“23rd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಬಹು ಅಂಚೆ ಸೇವೆಗಳಿಗೆ ಏಕ ತಂತ್ರಜ್ಞಾನ

 • ಭಾರತೀಯ ಅಂಚೆ ಇಲಾಖೆಯು ರಾಜ್ಯದ ಎಲ್ಲಾ ಅಂಚೆ ಕಚೇರಿಗಳಲ್ಲಿ ‘ಕೋರ್‌ ಸಿಸ್ಟಂ ಇಂಟಿಗ್ರೇಟರ್‌’ ಎಂಬ ನೂತನ ಸಾಫ್ಟ್‌ವೇರ್‌ ಅಳವಡಿಸುವ ಮೂಲಕ ಹಲವು ಅಂಚೆ ಸೇವೆಗಳಿಗೆ ಬೇರೆ ಬೇರೆಯಾಗಿದ್ದ ತಂತ್ರಾಂಶಗಳನ್ನು ರದ್ದುಪಡಿಸಿ, ಇದೀಗ ಏಕ ವ್ಯವಸ್ಥೆ ಅಳವಡಿಸಿಕೊಂಡಿದೆ.
 • ಉಳಿತಾಯ ಖಾತೆ, ಅಂಚೆ ವಿಮೆ, ಸ್ಪೀಡ್‌ಪೋಸ್ಟ್‌, ನೋಂದಣಿ ಅಂಚೆ ಹೀಗೆ ನಾನಾ ಸೇವೆಗಳ ಒಂದೊಂದು ಕೆಲಸಕ್ಕೂ ಒಂದೊಂದು ತಂತ್ರಾಂಶದಂತೆ 15-20 ಸಾಫ್ಟ್‌ವೇರ್‌ ಬಳಸಲಾಗುತ್ತಿತ್ತು. 2015ರಲ್ಲಿ ನೂತನ ತಂತ್ರಜ್ಞಾನ ಅಳವಡಿಸಲು ಆರಂಭಿಸಿದ ಇಲಾಖೆ, ರಾಜ್ಯಾದ್ಯಂತ ಸುಮಾರು 9 ಸಾವಿರಕ್ಕೂ ಹೆಚ್ಚು ಅಂಚೆ ಕಚೇರಿಗಳಲ್ಲಿ ತಂತ್ರಜ್ಞಾನ ಅಳವಡಿಕೆ ಕಾರ್ಯವನ್ನು ಇತ್ತೀಚೆಗಷ್ಟೇ ಅಂತಿಮಗೊಳಿಸಿದೆ.
 • ಸುಕನ್ಯಾ ಸಮೃದ್ಧಿ ಯೋಜನೆಯಡಿ ಎಷ್ಟು ಖಾತೆಗಳನ್ನು ತೆರೆಯಲಾಗಿದೆ. ಸಂಗ್ರಹವಾದ ಮೊತ್ತವೆಷ್ಟು? ಎಂಬುದನ್ನು ತಿಂಗಳ ಕೊನೆಯಲ್ಲಿ ಕ್ರೋಡೀಕರಿಸಿ ಮಾಹಿತಿ ಸಂಗ್ರಹಿಸಲಾಗುತಿತ್ತು. ಆದರೆ ಇನ್ನು ಮುಂದೆ ಪ್ರತಿದಿನದ ವಹಿವಾಟು, ಖಾತೆಗಳ ಸಂಖ್ಯೆ ಇತ್ಯಾದಿ ವಿವರಗಳನ್ನು ಸಿಎಸ್‌ಐ ತಂತ್ರಾಂಶವು ನಿರ್ವಹಿಸುತ್ತದೆ.

ಕೋರ್‌ ಸಿಸ್ಟಮ್‌ ಇಂಟಿಗ್ರೇಟರ್‌ ಕಾರ್ಯನಿರ್ವಹಣೆ: 

 • ಸಾರ್ವಜನಿಕ ಕ್ಷೇತ್ರದ ಸೇವೆಯಲ್ಲಿ ಮತ್ತಷ್ಟು ಪಾರದರ್ಶಕ ಮತ್ತು ತ್ವರಿತ ಗತಿಯ ಸೇವೆ ಒದಗಿಸುವಲ್ಲಿ ಕೋರ್‌ ಸಿಸ್ಟಮ್‌ ಇಂಟಿಗ್ರೇಟರ್‌ ತಂತ್ರಜ್ಞಾನ ನೆರವಾಗಲದೆ. ಒಂದೇ ತಂತ್ರಾಂಶದಲ್ಲಿ ತಕ್ಷಣ ಗ್ರಾಹಕರಿಗೆ ಮಾಹಿತಿ ದೊರೆಯುವಂತೆ ಸೇವೆ ಒದಗಿಸುತ್ತದೆ. ರಿಜಿಸ್ಟರ್‌, ಸ್ಪೀಡ್‌, ಪಾರ್ಸೆಲ್‌, ಬ್ಯುಸಿನೆಸ್‌ ಪೋಸ್ಟ್‌, ಈ ಪೇಮೆಂಟ್‌, ವಿಮೆ ಪಾಲಿಸಿ, ಮನಿ ಆರ್ಡರ್‌, ಉಳಿತಾಯ ಪತ್ರಗಳನ್ನು ಒದಗಿಸುವ ಸೇವೆಗಳನ್ನು ಈ ತಂತ್ರಾಂಶದ ಮೂಲಕ ನೀಡಲಿದೆ.
 • ಸೇವೆಯನ್ನು ಬುಕ್‌ ಮಾಡಿದ ತಕ್ಷಣ ಗ್ರಾಹಕರ ಮೊಬೈಲ್‌ಗೆ ಸಂದೇಶ ಬರಲಿದೆ. ತಮ್ಮ ಅಂಚೆ ಪಾರ್ಸೆಲ್‌ ಎಲ್ಲಿದೆ ಎಂಬುದನ್ನು ತಕ್ಷಣ ಗ್ರಾಹಕರು ತಿಳಿಯಬಹುದಾಗಿದೆ. ಜತೆಗೆ ಈ ನೂತನ ತಂತ್ರಾಂಶದಿಂದ ಇಲಾಖೆಯಲ್ಲೂ ತ್ವರಿತಗತಿಯಲ್ಲಿ ಮಾಹಿತಿ ಸಂಗ್ರಹಿಸಲು ಸಹಕಾರಿಯಾಗಿದೆ. ಲೆಕ್ಕಪತ್ರ ವ್ಯವಹಾರಗಳು ಸೇರಿದಂತೆ ಪ್ರತಿದಿನದ ವ್ಯವಹಾರಗಳನ್ನು ನಿರ್ವಹಿಸಲಿದೆ.

ತಂತ್ರಾಂಶ ಅಳವಡಿಕೆ ಪೂರ್ಣ: 

 • ಸಿಎಸ್‌ಐ ತಂತ್ರಾಂಶವನ್ನು ಪ್ರಪ್ರಥಮವಾಗಿ 2015ರಲ್ಲಿ ಮೈಸೂರಿನ ಅಂಚೆ ಕಚೇರಿಯಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು. ಅದಾದ ನಂತರ ಹಂತ ಹಂತವಾಗಿ ಎಲ್ಲೆಡೆ ಅಳವಡಿಸುತ್ತಾ ಬಂದಿದ್ದು, 2018ರ ಏಪ್ರಿಲ್‌ 15ರಂದು ಉಡುಪಿಯಲ್ಲಿ ಅಂತಿಮಗೊಳಿಸಲಾಯಿತು. ಜಿಪಿಒ ಕಚೇರಿಯಲ್ಲಿ ಅಳವಡಿಸಲಾಯಿತು. ಇದೀಗ ರಾಜ್ಯದ ಎಲ್ಲಾ ಅಂಚೆ ಕಚೇರಿಗಳಲ್ಲೂ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ.
 • ರಾಜ್ಯದ ಗ್ರಾಮೀಣ ಭಾಗದ ಕೆಲವು ಅಂಚೆ ಕಚೇರಿಗಳಲ್ಲಿ ಗಣಕೀಕರಣ ವ್ಯವಸ್ಥೆ ಇಲ್ಲದ ಕಾರಣ ಅಲ್ಲಿ ನೂತನ ಸಿಎಸ್‌ಐ ವ್ಯವಸ್ಥೆ ಅಳವಡಿಕೆ ಮಾಡಿಲ್ಲ.

ಮೊದಲ ಹಳಗನ್ನಡ ಸಾಹಿತ್ಯ ಸಮ್ಮೇಳನ

 • ಕನ್ನಡ ಸಾಹಿತ್ಯ ಪರಿಷತ್ತು ಇದೇ ಮೊದಲ ಬಾರಿಗೆ ಹಳಗನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಿದೆ.
 • ವಿನಾಶದ ಅಂಚಿನಲ್ಲಿರುವ ಹಳಗನ್ನಡವನ್ನು ಜೀವಂತವಾಗಿಡಲು ಹಾಗೂ ಅದರ ಮಹತ್ವವನ್ನು ಇಂದಿನ ಯುವ ಜನತೆಗೆ ತಿಳಿಸಿಕೊಡುವುದು ಸಮ್ಮೇಳನದ ಉದ್ದೇಶವಾಗಿದೆ.
 • ಹಳಗನ್ನಡದ ಕಾಶಿ ಎಂದೇ ಹೆಸರಾಗಿರುವ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಜೂನ್‌ನಲ್ಲಿ ಎರಡು ದಿನಗಳ ಸಮ್ಮೇಳನ ನಡೆಯಲಿದೆಯಾದರೂ ದಿನಾಂಕ ನಿಗದಿಯಾಗಿಲ್ಲ.
 • ಸಮ್ಮೇಳನದಲ್ಲಿ ಪಂಪ, ರನ್ನ, ಜನ್ನ, ಪೊನ್ನ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೇಶ ಮೊದಲಾದ ಹಳಗನ್ನಡ ಕವಿಗಳ ಕೃತಿಗಳ ಪರಿಚಯ, ವಿಮರ್ಶೆ ಮಾಡಲಾಗುವುದು. ಜತೆಗೆ ಹಳಗನ್ನಡದ ಗತವೈಭವ, ಈಗಿನ ಸ್ಥಿತಿ, ಮುಂದೆ ಅದರ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು.

ವಿಭಿನ್ನವಾದ ಸಮ್ಮೇಳನ 

 • ಹಳಗನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕಿಂತ ವಿಭಿನ್ನವಾಗಿರುತ್ತದೆ. ಸಾಹಿತಿಗಳು, ಪುಸ್ತಕ ಪ್ರೇಮಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಆಸಕ್ತರಿಗೆ ಹಳಗನ್ನಡ ಕುರಿತು ಸಮಗ್ರ ಮಾಹಿತಿ ನೀಡುವ ಹಾಗೂ ಅರ್ಥವಾಗುವ ರೀತಿಯಲ್ಲಿ ಹೇಳುವ ಸಾಹಿತಿ, ಚಿಂತಕರು ಬೇಕಾಗಿದ್ದಾರೆ. ಈ ನಿಟ್ಟಿನಲ್ಲಿ ಹಳಗನ್ನಡವನ್ನು ಚೆನ್ನಾಗಿ ಬಲ್ಲ ಸಾಹಿತಿಗಳನ್ನು ಆಯ್ಕೆ ಮಾಡಲು ತಜ್ಞರ ಸಮಿತಿ ರಚಿಸಲಾಗಿದೆ.

ಜಿಎಸ್​ಟಿಎನ್ ಇನ್ನು ಸರ್ಕಾರಿ ಸಂಸ್ಥೆ?

 • ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ)ಯ ತಂತ್ರಜ್ಞಾನದ ಬೆನ್ನೆಲುಬಾಗಿರುವ ಜಿಎಸ್​ಟಿ ನೆಟ್​ವರ್ಕ್ (ಜಿಎಸ್​ಟಿಎನ್) ಅನ್ನು ಸರ್ಕಾರಿ ಸಂಸ್ಥೆ ಅಥವಾ ಪಿಎಸ್​ಯುುವನ್ನಾಗಿ ಪರಿವರ್ತಿಸಲು ಕೇಂದ್ರ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ.
 • ಜಿಎಸ್​ಟಿಎನ್​ನಲ್ಲಿ ಸರ್ಕಾರದ ಪಾಲು ಹೆಚ್ಚಳ ಮಾಡಿ ಸಾರ್ವಜನಿಕ ವಲಯದ ಉದ್ದಿಮೆ (ಪಿಎಸ್​ಯುು) ಅಥವಾ 100 ಪಾಲು ಹೊಂದುವ ಮೂಲಕ ಸಂಪೂರ್ಣ ಸರ್ಕಾರಿ ಸಂಸ್ಥೆಯನ್ನಾಗಿ ಮಾಡುವ ಕುರಿತು ಅಧ್ಯಯನ ಮಾಡುತ್ತಿರುವ ಸಚಿವಾಲಯ, ಪ್ರಮುಖವಾಗಿ ಖರೀದಿ ಪ್ರಕ್ರಿಯೆ ಮತ್ತು ಉದ್ಯೋಗಿಗಳ ವೇತನ ವಿನ್ಯಾಸ, ಇನ್ನಿತರ ಪರಿರ್ವತನೆ ಹಾಗೂ ಜಿಎಸ್​ಟಿಎನ್ ಕಾರ್ಯವಿಧಾನದ ಸೂಕ್ಷ್ಮವ್ಯತ್ಯಾಸಗಳನ್ನು ಕೂಲಂಕಷವಾಗಿ ಪರಿಶೀಲಿ ಸುತ್ತಿದೆ.
 • ಜಿಎಸ್​ಟಿಎನ್ ಕುರಿತ ಪ್ರಸ್ತಾವವನ್ನು ಸಚಿವಾಲಯವು ಶೀಘ್ರದಲ್ಲಿ ಜಿಎಸ್​ಟಿ ಮಂಡಳಿಗೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಂಡಳಿ ಒಪ್ಪಿಗೆ ದೊರೆತರೆ, ನಂತರ ಈ ಪ್ರಸ್ತಾವವು ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಕೆಯಾಗಲಿದೆ ಎಂದು ಮೂಲಗಳು ಹೇಳಿವೆ.

ಡಿಜಿಟಲ್ ಹೆಲ್ತ್​ಕಾರ್ಡ್

 • ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವ ಎಲ್ಲ ಭಾರತೀಯ ಪೌರರಿಗೆ ಡಿಜಿಟಲ್ ಆರೋಗ್ಯ ಚೀಟಿ ಹಾಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ಕೇಂದ್ರ ಸರ್ಕಾರ ತೀರ್ವನಿಸಿದೆ.
 • ವಿಶಿಷ್ಟ ಗುರುತಿನ ಸಂಖ್ಯೆ ಹೊಂದಿದ ಈ ಕಾರ್ಡ್​ನಲ್ಲಿ ವೈಯಕ್ತಿಕ ಆರೋಗ್ಯ ಮಾಹಿತಿ, ಚಿಕಿತ್ಸೆಯ ಇತಿಹಾಸ, ಸದ್ಯದ ಚಿಕಿತ್ಸೆ, ಡಾಕ್ಟರ್ ದಾಖಲಿಸಿದ ಟಿಪ್ಪಣಿ ವಿವರಗಳೆಲ್ಲವೂ ಲಭ್ಯವಿರಲಿದೆ. ಈ ಮೂಲಕ ಪ್ರತಿಯೊಬ್ಬ ಪೌರನ ಆರೋಗ್ಯ ವಿವರವನ್ನು ಸೃಷ್ಟಿಸಿ, ಆರೋಗ್ಯ ಮಾಹಿತಿ ನಿರ್ವಹಣಾ ವ್ಯವಸ್ಥೆಯನ್ನು ಬಲಗೊಳಿಸುವುದು ಈ ಹೊಸ ಯೋಜನೆಯ ಉದ್ದೇಶ. ಸರ್ಕಾರ ಈಗಾಗಲೇ ಬಜೆಟ್​ನಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಘೋಷಿಸಿದೆ.
 • ಈ ಯೋಜನೆ ಪ್ರಕಾರ ಆರೋಗ್ಯ ಸೇವೆ ಪೂರೈಸುವುದಕ್ಕಾಗಿ 1.5 ಲಕ್ಷ ಉಪಕೇಂದ್ರ, ಸಣ್ಣ ಆರೋಗ್ಯ ಘಟಕಗಳನ್ನು ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. ಇಂತಹ ಒಂದು ಕೇಂದ್ರವನ್ನು ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಛತ್ತೀಸ್​ಗಢದಲ್ಲಿ ಉದ್ಘಾಟಿಸಿದ್ದರು. ಇಂತಹ ಕೇಂದ್ರದ ಮೂಲಕವೇ ಡಿಜಿಟಲ್ ಆರೋಗ್ಯ ಕಾರ್ಡ್ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

ಪ್ರಯೋಜನ ಏನು?

 • ಒಂದೊಮ್ಮೆ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ರೋಗಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಡಿಜಿಟಲ್ ಆರೋಗ್ಯ ಚೀಟಿ ಇದ್ದರೆ ಯಾರೂ ಗಲಿಬಿಲಿಗೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ. ಡಾಕ್ಟರ್​ಗಳು ಈ ಕಾರ್ಡ್​ನಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆ ಉಪಯೋಗಿಸಿ ಆತನ/ಆಕೆಯ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಪಡೆಯಲು ಅನುಕೂಲವಾಗಲಿದೆ.

ಪರಿಷ್ಕೃತ ಆರ್​ಜಿಎಸ್​ಎಗೆ ಒಪ್ಪಿಗೆ

 • ರಾಷ್ಟ್ರೀಯ ಗ್ರಾಮ್ ಸ್ವರಾಜ್ ಅಭಿಯಾನದ(ಆರ್​ಜಿಎಸ್​ಎ) ಪರಿಷ್ಕೃತ ರೂಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಎರಡು ವರ್ಷಗಳ ಹಿಂದೆಯೇ ಜಾರಿಯಾಗಿದ್ದ ಯೋಜನೆಯಲ್ಲಿನ ದೋಷಗಳ ಬಗ್ಗೆ ನೀತಿ ಆಯೋಗ ಧ್ವನಿ ಎತ್ತಿತ್ತು. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಯೋಜನೆ ರೂಪಿಸಲಾಗಿದೆ.
 • ಕೇಂದ್ರ ಹಾಗೂ ರಾಜ್ಯ ಸರ್ಕಾರ 60: 40 ಅನುಪಾತದಲ್ಲಿ ಹಣ ಹಂಚಿಕೆ ಮಾಡಲಿವೆ. ಈ ಯೋಜನೆಗಾಗಿ 4 ಆರ್ಥಿಕ ವರ್ಷಗಳ ಅವಧಿಗೆ ಕೇಂದ್ರವು 4500 ಕೋಟಿ ರೂ. ಹಾಗೂ ರಾಜ್ಯ ಸರ್ಕಾರಗಳು 2755.50 ಕೋಟಿ ರೂ. ವ್ಯಯ ಮಾಡಲಿವೆ.
 • ಈ ಯೋಜನೆ ಮೂಲಕ ದೇಶದಲ್ಲಿನ 2.55 ಗ್ರಾಮ ಪಂಚಾಯಿತಿ ಹಾಗೂ ಆ ವ್ಯಾಪ್ತಿಯಲ್ಲಿನ ಹಳ್ಳಿಗಳ ಸುಧಾರಣೆಯ ಗುರಿ ಹಾಕಿಕೊಳ್ಳಲಾಗಿದೆ. ವಿಶೇಷವಾಗಿ ಇ-ಆಡಳಿತ, ಮೂಲ ಸೌಕರ್ಯ ಅಭಿವೃದ್ಧಿ, ಬಡತನ ನಿಮೂಲನೆಗೆ ಅನುದಾನ ನೀಡಲಾಗುತ್ತದೆ. ನೀತಿ ಆಯೋಗ ಗುರುತಿಸಿದ 115 ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ದೊರೆಯಲಿದೆ.

ಕೆವೈಸಿಗೆ ಆಧಾರ್ ಕಡ್ಡಾಯ

 • ನಿಮ್ಮ ಗ್ರಾಹಕರ ಬಗ್ಗೆ ತಿಳಿದುಕೊಳ್ಳಿ(ಕೆವೈಸಿ) ನಿಯಮಗಳನ್ನು ಪರಿಷ್ಕರಿಸಿದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ), ಗ್ರಾಹಕ ದಾಖಲೆಯಾಗಿ ಆಧಾರ್ ಬಳಸಿಕೊಳ್ಳುವಂತೆ ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳಿಗೆ ಸೂಚಿಸಿದೆ.
 • ಕೇಂದ್ರ ಸರ್ಕಾರ 2017ರ ಜೂನ್ ತಿಂಗಳಲ್ಲಿ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಹಣಕಾಸು ಲೇವಾದೇವಿ ತಡೆ ಕಾನೂನಿನಲ್ಲಿ ಪರಿಷ್ಕರಣೆ ಮಾಡಲಾಗಿದೆ. ಈ ಕಾರಣಕ್ಕೆ ಕೆವೈಸಿ ನಿಯಮಗಳಲ್ಲೂ ಪರಿಷ್ಕರಣೆ ಮಾಡಬೇಕಾಯಿತು ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.
 • ಬ್ಯಾಂಕುಗಳ ‘ದೃಢೀಕೃತ’ ದಾಖಲೆಯ ಪಟ್ಟಿಗೆ ಆಧಾರ್ ಈಗ ಅಧಿಕೃತವಾಗಿ ಸೇರ್ಪಡೆಗೊಂಡಂತಾಗಿದೆ. ಹೊಸ ನಿಯಮ ಪ್ರಕಾರ ಕೆವೈಸಿ ಪೂರ್ಣಗೊಳಿಸುವುದಕ್ಕೆ ಆಧಾರ್ ಕಡ್ಡಾಯ ಮಾಡಿದಂತಾಗಿದೆ. ಆದಾಗ್ಯೂ, ಆಧಾರ್ ಕಡ್ಡಾಯ ಕುರಿತು ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿರುವ ಪ್ರಕರಣದ ಅಂತಿಮ ತೀರ್ಪು ಪ್ರಕಟವಾದ ಬಳಿಕ ಈ ಹೊಸ ಮಾರ್ಗಸೂಚಿ ಜಾರಿಗೆ ಬರಲಿದೆ.

ಇಪಿಎಸ್ ದೀರ್ಘಾವಧಿ ಸಾಧ್ಯತೆ

 • ಕಾರ್ವಿುಕರ ಪಿಂಚಣಿ ಯೋಜನೆಯನ್ನು ದೀರ್ಘಕಾಲ ಸುಸ್ಥಿರವಾಗಿ ಮುನ್ನಡೆಸುವ ಸಾಧ್ಯಾಸಾಧ್ಯತೆ ಬಗ್ಗೆ ಪರಿಶೀಲಿಸಲು ವಿಮಾತಜ್ಞರ ಸಮಿತಿಯೊಂದನ್ನು ನೇಮಿಸಲು ಕಾರ್ವಿುಕ ಸಚಿವಾಲಯ ಮುಂದಾಗಿದೆ.
 • ಸದ್ಯ ನಿವೃತ್ತ ಕಾರ್ವಿುಕರಿಗೆ 1952 ಮತ್ತು 1995ರ ಇಪಿಎಫ್ ಯೋಜನೆಗಳು ಹಾಗೂ 1976ರ ಕಾರ್ವಿುಕರ ಠೇವಣಿ ಸಂಯೋಜಿತ ವಿಮಾ ಯೋಜನೆಯಡಿ ಪಿಂಚಣಿ ದೊರೆಯುತ್ತಿದೆ. ಇವುಗಳನ್ನು ದೀರ್ಘಕಾಲದವರೆಗೆ ಯಾವ ರೀತಿ ಮುನ್ನಡೆಸಬಹುದು ಎಂಬ ಬಗ್ಗೆ ಸಮಿತಿ ಪರಿಶೀಲನೆ ನಡೆಸಲಿದೆ.
 • ಭವಿಷ್ಯ ನಿಧಿಯ ಪಿಂಚಣಿ ನಿಧಿಯಲ್ಲಿ 2016ರ ಮಾರ್ಚ್ 31ರಿಂದ 2017ರ ಮಾರ್ಚ್ ಅಂತ್ಯದವರೆಗೆ ಶೇಖರವಾಗಿರುವ ಮೊತ್ತ ಮತ್ತು ಅದರ ಬಡ್ಡಿಯನ್ನು ಪರಿಶೀಲಿಸುವ ಸಮಿತಿ ಸುದೀರ್ಘಾವಧಿಗೆ ಯೋಜನೆ ಮುಂದುವರಿಸುವ ಬಗ್ಗೆ ವರದಿ ನೀಡಲಿದೆ.
 • ಇದೇ ರೀತಿಯ ಸಮಿತಿಯೊಂದು 2014ರ ಆರ್ಥಿಕ ಸಾಲಿನಲ್ಲೂ ಪಿಂಚಣಿ ಯೋಜನೆ ಕುರಿತು ಪರಿಶೀಲನೆ ನಡೆಸಿತ್ತು.

ವುಹಾನ್ನಲ್ಲಿ ಭಾರತಚೀನಾ ಶೃಂಗ

 • ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಏ.27 ಮತ್ತು 28ರಂದು ಚೀನಾದ ವುಹಾನ್ ನಗರದಲ್ಲಿ ನಡೆಯಲಿರುವ ಶೃಂಗದಲ್ಲಿ ಅನೌಪಚಾರಿಕ ಮಾತುಕತೆ ನಡೆಸಲಿದ್ದಾರೆ.
 • ತನ್ಮೂಲಕ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮುಂದಿನ 15 ವರ್ಷಗಳಲ್ಲಿ ಮತ್ತೊಂದು ಸ್ತರಕ್ಕೆ ಕೊಂಡೊಯ್ಯುವ ಕುರಿತು ಮಾತುಕತೆ ಕೇಂದ್ರಿಕೃತವಾಗಿರುತ್ತದೆ ಎಂದು ಹೇಳಲಾಗಿದೆ.
 • ಈ ಅನೌಪಚಾರಿಕ ಶೃಂಗದಲ್ಲಿ ಕೆಲ ಅಧಿಕಾರಿಗಳ ಸಹಿತ ಉಭಯ ನಾಯಕರು ನಯನಮನೋಹರವಾದ ತಾಣದಲ್ಲಿ ಮಾತುಕತೆ ನಡೆಸಲಿದ್ದಾರೆ. ಪ್ರಾದೇಶಿಕ ಮತ್ತು ಜಾಗತಿಕವಾಗಿ ಕಾಡುತ್ತಿರುವ ಸಮಸ್ಯೆಗಳು ಮತ್ತು ಅವುಗಳ ಪರಿಹಾರ ಕುರಿತು ರ್ಚಚಿಸಲಿದ್ದಾರೆ.
 • ಈ ಶೃಂಗದಲ್ಲಿ ಗಟ್ಟಿಯಾದ ಯಾವುದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ಆದರೆ ಉಭಯ ರಾಷ್ಟ್ರಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿರುವ ಕ್ಸಿ ಅವರ ಆಪ್ತ ಯೋಜನೆಗಳು ಎನಿಸಿರುವ ಒನ್ ಬೆಲ್ಟ್ ಒನ್ ರೋಡ್ ಮತ್ತು ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಕುರಿತು ಮಾತುಕತೆ ನಡೆಸಲಿದ್ದಾರೆ.

~~~***ದಿನಕ್ಕೊಂದು ಯೋಜನೆ***~~~

ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ

 • ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ದೇಶದಾದ್ಯಂತ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಅದರ ಯಶಸ್ಸನ್ನು ನಿರ್ಬಂಧಿಸುವ ನಿರ್ಣಾಯಕ ಅಂತರವನ್ನು ತಿಳಿಸುತ್ತದೆ.

ಪ್ರಮುಖ ಅಂಶಗಳು

 • ಈ ಯೋಜನೆಯು ಎಲ್ಲಾ ರಾಜ್ಯಗಳಿಗೆ / ಯು.ಟಿ.ಗಳಿಗೆ ವಿಸ್ತರಿಸುತ್ತದೆ ಮತ್ತು ಪಂಚಾಯತ್ಗಳು ಅಸ್ತಿತ್ವದಲ್ಲಿರದ ಸಂವಿಧಾನದ ಭಾಗ -9 ರಲ್ಲಿ ಇಲ್ಲದ ಪ್ರದೇಶಗಳಲ್ಲಿ ಗ್ರಾಮೀಣ ಸ್ಥಳೀಯ ಸರ್ಕಾರದ ಸಂಸ್ಥೆಗಳನ್ನೂ ಒಳಗೊಂಡಿರುತ್ತದೆ.
 • ರಾಜ್ಯ ಘಟಕಗಳಿಗೆ ಯೋಜನೆಗಾಗಿ ನಿಧಿಯ ಹಂಚಿಕೆ ಅನುಪಾತವು ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳನ್ನು ಹೊರತುಪಡಿಸಿ 60: 40 ಆಗಿರುತ್ತದೆ. ಯುಟಿಗಳಿಗೆ, ಕೇಂದ್ರ ಪಾಲು 100% ಆಗಿರುತ್ತದೆ.
 • ಈ ಯೋಜನೆಯು ಕೇಂದ್ರ ಘಟಕ- ನ್ಯಾಷನಲ್ ಟೆಕ್ನಾಲಜಿ ಆಫ್ ಟೆಕ್ನಿಕಲ್ ಅಸಿಸ್ಟೆನ್ಸ್, ಇ-ಪಂಚಾಯತ್ನಲ್ಲಿನ ಮಿಷನ್ ಮೋಡ್ ಪ್ರಾಜೆಕ್ಟ್, ಪಂಚಾಯತ್ಗಳ ಉತ್ತೇಜಕ ಮತ್ತು ರಾಜ್ಯ ಘಟಕ ಸೇರಿದಂತೆ ಸೇರಿದಂತೆ ಪಂಚಾಯತ್ ರಾಜ್ ಸಂಸ್ಥೆಗಳ ಸಾಮರ್ಥ್ಯದ ಕಟ್ಟಡ (ಪಿಆರ್ಐ), ಯೋಜನಾ ಚಟುವಟಿಕೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ ವಿಶಾಲವಾಗಿ ಅನುಷ್ಠಾನದ ಅಭಿವೃದ್ಧಿಗುರಿಗಳನ್ನು ಸಾಧಿಸಲು ಜೋಡಿಸಲ್ಪಡುತ್ತದೆ (SDGs)
 • ಎನ್ಐಟಿಐ ಆಯೋಗದಿಂದ ಗುರುತಿಸಲಾದ ಮಿಷನ್ ಅಂತ್ಯೋದಯ  ಮತ್ತು 115 ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಡಿಯಲ್ಲಿ ಗುರುತಿಸಲಾದ ಪಂಚಾಯತ್ಗಳ ಮೇಲೆ ಮುಖ್ಯವಾದ ಒತ್ತಡ. ಇದು ಇತರ ಸಚಿವಾಲಯಗಳ ಸಾಮರ್ಥ್ಯ ನಿರ್ಮಾಣ ಉಪಕ್ರಮಗಳನ್ನು ಒಮ್ಮುಖಗೊಳಿಸುತ್ತದೆ.

ಮಹತ್ವ

 • ಪುನರ್ವಸತಿ ಮಾಡಿದ ಯೋಜನೆಯು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳ ಗರಿಷ್ಟ ಬಳಕೆಯ ಮೇಲೆ ಕೇಂದ್ರೀಕೃತವಾದ ಸ್ಥಳೀಯ ಆಡಳಿತದ ಮೂಲಕ SDG ಗಳಲ್ಲಿ ತಲುಪಿಸಲು ಆಡಳಿತ ಸಾಮರ್ಥ್ಯಗಳನ್ನು ಅಅಭಿವೃದ್ಧಿಪಡಿಸಲು 2.55 ಲಕ್ಷ ಪಂಚಾಯತ್ ರಾಜ್ ಸಂಸ್ಥೆಗಳು (ಪಿಆರ್ಐ) ಸಹಾಯ ಮಾಡುತ್ತದೆ.
 • ಇದು SDG ಗಳ ಮುಖ್ಯ ತತ್ವಗಳನ್ನು ಸಾಧಿಸಲು ಶ್ರಮಿಸುತ್ತದೆ, ಅಂದರೆ ಲಿಂಗ ಸಮಾನತೆಯ ಜೊತೆಗೆ ಮೊದಲ ಮತ್ತು ಸಾರ್ವತ್ರಿಕ ವ್ಯಾಪ್ತಿಗೆ ತಲುಪುವ ಮೂಲಕ ಯಾರನ್ನೂ ಹಿಂಬಾಲಿಸುವುದಿಲ್ಲ.
 • ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳಿಗೆ ಇದು ಆದ್ಯತೆ ನೀಡುತ್ತದೆ, ಅದು ಹೊರಗಿರುವ ಗುಂಪುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ, ಉದಾ. ಬಡತನ, ಪೋಷಣೆ, ಶಿಕ್ಷಣ, ಪ್ರಾಥಮಿಕ ಆರೋಗ್ಯ ಸೇವೆಗಳು, ಪ್ರತಿರಕ್ಷಣೆ, ನೈರ್ಮಲ್ಯ, ನೀರಿನ ಸಂರಕ್ಷಣೆ, ಡಿಜಿಟಲ್ ವ್ಯವಹಾರ ಇತ್ಯಾದಿ.
 • ಪಂಚಾಯತ್ ಮತ್ತು ಗ್ರಾಮ ಸಭೆಗಳ ಸಾಮರ್ಥ್ಯ ಮತ್ತು ಸಾಮರ್ಥ್ಯದ ವರ್ಧಕ;
 • ಪಂಚಾಯತ್ಗಳಲ್ಲಿ ಪ್ರಜಾಪ್ರಭುತ್ವದ ನಿರ್ಣಯ ಮತ್ತು ಹೊಣೆಗಾರಿಕೆಯನ್ನು ಸಕ್ರಿಯಗೊಳಿಸಿ ಮತ್ತು ಜನರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು;
 • ಪಂಚಾಯತ್ಗಳ ಜ್ಞಾನ ರಚನೆ ಮತ್ತು ಸಾಮರ್ಥ್ಯ ನಿರ್ಮಾಣಕ್ಕಾಗಿ ಸಾಂಸ್ಥಿಕ ರಚನೆಯನ್ನು ಬಲಪಡಿಸುವುದು
 • ಸಂವಿಧಾನ ಮತ್ತು PESA ಕಾಯಿದೆಗಳ ಪ್ರಕಾರ ಪಂಚಾಯತ್ಗಳಿಗೆ ಅಧಿಕಾರ ಮತ್ತು ಅಧಿಕಾರಗಳ ವಿತರಣೆಯನ್ನು ಉತ್ತೇಜಿಸುವುದು
 • ಪಂಚಾಯತ್ ವ್ಯವಸ್ಥೆಯೊಳಗೆ ಜನರ ಭಾಗವಹಿಸುವಿಕೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಮೂಲಭೂತ ವೇದಿಕೆಯಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಗ್ರಾಮ ಸಭೆಗಳನ್ನು ಬಲಪಡಿಸುವುದು
 • ಪಂಚಾಯತ್ಗಳು ಅಸ್ತಿತ್ವದಲ್ಲಿರದ ಪ್ರದೇಶಗಳಲ್ಲಿ ಪ್ರಜಾಸತ್ತಾತ್ಮಕ ಸ್ಥಳೀಯ ಸ್ವ-ಸರ್ಕಾರವನ್ನು ರಚಿಸಿ ಮತ್ತು ಬಲಪಡಿಸಲು.

ದಿನಕ್ಕೆ ಹತ್ತು ಪ್ರಶ್ನೋತ್ತರಗಳು

1. ಭಾರತೀಯ ಅಂಚೆ ಇಲಾಖೆಯು ರಾಜ್ಯದ ಎಲ್ಲಾ ಅಂಚೆ ಕಚೇರಿಗಳಲ್ಲಿ ಯಾವ ನೂತನ ಸಾಫ್ಟ್ವೇರ್ ಅಳವಡಿಸುತ್ತಿದೆ ?
A. ಕೋರ್ ಸಿಸ್ಟಂ ಇಂಟಿಗ್ರೇಟರ್
B. ಸಿಸ್ಟಮ್ ಸಾಫ್ಟ್ವೇರ್
C. ಇಂಟೆಗ್ರಾಟಿಂಗ್ ಸಾಫ್ಟ್ವೇರ್
D. ಯಾವುದು ಅಲ್ಲ

2. ಕೋರ್ ಸಿಸ್ಟಂ ಇಂಟಿಗ್ರೇಟರ್ ಸಾಫ್ಟ್ವೇರ್ ಅನ್ನು 2005 ರಲ್ಲಿ ಪ್ರಾಯೋಗಿಕವಾಗಿ ಯಾವ ಅಂಚೆಕಛೇರಿಯಲ್ಲಿ ಪ್ರಾರಂಭಿಸಲಾಯಿತು ?
A. ಬೆಂಗಳೂರು
B. ಮೈಸೂರು
C. ಗುಲಬರ್ಗಾ
D. ಬೆಳಗಾವಿ

3. ಹಳಕನ್ನಡದ ಕಾಶಿಯೆಂದು ಪ್ರಸಿದ್ಧಿಯಾಗಿರುವ ಸ್ಥಳ ಯಾವುದು ?
A. ಮೂಡಬಿದ್ರೆ
B. ಕಾರ್ಕಳ
C. ಶ್ರವಣಬೆಳಗೊಳ
D. ಧರ್ಮಸ್ಥಳ

4. ವಿಶ್ವ ಭೂ ದಿನವನ್ನು ಎಂದು ಆಚರಿಸಲಾಗುತ್ತದೆ ?
A. ಏಪ್ರಿಲ್ 16
B. ಏಪ್ರಿಲ್ 18
C. ಏಪ್ರಿಲ್ 20
D. ಏಪ್ರಿಲ್ 22

5. ಬಾಂಬುಗಳ ತಯಾರಿಕೆಯಲ್ಲಿ ಉಪಯೋಗಿಸುವ ಆರ್ಸೆನಲ್ ಎಂಬುದು ಯಾವುದರ ಮಿಶ್ರಣ
A. ಅಲ್ಯೂಮಿನಿಯಂ ಪುಡಿ ಮತ್ತು ಅಮೋನಿಯಂ ನೈಟ್ರೇಟ್
B. ಅಲ್ಯೂಮಿನಿಯಂ ಪುಡಿ ಮತ್ತು ಕ್ರೋಮಿಯಂ ನೈಟ್ರೇಟ್
C. ಅಮೋನಿಯಂ ನೈಟ್ರೇಟ್ ಮತ್ತು ಕ್ರೋಮಿಯಂ
D. ಯಾವುದು ಅಲ್ಲ

6. ಔರಂಗಜೇಬನ ಸೇನೆಯನ್ನು ಸೋಲಿಸಿದ ಕನ್ನಡದ ರಾಣಿ ಯಾರು ?
A. ರಾಣಿ ಅಬ್ಬಕ್ಕ ದೇವಿ
B. ಕೆಳದಿ ಚೆನ್ನಮ್ಮ
C. ಕಿತ್ತೂರು ರಾಣಿ ಚೆನ್ನಮ್ಮ
D. ಯಾರು ಅಲ್ಲ

7. ಗಡಚಿರೋಲಿ ಜಿಲ್ಲೆ ಯಾವ ರಾಜ್ಯದಲ್ಲಿ ಇದೆ ?
A. ಮಹಾರಾಷ್ಟ್ರ
B. ಕರ್ನಾಟಕ
C. ಗುಜರಾತ್
D. ಮಧ್ಯ ಪ್ರದೇಶ

8. ಭಾರತದ ನಾಡಗೀತೆಯನ್ನು ಅಳವಡಿಸಿಕೊಂಡಿದ್ದು ಯಾವಾಗ ?
A. ಜನವರಿ 24 1950
B. ಜನವರಿ 26 1950
C. ಆಗಸ್ಟ್ 15 1950
D. ಯಾವುದು ಅಲ್ಲ

9. ಹಿಮನದಿ ಇಲ್ಲದ ಏಕೈಕ ಖಂಡ ಯಾವುದು ?
A. ಆಸ್ಟ್ರೇಲಿಯಾ
B. ಏಷ್ಯಾ
C. ಆಫ್ರಿಕಾ
D. ಸೌತ್ ಅಮೇರಿಕಾ

10. ಭಾರತ ಚೀನಾ ಶೃಂಗ ಸಭೆಯನ್ನು ಎಲ್ಲಿ ನಡೆಸಲು ಉದ್ದೇಶಿಸಲಾಗಿದೆ ?
A. ಸಿಕ್ಕಿಂ
B. ಅಸ್ಸಾಂ
C. ವುಹಾನ್
D. ಬೀಜಿಂಗ್

ಉತ್ತರಗಳು: 1.A 2.B 3.C 4.D 5.A 6.B 7.A 8.A 9. A 10.C 

Related Posts
Karnataka Current Affairs – KAS/KPSC Exams – 26th Dec 2017
Conference on ancient India Prof. Achuta Rao Memorial History Conference will be held at the Manipal Centre for Philosophy and Humanities (MCPH), a constituent of Manipal Academy of Higher Education (MAHE), ...
READ MORE
Gamaka Tradition
10th Akhila Karnataka Gamaka Kala Sammelana 10th Akhila Karnataka Gamaka Kala Sammelana was held in Bangalore Nearly 100 Gamakis took part in this event. The Gamakis are also singing modern verses written in ...
READ MORE
Deloitte-CII survey on manufacturing firms
India’s increasingly young workforce appears to have signalled the beginning of the end for the trade union movement in the country The survey of over 8,000 employees in a dozen large ...
READ MORE
ಡೆಡ್ಲಿ ವೈರಾಣು ನಿಫಾ! ಸುದ್ದಿಯಲ್ಲಿ ಏಕಿದೆ?  ಮಾರಣಾಂತಿಕ ನಿಫಾ ವೈರಾಣು ರೋಗ ನಿಯಂತ್ರಣಕ್ಕೆ ಕೇಂದ್ರ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ನಿಯೋಗವನ್ನು ಕೇರಳಕ್ಕೆ ಕಳುಹಿಸಲಾಗಿದೆ. ಕೇರಳಕ್ಕೆ ನಿಫಾ ವೈರಸ್ ಪ್ರವೇಶಿಸಿ ರುವುದು ಹಾಗೂ ಇತರ ವಿವರಗಳಿಗೆ ಸಂಬಂಧಿಸಿ ರಾಷ್ಟ್ರೀಯ ರೋಗ ನಿರೋಧಕ ಕೇಂದ್ರದ ನಿರ್ದೇಶಕರ ...
READ MORE
ಪಂಚಾಯತ್ ರಾಜ್ ವ್ಯವಸ್ಥೆಗೆ ಬದಲಾವಣೆ
ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಮಸೂದೆ–2015’ ವಿಧಾನಸಭೆಯಲ್ಲಿಮಂಡನೆ ಇತ್ತೀಚಿನ ವರ್ಷಗಳಲ್ಲೇ ಇದು ಅತ್ಯಂತ ಸುದೀರ್ಘ ಮಸೂದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ, ಅದಕ್ಕೆ ತಕ್ಕ ಸಂಬಳ ಮತ್ತು ಇತರ ಸವಲತ್ತುಗಳು ಸಿಗಲಿವೆ. ಮಸೂದೆಯಲ್ಲಿನ ಪ್ರಮುಖ ಅಂಶಗಳು :  ಗ್ರಾಮಮಟ್ಟದಿಂದ ರಾಜ್ಯ ಮಟ್ಟದ ವರೆಗಿನ ...
READ MORE
“28th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಉತ್ತರ-ದಕ್ಷಿಣ ಸ್ನೇಹಮಿಲನ ಸತತ ಆರೂವರೆ ದಶಕ ಕಾಲ ಬೂದಿ ಮುಚ್ಚಿದ ಕೆಂಡದಂತಿದ್ದ ದಕ್ಷಿಣ ಹಾಗೂ ಉತ್ತರ ಕೊರಿಯಾ ಸಂಬಂಧದಲ್ಲಿ ಸುಧಾರಣೆ ತರುವ ಐತಿಹಾಸಿಕ 13 ಒಪ್ಪಂದಗಳಿಗೆ ಉಭಯ ದೇಶಗಳ ಮುಖ್ಯಸ್ಥರು ಷರಾ ಬರೆದಿದ್ದಾರೆ. ‘ವಿಶ್ವ ಕಂಟಕ’ ಎಂಬ ಕುಖ್ಯಾತಿ ಪಡೆದ ಉತ್ತರ ಕೊರಿಯಾ ...
READ MORE
FREE SUNDAY CURRENT AFFAIRS CLASS
KEEPING OUR COMMITMENT TO PROVIDE QUALITY CURRENT AFFAIRS.. NammaKPSC WILL BE CONDUCTING ITS 5th FREE SESSION THIS SUNDAY DID YOU MISS READING IMPORTANT ISSUES THIS MONTH? DONT WORRY... COME THIS ...
READ MORE
India is home to the largest child population in the world, with almost 42 per cent of the total population under eighteen years of age One of the issues marring this ...
READ MORE
Explained: NAM “Non Aligned Movement”- Important for IAS/KAS
Why in News: The  17th Summit of the Heads of State and Government of the Non-Aligned Movement (NAM) was held on 17 and 18 September in Margarita Island, northeast of Venezuela, in ...
READ MORE
National Power Tariff Policy
Union Cabinet has approved several amendments to the national power tariff policy with a view to promote renewable energy and improve the ease of doing business for developers in the ...
READ MORE
Karnataka Current Affairs – KAS/KPSC Exams – 26th
Gamaka Tradition
Deloitte-CII survey on manufacturing firms
“22nd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪಂಚಾಯತ್ ರಾಜ್ ವ್ಯವಸ್ಥೆಗೆ ಬದಲಾವಣೆ
“28th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
FREE SUNDAY CURRENT AFFAIRS CLASS
Protection of Children from Sexual Offences
Explained: NAM “Non Aligned Movement”- Important for IAS/KAS
National Power Tariff Policy