21st ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ರಾಜಸ್ಥಾನದ ಅಂತರ್ಜಲ ಅಭಿವೃದ್ಧಿ ವಿಶ್ವಸಂಸ್ಥೆ ವರದಿಯಲ್ಲಿ ಪ್ರಶಂಸೆ

 • ಜಾಗತಿಕ ಜಲಸಮಸ್ಯೆ ಎದುರಿಸಲು ನೈಸರ್ಗಿಕ ಪರಿಹಾರಗಳ ಮಹತ್ವದ ಕುರಿತು ವಿಶ್ವಸಂಸ್ಥೆ ತಯಾರಿಸಿರುವ ವರದಿಯಲ್ಲಿ ಭಾರತದಲ್ಲಿ ಸ್ಥಳೀಯ ಸಮುದಾಯಗಳಿಂದ ನಡೆಯುತ್ತಿರುವ ಜಲ ಸಂರಕ್ಷಣೆ ಶ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ರಾಜಸ್ಥಾನದಲ್ಲಿ ಸ್ಥಳೀಯ ನೀರಿನ ಮೂಲಗಳು ಮತ್ತು ಅಂತರ್ಜಲದ ಮರುಸ್ಥಾಪನೆಗೆ ಒತ್ತುಕೊಡುತ್ತಿರುವ ತರುಣ್ ಭಾರತ್ ಸಂಘದ ಚಟುವಟಿಕೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
 • ಸ್ಥಳೀಯ ಮಹಿಳೆಯರ ಪಾತ್ರ ಈ ನಿಟ್ಟಿನಲ್ಲಿ ಪ್ರಮುಖವಾಗಿದೆ. ಇವರ ಶ್ರಮದಿಂದ ಅಂತರ್ಜಲ 6 ಮೀ. ಏರಿಕೆಯಾಗಿದ್ದು, ಫಲವತ್ತಾದ ಕೃಷಿ ಭೂಮಿ ಶೇ. 20 ರಿಂದ ಶೇ. 80ಕ್ಕೆ ವಿಸ್ತರಿಸಿದೆ. ಅರಣ್ಯ ಪ್ರದೇಶ ಕೂಡ ಅಭಿವೃದ್ಧಿ ಕಂಡಿದ್ದು ಶೇ. 33 ಮಳೆ ನೀರು ಹಿಡಿದಿಡುತ್ತಿದೆ ಎಂದು ವಿಶ್ವಸಂಸ್ಥೆ ವರದಿ ವಿವರಿಸಿದೆ. 2050ರ ವೇಳೆಗೆ ಅಂದಾಜು 50 ಲಕ್ಷ ಜನರಿಗೆ ಅವಶ್ಯಕ ನೀರು ಸಿಗುವುದಿಲ್ಲ.
 • ನೈಸರ್ಗಿಕ ಪರಿಹಾರವೊಂದೇ ಇದಕ್ಕೆ ಮಾರ್ಗ ಎಂದು ವಿಶ್ವಸಂಸ್ಥೆಯ ವಿಶ್ವ ಜಲ ಅಭಿವೃದ್ಧಿ ವರದಿ 2018 ಹೇಳಿದೆ. ಬ್ರೆಜಿಲ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವರದಿ ಬಿಡುಗಡೆಯಾಗಿದ್ದು, ಚೀನಾದ ಸ್ಪಾಂಜ್ ನಗರದ ಮಳೆನೀರು ಮರುಬಳಕೆ ಮತ್ತು ಉಕ್ರೇನ್​ನ ಕೃತಕ ತೇವಭೂಮಿ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
 • ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು , ಮಾರ್ಚ್ 22ರಂದು (ವಿಶ್ವ ಜಲ ದಿನ) ನ್ಯೂರ್ಯಾನಲ್ಲಿ ವಿಶ್ವಸಂಸ್ಥೆಯ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕೊನೆಯ ಗಂಡು ಬಿಳಿ ಘೇಂಡಾ ಇನ್ನಿಲ್ಲ

 • ವಿಶ್ವದ ಕೊನೆಯ ಗಂಡು ಬಿಳಿ ಘೇಂಡಾಮೃಗ (ನಾರ್ದನ್ ವೈಟ್ ರೈನೊ) ಎನ್ನಲಾದ ‘ಸುಡಾನ್’ ಕಿನ್ಯಾದ ಒಲ್ ಪೆಜೆಟಾ ಸಂರಕ್ಷಿತ ಅರಣ್ಯದಲ್ಲಿ ಮೃತಪಟ್ಟಿದೆ. 45 ವರ್ಷದ ಈ ಅಪರೂಪದ ಘೕಂಡಾಮೃಗ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿತ್ತು.
 • ಅರಣ್ಯದಲ್ಲಿ ಜನಿಸಿದ ಕೊನೆಯ ಬಿಳಿ ಘೕಂಡಾಮೃಗ ಎಂಬ ಖ್ಯಾತಿಗೂ ಸುಡಾನ್ ಪಾತ್ರವಾಗಿತ್ತು.
 • ವಿರಳ ಉಪಜಾತಿ: ಘೕಂಡಾಮೃಗಗಳಲ್ಲಿ ಬಿಳಿ ರೈನೋ ಎಂಬುದು ಅತಿ ವಿರಳವಾದ ಜಾತಿ. ಸುಡಾನ್, ಉಗಾಂಡ, ಕಾಂಗೊ ಮತ್ತು ಮಧ್ಯ ಆಫ್ರಿಕಾದಲ್ಲಿ ಹೆಚ್ಚಾಗಿ ಇವು ಕಾಣಸಿಗುತ್ತಿದ್ದವು.
 • ಇದರ ಕೊಂಬಿನಿಂದ ಪುರುಷತ್ವ ವೃದ್ಧಿಯಾಗುವಂಥ ಬುಡಕಟ್ಟು ಜನರ ನಂಬಿಕೆಗಳು ಮತ್ತು ವಿದೇಶಗಳಲ್ಲಿ ಭಾರಿ ಬೇಡಿಕೆ ಹಿನ್ನೆಲೆ ಈ ಘೕಂಡಾಮೃಗಗಳನ್ನು ಬೇಟೆಯಾಡುವುದು ಹೆಚ್ಚಾಗಿತ್ತು.
 • ಅಳಿವಿನಂಚಿನಲ್ಲಿರುವ ಇತರ ಘೕಂಡಾ ಜಾತಿಗಳು:# ಕಪ್ಪು ಘೕಂಡಾಮೃಗ (ಬ್ಲ್ಯಾಕ್ ರೈನೋ) # ದಕ್ಷಿಣ ಬಿಳಿ ಘೕಂಡಾ ಮೃಗ ( ಸದರ್ನ್ ವೈಟ್ ರೈನೋ )
 • ಸಂತಾನೋತ್ಪತ್ತಿ ಫಲಿಸಲಿಲ್ಲ
 • 2009ರಲ್ಲಿ ಕಿನ್ಯಾದ ಸಂರಕ್ಷಿತ ಅರಣ್ಯಕ್ಕೆ ಸುಡಾನ್​ನನ್ನು ಕರೆತರಲಾಗಿತ್ತು. ವಿಶೇಷ ಆಹಾರ ಸೇರಿದಂತೆ 24 ಗಂಟೆ ಸಶಸ್ತ್ರ ಪಡೆಯ ಭದ್ರತೆ ಒದಗಿಸಲಾಗಿತ್ತು. ಮೂರು ಹೆಣ್ಣು ಘೕಂಡಾಮೃಗಗಳೊಂದಿಗೆ ಹಲವು ಬಾರಿ ಸುಡಾನ್​ನನ್ನು ಇರಿಸಲಾಗಿತ್ತಾದರೂ ಗರ್ಭಧಾರಣೆ ಕಂಡುಬರಲಿಲ್ಲ
 • ಪ್ರಸ್ತುತ ಉಳಿದಿರುವ ಎರಡು ಹೆಣ್ಣು ಬಿಳಿ ಘೕಂಡಾಮೃಗಗಳಿಂದ ಅಂಡಾಣು ಸಂಗ್ರಹಿಸಿ ಸಂರಕ್ಷಿಸಲಾಗಿರುವ ಗಂಡು ಘೕಂಡಾಮೃಗಗಳ ವೀರ್ಯಾಣುವಿನಿಂದ ಕೃತಕ ಗರ್ಭಧಾರಣೆಗೆ ಯತ್ನಿಸಲಾಗುತ್ತಿದೆ.
 • ಸುಡಾನ್ ದೇಹದಿಂದ ಆನುವಂಶಿಕ ಜೀವ ಕಣಗಳನ್ನು ಸಂಗ್ರಹಿಸಲಾಗುತ್ತಿದ್ದು, ಆಧುನಿಕ ಸೆಲ್ಯೂಲಾರ್ ತಂತ್ರಜ್ಞಾನದಿಂದಲೂ ಬಿಳಿ ಘೕಂಡಾಮೃಗ ಅಭಿವೃದ್ಧಿಗೆ ಯತ್ನಿಸಲಾಗುತ್ತಿದೆ.

ಜಾತಿ ನಿಂದನೆ ಕಾಯ್ದೆ ದುರ್ಬಳಕೆಗೆ ಅಂಕುಶ

 • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಯಾವುದೇ ಸರ್ಕಾರಿ ನೌಕರರು ಅಥವಾ ವ್ಯಕ್ತಿಗಳ ವಿರುದ್ಧ ದೂರು ದಾಖಲಾದರೆ ತಕ್ಷಣಕ್ಕೆ ಅವರನ್ನು ಬಂಧಿಸಕೂಡದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.
 • ಈ ಕಾಯ್ದೆ ಅಡಿ ಯಾರನ್ನೇ ಬಂಧಿಸುವ ಮೊದಲು ಪ್ರಕರಣದ ಬಗ್ಗೆ ಡಿವೈಎಸ್‌ಪಿ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಪೊಲೀಸ್‌ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿ ಒಪ್ಪಿಗೆ ನೀಡುವುದು ಕಡ್ಡಾಯ ಎಂದು ನಿರ್ದೇಶನ ನೀಡಿದೆ.
 • ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ–1989 ದುರುಪಯೋಗ ಹೆಚ್ಚಾಗುತ್ತಿದೆ ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ.
 • ಜಾತಿ ನಿಂದನೆ ದೂರಿನಲ್ಲಿರುವ ಸತ್ಯಾಂಶದ ಕುರಿತು ಹಿರಿಯ ಪೊಲೀಸ್‌ ಅಧಿಕಾರಿಗಳು ಪರಾಮರ್ಶೆ ನಡೆಸಿ ತನಿಖಾ ವರದಿ ಸಲ್ಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.
 • ‘ಸುಪ್ರೀಂ’ ನಿರ್ದೇಶನ: ಎಸ್‌ಸಿ, ಎಸ್‌ಟಿ ಕಾಯ್ದೆಯ ದುರುಪಯೋಗ ತಡೆಯುವ ನಿಟ್ಟಿನಲ್ಲಿ ನ್ಯಾಯಮೂರ್ತಿಗಳಾದ ಆದರ್ಶ್‌ ಗೋಯಲ್‌ ಮತ್ತು ಯು.ಯು. ಲಲಿತ್‌ ಅವರ ಪೀಠವು ಕೆಲವು ಮಾರ್ಗಸೂಚಿ ನೀಡಿದೆ.
 • ಈ ಕಾಯ್ದೆ ಅಡಿ ದೂರು ದಾಖಲಾದರೆ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
 • ಒಂದು ವೇಳೆ ಬಂಧನ ಅನಿವಾರ್ಯವಾದರೆ ಸಂಬಂಧಿಸಿದ ಇಲಾಖೆ, ಹಿರಿಯ ಅಧಿಕಾರಿಗಳ (ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ) ಪೂರ್ವಾನುಮತಿ ಪಡೆಯುವುದು ಕಡ್ಡಾಯ.

ಏನಿದು ಕಾಯ್ದೆ?

 • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಿರುದ್ಧದ ದೌರ್ಜನ್ಯಗಳನ್ನು ತಡೆಯುವ ಉದ್ದೇಶದಿಂದ 1989ರಲ್ಲಿ ಎಸ್​ಸಿ/ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತರಲಾಯಿತು. ದಲಿತರ ಮೇಲೆ ದೌರ್ಜನ್ಯ ಎಸಗುವವರನ್ನು ಶಿಕ್ಷೆಗೆ ಗುರಿಪಡಿಸುವುದು, ಸಂತ್ರಸ್ತರಿಗೆ ವಿಶೇಷ ರಕ್ಷಣೆ ನೀಡುವುದು ಮತ್ತು ಇಂತಹ ಪ್ರಕರಣಗಳ ಶೀಘ್ರ ವಿಲೇವಾರಿಗೆ ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆಯನ್ನು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.
 • ಜಾತಿ ನಿಂದನೆ, ಸಾಮಾಜಿಕ ಬಹಿಷ್ಕಾರ, ಅಸ್ಪಶ್ಯತೆ ಆಚರಣೆ, ಹಲ್ಲೆ, ಅತ್ಯಾಚಾರ, ದಲಿತರ ಭೂಮಿ ಒತ್ತುವರಿ, ದಲಿತ ಕಾರ್ವಿುಕರಿಗೆ ಕನಿಷ್ಠ ಕೂಲಿ ನೀಡದಿರುವುದು, ದೇವಾಲಯ ಪ್ರವೇಶ ನಿರ್ಬಂಧ, ಶವಸಂಸ್ಕಾರಕ್ಕೆ ಭೂಮಿ ನೀಡದಿರುವುದು, ಮಲಹೊರುವ ಪದ್ಧತಿ, ದಲಿತನೆಂಬ ಕಾರಣಕ್ಕೆ ಸರ್ಕಾರಿ ಸೇವೆಗಳ ನಿರಾಕರಣೆ, ಸೇವನೆಗೆ ಅರ್ಹವಲ್ಲದ ಆಹಾರಗಳನ್ನು ಸೇವಿಸುವಂತೆ ಬಲವಂತ ಮಾಡುವುದು, ಬೆತ್ತಲು ಮಾಡುವುದು ಸೇರಿದಂತೆ 20ಕ್ಕೂ ಹೆಚ್ಚು ಅಪರಾಧಗಳನ್ನು ಈ ಕಾಯ್ದೆಯಡಿ ತರಲಾಗಿದೆ.

ಪಾವಗಡ ಸೋಲಾರ್​ ಪಾರ್ಕ್​​ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ

 • ಕರ್ನಾಟಕ ರಾಜ್ಯದ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ರಾರಾಜಿಸಿದೆ. ಪಾವಗಡದ ಸೋಲಾರ್​ ಪಾರ್ಕ್​ ಬಗ್ಗೆ ಅಮೆರಿಕಾದ ಖ್ಯಾತ ಮಾಧ್ಯಮ ಸಂಸ್ಥೆ ಲಾಸ್​ ಏಂಜಲೀಸ್​ ಟೈಮ್ಸ್​ನಲ್ಲಿ ಪ್ರಸ್ತಾಪ ಮಾಡಿದ್ದು ಹಸಿರು ಇಂಧನ ಉತ್ಪಾದನೆ ಬಗ್ಗೆ ಭಾರತದ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
 • ಡೊನಾಲ್ಡ್​ ಟ್ರಂಪ್​ ನೇತೃತ್ವದ ಸರ್ಕಾರ ಪ್ಯಾರಿಸ್​ ಒಪ್ಪಂದದಿಂದ ಹಿಂದೆ ಸರಿದು ಕಲ್ಲಿದ್ದಲು ಆಧರಿತ ಇಂಧನ ಮೂಲಗಳ ಪುನಶ್ಚೇತನಕ್ಕೆ ಮುಂದಾಗಿರವ ಹೊತ್ತಿನಲ್ಲಿ ಭಾರತ ಸೌರ ವಿದ್ಯುತ್​ ಉತ್ಪಾದನೆಗೆ ಮಹತ್ವ ನೀಡುತ್ತಿದೆ ಎಂಬುದನ್ನು ಪಾವಗಡ ಸೋಲಾರ್​ ಪಾರ್ಕ್​ ಉದಾಹರಣೆಯೊಂದಿಗೆ ಉಲ್ಲೇಖಿಸಲಾಗಿದೆ.
 • ಇಂಟರ್​ನ್ಯಾಷನಲ್​ ಸೋಲಾರ್​ ಮೈತ್ರಿಗೆ ಕೆಲವು ದಿನಗಳ ಹಿಂದೆಯಷ್ಟೇ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯಕ್ಕೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಸಿಕ್ಕಿದೆ. ಪಾವಗಡದಲ್ಲಿ 13 ಸಾವಿರ ಎಕರೆಯಲ್ಲಿ ಸೋಲಾರ್​ ಪಾರ್ಕ್​ ನಿರ್ಮಿಸಲಾಗಿದ್ದು ಮೊದಲ ಹಂತದಲ್ಲಿ 600 ಮೆಗಾ ವ್ಯಾಟ್​ ವಿದ್ಯುತ್​ ಪೂರೈಕೆಗೆ ಅಣಿಯಾಗಿದೆ.

ಗರ್ಭಿಣಿಯರಿಗೆ ಇನ್ಸುಲಿನ್ ಬದಲು ಮಾತ್ರೆ

 • ಗರ್ಭಿಣಿಯರಲ್ಲಿನ ಸಕ್ಕರೆ ಅಂಶದ ಪ್ರಮಾಣ ನಿಯಂತ್ರಿಸಲು ನೀಡಲಾಗುವ ಇನ್ಸುಲಿನ್ ಅನ್ನು ಮಾತ್ರೆಗಳ ರೂಪದಲ್ಲಿ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
 • ರಾಜ್ಯದಲ್ಲಿ ಅಂದಾಜು 1 ಲಕ್ಷ ಮಂದಿ ಗರ್ಭಿಣಿಯರಲ್ಲಿ ಮಧುಮೇಹವಿದ್ದು, ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳುತ್ತಾರೆ. ಚುಚ್ಚುಮದ್ದಿನ ಬದಲಾಗಿ ಮೆಟಾಫರ್ವಿುನ್ ಗುಳಿಗೆ ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಲಾಗುತ್ತಿದೆ.
 • ಚುಚ್ಚುಮದ್ದುಗಳ ನಿರ್ವಹಣೆ, ಗುಣಮಟ್ಟ ಕಾಪಾಡುವುದು ಹಾಗೂ ಸಂಭಾವ್ಯ ಅಚಾತುರ್ಯಗಳನ್ನು ಪರಿಗಣಿಸಿ, ಸುಧಾರಿತ ವೈದ್ಯಕೀಯ ಕ್ರಮವನ್ನು ಅನುಸರಿಸುವ ಕುರಿತು ಇಲಾಖೆ ತಯಾರಿ ತಯಾರಿ ನಡೆಸಿದೆ. ಇನ್ಸುಲಿನ್ಚುಚ್ಚುಮದ್ದು ತೆಗೆದುಕೊಳ್ಳುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವ (ಹೈಪೋಗ್ಲೈಸೆಮಿಯಾ) ಸಮಸ್ಯೆ ಉಂಟಾಗುವ ಸಾಧ್ಯತೆಗಳಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
 • ಗರ್ಭಧಾರಣೆ ವೇಳೆ ದೇಹದಲ್ಲಾಗುವ ಅನೇಕ ಬದಲಾವಣೆಗಳಿಂದ ಗರ್ಭಧಾರಣೆಯ ಮಧುಮೇಹ (ಗೆಸ್ಟೇಶನಲ್ ಡಯಾಬಿಟಿಸ್)ಉಂಟಾಗುತ್ತದೆ. ಇದು ತಾತ್ಕಾಲಿಕವಾದರೂ, ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಗರ್ಭಿಣಿಯರಿಗೆ ನಿಗದಿತ ಅವಧಿಯಲ್ಲಿ ಇನ್ಸುಲಿನ್ ನೀಡಬೇಕಾಗುತ್ತದೆ.
 • ಅಲ್ಲದೆ ಕೆಲವರಲ್ಲಿ ದೇಹದಲ್ಲಿ ಸಕ್ಕರೆ ಅಂಶ ಏರುಪೇರಾಗುವ ಸಾಧ್ಯತೆಗಳೂ ಇರುತ್ತದೆ. ಇದಕ್ಕಾಗಿ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರನ್ನು ಬಳಸಿ ಸಕ್ಕರೆ ಪ್ರಮಾಣ ತಿಳಿದುಕೊಳ್ಳಲಾಗುತ್ತದೆ. ಹೆಚ್ಚಿನ ಪರೀಕ್ಷೆಗಳು ಅಗತ್ಯವಿದ್ದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಗರ್ಭಿಣಿಯರ ಆರೈಕೆ ಕಷ್ಟಕರ.
 • ಇನ್ಸುಲಿನ್ ಚುಚ್ಚಮದ್ದುಗಳನ್ನು ನೀಡಲು ಕಾರ್ಯಕರ್ತರಿಗೆ ವಿಶೇಷ ತರಬೇತಿಗಳನ್ನೂ ನೀಡಬೇಕಾಗುತ್ತದೆ. ಇನ್ಸುಲಿನ್​ಗಳನ್ನು ಬಳಕೆಗೆ ಯೋಗ್ಯವಾಗುವಂತೆ ಇಟ್ಟುಕೊಳ್ಳುವುದು ಕೆಲವೊಮ್ಮೆ ಕಷ್ಟಕರವಾಗುವ ಸಾಧ್ಯತೆಗಳಿರುತ್ತದೆ. ಈ ಎಲ್ಲ ಅಂಶಗಳನ್ನು ಗಮನಿಸಿ, ಚುಚ್ಚುಮದ್ದಿನ ಬದಲಾಗಿ ಗುಳಿಗೆಗಳನ್ನು ನೀಡಲು ಇಲಾಖೆ ಮುಂದಾಗಿದೆ.
 • ಮಾರ್ಗಸೂಚಿ ಬಿಡುಗಡೆ: ಕೇಂದ್ರ ಸರ್ಕಾರ ಗೆಸ್ಟೇಶನಲ್ ಡಯಾಬಿಟಿಕ್​ಗೆ ಸಂಬಂಧಿಸಿದಂತೆ ಚಿಕಿತ್ಸೆಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಚುಚ್ಚುಮದ್ದನ್ನು ಬಿಟ್ಟು ಪರ್ಯಾಯ ಔಷಧಕ್ಕೆ ಸಲಹೆ ನೀಡಿದೆ. ಅಲ್ಲದೆ ಎಲ್ಲ ಗರ್ಭಿಣಿಯರಿಗೂ ಸಕ್ಕರೆ ಕಾಯಿಲೆ ಸಂಬಂಧ ಪರೀಕ್ಷಿಸುವುದನ್ನು ಕಡ್ಡಾಯಗೊಳಿಸಿದೆ. ಗರ್ಭಿಣಿಯರಲ್ಲಿ ಮೊದಲ ಬಾರಿಯ ಪರೀಕ್ಷೆಯಲ್ಲಿ ಮಧುಮೇಹ ಇಲ್ಲ ಎಂದು ವರದಿ ಬಂದರೂ ಗರ್ಭಧಾರಣೆಯ 24-28ನೇವಾರದಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು.
 • ಮಗುವಿನ ಜನನದ ಬಳಿಕ 6 ವಾರಗಳು ತಾಯಿಗೆ ಓರಲ್ ಗ್ಲೂಕೋಸ್ ಟಾಲರೆನ್ಸ್ ಟೆಸ್ಟ್ ಮಾಡಿಸಲಾಗುತ್ತದೆ. ಈ ಪರೀಕ್ಷೆಗಳಲ್ಲಿ ಸಕ್ಕರೆ ಅಂಶ ಸಮಾನ್ಯವಾಗಿರಬೇಕಾಗುತ್ತದೆ. ಪರೀಕ್ಷೆ ಹಾಗೂ ಇನ್ನಿತರ ಸೂಚನೆಗಳನ್ನು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.
 • ಗರ್ಭಧಾರಣೆಯ ಮಧುಮೇಹದಿಂದ ಉಂಟಾಗುವ ಅಪಾಯಗಳು
 • ಗರ್ಭಪಾತ, ಗರ್ಭನಾಳ ಅಥವಾ ಅಂಡಾಶಯದಲ್ಲಿ ಸಮಸ್ಯೆ, ಮಗುವಿನ ಸ್ಥಿತಿಯಲ್ಲಿ ತೊಂದರೆ, ನಂಜು, ಗರ್ಭಾಶಯದಲ್ಲಿ ಸೋಂಕು ಇತ್ಯಾದಿ ಸಮಸ್ಯೆಗಳು ತಾಯಿಗೆ ಉಂಟಾಗುವ ಸಾಧ್ಯತೆಗಳಿರುತ್ತವೆ.
 • ಗರ್ಭದಲ್ಲಿರುವ ಮಗು ವಿರೂಪತೆ, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
 • ಮೆಡಿಕಲ್ ನ್ಯೂಟ್ರಿಷನ್ ಥೆರಪಿ
 • ಪ್ರಸವ ಪೂರ್ವ ಆರೋಗ್ಯ ತಪಾಸಣೆಗಾಗಿ ಬರುವ ಗರ್ಭಿಣಿಯರಿಗೆ 75 ಗ್ರಾಂ ಗ್ಲೂಕೋಸ್ ಹುಡಿಯನ್ನು ಸೇವನೆಗಾಗಿ ನೀಡಲಾಗುತ್ತದೆ. 2 ಗಂಟೆಗಳ ಬಳಿಕ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಲಾಗುತ್ತದೆ. ಈ ವೇಳೆ ಸಾಮಾನ್ಯ ಸೂಚ್ಯಂಕದಿಂದ ಸಕ್ಕರೆ ಅಂಶ ಹೆಚ್ಚು ಕಂಡುಬಂದಲ್ಲಿ, ಮೆಡಿಕಲ್ ನ್ಯೂಟ್ರಿಷನ್ ಥೆರಪಿಯನ್ನು 15 ದಿನಗಳ ಕಾಲ ನೀಡಲಾಗುತ್ತದೆ. ಆ ಬಳಿಕವೂ ಗರ್ಭಿಣಿಯ ಸಕ್ಕರೆ ಪ್ರಮಾಣವು ಸಾಮಾನ್ಯ ಮಟ್ಟಕ್ಕೆ ಬರದೆ ಇದ್ದಲ್ಲಿ, ಗುಳಿಗೆಗಳನ್ನು ನೀಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

****~~~ದಿನಕ್ಕೊಂದು ಯೋಜನೆ~~~***

ರಾಷ್ಟ್ರೀಯ ಗೋಕುಲ್ ಮಿಷನ್

 • ಬೋವಿನ್ ಉತ್ಪಾದನಾ ಯೋಜನೆ ರಾಷ್ಟ್ರೀಯ ಮಿಷನ್ ಅಡಿಯಲ್ಲಿ ಸ್ಥಳೀಯ ತಳಿಗಳಲ್ಲಿ ಮಾಸ್ ಭ್ರೂಣ ವರ್ಗಾವಣೆ ಕಾರ್ಯಕ್ರಮವನ್ನು ಕೈಗೊಂಡಿದೆ.
 • ಎಮ್ಬ್ರೊ ಟ್ರಾನ್ಸ್ಫರ್ ಟೆಕ್ನಾಲಜಿ (ಇಟಿಟಿ) ಬಳಸಿ ರಾಷ್ಟ್ರೀಯ ಗೊಕುಲ್ ಮಿಷನ್ ಅಡಿಯಲ್ಲಿ ಸ್ಥಳೀಯ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಅಳವಡಿಸಲಾಗಿದೆ.

 ಬೊವೀನ್ ಉತ್ಪಾದಕತೆ ಕುರಿತು ರಾಷ್ಟ್ರೀಯ ಮಿಷನ್

 • 2016 ರ ನವೆಂಬರ್ನಲ್ಲಿ ಇದನ್ನು ಹಾಲಿನ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು ಮತ್ತು ಇದರಿಂದ ರೈತರಿಗೆ ಹಾಲುಕರೆಯುವಿಕೆಯು ಹೆಚ್ಚು ಲಾಭದಾಯಕವಾಗಿದೆ. ಇದನ್ನು ಕೆಳಗಿನ ಅಂಶಗಳೊಂದಿಗೆ ಅಳವಡಿಸಲಾಗಿದೆ

(i) ಪಶು ಸಂಜೀವಿನಿ: ಇದು ಯುಐಡಿ ಬಳಸಿ ಹಾಲಿನಲ್ಲಿ ಪ್ರಾಣಿಗಳ ಗುರುತಿಸುವಿಕೆ, ಹಾಲಿನಲ್ಲಿರುವ ಎಲ್ಲಾ ಪ್ರಾಣಿಗಳಿಗೆ ಆರೋಗ್ಯಕರ ಕಾರ್ಡುಗಳನ್ನು ನೀಡುವ ಮತ್ತು ಐಎಎನ್ಎನ್ಎಫ್ ಡಾಟಾ ಬೇಸ್ನಲ್ಲಿ ಡೇಟಾವನ್ನು ಅಪ್ಲೋಡ್ ಮಾಡುವುದನ್ನು ಒಳಗೊಂಡಿದೆ.

(ii) ಅಡ್ವಾನ್ಸ್ ರಿಪ್ರೊಡಕ್ಟಿವ್ ಟೆಕ್ನಿಕ್: ಇದರ ಅಡಿಯಲ್ಲಿ, ಲೈಂಗಿಕ ವಿಂಗಡಿಸಲಾದ ವೀರ್ಯ ಉತ್ಪಾದನಾ ಸೌಲಭ್ಯವನ್ನು 10 ಎ ಶ್ರೇಣೀಯ ವೀರ್ಯ ಕೇಂದ್ರಗಳು ಮತ್ತು ಐವಿಎಫ್ ಸೌಕರ್ಯಗಳೊಂದಿಗೆ 50 ಇಇಟಿ ಲ್ಯಾಬ್ಗಳಲ್ಲಿ ರಚಿಸಲಾಗುತ್ತಿದೆ.

(iii) ಇ ಪಶು ಹಾಟ್ ಪೋರ್ಟಲ್ ರಚಿಸುವುದು: ದೇಶೀಯ ತಳಿಗಳ ರೈತರು ಮತ್ತು ತಳಿಗಾರರನ್ನು ಸಂಪರ್ಕಿಸುವುದು

(iv) ಸ್ಥಳೀಯ ತಳಿಗಳ ರಾಷ್ಟ್ರೀಯ ಬೊವೈನ್ ಜೀನೋಮಿಕ್ ಕೇಂದ್ರವನ್ನು ಸ್ಥಾಪಿಸುವುದು (NBGC-IB): ಸ್ಥಳೀಯ ತಳಿಗಳ ನಡುವೆ ಜೀನೋಮಿಕ್ ಆಯ್ಕೆಯ ಮೂಲಕ ಹಾಲಿನ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಇದನ್ನು ಸ್ಥಾಪಿಸಲಾಗಿದೆ.

ರಾಷ್ಟ್ರೀಯ ಗೋಕುಲ್ ಮಿಷನ್

 • ವೀರ್ಯ ಉತ್ಪಾದನೆ, ಕ್ಷೇತ್ರ ಪ್ರದರ್ಶನ ರೆಕಾರ್ಡಿಂಗ್, ಬುಲ್ಸ್ ಮಾತೃ ಕೇಂದ್ರಗಳನ್ನು ಬಲಪಡಿಸುವುದು, ಗೊಕುಲ್ ಗ್ರಾಂಗಳನ್ನು ಸ್ಥಾಪಿಸುವುದು ಇತ್ಯಾದಿಗಳಲ್ಲಿ ಹೆಚ್ಚಿನ ಆನುವಂಶಿಕ ಅರ್ಹತೆಯ ಬುಲ್ಗಳನ್ನು ಹೆಚ್ಚಿಸುವ ಮೂಲಕ ಹಾಲಿನ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಅಭಿವೃದ್ಧಿಪಡಿಸಲು ಮತ್ತು ಸ್ಥಳೀಯ ಗೋವಿನ ತಳಿಗಳ ಅಭಿವೃದ್ಧಿಗಾಗಿ ಡಿಸೆಂಬರ್ 2014 ರಲ್ಲಿ ಪ್ರಾರಂಭಿಸಲಾಯಿತು.

 

1.ವಿಶ್ವ ಜಲ ದಿನವನ್ನು ಎಂದು ಆಚರಿಸಲಾಗುತ್ತದೆ ?

A)ಮಾರ್ಚ್ 21

B)ಮಾರ್ಚ್22

C)ಮಾರ್ಚ್ 23

D)ಮಾರ್ಚ್ 24

2.ಬಿಳಿ ರೈನೊ ಎಲ್ಲೆಲಿ ಕಂಡುಬರುತ್ತದೆ?

A)ಸುಡಾನ್

B)ಉಗಾಂಡ

C)ಕಾಂಗೊ

D)ಮೇಲಿನ ಎಲ್ಲವು

3.ಯಾವ ದೇಶವು ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯಲು ನಿರ್ಧರಿಸಿದೆ ?

A)ಜಪಾನ್

B)ಚೀನಾ

C)ಯು.ಯಸ್.ಎ

D)ರಷ್ಯಾ

4.ಗರ್ಭಿಣಿಯರಿಗೆ ಚುಚ್ಚುಮದ್ದಿನ ಬದಲಾಗಿ ಯಾವ ಮಾತ್ರೆಯನ್ನು ನೀಡಲು ನಿರ್ಧರಿಸಲಾಗಿದೆ?

A)ಮೆಟಫರ್ಮಿನ್

B)ರಿಫಾಮ್ಪ್ಯಾಸಿನ್

C)1 ಮತ್ತು 2

D)ಯಾವುದು ಅಲ್ಲ

5.ಯಾವ ದಿನಾಂಕದಂದು 2018 ವರ್ಲ್ಡ್ ಸ್ಪ್ಯಾರೋ ಡೇ (ಡಬ್ಲುಎಸ್ಡಿ) ಅನ್ನು ಆಚರಿಸಲಾಗುತ್ತದೆ?

A)ಮಾರ್ಚ್ 20

B)ಮಾರ್ಚ್ 19

C)ಮಾರ್ಚ್ 21

D)ಮಾರ್ಚ್ 22

6.ಯೂರೋಪಿಯನ್ ಯೂನಿಯನ್ (ಇಯು) ಇತ್ತೀಚೆಗೆ ಪರಸ್ಪರ ವೀಕ್ಷಣಾ ವೀಕ್ಷಣೆಯನ್ನು ಯಾವ ದೇಶದ ಉಪಗ್ರಹಗಳಿಂದ ಹಂಚಿಕೊಳ್ಳುವ ಒಪ್ಪಂದದೊಂದಿಗೆ ಸಹಿ ಹಾಕಿದೆ?

A)ಭಾರತ

B)ಕೆನಡಾ

C)ಚೀನಾ

D)ಥೈಲ್ಯಾಂಡ್

7.ನಬಕಲೇಬಾರ ಉತ್ಸವವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?

A)ಕರ್ನಾಟಕ

B)ಒಡಿಶಾ

C)ಅಸ್ಸಾಂ

D)ಕೇರಳ

8.ರಾಷ್ಟ್ರಪತಿ ಸ್ಥಾನ ಖಾಲಿಯಾದಾಗ ಉಪರಾಷ್ಟ್ರಪತಿಯು ರಾಷ್ಟ್ರಪತಿಯ ಕರ್ತವ್ಯಗಳನ್ನು ನಿರ್ವಹಿಸುವ ಗರಿಷ್ಠ ಅವಧಿ

A)1 ವರ್ಷ

B)6 ತಿಂಗಳು

C)3 ತಿಂಗಳು

D)2 ವರ್ಷ

9.ಮರಾಸ್ಮಸ್ ಕಾಯಿಲೆಯು ಯಾವುದರ ಕೊರತೆಯಿಂದ ಉಂಟಾಗುತ್ತದೆ?

A)ಕ್ಯಾಲ್ಸಿಯಂ

B)ಕಬ್ಬಿಣ

C)ಪ್ರೋಟೀನ್

D)ಅಯೋಡಿನ್

10.ಭೂಮಿಯ ಮೇಲೆ ಕಳೆದ ೨೦೦ ವರ್ಷಗಳಿಂದ ಮಳೆ ಬಾರದಿರುವ ಪ್ರದೇಶ ಯಾವುದು?

A)ವ್ಯಾಟಿಕನ್ ಸಿಟಿ

B)ಇಥೊಪಿಯಾ

C)ಅಟಕಾಮ

D)ನಾಯಕನ ಹಟ್ಟಿ

ಉತ್ತರಗಳು

1.B 2.D 3.C 4.A 5.A 6.A 7.B 8.B 9.C 10.C 

Related Posts
“21 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿದ್ಯುತ್ ಕಡಿತಕ್ಕೆ ಸೋಲಾರ್ ಪರಿಹಾರ ಸುದ್ಧಿಯಲ್ಲಿ ಏಕಿದೆ ?ಬೇಸಗೆ ಬಂದರೆ ಲೋಡ್‌ ಶೆಡ್ಡಿಂಗ್‌ ಜತೆಗೆ ವಿದ್ಯುತ್‌ ಬಿಲ್‌ ಕೂಡ ದುಬಾರಿ. ಇದಕ್ಕೆ ಪರ್ಯಾಯವೆಂದರೆ ನಮ್ಮ ಮನೆಯಲ್ಲಿ ನಾವೇ ವಿದ್ಯುತ್‌ ಉತ್ಪಾದಿಸಿಕೊಳ್ಳುವುದು. ಒಂದು ಬಾರಿಯ ಹೂಡಿಕೆಯಿಂದ ಆಗುವ ಸಾಕಷ್ಟು ಲಾಭವೇ ಸೋಲಾರ್‌ ವಿದ್ಯುತ್‌ನತ್ತ ಹೆಚ್ಚು ...
READ MORE
Karnataka Current Affairs – KAS/KPSC Exams – 6th April 2018
Mobile app to ‘fix’ bus breakdown issues The Bangalore Metropolitan Transport Corporation (BMTC) has launched a mobile app to track and fix buses in the hope that it will bring down ...
READ MORE
Kyoto to Paris- All about climate change negotiations
Earth Summit 1992 Earth Summit 1992 was the United Nations Conference on Environment and Development (UNCED), commonly known  as  the  Rio  Summit  or  Rio  Conference Outcomes Rio Declaration on Environment and Development Agenda 21 Convention ...
READ MORE
NammaKPSC online mains test series
Now that the prelims is done surely most of you are busy partying and patting yourself on the back. But the war isn’t over yet. Also few of you might be ...
READ MORE
Karnataka Current Affairs – KAS/KPSC Exams- 14th June 2018
Mudigere taluk records highest rainfall in State The rainfall in Hassan and Chikkamagaluru districts was widespread on 11th & 12th June The State’s highest rainfall of 395.5mm was recorded at Kirugunda in ...
READ MORE
2005ರ ಅಕ್ಟೋಬರ್ 12ರಂದು ಜಾರಿ ಜನಸಾಮಾನ್ಯರೂ ಆಡಳಿತ ವ್ಯವಸ್ಥೆಯ ಮಾಹಿತಿ ಪಡೆಯಲು ಅನುವಾಗುವ ಮಾಹಿತಿ ಹಕ್ಕು ಕಾಯ್ದೆ. ಮಾಹಿತಿ ಹಕ್ಕು ಕಾಯ್ದೆ ಎಂದರೇನು? ನಾಗರಿಕರು ಮಾಹಿತಿ ಬಯಸಿ ಸಲ್ಲಿಸಿದ ಅರ್ಜಿಯನ್ನು ಪರೀಕ್ಷಿಸಿ, ಅದಕ್ಕೆ ಸಂಬಂಧಪಟ್ಟ ಸೂಕ್ತ ಮಾಹಿತಿಯನ್ನು ನಿಗದಿತ ಅವಧಿಯೊಳಗೆ ನೀಡುವುದು; ಆ ಮೂಲಕ ಆಡಳಿತ ವ್ಯವಹಾರದಲ್ಲಿ ...
READ MORE
Today’s (5th April) Current Affairs For KAS / KPSC Exams
New sand policy to include demands of coastal districts The state government will come out with a new sand policy incorporating the demands of the three coastal districts to allow locals ...
READ MORE
Karnataka Govt to introduce public health courses for non-medical staff
The state government is all set to introduce postgraduate and short-term courses in public health for non-medical staff working in various government hospitals across the state. The Department of Health and ...
READ MORE
All about National Civil Aviation Policy, 2016
The Minister of Civil Aviation Shri P. Ashok Gajapathi Raju released the  National Civil Aviation Policy 2016. This is the first time since  independence that an integrated Civil Aviation Policy has ...
READ MORE
Karnataka Current Affairs – KAS/KPSC Exams – 22nd Dec 2017
India International Coffee Festival to be held from January 16 After a gap of four years, Bengaluru will host the seventh edition of India International Coffee Festival (IICF) in January 2018. This ...
READ MORE
“21 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
Karnataka Current Affairs – KAS/KPSC Exams – 6th
Kyoto to Paris- All about climate change negotiations
NammaKPSC online mains test series
Karnataka Current Affairs – KAS/KPSC Exams- 14th June
ಮಾಹಿತಿ ಹಕ್ಕು ಕಾಯ್ದೆ(ಆರ್​ಟಿಐ)
Today’s (5th April) Current Affairs For KAS /
Karnataka Govt to introduce public health courses for
All about National Civil Aviation Policy, 2016
Karnataka Current Affairs – KAS/KPSC Exams – 22nd

Leave a Reply

Your email address will not be published. Required fields are marked *