22nd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

ಬಿಸ್ಮಿಲ್ಲಾ ಖಾನ್‌ಗೆ ಗೂಗಲ್ ಗೌರವ

 • ಭಾರತರತ್ನ ಪುರಸ್ಕೃತ ಶಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ 102ನೇ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಿದೆ.
 • ಚೆನ್ನೈ ಮೂಲದ ವಿಜಯ್ ಕ್ರಿಶ್ ಎಂಬುವರು ಉಸ್ತಾದ್ ಅವರ ಡೂಡಲ್ ಚಿತ್ರವನ್ನು ರಚಿಸಿದ್ದಾರೆ.
 • ಖಾನ್ ಅವರು 1961ರಲ್ಲಿ  ಜನಿಸಿದರು. ಆರನೇ ವಯಸ್ಸಿಗೆ ವಾರಾಣಸಿಗೆ ತೆರಳಿದ ಇವರು ಶಹನಾಯಿಯ ಶಾಸ್ತ್ರೋಕ್ತವಾಗಿ ಕಲಿಕೆ ಆರಂಭಿಸಿದರು.
 • 1947ರ ಭಾರತದ ಸ್ವಾತಂತ್ರ್ಯದ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಹಾಗೂ ಮೊದಲ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಇವರು ನುಡಿಸಿದ ಶಹನಾಯಿ ನಾದವು ಭಾರಿ ಮೆಚ್ಚುಗೆ ಗಳಿಸಿತ್ತು.
 • 1977ರಲ್ಲಿ ಬಿಡುಗಡೆಯಾದ ಕನ್ನಡದ ಸನಾದಿ ಅಪ್ಪಣ್ಣ ಚಲನಚಿತ್ರದಲ್ಲಿ, ಡಾ.ರಾಜ್‍ಕುಮಾರ್ ಅವರು ಶಹನಾಯಿ ವಾದಕರಾಗಿ ಅಭಿನಯಿಸಿದ ದೃಶ್ಯಗಳಿಗೆ ಅವಶ್ಯವಾಗಿದ್ದ ಶಹನಾಯಿ ವಾದನವನ್ನು ಬಿಸ್ಮಿಲ್ಲಾ ಖಾನ್ ಅವರು ನುಡಿಸಿದ್ದಾರೆ.
 • ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಜಾನಕಿಯವರು ಹಾಡಿರುವ ‘ಕರೆದರೂ ಕೇಳದೆ’ ಹಾಡಿನಲ್ಲಿ ಬರುವ ಶಹನಾಯಿ ವಾದನವೂ ಬಿಸ್ಮಿಲ್ಲಾ ಅವರದ್ದೇ. ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರು ಭಾರತರತ್ನ ಪಡೆದ ಮೂರನೆಯ ಶಾಸ್ತ್ರೀಯ ಸಂಗೀತಗಾರ. ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳೂ ಅವರಿಗೆ ಸಂದಿವೆ. ಇವರು ಆಗಸ್ಟ್ 21, 2006ರಂದು ನಿಧನರಾದರು.

ದ್ರಾವಿಡ ಭಾಷೆಗಳಿಗೆ 4500 ವರ್ಷ ಇತಿಹಾಸ

 • ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳನ್ನು ಒಳಗೊಂಡ ದ್ರಾವಿಡ ಭಾಷಾ ಕುಟುಂಬಕ್ಕೆ 4500 ವರ್ಷಗಳ ಇತಿಹಾಸವಿದೆ ಎಂದು ಅಧ್ಯಯನವೊಂದು ತಿಳಿಸಿದೆ. ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ 22 ಕೋಟಿ ಜನರು ಮಾತನಾಡುವ ಭಾಷೆಯಲ್ಲಿ 80ಕ್ಕೂ ಅಧಿಕ ವೈವಿಧ್ಯಗಳಿದ್ದು, ನಾವು ಈ ಹಿಂದೆ ತಿಳಿದುದಕ್ಕಿಂತಲೂ ಸುದೀರ್ಘ ಇತಿಹಾಸವಿದೆ ಎಂದು ಅಧ್ಯಯನ ತಿಳಿಸಿದೆ.
 • ಜರ್ಮನಿಯ ಮ್ಯಾಕ್ಸ್‌ ಪ್ಲಾಂಕ್‌ ಮಾನವ ಇತಿಹಾಸ ವಿಜ್ಞಾನ ಸಂಸ್ಥೆ ಮತ್ತು ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆ ಯ ಸಂಶೋಧಕರನ್ನು ಒಳಗೊಂಡ ಅಂತಾರಾಷ್ಟ್ರೀಯ ತಂಡ ನಡೆಸಿದ ಹೊಸ ಭಾಷಾ ವಿಶ್ಲೇಷಣೆಯು ಈ ಅಂಶವನ್ನು ತಿಳಿಸಿದೆ.

ದಕ್ಷಿಣ ಏಷ್ಯಾದಲ್ಲಿ ಪಾರಮ್ಯಕ್ಕೆ ಭಾರತ-ಚೀನಾ ಪೈಪೋಟಿ

 • ನೆರೆಯ ದೇಶಗಳಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2018-19ರ ಆರ್ಥಿಕ ವರ್ಷದಲ್ಲಿ ಮೋದಿ ಸರಕಾರ ಕೆಲವು ನೆರೆಯ ದೇಶಗಳಿಗೆ ನೀಡುವ ಹಣಕಾಸು ನೆರವನ್ನು ಹೆಚ್ಚಿಸಿದೆ.
 • ಭಾರತ ನೆರವಿನ ಮೂಲಕ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಬಯಸಿದರೆ, ಚೀನಾ ಬಂಡವಾಳಶಾಹಿ ನೀತಿಯ ಮೂಲಕ (ಭಾರೀ ಪ್ರಮಾಣದ ಬಂಡವಾಳ ಹೂಡುವ ಮೂಲಕ) ಪ್ರಭಾವ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ತನ್ನ ಹಿತಾಸಕ್ತಿಗಳ ರಕ್ಷಣೆಯನ್ನೂ ಮೀರಿ, ವಿದೇಶಗಳಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸುವುದರ ಜತೆಗೆ ದಕ್ಷಿಣ ಏಷ್ಯಾದ ಬಹುತೇಕ ಎಲ್ಲ ದೇಶಗಳಲ್ಲೂ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ.
 • ಚೀನಾದ ಆಕ್ರಮಣಕಾರಿ ಹೂಡಿಕೆಯನ್ನು ಎದುರಿಸಲು ಭಾರತ, ತನ್ನ ನೆರೆಯ ದೇಶಗಳಿಗೆ ನೀಡುವ ಧನಸಹಾಯವನ್ನು ಹೆಚ್ಚಿಸಿದೆ. ಅಲ್ಲದೆ ತನ್ನದೇ ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಜಾರಿಗೂ ಹೆಚ್ಚಿನ ಒತ್ತು ನೀಡುತ್ತಿದೆ.
 • ಭೂತಾನ್‌ ಮತ್ತು ನೇಪಾಳಕ್ಕೆ ಭಾರತದ ನೆರವು ಹೆಚ್ಚಿಸಲಾಗಿದೆ. ನೇಪಾಳಕ್ಕೆ ನೀಡುವ ನೆರವನ್ನು 650 ಕೋಟಿ ರೂ.ಗಳಿಗೆ (ಶೇ.73) ಹೆಚ್ಚಿಸಲಾಗಿದೆ. ಹಿಂದಿನ ವರ್ಷ 375 ಕೋಟಿ ರೂ ನೆರವು ನೀಡಲಾಗಿತ್ತು.
 • ಭೂತಾನ್‌ಗೆ ಅತಿ ಹೆಚ್ಚಿನ ನೆರವು- 1,813 ಕೋಟಿ ರೂ ನೀಡಲಾಗುತ್ತಿದೆ. ಆ ದೇಶದ ಪುನಸ್ಟಾಂಗ್‌ಚು ಮತ್ತು ಮಂಗ್‌ಡೆಚ್ಚು ವಿನಲ್ಲಿ ಜಲವಿದ್ಯುತ್‌ ಯೋಜನೆಗಳ ನಿರ್ಮಾಣ ಮತ್ತು ಇತರ ಯೋಜನೆಗಳಿಗಾಗಿ ಪಂಚವಾರ್ಷಿಕ ಯೋಜನೆಯಡಿ ಈ ಹಣ ವಿನಿಯೋಗಿಸಲಾಗುತ್ತದೆ.
 • 2018-19ರ ಸಾಲಿಗೆ ಭೂತಾನ್ ಮತ್ತು ನೇಪಾಳಕ್ಕೆ ನೀಡುವ ನೆರವಿನ ಪ್ರಮಾಣ ಹೆಚ್ಚಳದ ಜತೆಗೆ, ಉಭಯ ದೇಶಗಳ ಜತೆ ಭಾರತಕ್ಕೆ ಪರಸ್ಪರ ಲಾಭವಾಗುವ ಯೋಜನೆಗಳಿಗೆ ಸಹಕಾರ, ಸಮನ್ವಯ ಹೆಚ್ಚಿಸಿಕೊಳ್ಳಬೇಕಿದೆ’ ಎಂದು ವರದಿ ಹೇಳಿದೆ.
 • ‘ಭಾರತ ಮತ್ತು ನೇಪಾಳ ಸಾಂಸ್ಕೃತಿವಾಗಿ ಅತ್ಯಂತ ನಿಕಟವರ್ತಿಗಳಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಪಾಲುದಾರಿಕೆ ವೃದ್ಧಿಸಿಕೊಳ್ಳಬೇಕಿದೆ. ನೇಪಾಳದ ಹಿತಾಸಕ್ತಿಗೆ ನಾವು ದೃಢವಾದ ಬೆಂಬಲ ನೀಡಬೇಕಿದೆ’ ಎಂದು ವರದಿ ಶಿಫಾರಸು ಮಾಡಿದೆ.

ಭೂತಾನ್‌ ಭಾರತದ ಪರವಾಗಿದೆ:

 • ಭೂತಾನ್‌ಗೆ ನೀಡುವ ನೆರವನ್ನು ಹಿಂದಿನ ವಿತ್ತವರ್ಷಕ್ಕಿಂತ ಹೆಚ್ಚಿಸಲಾಗಿದೆ. ಭೂತಾನ್‌ ಒಳಗಿನ ಕೆಲವು ಶಕ್ತಿಗಳು ಚೀನಾದ ಜತೆ ಹೆಚ್ಚಿನ ಬಾಂಧವ್ಯ ಹೊಂದಬೇಕೆಂಬ ಕೂಗೆಬ್ಬಿಸಿದ್ದರೂ ಭಾರತ ಹೆಚ್ಚೇನೂ ತಲೆಕೆಡಿಸಿಕೊಂಡಿಲ್ಲ. ಭೂತಾನ್‌ ಭಾರತದ ಜತೆ ನಿಕಟ ಸಂಪರ್ಕ ಹೊಂದಿದ್ದು, ಭಾರತ ಅದಕ್ಕೆ ಮಿಲಿಟರಿ ಬೆಂಬಲವನ್ನೂ ನೀಡುತ್ತಿದೆ.

ಭಾರತದ ನೆರೆಯ ದೇಶಗಳು

 • 2017ರಲ್ಲಿ ಡೋಕ್ಲಾಂನಲ್ಲಿ 73 ದಿನಗಳ ಕಾಲ ಭಾರತ ಮತ್ತು ಚೀನೀ ಸೇನೆಗಳು ಮುಖಾಮುಖಿಯಾಗಿ ನಿಂತಿದ್ದಾಗ ಭೂತಾನ್‌ ಭಾರತದ ಪರ ದೃಢವಾಗಿ ನಿಂತಿತ್ತು. ಭೂತಾನ್‌ ಮತ್ತು ಚೀನಾ ನಡುವೆ ಡೋಕ್ಲಾಂ ಕುರಿತು ವಿವಾದವಿದ್ದು, ಆ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಿಸಲು ಮುಂದಾದಾಗ ಭಾರತ ತನ್ನ ಸೇನೆಯನ್ನು ಅಲ್ಲಿಗೆ ನುಗ್ಗಿಸಿ ಚೀನಾದ ಯೋಜನೆಯನ್ನು ತಡೆದಿತ್ತು.
 • 2007ರಲ್ಲಿ ನವೀಕರಿಸಲಾದ 1949ರ ಒಪ್ಪಂದದ ಪ್ರಕಾರ, ಭೂತಾನ್ ತನ್ನ ವಿದೇಶಾಂಗ ನೀತಿ ರೂಪಿಸುವಲ್ಲಿ ಭಾರತದ ಮಾರ್ಗದರ್ಶನ ಪಡೆಯುವ ಅಗತ್ಯವಿದೆ. ಭೂತಾನ್ ಭಾರತವನ್ನು ಹೊರತುಪಡಿಸಿ, ಚೀನಾ ಮತ್ತು ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಇತರ ಕಾಯಂ ಸದಸ್ಯರ ಜತೆ ಯಾವುದೇ ರಾಜತಾಂತ್ರಿಕ ಬಾಂಧವ್ಯ ಹೊಂದಿಲ್ಲ.

ನೇಪಾಳ-ಚೀನಾ ಬಾಂಧವ್ಯ:

 • ಇದಕ್ಕೆ ವಿರುದ್ಧವಾಗಿ ಚೀನಾ ನೇಪಾಳದಲ್ಲಿ ಭಾರೀ ಹೂಡಿಕೆ ಮಾಡುತ್ತಿದೆ. ಅಲ್ಲಿ ಭಾರತದ ಪ್ರಭಾವವನ್ನು ಕುಗ್ಗಿಸಲು ಅದು ಶತಾಯಗತಾಯ ಹವಣಿಸುತ್ತಿದೆ. ಇತ್ತೀಚೆಗೆ ನೇಪಾಳದ ಪ್ರಧಾನಿಯಾಗಿ ಕೆ.ಪಿ ಒಲಿ ಆಯ್ಕೆಯಾಗಿರುವುದು ಭಾರತದ ಹಿತಾಸಕ್ತಿಗೆ ಅಡ್ಡಿಯಾಗಲಿದೆ.
  ಒಲಿ ಚೀನಾ ಪರ ಒಲವುಳ್ಳವರು. ಇತ್ತೀಚಿನ ಸಂಸದೀಯ ಚುನಾವಣೆಯಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಕೂಡಲೇ ಚೀನಾದ ಜತೆ ಹೆಚ್ಚಿನ ಬಾಂಧವ್ಯ ವೃದ್ಧಿಯ ಮಾತಾಡಿದರು.

ಬಾಂಗ್ಲಾದೇಶ, ಶ್ರೀಲಂಕಾದಲ್ಲೂ ಚೀನಾ ಪ್ರಭಾವ ಹೆಚ್ಚಳ:

 • ಬಾಂಗ್ಲಾದೇಶಕ್ಕೆ 2400 ಕೋಟಿ ಡಾಲರ್‌ ಸಾಲ ನೀಡಿರುವ ಚೀನಾ, ಅಲ್ಲಿ ವಿದ್ಯುತ್‌ ಸ್ಥಾವರಗಳು, ಬಂದರು ಮತ್ತು ರೈಲ್ವೇ ಮಾರ್ಗಗಳ ನಿರ್ಮಾಣಕ್ಕೆ ಸಹಿ ಹಾಕಿದೆ.
 • ಭಾರತವೂ ಬಾಂಗ್ಲಾದಲ್ಲಿ ತನ್ನ ಪ್ರಭಾವ ಹೆಚ್ಚಳಕ್ಕೆ ಬಹಳಷ್ಟು ಹೂಡಿಕೆ ಮಾಡಲು ಮುಂದಾಗಿದೆ.

ಸಾಲದ ಸುಳಿಯಲ್ಲಿ ಚೀನಾ:

 • ಭಾರತದ ಬೆಳೆಯುತ್ತಿರುವ ಪ್ರಭಾವವನ್ನು ಕಟ್ಟಿಹಾಕಲು ಚೀನಾ ಹೊಸ ಮಾರ್ಗ ಕಂಡುಕೊಂಡಿದೆ. ಚೀನೀ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಮಹತ್ವಾಕಾಂಕ್ಷೆಯ ಬೆಲ್ಟ್‌ ಅಂಡ್‌ ರೋಡ್‌ ಇನಿಶಿಯೇಟಿವ್‌ (ಬಿಆರ್‌ಐ ಯೋಜನೆ) ಭಾರತದ ನೆರೆಯ ದೇಶಗಳಲ್ಲಿ ಭೂಸ್ವಾಧೀನ ಪಡಿಸಿಕೊಳ್ಳುವ ದುರಾಲೋಚನೆ ಹೊಂದಿದೆ. ಆದರೆ ಇದರಿಂದ ಚೀನಾ ಭಾರೀ ಸಾಲದ ಸುಳಿಗೆ ಸಿಲುಕಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಶ್ರೀಲಂಕಾ-ಚೀನಾ ನಂಟು:

 • ಶ್ರೀಲಂಕಾದ ಹಂಬಂಟೋಟಾದಲ್ಲಿ ಅತ್ಯಾಧುನಿಕ ಆಳಸಮುದ್ರ ಬಂದರು ನಿರ್ಮಿಸಲು ಚೀನಾ 110 ಕೋಟಿ ಡಾಲರ್‌ ಮೊತ್ತದ ಒಪ್ಪಂದಕ್ಕೆ ಸಹಿಹಾಕಿದೆ/ ಚೀನಾದ ಸರಕಾರಿ ಕಂಪನಿ 99 ವರ್ಷದ ಅವಧಿಗೆ ಈ ಬಂದರಿನ ಸ್ವಾಮ್ಯ ಹೊಂದಿರಲಿದ್ದು, 15,000 ಎಕರೆ ಭೂಮಿಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲಿದೆ.
 • ಕಳೆದ ಕೆಲವು ವರ್ಷಗಳಿಂದ ಚೀನಾ ಲಂಕೆಗೆ ಭಾರೀ ಮೊತ್ತದ ಸಾಲ ನೀಡುತ್ತಿದ್ದು, ಈಗ ಲಂಕೆ ಅದನ್ನು ಮರುಪಾವತಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಭೂಮಿಯನ್ನು ಚೀನಾಗೆ ಲೀಸ್‌ಗೆ ಕೊಡಲು ಮುಂದಾಗಿದೆ. ಹಂಬಂಟೋಟಾ ಬಂದರಿನ ವಹಿವಾಟಿನಿಂದ ಬರುವ ಆದಾಯದ ಒಂದು ಭಾಗವನ್ನು ಶ್ರೀಲಂಕಾ ಚೀನೀ ಸಾಲದ ಮರುಪಾವತಿಗೆ ಬಳಸಿಕೊಳ್ಳಲಿದೆ.
 • ನಮ್ಮ ನೆರೆಯ ದೇಶಗಳಿಗೆ ಚೀನಾ ಒಳನುಗ್ಗುವ ಪರಿ ಹೀಗಿದೆ. ದುಬಾರಿ ಸಾಲವನ್ನು ನೀಡಿ ನೆರೆಯ ರಾಷ್ಟ್ರಗಳನ್ನು ಸಾಲದ ಸುಳಿಗೆ ಸಿಲುಕಿಸಿ ಅವುಗಳ ಮೇಲೆ ಪ್ರಭುತ್ವ ಸಾಧಿಸುವುದು ಅದರ ಹುನ್ನಾರವಾಗಿದೆ. ಮಾಲ್ಡೀವ್ಸ್‌ ವಿಚಾರದಲ್ಲೂ ಚೀನಾ ಇದೇ ತಂತ್ರ ಅನುಸರಿಸಿದೆ. ಪಾಕಿಸ್ತಾನ ಮತ್ತು ನೇಪಾಳ ಕೂಡ ಇದೇ ರೀತಿ ಚೀನಾದ ಹಂಗಿಗೆ ಒಳಗಾಗುವ ಭೀತಿಯಿದೆ.

ಸೋಲಾರ್‌ ವಿದ್ಯುತ್‌ ಯೋಜನೆ ವಿಕೇಂದ್ರೀಕರಣವಾಗಲಿ

 • ಸೋಲಾರ್‌ ಪಾರ್ಕ್‌ಗಿಂತ ಸೋಲಾರ್‌ ವಿದ್ಯುತ್‌ ಯೋಜನೆಯನ್ನು ವಿಕೇಂದ್ರೀಕರಣಗೊಳಿಸುವುದರಿಂದ ಹೆಚ್ಚಿನ ಲಾಭ ಆಗಲಿದೆ. ಬೃಹತ್‌ ಯೋಜನೆ ರೂಪಿಸುವುದರಿಂದ ನಿರ್ವಹಣೆ ಹಾಗೂ ವಿದ್ಯುತ್‌ ಸರಬರಾಜು ವೆಚ್ಚ ಹೆಚ್ಚಲಿದೆ. ಈ ಕಾರಣಕ್ಕೆ ಇದರ ಬದಲಾಗಿ ಮನೆ ಚಾವಣಿ ಹಾಗೂ ಕಟ್ಟಡಗಳ ಮೇಲೆ ಸೋಲಾರ್‌ ಫಲಕಗಳನ್ನು ಅಳವಡಿಸುವುದು ಉತ್ತಮ.
 • ಸೋಲಾರ್‌ ಪ್ಯಾನಲ್‌ ಮೇಲೆ ಸೇರುವ ದೂಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕಿದೆ. ಇಲ್ಲದಿದ್ದರೆ ವಿದ್ಯುತ್‌ ಉತ್ಪಾದನೆ ಪ್ರಮಾಣ ತಗ್ಗಲಿದೆ. ಸ್ವಚ್ಛಗೊಳಿಸಲು ಹೆಚ್ಚಿನ ನೀರು ಬೇಕು. ಆದರೆ, ಪಾವಗಡದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಸೋಲಾರ್‌ ಪಾರ್ಕ್‌ ಪ್ರದೇಶದಲ್ಲಿ ನೀರಿನ ಕೊರತೆ ಇದೆ. ಹೊರಗಿನಿಂದ ನೀರು ತಂದು ಸ್ವಚ್ಛಗೊಳಿಸುವುದರಿಂದ ವೆಚ್ಚ ಹೆಚ್ಚಲಿದೆ.
 • ಅದೇ ರೀತಿ ವಿದ್ಯುತ್‌ ಸರಬರಾಜು ಮಾಡಲು ವೆಚ್ಚ ಆಗಲಿದೆ. ಇದಕ್ಕೆ ಬದಲಾಗಿ ವಸತಿ ಹಾಗೂ ಕೈಗಾರಿಕೆ ಪ್ರದೇಶಗಳು ಇರುವ ಕಡೆಯೇ ಚಾವಣಿ ಮೇಲೆ ಸೋಲಾರ್‌ ಫಲಕ ಅಳವಡಿಸುವುದರಿಂದ ಸಾಕಷ್ಟು ವೆಚ್ಚ ಉಳಿತಾಯವಾಗಲಿದೆ.

***~~~ದಿನಕ್ಕೊಂದು ಯೋಜನೆ~~~***

CHAMAN ಯೋಜನೆ

 • ಪ್ರಪಂಚದಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ಭಾರತವು ಎರಡನೇ ಅತೀ ದೊಡ್ಡ ದೇಶವಾಗಿದೆ.
 • ಇದು ನಿಂಬೆಹಣ್ಣುಗಳು, ಮಾವಿನ ಹಣ್ಣುಗಳು ಮತ್ತು ಬಾಳೆಹಣ್ಣುಗಳಂತಹ ಬೆಳೆಗಳ ಉನ್ನತ ನಿರ್ಮಾಪಕ. ಭಾರತದ ಕೃಷಿ ಒಟ್ಟು ದೇಶೀಯ ಉತ್ಪನ್ನದ 30% ರಷ್ಟು (GDP) ತೋಟಗಾರಿಕೆಯಿಂದ ಬಂದಿದೆ, ಒಟ್ಟು ಬೆಳೆದ ಪ್ರದೇಶದ 8.5% ನಿಂದ.
 • ಸತತ ಐದನೇ ಬಾರಿಗೆ, ತೋಟಗಾರಿಕಾ ಬೆಳೆಗಳು ಆಹಾರ ಧಾನ್ಯಗಳ ಉತ್ಪಾದನೆಯನ್ನು ತೆಗೆದುಕೊಂಡಿದೆ. ತೋಟಗಾರಿಕಾ ಬೆಳೆಗಳು ಮಾನ್ಸೂನ್ ಬದಲಾವಣೆಗಳಿಂದ ತುಲನಾತ್ಮಕವಾಗಿ ಪ್ರಭಾವಕ್ಕೊಳಗಾಗುವುದಿಲ್ಲ ಏಕೆಂದರೆ ಆಹಾರ ಧಾನ್ಯಗಳನ್ನು ಹೋಲುತ್ತದೆ ಭರವಸೆ ನೀರಾವರಿ ಜೊತೆ ಬೆಳೆಯಲಾಗುತ್ತದೆ.
 • ತೋಟಗಾರಿಕಾ ರೈತರಿಗೆ ಶೀತದ ಸಂಗ್ರಹಣೆ ಮತ್ತು ಗೋದಾಮುಗಳು, ಮಾರುಕಟ್ಟೆಗಳು, ಕ್ರೆಡಿಟ್ ಮುಂತಾದ ಶೇಖರಣಾ ಸೌಲಭ್ಯಗಳಿಗೆ ಉತ್ತಮ ಪ್ರವೇಶ ಅಗತ್ಯವಿರುತ್ತದೆ, ಅವುಗಳು ಬೆಲೆ ಅಪಾಯಗಳನ್ನು ನಿರ್ವಹಿಸಲು ಮತ್ತು ದುಃಖವನ್ನು ತಪ್ಪಿಸಲು ಸಹಾಯ ಮಾಡುತ್ತದೆ.
 • ಭಾರತದ ತೋಟಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಮತ್ತು ರಾಜ್ಯಗಳು ಸೂಕ್ತವಾದ ಪ್ರದೇಶಗಳನ್ನು ಮತ್ತು ಬೆಳೆ ವಿಧಗಳನ್ನು ಗುರುತಿಸಲು ಸಹಾಯ ಮಾಡುವ ಉದ್ದೇಶದಿಂದ, ಕೃಷಿ ಸಚಿವಾಲಯವು ಭೂಗೋಳ ಶಾಸ್ತ್ರದ ಮೌಲ್ಯಮಾಪನ ಮತ್ತು ನಿರ್ವಹಣೆಯನ್ನು ಜಿಯೋ-ಇನ್ಫಾರ್ಮಾಟಿಕ್ಸ್ (ಚಾಮಾನ್) ಬಳಸಿ ಕಾರ್ಯ ನಿರ್ವಹಿಸುತ್ತಿದೆ, ಅದು ದೂರಸ್ಥ ಸಂವೇದಿ ತಂತ್ರಜ್ಞಾನ ಮತ್ತು ಉಪಗ್ರಹಗಳನ್ನು ಬಳಸುತ್ತದೆ ತೋಟಗಾರಿಕಾ ಅಭಿವೃದ್ಧಿಯ ಕ್ರಿಯೆಯ ಯೋಜನೆಗಳನ್ನು ಸೃಷ್ಟಿಸಲು.
 • ಇದು 2014 ರಲ್ಲಿ ಮಿಷನ್ ಆಫ್ ಇಂಟಿಗ್ರೇಟೆಡ್ ಹಾರ್ಟಿಕಲ್ಚರಲ್ ಡೆವೆಲಪ್ಮೆಂಟ್ನಲ್ಲಿ ಪ್ರಾರಂಭವಾಯಿತು. ದೆಹಲಿ ಮೂಲದ ಮಹಲಾನೋಬಿಸ್ ನ್ಯಾಷನಲ್ ಕ್ರಾಪ್ ಫೋರ್ಕಾಸ್ಟ್ ಸೆಂಟರ್ (ಎಮ್ಎನ್ಸಿಎಫ್ಸಿ) ನಿಂದ ಚಮನ್ ಅನ್ನು ಜಾರಿಗೆ ತರಲಾಗುತ್ತಿದೆ.
 • 12 ರಾಜ್ಯಗಳಲ್ಲಿ 7 ತೋಟಗಾರಿಕಾ ಬೆಳೆಗಳ ಪ್ರದೇಶ ಮತ್ತು ಮ್ಯಾಪಿಂಗ್ನ ಮ್ಯಾಪಿಂಗ್ ಅನ್ನು ಚಮನ್ ನಿರ್ವಹಿಸುತ್ತದೆ.
 • ಜಿಯೋ-ಸ್ಪಾಟಿಯಲ್ ಸ್ಟಡೀಸ್ ಅನ್ನು ದೇಶದ ಎಲ್ಲಾ ಪ್ರಮುಖ ರಾಜ್ಯಗಳಲ್ಲಿ ನಡೆಸಲಾಗುವುದು ಮತ್ತು ಭವಿಷ್ಯದಲ್ಲಿ ಇತರ ತೋಟಗಾರಿಕೆ ಬೆಳೆಗಳಿಗೆ ದೂರಸ್ಥ ಸಂವೇದನಾ ತಂತ್ರಜ್ಞಾನವನ್ನು ವಿಸ್ತರಿಸಲಾಗುವುದು ಮತ್ತು ಭಾರತದಲ್ಲಿ ತೋಟಗಾರಿಕೆಗೆ ಉತ್ತೇಜನ ನೀಡಲಾಗುತ್ತದೆ.
 • ಇದು ತೋಟಗಾರಿಕೆ ವಲಯವು ಜನರಿಗೆ ಪೌಷ್ಟಿಕ ಸಮೃದ್ಧ ಬೆಳೆಗಳನ್ನು ಒದಗಿಸುತ್ತದೆ ಮತ್ತು ಇದರಿಂದಾಗಿ ಎಲ್ಲ ಜನರಿಗೆ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಾತ್ರಿಪಡಿಸುತ್ತದೆ.
 • ಇದು ದೇಶದ ಎಲ್ಲಾ ತೋಟಗಾರಿಕಾ ವಲಯಗಳ ಡಿಜಿಟಲ್ ದಾಸ್ತಾನುಗಳನ್ನು ಸೃಷ್ಟಿಸುತ್ತದೆ.
 • ಹೆಚ್ಚಿನ ಪೋಸ್ಟ್ ಸುಗ್ಗಿಯ ನಷ್ಟಗಳ ಪ್ರದೇಶಗಳನ್ನು ಪತ್ತೆಹಚ್ಚಲು ಇದು ನೆರವಾಗಬಹುದು, ಇದು ಶೀತ ಸಂಗ್ರಹದಂತಹ ಅಪೇಕ್ಷಿತ ಪೋಸ್ಟ್ ಹಾರ್ವೆಸ್ಟ್ ಮೂಲಸೌಕರ್ಯಗಳ ರಚನೆಯಿಂದ ಕಡಿಮೆಯಾಗಬಹುದು. ಇದು ಶೀತಲ ಸಂಗ್ರಹ ಕೇಂದ್ರಗಳನ್ನು ನಿರ್ಧರಿಸುವಲ್ಲಿ ಸಹಾಯ ಮಾಡುತ್ತದೆ.
 • ಆಹಾರದ ಸ್ಟಾಕ್ಗಳ ನಿಖರವಾದ ಡೇಟಾವನ್ನು ಒದಗಿಸುವ ಮೂಲಕ ಹಣದುಬ್ಬರವನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ.

1. ಬಿಸ್ಮಿಲ್ಲಾ ಖಾನ್ ರವರು ಶಹನಾಯಿ ನುಡಿಸಿದ ಕನ್ನಡದ ಚಲನಚಿತ್ರಗಳು ಯಾವುದು ?
A. ಸನಾದಿ ಅಪ್ಪಣ್ಣ
B. ಸ್ವಾತಿ ಮುತ್ತು
C. 1 ಮತ್ತು 2
D. ಯಾವುದು ಅಲ್ಲ
2. ಭೂತಾನಿನ ಯಾವ ಯೋಜನೆಗೆ ಭಾರತ ದೇಶ ಹಣದ ಸಹಕಾರ ನೀಡುತಿದ್ದೆ ?
A. ಸೌರ ವಿದ್ಯುತ್ ಯೋಜನೆ
B. ಜಲ ವಿದ್ಯುತ್ ಯೋಜನೆ
C. ಅಣು ವಿದ್ಯುತ್ ಯೋಜನೆ
D. ಮೇಲಿನ ಎಲ್ಲವೂ
3. ಚಮನ್ ಯೋಜನೆ ಯಾವುದಕ್ಕೆ ಸಂಬಂಧಿಸಿದೆ ?
A. ಕೃಷಿ ಬೆಳೆಗಳಿಗೆ
B. ಹೈನುಗಾರಿಕೆಗೆ
C. ತೋಟಗಾರಿಕೆಗೆ
D. ಪುಷ್ಪ ಉದ್ಯಮಕ್ಕೆ
4. ್ರಿ.ಶ. 1420 ರಲ್ಲಿ ಎರಡನೇ ದೇವರಾಯನ ಆಳ್ವಿಕೆಯ ಕಾಲದಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ್ದ ದಕ್ಷಿಣ ಯೂರೋಪಿನ ಪ್ರವಾಸಿ ಯಾರು?
A. ನಿಕೋಲೋ ಕೌಂಟಿ
B. ಅಬ್ದುಲ್ ರಜಾಕ್
C. ಬಾರ್ಬಡೋಸ್
D. ಇಸಾಮಿ
5. ವೇದಗಳ ಕಾಲದಲ್ಲಿ ಕುಟುಂಬಗಳ ಗುಂಪನ್ನು ಏನೆಂದು ಕರೆಯುತ್ತಿದ್ದರು?
A. ಜನ
B. ಗ್ರಾಮ
C. ಗೋತ್ರ
D. ಸಭೆ
6. ವಿಶ್ವಸಂಸ್ಥೆಯ ಸದಸ್ಯ ದೇಶಗಳಲ್ಲಿ ಅತಿ ಚಿಕ್ಕ ದೇಶ ಯಾವುದು?
A. ಮೊನಾಕೋ
B. ತುವಾಲು
C. ನೌರು
D. ವ್ಯಾಟಿಕನ್ ಸಿಟಿ
7. ಎಷ್ಯಾ ಖಂಡದಲ್ಲಿ ಅತಿ ದೊಡ್ಡ ಏಕಶಿಲಾ ಬೆಟ್ಟ ಎಲ್ಲಿದೆ?
A. ಕಲ್ಪತರ ನಾಡಿನಲ್ಲಿ
B. ಶರಣರ ನಾಡಿನಲ್ಲಿ
C. ವಿದ್ಯಾ ನಗರಿಯಲ್ಲಿ
D. ಕಿತ್ತಾಳೆ ನಾಡಿನಲ್ಲಿ
8. ಡಿಜಿಟಲ್ ಆರ್ಥಿಕತೆಯನ್ನು ಕುರಿತಂತೆ ಮೊಟ್ಟಮೊದಲ ಜಿ20 ಡಿಜಿಟಲ್ ಸಚಿವಾಲಯದ ಸಭೆಯು ಯಾವ ದೇಶದಲ್ಲಿ ಜರುಗಿತು?
A. ಜರ್ಮನಿ
B. ಬ್ರೆಜಿಲ್
C. ಅಮೆರಿಕ
D. ಜಪಾನ್
9. ವಿಶ್ವ ಜಲ ದಿನಾಚರಣೆಯ ವಿಷಯವೇನು?
A. ನೀರಿಗಾಗಿ ಪ್ರಕೃತಿ
B. ನೀರನ್ನು ಏಕೆ ವ್ಯರ್ಥ ಮಾಡಬೇಕು ?
C. ಮೇಲಿನ ಎಲ್ಲವೂ
D. ಯಾವುದು ಅಲ್ಲ
10. ವಿಶ್ವ ಅರಣ್ಯ ದಿನಾಚರಣೆಯ ವಿಷಯವೇನು?
A. ಅರಣ್ಯಗಳು ಮತ್ತು ಸುಸ್ಥಿರ ನಗರಗಳು
B. ಅರಣ್ಯ ಮತ್ತು ಶಕ್ತಿ
C. ಮೇಲಿನ ಎಲ್ಲವೂ
D. ಯಾವುದು ಅಲ್ಲ
ಉತ್ತರಗಳು
1.A 2.B 3.C 4.A 5.B 6.A 7.A 8.A 9.A 10.A 

Related Posts
Karnataka – Current Affairs – KAS/KPSC Exams – 21st March 2017
Govt eases process of issuing BPL cards The state government on 20th March decided to simplify the procedure for issuing below poverty line ration cards, with an eye on the Assembly ...
READ MORE
“3rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಡ್ರೋನ್‌ ಬಳಕೆ ಸುದ್ದಿಯಲ್ಲಿ ಏಕಿದೆ? ನಗರದ ವಾಹನ ದಟ್ಟಣೆಯನ್ನು ಸರಾಗಗೊಳಿಸಲು ಡ್ರೋನ್‌ ಮೂಲಕ ಮಾಹಿತಿ ಸಂಗ್ರಹಿಸಿ, ನೂತನ ವ್ಯವಸ್ಥೆ ಅಳವಡಿಸಿಕೊಳ್ಳಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಕಾರಣವೇನು? ಪ್ರಮುಖ ಜಂಕ್ಷನ್‌, ವೃತ್ತ ಹಾಗೂ ವಾಹನ ನಿಬಿಡ ಸ್ಥಳಗಳಲ್ಲಿನ ದಟ್ಟಣೆ ಹೆಚ್ಚುತ್ತಿರುವ ಕಾರಣ ಸಮಸ್ಯೆ ಉಂಟಾಗುತ್ತಿದೆ. ಸಿಗ್ನಲ್‌ ...
READ MORE
Karnataka Current Affairs – KAS / KPSC Exams 30th April 2017
Karnataka: Drought hits production With major mango producing districts stricken by drought, domestic mango production, and subsequently the export of the fruit, is seeing a huge hit this year. The production of mangoes ...
READ MORE
“2nd ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕ್ಷಯರೋಗ ಆಂದೋಲನ ಸುದ್ದಿಯಲ್ಲಿ ಏಕಿದೆ ? ರಾಜ್ಯದಲ್ಲಿ 'ಕ್ಷಯರೋಗ'(ಟಿಬಿ) ನಿಯಂತ್ರಣಕ್ಕೆ ಮುಂದಾಗಿರುವ ಆರೋಗ್ಯ ಇಲಾಖೆ ಜು. 2ರಿಂದ 13ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕೈಗೊಂಡಿದೆ.  ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ'ದಡಿ ಬಿಬಿಎಂಪಿ ಸೇರಿದಂತೆ 31 ಜಿಲ್ಲೆಗಳಲ್ಲಿ ಆಂದೋಲನ ನಡೆಸಲಿದೆ. ಹನ್ನೆರಡು ದಿನಗಳ ...
READ MORE
Despite the Animal Welfare Board of India’s ‘request’ to the State government to stop Kambala for the year 2015-16 it will be held. Administrations of Dakshina Kannada and Udupi will follow ...
READ MORE
Karnataka Current Affairs – KAS/KPSC Exams – 21st March 2018
‘13 amendments to KSP bylaws passed’ Manu Baligar, President of the State unit of the Kannada Sahitya Parishath said recently that the special general body meeting at Kota in Udupi district ...
READ MORE
“17th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸ್ವಚ್ಛ ನಗರಿ-2018  ಸುದ್ದಿಯಲ್ಲಿ ಏಕಿದೆ?  ದೇಶಾದ್ಯಂತ ನಡೆಸಿದ ಸ್ವಚ್ಛ ನಗರಿ-2018 ಸಮೀಕ್ಷೆ ಪ್ರಕಟಗೊಂಡಿದೆ. ತ್ಯಾಜ್ಯ ನಿರ್ವಹಣೆ, ಒಳಚರಂಡಿ ವ್ಯವಸ್ಥೆ, ಸ್ವಚ್ಛತೆಯ ಅರಿವು, ಸಂಪನ್ಮೂಲಗಳ ಸದ್ಬಳಕೆ, ನಾಗರಿಕರ ಸಹಭಾಗಿತ್ವ ಇತ್ಯಾದಿ ಮಾನದಂಡಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ನಡೆಸಿದ ಸ್ವಚ್ಛ ನಗರಿ-2018 ಸಮೀಕ್ಷೆಯಲ್ಲಿ ಮಧ್ಯಪ್ರದೇಶದ ಇಂದೋರ್‌ ಮತ್ತೊಮ್ಮೆ ನಂಬರ್‌ ...
READ MORE
All India Radio has launched a 24-hour satellite classical music channel, ‘Raagam’, which will be available via DTH (with no transmitter support as with its other channels) and mobile app ...
READ MORE
Karnataka Current Affairs – KAS/KPSC Exams-28th December 2018
Hampi voted as top Asian travel destination A panel consisting of five of the world’s top travel influencers and bloggers has voted Hampi as one of the top emerging Asian travel ...
READ MORE
Karnataka Current Affairs – KAS/KPSC Exams – 20th October 2018
Zero Budget Natural Farming (ZBNF)  The city’s vibrant gardening community where members are proponents of healthy and chemical-free grain, fruits and vegetables is contributing to the growing trend of urban farming. Many ...
READ MORE
Karnataka – Current Affairs – KAS/KPSC Exams –
“3rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka Current Affairs – KAS / KPSC Exams
“2nd ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ”
Kambala to be held in Dakshina Kannada
Karnataka Current Affairs – KAS/KPSC Exams – 21st
“17th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
AIR launches 24-hour classical music channel
Karnataka Current Affairs – KAS/KPSC Exams-28th December 2018
Karnataka Current Affairs – KAS/KPSC Exams – 20th

Leave a Reply

Your email address will not be published. Required fields are marked *