“20 ಫೆಬ್ರವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಏರೋ ಇಂಡಿಯಾ 2019

1.

ಸುದ್ಧಿಯಲ್ಲಿ ಏಕಿದೆ ?ಮಿಲಿಟರಿ ಮತ್ತು ವೈಮಾನಿಕ ಕ್ಷೇತ್ರದ ತಂತ್ರಜ್ಞಾನ, ಉತ್ಪನ್ನಗಳ ಅನಾವರಣಗೊಳಿಸುವ ಏಷಿಯಾದ ಅತಿದೊಡ್ಡ, ಪ್ರತಿಷ್ಠಿತ ‘ಏರೋ ಇಂಡಿಯಾ 2019’ ಹನ್ನೆರಡನೇ ಆವೃತ್ತಿಗೆ ಯಲಹಂಕ ವಾಯುನೆಲೆಯಲ್ಲಿ ವಿದ್ಯುಕ್ತವಾಗಿ ಚಾಲನೆ ದೊರೆತಿದೆ.

 • ಮಿಲಿಟರಿ ವಿಮಾನ, ಹೆಲಿಕಾಪ್ಟರ್‌ಗಳು, ನಾಗರೀಕ ವಿಮಾನಗಳು ವೈಮಾನಿಕ ಪ್ರದರ್ಶನವನ್ನು ನೀಡಲಿವೆ.
 • ದೇಶ-ವಿದೇಶಗಳ ನೂರಾರು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಈ ವೇಳೆ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಹಲವು ಮಹತ್ವದ ಒಪ್ಪಂದಗಳು, ಅಭಿವೃದ್ಧಿ ಒಪ್ಪಂದಗಳು, ಮಾರಾಟ, ಖರೀದಿಗೆ ಸಹಿ ಬೀಳಲಿವೆ.

ಭಾಗವಹಿಸುವ ಪ್ರಮುಖ ರಾಷ್ಟ್ರಗಳು

 • ಅಮೆರಿಕಾ, ಫ್ರಾನ್ಸ್‌, ಇಸ್ರೇಲ್‌, ಇಂಗ್ಲೆಂಡ್‌, ರಷ್ಯಾ, ಜರ್ಮನಿ, ಸ್ವೀಡನ್‌, ಸಿಂಗಾಪುರ, ಸ್ಪೇನ್‌, ಇಟಲಿ, ಯುಎಇ, ದಕ್ಷಿಣ ಕೋರಿಯಾ, ಕೆನಡಾ, ಡೆಕ್‌ ರಿಪಬ್ಲಿಕ್‌. ಆಸ್ಪ್ರೇಲಿಯಾ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ರಾಷ್ಟ್ರಗಳು ಏರೋ ಇಂಡಿಯಾದಲ್ಲಿ ರಕ್ಷಣಾ ವಲಯ ಮತ್ತು ನಾಗರೀಕ ವಿಮಾನಯಾನ ವಲಯ ಹಾಗೂ ಮಿಲಿಟರಿ ಕ್ಷೇತ್ರದ ತಂತ್ರಜ್ಞಾಳನ್ನು ಪ್ರದರ್ಶಿಸಲಿವೆ.

ಪ್ರದರ್ಶನ ನೀಡಲಿರುವ ವಿಮಾನಗಳು

 • ಫ್ರಾನ್ಸ್‌ನ ರಫೇಲ್‌, ಭಾರತೀಯ ವಾಯುಸೇನೆಯ 45ನೇ ಸ್ಕ್ವಾಡ್ರನ್‌ನ ತೇಜಸ್‌, ಏರೋಬ್ಯಾಟಿಕ್‌ ತಂಡಗಳಾದ ಸಾರಂಗ್‌ ಹೆಲಿಕಾಪ್ಟರ್‌ಗಳು, ಇಂಗ್ಲೆಂಡ್‌ ಯಕೋವ್ಲೇವ್‌ ತಂಡ, ಎಚ್‌ಎಎಲ್‌ ನಿರ್ಮಿತ ಲಘು ನಾಗರೀಕ ವಿಮಾನ ಸರಸ್‌, ಪ್ರಯಾಣಿಕ ವಿಮಾನ ಏರ್‌ಬಸ್‌ 330, ಸುಖೋಯ್‌ 30, ಎಇಡಬ್ಲ್ಯುಎಸಿಎಸ್‌, 2ನೇ ಮಹಾಯುದ್ಧದ ವಿಂಟೇಜ್‌ ಫೈಟರ್‌ ಪರಶುರಾಮ್‌, ಜಾಗ್ವಾರ್‌, ತೇಜಸ್‌, ಎಚ್‌ಎಎಲ್‌ನ ಲಘು ಯುದ್ದ ಹೆಲಿಕಾಪ್ಟರ್‌ಗಳು, ಮಿಗ್‌ 21, ಪಿ-8 ಐ ಸೇರಿದಂತೆ 61 ವಿಮಾನಗಳು ಹಾರಾಟ ಪ್ರದರ್ಶನ ಮತ್ತು ಸ್ಥಳದಲ್ಲಿ ಪ್ರದರ್ಶನಕ್ಕೆ ಇರಲಿವೆ.

