“20th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಎಲೆಕ್ಷ ನ್‌ ಇನ್ಫೋ- ಬಿ ಫಾರಂಗೆ ಯಾಕಿಷ್ಟು ಮಹತ್ವ?

 • ಪಕ್ಷ ಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಬಳಿಕ ವ್ಯಾಪಕವಾಗಿ ಕೇಳಿ ಬರುವ ಪದವೇ ಬಿ -ಫಾರಂ. ಯಾವುದೇ ಅಭ್ಯರ್ಥಿ ರಾಜಕೀಯ ಪಕ್ಷ ದ ಅಧಿಕೃತ ಅಭ್ಯರ್ಥಿ ಎಂದು ಗುರುತಿಸಲು ಇದು ಮಹತ್ವದ ಪಾತ್ರ ವಹಿಸುತ್ತದೆ.
 • ಬಿ ಫಾರಂ ಇದ್ದರಷ್ಟೆ ರಾಜಕೀಯ ಪಕ್ಷಗಳ ಟಿಕೆಟ್‌ಗೆ ಬೆಲೆ. ಕೆಲವೊಂದು ಸಾರಿ ಪಕ್ಷ ವು ಟಿಕೆಟ್‌ ಅನ್ನು ಒಬ್ಬರಿಗೆ ನೀಡಿರುತ್ತದೆ, ಬಿ ಫಾರಂ ಅನ್ನು ಮತ್ತೊಬ್ಬರಿಗೆ ನೀಡಿರುತ್ತದೆ. ಇಂಥ ಸಂದರ್ಭದಲ್ಲಿ ಯಾರು ಸರಿಯಾದ ರೀತಿಯಲ್ಲಿ ಬಿ ಫಾರಂ ಸಲ್ಲಿಸುತ್ತಾರೋ ಅವರೇ ಅಧಿಕೃತ ಅಭ್ಯರ್ಥಿಯಾಗುತ್ತಾರೆ.
 • ಪಕ್ಷ ವೊಂದು ಅಧಿಕೃತವಾಗಿ ಘೋಷಿಸಲಾದ ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ವೇಳೆ ಅನೇಕ ಅರ್ಜಿಗಳ ಪೈಕಿ ಬಿ ಫಾರಂ ಕೂಡ ಒಂದು. ಈ ಫಾರಂನಲ್ಲಿ ಪಕ್ಷ ದ ಅಧ್ಯಕ್ಷ ರು, ಕಾರ್ಯದರ್ಶಿ ಇಲ್ಲವೇ ಪಕ್ಷ ನೀಡಿದ ವಿಶೇಷ ಅಧಿಕಾರದ ವ್ಯಕ್ತಿಯ ಸಹಿ ಇರುತ್ತದೆ.
 • ಆ ಮೂಲಕವೇ ಪಕ್ಷ ವು ತನ್ನ ಅಧಿಕೃತ ಅಭ್ಯರ್ಥಿ ಎಂಬುದಕ್ಕೆ ಚುನಾವಣಾಧಿಕಾರಿಗೆ ದೃಢೀಕರಣ ನೀಡುತ್ತದೆ. ಈ ಫಾರಂನಲ್ಲಿ ಐದು ಭಾಗಗಳಿದ್ದು ಅವುಗಳನ್ನು ಭರ್ತಿ ಮಾಡಬೇಕಾಗುತ್ತದೆ. ಹಾಗೆಯೇ ಯಾವ ಕ್ಷೇತ್ರದ ನಾಮಪತ್ರದ ಜತೆಗೆ ಬಿ ಫಾರಂ ಸಲ್ಲಿಸಲಾಗುತ್ತದೆಯೋ ಆ ಕ್ಷೇತ್ರದ 10 ಮತದಾರರು ಸೂಚಕರಾಗಬೇಕಾಗುತ್ತದೆ.
 • ಬಿ ಫಾರಂ ಇದ್ದರೆ ಮಾತ್ರ ಅಧಿಕಾರಿಯು ಆ ಪಕ್ಷ ಕ್ಕೆ ಸಂಬಂಧಿಸಿದ ಗುರುತನ್ನು ಮೀಸಲಾಗಿಡುತ್ತಾರೆ. ಒಂದು ವೇಳೆ, ಮೇಲೆ ಸೂಚಿಸಿದ ಯಾವುದೇ ನಿಯಮಗಳು ಪಾಲನೆಯಾಗದೇ ಇದ್ದಲ್ಲಿ ಚುನಾವಣಾಧಿಕಾರಿಯು ಅಂಥ ನಾಮಪತ್ರವನ್ನು ತಿರಸ್ಕರಿಸುವ ಹಕ್ಕನ್ನು ಹೊಂದಿರುತ್ತಾರೆ.

ಏ.24ರಂದು ಶೂನ್ಯ ನೆರಳು ದಿನ

 • ಏ. 24 ರಂದು ‘ಶೂನ್ಯ ನೆರಳಿನ ದಿನ’. ಅಂದು ಈ ಅಪರೂಪದ ಕ್ಷಣವನ್ನು ನೋಡಲು ಮರೆಬೇಡಿ.
 • ಸಾಮಾನ್ಯವಾಗಿ ಬೆಳಗಿನಿಂದ ಮಧ್ಯಾಹ್ನವಾಗುತ್ತಲೇ ನೆರಳಿನ ಉದ್ದ ಕಡಿಮೆಯಾಗುತ್ತಾ, ಸಂಜೆಯಾದಂತೆ ಹೆಚ್ಚುತ್ತಾ ಹೋಗುತ್ತದೆ. ಆದರೆ ಈ ಶೂನ್ಯ ನೆರಳಿನ ದಿನದಂದು ನೆರಳು ಅಕ್ಕಪಕ್ಕದಲ್ಲಿ ಎಲ್ಲೂ ಕಾಣಿಸುವುದಿಲ್ಲ.
 • ಕರ್ಕಾಟಕ ವೃತ್ತದ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವರ್ಷದಲ್ಲಿ ಎರಡು ಬಾರಿ ‘ಶೂನ್ಯ ನೆರಳಿನ ದಿನ’ ಕಾಣಬಹುದು. ಅಂದರೆ ಭೂಮಿ ಸೂರ್ಯನ ಸುತ್ತ ಚಲಿಸುತ್ತಿರುವಾಗ ಅದು 23.5 ಡಿಗ್ರಿ ದಕ್ಷಿಣ ಅಕ್ಷಾಂಶ (ಮಕರ ಸಂಕ್ರಾಂತಿ ವೃತ್ತ) ಮತ್ತು 23.5 ಡಿಗ್ರಿ ಉತ್ತರ (ಕರ್ಕಾಟಕ ವೃತ್ತ) ಇವುಗಳ ನಡುವೆ ಹಾದು ಹೋಗುವ ಸಂದರ್ಭದಲ್ಲಿ ಶೂನ್ಯ ನೆರಳಿನ ದಿನ ಉಂಟಾಗುತ್ತದೆ. ಈ ವೃತ್ತಗಳಿಂದಾಚೆ ಇರುವ ಪ್ರದೇಶಗಳಲ್ಲಿ ಶೂನ್ಯ ನೆರಳು ಉಂಟಾಗುವುದೇ ಇಲ್ಲ ಎಂದು ಖಗೋಳ ವಿಜ್ಞಾನಿಗಳು ಹೇಳುತ್ತಾರೆ.

ಭೂಮಿಯ ಅಳತೆ

 • ಕ್ರಿಸ್ತಪೂರ್ವ 276 ರಲ್ಲಿ ಗ್ರೀಕ್‌ನ ಗಣಿತಜ್ಞ ಏರೋಟಸ್ತೇನ್‌ ‘ಶೂನ್ಯ ನೆರಳು ದಿನ’ವನ್ನು ಬಳಸಿಕೊಂಡು ಭೂಮಿಯ ಸುತ್ತಳತೆಯನ್ನು ನಿಖರವಾಗಿ ಪತ್ತೆ ಮಾಡಿದ್ದಾರೆ. ಅದು ಇಂದಿನ ಅಳತೆಗೆ ಹೊಂದಿಕೆಯಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.

ವರ್ಷಕ್ಕೆ 2 ಶೂನ್ಯ ನೆರಳಿನ ದಿನ

 • ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಹಾಗೂ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಹಾದು ಹೋಗುವ ವೇಳೆ ಮಾತ್ರ ಈ ಅಪರೂಪದ ವಿದ್ಯಮಾನ ನಡೆಯುತ್ತದೆ. ಏ.24ರಂದು ಸೂರ್ಯ ನಡು ನೆತ್ತಿಯ ಮೇಲಿದ್ದಾಗ (ಸುಮಾರು 11.30ರಿಂದ 12.30ರ ನಡುವೆ)ಯಾವುದೇ ವಸ್ತುವಿನ ನೆರಳು ನೆಲಕ್ಕೆ ಬೀಳುವುದಿಲ್ಲ.
 • ಶೂನ್ಯ ನೆರಳಿನ ಸಮಯ ಪ್ರದೇಶದಿಂದ ಪ್ರದೇಶಕ್ಕೆ ಕೆಲ ನಿಮಿಷಗಳ ವ್ಯತ್ಯಾಸವನ್ನು ಹೊಂದಿರುತ್ತದೆ. ಅಂದರೆ ಮೊದಲಿಗೆ ಚೆನ್ನೈನಲ್ಲಿ,ನಂತರ ಬೆಂಗಳೂರಿನಲ್ಲಿ , ಬಳಿಕ ಮಂಗಳೂರಿನಲ್ಲಿ ಕಾಣಸಿಗುತ್ತದೆ.
 • ಸೂರ್ಯ ಉತ್ತರಾಯಣದಲ್ಲಿ ಮಕರ ಸಂಕ್ರಾಂತಿ ವೃತ್ತದಿಂದ ಕರ್ಕಾಟಕ ವೃತ್ತದೆಡೆಗೆ ಹಾದು ಹೋಗುವಾಗ (ಏ. 24ರಂದು) ಈ ವಿದ್ಯಮಾನ ಜರುಗುತ್ತದೆ. ಪುನಃ ದಕ್ಷಿಣಾಯಣದಲ್ಲಿ ಕರ್ಕಾಟಕ ವೃತ್ತದಿಂದ ಮಕರ ಸಂಕ್ರಾಂತಿ ವೃತ್ತದೆಡೆಗೆ ಹೋಗುವಾಗ (ಆ. 18ರಂದು) ಈ ವಿದ್ಯಮಾನ ನಡೆಯುತ್ತದೆ.
 • ಸೂರ್ಯ ಒಂದು ವೃತ್ತದಿಂದ ಮತ್ತೊಂದು ವೃತ್ತದೆಡೆಗೆ ಹಾದು ಹೋಗಲು ಆರು ತಿಂಗಳ ಅಂತರ ಇರುತ್ತದೆ.
 • ಈ ಸಂದರ್ಭದಲ್ಲಿ ನಿತ್ಯ ಬೇರೆ ಬೇರೆ ಪ್ರದೇಶಗಳಿಗೆ ಈ ವಿದ್ಯಮಾನ ಘಟಿಸುತ್ತದೆ. ಆದರೆ ಕರ್ಕಾಟಕ ಸಂಕ್ರಾಂತಿ ವೃತ್ತದ ಉತ್ತರಕ್ಕೆ ಇರುವ (ಭಾರತದಲ್ಲಿ ಮಧ್ಯಪ್ರದೇಶದ ಉತ್ತರಕ್ಕಿರುವ ಪ್ರದೇಶಗಳಲ್ಲಿ) ಹೊಸದಿಲ್ಲಿ, ಚಂಡೀಗಢ, ಲಕ್ನೋ, ಶ್ರೀನಗರಗಳಂತಹ ಪ್ರದೇಶಗಳಲ್ಲಿ ಶೂನ್ಯ ನೆರಳು ದಿನ ಘಟಿಸುವುದೇ ಇಲ್ಲ.

ಗುರುತಿಸುವುದು ಹೇಗೆ

 • ಶೂನ್ಯ ನೆರಳಿನ ದಿನ ಗಮನಿಸಲು ಯಾವುದೇ ಉಪಕರಣಗಳ ಬಳಕೆಯ ಅಗತ್ಯವಿಲ್ಲ. ಬದಲಿಗೆ ಒಂದು ಗಾಜಿನ ಲೋಟವನ್ನು ಬಿಸಿಲಿನಲ್ಲಿಟ್ಟು ಇಲ್ಲವೆ ಉದ್ದವಾದ ಕಂಬವನ್ನು ನೆಟ್ಟು ಇದನ್ನು ಪತ್ತೆ ಹಚ್ಚಬಹುದಾಗಿದೆ. ಇಲ್ಲಿ ಅವುಗಳ ನೆರಳು ಅಕ್ಕಪಕ್ಕ ಎಲ್ಲೂ ಬೀಳುವುದಿಲ್ಲ. ಪ್ರತಿಯೊಬ್ಬರು ಇದನ್ನು ಪರೀಕ್ಷಿಸಬಹುದು

ಸಾರ್ವಜನಿಕ ಸಾರಿಗೆಯಲ್ಲಿ ಪ್ಯಾನಿಕ್ ಸ್ವಿಚ್

 • ಅತ್ಯಾಚಾರ ಪ್ರಕರಣಗಳಿಂದಾಗಿ ದೇಶಾದ್ಯಂತ ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಪ್ರಶ್ನಿಸಿ ಚರ್ಚೆಗಳು ಹೆಚ್ಚುತ್ತಿರುವ ಬೆನ್ನಿಗೆ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ‘ಆತಂಕ ಬಟನ್ ’ (ಪ್ಯಾನಿಕ್ ಸ್ವಿಚ್) ಅಳವಡಿಕೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
 • ಟ್ಯಾಕ್ಸಿ ಮತ್ತು ಬಸ್​ಗಳಲ್ಲಿ ಪ್ರಯಾಣ ಸಂದರ್ಭ ಅಚಾನಕ್ ಎದುರಾಗುವ ಅಪಾಯದ ಸನ್ನಿವೇಶಗಳಲ್ಲಿ ಸ್ವಿಚ್ ಒತ್ತುವುದರಿಂದ ಸ್ಥಳೀಯ ಪೊಲೀಸ್ ಠಾಣೆಗೆ ಸಂದೇಶ ರವಾನೆಯಾಗುತ್ತದೆ.
 • ವಾಹನ ಸಂಚರಿಸುತ್ತಿರುವ ಸ್ಥಳದ ವಿಳಾಸ ಪೊಲೀಸರಿಗೆ ಲಭಿಸುತ್ತದೆ. ಜತೆಗೆ ಅಪಾಯ ಗಂಟೆ ಜೋರಾಗಿ ಸದ್ದು ಮಾಡುವುದರಿಂದ ವಾಹನಯಿರುವ ಪ್ರದೇಶದಲ್ಲಿನ ಸ್ಥಳೀಯರ ನೆರವನ್ನು ಪಡೆಯಲು ಕೂಡ ಅನುಕೂಲವಾಗಲಿದೆ.
 • ನಿರ್ಭಯಾ ಫಂಡ್ ಬಳಕೆ: ಈಗಾಗಲೇ ಪ್ಯಾನಿಕ್ ಸ್ವಿಚ್​ಗಳನ್ನು ಹಲವು ನಗರಗಳಲ್ಲಿ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಅಳವಡಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಐಐಟಿ ದೆಹಲಿ ಸಹಯೋಗದೊಂದಿಗೆ ಐಡಿ ಸಚಿವಾಲಯ ಸ್ವಿಚನ್ನು ತಯಾರಿಸಿದೆ.
 • ಇನ್ಮುಂದೆ ಯಾವುದೇ ಟ್ಯಾಕ್ಸಿ ಅಥವಾ ಸಾರ್ವಜನಿಕ ಸಾರಿಗೆ ವಾಹನಗಳ ನೋಂದಣಿ ವೇಳೆ ಸ್ವಿಚ್ ಇರುವುದು ಕಡ್ಡಾಯಗೊಳಿಸಲಾಗಿದೆ

ಆಪದ್ಬಾಂಧವ ವ್ಯವಸ್ಥೆ

 • ಅಪಾಯದ ಮುನ್ಸೂಚನೆ ಅಥವಾ ಸಂದರ್ಭ ಎದುರಾದಾಗ ಪ್ರಯಾಣಿಕರು ಸ್ವಿಚ್ ಒತ್ತಬಹುದು
 • ವಾಹನದಿಂದ ಜೋರಾಗಿ ಸದ್ದು ಮಾಡುವ ಅಲಾಮ್ರ್
 • ಳೀಯ ಪೊಲೀಸ್ ಠಾಣೆಗೆ ಸಂದೇಶ ರವಾನೆ, ವಾಹನದ ಪ್ರಸ್ತುತ ಸ್ಥಳದ ವಿಳಾಸ , ಲೈವ್ ವಿಡಿಯೋ ಪೊಲೀಸರಿಗೆ ಲಭ್ಯ
 • ಡ್ರೖೆವರ್ ಗುರುತು ದೃಢೀಕರಣ, ಕ್ಯಾಮರಾ, ಸ್ವಿಚ್ ಕಾರ್ಯನಿರ್ವಹಿಸುವಿಕೆ ಸ್ವಯಂಪರೀಕ್ಷೆ ಮತ್ತು ವಿರೂಪಗೊಳಿಸುವಿಕೆ ತಡೆ ವ್ಯವಸ್ಥೆ ಹೊಂದಿದೆ.

ಆಟೋ, ಟ್ಯಾಕ್ಸಿ ಚಾಲನೆಗೆ ಬ್ಯಾಡ್ಜ್ ಬೇಡ

 • ಲಘು ಮೋಟಾರು ವಾಹನ (ಎಲ್​ಎಂವಿ)ವಿಭಾಗದ ಟ್ಯಾಕ್ಸಿ, ಆಟೋ, ಇ-ರಿಕ್ಷಾ, ಇ-ಕಾರ್ಟ್ ಮತ್ತು ಗೂಡ್ಸ್ ರಿಕ್ಷಾ ಓಡಿಸಲು ಇನ್ನು ಮುಂದೆ ಸಾರಿಗೆ ವಾಹನ ಚಾಲನೆ (ಟ್ರಾನ್ಸ್​ಪೋರ್ಟ್)ಲೈಸೆನ್ಸ್ ಅಗತ್ಯವಿಲ್ಲ. ಕೇವಲ ಎಲ್​ಎಂವಿ ಲೈಸೆನ್ಸ್ ಇದ್ದವರೂ ಈ ವಾಹನ ಓಡಿಸಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿದೆ.
 • ರಾಜ್ಯಕ್ಕೆ ಸೂಚನೆ: 2011ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದ ಮುಕುಂದ್ ದೇವಗನ್ ಮತ್ತು ಓರಿಯೆಂಟರ್ ವಿಮಾ ಕಂಪನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಬಂದಿದೆ. ಈ ಆದೇಶ ಪಾಲಿಸುವಂತೆ ಎಲ್ಲ ರಾಜ್ಯದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸಚಿವಾಲಯ ಸೂಚನೆ ನೀಡಿದೆ.
 • ‘ಸುಪ್ರೀಂ ಕೋರ್ಟ್ ಆದೇಶದಂತೆ ಕೇವಲ ಮಧ್ಯಮ ಮತ್ತು ಭಾರಿ ಗಾತ್ರದ ಸರಕು ಹಾಗೂ ಪ್ಯಾಸೆಂಜರ್ ವಾಹನಗಳಿಗೆ ಮಾತ್ರ ಟ್ರಾನ್ಸ್​ಪೋರ್ಟ್ ಲೈಸೆನ್ಸ್ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಉಳಿದ ಯಾವುದೇ ವಾಹನಗಳಿಗೂ(ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡರೂ) ಟ್ರಾನ್ಸ್ ಪೋರ್ಟ್ ಲೈಸೆನ್ಸ್ ಅಗತ್ಯವಿಲ್ಲ.
 • ಗೇರ್​ಸಹಿತ ಮತ್ತು ರಹಿತ ಮೋಟಾರು ಸೈಕಲ್, 7,500 ಕೆ.ಜಿ.ಗಿಂತ ಕಡಿಮೆ ಇರುವ ಎಲ್​ಎಂವಿ (ಸರಕು ಮತ್ತು ಪ್ಯಾಸೆಂಜರ್) ಇ-ರಿಕ್ಷಾ, ಇ-ಕಾರ್ಟ್ ವಾಹನ ಓಡಿಸಲು ಎಲ್​ಎಂವಿ ಲೈಸೆನ್ಸ್ ಸಾಕು’ ಎಂದು ಸೂಚನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪಿಒಎಸ್ ಮೂಲಕ ನಗದು ಎಸ್​ಬಿಐನಿಂದ ಹೊಸ ಕೊಡುಗೆ

 • ದೇಶದ ಹಲವು ರಾಜ್ಯಗಳಲ್ಲಿ ನಗದು ಕೊರತೆ ಉಂಟಾಗಿರುವ ಬೆನ್ನಲ್ಲೇ ಗ್ರಾಹಕರು ಹಣ ಪಡೆದುಕೊಳ್ಳಲು ಎಸ್​ಬಿಐ ಹೊಸ ಸೌಲಭ್ಯ ಘೋಷಿಸಿದೆ.
 • ಕ್ಯಾಷ್ ಎಟ್ ಪಿಒಎಸ್ ಎಂಬ ಹೆಸರಿನ ಈ ಸೌಲಭ್ಯ ಬಳಸಿ, ಯಾವುದೇ ಬ್ಯಾಂಕಿನ ಡೆಬಿಟ್ ಕಾರ್ಡ್ ಮೂಲಕ ಗ್ರಾಹಕರು ಎಸ್​ಬಿಐನ ಪಾಯಿಂಟ್ ಆಫ್ ಸೇಲ್ ಮೆಷಿನ್​ಗಳ ಮೂಲಕ ನಗದು ಪಡೆಯಬಹುದಾಗಿದೆ.
 • ಟೈರ್ 1, 2 ಸಿಟಿಗಳಲ್ಲಿನ ಗ್ರಾಹಕರು ದಿನಕ್ಕೆ ಒಂದು ಸಾವಿರ, ಟೈರ್-3ನಿಂದ 6 ಸಿಟಿಯ ಗ್ರಾಹಕರು ದಿನಕ್ಕೆ ರೂ. 2000ವರೆಗೆ ನಗದು ಪಡೆಯಬಹುದು. ಇದಕ್ಕೆ ಯಾವುದೇ ಶುಲ್ಕವಿಲ್ಲ ಎಂದು ಎಸ್​ಬಿಐ ತಿಳಿಸಿದೆ.

ರಕ್ಷಣಾ ಯೋಜನಾ ಸಮಿತಿ

 • ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಧ್ಯಕ್ಷತೆಯಲ್ಲಿ ನೂತನ ರಕ್ಷಣಾ ಯೋಜನಾ ಸಮಿತಿ ರಚನೆಯಾಗಿದೆ. ದೇಶದ ಭದ್ರತೆ ಹಾಗೂ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಸುಧಾರಣೆ, ಇತರ ಯೋಜನೆಗಳ ಬಗ್ಗೆ ಈ ಸಮಿತಿಯು ಕೆಲಸ ಮಾಡಲಿದೆ.
 • ರಾಷ್ಟ್ರೀಯ ಭದ್ರತಾ ಸಲಹೆಗಾರರ ಜತೆಗೆ ಸೇನಾ ಮುಖ್ಯಸ್ಥರು, ರಕ್ಷಣಾ ಇಲಾಖೆ, ವಿದೇಶಾಂಗ ವ್ಯವಹಾರ ಇಲಾಖೆ ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿಗಳು ಕೂಡ ಇರುತ್ತಾರೆ.
 • ಇಲಾಖೆಗಳ ನಡುವೆ ಸಂವಹನ ಕೊರತೆ ಇರುವುದರಿಂದ ರಕ್ಷಣಾ ವ್ಯವಹಾರಗಳು ವಿಳಂಬವಾಗುತ್ತಿದ್ದವು. ಹೀಗಾಗಿ ಸೇನಾ ಮುಖ್ಯಸ್ಥರು ಹಾಗೂ ರಕ್ಷಣಾ ಇಲಾಖೆ ಅಧಿಕಾರಿಗಳ ಜತೆಗೆ ವಿದೇಶಾಂಗ ವ್ಯವಹಾರ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಸಮಿತಿಗೆ ಸೇರಿಸಲಾಗಿದೆ.
 • ಕಳೆದ ಬಜೆಟ್ ಬಳಿಕ ರಕ್ಷಣಾ ವ್ಯವಹಾರಗಳ ಒಪ್ಪಂದದ ವಿಳಂಬ ಕುರಿತು ಸೇನಾ ಮುಖ್ಯಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದರು. ಕೆಲ ಒಪ್ಪಂದಗಳ ಕಡತವನ್ನು ಆರ್ಥಿಕ ಇಲಾಖೆ ವರ್ಷಗಟ್ಟಲೇ ಧೂಳು ಹಿಡಿಸುತ್ತಿದೆ ಎಂದು ನೇರವಾಗಿ ಸೇನೆ ಆರೋಪಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಈ ಸಮಿತಿ ರಚಿಸಿದೆ.
 • ನಾಲ್ಕು ಉಪ ಸಮಿತಿ: ದೋವಲ್ ಅಧ್ಯಕ್ಷತೆಯ ಸಮಿತಿಯ ಜತೆಗೆ 4 ಉಪಸಮಿತಿಗಳನ್ನು ಕೂಡ ರಚಿಸಲಾಗಿದೆ. ನೀತಿ ಹಾಗೂ ನಿರೂಪಣೆ, ಯೋಜನೆ ಹಾಗೂ ಅಭಿವೃದ್ಧಿ, ರಕ್ಷಣಾ ಕಾರ್ಯತಂತ್ರ, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆಗೆ ಸಂಬಂಧಿಸಿ ಸಮಿತಿ ರಚನೆಯಾಗಲಿದೆ. ಈ ಸಮಿತಿಯ ಸದಸ್ಯರು ಹಾಗೂ ಕಾರ್ಯಾವಧಿಯು ಇನ್ನಷ್ಟೇ ನಿರ್ಧಾರವಾಗಬೇಕಿದೆ.

1970ರಲ್ಲಿ ಪ್ರಯೋಗ

 • ಸೇನೆಯನ್ನು ಬಲಪಡಿಸುವ ಉದ್ದೇಶದಿಂದ 1974ರಲ್ಲಿ ಇಂತಹದೊಂದು ಪ್ರಯೋಗ ಮಾಡಲಾಗಿತ್ತು. ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಆದರೆ ಈ ಸಮಿತಿಯು ನೆಪ ಮಾತ್ರವಾಗಿ ಉಳಿದಿತ್ತು.
 • ಕಾಲಕಾಲಕ್ಕೆ ಸಭೆಯನ್ನು ಕೂಡ ನಡೆಸಿರಲಿಲ್ಲ. ಹೀಗಾಗಿ 2001ರಲ್ಲಿ ಸಂಪುಟ ಸದಸ್ಯರ ಸಮಿತಿಯೊಂದು ಪ್ರತ್ಯೇಕ ಸಮಿತಿ ರಚನೆಗೆ ಶಿಫಾರಸು ಮಾಡಿತ್ತು. ಈ ಮೂಲಕ ರಕ್ಷಣಾ ವ್ಯವಹಾರ ಸರಳೀಕರಿಸುವ ಉದ್ದೇಶ ಹೊಂದಲಾಗಿತ್ತು.

~~~***ದಿನಕ್ಕೊಂದು ಯೋಜನೆ***~~~

ಪ್ರಧಾನ್ ಮಂತ್ರಿ ಕಿಸಾನ್ ಸಂಪದಾ ಯೋಜನೆ

 • 2016-20ರ 14 ನೇ ಹಣಕಾಸು ಆಯೋಗದ ಚಕ್ರದಲ್ಲಿ ಸಿಎನ್ಪಿಡಿಎ (ಆಗ್ರೋ -ಮರೈನ್ ಪ್ರೊಸೆಸಿಂಗ್ ಮತ್ತು ಆಗ್ರೋ -ಪ್ರೊಸೆಸಿಂಗ್ ಕ್ಲಸ್ಟರ್ಗಳ ಅಭಿವೃದ್ಧಿ ಯೋಜನೆ) ಮೇ 2017 ರಲ್ಲಿ ಕೇಂದ್ರೀಯ ವಲಯದಿಂದ ಸೆಂಟ್ರಲ್ ಸೆಕ್ಟರ್ ಸ್ಕೀಮ್ – ಅಂಗೀಕರಿಸಲ್ಪಟ್ಟಿತು. ಈ ಯೋಜನೆಯನ್ನು ಈಗ “ಪ್ರಧಾನ್ ಮಂತ್ರಿ ಕಿಸಾನ್ ಸಂಪದ ಯೋಜನೆ (PMKSY)” ಎಂದು ಮರುನಾಮಕರಣ ಮಾಡಲಾಗಿದೆ.
 • ಇದು ಮೆಗಾ ಫುಡ್ ಪಾರ್ಕ್ಸ್, ಇಂಟಿಗ್ರೇಟೆಡ್ ಕೋಲ್ಡ್ ಚೈನ್ ಮತ್ತು ಮೌಲ್ಯ ಸೇರ್ಪಡೆ ಮೂಲಸೌಕರ್ಯ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಶ್ಯೂರೆನ್ಸ್ ಇನ್ಫ್ರಾಸ್ಟ್ರಕ್ಚರ್ ಮುಂತಾದ ಸಚಿವಾಲಯದ ನಡೆಯುತ್ತಿರುವ ಯೋಜನೆಗಳನ್ನು ಒಳಗೊಂಡಿರುವ ಒಂದು ದೊಡ್ಡ ಯೋಜನೆಯೆಂದರೆ ಮತ್ತು ಕೃಷಿ ಪ್ರಕ್ರಿಯೆ ಕ್ಲಸ್ಟರ್ಗಳಿಗೆ ಮೂಲಭೂತ ಸೌಕರ್ಯ, ಬ್ಯಾಕ್ವರ್ಡ್ ಮತ್ತು ಫಾರ್ವರ್ಡ್ ಸೃಷ್ಟಿ ಸಂಪರ್ಕಗಳು, ಆಹಾರ ಸಂಸ್ಕರಣ ಮತ್ತು ಸಂರಕ್ಷಣಾ ಸಾಮರ್ಥ್ಯಗಳ ಸೃಷ್ಟಿ / ವಿಸ್ತರಣೆ.

ಉದ್ದೇಶ

 • PMKSY ಯ ಉದ್ದೇಶವೆಂದರೆ ಕೃಷಿಗೆ ಪೂರಕ ವಾತಾವರಣ ನಿರ್ಮಿಸುವುದು, ಸಂಸ್ಕರಣೆಯನ್ನು ಆಧುನೀಕರಿಸುವುದು ಮತ್ತು ಕೃಷಿ-ವ್ಯರ್ಥವನ್ನು ಕಡಿಮೆ ಮಾಡುವುದು.

ಕಾರ್ಯಗತಗೊಳಿಸುವ ಯೋಜನೆಗಳು

 • ಪಿಎಮ್ಕೆಎಸ್ವೈ ಅಡಿಯಲ್ಲಿ ಕೆಳಗಿನ ಯೋಜನೆಗಳನ್ನು ಜಾರಿಗೊಳಿಸಬೇಕು.
 • ಮೆಗಾ ಫುಡ್ ಪಾರ್ಕ್ಸ್
 • ಇಂಟಿಗ್ರೇಟೆಡ್ ಕೋಲ್ಡ್ ಚೈನ್, ಮೌಲ್ಯ ಸೇರ್ಪಡೆ ಮತ್ತು ಸಂರಕ್ಷಣೆ ಮೂಲಸೌಕರ್ಯ
 • ಆಹಾರ ಸಂಸ್ಕರಣ / ಸಂರಕ್ಷಣಾ ಸಾಮರ್ಥ್ಯಗಳ ಸೃಷ್ಟಿ / ವಿಸ್ತರಣೆ
 • ಆಗ್ರೋ ಪ್ರೊಸೆಸಿಂಗ್ ಕ್ಲಸ್ಟರ್ಗಳಿಗೆ ಮೂಲಭೂತ ಸೌಕರ್ಯ
 • ಹಿಂದುಳಿದ ಮತ್ತು ಫಾರ್ವರ್ಡ್ ಲಿಂಜೆಜ್ಗಳ ರಚನೆಗೆ ಯೋಜನೆ
 • ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಭರವಸೆ ಮೂಲಸೌಕರ್ಯ
 • ಮಾನವ ಸಂಪನ್ಮೂಲಗಳು ಮತ್ತು ಸಂಸ್ಥೆಗಳು

ಹಣಕಾಸು ಹಂಚಿಕೆ

 • ರೂ. 6,000 ಕೋಟಿ ರೂ. 31,400 ಕೋಟಿ ರೂ., 334 ಲಕ್ಷ ಮೆಟ್ರಿಕ್ ಕೃಷಿ ಉತ್ಪನ್ನಗಳನ್ನು ರೂ. 1,04,125 ಕೋಟಿ ರೂ., 20 ಲಕ್ಷ ರೈತರಿಗೆ ಲಾಭ ಮತ್ತು 2019-20 ರ ವೇಳೆಗೆ ದೇಶದಲ್ಲಿ 5,30,500 ನೇರ / ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ.

ಪರಿಣಾಮ

 • PMKSY ಯ ಅನುಷ್ಠಾನವು ಕೃಷಿ ಗೇಟ್ನಿಂದ ಚಿಲ್ಲರೆ ಮಾರಾಟಕ್ಕೆ ಸಮರ್ಥ ಪೂರೈಕೆ ಸರಪಳಿ ನಿರ್ವಹಣೆಯೊಂದಿಗೆ ಆಧುನಿಕ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಲು ಕಾರಣವಾಗುತ್ತದೆ.
 • ಇದು ದೇಶದಲ್ಲಿ ಆಹಾರ ಸಂಸ್ಕರಣಾ ಕ್ಷೇತ್ರದ ಬೆಳವಣಿಗೆಗೆ ಒಂದು ದೊಡ್ಡ ಉತ್ತೇಜನವನ್ನು ನೀಡುತ್ತದೆ.
 • ಇದು ರೈತರಿಗೆ ಉತ್ತಮ ಬೆಲೆಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ರೈತರ ಆದಾಯದ ದ್ವಿಗುಣಕ್ಕೆ ದೊಡ್ಡ ಹೆಜ್ಜೆಯಾಗಿದೆ.
 • ಇದು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
 • ಇದು ಕೃಷಿ ಉತ್ಪನ್ನಗಳ ವ್ಯರ್ಥವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಸಂಸ್ಕರಣೆ ಮಟ್ಟವನ್ನು ಹೆಚ್ಚಿಸುತ್ತದೆ, ಸುರಕ್ಷಿತ ಮತ್ತು ಅನುಕೂಲಕರ ಸಂಸ್ಕರಿಸಿದ ಆಹಾರಗಳ ಲಭ್ಯತೆ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಮತ್ತು ಸಂಸ್ಕರಿಸಿದ ಆಹಾರಗಳ ರಫ್ತು ಹೆಚ್ಚಿಸುತ್ತದೆ.

ದಿನಕ್ಕೆ ಹತ್ತು ಪ್ರಶ್ನೋತ್ತರಗಳು

1. ಬಿ- ಫಾರಂ ಬಗೆಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾಗಿರುವ ಹೇಳಿಕೆಗಳನ್ನು ಗುರುತಿಸಿ
1. ಪಕ್ಷ ವೊಂದು ಅಧಿಕೃತವಾಗಿ ಘೋಷಿಸಲಾದ ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ವೇಳೆ ಅನೇಕ ಅರ್ಜಿಗಳ ಪೈಕಿ ಬಿ ಫಾರಂ ಕೂಡ ಒಂದು
2. ಈ ಫಾರಂನಲ್ಲಿ ಪಕ್ಷ ದ ಅಧ್ಯಕ್ಷ ರು, ಕಾರ್ಯದರ್ಶಿ ಇಲ್ಲವೇ ಪಕ್ಷ ನೀಡಿದ ವಿಶೇಷ ಅಧಿಕಾರದ ವ್ಯಕ್ತಿಯ ಸಹಿ ಇರುತ್ತದೆ.
A. ಮೊದಲನೇ ಹೇಳಿಕೆ ಸರಿಯಿದೆ
B. ಎರಡನೇ ಹೇಳಿಕೆ ತಪ್ಪಾಗಿದೆ
C. ಎರಡು ಹೇಳಿಕೆಗಳು ಸರಿಯಿದೆ
D. ಎರಡು ಹೇಳಿಕೆಗಳು ತಪ್ಪಾಗಿವೆ

2. ಶೂನ್ಯ ನೆರಳು ದಿನ ಯಾವಾಗ ಸಂಭವಿಸುತ್ತದೆ ?
A. ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಹಾದು ಹೋಗುವ ವೇಳೆ
B. ಸೂರ್ಯನು ದಕ್ಷಿಣಾಯದಿಂದ ಉತ್ತರಾಯಣಕ್ಕೆ ಹಾದು ಹೋಗುವ ವೇಳೆ
C. ಶೂನ್ಯ ನೆರಳು ದಿನ ಎಂದಿಗೂ ಸಂಭವಿಸುವುದಿಲ್ಲ
D. ಮೊದಲನೇ ಮತ್ತು ಎರಡನೇ ಹೇಳಿಕೆ ಯಲ್ಲಿ ಸಂಭವಿಸುತ್ತದೆ

3. ಭಾರತದ ಯಾವ ಪ್ರದೇಶಗಳಲ್ಲಿ ಶೂನ್ಯ ನೆರಳು ದಿನ ಘಟಿಸುವುದಿಲ್ಲ ?
A. ಹೊಸದಿಲ್ಲಿ, ಚಂಡೀಗಢ
B. ಲಕ್ನೋ ,ಶ್ರೀನಗರ
C. 1 ಮತ್ತು 2
D. ಯಾವುದು ಅಲ್ಲ

4. ಸಾರ್ವಜನಿಕ ಸಾರಿಗೆಯಲ್ಲಿ ಪ್ಯಾನಿಕ್ ಬಟನ್ ಅಳವಡಿಸಲು ಯಾವ ಹಣವನ್ನು ಬಳಸಿಕೊಳ್ಳಲಾಗುತ್ತದೆ ?
A. ನಿರ್ಭಯ ಫಂಡ್
B. ಪ್ರಧಾನ್ ಮಂತ್ರಿ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಫಂಡ್
C. ಮಹಿಳೆ ಮತ್ತು ಮಕ್ಕಳ ಸಚಿವಾಲಯದ ಹಣ
D. ಯಾವುದು ಅಲ್ಲ

5. ಲಘು ಮೋಟಾರ್ ವಾಹನ ಪರವಾನಗಿ ಬಗ್ಗೆ ಕೆಳಗಿನ ಹೇಳಿಕೆಯನ್ನು ಗಮನಿಸಿ ಸರಿಯಾಗಿರುವುದನ್ನು ಗುರುತಿಸಿ
1. ಲಘು ಮೋಟಾರು ವಾಹನ (ಎಲ್ಎಂವಿ)ವಿಭಾಗದ ಟ್ಯಾಕ್ಸಿ, ಆಟೋ, ಇ-ರಿಕ್ಷಾ, ಇ-ಕಾರ್ಟ್ ಮತ್ತು ಗೂಡ್ಸ್ ರಿಕ್ಷಾ ಓಡಿಸಲು ಇನ್ನು ಮುಂದೆ ಸಾರಿಗೆ ವಾಹನ ಚಾಲನೆ (ಟ್ರಾನ್ಸ್ಪೋರ್ಟ್)ಲೈಸೆನ್ಸ್ ಅಗತ್ಯವಿದೆ
2. ಭಾರಿ ಗಾತ್ರದ ಸರಕು ಹಾಗೂ ಪ್ಯಾಸೆಂಜರ್ ವಾಹನಗಳಿಗೆ ಮಾತ್ರ ಟ್ರಾನ್ಸ್ಪೋರ್ಟ್ ಲೈಸೆನ್ಸ್ ಕಡ್ಡಾಯವಾಗಿ ಪಡೆದುಕೊಳ್ಳಬೇಕು.
A. ಮೊದಲನೇ ಹೇಳಿಕೆ ಸರಿಯಿದೆ
B. ಎರಡನೇ ಹೇಳಿಕೆ ಸರಿಯಿದೆ
C. ಎರಡು ಹೇಳಿಕೆಗಳು ಸರಿಯಿದೆ
D. ಎರಡು ಹೇಳಿಕೆಗಳು ತಪ್ಪಾಗಿವೆ

6. ಪಿಒಎಸ್ ಮೂಲಕ ನಗದು ಪಡೆದುಕೊಳ್ಳಲು ನೆರವಾಗುವಂತೆ ಯಾವ ಬ್ಯಾಂಕ್ ಸೌಲಭ್ಯ ಕಲ್ಪಿಸಿದೆ ?
A. ಎಸ್.ಬಿ .ಎಂ
B. ಎಸ್ .ಬಿ. ಐ
C. ಕರ್ನಾಟಕ ಬ್ಯಾಂಕ್
D. ಐಸಿಐಸಿಐ

7. ರಕ್ಷಣಾ ಯೋಜನಾ ಸಮಿತಿಯ 4 ಉಪಸಮಿತಿಗಳು ಯಾವುವು ?
A. ನೀತಿ ಹಾಗೂ ನಿರೂಪಣೆ, ಯೋಜನೆ ಹಾಗೂ ಅಭಿವೃದ್ಧಿ
B. ರಕ್ಷಣಾ ಕಾರ್ಯತಂತ್ರ,ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆಗೆ ಸಂಬಂಧಿಸಿ ಸಮಿತಿ
C. 1 ಮತ್ತು 2
D. ಯಾವುದು ಅಲ್ಲ

8. ವಿಶ್ವ ಸಂಸ್ಥೆಯ ಉಪಸಮಿತಿಗಳ ಚುನಾವಣೆಯಲ್ಲಿ ಯಾವ ದೇಶ ಪರಾಭವ ಗೊಂಡಿತು ?
A. ಭಾರತ
B. ಬಹರೇನ್
C. ಚೀನಾ
D. ಇರಾನ್

9. ಪ್ರಧಾನ್ ಮಂತ್ರಿ ಕಿಸಾನ್ ಸಂಪದಾ ಯೋಜನೆ ಯಾವ ಯೋಜನೆಗಳನ್ನು ಒಳಗೊಂಡಿದೆ
A. ಮೆಗಾ ಫುಡ್ ಪಾರ್ಕ್ಸ್, ಇಂಟಿಗ್ರೇಟೆಡ್ ಕೋಲ್ಡ್ ಚೈನ್
B. ಮೌಲ್ಯ ಸೇರ್ಪಡೆ ಮೂಲಸೌಕರ್ಯ, ಆಹಾರ ಸುರಕ್ಷತೆ
C. ಗುಣಮಟ್ಟ ಅಶ್ಯೂರೆನ್ಸ್ ಇನ್ಫ್ರಾಸ್ಟ್ರಕ್ಚರ್
D. ಮೇಲಿನ ಎಲ್ಲವು

10. ಯಾವ ರಾಜ್ಯ ಅಥವಾ ರಾಜ್ಯಗಳು ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಗೆ ಒಳಪಡಲಿಲ್ಲ ?
A. ಕೇರಳ
B. ತಮಿಳುನಾಡು
C. ಒಡಿಶಾ
D. ಮಹಾರಾಷ್ಟ್ರ

ಉತ್ತರಗಳು : 1.C 2.D 3.C 4.A 5.B 6.B 7.C 8.D 9.D 10.D 

Related Posts
Do you know what about Dasara Golden Chariot Train? KAS/KPSC 2016 Challengers
Dasara special package train tour on the Golden Chariot The Karnataka State Tourism Development Corporation (KSTDC) will launch the Dasara special package train tour on the Golden Chariot from October 1, ...
READ MORE
Karnataka Current Affairs – KAS / KPSC Exams – 14th April
More seats for State students in PG medical, dental courses Nearly 64% of the total 2,281 postgraduate medical seats and 55.54% of the 929 postgraduate dental seats in the State have ...
READ MORE
Urban Development – Urban Environment
The physical expansion and demographic growth of urban areas have exerted an adverse impact on the urban environment. The large scale conversion of agricultural land in the urban periphery for urban uses like industries, housing ...
READ MORE
Karnataka Current Affairs – KAS / KPSC Exams – 6th Sep 2017
‘Rally for Rivers’ set to arrive in Mysuru The ‘Rally for Rivers’, flagged off by Union Minister of Environment, Forest and Climate Change Harsh Vardhan on September 3, will reach Mysuru ...
READ MORE
Rural Development- Objectives of Swachha Bharat
Construction of individual household toilets for families in the rural areas who do not have toilets. To improve the standard of living of the rural people and reformation in the health ...
READ MORE
There are several antiquated, discriminatory provisions in the Indian laws violating the rights of leprosy affected persons. For instance, in the Hindu Marriage Act, 1955 (Section 13 (v)), if one party ...
READ MORE
MLA absenteeism the norm at successive Assembly sessions
The State Assembly Secretariat reveals a stellar performance by just three MLAs, all from the Congress S. Rafeeq Ahmed of Tumakuru city, B.M. Nagaraja of Siraguppa, and Prasanna Kumar K.B. ...
READ MORE
Karnataka Current Affairs – KAS /KPSC Exams – 5th August 2017
BBMP: 40 Indira Canteens ready so far Inching towards its August 15 deadline, the Bruhat Bengaluru Mahanagara Palike (BBMP) is leaving no stone unturned in meeting its target of setting up ...
READ MORE
Cable TV Services in Urban Areas will be digital from 1st January 2016 The cable TV is one of the most popular medium of mass entertainment & education. The country has ...
READ MORE
FREE SUNDAY CURRENT AFFAIRS CLASS
KEEPING OUR COMMITMENT TO PROVIDE QUALITY CURRENT AFFAIRS.. NammaKPSC WILL BE CONDUCTING ITS 5th FREE SESSION THIS SUNDAY DID YOU MISS READING IMPORTANT ISSUES THIS MONTH? DONT WORRY... COME THIS ...
READ MORE
Do you know what about Dasara Golden Chariot
Karnataka Current Affairs – KAS / KPSC Exams
Urban Development – Urban Environment
Karnataka Current Affairs – KAS / KPSC Exams
Rural Development- Objectives of Swachha Bharat
Antiquated Indian laws affecting Leprosy
MLA absenteeism the norm at successive Assembly sessions
Karnataka Current Affairs – KAS /KPSC Exams
Cable TV digitisation
FREE SUNDAY CURRENT AFFAIRS CLASS