“20 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಸ್ತ್ರೀಯರಿಗೆ ಕಾಯಕ ಶಕ್ತಿ!

1.

ಸುದ್ಧಿಯಲ್ಲಿ ಏಕಿದೆ ?ಬಡವರ ಬಂಧು, ಋಣ ಪರಿಹಾರ ಕಾಯ್ದೆಗಳ ಮೂಲಕ ಬಡವರ ನೆರವಿಗೆ ಬಂದ ಸರ್ಕಾರ, ಮಹಿಳಾ ಮತದಾರರಿಗಾಗಿ ರೂಪಿಸಿರುವ ಕಾಯಕ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.

 • ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮಹಿಳೆಯರಿಗೆ ಮುಂದಿನ ಐದು ವರ್ಷಗಳಲ್ಲಿ ಪ್ರತಿ ವರ್ಷ ಒಂದು ಲಕ್ಷ ಮಹಿಳೆಯರಿಗೆ ನೇರವಾಗಿ ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಿದ್ದು, ಸಹಕಾರ ಇಲಾಖೆ ಸ್ವಸಹಾಯ ಗುಂಪುಗಳ ಮೂಲಕ ರೂಪಿಸಲಾಗುತ್ತಿದೆ. ಇದರ ಮೂಲಕ ಪರೋಕ್ಷ ಉದ್ಯೋಗವೂ ಸೃಷ್ಟಿ ಆಗಲಿದೆ.
 • ಪ್ರತ್ಯೇಕ ಬ್ರಾಂಡ್ :ಸ್ವಸಹಾಯ ಸಂಘಗಳು ತಯಾರಿಸುವ ವಸ್ತುಗಳಿಗೆ ಪ್ರತ್ಯೇಕ ಬ್ರಾಂಡ್ (ನಂದಿನಿ ಉತ್ಪನ್ನಗಳ ಮಾದರಿ) ರೂಪಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಗಮನ ಸೆಳೆಯಲು ಉದ್ದೇಶಿಸಲಾಗಿದೆ.
 • ಮಾರುಕಟ್ಟೆ: ರಾಜ್ಯದಲ್ಲಿ ಹಾಲಿ ಇರುವ ಸ್ವಸಹಾಯ ಸಂಘಗಳು ತಯಾರಿಸುವ ಉತ್ಪನ್ನಗಳಿಗೆ ಪ್ರತ್ಯೇಕ ಹೆಸರಿಲ್ಲದೆ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆ ಸೌಲಭ್ಯ ಪಡೆಯಲಾಗುತ್ತಿಲ್ಲ. ಈಗ ಕರ್ನಾಟಕ ಮಾರುಕಟ್ಟೆ ಮಹಾಮಂಡಲ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಮಹಾಮಂಡಲದ ಕಚೇರಿಗಳಿದ್ದು, ಅಲ್ಲಿಂದಲೇ ಕಾಯಕ ಉತ್ಪನ್ನಗಳ ಮಾರಲಾಗುತ್ತದೆ. ಸದ್ಯ ಇಲ್ಲಿಂದ ರಸಗೊಬ್ಬರ ಮಾತ್ರ ಮಾರಾಟ ಆಗುತ್ತಿದೆ.

ಎಲ್ಲೆಲ್ಲಿ ಮಾರಾಟ?

 • ಮಾರುಕಟ್ಟೆ ಮಹಾಮಂಡಲ ವಸ್ತುವಿನ ಗುಣಮಟ್ಟ ಪರೀಕ್ಷಿಸಿ ಖರೀದಿಸಬೇಕು. ಪ್ರತಿ ಜಿಲ್ಲೆ, ನಗರ ಪ್ರದೇಶದ ಪ್ರಮುಖ ಸ್ಥಳ, ಮಾಲ್​ಗಳು, ವಿಮಾನ ನಿಲ್ದಾಣಗಳಲ್ಲಿ ಮಳಿಗೆಗಳನ್ನು ತೆರೆಯಲಾಗುವುದು.

ಕಾಯಕ ಯೋಜನೆ ಉದ್ದೇಶ

 • ಮಹಿಳಾ ಸಬಲೀಕರಣ, ಉದ್ಯಮಶೀಲತೆ ಗುಣಮಟ್ಟ ಹೆಚ್ಚಳ, ಕೌಶಲ್ಯ ಅಭಿವೃದ್ಧಿಗಾಗಿ ಕಾಯಕ ಯೋಜನೆ ಜಾರಿ ತರಲಾಗಿದೆ.

ಬನ್ನೇರುಘಟ್ಟದಲ್ಲಿ ಕಾಡುಕೋಣ ಪ್ರತ್ಯಕ್ಷ

2.

ಸುದ್ಧಿಯಲ್ಲಿ ಏಕಿದೆ ?ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ 3 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಂಡಿಯನ್‌ ಬೈಸನ್‌ ಎಂದು ಕರೆಯಲ್ಪಡುವ ಕಾಡುಕೋಣ ಪ್ರತ್ಯಕ್ಷವಾಗಿದೆ. ಹಿಂಡು ಆನೆಗಳು ಕಾಣಿಸಿದ್ದು ಪ್ರಾಣಿ ಪ್ರಿಯರಿಗೆ ಖುಷಿ ನೀಡಿದೆ. ಬನ್ನೇರುಘಟ್ಟ ತೊರೆದಿದ್ದ ಆನೆಗಳು ವಾಪಾಸಾಗುತ್ತಿರುವುದನ್ನು ಪ್ರವಾಸಿಗರು ಗಮನಿಸಿದ್ದಾರೆ.

 • ಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭ ನೂರಕ್ಕೂ ಹೆಚ್ಚು ಟ್ರಕ್‌ಗಳು ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದವು. ಇದರಿಂದ ಕಾಡು ಪ್ರಾಣಿಗಳ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಉಂಟಾಗಿತ್ತು.

ಗೌರ್/ಇಂಡಿಯನ್ ಬೈಸನ್

 • ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಶಿಯಾಕ್ಕೆ ಬೃಹತ್ ಬೋವಿನ್ ಆದ ಗೌರ್ (ಬಾಸ್ ಗೌರಸ್) ಕೂಡ ಭಾರತೀಯ ಕಾಡೆಮ್ಮೆ ಎಂದು ಕರೆಯಲ್ಪಡುತ್ತದೆ.
 • ಗೌರ್ ಹೆಚ್ಚಾಗಿ ನಿತ್ಯಹರಿದ್ವರ್ಣ ಕಾಡುಗಳು ಅಥವಾ ಅರೆ-ನಿತ್ಯಹರಿದ್ವರ್ಣ ಮತ್ತು ತೇವಾಂಶವುಳ್ಳ ಎಲೆಯುದುರುವ ಕಾಡುಗಳಿಗೆ ಸೀಮಿತವಾಗಿರುತ್ತದೆ, ಆದರೆ ಅವುಗಳ ವ್ಯಾಪ್ತಿಯ ಹೊರಭಾಗದಲ್ಲಿ ಪತನಶೀಲ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ.
 • ಗೌರ್, ಬಾಸ್ ಫ್ರಾಂಟಾಲಿಸ್ನ ಸಾಕುಪ್ರಾಣಿ ರೂಪವನ್ನು ಗಯಾಲ್ ಅಥವಾ ಮಿಥುನ್ ಎಂದು ಕರೆಯಲಾಗುತ್ತದೆ.
 • ಬೆದರಿಕೆಗಳು: ಆವಾಸಸ್ಥಾನದ ನಷ್ಟ, ಆವಾಸಸ್ಥಾನ ವಿಘಟನೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

 • ಕರ್ನಾಟಕದ ಬೆಂಗಳೂರಿನ ಸಮೀಪವಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು 1970 ರಲ್ಲಿ ಸ್ಥಾಪನೆಯಾಯಿತು ಮತ್ತು 1974 ರಲ್ಲಿ ರಾಷ್ಟ್ರೀಯ ಉದ್ಯಾನವನವಾಗಿ ಘೋಷಿಸಲ್ಪಟ್ಟಿತು. 2002 ರಲ್ಲಿ ಪಾರ್ಕಿನ ಒಂದು ಭಾಗವು ಜೈವಿಕ ರಿಸರ್ವ್ ಆಗಿ, ಬನ್ನೇರುಘಟ್ಟ ಜೈವಿಕ ಉದ್ಯಾನವನವಾಯಿತು.
 • ಇದು ಪ್ರಾಣಿ ಸಂಗ್ರಹಾಲಯ, ಸಾಕುಪ್ರಾಣಿ ಮೂಲೆ, ಪ್ರಾಣಿ ರಕ್ಷಣಾ ಕೇಂದ್ರ, ಚಿಟ್ಟೆ ಆವರಣ, ಅಕ್ವೇರಿಯಂ, ಹಾವು ಮನೆ ಮತ್ತು ಸಫಾರಿ ಉದ್ಯಾನವನದ ಜನಪ್ರಿಯ ಪ್ರವಾಸಿ ತಾಣವಾಗಿದೆ.
 • ಕರ್ನಾಟಕದ ಝೂ ಅಥಾರಿಟಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮತ್ತು ಪರಿಸರ ಮತ್ತು ಪರಿಸರದ ಸಂಶೋಧನೆಗಾಗಿ ಅಶೋಕ ಟ್ರಸ್ಟ್ (ಎಟಿರೀ), ಬೆಂಗಳೂರು, ಸಹ ಸಂಸ್ಥೆಗಳಾಗಿವ

ಐಟಿ ಇಲಾಖೆ

3.

ಸುದ್ಧಿಯಲ್ಲಿ ಏಕಿದೆ ?ಆದಾಯ ತೆರಿಗೆ ಇಲಾಖೆಗೆ ಹೊಸ ಸ್ವರೂಪ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ತೆರಿಗೆದಾರರ ಬಗ್ಗೆ ಕಾಳಜಿ ಜತೆಗೆ ಕಠಿಣ ನಿಯಮ ರೂಪಿಸುವ ನಿಟ್ಟಿನಲ್ಲಿ ಇಲಾಖೆಯ ಮರುವಿನ್ಯಾಸಕ್ಕೆ ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಕ್ರಮ ಕೈಗೊಂಡಿದೆ.

 • ಆದಾಯ ತೆರಿಗೆ ಇಲಾಖೆಯ ಮಹಾ ನಿರ್ದೇಶಕ ಎಸ್.ಕೆ. ದಾಸ್ ನೇತೃತ್ವದಲ್ಲಿ 12 ಆರ್ಥಿಕ ತಜ್ಞರ ಸಮಿತಿ ರಚಿಸಲಾಗಿದೆ. ಇಲಾಖೆ ಮರುವಿನ್ಯಾಸಕ್ಕೆ ಸಂಬಂಧಿಸಿ ಮಾರ್ಚ್ 17ರೊಳಗೆ ವರದಿ ನೀಡಲು ಸಮಿತಿಗೆ ಸೂಚನೆ ನೀಡಲಾಗಿದ್ದು, ನೇರ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಇದು ಅನುವು ಮಾಡಿಕೊಡುವ ಸಾಧ್ಯತೆಯಿದೆ.

ಉದ್ದೇಶ

 • ಈ ಸಮಿತಿ ಒಟ್ಟಾರೆ ಇಲಾಖೆಯ ಮರು ವಿನ್ಯಾಸದ ಜತೆಗೆ ಅಧಿಕಾರಿಗಳ ಶ್ರೇಣಿ ಕುರಿತೂ ಅಧ್ಯಯನ ನಡೆಸಲಿದೆ. ಆದಾಯ ತೆರಿಗೆ ಇಲಾಖೆ ಪ್ರಕರಣಗಳ ಸುಲಭ ನಿರ್ವಹಣೆ, ಪ್ರಾಮಾಣಿಕ ತೆರಿಗೆದಾರರಿಗೆ ಅನವಶ್ಯಕ ಕಿರುಕುಳ ತಪ್ಪಿಸುವುದು ಹಾಗೂ ಕಠಿಣ ನಿಯಮಗಳ ಮೂಲಕ ತೆರಿಗೆ ಸಂಗ್ರಹ ಹೆಚ್ಚಳ ಮಾಡುವುದು ಉದ್ದೇಶವಾಗಿದೆ.

ಜಿಎಸ್​ಟಿ ಬಳಿಕ ದೊಡ್ಡ ಬದಲಾವಣೆ

 • ಜಿಎಸ್​ಟಿ ಜಾರಿ ಬಳಿಕ ತೆರಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಮತ್ತೊಂದು ದೊಡ್ಡ ಮಟ್ಟದ ಬದಲಾವಣೆ ಇದು ಎಂದು ಹೇಳಲಾಗುತ್ತಿದೆ. ಈಗಾಗಲೇ ನೇರ ತೆರಿಗೆ ನೀತಿ ಬಗೆಗೂ ಸಮಿತಿ ರಚಿಸಲಾಗಿರುವುದರಿಂದ, ಎರಡೂ ಸಮಿತಿಯ ವರದಿಗಳು ಭಾರತದ ತೆರಿಗೆ ಸಂಗ್ರಹ ಹಾಗೂ ಇಲಾಖೆ ಕಾರ್ಯವೈಖರಿಗೆ ನೀಲಿನಕ್ಷೆಯಾಗುವ ಸಾಧ್ಯತೆಯಿದೆ.

ನೇರ ತೆರಿಗೆ ನೀತಿ ನಿರೀಕ್ಷೆ

 • ಆದಾಯ ತೆರಿಗೆ ಇಲಾಖೆ ಮರುವಿನ್ಯಾಸಕ್ಕೆ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ನೇರ ತೆರಿಗೆ ನೀತಿ ರೂಪಿಸಲೂ ಮುಂದಾಗಿದೆ. ಈ ಸಂಬಂಧ ಸಮಿತಿ ರಚಿಸಲಾಗಿದ್ದು, 2019ರ ಫೆ.28ರೊಳಗೆ ವರದಿ ನೀಡಲು ಸೂಚಿಸಲಾಗಿದೆ.
 • ವಿಶ್ವದ ಪ್ರಮುಖ ಆರ್ಥಿಕ ವ್ಯವಸ್ಥೆಗಳಲ್ಲಿನ ನೇರ ತೆರಿಗೆ ನೀತಿ ಆಧರಿಸಿ ಭಾರತದಲ್ಲಿ ಅನುಷ್ಠಾನ ಮಾಡುವ ಬಗ್ಗೆ ಹಣಕಾಸು ಇಲಾಖೆ ಆಸಕ್ತಿ ತೋರಿದೆ.

ಸಮಿತಿ ಮುಂದಿರುವ ವಿಚಾರಗಳು

 • ಕಾಲಮಿತಿಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಭವಿಷ್ಯದಲ್ಲಿ ಖಾಲಿಯಾಗುವ ಹುದ್ದೆಗಳ ವಿವರವನ್ನು ಮೊದಲೇ ತಯಾರಿಸಿಕೊಳ್ಳುವುದು
 • ಇಲಾಖೆ ಕಾರ್ಯವೈಖರಿ ಸುಧಾರಣೆಗೆ ಆಧುನಿಕ ತಂತ್ರಜ್ಞಾನ ಹಾಗೂ ಇತರ ಅಂಶಗಳ ಬಳಕೆ
 • ವರ್ತಮಾನ ಹಾಗೂ ಭವಿಷ್ಯದ ಸವಾಲು ಎದುರಿಸಲು ಇಲಾಖೆಯನ್ನು ಸಜ್ಜುಗೊಳಿಸುವುದು
 • ತೆರಿಗೆದಾರರಿಗೆ ಇಲಾಖೆ ಮೇಲಿನ ಭಯ ಹೋಗುವ ರೀತಿಯ ವಾತಾವರಣ ನಿರ್ಮಾಣ
 • ನೇರ ತರಿಗೆ ನೀತಿಗೆ ಅನುಗುಣವಾಗಿ ಏಕರೂಪವಾದ ಶ್ರೇಣಿ ವ್ಯವಸ್ಥೆ ಜಾರಿ

ತೆರಿಗೆ ಮಿತಿ ಹೆಚ್ಚಳ?

 • ಆದಾಯ ತೆರಿಗೆ ರದ್ದು ಮಾಡುವ ಸಾಧ್ಯತೆ ಇಲ್ಲವಾದ ಹಿನ್ನೆಲೆಯಲ್ಲಿ ಮಧ್ಯಮ ವರ್ಗಗಳ ಮತ ಗಳಿಕೆಗೆ ಮಿತಿ ಹೆಚ್ಚಿಸುವ ಒತ್ತಡ ಕೇಂದ್ರದ ಮೇಲಿದೆ. ಈ ಸಂಬಂಧ ಹಣಕಾಸು ಇಲಾಖೆ ಪರಿಶೀಲನೆ ನಡೆಸುತ್ತಿದ್ದು, ಬಜೆಟ್​ನಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ. ನೇರ ತೆರಿಗೆ ನೀತಿ ಕೂಡ ಬಜೆಟ್​ನಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಕಡಿಮೆ.

ಆದಾಯ ತೆರಿಗೆ ಇಲಾಖೆ

 • ಆದಾಯ ತೆರಿಗೆ ಇಲಾಖೆಯು ಐಟಿ ಡಿಪಾರ್ಟ್ಮೆಂಟ್ ಎಂದು ಕೂಡ ಉಲ್ಲೇಖಿಸಲ್ಪಡುತ್ತದೆ, ಇದು ಭಾರತ ಸರ್ಕಾರದ ಆದಾಯ ತೆರಿಗೆ ಸಂಗ್ರಹವನ್ನು ಮೇಲ್ವಿಚಾರಣೆ ಮಾಡುವ ಸರ್ಕಾರಿ ಸಂಸ್ಥೆಯಾಗಿದೆ. ಇದು ಹಣಕಾಸು ಸಚಿವಾಲಯದ ಆದಾಯದ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಭಾರತದ ಸಂಸತ್ತು ಅಂಗೀಕರಿಸಿದ ಮುಂದಿನ ನೇರ ತೆರಿಗೆ ಕಾರ್ಯಗಳನ್ನು ನಿರ್ವಹಿಸುವುದಕ್ಕೆ ಕಾರಣವಾಗಿದೆ.
 • ಆದಾಯ ತೆರಿಗೆ ಕಾಯಿದೆ, 1961
 • ಖರ್ಚು ತೆರಿಗೆ ಕಾಯ್ದೆ, 1987
 • ವಿವಿಧ ಹಣಕಾಸಿನ ಕಾಯಿದೆಗಳು
 • ಡಬಲ್ ಟ್ಯಾಕ್ಸೇಶನ್ ಅವಾಯ್ಡೆನ್ಸ್ ಒಪ್ಪಂದಗಳನ್ನು ಜಾರಿಗೆ ತರುವ ಮತ್ತು ಅಂತರರಾಷ್ಟ್ರೀಯ ತೆರಿಗೆಯ ವಿವಿಧ ವರ್ಗಾವಣೆಗಳಂತಹ ಟ್ರಾನ್ಸ್ಫರ್ ಬೆಲೆಗಳನ್ನು ವ್ಯವಹರಿಸಲು ಸಹ ಐಟಿ ಇಲಾಖೆ ಜವಾಬ್ದಾರವಾಗಿದೆ.
 • ಹಣಕಾಸು ಆಕ್ಟ್, 2012 ಜನರಲ್ ಆಂಟಿ ಅವಾಯ್ಡೆನ್ಸ್ ರೂಲ್ಸ್ ಅನ್ನು ಒತ್ತಾಯಿಸುವ ಮೂಲಕ ಆಕ್ರಮಣಕಾರಿ ತೆರಿಗೆ ತಪ್ಪಿಸಿಕೊಳ್ಳುವಿಕೆಯನ್ನು ಎದುರಿಸಲು ಆದಾಯ ತೆರಿಗೆ ಇಲಾಖೆಯ ಅಧಿಕಾರಗಳನ್ನು ನೀಡಲು ಯತ್ನಿಸುತ್ತದೆ

ಆಧಾರ್

4.

ಸುದ್ಧಿಯಲ್ಲಿ ಏಕಿದೆ ?ಹೊಸ ಬ್ಯಾಂಕ್ ಖಾತೆ ತೆರೆಯುವುದಕ್ಕೆ ಅಥವಾ ಮೊಬೈಲ್ ಸಿಮ್ ಕಾರ್ಡ್ ಖರೀದಿಸುವುದಕ್ಕೆ ಇನ್ಮುಂದೆ ಬ್ಯಾಂಕ್ ಆಗಲಿ ಮೊಬೈಲ್ ಕಂಪನಿಗಳಾಗಲಿ ಗುರುತು, ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ನೀಡುವಂತೆ ಗ್ರಾಹಕರಿಗೆ ಬಲವಂತ ಮಾಡುವಂತಿಲ್ಲ. ಹಾಗೊಮ್ಮೆ ಗ್ರಾಹಕರ ಮೇಲೆ ಒತ್ತಡ ಹೇರುವುದು ಖಚಿತಪಟ್ಟಲ್ಲಿ ಅಂತಹ ಸಂಸ್ಥೆಯ ಸಿಬ್ಬಂದಿ 1 ಕೋಟಿ ರೂ. ದಂಡ ಪಾವತಿಸುವ ಜತೆಗೆ 3ರಿಂದ 10 ವರ್ಷ ಜೈಲು ಪಾಲಾಗಬೇಕಾಗುತ್ತದೆ.

 • ಭಾರತೀಯ ಟೆಲಿಗ್ರಾಫ್ ಕಾಯ್ದೆ ಮತ್ತು ಅಕ್ರಮ ನಗದು ವಹಿವಾಟು ನಿರ್ಬಂಧ ಕಾಯ್ದೆಗಳಿಗೆ (ಪಿಎಂಎಲ್​ಎ) ತಿದ್ದುಪಡಿ ತಂದು ಈ ಕಠಿಣ ನಿಯಮ ರೂಪಿಸಿರುವ ಕೇಂದ್ರ ಸರ್ಕಾರ ಈಗಾಗಲೇ ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ಪಡೆದುಕೊಂಡಿದೆ. ಸಂಸತ್ತಿನ ಉಭಯ ಸದನಗಳ ಅನುಮೋದನೆಯಷ್ಟೇ ಬಾಕಿ ಉಳಿದಿದೆ.
 • ಸುಪ್ರೀಂ ಆದೇಶ ಹಿನ್ನೆಲೆ: ಆಧಾರ್ ಕಾರ್ಡ್ ಕುರಿತಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅಥವಾ ಸಾರ್ವಜನಿಕ ಹಣ ಬಳಕೆಯಾಗುವ ಸ್ಥಳದಲ್ಲಷ್ಟೇ ಆಧಾರ್ ಕಡ್ಡಾಯವಾಗಿ ಬಳಸಬಹುದು. ಇನ್ನುಳಿದಂತೆ ಅದರ ವಿವರ ಸಲ್ಲಿಕೆಯನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಹೇಳಿತ್ತು. ಇದನ್ನು ಆಧರಿಸಿ ಸರ್ಕಾರ ಹೊಸ ನಿಯಮಗಳ ಕರಡನ್ನು ಸಿದ್ಧಪಡಿಸಿದೆ.
 • ಪರಿಷ್ಕೃತ ನಿಯಮದ ಪ್ರಕಾರ ಇನ್ಮುಂದೆ ಬ್ಯಾಂಕ್ ಖಾತೆ ತೆರೆಯುವಾಗ ಅಥವಾ ಹೊಸ ಮೊಬೈಲ್ ಸಿಮ್ಾರ್ಡ್ ಖರೀದಿಸುವಾಗ ಗ್ರಾಹಕರು ಗುರುತು ಮತ್ತು ವಿಳಾಸ ದೃಢೀಕರಣಕ್ಕಾಗಿ ಆಧಾರ್​ಕಾರ್ಡ್ ಬದಲು ಪಾಸ್​ಪೋರ್ಟ್, ರೇಷನ್​ಕಾರ್ಡ್ ಅಥವಾ ಇನ್ನಾವುದಾದರೂ ಸರ್ಕಾರಿ ದಾಖಲೆಗಳನ್ನು ನೀಡಿದಲ್ಲಿ ಬ್ಯಾಂಕ್ ಅಥವಾ ಕಂಪನಿ ಅದನ್ನು ಸ್ವೀಕರಿಸಲೇಬೇಕು.
 • ಖಾಸಗಿತನ ಕಾಪಾಡಬೇಕು: ಆಧಾರ್​ಕಾರ್ಡ್ ಮಾಹಿತಿಯನ್ನು ದೃಢೀಕರಿಸುವ ಕಂಪನಿಗಳು ಗ್ರಾಹಕರ ಖಾಸಗಿತನಕ್ಕೆ ಧಕ್ಕೆಯಾಗದಂತೆ ಮುಂಜಾಗ್ರತೆ ಕೈಗೊಳ್ಳಬೇಕು. ರಾಷ್ಟ್ರದ ಹಿತಾಸಕ್ತಿ ವಿಷಯದಲ್ಲಿ ಮಾತ್ರ ಸುಪ್ರೀಂಕೋರ್ಟ್​ನ ಅನುಮತಿ ಪಡೆದ ಬಳಿಕವಷ್ಟೇ ಆಧಾರ್​ಕಾರ್ಡ್ ಹೊಂದಿರುವ ವ್ಯಕ್ತಿಯ ವಿವರಗಳನ್ನು ಬಹಿರಂಗಪಡಿಸುವ ಅವಕಾಶ, ಅಧಿಕಾರ ಖಾಸಗಿ ಕಂಪನಿಗಳಿಗೆ ಸಿಗಲಿದೆ.

ಕೆವೈಸಿಗೆ ಇತರ ದಾಖಲೆ: ಮತದಾರರ ಗುರುತಿನ ಚೀಟಿ, ಪಾಸ್​ಪೋರ್ಟ್,ಡ್ರೖೆವಿಂಗ್ ಲೈಸನ್ಸ್, ರೇಷನ್ ಕಾರ್ಡ್ ಮತ್ತಿತರ ಸರ್ಕಾರಿ ದಾಖಲೆಗಳು

ದುರ್ಬಳಕೆಗೆ ಕಡಿವಾಣ

 • ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ಅತ್ಯಂತ ಸುರಕ್ಷಿತವಾಗಿರಿಸಲಾಗಿದೆ.
 • ವಿದ್ಯುನ್ಮಾನ ದೃಢೀಕರಣ ಪ್ರಕ್ರಿಯೆ ಬಳಸಿ, ವಿವರಗಳನ್ನು ದೃಢೀಕರಿಸಲು ಖಾಸಗಿ ಸಂಸ್ಥೆಗಳಿಗೂ ಅವಕಾಶ ಮಾಡಿಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಆದ್ದರಿಂದ, ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ಸುಲಭವಾಗಿ ಆಕ್ಸೆಸ್ ಮಾಡಲು ಸಾಧ್ಯವಿಲ್ಲದಂತೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ.
 • ಹೀಗಿದ್ದೂ, ಯಾರಾದರೂ ಈ ಮಾಹಿತಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದರೆ, ಅಂಥವರಿಗೆ 50 ಲಕ್ಷ ರೂ. ಜುಲ್ಮಾನೆ ಹಾಗೂ 10 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದಾಗಿದೆ.

ರಾಷ್ಟ್ರಪತಿ ಆಡಳಿತ ಜಾರಿ

ಸುದ್ಧಿಯಲ್ಲಿ ಏಕಿದೆ ?ಆರು ತಿಂಗಳಿಂದ ರಾಜ್ಯಪಾಲ ಆಡಳಿತದಲ್ಲಿದ್ದ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಲಿದೆ.

ಹಿನ್ನೆಲೆ:

 • ಮೆಹಬೂಬ ಮುಫ್ತಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಕಳೆದ ಜೂನ್​ನಲ್ಲಿ ಹಿಂಪಡೆದಿತ್ತು. ಒಂದೇ ಬಾರಿ 25 ಬಿಜೆಪಿ ಸದಸ್ಯರು ಬೆಂಬಲ ವಾಪಸು ಪಡೆದಾಗ ಜಮ್ಮು ಕಾಶ್ಮೀರ ರಾಜಕೀಯ ಬಿಕ್ಕಟ್ಟು ಎದುರಿಸಿ, ರಾಜ್ಯಪಾಲರ ಆಡಳಿತಹೇರಲಾಗಿತ್ತು.
 • ಆರು ತಿಂಗಳ ಆಡಳಿತದ ನಂತರ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್​ರಿಂದ ಸ್ವೀಕರಿಸಿರುವ ವರದಿ ಮತ್ತು ಇನ್ನಿತರ ಮಾಹಿತಿಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ರಾಷ್ಟ್ರಪತಿ ಆಡಳಿತದ ಅವಶ್ಯಕತೆ ಇದೆ ಎಂಬುದು ತಿಳಿದುಬಂದಿದೆ ಎಂದು ಹೊರಡಿಸಲಾದ ಗೆಝೆಟ್​ ಅಧಿಸೂಚನೆ ತಿಳಿಸಿದೆ

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ

 • ಇತರ ರಾಜ್ಯಗಳಲ್ಲಿ, ಸಂವಿಧಾನದ 356 ರ ಪರಿಚ್ಛೇದದ ಅಡಿಯಲ್ಲಿ ಸ್ಥಳೀಯ ಸರ್ಕಾರದ ಪತನದ ನಂತರ ಅಧ್ಯಕ್ಷರ ನಿಯಮವನ್ನು ವಿಧಿಸಲಾಗಿದೆ. ಆದರೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಮಧ್ಯಸ್ಥಿಕೆಯ ಶಾಸನಬದ್ಧ ಪದರವನ್ನು ಒದಗಿಸುವ ತನ್ನದೇ ಆದ ಪ್ರತ್ಯೇಕ ಸಂವಿಧಾನವನ್ನು ಹೊಂದಿದೆ.
 • ಜಮ್ಮು ಮತ್ತು ಕಾಶ್ಮೀರ ಸಂವಿಧಾನದ ಆರ್ಟಿಕಲ್ 92 ಪ್ರಕಾರ ರಾಜ್ಯದಲ್ಲಿ ಗವರ್ನರ್ ರೂಲ್ ಅನ್ನು ಆರು ತಿಂಗಳ ಅವಧಿಯಲ್ಲಿ ವಿಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಈ ಅವಧಿಯಲ್ಲಿ ಅಮಾನತ್ತುಗೊಳಿಸಿದ ಸ್ಥಿಯಲ್ಲಿದೆ . ಹೇಗಾದರೂ, ಗವರ್ನರ್ ಸಭೆ ವಿಸರ್ಜಿಸಬಹುದು
 • ಅಸೆಂಬ್ಲಿಯ ಅಮಾನತುಗೊಳಿಸುವ ಸ್ಥಿತಿಯೆಂದರೆ ಚುನಾಯಿತ ಶಾಸಕರು ಅಧಿಕಾರದಲ್ಲಿರುತ್ತಾರೆ ಮತ್ತು ಶಾಸನಸಭೆ ಶಾಸನದ ಶಕ್ತಿಯಿಲ್ಲದೇ ಅಸ್ತಿತ್ವದಲ್ಲಿದೆ. ಗವರ್ನರ್ ಈ ಅವಧಿಯಲ್ಲಿ ಶಾಸಕಾಂಗ ಶಕ್ತಿಯನ್ನು ಹೊಂದಿರುತ್ತಾರೆ  .
 • ಗವರ್ನರ್ ರೂಲ್ನ ಆರು ತಿಂಗಳ ಅವಧಿ ಮತ್ತು ಅಸೆಂಬ್ಲಿಯ ಅಮಾನತುಹಿಂಪಡೆಯದಿದ್ದಲ್ಲಿ, ಈ ಎರಡೂ ಪ್ರಕರಣಗಳಲ್ಲಿ ಗವರ್ನರ್ ಕೇಂದ್ರದ ನಿರ್ದೇಶನಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರವು ಭಾರತದ ಸಂವಿಧಾನದ ಆದೇಶದಂತೆ 356 ರ ಪ್ರಕಾರ ರಾಷ್ಟ್ರಪತಿ ಆಡಳಿತ ಬರುತ್ತದೆ.
 • ಗವರ್ನರ್ ತನ್ನದೇ ಆದ ಆಡಳಿತದ ಸಮಯದಲ್ಲಿ ಶಾಸಕಾಂಗ ಸಭೆಯನ್ನು ವಿಸರ್ಜಿಸಲು ನಿರ್ಧರಿಸಿದರೆ ಅಥವಾ ರಾಜ್ಯವು ಅಧ್ಯಕ್ಷರ ಆಳ್ವಿಕೆಯಲ್ಲಿದ್ದಾಗ ಚುನಾವಣೆ ಆರು ತಿಂಗಳಲ್ಲಿ ನಡೆಯುತ್ತದೆ. ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರದಲ್ಲಿ ಅಸೆಂಬ್ಲಿಯ ವಿಸರ್ಜನೆಯ ದಿನಾಂಕದಿಂದ ಆರು ತಿಂಗಳೊಳಗೆ ಚುನಾವಣೆಗಳನ್ನು ನಡೆಸದಿದ್ದರೆ, ಹಾಗೆ ಮಾಡದಿರಲು ಕಾರಣಗಳನ್ನು ವಿವರಿಸಲು ಅದು ಅಗತ್ಯವಾಗಿರುತ್ತದೆ.

ಆಂಗ್ರಿ ಬರ್ಡ್ ಕಕ್ಷೆಗೆ

5.

ಸುದ್ಧಿಯಲ್ಲಿ ಏಕಿದೆ ?ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಸ್ಯಾಟ್-7ಎ ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

 • ಜಿಎಸ್​ಎಲ್​ವಿ ಎಫ್-11 ಉಡಾಹಕದ ಮೂಲಕ ನಭಕ್ಕೆ ಜಿಗಿದ 20 ನಿಮಿಷಗಳ ಬಳಿಕ ಉಪಗ್ರಹ ತಾತ್ಕಾಲಿಕ ಕಕ್ಷೆಗೆ ಸೇರ್ಪಡೆಗೊಂಡಿತು. ಒಂದೆರಡು ದಿನ ಈ ಕಕ್ಷೆಯಲ್ಲೇ ಉಳಿಯಲಿರುವ ಉಪಗ್ರಹ ಹಂತಹಂತವಾಗಿ ಅದರ ನಿಶ್ಚಿತ ಭೂಸ್ಥಿರ ಕಕ್ಷೆಗೆ ಸೇರ್ಪಡೆಗೊಳ್ಳಲಿದೆ.
 • ಇಂಡಿಯನ್ ಆಂಗ್ರಿ ಬರ್ಡ್ ಎಂದೂ ಕರೆಯಲಾಗುವ ಈ ಉಪಗ್ರಹ 2,250 ಕೆ.ಜಿ. ತೂಕ ಹೊಂದಿದೆ. ತಿಂಗಳಲ್ಲಿ ಇಸ್ರೋ ನಡೆಸಿದ 3ನೇ ಉಡಾವಣೆ ಇದಾಗಿದೆ.

ಜಿಎಸ್‌ಎಲ್‌ವಿ-ಎಫ್‌-11

 • ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ರಾಕೆಟ್‌.
 • ಈ ಉಡಾವಣಾ ವಾಹಕ ಇಷ್ಟೊಂದು ದೈತ್ಯ ತೂಕದ ಸ್ಯಾಟ್‌ಲೈಟ್‌ ಹೊತ್ತೊಯ್ದಿದ್ದು ಇದೇ ಮೊದಲು.

ವಾಯುಪಡೆಗೆ ಹೇಗೆ ಅನುಕೂಲ?

 • ಜಿಸ್ಯಾಟ್-7ಎ ಕೆಯು ಬ್ಯಾಂಡ್ ಸಂವಹನ ವ್ಯವಸ್ಥೆಯನ್ನು ಹೊಂದಿದೆ.
 • ಇದು ರಾಷ್ಟ್ರದ ಸಂವಹನ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಜತೆಗೆ, ಭಾರತೀಯ ವಾಯುಪಡೆಗೆ ಪ್ರಯೋಜನ ತಂದುಕೊಡಲಿದೆ.
 • ವಾಯುಪಡೆಯ ಎಲ್ಲ ನೆಲೆಗಳಿಗೆ ಸಂಪರ್ಕ ಒದಗಿಸುವ ಜತೆಗೆ, ಯುದ್ಧವಿಮಾನಗಳು, ಅವಾಕ್ಸ್ ಸಿಸ್ಟಂ ಮತ್ತು ಡ್ರೋನ್​ಗಳ ನಡುವೆ ಭೂಕೇಂದ್ರದ ಜತೆ ಸಂಪರ್ಕ ಕಲ್ಪಿಸಲು ನೆರವಾಗಲಿದೆ.
 • ಪ್ರಸ್ತುತ ಈ ಕಾರ್ಯಗಳಿಗೆ ಭಾರತ ವಿದೇಶಿ ಉಪಗ್ರಹಗಳನ್ನು ಅವಲಂಬಿಸಿದೆ. ಇಸ್ರೋ ಉಪಗ್ರಹದಿಂದಾಗಿ ಸೇನೆ ಕಾರ್ಯಚಟುವಟಿಕೆ ಸೋರಿಕೆ ಮಾಡುವ ಸಾಧ್ಯತೆ ಕಡಿಮೆಯಾಗಿದೆ.

ಡ್ರೋನ್ ವ್ಯವಸ್ಥೆ ಬಲವರ್ಧನೆ:

 • ಅಮೆರಿಕದಿಂದ ಭಾರತ ಪ್ರಿಡೇಟರ್-ಬಿ ಅಥವಾ ಸೀ ಗಾರ್ಡಿಯನ್ ಡ್ರೋನ್​ಗಳನ್ನು ಖರೀದಿಸಲು ಪ್ರಯತ್ನಿಸುತ್ತಿದೆ. ಈ ಡ್ರೋನ್​ಗಳನ್ನು ಉಪಗ್ರಹದ ನೆರವಿನಿಂದ ನಿಯಂತ್ರಿಸಬಹುದಾಗಿದೆ. ಜಿಸ್ಯಾಟ್-7ಎ ಉಪಗ್ರಹ ಬಳಸಿ ಡ್ರೋನ್​ಗಳನ್ನು ಸುಲಭವಾಗಿ ನಿಯಂತ್ರಿಸಬಹುದು. ಜತೆಗೆ ಇವುಗಳನ್ನು ಹೆಚ್ಚಿನ ಎತ್ತರದಲ್ಲಿ ಹಾರಾಡಿಸುವ ಮೂಲಕ ಶತ್ರುಗಳ ಮೇಲೆ ಮಾರಣಾಂತಿಕ ದಾಳಿ ಮಾಡಲು ಸಾಧ್ಯವಾಗಲಿದೆ.

ನೌಕಾ ಪಡೆಗೆ ರುಕ್ಮಿಣಿ ಬಲ:

 • 2013ರ ಸೆಪ್ಟೆಂಬರ್ 29ರಂದು ಇಸ್ರೋ ಹಾರಿಬಿಟ್ಟಿರುವ ರುಕ್ಮಿಣಿ ಎಂಬ ಜಿಸ್ಯಾಟ್-7 ಉಪಗ್ರಹ, ನೌಕಾಪಡೆಗೆ ಅಗತ್ಯವಾದ ನೆರವು ನೀಡುತ್ತಿದೆ. ಯುದ್ಧನೌಕೆಗಳ ಜತೆಗೆ ಜಲಾಂತರ್ಗಾಮಿಗಳು, ಸರಕು ಸಾಗಣೆ ಮತ್ತು ಪ್ರಯಾಣಿಕ ಹಡಗುಗಳ ನಡುವೆ ಸಂವಹನ ಏರ್ಪಡಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದೆ. ಇದೀಗ ಹಾರಿಬಿಟ್ಟಿರುವ ಜಿಸ್ಯಾಟ್-7ಎ ಮತ್ತು ಜಿಸ್ಯಾಟ್-6 ಉಪಗ್ರಹಗಳ ಸಮೂಹವು ಸೇನಾಪಡೆ ಪಾಲಿಗೆ ಸಂವಹನ ಕೇಂದ್ರವಾಗಿ ಮಾರ್ಪಡಲಿದೆ.

ಎಲ್ಲರಿಗೂ ಕನಿಷ್ಠ ಆದಾಯ ಘೋಷಣೆ

6.

ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಸರಕಾರ ಫೆಬ್ರವರಿ 1ರಂದು ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ, ಸಾರ್ವತ್ರಿಕ ಕನಿಷ್ಠ ಆದಾಯ ಎಂಬ ಯೋಜನೆಯನ್ನು ಘೋಷಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಏನಿದು ಯೋಜನೆ?

 • ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ವ್ಯಾಖ್ಯಾನದ ಪ್ರಕಾರ ಸಾರ್ವತ್ರಿಕ ಕನಿಷ್ಠ ಆದಾಯ ಎಂದರೆ, ದೇಶದ ಅಥವಾ ನಿರ್ದಿಷ್ಟ ಭೌಗೋಳಿಕ ಪ್ರದೇಶದ ಎಲ್ಲ ಜನರಿಗೂ ಸಮಾನವಾಗಿ ಒಂದು ಮೊತ್ತದ ಹಣವನ್ನು ವರ್ಗಾಯಿಸುವುದು. ಜನತೆ ಅದನ್ನು ತಮಗೆ ಬೇಕಾದಂತೆ ಖರ್ಚು ಮಾಡಬಹುದು. ಅದರ ವಿವರಗಳನ್ನು ಸರಕಾರಕ್ಕೆ ಕೊಡಬೇಕಿಲ್ಲ. ಇದರಿಂದ ಬಡತನ ನಿರ್ಮೂಲನೆಗೆ ಸಹಕಾರಿಯಾಗಲಿದೆ. ಜೀವನಾವಶ್ಯಕ ವಸ್ತು, ಸೇವೆಗಳ ಖರೀದಿಗೆ ನೆರವಾಗಲಿದೆ.

ಬೆಂಬಲಿಸುತ್ತಿರುವ ಪ್ರಮುಖರು?

 • ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ ಬರ್ಗ್‌, ಟೆಲ್ಸಾ ಸಿಇಒ ಎಲಾನ್‌ ಮಸ್ಕ್‌ ಮಂತಾದ ತಂತ್ರಜ್ಞಾನ ಉದ್ಯಮಿಗಳು, ಮುಕ್ತ ಮಾರುಕಟ್ಟೆಯ ಪ್ರತಿಪಾದಕ ಮಿಲ್ಟನ್‌ ಫ್ರೈಡ್‌ಮನ್‌ ಮುಂತಾದವರು ಸಾರ್ವತ್ರಿಕ ಕನಿಷ್ಠ ಆದಾಯದ ಪರಿಕಲ್ಪನೆಯನ್ನು ಬೆಂಬಲಿಸಿದ್ದಾರೆ. ರೊಬಾಟ್‌, ಆಟೊಮೇಶನ್‌ ಇತ್ಯಾದಿಗಳಿಂದ ಉದ್ಯೋಗ ಕಳೆದುಕೊಂಡ ಸಂದರ್ಭ ಇಂಥ ಯೋಜನೆ ನೆರವಾಗಲಿದೆ ಎನ್ನುತ್ತಾರೆ ಅವರು.

ಯಾವ ರಾಷ್ಟ್ರದಲ್ಲಿ ಇದೆ?

 • ಈ ಪರಿಕಲ್ಪನೆ ಕೆಲವು ರಾಷ್ಟ್ರಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿದೆ. ಫಿನ್ಲೆಂಡ್‌ನಲ್ಲಿ 2017ರಲ್ಲಿ 2,000 ನಿರುದ್ಯೋಗಿಗಳಿಗೆ ಮಾಸಿಕ 665 ಡಾಲರ್‌ ನೀಡುವ ಪದ್ಧತಿ ಆರಂಭವಾಯಿತು. ನೆದರ್ಲೆಂಡ್‌, ಕೆನಡಾದಲ್ಲೂ ಇದರ ಪ್ರಯೋಗ ನಡೆದಿದೆ.

Related Posts
“19 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಗಂಗಾ ಕಲ್ಯಾಣ  ಸುದ್ಧಿಯಲ್ಲಿ ಏಕಿದೆ ? ಪರಿಶಿಷ್ಟ ಜಾತಿ (ಎಸ್ಸಿ) ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಅಂಬೇಡ್ಕರ್ ನಿಗಮದ ಮೂಲಕ ಜಾರಿಗೆ ತಂದಿರುವ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಡುವ ಗಂಗಾ ಕಲ್ಯಾಣ ಯೋಜನೆ ಅನ್ನದಾತರ ಬದಲು ಅಧಿಕಾರಿಗಳು, ಬೋರ್​ವೆಲ್ ಏಜೆನ್ಸಿದಾರರ ಆರ್ಥಿಕ ಕಲ್ಯಾಣಕ್ಕೆ ದಾರಿ ...
READ MORE
“22 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಅರಣ್ಯ ನಿವಾಸಿಗರ ತೆರವಿಗೆ ಸುಪ್ರೀಂ ಆದೇಶ ಸುದ್ಧಿಯಲ್ಲಿ ಏಕಿದೆ ? ದೇಶಾದ್ಯಂತ ಕಾಡುಗಳಲ್ಲಿ ವಾಸಿಸುವ ಹತ್ತು ಲಕ್ಷ ಕ್ಕೂ ಹೆಚ್ಚಿನ ಬುಡಕಟ್ಟು ಮತ್ತು ಆದಿವಾಸಿ ಕುಟುಂಬಗಳನ್ನು ಕಾಡಿನಿಂದ ಹೊರಹಾಕಲು ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿದೆ. ಈ ಕುರಿತು ರಾಜ್ಯಗಳು ಸಲ್ಲಿಸಿದ್ದ ಅಫಿಡವಿಟ್‌ ...
READ MORE
“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳ್ಳಂದೂರು ಕೆರೆ ಸುದ್ಧಿಯಲ್ಲಿ ಏಕಿದೆ ? ನೊರೆಕಾಟದ ಮೂಲಕ ಸದಾ ಸುದ್ದಿಯಾಗುವ ಬೆಳ್ಳಂದೂರು ಕೆರೆಯಲ್ಲಿ ನೀರಿನ ಪ್ರಮಾಣವೇ ಕಡಿಮೆ ಆಗುತ್ತಿದ್ದು, ಕೆರೆ ಬತ್ತುವ ಆತಂಕ ಸ್ಥಳೀಯರಲ್ಲಿ ತಲೆದೋರಿದೆ. ಆದರೆ, ಈ ಬಗ್ಗೆ ತಜ್ಞರಿಂದ ಹಲವು ವಿಶ್ಲೇಷಣೆಗಳು ವ್ಯಕ್ತವಾಗಿವೆ. ಕೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ...
READ MORE
“14 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಅತ್ಯಮೂಲ್ಯ ಖನಿಜ ಪೈರೋಕ್ಲಾಸ್ಟಿಕ್‌ ರಾಕ್ಸ್‌ ಪತ್ತೆ ಸುದ್ಧಿಯಲ್ಲಿ ಏಕಿದೆ ? ಭಾರತದಲ್ಲೇ ಅಪರೂಪವಾಗಿರುವ ಖನಿಜವೊಂದು ಕೋಲಾರ ಗೋಲ್ಡ್‌ ಫೀಲ್ಡ್‌ ಖ್ಯಾತಿಯ ಕೆಜಿಎಫ್‌ ಬಳಿ ಪತ್ತೆಯಾಗಿದ್ದು, ಭಾರತೀಯ ಭೂವಿಜ್ಞಾನ ಇಲಾಖೆಯು ಇದರ ಸಂರಕ್ಷಣೆಗೆ ಮುಂದಾಗಿದೆ. ಕೆಜಿಎಫ್‌ ಬಳಿಯ ಪೆದ್ದಪಲ್ಲಿ ಗ್ರಾಮದಲ್ಲಿ ಈ ಅಪರೂಪದ ಖನಿಜವಿದ್ದು, ಮೇಲ್ನೋಟಕ್ಕೆ ...
READ MORE
“21 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿದ್ಯುತ್ ಕಡಿತಕ್ಕೆ ಸೋಲಾರ್ ಪರಿಹಾರ ಸುದ್ಧಿಯಲ್ಲಿ ಏಕಿದೆ ?ಬೇಸಗೆ ಬಂದರೆ ಲೋಡ್‌ ಶೆಡ್ಡಿಂಗ್‌ ಜತೆಗೆ ವಿದ್ಯುತ್‌ ಬಿಲ್‌ ಕೂಡ ದುಬಾರಿ. ಇದಕ್ಕೆ ಪರ್ಯಾಯವೆಂದರೆ ನಮ್ಮ ಮನೆಯಲ್ಲಿ ನಾವೇ ವಿದ್ಯುತ್‌ ಉತ್ಪಾದಿಸಿಕೊಳ್ಳುವುದು. ಒಂದು ಬಾರಿಯ ಹೂಡಿಕೆಯಿಂದ ಆಗುವ ಸಾಕಷ್ಟು ಲಾಭವೇ ಸೋಲಾರ್‌ ವಿದ್ಯುತ್‌ನತ್ತ ಹೆಚ್ಚು ...
READ MORE
“5 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳೆ ದರ್ಶಕ ಆ್ಯಪ್ ಸುದ್ಧಿಯಲ್ಲಿ ಏಕಿದೆ ? ರಾಜ್ಯ ಸರ್ಕಾರದ ಬೆಳೆ ದರ್ಶಕ ಆ್ಯಪ್ ಇದೀಗ ರೈತಸ್ನೇಹಿಯಾಗಿದ್ದು, ಅಂಗೈಯಲ್ಲೇ ಜಮೀನು ಹಾಗೂ ಬೆಳೆ ಸಮೀಕ್ಷೆ ಮಾಹಿತಿ ಲಭಿಸಲಿದೆ. ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆ 'ಬೆಳೆ ದರ್ಶಕ್' ಆಪ್ ಅನ್ನು ಪರಿಚಯಿಸಿದ್ದು, ಈ 'ಬೆಳೆ ದರ್ಶಕ್' ...
READ MORE
“03 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಲೆನಾಡಿನಲ್ಲಿ ಮಂಗನಕಾಯಿಲೆ: ಸುದ್ಧಿಯಲ್ಲಿ ಏಕಿದೆ ?ಮಹಾಮಾರಿ ಮಂಗನಕಾಯಿಲೆಗೆ ನಾಲ್ವರು ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಸಿಗೆಯಲ್ಲಿ ತೀರ್ಥಹಳ್ಳಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಂಗನ ಕಾಯಿಲೆ ಈ ಬಾರಿ ಬೇಸಿಗೆಗೂ ಮುಂಚೆ ಕಾಣಿಸಿಕೊಂಡಿದೆ. ಜತೆಗೆ ಸಾಗರಕ್ಕೂ ವ್ಯಾಪಿಸಿದೆ. ಮಂಗನಕಾಯಿಲೆ ಹರಡದಂತೆ ಪ್ರತಿವರ್ಷ ಲಸಿಕೆ ಹಾಕಲಾಗುತ್ತಿತ್ತು. ಆದರೆ ...
READ MORE
“04 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉಪ್ಪು ನೀರು ಸಿಹಿಯಾಗೋ ಕಾಲ ಸುದ್ಧಿಯಲ್ಲಿ ಏಕಿದೆ ?ಸಮುದ್ರದ ಉಪ್ಪು ನೀರು ಸಿಹಿಯಾಗಿ ಮನೆ ಮನೆಗೆ ತಲುಪುವ ಕಾಲ ಸನ್ನಿಹಿತವಾಗುತ್ತಿದೆ. ಮಂಗಳೂರು ತೈಲಾಗಾರ (ಎಂಆರ್‌ಪಿಎಲ್‌) ಕೈಗೆತ್ತಿಕೊಂಡಿರುವ ಬಹು ನಿರೀಕ್ಷೆಯ ಉಪ್ಪು ನೀರು ಸಂಸ್ಕರಣಾ ಘಟಕ 2020ರ ವೇಳೆಗೆ ಕಾರ್ಯಗತಗೊಳ್ಳುವ ನಿರೀಕ್ಷೆಯಿದ್ದು, ರಾಜ್ಯದಲ್ಲೇ ಪ್ರಥಮ ...
READ MORE
“23 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದೇಸಿ ಬೋಫೋರ್ಸ್‌ ಫಿರಂಗಿ  ಸುದ್ಧಿಯಲ್ಲಿ ಏಕಿದೆ ?ದೇಸಿ ನಿರ್ಮಿತ ಮೊದಲ ಬೋಫೋರ್ಸ್‌ ಫಿರಂಗಿಗಳು ಇದೇ 26ರಂದು ಸೇನೆಗೆ ಸೇರ್ಪಡೆಯಾಗಲಿವೆ ಎಂದು ಸೇನಾ ಮೂಲಗಳು ಹೇಳಿವೆ. ಮೂಲ ಬೋಫೋರ್ಸ್‌ ಫಿರಂಗಿಯ ತಂತ್ರಜ್ಞಾನವನ್ನೇ ಉನ್ನತೀಕರಿಸಿ ಶೇಕಡ 81ರಷ್ಟು ದೇಸಿ ಉತ್ಪನ್ನ ಬಳಸಿ ಅಭಿವೃದ್ಧಿಪಡಿಸಿದ 155 ಎಂಎಂ/45 ...
READ MORE
13th ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಎನ್‌ಐಆರ್‌ಎಫ್‌ ರಾಯಂಕಿಂಗ್‌ ಸುದ್ಧಿಯಲ್ಲಿ ಏಕಿದೆ ? ಅಂಕಿ ಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳದೆ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ರಾರ‍ಯಂಕಿಂಗ್‌ ಫ್ರೇಮ್‌ವರ್ಕ್‌(ಎನ್‌ಐಆರ್‌ಎಫ್‌) ನಲ್ಲಿ ಪಿಇಎಸ್‌ ವಿಶ್ವವಿದ್ಯಾಲಯಕ್ಕೆ 149 ನೇ ಸ್ಥಾನ ನೀಡಲಾಗಿದೆ. ಈ ತಪ್ಪನ್ನು ಸರಿಪಡಿಸದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ವಿವಿ ಕುಲಾಧಿಪತಿ ಡಾ.ಎಂ.ಆರ್‌.ದೊರೆಸ್ವಾಮಿ ...
READ MORE
“19 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“22 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“14 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“21 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“5 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“03 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“04 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“23 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
13th ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು

Leave a Reply

Your email address will not be published. Required fields are marked *