ತೆರಿಗೆ ಪಾವತಿದಾರರ ಲಾಂಜ್‌

 • ತೆರಿಗೆ ಇಲಾಖೆಯ ಸೇವೆಗಳು ಹಾಗೂ ತೆರಿಗೆ ಪಾವತಿ ಹಾಗೂ ಇನ್ನಿತರ ವಿಷಯಗಳ ಕುರಿತು ಮಹತ್ವ ತಿಳಿಸಲು ತೆರಿಗೆ ಇಲಾಖೆ ಕರ್ನಾಟಕ, ಗೋವಾ ವಲಯವೂ ಏರೋ ಇಂಡಿಯಾದಲ್ಲಿ ಸ್ಟಾಲ್‌ ತೆರೆಯುತ್ತಿದೆ.
 • ಮೊದಲ ಬಾರಿ ಏರೋ ಇಂಡಿಯಾದಲ್ಲಿ ಐಟಿ ಇಲಾಖೆ ಭಾಗವಹಿಸುತ್ತಿದ್ದು, ಪ್ಯಾನ್‌ಗೆ ಅರ್ಜಿ ಸಲ್ಲಿಕೆ, ಇ ಫೈಲಿಂಗ್‌, ಸೇವೆಗಳು, ಶುಲ್ಕ, ಸ್ವಚ್ಛ ವಹಿವಾಟು ಜೊತೆಗೆ ಕ್ವಿಜ್‌ ಕೂಡಾ ನಡೆಸಲಾಗುತ್ತದೆ. ಇದೇ ವೇಳೆ ಸಾರ್ವಜನಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅವುಗಳನ್ನು ಆಲಿಸಲಾಗುವುದು ಎಂದು ಐಟಿ ಇಲಾಖೆ ತಿಳಿಸಿದೆ.

ಸೂರ್ಯ ಕಿರಣ್‌ ಅನುಮಾನ

 • ಎರಡು ವಿಮಾನಗಳು ಪತನಗೊಂಡು ಒರ್ವ ಪೈಲಟ್‌ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸೂರ್ಯ ಕಿರಣ್‌ ವಿಮಾನಗಳು ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸುವುದು ಅನುಮಾನವಾಗಿದೆ.

”3ಡಿಅರ್‌ ಸ್ಟಿರಿಯೋಟ್ಯಾಕ್ಟಿಕ್‌ ವ್ಯವಸ್ಥೆ”

2.

ಸುದ್ಧಿಯಲ್ಲಿ ಏಕಿದೆ ?ಮಿದುಳು ಶಸ್ತ್ರಚಿಕಿತ್ಸೆಗೆ ನೆರವಾಗುವ ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಡಿ ನಿರ್ಮಾಣಗೊಂಡಿರುವ ತಂತ್ರಜ್ಞಾನ ಆಧಾರಿತ ”3ಡಿಅರ್‌ ಸ್ಟಿರಿಯೋಟ್ಯಾಕ್ಟಿಕ್‌ ವ್ಯವಸ್ಥೆ”ಯನ್ನು ಅಭಿವೃದ್ಧಿ ಪಡಿಸಲಾಗಿದೆ.

 • ಟ್ರೈಕ್ಯೂಲಾ ಟೆಕ್ನಾಲಜಿ ಮತ್ತು ಮಹಾಲಾಸ ಮೆಡಿಕಲ್‌ ಟೆಕ್ನಾಲಾಜಿ ವತಿಯಿಂದ ಅಭಿವದ್ಧಿ ಪಡಿಸಲಾಗಿರುವ ಮಿದುಳು ಶಸ್ತ್ರಚಿಕಿತ್ಸೆಗೆ ಬಳಕೆಯಾಗುವ ಈ ಸ್ವದೇಶಿ ನಿರ್ಮಿತ ಉಪಕರಣವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಲೋಕಾರ್ಪಣೆಗೊಳಿಸಿದರು.
 • ಪಾರ್ಕಿನ್‌ಸನ್‌ ಸೇರಿದಂತೆ ನಾನಾ ಬಗೆಯ ಮಿದುಳು ರೋಗಗಳನ್ನು ಸುಲಭದಲ್ಲಿ ಗುರುತಿಸಲು ಈ ಯಂತ್ರಗಳು ಸಹಾಯಕವಾಗಲಿವೆ. 3ಡಿಆರ್‌ ಹೆಡ್‌ ಫ್ರೇಮ್‌, ಪ್ಯಾಂಥೋಮ್‌ ಕ್ಯಾಲಿಬ್ರೇಶನ್‌ ಸಿಸ್ಟಂ, ಲೋಕಲೈಜರ್‌, 3ಡಿ ಆರ್ಕ್‌ ಸಿಸ್ಟಂ, ಹೆಡ್‌ ಪಿನ್ಸ್‌ ಒಳಗೊಂಡಂತೆ ನಾನಾ ಬಗೆಯ ಉಪಕರಣಗಳನ್ನು ಸಿದ್ಧಪಡಿಸಲಾಗಿದೆ. ಈ ವ್ಯವಸ್ಥೆ ಬಳಸಿ ಈಗಾಗಲೇ ಕೆಲವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಉತ್ತಮ ಫಲಿತಾಂಶ ದೊರೆತಿದೆ.

ಸ್ವದೇಶಿ ನಿರ್ಮಿತ ಉಪಕರಣ

 • ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯ ಮೂರು ವರ್ಷಗಳ ನಿರಂತರ ಸಂಶೋಧನೆಯ ಫಲವಾಗಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಈ ಉಪಕರಣ ಸಿದ್ಧಗೊಂಡಿದೆ.
 • ಇದಕ್ಕೆ ಸಲಹೆ, ಯಂತ್ರ ನಿರ್ಮಾಣ ಮಾಡಿದವರೆಲ್ಲರೂ ಎಲ್ಲರೂ ಸ್ವದೇಶದವರೇ ಆಗಿರುವುದು ಇದರ ಮೊತ್ತೊಂದು ವಿಶೇಷತೆಯಾಗಿದೆ. ಈ ಬಗೆಯ ವಿದೇಶಿ ಉಪಕರಣ ಆಮದು ಮಾಡಿಕೊಳ್ಳಲು 5 ಕೋಟಿ ರೂ. ಅಧಿಕ ವೆಚ್ಚವಾಗುತ್ತಿತ್ತು. ಆದರೆ ಸ್ವದೇಶಿ ನಿರ್ಮಾಣದಿಂದ ಇದರ ಬೆಲೆ ಕಡಿಮೆಯಾಗಿದ್ದು, ಈ ಮೊದಲು 25 ಲಕ್ಷ ರೂ. ಆಗುತ್ತಿದ್ದ ಶಸ್ತ್ರಚಿಕಿತ್ಸೆ ಇನ್ನು ಮುಂದೆ 15 ಲಕ್ಷ ರೂ. ಒಳಗೆ ದೊರೆಯಲಿದೆ

ಏನಿದರ ವಿಶೇಷತೆ?

 • ಸ್ಟೆರೋಟ್ಯಾಕ್ಟಿಕ್‌ ಮಿದುಳು ಸಂಬಂಧಿ ಸಮಸ್ಯೆಗಳನ್ನು ಸುಲಭ ರೀತಿಯಲ್ಲಿ ಪತ್ತೆ ಹಚ್ಚಿ, ಚಿಕಿತ್ಸೆ ನೀಡುವ ಉಪಕರಣವಾಗಿದೆ.
 • ಮಿದುಳಿನ ಪ್ರತಿಯೊಂದು ಭಾಗದ ಕಾರ್ಯಚಟುವಟಿಕೆಗಳು ಹಾಗೂ ನಿಸ್ತೇಜಗೊಂಡಿರುವುದನ್ನು ಮಾನಿಟರ್‌ನಲ್ಲಿ ದಾಖಲು ಮಾಡುತ್ತದೆ. ಇದರ ಮಾರ್ಗದರ್ಶನದಂತೆ ವೈದ್ಯರು ಮಿದುಳಿನ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಭಾಗವನ್ನು ಪ್ರವೇಶಿಸಿ ಶಸ್ತ್ರಚಿಕಿತ್ಸೆ ನಡೆಸಲು ಅನುಕೂಲವಾಗಲಿದೆ.
 • ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದಾಗ, ಪಾರ್ಕಿನ್‌ಸನ್‌ ಕಾಣಿಸಿಕೊಂಡಾಗ, ಮೂರ್ಛೆರೋಗ, ಮಿದುಳಿನ ಯಾವುದೇ ಭಾಗ ನಿಸ್ತೇಜಗೊಂಡಾಗ ಅದನ್ನು ಕ್ರಿಯಾಶೀಲಗೊಳಿಸಲು ಇದು ಸಹಕರಿಸಲಿದೆ,.

ಭಾರತ್‌ ಕೆ ವೀರ್‌ ಟ್ರಸ್ಟ್‌

3.

ಸುದ್ಧಿಯಲ್ಲಿ ಏಕಿದೆ ?ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೆರವು ನೀಡಲು ಸ್ಥಾಪಿಸಲಾಗಿರುವ ಭಾರತ್‌ ಕೆ ವೀರ್ ನಿಧಿಗೆ ಇದುವರೆಗೆ 46 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಟ್ರಸ್ಟ್ ಸ್ಥಾಪಿಸಿದ ಉದ್ದೇಶ

 • ದೇಣಿಗೆ ಹೆಸರಲ್ಲಿ ಕೆಲವರು ವಂಚನೆ ಮಾಡುವ ಸಾಧ್ಯತೆಗಳು ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವೇ ಈಗ ನಾಗರಿಕರಿಗೆ ದೇಣಿಗೆ ಸಲ್ಲಿಸಲು ವ್ಯವಸ್ಥೆ ಮಾಡಿದೆ.
 • ಭಾರತ್‌ ಕೆ ವೀರ್‌ ಎಂಬ ಟ್ರಸ್ಟ್‌ ಅನ್ನು ಆರಂಭಿಸಲಾಗಿದ್ದು, ಪ್ರಧಾನ ನಿರ್ದೇಶಕರು ಇದರ ನೇತೃತ್ವ ವಹಿಸುತ್ತಾರೆ.
 • ಈ ಟ್ರಸ್ಟ್‌ನಲ್ಲಿ ಸಂಗ್ರಹವಾಗುವ ದೇಣಿಗೆಗಳಿಂದ ಯೋಧರಿಗೆ ನೆರವು ನೀಡಲಾಗುವುದು.
 • ಬಿಎಸ್‌ಎಫ್‌, ಸಿಆರ್‌ಪಿಎಫ್‌, ಸಿಐಎಸ್‌ಎಫ್‌, ಐಟಿಬಿಪಿ, ಎನ್‌ಎಸ್‌ಜಿ, ಎಸ್‌ಎಸ್‌ಬಿ, ಅಸ್ಸಾಂ ರೈಫಲ್ಸ್‌ನಲ್ಲಿರುವ ಯೋಧರು ಹಾಗೂ ಅವರ ಕುಟುಂಬದವರಿಗೆ ನೆರವು ನೀಡಲಾಗುವುದು.
 • ಹುತಾತ್ಮ ಯೋಧರಿಗೆ ನೆರವು ನೀಡ ಬಯಸುವವರು ಈ ವೆಬ್‌ಸೈಟ್‌ ಮೂಲಕವೇ ದೇಣಿಗೆ ಸಲ್ಲಿಸಬೇಕೆಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

ಭಾರತ್ ಕೆ ವೀರ್

 • ಭಾರತೀಯ ಸಶಸ್ತ್ರ ಪಡೆಗಳ ಸದಸ್ಯರ ಪರವಾಗಿ ಭಾರತ ಸರ್ಕಾರ ಗೃಹ ಸಚಿವಾಲಯವು ಭಾರತ್ ಕೆ ವೀರ್ ನಿಧಿಯನ್ನು ಸಂಗ್ರಹಿಸುತ್ತಿದೆ.
 • ಈ ಉಪಕ್ರಮವನ್ನು ಗೃಹ ಸಚಿವ ರಾಜ್ನಾಥ್ ಸಿಂಗ್ ಅವರು ಪ್ರಾರಂಭಿಸಿದರು ಮತ್ತು ಪ್ರಸಿದ್ಧ ಹಿಂದಿ ಚಲನಚಿತ್ರ ನಟ ಅಕ್ಷಯ್ ಕುಮಾರ್ ಅವರಿಗೆ ಬೆಂಬಲ ನೀಡಿದರು.
 • ಇದು “ಭಾರತ್ ಕೆ ವೀರ್” ಕಾರ್ಪಸ್ಗೆ ವ್ಯಕ್ತಿಯು 15 ಲಕ್ಷದಷ್ಟು  ದೇಣಿಗೆ ನೀಡುವುದನ್ನುಅನುಮತಿಸುತ್ತದೆ  .
 • ಕಾರ್ಪಸ್ ಅನ್ನು ಖ್ಯಾತ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳ ಶ್ರೇಷ್ಠ ವ್ಯಕ್ತಿಗಳಿಂದ ಮಾಡಿದ ಸಮಿತಿಯು ಸಮಾನ ಸಂಖ್ಯೆಯಲ್ಲಿ ನಿರ್ವಹಿಸುತ್ತದೆ.
 • ಅವಶ್ಯಕ ಆಧಾರದ ಮೇಲೆ ವೀರ ಯೋದ್ಧರ ಕುಟುಂಬಕ್ಕೆ ಧನಸಹಾಯವನ್ನು ವಿನಿಯೋಗಿಸಲುಆ ಸಮಿತಿಯು ನಿರ್ಧರಿಸುತ್ತದೆ .

ಮಹಿಳೆಯರಿಗೆ ನೆರವು

4.

ಸುದ್ಧಿಯಲ್ಲಿ ಏಕಿದೆ ?ಮಹಿಳೆಯರ ಸುರಕ್ಷತೆಗೆ ತುರ್ತು ಸ್ಪಂದನ ಬೆಂಬಲ ವ್ಯವಸ್ಥೆ ಇ.ಆರ್.ಎಸ್.ಎಸ್. ಸೇರಿದಂತೆ ವಿವಿಧ ಶ್ರೇಣಿಯ ಸುರಕ್ಷತಾ ಉಪಕ್ರಮಗಳಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ದೆಹಲಿಯಲ್ಲಿ ಚಾಲನೆ ನೀಡಿದರು.

 • ದೇಶದ 16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ.
 • ಆಂಧ್ರಪ್ರದೇಶ, ಉತ್ತರಾಖಂಡ, ಪಂಜಾಬ್, ಕೇರಳ, ಮಧ್ಯಪ್ರದೇಶ, ರಾಜಾಸ್ಥಾನ, ಉತ್ತರ ಪ್ರದೇಶ, ತಮಿಳುನಾಡು, ಗುಜರಾತ್ ಮತ್ತು ಜಮ್ಮು ಮತ್ತು ಕಾಶ್ಮೀರ ಇದರಲ್ಲಿ ಸೇರಿವೆ.
 • ಈ ಸೇವೆಗಳನ್ನು ಈಗಾಗಲೇ ಹಿಮಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ನಲ್ಲಿ ಆರಂಭಿಸಲಾಗಿದೆ. ಸಂಕಷ್ಟದಲ್ಲಿರುವ ಮಹಿಳೆಯರು ದೇಶಾದ್ಯಂತ 112 ಸಂಖ್ಯೆಗೆ ಡಯಲ್ ಮಾಡಿ ನೆರವು ಪಡೆಬಹುದು. ಈ ವ್ಯವಸ್ಥೆಯಡಿಯಲ್ಲಿ ಎಲ್ಲ ರಾಜ್ಯಗಳೂ ಸಮರ್ಪಿತ ತುರ್ತು ಸ್ಪಂದನಾ ಕೇಂದ್ರ ಇಆರ್.ಸಿ. ಸ್ಥಾಪಿಸಬೇಕು.

112 ಅನ್ನು ಹೇಗೆ ಬಳಸಬೇಕು ಎಂಬ ಮಾಹಿತಿ ಇಲ್ಲಿದೆ.

 • ಸ್ಮಾರ್ಟ್ ಫೋನ್ ನಲ್ಲಿ ಪವರ್ ಬಟನ್ ಅನ್ನು ಮೂರು ಬಾರಿ ಒತ್ತಿ ತಕ್ಷಣವೇ ಇಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದು. ಫೀಚರ್ ಫೋನ್ ನಲ್ಲಿ ಸಂಖ್ಯೆ 5 ಅಥವಾ 9 ಅನ್ನು ದೀರ್ಘವಾಗಿ ಒತ್ತಿದರೆ ಆಂತಕದ ಕರೆ ಸಕ್ರಿಯವಾಗುತ್ತದೆ.
 • ಇ.ಆರ್.ಸಿ.ಯನ್ನು ನೇರವಾಗಿ ತುರ್ತು ಸ್ಪಂದನ ವಾಹನಗಳು ಮತ್ತು ಜಿಲ್ಲಾ ಕಮಾಂಡ್ ಕೇಂದ್ರದೊಂದಿಗೆ ಸಂಪರ್ಕಿಸಲಾಗಿರುತ್ತದೆ, ಆ ಮೂಲಕ ಸಂತ್ರಸ್ತರಿಗೆ ತಕ್ಷಣ ನೆರವು ಒದಗಿಸಲಾಗುತ್ತದೆ. ಈ ಉಪಕ್ರಮಕ್ಕಾಗಿ ನಿರ್ಭಯ ನಿಧಿಯಡಿ 321 ಕೋಟಿ ರೂಪಾಯಿಗಳ ಮೊತ್ತವನ್ನು ಒದಗಿಸಲಾಗಿದೆ.
 • ಕೇಂದ್ರ ಗೃಹ ಸಚಿವರು, ಇದೇ ಸಂದರ್ಭದಲ್ಲಿ ಎರಡು ಪೋರ್ಟಲ್ ಗಳಾದ ಲೈಂಗಿಕ ಅಪರಾಧಗಳ ತನಿಖೆಯ ಜಾಡು ಹಿಡಿಯುವ ವ್ಯವಸ್ಥೆ ಮತ್ತು ಸುರಕ್ಷಿತ ನಗರ ಅನುಷ್ಠಾನ ನಿಗಾ ಪೋರ್ಟಲ್ ಗೆ ಚಾಲನೆ ನೀಡಿದರು.

ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (ಇಆರ್ಎಸ್ಎಸ್)

 • ದೇಶದಾದ್ಯಂತ ಇಆರ್ಎಸ್ಎಸ್ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ನಿರ್ಭಯಾ ನಿಧಿ ಅಡಿಯಲ್ಲಿ ₨ 321.69 ಕೋಟಿ ನಿಗದಿಪಡಿಸಿದೆ.
 • ಈ ಯೋಜನೆಯಲ್ಲಿ, ಒಂದು ಸಂಖ್ಯೆಯು 112 ತುರ್ತು ಸೇವೆಗಳನ್ನು ಆಧರಿಸಿದೆ, ಇದು ರಾಜ್ಯದಲ್ಲಿ ತುರ್ತು ಪ್ರತಿಕ್ರಿಯೆ ಕೇಂದ್ರದ ಮೂಲಕ ಪೊಲೀಸ್, ಅಗ್ನಿಶಾಮಕ, ಆರೋಗ್ಯ ಮತ್ತು ಇತರ ಸಹಾಯ ಮಾರ್ಗಗಳನ್ನು ಸಂಪರ್ಕಿಸುತ್ತದೆ.
 • ಸೇವೆಯಲ್ಲಿ ‘112 ಭಾರತ’ ಸ್ಮಾರ್ಟ್ ಅಪ್ಲಿಕೇಶನ್ಗಳ ಪ್ಯಾನಿಕ್ ಬಟನ್ ಮತ್ತು ಇಆರ್ಎಸ್ಎಸ್ ಸ್ಟೇಟ್ ವೆಬ್ಸೈಟ್ ಅಂತರ್ಗತವಾಗಿರುವ ನಾಗರೀಕರಿಗೆ ತಕ್ಷಣದ ನೆರವು ದೊರೆಯುತ್ತದೆ.
 • ಎಮರ್ಜೆನ್ಸಿ ರೆಸ್ಪಾನ್ಸ್ನ ಪರಿಣಾಮಕಾರಿತ್ವವನ್ನು ಹೆಚ್ಚಿಸಲು, ಟೆಲಿಕಾಂ ಸೇವೆ ಒದಗಿಸುವವರು ಒದಗಿಸಿದ ಸ್ಥಾನ ಆಧಾರಿತ ಸೇವೆಗಳೊಂದಿಗೆ ಇಆರ್ಸಿ ಸಹ ಸಂಯೋಜಿಸಲ್ಪಟ್ಟಿದೆ.
 • ERSS ಅಡಿಯಲ್ಲಿ ಪ್ಯಾನ್-ಇಂಡಿಯಾ ಏಕ ತುರ್ತು ಸಂಖ್ಯೆ ‘112’ ಅನ್ನು ಪ್ರಾರಂಭಿಸುವ ಮೊದಲ ರಾಜ್ಯ ಹಿಮಾಚಲ ಪ್ರದೇಶ.
 • ದೇಶಾದ್ಯಂತ ಜನರಿಗೆ ಏಕೀಕೃತ ತುರ್ತು ಸೇವೆಗಳನ್ನು ಪ್ರವೇಶಿಸಲು ಸಹಾಯ ಮಾಡಲು ‘112 ಭಾರತ’ ಮೊಬೈಲ್ ಅಪ್ಲಿಕೇಶನ್ ತರುವಾಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊರಹೊಮ್ಮಲಿದೆ

ಡೀಸೆಲ್-ವಿದ್ಯುತ್ ಲೋಕೊಮೋಟಿವ್!

5.

ಸುದ್ಧಿಯಲ್ಲಿ ಏಕಿದೆ ?ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಡೀಸೆಲ್ ಚಾಲಿತ ಲೋಕೊಮೋಟಿವ್​ನ್ನು ವಿದ್ಯುತ್ ಚಾಲಿತವಾಗಿ ಪರಿವರ್ತಿಸಲಾಗಿದೆ. ಇದು ವಿಶ್ವದಲ್ಲೇ ಮೊದಲ ಯಶಸ್ವಿ ಪ್ರಯೋಗವೂ ಆಗಿದೆ.

 • 2,600 ಅಶ್ವಶಕ್ತಿ(ಎಚ್‌ಪಿ) ಸಾಮರ್ಥ್ಯ‌ದ ಎರಡು ಡೀಸೆಲ್‌ ಎಂಜಿನ್‌ಗಳನ್ನು 10,000 ಎಚ್‌ಪಿ ಸಾಮರ್ಥ್ಯ‌ದ ಎರಡು ಎಲೆಕ್ಟ್ರಿಕ್‌ ಎಂಜಿನ್‌ಗಳಾಗಿ ಪರಿವರ್ತನೆ ಮಾಡಲಾಗಿದೆ.
 • ಸಂಪೂರ್ಣ ಮೇಕ್‌ ಇನ್‌ ಇಂಡಿಯಾದನ್ವಯ ಭಾರತದ ಆರ್‌ಆ್ಯಂಡ್‌ ಡಿಯ ಎಂಜಿನಿಯರ್‌ಗಳು ದಾಖಲೆಯ ಕಡಿಮೆ ಅವಧಿಯಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಚಿತ್ತರಂಜನ್‌ ಲೊಕೊಮೋಟಿವ್‌ ವರ್ಕ್ಸ್‌(ಸಿಎಲ್‌ಡಬ್ಲ್ಯು) ಮತ್ತು ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ನ ಎಂಜಿನಿಯರ್‌ಗಳ ನೆರವಿನಿಂದ ಯೋಜನೆ ತ್ವರಿತವಾಗಿ ಪೂರ್ಣಗೊಂಡಿದೆ.
 • ಎಂಜಿನ್‌ ಎಲೆಕ್ಟ್ರಿಕ್‌ ಆಗಿ ಪರಿವರ್ತನೆಯಾದ ಕಾರಣ, ಪರಿಸರ ಮಾಲಿನ್ಯ ಗಣನೀಯವಾಗಿ ತಗ್ಗಿದಂತಾಗಿದೆ.

ಪರಿಸರಸ್ನೇಹಿ, ಜೊತೆಗೆ ವೆಚ್ಚ ಉಳಿತಾಯ

 • ಡೀಸೆಲ್‌ ಎಂಜಿನ್‌ ಅನ್ನು ಎಲೆಕ್ಟ್ರಿಕ್‌ ಎಂಜಿನ್‌ ಆಗಿ ಪರಿವರ್ತಿಸುವುದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದರಿಂದ ರೈಲ್ವೆ ಇಲಾಖೆಗೆ ವೆಚ್ಚ ಉಳಿತಾಯವೂ ಆಗುತ್ತದೆ. ಜೊತೆಗೆ ಪರಿಸರಸ್ನೇಹಿಯೂ ಹೌದು. ಅಲ್ಲದೇ, ಸರಕು ರೈಲುಗಳ ಸರಾಸರಿ ವೇಗವೂ ವೃದ್ಧಿಯಾಗಲಿದೆ.

ಹಿನ್ನಲೆ

 • 2017ರ ಡಿಸೆಂಬರ್​ನಲ್ಲಿ ಈ ಪರಿವರ್ತನೆ ಯೋಜನೆಗೆ ಚಾಲನೆ ನೀಡಲಾಗಿತ್ತು. ಡೀ-ಕಾರ್ಬನೈಜೇಷನ್‌ ಮತ್ತು ಶೇ.100ರಷ್ಟು ವಿದ್ಯುತ್‌ ಎಂಜಿನ್‌ಗಳನ್ನು ಬಳಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದ್ದು, ಇದರನ್ವಯ ಯೋಜನೆಯು 2017ರ ಡಿಸೆಂಬರ್‌ನಲ್ಲಿ ಆರಂಭ.
Related Posts
“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಲಮನ್ನಾ ಮೊತ್ತ ತೀರಿಸಿ ಸುದ್ಧಿಯಲ್ಲಿ ಏಕಿದೆ ?ರೈತರ ಕೃಷಿ ಸಾಲಮನ್ನಾ ಮಾಡುತ್ತಿರುವ ರಾಜ್ಯ ಸರ್ಕಾರಗಳು ನಿಗದಿತ ಅವಧಿಯಲ್ಲಿ ಬ್ಯಾಂಕ್​ಗಳಿಗೆ ಹಣ ಭರಿಸಬೇಕು ಎಂದು ನಬಾರ್ಡ್ ಸೂಚಿಸಿದೆ. ಉದ್ದೇಶ ರಾಜ್ಯ ಸರ್ಕಾರಗಳು ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡದೆ ಸಾಲಮನ್ನಾ ಮಾಡುತ್ತಿವೆ ಎಂಬ ಆರೋಪದ ಮಧ್ಯೆಯೇ ನಬಾರ್ಡ್ ಈ ...
READ MORE
“19 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿಟಮಿನ್‌ ಎ ಲಸಿಕೆ ಕೊರತೆ ಸುದ್ಧಿಯಲ್ಲಿ ಏಕಿದೆ ?ಶಿಶುಗಳ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸುವ ವಿಟಮಿನ್‌ ಎ ಲಸಿಕೆಯು ರಾಜ್ಯದಲ್ಲಿ ಸಿಗುತ್ತಿಲ್ಲ. ಅನ್ನಾಂಗ ಕೊರತೆ ನಿವಾರಿಸುವ 10 ತಿಂಗಳಿಂದ 5 ವರ್ಷದೊಳಗಿನ ಮಕ್ಕಳಿಗೆ ಹಾಕುವ ವಿಟಮಿನ್ ಎ ಲಸಿಕೆಯು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ...
READ MORE
“09 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
 ವಾಣಿಜ್ಯ ಸಮರ  ಸುದ್ಧಿಯಲ್ಲಿ ಏಕಿದೆ ?ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಉತ್ತಮಗೊಳ್ಳುತ್ತಿರುವ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ಸಮರ ತೀವ್ರಗೊಳ್ಳುವ ಸಾಧ್ಯತೆ ಇದೆ. ಕಾರಣ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ 2 ಸಾವಿರಕ್ಕೂ ಹೆಚ್ಚು ಉತ್ಪನ್ನಗಳಿಗೆ ನೀಡುತ್ತಿರುವ ಶೂನ್ಯ ತೆರಿಗೆಯನ್ನು ರದ್ದುಗೊಳಿಸುವ ಬಗ್ಗೆ ಅಮೆರಿಕ ...
READ MORE
” 08 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎನ್​ಪಿಎಸ್ ಸುದ್ಧಿಯಲ್ಲಿ ಏಕಿದೆ ?ಎನ್​ಪಿಎಸ್ (ಹೊಸ ಪಿಂಚಣಿ ಯೋಜನೆ) ರದ್ದತಿ ವಿಚಾರ ಕೇಂದ್ರ ಸರ್ಕಾರದ ಮಟ್ಟದಲ್ಲಿ ಬಾಕಿ ಇರುವಂತೆಯೇ, ಆ ನೌಕರರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಕೆಲವೊಂದು ಸೌಲಭ್ಯ ನೀಡಲು ಸಮ್ಮತಿಸಿದೆ. ಎನ್​ಪಿಎಸ್ ರದ್ದತಿಗಾಗಿ ಹೋರಾಟ ನಡೆಸುತ್ತಿರುವ ನೌಕರರು, ಅದರ ಜತೆಗೆ ಬೇರೆ ...
READ MORE
“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕಬ್ಬನ್‌ ಪಾರ್ಕ್‌ಗೆ ಏರ್‌ ಕ್ಲೀನರ್‌ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ರಾಜಧಾನಿಯಲ್ಲೂ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಈ ನಡುವೆ, ಅತಿ ಹೆಚ್ಚು ಜನರು ವಾಯು ಸೇವನೆಗೆ ಆಗಮಿಸುವ ಕಬ್ಬನ್‌ ಪಾರ್ಕ್‌ನಲ್ಲೂ ವಾಯು ಮಾಲಿನ್ಯ ಹೆಚ್ಚಿರುವುದನ್ನು ಮನಗಂಡು ಅಲ್ಲಿ ಗಾಳಿಯ ಶುದ್ಧೀಕರಣಕ್ಕೆ ಯಂತ್ರವನ್ನು ...
READ MORE
“11 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸೋಷಿಯಲ್‌ ಮಿಡಿಯಾ ಬಳಕೆಗೆ ಕಠಿಣ ನಿರ್ಬಂಧ ಸುದ್ಧಿಯಲ್ಲಿ ಏಕಿದೆ ?ಮತದಾರರ ಮೇಲೆ ಸಾಮಾಜಿಕ ಜಾಲತಾಣಗಳು ಬೀರುವ ಪ್ರಭಾವ ಅರಿತು ಚುನಾವಣಾ ಆಯೋಗ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಷಿಯಲ್‌ ಮಿಡಿಯಾಗಳ ಬಳಕೆ ಕುರಿತು ಹಲವು ಕಠಿಣ ನಿರ್ಬಂಧಗಳನ್ನು ಹೇರಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ...
READ MORE
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉದ್ಯೋಗ ಖಾತ್ರಿ ಹೆಚ್ಚಳ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಉದ್ಭವಿಸಿರುವ ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಕಾಯ್ದೆಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ 100 ದಿನಗಳ ಉದ್ಯೋಗವನ್ನು 150ಕ್ಕೆ ವಿಸ್ತರಿಸಲಾಗಿದ್ದು, ಈ ವರ್ಷ ಮಾನವ ದಿನಗಳ ಸೃಜನೆ ಗುರಿಯನ್ನು 8.5 ಕೋಟಿ ಯಿಂದ 10 ...
READ MORE
“17 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆರೋಗ್ಯ ಇಲಾಖೆಯ ವಾಟ್ಸ್‌ಆ್ಯಪ್‌ ಪ್ಲಾನ್‌ ಸುದ್ಧಿಯಲ್ಲಿ ಏಕಿದೆ ?ಮಗುವಿನ ಜನನಕ್ಕೆ ನೆರವಾಗುವ ಉದ್ದೇಶದಿಂದ 'ಸುರಕ್ಷಿತ ಗರ್ಭದಿಂದ ಸಂತಸದ ಕೈಗಳಿಗೆ' ಎಂಬ ಘೋಷ ವಾಕ್ಯದೊಂದಿಗೆ ವಿನೂತನ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ ಆಯೋಜಿಸಿದೆ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ವೈದ್ಯರು ಗರ್ಭಿಣಿಯರು ...
READ MORE
“10 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಪ್ರಸಾದ ತಯಾರಿಕೆಗೂ ಲೈಸೆನ್ಸ್ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಪ್ರಸಾದ ವಿನಿಯೋಗಿಸುವ 30 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ಆಹಾರ ತಯಾರಿಕಾ ಘಟಕಗಳಿಗೆ ಇನ್ನು ಲೈಸನ್ಸ್ ಕಡ್ಡಾಯವಾಗಲಿದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ 37 ಸಾವಿರ ದೇವಾಲಯಗಳೂ ಸೇರಿ 2 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳಿವೆ. ಈ ಪೈಕಿ ...
READ MORE
“25 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಾರುಕಟ್ಟೆ ಖಾತರಿ ಯೋಜನೆ ಸುದ್ಧಿಯಲ್ಲಿ ಏಕಿದೆ ?ಕೃಷಿ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಂದ ರೈತರಿಗಾಗುವ ವಂಚನೆ ತಪ್ಪಿಸುವುದಕ್ಕಾಗಿ ಕೆಲವು ಕೃಷಿ ಉತ್ಪನ್ನಗಳಿಗಷ್ಟೇ ಇರುವ ಕನಿಷ್ಠ ಬೆಂಬಲ ಬೆಲೆಯನ್ನು ವಾಣಿಜ್ಯ ಹಾಗೂ ಸಿರಿಧಾನ್ಯ ಬೆಳೆಗಳಿಗೂ ವಿಸ್ತರಿಸಿ ಮಾರುಕಟ್ಟೆ ಖಾತರಿ ಒದಗಿಸುವ ನಿರ್ಧಾರಕ್ಕೆ ಸರ್ಕಾರ  ಬಂದಿದೆ. ಏಕೆ ಈ ಯೋಜನೆ ...
READ MORE
“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“19 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“09 ಫೆಬ್ರವರಿ 2019 ರ ಕನ್ನಡ ಪ್ರಚಲಿತ
” 08 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“11 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“17 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“10 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“25 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *