20th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಮನೆಗೊಬ್ಬರು ಯೋಗಪಟು ಯೋಜನೆ

 • ದೇಶದ 500 ಗ್ರಾಮಗಳನ್ನು ‘ಸಂಪೂರ್ಣ ಯೋಗ ಗ್ರಾಮ’ಗಳಾಗಿ ರೂಪಿಸುವ ಉಪಕ್ರಮವೊಂದನ್ನು ಆಯುಷ್‌ ಸಚಿವಾಲಯ ಹಮ್ಮಿಕೊಂಡಿದೆ.
 • ಪ್ರತಿ ಮನೆಯ ಕನಿಷ್ಠ ಒಬ್ಬ ವ್ಯಕ್ತಿ ನಿಯಮಿತವಾಗಿ ಯೋಗ ಅಭ್ಯಾಸ ಮಾಡಬೇಕು ಎಂಬುದು ಈ ಯೋಜನೆಯ ತಿರುಳು. ಜೂನ್‌ 21ರ ಅಂತರರಾಷ್ಟ್ರೀಯ ಯೋಗ ದಿನಕ್ಕೂ ಮೊದಲು ಈ ಯೋಜನೆಯನ್ನು ಜಾರಿಗೆ ತರುವ ಉದ್ದೇಶ ಇದೆ.
 • ಇಂತಹ ಕಾರ್ಯಕ್ರಮವನ್ನು ಕೇರಳದ ಕುನ್ನಂಥಾನಂ ಎಂಬ ಗ್ರಾಮ ಪಂಚಾಯತಿ ಜಾರಿಗೆ ತಂದಿದೆ. ಅದರಿಂದ ಸ್ಫೂರ್ತಿ ಪಡೆದುಕೊಂಡು ಆಯುಷ್ ಸಚಿವಾಲಯ ‘ಸಂಪೂರ್ಣ ಯೋಗ ಗ್ರಾಮ’ ಯೋಜನೆಯನ್ನು ರೂಪಿಸಿದೆ.
 • ಕುನ್ನಂಥಾನಂ ಮಾದರಿಯನ್ನೇ ದೇಶದಾದ್ಯಂತ ವಿಸ್ತರಿಸಲಾಗುವುದು
 • ಉಪಕ್ರಮದ ಭಾಗವಾಗಿ ಪ್ರತಿ ಯೋಗ ಗ್ರಾಮದಲ್ಲಿಯೂ ಒಂದು ಸಂಶೋಧನೆ ವಿಸ್ತರಣಾ ಘಟಕ ಸ್ಥಾಪನೆಯಾಗಲಿದೆ. ಯೋಗದಿಂದಾಗಿ ಜನರ ಆರೋಗ್ಯದ ಮೇಲೆ ಆಗಿರುವ ಪರಿಣಾಮಗಳನ್ನು ಈ ಘಟಕವು ಗುರುತಿಸಲಿದೆ.
 • ‘ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬಾರದಂತೆ ತಡೆಯವುದೇ ಮುಖ್ಯ’ ಎಂಬುದು ಆರೋಗ್ಯ ನೀತಿ 2017ರ ಗುರಿ.
 • ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯುತ್ತಮ ಮಾರ್ಗ. ಯೋಗವು ಅನಾರೋಗ್ಯವನ್ನು ತಡೆಯುತ್ತದೆ. ಜೀವಿತಾವಧಿ ಹೆಚ್ಚಳವಾಗುತ್ತದೆ, ಶಿಶು ಹಾಗೂ ತಾಯಿಯ ಮರಣ ಪ್ರಮಾಣ ಕಡಿಮೆ ಆಗುತ್ತದೆ’.
 • ಯೋಗ ದಿನಾಚರಣೆಗೆ ಪೂರ್ವಭಾವಿಯಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮೈಸೂರಿಗೆ ಅವಕಾಶ

 • ಈ ಬಾರಿಯ ಅಂತರ ರಾಷ್ಟ್ರೀಯ ಯೋಗ ದಿನದ ಮುಖ್ಯ ಕಾರ್ಯಕ್ರಮದ ಆತಿಥ್ಯ ವಹಿಸುವ ಅವಕಾಶ ಮೈಸೂರಿಗೆ ದೊರೆಯುವ ಸಾಧ್ಯತೆಯೂ ಇದೆ.
 • ಕಾರ್ಯಕ್ರಮಕ್ಕಾಗಿ ಮೈಸೂರು, ಜೈಪುರ, ಹೈದರಾಬಾದ್‌ ಮತ್ತು ಅಹಮದಾಬಾದ್‌ ನಗರಗಳನ್ನು ಗುರುತಿಸಲಾಗಿದೆ. ಈ ನಾಲ್ಕು ನಗರಗಳ ಪಟ್ಟಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ (ಪಿಎಂಒ) ಕಳುಹಿಸಲಾಗುವುದು. ಇವುಗಳ ಪೈಕಿ ಒಂದು ನಗರವನ್ನು ಪಿಎಂಒ ಆಯ್ಕೆ ಮಾಡಲಿದೆ.

ವಿದೇಶಿ ದೇಣಿಗೆ ಇನ್ನು ಸರಾಗ

 • ರಾಜಕೀಯ ಪಕ್ಷಗಳಿಗೆ ವಿದೇಶಗಳಿಂದ ಹರಿದು ಬರುವ ದೇಣಿಗೆ ಸಂಬಂಧಿಸಿದಂತೆ ಮಹತ್ವದ ತಿದ್ದುಪಡಿ ಮಸೂದೆ ಚರ್ಚೆಯಿಲ್ಲದೇ ಲೋಕಸಭೆಯಲ್ಲಿ ಇತ್ತೀಚೆಗೆ ಅಂಗೀಕಾರಗೊಂಡಿದೆ. ಇದರ ಪ್ರಕಾರ ರಾಜಕೀಯ ಪಕ್ಷಗಳು ವಿದೇಶದಿಂದ ಪಡೆದ ದೇಣಿಗೆ ಕುರಿತು ಯಾವುದೇ ತನಿಖೆ, ಪರಿಶೀಲನೆ ನಡೆಸಲು ಅವಕಾಶವಿಲ್ಲ.
 • ಹಣಕಾಸು ಸಚಿವರು ಸೂಚಿಸಿದ ತಿದ್ದುಪಡಿಗಳಲ್ಲಿ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಗೆ (ಎಫ್​ಸಿಆರ್​ಎ) ಕೆಲ ಮಾರ್ಪಾಟು ತರುವ ಅಂಶವೂ ಸೇರಿತ್ತು.

ಏನಿದು ಕಾಯ್ದೆ?

 • ಪ್ರಜಾಪ್ರತಿನಿಧಿ ಕಾಯ್ದೆಯ ಆಶಯದ ಅನ್ವಯ ವಿದೇಶಿ ದೇಣಿಗೆಗೆ ನಿರ್ಬಂಧ ವಿಧಿಸಲು 1976ರಲ್ಲಿ ಎಫ್​ಸಿಆರ್​ಎ ಕಾಯ್ದೆ ರೂಪಿಸಲಾಯಿತು.
 • ಭಾರತ ಅಥವಾ ಹೊರ ದೇಶದ ಯಾವುದೇ ಕಂಪನಿ ವಿದೇಶಗಳಲ್ಲಿ ನೋಂದಣಿಯಾಗಿದ್ದರೆ ಅಥವಾ ಅದರ ನೋಂದಾಯಿತ ಉಪಸಂಸ್ಥೆಗಳು ವಿದೇಶಗಳಲ್ಲಿದ್ದರೆ ಅವುಗಳನ್ನು ವಿದೇಶಿ ಕಂಪನಿಗಳೆಂದೇ ವ್ಯಾಖ್ಯಾನ ಮಾಡಲಾಗಿತ್ತು.
 • ಇದಕ್ಕೆ 2010ರಲ್ಲಿ ತಿದ್ದುಪಡಿ ತಂದು ವಿದೇಶಿ ದೇಣಿಗೆಯ ಲೆಕ್ಕಪತ್ರವನ್ನು ಪರಿಶೋಧನೆಗೆ ಒಳಪಡಿಸಲಾಗಿತ್ತು. ನಂತರ 2016ರ ಹಣಕಾಸು ಮಸೂದೆಗೆ ಒಪ್ಪಿಗೆ ಪಡೆಯುವಾಗ ಎಫ್​ಸಿಆರ್​ಸಿ 2010ರ ತಿದ್ದುಪಡಿ ಕಾಯ್ದೆಯ ಕೆಲವು ನಿಯಮಗಳಿಗೆ ಮಾರ್ಪಾಟು ಸೂಚಿಸುವ ಮೂಲಕ ಸರ್ಕಾರ ವಿದೇಶಿ ಸಂಸ್ಥೆಗಳಿಂದ ದೇಣಿಗೆ ಪಡೆಯುವುದನ್ನು ಸುಲಭಗೊಳಿಸಿತ್ತು.
 • ಅಂದರೆ, ಶೇ. 50ಕ್ಕಿಂತ ಕಡಿಮೆ ಷೇರನ್ನು ವಿದೇಶಿ ಕಂಪನಿಗಳಲ್ಲಿ ಹೊಂದಿದ್ದರೆ ಅಂತಹ ಸಂಸ್ಥೆ ಅಥವಾ ವ್ಯಕ್ತಿಯಿಂದ ಪಡೆದ ವಿತ್ತ ದಾನವನ್ನು ವಿದೇಶಿ ದೇಣಿಗೆ ಎನ್ನಲಾಗದು ಎಂದು ಬದಲಾಯಿಸಲಾಗಿತ್ತು.
 • ಇದರಿಂದ ವಿದೇಶಗಳಿಂದ ದೇಣಿಗೆ ಪಡೆಯುವುದು ಸುಲಭವಾಯಿತು. ಆದರೀಗ ಇಂತಹ ದೇಣಿಗೆಯನ್ನು ಲೆಕ್ಕಪತ್ರ ಸಲ್ಲಿಕೆಯಿಂದ ಹೊರಗಿಡುವ ತಿದ್ದುಪಡಿಗೆ ಲೋಕಸಭೆ ಅನುಮೋದನೆ ನೀಡಿದೆ. ಮಾತ್ರವಲ್ಲದೆ ಈ ನಿಯಮ 1976ರಿಂದಲೇ ಪೂರ್ವಾನ್ವಯವಾಗಲಿದೆ ಎಂಬ ಅಂಶವನ್ನು ಸೇರಿಸಿದೆ.

ಸಿಗಡಿ ಮೇಲಿನ ಸುಂಕ ಏರಿಕೆ

 • ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಸಿಗಡಿ ಮೇಲೆ ಅಮೆರಿಕದ ವಾಣಿಜ್ಯ ಇಲಾಖೆ ಆಂಟಿ ಡಂಪಿಂಗ್ ತೆರಿಗೆಯನ್ನು ಶೇ.0.84ರಿಂದ ಶೇ.2.34ಕ್ಕೆ ಏರಿಸಿದೆ.
 • ಭಾರತೀಯ ಆಮದುದಾರರು ಸಾಮಾನ್ಯ ದರಕ್ಕಿಂತ ಕಡಿಮೆ ಮೊತ್ತಕ್ಕೆ ಸಿಗಡಿ ಮಾರಾಟ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ತೆರಿಗೆಯಲ್ಲಿ ಮೂರು ಪಟ್ಟು ಏರಿಕೆ ಮಾಡಲಾಗಿದೆ. ಆದರೆ ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳುತ್ತಿರುವ ಸಿಗಡಿಗಳ ಮೇಲಿನ ಆಂಟಿ ಡಂಪಿಂಗ್ ತೆರಿಗೆಯನ್ನು ಶೇ.4.78ರಿಂದ ಶೇ.25.39ಕ್ಕೆ ಏರಿಸಿರುವುದರಿಂದ ಭಾರತದಿಂದ ಆಮದಾಗುವ ಸಿಗಡಿ ಮೇಲೆ ಹೆಚ್ಚಿನ ಪರಿಣಾಮ ಬೀರಲಾರದು.
 • ಅಮೆರಿಕ ಆಮದು ಮಾಡಿಕೊಳ್ಳುವ ಸಿಗಡಿಯ ಪ್ರಮಾಣದಲ್ಲಿ ಶೇ.32ರಷ್ಟನ್ನು ಭಾರತದಿಂದಲೇ ತರಿಸಿಕೊಳ್ಳಲಾಗುತ್ತದೆ

ಬಾಲಮಂದಿರದ ನಿರ್ಗತಿಕರಿಗೆ ‘ಜೀವನಾಧಾರ’ ಯೋಜನೆಗೆ ಚಾಲನೆ

 • ಬಾಲ ಮಂದಿರಗಳಿಂದ ಹೊರಬರುವ 18 ವರ್ಷ ಪೂರೈಸಿದ ಅನಾಥ ಹಾಗೂ ನಿರ್ಗತಿಕರಿಗೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆರ್ಥಿಕ ನೆರವು ನೀಡುವ ‘ಜೀವನಾಧಾರ’ ಯೋಜನೆಯನ್ನು ಜಾರಿಗೆ ತಂದಿದೆ.
 • ಇಲಾಖೆಯು ಹೊಸೂರು ರಸ್ತೆಯ ಬಾಲಮಂದಿರ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಜೀವನಾಧಾರ’ ಯೋಜನೆಗೆ ಸಚಿವೆ ಉಮಾಶ್ರೀ ಚಾಲನೆ ನೀಡಿದರು.

 ಏನಿದು ಜೀವನಾಧಾರ?

 • ರಾಜ್ಯದ ಬಾಲಮಂದಿರಗಳು, ವೀಕ್ಷಣಾಲಯಗಳು, ಅನುಪಾಲನಾ ಹಾಗೂ ವಿಶೇಷ ಗೃಹಗಳಲ್ಲಿ 18 ವರ್ಷ ತುಂಬಿದ (ಕೆಲವೊಮ್ಮೆ ಶಿಕ್ಷಣ ಮತ್ತಿತರ ಕಾರಣಗಳಿಂದ 21 ವರ್ಷದವರೆಗೆ ಅವಕಾಶ) ಅನಾಥ, ನಿರ್ಗತಿಕ ಮಕ್ಕಳು ಬಿಡುಗಡೆ ನಂತರ ಶಿಕ್ಷಣ ಪೂರ್ಣಗೊಳಿಸಲು ಅಥವಾ ಕೌಶಲಾಭಿವೃದ್ಧಿ, ವೃತ್ತಿ ತರಬೇತಿ ಪಡೆಯಲು 25 ವರ್ಷ ತುಂಬುವವರೆಗೆ ಮಾಸಿಕ 5 ಸಾವಿರ ರೂ. ಧನ ಸಹಾಯ ನೀಡಲಾಗುವುದು.
 • ಸ್ವಂತ ಉದ್ಯೋಗ ಪ್ರಾರಂಭಿಸಲು ಬ್ಯಾಂಕ್‌ ಸಾಲದ ಭದ್ರತೆಗಾಗಿ ಇಡುಗಂಟಾಗಿ 25 ಸಾವಿರ ರೂ. ನೀಡಲಾಗುತ್ತದೆ. ಇದಲ್ಲದೆ 45 ವರ್ಷದ ನಂತರ ಜೀವನ ಪರ್ಯಂತ 5 ಸಾವಿರ ರೂ. ಖಚಿತ ಆದಾಯ ನೀಡುವ ವ್ಯವಸ್ಥೆ ಇದರಲ್ಲಿದೆ.

ವಿದೇಶಿ ಕೋಲ್‌ ತರುವ ರಾಜ್ಯದ ಯತ್ನಕ್ಕೆ ಹಿನ್ನಡೆ

 • ವಿದೇಶದ ಕಲ್ಲಿದ್ದಲು ಆಮದು ಮಾಡಿಕೊಂಡು ಕೇಂದ್ರಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದ ರಾಜ್ಯ ಸರಕಾರಕ್ಕೆ ಹಿನ್ನಡೆಯಾಗಿದೆ. ಹೊರದೇಶದ ಕಲ್ಲಿದ್ದಲು ಬಳಕೆ ಮಾಡುವ ಧಾರಣಾ ಸಾಮರ್ಥ್ಯ‌ ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಇಲ್ಲದಿರುವುದೇ ಈ ಬೆಳವಣಿಗೆಗೆ ಕಾರಣವಾಗಿದೆ.
 • ಕಳೆದೊಂದು ವರ್ಷದಿಂದಲೂ ಕಲ್ಲಿದ್ದಲಿನ ತೀವ್ರ ಬರವಿದೆ. ಇದರಿಂದ ರಾಜ್ಯ ಹಾಗೂ ಕೇಂದ್ರ ಸರಕಾರಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿವಿದೇಶದಿಂದ 10 ಲಕ್ಷ ಮೆಟ್ರಿಕ್‌ ಟನ್‌ ಕಲ್ಲಿದ್ದಲು ತರಿಸಿಕೊಳ್ಳಲು ಇಂಧನ ಇಲಾಖೆಯು ಟೆಂಡರ್‌ ಪ್ರಕ್ರಿಯೆಗೂ ಚಾಲನೆ ನೀಡಿದೆ.
 • ಮರಳು ಕೊರತೆ ನೀಗಿಸಲು ಮಲೇಷ್ಯಾದಿಂದ ಆಮದು ಮಾಡಿಕೊಂಡು ತಕ್ಕಮಟ್ಟಿಗೆ ಸರಕರ ಯಶಸ್ಸು ಕಂಡಿದೆ. ಕಲ್ಲಿದ್ದಲು ವಿಚಾರದಲ್ಲೂ ಇದೇ ಮಾದರಿ ಅನುಸರಿಸುವ ಲೆಕ್ಕಾಚಾರ ನಡೆದಿದೆ.
 • ವಿದೇಶಿ ಕಲ್ಲಿದ್ದಲನ್ನು ಉಪಯೋಗಿಸಲು ಉಷ್ಣ ವಿದ್ಯುತ್‌ ಸ್ಥಾವರದ ಯಂತ್ರಗಳು ಸಜ್ಜುಗೊಳ್ಳದ್ದರಿಂದ ಈ ಪ್ರಯತ್ನ ಸಫಲಗೊಳ್ಳಲಾರದು ಎಂಬ ಅಭಿಪ್ರಾಯ ಇಲಾಖೆ ಮಟ್ಟದಲ್ಲೆ ವ್ಯಕ್ತವಾಗಿದೆ.

ತಾಂತ್ರಿಕ ತೊಂದರೆಯೇನು?

 • ರಾಜ್ಯದ ರಾಯಚೂರು ಉಷ್ಣ ವಿದ್ಯುತ್‌ ಸ್ಥಾವರದಲ್ಲಿ (ಆರ್‌ಟಿಪಿಎಸ್‌) 8 ಘಟಕಗಳಿವೆ. ಇಲ್ಲಿನ ಬಾಯ್ಲರ್‌ಗಳು ಅತ್ಯಂತ ಹಳೆಯದಾಗಿವೆ. ಜತೆಗೆ ಬಳ್ಳಾರಿ (ಬಿಟಿಪಿಎಸ್‌), ಯರಮರಸ್‌ (ವೈಟಿಪಿಎಸ್‌) ಸ್ಥಾವರಗಳನ್ನೂ ಭಾರತೀಯ ತಂತ್ರಜ್ಞಾನದಡಿ ನಿರ್ಮಿಸಲಾಗಿದೆ. ಹಾಗಾಗಿ ಈ ಘಟಕಗಳು ವಿದೇಶಿ ಕಲ್ಲಿದ್ದಲನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ವಿದ್ಯುತ್‌ ಉತ್ಪಾದಿಸಲು ಸಹಕರಿಸುವುದಿಲ್ಲ.
 • ಆರ್‌ಟಿಪಿಎಸ್‌ನಲ್ಲಿ ಶೇ. 20 ರಷ್ಟು ವಿದೇಶಿ ಕಲ್ಲಿದ್ದಲನ್ನು ದೇಶೀಯ ಕೋಲ್‌ನೊಂದಿಗೆ ಮಿಕ್ಸ್‌ ಮಾಡಿ ಉಪಯೋಗಿಸಬೇಕಾಗುತ್ತದೆ. ವೈಟಿಪಿಎಸ್‌ನಲ್ಲಿ ಮುಂದುವರಿದ ತಂತ್ರಜ್ಞಾನ ಅಳವಡಿಸಿಕೊಂಡಿದ್ದರಿಂದ ಶೇ. 30 ರಷ್ಟು ವಿದೇಶಿ ಕಲ್ಲಿದ್ದಲು ಮಿಶ್ರಣ ಮಾಡಬಹುದು.
 • ವೆಚ್ಚದ ದೃಷ್ಟಿಯಿಂದಲೂ ವಿದೇಶಿ ಕಲ್ಲಿದ್ದಲು ದುಬಾರಿಯಾಗುತ್ತದೆ. ಸ್ಥಳೀಯವಾಗಿ ಸಿಗುವ ಕೋಲ್‌ಗೆ ಪ್ರತಿ ಟನ್‌ಗೆ ಅಂದಾಜು 4,500 ರೂ. ಖರ್ಚು ಮಾಡಲಾಗುತ್ತಿದ್ದರೆ ಪ್ರತಿ ಟನ್‌ ವಿದೇಶಿ ಕಲ್ಲಿದ್ದಲಿಗೆ 7 ಸಾವಿರ ರೂ. ತೆಗೆದಿರಿಸಬೇಕಾಗುತ್ತದೆ. ಈ ಅಂಶವೂ ವಿದೇಶಿ ಕಲ್ಲಿದ್ದಲಿನ ವಿಚಾರದಲ್ಲಿ ಮರು ಪರಿಶೀಲನೆ ಕೈಗೊಳ್ಳುವಂತೆ ಮಾಡಿದೆ.

ಈಗಲೂ ಪರಿಸ್ಥಿತಿ ಗಂಭೀರ

 • ರಾಜ್ಯಕ್ಕೆ ವಾರ್ಷಿಕ 119.57 ಲಕ್ಷ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಅಗತ್ಯವಿದೆ. ಕೋಲ್‌ ಬ್ಲಾಕ್‌ ಹಂಚಿಕೆಯಲ್ಲಿ ತಕರಾರು ಉಂಟಾಗಿ ಕಾನೂನು ಹೋರಾಟ ನಡೆಯುತ್ತಿರುವುದರಿಂದ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
 • ಈಗಲೂ ಆರ್‌ಟಿಪಿಎಸ್‌ನಲ್ಲಿ ಒಂದೂವರೆ ದಿನ, ಬಿಟಿಪಿಎಸ್‌ನಲ್ಲಿ 2 ದಿನ ಹಾಗೂ ವೈಟಿಪಿಎಸ್‌ನಲ್ಲಿ 4 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಮಾತ್ರ ಇದೆ. ಆದರೆ, ವಿದ್ಯುತ್‌ ಉತ್ಪಾದನೆ ಮತ್ತು ಬೇಡಿಕೆಯನ್ನು ಸರಿದೂಗಿಸಲಾಗುತ್ತಿದೆ.
 • ಜಲವಿದ್ಯುತ್‌, ನವೀಕರಿಸಬಹುದಾದ ಇಂಧನ ಮೂಲಗಳು ಕೈಹಿಡಿದಿವೆ. ಕೇಂದ್ರದಿಂದ ಬರುವ ವಿದ್ಯುತ್‌ ಕೂಡ ಸರಿಯಾಗಿ ಸಿಗುತ್ತಿದೆ. ರಾಷ್ಟ್ರೀಯ ಉಷ್ಣ ವಿದ್ಯುತ್‌ ನಿಗಮ (ಎನ್‌ಟಿಪಿಸಿ) ಕೂಡಗಿಯಲ್ಲಿ ಸ್ಥಾಪಿಸಿರುವ ಘಟಕ-1 ರಿಂದಲೂ ಈಗ ವಿದ್ಯುತ್‌ (400 ಮೆಗಾ ವ್ಯಾಟ್‌) ದೊರಕುತ್ತಿದೆ. ಹಾಗಾಗಿ ವಿದ್ಯುತ್‌ ಪೂರೈಕೆ ಸುಗಮವಾಗಿದೆ.

***~~~ದಿನಕ್ಕೊಂದು ಯೋಜನೆ!~~~***

ರಾಷ್ಟ್ರೀಯ ಮಾನ್ಸೂನ್ ಮಿಶನ್ ಕಾರ್ಯಕ್ರಮ

 • ಆರ್ಥಿಕ ಮಾತುಕತೆಗಳ ಕ್ಯಾಬಿನೆಟ್ ಸಮಿತಿಯು ಇಂದು ಐದು ವರ್ಷಗಳ ಅವಧಿಯವರೆಗೆ ಅರ್ಥ್ ಸಿಸ್ಟಮ್ ಸೈನ್ಸ್ ಆರ್ಗನೈಸೇಶನ್ (ಇಎಸ್ಎಸ್ಒ) ಯಲ್ಲಿ ರಾಷ್ಟ್ರೀಯ ಮಾನ್ಸೂನ್ ಮಿಷನ್ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.

ರಾಷ್ಟ್ರೀಯ ಮಾನ್ಸೂನ್ ಮಿಷನ್ ಮುಖ್ಯ ಉದ್ದೇಶಗಳು:

 • ದೇಶಾದ್ಯಂತ ಕಾರ್ಯಾಚರಣೆಯ ಮಾನ್ಸೂನ್ ಮುನ್ಸೂಚನಾ ಪರಿಣತಿಯನ್ನು ಸುಧಾರಿಸಲು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮತ್ತು ಕಾರ್ಯಾಚರಣೆ ಏಜೆನ್ಸಿಗಳ ಶೈಕ್ಷಣಿಕ ಮತ್ತು ಆರ್ & ಡಿ ಸಂಘಟನೆಗಳ ನಡುವೆ ಕೆಲಸದ ಪಾಲುದಾರಿಕೆಯನ್ನು ನಿರ್ಮಿಸಲು.
 • ಭವಿಷ್ಯದ ಸಾಮರ್ಥ್ಯದ ಪರಿಣತಿಯನ್ನು ಸುಧಾರಿಸಲು ಕಲಾತ್ಮಕ ಕ್ರಿಯಾತ್ಮಕ ಮಾದರಿಯ ಚೌಕಟ್ಟನ್ನು ಹೊಂದಿಸಲು
 1. ಕಾಲೋಚಿತ ಮತ್ತು ವಿಸ್ತರಿತ ಶ್ರೇಣಿಯ ಭವಿಷ್ಯಸೂಚನಾ ವ್ಯವಸ್ಥೆ (16 ದಿನಗಳ ಕಾಲ ಒಂದು ಕಾಲ)
 2. ಮಧ್ಯಮ ವ್ಯಾಪ್ತಿಯ ಭವಿಷ್ಯಸೂಚನಾ ವ್ಯವಸ್ಥೆಯನ್ನು (15 ದಿನಗಳ ವರೆಗೆ) ಚಿಕ್ಕದಾಗಿಸುತ್ತದೆ.
 3. ಮಿಷನ್ಗೆ ಸಂಬಂಧಿಸಿದ ಸಂಶೋಧನಾ ಕಾರ್ಯವನ್ನು ಬೆಂಬಲಿಸಲು ಮಿಷನ್ ಐದು ವರ್ಷಗಳ ಕಾಲ 400 ಕೋಟಿ ರೂ.
  • ಅದರ ಅನುಷ್ಠಾನದ ನಂತರ ರಾಷ್ಟ್ರೀಯ ಮಾನ್ಸೂನ್ ಮಿಷನ್ ಎಲ್ಲಾ ಸಮಯದ ಮಾಪಕಗಳಲ್ಲಿ ಮಾನ್ಸೂನ್ ಊಹಿಸಲು ಕ್ರಿಯಾತ್ಮಕ ಭವಿಷ್ಯಸೂಚನಾ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಸಹಾಯ ಮಾಡುತ್ತದೆ, ಸುಧಾರಿತ ವ್ಯಾಪ್ತಿಯ ಕೌಶಲ್ಯದೊಂದಿಗೆ ಸೂಕ್ತವಾದ ವ್ಯಾಪ್ತಿಗೆ ಸೂಕ್ತವಾದ ವ್ಯಾಪ್ತಿಗೆ ಕಾಲೋಚಿತ ಸಮಯದ ಅಳತೆಗೆ ಸಣ್ಣ ವ್ಯಾಪ್ತಿ.
  • ಈ ಮುನ್ಸೂಚನಾ ವ್ಯವಸ್ಥೆಯನ್ನು ಆಧರಿಸಿ ಮುನ್ಸೂಚನೆಗಳು ಕೃಷಿ, ಜಲ ಸಂಪನ್ಮೂಲ ನಿರ್ವಹಣೆ, ವಿದ್ಯುತ್ ಉತ್ಪಾದನೆ, ದುರಂತ ನಿರ್ವಹಣೆ, ಪ್ರವಾಸೋದ್ಯಮ ಮತ್ತು ಸಾರಿಗೆ ಮುಂತಾದ ವಿವಿಧ ಕ್ಷೇತ್ರಗಳ ಅಗತ್ಯತೆಗಳನ್ನು ಪೂರೈಸುತ್ತವೆ.
  • ಹಿನ್ನೆಲೆ:
  • ಕೃಷಿ, ಜಲ ಸಂಪನ್ಮೂಲ ನಿರ್ವಹಣೆ, ವಿದ್ಯುತ್ ಉತ್ಪಾದನೆ ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಗಳು ಮತ್ತು ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ ಎಲ್ಲಾ ಕ್ಷೇತ್ರ ಮತ್ತು ಸಮಯದ ಮಾಪಕಗಳಲ್ಲಿ ಮಾನ್ಸೂನ್ ಮಳೆ ವ್ಯತ್ಯಾಸದ ಮುನ್ಸೂಚನೆಯು ಬಹಳ ಮುಖ್ಯವಾಗಿದೆ.
  • ಪ್ರಸ್ತುತ ಹವಾಮಾನ ಅಂಕಿಅಂಶ ಇಲಾಖೆಯಿಂದ ಬಳಸಲ್ಪಡುತ್ತಿರುವ ಪ್ರಸ್ತುತ ಅಂಕಿಅಂಶ ವಿಧಾನಗಳು ಸೂಕ್ಷ್ಮ ಪ್ರಾದೇಶಿಕ ಮತ್ತು ತಾತ್ಕಾಲಿಕ ಪ್ರಮಾಣದಲ್ಲಿ ಮುನ್ಸೂಚನೆಯ ನಿರ್ದಿಷ್ಟ ಬಳಕೆದಾರ ಅವಶ್ಯಕತೆಗಳನ್ನು ಪೂರೈಸಲು ಕೆಲವು ನಿರ್ಬಂಧಗಳನ್ನು ಹೊಂದಿವೆ.

1.ಸಂಪೂರ್ಣ ಯೋಗ ಗ್ರಾಮ ಉಪಕ್ರಮದ ಉದ್ದೇಶವೇನು?

A)ಪ್ರತಿ ಮನೆಯ ಕನಿಷ್ಠ ಒಬ್ಬ ವ್ಯಕ್ತಿ ನಿಯಮಿತವಾಗಿ ಯೋಗ ಅಭ್ಯಾಸ ಮಾಡಬೇಕು ಎಂಬುದು

B)ಪ್ರತಿ ಗ್ರಾಮಗಳಲ್ಲಿ ಯೋಗ ಅಭ್ಯಾಸ ಮಾಡಬೇಕು ಎಂಬುದು

C)1 ಮತ್ತು 2

D)ಯಾವುದು ಅಲ್ಲ

2.ಈ ಬಾರಿಯ ಅಂತರ ರಾಷ್ಟ್ರೀಯ ಯೋಗ ದಿನದ ಮುಖ್ಯ ಕಾರ್ಯಕ್ರಮದ ಆತಿಥ್ಯ ವಹಿಸಲು ಯಾವ ನಗರಗಳು ಸ್ಪರ್ದಿಸುತ್ತಿವೆ ?

A)ಮೈಸೂರು

B)ಜೈಪುರ

C)ಹೈದರಾಬಾದ್ ಮತ್ತು ಅಹಮದಾಬಾದ್

D)ಮೇಲಿನ ಎಲ್ಲವು

3.ಆಂಟಿ ಡಂಪಿಂಗ್ ಡ್ಯೂಟಿ ಎಂದರೇನು ?

A)ದೇಶೀಯ ಸರ್ಕಾರವು ವಿದೇಶಿ ರಫ್ತುಗಳ ಮೇಲೆ ಹೇರುವುದು

B)ದೇಶೀಯ ಸರ್ಕಾರವು ವಿದೇಶಿ ಆಮದುಗಳ ರಫ್ತುಗಳ ಮೇಲೆ ಹೇರುವುದು

C)1 ಮತ್ತು 2

D)ಯಾವುದು ಅಲ್ಲ

4.ಜೀವನಾಧಾರ ಯೋಜನೆ ಯಾವುದಕ್ಕೆ ಸಂಬಂಧಿಸಿದೆ ?

A)ರಾಜ್ಯದ ಬಾಲಮಂದಿರಗಳು, ವೀಕ್ಷಣಾಲಯಗಳು, ಅನುಪಾಲನಾ ಹಾಗೂ ವಿಶೇಷ ಗೃಹಗಳಲ್ಲಿ 18 ವರ್ಷ ತುಂಬಿದ ಅನಾಥ, ನಿರ್ಗತಿಕ ಮಕ್ಕಳು ಬಿಡುಗಡೆ ನಂತರ ಶಿಕ್ಷಣ ಪೂರ್ಣಗೊಳಿಸಲು

B)ವಯೋವೃದ್ಧರಿಗಾಗಿ ಪಿಂಚಣಿ ಯೋಜನೆ

C)ವಯಸ್ಕರ ಕಲಿಕೆಗೆ

D)ಮೇಲಿನ ಎಲ್ಲವು

5.ಯಾವ ರಾಷ್ಟ್ರವು ‘ಡಾಗ್ ಎ ಟ್ರಿಬ್ಯೂಟ್ ಟು ಜಗ್’ ಪುಸ್ತಕದೊಂದಿಗೆ ಜೆ ಡಾಲ್ಮಿಯನಿಗೆ ಗೌರವ ಸಲ್ಲಿಸುತ್ತದೆ?

A)ಶ್ರೀಲಂಕಾ

B)ಪಾಕಿಸ್ತಾನ

C)ಭಾರತ

D)ಇರಾನ್

6.ಸಮವರ್ತಿ ಪಟ್ಟಿಯ ಮೇಲೆ ಕೇಂದ್ರ ಸರ್ಕಾರ ಶಾಸನ ರೂಪಿಸುವುದಕ್ಕೂ ಮುಂಚೆ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಬೇಕೆಂದು ಯಾವ ಆಯೋಗ ಶಿಫಾರಸು ಮಾಡಿದೆ?

A)ರಾಜ್ ಮನ್ನಾರ್ ಆಯೋಗ

B)ಬಲವಂತರಾಯ್ ಮೆಹತಾ ಆಯೋಗ

C)ಸರ್ಕಾರಿಯಾ ಆಯೋಗ

D)ರಾಷ್ಟ್ರೀಯ ಅಭಿವೃದ್ಧಿ ಮಂಡಳಿ

7.ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್‍ರ ವರದಿಯನ್ನು ಪರಿಶೀಲಿಸುವ ಸಂಸದೀಯ ಸಮಿತಿ

A)ನೀತಿ ಆಯೋಗ

B)ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ನೀತಿ

C)ಅಂದಾಜು ಸಮಿತಿ

D)ಸಾರ್ವಜನಿಕ ಲೆಕ್ಕಪತ್ರ ಸಮಿತಿ

8.ಜನ ಸಾಂದ್ರತೆ ಎಂದರೆ

A)ಒಂದು ಪ್ರದೇಶದಲ್ಲಿ ವಾಸಿಸುವ ಒಟ್ಟು ಜನರ ಸಂಖ್ಯೆ

B)10 ಕಿ ಮೀ ಪ್ರದೇಶದಲ್ಲಿ ವಾಸಿಸುವ ಒಟ್ಟು ಜನರ ಸರಾಸರಿ ಸಂಖ್ಯೆ

C)ಪ್ರತಿ ಚದರ ಕಿ ಮೀ ಪ್ರದೇಶದಲ್ಲಿ ವಾಸಿಸುವ ಜನರ ಸರಾಸರಿ ಸಂಖ್ಯೆ

D)ದೇಶದ ಒಟ್ಟು ಜನಸಂಖ್ಯೆಯ ಸರಾಸರಿ ಪ್ರಮಾಣ

9.ಈ ಕೆಳಗಿನ ಯಾವ ಜೋಡಿಯು ಸರಿಯಾಗಿ ಹೊಂದಾಣಿಕೆಯಾಗಿದೆ?

A)ಮಹಾತ್ಮ ಗಾಂಧಿ – ಹೋಂ ರೂಲ್ ಚಳವಳಿ

B)ಅನಿಬೆಸೆಂಟ್ – ಅಸಹಕಾರ ಚಳವಳಿ

C)ಜವಾಹರಲಾಲ್ ನೆಹರು – ಖಿಲಾಫತ್ ಚಳವಳಿ

D)ಲಾಲಾ ಹರ್ದಯಾಳ್ – ಹಿಂದೂಸ್ಥಾನ್ ಘದ್ಧರ್ ಪಾರ್ಟಿ

10.ಪ್ರಪಂಚದಲ್ಲಿಯೇ ಅತಿ ವಿಶಾಲವಾದ ಮತ್ತು ಹೆಚ್ಚು ಆಳವಾದ ಮಹಾ ಸಾಗರ ಯಾವುದು?

A)ಪೆಸಿಫಿಕ್ ಸಾಗರ

B)ಆಕ್ರ್ಟಿಕ್ ಸಾಗರ

C)ಅಟ್ಲಾಂಟಿಕ್ ಸಾಗರ

D)ಹಿಂದೂ ಮಹಾ ಸಾಗರ

ಉತ್ತರಗಳು 

1.A 2.D 3.B 4.A 5.A 6.C 7.D 8.C 9.D 10.A 

Related Posts
Introduction ∗ Waste-to-energy (WtE) or energy-from-waste (EfW) is the process of creating energy in the form of electricity orheat from the incineration of waste source. WtE is a form of energy ...
READ MORE
18th March 2017 – Today’s Karnataka State Current Affairs – KAS / KPSC Exams
  State to file revision petition in SC on quashed SC/ST promotions The Cabinet on 17th March decided to file a revision petition challenging the Supreme Court ruling which struck down the consequential ...
READ MORE
Karnataka Current Affairs – KAS / KPSC Exams 2017 – 13th April 2017
Karnataka State Health Department issues H1N1 advisory The State Health Department on 12th April issued an advisory asking people not to ignore symptoms of H1N1 and to see a doctor immediately ...
READ MORE
Karnataka: Govt may stop supplying PDS sugar
Food and Civil Supplies Minister U T Khader on 27th Feb said that the state government will have to discontinue supply of sugar through PDS if the Centre does not restore its ...
READ MORE
Karnataka Current Affairs – KAS/KPSC Exams – 10th July 2018
HAL signs MoU with BBMP to facilitate signal-free corridor Setting the ball rolling for the proposed signal-free corridor from Vellara Junction to Hope Farm Junction, the Hindustan Aeronautics Limited (HAL) and ...
READ MORE
Karnataka Current Affairs – KAS / KPSC Exams – 9th June 2017
Uranium mining to move out of Gujanal to uninhabited areas Uranium mining is being moved out of Gujanal village in Gokak taluk of Belagavi district after complaints from villagers that deep ...
READ MORE
Today’s (5th April) Current Affairs For KAS / KPSC Exams
New sand policy to include demands of coastal districts The state government will come out with a new sand policy incorporating the demands of the three coastal districts to allow locals ...
READ MORE
Cabinet approves amendment in Modified Special Incentive Package Scheme
To boost electronic manufacturing in the country, the Union Cabinet on Wednesday approved incentives to the tune of Rs 10,000 crore for investors by amending the Modified Special Incentive Package ...
READ MORE
TADF is a new scheme to facilitate acquisition of Clean, Green & Energy Efficient Technologies, in form of Technology / Customised Products / Specialised Services / Patents / Industrial Design ...
READ MORE
Karnataka: Kambala buffaloes may get breed status
The State government, which made an earlier attempt to secure the breed status in 2016, is expected to make another pitch before the National Bureau of Animal Genetics (NBAG)-Karnal seeking ...
READ MORE
WASTE TO ENERGY
18th March 2017 – Today’s Karnataka State Current
Karnataka Current Affairs – KAS / KPSC Exams
Karnataka: Govt may stop supplying PDS sugar
Karnataka Current Affairs – KAS/KPSC Exams – 10th
Karnataka Current Affairs – KAS / KPSC Exams
Today’s (5th April) Current Affairs For KAS /
Cabinet approves amendment in Modified Special Incentive Package
Technology Acquisition and Development Fund
Karnataka: Kambala buffaloes may get breed status

Leave a Reply

Your email address will not be published. Required fields are marked *