facing our cities concern the ...
READ MORE
FAME – India is an abbreviation for Faster Adoption and Manufacturing of (Hybrid &) Electric Vehicles in India Government of India approved the National Mission on Electric Mobility in 2011 and subsequently ...
READ MORE
2005ರ ಅಕ್ಟೋಬರ್ 12ರಂದು ಜಾರಿ ಜನಸಾಮಾನ್ಯರೂ ಆಡಳಿತ ವ್ಯವಸ್ಥೆಯ ಮಾಹಿತಿ ಪಡೆಯಲು ಅನುವಾಗುವ ಮಾಹಿತಿ ಹಕ್ಕು ಕಾಯ್ದೆ. ಮಾಹಿತಿ ಹಕ್ಕು ಕಾಯ್ದೆ ಎಂದರೇನು? ನಾಗರಿಕರು ಮಾಹಿತಿ ಬಯಸಿ ಸಲ್ಲಿಸಿದ ಅರ್ಜಿಯನ್ನು ಪರೀಕ್ಷಿಸಿ, ಅದಕ್ಕೆ ಸಂಬಂಧಪಟ್ಟ ಸೂಕ್ತ ಮಾಹಿತಿಯನ್ನು ನಿಗದಿತ ಅವಧಿಯೊಳಗೆ ನೀಡುವುದು; ಆ ಮೂಲಕ ಆಡಳಿತ ವ್ಯವಹಾರದಲ್ಲಿ ...
READ MORE
Karnataka: Air ambulance service to be operational in Jan
Karnataka state will get its first air ambulance facility in the New Year. The Chief Minister Siddaramaiah formally launched the air ambulances on 16th Dec, commercial operations will begin in January ...
READ MORE
Karnataka – Revised TDR notified; to be twice property value
The state government has notified the rules for implementing the revised scheme, which envisages acquisition of land for infrastructure projects. Under the revised scheme, two times the value of the land ...
READ MORE
IMD urges govt to encourage farmers to register on portal
The officials of the India Meteorological Department (IMD) on Tuesday met the state government officials and urged them to speed up the process of making farmers register on M-Kisan portal. Union ...
READ MORE
Explained: NAM “Non Aligned Movement”- Important for IAS/KAS
Why in News: The  17th Summit of the Heads of State and Government of the Non-Aligned Movement (NAM) was held on 17 and 18 September in Margarita Island, northeast of Venezuela, in ...
READ MORE
Karnataka Current Affairs – KAS/KPSC Exams – 25th – 26th Oct 2017
Kittur Fort to become tourist spot Kittur Utsav that celebrates Queen Kittur Channamma’s victory over the East India company’s troupes in 1824, was organised in Channammana Kittur on Monday. The three-day ...
READ MORE
Akrama-Sakrama online process to start after a week (Karnataka Updates)
Citizens can apply online for regularisation of their properties under the Akrama-Sakrama scheme may have to wait at least a week as the Bruhat Bengaluru Mahanagara Palike (BBMP) is yet to ...
READ MORE
KPSC/KAS EXAMINATION SCHEDULE – 2017 (TENTATIVE)
Karnataka Issues: Environmental Challenges
FAME – India
ಮಾಹಿತಿ ಹಕ್ಕು ಕಾಯ್ದೆ(ಆರ್​ಟಿಐ)
Karnataka: Air ambulance service to be operational in
Karnataka – Revised TDR notified; to be twice
IMD urges govt to encourage farmers to register
Explained: NAM “Non Aligned Movement”- Important for IAS/KAS
Karnataka Current Affairs – KAS/KPSC Exams – 25th
Akrama-Sakrama online process to start after a week

One thought on “1st ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *