“22 ಫೆಬ್ರವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಅರಣ್ಯ ನಿವಾಸಿಗರ ತೆರವಿಗೆ ಸುಪ್ರೀಂ ಆದೇಶ

1.

ಸುದ್ಧಿಯಲ್ಲಿ ಏಕಿದೆ ? ದೇಶಾದ್ಯಂತ ಕಾಡುಗಳಲ್ಲಿ ವಾಸಿಸುವ ಹತ್ತು ಲಕ್ಷ ಕ್ಕೂ ಹೆಚ್ಚಿನ ಬುಡಕಟ್ಟು ಮತ್ತು ಆದಿವಾಸಿ ಕುಟುಂಬಗಳನ್ನು ಕಾಡಿನಿಂದ ಹೊರಹಾಕಲು ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿದೆ. ಈ ಕುರಿತು ರಾಜ್ಯಗಳು ಸಲ್ಲಿಸಿದ್ದ ಅಫಿಡವಿಟ್‌ ವಿಚಾರಣೆ ನಡೆಸಿದ ನ್ಯಾಯಾಲಯ ಸುಮಾರು 11,72,931 ಪರಿಶಿಷ್ಟ ಪಂಗಡ, ಇತರೆ ಬುಡಕಟ್ಟು ಅರಣ್ಯ ನಿವಾಸಿಗಳ ಭೂ ಮಾಲೀಕತ್ವ ಹಕ್ಕುಗಳನ್ನು ತಿರಸ್ಕರಿಸಿದೆ.

 • ಸುಪ್ರೀಂ ಆದೇಶದಿಂದಾಗಿ ಕರ್ನಾಟಕವೊಂದರಲ್ಲೇ ನಾಲ್ಕು ಲಕ್ಷ ಕುಟುಂಬಗಳು ಬೀದಿಗೆ ಬೀಳಲಿವೆ.
 • ಆದೇಶವೇನು?: ಸುಪ್ರೀಂಕೋರ್ಟ್ ತೀರ್ಪಿನನ್ವಯ ಕರ್ನಾಟಕ ಸೇರಿ 16ಕ್ಕೂ ಅಧಿಕ ರಾಜ್ಯಗಳು ಜು.12ರೊಳಗೆ 11,72,931 ಅರಣ್ಯವಾಸಿ ಕುಟುಂಬಗಳನ್ನು ತೆರವುಗೊಳಿಸಬೇಕಿದೆ.
 • ಸದ್ಯ ಅರಣ್ಯವಾಸಿಗಳ ಕುರಿತು ಸುಪ್ರೀಂಕೋರ್ಟ್​ಗೆ 16 ರಾಜ್ಯಗಳಷ್ಟೇ ಮಾಹಿತಿ ನೀಡಿವೆ. ಹೀಗಾಗಿ ಎಲ್ಲ ರಾಜ್ಯಗಳ ಮಾಹಿತಿ ಸಿಕ್ಕ ಬಳಿಕ ಈ ಸಂಖ್ಯೆ 12 ಲಕ್ಷ ಮೀರುವ ಅಂದಾಜಿದೆ.
 • ಬೆಂಗಳೂರಿನ ವೈಲ್ಡ್​ಲೈಫ್ ಫಸ್ಟ್ ಎನ್​ಜಿಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ, ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಯಾವೆಲ್ಲ ಅರ್ಜಿ ತಿರಸ್ಕರಿಸಲಾಗಿದೆಯೋ ಅಂಥವರನ್ನು ಜು.12ರೊಳಗೆ ಅರಣ್ಯದಿಂದ ಹೊರಹಾಕಬೇಕೆಂದು ಆದೇಶ ನೀಡಿದೆ.
 • ಇಲ್ಲವಾದಲ್ಲಿ ಜು.27ರ ಅರ್ಜಿ ವಿಚಾರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳ ಕ್ರಮವನ್ನು ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ರಾಜ್ಯ ಸರ್ಕಾರದ ತೆರವು ಬಳಿಕ ಕೇಂದ್ರ ಪರಿಸರ ಇಲಾಖೆ ಉಪಗ್ರಹ ಸಮೀಕ್ಷೆ ನಡೆಸಿ ಸುಪ್ರೀಂಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಬೇಕಿದೆ.
 • ದೇಶಾದ್ಯಂತ ಇರುವ 12 ಲಕ್ಷ ಆದಿವಾಸಿ ಕುಟುಂಬಗಳ ಪೈಕಿ ಶೇ.20ಕ್ಕೂ ಅಧಿಕ ಕುಟುಂಬಗಳು ಕರ್ನಾಟಕ, ಮಧ್ಯಪ್ರದೇಶ ಹಾಗೂ ಓಡಿಶಾದಲ್ಲಿವೆ.

ಇದೇ ಮೊದಲಲ್ಲ

 • 2002-04ರ ಅವಧಿಯಲ್ಲೂ ದೇಶಾದ್ಯಂತ 3 ಲಕ್ಷ ಅರಣ್ಯವಾಸಿಗಳನ್ನು ತೆರವುಗೊಳಿಸಲಾಗಿತ್ತು. ಇದರಿಂದ ಅರಣ್ಯ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಲು ಕೂಡ ಕಾರಣವಾಗಿತ್ತು. ಅಲ್ಲದೇ ಈ ಕಾರಣದಿಂದ ದೇಶದ ಕೆಲವೆಡೆ ಹಿಂಸಾಚಾರ ನಡೆದು ಸಾವು-ನೋವಿನ ವರದಿಯಾಗಿತ್ತು.

ಕಾಯ್ದೆಯಲ್ಲಿ ಏನಿದೆ?

 • ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಭೂ ಮಾಲೀಕತ್ವ ಸಾಬೀತು ಪಡಿಸಬೇಕಿದ್ದರೆ ಅರಣ್ಯವಾಸಿಗಳು ಅಥವಾ ಬುಡಕಟ್ಟು ಜನರು 2005ರ ಡಿ.31ಕ್ಕೆ ಅನ್ವಯವಾಗುವಂತೆ ತಮ್ಮ 3 ತಲೆಮಾರಿನ ಅಸ್ತಿತ್ವ ಸಾಬೀತು ಮಾಡಬೇಕಾಗುತ್ತದೆ. ಆದರೆ ಅಸ್ತಿತ್ವದ ಈ ದಾಖಲೆಗಳನ್ನು ಪ್ರಾಯೋಗಿಕವಾಗಿ ನೀಡುವುದು ಅಸಾಧ್ಯ ಎಂಬ ಮಾತುಗಳಿವೆ.

ಯಾರಿಗಿಲ್ಲ ಆತಂಕ?

 • ಅರಣ್ಯಹಕ್ಕು ಕಾಯ್ದೆಯಡಿ ಅರ್ಜಿ ಸ್ವೀಕಾರಗೊಂಡಿರುವವರಿಗೆ ಆತಂಕವಿಲ್ಲ. ಆದರೆ ಇವರ ಸಂಖ್ಯೆ ಎಷ್ಟೆಂಬುದು ಬಹಿರಂಗವಾಗಿಲ್ಲ.

ಯಾರ್ಯಾರ ಎತ್ತಂಗಡಿ?

 • ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ದೇಶಾದ್ಯಂತ ಅರ್ಜಿ ತಿರಸ್ಕೃತಗೊಂಡಿರುವ 11,72,931 ಕುಟುಂಬಗಳು ಕಾಡು ಬಿಡಬೇಕು.
 • ಕರ್ನಾಟಕದಲ್ಲಿ ಅರ್ಜಿ ತಿರಸ್ಕೃತಗೊಂಡ 14 ಲಕ್ಷ ಕುಟುಂಬ, ಅರ್ಜಿಯೇ ಸಲ್ಲಿಸದ 2 ಲಕ್ಷ ಕುಟುಂಬಗಳು ಅರಣ್ಯದಿಂದ ಹೊರಹೋಗಬೇಕಾಗುತ್ತದೆ.
 • ತ್ರಿಪುರದಲ್ಲಿ ಮಾತ್ರ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಉತ್ತಮವಾಗಿ ಆಗಿದೆ. ಅಲ್ಲಿನ ಸರ್ಕಾರ ಮನೆಮನೆಗೆ ಹೋಗಿ ದಾಖಲೆಗಳನ್ನು ಸಂಗ್ರಹಿಸಿ ಸಕ್ರಮ ಮಾಡಿದೆ.
 • ಒಡಿಶಾದಲ್ಲೂ ಸ್ವಲ್ಪ ಮಟ್ಟಿನ ಅನುಷ್ಠಾನ ಉತ್ತಮವಾಗಿದೆ. ಉಳಿದಂತೆ ಬಹುತೇಕ ಎಲ್ಲ ರಾಜ್ಯಗಳು ನಿರ್ಲಕ್ಷ್ಯ ತೋರಿಸಿವೆ ಎಂಬ ಮಾಹಿತಿ ಇದೆ.

ಸಮುದ್ರ ಉಬ್ಬರ

2.

ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಸೇರಿ ದೇಶದ ಹಲವು ಕರಾವಳಿಯ ತಗ್ಗು ಪ್ರದೇಶಗಳಲ್ಲಿ ಮುಂದಿನ ಕೆಲ ದಿನಗಳಲ್ಲಿ ನೆರೆ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಪೆರಿಜಿಯನ್ ಸ್ಪ್ರಿಂಗ್ ಟೈಡ್

 • ಭೂಮಿ ಮತ್ತು ಚಂದ್ರನ ನಡುವೆ ವರ್ಷದ ಕೆಲದಿನಗಳಲ್ಲಿ ಅಂತರ ಕಡಿಮೆಯಾಗಿ ಇಂತಹ ಪರಿಣಾಮ ಉಂಟಾಗುತ್ತದೆ. ಈ ವಿದ್ಯಮಾನಕ್ಕೆ ಪೆರಿಜಿಯನ್ ಸ್ಪ್ರಿಂಗ್ ಟೈಡ್ ಎಂದು ಕರೆಯಲಾಗುತ್ತದೆ.
 • ಈ ಬಾರಿ ಫೆ. 24ರೊಳಗೆ ಸ್ಪ್ರಿಂಗ್ ಟೈಡ್ ಉಂಟಾಗುವ ಸಾಧ್ಯತೆ ಇದೆ. ಕರ್ನಾಟಕ ಮತ್ತು ಗೋವಾ ಕರಾವಳಿಯಲ್ಲಿ ಮಧ್ಯಾಹ್ನ 1ರಿಂದ ತಡರಾತ್ರಿ 2ರವರೆಗೆ ಸಮುದ್ರದಲ್ಲಿ ಅಲೆಗಳು ಹೆಚ್ಚಾಗುವ ಸಾಧ್ಯತೆಯಿದೆ.

ಟೈಡ್ಸ್ ಗುಣಲಕ್ಷಣಗಳು

 • ವಿಶಾಲ ಭೂಖಂಡದ ಶೆಲ್ಫ್ನಲ್ಲಿ ಉಬ್ಬರವಿಳಿತವು ಹೆಚ್ಚಿನ ಎತ್ತರವನ್ನು ಹೊಂದಿರುತ್ತದೆ.
 • ತೆರೆದ ಸಾಗರ ಅಲೆಗಳ ಪ್ರವಾಹಗಳಲ್ಲಿ ತುಲನಾತ್ಮಕವಾಗಿ ದುರ್ಬಲವಾಗಿರುತ್ತದೆ.
 • ಉಬ್ಬರವಿಳಿತದ ಉಬ್ಬುಗಳು ಮಧ್ಯ-ಸಾಗರದ ದ್ವೀಪಗಳನ್ನು ಹೊಡೆದಾಗ ಅವು ಕಡಿಮೆಯಾಗುತ್ತವೆ.
 • ಕಡಲತೀರದ ಉದ್ದಕ್ಕೂ ಇರುವ ಕೊಲ್ಲಿಗಳು ಮತ್ತು ಗಗನಚುಂಬಿಗಳ ಆಕಾರವು ಅಲೆಗಳ ತೀವ್ರತೆಯನ್ನು ಹೆಚ್ಚಿಸುತ್ತದೆ.
 • ಕೊಳವೆ-ಆಕಾರದ ಕೊಲ್ಲಿಗಳು ಉಬ್ಬರವಿಳಿತದ ಪ್ರಮಾಣವನ್ನು ಹೆಚ್ಚಾಗಿ ಬದಲಾಯಿಸುತ್ತವೆ.
 • ಆದಾಗ್ಯೂ ಭೂಮಿಯ ಮೇಲಿನ ದೊಡ್ಡ ಖಂಡಗಳು, ಭೂಮಿಯು ಸುತ್ತುವಂತೆ ಉಬ್ಬರವಿಳಿತದ ಪಶ್ಚಿಮ ಭಾಗವನ್ನು ನಿರ್ಬಂಧಿಸುತ್ತದೆ.
 • ಉಬ್ಬರವಿಳಿತದ ಮಾದರಿಗಳು ಸಾಗರದಿಂದ ಸಾಗರಕ್ಕೆ ಮತ್ತು ಸ್ಥಾನದಿಂದ ಸ್ಥಳಕ್ಕೆ ಹೆಚ್ಚು ಭಿನ್ನವಾಗಿರುತ್ತವೆ.

ಬೃಹತ್​ ಆಮೆ ಫರ್ನಾಂಡೀನಾ ಸಂತತಿ ಮತ್ತೆ ಪತ್ತೆ

3.

ಸುದ್ಧಿಯಲ್ಲಿ ಏಕಿದೆ ? ಅಂದಾಜು 110 ವರ್ಷಗಳ ಹಿಂದೆ ನಶಿಸಿ ಹೋಗಿದೆ ಎನ್ನಲಾದ ಬೃಹತ್​ ಆಮೆ ಸಂತತಿ ಫರ್ನಾಂಡೀನಾ ಆಮೆ ಈಕ್ವೆಡಾರ್​ನಲ್ಲಿರುವ ಫರ್ನಾಂಡೀನಾದ ಗಾಲಾಪೇಗಸ್​ ದ್ವೀಪದಲ್ಲಿ ಪತ್ತೆಯಾಗಿದೆ.

 • 1906ರಲ್ಲಿ ಕೊನೆಯ ಬಾರಿಗೆ ಜೀವಂತ ಫರ್ನಾಂಡೀನಾ ಬೃಹತ್​ ಆಮೆ ಕಾಣಿಸಿಕೊಂಡಿತ್ತು.
 • ಚೆಲೊನೋಯಿಡಿಸ್​ ಫ್ಯಾನ್​ಟಾಸ್ಟಿಕಸ್​ ಎಂಬ ವೈಜ್ಞಾನಿಕ ಹೆಸರಿನ ಆಮೆಯನ್ನು ಅದರ ಚಿಪ್ಪು ಮತ್ತು ಮುಖಚಹರೆಯನ್ನು ಆಧರಿಸಿ ಶತಮಾನಕ್ಕೂ ಹಿಂದೆಯೇ ನಶಿಸಿ ಹೋಗಿದೆ ಎಂದು ನಂಬಲಾದ ಫರ್ನಾಂಡೀನಾ ಬೃಹತ್​ ಆಮೆ ಇದು ಎಂದು ಗುರುತಿಸಲಾಗಿದೆ.
 • ಸದ್ಯಕ್ಕೆ ಇದರ ಜೆನೆಟಿಕ್​ ಅಧ್ಯಯನ ಮಾಡಲಾಗುತ್ತಿದ್ದು, ಇದು ಫರ್ನಾಂಡೀನಾ ಆಮೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
 • 14 ಬೃಹತ್​ ಆಮೆಗಳ ತಳಿಯಲ್ಲಿ ಒಂದು: ಫರ್ನಾಂಡೀನಾ ಬೃಹತ್​ ಆಮೆಯು ಭೂಮಿ ಮೇಲಿರುವ ಬೃಹತ್​ ಗಾತ್ರದ ಆಮೆಗಳ 14 ತಳಿಗಳ ಪೈಕಿ ಒಂದಾಗಿದೆ. ಇದು ಗಾಲಾಪೇಗಸ್​ ದ್ವೀಪಸಮೂಹದಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಈ ಆಮೆಗಳ ಮಾಂಸ ಹಾಗೂ ಇವುಗಳಲ್ಲಿರುವ ವಿಶಿಷ್ಟವಾದ ಎಣ್ಣೆಗಾಗಿ ಜನರು ಇವುಗಳನ್ನು ಬೇಟೆಯಾಡುತ್ತಿದ್ದರು. ಇದರಿಂದಾಗಿ ಇವುಗಳ ಸಂತತಿ ವಿನಾಶವಾಗಿತ್ತು.
 • ಪೆಸಿಫಿಕ್​ ಮಹಾಸಾಗರಕ್ಕೆ ಅಂಟಿಕೊಂಡಿರುವ ಈಕ್ವೆಡಾರ್​ನ ಕರಾವಳಿ ಪ್ರದೇಶದಲ್ಲಿರುವ ದ್ವೀಪ ಸಮೂಹಗಳ ಪೈಕಿ ಗಾಲಾಪೇಗಸ್​ ದ್ವೀಪ ಸಮೂಹ ಪ್ರಮುಖವಾದದ್ದಾಗಿದೆ. ಈ ದ್ವೀಪ ಸಮೂಹದಲ್ಲಿರುವ ಫರ್ನಾಂಡೀನಾ ದ್ವೀಪದಲ್ಲಿ ಅಗ್ನಿಪರ್ವತವಿದ್ದು ಅದು ಸದಾ ಕ್ರಿಯಾಶೀಲವಾಗಿರುತ್ತದೆ. ಈ ಪ್ರದೇಶವು ಚೆಲೊನೋಯಿಡಿಸ್​ ಫ್ಯಾನ್​ಟಾಸ್ಟಿಕಸ್​ ಎಂಬ ವೈಜ್ಞಾನಿಕ ಹೆಸರಿನ ಆಮೆಗಳ ಆವಾಸಸ್ಥಾನವಾಗಿದೆ.

ಕಿಸಾನ್​ ನಿಧಿ!

12.

ಸುದ್ಧಿಯಲ್ಲಿ ಏಕಿದೆ ? ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಪ್ರಕಟಿಸಿದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫೆ.24ರಂದು ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ಗೋರಕ್​ಪುರದಲ್ಲಿ ಚಾಲನೆ ನೀಡಲಿದ್ದಾರೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ

 • ಎರಡು ಹೆಕ್ಟೇರ್ (5 ಎಕರೆ) ಗಿಂತ ಕಡಿಮೆ ಭೂ ಹಿಡುವಳಿ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ 6 ಸಾವಿರ ರೂ.ಗಳನ್ನು ಚತುರ್ವಸಕ್ಕೊಮ್ಮೆ ಮೂರು ಕಂತುಗಳಲ್ಲಿ ನೀಡುವುದು ಯೋಜನೆ ಉದ್ದೇಶ.
 • ಡಿ.1ರಿಂದ ಪೂರ್ವಾನ್ವಯವಾಗುವಂತೆ ಮೊದಲ ಕಂತಿನ ಹಣ ರೈತರ ಜೇಬಿಗೆ ಸೇರಲಿದೆ. ಇದಕ್ಕಾಗಿ ವಾರ್ಷಿಕವಾಗಿ 74 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತದೆ.

ಫ್ರೂಟ್ಸ್ ಐಡಿ:

 • 5 ಎಕರೆ ಭೂ ಮಿತಿ ಒಳಗಿನವರ ರೈತರನ್ನು ಸಂಭವನೀಯ ಅರ್ಹ ರೈತರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುತ್ತದೆ. ಇದನ್ನು ಫ್ರೂಟ್ಸ್ (ಫಾರ್ಮರ್ ರಿಜಿಸ್ಟ್ರೇಷನ್ ಆಂಡ್ ಯುನಿಫೈಡ್ ಬೆನಿಫಿಶರಿ ಇನ್​ಫಾಮೇಷನ್ ಸಿಸ್ಟಂ) ತಂತ್ರಾಂಶಕ್ಕೆ ಅಳವಡಿಸಿ, ಫ್ರೂಟ್ಸ್- ಪಿಎಂಕಿಸಾನ್ ಎಂಬ ವಿಶಿಷ್ಟ ಗುರುತಿನ ಚೀಟಿಯನ್ನು ರೈತರಿಗೆ ನೀಡಲಾಗುತ್ತದೆ.
 • ಸರ್ಕಾರದ ನಿಯಮ, ಮಾರ್ಗಸೂಚಿಯನ್ವಯ ಸಂಭವನೀಯ ಪಟ್ಟಿಯಲ್ಲಿರುವ ರೈತರು ಆಧಾರ್ ಸಂಖ್ಯೆ ಮತ್ತಿತರ ಮಾಹಿತಿಯನ್ನು ಅನುಬಂಧ-ಸಿ ಅನ್ವಯ ಸ್ವಯಂ ದೃಢೀಕರಣ ಸಲ್ಲಿಸಬೇಕು. ಪಟ್ಟಿಯಲ್ಲಿರದ ರೈತರಿದ್ದಲ್ಲಿ ಅನುಬಂಧ-ಡಿ ಪ್ರಕಾರ ಘೊಷಣಾ ಪತ್ರ ನೀಡಬೇಕು. ಪಟ್ಟಿಯಲ್ಲಿ ಅರ್ಹತೆ ಇಲ್ಲದವರಿದ್ದಲ್ಲಿ ಅನುಬಂಧ-ಇ ಪ್ರಕಾರ ಘೊಷಣೆ ಮಾಡಿಕೊಳ್ಳಬೇಕು.
 • ಜನಪ್ರತಿನಿಧಿಗಳು, ನೌಕರರಿಗಿಲ್ಲ ಸೌಲಭ್ಯ: ಸಾಂಸ್ಥಿಕ ಭೂಮಾಲೀಕರು, ಸಾಂವಿಧಾನಿಕ ಹುದ್ದೆಯಲ್ಲಿರು ವವರು, ಜನಪ್ರತಿನಿಧಿಗಳು, ಉದ್ಯಮ, ಸರ್ಕಾರಿ ಅಧೀನದ ಸಂಸ್ಥೆಗಳ ನೌಕರರು, ಆದಾಯ ತೆರಿಗೆ ಪಾವತಿದಾರರು, ವೃತ್ತಿಪರ ಕ್ಷೇತ್ರದಲ್ಲಿದ್ದವರನ್ನು ಯೋಜನೆಯಿಂದ ದೂರ ವಿಟ್ಟು ಸಣ್ಣ, ಅತಿ ಸಣ್ಣ ರೈತರಿಗೆ ಮಾತ್ರ ಸೌಲಭ್ಯ ನೀಡಲಾ ಗುತ್ತಿದೆ. ಅರ್ಹ ರೈತರಿಗೆ ಹುಡುಕಾಟ ಶುರುವಾಗಿದೆ.

ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ

5.

ಸುದ್ಧಿಯಲ್ಲಿ ಏಕಿದೆ ? ಸಿಆರ್‌ಪಿಎಫ್‌ ಯೋಧರ ಮೇಲಿನ ದಾಳಿಗೆ ಪ್ರತೀಕಾರ ಕೈಗೊಂಡಿರುವ ಭಾರತ ಎಲ್ಲಾ ನೆಲೆಗಳಲ್ಲು ಪಾಕಿಸ್ತಾನವನ್ನು ಕಟ್ಟಿಹಾಕಲು ಮುಂದಾಗಿದ್ದು, ಅದರ ಭಾಗವಾಗಿ ಪಾಕಿಸ್ತಾನದ ಜತೆಗಿನ ಸಿಂಧೂ ಒಪ್ಪಂದವನ್ನು ಮರುಪರಿಶೀಲನೆಗೆ ಚಿಂತನೆ ನಡೆಸುತ್ತಿರುವ ಬಗ್ಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಾಹಿತಿ ನೀಡಿದ್ದಾರೆ.

ಏನಿದು ಸಿಂಧೂ ನೀರು ಒಪ್ಪಂದ?

 • 1960ರಲ್ಲಿ ಭಾರತದ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಆಯೂಬ್‌ ಖಾನ್‌ ಸಿಂಧೂ ನದಿ ಒಪ್ಪಂದಕ್ಕೆ ಸಹಿ ಹಾಕಿದ್ದರು.
 • 1960ರ ಸೆಪ್ಟಂಬರ್‌ 19ರಂದು ಉಭಯ ನಾಯಕರ ನಡುವೆ ವಿಶ್ವಬ್ಯಾಂಕ್‌ ಮಧ್ಯಸ್ಥಿಕೆಯಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ನಡೆಯಿತು.
 • ಈ ಒಪ್ಪಂದದ ಪ್ರಕಾರ ಸಿಂಧೂ ನದಿಯಷ್ಟೇ ಅಲ್ಲ, ಸಟ್ಲೇಜ್‌, ಬಿಯಾಸ್‌, ರಾವಿ, ಝೇಲಂ, ಚೆನಾಬ್‌ ನದಿಗಳನ್ನೂ ಒಳಗೊಂಡಿದೆ.
 • ಪೂರ್ವ ಭಾಗದ ನದಿಗಳಾದ ಸಟ್ಲೇಜ್‌, ಬಿಯಾಸ್‌ ಮತ್ತು ರಾವಿ ನದಿಗಳ ನೀರನ್ನು ಭಾರತ ಬಳಸಿಕೊಳ್ಳಬಹುದು ಎಂಬುದು ಒಪ್ಪಂದದ ಸಾರ.
 • ಹಾಗೆಯೇ ಪಶ್ಚಿಮ ನದಿಗಳಾದ ಝೇಲಂ, ಚೆನಾಬ್‌ ಮತ್ತು ಸಿಂಧೂ ನದಿಗಳ ನೀರನ್ನು ಪಾಕಿಸ್ತಾನಕ್ಕೆ ಬಿಡಬೇಕು ಎಂಬ ಒಪ್ಪಂದವಿದೆ. ಆದರೆ ಈ ನದಿಗಳ ನೀರನ್ನು ವಿದ್ಯುತ್‌ ಉತ್ಪಾದನೆ, ಕೃಷಿ ಹಾಗೂ ಸಂಗ್ರಹಕ್ಕೆ ಭಾರತ ಬಳಸಿಕೊಳ್ಳಬಹುದು ಎಂದಿದೆ.
 • ಆದರೆ ಈ ನದಿಗಳ ನೀರನ್ನು ಭಾರತ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರಲಿಲ್ಲ. ಹೆಚ್ಚುವರಿಯಾಗಿ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ನದಿ ನೀರಿನಿಂದ ಅಲ್ಲಿನ ಕೃಷಿ ಹಸನಾಗಿತ್ತು. ಇದೀಗ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ನಿಯಂತ್ರಿಸಿ ಅದನ್ನು ಭಾರತದಲ್ಲೇ ಬಳಸಿಕೊಳ್ಳಲು ನಿರ್ಧರಿಸಿರುವುದರಿಂದ ನೆರೆ ರಾಷ್ಟ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ.
 • ಪಂಜಾಬ್‌ನ ಪಠಾಣ್‌ಕೋಟ್‌ ಜಿಲ್ಲೆಯಲ್ಲಿ ರಾವಿ ನದಿಗೆ ಅಡ್ಡಲಾಗಿ ಶಾಪುರ್‌-ಖಾಂಡಿಯಲ್ಲಿ ಅಣೆಕಟ್ಟು ಕಟ್ಟಲಾಗುತ್ತಿದೆ. ಇದರಿಂದ ಉಳಿಯುವ ಹೆಚ್ಚುವರಿ ನೀರನ್ನು ರಾವಿ-ಬಿಯಾಸ್‌ ನದಿಗಳಿಗೆ ಇಂಟರ್‌ಲಿಂಕ್‌ ಮಾಡುವ ಮೂಲಕ ಇತರ ರಾಜ್ಯಗಳಿಗೆ ಹರಿಸಲು ಯೋಜನೆ ರೂಪಿಸಲಾಗಿದೆ.

ಭಾರತಕ್ಕೆ ಲಾಭ ಏನು?

 • 7 ಲಕ್ಷ ಎಕರೆ ಭೂಮಿಗೆ ಹೆಚ್ಚುವರಿ ನೀರಾವರಿ
 • 300 ಮೆ.ವ್ಯಾ ವಿದ್ಯುತ್ ಉತ್ಪಾದನೆ
 • ಜಮ್ಮು-ಕಾಶ್ಮೀರ ಹಾಗೂ ಪಂಜಾಬಿನ ಕೆಲ ನಗರಗಳಿಗೆ ಕುಡಿಯುವ ನೀರಿನ ಹಂಚಿಕೆ

ವಿಶ್ವದ ಅಗ್ರ ಆರ್ಥಿಕತೆಯ ಪಟ್ಟ

6.

ಸುದ್ಧಿಯಲ್ಲಿ ಏಕಿದೆ ? ಭಾರತದ ಆರ್ಥಿಕ ಬೆಳವಣಿಗೆ ವೇಗ ತೀವ್ರವಾಗಿದ್ದು, ಮುಂದಿನ 15 ವರ್ಷಗಳಲ್ಲಿ ವಿಶ್ವದ ಅಗ್ರ 3 ಬಲಿಷ್ಠ ಆರ್ಥಿಕತೆಯುಳ್ಳ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 • ಎರಡು ದಿನಗಳ ದಕ್ಷಿಣ ಕೊರಿಯಾ ಪ್ರವಾಸಕ್ಕಾಗಿ ಅವರು ಸಿಯೋಲ್​ಗೆ ಆಗಮಿಸಿದ್ದಾರೆ. ಇಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ವಿಶ್ವಬ್ಯಾಂಕ್​ನ ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ 77ನೇ ಸ್ಥಾನಕ್ಕೆ ಭಾರತ ಜಿಗಿದಿದೆ.
 • ಮುಂದಿನ ವರ್ಷ ಅಗ್ರ 50ರಲ್ಲಿ ಸ್ಥಾನ ಪಡೆಯುವುದು ನಮ್ಮ ಗುರಿ. ಸರ್ಕಾರದ ಪಾರದರ್ಶಕ ನೀತಿಗಳಿಂದ ಇದು ಸಾಧ್ಯವಾಗುತ್ತಿದೆ ಎಂದರು.

ಸ್ಟಾರ್ಟಪ್​ಗೆ ಮೋದಿ ಚಾಲನೆ

 • ಭಾರತ- ದ.ಕೊರಿಯಾ ಸಹಯೋಗದಲ್ಲಿ ಆರಂಭಿಸಲಾಗಿರುವ ‘ಗ್ರಾ್ಯಂಡ್ ಚಾಲೆಂಜ್’ಸ್ಟಾರ್ಟಪ್​ಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಪ್ರಧಾನಿ ಮೋದಿಗೆ ಶಾಂತಿ ಪುರಸ್ಕಾರ

 • ಇದೇ ವೇಳೆ ಪ್ರಧಾನಿಗೆ 2018ನೇ ಸಾಲಿನ ಸಿಯೋಲ್ ಶಾಂತಿ ಪುರಸ್ಕಾರ ಪ್ರದಾನವಾಗಲಿದೆ. ಈ ಪ್ರಶಸ್ತಿಯನ್ನು ಪಡೆಯುತ್ತಿರುವ ಮೊದಲ ಭಾರತೀಯ ಎಂಬ ಶ್ರೇಯಕ್ಕೆ ಅವರು ಪಾತ್ರರಾಗಿದ್ದಾರೆ. ಆರ್ಥಿಕ ನೀತಿಗಳ ರಚನೆಗೆ ಮೆಚ್ಚುಗೆಯಾಗಿ ಪ್ರಶಸ್ತಿಯನ್ನು ಪ್ರಧಾನಿಗೆ ನೀಡಲಾಗುತ್ತಿದೆ.
 • ಅಂತಾರಾಷ್ಟ್ರೀಯ ಸಹಕಾರ, ಜಾಗತಿಕ ಆರ್ಥಿಕ ಅಭಿವೃದ್ಧಿ, ಮಾನವ ಅಭಿವೃದ್ಧಿ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆಯನ್ನು ಪರಿಗಣಿಸಿ ದಕ್ಷಿಣ ಕೊರಿಯಾ ಸರಕಾರ 2018ರ ಸೋಲ್‌ ಶಾಂತಿ ಪ್ರಶಸ್ತಿ ಘೋಷಿಸಿದೆ.
 • ಭಾರತದ ಆರ್ಥಿಕ ಅಭಿವೃದ್ಧಿ ಹಾಗೂ ವಿದೇಶಿ ನೀತಿ ಮೂಲಕ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ಮೋದಿ ಅವರ ಕೊಡುಗೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜತೆಗೆ ಮೋದಿ ಅವರ ‘ಆ್ಯಕ್ಟ್ ಈಸ್ಟ್‌ ‘ ನಿತಿ, ಭ್ರಷ್ಟಾಚಾರ ವಿರೋಧಿ ಮತ್ತು ಸಾಮಾಜಿಕ ಏಕೀಕರಣದ ಪ್ರಯತ್ನಗಳ ಮೂಲಕ ಪ್ರಜಾಪ್ರಭುತ್ವದ ಬೆಳವಣಿಗೆಗೆ ನೀಡಿದ ಮಹತ್ತರ ಕೊಡುಗೆ, ಭಾರತದ ಆರ್ಥಿಕ ವೇಗವನ್ನು ಹೆಚ್ಚಿಸುವ ಮೂಲಕ ಭಾರತೀಯರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರಣಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.
Related Posts
14 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ನಕಲಿ ಹೂಡಿಕೆ ಸ್ಕೀಮ್‌ಗಳ ನಿಷೇಧಕ್ಕೆ ವಿಧೇಯಕ ಮಂಡನೆ ಸುದ್ಧಿಯಲ್ಲಿ ಏಕಿದೆ ? ನಕಲಿ ಹೂಡಿಕೆ ಯೋಜನೆಗಳನ್ನು ನಿಷೇಧಿಸುವ ಹಾಗೂ ಇಂಥ ಯೋಜನೆಗಳಲ್ಲಿ ವಂಚಿತರಾಗಿರುವ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಸಂಬಂಧಿಸಿದ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಅನಿಯಂತ್ರಿತ ಠೇವಣಿ ಸಂಗ್ರಹ ಸ್ಕೀಮ್‌ಗಳ ನಿಷೇಧ ವಿಧೇಯಕವನ್ನು ಹಣಕಾಸು ಸಚಿವ ಪಿಯೂಷ್‌ ...
READ MORE
“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏರೋ ಇಂಡಿಯಾ ಡ್ರೋನ್ ಒಲಿಂಪಿಕ್ಸ್ ಸುದ್ಧಿಯಲ್ಲಿ ಏಕಿದೆ ?ಏರೋ ಇಂಡಿಯಾ ಇತಿಹಾಸದಲ್ಲಿ ಇದೇ ಮೊದಲ ಬಾರಿ ಡ್ರೋನ್​ಗಳ ಸ್ಪರ್ಧೆ ಏರ್ಪಡಿಸಲಾಗಿದ್ದು, ಅದಕ್ಕೆ ಡ್ರೋನ್ ಒಲಿಂಪಿಕ್ಸ್ ಎಂದು ಹೆಸರಿಡಲಾಗಿದೆ. ವಿಜೇತರಾಗುವವರಿಗೆ ನಗದು ಬಹುಮಾನವನ್ನು ನೀಡಲು ಏರೋ ಇಂಡಿಯಾ ಶೋ ಆಯೋಜಕರು ನಿರ್ಧರಿಸಿದ್ದಾರೆ. ಎರಡು ವಿಭಾಗದಲ್ಲಿ ಸ್ಪರ್ಧೆ: ಡ್ರೋನ್ ...
READ MORE
“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಬಡವರ ಬಂಧು’ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮೀಟರ್‌ ಬಡ್ಡಿ ದಂಧೆ ನಡೆಸುವವರ ಕಪಿಮುಷ್ಠಿಯಿಂದ ಸಣ್ಣ ವ್ಯಾಪಾರಿಗಳನ್ನು ಪಾರುಮಾಡಿ, ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ಒದಗಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ 'ಬಡವರ ಬಂಧು' ಯೋಜನೆಗೆ ನ.22 ಚಾಲನೆ ಸಿಗಲಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 5 ...
READ MORE
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷಿ ಆದಾಯ ಹೆಚ್ಚಳಕ್ಕೆ ಯೋಜನೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕೃಷಿ ಭೂಮಿ ಸದ್ಬಳಕೆ ಜತೆಗೆ ಅನ್ನದಾತರ ಆದಾಯವನ್ನೂ ಹೆಚ್ಚಿಸುವ ಉದ್ದೇಶದಿಂದ ಮೂರು ಹೊಸ ಕಾಯ್ದೆಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ರೂಪಿಸಿದ್ದ ಮಾದರಿ ಕಾಯ್ದೆಗಳು ಇದಕ್ಕೆ ಆಧಾರವಾಗಿರುವುದು ವಿಶೇಷ. ಉದ್ದೇಶ ಕೃಷಿ ಭೂಮಿ ಗುತ್ತಿಗೆ ...
READ MORE
“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳ್ಳಂದೂರು ಕೆರೆ ಸುದ್ಧಿಯಲ್ಲಿ ಏಕಿದೆ ? ನೊರೆಕಾಟದ ಮೂಲಕ ಸದಾ ಸುದ್ದಿಯಾಗುವ ಬೆಳ್ಳಂದೂರು ಕೆರೆಯಲ್ಲಿ ನೀರಿನ ಪ್ರಮಾಣವೇ ಕಡಿಮೆ ಆಗುತ್ತಿದ್ದು, ಕೆರೆ ಬತ್ತುವ ಆತಂಕ ಸ್ಥಳೀಯರಲ್ಲಿ ತಲೆದೋರಿದೆ. ಆದರೆ, ಈ ಬಗ್ಗೆ ತಜ್ಞರಿಂದ ಹಲವು ವಿಶ್ಲೇಷಣೆಗಳು ವ್ಯಕ್ತವಾಗಿವೆ. ಕೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ...
READ MORE
12 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
371ಜೆ ಸುದ್ಧಿಯಲ್ಲಿ ಏಕಿದೆ?ಸಂವಿಧಾನದ ಕಲಂ 371ಜೆ ಅಡಿ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೀಡಿರುವ ಮೀಸಲನ್ನು, ಅದೇ ಪ್ರದೇಶಕ್ಕೆ ಸೀಮಿತಗೊಳಿಸುವುದು ಕಾರ್ಯಸಾಧುವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹೈ-ಕ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಹೈ-ಕ ಭಾಗದವರಿಗೆ ಶೇ.8ರಷ್ಟು ಹುದ್ದೆ ಮೀಸಲಿಟ್ಟಿರುವ ನಿಯಮವನ್ನು ಪ್ರಶ್ನಿಸಿ ಕರ್ನಾಟಕ ವಿಧಾನಸಭೆ ಸಚಿವಾಲಯದ ಹಿರಿಯ ...
READ MORE
“21 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಂಗಳೂರು, ಹಾಸನಕ್ಕೂ ಕರಾವಳಿ ಕಂಬಳ ಖದರ್ ಸುದ್ಧಿಯಲ್ಲಿ ಏಕಿದೆ ?ಕರಾವಳಿ ಮಣ್ಣಿನ ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ಇಲ್ಲಿಗಷ್ಟೇ ಸೀಮಿತವಾಗದೆ ರಾಜ್ಯದ ಇತರ ಕಡೆಗಳಲ್ಲೂ ಜನಪ್ರಿಯಗೊಳಿಸಲು ಕಂಬಳ ಅಕಾಡೆಮಿ ಮುಂದಾಗಿದೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿನ ದೊಡ್ಡಾಲದಮರ ಬಳಿ ಕರಾವಳಿ ಮೂಲದ ಉದ್ಯಮಿಯೊಬ್ಬರಿಗೆ ಸೇರಿದ 10 ಎಕರೆ ಪ್ರದೇಶದಲ್ಲಿ ...
READ MORE
“11 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಟಾಪ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹಂಪಿ ಸುದ್ಧಿಯಲ್ಲಿ   ಏಕಿದೆ ?ಈ ವರ್ಷ ನೀವು ನೋಡಲೇಬೇಕಾದ ಜಗತ್ತಿನ 52 ಟಾಪ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ರಾಜ್ಯದ ಪಾರಂಪರಿಕ ನಗರಿ ಹಂಪಿ ಟಾಪ್ 2 ಸ್ಥಾನ ಪಡೆದಿದೆ. ದಿ ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ 2019ರ ಟಾಪ್ ...
READ MORE
“29 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಪೋಕ್ಸೋ ಕಾಯ್ದೆಗೆ ತಿದ್ದುಪಡಿ ಸುದ್ಧಿಯಲ್ಲಿ ಏಕಿದೆ ? ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಕಠಿಣ ನಿಲುವು ಕೈಗೊಂಡಿರುವ ಕೇಂದ್ರ ಸರ್ಕಾರ, ಕಾಮಾಂಧರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಲು ಅವಕಾಶವಾಗುವಂತೆ ಪೋಕ್ಸೋ ಕಾಯ್ದೆಗೆ ತಿದ್ದುಪಡಿ ತರುವ ಮಹತ್ವದ ತೀರ್ಮಾನ ಕೈಗೊಂಡಿದೆ. 2012ರಲ್ಲಿ ಜಾರಿಗೆ ಬಂದ ...
READ MORE
“14 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಫ್​ಐಆರ್ ಲೋಪಕ್ಕೆ ಅಧಿಕಾರಿಯೇ ಹೊಣೆ ಸುದ್ಧಿಯಲ್ಲಿ ಏಕಿದೆ ?ಸಮಾಜಘಾತಕ ಶಕ್ತಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗದೇ ಬಹುಬೇಗ ಬಿಡುಗಡೆ ಹೊಂದುತ್ತಾರೆ ಎಂಬ ಆರೋಪ ಸಾರ್ವಕಾಲಿಕ. ಆದರೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೇ ಇದನ್ನು ಒಪ್ಪಿ ಎಫ್​ಐಆರ್ ದಾಖಲಾತಿಯ ಪದ್ಧತಿಯಲ್ಲೇ ಆಮೂಲಾಗ್ರ ಬದಲಾವಣೆಗೆ ಮುಂದಾಗಿದೆ. ಯಾವ ಬದಲಾವಣೆಗಳು ...
READ MORE
14 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
12 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
“21 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“11 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“29 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“14 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *