“20tht ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ವಿಶೇಷ ಕೋರ್ಟ್‌ ಸ್ಥಾಪನೆ

ಸುದ್ಧಿಯಲ್ಲಿ ಏಕಿದೆ ?ವಾಣಿಜ್ಯ ವ್ಯವಹಾರ ಸಂಬಂಧಿ ಪ್ರಕರಣಗಳ ನಿರ್ವಹಣೆಗೆ ಹೊಸದಾಗಿ ಮೂರು ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ರಾಜ್ಯ ಸರಕಾರ ಮಂಜೂರಾತಿ ನೀಡಿದೆ.

 • ರಾಜ್ಯದಲ್ಲಿ ಈಜಿ ಆಫ್‌ ಡೂಯಿಂಗ್‌ ಬ್ಯುಸಿನೆಸ್‌ ಯೋಜನೆ ಅನುಷ್ಠಾನ ಉದ್ದೇಶದಿಂದ ಮೂರು ವಾಣಿಜ್ಯಾತ್ಮಕ ನ್ಯಾಯಾಲಯಗಳ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದ್ದು, ಈ ಪೈಕಿ ಎರಡು ವಿಶೇಷ ಕೋರ್ಟ್‌ಗಳು ಬೆಂಗಳೂರಿನಲ್ಲಿ ಮತ್ತು ಒಂದು ಬಳ್ಳಾರಿಯಲ್ಲಿ ಆರಂಭವಾಗಲಿದೆ
 • ವಿಶೇಷ ಕೋರ್ಟ್‌ಗಳ ಕಾರ್ಯನಿರ್ವಹಣೆಗೆ ಅಗತ್ಯವಾದ ಹುದ್ದೆಗಳಿಗೆ ಈಗಾಗಲೇ ಮಂಜೂರಾತಿ ನೀಡಲಾಗಿದೆ. ಪ್ರತಿ ನ್ಯಾಯಾಲಯಕ್ಕೆ ಒಬ್ಬರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು, ಒಬ್ಬ ಶಿರಸ್ತೇದಾರ್‌, ತೀರ್ಪು ಬರಹಗಾರರು, ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರ, ಅಟೆಂಡರ್‌ ಮತ್ತು ಜವಾನ ಸೇರಿ ಒಟ್ಟು ಎಂಟು ಹುದ್ದೆಗಳನ್ನು ಸೃಜಿಸಿ ಆದೇಶ ಹೊರಡಿಸಲಾಗಿದೆ
 • ದಿ ಕಮರ್ಷಿಯಲ್‌ ಕೋರ್ಟ್ಸ್‌, ಕಮರ್ಷಿಯಲ್‌ ಡಿವಿಜನ್‌ ಆ್ಯಂಡ್‌ ಕಮರ್ಷಿಯಲ್‌ ಡಿವಿಜನ್‌ ಆಫ್‌ ಹೈಕೋರ್ಟ್ಸ್‌ ಆಕ್ಟ್ –2015ರಡಿ ದಾಖಲಾಗುವ ಎಲ್ಲ ಪ್ರಕರಣಗಳನ್ನು ಈ ವಿಶೇಷ ನ್ಯಾಯಾಲಯಗಳು ನಿರ್ವಹಿಸಲಿವೆ

ಕನ್ನಡ ಕಲಿಕೆ

ಸುದ್ಧಿಯಲ್ಲಿ ಏಕಿದೆ ?ನ್ನಡೇತರರು ಕನ್ನಡ ಕಲಿಯಲು ಕನ್ನಡ ಕಲಿಕೆಎಂಬ ಹೊಸ ಜಾಲತಾಣವನ್ನು ಸಚಿವೆ ಜಯಮಾಲಾ ಅನಾವರಣಗೊಳಿಸಿದರು.

 • ಹೊಸದಿಲ್ಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನಿಂದ ಕನ್ನಡ ಕಲಿಕೆ ಸಿದ್ಧಪಡಿಸಲಾಗಿದೆ. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜೆಎನ್‌ಯು ಕನ್ನಡ ಅಧ್ಯಯನ ಪೀಠಕ್ಕೆ 30 ಲಕ್ಷ ರೂ.ಗಳ ಅನುದಾನ ಒದಗಿಸಿತ್ತು.
 • ಈ ಜಾಲತಾಣದಲ್ಲಿ ಭಾಷಾ ಕಲಿಕೆಯ ನಾಲ್ಕು ಪ್ರಮುಖ ಕೌಶಲಗಳಾದ ಆಲಿಸುವಿಕೆ, ಮಾತನಾಡುವುದು, ಓದುವಿಕೆ ಹಾಗೂ ಬರೆಯುವುದನ್ನು ಪ್ರೋತ್ಸಾಹಿಸಲು 30 ವೀಡಿಯೋಗಳನ್ನು ಪಠ್ಯವಾಗಿ ಬಳಸಿಕೊಳ್ಳಲಾಗಿದೆ.
 • ಈ ಜಾಲ ತಾಣದಲ್ಲಿ 4ರಿಂದ 6 ನಿಮಿಷ ವ್ಯಾಪ್ತಿಯ, ಸರಾಸರಿ 500 ಪದಗಳಿರುವ ಒಟ್ಟು 30 ವಿಡಿಯೋಗಳನ್ನು ಅಳವಡಿಸಲಾಗಿದೆ. ಇದರಿಂದ ಆಸಕ್ತರು ಮೊದಲು ವೀಡಿಯೋ ನೋಡಿ, ನಂತರ ಅದರಲ್ಲಿ ಬಳಕೆಯಾದ ಪಠ್ಯವನ್ನು ಕೇಳಬಹುದು. ಮುಖ್ಯ ಪದಗಳ ಪಟ್ಟಿಯನ್ನು ಇಂಗ್ಲಿಷ್‌ ಅನುವಾದದ ಸಹಿತ ಒದಗಿಸಲಾಗಿದೆ. ಅಲ್ಲದೆ, ವ್ಯಾಕರಣ ರೂಪಗಳನ್ನೂ ನೀಡಲಾಗಿದೆ

