“22nd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

ಡೆಡ್ಲಿ ವೈರಾಣು ನಿಫಾ!

 • ಸುದ್ದಿಯಲ್ಲಿ ಏಕಿದೆ?  ಮಾರಣಾಂತಿಕ ನಿಫಾ ವೈರಾಣು ರೋಗ ನಿಯಂತ್ರಣಕ್ಕೆ ಕೇಂದ್ರ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ನಿಯೋಗವನ್ನು ಕೇರಳಕ್ಕೆ ಕಳುಹಿಸಲಾಗಿದೆ.
 • ಕೇರಳಕ್ಕೆ ನಿಫಾ ವೈರಸ್ ಪ್ರವೇಶಿಸಿ ರುವುದು ಹಾಗೂ ಇತರ ವಿವರಗಳಿಗೆ ಸಂಬಂಧಿಸಿ ರಾಷ್ಟ್ರೀಯ ರೋಗ ನಿರೋಧಕ ಕೇಂದ್ರದ ನಿರ್ದೇಶಕರ ತಂಡವನ್ನು ಕಳುಹಿಸಿಕೊಡಲಾಗಿದೆ.
 •  ನಿಫಾದಿಂದ 6 ಜನರು ಕೇರಳದಲ್ಲಿ ಮೃತಪಟ್ಟ ಬಳಿಕ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ಎಚ್ಚರಿಕೆ ಕ್ರಮ

 • ರಸ್ತೆ ಬದಿ ಬಿದ್ದ ಯಾವುದೇ ಹಣ್ಣು ಸೇವಿಸಬೇಡಿ.
 • ಸೋಂಕು ತಗುಲಿದ ವ್ಯಕ್ತಿ ಜತೆಗೆ ಸಂರ್ಪಸಬೇಡಿ.

ರೋಗದ ಲಕ್ಷಣವೇನು?

 • ಜ್ವರ, ತಲೆನೋವು, ಜಡತ್ವ ಅಥವಾ ಅರೆ ನಿದ್ರಾವಸ್ಥೆ, ಧಿಗ್ಭ್ರಮೆ, ಗೊಂದಲ, ಸುಸ್ತು, ಹೊಟ್ಟೆ ನೋವು, ವಾಂತಿ, ಕಣ್ಣು ಮಂಜು, ಕೋಮಾ.
 • ಸೋಂಕು ತಗುಲಿದ ಕೂಡಲೇ ರೋಗ ಲಕ್ಷಣ ಗೊತ್ತಾಗುವುದಿಲ್ಲ. ನಿಫಾ ಎಂದು ಖಾತ್ರಿಯಾಗಲು 5ರಿಂದ 14 ದಿನಗಳು ಬೇಕಾಗುತ್ತವೆ.
 • ಆ ನಂತರದ 48 ಗಂಟೆಗಳಲ್ಲಿ ಕೋಮಾಕ್ಕೆ ಹೋಗಲಿರುವ ರೋಗಿ.

ಏನಿದು ನಿಫಾ ವೈರಸ್?

 • ಮನುಷ್ಯ ಮತ್ತು ಪ್ರಾಣಿಗಳನ್ನು ಕಾಡುವ ರೋಗವಿದು. 1998ರಲ್ಲಿ ಮೊದಲ ಬಾರಿಗೆ ಮಲೇಷ್ಯಾದಲ್ಲಿ ಈ ರೋಗ ಪತ್ತೆಯಾಯಿತು. ಬಾವಲಿ, ಇತರ ಪಕ್ಷಿಗಳು ಹಾಗೂ ಹಂದಿಗಳ ಮೂಲಕ ಬರಲಿದೆ. ವಿಪರೀತ ಜ್ವರ ಹಾಗೂ ತಲೆ ನೋವಿನಿಂದ ರೋಗಿಯು ಕೋಮಾಕ್ಕೆ ಜಾರುತ್ತಾರೆ. ಭಾರತದಲ್ಲಿ ಈ ಹಿಂದೆ 2001 ಹಾಗೂ 2007ರಲ್ಲಿ 71 ಜನರಲ್ಲಿ ಕಾಣಿಸಿಕೊಂಡು ಮೃತಪಟ್ಟಿದ್ದರು. ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲ.

ಹಿನ್ನಲೆ

 • ಮಲೇಷ್ಯಾ ಹಾಗೂ ಸಿಂಗಪುರದಲ್ಲಿ ಕ್ರಮವಾಗಿ 1998 ಹಾಗೂ 1999ರಲ್ಲಿ ಈ ನಿಫಾ ವೈರಾಣು ಸೋಂಕು ಕಾಣಿಸಿಕೊಂಡಿತ್ತು. ಸೋಂಕು ಪತ್ತೆಯಾದವರಲ್ಲಿ ಶೇ 50ರಷ್ಟು ಮಂದಿ ಮೃತಪಟ್ಟಿದ್ದರು.
 • ಬಾವಲಿ ಮೂಲಕ ಮೊದಲಿಗೆ ಮಲೇಷ್ಯಾದ ಗದ್ದೆಗಳಲ್ಲಿರುವ ಹಂದಿಗಳಲ್ಲಿ ಹಾಗೂ ನಂತರದಲ್ಲಿ ಸಾಕುಪ್ರಾಣಿಗಳಾದ ನಾಯಿ, ಬೆಕ್ಕು, ಆಡು, ಕುದುರೆಗಳಲ್ಲಿಯೂ ಸೋಂಕು ಪತ್ತೆಯಾಯಿತು. ಬಳಿಕ ಮನುಷ್ಯರಿಗೂ ಹರಡಿರುವುದು ವರದಿಯಾಗಿತ್ತು.

ಹಿಂದಿನ ಪ್ರಕರಣ

 • ಬಾಂಗ್ಲಾದೇಶದ ಮೆಹರ್‌ಪುರ ಜಿಲ್ಲೆಯಲ್ಲಿ 2001ರಲ್ಲಿ ಮೆದುಳಿನ ಉರಿಯೂತದ ಲಕ್ಷಣದೊಂದಿಗೆ ಈ ವೈರಾಣು ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿತ್ತು. ದಕ್ಷಿಣ ಏಷ್ಯಾದಲ್ಲಿ ವರದಿಯಾದ ಮೊದಲ ಪ್ರಕರಣ ಇದಾಗಿದೆ.
 • ಬಾಂಗ್ಲಾದೇಶದಲ್ಲಿ ಹಾಗೂ ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ಎರಡು ಬಾರಿ ನಿಫಾ ಸೋಂಕು ಹರಡಿತ್ತು.

ಹೇಗೆ ಹರಡುತ್ತದೆ?

 • ನಿಫಾ ವೈರಸ್​ನಿಂದ ಬಾಧಿತವಾಗಿರುವ ಬಾವಲಿ ಅಥವಾ ಇನ್ಯಾವುದೇ ಪಕ್ಷಿ ತಿಂದ ಹಣ್ಣು, ಆಹಾರ ಹಾಗೂ ನೀರು ಸೇವಿಸುವುದರಿಂದ
 • ನಿಫಾ ವೈರಸ್​ನಿಂದ ಬಾಧಿತವಾಗಿರುವ ಹಂದಿ ಅಥವಾ ಇತರ ಸಾಕು ಪ್ರಾಣಿ, ಬಾವಲಿ ಅಥವಾ ಇತರ ಹಕ್ಕಿಗಳ ನೇರ ಸಂಪರ್ಕ
 • ನಿಫಾ ರೋಗದಿಂದ ಬಳಲುತ್ತಿರುವ ವ್ಯಕ್ತಿಯ ಜತೆಗೆ ನೇರ ಸಂಪರ್ಕ

ಬ್ರಹ್ಮೋಸ್ ಪರೀಕ್ಷೆ ಯಶಸ್ವಿ

 • ಸುದ್ದಿಯಲ್ಲಿ ಏಕಿದೆ? ಭಾರತ- ರಷ್ಯಾ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಿರುವ ಶಬ್ದಾತೀತ ವೇಗದ (ಸೂಪರ್​ಸಾನಿಕ್) ಬ್ರಹ್ಮೋಸ್ ಸುಧಾರಿತ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯು ಒಡಿಶಾದ ಬಾಲಾಸೋರ್ ಕಡಲ ತೀರದಲ್ಲಿ ಯಶಸ್ವಿಯಾಗಿ ನಡೆಯಿತು. 
 •  ಈ ಕ್ಷಿಪಣಿಯ ಜೀವಿತಾವಧಿ ಹೆಚ್ಚಿಸುವ ತಂತ್ರಜ್ಞಾನವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಮೊದಲ ಬಾರಿಗೆ ಅಭಿವೃದ್ಧಿಪಡಿಸಿದೆ. ಈ ಸುಧಾರಿತ ಕ್ಷಿಪಣಿ ಪರೀಕ್ಷೆಯಿಂದ ಸೇನಾ ಶಸ್ತ್ರಾಸ್ತ್ರ ಸಂಗ್ರಹಾಗಾರದಲ್ಲಿರುವ ಕ್ಷಿಪಣಿಗಳ ಬದಲಾವಣೆಗೆ ತಗುಲುವ ದೊಡ್ಡ ಮೊತ್ತದ ವೆಚ್ಚವನ್ನು ತಗ್ಗಿಸಲಿದೆ ಎಂದು ಡಿಆರ್​ಡಿಒ ತಿಳಿಸಿದೆ.

ಹಿಂದಿನ ಬ್ರಹ್ಮೋಸ್ ಕ್ಷಿಪಣಿ

 • ಈಗಾಗಲೇ ಭೂ, ನೌಕೆ ಮತ್ತು ವಾಯು ಪಡೆಗೆ ಸೇರ್ಪಡೆಯಾದ ಬ್ರಹ್ಮೋಸ್ ಕ್ಷಿಪಣಿ
 • ವಾಯುದಳದ ಎಸ್​ಯುು-30 ಎರಡು ವಿಭಾಗದ 20 ವಿಮಾನಗಳಲ್ಲಿ ಈ ಕ್ಷಿಪಣಿ ಅಡಕ. ಭೂ ಮತ್ತು ನೌಕಾ ದಳಕ್ಕೆ ಸೇರಿಸಲಾಗಿರುವ ಬ್ರಹ್ಮೋಸ್ ಕ್ಷಿಪಣಿಗಿಂತ 500 ಕೆ.ಜಿ. ಹಗುರ
 • 2005ರಲ್ಲೇ ಐಎನ್​ಎಸ್ ರಜಪೂತ್ ಯುದ್ಧ ನೌಕೆ ಸೇರ್ಪಡೆ ಯಾಗಿದ್ದ ಬ್ರಹ್ಮೋಸ್
 • ಭೂ ಸೇನೆಯ 2 ರೆಜಿಮೆಂಟ್​ಗಳಿಗೂ ಬ್ರಹ್ಮೋಸ್ ಅಡಕ. ಮತ್ತೊಂದು ರೆಜಿಮೆಂಟ್​ಗೆ ಸೇರಿಸಲು ಬೇಡಿಕೆ

ಸುಧಾರಿತ ಬ್ರಹ್ಮೋಸ್

 • 2 ಹಂತದ ಕ್ಷಿಪಣಿ
 • ಮೊದಲ ಹಂತದ್ದು ಘನರೂಪಿ ನೋದಕ ಶಕ್ತಿ
 • 2ನೇ ಹಂತದ್ದು ರಾಮ್ ಜೆಟ್ ದ್ರವರೂಪಿ ನೋದಕಶಕ್ತಿ
 • 2016ರಲ್ಲಿ ನಡೆದ ಬ್ರಹ್ಮೋಸ್ ಪರೀಕ್ಷೆಯಲ್ಲಿ 290 ಕಿ.ಮೀ. ಇದ್ದ ಗುರಿಯನ್ನು 2017ರ ನಡೆದ ಪರೀಕ್ಷೆಯಲ್ಲಿ 400 ಕಿ.ಮೀ.ಗೆ ಹೆಚ್ಚಳ. ಈಗ ಸುಧಾರಿತ ಪರೀಕ್ಷೆಯಲ್ಲಿ ಗುರಿಯು 800 ಕಿ.ಮೀ.ಗೆ ಏರಿಕೆ
 • ಜಲಾಂತರ್ಗಾಮಿಗೆ ಬ್ರಹ್ಮೋಸ್ ಸೇರಿಸುವ ಕಾರ್ಯ ಪ್ರಗತಿಯಲ್ಲಿ

ಕಾಸ್ಮೆಟಿಕ್ಸ್

 • ಸುದ್ದಿಯಲ್ಲಿ ಏಕಿದೆ? ಕಾಸ್ಮೆಟಿಕ್ ಸಸ್ಯಜನ್ಯವೋ, ಮಾಂಸದ ಉತ್ಪನ್ನವೋ? ಎಂಬುದನ್ನು ನಮೂದಿಸುವುದು ಕಡ್ಡಾಯವಾಗಲಿದೆ.
 •  ಸಿದ್ಧ ಆಹಾರ ಪದಾರ್ಥಗಳು ಮತ್ತು ತಿನಿಸುಗಳ ಪೊಟ್ಟಣದ ಮೇಲೆ ಸಸ್ಯಾಹಾರ, ಭಾಗಶಃ ಮಾಂಸಾಹಾರ ಇಲ್ಲವೆ ಮಾಂಸಾಹಾರ ಎಂದು ಸೂಚಿಸಲು ಮುದ್ರಿಸುವ ಹಸಿರು, ಕಂದು ಮತ್ತು ಕೆಂಪು ಬಣ್ಣದ ಗುರುತು ಇನ್ನು ಮುಂದೆ ಪ್ರಸಾಧನ ಸಾಮಗ್ರಿ (ಕಾಸ್ಮೆಟಿಕ್ಸ್) ಮತ್ತು ಸ್ನಾನಗೃಹದಲ್ಲಿ ಬಳಸುವ ಮಾರ್ಜಕಗಳ ಪ್ಯಾಕೆಟ್ ಮೇಲೂ ಕಡ್ಡಾಯವಾಗಲಿದೆ. ಫೇಸ್ ವಾಷ್, ಸೋಪ್ ಮತ್ತು ಶಾಂಪೂ, ಟೂತ್​ಪೇಸ್ಟ್​ಗಳ ಮೇಲೂ ಅವು ಸಸ್ಯ ಅಥವಾ ಪ್ರಾಣಿ ಜನ್ಯವೇ ಎಂಬುದನ್ನು ತೋರಿಸಲು ಸೂಚಿತ ಬಣ್ಣಗಳಲ್ಲಿ ಕಡ್ಡಾಯವಾಗಿ ಗುರುತು ಮಾಡುವ ಪ್ರಸ್ತಾಪಕ್ಕೆ ಔಷಧ ತಾಂತ್ರಿಕ ಸಲಹಾ ಮಂಡಳಿ (ಡಿಟಿಎಬಿ) ಸಮ್ಮತಿ ನೀಡಿದೆ. ಇದಕ್ಕಾಗಿ ಸರ್ಕಾರ ಔಷಧ ಮತ್ತು ಕಾಸ್ಮೆಟಿಕ್ಸ್ ನಿಯಮ- 1945ಕ್ಕೆ ಸೂಕ್ತ ತಿದ್ದುಪಡಿ ಮಾಡಲಿದೆ

ಝೋಜಿಲಾ ಪ್ರಾಜೆಕ್ಟ್

 • ಸುದ್ದಿಯಲ್ಲಿ ಏಕಿದೆ? ಶ್ರೀನಗರ, ಕಾರ್ಗಿಲ್ ಮತ್ತು ಲೇಹ್ ನಡುವೆ ಸಂಪರ್ಕ ಕಲ್ಪಿಸುವ ಏಷ್ಯಾದ ಅತಿ ಉದ್ದನೆಯ ದ್ವಿಪಥ ಸುರಂಗಮಾರ್ಗ ‘ಝೋಜಿಲಾ ಟನಲ್’ ನಿರ್ಮಾಣಕ್ಕೆ   ಪ್ರಧಾನ ಮಂತ್ರಿಗಳು ಶಂಕುಸ್ಥಾಪನೆ ಪ್ರಧಾನ ಮಂತ್ರಿಗಳು ಮಾಡಿದರು.
 • ಈ ಪ್ರದೇಶದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಗ್ರತೆ ಕಾಯ್ದುಕೊಳ್ಳುವಲ್ಲಿ ಸುರಂಗಮಾರ್ಗ ಪ್ರಮುಖ ಪಾತ್ರ ವಹಿಸಿಲಿದೆ.
 • ಕಿಶನ್​ಗಂಗಾ, ರೋಪ್​ವೇ ಉದ್ಘಾಟನೆ: 330 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಕಿಶನ್​ಗಂಗಾ ಜಲ ವಿದ್ಯುದಾಗಾರವನ್ನು ಶ್ರೀನಗರದ ಶೇರ್-ಇ-ಕಾಶ್ಮೀರ ಅಂತಾರಾಷ್ಟ್ರೀಯ ಸಮ್ಮೇಳನ ರಾಷ್ಟ್ರಕ್ಕೆ ಸಮರ್ಪಿಸಿದರು.

ವಿಶೇಷತೆ

# ದೇಶದ ಅತಿ ಉದ್ದನೆಯ ಸುರಂಗ ಮಾರ್ಗ
# ಏಷ್ಯಾದ ಅತಿ ಉದ್ದನೆಯ ದ್ವಿಪಥ ಮಾರ್ಗ

# ಸಮುದ್ರಮಟ್ಟದಿಂದ 11,578 ಅಡಿ ಎತ್ತರದಲ್ಲಿರುವ ಸ್ಥಳ, ಚಳಿಗಾಲದಲ್ಲಿ ಮೈನಸ್ 45 ಡಿಗ್ರಿ ತಾಪಮಾನ.

# ಈ ಸುರಂಗ ಮಾರ್ಗದ ನಿರ್ಮಾಣದಿಂದ ಶ್ರೀನಗರ ಮತ್ತು ಲೇಹ್​ ನಡುವೆ ವರ್ಷದ ಎಲ್ಲಾ ಕಾಲದಲ್ಲೂ ಸಂಪರ್ಕ ಸಾಧ್ಯವಾಗಲಿದೆ. ಜತೆಗೆ ಜೋಜಿಲಾ ಪಾಸ್​ ದಾಟಲು ಈ ಮೊದಲು ಸುಮಾರು 3.5 ಗಂಟೆ ಸಮಯ ಬೇಕಾಗುತ್ತಿತ್ತು. ಸುರಂಗ ನಿರ್ಮಾಣದ ನಂತರ ಕೇವಲ 15 ನಿಮಿಷಗಳಲ್ಲಿ ಜೋಜಿಲಾ ಪಾಸ್​ ದಾಟಬಹುದಾಗಿದೆ.

# ಜೋಜಿಲಾ ಸುರಂಗ ನಿರ್ಮಾಣ ಯೋಜನೆಯಲ್ಲಿ ಶೇ. 90ರಷ್ಟು ಕೆಲಸವನ್ನು ಸ್ಥಳೀಯ ಯುವಕರಿಗೆ ನೀಡಲಾಗುವುದು

ಹಿನ್ನಲೆ

 • ಶ್ರೀನಗರದಿಂದ ಕಾರ್ಗಿಲ್​ ಮಾರ್ಗವಾಗಿ ಲೇಹ್​ಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಜೋಜಿಲಾ ಪಾಸ್​ ಇದೆ. ಸಮುದ್ರ ಮಟ್ಟದಿಂದ 11,578 ಅಡಿ ಎತ್ತರದಲ್ಲಿರುವ ಇಲ್ಲಿ ಚಳಿಗಾಲದಲ್ಲಿ ತೀವ್ರ ಹಿಮಪಾತವಾಗುತ್ತದೆ. ಇದರಿಂದಾಗಿ ಸುಮಾರು 5-6 ತಿಂಗಳು ಹೆದ್ದಾರಿ ಬಂದ್​ ಆಗುತ್ತದೆ. ಈ ಹಿನ್ನೆಲೆಯಲ್ಲಿ ಜೋಜಿಲಾದಲ್ಲಿ ಸುರಂಗ ನಿರ್ಮಿಸಲು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದೆ.

ಸಾಗರ್ ಚಂಡಮಾರುತ

 • ಸುದ್ದಿಯಲ್ಲಿ ಏಕಿದೆ? ಸಾಗರ್ ಚಂಡಮಾರುತ 24 ಗಂಟೆಯಲ್ಲಿ ಕರ್ನಾಟಕಕ್ಕೆ ಅಪ್ಪಳಿಸಲಿದ್ದು ಈ ಬಗ್ಗೆ ಎಚ್ಚರಿಕೆಯಿಂದಿರಲು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಅಲ್ಲದೆ, ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ, ಲಕ್ಷದ್ವೀಪಗಳಲ್ಲೂ ಚಂಡಮಾರುತದ ಪರಿಣಾಮ ಹೆಚ್ಚಿರಲಿದೆ ಎಂದು ಹೇಳಿದೆ.
 • ಗಾಳಿಯ ವೇಗವು ಪ್ರಾರಂಭದಲ್ಲಿ ಗಂಟೆಗೆ 70-80 ಕಿ.ಮೀ.ನಷ್ಟಿದ್ದು ಕ್ರಮೇಣ 90-100 ಕಿ.ಮೀ.ನಷ್ಟಾಗುತ್ತದೆ.
 • ಈ ಚಂಡಮಾರುತ ಮೊದಲು ಅಡೆನ್​ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿತ್ತು. ನಂತರ ಪೂರ್ವದ ಯಮೆನ್ ಈಡನ್​ ನಗರದ ಈಶಾನ್ಯಕ್ಕೆ ಹಾಗೂ ಪಶ್ಚಿಮ, ವಾಯುವ್ಯದ ಸೊಕೊಟ್ರಾ ದ್ವೀಪಗಳಿಗೆ ಪಸರಿಸಿತ್ತು.

‘ಐಎನ್‌ಎಸ್‌ವಿ ತಾರಿಣಿ’

 • ಸುದ್ದಿಯಲ್ಲಿ ಏಕಿದೆ? ವಿಶ್ವಪರ್ಯಟನೆ ಮುಗಿಸಿ ಎಂಟು ತಿಂಗಳ ಬಳಿಕ  ಭಾರತೀಯ ನೌಕಾ ದಳದ ಮಹಿಳಾ ಸಿಬ್ಬಂದಿ ಗೋವಾಗೆ ಐಎನ್‌ಎಸ್‌ವಿ  ತಾರಿಣಿಯಲ್ಲಿ  ಹಿಂದಿರುಗಿದರು.
 • ನಾವಿಕ್‌ ಸಾಗರ್‌ ಪರಿಕ್ರಮ’ಕ್ಕೆ ಪಣಜಿ ಸಮೀಪದ ಐಎನ್‌ಎಸ್‌ ಮಾಂಡೊವಿ ಹಡಗು ಕಟ್ಟೆ ಸಮೀಪದಿಂದ 2017ರ ಸೆ.10ರಂದು ಚಾಲನೆ ನೀಡಲಾಗಿತ್ತು.
 • ಲೆಫ್ಟಿನೆಂಟ್‌ ಕಮಾಂಡರ್‌ಗಳಾದ ಪ್ರತಿಭಾ ಜಾಮ್ವಾಲ್ ಮತ್ತು ಸ್ವಾತಿ.ಪಿ ಮತ್ತು ಲೆಫ್ಟಿನೆಂಟ್ ಐಶ್ವರ್ಯಾ ಬೊಡ್ಡಪತಿ, ಎಸ್. ವಿಜಯಾ ದೇವಿ ಮತ್ತು ಪಾಯಲ್ ಗುಪ್ತಾ  ಅವರು ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಶಿ ಅವರ ನೇತೃತ್ವದಲ್ಲಿ ನೌಕೆಯಲ್ಲಿ ಪ್ರಯಾಣ ಬೆಳೆಸಿದ್ದರು.
 • ಕಳೆದ ವರ್ಷದ ಫೆಬ್ರುವರಿ 18ರಂದು ಭಾರತೀಯ ನೌಕಾಪಡೆ ಸೇರಿದ ‘ಐಎನ್‌ಎಸ್‌ವಿ  ತಾರಿಣಿ’ ಎಂಬ 55 ಅಡಿ ಎತ್ತರದ ದೋಣಿಯಲ್ಲಿ ಈ ಪ್ರವಾಸ ಕೈಗೊಂಡಿದ್ದರು.

ಹಿನ್ನಲೆ

 • 254 ದಿನಗಳಲ್ಲಿ ನಾವಿಕಾ ಸಾಗರ್ ಪರಿಕ್ರಮ ಪ್ರಯಾಣದಡಿಯಲ್ಲಿ ಈ ಜಾಗವನ್ನು ಸುತ್ತುವರೆದಿದೆ. ಇದು ಮೊಟ್ಟಮೊದಲ ಮಹಿಳೆಯರ  ಏಷ್ಯಾದ ಮತ್ತು ಭಾರತೀಯ ಸುದೀರ್ಘ ಪ್ರವಾಸೋದ್ಯಮ ಯಾತ್ರೆ. ಸೆಪ್ಟೆಂಬರ್ 10, 2017 ರಂದು ಗೋವಾದಲ್ಲಿ ದಂಡಯಾತ್ರೆ ಪ್ರಾರಂಭವಾಯಿತು. ‘ನಾರಿ  ಶಕ್ತಿ’ಗಾಗಿ ಭಾರತ ಸರಕಾರದೊಂದಿಗೆ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಗುರಿ ಹೊಂದಿತ್ತು.
 • ಪ್ರಮುಖ ಅಂಶಗಳು ಈ ದಂಡಯಾತ್ರೆಯಲ್ಲಿ, ಭಾರತೀಯ ನೌಕಾಪಡೆ ಹಡಗಿನ ಐಎನ್ಎಸ್ವಿ ತರಿಣಿ ಯಲ್ಲಿ ಸಿಬ್ಬಂದಿ 21,600 ನಾಟಿಕಲ್ ಮೈಲುಗಳನ್ನು ಆವರಿಸಿ ಐದು ದೇಶಗಳಿಗೆ ಭೇಟಿ ನೀಡಿದರು ಮತ್ತು  ಸಮಭಾಜಕವನ್ನು ಎರಡು ಬಾರಿ ದಾಟಿದರು.
 • ಇದು ನಾಲ್ಕು ಖಂಡಗಳ ಮತ್ತು ಮೂರು ಸಾಗರಗಳಾದ್ಯಂತ ಪಯಣಿಸಿತು ಮತ್ತು ಗ್ರೇಟ್ ಕ್ಯಾಪ್ಗಳ ದಕ್ಷಿಣ ಭಾಗವನ್ನು ದಾಟಿತು – ಲೀವಿನ್, ಹಾರ್ನ್   ಮತ್ತು ಗುಡ್ ಹೋಪ್. ದಂಡಯಾತ್ರೆ ಆರು ಕಾಲುಗಳಲ್ಲಿ ಪೂರ್ಣಗೊಂಡಿತು, ಫ್ರೆಮಾಂಟ್ಲೆ (ಆಸ್ಟ್ರೇಲಿಯಾ), ಲಿಟ್ಲೆಟನ್ (ನ್ಯೂಜಿಲೆಂಡ್), ಪೋರ್ಟ್ ಸ್ಟಾನ್ಲಿ (ಫಾಕ್ಲ್ಯಾಂಡ್ ದ್ವೀಪಗಳು), ಕೇಪ್ ಟೌನ್ (ದಕ್ಷಿಣ ಆಫ್ರಿಕಾ) ಮತ್ತು ಪೋರ್ಟ್ ಲೂಯಿಸ್ (ಮಾರಿಷಸ್) ನಲ್ಲಿ ಐದು ನಿಲುಗಡೆದಾರರು.

ನಾವಿಕಾ ಸಾಗರ್ ಪರಿಕ್ರಮ

 • ಮಹಿಳೆಯರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಅಧಿಕಾರ ನೀಡುವ ರಾಷ್ಟ್ರೀಯ ನೀತಿಯೊಂದಿಗೆ ಒಮ್ಮತದ ಮೂಲಕ ಪ್ರಯಾಣ ಮಾಡಿದರು. ಇದು ಭಾರತದ ನಾರಿಶಕ್ತಿ ಅನ್ನು ವಿಶ್ವ ವೇದಿಕೆಯಲ್ಲಿ ಪ್ರದರ್ಶಿಸಲು ಮತ್ತು ಸವಾಲಿನ ಪರಿಸರದಲ್ಲಿ ಅವರ ಭಾಗವಹಿಸುವಿಕೆಯ ಗೋಚರತೆಯನ್ನು ಹೆಚ್ಚಿಸುವ ಮೂಲಕ ಸಾಮಾಜಿಕ ವರ್ತನೆಗಳನ್ನು ಮತ್ತು ಮಹಿಳೆಯರ ಕಡೆಗೆ  ಮನಸ್ಥಿತಿಗೆ ಸಹಾಯ ಮಾಡುವ ಗುರಿ ಹೊಂದಿದೆ.
 • ದೇಶೀಯವಾಗಿ ನಿರ್ಮಿಸಲಾದ ಐಎನ್ಎಸ್ವಿ ತರಿನಿ ಹಡಗಿನಲ್ಲಿ ನೌಕಾಯಾನ ಮಾಡುವ ಮೂಲಕ ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ತೋರಿಸಲು ಈ ಪ್ರಯಾಣವು ಗುರಿಯನ್ನು ಹೊಂದಿತ್ತು.ನವೀಕರಿಸಬಹುದಾದ ಶಕ್ತಿಯು ಗಾಳಿ ಗಾಳಿಯನ್ನು ಸುತ್ತುವಂತೆ ಪರಿಸರ ಸ್ನೇಹಿ ಅಲ್ಲದ ಸಾಂಪ್ರದಾಯಿಕ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳ ಬಳಕೆಯನ್ನು ಪ್ರೋತ್ಸಾಹಿಸಿತು.
 •  ಹವಾಮಾನ ಸಮುದ್ರ ಮತ್ತು ತರಂಗ ದತ್ತಾಂಶವನ್ನು ನಿಯಮಿತವಾಗಿ ಹವಾಮಾನ ಮತ್ತು ಹವಾಮಾನ ಹವಾಮಾನ ಇಲಾಖೆ (ಐಎಂಡಿ) ಮತ್ತು ಹವಾಮಾನದ ಮಾಲಿನ್ಯವನ್ನು ಮೇಲ್ವಿಚಾರಣೆಗಾಗಿ ಸಂಗ್ರಹಿಸಿಟ್ಟ ಮಾಹಿತಿಯನ್ನೂ ಸಹ ಇದು ಸಂಗ್ರಹಿಸಿ ನವೀಕರಿಸಿದೆ.

INSV ತಾರಿಣಿ

 • ಐಎನ್ಎಸ್ವಿ ತಾರಿಣಿ  ಭಾರತದಲ್ಲಿ 55 ಅಡಿ ಸಮುದ್ರ ತೇಲುವ ಪಾತ್ರೆಯಾಗಿದ್ದು, ಗೋವಾದ ಎಂ / ಅಕ್ವೇರಿಯಸ್ ಶಿಪ್ಯಾರ್ಡ್ ಪ್ರೈವೇಟ್ ಲಿಮಿಟೆಡ್ನಿಂದ ಇದನ್ನು ನಿರ್ಮಿಸಲಾಗಿದೆ.ಇದು ಫೆಬ್ರವರಿ 2017 ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಯಿತು. ಮುಖ್ಯ ನೌಕಾ, ತಲೆ ಹಡಗು (ಜಿನೋವಾ ಮತ್ತು ಉಗಿ ಹಡಗುಗಳು), ಕೆಳಗಿಳಿದ ಹಡಗುಗಳು ಮತ್ತು ಚಂಡಮಾರುತದ ನೌಕಾ ಸೇರಿದಂತೆ ಆರು ಹಡಗುಗಳ ಸೂಟ್ ಅನ್ನು ಇದು ನಡೆಸಿತು.
 • ಒಡಿಶಾದ ಗಂಜಮ್ ಜಿಲ್ಲೆಯ ಪ್ರಸಿದ್ಧ ತಾರಾ-ತಾರಿಣಿ ದೇವಸ್ಥಾನದ ನಂತರ ಈ ದೋಣಿಗೆ ಹೆಸರು ಬಂದಿದೆ. ‘ತಾರಿಣಿ’ ಎಂಬ ಶಬ್ದವು ದೋಣಿ ಎಂದರೆ ಸಂಸ್ಕೃತದಲ್ಲಿ ಸಂರಕ್ಷಕ ಎಂದರ್ಥ. ತಾರ-ತರಿನಿ ನಾವಿಕರು ಮತ್ತು ವ್ಯಾಪಾರಿಗಳಿಗೆ ಪೋಷಕ ದೇವತೆಯಾಗಿದ್ದು, ಸಮುದ್ರದಲ್ಲಿ ಸುರಕ್ಷತೆ ಮತ್ತು ಯಶಸ್ಸುಗಾಗಿ ಪೂಜಿಸಲಾಗುತ್ತದೆ.
 • ಐಎನ್ಎಸ್ವಿ ತಾರಿಣಿ ರೇಮರಿನ್ ನ್ಯಾವಿಗೇಷನ್  ಸೂಟ್ ಮತ್ತು ಉಪಗ್ರಹ ಸಂವಹನ ವ್ಯವಸ್ಥೆಗಳ ಶ್ರೇಣಿಯನ್ನು ಪರಿಪೂರ್ಣ ಸಂಚರಣೆಗೆ ಜಗತ್ತಿನಲ್ಲಿ ಎಲ್ಲಿಯಾದರೂ ಮುಂದಿಟ್ಟಿದೆ. ಇದು ಐಎನ್ಎಸ್ವಿ ಮಹಡಿಯವರ ಸಹೋದರಿ ಹಡಗುಯಾಗಿದ್ದು, ಇದನ್ನು ಕ್ಯಾಪ್ಟನ್ (ರೆಟ್ಡೆಡ್) ದೀಪ್ಪ್ ಡೊಂಡೆ ಬಳಸಿದ್ದು, ಭಾರತದ ಮೊದಲ ಏಕವ್ಯಕ್ತಿ ಸುತ್ತುವಿಕೆಯನ್ನು ಯಶಸ್ವಿಯಾಗಿ ಕೈಗೊಳ್ಳಲು (ಆಗಸ್ಟ್ 19, 2009 ರಿಂದ ಮೇ 19, 2010).
 • ನಂತರ ಇದನ್ನು ಲೆಫ್ಟಿನ ಕಮಾಂಡರ್ ಅಭಿಲಾಸ್ ಟೋಮಿಯು ತನ್ನದೇ ಆದ ಏಕೈಕ-ಕೈಯಿಂದ, ಒಂಟಿಯಾಗಿಲ್ಲದ, ತಡೆರಹಿತ ಸುತ್ತುವರಿದ (ನವೆಂಬರ್ 1, 2012 ರಿಂದ ಮಾರ್ಚ್ 31, 2013 ರವರೆಗೆ) ಬಳಸುತ್ತಿದ್ದರು.
Related Posts
Karnataka Current Affairs – KAS/KPSC Exams- 10th January 2019
Kolar leaf-nosed bat habitat a conservation reserve Rediscovered four years ago in the caves of Hanumanahalli Betta in Mulbagal taluk of Kolar district, the endangered Hipposiderid bats, also known as Kolar ...
READ MORE
UPSC Civil Services 2017 examinations results announced, Durishetty Anudeep emerges topper
Union Public Service Commission on Friday (27th April) released the final result of UPSC Civil Services Exam 2017. Candidates can check their results on the commission's official website: upsc.gov.in Durishetty Anudeep, a ...
READ MORE
Karnataka Current Affairs – KAS / KPSC Exams – 11th May 2017
2,500 ornamental fish traded globally Globally, more than 2,500 species of ornamental fish are traded, but only 30-35 species of freshwater fish dominate the market. More than 90 % of freshwater fish ...
READ MORE
Karnataka Current Affairs – KAS / KPSC Exams – 8th Aug 2017
Karnataka state gets cultural policy The committee submitted a 68-page report with 44 recommendations as early as in June 2014. Interestingly, the Cabinet has cleared the policy in the backdrop of ...
READ MORE
Karnataka Current Affairs – KAS / KPSC Exams – 13th June 2017
Bengaluru will soon have 10 zones The splitting of the clunky administration of the Bruhat Bengaluru Mahanagara Palike (BBMP) took a step further with the State government initiating the process of ...
READ MORE
Get ready for the Budget 2018
Expected big news - Budget expected to focus on direct taxes While there are unlikely to be any major changes in indirect tax as most of them are now under the ...
READ MORE
Karnataka Current Affairs – KAS/KPSC Exams – 24th Oct 2017
Govt. starts process to roll out Smart City plan After finally making it to the list of ‘Smart Cities’, the process to make Bengaluru ‘smart’ has begun, with the State government ...
READ MORE
Introduction ∗ Biostimulation involves the modification of the environment to stimulate existing bacteria capable of bioremediation ∗ It is the form of in situ bioremediation which uses an electron donor or acceptor ...
READ MORE
National Current Affairs – UPSC/KAS Exams- 3rd April 2019
Enzyme to arrest bacteria cell growth discovered Topic: Science and Technology In News: Scientists at the Centre for Cellular & Molecular Biology (CCMB) have discovered a new enzyme which helps in breaking ...
READ MORE
Yeshwantpur & B’luru Cantt to be made world-class stations
In the integrated Union Budget for 2017-18 presented by Finance Minister Arun Jaitley in the Lok Sabha on Wednesday, Rs 3,174 crore has been allocated for the South Western Railway ...
READ MORE
Karnataka Current Affairs – KAS/KPSC Exams- 10th January
UPSC Civil Services 2017 examinations results announced, Durishetty
Karnataka Current Affairs – KAS / KPSC Exams
Karnataka Current Affairs – KAS / KPSC Exams
Karnataka Current Affairs – KAS / KPSC Exams
Get ready for the Budget 2018
Karnataka Current Affairs – KAS/KPSC Exams – 24th
BIOSTIMULATION
National Current Affairs – UPSC/KAS Exams- 3rd April
Yeshwantpur & B’luru Cantt to be made world-class

Leave a Reply

Your email address will not be published. Required fields are marked *