ಕಲಾ ತಂಡಗಳ ನೆರವಿಗೆ ಸೇವಾ ಸಿಂಧುವೆಬ್‌ ಪೋರ್ಟಲ್‌:

 • ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವು ಪಡೆಯಲು ಇಚ್ಛಿಸುವ ಕಲಾ ತಂಡಗಳ ನೆರವಿಗಾಗಿ ಆರಂಭಿಸಿರುವ ಸೇವಾ ಸಿಂಧು ಎಂಬ ಹೊಸ ಪೋರ್ಟಲ್‌ ಅನ್ನು ಕೂಡ ಇದೇ ವೇಳೆ ಲೋಕಾರ್ಪಣೆಗೊಳಿಸಲಾಯಿತು. ಇನ್ನು ಮುಂದೆ ಕಲಾ ತಂಡಗಳು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು

‘ಪ್ರಧಾನ ಮಂತ್ರಿ ಸಂಸದರ ಆದರ್ಶ ಗ್ರಾಮಯೋಜನೆ’

ಸುದ್ಧಿಯಲ್ಲಿ ಏಕಿದೆ ?ಕರ್ನಾಟಕದಲ್ಲೂ ‘ಪ್ರಧಾನ ಮಂತ್ರಿ ಸಂಸದರ ಆದರ್ಶ ಗ್ರಾಮ ಯೋಜನೆ’ಗೆ ಹಿನ್ನಡೆಯಾಗಿದ್ದು, ಈ ಯೋಜನೆಯಡಿ ಸಂಸದರು ದತ್ತು ಪಡೆದಿರುವ ಯಾವೊಂದು ಗ್ರಾಮವೂ ಅಭಿವೃದ್ಧಿಯಾಗಿಲ್ಲ.

 • ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಈ ಯೋಜನೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವಾಲಯದ ಮೂಲಕ ಜಾರಿಯಾಗುತ್ತಿದ್ದು, ರಾಜ್ಯದ 50 ಗ್ರಾಮಗಳು ‘ಆದರ್ಶ ಗ್ರಾಮ’ ಎಂಬ ದಾಖಲೆಗಳ ಹಣೆಪಟ್ಟಿ ಗೆ ಸಮಾಧಾನ ಪಡಬೇಕಿದೆ.

ಏನಿದು ಯೋಜನೆ?

 • ಭವ್ಯ ಭಾರತದ ನಿರ್ಮಾಣ ಗ್ರಾಮೋದ್ಧಾರದಿಂದಲೇ ಆರಂಭವಾಗಬೇಕು ಎಂಬ ಆಶಯದೊಂದಿಗೆ, 2014ನೇ ಸಾಲಿನಲ್ಲಿ ಜಯಪ್ರಕಾಶ್‌ ನಾರಾಯಣ್‌ ಅವರ ಜನ್ಮದಿನವಾದ ಅಕ್ಟೋಬರ್‌ 11ರಂದು ಜಾರಿಗೆ ಬಂದ ಈ ಯೋಜನೆಯ ಉದ್ದೇಶ ಮಹೋನ್ನತವಾದುದೆ.
 • ಗ್ರಾಮೀಣ ಜನರ ಆರೋಗ್ಯ, ಅವರ ಆಚರಣೆ, ಮನೋ ಬೆಳವಣಿಗೆ, ಸಾಮಾಜಿಕ ಬೆಳವಣಿಗೆ, ಸಮುದಾಯದ ಅಭಿವೃದ್ಧಿ, ಆರ್ಥಿಕ ಪ್ರಗತಿ, ಪರಿಸರ ಅಭಿವೃದ್ಧಿ, ಸಾಮಾಜಿಕ ಭದ್ರತೆ, ಪಂಚಾಯಿತಿಗಳ ಉತ್ತಮ ಆಡಳಿತ, ಹಳ್ಳಿಗೆ ಬೇಕಾದ ಮೂಲ ಸೌಕರ್ಯ ಮತ್ತು ಸೇವೆ ಒಳಗೊಂಡಂತೆ- ಒಂದು ಗ್ರಾಮವನ್ನು ನಿಜ ಅರ್ಥದಲ್ಲಿ ಆದರ್ಶವಾಗಿ ಅಭಿವೃದ್ಧಿ ಪಡಿಸಿ ಇತರ ಗ್ರಾಮಗಳಿಗೆ ಮಾದರಿಯಾಗಿಸುವ ಗುರಿ ಹೊಂದಿದೆ.
 • ಈ ಮಾರ್ಗಸೂಚಿ ಅನ್ವಯ ಗುಜರಾತಿನ ಪುನ್ಸಾರಿ ಗ್ರಾಮವನ್ನು ಅಲ್ಲಿನ ರಾಜ್ಯ ಸರಕಾರ ಅಭಿವೃದ್ಧಿಪಡಿಸಿದ ಉದಾಹರಣೆಯನ್ನು ಕಣ್ಮುಂದೆ ಇಟ್ಟುಕೊಂಡೇ, ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
 • ಈ ಯೋಜನೆಗಾಗಿ ಪ್ರತ್ಯೇಕ ಅನುದಾನವನ್ನು ಕೇಂದ್ರ ಸರಕಾರ ನಿಗದಿ ಪಡಿಸಿಲ್ಲ. ಬದಲಿಗೆ, ಕೇಂದ್ರ ಹಾಗೂ ರಾಜ್ಯ ಸರಕಾರದ ಎಲ್ಲ ಪ್ರಾಯೋಜಿತ ಯೋಜನೆಗಳ ನೆರವು, ಸಂಸದರು ಹಾಗೂ ಶಾಸಕರ ನಿಧಿ ಸೇರಿದಂತೆ ವಿವಿಧ ರೀತಿಯ ಸಂಪನ್ಮೂಲಗಳನ್ನು ಒಗ್ಗೂಡಿಸಿಕೊಂಡೇ ತಾವು ದತ್ತು ಪಡೆದ ಗ್ರಾಮಗಳನ್ನು ಸಮಗ್ರವಾಗಿ ಉದ್ಧಾರ ಮಾಡಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ?

 • ಪ್ರತಿ ಸಂಸದರೂ ತನ್ನ ಹಾಗೂ ತನ್ನ ಜೀವನ ಸಂಗಾತಿಯ ಸ್ವಂತ ಗ್ರಾಮವನ್ನು ಹೊರತು ಪಡಿಸಿ, ಕ್ಷೇತ್ರದ ಗ್ರಾಮವೊಂದನ್ನು ಈ ಯೋಜನೆಯಡಿ ದತ್ತು ಪಡೆಯಬಹುದು. ಬಯಲು ಸೀಮೆಯಲ್ಲಿ 3ರಿಂದ 5 ಸಾವಿರ ಜನಸಂಖ್ಯೆ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ 1ರಿಂದ 3 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಅಂತೆಯೇ ಕರ್ನಾಟಕದಲ್ಲೂ ಸಂಸದರು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
 • ಪ್ರತಿ ಸಂಸದರೂ 2016ರೊಳಗೆ ಒಂದು ಗ್ರಾಮ, 2017ಕ್ಕೆ ಇನ್ನೊಂದು, 2018ಕ್ಕೆ ಮತ್ತೊಂದು ಸೇರಿ- ಒಟ್ಟು 5 ವರ್ಷಗಳ ಅವಧಿಯಲ್ಲಿ ತಲಾ ಮೂರು ಗ್ರಾಮ ಪಂಚಾಯಿತಿ/ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಅಭಿವೃದ್ಧಿಪಡಿಸಬೇಕು.

ರಾಜ್ಯದಲ್ಲಿವೆ 50 ಗ್ರಾಮಗಳು

 • ಯೋಜನೆಯ ಮೊದಲ ಹಂತದಲ್ಲಿ ರಾಜ್ಯದ ಎಲ್ಲ 28 ಸಂಸದರೂ ಮಾದರಿ ಗ್ರಾಮವನ್ನು ಉತ್ಸಾಹ-ಹುರಪಿನಿಂದಲೇ ಆಯ್ಕೆ ಮಾಡಿಕೊಂಡರು. ಆದರೆ, 2ನೇ ಹಂತದಲ್ಲಿ ಕೇವಲ 9 ಸಂಸದರು ಮಾತ್ರ 2ನೇ ಗ್ರಾಮವನ್ನು ದತ್ತು ಪಡೆದರೆ, ಮೂರನೇ ಹಂತ ಬರುವ ವೇಳೆಗೆ, ಬಹುತೇಕ ಎಲ್ಲ ಸಂಸದರ ಆಸಕ್ತಿಯೇ ಅಡಗಿ ಹೋಗಿತ್ತು. ರಾಜ್ಯದ 12 ರಾಜ್ಯಸಭೆ ಸದಸ್ಯರ ಪೈಕಿ ಮೊದಲ ಹಂತದಲ್ಲಿ 10 ಜನ, ಎರಡನೇ ಹಂತದಲ್ಲಿ ಇಬ್ಬರು ಆಯ್ಕೆ ಮಾಡಿಕೊಂಡಿರುವುದನ್ನು ಸೇರಿಸಿದರೆ, ಒಟ್ಟಾರೆ ರಾಜ್ಯದಲ್ಲಿ 50 ಗ್ರಾಮಗಳು ಆದರ್ಶ ಗ್ರಾಮ ಎಂದು ದಾಖಲೆಯಲ್ಲಿ ಘೋಷಿತಗೊಂಡಿವೆಯಷ್ಟೆ.

ಹಿನ್ನಡೆಗೆ ಏನು ಕಾರಣ?

 • ಆದರ್ಶ ಗ್ರಾಮ ಯೋಜನೆಯ ಹಿನ್ನಡೆಗೆ ಕಾರಣಗಳು ಹಲವಾರು. ಆದರ್ಶ ಗ್ರಾಮ ಕುರಿತು ಸಂಸದರಿಗೆ ನಿರಾಸಕ್ತಿ, ಒಂದೇ ಗ್ರಾಮ ಅಭಿವೃದ್ಧಿ ಪಡಿಸಿದರೆ, ನೆರೆಯೂರಿನವರು ಬೇಸರ ಪಟ್ಟುಕೊಳ್ಳುತ್ತಾರೆಂಬ ‘ಮತ’ ಭೀತಿ, ಊರು ಉದ್ಧಾರವಾದರೆ ಶ್ರೇಯಸ್ಸಿನ ಕಿರೀಟ ಯಾರ ಮುಡಿಗೆ ಎಂಬ ಪಕ್ಷ ರಾಜಕೀಯದಂಥ ಸಂಗತಿಗಳು, ಯೋಜನೆಯ ನಡಿಗೆಗೆ ಅಡ್ಡಗಾಲಾಗಿವೆ. ಯೋಜನೆಗೆ ಪ್ರತ್ಯೇಕ ವಿಶೇಷ ಅನುದಾನವನ್ನು ಮೀಸಲಿರಿಸಿಲ್ಲ ಎಂಬುದೇ ಸಂಸದರ ನಿರಾಸಕ್ತಿಗೆ ಪ್ರಮುಖ ಕಾರಣವಾಗಿದೆ.

ಬೀಜಿಂಗ್ ವಿವಿಯಲ್ಲಿ ತಮಿಳು ಭಾಷೆ

ಸುದ್ಧಿಯಲ್ಲಿ ಏಕಿದೆ ?ಚೀನಾದಲ್ಲಿ ಈಗ ಭಾರತದ ಭಾಷೆಗಳಿಗೆ ಡಿಮ್ಯಾಂಡ್ ಬಂದಿದೆ. ಹೀಗಾಗಿ, ಅಲ್ಲಿನ ಬೀಜಿಂಗ್ ವಿದೇಶಿ ಭಾಷೆಗಳ ಅಧ್ಯಯನ ವಿಶ್ವವಿದ್ಯಾಲಯದಲ್ಲಿ ತಮಿಳು ಭಾಷೆಯನ್ನು ಈ ವರ್ಷದಿಂದ ಕಲಿಸಲಾಗುತ್ತಿದ್ದು, 10 ವಿದ್ಯಾರ್ಥಿಗಳು ಭಾಷೆ ಮೇಲೆ ಪ್ರಾಮುಖ್ಯತೆ ಸಾಧಿಸಲು ಹೊರಟಿದ್ದಾರೆ.

 • ಹಿಂದಿ ಹಾಗೂ ಬಂಗಾಳಿ ಭಾಷೆಯನ್ನು ಈಗಾಗಲೇ ಚೀನಾದಲ್ಲಿ ಕಲಿಸಲಾಗುತ್ತಿದ್ದು, ಈಗ ತಮಿಳನ್ನು ಕಲಿಯಲು ಚೀನಾದ ವಿದ್ಯಾರ್ಥಿಗಳು ಉತ್ಸುಕರಾಗಿದ್ದಾರೆ.
 • ನಾಲ್ಕು ವರ್ಷಗಳ ಕಾಲ ತಮಿಳು ಭಾಷೆ ಹಾಗೂ ಸಾಹಿತ್ಯವನ್ನು ಚೀನಾದ ವಿದ್ಯಾರ್ಥಿಗಳು ಕಲಿಯಲಿದ್ದಾರೆ. ಪದವಿಯನ್ನು ಪಡೆಯಲು ಅವರು ಭಾಷೆ ಕಲಿಯಲಿದ್ದಾರೆ
 • ಸದ್ಯ ತಮಿಳು ಭಾಷೆಯ ಬಗ್ಗೆ ಆ 10 ವಿದ್ಯಾರ್ಥಿಗಳು ಅಲ್ಪಜ್ಞಾನಿಗಳಾಗಿದ್ದಾರೆ. ಜತೆಗೆ, ತಮಿಳುನಾಡಿಗೂ 6 ರಿಂದ 12 ತಿಂಗಳುಗಳ ಕಾಲ ಭೇಟಿ ನೀಡಲಿದ್ದು, ಅಲ್ಲಿನ ಭಾಷೆ, ಸಂಸ್ಕೃತಿಯನ್ನು ತಿಳಿದುಕೊಳ್ಳಲಿದ್ದಾರೆ. ಎರಡು ವರ್ಷಗಳ ಕಾಲ ತಮಿಳು ಬರೆಯುವುದು ಹಾಗೂ ಮಾತನಾಡುವುದನ್ನು ಕಲಿತ ಬಳಿಕ, ಮೂರನೇ ವರ್ಷಕ್ಕೆ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಜತೆಗೆ, 4 ವರ್ಷಗಳ ಕಾಲ ದ್ರಾವಿಡ ಭಾಷೆ ಅಧ್ಯಯನ ಮಾಡುವ ವೇಳೆ ತಮಿಳು ಮಾತನಾಡುವುದು, ಬರೆಯುವುದು ಹಾಗೂ ವ್ಯಾಖ್ಯಾನ ಮಾಡಿಕೊಳ್ಳುವ ಸಾಮಾನ್ಯ ಜ್ಞಾನವನ್ನು ಕಲಿಯಲಿದ್ದಾರೆ.
 • ಇನ್ನೊಂದೆಡೆ, ತಮಿಳು ಭಾಷೆಯ ಜತೆಗೆ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಸಂವಹನ, ಕಾನೂನು ಹಾಗೂ ಮುಂತಾದ ವಿಷಯಗಳಲ್ಲಿ ಒಂದು ವಿಷಯವನ್ನು ಅಲ್ಲಿನ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕಿದೆ. ಆದರೆ, ತಮಿಳು ಭಾಷೆಯೇ ಪ್ರಮುಖ ವಿಷಯವಾಗಲಿದ್ದು, ಮೊದಲ 2 ವರ್ಷಗಳು ವಾರಕ್ಕೆ 12 ಗಂಟೆಗಳ ಕಾಲ, ಮೂರನೇ ವರ್ಷ ವಾರಕ್ಕೆ 10 ಗಂಟೆ ಹಾಗೂ ಕಡೆಯ ವರ್ಷದಲ್ಲಿ ವಾರಕ್ಕೆ 4 – 6 ಗಂಟೆಗಳ ಕಾಲ ತರಗತಿಗಳು ನಡೆಯಲಿದೆ.
 • ವೀಡಿಯೋಗಳ ಮೂಲಕ ತರಗತಿಗಳು ಆರಂಭವಾಗಿದ್ದು, ವಿದೇಶದಲ್ಲಿರುವ ಹಲವು ತಮಿಳು ಭಾಷೆಯ ತಜ್ಞರು 10 ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದು, ಅವರಿಗೆ ಸ್ವಾಗತ ಕೋರಿದ್ದಾರೆ. ಇನ್ನು, ಭಾರತದ ಯಾವುದೇ ಭಾಷೆಯನ್ನು ಕಲಿಯುವುದು ಅವರ ವೃತ್ತಿ ಜೀವನಕ್ಕೆ ಸಹಾಯವಾಗಲಿದೆ. ಆ ಭಾಷಾ ಜ್ಞಾನವನ್ನು ಅವರು ವ್ಯಾಪಾರ, ಮಾಧ್ಯಮ ಮತ್ತು ಬೋಧನೆಗೆ ಬಳಸಿಕೊಳ್ಳಬಹುದು. ಜತೆಗೆ, ಚೀನಾದಲ್ಲಿ ತಮಿಳು ಭಾಷೆಯ ಬಗ್ಗೆ ಹೆಚ್ಚಿನ ಅಧ್ಯಯನ ಇಲ್ಲದಿರುವ ಕಾರಣ ಆ ಭಾಷೆಯ ಶೈಕ್ಷಣಿಕ ಸಂಶೋಧನೆಯನ್ನು ಮಾಡಬಹುದು

Triple Talaq ಶಿಕ್ಷಾರ್ಹ ಅಪರಾಧ

ಸುದ್ಧಿಯಲ್ಲಿ ಏಕಿದೆ ?ಸಂಸತ್‍ನ ಎರಡೂ ಸದನಗಳಲ್ಲಿ ಅನುಮೋದನ ಪಡೆಯಲು ವಿಫಲವಾದ ಬಳಿಕ ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ ಎಂಬ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ಸೂಚಿಸಿದೆ.

 • ಕಳೆದ ವರ್ಷ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಗೆ ಒಪ್ಪಿಗೆ ಸಿಕ್ಕಿತ್ತು. ಆದರೆ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ಸಿಕ್ಕಿರಲಿಲ್ಲ. ತುರ್ತಾಗಿ ನೀಡುವ ತ್ರಿವಳಿ ತಲಾಖ್ ಕಾನೂನು ಬಾಹಿರ ಮತ್ತು ಅಸಾಂವಿಧಾನಿಕ ಎಂದು ಕಳೆದ ವರ್ಷ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

ನಿಷೇಧದ ಹಾದಿ

 • 2017ರ ಮಾರ್ಚ್: ತ್ರಿವಳಿ ತಲಾಕ್ ನಿಷೇಧಕ್ಕೆ ಆಗ್ರಹಿಸಿ ರಾಷ್ಟ್ರೀಯ ಮುಸ್ಲಿಂ ಮಂಚ್ ವತಿಯಿಂದ ಸಹಿ ಸಂಗ್ರಹ
 • 2017ರ ಆಗಸ್ಟ್: ತ್ರಿವಳಿ ತಲಾಕನ್ನು 6 ತಿಂಗಳವರೆಗೆ ನಿಷೇಧಿಸಿದ ಸುಪ್ರೀಂ ಕೋರ್ಟ್, ಕಾನೂನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ
 • 2017ರ ಡಿಸೆಂಬರ್: ಲೋಕಸಭೆಯಲ್ಲಿ ವಿಧೇಯಕ ಮಂಡನೆ ಹಾಗೂ ಅನುಮೋದನೆ
 • 2018ರ ಜುಲೈ: ರಾಜ್ಯಸಭೆಯಲ್ಲಿ ಪರಿಷ್ಕೃತ ವಿಧೇಯಕ ಮಂಡನೆ

ಎಲ್ಲೆಲ್ಲಿ ನಿಷೇಧ?

 • ಪಾಕಿಸ್ತಾನ ಸೇರಿದಂತೆ 21 ದೇಶಗಳಲ್ಲಿ ತ್ರಿವಳಿ ತಲಾಕ್​ಗೆ ನಿಷೇಧವಿದೆ.

ಸುಗ್ರೀವಾಜ್ಞೆಯಲ್ಲೇನಿದೆ?

# ತ್ರಿವಳಿ ತಲಾಕ್ ನೀಡುವವರಿಗೆ ಮೂರು ವರ್ಷ ಜೈಲು ಹಾಗೂ ದಂಡ

#ಸಂತ್ರಸ್ತ ಮಹಿಳೆ, ಆಕೆಯ ರಕ್ತಸಂಬಂಧಿಗಳು ಅಥವಾ ಪತಿಯ ಮನೆಯವರಷ್ಟೇ ದೂರು ಸಲ್ಲಿಸಬಹುದು

# ದೂರು ಸಲ್ಲಿಕೆ ಬಳಿಕ ದಂಪತಿ ಒಪ್ಪಂದಕ್ಕೆ ಬಂದು, ತಲಾಕ್ ಹಿಂಪಡೆದರೆ ದೂರನ್ನು ರದ್ದುಪಡಿಸಬಹುದು

# ಸಂತ್ರಸ್ತ ಪತ್ನಿಯ ಹೇಳಿಕೆ ಪಡೆಯದೇ ಪತಿಗೆ ಜಾಮೀನು ನೀಡುವಂತಿಲ್ಲ

# ನ್ಯಾಯಾಧೀಶರ ಸೂಚನೆಯಂತೆ ಅಪ್ರಾಪ್ತ ಮಕ್ಕಳು ಹಾಗೂ ಪತ್ನಿಗೆ ಪತಿ ನಿರ್ವಹಣಾ ವೆಚ್ಚ ನೀಡಬೇಕು.

# ತ್ರಿವಳಿ ತಲಾಕ್ ಸಂತ್ರಸ್ತ ಮಹಿಳೆಗೆ ಅಪ್ರಾಪ್ತ ಮಗುವಿನ ಜವಾಬ್ದಾರಿ ನೀಡಬೇಕು

# ಈ ಸುಗ್ರೀವಾಜ್ಞೆ ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ

ಯಾವುದು ನಿಷೇಧ?

 • ತಲಾಕ್​ನಲ್ಲಿ ಮೂರು ವಿಧಗಳಿವೆ- ತಲಾಕ್ಎಹಸಾನ್, ತಲಾಕ್-ಎ-ಹಸನ್ ಹಾಗೂ ತಲಾಕ್-ಎ-ಬಿದ್ದತ್. ಇಲ್ಲಿ ತಲಾಕ್-ಎ-ಬಿದ್ದತ್ ಎಂದರೆ ತ್ರಿವಳಿ ತಲಾಕ್ ಎಂದರ್ಥ. ಹೀಗಾಗಿ ಉಳಿದೆರಡು ರೀತಿಯ ತಲಾಕ್ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಈ ಎರಡು ವಿಧಾನದಲ್ಲಿ ತಲಾಕ್​ಗೆ ಮೂರು ತಿಂಗಳು ಅವಕಾಶ ನೀಡಲಾಗುತ್ತದೆ.

ಏನಿದು ತ್ರಿವಳಿ ತಲಾಕ್?

# ಯಾವುದೇ ಮಾಧ್ಯಮಗಳ ಮೂಲಕ ಆ ಕ್ಷಣದಲ್ಲಿ ಮೂರು ಬಾರಿ ತಲಾಕ್ ಹೇಳಿ ಪತ್ನಿಗೆ ವಿಚ್ಛೇದನ ನೀಡುವುದು

# ಪತ್ನಿ ಎದುರಲ್ಲಿ ಮೌಖಿಕವಾಗಿ ತಲಾಕ್ ಎಂದು ಹೇಳುವುದು; ವಾಟ್ಸ್​ಆಪ್, ಫೇಸ್​ಬುಕ್, ಎಸ್​ಎಂಎಸ್, ದೂರವಾಣಿ ಕರೆ ಮೂಲಕವೂ ತಲಾಕ್ ನೀಡಿದ ಪ್ರಕರಣಗಳಿವೆ.

ಸುಗ್ರೀವಾಜ್ಞೆಗೆ 6 ತಿಂಗಳ ಆಯಸ್ಸು

ಸದ್ಯ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ಬಿದ್ದಿರುವುದರಿಂದ ಮುಂದಿನ 6 ತಿಂಗಳ ಒಳಗೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಂಡು ಕಾಯ್ದೆ ರೂಪಿಸಬೇಕು. ಇಲ್ಲವಾದಲ್ಲಿ 6 ತಿಂಗಳ ಬಳಿಕ ಮತ್ತೆ ಸುಗ್ರೀವಾಜ್ಞೆ ಹೊರಡಿಸಬೇಕಾಗುತ್ತದೆ.

ರಾಷ್ಟ್ರ ಮಾತೆ ಗೋವು ಮಸೂದೆ

ಸುದ್ಧಿಯಲ್ಲಿ ಏಕಿದೆ ?ರಾಷ್ಟ್ರ ಮಾತೆ ಗೋವು ಎಂಬ ಮಸೂದೆಯನ್ನು ಹೊರಡಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಿದೆ. ರಾಜ್ಯ ಸಂಪುಟದಲ್ಲಿ ‘ರಾಷ್ಟ್ರ ಮಾತೆ ಗೋವು’ ಎಂಬ ನಿರ್ಣಯವನ್ನು ಹೊರಡಿಸಲಾಗಿದ್ದು, ಸಮ್ಮತಿಗೆ ಕೇಂದ್ರಕ್ಕೆ ಮನವಿ ಮಾಡಿದೆ.

 • ಉತ್ತರಾಖಂಡ ವಿಧಾನಸಭೆಯಲ್ಲಿ ಪಶು ಸಂಗೋಪನಾ ಸಚಿವೆ ರೇಖಾ ಆರ್ಯಾ ರಾಷ್ಟ್ರ ಮಾತೆ ಗೋವು ಎಂದು ಪರಿಗಣಿಸುವ ನಿರ್ಣಯವನ್ನು ಮಂಡನೆ ಮಾಡಿದರು.

ಡಾ. ಮಲ್ಲಿಕಾ ಘಂಟಿ 

ಸುದ್ಧಿಯಲ್ಲಿ ಏಕಿದೆ ?ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ನಡೆಯುವ 15ನೇ ವರ್ಷದ ನಾಡು- ನುಡಿ- ಸಂಸ್ಕೃತಿಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ ಸರ್ವಾಧ್ಯಕ್ಷರಾಗಿ ಸಾಹಿತಿ ಡಾ.ಮಲ್ಲಿಕಾ ಎಸ್. ಘಂಟಿ, ಉದ್ಘಾಟಕರಾಗಿ ಹಿರಿಯ ಸಂಶೋಧಕ ಡಾ. ಷ. ಶೆಟ್ಟರ್ ಅವರನ್ನು ಆಯ್ಕೆ ಮಾಡಲಾಗಿದೆ

 • ಈ ಬಾರಿ ‘ಕರ್ನಾಟಕ ದರ್ಶನ- ಬಹುರೂಪಿ ಆಯಾಮಗಳು’ ಎಂಬ ಪ್ರಧಾನ ಪರಿಕಲ್ಪನೆಯೊಂದಿಗೆ ನ.16, 17 ಮತ್ತು 18ರಂದು ಮೂಡುಬಿದಿರೆ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಕವಿ ರತ್ನಾಕರವರ್ಣಿ ವೇದಿಕೆ, ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಜರುಗಲಿದೆ

ಹಂಪಿ ಕನ್ನಡ ವಿವಿ ಕುಲಪತಿಗೆ ಸಂದ ಗೌರವ

 • ಪ್ರಾಧ್ಯಾಪಕಿ, ಸಾಹಿತಿ, ವಿಮರ್ಶಕಿ, ಸಂಶೋಧಕಿ, ಸಂಪಾದಕಿಯಾಗಿ ಬಹುಮುಖ ಪ್ರತಿಭೆಯ ಡಾ. ಮಲ್ಲಿಕಾ ಎಸ್. ಘಂಟಿ ಅವರ ಹುಟ್ಟೂರು ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಅಗಸಬಾಳು.
 • ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ‘ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ’ವೆಂಬ ವಿಷಯಕ್ಕೆ ಡಾಕ್ಟರೇಟ್ ಪದವಿ ಪಡೆದಿರುವ ಘಂಟಿ, ಗುಲ್ಬರ್ಗಾ ವಿಶ್ವವಿದ್ಯಾಲಯ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕಿ, ಡೀನ್, ಕುವೆಂಪು ವಿವಿ ಕುಲಸಚಿವರಾಗಿದ್ದರು.
 • ಪ್ರಸಕ್ತ ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿಯಾಗಿ ಎರಡನೇ ಅವಧಿಗೆ ಮುಂದುವರಿದಿದ್ದಾರೆ. ಕವನ ಸಂಕಲನ, ನಾಟಕ, ಜೀವನ ಚರಿತ್ರೆ, ವಿಮರ್ಶಾ ಸಂಕಲನ ಸಹಿತ ಹಲವು ಕೃತಿಗಳನ್ನು ಪ್ರಕಟಿಸಿರುವ ಇವರು ಸಮರ್ಥ ಆಡಳಿತಗಾರರು, ಸಂಘಟಕಿ, ಕನ್ನಡ ಹೋರಾಟಗಾರ್ತಿ, ವಿಮರ್ಶಕರಾಗಿ ಹೆಸರು ಮಾಡಿದ್ದಾರೆ
Related Posts
Case studies are designed to confront readers with specific real-life problems that do not lend themselves to easy answers. Many of the skills necessary to analyze case studies can become ...
READ MORE
ಸಮಾಜದಲ್ಲಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ  ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಸಹಾಯ ಒದಗಿಸುವ ಉದ್ದೇಶದಿಂದ ಸಾಂತ್ವನ ಯೋಜನೆಯನ್ನು   2000-2001 ನೇ ಸಾಲಿನಲ್ಲಿ ಮಂಜೂರು ಮಾಡಲಾಯಿತು. ಇಂತಹ ಮಹಿಳೆಯರಿಗೆ ಕಾನೂನು ನೆರವು, ತಾತ್ಕಾಲಿಕ ಆಶ್ರಯ, ಆರ್ಥಿಕ  ಪರಿಹಾರ, ಹಾಗೂ ತರಬೇತಿ  ...
READ MORE
Belgaum border dispute: Mahajan Commission Belgaum also known as Belagavi in Kannada, currently a part of Karnataka and earlier the erstwhile Bombay Presidency, is claimed by Maharashtra on linguistic grounds. Post Independent:  After India ...
READ MORE
Solar energy sector The government approved a post facto agreement with Germany to expand bilateral cooperation in the field of solar energy. The Union Cabinet approved a Memorandum of Understanding (MoU) to ...
READ MORE
Introduction ∗ BioAsphalt is a renewable construction material that is manufactured without the use of petroleum ∗ Asphalt mixtures derived from plants and trees could replace petroleum-based mixes. Need for Bioasphalt ∗ Conventional asphalt ...
READ MORE
India and Seychelles
The first training squadron entered Port Victoria, Seychelles today 01 Oct 15 as part of their Overseas Deployment during Autumn Term 15. The ships shall remain in harbor till 04 ...
READ MORE
The state Cabinet decided to abolish the Karnataka Goseva Ayog (Cow Conservation Commission) constituted by the previous BJP government in 2012. The panel was set up as part of the State ...
READ MORE
Weather-based farm advisory system in Karnataka
Weather-based farm advisory system to reach taluks now The country’s flagship programme of the weather forecast-based agricultural advisory system is set to become more focussed by moving to the taluk level ...
READ MORE
BRICS Summit:2015 BRICS is an acronym for Brazil, Russia, India, China, and South Africa. It is a conglomeration of five leading emerging powers, straddling the continents of Asia, Africa and Latin ...
READ MORE
Testing ranges for missiles
 Floating test-range for missile defence system India is building a unique floating testing range — a huge ship — to overcome the limitations imposed by the land mass for carrying out ...
READ MORE
Approach To Ethical Decision Making
ಸಾಂತ್ವನ
Inter-state Disputes
Government approves pacts with Germany
BIOASPHALT
India and Seychelles
Karnataka Cabinet Okays Abolition of Goseva Ayog
Weather-based farm advisory system in Karnataka
PM Modi’s central Asia Visit
Testing ranges for missiles

Leave a Reply

Your email address will not be published. Required fields are marked *